ಯುವಕ ನಾಪತ್ತೆ ಪ್ರಕರಣ ದಾಖಲು:
23 ವರ್ಷದ ಯುವಕನೋರ್ವ ತಮ್ಮ ಮನೆಯಿಂದ ಕಾಣೆಯಾದ ಘಟನೆ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ನಾಥಂಗಲ್ ಕುಟ್ಟ ಗ್ರಾಮದಲ್ಲಿ ನಡೆದಿದೆ. ದಿನಾಂಕ
26-03-2014 ರಂದು ಸಮಯ
ಬೆಳಿಗ್ಗೆ ಯಿಂದ ವಿರಾಜಪೇಟೆ ತಾಲ್ಲೂಕು ಕುಟ್ಟ ಗ್ರಾಮದ ನಿವಾಸಿ ಶ್ರೀಮತಿ ವಿ.ಆರ್. ಶ್ರೀದೇವಿ ಎಂಬುವವರ ಮಗ ದ್ಯಾನ್
ದರ್ಶನ್ (23) ಎಂಬವರು ತಮ್ಮ ವಾಸದ ಮನೆಯಿಂದ ಕಾಣೆಯಾಗಿದ್ದು, ಶ್ರೀಮತಿ ಶ್ರೀದೇವಿಯವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
ಪೊನ್ನಂಪೇಟೆ, ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ನೆಲೆಸಿರುವ ಪಣಿಯರ ಕೆಂಬಿ ದಿನಾಂಕ
28/03/2014 ರಂದು ಸಂಜೆ 7.30 ಗಂಟೆಗೆ ಊಟ ಮುಗಿಸಿ ಮಲಗುವಾಗ ಆಕೆಯ ಗಂಡ ಮಲ್ಲರವರ
ಜೊತೆ ಸಾರಾಯಿ ಕುಡಿದ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿರುವಾಗ ಆಕೆಯ ಗಂಡ ಜೋರುಬೊಬ್ಬೆ
ಹಾಕಿದ್ದು ಅದನ್ನು ಕೇಳಿ ಪಕ್ಕದ ಮನೆಯಲ್ಲಿ ವಾಸವಿರುವ ಪಂಜರಿಎರವರ ಮುತ್ತ ಕೆಂಬಿರವರ ಮನೆಯ ಹತ್ತಿರ
ಬಂದು ಯಾಕೆ ಬೊಬ್ಬೆ ಹಾಕುತ್ತೀರಾ ಎಂಬುದಾಗಿ ಹೇಳಿ ಅಲ್ಲೆ ಮನೆಯ ಮುಂದೆ ಬಿದ್ದಿದ್ದ ಕಾಡು ಮರದ
ದೊಣ್ಣೆಯನ್ನು ತೆಗೆದುಕೊಂಡು ಮಲ್ಲರವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು ಅದೇ ವೇಳೆ ಕೆಂಬಿರವರು ಅಡ್ಡ ಬಂದಾಗ ದೊಣ್ಣೆಯಿಂದ
ಕೆಂಬಿಯ ಎಡಕೈ ರಟ್ಟೆಗೆ ಹೊಡೆದು ಗಾಯಪಡಿಸಿದ್ದು ಪೊನ್ನಂಪೇಟೆ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.