ಕಟ್ಟಡ ಕಾರ್ಮಿಕನೋರ್ವನ ಅಕಸ್ಮಿಕ ಸಾವು:
ವ್ಯಕ್ತಿಯೋರ್ವ ಕುಳಿತ ಜಾಗದಲ್ಲೇ ಆಕಸ್ಮಿಕವಾಗಿ ಸಾವನಪ್ಪಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಶ್ಯಾಮ್ (58) ಎಂಬ ವ್ಯಕ್ತಿ ಸುಮಾರು ಒಂದು ತಿಂಗಳಿಂದ ಮಡಿಕೇರಿ ನಗರದಲ್ಲಿ ವಾಸವಾಗಿದ್ದುಕೊಂಡು ಗಾರೆ ಕೆಲಸ ನಿರ್ವಹಿಸಿಕೊಂಡು ಜೀವನ ಸಾಗಿಸುತ್ತಿದ್ದು ಇವರ ಪತ್ನಿ ಹಾಗು ಮಗ ಚಿಕ್ಕಮಗಳೂರಿನಲ್ಲಿ ನೆಲೆಸಿದ್ದು, ಶ್ಯಾಮ್ರವರಿಗೆ ಮದ್ಯಪಾನ ಮಾಡುವ ಚಟವಿದ್ದು, ದಿನಾಂಕ 23-4-2014 ರಂದು ಮಡಿಕೇರಿ ನಗರದ ಕನಕದಾಸ ರಸ್ತೆಯಲ್ಲಿರುವ ಮಟನ್ ಅಂಗಡಿಯ ಮುಂದೆ ಇವರು ಮೃತಪಟ್ಟಿದ್ದು, ಇವರು ಮಟನ್ ಅಂಗಡಿಯ ಬಳಿ ಕುಳಿತಲ್ಲಿಯೇ ಆಕಸ್ಮಿಕವಾಗಿ ಮೃತಪಟ್ಟಿರುವುದು ಕಂಡುಬಂದಿದ್ದು, ಮೃತರ ಮಗ ಕಿರಣ್ ಕುಮಾರ್ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
ಮೋಟಾರ್ ಸೈಕಲ್ಗೆ ಜೀಪು ಡಿಕ್ಕಿ, ಸವಾರನಿಗೆ ಗಾಯ:
ಮೋಟಾರ್ ಸೈಕಲ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಜೀಪು ಡಿಕ್ಕಿಯಾಗಿ ಸವಾರನೊಬ್ಬ ಗಾಯಗೊಂಡ ಘಟನೆ ಮಡಿಕೇರಿ ಬಳಿಯ ಸಂಪಾಜೆಯಲ್ಲಿ ನಡೆದಿದೆ. ದಿನಾಂಕ 22-4-2014 ರಂದು 3-15 ಗಂಟೆಯ ಸಮಯದಲ್ಲಿ ಚೆಂಬು ಗ್ರಾಮದ ನಿವಾಸಿ ಜಯಪ್ರಕಾಶ್ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲ್ನಲ್ಲಿ ತಮ್ಮ ಸಂಬಂಧಿಯೊಬ್ಬರೊಂದಿಗೆ ಮಡಿಕೇರಿ ಕಡೆಯಿಂದ ಸಂಪಾಜೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಜೀಪನ್ನು ಅದರ ಚಾಲಕ ಗುಡ್ಡೆಮನೆ ನಿತ್ಯಾನಂದ ಎಂಬವರು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಜಯಪ್ರಕಾಶ್ರವರಿಗೆ ಗಾಯಗಳಾಗಿ ಚಿಕಿತ್ಸೆಗಾಗಿ ಆಸ್ಪತ್ರಗೆ ದಾಖಲಾಗಿರುತ್ತಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ವಿಪರೀತ ಮದ್ಯಸೇವನೆ, ವ್ಯಕ್ತಿಯ ಸಾವು:
ಅತಿಯಾಗಿ ಮದ್ಯಸೇವಸಿದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಕುಟ್ಟ ಠಾಣಾ ವ್ಯಾಪ್ತಿಯ ತೈಲಾ ಗ್ರಾಮದ ಪನ್ಯ ಎಸ್ಟೇಟ್ನಲ್ಲಿ ನಡೆದಿಚೆ. ದಿನಾಂಕ 23-04-2014 ರಂದು ವಿರಾಜಪೇಟೆ
ತಾಲ್ಲೂಕು ಕುಟ್ಟ, ತೈಲಾ ಗ್ರಾಮದ ಪನ್ಯ ಎಸ್ಟೇಟ್ನಲ್ಲಿ ಪನ್ಯ ಭದ್ರಕಾಳಿ ಜಾತ್ರೆ ವೀಕ್ಷಿಸಲು
ಬಂದಿದ್ದ ಪಿರ್ಯಾಧಿ ಬಿ.ಪಿ. ಶಿವ ಎಂಬವರ ತಂದೆ ಬೋಜ(50) ಎಂಬವರು ವಿಪರೀತ ಮದ್ಯಪಾನ ಮಾಡಿದ್ದರ ಪರಿಣಾಮವಾಗಿ ಸಾವನಪ್ಪಿದ್ದು, ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಆಸ್ತಿ ವಿವಾದ ಹಿನ್ನೆಲೆ, ಜಾಗಕ್ಕೆ ಅಕ್ರಮ ಪ್ರವೇಶ, ಬೇಲಿ ನಾಶ:
ಆಸ್ತಿಯ ವಿವಾದದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರ ಕಾಫಿತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತಂಬಿಬೇಲಿಯನ್ನು ಕಡಿದು ನಷ್ಟಪಡಿಸಿದ ಘಟನೆ ವಿರಾಜಪೇಟೆ ತಾಲೋಕು, ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ನಿವಾಸಿ ಬಿ.ಬಿ. ಮುತ್ತಣ್ಣ ಎಂಬವರಿಗೆ ವಿರಾಜಪೇಟೆ ತಾಲೋಕು, ಕೆದಮುಳ್ಳೂರು ಗ್ರಾಮದಲ್ಲಿ ಆಸ್ತಿ ಇದ್ದು ಸದರಿ ಆಸ್ತಿಗೆ ದಿ: 22-04-14ರಂದು ಸಾಯಂಕಾಲ 5-00ಗಂಟೆಗೆ ಜೆರಿ ಲೋಫೇಸ್, (2)ಶಾಂತಿ
ಲೋಫೇಸ್, (3) ಸುಮಿ (4) ಸುನೀಲ್ ಲೋಫೇಸ್, (5) ದೀಪಕ್ ಲೋಪೇಸ್, (6) ಟೆರಿ ಲೋಫೇಸ್ , (7)
ಫಿಲೀಪ್ ಲೋಪೇಸ್ ಮತ್ತು (8) ರೀಟಾ ಲೋಫೇಸ್
ಸೇರಿ ಅಕ್ರಮ ಪ್ರವೇಶ ಮಾಡಿ ಎರಡು ಬದಿಯ ಬೇಲಿ ಯನ್ನು ಪೂರ್ತಿ ಕಡಿದು ಅಂದಾಜು 55,000/- ನಷ್ಟಪಡಿಸಿ
ಇದನ್ನು ವಿಚಾರಿಸಿದ ಫಿರ್ಯಾದಿ ಬಿ.ಬಿ. ಮುತ್ತಣ್ಣನವರಿಗೆ ಕತ್ತಿಯನ್ನು ತೋರಿಸಿ ಕಡಿದು ಕೊಲೆ
ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ಬಿ.ಬಿ. ಮುತ್ತಣ್ಣನವರು ದೂರನ್ನು ನೀಡಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಪತಿಯ ಅಗಲಿಕೆಯಿಂದ ಅಘಾತಗೊಂಡು ಪತ್ನಿಯ ಆತ್ಮಹತ್ಯೆ:
ಪತಿಯ ಸಾವಿನಿಂದ ಅಘಾತಗೊಂಡ ವೃದ್ಧ ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಮುಗುಟಗೇರಿ ಗ್ರಾಮದಲ್ಲಿ ನಡೆದಿದೆ. ಮುಗುಟಗೇರಿಯಲ್ಲಿ ವಾಸವಾಗಿದ್ದ ಚಿಣ್ಣಮ್ಮ ಎಂಬವರು ತಮ್ಮ ಪತಿಯು ಸಾವನಪ್ಪಿದ ಹಿನ್ನೆಲೆಯಲ್ಲಿ ಅಘಾತಗೊಂಡು ದಿನಾಂಕ 23-4-2014 ರಂದು ರಾತ್ರಿ ಮನೆಯ ಸಮೀಪದ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.