Friday, May 16, 2014

ಕಾರು ಅಪಘಾತ ಇಬ್ಬರಿಗೆ ಗಾಯ:

     ಮೈಸೂರಿನ ಚೇತನ್‌ ಕುಮಾರ್‌ ಎಂಬುವವರು ತನ್ನ ಸ್ನೇಹಿತರಾದ ಬೆಂಗಳೂರಿನ ನೆಲಮಂಗಲದ ನಿವಾಸಿ ಯೋಗೇಶ್ ಹಾಗೂ ಮೈಸೂರಿನ ಕೆಸರೆಯ ನಿವಾಸಿ ದೇವರಾಜು  ದಿನಾಂಕ 15-05-2014 ರಂದು ರಾತ್ರಿ ವೇಳೆಯಲ್ಲಿ ಮೈಸೂರಿನಿಂದ ಹೊರಟು ಮಡಿಕೇರಿ ಮಾರ್ಗವಾಗಿ ಬಂದು ದಿನಾಂಕ 16-05-2014 ರಂದು ಮುರುಡೇಶ್ವರಕ್ಕೆ ಹೋಗುತ್ತಿರುವಾಗ್ಗೆ ಸಮಯ 4-00 ಎ ಎಂ ಗೆ ಮಡಿಕೇರಿ ಮಂಗಳೂರು ಸಾರ್ವಜನಿಕ ತಾರು ರಸ್ತೆಯಲ್ಲಿ ಕಾಟಕೇರಿ ಎಂಬಲ್ಲಿಗೆ ತಲುಪುವಾಗ್ಗೆ ಚಾಲಕ ಕಾರನ್ನು ವೇಗವಾಗಿ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಎಡಬದಿಯಲ್ಲಿರುವ ಮರಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ಧಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಅಪ್ರಾಪ್ತ ಹುಡುಗಿ ಮೇಲೆ ಅತ್ಯಾಚಾರ:
     ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಮಾಡಿರುವ ಘಟನೆ ಸಿದ್ದಾಪುರ ಠಾಣೆಗೆ ವರದಿಯಾಗಿದೆ.         ಸಿದ್ದಾಪುರ ಠಾಣಾ ವ್ಯಾಪ್ತಿಯ ನಂಜರಾಯಪಟ್ನ ನಿವಾಸಿ ಉದಯ ಎಂಬುವವರ ಮಗಳಾದ ಶರಣ್ಯ ಎಂಬಾಕೆಯ ಮೇಲೆ  ಅದೇ ಗ್ರಾಮದ ನಿವಾಸಿ ಶಶಿ ಎಂಬಾತ ಶರಣ್ಯಳಿಗೆ ಜೀವ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರ ಎಸಗಿರುವುದಾಗಿ ಶರಣ್ಯಳ ಚಿಕ್ಕಪ್ಪ ಕೆ.ಎನ್‌. ಕೃಷ್ಣಕುಟ್ಟಿರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಟ್ರ್ಯಾಕ್ಟರ್‌ ಬೈಕ್‌ಗೆ ಡಿಕ್ಕಿ ಇಬ್ಬರಿಗೆ ಗಾಯ:
     ದಿನಾಂಕ: 13-05-14ರಂದು ವಿರಾಜಪೇಟೆ ತಾಲೋಕು ಮೈತಾಡಿ ಗ್ರಾಮದ ನಿವಾಸಿ ಸಿ.ಪಿ. ಬೋಪಯ್ಯ ಎಂಬುವವರು ಅವರ ಬಾಪ್ತು ಬೈಕ್ ನಂ. ಕೆಎ.05. ಇಜಿ.583 ರಲ್ಲಿ ಪ್ರೀತಮ್ ತಮ್ಮಯ್ಯ, ಎಂಬುವವರೊಂದಿಗೆ  ಮಡಿಕೇರಿ ಕಡೆಗೆ ಬರುತ್ತಿದ್ದಾಗ   ಎದುರುಗಡೆಯಿಂದ ಟ್ರಾಕ್ಟರ್ ನಂ. ಕೆಎ.12.ಎಂ. 7412ರ ಚಾಲಕ ವಿಜು ಎಂಬುವವರು  ಸದರಿ ಟ್ರಾಕ್ಟ ರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಮೋಟಾರ್ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ನಿಂದ ಸಿ.ಪಿ. ಬೋಪಯ್ಯ  ಮತ್ತು ಪ್ರೀತಮ್ ತಮ್ಮಯ್ಯ, ರವರು ಕೆಳಗೆ ಬಿದ್ದು, ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Thursday, May 15, 2014

ವ್ಯಕ್ತಿ ಕಾಣೆ, ಪ್ರಕರಣ ದಾಖಲು:

     ವಿರಾಜಪೇಟೆ ತಾಲೋಕು, ಕಾವಾಡಿ ಕುಂಬೇರಿ ಗ್ರಾಮದ ನಿವಾಸಿ ನೆಲ್ಲಮಕ್ಕಡ ಎಸ್‌. ರಾಮಚ್ಚ ಎಂಬುವವರ  ಮಗ ಎನ್.ಆರ್. ಮಹೇಶ್(37) ರವರು ದಿನಾಂಕ 26-04-14 ರಂದು ಬೆಳಿಗ್ಗೆ 08-00ಗಂಟೆಯ ಸಮಯದಲ್ಲಿ  ಮನೆಯಿಂದ ಹೊರಗೆ ಹೋದವರು ಈವರೆಗೆ ಮನೆಗೆ ಹಿಂದಿರುಗಿ ಬಾರದೆ ಕಾಣೆಯಾಗಿರುತ್ತಾರೆ.   ಈ ಸಂಬಂಧ ಎನ್‌.ಎಸ್‌. ರಾಮಚ್ಚರವರು ನೀಡಿದ ದೂರಿನ ಮೇರೆಗೆ  ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:
 
     ಸಿಮೆಂಟ್‌ ಇಟ್ಟಿಗೆ ವ್ಯಾಪಾರ ನಡೆಸುವ ವಿಚಾರದಲ್ಲಿ ವ್ಯಕ್ತಿಯೋರ್ವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಪಡಿಸಿದ ಘಟನೆ  ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ:14-05-14ರಂದು ಸಮಯ ರಾತ್ರಿ 9-00ಗಂಟೆಗೆ ಎಂ.ಆರ್‌. ದಿನೇಶ್‌ ಎಂಬುವವರು  ತಮ್ಮ ಮನೆಯ ಮುಂದಿನ ಅಂಗಳದಲ್ಲಿ ನಿಂತಿರುವಾಗ್ಗೆ, ಅದೇ ಗ್ರಾಮದ ನಿವಾಸಿ ಶರಣು ಎಂಬ ವ್ಯಕ್ತಿ ಅಲ್ಲಿಗೆ ಬಂದು ಸಿಮೆಂಟ್ ಇಟ್ಟಿಗೆ ವ್ಯಾಪಾರದಲ್ಲಿ ಜಗಳ ತೆಗೆದು ತನ್ನ ಕೈಯಲ್ಲಿದ್ದ ಕತ್ತಿ ಯಿಂದ ಎಂ.ಆರ್‌ ದಿನೀಶ್‌ರವರ ಬಲ ಭಾಗದ ತುಟಿಗೆ, ಬಲ ಗೈ ಮೊಣಕೈಗೆ ಹಾಗೂ ಬಲ ಭಾಗದ ಭುಜಕ್ಕೆ ಕಡಿದು ರಕ್ತ ಗಾಯಪಡಿಸಿದ್ದು  ಸದರಿಯವರು  ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ನೀಡಿದ ಹೇಳಿಕೆ ಮೇರೆಗೆ  ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 
ನೀರಿನ ವಿಚಾರದಲ್ಲಿ  ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:
 
     ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದ ಬಲೆಕಂಡಿ ನಿವಾಸಿ ಕೆ.ಎ. ಮೇದಪ್ಪ ಎಂಬವರೊಂದಿಗೆ  ಅದೇ ಗ್ರಾಮದ ನಿವಾಸಿ ಪ್ರವೀಣ @ ಕಾರ್ಯಪ್ಪ ಎಂಬವರು  ನೀರಿನ ಪೈಪುಗಳನ್ನು ಕಿತ್ತು ಹಾಕಿದ ವಿಚಾರದಲ್ಲಿ ಜಗಳ ಮಾಡಿ, ಮೇದಪ್ಪನವರನ್ನು ದಾರಿಯಲ್ಲಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಹೊಳೆಯಲ್ಲಿ ಅಕಸ್ಮಿಕ ಮುಳುಗಿ ವ್ಯಕ್ತಿಯ ಸಾವು:
 
     ವ್ಯಕ್ತಿಯೊಬ್ಬರು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ  ಹೊದ್ದೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 13-5-2014 ರಂದು  ಹೊದ್ದೂರು ಗ್ರಾಮದ ಬಲಮುರಿ ಎಂಬಲ್ಲಿ ವಾಸವಾಗಿದ್ದ ಅಪ್ಪು ಎಂಬ ವ್ಯಕ್ತಿ  ಬಲಮುರಿ ಸೇತುವೆಯ ಬಳಿ ಹೊಳೆಯಲ್ಲಿ ಸ್ನಾನ ಮಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು  ಬಲಮುರಿ ಗ್ರಾಮದ ನಿವಾಸಿ ಸಿ.ಎಸ್‌. ಸೂರಜ್‌ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ. 
 

Wednesday, May 14, 2014

ವಿನಾಕಾರಣ ವ್ಯಕ್ತಿಯ ಮೇಲೆ ಹಲ್ಲೆ:

     ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಸುಶಾಂತ್‌ ಡಿಸೋಜ ಎಂಬವರನ್ನು ಅದೇ ಗ್ರಾಮದ ಸತೀಶ್‌ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿದ್ದು,  ಸುಶಾಂತ್‌ ಡಿಸೋಜರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಮಹಿಳೆಯ ಮಾನಬಂಗಕ್ಕೆ ಯತ್ನ:
     ದಿನಾಂಕ 12-05-2014 ರಂದು ಸಮಯ ಸುಮಾರು ಮದ್ಯಾಹ್ನ 12.00 ಗಂಟೆಗೆ  ವಿರಾಜಪೇಟೆ ತಾಲ್ಲೂಕು ಕೆ. ಬಾಡಗ ಗ್ರಾಮದ ಪಲ್ಲೇರಿ ವಾಸಿ ಮುಕ್ಕಾಟ್ಟೀರಾ ರಿತೇಶ್ ರವರ ಮನೆಯ ಪಕ್ಕದ ಬಾವಿಯ ಹತ್ತಿರ ಶ್ರೀಮತಿ ಡಿ.,ಎನ್‌. ಢೀನಾ ಎಂಬುವವರು  ಒಗೆಯುತ್ತಿದ್ದ ಸಮಯದಲ್ಲಿ ನಾಥಂಗಾಲ ಕುಟ್ಟ ಗ್ರಾಮದ ನಿವಾಸಿ ರಜಾಕ್‌ ಎಂಬ ವ್ಯಕ್ತಿ  ಅಲ್ಲಿಗೆ ಬಂದು ಡೀನಾ ಎಂಬುವವರ ಎಡ ಕೈಯನ್ನು ಹಿಡಿದು ಎಳೆದು ಸರಸಕ್ಕೆ ಸಹಕರಿಸು ಇಲ್ಲದಿದ್ದರೆ  ನಾನು ಬಾವಿಗೆ ಬಿದ್ದು ಸಾಯುತ್ತೇನೆಂದು ಹೆದರಿಸಿದ್ದು, ಶ್ರೀಮತಿ ಡೀನಾರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಮಾನಸಿಕ ಹಾಗೂ ದೈಹಿಕ ಹಿಂಸೆ, ವಿಷ ಸೇವಿಸಿ ಮಹಿಳೆ ಸಾವು
    ಮಡಿಕೇರಿ ತಾಲೋಕು ಕರ್ಣಂಗೇರಿ ಗ್ರಾಮದ ಅಬ್ದುಲ್‌ ರಜಾಕ್‌ ಎಂಬವರ ಮಗಳು ಅಸ್ಮಾತ್‌ ಎಂಬಾಕೆಯನ್ನು  ಹುಣಸೂರಿನ ನಿವಾಸಿ ಜಾಫ್ರ್‌ ಖಾನ್‌ ರವರಿಗೆ ಮದುವೆ ಮಾಡಿಕೊಟ್ಟಿದ್ದು  ಸದರಿಯವರು ಪತ್ನಿ ಆಸ್ಮಾನ್‌ಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದು  ಇದನ್ನು  ತಾಳಲಾರದೇ ಸುಮಾರು 10 ತಿಂಗಳಿನಿಂದ ತವರು  ಮನೆಯಲ್ಲಿಯೇ ಇದ್ದು  ದಿನಾಂಕ 11-05-2014 ರಂದು ಸಮಯ ಅಂದಾಜು ರಾತ್ರಿ 09-30 ಗಂಟೆಗೆ  ಜಾಫರ್ ಖಾನ್  ಪತ್ನಿ ಆಸ್ಮಾತ್‌‌ಳಿಗೆ ದೂರವಾಣಿ ಕರೆ ಮಾಡಿ ತಂದೆಯ ಮನೆಯಿಂದ ಹಣ ಕೇಳಿಕೊಂಡು ನಮ್ಮ ಮನೆಗೆ ಬರಬೇಕು ಇಲ್ಲವಾದರೆ ಎಲ್ಲಿಯಾದರೂ ಹೋಗಿ ಸಾಯಿ ಎಂಬುದಾಗಿ ಹೇಳಿದ್ದು ಇದರಿಂದ ಅಸ್ಮಾನ್‌ ಬೇಸರ ಯಾವುದೋ ವಿಷ ಪದಾರ್ಥ ಸೇವಿಸಿ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಮಯ ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 


 
 

Monday, May 5, 2014

ದ್ವೇಷದ ಹಿನ್ನಲೆ ವ್ಯಕ್ತಿಯ ಮೇಲೆ ಹಲ್ಲೆ, ಅಪಹರಣ:

 
      ದ್ವೇಷದ ಹಿನ್ನಲೆಯಲ್ಲಿ 4 ರಿಂದ 5 ಜನರ ಗುಂಪು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಚಿಕಿತ್ಸೆ ಪಡೆದಯುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಯಿಂದ ಅಪಹರಿಸಿದ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಮಾವಿನಳ್ಳಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ 4-5-2014 ರಂದು ಕಿರಿಕೊಡ್ಲಿ ಗ್ರಾಮದ ನಿವಾಸಿಗಳ ತೇಜ, ವೇದಕುಮಾರ್, ಕೃಷ್ಣಕುಮಾರ, ವಿನಯ ಹಾಗು ದಿನೇಶ ಎಂಬುವವರುಗಳು ಸೇರಿ ಮಾನಿನಳ್ಳಿ ಗ್ರಾಮದ ನಿವಾಸಿ ಎಂ.ಎಲ್‌ ಉಮೇಂದ್ರ ಎಂಬವರ ಮನೆಯ ಹತ್ತಿರ ಬೊಲೇರೋ ವಾನನದಲ್ಲಿ ಬಂದು ಗಲಾಟೆ ಮಾಡಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದು ಇದನ್ನು ನೋಡಿದ ಧಮೇಂದ್ರ ಹಾಗು ಸೋಮಶೇಖರ ರವರು ಗಲಾಟೆಯನ್ನು ತಡೆಯಲು ಬಂದಾಗ ಅವರ ಮೇಲೆ ಹಲ್ಲೆ ನಡೆಸಿ   ಗಾಯಪಡಿಸಿದ್ದು, ಗಾಯಾಳು ಸೋಮಶೇಖರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಯದಲ್ಲಿ ಸದರಿ ಆರೋಪಿಗಳು ಆಸ್ಪತ್ರೆಗೆ ಬಂದು ಸೋಮಶೇಖರ ರವರನ್ನು ಅಪಹರಿಸಿಕೊಂಡು ಹೋಗಿರುವುದಾಗಿದ್ದು, ಶನಿವಾರಸಂತೆ ಸಂತೆ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಹಳೆಯ ದ್ವೇಷದಿಂದ ಕತ್ತಿಯಿಂದ ವ್ಯಕ್ತಿಮೇಲೆ ಹಲ್ಲೆ:
 
ದಿನಾಂಕ: 03.05.2014 ರಂದು ರಾತ್ರಿ ವೇಳೆಯಲ್ಲಿ ಸುರೇಶ ಎಂಬವರು ತನ್ನ ಪತ್ನಿ ಶ್ರೀಮತಿ ಕಾವೇರಿಯವರ ಜೊತೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕಾಂಡನಕೊಲ್ಲಿ ಗ್ರಾಮದಲ್ಲಿರುವ ಗ್ರೀನ್‌ಲ್ಯಾಂಡ್‌ ಎಸ್ಟೇಟ್‌ನ ಲೈನುಮನೆಯಲ್ಲಿ ಇರುವಾಗ್ಗೆ ಸಮಯ 20.00 ಗಂಟೆಗೆ ಆರೋಪಿ ರಘು ಎಂಬವರು ಸುರೇಶರವರನ್ನು ಮನೆಯಿಂದ ಹೊರಗೆ ಕರೆದು ಮನೆಯ ಅಂಗಳದಲ್ಲಿ ಹಳೇಯ ದ್ವೇಷದಿಂದ ಏಕಾಏಕಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು  ಕತ್ತಿಯಿಂದ ಸುರೇಶರವರ ಎಡ ದವಡೆಗೆ, ಎದೆಗೆ ಮತ್ತು ಕುತ್ತಿಗೆಗೆ ಕಡಿದು ರಕ್ತಗಾಯಗೊಳಿಸಿರುತ್ತಾರೆಂದು  ಶ್ರೀಮತಿ ಕಾವೇರಿಯವರು ಸುಂಟಿಕೊಪ್ಪ ಠಾಣೆಗೆ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
 
                                                                    

Friday, May 2, 2014

ಮೋಟಾರು ಬೈಕ್ ಕಳವು 
     ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರು ಬೈಕನ್ನು ಯಾರೋ ಕಳವು ಮಾಡಿದ ಪ್ರಕರಣ  ವಿರಾಜಪೇಟೆ ನಗರದಲ್ಲಿ ನಡೆದಿದ್ದು ತಡವಾಗಿ ಮೊಕದ್ದಮೆ ದಾಖಲಾಗಿದೆ. ದಿನಾಂಕ 25/04/2014ರಂದು ಸಂಜೆ ವಿರಾಜಪೇಟೆ ನಗರದ ಪಂಜರಪೇಟೆ ನಿವಾಸಿ ಬಿ..ಜಿ.ನಾರಾಯಣ  ಎಂಬವರು ಅವರ ಯಮಹಾ ಮೋಟಾರು ಬೈಕ್ ಸಂಖ್ಯೆ ಕೆಎ-12-ಹೆಚ್-2864 ನ್ನು ಮನೆಯ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು ಮಾರನೇ ದಿನ ನೋಡುವಾಗ ಬೈಕ್ ನಿಲ್ಲಿಸಿದ್ದಲ್ಲಿ ಕಾಣಿಸದೆ ಇದ್ದು ಯಾರಾದರೂ ಸ್ನೇಹಿತರು ತೆಗೆದುಕೊಂಡು ಹೋಗಿರಬಹುದೆಂದು ಬಗೆದು ಎಲ್ಲಾ ಕಡೆಯಲ್ಲಿ ಹುಡುಕಾಡಿ ದೊರೆಯದ ಕಾರಣ ಪೊಲೀಸರಿಗೆ ದೂರು ನೀಡಿದ್ದು ವಿರಾಜಪೇಟೆ ನಗರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿನಾ ಕಾರಣ ವ್ಯಕ್ತಿಯ ಮೇಲೆ ಹಲ್ಲೆ, ಪ್ರಕರಣ ದಾಖಲು 
     ಮಳೆಯಿಂದ ಆಶ್ರಯ ಪಡೆಯಲು ವರ್ಕ್‌ಶಾಪ್‌ ಒಂದರ ಒಳಗೆ ನಿಂತಿದ್ದ ವ್ಯಕ್ತಿಯೊಬ್ಬರ ಮೇಲೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 30/04/2014ರಂದು ವಿರಾಜಪೇಟೆ ನಗರದ ನಿವಾಸಿ ಅಕ್ಷಯ ಸಾಗರ್ ಎಂಬವರು ಕೆಲಸದ ನಿಮಿತ್ತ ನಗರದ ಮಲಬಾರ್ ರಸ್ತೆಯಲ್ಲಿ ಹೋಗುತ್ತಿರುವಾಗ ಮಳೆ ಬಂದ ಕಾರಣ ಅಲ್ಲೇ ಪಕ್ಕದಲ್ಲಿದ್ದ ವರ್ಕ್‌ಶಾಪ್ ಒಂದರಲ್ಲಿ ನಿಂತಿರುವಾಗ ಆಜಾಮ್ ಎಂಬವರು ಬಂದು ಅಲ್ಲಿ ನಿಲ್ಲದಂತೆ ಹೇಳಿ ಹೊರಗೆ ಹೋಗುವಂತೆ ತಿಳಿಸಿದಾಗ ಅಕ್ಷಯ ಸಾಗರ್‌ರವರು ಮಳೆ ನಿಂತ ಮೇಲೆ ಹೋಗುವುದಾಗಿ ತಿಳಿಸಿದ್ದು ಆಗ ಆಜಾಮ್‌ರವರು ಅಕ್ಷಯ ಸಾಗರ್‌ರವರಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೈಯಲ್ಲಿದ್ದ ಬ್ಲೇಡ್‌ನಿಂದ ಕೆನ್ನೆಯ ಮೇಲೆ ಕುಯ್ದು ಗಾಯ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.