Tuesday, September 30, 2014

ಮರದ ಕೊಂಬೆ ಬಿದ್ದು ಮಹಿಳೆಯ ದುರ್ಮರಣ:
             ತೋಟದಲ್ಲಿ ಊಟ ಮಾಡುತ್ತಿದ್ದ ಮಹಿಳೆಯ ಮೇಲೆ ಮರದ ಕೊಂಬೆ ಅಪ್ಪಳಿಸಿ ದುರ್ಮರಣಕ್ಕೀಡಾದ ಘಟನೆ ಮಡಿಕೇರಿ ತಾಲೋಕು ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ. ಬಿಳಿಗೇರಿ ಗ್ರಾಮದದಲ್ಲಿ ವಾಸವಾಗಿರುವ ಬಿ.ಬಿ. ಸೋಮಣ್ಣ ಹಾಗೂ ಅವರ ಪತ್ನಿ ಲೀಲಾವತಿಯವರು ದಿನಾಂಕ 29-09-2014 ರಂದು ಬೆಳಿಗ್ಗೆ ಎಂದಿನಂತೆ ಇಬ್ಬರೂ ಕಣ್ಣಚಂಡ ಗಿರೀಶ್‌ ಎಂಬವರ ತೋಟದಲ್ಲಿ ಕಾಡು ಕಡಿಯುವ ಕೆಲಸಕ್ಕೆ ಹೋಗಿದ್ದು ಸಮಯ 12-45 ಗಂಟೆಗೆ ಊಟ ಮಾಡುವ ಸಲುವಾಗಿ ಇಬ್ಬರೂ ಊಟ ಮಾಡುತ್ತಿರುವಾಗ್ಗೆ ತೋಟದ ಒಳಗಡೆ ಇದ್ದ ಒಂದು ದೊಡ್ಡ ಮರ ಅರ್ಧದಿಂದ ಮುರಿದು ಪಕ್ಕದಲ್ಲಿದ್ದ ಇನ್ನೊಂದು ಮರದ ಮೇಲೆ ಬಿದ್ದು ಆ ಮರವು ಬೇರು ಸಮೇತ ಬಿದ್ದಾಗ ಮರದ ತುದಿಯ ಕೊಂಬೆಯು ಊಟ ಮಾಡಲು ಕುಳಿತ್ತಿದ್ದ ನೀಲಾವತಿಯವರ ತಲೆಗೆ ಬಡಿದು ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿತ್ತಾರೆ. 

ಕರ್ತವ್ಯದ ಒತ್ತಡದಿಂದ ಶಾಲಾ ಮುಖ್ಯೋಪಾದ್ಯಾಯರೊಬ್ಬರ ಆತ್ಮಹತ್ಯೆ 
              ಶ್ರೀ ಗಂಗಾಧರ, ಮುಖ್ಯೋಪಾದ್ಯಾಯರು. ವಾಸ, ಕುಂದಚೇರಿ ಗ್ರಾಮ ಇವರು ತಲಕಾವೇರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದು. ಇವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29-9-2014 ರಂದು ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, 2 ವರ್ಷಗಳ ಹಿಂದೆ ಇವರು ಕಾನಕಂಡಿ ಶಾಲೆಗೆ ವರ್ಗಾವಾಗಿ ಅವರ ಜಾಗಕ್ಕೆ ಯಾರು ಬಾರದ ಕಾರಣ ಇವರನ್ನು ತಲಕಾವೇರಿ ಶಾಲೆಯಲ್ಲೇ ಇರಿಸಿಕೊಂಡಿದ್ದು ಇದು ಅವರ ಮಾನಸಿಕ ಒತ್ತಡಕ್ಕೆ ಕಾರಣವಾಗಿರ ಬಹುದೆಂದು ಅವರ ಪತ್ನಿ ಪದ್ಮಾವತಿಯವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ, ಕೊಲೆ ಬೆದರಿಕೆ:
          ಭಾಗಮಂಡಲ ಠಾಣಾ ವ್ಯಾಪ್ತಿಯ ದೊಡ್ಡಪುಲಿಕೋಟು ಗ್ರಾಮದಲ್ಲಿ ನೆಲೆಸಿರುವ ಶ್ರೀಮತಿ ಎಂ.ಎಂ. ಜಯಲಕ್ಷ್ಮಿ ಎಂಬವರ ಮೇಲೆ ಅದೇ ಗ್ರಾಮದವರಾದ ಲೀಲಾವತಿ ಹಾಗುಆಕೆಯ ಗಂಡ ಕರುಂಬಯ್ಯ ಎಂಬವರು ಎಂ.ಎಂ. ಜಯಲಕ್ಷ್ಮಿಯವರ ಮನೆಯಲ್ಲಿದ್ದ ಗಾದ್ರೇಜ್‌ ಗ್ಲಾಸ್‌ ಒಡೆದುಹೋದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು ಅಲ್ಲದೆ ಕೋವಿಯಿಂದ ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುವ ಬಗ್ಗೆ ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

ಅಕ್ರಮ ಸಾಗಾಟವಾಗುತ್ತಿದ್ದ ಅನ್ನಭಾಗ್ಯ ಅಕ್ಕಿ ವಶ, ಪ್ರಕರಣ ದಾಖಲು:
              ವಿರಾಜಪೇಟೆ ತಾಲೋಕು,ಕೋತೂರು ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿರುವ ವಿ.ಎಸ್ ಪರಮೇಶ್‌ ಎಂಬವರು ಎ.ಕೆ ರಾಘವೆಂದ್ರ. ಎಂಬವರೊಂದಿಗೆ ದಿನಾಂಕ 29-9-2014 ರಂ ದು ಕೆಎ 12 ಎ 93 ಸಂಖ್ಯೆಯ ಟಾಟಾ ಎಸ್.ವಾಹನದಲ್ಲಿ ಅನ್ನಭಾಗ್ಯ ಯೋಜನೆಯ 28 ಚೀಲ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದನ್ನು ವಿರಾಜಪೇಟೆಯ ಆಹಾರ ನಿರೀಕ್ಷಕರಾದ ಶ್ರೀ ಶಿವನಂಜಯ್ಯ ರವರು ಪೊನ್ನಂಪೇಟೆ ಪೊಲೀಸ ರೊಂದಿಗೆ ಪೊನ್ನಂಪೇಟೆ ಜೂನಿಯರ್‌ ಕಾಲೇಜ್‌ ಜಂಕ್ಷನ್‌ನಲ್ಲಿ ತಡೆದು ಆರೋಪಿಗಳನ್ನು ಸ್ವತ್ತಿನೊಂದಿಗೆ ವಶಕ್ಕೆ ತೆಗೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Monday, September 29, 2014

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

    ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 27-9-2014 ರಂದು ರಾತ್ರಿ ವೇಳೆಯಲ್ಲಿ ಗೋಣಿಕೊಪ್ಪ ನಗರದ ಕೊಲಂಬಿಯಾ ಬಾರ್‌ ಮುಂದುಗಡೆ, ಸದರಿ ಬಾರನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್‌.ಕೆ. ದರ್ಶನ್‌ ಎಂಬವರನ್ನು ಕಾರ್ಮಾಡು ಗ್ರಾಮದ ನಿವಾಸಿ ಮುಟ್ಟಾಟಿರ ವಿಕಾಸ ಹಾಗು ಆತನ ಸಂಗಡಿಗ ವ್ಯಕ್ತಿ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದುಬೈದು, ಬೀಯರ್‌ಬಾಟಲ್‌ ಮತ್ತು ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿ ನೋವನ್ನುಂಟು ಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ಎನ್‌.ಕೆ. ದರ್ಶ್‌ನ್‌ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ.

ಅಕ್ರಮ ಜೂಜು ಅಡ್ಡೆ ಮೇಲೆ ಪೊಲೀಸ್‌ ದಾಳಿ, 7 ಮಂದಿ ಬಂಧನ:

   ಅಕ್ರಮವಾಗಿ ಜೂಜಾಡುತ್ತಿ ವ್ಯಕ್ತಿಗಳ ಮೇಲೆ ಶನಿವಾರಸಂತೆ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ದಿನಾಂಕ 28-9-2014 ರಂದು ಅಪರಾಹ್ನ 2-30 ಗಂಟೆಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಶ್ರೀ ನಾಗಪ್ಪನವರು ಸಿಬ್ಬಂದಿಯೊಂದಿಗೆ ಶನಿವಾರಸಂತೆ ಪೊಲೀಸ್‌ ಠಾಣಾ ಸರಹದ್ದಿನ ಕೆರೆಹಳ್ಳಿ ಗ್ರಾಮದಗ್ರಾಮದ ನಿವಾಸಿ ಚಂದ್ರಪ್ಪಎಂಬವರ ವಾಸದ ಮನೆಗೆ ದಾಳಿ ನಡೆಸಿ, ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಇಸ್ಪೀಟ್‌ ಎಲೆಗಳನ್ನು ಬಳಸಿ ಜೂಜಾಡುತ್ತಿದ್ದ ವ್ಯಕ್ತಿಗಳಾದ (1) ಕೆ.ಸಿ. ಮಹೀಂದ್ರ, ಕೆರೆಹಳ್ಳಿ, (2) ಎಂ.ಎ. ಶಾಹಿನ್‌, ನಂದೀಗುಂದ ಗ್ರಾಮ, (3) ಎಸ್‌,ಎಂ, ಕುಮಾರ, ಸಂಪಿಗೆದಾಳು,(4) ವಿ.ಎಸ್‌. ರಹೀಂ, ಒಡೆಯನಪುರ ಗ್ರಾಮ, (5) ಸತೀಶ, ಬಿದರೂರು, (6) ಕೆ.ಇ. ಕೆಂಪ, ಕೆಳಗಳಲೆ ಗ್ರಾಮ, (7) ಶಿವಕುಮಾರ್, ಬೆಳ್ಳಾರಳ್ಳಿ ಗ್ರಾಮ ಮತ್ತು (8) ಪ್ರದೀಪ್‌, ನಂದೀಗುಂದ ಗ್ರಾಮ ಇವರುಗಳನ್ನುಬಂಧಿಸಿ ಜೂಜಾಟಕ್ಕೆ ಉಪಯೋಗಿಸಿದ ಸ್ವತ್ತುಗಳನ್ನು ಮತ್ತು ರೂ; 60,60,740/- ಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:

     ದಿನಾಂಕ: 28-09-14ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಣ್ಣಂಗಾಲ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಕಾವೇರಿ ಎಂವರ ಗಂಡ ಬೋಳಿಯಾ (62) ವಿಪರೀತ ಮದ್ಯಪಾನ ಮಾಡಿಕೊಂಡು ಬಂದು ಪಿರ್ಯಾದಿ ಯೊಂದಿಗೆ ತಾನು ಬದುಕುವುದಿಲ್ಲ ವೆಂದು ಹೇಳುತ್ತಿದ್ದು, ರಾತ್ರಿ ಮನೆಯ ಅಂಗಳದ ಕೌಕೋಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆ ನೇಣು ಬಿಗಿದು ವ್ಯಕ್ತಿಯ ಆತ್ಮಹತ್ಯೆ:

   ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಭಗವತಿ ಕಾಲೋನಿಯಲ್ಲಿ ವಾಸವಾಗಿರುವ 60 ವರ್ಷದ ನಂಜ ಎಂಬ ವ್ಯಕ್ತಿ ತಾನು ವಾಸವಾಗಿದ್ದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆಯೇ ಆತ್ಮಹತ್ಯೆಗೆ ಕಾರಣವಾಗಿದೆಎಂದು ಹೇಳಲಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

Sunday, September 28, 2014

ಪರಸ್ಪರ ಕಾರು ಡಿಕ್ಕಿ, ಐವರಿಗೆ ಗಾಯ
        ಕಾರುಗಳೆರಡು ಪರಸ್ಪರ ಡಿಕ್ಕಿಯಾಗಿ ಐವರಿಗೆ ಗಾಯಗಳಾದ ಘಟನೆ ಮಡಿಕೇರಿ ನಗರದ ಮಂಗಳೂರು ರಸ್ತೆಯಲ್ಲಿ ಸಂಭವಿಸಿದೆ. ದಿನಾಂಕ 27/09/2014ರ ಸಂಜೆ ವೇಳೆ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ನಿವಾಸಿ ಸಂಪತ್ ಕುಮಾರ್ ಎಂಬವರು ಅವರ ಸಂಬಂಧಿಕರಾದ ರಜತ್, ಸಂತೋಷ್, ಪ್ರದೀಪ್ ಮತ್ತು ದೇವರಾಜು ಎಂಬವರೊಂದಿಗೆ ಅವರ ಕಾರು ಕೆಎ-11-ಎಂ-5776ರಲ್ಲಿ ಮಂಗಳೂರಿಗೆ ಹೋಗುತ್ತಿರುವಾಗ ನಗರದ ಮಂಗಳೂರು ರಸ್ತೆಯಲ್ಲಿ ಎದುರುಗಡೆಯಿಂದ ಕೆಎ-09-ಕೆಎ-09-ಸಿ-0735ರ ಕಾರನ್ನು ಅದರ ಚಾಲಕ ರಾಘವೇಂಧ್ರರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಂಪತ್‌ಕುಮಾರ್‌ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸಂಪತ್‌ರವರ ಕಾರಿನಲ್ಲಿದ್ದ ರಜತ್, ಸಂತೋಷ್, ಪ್ರದೀಪ್ ಹಾಗೂ ರಾಘವೇಂದ್ರರವರ ಕಾರಿನಲ್ಲಿದ್ದ ಆರತಿ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ಮಹಿಳೆಯ ಮೇಲೆ ಹಲ್ಲೆ
         ದಾರಿ ತಡೆದು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆ ಬಳಿಯ ಕಾಟ್ರಕೊಲ್ಲಿ ಎಂಬಲ್ಲಿ ನಡೆದಿದೆ. ದಿನಾಂಕ 26/9/20114 ರಂದು ಕಾಟ್ರಕೊಲ್ಲಿ ನಿವಾಸಿ ಚಿಕ್ಕಿ ಎಂಬ ಮಹಿಳಯು ಕಾಟ್ರಕೊಲ್ಲಿ ಗ್ರಾಮದ ಐಮದೆ ಕಾಕ ರವರ ಅಂಗಡಿಗೆ ಬಂದು ಮಕ್ಕಳಿಗೆ ತಿಂಡಿಯನ್ನು ತೆಗೆದುಕೊಂಡು ಮನೆಗೆ ಬರುತ್ತೀರುವಾಗ ರಂಜಾಕ್ ರವರ ಮನೆಯ ಮುಂದಿನ ರಸ್ತೆಯಲ್ಲಿ ರಂಜಾಕ್ ಮತ್ತು ಹಸೀನಾ ರವರು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗದು ದೊಣ್ಣೆಯಿಂದ ಚಿಕ್ಕಿಯ ಮೇಲೆ ತೀವ್ರತರದ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪತಿಯಿಂದ ಪತ್ನಿ ಮೇಲೆ ದೌರ್ಜನ್ಯ:
      ಪತಿ  ಪತ್ನಿಯ ಮೇಲೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿ  ಕೊಲೆ ಬೆದರಿಕೆ ಹಾಕಿದ ಘಟನೆ ಸಿದ್ದಾಪುರ ಹತ್ತಿರದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ.  ಶ್ರೀಮತಿ ರುಕ್ಸಾನ ಎಂಬ ಮಹಿಳೆ 7 ವರ್ಷಗಳ ಹಿಂದೆ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶಾಲಿ ಎಂಬವರನ್ನು ಮದುವೆಯಾಗಿದ್ದು ಈಗ್ಗೆ 2 ವರ್ಷಗಳಿಂದ ಸಂಸಾರದಲ್ಲಿ ಸಣ್ಣಪುಟ್ಟ ವಿಚಾರದಲ್ಲಿ ಶಾಲಿಯವರು ಜಗಳ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಾ ಬರುತ್ತಿದ್ದು ದಿನಾಂಕ 27/09/2014 ರಂದು ಸಮಯ 17.30 ಗಂಟೆಗೆ ಶ್ರೀಮತಿ ರುಕ್ಸಾನ ರವರವರ ಮೇಲೆ ವಿನಾಕಾರಣ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ಲಾಸ್ಟಿಕ್ ಪೈಪಿನಿಂದ ಪತ್ನಿ ಶ್ರೀಮತಿ ರುಕ್ಸಾನರವರ ಹೊಟ್ಟೆಗೆ, ಬೆನ್ನಿಗೆ, ತೊಡೆಯ ಭಾಗಗಳಿಗೆ ಹಲ್ಲೆ ನಡೆಸಿ ದೈಹಿಕ ಹಿಂಸೆ ನೀಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ಶ್ರೀಮತಿ ರುಕ್ಸಾನರವರು ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೋಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

Saturday, September 27, 2014

ಅಕ್ರಮ ದನದ ಮಾಂಸ ಮಾರಾಟಕ್ಕೆ ಯತ್ನ, ಪ್ರಕರಣ ದಾಖಲು:

     ಅಕ್ರಮ ಗೋಮಾಂಸ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಗಳ ಮೇಲೆ ಪೊಲೀಸ್‌ ದಾಳಿ ನಡೆಸಿದ ಘಟನೆ ವಿರಾಜಪೇಟೆ ಸಮೀಪದ ಕಡಂಗ ಗ್ರಾಮದಲ್ಲಿ ನಡೆದಿದೆ. ದಿನಾಂಕ: 27-09-14ರಂದು  ಕೆ.ಕೆ. ರಘು, ಪಿ.ಎಸ್.ಐ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ಕಡಂಗ ಗ್ರಾಮದ ಕಲ್ಲುಮೊಟ್ಟೆ ಖಾದರ್ ಎಂಬುವವರ ಕಾಫಿ ತೋಟದಲ್ಲಿ ಕೆಲವು ವ್ಯಕ್ತಿಗಳು ಸೇರಿಕೊಂಡು ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಒಂದು ಎತ್ತನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಲು ತಯಾರಿ ಮಾಡುತ್ತಿದವರ ಮೇಲೆ ದಾಳಿ ನಡೆಸಿ ಸುಮಾರು 48 ಕೆ.ಜಿ. ದನದ ಮಾಂಸವನ್ನು ಹಾಗು ಇತರೆ ವಸ್ತುಗಳನ್ನು  ಅಮಾನತ್ತುಪಡಿಸಿಕೊಂಡು ಆರೋಪಿಗಳಾದ ಡಿ.ರಿಯಾಜ್, ತಂದೆ: ಬಷೀರ್, ಪ್ರಾಯ: 24ವರ್ಷ, ಕೂಲಿ ಕೆಲಸ, ವಾಸ: ಕಡಂಗ, ಅರಪಟ್ಟು ಗ್ರಾಮ, ವಿರಾಜಪೇಟೆ ತಾಲ್ಲೂಕು. ಹಾಗು (2) ಎ.ರಶೀಕ್, ತಂದೆ: ಪಿ.ಹೆಚ್.ಅಬ್ದುಲ್ಲ, ಪ್ರಾಯ: 19ವರ್ಷ, ಕೂಲಿ ಕೆಲಸ, ವಾಸ: ಕಡಂಗ, ಅರಪಟ್ಟು ಗ್ರಾಮ, ವಿರಾಜಪೇಟೆ ತಾಲ್ಲೂಕು ಇವರ ವಿರುದ್ಧ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಫೇಸ್‌ಬುಕ್‌ ದುರ್ಬಳಕೆ ಪ್ರಕರಣ ದಾಖಲು:   
      ಇಂಜಿನಿಯರ್‌ ವಿದ್ಯಾರ್ಥಿನಿಯೊಬ್ವರ ಫೇಸ್‌ ಬುಕ್‌ ದುರ್ಬಳಕೆ ಮಾಡಿ ಅಶ್ಲೀಲ ಭಾವಚಿತ್ರಗಳನ್ನು ಅಪ್‌ಲೋಡ್‌ ಮಾಡಿದ ಬಗ್ಗೆ ದೂರು ಪೊನ್ನಂಪೇಟೆ ಠಾಣೆಯಲ್ಲಿ  ದಾಖಲಾಗಿದೆ. ಪೊನ್ನಂಪೇಟೆ ಠಾಣಾ ಸರಹದ್ದಿನ ಕಿರುಗೂರು ಗ್ರಾಮದ ನಿವಾಸಿ ಕು: ಹರ್ಷಿತ್ ತಿಮ್ಮಯ್ಯ ಎಂಬವರು ಪೊನ್ನಂಪೇಟೆ ಕೂರ್ಗ್ ಇನ್ಸ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜಿನಲ್ಲಿ 2 ನೇ ವರ್ಷದ ಇಂಜೀನಿಯರಿಂಗ್ ವಿಬಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು 2011 ನೇ ಇಸವಿಯಲ್ಲಿ ಪೆಸ್ ಬುಕ್ ನಲ್ಲಿ ಖಾತೆ ಹೊಂದಿದ್ದು ಸದರಿಯವರ ಖಾತೆಯನ್ನು ಯಾರೋ ದುಷ್ಕರ್ಮಿಗಳು ದುರುಪಯೋಗ ಪಡಿಸಿಕೊಂಡು ಅದರಲ್ಲಿ ಅಶ್ಲೀಲ ಪದಗಳಾದ Sex Worker ಮತ್ತು ಅಶ್ಲೀಲ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದು ಅಲ್ಲದೆ Profile Picture ಮತ್ತು Cover Photo ಗಳನ್ನು ಬದಲಾಯಿಸಿದ್ದು ಅದರ ಬದಲಿಗೆ ಅಶ್ಲೀಲ ಚಿತ್ರವಿರುವ Profile Picture ಮತ್ತು Cover Photo ಗಳನ್ನು ಅಪ್ ಲೋಡ್ ಮಾಡಿ ದುರ್ಬಳಕೆ ಮಾಡಿರುವ ಬಗ್ಗೆ ನೀಡಿದದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 
ಲಾರಿ ಅಪಘಾತ ಇಬ್ಬರಿಗೆ ಗಾಯ:
     ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆಬದಿಯಲ್ಲಿ ಮಗುಚಿಬಿದ್ದು ಇಬ್ಬರಿಗೆ ಗಾಯಗಳಾದ ಘಟನೆ ಮಡಿಕೇರಿ ಹತ್ತಿರದ ಮೇಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 26/09/2014 ರಂದು ಸಮಯ 01.30 ಪಿ.ಎಂ.ಗೆ ಕೆಅ-41-5882 ರ ಲಾರಿ ಚಾಲಕ ಧರ್ಮ ಎಂಬವರು ಅಕ್ಕಿ ಚೀಲಗಳನ್ನು ತುಂಬಿದ ಲಾರಿಯನ್ನು ಮಡಿಕೇರಿಯಿಂದ ಮೂರ್ನಾಡು ಕಡೆಗೆ ಚಾಲಿಸಿಕೊಂಡು ಹೋಗುತ್ತಿರುವಾಗ ಸಮಯ 02.00 ಪಿ.ಎಂ.ಗೆ ಮೆಕೇರಿಯ ಬಳಿ ಚಾಲಕ ಧರ್ಮ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ಲಾರಿಯು ದೇವಸ್ಥಾನದ ಹತ್ತಿರ ತಿರುವು ರಸ್ತೆಯಲ್ಲಿ ಬಲ ಭಾಗಕ್ಕೆ ಮಗುಚಿಕೊಂಡಿದ್ದು, ಲಾರಿಯಲ್ಲಿದ್ದ ಎಂ.ಕೆ. ಶಂಕರ್‌ ಹಾಗು ಸುಬ್ರಮಣಿ ಎಂಬುವವರಿಗೆ ಗಾಯಗಳಾಗಿದ್ದು ಅಲ್ಲದೆ ವಿಮಲಾ ಎಂಬುವವರ ಮನೆಗೆ ಹಾನಿಯಾಗಿರುತ್ತದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.


 

Friday, September 26, 2014

ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳ್ಳತನ:

          ರಾಜನ್ ಜೆಕಬ್ ಕೇರಳದ ಇಡುಕ್ಕಿ ಜಿಲ್ಲೆಯವರಾಗಿದ್ದು ಕುಶಾಲನಗರ ಎಸ್ ಬಿ ಐ ಬ್ಯಾಂಕ್ ನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು ಕುಶಾಲನಗರದ ವಿನಾಯಕ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುತ್ತಾರೆ., ದಿನಾಂಕ 19/09/2014 ರಂದು ಕಾರನ್ನು ತಾವು ವಾಸವಿರುವ ವಿನಾಯಕ ಬಡಾವಣೆಯ ಬಾಡಿಗೆ ಮನೆಯ ಮುಂದೆ ನಿಲ್ಲಿಸಿ ಕಾರಿನ ಕೀಯನ್ನು ಮನೆಯ ಬೀರುವಿನಲ್ಲಿ ಇಟ್ಟು ತನ್ನ ಮನೆಯವರೊಂದಿಗೆ ತಮ್ಮ ಸ್ವಂತ ಊರಾದ ಕೆರಳಕ್ಕೆ ಇಡಕಿಗೆ ಹೋಗಿದ್ದು ದಿನಾಂಕ 25/09/2014 ರಂದು ಬಂದು ನೋಡಿದಾಗ ತಮ್ಮ ಬಾಡಿಗೆ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುದದಿಂದ ಮೀಟಿ ತೆಗೆದು ಒಳನುಗ್ಗಿ ಮಲಗುವ ಕೋಣೆಯಲ್ಲಿದ್ದ ಬೀರುವಿನ ಲಾಕನ್ನು ಮುರಿದು ಕಾರಿನ ಕೀಯನ್ನು ಮತ್ತು ಕಾರಿನ ದಾಖಲಾತಿಗಳನ್ನು ತೆಗೆದುಕೊಂಡು ನಂತರ ಮನೆಯ ಮುಂದೆ ನಿಲ್ಲಿಸಿದ್ದ ಕಾರನ್ನು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ದೂರವಾಣಿ ಕರೆಯ ಮೂಲಕ ಮಹಿಳೆಯರಿಗೆ ಕಿರುಕುಳ:
        ಭಾಗಮಂಡಲ ಪೊಲೀಸ್‌ ಠಾಣಾ ಸರಹದ್ದಿನ ಬೇಂಗೂರು ಗ್ರಾಮದ ನಿವಾಸಿ ಪಟ್ಟಮಾಡ ಸಿ. ಕುಶಾಲಪ್ಪನವರ ಮನೆಗೆ ಸುಮಾರು ಮೂರು ತಿಂಗಳಿಂದ ಅನಾಮಧೇಯ ವ್ಯಕ್ತಿಯೋರ್ವ ದೂರವಾಣಿ ಕರೆ ಮಾಡಿ ಕುಶಾಲಪ್ಪನವರ ಪತ್ನಿ ಹಾಗೂ ತಾಯಿಗೆ ಅವಾಚ್ಯ ಶಬ್ಚಗಳನ್ನು ಬಳಸುತ್ತಾ ಕಿರುಕುಳ ನೀಡುತ್ತಿರುವುದಾಗಿ ಕುಶಾಲಪ್ಪನವರು ಈ ದಿನ ದಿನಾಂಕ 26-9-2014 ರಂದು ಭಾಗಮಂಡಲ ಠಾಣೆಗೆ ದೂರನ್ನು ನೀಡಿದ್ದು ಅದರಂತೆ ಪೊಲೀಸರು ಪ್ರಕರಣವನ್ನುದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  

ಜಾಗಕ್ಕೆ ಅಕ್ರಮ ಪ್ರವೇಶ ತಂತಿ ಬೇಲಿಗೆ ಹಾನಿ:
      ಮಡಿಕೇರಿ ತಾಲೋಕು ಹೊದ್ದೂರು ಗ್ರಾಮದ ನಿವಾಸಿ ತೆಕ್ಕಡ ಜನಾರ್ಧನ ಎಂಬವರಿಗೆ ಸರ್ವೆ ನಂ 44/1 ರಲ್ಲಿ ಕಾಫಿ ತೋಟವಿದ್ದು, 3 ವರ್ಷದ ಹಿಂದೆ ಸದರಿ ತೋಟಕ್ಕೆ ರಸ್ತೆಯ ಬದಿಯಲ್ಲಿ ಬೇಲಿಯನ್ನು ಹಾಕಿದ್ದು, ಸದರಿ ಜಾಗಕ್ಕೆ ಅದೇ ಗ್ರಾಮದ ತೆಕ್ಕಡ ರಾಘವಯ್ಯ, ಪುರುಷೋತ್ತಮ ಹಾಗೂ ಚಿಟ್ಟಿಮಾಡ ಪಂಚಮ್‌ ಎಂಬವರುಗಳು ಸೇರಿ ದಿನಾಂಕ 24-09-2014 ರಂದು ಸಮಯ 11-30 ಗಂಟೆಗೆ ಅಕ್ರಮ ಪ್ರವೇಶ ಮಾಡಿ, ರಸ್ತೆಯನ್ನು ಅಗಲ ಮಾಡಿ, ತಂತಿ ಬೇಲಿಗೆ ಮಣ್ಣು ಹಾಕಿ ಅರ್ಧದಷ್ಟು ಮುಚ್ಚಿ ಸುಮಾರು 20,000 ರೂ ನಷ್ಟಪಡಿಸಿರುತ್ತಾರೆಂದು ಆರೋಪಿಸಿ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರನ್ನು ನೀಡಿದ್ದು ಅದರಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Thursday, September 25, 2014

 ಜೂಟಾಟ ಅಡ್ಡೆ ಮೇಲೆ ಪೊಲೀಸ್‌ ದಾಳಿ, 11 ಮಂದಿ ಬಂಧನ:

     ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್‌ ನಿರೀಕ್ಷಕರಾದ ಶ್ರೀ ಎಸ್‌.ನಾಗೇಶ್‌ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸದರಿಯವರು ಸಿಬ್ಬಂದಿಯವರೊಂದಿಗೆ ಶನಿವಾರಸಂತೆ ಪೊಲೀಸ್ ‌ಠಾಣಾ ಸರಹದ್ದಿನ ಹೊಸಗುತ್ತಿ ಹೊಸಳ್ಳಿ ಗ್ರಾಮದಲ್ಲಿ ಕೆಲ ವ್ಯಕ್ತಿಗಳು  ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದುದನ್ನು ಪತ್ತೆಹಚ್ಚಿ ಅವರ ಮೇಲೆ ದಾಳಿ ನಡೆಸಿ ಜೂಜಾಟದಲ್ಲಿ ಪಣವಾಗಿಟ್ಟ ಹಣ ರೂ.41,180 ಗಳನ್ನು ಮತ್ತು ಇತರೆ ಸೊತ್ತುಗಳನ್ನು ವಶಪಡಿಸಿಕೊಂಡು ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳಾದ (1) ಹೆಸ್‌.ಸಿ. ಸುರೇಶ, (2) ಹೆಚ್‌.ಎಸ್‌. ಸೋಮಶೇಖರ, (3) ವೆಂಕಟೇಶ್‌ @ ಅಣ್ಣಯ್ಯ, (4) ಬಿ.ಎ. ಗಣೇಶ, (5) ಹೆಚ್‌.ಎಸ್‌. ಧರ್ಮಪ್ಪ, (6) ಎಸ್‌.ಎಸ್‌. ಸಂತೋಷ್‌ಕುಮಾರ್‌ (7) ಹೆಚ್‌.ಆರ್‌. ವಿನಯ್‌ ಕುಮಾರ್‌ (8) ಎಸ್‌.ಎಲ್‌. ಮಧು, (9) ಹೆಚ್‌.ಜೆ. ಗುರುರಾಜ್‌ (10) ಕೆ.ಎಸ್‌. ರಘು ಮತ್ತು (11) ಎಸ್‌.ಪಿ. ಪ್ರವೀಣ್‌ ರವರುಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಮಗುವಿನ ಕತ್ತು ಹಿಸುಕಿ ಕೊಲೆ:
    ತಾಯಿಯೇ ತನ್ನ ಮಗುವನ್ನು ಕತ್ತುಹಿಸುಕಿ ಕೊಲೆ ಮಾಡಿರುವ ಘಟನೆ ಕುಟ್ಟ ಠಾಣೆಯಲ್ಲಿ ವರದಿಯಾಗಿದೆ.  ದಿನಾಂಕ 24-9-204 ರಂದು ಕುಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯ ನಾಲ್ಕೇರಿ ಗ್ರಾಮದಲ್ಲಿ ವಾಸವಾಗಿರುವ 32 ವರ್ಷ ಪ್ರಾಯದ ನಿರ್ಮಲ ಎಂಬಾಕೆ ತನ್ನ ಮಗು 4 ವರ್ಷ ಪ್ರಾಯದ ಸಾರಿಕಳನ್ನು ಬಾಯಿಗೆ ಬಟ್ಟೆ ಸುತ್ತಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದು, ನಾಲ್ಕೇರಿ ಗ್ರಾಮದ ಎಂ.ಡಿ. ಶೀಲಾ ಎಂಬವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿಮುಂದಿನತನಿಖೆ ಕೈಗೊಂಡಿರುತ್ತಾರೆ. 

ಮಹಿಳೆ ಮೇಲೆ ದೌರ್ಜನ್ಯ, ಕೊಲೆಗೆ ಯತ್ನ:

     ಶ್ರೀಮಂಗಲ ಠಾಣಾ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ನಿವಾಸಿ ಜೀತು ಎಂಬವರು ಮಾಜಿ ಸೈನಿಕರಾಗಿದ್ದು ಗೀತಾರವರನ್ನು 1991 ರಲ್ಲಿ ಪ್ರೀತಿಸಿ ಮನೆಯವರ ವಿರೋದದ ನಡುವೆಯೂ ವಿವಾಹವಾಗಿದ್ದು. ಗೀತಾರವರು ಅರೋಗ್ಯ ಇಲಾಖೆಯಲ್ಲಿ ಶೂಶ್ರುಕಿ ಯಾಗಿ ಕೆಲಸ ಮಾಡುತ್ತಿದ್ದು, ಹಾಲಿ ಗೋಣಿಕೊಪ್ಪ ಸರ್ಕಾರಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಕರ್ತವ್ಯ ಮಾಡಿಕೊಂಡಿರುತ್ತಾರೆ. ರಜೆ ಇದ್ದಾಗ ತನ್ನ ಗಂಡನೊಂದಿಗೆ ಬಾಡಗರಕೇರಿ ಗ್ರಾಮದಲ್ಲಿರುವ ಮನೆಗೆ ಹೋಗಿ ಬರುತ್ತಿದ್ದು, ಅ ಸಂದರ್ಭದಲ್ಲಿ ಗೀತಾರವರ ಗಂಡ ಜೀತು. ಅತನ ತಂದೆ ಕಾಳಯ್ಯ ತಾಯಿ ನೀಲಮ್ಮ ಮತ್ತು ಅತನ ಅಣ್ಣ ಜೀವನ್ ರವರು ಸೇರಿಕೊಂಡು ಪ್ರೀತಿಸಿ ಮದುವೆ ಯಾದವಳು ಮನೆಗೆ ಬರಕೂಡದು ಮನೆಯ ಹಕ್ಕಿಲ್ಲವೆಂದು ಹೇಳಿ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಕೊಡುತ್ತಿರುವುದಾಗಿಯೂ, ಅಲ್ಲದೆ ದಿನಾಂಕ 21/09/2014 ರಂದು ಗೀತಾರವರನ್ನು ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಹಚ್ದಿ ಕೊಲೆ ಮಾಡಲು ಯತ್ನಿಸಿರುವುದಾಗಿ ಆರೋಪಿಸಿ ಬೆಂಗಳೂರಿನಲ್ಲಿ ನೆಲೆಸಿರುವ ಗೀತಾರವರ ಮಗಳಾದ ಜೋನಿರ ಜೆ. ನಿಖಿತ ರವರು ಶ್ರೀಮಂಗಲ ಠಾಣೆಗೆ ದೂರನ್ನು ನೀಡಿದ್ದು, ಅದ್ರಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಗೆಡ್ಡೆ ಗೆಣಸು ಸೇವಿಸಿದ ಮಹಿಳೆಯ ಸಾವು: 
     ಶನಿವಾರಸಂತೆ ಠಾಣಾ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದ ನಿವಾಸಿ ಶ್ರೀಮತಿ ಗೌರಮ್ಮ (53) ರವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 23-9-2014 ರಂದು ಯಾವುದೋ ಗೆಡ್ಡೆಯನ್ನು  ಸೇವಿಸಿ ಅಸ್ವಸ್ಥರಾಗಿದ್ದು ಸದರಿಯವರನ್ನು ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸದರಿಯವರು ಮೃತಪಟ್ಟಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

ಮಹಿಳೆ ಮೇಲೆ ದೌರ್ಜನ್ಯ, ಪ್ರಕರಣ ದಾಖಲು: 
     ನಾಪೋಕ್ಲು ಪೊಲೀಸ್‌ ಠಾಣಾ ಸರಹದ್ದಿನ ಹೊದವಾಡ ಗ್ರಾಮದ ಇಬ್ರಾಹಿಂ ಎಂಬುವರ ಮಗಳಾದ ಕೆ.ಇ. ನಸೀಮಾ ಎಂಬವರನ್ನು ಎಮ್ಮೆಮಾಡು ಪಡಿಯಾಣಿ ಗ್ರಾಮದ ಉಮ್ಮರ್ ಎಂಬುವನೊಂದಿಗೆ ಮಧುವೆ ಮಾಡಿಕೊಟ್ಟಿದ್ದು ಸದರಿ ಉಮ್ಮರ್‌ 4 ವರ್ಷಗಳ ಹಿಂದೆ ಪತ್ನಿ ಕೆ.ಇ. ನಸೀಮಾರವರಿಗೆ ಸೇರಿದ ಒಡವೆಗಳನ್ನು ಮಾರಿ ದುಬೈಗೆ ಹೋಗಿ ಬಂದು ಇನ್ನೊಂದು ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು, ಈಗ ಪತ್ನಿ ಕೆ.ಇ. ನಸೀಮಾರವರಿಗೆ ಆಕೆಯ ಅತ್ತೆ ಮಾವ ಎಲ್ಲರೂ ಸೇರಿ ತವರು ಮನೆಗೆ ಓಡಿಸಿ ಮನೆಯಿಂದ ಹಣ ತರುವಂತೆಯೂ ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ಕೆ.ಇ. ನಸೀಮಾರವರು ನಾಪೋಕ್ಲು ಪೊಲೀಸ್‌ ಠಾಣೆಗೆದೂರನ್ನು ನೀಡಿದ್ದು, ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿರುತ್ತಾರೆ.

Wednesday, September 24, 2014


ಅಪರಿಚಿತ ವ್ಯಕ್ತಿಗಳಿಂದ ಮಹಿಳೆಯ ಕೊಲೆ.
              ಯಾರೋ ದುಷ್ಕರ್ಮಿಗಳು ಒಂಟಿ ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಘಟನೆ ನಾಪೋಕ್ಲು ಬಳಿಯ ನಾಲಡಿ ಗ್ರಾಮದಲ್ಲಿ ನಡೆದಿದೆ. ನಾಲಡಿ ಗ್ರಾಮದ ನಿವಾಸಿ ಪದ್ಮನಾಭ ಎಂಬವರ ಅಕ್ಕ ವಾರಿಜರವರನ್ನು ಅಪ್ಪಯ್ಯ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು ಅಪ್ಪಯ್ಯರವರು ಮೃತ ಪಟ್ಟಿದ್ದು ಅವರ ಮಕ್ಕಳು ಬೆಂಗಳೂರು ಮತ್ತು ಮೈಸೂರಿನಲ್ಲಿದ್ದು ವಾರಿಜವರು ನಾಲಡಿ ಗ್ರಾಮದ ಮನೆಯಲ್ಲಿ ಒಂಟಿಯಾಗಿ ವಾಸಮಾಡಿಕೊಂಡಿದ್ದು ದಿನಾಂಕ 23/09/2014ರಂದು ಗೀತಾ ಎಂಬಾಕೆಯು ಪದ್ಮನಾಭರವರ ಮನೆಗೆ ಬಂದು ವಾರಿಜರವರನ್ನು ಯಾರೋ ಹೊಡೆದು ಕೊಲೆ ಮಾಡಿರುವುದಾಗಿ ತಿಳಿಸಿದ್ದು ಪದ್ಮನಾಭರವರು ವಾರಿಜರವರ ಮನೆಗೆ ಬಂದು ನೋಡುವಾಗ್ಗೆ ಅಡುಗೆ ಕೋಣೆಯಲ್ಲಿ ವಾರಿಜರವರು ತಲೆಯ ಹಣೆಯ ಭಾಗಕ್ಕೆ ತೀವ್ರ ತರಹದ ಗಾಯವಾಗಿ ಮೃತಪಟ್ಟಿರುವುದು ಕಂಡು ಬಂದಿದ್ದು ಯಾರೋ ವ್ಯಕ್ತಿಗಳು ಸೌದೆ ದೊಣ್ಣೆಯಿಂದ ಹೊಡೆದು ಹಣೆಗೆ ತೀವ್ರ ತರಹದ ಗಾಯಪಡಿಸಿ ಕೊಲೆ ಮಾಡಿರಬಹುದೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಕೊಲೆಗೆ ಕಾರಣ ತಿಳಿದುಬಂದಿರುವುದಿಲ್ಲ.

ಮಹಿಳೆಯ ಮಾನಹಾನಿಗೆ ಯತ್ನ, ಕೊಲೆ ಬೆದರಿಕೆ
         ಮನೆಯಲ್ಲಿದ್ದ ಒಂಟಿ ಮಹಿಳೆಯ ಮನೆಗೆ ಪ್ರವೇಶಿಸಿ ಮಾನಹಾಣಿಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಕೊಂಡಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 23/09/2014 ರಂದು ಬೆಳಗಿನ ಜಾವ ಕೊಂಡಂಗೇರಿ ಗ್ರಾಮದ ನಿವಾಸಿ ಟಿ.ಹೆಚ್.ರಮ್ಲಾ ರವರು ತನ್ನ ಮನೆ ಒಳಗೆ ನಮಾಜ್ ಮಾಡಲು ತಯಾರಾಗುತ್ತಿರುವಾಗ ಅದೇ ಗ್ರಾಮದ ವಾಸಿ ಯೂಸುಫ್ ರವರು ದೂರವಾಣಿ ಕರೆಮಾಡಿ ತಾನು ಮನೆಗೆ ಬರುವುದಾಗಿ ಹೇಳಿ ಮನೆಗೆ ಬಂದು ಹಿಂಬದಿಯಿಂದ ರಮ್ಲಾರವರನ್ನು ತಬ್ಬಿ ಹಿಡಿದುಕೊಂಡು ಮಾನಭಂಗಕ್ಕೆ ಯತ್ನಿಸಿದ್ದು ಘಟನೆಯಿಂದ ವಿಚಲಿತರಾದ ರಮ್ಲಾರವರು ಕಿರುಚಿಕೊಂಡಿದ್ದನ್ನು ಕೇಳಿದ ಪಕ್ಕದ ಮನೆಯ ಮುದಾಸಿರ್ ಮತ್ತು ಅದ್ರಮನ್ ಹಾಜಿ ಎಂಬವರವರು ಬಂದು ಯೂಸುಫ್‌ಗೆ ಬೈದು ಕಳುಹಿಸಿದ್ದು, ಯೂಸುಫ್ ಪುನಃ ಬಂದು ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಬೇಟೆ; ಗುಂಡು ತಾಗಿ ವ್ಯಕ್ತಿಯ ಸಾವು
            ಅಕ್ರಮವಾಗಿ ಬೇಟೆಗೆ ಹೋದಲ್ಲಿ ಗುಂಡು ತಾಗಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಸಿದ್ದಾಪುರ ಬಳಿಯ ಮಾಲ್ದಾರೆ ಗ್ರಾಮದ ದೇವಮಚ್ಚಿ ಅರಣ್ಯದಲ್ಲಿ ನಡೆದಿದೆ. ದಿನಾಂಕ 23/09/2014 ರಂದು ಮಾಲ್ದಾರೆ ಗ್ರಾಮದ ತಟ್ಟಳ್ಳಿ ಹಾಡಿಯ ನಿವಾಸಿ ಜೇನುಕುರುಬರ ಮಣಿಯು ಬೆಳಗ್ಗಿನ ಜಾವ ಸಮಯ ಸುಮಾರು 5.00 ಗಂಟೆಗೆ ಈತನ ಮನೆಯ ಬಳಿ ಬಂದಿದ್ದ ಚಿತ್ರು, ರಾಜ ರವರ ಜೊತೆಯಲ್ಲಿ ಮನೆಯಿಂದ ಹೊರಟು ಜೊತೆಯಲ್ಲಿ ನಾಗೇಶ ಮತ್ತು ಪ್ರಕಾಶ ರವರನ್ನು ಸೇರಿಸಿಕೊಂಡು ಹೊರಗೆ ಹೋಗಿ ಬರುವುದಾಗಿ ತನ್ನ ಪತ್ನಿ ಲತಾರವರಿಗೆ ತಿಳಿಸಿ ಮನೆಯಿಂದ ಹೋಗಿದ್ದು ನಂತರ ಅಪರಾಹ್ನ ಮಣಿಯೊಂದಿಗೆ ಹೋಗಿದ್ದ ನಾಗೇಶನು ಮನೆಗೆ ಬಂದು ತಟ್ಟಳ್ಳಿ ಅರಣ್ಯ ಪ್ರದೇಶದಲ್ಲಿ ಮಣಿಗೆ ಗುಂಡು ತಾಗಿ ಎದೆಯ ಭಾಗಕ್ಕೆ ಗಾಯಗಳಾಗಿದ್ದು ಮಣಿಯನ್ನು ಚಿಕಿತ್ಸೆಗಾಗಿ ಅಲ್ಲಿಂದ ಸಾಗಿಸುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದು ಮಣಿಯ ಮೃತದೇಹವನ್ನು ದೇವಮಚ್ಚಿ ಮೀಸಲು ಅರಣ್ಯದ ತಟ್ಟಳ್ಳಿ ಅರಣ್ಯದಲ್ಲಿ ಮಲಗಿಸಿರುವುದಾಗಿ ಮಣಿಯ ಪತ್ನಿ ಲತಾರವರಿಗೆ ತಿಳಿಸಿದ ಮೇರೆಗೆ ಆಕೆಯು ತನ್ನ ಭಾವ ಶಂಕರ ರವರನ್ನು ಕರೆದುಕೊಂಡು ನಾಗೇಶನ ಜೊತೆಯಲ್ಲಿ ಮಣಿಯ ಮೃತದೇಹವಿದ್ದ ಸ್ಥಳಕ್ಕೆ ಹೋಗಿ ಮೃತದೇಹವನ್ನು ನೋಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಅಕ್ರಮವಾಗಿ ಬೇಟೆಗೆ ಹೋದ ನಾಗೇಶ, ಚಿತ್ರು, ರಾಜ ಮತ್ತು ಪ್ರಕಾಶರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, September 23, 2014

ಅಕ್ರಮ ಜಾನುವಾರುಗಳ ಸಾಗಾಟಕ್ಕೆ ಯತ್ನ, ಆರೋಪಿ ಬಂಧನ: 
     ಅಕ್ರಮವಾಗಿ ಜಾನುವಾರುಗಳನ್ನು ಕೇರಳ ರಾಜ್ಯದ ಕಸಾಯಿಖಾನೆಯೊಂದಕ್ಕೆ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸರು ದಾಳಿ ನಡೆಸಿ ಆರೀಪಿಯನ್ನು ಬಂಧಿಸಿರುತ್ತಾರೆ.    ದಿನಾಂಕ 23-09-2014 ರಂದು ಸಮಯ 04.30 ಎ ಎಂ ಗೆ ಕುಟ್ಟ ಹಳೆಯ ಪೊಲೀಸ್ ಚೆಕ್ ಪೋಸ್ಟ್ ಬಳಿ ಕೇರಳ ರಾಜ್ಯದ ತೋಲ್ಪಟ್ಟಿಯ ನಿವಾಸಿ ಪಿ.ಎಂ. ಹಾಸಿಂ ಮತ್ತು ಮುಸ್ತಾಫ, ಹಾಗು ವಿರಾವಿರಾಜಪೇಟೆ ತಾಲೋಕು ಕೋತೂರು ಗ್ರಾಮದ ನಿವಾಸಿ ಗಣೇಶ ಎಂಬವರುಗಳು ಸೇರಿ ಅಕ್ರಮವಾಗಿ  ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ರೂ. 40,000=00 ಮೌಲ್ಯದ 04 ಜಾನುವಾರುಗಳನ್ನು ಕೇರಳ ರಾಜ್ಯದ ಕಸಾಯಿಖಾನೆಗೆ ಮಾರಾಟ ಮಾಡುವ ಸಲುವಾಗಿ ಕಾಲ್ನಡಿಗೆಯಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಕುಟ್ಟ ವೃತ್ತ  ನಿರೀಕ್ಷಕರಾದ  ಶ್ರೀ ಸಿ.ಎನ್‌. ದಿವಾಕರ ರವರು ಸಿಬ್ಬಂದಿಯೊಂದಿಗೆದಾಳಿ ಮಾಡಿ ಆರೋಪಿ ಪಿ.ಎಂ. ಹಾಸಿಂ ರವರನ್ನು ಬಂಧಿಸಿ ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Monday, September 22, 2014

 ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ, ಮೂವರಿಗೆ ಗಾಯ:

     ಸೋಮವಾರಪೇಟೆ ನಗರದಲ್ಲಿ ವಾಸವಾರಿಗುವ ಕೆ.ಕೆ ರಮೇಶ ಎಂಬವರು ದಿನಾಂಕ 21.09.2014 ರಂದು ಸಮಯ 16:10 ಗಂಟೆಗೆ ಅವರ ಬಾಬ್ತು ಆಟೋ ರಿಕ್ಷಾ ನಂ ಕೆಎ 12 ಎ 8956 ರಲ್ಲಿ ಇಬ್ಬರು ಹೆಂಗಸರನ್ನು ಬಾಡಿಗೆಗೆ ಕೂರಿಸಿಕೊಂಡು ತಣ್ಣೀರಹಳ್ಳದ ಹತ್ತಿರ ರಸ್ತೆಯಲ್ಲಿ ಚಾಲಿಸಿಕೊಂಡು ಹೋಗುತ್ತಿರುವಾಗ್ಗೆ ಹಿಂಬದಿಯಿಂದ ಕೆಎ 12 ಜೆಡ್‌ 0743 ರ ಶಿಪ್ಟ್‌ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋ ರಿಕ್ಷಾದ ಹಿಂಬದಿಗೆ ಡಿಕ್ಕಿ ಪಡಿಸಿದಾಗ ಆಟೋ ರಿಕ್ಷಾ 3 ಪಲ್ಟಿಯಾಗಿ ಜಖಂಗೊಂಡಿದ್ದು, ಕೆ.ಕೆ ರಮೇಶ ಹಾಗೂ ಆಟೋ ರಿಕ್ಷಾದಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 

ಅಕ್ರಮ ಜಾನುವಾರುಗಳ ಸಾಗಾಟ, ಆರೋಪಿಗಳ ಬಂಧನ:

     ದಿನಾಂಕ 21.09.2014 ರಂದು ಸಮಯ ಮದ್ಯಾಹ್ನ 14:00 ಗಂಟೆಗೆ ಸಣ್ಣಯ್ಯ, ಎ.ಎಸ್.ಐ, ಸೋಮವಾರಪೇಟೆ ಪೊಲೀಸ್ ಠಾಣೆ ಇವರಿಗೆ ಸಿಕ್ಕಿದ ಖಟಿಚ ವರ್ತಮಾನದ ಮೇರೆಗೆ ಸಿಬ್ಬಂದಿಯವರನ್ನು ಕರೆದುಕೊಂಡು ಸೋಮವಾರಪೇಟೆ ಪಟ್ಟಣದ ಎಸ್ ಜೆ.ಎಂ ಶಾಲೆಯ ಬಳಿ ಅಂಬೇಡ್ಕರ್‌ ಜಂಕ್ಷನ್‌ಗೆ ಹೋಗಿ ಸೋಮವಾರಪೇಟೆ ಕಡೆಯಿಂದ ಕೆಎ 12 ಎ 2299 ರ ಪಿಕ್‌ ಅಪ್‌ ವಾಹನದಲ್ಲಿ ಎರಡು ಎತ್ತುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಪರವಾನಿಗೆ ಇಲ್ಲದೆ ತುಂಬಿಸಿಕೊಂಡು ಹೋಗುತ್ತಿರುವುದನ್ನು ಪತ್ತೆ ಮಾಡಿ ಆರೋಪಿಳಾದ (1)ಮಲ್ಲೇಶ್ ಪಿ.ಬಿ ತಮದೆ ಪೌತಿ ಪುಟ್ಟಪ್ಪ, ಪ್ರಾಯ 40 ವಷ೵, ಚಾಲಕ ವೃತ್ತಿ, ವಾಸ ಬಡುಬನಹಳ್ಳಿ ಗ್ರಾಮ, ಸೋಮವಾರಪೇಟೆ ತಾಲ್ಲೂಕು. (2)ಉದಯಕುಮಾರ್ ಎಸ್.ಪಿ ತಂದೆ ಪವತಿ ಬೆಳ್ಳಿಯಪ್ಪ, ಪ್ರಾಯ 32 ವರ್ಷ, ಕೂಲಿ ಕೆಲಸ, ವಾಸ ಕುಂಬೂರು ಗ್ರಾಮ, ಸೋಮವಾರಪೇಟೆ ತಾಲ್ಲೂಕು. ಮತ್ತು (3) ಕಾರ್ಯಪ್ಪ ಎಂ.ಪಿ ತಂದೆ ಪೂವಯ್ಯ, ಪ್ರಾಯ38 ವರ್ಷ, ವ್ಯವಸಾಯ ಕೆಲಸ, ವಾಸ ಕಿರುದಾಲೆ ಗ್ರಾಮ ಇವರುಗಳನ್ನು ಮತ್ತು ಎತ್ತುಗಳನ್ನು ಹಾಗೂ ಪಿಕ್‌ ಅಪ್‌ ವಾಹನವನ್ನು ಅಮಾನತ್ತು ಪಡಿಸಿಕೊಂಡು ಠಾಣೆಯಲ್ಲಿ ಪ್ರಕರಣದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
Sunday, September 21, 2014

ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಮಗನ ಮೇಲೆ ವ್ಯಕ್ತಿಯಿಂದ ಹಲ್ಲೆ:
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಮಗ ಮತ್ತು ತಾಯಿಯನ್ನು ಬೈದು ಹಲ್ಲೆ ನಡೆಸಿದ ಘಟನೆ  ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 19-09-2014 ರಂದು ಮಡಿಕೇರಿ ತಾಲೋಕು ಹಾಕತ್ತೂರು ಗ್ರಾಮದ ತೊಂಬತ್ತುಮನೆ ಎಂಬಲ್ಲಿ ವಾಸವಾಗಿರುವ ಶ್ರೀಮತಿ ಅಕ್ಕಮ್ಮ ಎಂಬುವವರ ಮಗ ಗೋಪಾಲನವರ ಹೆಂಡತಿ ಪವಿತ್ರಳೊಂದಿಗೆ ಅದೇ ಗ್ರಾಮದ ವಾಸಿ ಉಮೇಶ ಶೆಟ್ಟಿ ಎಂಬ ವ್ಯಕ್ತಿ ಸಂಜೆ ಹೊತ್ತಿನಲ್ಲಿ ಬಂದು  ಹೊರಗಡೆ ಮಾತನಾಡಿಕೊಂಡಿದ್ದು ಈ ಬಗ್ಗೆ   ಇದು ಸರಿಯಲ್ಲ ಇಲ್ಲಿಂದ ಹೋಗು ಎಂದು ಉಮೇಶ್‌ ಶೆಟ್ಟಿಗೆ ತಿಳಿಸಿದ್ದು, ಇದರಿಂದ  ಸದರಿ ವ್ಯಕ್ತಿ ಸಿಟ್ಟುಗೊಂಡು ಅಕ್ಕಮ್ಮ ಮತ್ತು ಗೋಪಾಲನವರನ್ನು  ಅವಾಚ್ಯ ಶಬ್ದಗಳಿಂದ ಬೈದು ಅವರ  ಮೇಲೆ  ಹಲ್ಲೆ ನಡೆಸಿದ್ದು, ಈ  ವಿಚಾರವಾಗಿ ಅಕ್ಕಮ್ಮನವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಮನೆಯಿಂದ 2,45,000/- ನಗದು ಕಳವು:
ಪೂರ್ಣ ಚಂದ್ರ ರಾವ್‌ ಎಂಬವರು ಮಡಿಕೇರಿ ತಾಲೋಕು,  ಕರ್ಣಂಗೇರಿ ಗ್ರಾಮದಲ್ಲಿ ವಾಸವಾಗಿದ್ದು ಸದರಿಯವರ   ವಾಸ ಇರುವ ಮನೆಯನ್ನು ಪೈಟಿಂಗ್‌ ಕೆಲಸ ಹಾಗೂ ಇತರೆ ಕೆಲಸಗಳನ್ನು ಮಾಡಿಸುತ್ತಿದ್ದು ದಿನಾಂಕ 13-09-2014 ರಂದು ಮನೆಯೊಳಗಿನ ಬೆಡ್‌ ರೂಮ್‌ನ ಡ್ರಾಯರ್‌ನಲ್ಲಿಟ್ಟಿದ್ದ  2,45,000 /- ರೂ ಹಣವನ್ನು ಯಾರೋ  ಕಳ್ಳರು ಕಳವು ಮಾಡರುವುದು ಕಂಡುಬಂದಿದ್ದು,  ಸದರಿ ಕಳ್ಳತನವನ್ನು  ಅವರ  ಮನೆಯಲ್ಲಿ ಪೈಟಿಂಗ್‌ ಕೆಲಸ ಮಾಡಿದ  ಉತ್ತರ ಪ್ರದೇಶದ ಅಂಗಾದ ಯಾದವ  ಎಂಬ ವ್ಯಕ್ತಿ ಮ/ಅಡಿರುವ ಶಂಕೆ ಇರುವುದಾಗಿ  ಪೂರ್ಣ ಚಂದ್ರ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೊಟ್ಟಿಗೆಯಿಂದ ಹೋರಿಗಳ ಕಳವು:
ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ 3 ಹೋರಿಗಳನ್ನು ಕಳ್ಳರು ಕಳವು ಮಾಡಿದ ಘಟನೆ ಕೊಡ್ಲಿಪೇಟೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 17-9-2014 ರಂದು ರಾತ್ರಿ ಸಮಯದಲ್ಲಿ ಶನಿವಾರಸಂತೆ ಪೊಲೀಸ್‌ ಠಾಣಾ ಸರಹದ್ದಿನ ಕೊಡ್ಲಿಪೇಟೆ ಗ್ರಾಮದ ನಿವಾಸಿ ಮಲ್ಲೇಗೌಡ ಎಂಬವರ ಬಾಪ್ತು ಮನೆಯ ಬಳಿ ಇರುವ ದನದ ಕೊಟ್ಟಿಗೆಯಿಂದ  3 ಹೋರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಹೋರಿಗಳ ಅಂದಾಜು ಬೆಲೆ ರೂ.30000/- ಆಗುತ್ತದೆ ಎಂದು  ಸದರಿ ಮಲ್ಲೇಗೌಡರವರು ಶನಿವಾರಸಂತೆ ಪೊಲೀಸರಿಗೆ ದೂರನ್ನು ನೀಡಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
ಮೋಟಾರ್‌ ಸೈಕಲ್‌ಗೆ ಟಾಟಾ ಸುಮೋ ಡಿಕ್ಕಿ, ಸವಾರನಿಗೆ ಗಾಯ:
ವೇಗ ಮತ್ತು ಅಡ್ಡಾದಿಡ್ಡಿಯಾಗಿ ಬಂದ ಟಾಟಾ ಸುಮೋ ವಾಹನ ಮೋಟಾರ್‌ ಸೈಕಲ್‌ಗೆ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ವಿರಾಜಪೇಟೆ ಹತ್ತಿರದ ಕರಡ ಗ್ರಾಮದಲ್ಲಿ ನಡೆದಿದೆ. ದಿನಾಂಕ: 20-09-14ರಂದು ಸಮಯ 09-00ಎ.ಎಂ.ಗೆ  ಕರಡ ಗ್ರಾಮದ ನಿವಾಸಿ ಪಟ್ರಪಂಡ ದೇವಯ್ಯ ಎಂಬುವವರು  ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಅವರ ತಾಯಿಯನ್ನು ನೋಡುವ ಸಲುವಾಗಿ ಅವರ ಬಾಪ್ತು ಕೆಎ.12.ಎಲ್.4122ರ ಮೋಟಾರ್ ಸೈಕಲ್ ನಲ್ಲಿ  ಕರಡ ಗ್ರಾಮದ ಹಳೆ ವಿಜಯ ಬ್ಯಾಂಕ್ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಬರುತ್ತಿರುವಾಗ್ಗೆ, ಎದುರುಗಡೆಯಿಂದ  ಕೆಎ.19.ಎ.9028ರ ಟಾಟಾ ಸುಮೋ ಚಾಲಕನು ಸದರಿ ಟಾಟಾ ಸುಮೋ ವಾಹನವನ್ನು ಅತೀವೇಗ ಹಾಗೂ ಅಡ್ಡಾದಿಡ್ಡಿಯಾಗಿ ಚಾಲಿಸಿಕೊಂಡು ಬಂದು ಪಟರಪಂಡ ದೇವಯ್ಯನವರ ಮೋಟಾರ್ ಸೈಕಲ್ಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು  ಮೋಟಾರ್ ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಈ ಅಪಘಾತದಲ್ಲಿ ಡಿಕ್ಕಿಪಡಿಸಿದ ಟಾಟಾ ಸುಮೋ ಕೂಡಾ ಜಖಂ ಗೊಂಡಿದ್ದು,  ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

Saturday, September 20, 2014

ಬೀಟಿ ಮರಗಳ ಅಕ್ರಮ ಕಳ್ಳಸಾಗಾಣೆ, ಪ್ರಕರಣ ದಾಖಲು: 

     ಅಕ್ರಮವಾಗಿ ಬೀಟಿ ಮರದ ತುಂಡುಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದುದನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿರುತ್ತಾರೆ.   ದಿನಾಂಕ: 20-09-14ರಂದು ಸಮಯ 3-00ಎ.ಎಂ.ಗೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪಿ.ಎಸ್.ಐ. ಕೆ.ಕೆ. ರಘು ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸದರಿಯವರು ಸಿಬ್ಬಂದಿಗಳೊಂದಿಗೆ ಹೊಸಕೋಟೆ ಗ್ರಾಮಕ್ಕೆ ತೆರಳಿ ಸದರಿ ಗ್ರಾಮದ ಕೆ.ಕೆ.ಚಂದ್ರ ಎಂಬವರ ಅಂಗಡಿಯ ಹತ್ತಿರ ಸಮಯ 4-00ಎ.ಎಂ.ಗೆ ಹೊಸಕೋಟೆ ಗ್ರಾಮದಿಂದ ಕಳತ್ಮಾಡ್ ಗ್ರಾಮದ ಕಡೆಗೆ ಹೋಗುತ್ತಿದ್ದ ಟಾಟಾ ಸುಮೋ ನಂ. ಕೆಎ.06.ಎಂ. 7118 ರನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ಸದರಿ ಟಾಟಾ ಸುಮೋದಲ್ಲಿ ಸುಮಾರು 15 ವಿವಿಧ ಅಳತೆಯ ಸುಮಾರು1,00,000 ರೂ ಬೆಲೆಬಾಳುವ ಬೀಟೆ ಮರದ ತುಂಡುಗಳನ್ನು ಪತ್ತೆಹಚ್ಚಿ, ವಾಹನ ಸಮೇತವಾಗಿ ಮರದ ತುಂಡುಗಳನ್ನು ವಶಪಡಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ವ್ಯಕ್ತಿಯ ಜಾತಿ ನಿಂದನೆ, ಕೊಲೆ ಬೆದರಿಕೆ:

    ದಿನಾಂಕ: 19-9-2014ರಂದು ಮದ್ಯಾಹ್ನ 3:00 ಗಂಟೆಯ ಸಮಯಕ್ಕೆ ಬಲ್ಯಮಂಡೂರು ಗ್ರಾಮದ ನಿವಾಸಿ ವಿ.ಎ. ದೇವರಾಜು ಎಂಬವರು ತಮ್ಮ ಮನೆಯ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ಕೊಡವ ಜನಾಂಗಕ್ಕೆ ಸೇರಿದ ಕೊಟ್ಟಂಗಡ ಕಾರ್ಯಪ್ಪ @ ರಾಜರವರು ಬುಲೇಟ್ ಬೈಕಿನಲ್ಲಿ ಬಂದು ವಿ.ಎ. ದೇವರಾಜುರವರನ್ನು ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿ ನೀನು ಮತ್ತು ನಿನ್ನ ಕುಟುಂಬದವರು ಬಲ್ಯಮಂಡೂರು ಗ್ರಾಮದಲ್ಲಿ ವಾಸವಿರುವುದು ಇಷ್ಟವಿಲ್ಲ ಎಂದು ಹೇಳಿ ಒಂದು ತಿಂಗಳೊಳಗೆ ಕುಟುಂಬ ಸಮೇತ ಹೋಗಬೇಕು ಇಲ್ಲದಿದ್ದರೆ ಕುಟುಂಬ ಸಮೇತ ಕೋವಿಯಿಂದ ಗುಂಡು ಹೊಡೆದು ಸರ್ವನಾಶ ಮಾಡುತ್ತೇವೆಂದು ಹೇಳಿ ಏಕಾಏಕಿ ಬೈಕಿನಿಂದ ಇಳಿದು ಬಂದು ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದು ನೋವನ್ನುಂಟು ಮಾಡಿದ್ದು, ಈ ಸಂಬಂಧವಿ.ಎ. ದೇವರಾಜುರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  

ಕ್ಚುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

 ದಿನಾಂಕ 19-9-2014 ರಂದು ಸೋಮವಾರಪೇಟೆ ತಾಲೋಕು ಬೆಸೂರು ಗ್ರಾಮದ ನಿವಾಸಿ ಬಿ.ಬಿ. ಧರ್ಮಪ್ಪ ಎಂಬವರು ಹೋಟೇಲೊಂದರ ಮುಂದುಗಡೆ ಕುಳಿತುಕೊಂಡಿರುವಾಗ ಅದೇ ಗ್ರಾಮದ ಕೆ.ಜಿ. ಸುರೇಶ ಹಾಗು ರಂಜನ್‌ ಎಂಬವರು ಅಲ್ಲಿಗೆ ಬಂದು ಮರದ ವಿಚಾರವಾಗಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ನೀರಿನಲ್ಲಿ ಮುಳುಗಿ ನಾಪತ್ತೆಯಾದ ಯುವಕನ ಶವ ಪತ್ತೆ:

    ದಿನಾಂಕ 15-09-2014 ರಂದು ಕೇರಳ ರಾಜ್ಯ ಕೊಟ್ಟಾಯಂ ಜಿಲ್ಲೆಯ ಕೋರ್‌ತೋಡ್‌ ನಿವಾಸಿ ವಿಪಿನ್ ಆಂಟೋನಿ ಎಂಬುವವರು ಮಕ್ಕಂದೂರು ಗ್ರಾಮದಲ್ಲಿರುವ ನೆಂಟರ ಮನೆಗೆ ಬಂದಿದ್ದ ಸಂದರ್ಭದಲ್ಲಿ ದೇವಸ್ತೂರು ಹೊಳೆಗೆ ತನ್ನ ಸ್ನೇಹಿತ ಜಿಜಿ ಎಂಬಾತನೊಂದಿಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಸದರಿ ನಾಪತ್ತೆ ಯಾದ ವಿಪಿನ್‌ ಆಂಟೋನಿಯವರ ಶವ ದಿನಾಂಕ 19-9-2014 ರಂದು ಪತ್ತೆಯಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Friday, September 19, 2014

ಕೊಲೆ ಪ್ರಕರಣದ ಆರೋಪಿಗಳ ಬಂಧನ:

Arrested Accused persons

       ದಿನಾಂಕ 17-9-2014 ರಂದು ವಿರಾಜಪೇಟೆ ನಗರದಲ್ಲಿ ಇಕ್ಬಾಲ್‌ ಹಸನ್‌ ಎಂಬ ವ್ಯಕ್ತಿಯ ಕೊಲೆಯಾಗಿದ್ದು, ಸದರಿ ಪ್ರಕರಣ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  
 
ಪ್ರಕರಣದ ಹಿನ್ನೆಲೆ:
ಚಾಮಿಯಾಲ ಗ್ರಾಮದ ಹನೀಫ ಎಂಬವರ ಹೆಂಡತಿ ಹಸೀನಳನ್ನು ಜಾಫರ್ ರವರು ಪ್ರೀತಿಸುತ್ತಿದ್ದ ವಿಚಾರದಲ್ಲಿ  ಶ್ರೀಮತಿ ರೆಹಮತ್ ಕೆ.ಐ ರವ ಗಂಡ ಇಕ್ಬಾಲ್ ಹಸನ್ ರವರು ತೀರ್ಮಾನ ಮಾಡಿದ ವಿಚಾರದಲ್ಲಿ ಳೇ ವೈಷಮ್ಯವನ್ನು ಇಟ್ಟುಕೊಂಡು ದಿನಾಂಕ 17-9-2014 ರಂದು ಸಮಯ 15-30 ಗಂಟೆಗೆ ವಿರಾಜಪೇಟೆ ನಗರದ ಸಂಗಂ ಹೊಟೇಲ್ ನಲ್ಲಿ ಚಾಮಿಯಾಲ ಗ್ರಾಮದ ಅನೀಶ್, ಮೂಸಾನ್, ನಸೀರ್, ಸೂಫಿ ಹಾಗೂ ಅಸ್ಮು ರವರು  ಗುಂಪು ಸೇರಿಕೊಂಡು ಅದೇ ಗ್ರಾಮದ 50 ವರ್ಷ ಪ್ರಾಯದ ಇಕ್ಬಾಲ್ ಹಸನ್ ರವರನ್ನು ಕೋವಿಯಿಂದ ಗುಂಡು ಹಾರಿಸಿ ಕೊಲೆಗೈದಿದ್ದು, ಆ ಸಮಯದಲ್ಲಿ ಹೊಟೇಲ್ ಒಳಗಡೆ ಊಟ ಮಾಡುತ್ತಿದ್ದ ಶಿವಕೇರಿಯ ವಾಸಿ ಚಂದ್ರಶೇಖರ್ ಎಂಬುವವರ ಕಾಲಿಗೂ  ಸಹ ಗುಂಡೇಟು ತಾಗಿ  ಗಾಯ ವಾಗಿರುವುದಾಗಿ ಕೊಟ್ಟ ಪುಕಾರಿಗೆ ವಿರಾಜಪೇಟೆ ನಗರ ಠಾಣೆ ಮೊ.ಸಂ. 119/2014 ಕಲಂ. 302, 324, ರೆ/ವಿ 34 ಐ.ಪಿ.ಸಿ. ಮತ್ತು 3 & 25 ಇಂಡಿಯನ್  ಆರ್ಮ್ಸ್ ಆಕ್ಟ್  ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಳಾಗಿತ್ತು.
      ದಿನಾಂಕ 18/09/2014 ರಂದು ಮದ್ಯಾಹ್ನ 01-00 ಗಂಟೆಗೆ ಈ ಪ್ರಕರಣದ ಆರೋಪಿಗಳಾದ 1).  ಕುವಲೆರ ಯು ಅನೀಶ್  ತಂದೆ ಕೆ.ಎ ಉಸ್ಮಾನ್  ಪ್ರಾಯ 29 ವರ್ಷ, ಚಾಮಿಯಾಲ ಮೈತಾಡಿ ಗ್ರಾಮ  2) ಕುವಲೆರ ಎ ಮೂಸನ್ @ ಮೂಸ ತಂದೆ ಪೌತಿ ಅಹಮ್ಮದ್, ಪ್ರಾಯ 46 ವರ್ಷ, ಚಾಮಿಯಾಲ ಮೈತಾಡಿ ಗ್ರಾಮ 3) ಕುವಲೆರ ಹೆಚ್ ಅಜ್ ಮುದ್ದೀನ್ @ ಅಬ್ದುಲ್ ಸಮ್ಮದ್ @ ಅಸ್ಮು, ತಂದೆ ಕೆ.ಎಂ ಹಂಸ, ಪ್ರಾಯ 29 ವರ್ಷ, ಚಾಮಿಯಾಲ ಮೈತಾಡಿ ಗ್ರಾಮ ರವರುಗಳನ್ನು ದಸ್ತಗಿರಿ ಮಾಡಿದ್ದು, ಸದರಿಯವರುಗಳ ಕಡೆಯಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಜೋಡಿನಳಿಕೆ ಕೋವಿ, ಖಾಲಿ ಎರಡು ತೋಟ, ಹಾಗೂ ಕೃತ್ಯದ ನಂತರ ಆರೋಪಿಗಳು ಪರಾರಿಯಾಗಲು ಬಳಸಿದ್ದ ಆರೋಪಿ ಅನೀಶ್ ಬಾಪ್ತು KA-01-MC-4164 ನಂಬರಿನ ಮಾರುತಿ ಆಲ್ಟೋ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು. ಸದರಿಯವರನ್ನು ದಿನಾಂಕ 18/09/2014 ರಂದು ವಿರಾಜಪೇಟೆ ಘನ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ದಿನಾಂಕ 01/10/2014 ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಮಾನ್ಯ ನ್ಯಾಯಾಲಯವು ಆದೇಶಿಸಿರುತ್ತದೆ.
           ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಕೊಡಗು ಜಿಲ್ಲಾ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ವರ್ತಿಕಾ ಕಟಿಯಾರ್ ಹಾಗೂ ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಕುಮಾರ ಚಂದ್ರ ರವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಕೆ.ಆರ್. ಪ್ರಸಾದ್ ನೇತೃತ್ವದಲ್ಲಿ ಬಂಧಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಪಿ.ಎಸ್. ಗಳಾದ ಸುರೇಶ್ ಬೋಪಣ್ಣ, ಕೆ.ಕೆ ರಘು ಸಿಬ್ಬಂದಿಗಳಾದ ನಾಣಿಯಪ್ಪ, ನಂಜಪ್ಪ, ಸುರೇಂದ್ರ, ಬೆಳ್ಯಪ್ಪ, ಟಿ.ಪಿ ಮಂಜುನಾಥ, ಮುನೀರ್, ಟಿ.ಹೆಚ್ ರಮೇಶ್ ರವರು ಪಾಲ್ಗೊಂಡಿದ್ದರು.

ದಾರಿ ತಡೆದು ವಿನಾಕಾರಣ ವ್ಯಕ್ತಿಯ ಮೇಲೆ:
     ಪೊನ್ನಂಪೇಟೆ ಠಾಣಾ ಸರಹದ್ದಿನ ಬೆಸಗೂರು ಗ್ರಾಮದ ನಿವಾಸಿ ಬಿ.ಬಿ.ಪ್ರಕಾಶ್ ಎಂಬವರು ದಿನಾಂಕ 18/9/2014ರಂದು ಸಮಯ 6-00 ಗಂಟೆಗೆ ಬೆಸಗೂರು ಗ್ರಾಮದಲ್ಲಿರುವ ಅಂಗಡಿಗೆ ಸಾಮಾಗ್ರಿಗಳನ್ನು ತರಲೆಂದು ಹೋಗಿ ಅಲ್ಲಿಂದ ಮನೆಗೆ ಅಪ್ಪಣ್ಣ, ಉಮೇಶ್ ಮತ್ತು ಸಿದ್ದರವರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಅದೇ ಗ್ರಾಮದ ವಾಸಿ ಮಧು ರವರು ಬಿ.ಬಿ. ಪ್ರಕಾಶ್‌ರವರ ದಾರಿ ತಡೆದು ವಿನಾ ಕಾರಣ ಜಗಳ ತೆಗೆದು ಕೈಯಿಂದ ಎಡ ಕಣ್ಣಿನ ಭಾಗಕ್ಕೆ ಮತ್ತು ದೊಣ್ಣೆಯಿಂದ ಬೆನ್ನಿನ ಭಾಗಕ್ಕೆ ಹೊಡೆದು ನೋವು ಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ಬಿ.ಬಿ. ಪ್ರಕಾಶ್‌ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.