Monday, March 31, 2014

ಕೀಟನಾಶಕ ಸೇವಿಸಿ ವ್ಯಕ್ತಿಯ ಸಾವು 
                   ಔಷಧವೆಂದು ತಿಳಿದು ಕೀಟನಾಶಕ ಔಷಧಿ ಸೇವಿಸಿ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡಿನಲ್ಲಿ ನಡೆದಿದೆ. ಕರಡಿಗೋಡು ಬಳಿಯ ಹೊಳೆಕೆರೆ ಪೈಸಾರಿ ನಿವಾಸಿ ಜಿಜು ಎಂಬವರ ತಂದೆ 70 ವರ್ಷ ಪ್ರಾಯದ ತಂಗಪ್ಪನ್ ಎಂಬವರು ಹೊಟ್ಟೆನೋವಿನಿಂದ ಬಳಲುತ್ತಿದ್ದು ದಿನಾಂಕ 22/03/2014ರಂದು ಅತಿಯಾದ ಹೊಟ್ಟೆನೋವು ಕಾಣಿಸಿಕೊಂಡು ತಂಗಪ್ಪನ್‌ರವರು ಹೊಟ್ಟೆನೋವಿನ ಔಷಧಿಯ ಬದಲಾಗಿ ಮಗ ಜಿಜು ತಂದಿಟ್ಟಿದ್ದ ಹೂವಿನ ಗಿಡಕ್ಕೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 30/03/2014ರಂದು ಮೃತ ಪಟ್ಟಿರುವುದಾಗಿ ನೀಡಿದ ದುರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಸೀಮೆಣ್ಣೆ ಸಾಗಾಟ, ಓರ್ವನ ಬಂಧನ 
                  ಅಕ್ರಮವಾಗಿ ಸೀಮೆಣ್ಣೆ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ದಿನಾಂಕ 30/03/2014ರಂದು ಹೆಗ್ಗಳ ಗ್ರಾಮದ ಮಾಕುಟ್ಟ ನಿವಾಸಿ ಕರೀಂ ಹಾಗೂ ಇತರರು ಮಾಕುಟ್ಟದಭಗವತಿ ದೇವಸ್ಥಾನದ ಬಳಿ ಹೆಗ್ಗಳ ಗ್ರಾಮದ ನಿವಾಸಿ ಸುರೇಶ್ ಬಾಬು ಎಂಬವರು  ಸುಮಾರು 30 ಲೀಟರ್ ಸೀಮೆಣ್ಣೆಯನ್ನು  ಅಕ್ರಮವಾಗಿ ಕೆಎಲ್‌-59-ಬಿ-4174ರಲ್ಲಿ ಕೇರಳಕ್ಕೆ ಮಾರಾಟ ಮಾಡಲು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ತಾಲೂಕು ತಹಸೀಲ್ದಾರರು ಮತ್ತು ಆಹಾರ ನಿರೀಕ್ಷಕರ ಗಮನಕ್ಕೆ ತಂದು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಪೊಲೀಸರು ಸುರೇಶ್ ಬಾಬುರವರನ್ನು ಬಂಧಿಸಿದ ಸೀಮೆಣ್ಣೆಯನ್ನು ವಶಪಡಿಸಿಕೊಂಡು ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ದಾಖಲಾತಿ ಇಲ್ಲದ ಹಣ ವಶ. 
          ಚುನಾವಣಾ ನೀತಿ ಸಂಹಿತೆಗೆ ವಿರುದ್ದವಾಗಿ ಯಾವುದೇ ದಾಖಲಾತಿ ಇಲ್ಲದೆ ಹೊಂದಿದ್ದ ಹಣವನ್ನು ವಶಪಡಿಸಿಕೊಂಡಿರುವ ಘಟನೆ ಸಂಪಾಜೆಯಲ್ಲಿ ನಡೆದಿದೆ. ಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಪಿ.ಕೆ.ಅಚ್ಚಯ್ಯ ಎಂಬವರು ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ಸ್ಥಿರ ಕಣ್ಗಾವಲು ಪಡೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ದಿನಾಂಕ 30/03/2014ರಂದು ಕೇರಳದ ತಲಚೇರಿ ನಿವಾಸಿ ಬಿನೇಶ್ ಕುಮಾರ್ ಎಂಬವರು ಕೆಎಲ್‌-10-ಎಬಿ-8221ರ ಟಾಟಾ ಮಿನಿಲಾರಿಯಲ್ಲಿ ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಅಚ್ಚಯ್ಯನವರು ಲಾರಿಯನ್ನು ಪರಿಶೀಲಿಸಿದ ಸಂದರ್ಭ ಲಾರಿಯಲ್ಲಿ ಸುಮಾರು ರೂ.2,00,000/- ಗಳಷ್ಟು ಹಣ ಪತ್ತೆಯಾಗಿದ್ದು, ಸದ್ರಿ ಹಣವನ್ನು ಹೊಂದಿರುವ ಬಗ್ಗೆ ಬಿನೇಶ್ ಕುಮಾರ್‌ರವರು ಯಾವುದೇ ಸಮರ್ಪಕ ದಾಖಲಾತಿ ನೀಡದ ಕಾರಣ ಲಾರಿ ಹಾಗೂ ಹಣವನ್ನು ವಶಪಡಿಸಿಕೊಂಎಉ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.