Monday, March 31, 2014

ಕೀಟನಾಶಕ ಸೇವಿಸಿ ವ್ಯಕ್ತಿಯ ಸಾವು 
                   ಔಷಧವೆಂದು ತಿಳಿದು ಕೀಟನಾಶಕ ಔಷಧಿ ಸೇವಿಸಿ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡಿನಲ್ಲಿ ನಡೆದಿದೆ. ಕರಡಿಗೋಡು ಬಳಿಯ ಹೊಳೆಕೆರೆ ಪೈಸಾರಿ ನಿವಾಸಿ ಜಿಜು ಎಂಬವರ ತಂದೆ 70 ವರ್ಷ ಪ್ರಾಯದ ತಂಗಪ್ಪನ್ ಎಂಬವರು ಹೊಟ್ಟೆನೋವಿನಿಂದ ಬಳಲುತ್ತಿದ್ದು ದಿನಾಂಕ 22/03/2014ರಂದು ಅತಿಯಾದ ಹೊಟ್ಟೆನೋವು ಕಾಣಿಸಿಕೊಂಡು ತಂಗಪ್ಪನ್‌ರವರು ಹೊಟ್ಟೆನೋವಿನ ಔಷಧಿಯ ಬದಲಾಗಿ ಮಗ ಜಿಜು ತಂದಿಟ್ಟಿದ್ದ ಹೂವಿನ ಗಿಡಕ್ಕೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 30/03/2014ರಂದು ಮೃತ ಪಟ್ಟಿರುವುದಾಗಿ ನೀಡಿದ ದುರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಸೀಮೆಣ್ಣೆ ಸಾಗಾಟ, ಓರ್ವನ ಬಂಧನ 
                  ಅಕ್ರಮವಾಗಿ ಸೀಮೆಣ್ಣೆ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ದಿನಾಂಕ 30/03/2014ರಂದು ಹೆಗ್ಗಳ ಗ್ರಾಮದ ಮಾಕುಟ್ಟ ನಿವಾಸಿ ಕರೀಂ ಹಾಗೂ ಇತರರು ಮಾಕುಟ್ಟದಭಗವತಿ ದೇವಸ್ಥಾನದ ಬಳಿ ಹೆಗ್ಗಳ ಗ್ರಾಮದ ನಿವಾಸಿ ಸುರೇಶ್ ಬಾಬು ಎಂಬವರು  ಸುಮಾರು 30 ಲೀಟರ್ ಸೀಮೆಣ್ಣೆಯನ್ನು  ಅಕ್ರಮವಾಗಿ ಕೆಎಲ್‌-59-ಬಿ-4174ರಲ್ಲಿ ಕೇರಳಕ್ಕೆ ಮಾರಾಟ ಮಾಡಲು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ತಾಲೂಕು ತಹಸೀಲ್ದಾರರು ಮತ್ತು ಆಹಾರ ನಿರೀಕ್ಷಕರ ಗಮನಕ್ಕೆ ತಂದು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಪೊಲೀಸರು ಸುರೇಶ್ ಬಾಬುರವರನ್ನು ಬಂಧಿಸಿದ ಸೀಮೆಣ್ಣೆಯನ್ನು ವಶಪಡಿಸಿಕೊಂಡು ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ದಾಖಲಾತಿ ಇಲ್ಲದ ಹಣ ವಶ. 
          ಚುನಾವಣಾ ನೀತಿ ಸಂಹಿತೆಗೆ ವಿರುದ್ದವಾಗಿ ಯಾವುದೇ ದಾಖಲಾತಿ ಇಲ್ಲದೆ ಹೊಂದಿದ್ದ ಹಣವನ್ನು ವಶಪಡಿಸಿಕೊಂಡಿರುವ ಘಟನೆ ಸಂಪಾಜೆಯಲ್ಲಿ ನಡೆದಿದೆ. ಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಪಿ.ಕೆ.ಅಚ್ಚಯ್ಯ ಎಂಬವರು ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ಸ್ಥಿರ ಕಣ್ಗಾವಲು ಪಡೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ದಿನಾಂಕ 30/03/2014ರಂದು ಕೇರಳದ ತಲಚೇರಿ ನಿವಾಸಿ ಬಿನೇಶ್ ಕುಮಾರ್ ಎಂಬವರು ಕೆಎಲ್‌-10-ಎಬಿ-8221ರ ಟಾಟಾ ಮಿನಿಲಾರಿಯಲ್ಲಿ ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಅಚ್ಚಯ್ಯನವರು ಲಾರಿಯನ್ನು ಪರಿಶೀಲಿಸಿದ ಸಂದರ್ಭ ಲಾರಿಯಲ್ಲಿ ಸುಮಾರು ರೂ.2,00,000/- ಗಳಷ್ಟು ಹಣ ಪತ್ತೆಯಾಗಿದ್ದು, ಸದ್ರಿ ಹಣವನ್ನು ಹೊಂದಿರುವ ಬಗ್ಗೆ ಬಿನೇಶ್ ಕುಮಾರ್‌ರವರು ಯಾವುದೇ ಸಮರ್ಪಕ ದಾಖಲಾತಿ ನೀಡದ ಕಾರಣ ಲಾರಿ ಹಾಗೂ ಹಣವನ್ನು ವಶಪಡಿಸಿಕೊಂಎಉ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Sunday, March 30, 2014

ಯುವಕ ನಾಪತ್ತೆ ಪ್ರಕರಣ ದಾಖಲು:

      23 ವರ್ಷದ ಯುವಕನೋರ್ವ ತಮ್ಮ ಮನೆಯಿಂದ ಕಾಣೆಯಾದ ಘಟನೆ ಕುಟ್ಟ  ಪೊಲೀಸ್‌ ಠಾಣಾ ವ್ಯಾಪ್ತಿಯ ನಾಥಂಗಲ್‌ ಕುಟ್ಟ ಗ್ರಾಮದಲ್ಲಿ ನಡೆದಿದೆ.  ದಿನಾಂಕ 26-03-2014 ರಂದು ಸಮಯ ಬೆಳಿಗ್ಗೆ ಯಿಂದ ವಿರಾಜಪೇಟೆ ತಾಲ್ಲೂಕು ಕುಟ್ಟ ಗ್ರಾಮದ ನಿವಾಸಿ ಶ್ರೀಮತಿ ವಿ.ಆರ್‌. ಶ್ರೀದೇವಿ ಎಂಬುವವರ  ಮಗ ದ್ಯಾನ್ ದರ್ಶನ್ (23) ಎಂಬವರು ತಮ್ಮ ವಾಸದ ಮನೆಯಿಂದ ಕಾಣೆಯಾಗಿದ್ದು, ಶ್ರೀಮತಿ ಶ್ರೀದೇವಿಯವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
     ಪೊನ್ನಂಪೇಟೆ, ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ನೆಲೆಸಿರುವ ಪಣಿಯರ ಕೆಂಬಿ  ದಿನಾಂಕ 28/03/2014 ರಂದು ಸಂಜೆ 7.30 ಗಂಟೆಗೆ ಊಟ ಮುಗಿಸಿ ಮಲಗುವಾಗ ಆಕೆಯ  ಗಂಡ ಮಲ್ಲರವರ ಜೊತೆ ಸಾರಾಯಿ ಕುಡಿದ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿರುವಾಗ ಆಕೆಯ ಗಂಡ ಜೋರುಬೊಬ್ಬೆ ಹಾಕಿದ್ದು ಅದನ್ನು ಕೇಳಿ ಪಕ್ಕದ ಮನೆಯಲ್ಲಿ ವಾಸವಿರುವ ಪಂಜರಿಎರವರ ಮುತ್ತ ಕೆಂಬಿರವರ ಮನೆಯ ಹತ್ತಿರ ಬಂದು ಯಾಕೆ ಬೊಬ್ಬೆ ಹಾಕುತ್ತೀರಾ ಎಂಬುದಾಗಿ ಹೇಳಿ ಅಲ್ಲೆ ಮನೆಯ ಮುಂದೆ ಬಿದ್ದಿದ್ದ ಕಾಡು ಮರದ ದೊಣ್ಣೆಯನ್ನು ತೆಗೆದುಕೊಂಡು ಮಲ್ಲರವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು  ಅದೇ ವೇಳೆ ಕೆಂಬಿರವರು ಅಡ್ಡ ಬಂದಾಗ ದೊಣ್ಣೆಯಿಂದ ಕೆಂಬಿಯ ಎಡಕೈ ರಟ್ಟೆಗೆ ಹೊಡೆದು ಗಾಯಪಡಿಸಿದ್ದು  ಪೊನ್ನಂಪೇಟೆ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 

Saturday, March 29, 2014

ವ್ಯಕ್ತಿಯೊಬ್ಬರ ಜಾಗಕ್ಕೆ ಅಕ್ರಮ ಪ್ರವೇಶ:
ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪೆರಾಜೆ ಗ್ರಾಮದ ನಿವಾಸಿ  ಗಂಗಾಧರ್‌ ರವರ ಅನುಭವ ಸ್ವಾದೀನದಲ್ಲಿ ಇರುವ ಸರ್ವೆ ನಂ 206 ರಲ್ಲಿರುವ 2 ಏಕರೆ 96 ಸೆಂಟ್ ಜಾಗದಲ್ಲಿ ಅಡಿಕೆ, ತೆಂಗು ಹಾಗೂ ಇತರೆ ಹಣ್ಣಿನ ಕೃಷಿ ಮಾಡಿದ್ದು ಈ ಜಾಗದ ಸಂಬಂದ ಅವರಿಗೂ ಹಾಗೂ ಅದೇ ಗ್ರಾಮದ ವಾಮನಾಥ ರವರಿಗೂ  ಮಡಿಕೇರಿ ಅಪರ ನ್ಯಾಯಾಲಯದಲ್ಲಿ ಓ ಎಸ್ ನಂ 74/2011 ರಂತೆ ವಿಚಾರಣೆ ಇದ್ದು,   ಎಂ ಬಿ ವಾಮನಾಥ ಮತ್ತು ಇತರರು ಸೇರಿಕೊಂಡು ದಿನಾಂಕ 27-01-2014 ರಂದು ಸಮಯ 3-00 ಎ ಎಂ ಸದರಿ ಜಾಗಕ್ಕೆ  ಅಕ್ರಮ ಪ್ರವೇಶ ಮಾಡಿ ಅಡಿಕೆ ಮರಗಳಿಂದ ಅಡಿಕೆಗಳನ್ನು ಕದ್ದು ಕುಯಿದು ಸುಮಾರು 10,000 ರೂ ನಷ್ಟ ಪಡಿಸಿದ್ದು ಘಟನೆಯನ್ನು ಕೆ ಪಿ ಗಂಗಾಧರರವರು ನೋಡಿದಾಗ ಅವರುಗಳು ಬೆದರಿಕೆ ಹಾಕಿದ್ದು, ಈ ಬಗ್ಗೆ  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಅಕಸ್ಮಿಕ ಬೆಂಕಿ ತಗುಲಿ ವ್ಯಕ್ತಿಯ ಸಾವು:
ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ ಗ್ರಾಮದ ನಿವಾಸಿ ಶೇಖರ ಎಂಬುವವರು ದಿನಾಂಕ: 27-03-14ರಂದು ಸಮಯ ರಾತ್ರಿ 8-30ಗಂಟೆಗೆ ಸಮಯದಲ್ಲಿ ವಿಪರೀತ ಮದ್ಯಪಾನ ಮಾಡಿಕೊಂಡು  ಬಂದು ಅಡುಗೆ ಮನೆಯಲ್ಲಿ ಕುಳಿತ್ತಿದ್ದಾಗ ಆಕಸ್ಮಿಕವಾಗಿ ಸೀಮೆಣ್ಣೆ ದೀಪಕ್ಕೆ ಕೈ ತಾಗಿ ಶರೀರದ ಮೇಲೆ ಬಿದ್ದು, ಶರೀರಕ್ಕೆ ಬೆಂಕಿ ಹತ್ತಿಗೊಂಡು ಗಾಯ ಗಳಾಗಿದ್ದು,ಚಿಕಿತ್ಸೆ ಬಗ್ಗೆ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಈ ದಿವಸ ದಿನಾಂಕ: 28-03-14ರಂದು ಸಮಯ ಮದ್ಯಾಹ್ನ 13-30ಗಂಟೆಗೆ ಶೇಖರ್ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Thursday, March 27, 2014

ನೀರಿನಲ್ಲಿ ಮುಳುಗಿ ವ್ಯಕ್ತಿಯ ಸಾವು:

     ಫಿಡ್ಸ್‌ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೋರ್ವ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೋಕು ಸಂಪಾಜೆ ಗ್ರಾಮದಲ್ಲಿ ನಡೆದಿದೆ.  ದಿನಾಂಕ  26-3-2014 ರಂದು  ಮಡಿಕೇರಿ ತಾಲೋಕಿನ ಸಂಪಾಜೆ ಗ್ರಾಮದ ನಿವಾಸಿ ಕೃಷ್ಣ ಎಂಬುವವರು ತಮ್ಮ ಮನೆಯ ಹತ್ತಿರ ಹೊಳೆಯಲ್ಲಿ ಬಟ್ಟೆ ಹೊಗೆಯಲೆಂದು ತೆರಳಿದ್ದು ಆಕಸ್ಮಿಕವಾಗಿ  ನೀರಿಗೆ ಬಿದ್ದು ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಆಟೋ ರಿಕ್ಷಾ ಮಗುಚಿ ಬಿದ್ದು ವ್ಯಕ್ತಿಗೆ ಗಾಯ:

     ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆಯಿಂದಾಗಿ ಆಟೋ ರಿಕ್ಷಾವೊಂದು ರಸ್ತೆಯಲ್ಲಿ ಮಗುಚಿ ಬಿದ್ದು, ವ್ಯಕ್ತಿಯೋರ್ವ  ಗಾಯಗೊಂಡ  ಘಟನೆ ಎಂ. ಬಾಡಗ ಗ್ರಾಮದಲ್ಲಿ ನಡೆದಿದೆ.  ದಿನಾಂಕ 26-3-2014 ರಂದು ಹಾಕತ್ತೂರು ನಿವಾಸಿ ಕೆ.ಆರ್‌. ವಿಜಯ ಎಂಬುವವರು ಗಣಿ ಎಂಬುವವರ ಆಟೋ ರಿಕ್ಷಾದಲ್ಲಿ ಮುರ್ನಾಡುವಿನಿಂದ ಎಮ. ಬಾಡಗ ಗ್ರಾಮದ ಕಡೆಗೆ ಪ್ರಯಾಣಿಸುತ್ತಿದ್ದಾಗ  ಚಾಲಕ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದು,  ಪರಿಣಾಮ ರಿಕ್ಷಾ ರಸ್ತೆಯಲ್ಲಿ ಮಗುಚಿ ಬಿದ್ದು ಕೆ.ಆರ್‌. ವಿಜಯನವರು ಗಾಯಗೊಂಡಿರುತ್ತಾರೆ.  ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Tuesday, March 25, 2014

ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ ಮೂವರಿಗೆ ಗಾಯ:

    ದಿನಾಂಕ 25-03-2014 ರಂದು ಸಮಯ 11.00 ಎ.ಎಂ ಗೆ ಅಜೀಜ್‌, ಮಡಿಕೇರಿ ನಗರ ಇವರು ತಮ್ಮ  ಬಾಪ್ತು ಆಟೋ ರಿಕ್ಷಾ ಸಂಖ್ಯೆ ಕೆ ಎ 12 ಎ 1065 ರಲ್ಲಿ ಮಹಾದೇವಪೇಟೆ ರಸ್ತೆಯಲ್ಲಿ ಇಂದಿರಾ ಗಾಂಧಿ ವೃತ್ತದ ಕಡೆ ಬರುತ್ತಿರುವಾಗ್ಗೆ ಜಿದ್ದಾ ಬಾಜಾರ್ ಹತ್ತಿರ  ಹಿಂಬಧಿಯಿಂದ ಅಂದರೆ ಮಹಾದೇವಪೆಟೆ ಕಡೆಯಿಂದ ಕಾರು ಸಂಖ್ಯೆ ಕೆ ಎ 12 ಎನ್ 5217 ರನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ನಿಂತಿದ್ದ ಕಾರ್ ಸಂಖ್ಯೆ ಕೆ ಎ 12 ಎ 6421 ಗೆ ಡಿಕ್ಕಿ ಪಡಿಸಿ ಜಖಂಗೊಳಿಸಿ  ನಂತರ ಮುಂದಕ್ಕೆ ಚಲಿಸಿ ಅಜೀಜ್‌ರವರ ಆಟೋ ರಿಕ್ಷಾಕ್ಕೆ ಡಿಕ್ಕಿ ಪಡಿಸಿದ್ದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಗಾಯಗಳಾಗಿದ್ದು, ಮಡಿಕೇರಿ ಟ್ರಾಫಿಕ್‌ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಹಳೇ ದ್ವೇಷ, ದಾರಿ ತಡೆದು ಹಲ್ಲೆ:
    ಹಳೇದ್ವೇಷದಿಂದ ವ್ಯಕ್ತಿಯ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ತಾಲೋಕು ಕಲ್ಕಂದೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 24.03.2014 ರಂದು ಸೋಮವಾರಪೇಟೆ ತಾಲೋಕು ಕಲ್ಕಂದೂರು ಗ್ರಾಮದ ನಿವಾಸಿ ಚೆನ್ನಕೇಶವ ಎಂಬುವವರು ತಮ್ಮ ಮಕ್ಕಳನ್ನು ಸೋಮವಾರಪೇಟೆಯಿಂದ ಟ್ಯೂಷನ್‌ ಮುಗಿಸಿಕೊಂಡು ತಮ್ಮ ಮನೆಗೆ ಮೋಟಾರು ಸೈಕಲ್‌ನಲ್ಲಿ ಹೋಗುತ್ತಿರುವಾಗ ಕಲ್ಕಂದೂರು ಗ್ರಾಮದ ಕೂಡು ರಸ್ತೆಯ ಹತ್ತಿರ ಆರೋಪಿಗಳಾದ ನಿರಂಜನ್‌, ಅಭಿಷೇಕ್‌ ಎಂಬುವವರುಗಳು ಹಳೇ ದ್ವೇಷದಿಂದ  ಚಿನ್ನಕೇಶವರ  ದಾರಿ ತಡೆದು ನಿಲ್ಲಿಸಿ ದೊಣ್ಣೆ ಮತ್ತು ಕೈಯಿಂದ ಹೊಡೆದು ಚೆನ್ನಕೇಶವ ಹಾಗು  ಅವರ ಮಗ ಶ್ರೀಜೀತ್‌ ರವರಿಗೆ ನೋವು ಪಡಿಸಿದ್ದು, ಸದರಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಪೊಲೀಸ್‌ ದಾಳಿ:
     ಮಡಿಕೇರಿ ನಗರ ವೃತ್ತ  ನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನದ ಮೇರೆ ದಿನಾಂಕ 24-3-2014 ರಂದು ರಾತ್ರಿ 11-00 ಗಂಟೆಯ ಸಮಯದಲ್ಲಿ ಮಡಿಕೇರಿ ನಗರದ ಯಾತ್ರಿ ಲಾಡ್ಜ್‌ಗೆ ಪೊಲೀಸ್‌ ವೃತ್ತ ನಿರೀಕ್ಷಕರು  ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ  ಅನೈತಿಕ ಚಟುವಟಿಕೆಯಲ್ಲಿ ತೊಡಗಿದ  ಗಿರೀಶ (21)  ಬಾವಲಿ ಗ್ರಾಮ, ಮಡಿಕೇರಿ ತಾಲೋಕು, ಚಾಶಿಕ್‌ (21) ಬೆಳಕುಮಾನಿ, ಮಡಿಕೇರಿ ತಾಲೋಕು ಹಾಗೂ ಶೃತಿ ಎಂಬ ಮಹಿಳೆಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Monday, March 24, 2014

ಗಂಡಸು ಕಾಣೆ:

     ಶಬರಿಮಲೆಗೆ ಹೋದ ವ್ಯಕ್ತಿಯೊಬ್ಬರು ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಪಾಲಂಗಾಲ ಗ್ರಾಮದಿಂದ ವರದಿಯಾಗಿದೆ.  ವಿರಾಜಪೇಟೆ ಗ್ರಾಮಾಂತರ ಠಾಣಾ  ವ್ಯಾಪ್ತಿಯ ಪಾಲಂಗಾಲ ಗ್ರಾಮದ ನಿವಾಸಿ ಎಂ. ಲಕ್ಷ್ಮಿ  ಇವರ ಪತಿ ಎಂ.ಎ. ಅಣ್ಣಯ್ಯ (62) ಇವರು  ದಿನಾಂಕ 6-1-2014 ರಂದು ಶಬರಿಮಲೆಗೆ ಹೋಗಿಬರುತ್ತೇನೆಂದು ತಿಳಿಸಿ ಖಾಸಗಿ ಬಸ್ಸು ಹತ್ತಿ ಹೋದವರು ಇಲ್ಲಿಯವಗೆ ಮನೆಗೆ ಮರಳದೇ ಇದ್ದುದರ ಬಗ್ಗೆ ಎಂ.ಲಕ್ಷ್ಮಿ ಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
      ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ 6 ಜನರ ಗುಂಪು ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಣಗೇರಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ: 23-03-14ರಂದು ಸಮಯ 7-00ಪಿ.ಎಂ.ಗೆ ಹೆಚ್‌.ಬಿ.ಸನ್ನು ಎಂಬ ವ್ಯಕ್ತಿ ದೇವಣಗೇರಿ ಗ್ರಾಮದಲ್ಲಿರುವ ಬಿಪಿನ್ ಎಂಬುವವರ  ಅಂಗಡಿಗೆ ಸಾಮಾನು ತೆಗೆದುಕೊಂಡು ಬಳಿಕ  ಬ್ರಾಂಡಿ ಬಾಟಲಿ ಬೇಕೆಂದು ಪುನ: ಕೇಳಿದ್ದು ಇದರಿಂದ ಕೋಪಗೊಂಡ ಬಿಪಿನ್ ರವರು ಏಕಾಏಕಿ ಕೈಯಿಂದ  ಹೆಚ್‌.ಬಿ. ಸನ್ನುರವರ  ಎದೆಗೆ ಹೊಡೆದುದಲ್ಲದೆ, ಅಲ್ಲೇ ಪಕ್ಕದಲ್ಲಿದ್ದ ಮನು,ವಿನು, ದಿನು, ಐವನ್ ಮತ್ತು ಶರಣು ರವರು ಸೇರಿಕೊಂಡು ಹೆಚ್‌.ಬಿ. ಸನ್ನುರವರ ತಲೆಗೆ ಹಾಗೂ  ಕೆನ್ನೆಯ ಭಾಗಕ್ಕೆ ಹೊಡದು  ರಕ್ತಗಾಯಪಡಿಸಿದ್ದು ಈ ವಿಚಾರವಾಗಿ ಹೆಚ್‌.ಬಿ. ಸನ್ನುರವರ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಓಮ್ನಿಗೆ ಬೈಕ್‌ ಡಿಕ್ಕಿ ಇಬ್ಬರಿಗೆ ಗಾಯ:
     ಮಾರುತಿ ಓಮ್ನಿಗೆ ಬೈಕೊಂದು ಡಿಕ್ಕಿಯಾಗಿ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರಿಗೆ ಗಾಯಗಳಾದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದಲ್ಲಿ ನಡೆದಿದೆ.   ದಿನಾಂಕ 23/03/2014 ರಂದು ಯೂಸುಫ್‌ ಎಂಬುವವರು  ಅವರ ಬಾಪ್ತು ಮಾರುತಿ ಓಮಿನಿ ಕಾರು ನಂ.KA12M2379 ರಲ್ಲಿ  ಪೊನ್ನಂಪೇಟೆ ಕಡೆಯಿಂದ   ಹಳ್ಳಿಗಟ್ಟು ಗ್ರಾಮದ ಕಡೆಗೆ ಹೋಗುತ್ತಿರುವಾಗ ಅವರ  ವಾಹನದ ಹಿಂದೆ KA09EC8194 ಮೋಟಾರ್ ಸೈಕಲ್ ಸವಾರ ನೆರವಂಡ ಪಿ ಪೆಮ್ಮಯ್ಯ ಎಂಬುವವರು ತಮ್ಮ ತಾಯಿ ಕುಸುಮರವರನ್ನು  ಹಿಂಬದಿಯಲ್ಲಿ  ಕೂರಿಸಿಕೊಂಡು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಮಾರುತಿ ಓಮ್ನಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರಿಬ್ಬರೂ ಕೆಳಗೆ ಬಿದ್ದು ಗಾಯಗೊಂಡಿದ್ದು, ಪೊನ್ನಂಪೇಟೆ ಪೊಲೀಸರು ಈಸಮಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಗೂಡ್ಸ್‌ ಆಟೋಗೆ ಮಾರುತಿ ವ್ಯಾನ್‌ ಡಿಕ್ಕಿ:
 
     ಗೂಡ್ಸ್‌ ಆಟೋಗೆ  ಮಾರುತಿ ಓಮ್ನಿ ಡಿಕ್ಕಿಯಾಗಿ ಅಪಾಯಗಳಿಂದ ಪಾರಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆ.ಚೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.  ಸೋಮವಾರಪೇಟೆ ತಾಲೋಕು ನೆಲ್ಲಿಹುದಿಕೇರಿ ನಿವಾಸಿ ಅಬ್ದುಲ್‌ ಸಲಾಂ  ರವರು    ತನ್ನ ಭಾಪ್ತು ಕೆಎ-12-ಎ-9341 ರ ಗೂಡ್ಸ್ ಆಟೋದಲ್ಲಿ  ದಿನಾಂಕ 22-03-2014 ರಂದು ಕಂಡಕೆರೆ ಮಸೀದಿಯಿಂದ ಸಾಮೀಯಾನ ತರಲೆಂದು ಸ್ಹೇಹಿತಾ ನಿಯಾಜ್ ರವರೊಂದಿಗೆ ಹೋಗುತ್ತಿರುವಾಗ್ಗೆ  ಎದುರುಗಡೆಯಿಂದ ಕೆಎ-04-ಎಂಬಿ-684 ರ ಮಾರುತಿ ಓಮಿನಿ ಚಾಲಕ  ಮುತ್ತಯ್ಯ ಸದರಿ ವಾಹನವನ್ನು ಅತೀ ವೇಗ ಅಜಾಗರೂಕತೆಯಿಂದ ಚಾಲನೆ ಮಾಡಿ ಗೂಡ್ಸ್‌ಆಟೋಗೆ ಡಿಕ್ಕಿ ಪಡಿಸಿದ ಪರಿಣಾಮ ಆಟೋ ಎಡ ಬದಿಯ ಚರಂಡಿಗೆ ಮಗುಚಿ ಬಿದ್ದು ಜಖಂ ಗೊಂಡಿದ್ದು ಅಲ್ಲದೆ ಚಾಲಕ ಅಬ್ದುಲ್‌ ಸಲಾಂ ಹಾಗು  ನಿಯಾಝ್ ರವರಿಗೆ ಮೈ ಕೈಗೆ ನೋವುಂಟಾಗಿದ್ದು ಯಾವುದೇ ಗಾಯಗಳಾಗದೇ ಪಾರಾರಿದ್ದು,  ಮಡಿಕೇರಿ ಗ್ರಾಮಾಂತರ ಪೊಲೀಸರು ಅಬ್ದುಲ್‌ ಸಲಾಂರವರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
ಕಾಲೇಜು ವಿದ್ಯಾರ್ಥಿನಿಯ ಕಾಣೆ:
 2ನೇ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದ 18 ವರ್ಷ ಪ್ರಾಯದ ಹುಡುಗಿಯೊಬ್ಬಳು ಕಾಣೆಯಾದ ಘಟನೆ ವಿರಾಜಪೇಟೆ ನಗರದಿಂದ ವರದಿಯಾಗಿದೆ.   ವಿರಾಜಪೇಟೆ ನಗರದ ಅಯ್ಯಪ್ಪ ಬೆಟ್ಟ ದಲ್ಲಿ ವಾಸವಾಗಿರುವ ಶ್ರೀಮತಿ ವಿಜಿ ಜೇಕಬ್‌ ಎಂಬುವವರ ಮಗಳಾದ ಕೆ.ಜಿ. ದೀಪ್ತಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದು ಯಾವನೋ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು ದಿನಾಂಕ 17-3-2014 ರಿಂದ ವಿರಾಜಪೇಟೆಯ ಅಯ್ಯಪ್ಪಬೆಟ್ಟದ ಮನೆಯಿಂದ ಕಾಣೆಯಾಗಿದ್ದು, ವಿರಾಜಪೇಟೆ ನಗರ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
 
 
 

Sunday, March 23, 2014

ಲಾರಿಗೆ ಟಾಟಾ ಸುಮೋ ಡಿಕ್ಕಿ,ಲಾರಿ ಚಾಲಕನಿಗೆ ಗಾಯ 
      ಲಾರಿಯೊಂದಕ್ಕೆ ಟಾಟಾ ಸುಮೋ ವಾಹನವು ಡಿಕ್ಕಿಯಾದ ಪರಿಣಾಮ ಲಾರಿ ಚಾಲಕನಿಗೆ ಗಾಯಗಳಾದ ಘಟನೆ ಮಡಿಕೇರಿ ಸಮೀಪದ ಅಪ್ಪಂಗಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 22/03/2014ರ ರಾತ್ರಿ ವೇಳೆ ಕೊಟ್ಟಮುಡಿ ಗ್ರಾಮದ ನಿವಾಸಿ ಹ್ಯಾರಿಸ್ ಎಂಬವರ ಸ್ವರಾಜ್ ಮಜ್ದಾ ಲಾರಿಯಲ್ಲಿ ಚಾಲಕನಾಗಿರುವ ಹಾಸನ ಜಿಲ್ಲೆಯ ಹೊಳೆ ನರಸೀಪುರದ ಮೋಹನ ಎಂಬವರು ಮಡಿಕೇರಿಯಿಮದ ವಾಪಾಸು ಕೊಟ್ಟಮುಡಿಗೆ ಹೋಗುತ್ತಿರುವಾಗ ಅಪ್ಪಂಗಳ ಗ್ರಾಮದ ಬಳೀ ರಸ್ತೆಯ ತಿರುವಿನಲ್ಲಿ ಯಾವುದೋ ಒಂದು ಟಾಟಾ ಸುಮೋ ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಹನರವರು ಚಾಲಿಸುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಹನರವರು ಕೆಳಗೆ ಬಿದ್ದು ಗಾಯಗಳಾಗಿದ್ದು ಅದೇ ಟಾಟಾ ಸುಮೋ ಚಾಲಕನು ಮೋಹನರವರನ್ನು ಮಡಿಕೇರಿಗೆ ಕರೆತಂದು ಜಿಲ್ಲಾ ಆಸ್ಪತ್ರೆಯ ಬಳಿ ಇಳಿಸಿ ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಜೂಜಾಟ ನಾಲ್ವರ ಬಂಧನ 
      ಅಕ್ರಮವಾಗಿ ಜೂಜಾಡುತ್ತಿದ್ದ ನಾಲ್ವರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 22/03/2014ರ ನಡುರಾತ್ರಿ ವೇಳೆ ನಗರದ ಕಾನ್ವೆಂಟ್ ಜಂಕ್ಷನ್‌ನಿಂದ ಮುತ್ತಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬಳಿ ಜೂಜಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಮಡಿಕೇರಿ ನಗರ ಠಾಣೆ ಪಿಎಸ್‌ಐ ಭರತ್ ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಧಾಳಿ ನಡೆಸಿ ಸ್ಥಳದಲ್ಲಿ ಜೂಜಾಡುತ್ತಿದ್ದ ರಾಮಕೃಷ್ಣ, ಕೆ.ಟಿ.ಮದನ್, ಬಿ.ಆರ್.ಚಂದ್ರು, ಸಿ.ಕಿರಣ್ ಎಂಬವರನ್ನು ಬಂಧಿಸಿ ಜೂಜಾಡಲು ಬಳಸಿದ್ದ ರೂ. 5,370/- ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೋಟಾರು ಬೈಕ್ ಅವಘಡ, ಮಹಿಳೆಗೆ ಗಾಯ 
      ಮೋಟಾರು ಬೈಕ್ ಅವಘಡವೊಂದರಲ್ಲಿ ಮಹಿಳೆಯೊಬ್ಬರಿಗೆ ಗಾಯಗಳಾದ ಘಟನೆ  ಸಿದ್ದಾಪುರದ ಬಳಿ ನಡೆದಿದೆ. ದಿನಾಂಕ 22/03/2014ರಂದು ಸಂಜೆ ವೇಳೆ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ನಿವಾಸಿ ಬೊಳ್ಳಮ್ಮ ಎಂಬವರು ಗಾರೆ ಕೆಲಸ ಮುಗಿಸಿ ನೆಲ್ಲಿಹುದಿಕೇರಿ ನಿವಾಸಿ ವರ್ಗೀಸ್ ಎಂಬವರ ಜೊತೆ ವರ್ಗೀಸ್ ರವರ ಮೋಟಾರು ಬೈಕ್ ಕೆಎ-12-ಜೆ-2709ರಲ್ಲಿ ನೆಲ್ಲಿ ಹುದಿಕೇರಿ ಕಡೆಗೆ ಹೋಗುತ್ತಿರುವಾಗ ವರ್ಗೀಸ್‌ರವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕಿನ ಹಿಂದೆ ಕೂತಿದ್ದ ಬೊಳ್ಳಮ್ಮ ರವರು ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, March 22, 2014

ಆಸ್ತಿ ವಿವಾದ, ಮನೆಯ ಮರ  ಹಾಗೂ ಇತರೆ ಸಾಮಾಗ್ರಿಗಳ ಕಳವು:

     ಮಡಿಕೇರಿ ತಾಲೋಕು ಕಡಗದಾಳು ಗ್ರಾಮದ ನಿವಾಸಿ ಚೆಟ್ರಂಡ ಜಿ. ಉತ್ತಪ್ಪ ಎಂಬುವವರಿಗೆ ಇಬ್ನಿವಳವಾಡಿ ಗ್ರಾಮದ ಸರ್ವೆ ನಂ 224 ರಲ್ಲಿ ಹಳೆ ಮನೆ ಇದ್ದು ಮನೆಯಲ್ಲಿ ಯಾರೂ ವಾಸ ಇಲ್ಲದೇ ಇದ್ದು, ಸದರಿ ಮನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು   ಅವರ ಮನೆಯವರೇ ಆದ ಚೆಟ್ರಂಡ ಸುಬ್ಬಯ್ಯ, ಕಾಲೂರು ಮಹೇಶ ಮಹೇಶಹಾಗು ಕೊರವಂಡ ಬಿ. ಮಹೇಶ ಎಂಬುವವರು ಸೇರಿ  ದಿನಾಂಕ 18-3-2014 ರಂದು ಮನೆಯ ಮರ ಮುಟ್ಟುಗಳು ಅಲ್ಲದೆ ಪಕ್ಕದ ಲೈನ್ ಮನೆಯನ್ನು ಸಹ ದ್ವಂಸ ಮಾಡಿ ಅದರಲ್ಲಿದ್ದ 20 ಕೌಕೋಲು, 20 ಬಾರಿ ಪಟ್ಟಿ, 3 ಕಿಟಕಿಗಳು, ಏಣಿ, ಇತ್ಯಾದಿ ಸಾಮಗ್ರಿಗಳನ್ನು ಅಲ್ಲದೆ ಮುಖ್ಯ ಮನೆಯನ್ನು ಬಿಚ್ಚಿ ದಾಸ್ತಾನು ಮಾಡಿದ್ದ ಎಲ್ಲಾ ಮರ ಮುಟ್ಟುಗಳನ್ನು ಅಲ್ಲದೆ ಒಂದು ಕಂಚಿನ ತೂಗು ದೀಪ, ಒಂದು ಮರದ ಮುರು ಕಾಲಿನ ಮಣೆ, 20 ಬಿಟ್ಟಗಳು, 100 ಕೌಕೋಲುಗಳು, 3000 ಅಡಿ ಬಾರಿ ಪಟ್ಟಿ, 6 ಮರದ ಕಂಬಗಳು, ಬಾಗಿಲುಗಳು, ಕಿಟಕಿಗಳು, ಬೆಂಚುಗಳು, ಕುರ್ಚಿಗಳು ಹಾಗೂ ಇತರೆ ಮರ ಮುಟ್ಟುಗಳು ಕಳುವುಮಾಡಿಕೊಂಡು ಹೋಗಿರುತ್ತಾರೆಂದು ಆರೋಪಿಸಿ ಸಿ.ಜಿ. ಉತ್ತಪ್ಪ ನವರು ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದು  ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Friday, March 21, 2014

ಮಗಳನ್ನು ರಕ್ಷಿಸಲು ಹೋದ ತಾಯಿ ನೀರುಪಾಲು:

       ಕೆರೆಯಲ್ಲಿ ಬಿದ್ದ ಮಗಳನ್ನು ರಕ್ಷಿಸಲೆಂದು ಹೋದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಮಳೂರು - ನಾಕೂರು ಶಿರಂಗಾಲ ಗ್ರಾಮದಲ್ಲಿ ನಡೆದಿದೆ.  ದಿನಾಂಕ 20-03-2014 ರಂದು  ಸುಶೀಲ @ ಓಮನ ಎಂಬ ಮಹಿಳೆ  ಮಳೂರು ಗ್ರಾಮದ ಕೆರೆಯಲ್ಲಿ ಬಟ್ಟೆಗಳನ್ನು ಹೊಗೆಯುತ್ತಿದ್ದ ಸಂದರ್ಭದಲ್ಲಿ  ಆಕೆಯ ಮಗಳು ನೀರಿನಲ್ಲಿ ಬಿದ್ದಿದ್ದು ಆಕೆಯನ್ನು ರಕ್ಷಿಸಲು ನೀರಿಗೆ ಇಳಿದಿದ್ದು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗೆ ಸಾವನಪ್ಪಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಮೋಟಾರ್‌ ಸೈಕಲ್‌ಗೆ ಬಸ್ಸು ಡಿಕ್ಕಿ, ಸವಾರನಿಗೆ ಗಾಯ:
     ದಿನಾಂಕ 229-3-2014 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ನಾಂಗಾಲ ಗ್ರಾಮದ ನಿವಾಸಿ ನಾಣಯ್ಯ ಎಂಬುವವರ  ಎವರ್ ಗ್ರೀನ್ ಕಾಟೇಜ್ ನಲ್ಲಿ ಕೆಲಸ ಮಾಡುತ್ತಿರುವ ಶಿವಾನಿ ಪೂಜಾರಿ ಎಂಬ ವ್ಯಕ್ತಿ ಪಲ್ಸರ್ ಮೋಟಾರ್ ಬೈಕಿನಲ್ಲಿ ಬಿಟ್ಟಂಗಾಲದಿಂದ ವಿರಾಜಪೇಟೆ ಕಡೆಗೆ  ಬರುತ್ತಿರುವಾಗ್ಗೆ, ವಿರಾಜಪೇಟೆ ಕಡೆಯಿಂದ ಗೋಣಿಕೊಪ್ಪ ಕಡೆಗೆ ಹೋಗುತ್ತಿದ್ದ ಕೆಎ.19.ಎಫ್.3194ರ ಕೆಎಸ್. ಆರ್.ಟಿ.ಸಿ. ಬಸ್ಸಿನ ಚಾಲಕನು  ಬಸ್ಸನ್ನು ಅತೀವೇಗ ಹಾಗೂ ಅಜಾಗ ರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಶಿವಾನಿ ರವರು ಚಾಲನೆ ಮಾಡು ತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಶಿವಾನಿಯವರು ರಸ್ತೆಗೆ ಬಿದ್ದು, ಅವರ ಹಣೆಗೆ, ತಲೆಯ ಹಿಂಭಾಗಕ್ಕೆ ಮತ್ತು ಬಲ ಕಣ್ಣಿಗೆ ಪೆಟ್ಟಾಗಿ ರಕ್ತ ಗಾಯವಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  .

Thursday, March 20, 2014

ಅಕ್ರಮ ಪ್ರವೇಶ, ಆಸ್ತಿಗೆ ಹಾನಿ:

     ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ  ನಡೆಯುತ್ತಿರುವ ಆಸ್ತಿಯ ಜಾಗಕ್ಕೆ  ಅಕ್ರಮ ಪ್ರವೇಶ ಮಾಡಿ ಹಾಕಿರುವ ಬೇಲಿಯನ್ನು ಕಿತ್ತು ಹಾಕಿದ ಬಗ್ಗೆ ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.  ಕಾನೂರು ಗ್ರಾಮದ ನಿವಾಸಿ ಸಿ.ಎನ್‌. ರವೀಂದ್ರ ಎಂಬುವವರಿಗೆ ಹಾಗು  ಅದೇ ಗ್ರಾಮದ ಅನುಜ ಗಂಡ ಅಯ್ಯಪ್ಪ ಹಾಗು ಇತರರ ನಡುವೆ ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇದ್ದು, ದಿನಾಂಕ 19-3-2014 ರಂದು ಆರೋಪಿಗಳಾದ (1) ಅನುಜ ಗಂಡ ಮರಾಠಿ ಅಪ್ಪಯ್ಯ, (2) ವಾಣಿ ಗಂಡ ವಸಂತ (3) ಸುನೀತ ಗಂಡ ಚಂದ್ರಶೇಖರ, (4) ಚಂದ್ರಶೇಖರ,(5) ಹರಿಜನರ ಬೋಜ ಮತ್ತು ಸಂಗಡಿಗರು 8 ರಿಂದ 10 ಜನ ಸೇರಿಕೊಂಡು ತಕರಾರು ಇರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಾಕಿದ್ದ ತಂಬಿಬೇಲಿಯನ್ನು ಕಿತ್ತುಹಾಕಿ ನಷ್ಟಪಡಿಸಿರುವುದಾಗಿ ಆರೋಪಿಸಿ  ಸಿ.ಎನ್‌. ರವೀಂದ್ರರವರು ದೂರನ್ನು ನೀಡಿದ್ದು  ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ದಾರಿ ತಡೆದು ಹಲ್ಲೆ:
     ಮಡಿಕೇರಿ ತಾಲೋಕು 1ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ  ನವೀನ  ಎಂಬುವವರು  ದಿನಾಂಕ 19-03-2014 ರಂದು ರಾತ್ರಿ ಸಮಯ 9-30 ಗಂಟೆಯ ವೇಳೆಯಲ್ಲಿ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ  ವಿದ್ಯಾನಗರ ನಿವಾಸಿಗಳಾದ ಸಂದೀಪ್‌, ಸೂರತ್‌, ಅಯ್ಯಪ್ಪ ಮತ್ತು ಪುನೀತ್‌ ಎಂಬುವವರು 3 ಬೈಕಿನಲ್ಲಿ ಬಂದು  ನವೀನರವರ ದಾರಿ ತಡೆದು  ಹಳೇ ದ್ವೇಷದಿಂದ ಕೈಯಿಂದ ಹಾಗು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಗಾಯಪರಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Wednesday, March 19, 2014

ಅಕ್ರಮ ಮದ್ಯಮಾರಾಟ ಆರೋಪಿಗಳ ಬಂಧನ:

     ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಾರ್‌ ಮೇಲೆ ಪೊಲೀಸ್‌ರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ  ಮಡಿಕೇರಿ ನಗರದಲ್ಲಿ ನಡೆದಿದೆ.  ದಿನಾಂಕ 18-03-2014 ರಂದು ರಾತ್ರಿ 7.30 ಗಂಟೆಗೆ ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಎದುರುಗಡೆ ಇರುವ ಸೀ ಲ್ಯಾಂಡ್ ಹೋಟೆಲಿಗೆ ಮಡಿಕೇರಿ ನಗರ ಪೊಲೀಸರು ದಾಳಿ  ಮಾಡಿ ಹೊಟೇಲಿನ ಮಾಲೀಕ ಶ್ರೀನಿವಾಸ್ ಎಂ ಪೂಜಾರಿ ಎಂಬುವವರು ಹೋಟೆಲಿಗೆ ಬಂದ ಗಿರಾಕಿಗಳಿಗೆ ಪಕ್ಕದ ಮಾರುತಿ ಬಾರ್ ಮತ್ತು ರೆಸ್ಟೋರೆಂಟಿನಿಂದ ಅಕ್ರಮವಾಗಿ ಮದ್ಯವನ್ನು ತಂದು ಗ್ರಾಹಕರಿಗೆ ವಿತರಿಸುತ್ತಿದ್ದುದ್ದಲ್ಲದೇ ಮಾರುತಿ ಬಾರಿನ ಕ್ಯಾಶಿಯರ್ ತನ್ನ ಬಾರಿನ ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸಿ ಹೊಟೇಲಿಗೆ ಮದ್ಯ ಸರಬರಾಜು ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಆಕಸ್ಮಿಕ ಬೆಂಕಿ ತಗುಲಿ ವ್ಯಕ್ತಿಯ ದುರ್ಮರಣ:
 
    ವ್ಯಕ್ತಿಯೋರ್ವರು ಮಲಗಿ ನಿದ್ದೆ ಮಾಡುತ್ತಿದ್ದಾ ಆಕಸ್ಮಿಕವಾಗಿ  ದೀಪ ಮಗುಚಿ ಬೆಂಕಿ ಹೊತ್ತಿಕೊಂಡು ಚಿಕಿತ್ಸೆ ವೇಳೆ ಸಾವನಪ್ಪಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಅರೆಕಾಡು ಗ್ರಾಮದಲ್ಲಿ ನಡೆದಿದೆ.  ದಿನಾಂಕ 1-3-2014 ರಂದು ರಾತ್ರಿ  ಅರೆಕಾಡು ನಿವಾಸಿ 39 ವರ್ಷ ಪ್ರಾಯದ ರಾಮು ಎಂಬುವವರು ತಮ್ಮ ವಾಸದ ಮನೆಯುಲ್ಲಿ ಮಲಗಿ ನಿದ್ದೆಮಾಡುತ್ತಿದ್ದಾಗ ದೀಪ ಮಗುಚಿ ಬಿದ್ದು ಬೆಂಕಿಹೊತ್ತಿಕೊಂಡು  ಗಂಭೀತ ಗಾಯಗೊಂಡ ಪರಿಣಾಮ ಸದರಿಯವರನ್ನು ಮಡಿಕೇರಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ದಿನಾಂಕ 18-3-2014 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ
 
ಮನೆಗೆ ನುಗ್ಗಿ 6,40,00-00 ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು:
 
     ವಿರಾಜಪೇಟೆ ತಾಲೋಕು ಕೆದಮುಳ್ಳೂರು ಗ್ರಾಮದ ನಿವಾಸಿ ಕಾಫಿ ಪ್ಲಾಂಟರ್‌ ಸಿ.ಪಿ. ಪ್ರಕಾಶ್‌ರವರು ಕಳೆದ ಮೂರು ದಿನಗಳು ಮನೆಯಲ್ಲಿ ಇಲ್ಲದ ಸಮಯವನ್ನು ಸಾಧಿಸಿ  ಯಾರೋ ಕಳ್ಳರು ಮನೆಯ ಮೇಲ್ಬಾಗ ದಿಂದ ಮನೆಯ ಒಳಗೆ ಇಳಿದು ಬೆಡ್ ರೂಂ ನಲ್ಲಿದ್ದ ಗಾಡ್ರೇಜ್ ಬೀರುವನ್ನು ಒಡೆದಿರುವುದ ಲ್ಲದೆ, ಪಕ್ಕದಲ್ಲಿ ಸ್ಟೂಲ್ ಮೇಲೆ ಇಟ್ಟಿದ್ದ ಗಾಡ್ರೇಜ್ ಲಾಕರ್ ಪೆಟ್ಟಿಗೆಯಲ್ಲಿದ್ದ ರೂ.5,80,000/- ನಗದು ಹಣ, 20 ಗ್ರಾಂ ತೂಕದ ಚಿನ್ನದ ಒಂದು ನಾಣ್ಯ ಹಾಗೂ ಆಸ್ತಿಯ ಮೂಲ ದಾಖಲೆಗಳನ್ನು ಗಾಡ್ರೇಜ್ ಲಾಕರ್ ಪೆಟ್ಟಿಗೆ ಸಮೇತ ಕಳವು ಮಾಡಿದ್ದು  ಇವುಗಳ ಒಟ್ಟು ಮೌಲ್ಯ ಸುಮಾರು 6,40,000/- ಆಗಿದ್ದು  ಸಿ.ಪಿ. ಪ್ರಕಾಶ್‌ರವರು ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ 

Tuesday, March 18, 2014

ಆಕಸ್ಮಿಕ ಬೆಂಕಿ, ಹಸುಳೆ ಯ ದುರ್ಮರಣ:

      ಸಿದ್ದಾಪುರ ಠಾಣಾ ಸರಹದ್ದಿನ ಟೀಕ್‌ವುಡ್‌ ಎಸ್ಟೇಟ್‌ನಲ್ಲಿ  ಕೂಲಿ ಕೆಲಸ ನಿರ್ವಹಿಸಿಕೊಂಡಿರುವ ಅಜೇಶ್‌  ಎಂಬುವವರು ತನ್ನ ಪತ್ನಿ ಹಾಗು 1 ವರ್ಷ ಪ್ರಾಯದ ಮಗು ಅಂಜಲ  ತೋಟದ ಲೈನು ಮನೆಯಲ್ಲಿ ವಾಸವಾಗಿದ್ದು ದಿನಾಂಕ 17.3.2014 ರಂದು ಸಂಜೆ 4-00 ಗಂಟೆಗೆ  ಅಜೇಶ್‌ ಮತ್ತು ಆತನ ಹೆಂಡತಿ ಅಡುಗೆ ಕೋಣೆಯಲ್ಲಿದ್ದು ಮಗುವನ್ನು ಮಲಗುವ ಕೋಣೆಯಲ್ಲಿ ಮಲಗಿಸಿದ್ದು  ಆಕಸ್ಮಿಕವಾಗಿ  ಕಂಬಳಿಗೆ ಬೆಂಕಿ ಹೊತ್ತಿಕೊಂಡು  ಮಗುವಿಗೆ  ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು  ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಸುಣ್ಣ ಸಾಗಿಸುತ್ತಿದ್ದ ಲಾರಿ ಪಲ್ಟಿ, ಚಾಲಕ ಹಾಗೂ ಕ್ಲೀನರ್‌ ಪಾರು:
    ಸುಣ್ಣ ತುಂಬಿದ ಲಾರಿಯೊಂದು ಮಡಿಕೇರಿ ಸಮೀಪದ ಮೇಕೇರಿ ಎಂಬಲ್ಲಿ ರಸ್ತೆಬದಿಯಲ್ಲಿ ಮಗುಚಿ ಬಿದ್ದು ಲಾರಿ ಚಾಲಕ ಹಾಗೂ ಕ್ಲೀನರ್‌ರವರು ಪಾರಾದ ಘಟನೆ ನಡೆದಿದೆ.  ಉಡುಪಿ ಜಿಲ್ಲೆಯ ನಿವಾಸಿ ಜಿ. ಮೊಹಮ್ಮದ್‌ ಬ್ಯಾರಿಯವರ  ಬಾಪ್ತು ಕೆಎ-20-ಸಿ-0439 ರ ಲಾರಿಯಲ್ಲಿ ದಿನಾಂಕ 17-03-2014 ರಂದು ಮಂಗಳೂರಿನಿಂದ ಮರಗೋಡುವಿಗೆ ಸುಣ್ಣವನ್ನು ಸಾಗಿಸುತ್ತಿದ್ದು, ಮೇಕೇರಿ ಗ್ರಾಮದ ವೆಂಕಟೇಶ್ವರ ರೆಸಿಡೆಸ್ಸಿ ಹತ್ತಿರದ ತಿರುವು ರಸ್ತೆಯಲ್ಲಿ ಲಾರಿಯ ಚಾಲಕ ರಾಮಸ್ವಾಮಿಯವರು ನಿರ್ಲಕ್ಷತನದಿಂದ ಚಾಲನೆ ಮಾಡಿದ ಪರಿಣಾಮ ಲಾರಿಯು ಬಲಭಾಗಕ್ಕೆ ಮಗುಚಿ ಬಿದ್ದು ಲಾರಿಯು ಜಖಂಗೊಂಡಿದ್ದು ಲಾರಿ ಚಾಲಕ ಮತ್ತು ಲಾರಿಯಲ್ಲಿದ್ದ ಕ್ಲೀನರ್ ಮಹಮ್ಮದ್ ಸೈಯದ್‌ರವರಿಗೆ ಯಾವುದೇ ಗಾಯಗಳಾಗದೆ ಪಾರಾಗಿದ್ದು  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
 
ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ, ಸ್ಥಳದಲ್ಲೇ ಸವಾರನ ಸಾವು:
 
     ಸಂಚರಿಸುತ್ತಿದ್ದ  ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಸವಾರನೊಬ್ಬ ಸ್ಥಳದಲ್ಲೇ ದುರ್ಮರಣಗೊಂಡ ಘಟನೆ  ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ರುಧ್ರಬೀಡು ಗ್ರಾಮದಲ್ಲಿ ನಡೆದಿದೆ.  ದಿನಾಂಕ 17-3-2014 ರಂದು ರಾತ್ರಿ 10-30 ಗಂಟೆಗೆ ರುದ್ರಬೀಡು ಗ್ರಾಮದ ನಿವಾಸಿ ಪೌತಿ ಮಾದಪ್ಪ ಎಂಬುವವರ ಮಗ ಅರಸು ಎಂಬುವವರು  ತಾನು ಕೆಲಸ ನಿರ್ವಹಿಸಿಕೊಂಡಿರುವ ಗೋಣಿಕೊಪ್ಪದಲ್ಲಿರುವ  ವರ್ಕ್ ಶಾಫ್‌ ನಿಂದ ದುದ್ರಗುಪ್ಪೆ ಗ್ರಾಮದಲ್ಲಿರುವ ತನ್ನ ಮನೆಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದು  ಆತನು ಮೋಟಾರ್‌ ಸೈಕಲನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಓಡಿಸಿ ರಸ್ತೆಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಅರಸು ಸ್ಥಳದಲ್ಲೇ ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ

Monday, March 17, 2014

ಆಸ್ತಿ ವಿಚಾರದಲ್ಲಿ ವಂಚನೆ, ಪ್ರಕರಣ ದಾಖಲು:

      ಆದಾಯ ತೆರಿಗೆ ಇಲಾಖೆಯವರು ಮುಟ್ಟುಗೋಲು ಹಾಕಿಕೊಂಡ ಜಾಗವನ್ನು ಆರ್‌ಪಿ.ಸಿ. ಲೇಔಟ್‌ ಬೆಂಗಳೂರು ನಿವಾಸಿ ಡಿ. ರಾಜಕುಮಾರ್‌ ಎಂಬುವವರು  ಟಿ.ಎಸ್‌. ರಾಮಚಂದ್ರರಾವ್‌ ಎಂಬುವವರಿಗೆ  ಮಡಿಕೇರಿ ತಾಲೋಕಿನ ಮರಗೋಡು ಗ್ರಾಮದಲ್ಲಿರುವ 3   ಎಕರೆ ಜಾಗವನ್ನು ಮಾರಾಟ ಮಾಡುವುದಾಗಿ ತಿಳಿಸಿದ ಮೇರೆಗೆ ರಾಮಚಂದ್ರರಾವ್‌ರವರು ಹಣವನ್ನು ನೀಡಿ  ಅಗ್ರಿಮೆಂಟ್‌ ಮಾಡಿಕೊಂಡಿದ್ದು,  ಆರೋಪಿ ಡಿ. ರಾಜಕುಮಾರ್‌ರವರು ಮುಟ್ಟುಗೋಲು ಹಾಕಿಕೊಂಡಿರುವ ಜಾಗವನ್ನು ಸುಳ್ಳು ಮಾಹಿತಿ ನೀಡಿ ಮಾರಾಟ ಮಾಡಲು ಯತ್ನಿಸಿದ್ದು ಹಣ ವನ್ನು ಪಡೆದು ವಂಚಿಸಿರುವುದಾಗಿದೆ ಎಂಬುದಾಗಿ ಆರೋಪಿಸಿ .  ಟಿ.ಎಸ್‌. ರಾಮಚಂದ್ರ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ
 
ಹಳೆ ಕಟ್ಟಡದ ತಳಪಾಯದಢಿ ಬೆಳ್ಳಿ ನಾಣ್ಯಗಳ ಪತ್ತೆ:
 
     ಗೋಣಿಕೊಪ್ಪ ಪೊಲೀಸ್‌ ಠಾಣಾ ವ್ಯಾಪ್ತಿಯ ಕೈಕೇರಿ ಗ್ರಾಮದ ನಿವಾಸಿ ಪಿ.ಎನ್‌. ಜಯಂತ್‌ ಎಂಬುವವರಿಗೆ ಸೇರಿದ ಬೆಸಗೂರು ಗ್ರಾಮದಲ್ಲಿರುವ ನ್ಯಾಯಬೆಲೆಯ ಅಂಗಡಿಯ ಹತ್ತಿರ  ಜಾಗದಲ್ಲಿ ಹಳೆ  ತಳಪಾಯವನ್ನು  ಕುಂದ ಗ್ರಾಮದ ಎನ್.ಗಣಪತಿಯವರಿಗೆ ಸೇರಿದ ಜೆ.ಸಿ.ಬಿ ಮೂಲಕ  ಜಾಗವನ್ನು ಸಮತಟ್ಟು ಮಾಡಿಸಿದ್ದರು. ತದನಂತರ ಈಗ್ಗೆ  12 ದಿನಗಳ ಹಿಂದೆ ಸ್ಪಿಂಕ್ಲರ್ ಪೈಪ್ ಅಳವಡಿಸಲು ಕಾಫಿ ತೋಟಕ್ಕೆ ನೀರನ್ನು ಹಾಯಿಸಲು  ಸ್ಪಿಂಕ್ಲರ್ ಅಳವಡಿಸಿ ನೀರು ಹಾಯಿಸಲು ಹೇಳಿದೆನು. ಅದರಂತೆ ಸ್ಪಿಂಕ್ಲರ್ ಪೈಪ್ ಜೋಡಿಸುವ ಸಮಯದಲ್ಲಿ  ಅವರ ಕಡೆ ಆಳುಗಳಾದ ಕುಮಾರ, ಶಿವಣ್ಣ, ಸುರೇಶ ಇವರುಗಳು ಪೈಪುಗಳನ್ನು ಜೋಡಿಸುವಾಗ ಜೆ.ಸಿ.ಬಿ ತಳ್ಳಿದ ಮಣ್ಣಿನ ಪಕ್ಕದಲ್ಲಿ ಒಂದು ಸಣ್ಣ ಮಡಿಕೆಯಲ್ಲಿ ಬೆಳ್ಳಿ ನಾಣ್ಯಗಳಿರುವುದು ಪತ್ತೆಯಾಗಿದ್ದು  ಜಿ.ಎನ್‌. ಜಯಂತರವರು ನೀಡಿದ ದೂರಿನ ಮೇರೆಗೆ  ಗೋಣಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.