Monday, June 30, 2014

ಗೋಡೆ ಕುಸಿದು ವ್ಯಕ್ತಿಯ ಸಾವು
        ಮನೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಗೋಡೆ ಕುಸಿದು ವ್ಯಕ್ತಿಯೊಬ್ಬ ದುರ್ಮರಣಕ್ಕೀಡಾದ ಘಟನೆ ಮಡಿಕೇರಿ ನಗರದಲ್ಲಿ ಇಂದು ನಡೆದಿದೆ. ನಗರದ ಹೊಸ ಬಡಾವಣೆ ನಿವಾಸಿ ರೇಖಾ ಎಂಬವರ ಪತಿ ಮೋಹನ ಎಂಬುವವರು ಸುದರ್ಶನ ವೃತ್ತದ ಬಳಿ ಇರುವ ಉಣ್ಣಿ ಕೃಷ್ಣ ಎಂಬುವವರ ಮನೆಯಲ್ಲಿ ನಾಗರಾಜು, ಮಹದೇವರವರೊಂದಿಗೆ ಕೆಲಸಕ್ಕೆಂದು ಹೋಗುತ್ತಿದ್ದು, ದಿನಾಂಕ 30/06/2014 ರಂದು ಬೆಳಿಗ್ಗೆ ಸಮಯ 10:30 ಗಂಟೆಗೆ ಮೋಹನರವರು ಇತರ ಕೆಲಸಗಾರರೊಂದಿಗೆ ಉಣ್ಣಿ ಕೃಷ್ಣರವರ ಮನೆಯ ಶೌಚಾಲಯದ ಗೋಡೆ ಒಡೆಯುವ ಕೆಲಸ ಮಾಡುತ್ತಿದ್ದಾಗ ಗೋಡೆಯು ಆಕಸ್ಮಿಕವಾಗಿ ಮೋಹನರವರ ಮೇಲೆ ಬಿದ್ದು ಮೋಹನರವರು ಗಾಯಗೊಂಡಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯಾಧಿಕಾರಿಯವರು ಮೋಹನವರನ್ನು ಪರೀಕ್ಷಿಸಿ ಮೃತರಾಗಿರುವ ಬಗ್ಗೆ ತಿಳಿಸಿದ್ದು, ಕೆಲಸದ ಸ್ಥಳದಲ್ಲಿ ಮಾಲೀಕರು ಯಾವುದೇ ಮುಂಜಾಗ್ರತೆಯನ್ನು ವಹಿಸದೇ ಹಾಗೂ ಸಹ ಕೆಲಸಗಾರರಾದ ನಾಗರಾಜು ಮತ್ತು ಮಹದೇವರವರು ನಿರ್ಲಕ್ಷ್ಯತೆಯಿಂದ ಗೋಡೆಯನ್ನು ಕೆಡವಿದ ಪರಿಣಾಮ ಮೋಹನರವರು ಮೃತರಾಗಿರುವುದಾಗಿ ರೇಖಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತು ಕಳವು
          ಮನೆಯ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ ಘಟನೆ ಮಡಿಕೇರಿ ನಗರದ ಕಾವೇರಿ ಲೇ ಔಟ್ ನಲ್ಲಿ ನಡೆದಿದೆ. ಕಾವೇರಿ ಲೇಔಟಿನ ನಿವಾಸಿ ನಜೀಂ ಎಂಬವರ ಪತಿ ಹನೀಫ್‌ರವರು ನೆದರ್ಲೆಂಡಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 28/06/2014ರಂದು ನಜೀಂರವರು ಮನೆಗೆ ಬೀಗ ಹಾಕಿ ನಾಪೋಕ್ಲಿಗೆ ಹೋಗಿದ್ದು, ದಿನಾಂಕ 30/06 2014ರಂದು ಬೆಳಿಗ್ಗೆ ಬಂದು ನೋಡುವಾಗ ಮನೆಯ ಮುಂದಿನ ಮುಂದಿನ ಬಾಗಲನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಮನೆಯಲ್ಲಿದ್ದ ಚಿನ್ನಾಭರಣ, ಕ್ಯಾಮೆರಾಗಳು, ಮೊಬೈಲ್ ಫೋನ್ ಸೇರಿದಂತೆ ಒಟ್ಟು ರೂ. 4ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವರದ್ದೆಯ ಮೇಲೆ ಹಲ್ಲೆ, ಕೊಲೆ ಬೆದರಿಕೆ
       ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ವೃದ್ದೆಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಅಮ್ಮತ್ತಿ ನಗರದಲ್ಲಿ ನಡೆದಿದೆ. 29-06-14ರಂದು ಸಂಜೆ ಸಮಯ ಅಮ್ಮತ್ತಿ ನಿವಾಸಿ ಪಿ.ಜಯ ಎಂಬಾಕೆಯು ತನ್ನ ಮಗನ ಮನೆಗೆ ಹೋಗಿ ಮಾತನಾಡಿ ಕೊಂಡಿರುವಾಗ ಮಗನ ಹೆಂಡತಿ ಗಂಗೆ ಮಗನೊಂದಿಗೆ ಜಗಳ ಮಾಡುತ್ತಿದ್ದುದನ್ನು ಕಂಡು ಗಂಗೆಗೆ ಬುದ್ದಿ ಹೇಳಿದ್ದು, ಆಗ ಗಂಗೆಯು ವೃದ್ದೆ ಜಯಳಿಗೆ ಬುದ್ದಿ ಕಲಿಸುವುದಾಘಿ ಹೇಳಿ ಪಕ್ಕದ ಲೈನಿನಲ್ಲಿ ವಾಸವಾಗಿರುವ ಆನಂದನ ಕರೆದು ಈ ಮುದುಕಿಗೆ ಬಹಳ ಅಹಂಕಾರ ಇವಳಿಗೆ ಸರಿಯಾಗಿ ಬುದ್ದಿ ಕಲಿಸು ಎಂದು ಕುಮ್ಮಕ್ಕು ನೀಡಿದ್ದು ಆನಂದ ಅಂಗಳದಲ್ಲಿ ನಿಂತಿದ್ದ ಜಯಳನ್ನು ತಡೆದು ಕೈಯಿಂದ ಗುದ್ದಿ ನೋವು ಪಡಿಸಿರುವುದಲ್ಲದೆ ಕೊಲೆ ಮಾಡದೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, June 29, 2014

ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಕಾರು ಡಿಕ್ಕಿ:
 
     ದಿನಾಂಕ 28-6-2014 ರಂದು ಪಿರಿಯಾಪಟ್ನ ತಾಲೋಕು ಹೊನ್ನಾಪುರದಲ್ಲಿ ವಾಸವಾಗಿರುವ ಶ್ರೀಮತಿ ಹೇಮಾ (45) ಎಂಬ ಮಹಿಳೆ ಮಡಿಕೇರಿಗೆ ಸೊಪ್ಪು ಮಾರಲು ಬಂದು ಮಡಿಕೇರಿ ನಗರದ ಟಿ.ಎಂ.ಸಿ. ವೃತ್ತದ ಬಳಿ ನಿಂತುಕೊಂಡಿರುವಾಗಿ ಕೆಎ-01 ಎಂಜೆ-ಎಂಜೆ-8963ರ ಕಾರನ್ನು ಅದರ ಚಾಲಕ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಹೇಮಾರವರಿಗೆ ಗಾಯಗಳಾಗಿದ್ದು, ಮಡಿಕೇರಿ ಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಆಸ್ತಿ ವಿವಾದ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ:
 
     ದಿನಾಂಕ 27-6-2014 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ  ಮುಕ್ಕೋಡ್ಲು ಗ್ರಾಮದಲ್ಲಿ ಪಳೆಯಂಗಡ ಸಂಪತ್ತು ಹಾಗು ಪಳಂಗಪ್ಪ ಎಂಬುವವರುಗಳ ನಡುವೆ ಜಾಗದ ವಿಚಾರದಲ್ಲಿ ಜಗಳವಾಗಿ ಸಂಪತ್ತುರವರ ಮೇಲೆ ಪಳಂಗಪ್ಪನವರು ಕತ್ತಿಯಿಂದ ಹಲ್ಲೆ ನಡೆಸಿ ಕಿವಿ ಹಾಗು ಕುತ್ತಿಗೆಗೆ ಗಾಯಪಡಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
 
ಕಾರಿಗೆ ಆಟೋ ಡಿಕ್ಕಿ ಒಬ್ಬರಿಗೆ ಗಾಯ:
 
      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಸಂಪಾಜೆ ಸಂಪಾಜೆಗ್ರಾಮದ ಕೊಯನಾಡುವಿನಲ್ಲಿ ಆಟೋ ರಿಕ್ಷಾ ಒಂದನ್ನು ಅದರ ಚಾಲಕ  ಅಜಾಗರೂಕತೆಯಿಂದ ಚಾಲಿಸಿ ಕಾರೊಂದಕ್ಕೆ ಡಿಕ್ಕಿಪಡಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ  ಹೇಮಾವತಿ ಎಂಬ ಮಹಿಳೆಯ ಕಾಲಿಗೆ ಗಾಯವಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
 
ಆಸ್ತಿ ವಿವಾದ, ವ್ಯಕ್ತಿಯ  ದಾರಿ ತಡೆದು ಹಲ್ಲೆ:
 
     ಮಡಿಕೇರಿ ತಾಲೋಕು ಮಕ್ಕಂದೂರು ಗ್ರಾಮದ ನಿವಾಸಿ ಪಡಿಯೇಟ್ಟಿರ ಬಿದ್ದಪ್ಪನವರು ದಿನಾಂಕ 28-6-2014 ರಂದು ತಮ್ಮ ತೋಟಕ್ಕೆ ಕಾರಿನಲ್ಲಿ  ಹೋಗುತ್ತಿರುವಾಗ  ಅವರ ಮನೆಯವರೇ ಆದ  ಪಿ.ಎನ್‌. ಅಚ್ಚಯ್ಯ ಹಾಗು ಪತ್ನಿ ಶ್ವೇತಾ ರವರುಗಳು ಬಿದ್ದಪ್ಪನವರನ್ನು ತಡೆದು  ದೊಣ್ಣೆ ಹಾಗು ಕೈಗಳಿಂದ ಹಲ್ಲೆ ನಡೆಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
 
 

Friday, June 27, 2014

ಪತ್ನಿಗೆ ವರದಕ್ಚಿಣೆ ಕಿರುಕುಳ ಪ್ರಕರಣ ದಾಖಲು:
       ಪತಿ ತನ್ನ ಪತ್ನಿಗೆ ವರದಕ್ಷಿಣೆಗಾಗಿ ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿ  ಕೊಲೆ ಬೆದರಿಕೆ ಒಡ್ಡಿರುವ ಘಟನೆ  ಬಗ್ಗೆ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.   ಶ್ರೀಮತಿ ಬಿ.ಎಸ್‌.ರಾಣಿ (26) ಇವರು ಆಕ್ಟೋಬರ್ 2013 ರಂದು ಶ್ರೀಮಂಗಲ ಕಾಕೂರು ಗ್ರಾಮದ ನಿವಾಸಿ ಲಕ್ಷ್ಮಣ ಎಂಬವರನ್ನು  ಮದುವೆಯಾಗಿದ್ದು, ಮದುವೆಯ ಪೂರ್ತಿ ಖರ್ಚನ್ನು ಹಾಗು  ರೂ 200000/- ವನ್ನು ನಗದಾಗಿ ಹಾಗೂ 16 ಗ್ರಾಂ ಚಿನ್ನದ ಚೈನನ್ನು ತವರು ಮನೆಯಿಂದ ನೀಡಿದ್ದು  ಮದುವೆಯಾದ ಕೆಲ ದಿನಗಳ ನಂತರ ಆರೋಪಿ  ಲಕ್ಷ್ಮಣರವರು  ಪತ್ನಿಗೆ 1 ಲಕ್ಷ ಹಣವನ್ನುತವರು ಮನೆಯಿಂದ ತರುವಂತೆ ಪೀಡಿಸಿದ್ದು  ಹನ ತ್ರದೇ ಇರುವುದಕ್ಕೆ ಪತ್ನಿಗೆ  ಕೈಯಿಂದ ಹೊಡೆದಿದ್ದು  ಅಲ್ಲದೆ ಪ್ರತೀ ದಿನವು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮಾನಸಿಕ ಹಾಗು ದೈಹಿಕ ಹಿಂಸೆಯನ್ನು ನೀಡುತ್ತಿದ್ದು  ಮನೆಯವರು ಸಹ ಆಹಾರ ನೀಡದೆ ಹಿಂಸಿಸುತ್ತಿದ್ದು,  ದಿನಾಂಕ 16-02-2014 ರಂದು ಪತ್ನಿಯನ್ನು ಬಲತ್ಕಾರವಾಗಿ ಮನೆಯಿಂದ ಹೊರಗೆ ಹಾಕಿದ್ದು  ಹಾಲಿ ರು ಮಡಿಕೇರಿಯ ತನ್ನ ತಂದೆಯ ಮನೆಗೆ ಬಂದು ನೆಲೆಸಿದ್ದು  ತದನಂತರ ದಿನಾಂಕ 07-03-2014 ರಂದು ಆರೋಪಿಗಳೆಲ್ಲರೂ ಮಡಿಕೇರಿಯಲ್ಲಿ ಪಿರ್ಯಾದಿಯ ನಿವಾಸಕ್ಕೆ ಬಂದು 1 ಲಕ್ಷ ನಗದು ಕೊಡದೇ ಇದ್ದರೆ ಆಕೆಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಹಾಗೇನಾದರೂ ಆಕೆ ಬಂದಿದ್ದೇ ಆದರೇ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಸಂಬಂಧ ನ್ಯಾಯಾಲಯದಿಂದ ಬಂದ ಸೂಚನೆಯಂತೆ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೂಗೊಂಡಿರುತ್ತಾರೆ.
ಮೊಟಾರ್‌ ಸೈಕಲ್‌ ಡಿಕ್ಕಿ, ಪಾದಾಚಾರಿಗೆ ಗಾಯ:
     ಪಾದಾಚಾರಿಯೋರ್ವರಿಗೆ ಮೋಟಾರ್‌ ಸೈಕಲ್‌ ಡಿಕ್ಕಿಯಾಗಿ ಗಾಯಗೊಂಡ ಘಟನೆ ಮಡಿಕೇರಿ ತಾಲೋಕು ಮೂರ್ನಾಡು ಮುಖ್ಯ ರಸ್ತೆಯಲ್ಲಿ ನಡೆದಿದೆ.  ಮಡಿಕೇರಿ ತಾಲೋಕು ಎಂ. ಬಾಡಗ ಗ್ರಾಮದ ನಿವಾಸಿ ಬಿ.ಪಿ. ರಾಜುರವರು ತನ್ನ ಪತ್ನಿಯೊಂದಿಗೆ ಮೂರ್ನಾಡು ಮುಖ್ಯ ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿರುವಾಗ್ಗೆ ಸಮಯ 3-30 ಪಿ. ಎಂ. ಗೆ ಮೂರ್ನಾಡು ವಿರಾಜಪೇಟೆಯ ಮುಖ್ಯ ರಸ್ತೆಯಲ್ಲಿ ಮೂರ್ನಾಡು ಕಡೆಯಿಂದ ಬಂದ ಕೆಎ-09-ಇಕೆ-1467 ರ ಮೋಟಾರು ಸೈಕಲನ್ನು ಅದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅವರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಜುರವರ   ಬಲ ಕಾಲಿಗೆ, ಎಡ ಭಾಗದ ಕೆನ್ನೆಗೆ, ಎಡ ಭುಜಕ್ಕೆ ಗಾಯ ಮತ್ತು  ನೋವುಂಟಾಗಿದ್ದು  ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲುಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಕಾರು ಟಿಪ್ಪರ್‌ಗೆ ಡಿಕ್ಕಿ ಮೂವರಿಗೆ ಗಾಯ:
    ನಿರ್ಲಕ್ಷ್ಯದಿಂದ ಕಾರನ್ನು ಚಾಲಿಸಿ ಟಿಪ್ಪರ್‌ಗೆ ಡಿಕ್ಕಿಪಡಿಸಿದ ಪರಿಣಾಮ  ಮೂವರು ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ. ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಚಾಲಿಸಿಕೊಂಡು ಹೋಗುತ್ತಿದ್ದ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಎದುರುಗಡೆಯಿಂದ ಬಂದ ಟಿಪ್ಪರ್‌ವೊಂದಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ  ಪಿ.ಎಸ್‌. ವಿಜಯ, ಸುರೇಶ ಹಾಗು ಕಾರು ಚಾಲಕ ಬಿಜುರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.   

Thursday, June 26, 2014

ಸಹೋದರರ ದಾರಿ ತಡೆದು ಹಲ್ಲೆ, ಕೊಲೆ ಬೆದರಿಕೆ:

      5 ಮಂದಿಯ ಗುಂಪೊಂದು ಸಹೋದರರಿಬ್ಗರ ದಾರಿ ತಡೆದು ಹಲ್ಲೆನಡೆಸಿ ಕೊಲೆ ಬೆದರಿಕೆ ಹಾಕಿರುವ  ಘಟನೆ ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ.  ದಿನಾಂಕ 25.06.2014 ರಂದು  ಸಮಯ 18:30 ಗಂಟೆಗೆ  ಸೋಮವಾರಪೇಟೆ ತಾಲೋಕು ಹಾನಗಲ್ಲು ಗ್ರಾಮದ ನಿವಾಸಿ ಹೆಚ್‌.ಆರ್‌. ನವೀನ ಎಂಬ ವ್ಯಕ್ತಿ ತಮ್ಮ  ಅಣ್ಣ  ವೆಂಟಕೇಶರವರೊಂದಿಗೆ   ಸೋಮವಾರಪೇಟೆಯಿಂದ ಮನೆಗೆ ಹೋಗಲು  ಸೋಮವಾರಪೇಟೆಯ ಪ್ರವಾಸಿ ಮಂದಿರದ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ್ಗೆ  ಹೆಚ್.ವಿ ಮಿಥುನ್‌, ಸುಜಿತ್‌, ನಂದ, ಡೀಲಾಕ್ಷ @ ದಿನೇಶ, ಪಿಲಿಕ್ಸ್‌ ಎಂಬುವವರು ಸೇರಿ  ತಡೆದು ನಿಲ್ಲಿಸಿ ಸ್ಟೀಲ್‌ ರಾಡಿನಿಂದ ನವೀನ ಹಾಗು ಅವರ ಅಣ್ಣನ ಮೇಲೆ ಹಲ್ಲೆ ನಡೆಸಿ ಕೊಲೆ  ಬೆದರಿಕೆ  ಹಾಕಿರುವ ಸಂಬಂಧ ಹೆಚ್‌.ಆರ್‌. ನವೀನರವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.
ಮೋಟಾರು ಸೈಕಲ್‌ಗಳ ಮುಖಾಮುಖಿ ಡಿಕ್ಕಿ ಹಿನ್ನೆಲೆ ವ್ಯಕ್ತಿಯ ಮೇಲೆ ಹಲ್ಲೆ:
      ದಿನಾಂಕ 25.06.2014 ರಂದು  ಸಮಯ 18:30 ಪಿ.ಎಂಗೆ  ಸೋಮವಾರಪೇಟೆ ತಾಲೋಕು ಕಲ್ಕಂದೂರು  ಗ್ರಾಮದ ನಿವಾಸಿ ಆರ್‌ ದಿನೇಶರವರು ಕೆಎ41ಎಕ್ಸ್‌6641ರ ಪಲ್ಸರ್‌ 150  ಮೋಟಾರ್‌ ಸೈಕಲ್‌ನ್ನು   ಚಾಲಿಸಿಕೊಂಡು  ಸೋಮವಾರಪೇಟೆಯಿಂದ ಹಾನಗಲ್ಲು ಗ್ರಾಮದ ಕಡೆಗೆ ಹೋಗಲು ಸೋಮವಾರಪೇಟೆ ನಗರದ  ಪ್ರವಾಸಿ ಮಂದಿರದ ಹತ್ತಿರ  ತಲುಪುವಾಗ್ಗೆ  ಹಿಂದಿನಿಂದ ಹಾನಗಲ್ಲು ಗ್ರಾಮದ ವಾಸಿಗಳಾದ ವೆಂಕಟೇಶ ಮತ್ತು ನವೀನ ರವರು ಆರ್‌ಎಕ್ಸ್‌ ಯಮಹಾ ಮೋಟಾರ್‌ ಸೈಕಲ್‌ನ್ನು ಚಾಲಿಸಿಕೊಂಡು ಬಂದು  ಆರ್‌. ದಿನೇಶ್‌ರವರ ಮೋಟಾರ್‌ ಸೈಕಲ್‌ಗೆ   ತಾಗಿದ ಕಾರಣ  ವೆಂಕಟೇಶನು  ಮತ್ತು  ನವೀನ ರವರು ಕೈಯಿಂದ ದಿನೇಶ್‌ ಮೇಲೆ ಹಲ್ಲೆ ನಡೆಸಿ ಕೊಲೆಮಾಡುವುದಾಗಿ ಬೆದರಿಸಿರುತ್ತಾರೆಂದು  ಸೋಮವಾರಪೇಟೆ ಪೊಲೀಸರಿಗೆ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  
ಓಮಿನಿ ಅವಘಡ  ಇಬ್ಬರಿಗೆ ಗಾಯ: 
     ಭಾಗಮಂಡಲ ನಿವಾಸಿ ಕೆ.ಜೆ. ಭರತ್‌ರವರು ದಿನಾಂಕ 25-6-2014 ರಂದು  ತನ್ನ ಪತ್ನಿ ಇಂದಿರಾ, ಮಗಳು ಮಿಲನರವರೊಂದಿಗೆ ತಮ್ಮ ಬಾಪ್ತು ಮಾರುತಿ ಓಮಿನಿ ಕಾರು ಸಂ ಕೆಎ-12-ಎನ್-9167 ರಲ್ಲಿ ಸುಳ್ಯದಿಂದ ಮಡಿಕೇರಿಗೆ ಬರುತ್ತಿರುವಾಗ್ಗೆ ಸಮಯ 02-30 ಪಿ ಎಂ ಗೆ ದೇವರಕೊಲ್ಲಿ ಎಂಬಲ್ಲಿಗೆ ತಲುಪುವಾಗ್ಗೆ ಎದುರಿನಿಂದ ಬರುತ್ತಿದ್ದ ಪಿಕ್ ಅಪ್ ಜೀಪು ನಂ ಕೆಎ-12-ಎ-6687 ಇದ್ದಕ್ಕಿದ್ದಂತೆ ರಸ್ತೆಯ ಬಲ ಭಾಗಕ್ಕೆ ತಿರುಗಿದ್ದರಿಂದ ಅವಘಡ ಉಂಟಾಗಿ ಕಾರು ಜಖಂ ಆಗಿದ್ದು ಕೆ.ಜೆ. ಭರತ್‌ ಹಾಗು  ಮಿಲನರವರ  ಎರಡೂ ಕಾಲುಗಳಿಗೆ ಪೆಟ್ಟಾಗಿದ್ದು,  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, June 25, 2014

ಅಸ್ವಸ್ಥ ವಯೋವೃದ್ದರ ಮರಣ:
     ರಾಮಕೃಷ್ಣ, ಪ್ರಾಯ ಅಂದಾಜು 86 ವರ್ಷ, ಇವರು ಬೆಟ್ಟಗೇರಿ ಹಾಗೂ ಹೆರವನಾಡು ಗ್ರಾಮಗಳಲ್ಲಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಕೆಲಸ ಮಾಡಿಕೊಂಡು ಸುತ್ತಾಡಿಕೊಂಡಿದ್ದು ಆತನು ಕೆಲಸ ಮಾಡುತ್ತಿದ್ದ ಕಡೆಗಳಲ್ಲಿ ಹಾಗೂ ಸಮುದಾಯ ಭವನದ ಕಟ್ಟಡದಲ್ಲಿ ವಾಸಮಾಡಿಕೊಂಡು ಇರುತ್ತಿದ್ದು,   ದಿನಾಂಕ 24-06-2014 ರಂದು ಬೆಳಿಗ್ಗೆ ಸಮಯ ಅಂದಾಜು 8-00 ಗಂಟೆಗೆ ಸದರಿ ವ್ಯಕ್ತಿ ಬೆಟ್ಟಗೇರಿಯಲ್ಲಿರುವ ಬೇಕರಿಯ ಹತ್ತಿರ ರಸ್ತೆ ಬದಿಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದು ಅವರನ್ನು 108 ಆಂಬುಲೆನ್ಸ್ ವಾಹನದಲ್ಲಿ  ಹೆವನಾಡು ಗ್ರಾಮದ ನಾಗೇಂದ್ರ  ಹಾಗೂ ಸಂಗಡಿಗರು  ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಈ ದಿನ ದಿನಾಂಕ 25-06-14 ರಂದು  ಬೆಳಿಗ್ಗೆ  06-00 ಗಂಟೆಗೆ ಸದರಿ ವ್ಯಕ್ತಿ  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.  ಈ ಸಂಬಂಧ  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ. 
ಆಸ್ತಿ ವಿವಾದ, ವ್ಯಕ್ತಿಗೆ  ಕೊಲೆ ಬೆದರಿಕೆ:
     ಆಸ್ತಿವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಸಿದ ಘಟನೆ ವಿರಾಜಪೇಟೆ ಸಮೀಪದ ಕಂಡಂಗಾಲ ಗ್ರಾಮದಲ್ಲಿ ನಡೆದಿದೆ.  ವಿರಾಜಪೇಟೆ ತಾಲೋಕು ಕಂಡಂಗಾಲ ಗ್ರಾಮದ ಎ.ಎಂ. ಇಬ್ರಾಹಿಂ ರವರಿಗೆ ಹಾಗೂ ಅವರ ತಮ್ಮ ಹಸನ್ ರವರಿಗೆ  ಕಂಡಂಗಾಲ ಗ್ರಾಮದಲ್ಲಿ ಕಾಫಿ ತೋಟವಿದ್ದು, ಸದ್ರಿ ತೋಟವು ಇಬ್ಬರಿಗೆ ಪಾಲಾಗಿದ್ದು,  ಇಬ್ರಾಹಿಂ ರವರ  ಅಣ್ಣನ ಹೆಂಡತಿ ಅಲೀಮ, ರವರು ದಿನಾಂಕ;    01-05-14ರಂದು 25 ರಿಂದ 30ವರ್ಷದ ಸುಮಾರು 7-8  ಕಾಫಿ ಗಿಡಗಳನ್ನು ಹಾಗೂ  3 ವರ್ಷದ 5 ರಿಂದ  ಕಾಫಿ ಗಿಡಗಳನ್ನು ಕಡಿದು ಒಟ್ಟು ರೂ. 15,000/- ನಷ್ಟ ಮಾಡಿದ್ದು, ಈ ವಿಚಾರ ವನ್ನು ಕೇಳಲು ಹೋದಾಗ ಅಲೀಮ ಇಬ್ರಾಹಿಂರವರನ್ನು ತಡೆದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು, ಕತ್ತಿಯಿಂದ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿರುತ್ತಾರೆ. 
ರಸ್ತೆ ದಾಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ:
      ರಸ್ತೆಯನ್ನು ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಗಾಯಗಳಾದ ಘಟನೆ ಮಡಿಕೇರಿ ನಗರದ ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ.  ಈ ದಿನ ದಿನಾಂಕ 25-6-2014 ಬೆಳಿಗ್ಗೆ 6-30 ಗಂಟೆಗೆ  ಹೆಚ್‌. ಶ್ರೀಧರ್‌ ಎಂಬುವವರು ಸರ್ಕಾರಿ ಆಸ್ಪತ್ರೆಯ ಮುಂಬಾಗ ರಸ್ತೆಯನ್ನು ದಾಟುತ್ತಿದ್ದಾಗ ಆರೋಪಿ ಕೆಎ1212ಎನ್‌5129ರ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಓಡಿಸಿ ಶ್ರೀಧರರವರಿಗೆ ಡಿಕ್ಕಿಪಡಿಸಿ ಗಾಯಪಡಿಸಿದ್ದು, ಮಡಿಕೇರಿ ಟ್ರಾಫಿಕ್‌ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

Tuesday, June 24, 2014

ಮನೆ ಬಾಗಿಲು ಮುರಿದು ಎರಡುವರೆ ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಗು ಪೂಜಾ ಸಾಮಾಗ್ರಿ ಕಳವು:

     ಮನೆ ಬಾಗಿಲನ್ನು ಮುರಿದು ಮನೆಗೆ ನುಗ್ಗಿ ರೂ.250000 ಮೌಲ್ಯದ ಬೆಳ್ಳಿ ಆಭರಣ ಹಾಗು ದೇವರ ಪೂಜಾ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ ಘಟನೆ ಕುಶಾಲನಗರದ ಬೈಪಾಸ್‌ ರಸ್ತೆಯ ಮನೆಯೊಂದರಲ್ಲಿ ನಡೆದಿದೆ.  ಕುಶಾಲನಗರದ ಬೈಪಾಸ್‌ ರಸ್ತೆಯಲ್ಲಿರುವ ಮನೆಯಲ್ಲಿ ವಾಸವಾಗಿರುವ ಡಿ.ಸಿ. ಮೋಹನ್‌ರವರು  ದಿನಾಂಕ 02-6-2014 ರಂದು ವಿದೇಶಕ್ಕೆ ತೆರಳಿದ್ದು ಅವರ ಪತ್ನಿ ದಿನಾಂಕ 03-6-2014 ರಂದು ಹಾಸನಕ್ಕೆ ತೆರಳಿದ್ದು  ದಿನಾಂಕ 23-6-2014 ರಂದು  ಮದ್ಯಾಹ್ನ 01.45 ಗಂಟೆಗೆ ಡಿ.ಸಿ. ಮೋಹನ್‌ರವರು ಮನೆಗೆ ಬಂದಾಗ  ಮನೆಯ ಮುಖ್ಯದ್ವಾರವನ್ನು ಯಾರೋ ಕಳ್ಳರು ಒಡೆದು ಒಳನುಗ್ಗಿ  ಮನೆಯ ಎರಡು ಕೋಣೇಗಳ ಬಾಗಿಲನ್ನು ಒಡೆದು ಮಲಗುವ ಮತ್ತು ದೇವರ ಕೋಣೆಯಲ್ಲಿದ್ದ  1)ಎರಡು ದೊಡ್ಡ ಬೆಳ್ಳಿ ತಟ್ಟೆಗಳು ,  2) ಎರಡು ದೊಡ್ಡ ಬೆಳ್ಳಿ ದೀಪಗಳು , 3) ಒಂದು ಅಷ್ಟಲಕ್ಷ್ಮಿ ದೊಡ್ಡ ಚೊಂಬು 4) ಒಂಬತ್ತು ದೊಡ್ಡ ಬೆಳ್ಳಿ ಲೋಟಗಳು 5) ಒಂದು ಪೂಜೆ ಉದ್ದರಣೆ ಸೆಟ್ 6) ಎರಡು ದೊಡ್ಡ ಕುಂಕುಮ ಅರಿಶಿಣ ಬಟ್ಟಲುಗಳು  7)  ಎರಡು ಚಿಕ್ಕ ಕುಂಕುಮ ಅರಿಶಿಣ ಬಟ್ಟಲುಗಳು  8) ಎರಡು ಮದ್ಯಮ ಗಾತ್ರದ ಬೆಳ್ಳಿ ದೀಪಗಳು 9) ಎರಡು ಚಿಕ್ಕ ಬೆಳ್ಳಿ ದೀಪಗಳು 10) ಒಂದು ದೊಡ್ಡ  ಬೆಳ್ಳಿ ಅಕ್ಷತೆ ಬಟ್ಟಲು 11) ಒಂದು ಚಿಕ್ಕ  ಬೆಳ್ಳಿ ಅಕ್ಷತೆ ಬಟ್ಟಲು 12) 30 ಬೆಳ್ಳಿ ನಾಣ್ಯಗಳು ಇವುಗಳ ಅಂದಾಜು  6 ಕೆ.ಜಿ. ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಅವುಗಳ ಅಂದಾಜು ಮೌಲ್ಯ 2,50,000 /- ರೂ ಗಳಾಗಿದ್ದು ಈ ಸಂಬಂಧ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.    
ಬಾಗಿಲನ್ನು ತೆರೆದು ಚಿನ್ನಾಭರಣ ಮತ್ತು ಹಣ ಕಳವು:
     ಕಳ್ಳರು ಮನೆಯೊಂದರ ಹಿಂದಿನ ಬಾಗಿಲನ್ನು ಕಬ್ಬಿಣದ ಹಾರೆಯಿಂದ ತೆರೆದು ಒಳಪ್ರವೇಶಿಸಿ ಚಿನ್ನಾಭರಣಗಳನ್ನು ಕಳವುಮಾಡಿಕೊಂಡು ಹೋದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾವಾಡಿ ಕುಂಬೇರಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ; 23-06-14ರಂದು ಮದ್ಯಾಹ್ನ ಸಮಯ 2-30ಪಿ.ಎಂ. ನಿಂದ ಸಂಜೆ 5-00ಪಿ.ಎಂ.ನ ಮಧ್ಯದ ಅವದಿಯಲ್ಲಿ ಕಾವಾಡಿ ಕುಂಬೇರಿ ಗ್ರಾಮದ ಎಂ.ಎ. ದೇವಯ್ಯ ಎಂಬುವವರ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಕಬ್ಬಿಣದ ಹಾರೆಯಿಂದ ತೆರೆದು ಒಳನುಗ್ಗಿ ಮನೆಯ ಗಾಡ್ರೇಜ್ ಬೀರುಗಳಲ್ಲಿ ಇಟ್ಟಿದಂತಹ  ಒಂದು ಪೀಚೆ ಕತ್ತಿ,  1 1/2 ಪವನಿನ ಒಂದು ಚಿನ್ನದ ಚೈನ್, 3/4 ಪವನಿನ ಒಂದು ಉಂಗುರ, 1 1/2 ಪವನಿನ ಒಂದು ಮುತ್ತು ಸರ, 1  1/4 ಪವನಿನ 3 ಜೊತೆ ಓಲೆಗಳು ಮತ್ತು 1  1/2 ಪವನಿನ ಒಂದು ಖಡಗ, ಚಿಲ್ಲರೆ ಹಣ ಹಾಗೂ ನಗದು ರೂ. 8000/- ಒಟ್ಟು ಮೌಲ್ಯ ರೂ. 1,40,000/- ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಸದರಿಯವರ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:
     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಸುಂಟಿಕೊಪ್ಪ ನಗರದಲ್ಲಿ ನಡೆದಿದೆ.  ದಿನಾಂಕ 23.06.2014 ರಂದು ಸಮಯ 13.00 ಗಂಟೆಗೆ ಸುಂಟಿಕೊಪ್ಪ ನಗರದ 1ನೇ ಬ್ಲಾಕ್‌‌ನಲ್ಲಿ ಎಸ್‌.ಎಂ. ಆರೀಪ್‌ ಎಂಬವರ ಮನೆಯ ಮುಂದೆ  ಅರೋಪಿಯಾದ ಮೊಹ್ಮದ್‌‌ಅಲಿ ಇವರು ನಿಲ್ಲಿಸಿರುವ ಪಿಕ್‌‌ಅಪ್‌ನ್ನು ತೆಗೆಯಿರಿ ಎಂದು ಹೇಳಿದ ವಿಚಾರದಲ್ಲಿ ಮೊಹಮ್ಮದ್‌ ಆಲಿ ಹಾಗು  ಜಬ್ಬಾರ್‌ ರವರುಗಳು   ಏಕಾ ಏಕಿ ಆರೀಫ್‌ ಮೇಲೆ  ಹಲ್ಲೆ ನಡೆಸಿರುವ ಬಗ್ಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಶಾಲೆಯ ಕೊಠಡಿಯ ಬೀಗ ಮುರಿದು ಕಂಪ್ಯೂಟರ್‌ ಮಾನಿಟರ್‌ ಕಳವು:
       ದಿನಾಂಕ 21-06-2014 ರಂದು ಮದ್ಯಾಹ್ನ 1:30 ಗಂಟೆಗೆ ಶಾಲೆಗೆ ಬೀಗ ಹಾಕಿ ಹೋಗಿದ್ದು, ದಿನಾಂಕ:23-06-2014 ರಂದು ಸಮಯ ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿಯವರು ಶಾಲೆಯ ಕೊಠಡಿಯ ಬೀಗ ತೆರೆಯಲು ಹೋದಾಗ ಕೊಠಡಿಯ ಚಿಲಕವನ್ನು ಸಲಾಖೆಯಿಂದ ಹೊಡೆದ ಕುರುವು ಕಂಡು ಬಂದಿದ್ದು, ಪರಿಶೀಲಿಸಿದಾಗ ನೋಡಿದಾಗ H P ಕಂಪನಿಯ 220 ಎಂಟಿ ಕಂಪ್ಯೂಟರ್ ನ 2 ಮಾನಿಟರ್ ಗಳು ಕಳುವಾಗಿದ್ದು ಇವುಗಳ ಒಟ್ಟು ಮೌಲ್ಯ ರೂ 20,000/- ಆಗಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರು ತ್ತಾರೆ. 
 
 
 
 
 
 
      
 
 
 
 
 
 
 
                                   

Monday, June 23, 2014

ವ್ಯಕ್ತಿಯ ಎಟಿಎಂ ಕಾರ್ಡ್‌ ಬಳಸಿ ಹಣ ಡ್ರಾ:

      ನಿವೃತ್ತ ಸೇನಾನಿಯೊಬ್ಬರ   ಎ.ಟಿ.ಎಂ. ಕಾರ್ಡ್‌ನ್ನು ಅಪಹರಿಸಿ  ಸುಮಾರು 17,000 ರೂ. ಡ್ರಾಮಾಡಿದ ಘಟನೆ ಮಡಿಕೇರಿ ತಾಲೋಕು ಐವತ್ತೋಕ್ಲು ಗ್ರಾಮದಲ್ಲಿ ನಡೆದಿದೆ.  ಐವತ್ತೋಕ್ಲು ಗ್ರಾಮದ ನಿವಾಸಿ ನಿವೃತ್ತ ಸೇನಾನಿ ಜಿ.ಕೆ. ಬೆಳ್ಳಿಯಪ್ಪ ಎಂಬುವವರ ಮನೆಯಿಂದ ಯಾರೋ ಕಳ್ಳರು  ಎ.ಟಿ.ಎಂ. ಕಾರ್ಡ್‌ನ್ನು ಅಪಹರಿಸಿ  ಸುಮಾರು 17,000-00 ರೂ.ಗಳನ್ನು ಬೇರೆ ಬೇರೆ ದಿನಾಂಕದಲ್ಲಿ ಡ್ರಾ ಮಾಡಿದ್ದು   ದಿನಾಂಕ 23-6-2014 ರಂದು ಜಿ.ಕೆ. ಬೆಳ್ಳಿಯಪ್ಪನವವರು ಎ.ಟಿ.ಎಂ. ಕಾರ್ಡ್‌ನ್ನು ಬಳಸುವಾಗ ಈ ಬಗ್ಗೆ ವಿಚಾರ ಗೊತ್ತಾಗಿದ್ದು, ತನ್ನ ಮನೆಗೆ ಟಿ.ವಿ.ಯನ್ನು ವೀಕ್ಷಿಸಲು ಮರುತ್ತಿದ್ದ ತಿಮ್ಮರಾಜು ಎಂಬುವವರ ಮೇಲೆ ಸಂಶಯ ವಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಶಾಲೆಯ ಬೀಗ ಮುರಿದು  ಲಕ್ಷ ಮೌಲ್ಯದ ಕಂಪ್ಯೂಟರ್‌ಗಳ ಕಳವು:
 
     ಸರ್ಕಾರಿ ಶಾಲಾ ಕಟ್ಟಡದ ಬೀವನ್ನು ಮುರಿದು ಸುಮಾರು 1,10,000/- ರೂಲ ಬೆಲೆಬಾಳುವ 11 ಗಣಕ ಯಂತ್ರಗಳನ್ನು ಕಳ್ಳತನ ಮಾಡಿದ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಹಂಡ್ಲಿ ಪ್ರೌಢಶಾಲೆಯಲ್ಲಿ ನಡೆದಿದೆ.  ದಿನಾಂಕ  21-6-2014 ರಿಂದ 23-6-2014ರ ನಡುವೆ  ಹಂಡ್ಲಿ  ಸರಕಾರಿ ಪ್ರೌಢಶಾಲೆಯ ಬೀಗ ಮುರಿದು ಒಳಗೆ ಪ್ರವೇಶಿಸಿ ಸುಮಾರು 1,10,000 ರೂ ಬೆಲೆಬಾಳುವ ಕಂಪ್ಯೂಟರ್‌ ಯಂತ್ರಗಳನ್ನು ಯಾರೋ ಕಳ್ಳರು ಕಳವು ಮಾಡಿಡೊಂಡು ಹೋಗಿದ್ದು, ಶಾಲಾ ಮುಖ್ಯ ಶಿಕ್ಷಕರಾದ ಜಿ. ಮದ್ದಾನಪ್ಪನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಬೈಸಿಕಲ್‌ಗೆ ಲಾರಿ ಡಿಕ್ಕಿ ಸವಾರನಿಗೆ ಗಾಯ:
 
      ದಿನಾಂಕ  22-6-2014 ರಂದು ಕುಶಾಲನಗರದ ವಾಸಿ ಮಹಮ್ಮದ್‌ ಎಂಬುವವರ ಮಗ ತೌಫಿಕ್‌ ಎಂಬವರು ಬೈಸಿಕಲ್‌ನಲ್ಲಿ ಕುಶಾಲನಗರದ ಮಾರ್ಕೆಟ್‌ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಟಿಪ್ಪರ್‌ ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿ ಬೈಸಿಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಬೈಸಿಕಲ್‌ ಸವಾರ ತೌಫಿಕ್‌ ಎಂಬವರಿಗೆ ಗಾಯಗಳಾಗಿದ್ದು, ಕುಶಲನಗರ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
 
 

Sunday, June 22, 2014

ಅಕ್ರಮ ಬಾಜಿ, ಇಬ್ಬರ ಬಂಧನ 
     ಅಕ್ರಮವಾಗಿ ಲಾಟರಿಗಳ ಸಂಖ್ಯೆಯ ಮೇಲೆ ಮತ್ತು ವಾಹನಗಳ ಮೇಲೆ ಬಾಜಿ ಕಟ್ಟುವಂತೆ ಸಾರ್ವಜನಿಕರನ್ನು ಪ್ರೇರೇಪಿಸಿ ಹಣ ಪಡೆದುಕೊಳ್ಳುತ್ತಿದ್ದ ಇಬ್ಬರನ್ನು ಪತ್ತೆ ಹಚ್ಚಿ ಬಂಧಿಸಿದ ಪ್ರಕರಣ ಮಡಿಕೇರಿ ಸಮೀಪದ ಚೆಟ್ಟಳ್ಳಿಯಲ್ಲಿ ನಡೆದಿದೆ. ದಿನಾಂಕ 21/06/2014ರಂದು ಚೆಟ್ಟಳ್ಳಿ ನಗರದಲ್ಲಿ ಇಬ್ಬರು ವ್ಯಕ್ತಿಗಳು ಕೇರಳ ರಾಜ್ಯದ ಲಾಟರಿ ನಂಬರಿಗೆ ಹಾಗೂ ರಸ್ತೆಯಲ್ಲಿ ಓಡಾಡುವ ವಾಹನಗಳ ನಂಬರ್ ಪ್ಲೇಟ್‌ನ ಕೊನೆಯ 3 ಸಂಖ್ಯೆಗೆ ಆನ್‌ಲೈನ್ ಮುಲಕ ಬಾಜಿ ಕಟ್ಟಿಕೊಂಡು ಜೂಜಾಟವಾಡುತ್ತಿದ್ದಾರೆ ಎಂದು ಸಿಕ್ಕ ಮಾಹಿತಿಯ ಮೇರೆಗೆ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಕರೀಂ ರಾವ್‌ತರ್‌ರವರು ಸಿಬ್ಬಂದಿಗಳೊಂದಿಗೆ ಚೆಟ್ಟಳ್ಳಿ ನಗರಕ್ಕೆ ಹೋಗಿದ್ದು,  ಚೆಟ್ಟಳ್ಳಿ ನಗರದ ಅಮೃತೇಶ್ವರಿ ಬೇಕರಿಯ ಮುಂದೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತುಕೊಂಡು ಒಬ್ಬಾತ ಸಾರ್ವಜನಿಕರಿಂದ ಹಣವನ್ನು ಬಾಜಿ ಕಟ್ಟಿಸಿಕೊಂಡು, ಮತ್ತೊಬ್ಬ ಕೈಯಲ್ಲಿ ಒಂದು ಚೀಟಿಯನ್ನು ಹಿಡಿದುಕೊಂಡು ಅದರಲ್ಲಿ ನಂಬರ್‌ಗಳನ್ನು ಗುರುತು ಮಾಡಿಕೊಳ್ಳುತ್ತಿದ್ದನು. ಆಗ ವೃತ್ತ ನಿರೀಕ್ಷಕರು ಬಾತ್ಮೀದಾರನ ಕೈಯಲ್ಲಿ ರೂ. 50/- ಹಣ ನೀಡಿ ಬಾಜಿ ಕಟ್ಟುವಂತೆ ಕಳುಹಿಸಿದ್ದು, ಆತನಿಂದ ಹಣ ಪಡೆದುಕೊಂಡು ಕೈಯಲ್ಲಿದ್ದ ಚೀಟಿಗೆ ಸಂಖ್ಯೆಯನ್ನು ಗುರುತು ಹಾಕಿಕೊಂಡರು ನಂತರ  ಕೂಡಲೇ ಸಿಪಿಐ ಮತ್ತು ಸಿಬ್ಬಂದಿಯವರು ಸುತ್ತುವರೆದು ಹಿಡಿದುಕೊಂಡು ವಿಚಾರಿಸಲಾಗಿ ಒಬ್ಬನ ಹೆಸರು ಕೆ.ಡಿ.ವಿಜಯ ಚೆಟ್ಟಳ್ಳಿ ಹಾಗೂ ಮತ್ತೊಬ್ಬ  ಎಂ.ಕೆ. ಇಬ್ರಾಹಿಂ ವಾಸ ಚೆಟ್ಟಳ್ಳಿ ಎಂಬುದಾಗಿ ತಿಳಿದುಬಂದಿದ್ದು, ಅವರು  ಕೇರಳದ ಲಾಟರಿಯ ನಂಬರ್‌ಗಳಿಗೆ ಹಾಗೂ ಇಲ್ಲಿ ಓಡಾಡುವ ವಾಹನಗಳ ಕೊನೆಯ ಮೂರು ನಂಬರ್‌ಗಳಿಗೆ ಹಣವನ್ನು ಬಾಜಿ ಕಟ್ಟಿಸಿಕೊಂಡು ಆನ್‌ಲೈನ್ ಮುಲಕ ಪರಿಶೀಲಿಸಿ ಗೆದ್ದ ನಂಬರ್‌ಗೆ ಹೆಚ್ಚಿಗೆ ಹಣ ಕೊಡುವುದಾಗಿ ತಿಳಿಸಿದ್ದು, ಈ ಬಗ್ಗೆ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿದ ಮೇರೆಗೆ ಆರೋಪಿಗಳನ್ನು ಹಾಗೂ ಅವರ ಬಳಿ ಇದ್ದ ರೂ. 10,750/- ಹಣವನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳು ಹಾಗೂ ಸ್ವತ್ತುಗಳೊಂದಿಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

Saturday, June 21, 2014

    ಅಕ್ರಮ ಗೋವುಗಳ ಸಾಗಾಟ:

     ಅಕ್ರಮವಾಗಿ ಗೋವುಗಳನ್ನು ಮಿನಿ ಲಾರಿಯೊಂದರಲ್ಲಿ ಕೇರಳ ರಾಜ್ಯದ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಹೆಚ್ಚಿದ ಘಟನೆ ಕುಟ್ಟದಲ್ಲಿ ನಡೆದಿದೆ.   ದಿನಾಂಕ 21-06-2014 ರಂದು ಸಮಯ ಬೆಳಿಗ್ಗೆ 05.15 ಗಂಟೆಗೆ ವಿರಾಜಪೇಟೆ ತಾಲ್ಲೂಕು ಬಾಡಗ ಗ್ರಾಮದ ಚೂರಿಕಾಡು ಬಳಿ ಕೇಅರಳ ಮೂಲದ ಮೂರು ಜನ ಆರೋಪಿಗಳು ಟಾಟಾ ಏಸ್ ವಾಹನ ಸಂಖ್ಯೆ ಕೆ.ಎ 12 ಎ-7170 ರಲ್ಲಿ ಅಂದಾಜು ರೂ. 35,000=00 ಬೆಲೆಯ 05 ಜಾನುವಾರುಗಳನ್ನು  ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಕೇರಳ ರಾಜ್ಯದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು   ಕುಟ್ಟ ಠಾಣಾ ಪಿ.ಎಸ್‌.ಐ. ಶ್ರೀ ಕೆ.ಪಿ. ಹರಿಶ್ಷಂದ್ರರವರು ಸಿಬ್ಬಂದಿಯೊಂದಿಗೆ ಪತ್ತೆ ಹಚ್ಚಿ  ವಾಹನ ಹಾಗು ಗೋವುಗಳನ್ನು ಆಋಓಪಿಗಳ ಸಮೇತ ವಶಕ್ಕೆ ತೆಗೆದು ಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಮನೆಗಿ ನುಗ್ಗಿ ಹಣ ಹಾಗು ಆಭರಣ ಕಳವು:
     ಮನೆಯ ಹೆಂಚುಗಳನ್ನು ತೆಗೆದು ಮನೆಗೆ ನುಗ್ಗೆ ಹಣ ಹಾಗು ಆಭರಣ ಕಳ್ಳತನ ಮಾಡಿದ ಘಟನೆ ಕೊಡ್ಲಿಪೇಟೆಯಲ್ಲಿ ನಡೆದಿದೆ.  ದಿನಾಂಕ 20-06-2014 ರಂದು ಅಬ್ದುಲ್‌ ಜಮೀಲ್‌ರವರು  ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಯಾರೋ ಕಳ್ಳರು ಮನೆಯ ಹಂಚು ತೆಗೆದು ಮನೆಯ ಒಳ ನುಗ್ಗಿ ಒಳಗಿದ್ದ  ಮೊಬೈಲ್ ಪೋನ್ ಸಿಮ್ ನಂ 8105332035 ನ್ನು ಮತ್ತು ರೂ 2500/- ರ ಸಿಲ್ವರ್ ಕಾಲು ಚೈನು ಹಾಗೂ ರೂ 2600/- ನಗದನ್ನು ಕಳ್ಳತನವನ್ನು ಮಾಡಿಕೊಂಡು ಹೋಗಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
       

Friday, June 20, 2014

ಲಾರಿಗೆ ಕಾರು ಡಿಕ್ಕಿ ಒಬ್ಬನಿಗೆ ಗಾಯ:
     ಕಾರೊಂದು ಇಚರ್‌ ಲಾರಿಗೆ ಡಿಕ್ಕಿಯಾಗಿ ಒಬ್ಬನಿಗೆ ಗಾಯಗಳಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಂತೂರು ಮೂರ್ನಾಡು ಗ್ರಾಮದಲ್ಲಿ  ನಡೆದಿದೆ. ಈ ದಿನ ದಿನಾಂಕ 20-6-2014 ರಂದು ಬೆಳಿಗ್ಗೆ  ಚಿಕ್ಕಮಗಳೂರು ಜಿಲ್ಲೆಯ ಉಪ್ಪಳ್ಳಿ  ನಿವಾಸಿ  ವಿನೂತನ್‌ ಕಾರ್ಲೋ ಇವರಿಗೆ ಸೇರಿದ ಲಾರಿ ಕೆಎ-18-ಬಿ-4820 ಲಾರಿಯು ಮಡಿಕೇರಿ ಕಡೆಗೆ   ಬರುತ್ತಿರುವಾಗ್ಗೆ  ಸಮಯ ಸುಮಾರು 7-20 ಎ ಎಂ ಗೆ ಮುರ್ನಾಡು ಸಮೀಪದ ಪೆಟ್ರೊಲ್ ಬಂಕ್ ಹತ್ತಿರ ಮಡಿಕೇರಿ ಕಡೆಯಿಂದ ಬಂದ ಕೆಎ-05-ಎಇ-2808 ರ ಇಂಡಿಕಾ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಲಾರಿಯ ಹಿಂಬದಿಯ ಚಕ್ರ, ಟ್ಯಾಂಕ್ ಮತ್ತು ಕಾರು ಜಖಂಗೊಂಡು ಕಾರಿನಲ್ಲಿದ್ದ ರಮೇಶ ಎಂಬುವವರಿಗೆ ಗಾಯಗಳಾಗಿದ್ದು  ಮಡಿಕೇರಿ ಟ್ರಾಫಿಕ್‌ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಮಹಿಳೆಯೊಬ್ಬರ ಬ್ಯಾಗ್‌ನಿಂದ ಹಣ ಕಳವು:
ಮಹಿಳೆಯೊಬ್ಬರು ಬ್ಯಾಂಕಿಗೆ ಕಟ್ಟಲೆಂದು  ಬ್ಯಾಗ್‌ನಲ್ಲಿಟ್ಟಿದ್ದ ಹಣವನ್ನು ಹಿಂಬದಿಯಲ್ಲಿ ನಿಂತಿದ್ದ ಮೂವರು ಅಪರಿಚಿತ ಮಹಿಳೆಯರು ಕಳ್ಳತನ ಮಾಡಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.  ಈ ದಿನ ದಿನಾಂಕ ಶ್ರೀಮತಿ 20-06-2014 ರಂದು ಶ್ರೀಮತಿ ಕೆ.ಜೆ. ಸುಧಾ ಎಂಬ ಮಹಿಳೆ ತನ್ನ ಸಂಬಂಧಿಕರ ಮಗುವಿನ ನಾಮಕರಣಕ್ಕೆ ತನ್ನ ತಂದೆ ಮನೆ ಉಡೋತ್‌ ಮೊಟ್ಟೆಯಿಂದ ಬಸ್ಸಿನಲ್ಲಿ ಮಡಿಕೇರಿಗೆ ಬಂದು ಟೋಲ್ ಗೇಟ್ ಬಳಿ ಬಂದು ತಲುಪಿದಾಗ ಸಮಯ ಸುಮಾರು 10.30 ಗಂಟೆಗೆ ಸದರಿಯವರು  ಬ್ಯಾಂಕಿಗೆ ಕಟ್ಟಲು ಬ್ಯಾಗಿನಲ್ಲಿಟ್ಟುಕೊಂಡಿದ್ದ ರೂ 17000-00 ವನ್ನು ಹಿಂಬದಿ ನಿಂತಿದ್ದ ಮೂವರು ಅಪರಿಚಿತ ಹೆಂಗಸರು ಕಳ್ಳತನ ಮಾಡಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 

Thursday, June 19, 2014

407 ವಾಹನ ಹಾಗೂ ಬೈಕ್ ಡಿಕ್ಕಿ ಓರ್ವನ ಸಾವು
       ಬೈಕ್‌ ಒಂದಕ್ಕೆ ಜೀಪು ಡಿಕ್ಕಿಯಾದ ಪರಿಣಾಮ ಓರ್ವನು ಮೃತಪಟ್ಟು ಇಬ್ಬರಿಗೆ ಗಾಯಗಳಾದ ಘಟನೆ ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 19/06/2014 ರಂದು ಬಬೆಳಿಗ್ಗೆ ಆಲೂರು ಸಿದ್ದಾಪುರ ಗ್ರಾಮದ ನಂಜಪ್ಪ ಎಂಬವರ ತಂಗಿಯ ಮಕ್ಕಳಾದ ಸಚಿನ್‌, ನಿತಿನ್‌ ಮತ್ತು ಸಂಬಂಧಿಯ ಮಗ ವಿಕಾಶ್‌ ರವರು ಸೇರಿ ಸಚಿನ್‌ರವರು ಚಾಲಿಸುತ್ತಿದ್ದ ಕೆಎ-01-ಆರ್‌-4472ರ ಬೈಕ್‌ನಲ್ಲಿ ಬಾಣಾವಾರದ ಕಡೆಯಿಂದ ಬರುತ್ತಿರುವಾಗ ಶನಿವಾರಸಂತೆ ಕಡೆಯಿಂದ ಬಂದ ಕೆಎ-13-ಬಿ-1444ರ 407 ವಾಹನದ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಬಂದು ಮೋಟಾರ್‌ ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಮೂವರಿಗೂ ಗಾಯಗಳಾಗಿದ್ದು , ಚಿಕಿತ್ಸೆ ಬಗ್ಗೆ ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ್ಗೆ ನಂಜಪ್ಪನವರ ತಂಗಿಯ ಮಗ ನಾಣಯ್ಯ @ ನಿತಿನ್‌ರವರು ದಾರಿಯ ಮದ್ಯೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕನ ಮೇಲೆ ಹಲ್ಲೆ 
      ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕನೋರ್ವನ ಮೇಲೆ ಹಲ್ಲೆ ಮಾಡಿದ ಘಟನೆ ಸಿದ್ದಾಪುರ ಬಳಿಯ ಹೊಸೂರು ಬೆಟ್ಟಗೇರಿ ಬಳಿ ನಡೆದಿದೆ. ದಿನಾಂಕ 17/06/2014ರಂದು ಹೊಸೂರು ಬೆಟ್ಟಗೇರಿ ನಿವಾಸಿ ಪೊನ್ನಪ್ಪ ಎಂಬವರಲ್ಲಿ  ಕೆಲಸ ಮಾಡಿಕೊಂಡಿದ್ದ ಕಾರ್ಮಿಕ ಮುತ್ತುಮಣಿ ಯಾನೆ ರಮೇಶ ಎಂಬವರು ಕೆಲಸಕ್ಕೆ ಹೋಗದೆ ತನ್ನ ಮಗನನ್ನು ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿ ಬಂದು ಮನೆಯಲ್ಲಿರುವಾಗ ಕೆಲಸಕ್ಕೆ ಬಾರದ ಕಾರಣಕ್ಕೆ ಪೊನ್ನಪ್ಪನವರು ಮುತ್ತುಮಣಿಯನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಾಗಿಲು ಮುರಿದು ಹಣ, ಆಭರಣ ಕಳವು 
    ಮನೆಯ ಬಾಗಿಲು ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಅಪಾರ ಹಣ ಹಾಗೂ ಚಿನ್ನಾಬರಣಗಳನ್ನು ಕಳವು ಮಾಡಿದ ಘಟನೆ ನಾಪೋಕ್ಲು ಸಮೀಪದ ಹಳೆ ತಾಲೂಕಿನಲ್ಲಿ ನಡೆದಿದೆ. ಹಳೆ ತಾಲೂಕು ನಿವಾಸಿ ಬಿ.ಎಸ್.ಬಾಳಪ್ಪ ಎಂಬವರು ದಿನಾಂಕ 17/06/2014ರಂದು ಬೆಂಗಳೂರಿಗೆ ತಮ್ಮ ಹೆಂಡತಿ ಮಕ್ಕಳಬಳಿಗೆ ಹೋಗಿದ್ದು ನಂತರ ವಾಪಾಸು ದಿ.18/06/2014ರಂದು ಬಂದು ನೋಡುವಾಗ್ಗೆ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳ ಪ್ರವೇಶಿಸಿ 30,000 /- ರೂ ನಗದು ಹಾಗೂ ರೂ.15,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

Wednesday, June 18, 2014

ಮಾರುತಿ ಓಮ್ನಿ ಕಳವು:

 
      ದಿನಾಂಕ 17-6-2014 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಮಡಿಕೇರಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ತೆಯ ಆವರಣದಲ್ಲಿ  ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದ ನಿವಾಸಿ ರಾಘವೇಂದ್ರ ಎಂಬುವವರು ತಮ್ಮ ಬಾಪ್ತು ಮಾರು ಓಮ್ನಿಯನ್ನು ನಿಲ್ಲಿಸಿದ್ದು ಮಾರನೆ ದಿನ ಬೆಳ್ಳಿಗ್ಗೆ 4-00 ಗಂಟೆಯ ಸಮಯದಲ್ಲಿ ನೋಡುವಾಗ್ಗೆ ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 
ಮೋಟಾರ್‌ ಸೈಕಲ್‌ ಕಳವು:
 
ಮಡಿಕೇರಿ ನಿವಾಸಿ ಎಂ.ಎಂ. ಜಕ್ರಿಯಾ ಎಂಬುವವರು ತಮ್ಮ ಬಾಪ್ತು ಯಮಹಾ ಮೋಟಾರ್‌ ಸೈಕಲನ್ನು ದಿನಾಂಕ 17-6-2014 ರಂದು ಅಪರಾಹ್ನ 3-00 ಗಂಟೆಗೆ ಮಡಿಕೇರಿ ನಗರದ ಕಾರ್ಪೋರೇಷನ್‌ ಬ್ಯಾಂಕ್‌ ಮುಂದುಗಡೆ ನಿಲ್ಲಿಸಿ  ಸ್ಪೇರ್‌ ಪಾಟ್ಸ್‌ ಅಂಗಡಿಗೆ ಹೋಗಿ ಬರುವಷ್ಟರಲ್ಲಿ  ಸದರಿ ಮೋಟಾರ್‌ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡುಹೋಗಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 
ಶೂ ಅಂಗಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನ:
 
ದಿನಾಂಕ 17-6-2014 ರಂದು ರಾತ್ರಿ ಮಡಿಕೇರಿ ನಗರದ ನಗರದ ಖಾಸಗಿ ಬಸ್ಸು ನಿಲ್ಲಾಣದ ಹತ್ತಿರ ವಿರುವ ಶಮಾ ಶೂ ಅಂಗಡಿಯ ಹಿಂಬದಿಯ ಶಟರ್ಸ್‌ ತೆರೆದು ಒಳನುಗ್ಗಿದ ಕಳ್ಳರು ಕಳವು ಮಾಡಲು ಪ್ರಯತ್ನಿಸಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
 
 
 
 

Tuesday, June 17, 2014

ಪತ್ನಿಯ ಮೇಲೆ ಪತಿಯ ದೌರ್ಜನ್ಯ-ಪ್ರಕರಣ ದಾಖಲು:

     ಪತಿ ಪತ್ನಿಗೆ ಮಾನಸಿಕ ಹಾಗು ದೈಹಿಕ ಹಿಂಸೆಯನ್ನು ನೀಡುತ್ತಿದ್ದು  ಕತ್ತಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಮೂದ್ರವಳ್ಳಿ ಗ್ರಾಮದಲ್ಲಿ ನಡೆದಿದೆ. ಶನಿವಾರಸಂತೆ ಠಾಣಾ ವ್ಯಾಪ್ತಿಯ ಮೂದ್ರವಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಪವಿತ್ರ ಎಂಬುವವರು ದಿನಾಂಕ: 16-05-2014 ರಂದು ಮನೆಯಲ್ಲಿರುವಾಗ್ಗೆ ಸಮಯ ಸುಮಾರು 3:30 ಗಂಟೆಗೆ ಆಕೆಯ ಗಂಡ ದರ್ಶನ್‌ ಹಾಗು ಸಂತೋಷ ಎಂಬುವವರು ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಜಗಳ ಮಾಡಿದ್ದು  ಅದೇ ಸಮಯಕ್ಕೆ ಅವರ ಮನೆಯವರಾದ  ಕಾಳಿಯಪ್ಪ ಹಾಗು ಸುಮಿತ್ರ ಸಹ ಅಲ್ಲಿಗೆ ಬಂದು  ಪವಿತ್ರರವರನ್ನು ಬೈದಿದ್ದು ಅಲ್ಲದೆ   ಆಕೆಯ ಗಂಡ ದರ್ಶನ್‌ ಕತ್ತಿಯಿಂದ ಕುತ್ತಿಗೆ, ಎಡಗೈ ಹಾಗೂ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿದ್ದು ಕೈಯಿಂದ ಸಹ ಹಲ್ಲೆ ನಡೆಸಿ  ನೋವುಪಡಿಸಿರುತ್ತಾರೆ  ಹಾಗೂ ಈ ಹಿಂದೆಯೂ ಕೂಡ  ಈ ಮೇಲಿನ 4 ಜನರು ಸೇರಿಕೊಂಡು ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆಂದು ಶನಿವಾರಸಂತೆ ಪೊಲೀಸರಿಗೆ ದೂರನ್ನು ನೀಡಿದ್ದು  ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.
 

Monday, June 16, 2014

ಅಕ್ರಮ ಪ್ರವೇಶ, ಕೊಲೆ ಬೆದರಿಕೆ 
              ಖಾಸಗಿ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಹಾನಿಯುಂಟುಮಾಡಿರುವುದಲ್ಲದೆ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣ ಮಡಿಕೇರಿ ಸಮೀಪದ ಕೆ.ನಿಡುಗಣೆ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಕರವಾಲೆ ಬಾಡಗ ಗ್ರಾಮದಲ್ಲಿ ಅಂದಾಜು 5.80 ಏಕ್ರೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗವನ್ನು ಈ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಗೇಣಿ ಆಧಾರದಲ್ಲಿ ಮರ್ಕೆರಾ ಡೌನ್ಸ್ ಗಾಲ್ಪ್ ಕ್ಲಬ್‌ಗೆ ಹಸ್ತಾತರಿಸಿದ್ದು ಸದರಿ ಜಮೀನಿನ ಆರ್‌ಟಿಸಿಯು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಮರ್ಕೆರ ಡೌನ್ಸ್ ಗಾಲ್ಪ್ ಕ್ಲಬ್‌ನ ಜಂಟಿ ಹೆಸರಿನಲ್ಲಿ ಇದ್ದು ಮರ್ಕರಾ ಡೌನ್ಸ್ ಗಾಲ್ಫ್ ಕ್ಲಬ್ ವತಿಯಿಂದ ಈ ಜಮೀನಿನಲ್ಲಿ ಹಲವು ಕೋಟಿ ರೂಗಳನ್ನು ಖರ್ಚುಮಾಡಿ ಗಾಲ್ಪ್ ಕ್ರೀಡಾಂಗಣವನ್ನು ನಿರ್ಮಿಸಿ ಉಪಯೋಗಿಸಲಾಗುತ್ತಿದ್ದು, ದಿನಾಂಕ 15-06-2014 ರಂದು ಹೇಮಾವತಿ ಮತ್ತು ಯಾಲದಾಳು ಬಿನ್ಸಿ ಎಂಬುವವರು ಇತರೆ 2 ಜನರನ್ನು ಸೇರಿಸಿಕೊಂಡು ಮೇಲ್ಕಂಡ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ತಂತಿ ಬೇಲಿಯನ್ನು ಹಾಕಲು ಪ್ರಾರಂಬಿಸಿದ್ದು ಕೇಳಲು ಹೋದ ಕ್ಲಬ್‌ನ ವ್ಯವಸ್ಥಾಪಕ ಚಂಗಪ್ಪ ಹಾಗೂ ಸಿಬ್ಬಂದಿಯವರಾದ ಹರೀಶ, ಅಪ್ಪಣ್ಣ ಮತ್ತು ಎಂ ಎ ಪೂಣಚ್ಚರವರಿಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ಮೈದಾನದ ಮದ್ಯೆ ಉದ್ದಕ್ಕೂ ಗುಂಡಿಗಳನ್ನು ಮಾಡಿ ಸುಮಾರು 25,000 ರೂ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


 

Sunday, June 15, 2014

ಕಾಳು ಮೆಣಸು ಕಳವು, ಪ್ರಕರಣ ದಾಖಲು 
      ಗೋಡಾನಿನ ಬಾಗಿಲು ಮುರಿದು ಕಾಳು ಮೆಣಸು ಕಳವು ಮಾಡಿದ ಘಟನೆ ಕುಟ್ಟ ಬಳಿಯ ಬಾಡಗ ಗ್ರಾಮದಲ್ಲಿ ನಡೆದಿದೆ. ಬಾಡಗ ಗ್ರಾಮದ ಚೂರಿಕಾಡು ನಿವಾಸಿ ಟಿ.ಎಂ.ತಿಮ್ಮಯ್ಯ್ ಎಂಬವರ ಗೋಡಾನಿಗೆ ಹಾಕಿದ್ದ ಬೀಗವನ್ನು ಮೀಟಿ ತೆರೆದು ಯಾರೋ ಕಳ್ಳರು ಒಳ ಪ್ರವೇಶಿಸಿ ಸುಮಾರು 16,500/- ರೂ ಬೆಲೆಯ 25 ಕೆ.ಜಿ.ಯಷ್ಟು ಕಾಳು ಮೆಣಸನ್ನು ಕಳವು ಮಾಡಿರುವುದಾಗಿ ತಿಮ್ಮಯ್ಯ್ನವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 


Saturday, June 14, 2014

ಪಾದಚಾರಿಗೆ ಬೈಕ್ ಡಿಕ್ಕಿ, ಗಾಯ 
            ಪಾದಚಾರಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಗಾಯಗಳಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 13/06/2014ರ ಸಂಜೆ ವೇಳೆ ಕಾಟಕೇರಿ ನಿವಾಸಿ ಎಂ.ಬಿ.ಲೋಕೇಶ್ ಎಂಬವರ ತಂದೆ ಭೀಮಯ್ಯ ಎಂಬವರು ಎಂದಿನಂತೆ ಮಡಿಕೇರಿಯಲ್ಲಿ ತರಕಾರಿ ವ್ಯಾಪಾರ ಮುಗಿಸಿಕೊಂಡು ನಗರದ ಕೆ.ಎಸ್‌.ಆರ್‌.ಟಿ.ಸಿ. ಬಸ್ ನಿಲ್ದಾಣದ ಬಳಿ ಇರುವ ಸಿಟಿ ಸ್ಟೈಲ್ ಬಟ್ಟೆ ಅಂಗಡಿಯ ಮುಂಭಾಗದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಗರದ ಶಕ್ತಿ ಪ್ರೆಸ್ ಕಡೆಯಿಂದ ಒಂದು ಕೆಎ-12-ಎಲ್-3857ರ ಮೋಟಾರು ಸೈಕಲನ್ನು ಅದರ ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭೀಮಯ್ಯನವರಿಗೆ ಡಿಕ್ಕಿಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರದ ಕೊಂಬೆ ಬಿದ್ದು ವ್ಯಕ್ತಿಯ ಸಾವು. 
             ತೋಟದಲ್ಲಿ ಮರದ ಕೊಂಬೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮಡಿಕೇರಿ ಸಮೀಪದ ಮುತ್ತಾರ್ಮುಡಿ ಗ್ರಾಮದಲ್ಲಿ ನಡೆದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಸತ್ಯವೇಲು ಎಂಬವರು ಸುಮಾರು 10 ದಿವಸಗಳಿಂದ ಮುತ್ತಾರ್‌ಮುಡಿ ಗ್ರಾಮದ ಪಿ.ಪಿ.ಕಾರ್ಯಪ್ಪರವರ ತೋಟದಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದು ಅವರೊಂದಿಗೆ  ಚಿಕ್ಕಪ್ಪ ಬಾಲ ಸುಬ್ರಮಣ್ಯಂ, ಸೆಂದಿಲ್‌, ಮಗೇಂದ್ರ ಹಾಗು ಅಳಗೇಶ್‌‌ರವರುಗಳು ಕೆಲಸಕ್ಕೆ ಬಂದಿದ್ದು  ದಿನಾಂಕ 13-06-2014 ರಂದು  ಕಾರ್ಯಪ್ಪರವರು ಪಕ್ಕದ ತೋಟದ ಮಾಲಿಕರಾದ ಟ್ಯಾಗ್‌ರವರ ತೋಟಕ್ಕೆ ಮರ ಕಡಿಯಲು ಕರೆದುಕೊಂಡು ಹೋಗಿದ್ದು ಬಾಲ ಸುಬ್ರಮಣ್ಯಂ, ಸೆಂದಿಲ್‌, ಹಾಗು ವೆಂಕಟೇಶ್‌‌ರವರೊಂದಿಗೆ ಮರವನ್ನು ಕಡಿಯುತ್ತಿರುವಾಗ್ಗೆ  ಮರ ಬೀಳುವ ಸಮಯದಲ್ಲಿ ಎಲ್ಲರೂ ಓಡಿ ಹೋಗಿದ್ದು ಬಾಲಸುಬ್ರಮಣ್ಯಂರವರು ವಯಸ್ಸಾದ್ದರಿಂದ ಓಡಿ ಬರುವಷ್ಟರಲ್ಲಿ ಮರದ ಕೊಂಬೆಯು ಅವರ ತಲೆಗೆ ಹಾಗು ಎಡ ಮೊಣಕೈಗೆ ಬಡಿದು ಕೆಳಗೆ ಬಿದ್ದು ನಂತರ ಗಾಯಗೊಂಡವರನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಪರಿಶೀಲಿಸಿದ ವೈದ್ಯರು ಚಿಕ್ಕಪ್ಪರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ


Friday, June 13, 2014

ಅಪ್ರಾಪ್ತ ಹುಡುಗರು ಕಾಣೆ ಪ್ರಕರಣ ದಾಖಲು:

      ಶಾಲೆಗೆ ಹೋದ ಬಾಲಕರು ಮರಳಿ ಮನೆಗೆ ಬಾರದೆ ಕಾಣೆಯಾದ ಘಟನೆ ಸೋಮವಾರಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕನ್ನಳ್ಳಿ ಕಟ್ಟೆ ಗ್ರಾಮದಲ್ಲಿ ನಡೆದಿದೆ.  ಸೋಮವಾರಪೇಟೆ ತಾಲೋಕು ಕಲ್ಕಂದೂರು ಗ್ರಾಮದ ನಿವಾಸಿ ಶ್ರೀಮತಿ ಈಶ್ವರಿ ಎಂಬುವವರ ಮಗ ಸೂರ್ಯ(14) ಹಾಗು  ತಲ್ತಾರೆ ಶೆಟ್ಟಳ್ಳಿ ಗ್ರಾಮದ  ನಾಗರಾಜು ಎಂಬುವವರ ಮಗ ಭುವನ್‌ (16)  ಎಂಬವರು  ಸಮವಸ್ತ್ರ ಧರಿಸಿ ಕನ್ನಳ್ಳಿ ಕಟ್ಟೆಯ ಶಾಲೆಗೆ  ಹೋಗುತ್ತೇವೆ ಎಂದು ಮನೆಯಿಂದ  ಹೋದವರು  ಸಂಜೆ  ವಾಪಾಸ್ಸು ಮನೆಗೆ  ಬಾರದೆ ಕಾಣೆಯಾಗಿದ್ದು, ಸೋಮವಾರಪೇಟೆ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಅಕ್ರಮ ಜಾನುವಾರುಗಳ ಸಾಗಾಟ ಆರೋಪಿಗಳ ಬಂಧನ:
    ದಿನಾಂಕ 12-06-2014 ರಂದು ಸಮಯ ಬೆಳಿಗ್ಗೆ 05.15 ಗಂಟೆಗೆ ವಿರಾಜಪೇಟೆ ತಾಲ್ಲೂಕು ಬಾಡಗ ಗ್ರಾಮದ ಬೊಳ್ಳೇರಗೇಟ್‌ ಬಳಿ ಆರೋಪಿಗಳು ಪಿಕ್ ಅಪ್ ವಾಹನ ಸಂಖ್ಯೆ ಕೆ.ಎಲ್-10 ವಿ-2363 ರಲ್ಲಿ ಎಲ್ಲಿಂದಲೋ 05 ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಮೇವು ಹಾಗೂ ನೀರನ್ನು ಸರಿಯಾಗಿ ನೀಡದೆ, ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಕೇರಳ ರಾಜ್ಯದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಕುಟ್ಟ ಪೊಲೀಸ್‌ ಠಾಣಾ ಉಪ ನಿರೀಕ್ಷಕರಾದ ಕೆ.ಪಿ. ಹರಿಶ್ಚಂದ್ರ ಹಾಗೂ ಸಿಬ್ಬಂದಿಯವರು ಪತ್ತೆ ಹಚ್ಚಿ ಆರೋಪಿಗಳಾದ ಕೇರಳ ರಾಜ್ಯದ ಮಾನಂದವಾಡಿ ನಿವಾಸಿಗಳಾದ ಮುನೀರ್‌ ಹಾಗು ಹ್ಯಾರೀಸ್‌ರವರುಗಳನ್ನು ಬಂಧಿಸಿ ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕೈಗೊಂಡಿರುತ್ತಾರೆ.