Tuesday, April 1, 2014

ಜೂಜು ಅಡ್ಡೆಯ ಮೇಲೆ ಪೊಲೀಸ್‌ ದಾಳಿ:

     ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.  ಮಡಿಕೇರಿ ನಗರ ಪೊಲೀಸರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಮಡಿಕೇರಿ ನಗರದ ರಾಣಿಪೇಟೆಯಲ್ಲಿರುವ ಶ್ರೀಮುನೀಶ್ವರ ದೇವಾಲಯದ ಬಳಿ ಮರವೊಂದರ ಕೆಳಗೆ ನಾಲ್ಕು ಜನರು ಸೇರಿ ಅಕ್ರಮವಾಗಿ ಇಸ್ಪೀಟ್‌ ಜೂಜಾಡುತ್ತಿದ್ದುದನ್ನು ಪತ್ತೆ ಹೆಚ್ಚಿ ಇವರ ಮೇರೆ  ಮಡಿಕೇರಿ ನಗರ ಠಾಣಾಧಿಕಾರಿ ಎಂ.ಎಂ. ಭರತ್‌ರವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ  ಜೂಜಾಟಕ್ಕೆ ಬಳಸಿದ  ` 2000/-ಗಳನ್ನು  ವಶಪಡಿಸಿಕೊಂಡು, ಆರೋಪಿಗಳಾದ ಹೆಚ್‌.ವಿ. ವಿನೋದ್‌ ಕುಮಾರ್‌,   ಜಿ. ಮಹದೇವ, ಅಂಬೇಡ್ಕರ್‌ ಬಡಾವಣೆ, ಮಡಿಕೇರಿ, ಹೆಚ್‌.ಜಿ. ಮುನಿಯಪ್ಪಮುನಿಯಪ್ಪ, ಮಲ್ಲಿಕಾರ್ಜುನ ನಗರ, ಮಡಿಕೇರಿ ಹಾಗು ಶಿವಕುಮಾರ್‌, ನಗರಸಭೆ ನೌಕರ, ಮಡಿಕೇರಿ ಇವರುಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
 
ಅಕ್ರಮ ಜೂಜಾಟ ಆರೋಪಿಗಳ ವಿರುದ್ದ ಪ್ರಕರಣ ದಾಖಲು:
 
     ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಹಾನಗಲ್ಲು ಗ್ರಾಮದಲ್ಲಿ ಅಕ್ರಮ ಇಸ್ಪೀಟ್‌ ಜೂಜಾಡುತ್ತಿದವರ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.   ಸೋಮವಾರಪೇಟೆ ಠಾಣಾ ಪಿ.ಎಸ್‌‌.ಐ ರವಿಕಿರಣ್‌ ರವರಿಗೆ ದೊರೆದ ಖಚಿತ ವರ್ತಮಾನದ ಮೇರೆಗೆ  ದಿನಾಂಕ 31-3-2014 ರಂದು ಸಿಬ್ಬಂದಿಯೊಂದಿಗೆ  ಹಾನಗಲ್ಲು ಗ್ರಾಮದ  ಕೆ.ಇ.ಬಿ. ಹತ್ತಿರದ ಬಾಣೆಯಲ್ಲಿ ಅಕ್ರಮವಾಗಿ ಇಸ್ಪೀಟ್‌ ಜೂಜಾಡುತ್ತಿದ್ದವರ ಮೇಲೆ ದಾಳಿ ನಡೆಸಿ 5 ಜನ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡುರುತ್ತಾರೆ.