Thursday, March 27, 2014

ನೀರಿನಲ್ಲಿ ಮುಳುಗಿ ವ್ಯಕ್ತಿಯ ಸಾವು:

     ಫಿಡ್ಸ್‌ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೋರ್ವ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೋಕು ಸಂಪಾಜೆ ಗ್ರಾಮದಲ್ಲಿ ನಡೆದಿದೆ.  ದಿನಾಂಕ  26-3-2014 ರಂದು  ಮಡಿಕೇರಿ ತಾಲೋಕಿನ ಸಂಪಾಜೆ ಗ್ರಾಮದ ನಿವಾಸಿ ಕೃಷ್ಣ ಎಂಬುವವರು ತಮ್ಮ ಮನೆಯ ಹತ್ತಿರ ಹೊಳೆಯಲ್ಲಿ ಬಟ್ಟೆ ಹೊಗೆಯಲೆಂದು ತೆರಳಿದ್ದು ಆಕಸ್ಮಿಕವಾಗಿ  ನೀರಿಗೆ ಬಿದ್ದು ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಆಟೋ ರಿಕ್ಷಾ ಮಗುಚಿ ಬಿದ್ದು ವ್ಯಕ್ತಿಗೆ ಗಾಯ:

     ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆಯಿಂದಾಗಿ ಆಟೋ ರಿಕ್ಷಾವೊಂದು ರಸ್ತೆಯಲ್ಲಿ ಮಗುಚಿ ಬಿದ್ದು, ವ್ಯಕ್ತಿಯೋರ್ವ  ಗಾಯಗೊಂಡ  ಘಟನೆ ಎಂ. ಬಾಡಗ ಗ್ರಾಮದಲ್ಲಿ ನಡೆದಿದೆ.  ದಿನಾಂಕ 26-3-2014 ರಂದು ಹಾಕತ್ತೂರು ನಿವಾಸಿ ಕೆ.ಆರ್‌. ವಿಜಯ ಎಂಬುವವರು ಗಣಿ ಎಂಬುವವರ ಆಟೋ ರಿಕ್ಷಾದಲ್ಲಿ ಮುರ್ನಾಡುವಿನಿಂದ ಎಮ. ಬಾಡಗ ಗ್ರಾಮದ ಕಡೆಗೆ ಪ್ರಯಾಣಿಸುತ್ತಿದ್ದಾಗ  ಚಾಲಕ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದು,  ಪರಿಣಾಮ ರಿಕ್ಷಾ ರಸ್ತೆಯಲ್ಲಿ ಮಗುಚಿ ಬಿದ್ದು ಕೆ.ಆರ್‌. ವಿಜಯನವರು ಗಾಯಗೊಂಡಿರುತ್ತಾರೆ.  ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.