Sunday, August 31, 2014

ಸರಣಿ ಕಾರು ಅಫಘಾತ, ಹಾನಿ 
      ಸರಣಿ ಕಾರು ಅಫಘಾತವೊಂದರಲ್ಲಿ ಕಾರುಗಳಿಗೆ ಹಾಗೂ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ನಡೆದಿದೆ. ದಿನಾಂಕ 30/08/2014ರಂದು ಮೈಸೂರು ನಿವಾಸಿ ಅಶೋಕ ಎಂಬವರು ಅವರ  ಕೆಎ-09-ಬಿ-5367 ರ ಇಂಡಿಕಾ ಕಾರಿನಲ್ಲಿ  ಬಾಡಿಗೆಗೆ ಮೈಸೂರಿನಿಂದ ಸುಬ್ರಮಣ್ಯಕ್ಕೆ ಬಾಡಿಗೆಗೆ ಹೋಗಿ ನಂತರ ವಾಪಾಸ್ಸು 4 ಜನ ಪ್ರಯಾಣಿಕರೊಂದಿಗೆ ಬರುತ್ತಿರುವಾಗ್ಗೆ ಸಂಪಾಜೆಯ ಬಳಿಯ  ತಿರುವು ರಸ್ತೆಯಲ್ಲಿ ಮಡಿಕೇರಿ ಕಡೆಯಿಂದ ಕೆಎ-19-ಡಿ-2266 ರ ಮಾರುತಿ ಸ್ವಿಪ್ಟ್ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಶೋಕರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿ, ನಂತರ ಅವರ ಹಿಂದೆ ಬರುತ್ತಿದ್ದ ಕೃಷ್ಣಪ್ರಸಾದ್‌ ಎಂಬವರ ಕೆಎ-09-ಎಂಎ-9292 ರ ನ್ಯಾನೋ ಕಾರಿಗೆ ಮತ್ತು ನಿಖಿಲ್‌ ಎಂಬವರ ಎಂಪಿ-09-ಸಿ.ಹೆಚ್-9524 ರ ಫಿಗೋ ಕಾರಿಗೆ ಡಿಕ್ಕಿಪಡಿಸಿ ಜಖಂ ಪಡಿಸಿದ ಪರಿಣಾಮ ನಾಲ್ಕೂ ಕಾರುಗಳಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ಸಿಗೆ ಕಾರು ಅಫಘಾತ ಪ್ರಕರಣ 
ಬಸ್ಸಿಗೆ ಕಾರೊಂದು ಡಿಕ್ಕಿಯಾದ ಘಟನೆ ವಿರಾಜಪೇಟೆ ಬಳೀಯ ಅರಮೇರಿ  ನಡೆದಿದೆ. ದಿನಾಂಕ: 30-08-14ರಂದು ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ನಟರಾಜ ಎಂಬವರು ಅವರು ಚಾಲಿಸುತ್ತಿದ್ದ ಕೆಎ.10.ಎಫ್.0178ರ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಭಾಗಮಂಡಲಕ್ಕೆ ಹೋಗುವ ಸಲುವಾಗಿ ಕಡಂಗ ಮಾರ್ಗವಾಗಿ ಹೋಗುತ್ತಿರುವಾಗ್ಗೆ, ಕಡಂಗ ಮಾರ್ಗದ 4ನೇ ಮೈಲ್ ಚೌಕಿ ಬಳಿ ಎದುರುನಿಂದ ಕೆಎ.53.ಎನ್. 8574ರ ಮಾರುತಿ ಆಲ್ಟೋ ಕಾರನ್ನು ಅದರ ಚಾಲಕ ಇಬ್ರಾನ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸ್ ಮತ್ತು ಕಾರು ಜಖಂಗೊಂಡು ಕಾರಿನಲ್ಲಿದ್ದ ಎರಡು ಜನರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, August 30, 2014

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:

     ಅಪರಿಚಿತ ವ್ಯಕ್ತಿಯೋರ್ವರ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ ಗ್ರಾಮದಿಂದ ವರದಿಯಾಗಿದೆ. ದಿನಾಂಕ 28-08-14ರಂದು ಸಮಯ ಸುಮಾರು ಮದ್ಯಾಹ್ನ 12-00 ಗಂಟೆಗೆ ವಿರಾಜಪೇಟೆ ತಾಲೋಕು,ಮುಕ್ಕಾಟ್ಟಿಕೊಪ್ಪ, ಅಮ್ಮತ್ತಿ ಗ್ರಾಮದ ನಿವಾಸಿ ಎಂ.ಎಂ. ಸಂತೋಷ್ ಎಂಬವರ ಬಾಪ್ತು ಮುಕ್ಕಾಟ್ಟಿ ಕೊಪ್ಪದಲ್ಲಿರುವ ತೋಟದಲ್ಲಿ ಆಳುಗಳು ಒಳ್ಳೆಮೆಣಸು ಬಳ್ಳಿಗೆ ಔಷಧಿ ಸ್ಪ್ರೇ ಮಾಡುತ್ತಿರುವಾಗ ಪಾನುವಾಳ ಮರದ ಪಕ್ಕದಲ್ಲಿ ಮನುಷ್ಯನ ಕೈ, ಕಾಲು , ಮೂಳೆ, ತಲೆ ಬುರುಡೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಯಾರೋ ಅಪರಿಚಿತ ವ್ಯಕ್ತಿ ಸದರಿ ತೋಟಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ:

     ಶ್ರೀಮಂಗಲ ಠಾಣಾ ವ್ಯಾಪ್ತಿಯ ಬಿರುನಾಣಿ ಗ್ರಾಮದಲ್ಲಿ ವಾಸವಾಗಿದ್ದ ಜೇನುಕುರುಬರ ಗೋಪಾಲ (50) ಎಂಬವರಿಗೆ ಮದ್ಯ ಕುಡಿಯುವ ಚಟವಿಟ್ಟು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29-8-2014 ರಂದು ತಾನು ವಾಸವಾಗಿರುವ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

ಆಸ್ತಿ ವಿಚಾರದಲ್ಲಿ ಜಗಳ, ಮಾರಕಾಸ್ತ್ರದಿಂದ ಹಲ್ಲೆ:

     ದಿನಾಂಕ 29-08-2014ರಂದು ಸಮಯ 11:30 ಗಂಟೆಗೆ ಸೋಮವಾರಪೇಟೆ ತಾಲೋಕು ಸೂರ್ಲಬ್ಬಿ ಗ್ರಾಮದ ನಿವಾಸಿ ಈಶ್ವರ ಎಂಬವರು ತಮ್ಮ ತೋಟದಲ್ಲಿ ಕಾಫಿ ಗಿಡ ನೆಡುತ್ತಿರುವಾಗ ಜಾಗದ ವಿಚಾರದಲ್ಲಿ ಅದೇ ಗ್ರಾಮದ ನಿವಾಸಿಗಳಾದ ದೇವಯ್ಯ ಮತ್ತು ಸುಬ್ಬಯ್ಯ ಎಂಬವರು ಅಲ್ಲಿಗೆ ಬಂದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಬೈದು ಕತ್ತಿ ಮತ್ತು ಹಾರೆಯಿಂದ ಹಲ್ಲೆ ನಡೆಸಿ ಬೆನ್ನಿನ ಬಲಭುಜದ ಭಾಗಕ್ಕೆ ಹಾಗು ಹಾರೆಯಿಂದ ತಲೆ ಹಾಗು ಕೈ ಶರೀರದ ಭಾಗಕ್ಕೆ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕದ್ದು, ಈಶ್ವರ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Friday, August 29, 2014

ಅಂಗಡಿಗೆ ಬಂದ ಅಪರಿಚಿತ ಮಹಿಳೆರಿಂದ  ನಗದು ಹಾಗು ಪಾತ್ರೆ ಕಳವು:
    ಖರೀದಿಸುವ ನೆಪದಲ್ಲಿ  ಪಾತ್ರೆ ಅಂಗಡಿಗೆ ಬಂದ ಅಪರಿಚಿತಅಪರಿಚಿತ ಮಹಿಳೆಯರಿಬ್ಬರಿಂದ  ಗಲ್ಲಾಪೆಟ್ಟಿಗೆಯಿಂದ  ನಗದು ಹಾಗು ಪಾತ್ರೆಯನ್ನು ಕಳ್ಳತನ ಮಾಡಿದ ಘಟನೆ  ಕುಶಾಲನಗರದಲ್ಲಿ ನಡೆದಿದೆ.   ದಿನಾಂಕ 27-8-2014 ರಂದು ಸಂಜೆ ನಾಲ್ಕು ಗಂಟೆಗೆ  ಇಬ್ಬರು ಅಪರಿಚಿತ ಮಹಿಳೆಯರು  ಕುಶಾಲನಗರದ ರಥಬೀದಿಯಲ್ಲಿರುವ  ಶ್ರೀ ಸತೀಶ ಎಂಬವರ ಪಾತ್ರೆ ಅಂಗಡಿಗೆ ಖರೀದಿಸುವ ನೆಪದಲ್ಲಿ ಬಂದು  ವ್ಯಾಪಾರಿಯ ಕಣ್ಣು ತಪ್ಪಿಸಿ  ಗಲ್ಲಾ ಪೆಟ್ಟಿಗೆಯಿಂದ 4,400 ರೂಪಾಯಿ ಹಾಗು 940 ರೂಪಾಯಿ ಬೆಲೆಬಾಳುವಸ್ಟೀಲ್‌ ಹಂಡೆಯನ್ನು ಕಳ್ಳತನ ಮಾಡಿಕೊಂಡುಹೋಗಿದ್ದು,  ತದನಂತರ ಕಳ್ಳತನ ಮಾಡಿದ ಆರೋಪಿ ಹೆಂಗಸರಾದ ದಾಕ್ಷಾಯಣಿ (30), ಜಯಮ್ಮ ಹಾಗು ಇಂದ್ರಮ್ಮ , ದಾಸರಕೊಪ್ಪಲು, ಹಾಸನ ಇವರುಗಳನ್ನು ಕುಶಾಲನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ:
    ಅಪ್ರಾಪ್ತ ಹುಡುಗಿಯನ್ನು  ವ್ಯಕ್ತಿಯೋರ್ವ ಮದುವೆಯಾಗುವುದಾಗಿ ನಂಬಿಸಿ  ಸುಮಾರು 6 ತಿಂಗಳಿಂದ ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿ ವಂಚಿಸಿದ ಘಟನೆ ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ  ವರದಿಯಾಗಿದೆ. ವಿರಾಜಪೇಟೆ ತಾಲೋಕು, ನಿಟ್ಟೂರು ಗ್ರಾಮದಲ್ಲಿ ವಾಸವಾಗಿರುವ  ಕಣ್ಣ  17 ವರ್ಷ  ಪ್ರಾಯದ ಟಿ.ಆರ್‌. ಸುಧಾ ಎಂಬಾಕೆಯನ್ನು ನಲ್ಲೂರು ಗ್ರಾಮದ ಪೈಸಾರಿ ಕಾಲೋನಿಯಲ್ಲಿ   ಮುರುಗೇಶ ಎಂಬ ವ್ಯಕ್ತಿ  ಮದುವೆಯಾಗುವುದಾಗಿ ನಂಬಿಸಿ ಸುಮಾರು 6 ತಿಂಗಳಿಂದ  ಪದೇ ಪದೇ  ಸುಧಾಳ ಮೇಲೆ ಅತ್ಯಾಚಾರ ನಡೆಸಿರುವುದಾಗಿಯೂ, ಈ ವಿಚಾರವನ್ನು ಯಾರಿಗಾಗದರು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವಬಗ್ಗೆ ಹಾಗು  ಆಕೆ ಇದೀಗ ಗರ್ಭವತಿಯಾಗಲು  ಸದರಿ ಮುರುಗೇಶನು ಕಾರಣ ನಾಗಿರುವುದಾಗಿ ಆರೋಪಿಸಿ ವಂಚನೆಗೊಳಗಾದ ಟಿ.ಆರ್‌. ಸುಧಾ ಪೊನ್ನಂಪೇಟೆ ಪೊಲೀಸರಿಗೆದೂರನ್ನು ನೀಡಿದ್ದು ಅದರಂತೆ  ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

Thursday, August 28, 2014

ಆಸ್ತಿ ವಿವಾದ, ವ್ಯಕ್ತಿಯಿಂದ ಇಬ್ಬರ ಮೇಲೆ ಹಲ್ಲೆ:
 
     ಆಸ್ತಿವಿವಾದದ ಹಿನ್ನೆಲೆಯಲ್ಲಿ  ವ್ಯಕ್ತಿಯೋರ್ವ  ಇಬ್ಬರು ವ್ಯಕ್ತಿಗಳ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಭಾಗಮಂಡಲ ಠಾಣಾ ಸರಹದ್ದಿನ ಕುಂದಚೇರಿ ಗ್ರಾಮದಲ್ಲಿ ನಡೆದಿದೆ.  ಕುಂದಚೇರಿ ಗ್ರಾಮದ ನಿವಾಸಿಗಳಾದ ಮುತ್ತಪ್ಪನವರ ಮತ್ತು ಪೊನ್ನಪ್ಪ ಹಾಗು ಅಶೋಕ ಎಂಬುವವರ  ನಡುವೆ ಆಸ್ತಿವಿವಾದದ ಇದ್ದುದರ ಹಿನ್ನೆಲೆಯಲ್ಲಿ  ದಿನಾಂಕ 27-8-2014 ರಂದು ಸದರಿ ಗ್ರಾಮದ  ಪಂಚಾಯಿತಿ ಅಧ್ಯಕ್ಷರು ಹಾಗು ಸದಸ್ಯರುಗಳು  ವಿಚಾರಣೆ ನಡೆಸಿ ತಿರ್ಮಾನ ಮಾಡುತ್ತಿದ್ದ  ಸಮಯದಲ್ಲಿ ಪೊನ್ನಪ್ಪನವರು ಏಕಾಎಕಿ  ದೊಣ್ಣೆಯಿಂದ  ಮುತ್ತಪ್ಪನವರ ಮೇಲೆ ಹಲ್ಲೆ ನಡೆಸಿದ್ದು ಇದನ್ನು ತಡೆಯಲು ಯತ್ನಿಸಿದ ಮುತ್ತಪ್ಪನವರ ಮಗ ಹೇಮರಾಜುರವರ ಮೇಲೆ ಪೊನ್ನಪ್ಪ, ಅಶೋಕ ಹಾಗು ನಾಗೇಶ ಇವರುಗಳು ಸೇರಿಹಲ್ಲೆ ನಡೆಸಿದ್ದು,  ಈ ಸಂಬಂಧ ಹೇಮರಾಜುರವರು  ನೀಡಿದ ದೂರಿನ ಮೇರೆಗೆ  ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

Tuesday, August 26, 2014

 ಕಿಡಿಗೇಡಿಗಳಿಂದ ಜಾಗಕ್ಕೆ ಅಕ್ರಮ ಪ್ರವೇಶ, ಬೆಳೆ ನಾಶ:

     ವಕ್ತಿರ್ಯೊರ್ವರ ಜಾಗಕ್ಕೆ ಕೆಲ ಕಿಡಿಗೇಡಿಗಳು ಅಕ್ರಮ ಪ್ರವೇಶ ಮಾಡಿ ಅಡಿಕೆ ಮತ್ತು ಸಿಲ್ವರ್‌ ಗಿಡಗಳನ್ನು ನಾಶಪಡಿಸಿದ ಘಟನೆ ವಿರಾಜಪೇಟೆ ತಾಲೋಕು ಮೈತಾಡಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 24-08-14ರಂದು ರಾತ್ರಿ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಮೈತಾಡಿ ಗ್ರಾಮದ ನಿವಾಸಿ ಕೆ.ಹೆಚ್‌. ಇಸ್ಮಾಯಿಲ್‌ ಎಂಬವವರ ಬಾಪ್ತು ಚಾಮಿಯಾಲ ಗ್ರಾಮದಲ್ಲಿರುವ ಸರ್ವೆ 289/1 ಪಿ ರ 5 .25 ಎಕರೆ ಭತ್ತ ಬೆಳೆಯುವ ಗದ್ದೆಗೆ ಅಕ್ರಮ ಪ್ರವೇಶ ಮಾಡಿ ಸುಮಾರು 10 ವರ್ಷದಿಂದ ಬೆಳೆಸಿರುವ ಫಸಲು ಬರುವ 30 ಅಡಿಕೆ ಮರ ಮತ್ತು 20 ಸಿಲ್ವರ್ ಗಿಡಗಳನ್ನು ಕಡಿದು ನಾಶಪಡಿದ್ದು ಅಲ್ಲದೆ ಹಾಗೂ ಭತ್ತದ ನಾಟಿಯನ್ನು ಕಿತ್ತು ತುಳಿದು ಹಾಕಿ ಸುಮಾರು 60,000/- ರಷ್ಟು ನಷ್ಟಪಡಿಸಿರುತ್ತಾರೆಂದು ಇಸ್ಮಾಯಿಲ್‌ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Monday, August 25, 2014

ಮನೆಗೆ ಅಕ್ರಮ ಪ್ರವೇಶ, ಮಾರಕಾಯುಧದಿಂದ ವ್ಯಕ್ತಿಯ ಮೇಲೆ ಹಲ್ಲೆ:

       ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ. ಹಚ್ಚಿನಾಡುಗ್ರಾಮದಲ್ಲಿ ವಾವವಾಗಿರುವ ಪಣಿಎರವರ ಶಿವುರವರು ದಿನಾಂಕ 24-8-2014 ರಂದು ರಾತ್ರಿ 10-30 ಗಂಟೆಗೆ ತನ್ನ ಮನೆಯಲ್ಲಿ ಟಿ.ವಿ.ನೋಡಿಕೊಂಡಿರುವಾಗ್ಗೆ ಪಕ್ಕದ ಲೈನ್ ಮನೆಯ ನಿವಾಸಿ ಪಣಿಎರವರ ಮುತ್ತ ಎಂಬವರು ಶಿವುರವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮುತ್ತರವರ ಪತ್ನಿಯ ಜೊತೆ ಶಿವು ಮಾತನಾಡಿದ ಎಂಬ ಕಾರಣಕ್ಕೆ ಜಗಳ ಮಾಡಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಶಿವುರವರ ತಲೆಗೆ, ಎಡಕಾಲಿನ ಕೆಳಗೆ ಕಡಿದು ರಕ್ತಗಾಯಪಡಿಸಿದ್ದು ಸದರಿಯವರು ಚಿಕಿತ್ಸೆ ಬಗ್ಗೆ ಅಮ್ಮತ್ತಿಯ ಆರ್‌.ಐ.ಹೆಚ್‌.ಡಿ. ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಶಿವುರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

 ವ್ಯಾಪಾರದ ವಿಚಾದಲ್ಲಿ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯ ದಾರಿ ತಡೆದು ಹಲ್ಲೆ:

       ಹಳೇ ದ್ವೇಷದ ಹಿನ್ನೆಲೆ ವ್ಯಾಪಾರಿಯ ದಾರಿ ತಡೆದು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಅಮ್ಮತ್ತಿನಗರ ದಲ್ಲಿ ನಡೆದಿದೆ. ಅಮ್ಮತ್ತಿ ನಗರದಲ್ಲಿ ವೈಶ್ಯ ಪೂಟ್ ವೇರ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಎಂ.ಎಂ. ಇಬ್ರಾಹಿಂ ಎಂಬವರು ದಿನಾಂಕ: 24-08-14 ರಂದು ಸಮಯ ರಾತ್ರಿ 9-00ಗಂಟೆಗೆ ವ್ಯಾಪಾರ ಮುಗಿಸಿ ಅಂಗಡಿಯನ್ನು ಮುಚ್ಚಿ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ, ಅಲ್ಲಿಗೆ ಅಮ್ಮತ್ತಿ - ಮುಕ್ಕಾಟ್ಟಿಕೊಪ್ಪ ಗ್ರಾಮದವರಾದ ಮಹಮ್ಮದ್, ಆಲಿ ಹಾಗೂ ಯೂಸಫ್, ರವರು ಬಂದು ಎಂ.ಎಂ. ಇಬ್ರಾಹಿಂರವರ ದಾರಿ ತಡೆದು ವ್ಯಾಪಾರದ ವಿಚಾರದಲ್ಲಿ ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದಎಡದ ಕಣ್ಣಿನ ಹುಬ್ಬಿಗೆ ಹಲ್ಲೆನಡೆಸಿ ಗಾಯಪಡಿಸಿದ್ದು, ಈ ವಿಚಾರವಾಗಿ ಎಂ.ಎಂ. ಇಬ್ರಾಹಿಂರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ದನದ ಮಾಂಸ ಸಾಗಾಟ ವ್ಯಕ್ತಿಯ ಬಂಧನ:

    ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಮಾಲು ಸಮೇತ ವ್ಯಕ್ತಿಯನ್ನು ಬಂಧಿಸಿದ ಘಟನೆ ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ. ದಿನಾಂಕ 24-8-2014 ರಂದು ಸಿದ್ದಾಪುರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಹರಿವರ್ಧನ್ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಠಾಣಾ ಸಿಬ್ಬಂದಿಯೊಂದಿಗೆ ನೆಲ್ಲಿಹುದಿಕೇರಿ ಗ್ರಾಮದ ಪಿ.ಎಫ್.ಪಿಂಟೋ ರವರ ಮನೆಯ ಗೇಟಿನ ಮುಂಭಾಗದಲ್ಲಿ ಸಮಯ 09:30 ಗಂಟೆಗೆ ನೆಲ್ಲಿಹುದಿಕೇರಿ ಕಡೆಗೆ ಕೆಎ-09-ಎಂ-4224 ರ ಮಾರುತಿ 800 ಕಾರು ಬರುತ್ತಿದ್ದು, ಅದನ್ನು ತಡೆದು ನಿಲ್ಲಿಸಿ ಅದರಲ್ಲಿ ಪಾಲಿಬೆಟ್ಟ ನಿವಾಸಿ ಎಂ.ಎ.ಶಮೀಮ್ ತಂದೆ ಪೌತಿ ಆಲಿ, ಪ್ರಾಯ 42 ವರ್ಷ, ಇವರು ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೆ ಸುಮಾರು 100 ಕೆ.ಜಿ ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಸದರಿ ಮಾರುತಿ ವ್ಯಾನ್‌ನಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತಹಚ್ಚಿ ಮಾಲು ಸಮೇತ ಕೆಎ-09-ಎಂ-4224 ರ ಮಾರುತಿ 800 ಕಾರನ್ನು ಮತ್ತು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Sunday, August 24, 2014


ಜೀಪಿಗೆ ಬೈಕು ಡಿಕ್ಕಿ, ಜೀಪಿಗೆ ಹಾನಿ
        ಜೀಪಿಗೆ ಬೈಕೊಂದು ಡಿಕ್ಕಿಯಾದ ಪರಿಣಾಮ ಜೀಪಿಗೆ ಹಾನಿಯಾದ ಘಟನೆ ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದಲ್ಲಿ ಸಂಭವಿಸಿದೆ. ದಿನಾಂಕ 23/08/2014ರ ಅಪರಾಹ್ನ ಕುರ್ಚಿ ಗ್ರಾಮದ ನಿವಾಸಿ ಅಜ್ಜಾಮಾಡ ಕಾರ್ಯಪ್ಪ ಎಂಬವರು ಅವರ ಜೀಪು ಸಂಖ್ಯೆ ಕೆಎ-12-ಎಂ-1670 ರಲ್ಲಿ ಮನೆಯಿಂದ ಇರ್ಪು ಕಡೆಗೆ ಬರುತ್ತಿರುವಾಗ ಇರ್ಪು ರಸ್ತೆ ಜಂಕ್ಷನ್ ಮುಂಬಾಗದ ತಿರುವುನಲ್ಲಿ ಎದರುಗಡೆಯಿಂದ ಕೆಎಲ್-12-ಎಫ್-5486 ರ ಮೊಟಾರ್ ಸೈಕಲ್ ಅನ್ನು ಅದರ ಸವಾರ ಅಲನ್ ಜಾನ್ ಎಂಬಾತನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರ್ಯಪ್ಪನವರು ಚಾಲನೆ ಮಾಡುತ್ತಿದ್ದ ಜೀಪಿನ ಬಲಬಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆತನೂ ಕೆಳಗಡ ಬಿದ್ದುದಲ್ಲದೆ ಜೀಪಿಗೂ ಹಾನಿಯುಂಟಾಗಿ ಸುಮಾರು ರೂ. 20 ಸಾವಿರಗಳಷ್ಟು ನಷ್ಟವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯೊಬ್ಬರ ಜಾತಿ ನಿಂದನೆ & ಕೊಲೆ ಬೆದರಿಕೆ ; ಪ್ರಕರಣ ದಾಖಲು
          ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರ ಮೇಲೆ ಜಾತಿಯನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಮೂರ್ನಾಡು ಬಳಿಯ ಹೊದ್ದೂರು ಗ್ರಾಮದಲ್ಲಿ ನಡೆದಿದೆ. ಹೊದ್ದೂರು ಗ್ರಾಮದ ಪಾಲೆಮಾಡು ಪೈಸಾರಿಯ ನಿವಾಸಿ ಕೆ.ಮೊಣ್ಣಪ್ಪ ಎಂಬವರು ಸುಮಾರು 7-8 ವರ್ಷಗಳಿಂದ ಪಾಲೆಮಾಡು ಪೈಸಾರಿಯಲ್ಲಿ ಎಲ್ಲಾ ವರ್ಗದ ಬಡ ಕುಟುಂಬದವರನ್ನು ಸೇರಿಸಿಕೊಂಡು ನಿವೇಶನಕ್ಕಾಗಿ ಹೋರಾಟ ಮಾಡುತ್ತಿದ್ದು ದಿನಾಂಕ 23-08-14 ರಂದು ಸಮೀಪದ ವಾಟೆಕಾಡು ಪೈಸಾರಿಯಿಂದ ಪಾಲೆಮಾಡುವಿಗೆ ಬಂದ ಜನಾರ್ಧನ, ರಘು ಮತ್ತು ಜೊತೆಯವರು ಅಂಗಡಿಯ ಹತ್ತಿರ ತನ್ನ ಸ್ನೇಹಿತರಾದ ಬಿ ಎಸ್ ಸುಂದರ ಪೂಜಾರಿ, ಪಿ ಎ ರಾಜ ಎಂಬುವವರೊಂದಿಗೆ ನಿಂತಿದ್ದ ಮೊಣ್ಣಪ್ಪನವರನ್ನು ಸಾರ್ವಜನಿಕ ರಸ್ತೆಗೆ ಕರೆದು ಹಲ್ಲೆ ಮಾಡಲು ಮುಂದಾಗಿ ಮೊಣ್ಣಪ್ಪನವರ ಜಾತಿಯನ್ನು ಕುರಿತು ಕೀಳಾಗಿ ನಿಂದಿಸಿ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆಯಲ್ಲಿ ಕುಸಿದು ವ್ಯಕ್ತಿಯೊಬ್ಬರ ಸಾವು
         ರಸ್ತೆಯಲ್ಲಿ ಕುಸಿದು ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಸೋಮವಾರಪೇಟೆ ನಗರದ ಚೌಡ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 23/08/2014ರಂದು ರಂದು ಕೊಡ್ಲಿಪೇಟೆಯ ದೊಡ್ಡಕೊಡ್ಲಿ ನಿವಾಸಿ ಗಿರೀಶ ಎಂಬವರು ಸೋಮವಾರಪೇಟೆಯ ಚೌಡ್ಲು ಗ್ರಾಮದಲ್ಲಿ ತನ್ನ ತಂದೆ ತಾಯಿ ವಾಸವಿರುವ ಮನೆಗೆ ಬಂದಿದ್ದಾಗ ಅವರ ತಂದೆ ಮಲ್ಲಿಕಾರ್ಜುನರವರು ಮನೆಗೆ ಬರುವ ರಸ್ತೆಯಲ್ಲಿ ಮೃತಪಟ್ಟಿರುತ್ತಾರೆ ಎಂದು ತಿಳಿದು ಬಂದ ಮೇರೆ ಅಲ್ಲಿಗೆ ಹೋಗಿ ನೋಡಿದಾಗ ಅವರ ತಂದೆ ಮಲ್ಲಿಕಾರ್ಜುನರವರು ರಸ್ತೆಯಲ್ಲಿ ಕುಸಿದು ಬಿದ್ದು ಮೃತರಾಗಿದ್ದು, ಅವರು ತೀವ್ರವಾದ ಅನಾರೋಗ್ಯದಿಂದ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದವರು ಮೃತಪಟ್ಟಿರುವುದಾಗಿ ಗಿರೀಶರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅನಧಿಕೃತ ಟಿ.ವಿ.ವಾಹಿನಿ ಪ್ರಸಾರ, ಪ್ರಕರಣ ದಾಖಲು
     ಅನಧಿಕೃತವಾಗಿ ಟಿ.ವಿ.ವಾಹಿನಿಯನ್ನು ಕೇಬಲ್ ಟಿ.ವಿ.ಯಲ್ಲಿ ಪ್ರಸಾರ ಮಾಡುತ್ತಿದ್ದ ಬಗ್ಗೆ ಪ್ರಕರಣವೊಂದು ಸೋಮವಾರಪೇಟೆ ಠಾಣೆಯಲ್ಲಿ ದಾಖಲಾಗಿದೆ. ತಾಜ್ ಟೆಲಿವಿಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯು ಪ್ರಸಾರದ ಹಕ್ಕುಗಳನ್ನು ಖರೀದಿಸಿದ್ದ ಝೀ ಸಿನೆಮಾ ಮತ್ತು ಇತರ ವಾಹಿನಿಗಳನ್ನು ಸಂಸ್ಥೆಯ ಯಾವುದೇ ಪರವಾನಿಗೆಯನ್ನು ಪಡೆಯದೆ ಸೋಮವಾರಪೇಟೆ ನಗರದ ಗಾಯತ್ರಿ ಶಿವರಾಜ್ ಎಂಬವರು ತಮ್ಮ ಕೇಬಲ್ ಜಾಲದಲ್ಲಿ ಅನಧಿಕೃತವಾಗಿ ಪ್ರಸಾರ ಮಾಡಿರುತ್ತಾರೆ ಎಂದು ತಾಜ್ ಟೆಲಿವಿಷನ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಉದ್ಯೋಗಿ ಉಪೇಂದೆ ನಾಮ್ದಿಯೋ ಎಂಬವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, August 23, 2014

ಜಿಲ್ಲೆಯಲ್ಲಿ ವರದಿಯಾದ ಅಪರಾದ ಪ್ರಕರಣಗಳ ವಿವರ:
ಮನೆಗೆ ನುಗ್ಗಿ ಕಳ್ಳತನ:

     ದಿನಾಂಕ 21/08/2014 ರಂದು ಶ್ರೀಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ನಿವಾಸಿ ಕಾಸ್ಪಾಡಿ ಎಲ್‌. ಗಿರೀಶ ಎಂಬವರ ಮನೆಯ ಬೀಗವನ್ನು ಯಾರೋ ಕಳ್ಳರು ಮುರಿದು ಮನೆಯೊಳಗೆ ಪ್ರವೇಶಿಸಿ 13000 ರೂ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕಾಸ್ಪಾಡಿ ಎಲ್‌. ಗಿರೀಶ್‌ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಆಕಸ್ಮಿಕ ಬೆಂಕಿ ತಗುಲಿ ಮಹಿಳೆಯ ಸಾವು:

     ದಿನಾಂಕ 15/08/2014 ರಂದು ಸಿದ್ದಾಪುರ ಠಾಣಾ ವ್ಯಾಪ್ತಿಯ ಇಂಜಿಲಗೆರೆ –ಪುಲಿಯೇರಿ ಗ್ರಾಮದಲ್ಲಿ ನೆಲೆಸಿರುವ ಶರೀಫ್‌ ಎಂಬವರ ಪತ್ನಿ ತಾಹಿರಾ ಎಂಬ ಮಹಿಳೆ ತನ್ನ ವಾಸದ ಮನೆಯ ಸ್ನಾನದ ಕೋಣೆಯ ಒಲೆಗೆ ಸೀಮೆಣ್ಣೆ ಬಳಸಿ ಬೆಂಕಿ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಮೈಮೇಲೆ ಸುಟ್ಟ ಗಾಯಗಳಾಗಿ ಸದರಿಯವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಸದರಿ ತಾಹಿರಾರವರು ದಿನಾಂಕ 22-8-2014 ರಂದು ಮೃತಪಟ್ಟಿದ್ದು ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

Friday, August 22, 2014

ತಂದೆಯಿಂದ 3 ವರ್ಷದ ಬಾಲಕನ ಮೇಲೆ ಹಲ್ಲೆ:

ಶ್ರೀಮತಿಚಂದ್ರಿಕಾ ಎಂಬವರು  ಪತಿ ಸಂಪತ್‌ ಹಾಗೂ ಮಗ 3 ನೇ ತರಗತಿ ಓದುತ್ತಿರುವ 9 ವರ್ಷ ಪ್ರಾಯದ ದರ್ಶನ್‌ ರವರೊಂದಿಗೆ ಹಾಕತ್ತೂರಿನಲ್ಲಿ ವಾಸವಾಗಿದ್ದು, ದಿನಾಂಕ 21-08-14 ರಂದು ಸಮಯ 08-00 ಪಿ ಎಂ ಗೆ ಮನೆಯಲ್ಲಿರುವಾಗ್ಗೆ ಪತಿಯವರು ಏಕಾ ಏಕಿ ಮಗ ದರ್ಶನ್‌ನನ್ನು ಕುರಿತು ನೀನು ಶಾಲೆಗೆ ಹೋಗುವಾಗ ರಸ್ತೆ ಮದ್ಯದಲ್ಲಿಯೇ ನಡೆದುಕೊಂಡು ಹೋಗುತ್ತೀಯಾ, ನಿನಗೆ ಎಷ್ಟು ಹೇಳಿದರೂ ಕೇಳುವುದಿಲ್ಲ ಎಂದು ಹೇಳಿಕೊಂಡು ಲೈನ್ ಮನೆಯಯೊಳಗಡೆ ಇದ್ದ ಕತ್ತಿಯನ್ನು ತೆಗೆದುಕೊಂಡು ಬಂದು ಮಗ ದರ್ಶನ್‌ನನ್ನು ಹಿಡಿದುಕೊಂಡು ಕತ್ತಿಯಿಂದ ಎಡ ಕಿವಿಯ ಭಾಗ, ಎಡಕೈ ಮಣಿಗಮಟಿಗೆ, ಎಡಕೈ ಅಂಗೈಗೆ ಕಡಿದು ರಕ್ತ ಗಾಯಪಡಿಸಿ ಮಗ ದರ್ಶನ್‌ ಮೇಲೆ ಕ್ರೂರತೆ ಮೆರೆದಿದ್ದು,  ಈ ಸಂಬಂಧ ಶ್ರೀಮತಿ ಚಂದ್ರಕಾರವರ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 
 
ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ 21-08-2014 ರಂದು ಹೆಚ್.ಕೆ. ಮುತ್ತಪ್ಪನವರು ಮಗ್ಗುಲ ಗ್ರಾಮದ ತಮ್ಮ ಮನೆಗೆ ಸಂಜೆ 06-45 ಗಂಟೆಗೆ  ನಡೆದುಕೊಂಡು ಹೋಗುವಾಗ್ಗೆ  ಮಗ್ಗುಲ ಗ್ರಾಮದ ಪುಲಿಯಂಡ ಗೀರ ಕುಟ್ಟಪ್ಪನವರ ಮನೆಯ ಮುಂದೆ ತಲುಪುವಾಗ್ಗೆ ಸದ್ರಿ ಕುಟ್ಟಪ್ಪನವರು ಹೆಚ್‌.ಕೆ. ಮುತ್ತಪ್ಪನವರನ್ನು  ದಾರಿ ತಡೆದು ನಿಲ್ಲಿಸಿ ವಿನಾ ಕಾರಣ ತನ್ನ ಕೈಯಲ್ಲಿದ್ದ ಕತ್ತಿಯಿಂದ ಹಲ್ಲೆನಡೆಸಿ  ಗಾಯಪಡಿಸಿರುವ ಬಗ್ಗೆ  ಸದರಿ ಹೆಚ್‌.ಕೆ. ಮುತ್ತಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರುಪ್ರಕರಣವನ್ನು ದಾಖಲಿಸಿ  ತನಿಖೆ ಕೈಗೊಂಡಿರುತ್ತಾರೆ.  
ಮೋಟಾರ್‌ ಸೈಕಲ್‌ಗೆ  ಓಮ್ನಿ ಡಿಕ್ಕಿ, ಸವಾರನಿಗೆ ಗಾಯ: 

ಕೇರಳ ರಾಜ್ಯದ ವೈನಾಡು ಜಿಲ್ಲೆಯ ಕಾಟಿಕೊಳಂ ಗ್ರಾಮದ ನಿವಾಸಿ ಎ.ಜೆ. ರಾಯ್‌ ಎಂಬವರು ದಿನಾಂಕ 15-05-2013 ರಂದು ಸಮಯ ಬೆಳಿಗ್ಗೆ 10.00 ಗಂಟೆಗೆ ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಬಾಡಗ ಗ್ರಾಮದ ಕೆ.ಎಂ ಕೊಲ್ಲಿಯ ಸಾರ್ವಜನಿಕ ರಸ್ತೆಯಲ್ಲಿ ತನ್ನ ಭಾಫ್ತು ಮೋಟಾರ್ ಸೈಕಲ್‌ ನಂ ಕೆ.ಎಲ್-12 ಜಿ-1862 ರಲ್ಲಿ ಹೋಗುತ್ತಿರುವಾಗ್ಗೆ ಎದುರುಗಡೆಯಿಂದ ಕೆ.ಎ-03 ಪಿ-6387 ರ ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕ ಶಿವಣ್ಣ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲ್‌ಗೆ ಢಿಕ್ಕಿಪಡಿಸಿದ ಪರಿಣಾಮ ಎ.ಜೆ. ರಾಯ್‌ರವರು ತೀವ್ರವಾಗಿ ಗಾಯಗೊಂಡಿದ್ದು, ಈ ಸಂಬಂಧ ಕುಟ್ಟಪೊಲೀಸರುಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಲಾರಿ ಬೈಕ್‌ ಗೆ ಡಿಕ್ಕಿ  ಬೈಕ್‌ ಸವಾರನಿಗೆಗಾಯ:

 ದಿನಾಂಕ 21-8-2014 ರಂದು ಮಡಿಕೇರಿ  ಗ್ರಾಮಾಂತರ ಠಾಣಾ ಸರಹದ್ದಿನ ಜೋಡುಪಾಲ ಸಾರ್ವಜನಿಕ ರಸ್ತೆಯಲ್ಲಿ  ಮೋಟಾರ್‌ ಸೈಕಲ್‌ಗೆ ಲಾರಿಯೊಂದು ಡಿಕ್ಕಿಯಾಗಿ  ಮೋಟಾರ್‌ ಸೈಕಲ್‌ ಸವಾರ  ಸಂತೋಷ್‌ ಗಾಯಗೊಂಡಿದ್ದು,  ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

Thursday, August 21, 2014

ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿ ಬಂಧನ:                                                                                                   ಬಂಧಿತ ಆರೋಪಿ ಸುಸ್ತಿ @ ಕೆಂಚ
 

       ಕೊಡಗು ಜಿಲ್ಲೆಯ, ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ 2012ನೇ ಸಾಲಿನಲ್ಲಿ ದಾಖಲಾದ ಕೊಲೆ ಪ್ರಕರಣವೊಂದರಲ್ಲಿ  ಆರೋಪಿತ ಸುಸ್ತಿ @ ಕೆಂಚ  ತಲೆಮರೆಸಿಕೊಂಡಿದ್ದು,  ಈತನ ವಿರುದ್ಧ ನ್ಯಾಯಾಲಯದಿಂದ ವಾರೆಂಟ್‌ ಜಾರಿಯಾಗಿದ್ದು, ಪ್ರಕರಣ ದಾಖಲಾದ ದಿನದಿಂದ  ತಲೆಮರೆಸಿಕೊಂಡಿದ್ದು,  ತನಿಖಾ ಸಂದರ್ಭದಲ್ಲಿ  ಸದರಿ ತಲೆಮರೆಸಿಕೊಂಡ ಆರೋಪಿ  ವಿರಾಜಪೇಟೆ ತಾಲೋಕು ಬಿಟ್ಟಾಂಗಾಲ ಗ್ರಾಮದ ನಿವಾಸಿ ನಾಪಂಡ ಅಜಯ್‌ರವರ ಲೈನು ಮನೆಯಲ್ಲಿದ್ದು ಕೂಲಿ ಕೆಲಸ ಮಾಡಿಕೊಂಡು ಇದ್ದ ಸದರಿ ವ್ಯಕ್ತಿಯನ್ನು ಈ ದಿನ ದಿನಾಂಕ 21-8-2014 ರಂದು ಬೆಳಿಗ್ಗೆ 10-00 ಗಂಟೆಗೆ ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  ಇದರಿಂದ  2-3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. 
 
 
 
 
ನೀರಿನ ವಿಚಾರದಲ್ಲಿ ಜಗಳ ವ್ಯಕ್ತಿಯ ಮೇಲೆ ಹಲ್ಲೆ:
 
     ದಿನಾಂಕ 21-08-2014 ರಂದು ಬೆಳಿಗ್ಗೆ ಸಮಯ 09.00 ಗಂಟೆಗೆ ಸೋಮವಾರಪೇಟೆ ತಾಲೋಕು ಕಿಬ್ಬೆಟ್ಟ ಗ್ರಾಮದ ನಿವಾಸಿ ಶ್ರೀಮತಿ ಪ್ರೇಮಾ ಎಂಬವವರು ಮುದ್ದ ಎಂಬವರ ಮನೆಯ ಪಕ್ಕದಲ್ಲಿರುವ ಸಾರ್ವಜನಿಕ ನಲ್ಲಿಯಲ್ಲಿ ನೀರು ಹಿಡಿಯಲು ಹೋದಾಗ ಮುದ್ದರವರು  ಪ್ರೇಮಾರವರೊಂದಿಗೆ  ಜಗಳ ತೆಗೆದು ಅವರ ಕೈಯಲ್ಲಿದ್ದ ಬಿಂದಿಗೆಯನ್ನು ಕಿತ್ತು ತಲೆಗೆ ಹೊಡೆದು,  ಕೈ ಹಿಡಿದು ಎಳೆದಾಡಿ ಬಟ್ಟೆ ಹರಿದು ಕುತ್ತಿಗೆ ಹಿಸುಕಿ ನೋವನ್ನುಂಟು ಮಾಡಿದ್ದ ಕಾರಣ ಶ್ರೀಮತಿ ಪ್ರೇಮಾ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರಪೇಟೆ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.
 
ಬಸ್ಸಿಗೆ ಕಲ್ಲು ಎಸೆದು ಹಾನಿ, ಇಬ್ಬರಿಗೆ ಗಾಯ:
 
    ಮಡಿಕೇರಿಯಿಂದ ಬೆಂಗಳೂರಿಗೆ ರಾತ್ರಿ 11-30 ಗಂಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ  ಪಾನಮತ್ತರಾಗಿ ಏರಿದ  ಅರುಣ ಹಾಗು ಶಿವಕುಮಾರ್‌ ಎಂಬ ಇಬ್ಬರು  ಬಸ್ಸಿನಲ್ಲಿದ್ದ ಪ್ರಯಾಣಿಕರು ಮತ್ತು ನಿರ್ವಾಹಕರೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ  ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ಅವರಿಬ್ಬರನ್ನು ಬಸ್ಸಿನಿಂದ ಕೆಳಗಿಳಿಸಿದ್ದು, ಕೆಳಗಿಳಿದ ಅವರು ಬಸ್ಸಿನ ಗಾಜಿಗೆ ಕಲ್ಲು ತೂರಿದ್ದು ಪರಿಣಾಮ ಬಸ್ಸಿನ ಗಾಜು ಒಡೆದು ಕಲ್ಲು ಬಸ್ಸಿನಲ್ಲಿದ್ದ ಇಬ್ಬರಿಗೆ ಪ್ರಯಾಣಿಕರಿಗೆ ತಾಗಿ ತೀವ್ರವಾಗಿ ಗಾಯಗೊಂಡಿರುವ ಬಗ್ಗೆ  ಬಸ್ಸಿನ ಚಾಲಕ ಮಂಜಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  
 
 

Wednesday, August 20, 2014


ಮಹಿಳೆ ಮೇಲೆ ಅತ್ಯಾಚಾರ , ಪ್ರಕರಣ ದಾಖಲು:

    ಸೋಮವಾರಪೇಟೆ ಪೊಲೀಸ್‌ ಠಾಣಾ ಸರಹದ್ದಿನ ಕುಂಬೂರು ಗ್ರಾಮದ ನಿವಾಸಿ ಎ.ಎಂ. ಅಸ್ಯಎಂಬ ಮಹಿಳೆ ದಿನಾಂಕ 19/08/2014 ರಂದು ರಫೀಕ್ ಮೇಸ್ತ್ರಿರವರೊಂದಿಗೆ ಗರ್ವಾಲೆ ಗ್ರಾಮದ ರವಿ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ್ಗೆ, ರಫೀಕ್ ರವರು ಕಾಫಿತೋಟದಲ್ಲಿ ಬೆದರಿಸಿ ಬಲವಂತವಾಗಿ ಅತ್ಯಾಚಾರ ನಡೆಸಿದ್ದು ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.  

ಅಕ್ರಮ ಮದ್ಯ ಮಾರಾಟ, ಆರೋಪಿ ಬಂಧನ:

     ದಿನಾಂಕ 19-8-2014 ರಂದು ಸೋಮವಾರಪೇಟೆ ಪೊಲೀಸ್‌ ಠಾಣೆ ಪಿ.ಎಸ್‌.ಐ. ರವರಾದ ಶ್ರೀ ನಂದೀಶ್‌ ಕುಮಾರ್‌ ರವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯೊಂದಿಗೆ ಸೋಮವಾರಪೇಟೆ ತಾಲೋಕು ತೋಳೂರುಶೆಟ್ಟಳ್ಳಿ ಗ್ರಾಮದ ಲಿಂಗರಾಜು ಎಂಬವವರು ನಡೆಸುತ್ತಿದ್ದ ಅಂಗಡಿಗೆ ದಾಳಿ ನಡೆಸಿ ಸದರಿ ಅಂಗಡಿ ಮಾಲಿಕ ಲಿಂಗರಾಜುರವರು ಸರಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟಮಾಡುತ್ತಿದ್ದು, ಸದರಿಯವರಿಂದ 180 ಎಂಎಲ್‌ನ 14 ಬಾಟಲ್‌ ಪ್ರಿಸ್ಟೀಜ್‌ ವಿಸ್ಕಿ, 6 ಬಾಡಲ್‌ ಓಲ್ಡ್‌ ಅಡ್ಮಿರಲ್‌ ಹಾಗು 10 ಬಾಟಲ್‌ ತ್ರಿಬಲ್‌ ಎಕ್ಸ್‌ ರಮ್‌ ನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಪಾದಾಚಾರಿಗೆ ಟ್ರಾಕ್ಟರ್‌ ಡಿಕ್ಕಿ:  

     ದಿನಾಂಕ 20-8-14 ರಂದು ಸಮಯ 08:20 ಎ.ಎಂಗೆ ಸೋಮವಾರಪೇಟೆ ನಗರದ ನಿವಾಸಿ ನಂಜಪ್ಪ ಎಂಬ ವ್ಯಕ್ತಿ ತನ್ನ ಸ್ನೇಹಿತರಾದ ರಾಜು ಎಂಬವರೊಂದಿಗೆ ಸೋಮವಾರಪೇಟೆ ಪಟ್ಟಣದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಹಿಂದುಗಡೆಯಿಂದ ಬರುತ್ತಿದ್ದ ಕೆಎ12 ಟಿ6315 ಟ್ರ್ಯಾಕ್ಟರ್‌ನ ಟ್ರೈಲರ್‌ ನಂಜಪ್ಪರವರಿಗೆ ಡಿಕ್ಕಿಯಾಗಿದ್ದು, ಪರಿಣಾಮ ಭುಜ ಮತ್ತು ತಲೆಯ ಭಾಗಕ್ಕೆ ರಕ್ತಗಾಯವಾಗಿದ್ದು , ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ: 
      ಶ್ರೀಮಂಗಲ ಠಾಣಾ ಸರಹದ್ದಿನ ಕುರ್ಚಿ ಗ್ರಾಮದ ನಿವಾಸಿ ಪಣಿ ಎರವರ ರಮೇಶ್‌ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಅದೇ ಗ್ರಾಮದ ಪಣಿಎರವರರವಿ ಎಂಬಾತ ಕತ್ತಿಯಿಂದ ಹಲ್ಲೆ ನಡೆಸಿಗಾಯಗೊಳಿಸಿದ್ದು, ಶ್ರೀಮಂಗಲ ಠಾಣೆಯಲ್ಲಿ ಈ ಸಂಬಂದ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, August 19, 2014

ಸ್ಕೂಟಿ ಅಪಘಾತ ಇಬ್ಬರಿಗೆ ಗಾಯ:

    ದಿನಾಂಕ 18-8-2014 ರಂದು ಮಡಿಕೇರಿ ತಾಲೋಕು, ಕಡಗದಾಳು ಗ್ರಾಮದ ನಿವಾಸಿ ರೇಖಾ ಎಂಬವರು ತಮ್ಮ ಬಾಪ್ತು ಸ್ಕೂಟಿಯಲ್ಲಿ   ದಿವ್ಯ ಎಂಬವರನ್ನು ಕುಳ್ಳಿರಿಸಿಕೊಂಡು  ಕಡಗದಾಳು ಗ್ರಾಮಕ್ಕೆ ಹೋಗುತ್ತಿರುವಾಗ  ಸ್ಕೂಟಿ ಅಪಘಾತಕ್ಕೀಡಾದ ಪರಿಣಾಮ ರೇಖಾ ಹಾಗೂ ದಿವ್ಯ ಇಬ್ಬರಿಗೂ ಗಾಯಗಳಾಗಿದ್ದುಮ ಮಡಿಕೇರಿ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
 
ಬೈಕ್‌ಗೆ ಲಾರಿ ಡಿಕ್ಕಿ, ಸವಾರನಿಗೆ ಗಾಯ:
 
     ದಿನಾಂಕ  18-8-2014 ರಂದು ಜೀವನ್‌ ಅಬ್ರಾಹಂ ಎಂಬ ವ್ಯಕ್ತಿ ಬೈಕ್‌ನಲ್ಲಿ  ಪ್ರಯಾಣಿಸುತ್ತಿದ್ದಾಗ ವಿರಾಜಪೇಟೆ  ಸಮೀಪದ ಪೆರುಂಬಾಡಿ ಸಾರ್ವಜನಿಕ ರಸ್ತೆಯಲ್ಲಿ  ಲಾರಿಯೊಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಕೊಂಡು ಬಂದು ದಿಕ್ಕಿಪಡಿಸಿದ ಪರಿಣಾಮ ಬೈಕ್‌ ಸವಾರ ಗಾಯಗೊಂಡಿದ್ದು,  ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿ ಆತ್ಮಹತ್ಯೆ:
 
ದಿನಾಂಕ 18-8-2014 ರಂದು ಸಿದ್ದಾಪುರ ಠಾಣಾ ಸರಹದ್ದಿನ ಗುಹ್ಯ ಗ್ರಾಮದ ಏಂಜಲ್‌ ಪೀಲ್ಡ್‌ ಪೀಲ್ಡ್‌ತೋಟದ ಲೈನ್‌ ಮನೆಯಲ್ಲಿ ವಾಸವಾಗಿದ್ದ ಪಣಿ ಎರವರ ಅಪ್ಪಿ (47) ಎಂಬ ವ್ಯಕ್ತಿ ಜೀವನ್ಲದಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
 

Monday, August 18, 2014

ನಿಶಾಮತ್ತ ವ್ಯಕ್ತಿಯ ಆತ್ಮಹತ್ಯೆ: 

     ವಿಪರೀತ ಮದ್ಯಪಾನ ಮಾಡಿದ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೋಕು ಹೊದ್ದೂರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಎಸ್‌.ಮಂಜುಳ ಎಂಬವರ ಗಂಡ ಶಿವಶಿವ(45) ಎಂಬ ವ್ಯಕ್ತಿ  ದಿನಾಂಕ; 16-08-2014 ರಂದು ಕೆದಮುಳ್ಳೂರು ಗ್ರಾಮದ ಮಾಳೇಟಿರ ಜೀವನ್ ರವರಲ್ಲಿ ಕೆಲಸ ಮಾಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದು, ವಿಪರೀತ ಮದ್ಯಪಾನ ಮಾಡಿಕೊಂಡು  ಮದ್ಯದ ಅಮಲಿನಲ್ಲಿ ಕೆದ ಮುಳ್ಳೂರು ಗ್ರಾಮದ ಮಾಳೇಟ್ಟಿರ ಮಾದಯ್ಯ ಎಂಬವರ ಕಾಫಿ ಕಣದಲ್ಲಿರುವ ಶೆಡ್ ಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

ಹಳೆ ದ್ವೇಷದ ಹಿನ್ನೆಲೆ, ವ್ಯಕ್ತಿಯ ಮೇಲೆ ಹಲ್ಲೆ: 

      ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಅಬ್ಬೂರುಕಟ್ಟೆ ಗ್ರಾಮದಲ್ಲಿ ನಡೆದಿದೆ.  ದಿನಾಂಕ  17-08-2014 ರಂದು ಸಮಯ 11.30 ಗಂಟೆಗೆ ಬಿ.ಯೋಗೇಶ್‌ ಎಂಬವರು  ತನ್ನ ಮನೆಯಲ್ಲಿರುವಾಗ ಅಬ್ಬೂರುಕಟ್ಟೆ ಗ್ರಾಮದ ವಾಸಿ ಆರೋಪಿ ಆನಂದ ಎಂಬವರು ಅಲ್ಲಿಗೆಬಂದು ಹಳೆಯ ವೈಷಮ್ಯದಿಂದ ಅವಾಚ್ಯ ಶಬ್ದಗಳಿಂದ ಬೈಯ್ದು ಮರದ ದೊಣ್ಣೆಯಿಂದ ಹಲ್ಲೆನಡೆಸಿ  ಗಾಯಪಡಿಸಿದ್ದುದರ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

ಅಕ್ರಮ ಇಸ್ಪೀಟ್‌ ಜೂಜಾಟ, ಆರೋಪಿಗಳ ಬಂಧನ:

      ಅಕ್ರಮ ಜೂಜಾಟ ವಾಡುತ್ತಿದ್ದ  ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮರಗೋಡು  ಗ್ರಾಮದಲ್ಲಿ ನಡೆದಿದೆ.  ದಿನಾಂಕ 17-8-2014 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಪಿ.ಎಸ್‌.ಐ. ಶ್ರೀ ಜಿ.ಕೆ. ಸುಬ್ರಮಣ್ಯರವರಿಗೆ  ದೊರೆತ ಖಚಿತ ಮಾಹಿತಿ ಮೇರೆಗೆ ಸದರಿಯವರು ಸಿಬ್ಬಂದಿಯೊಂದಿಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮರಗೋಡು ಗ್ರಾಮದ ನಿವಾಸಿ ಹರೀಶ್‌ ಎಂಬವರ ವಾಸದ ಮನೆಯ ಪಕ್ಕದಲ್ಲಿರುವ  ಔಟ್‌ಹೌಸ್‌ಗೆ ದಾಳಿ ನಡೆಸಿ ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಇಸ್ಪೀಟ್‌ ಆಟವನ್ನು ಆಡುತ್ತಿದ್ದ 10 ಜನರನ್ನು ಪೊಲೀಸ್‌ ವಶಕ್ಕೆ ತೆಗೆದುಕೊಂಡು  ಜೂಜಾಟಕ್ಕೆ ಬಳಸಿದ 18,580/- ರೂ.ಗಳನ್ನು ಮತ್ತು ಇತರೆ ಸಾಮಾಗ್ರಿಗಳನ್ನು ವಶಪಡಿಸಿಕೊಂಡು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದಾಖಲಿಸಿ ಮುಂದಿನ ಕ್ರಮಕೈಗೊಂಡಿರುತ್ತಾರೆ.   
ಮೋಟಾರ್‌ ಸೈಕಲ್‌ಗೆ  ಜೀಪ್‌ ಡಿಕ್ಕಿ ಇಬ್ಬರಿಗೆ ಗಾಯ: 

      ದಿನಾಂಕ 18-08-2014 ರಂದು  ಸೋಮವಾರಪೇಟೆ ತಾಲೋಕಿನ  ಕುಸುಬೂರು ಗ್ರಾಮದ ನಿವಾಸಿ ಎಂ. ಲೋಕೇಶ್‌ ಎಂಬವರು ಮ್ಮ ಬಾಪ್ತು ಕೆಎ-09, ಇಎನ್‌-0941 ರ ಮೋಟಾರು ಸೈಕಲ್‌ನಲ್ಲಿ ವಿಶ್ವನಾಥ ಎಂಬುವವರನ್ನು ಕೂರಿಸಿಕೊಂಡು ಎರಡನೇ ಕುಸುಬೂರು ತೋಟದ ರಾಟೆ ಕಣದ ಪಕ್ಕದ ರಸ್ತೆಯ ತಿರುವಿನಲ್ಲಿ ಹೋಗುತ್ತಿರುವಾಗ್ಗೆ ಎದುರುಗಡೆಯಿಂದ ಕೆಎ-12, ಬಿ-0095 ರ ಪಿಕ್‌ಅಪ್‌ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಯವರಿಗೆ ಹಾಗೂ ಜೊತೆಯಲ್ಲಿದ್ದ ವಿಶ್ವನಾಥ ರವರಿಗೆ ಗಾಯಗಳಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

Sunday, August 17, 2014

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಶ್ರೀಮಂಗಲ ಠಾಣಾ ವ್ಯಾಪ್ತಿಯ  ಬಾಡಗರಕೇರಿ ಗ್ರಾಮದಲ್ಲಿ ನಡೆದಿದೆ.  ಶ್ರೀಮಂಗಲ ಠಾಣಾ ಸರಹದ್ದಿನ ಪೊರಾಡು ಬಾಡಗರಕೇರಿ ಗ್ರಾಮದ ವಾಸಿ ಬಲ್ಯಮಿದೇದಿರ ಪೊನ್ನಪ್ಪನವರ  ಪಕ್ಕದ ಮನೆಯಲ್ಲಿ  ವಾಸವಿರುವ ಪೌತಿ  ಬಿದ್ದಪ್ಪರವರ ಮಗ ಅರೋಪಿ ಅಮೇಶ್ ರವರು  ದಿನಾಂಕ 16-8-2014 ರಂದು  ಅಪರಾಹ್ನ 04:00 ಗಂಟೆಗೆ ಪೊನ್ನಪ್ಪನವರ  ಮನೆಯ ಮುಂದೆ ಬೊಬ್ಬೆ ಹಾಕುತ್ತಿದ್ದು ಇದನ್ನು ಕೇಳಿದ ಪೊನ್ನಪ್ಪನವರಿಗೆ  ಕತ್ತಿಯಿಂದ ಹಲ್ಲೆ ನಡೆಸಿ ತಲೆಗೆ ಗಾಯಪಡಿಸಿದ್ದು,  ಈ ಸಂಬಂಧ ಸದರಿಯವರು  ಶ್ರೀಮಂಗಲ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದು, ಪೊಲೀಸರುಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
ಜೀವನಲ್ಲಿ ಜಿಗುಪ್ಸೆ, ಯುವಕನ ಆತ್ಮಹತ್ಯೆ:
       ಮದ್ಯವ್ಯಸನಿ ಯುವಕನೋರ್ವ  ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ಮಡಿಕೇರಿ ತಾಲೋಕಿನ ಐಕೊಳ ಗ್ರಾಮದಲ್ಲಿ ನಡೆದಿದೆ. ಐಕೊಳ ಗ್ರಾಮದಲ್ಲಿ ವಾಸವಾಗಿರುವ ಪಳಂಗಂಡ ಗಣೇಶರವರ ಲೈನ್ ಮನೆಯಲ್ಲಿ  ವಾಸವಾಗಿದ್ದ  ರವಿ (26) ಎಂಬ ಯುವಕ ಅತಿಯಾಗಿ ಮದ್ಯ ಸೇವನೆಮಾಡುತ್ತಿದ್ದು,  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16-08-2014 ರಂದು  ತಾನು ವಾಸವಾಗಿದ್ದ ಲೈನ್ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದು ಈ ಸಂಬಂಧ ರವಿಯವರ ಪತ್ನಿ ಶ್ರೀಮತಿ ಪ್ರೇಮರವರ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Saturday, August 16, 2014


ಕೊಡಗು ಜಿಲ್ಲೆಯಲ್ಲಿ ದಾಖಲಾದ ಅಪರಾಧ ವರದಿಗಳ ವಿವರ:

ಬೈಕ್‌ ಮತ್ತು ಲಾರಿ ಮುಖಾಮುಖಿ ಡಿಕ್ಕಿ, ಸವಾರನಿಗೆ ಗಾಯ:

     ಮೋಟಾರು ಸೈಕಲ್‌ಗೆ ಲಾರಿ ಡಿಕ್ಕಿಯಾಗಿ ಬೈಕ್‌ ಸವಾರ ಗಾಯಗೊಂಡ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಸಿಂಕೋನ ಗ್ರಾಮದಲ್ಲಿ ನಡೆದಿದೆ. ಎಂ.ಆರ್‌. ಚಂದ್ರನ್‌ಯವರು ಅರಣ್ಯ ಸಂಚಾರಿ ದಳ (ಜಾಗೃತ) ಮಡಿಕೇರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಈ ದಿನ ದಿನಾಂಕ 16-08-14 ರಂದು ಬೆಳಿಗ್ಗೆ ಮನೆಯಿಂದ ತನ್ನ ಬಾಪ್ತು ಕೆಎ-12-ಜೆ-8488 ರ ಮೋಟಾರು ಸೈಕಲನ್ನು ಚಾಲನೆ ಮಾಡಿಕೊಂಡು ಮಡಿಕೇರಿಗೆ ಬರುತ್ತಿರುವಾಗ್ಗೆ ಮಡಿಕೇರಿ ಕುಶಾಲನಗರ ಸಾರ್ವಜನಿಕ ಥಾರು ರಸ್ತೆಯಲ್ಲಿ ಬೊಯಿಕೇರಿ ಸಿಂಕೋನಾ ಎಂಬಲ್ಲಿ ಎದುರುಗಡೆಯಿಂದ ಅಂದರೆ ಮಡಿಕೇರಿ ಕಡೆಯಿಂದ ಕೆಎ-13-ಬಿ-2070 ರ ಲಾರಿಯನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಎಂ.ಆರ್‌.ಚಂದ್ರನ್‌ರವರು  ಮೋಟಾರು ಸೈಕಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   

ಸ್ಕೂಟಿಗೆ ಕಾರು ಡಿಕ್ಕಿ, ವ್ಯಕ್ತಿಗೆ ಗಾಯ: 
    ಸ್ಕೂಟಿಗೆ ಕಾರೊಂದು ಡಿಕ್ಕಿಯಾಗಿ  ಸ್ಕೂಟಿ ಸವಾರ ಗಾಯಗೊಂಡ ಘಟನೆ ವಿರಾಜಪೇಟೆ ಸಮಿಪದ ಬಿಟ್ಟಂಗಾಲದಲ್ಲಿ ನಡೆದಿದೆ. ದಿನಾಂಕ 16-08-14ರಂದು ಪಿರ್ಯಾದಿಯವರು ಅವರ ಬಾಪ್ತು ಕೆಎ.18.ವಿ. 0264ರ ಟಿ.ವಿ.ಎಸ್.ವಿಗೋ ಸ್ಕೂಟಿಯಲ್ಲಿ  ನಾಂಗಾಲದಿಂದ ವಿರಾಜಪೇಟೆ ಕಡೆಗೆ  ಬರುತ್ತಿರುವಾಗ್ಗೆ, ಬಿಟ್ಟಂಗಾಲ ಗ್ರಾಮದ ಅಂಬಟ್ಟಿಯ ಯಜ್ಞ ಟಾವರಿನ್ ಬಳಿ ಮುಖ್ಯ ರಸ್ತೆಯಲ್ಲಿ   ವಿರಾಜಪೇಟೆ ಕಡೆಯಿಂದ ಬರುತ್ತಿದ್ದ ಕೆಎ.12.ಎನ್.9420ರ ವ್ಯಾಗನಾರ್ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮ ಕಂಬೀರಡ ಬಿ..ಜಗನ್‌ರವರು ಗಾಯಗೊಂಡಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಪರಸ್ಪರ ಕಾರುಗಳ ಮುಖಾಮುಖಿ ಡಿಕ್ಕಿ:

     ಬೆಂಗಳೂರು ನಗರದ ನಿವಾಸಿ  ಮುಕ್ತಾಶ್ರೀ  ಎಂಬುವವರು  ದಿನಾಂಕ 15-08-2014 ರಂದು ತನ್ನ ತಾಯಿ ಜಯಲಕ್ಷ್ಮಿ, ಅಕ್ಕ ಚಿತ್ರಾರವರೊಂದಿಗೆ ಬೆಂಗಳೂರಿನಿಂದ  ತಮ್ಮಬಾಪ್ತು KA-41-N-2216 ರ ಮಾರುತಿ ಆಲ್ಟೋ ಕಾರಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿರುವಾಗ್ಗೆ ಸಮಯ 06-00 ಪಿ ಎಂ ಗೆ ಮದೆನಾಡು  ಎಂಬಲ್ಲಿಗೆ ತಲುಪುವಾಗ್ಗೆ ಸಂಪಾಜೆ ಕಡೆಯಿಂದ KA-04-MH-9279 ರ ಟವೆರಾ ಕಾರನ್ನು ಅದರ ಚಾಲಕ ನಾಗೇಶ್ ಎಂಬುವವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು ಕಾರಿನ ಮುಂಭಾಗದ ಎಡ ಭಾಗದ ಸೀಟಿನಲ್ಲಿ ಕುಳಿತ್ತಿದ್ದ ಮುಕ್ತಾಶ್ರೀ ತಾಯಿ ಜಯಲಕ್ಷ್ಮಿಯವರ  ತಲೆಗೆ ಪೆಟ್ಟಾಗಿದ್ದು,  ಮುಕ್ತಾಶ್ರೀ ರವರು ನೀಡಿದದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನುದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Friday, August 15, 2014


ಕುಡಿದ ಅಮಲಿನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:

     ದಿನಾಂಕ 13-8-2014 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ  ಜೇನುಕೊಲ್ಲಿ ಮರಗೋಡು ಗ್ರಾಮದ ನಿವಾಸಿ ಬಿ.ಈ. ರಮೇಶ ರವರ ಮೇಲೆ ಅದೇ ಗ್ರಾಮದ  ರಮೇಶ ಎಂಬಾತನು ಮದ್ಯವನ್ನು ಸೇವಿಸಿ  ವಿನಾ ಕಾರಣ  ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು  ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

Thursday, August 14, 2014

ಪ್ಲಾಸ್ಟಿಕ್‌ ತಯಾರಿತ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವುದನ್ನು
ನಿಷೇಧಿಸಿರುವ ಬಗ್ಗೆ.

ರಾಷ್ಟ್ರಧ್ವಜಕ್ಕೆ ಅಪಮಾನವಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳ ಮತ್ತು ಅಂಗಡಿಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರದ್ವಜವನ್ನು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭಗಳಲ್ಲಿ ಮಾರಾಟ ಮಾಡುತ್ತಿರುವುದು ಹೆಚ್ಚಾಗಿ ನಡೆಯುತ್ತಿದೆ. ಅಲ್ಲದೆ ಇದನ್ನು ಬಳಸುವುದರಿಂದ ಪರಿಸರ ಮಾಲಿನ್ಯಕ್ಕೆ ಎಡೆಮಾಡಿ ಕೊಟ್ಟಂತಾಗುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ‘Flag Code of India-2002’ and ‘Prevention of insults to National Honour Act-1971’ಚಾಲ್ತಿಯಲ್ಲಿದ್ದು, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ ನಿರ್ಮಿತ ರಾಷ್ಟ್ರದ್ವಜವನ್ನು ಯಾವುದೇ ಅಂಗಡಿ ಮುಂಗಟ್ಟು, ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ಇದನ್ನು ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಮೇಲ್ಕಂಡ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಎಲ್ಲಾ ವ್ಯಾಪಾರಸ್ಥರು ಹಾಗು ಇತರೆ ಮಾರಾಟಗಾರರು ಪ್ಲಾಸ್ಟಿಕ್ ನಿರ್ಮಿತ ರಾಷ್ಟ್ರದ್ವಜಗಳನ್ನು ಮಾರಾಟ ಮಾಡತಕ್ಕದಲ್ಲ. ಈ ಬಗ್ಗೆ ಎಲ್ಲಾ ಸಾರ್ವಜನಿಕರು ಹಾಗು ವ್ಯಾಪಾರಸ್ಥರು ಸಹಕರಿಸುವುದು.

ಜಿಲ್ಲೆಯಲ್ಲಿ ದಾಖಲಾದ ಅಪರಾಧ ಮಾಹಿತಿಗಳ ವಿವರ:

ಅಕ್ರಮ ಜೂಜಾಟ ಆರೋಪಿಗಳ ಬಂಧನ:

      ದಿನಾಂಕ 13-8-2014 ರಂದು ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಬಿ.ಆರ್‌. ಪ್ರದೀಪ್‌ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ  ಸದರಿಯವರಿಗೆ  ರಾತ್ರಿ 8-30 ಗಂಟೆಗೆ ಸಿಬ್ಬಂದಿಯೊಂದಿಗೆ  ಸೋಮವಾರಪೇಟೆ ಪಟ್ಟಣದ ಕಾನ್ವೆಂಟ್‌ ಬಾಣೆಯ ಮುನೇಶ್ವರ ದೇವಾಲಯದ ಪಕ್ಕದ ಖಾಲಿ ಜಾಗದಲ್ಲಿ  6 ಜನ ವ್ಯಕ್ತಿಗಳು ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಇಸ್ಪೀಟ್‌ ಜೂಜಾಡುತ್ತಿದ್ದವರ ಮೇಲೆ ದಾಳಿ ನಡೆಸಿ,  ಆಟಕ್ಕೆ ಬಳಸಿದ ಸುಮಾರು ರೂ. 18,900/- ಹಾಗೂ  ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್‌ ಎಲೆಗಳನ್ನು ಹಾಗು ಇನ್ನಿತರ ಸಾಮಾಗ್ರಿಗಳನ್ನು ವಶಕ್ಕೆ ತೆಗೆದುಕೊಂಡು, ಆರೋಪಿಗಳಾದ ಎಂ. ಸಿದ್ದಿಕ್‌, ಆರ್‌. ಅರುಣ್‌ ಕುಮಾರ್‌, ಸಿ. ರವಿಕುಮಾರ್‌, ಲೋಕೇಶ್‌, ಅರುಣ ಹಾಗು ಪ್ರಕಾಶ್‌ರವರನ್ನು ಬಂಧಿಸಿ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Wednesday, August 13, 2014

ಪ್ಲಾಸ್ಟಿಕ್‌ ತಯಾರಿತ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವುದನ್ನು
ನಿಷೇಧಿಸಿರುವ ಬಗ್ಗೆ.

ರಾಷ್ಟ್ರಧ್ವಜಕ್ಕೆ ಅಪಮಾನವಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳ ಮತ್ತು ಅಂಗಡಿಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರದ್ವಜವನ್ನು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭಗಳಲ್ಲಿ ಮಾರಾಟ ಮಾಡುತ್ತಿರುವುದು ಹೆಚ್ಚಾಗಿ ನಡೆಯುತ್ತಿದೆ. ಅಲ್ಲದೆ ಇದನ್ನು ಬಳಸುವುದರಿಂದ ಪರಿಸರ ಮಾಲಿನ್ಯಕ್ಕೆ ಎಡೆಮಾಡಿ ಕೊಟ್ಟಂತಾಗುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ‘Flag Code of India-2002’ and ‘Prevention of insults to National Honour Act-1971’ಚಾಲ್ತಿಯಲ್ಲಿದ್ದು, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ ನಿರ್ಮಿತ ರಾಷ್ಟ್ರದ್ವಜವನ್ನು ಯಾವುದೇ ಅಂಗಡಿ ಮುಂಗಟ್ಟು, ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ಇದನ್ನು ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಮೇಲ್ಕಂಡ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಎಲ್ಲಾ ವ್ಯಾಪಾರಸ್ಥರು ಹಾಗು ಇತರೆ ಮಾರಾಟಗಾರರು ಪ್ಲಾಸ್ಟಿಕ್ ನಿರ್ಮಿತ ರಾಷ್ಟ್ರದ್ವಜಗಳನ್ನು ಮಾರಾಟ ಮಾಡತಕ್ಕದಲ್ಲ. ಈ ಬಗ್ಗೆ ಎಲ್ಲಾ ಸಾರ್ವಜನಿಕರು ಹಾಗು ವ್ಯಾಪಾರಸ್ಥರು ಸಹಕರಿಸುವುದು.

ಜಿಲ್ಲೆಯಲ್ಲಿ ದಾಖಲಾದ ಅಪರಾಧ ಮಾಹಿತಿಗಳ ವಿವರ:

ಅಕ್ರಮ ಜೂಜಾಟ, ಆರೋಪಿಗಳ ಬಂಧನ:
      ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಂಡಂಗಾಲ ರುದ್ರಗುಪ್ಪೆ ಗ್ರಾಮದಲ್ಲಿ ಅಕ್ರಮವಾಗಿ ಕೆಲ ವ್ಯಕ್ತಿಗಳು ಇಸ್ಪೀಟ್‌ ಜೂಜಾಟ ಆಡುತ್ತಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸ್‌ ಉಪನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನ ಮೇರೆಗೆ ಸದರಿಯವರು ಸಿಬ್ಬಂದಿಯೊಂದಿಗೆ ರುದ್ರಗುಪ್ಪೆ ಗ್ರಾಮದಲ್ಲಿರುವ ಬಲ್ಲಾಡಿಚಂಡ ಸೋಮಯ್ಯ ಎಂಬವರಿಗೆ ಸೇರಿದ ಅಂಗಡಿಯ ಒತ್ತಾಗಿ ಇರುವ ಖಾಲಿ ಜಾಗದಲ್ಲಿ 12 ಜನ ವ್ಯಕ್ತಿಗಳು ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೆ ಹಣವನ್ನು ಪಣವಾಗಿಟ್ಟು ಇಸ್ಪೀಟ್‌ ಜೂಜಾಟ ಆಡುತ್ತಿದ್ದು, ಸದರಿಯವರ ಮೇಲೆದಾಳಿ ಮಾಡಿ ಜೂಜಾಡಲು ಉಪಯೋಗಿಸಿದ ಒಟ್ಟು 9745/- ರೂಪಾಯಿ ಹಣವನ್ನು ಹಾಗು ಸದರಿಯವರು ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನುಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದು ಅಲ್ಲದೆ ಜೂಜಾಟದಲ್ಲಿ ತೊಡಗಿದ ವ್ಯಕ್ತಿಗಳಾದ ಕಂಡಂಗಾಲ ಗ್ರಾಮದ ನಿವಾಸಿಗಳಾದ (1) ಕೊಂಗಂಡ ಚಂಗಪ್ಪ, (2) ಎಂ.ಎಸ್. ಇಸ್ಮಾಯಿಲ್, ತಂದೆ: ಸಾದಲಿ, (3) ಅಟ್ರಂಗಡ ಧನು @ ಮಾದಯ್ಯ, ತಂದೆ:ಸುಬ್ಬಯ್ಯ, (4) ಪಿ.ಕೆ. ವಿಜು, ತಂದೆ: ಕೃಷ್ಣನ್ ಕುಟ್ಟಿ, ಬಿಟ್ಟಂಗಾಲ ಗ್ರಾಮ, (5)ಎಂ.ಎ.ರಫೀಕ್, ತಂದೆ: ಹಸನ್, (6) ಅಟ್ರಂಗಡ ಉತ್ತಯ್ಯ, @ ಪುನೀತ್,ತಂದೆ: ಪೂಣಚ್ಚ, (7)ಎಂ.ಎ.ಜಕ್ರೀಯ, ತಂದೆ: ಎರ್ಮು, (8) ಬಲ್ಲಾಡಿಚಂಡ ರವಿ ಸೋಮಯ್ಯ, ತಂದೆ: ಉತ್ತಯ್ಯ, (9) ಅಟ್ರಗಂಡ ರೋಶನ್, (10) ಸುಳ್ಳಿಮಾಡ ಉಮೇಶ್ (11) ಸೈಭತ್ ಮತ್ತು (12) ಕೊಟ್ರಂಡ ತವಿ ರವರುಗಳನ್ನು ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  

 ಅಕ್ರಮ ದನದ ಮಾಂಸ ಮಾರಾಟ, ವ್ಯಕ್ತಿಯ ಬಂಧನ:
     ಸಿದ್ದಾಪುರ ಪೊಲೀಸ್‌ ಠಾಣಾ ಪಿ.ಎಸ್‌.ಐ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸದರಿಯವರು ಈ ದಿನ ದಿನಾಂಕ 13-8-2014 ರಂದು ಬೆಳಿಗ್ಗೆ 9-15 ಗಂಟೆಗೆ ಸಿಬ್ಬಂದಿಯವರೊಂದಿಗೆ ವಿರಾಜಪೇಟೆ ತಾಲೋಕು ಪಾಲಿಬೆಟ್ಟ ವಿ.ಎಸ್.ಎಸ್.ಎನ್ ಬ್ಯಾಂಕಿನ ಮುಂಬಾಗದಲ್ಲಿ ಪಾಲಿಬೆಟ್ಟ ನಿವಾಸಿ ಎಂ ಹಮೀದ್, ತಂದೆ ಪೌತಿ ಅಬ್ದುಲ್‌ಖಾದರ್,ಪ್ರಾಯ 40 ವರ್ಷ, ಇವರು ತಮ್ಮ ಬಾಪ್ತು ಸ್ಕೂಟರ್‌ನಲ್ಲಿ ಹುಣಸೂರಿನ ಮಾರ್ಕೆಟ್ ನಿಂದ ಸುಮಾರು 40 ಕೆ ಜಿ ದನದ ಮಾಂಸವನ್ನು ತಂದು ಸದರಿ ಮಾಂಸವನ್ನು ಪಾಲಿಬೆಟ್ಟ ನಗರದಲ್ಲಿ ಹೆಚ್ಚಿನ ಲಾಭಕ್ಕಾಗಿ ಜನರಿಗೆ ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೆ ಮಾರಾಟ ಮಾಡಲು ನಿಂತಿರುವುದನ್ನು ಪತ್ತೆ ಹಚ್ದಿ ಸದರಿ ವ್ಯಕ್ತಿಯನ್ನು ಪೊಲೀಸ್‌ ವಶಕ್ಕೆ ತೆಗೆದುಕೊಂಡು ಮಾರಾಟ ಮಾಡಲು ತಂದ ಮಾಂಸ ಹಾಗು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್‌ನ್ನು ಸ್ವಾಧೀನಪಡಿಸಿಕೊಂಡು ಈ ಸಂಬಂಧ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

 

 

 

 

Tuesday, August 12, 2014

ಪ್ಲಾಸ್ಟಿಕ್‌ ತಯಾರಿತ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವುದನ್ನು
ನಿಷೇಧಿಸಿರುವ ಬಗ್ಗೆ.

ರಾಷ್ಟ್ರಧ್ವಜಕ್ಕೆ ಅಪಮಾನವಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳ ಮತ್ತು ಅಂಗಡಿಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರದ್ವಜವನ್ನು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭಗಳಲ್ಲಿ ಮಾರಾಟ ಮಾಡುತ್ತಿರುವುದು ಹೆಚ್ಚಾಗಿ ನಡೆಯುತ್ತಿದೆ. ಅಲ್ಲದೆ ಇದನ್ನು ಬಳಸುವುದರಿಂದ ಪರಿಸರ ಮಾಲಿನ್ಯಕ್ಕೆ ಎಡೆಮಾಡಿ ಕೊಟ್ಟಂತಾಗುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ‘Flag Code of India-2002’ and ‘Prevention of insults to National Honour Act-1971’ಚಾಲ್ತಿಯಲ್ಲಿದ್ದು, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ ನಿರ್ಮಿತ ರಾಷ್ಟ್ರದ್ವಜವನ್ನು ಯಾವುದೇ ಅಂಗಡಿ ಮುಂಗಟ್ಟು, ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ಇದನ್ನು ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಮೇಲ್ಕಂಡ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಎಲ್ಲಾ ವ್ಯಾಪಾರಸ್ಥರು ಹಾಗು ಇತರೆ ಮಾರಾಟಗಾರರು ಪ್ಲಾಸ್ಟಿಕ್ ನಿರ್ಮಿತ ರಾಷ್ಟ್ರದ್ವಜಗಳನ್ನು ಮಾರಾಟ ಮಾಡತಕ್ಕದಲ್ಲ. ಈ ಬಗ್ಗೆ ಎಲ್ಲಾ ಸಾರ್ವಜನಿಕರು ಹಾಗು ವ್ಯಾಪಾರಸ್ಥರು ಸಹಕರಿಸುವುದು.

ಜಿಲ್ಲೆಯಲ್ಲಿ ದಾಖಲಾದ ಅಪರಾಧ ಮಾಹಿತಿಗಳ ವಿವರ:

ಬೀಗ ಮುರಿದು ನಗದು ಕಳವು:

      ಮನೆಯ ಬೀಗ  ಒಡೆದು  ನಗದು ಕಳ್ಳತನ ಮಾಡಿದ ಘಟನೆ  ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದಲ್ಲಿ ನಡೆದಿದೆ.  ಹೊದ್ದೂರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮಟಿ.ಎಸ್‌. ಶೈಲ ಎಂಬವರು ದಿನಾಂಕ 8-8-2014 ರಂದು ತಮ್ಮ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು, ಈ ಸಮಯದಲ್ಲಿ ಮನೆಗೆ ಹಾಕಿಕ ಬೀಗವನ್ನು ಒಡೆದು ಒಳ ಪ್ರವೇಶಿಸಿ 9000/- ರೂಗಳನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ: 

     ದಿನಾಂಕ  12-8-2014 ರಂದು ಬೆಳಗಿನ ಜಾವ  ಶನಿವಾರಸಂತೆ ಠಾಣಾ ವ್ಯಾಪ್ತಿಯ ಹುಲುಸೆ ಗ್ರಾಮದ ನಿವಾಸಿ ಹೆಚ್‌.ಇ. ಸುಜನ್‌ರವರು ತಮ್ಮ ಸ್ನೇಹಿತ ಪ್ರೀತಮ್‌ನಂದಿಗೆ  ಹುಲುಸೆ ಗ್ರಾಮದ ತಮ್ಮ ಮನೆಗೆ  ಬೈಕ್‌ನಲ್ಲಿ  ಬರುತ್ತಿರುವಾಗ  ಅದೇ ಗ್ರಾಮದವರಾದ ಭರತ್‌ ಹಾಗು ಗುರು ಎಂಬುವರು  ಸುಜನ್‌ರವರ ಮೋಟಾರ್‌ಸೈಕಲನ್ನು  ತಡೆದು ನಿಲ್ಲಿಸಿ ಭೂವಿವಾದದ ಹಿನ್ನೆಲೆಯಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು  ಕತ್ತಿಯಿಂದ ತಲೆಗೆ ಕಡಿದು  ಗಾಯಪಡಿಸಿ ಕಬ್ಬಿಣದ ರಾಡಿನಿಂದ ಹಲ್ಲೆನಡೆಸಿ ನೋವನ್ನುಂಟು ಮಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು  ಶನಿವಾರಸಂತೆ ಪೊಲೀಸರಿಗೆ ದೂರನ್ನುನೀಡಿದ್ದು, ಅದರಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ  ತನಿಖೆ ಕೈಗೊಂಡಿರುತ್ತಾರೆ.   

ಆಟೋ ರಿಕ್ಷಾ ಚಾಲಕನ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ:

ದಿನಾಂಕ; 11-08-14ರಂದು ಪಿ.ಟಿ. ಪಿಲೀಪ್ಸ್ ಎಂಬವರು ತಮ್ಮಆಟೋ ರಿಕ್ಷಾ ನಂ. ಕೆಎ.12.ಎ.7767ರಲ್ಲಿ ತನ್ನ ಮಗಳು ಎಂಜಲೀಸ್ ರವರನ್ನು ಜೊತೆಯಲ್ಲಿ ಕರೆದುಕೊಂಡು  ಆಟೋ  ಚಾಲನೆ ಮಾಡಿಕೊಂಡು ಪಚ್ಚಾಟ್  ಎಂಬ ಸ್ಥಳಕ್ಕೆ ಬಾಡಿಗೆಗೆ  ಹೋಗಿ ವಾಪಾಸ್ಸು ಬರುತ್ತಿರು ವಾಗ್ಗೆ, ಎಡೂರು ಬಳಿ ಇಬ್ಬರು ವ್ಯಕ್ಯಿಗಳು ಆಟೋ ರಿಕ್ಷಾಕ್ಕೆ ಹತ್ತಿ ಕಾವಾಡಿಗೆ ಬಿಡುವಂತೆ ತಿಳಿಸಿದ ಮೇರೆ ಪಿ.ಟಿ. ಪಿಲೀಪ್ಸ್ರವರು  ಅವರನ್ನು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಬರುತ್ತಿ ರುವಾಗ್ಗೆ, ಕಾವಾಡಿ ಗ್ರಾಮದ ಕುಂಬೇರಿ ಜಂಕ್ಷನ್ ಬಳಿ ಆಟೋದಲ್ಲಿದ್ದ ಇಬ್ಬರು ವ್ಯಕ್ತಿಗಳು ಆಟೋ ರಿಕ್ಷಾವನ್ನು ನಿಲ್ಲಿಸುವಂತೆ ತಿಳಿಸಿದ್ದು ಅದರಂತೆ ಆಟೋ ರಿಕ್ಷಾವನ್ನು ನಿಲ್ಲಿಸಿದಾಗ ಅಲ್ಲೇ ರಸ್ತೆಯ ಬದಿಯಲ್ಲಿ ನಿಂತಿದ್ದ ಒಬ್ಬ ವ್ಯಕ್ತಿಯು ಪಿ.ಟಿ. ಪಿಲೀಪ್ಸ್ ಯವರನ್ನು ಆಟೋದಿಂದ ಹೊರಗೆ ಎಳೆದು ದೊಣ್ಣೆಯಿಂದ ತಲೆಗೆ ಹೊಡೆದು ರಕ್ತ ಗಾಯಪಡಿಸಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.