Monday, March 24, 2014

ಗಂಡಸು ಕಾಣೆ:

     ಶಬರಿಮಲೆಗೆ ಹೋದ ವ್ಯಕ್ತಿಯೊಬ್ಬರು ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಪಾಲಂಗಾಲ ಗ್ರಾಮದಿಂದ ವರದಿಯಾಗಿದೆ.  ವಿರಾಜಪೇಟೆ ಗ್ರಾಮಾಂತರ ಠಾಣಾ  ವ್ಯಾಪ್ತಿಯ ಪಾಲಂಗಾಲ ಗ್ರಾಮದ ನಿವಾಸಿ ಎಂ. ಲಕ್ಷ್ಮಿ  ಇವರ ಪತಿ ಎಂ.ಎ. ಅಣ್ಣಯ್ಯ (62) ಇವರು  ದಿನಾಂಕ 6-1-2014 ರಂದು ಶಬರಿಮಲೆಗೆ ಹೋಗಿಬರುತ್ತೇನೆಂದು ತಿಳಿಸಿ ಖಾಸಗಿ ಬಸ್ಸು ಹತ್ತಿ ಹೋದವರು ಇಲ್ಲಿಯವಗೆ ಮನೆಗೆ ಮರಳದೇ ಇದ್ದುದರ ಬಗ್ಗೆ ಎಂ.ಲಕ್ಷ್ಮಿ ಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
      ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ 6 ಜನರ ಗುಂಪು ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಣಗೇರಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ: 23-03-14ರಂದು ಸಮಯ 7-00ಪಿ.ಎಂ.ಗೆ ಹೆಚ್‌.ಬಿ.ಸನ್ನು ಎಂಬ ವ್ಯಕ್ತಿ ದೇವಣಗೇರಿ ಗ್ರಾಮದಲ್ಲಿರುವ ಬಿಪಿನ್ ಎಂಬುವವರ  ಅಂಗಡಿಗೆ ಸಾಮಾನು ತೆಗೆದುಕೊಂಡು ಬಳಿಕ  ಬ್ರಾಂಡಿ ಬಾಟಲಿ ಬೇಕೆಂದು ಪುನ: ಕೇಳಿದ್ದು ಇದರಿಂದ ಕೋಪಗೊಂಡ ಬಿಪಿನ್ ರವರು ಏಕಾಏಕಿ ಕೈಯಿಂದ  ಹೆಚ್‌.ಬಿ. ಸನ್ನುರವರ  ಎದೆಗೆ ಹೊಡೆದುದಲ್ಲದೆ, ಅಲ್ಲೇ ಪಕ್ಕದಲ್ಲಿದ್ದ ಮನು,ವಿನು, ದಿನು, ಐವನ್ ಮತ್ತು ಶರಣು ರವರು ಸೇರಿಕೊಂಡು ಹೆಚ್‌.ಬಿ. ಸನ್ನುರವರ ತಲೆಗೆ ಹಾಗೂ  ಕೆನ್ನೆಯ ಭಾಗಕ್ಕೆ ಹೊಡದು  ರಕ್ತಗಾಯಪಡಿಸಿದ್ದು ಈ ವಿಚಾರವಾಗಿ ಹೆಚ್‌.ಬಿ. ಸನ್ನುರವರ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಓಮ್ನಿಗೆ ಬೈಕ್‌ ಡಿಕ್ಕಿ ಇಬ್ಬರಿಗೆ ಗಾಯ:
     ಮಾರುತಿ ಓಮ್ನಿಗೆ ಬೈಕೊಂದು ಡಿಕ್ಕಿಯಾಗಿ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರಿಗೆ ಗಾಯಗಳಾದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದಲ್ಲಿ ನಡೆದಿದೆ.   ದಿನಾಂಕ 23/03/2014 ರಂದು ಯೂಸುಫ್‌ ಎಂಬುವವರು  ಅವರ ಬಾಪ್ತು ಮಾರುತಿ ಓಮಿನಿ ಕಾರು ನಂ.KA12M2379 ರಲ್ಲಿ  ಪೊನ್ನಂಪೇಟೆ ಕಡೆಯಿಂದ   ಹಳ್ಳಿಗಟ್ಟು ಗ್ರಾಮದ ಕಡೆಗೆ ಹೋಗುತ್ತಿರುವಾಗ ಅವರ  ವಾಹನದ ಹಿಂದೆ KA09EC8194 ಮೋಟಾರ್ ಸೈಕಲ್ ಸವಾರ ನೆರವಂಡ ಪಿ ಪೆಮ್ಮಯ್ಯ ಎಂಬುವವರು ತಮ್ಮ ತಾಯಿ ಕುಸುಮರವರನ್ನು  ಹಿಂಬದಿಯಲ್ಲಿ  ಕೂರಿಸಿಕೊಂಡು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಮಾರುತಿ ಓಮ್ನಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರಿಬ್ಬರೂ ಕೆಳಗೆ ಬಿದ್ದು ಗಾಯಗೊಂಡಿದ್ದು, ಪೊನ್ನಂಪೇಟೆ ಪೊಲೀಸರು ಈಸಮಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಗೂಡ್ಸ್‌ ಆಟೋಗೆ ಮಾರುತಿ ವ್ಯಾನ್‌ ಡಿಕ್ಕಿ:
 
     ಗೂಡ್ಸ್‌ ಆಟೋಗೆ  ಮಾರುತಿ ಓಮ್ನಿ ಡಿಕ್ಕಿಯಾಗಿ ಅಪಾಯಗಳಿಂದ ಪಾರಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆ.ಚೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.  ಸೋಮವಾರಪೇಟೆ ತಾಲೋಕು ನೆಲ್ಲಿಹುದಿಕೇರಿ ನಿವಾಸಿ ಅಬ್ದುಲ್‌ ಸಲಾಂ  ರವರು    ತನ್ನ ಭಾಪ್ತು ಕೆಎ-12-ಎ-9341 ರ ಗೂಡ್ಸ್ ಆಟೋದಲ್ಲಿ  ದಿನಾಂಕ 22-03-2014 ರಂದು ಕಂಡಕೆರೆ ಮಸೀದಿಯಿಂದ ಸಾಮೀಯಾನ ತರಲೆಂದು ಸ್ಹೇಹಿತಾ ನಿಯಾಜ್ ರವರೊಂದಿಗೆ ಹೋಗುತ್ತಿರುವಾಗ್ಗೆ  ಎದುರುಗಡೆಯಿಂದ ಕೆಎ-04-ಎಂಬಿ-684 ರ ಮಾರುತಿ ಓಮಿನಿ ಚಾಲಕ  ಮುತ್ತಯ್ಯ ಸದರಿ ವಾಹನವನ್ನು ಅತೀ ವೇಗ ಅಜಾಗರೂಕತೆಯಿಂದ ಚಾಲನೆ ಮಾಡಿ ಗೂಡ್ಸ್‌ಆಟೋಗೆ ಡಿಕ್ಕಿ ಪಡಿಸಿದ ಪರಿಣಾಮ ಆಟೋ ಎಡ ಬದಿಯ ಚರಂಡಿಗೆ ಮಗುಚಿ ಬಿದ್ದು ಜಖಂ ಗೊಂಡಿದ್ದು ಅಲ್ಲದೆ ಚಾಲಕ ಅಬ್ದುಲ್‌ ಸಲಾಂ ಹಾಗು  ನಿಯಾಝ್ ರವರಿಗೆ ಮೈ ಕೈಗೆ ನೋವುಂಟಾಗಿದ್ದು ಯಾವುದೇ ಗಾಯಗಳಾಗದೇ ಪಾರಾರಿದ್ದು,  ಮಡಿಕೇರಿ ಗ್ರಾಮಾಂತರ ಪೊಲೀಸರು ಅಬ್ದುಲ್‌ ಸಲಾಂರವರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
ಕಾಲೇಜು ವಿದ್ಯಾರ್ಥಿನಿಯ ಕಾಣೆ:
 2ನೇ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದ 18 ವರ್ಷ ಪ್ರಾಯದ ಹುಡುಗಿಯೊಬ್ಬಳು ಕಾಣೆಯಾದ ಘಟನೆ ವಿರಾಜಪೇಟೆ ನಗರದಿಂದ ವರದಿಯಾಗಿದೆ.   ವಿರಾಜಪೇಟೆ ನಗರದ ಅಯ್ಯಪ್ಪ ಬೆಟ್ಟ ದಲ್ಲಿ ವಾಸವಾಗಿರುವ ಶ್ರೀಮತಿ ವಿಜಿ ಜೇಕಬ್‌ ಎಂಬುವವರ ಮಗಳಾದ ಕೆ.ಜಿ. ದೀಪ್ತಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದು ಯಾವನೋ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು ದಿನಾಂಕ 17-3-2014 ರಿಂದ ವಿರಾಜಪೇಟೆಯ ಅಯ್ಯಪ್ಪಬೆಟ್ಟದ ಮನೆಯಿಂದ ಕಾಣೆಯಾಗಿದ್ದು, ವಿರಾಜಪೇಟೆ ನಗರ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.