Friday, June 13, 2014

ಅಪ್ರಾಪ್ತ ಹುಡುಗರು ಕಾಣೆ ಪ್ರಕರಣ ದಾಖಲು:

      ಶಾಲೆಗೆ ಹೋದ ಬಾಲಕರು ಮರಳಿ ಮನೆಗೆ ಬಾರದೆ ಕಾಣೆಯಾದ ಘಟನೆ ಸೋಮವಾರಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕನ್ನಳ್ಳಿ ಕಟ್ಟೆ ಗ್ರಾಮದಲ್ಲಿ ನಡೆದಿದೆ.  ಸೋಮವಾರಪೇಟೆ ತಾಲೋಕು ಕಲ್ಕಂದೂರು ಗ್ರಾಮದ ನಿವಾಸಿ ಶ್ರೀಮತಿ ಈಶ್ವರಿ ಎಂಬುವವರ ಮಗ ಸೂರ್ಯ(14) ಹಾಗು  ತಲ್ತಾರೆ ಶೆಟ್ಟಳ್ಳಿ ಗ್ರಾಮದ  ನಾಗರಾಜು ಎಂಬುವವರ ಮಗ ಭುವನ್‌ (16)  ಎಂಬವರು  ಸಮವಸ್ತ್ರ ಧರಿಸಿ ಕನ್ನಳ್ಳಿ ಕಟ್ಟೆಯ ಶಾಲೆಗೆ  ಹೋಗುತ್ತೇವೆ ಎಂದು ಮನೆಯಿಂದ  ಹೋದವರು  ಸಂಜೆ  ವಾಪಾಸ್ಸು ಮನೆಗೆ  ಬಾರದೆ ಕಾಣೆಯಾಗಿದ್ದು, ಸೋಮವಾರಪೇಟೆ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಅಕ್ರಮ ಜಾನುವಾರುಗಳ ಸಾಗಾಟ ಆರೋಪಿಗಳ ಬಂಧನ:
    ದಿನಾಂಕ 12-06-2014 ರಂದು ಸಮಯ ಬೆಳಿಗ್ಗೆ 05.15 ಗಂಟೆಗೆ ವಿರಾಜಪೇಟೆ ತಾಲ್ಲೂಕು ಬಾಡಗ ಗ್ರಾಮದ ಬೊಳ್ಳೇರಗೇಟ್‌ ಬಳಿ ಆರೋಪಿಗಳು ಪಿಕ್ ಅಪ್ ವಾಹನ ಸಂಖ್ಯೆ ಕೆ.ಎಲ್-10 ವಿ-2363 ರಲ್ಲಿ ಎಲ್ಲಿಂದಲೋ 05 ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಮೇವು ಹಾಗೂ ನೀರನ್ನು ಸರಿಯಾಗಿ ನೀಡದೆ, ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಕೇರಳ ರಾಜ್ಯದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಕುಟ್ಟ ಪೊಲೀಸ್‌ ಠಾಣಾ ಉಪ ನಿರೀಕ್ಷಕರಾದ ಕೆ.ಪಿ. ಹರಿಶ್ಚಂದ್ರ ಹಾಗೂ ಸಿಬ್ಬಂದಿಯವರು ಪತ್ತೆ ಹಚ್ಚಿ ಆರೋಪಿಗಳಾದ ಕೇರಳ ರಾಜ್ಯದ ಮಾನಂದವಾಡಿ ನಿವಾಸಿಗಳಾದ ಮುನೀರ್‌ ಹಾಗು ಹ್ಯಾರೀಸ್‌ರವರುಗಳನ್ನು ಬಂಧಿಸಿ ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕೈಗೊಂಡಿರುತ್ತಾರೆ.