Thursday, June 12, 2014

ಮೋಟಾರ್‌ ಸೈಕಲ್‌ ಕಳವು:

      ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ತಾಳತ್‌ಮನೆ- ಕಾಟಕೇರಿ ಗ್ರಾಮದ ನಿವಾಸಿ ಬಿ. ವಸಂತಕುಮಾರ್‌ ಎಂಬುವವರು ತಮ್ಮ ಬಾಪ್ತು  ಪಲ್ಸರ್‌ ಬೈಕನ್ನು (ನೋಂದಣಿ ಸಂಖ್ಯೆ ಕೆಎ-02-ಇಯು-4463 )  ದಿನಾಂಕ 10-06-2014 ರಂದು ರಾತ್ರಿ 9-30 ಗಂಟೆಗೆ ತಾಳತ್‌‌ಮನೆಯ ನೇತಾಜಿ ಯುವಕ ಸಂಘದ ಮುಂಭಾಗ ನಿಲ್ಲಿಸಿ ಹ್ಯಾಂಡ್‌ ಲಾಕ್‌ ಮಾಡಿ  ಹೋಗಿದ್ದು  ಸದರಿ ಬೈಕನ್ನು   ಯಾರೋ ಕಳ್ಳರು ಕಳವು ಮಾಡಿದ್ದು  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
80 ವರ್ಷದ ವೃದ್ದೆಗೆ ಅಪರಿಚಿತ ವಾಹನ ದಿಕ್ಕಿ:
       ಪೊನ್ನಂಪೇಟೆ ಠಾಣಾ ಸರಹದ್ದಿನ ಹಳ್ಳಿಗಟ್ಟು ಗ್ರಾಮದ ನಿವಾಸಿ ಶ್ರೀಮತಿ ಸೀತೆ (80) ಎಂಬುವವರು  ದಿನಾಂಕ 8-6-2014 ರಂದು ರಾತ್ರಿ 9-30 ಗಂಟೆಗೆ ಪೊನ್ನಂಪೇಟೆ ಮುತ್ತಮ್ಮ ಕಲ್ಯಾಣಮಂಟಪ ಬಳಿ ನಡೆದುಕೊಂಡು ಹೋಗುತ್ತಿರುವ ವೇಳೆ ಗೋಣಿಕೊಪ್ಪ ಕಡೆಯಿಂದ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಶ್ರೀಮತಿ ಸೀತೆಯವರು ಗಾಯಗೊಂಡು ರಸ್ತೆಯ ಬದಿಯ ಚರಂಡಿಯಲ್ಲಿ ಬಿದ್ದು ಪ್ರಜ್ಞಾಹೀನರಾಗಿ ಮಾರನೇ ದಿನ ದಿನಾಂಕ 9-6-2014 ರಂದು ಸದರಿಯವರನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಪೊನ್ನಂಪೇಟೆ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ, 
ಒಂದುವರೆ ಲಕ್ಷದ ಕರಿಮೆಣಸು ಕಳವು:
     ಮನೆಯ ಸ್ಟೋರ್‌ ರೂಂನಲ್ಲಿ ಶೇಖರಿಸಿಟ್ಟಿದ್ದ  ಕರಿಮೆಣಸನ್ನು ಕಳ್ಳರು ಕಳವು ಮಾಡಿದ ಘಟನೆ ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಸಿದ್ದಾಪುರ ಠಾಣಾ ಸರಹದ್ದಿನ ಕರಡಿಗೋಡು ಗ್ರಾಮದ ನಿವಾಸಿ ಶ್ರೀಮತಿ ಪುಷ್ಪಾವತಿ ಎಂಬುವವರ ಬಾಪ್ತು ವಾಸದ ಮನೆಯ ಸ್ಟೋರ್‌ ರೂಮ್‌ಗೆ ನುಗ್ಗಿ  ಅಲ್ಲಿ  ಇಟ್ಟಿದ್ದ ಸುಮಾರು 1,50,000 ರೂ ಬೆಲೆಬಾಳುವ 250 ಕೆ.ಜಿ. ಕರಿಮೆಣಸನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು,  ಈ ಸಂಬಂಧ ಶ್ರೀಮತಿ ಪುಷ್ಪಾವತಿ ಯವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ವಿನಾಕಾರನ ವ್ಯಕ್ತಿಯ ಮೇಲೆ ಹಲ್ಲೆ:
ಸಿದ್ದಾಪುರ ಠಾಣಾ ವ್ಯಾಪ್ತಿಯ ಪುಲಿಯೇರಿ ಗ್ರಾಮದ ನಿವಾಸಿ ಪಿ.ಎಂ. ಶಫೀಕ್‌ ಎಂಬುವವರು ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿರುವಾಗ ಅದೇ ಗ್ರಾಮದ ನೌಷದ್‌ ಎಂಬ ವ್ಯಕ್ತಿ ಅಲ್ಲಿಗೆ ಬಂದು ವಿನಾ ಕಾರಣ ಜಗಳ ಮಾಡಿ  ಪಿ.ಎಂ. ಶಫಿಕ್‌ಯವರಿಗೆ ಹಾಗು ಅವರ ತಂದೆಯವರ ಮೇಲೆ ಹಲ್ಲೆ ನಡೆಸಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಕಾರು ಅವಘಡ ಮೂವರಿಗೆ ಗಾಯ:
       ದಿನಾಂಕ 11-6-2014 ರಂದು ಮಡಿಕೇರಿ ನಗರದ ನಿವಾಸಿ ಶ್ರೀಮತಿ ಮೇರಿ ಮೇರಿವಿನ್ಸೆಂಟ್‌ರವರು ತಮ್ಮ ಕುಟುಂಬದವರೊಂದಿಗೆ  ಸಿದ್ದಾಪುರದಿಂದ ಮಡಿಕೇರಿ ಕಡೆಗೆ ಕಾರಿನಲ್ಲಿ  ಪ್ರಯಾಣಿಸುತ್ತಿದ್ದ ವೇಳೆ ಕಾರಿನ ಚಾಲಕ ಮ್ಯಾನ್ಯುವೆಲ್‌ ಬಾಬು ಎಂಬುವವರು ಕಾರನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆಬದಿಯ ಗುಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಶ್ರೀಮತಿ ಮೇರಿ ವಿನ್ಸೆಂಟ್‌ ಸೇರಿ ಇಬ್ಬರಿಗೆ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.