Friday, October 31, 2014

ಸತ್ತ ಕಾಡಾನೆಯ ದಂತ ಕಳವು:
    ಕೊಡಗು ಜಿಲ್ಲೆಯ ಸಂಪಾಜೆ ವಲಯದ ಅರಣ್ಯ ವ್ಯಾಪ್ತಿಯ ಕಡಮಕಲ್ಲು ಮೀಸಲು ಅರಣ್ಯದಲ್ಲಿ ಸತ್ತು ಬಿದ್ದಿದ್ದ ಒಂದು ಗಂಡಾನೆ ಪತ್ತೆಯಾಗಿದ್ದು, ಅದು 3-4 ದಿನಗಳ ಹಿಂದೆ ಸತ್ತು ಕೊಳೆತ ಸ್ಥಿತಿಯಲ್ಲಿದ್ದು ಅದರ ಎರಡು ದಂತಗಳನ್ನು ಹಾಗೂ ಬಾಲವನ್ನು ಯಾರೋ ಕಳ್ಳರು ತುಂಡರಿಸಿ ಕಳವು ಮಾಡಿಕೊಂಡು ಹೋಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಜೀವನದಲ್ಲಿ ಜಿಗುಪ್ಸೆ ಯುವಕನ ಆತ್ಮಹತ್ಯೆ:

     ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಸಮೀಪದ ರಾಮನಗರದಲ್ಲಿ ನಡೆದಿದೆ. ವಿರಾಜಪೇಟೆ ನಗರ ಠಾಣಾ ಸರಹದ್ದಿನ ಬೇಟೋಳಿ ಗ್ರಾಮದ ರಾಮನಗರದಲ್ಲಿ ವಾಸವಾಗಿರುವ 27 ವರ್ಷ ಪ್ರಾಯದ ವಿಠಲ ಎಂಬ ಯುವಕ ಕೆಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ಬೇಸರಗೊಂಡು ದಿನಾಂಕ 29-10-2014ರಂದು ತಾನು ವಾಸವಾಗಿದ್ದ ಮನೆಯ ಸಮೀಪದ ಕಾಫಿತೋಟದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ನಗರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ.

Thursday, October 30, 2014

ಅಪ್ರಾಪ್ತೆ ಹುಡುಗಿ ಕಾಣೆ, ಅಪಹರಣದ ಶಂಕೆ:

     ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ತನ್ನ ಮನೆಯಿಂದ ಕಾಣೆಯಾದ ಘಟನೆ ಕಿರುಗಂದೂರು ಗ್ರಾಮದಲ್ಲಿ ನಡೆದಿದೆ. ಕಿರುಗುಂದೂರು ಗ್ರಾಮದ ಕೂವರ್‌ಕೊಲ್ಲಿ ಕಾಫಿ ತೋಟದಲ್ಲಿ ನೆಲೆಸಿರುವ ಸುಂದರ್‌ ಎಂಬವರ ಮಗಳು ಶಿಲ್ಪ, ಪ್ರಾಯ (17), ಅವರ ಮನೆಯಿಂದ ಕಾಣೆಯಾಗಿದ್ದು, ಈಕೆಯನ್ನು ಯಾರೋ ಅಪಹರಿಸಿರುವ ಶಂಕೆ ವ್ಯಕ್ತಪಡಿಸಿ ಆಕೆಯ ತಂದೆ ಸುಂದರ್‌ರವರು ನೀಡಿದ ದೂರಿನ ಮೇರೆಗೆ ಸೋಮವಾಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

ಜಾಗದ ವಿಚಾರದಲ್ಲಿ ಜಗಳ, ಮಹಿಳೆ ಮೇಲೆ ಹಲ್ಲೆ:

     ಸೋಮವಾರಪೇಟೆ ತಾಲೋಕು ದೊಡ್ಡ ಅಬ್ಬೂರು ಗ್ರಾಮದ ನಿವಾಸಿ ಶ್ರೀಮತಿ ಸಿ.ಜೆ. ಗೀತಾ ಎಂಬವರು ದಿನಾಂಕ 29-10-14 ರಂದು ತನ್ನ ಮನೆಯ ಹತ್ತಿರದಲ್ಲಿರುವ ಹಿತ್ತಲಿನಲ್ಲಿರುವಾಗ ಪಕ್ಕದ ಮನೆಯ ವಾಸಿಗಳಾದ ದೊಡ್ಡಯ್ಯ ಮತ್ತು ಯಶೋಧ ರವರು ತೋಟದ ಪಕ್ಕದಲ್ಲಿ ಬೇಲಿಯನ್ನು ಹಾಕಿದ್ದ ವಿಚಾರದಲ್ಲಿ ಜಗಳ ಮಾಡಿ ಸಿ.ಜೆ. ಗೀತಾರವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದು, ಸದರಿಯವರು ಚಿಕಿತ್ಸೆ ಬಗ್ಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಸಂಬಂಧ ಸೋಮವಾರಪೇಟೆಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಗೂಡ್ಸ್‌ ವಾಹನ ಬಸ್ಸಿಗೆ ಡಿಕ್ಕಿ: 
      ದಿನಾಂಕ 29-10-2014 ರಂದು ಗೋಣಿಕೊಪ್ಪ ಠಾಣಾ ಸರಹದ್ದಿನ ಜೋಡುಬಟ್ಟಿ ಜೋಡಿಬಟ್ಟಿ ಅರುವತ್ತೊಕ್ಲು ಗ್ರಾಮದಲ್ಲಿ ಗೋಣಿಕೊಪ್ಪ-ಪೊನ್ನಂಪೇಟೆ ಸಾರ್ವಜನಿಕ ರಸ್ತೆಯಲ್ಲಿ ಕೆ.ಎ.12-ಎ-7469ರ ಟಾಟಾ ಮ್ಯಾಕ್ಸಿಮೋ ಗೂಡ್ಸ್‌ ವಾಹನವನ್ನು ಅದರ ಚಾಲಕ ಮನು ಎಂಬ ವ್ಯಕ್ತಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಚಿಲ್ಲಿಗೇರಿ ಖಾಸಗಿ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಪೆಮ್ಮಂಡ ಎಂ. ತಮ್ಮಯ್ಯ ಮತ್ತು ಇನ್ನು ಕೆಲವರಿಗೆ ಗಾಯವಾಗಿದ್ದು, ಗೋಣಿಕೊಪ್ಪ ಠಾಣೆಯಲ್ಲಿಈ ಸಂಬಂಧ ಪ್ರಕರಣ ದಾಖಲಾಗಿದೆ.   

ಮೋಟಾರು ಸೈಕಲ್‌ಗೆ ಕಾರು ಡಿಕ್ಕಿ, ಸವಾರನಿಗೆ ಗಾಯ:

      ದಿನಾಂಕ 29-10-2014 ರಂದು ಸುಂಟಿಕೊಪ್ಪ ಠಾಣಾ ಸರಹದ್ದಿನ ಅಂದಗೋವೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಾಕೂರು ಗ್ರಾಮದ ನಿವಾಸಿ ಯೂಸುಫ್‌ ಎಂಬ ವ್ಯಕ್ತಿ ತನ್ನ ಮೋಟಾರ್‌ ಸೈಕಲ್‌ನಲ್ಲಿ ಸುಂಟಿಕೊಪ್ಪ ನಗರದ ಕಡೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಪೊನ್ನು ಎಂಬ ವ್ಯಕ್ತಿ ತನ್ನ ಕಾರನ್ನು ಅರೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಯೂಸೂಫ್‌ರವರು ಗಾಯಗೊಂಡಿದ್ದು, ಹಾಲಿ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Wednesday, October 29, 2014

ಮೊಬೈಲ್‌ ಶಾಫ್‌ನ ಬಾಗಿಲು ಮುರಿದು ಕಳ್ಳತನ: 

     ರಾತ್ರಿ ಸಮಯದಲ್ಲಿ ಮೊಬೈಲ್‌ ಶಾಫ್‌ನ ಬಾಗಿಲನ್ನು ಒಡೆದು ಮೊಬೈಲ್‌ ಫೋನ್‌ಗಳನ್ನು ಕಳ್ಳತನ ಮಾಡಿದ ಘಟನೆ ಶ್ರೀಮಂಗಲದಲ್ಲಿ ನಡೆದಿದೆ. ಶ್ರೀಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ಶ್ರೀಮಂಗಲ ಪಟ್ಟಣದಲ್ಲಿ ನಾಲ್ಕೇರಿ ಗ್ರಾಮದ ನಿವಾಸಿ ಕೆ.ಆರ್‌. ಮೋಹನ್‌ ಎಂಬವರಿಗೆ ಸೇರಿದ ಮೊಬೈಲ್‌ ಅಂಗಡಿಗೆ ದಿನಾಂಕ: 28-10-2014ರಂದು ರಾತ್ರಿ ಯಾರೋ ಕಳ್ಳರು ಶಾಫಿನ ಬಾಗಿಲು ಮುರಿದು ಒಳಪ್ರವೇಶಿಸುವ ಮೂಲಕ ಶಾಪಿನ ಒಳಗಡೆ Rack ನಲ್ಲಿಟ್ಟಿದ್ದ ZEN Mobile model no 72 ರ 4 Mobile, ZEN Mobile model no x 20 ರ Mobile 3 ಮೊಬೈಲ್, Moromax companyಯ 4 GB Memory card 10, 2 GB Memory card 8, 8GB Memory card 4, L700 Modal ನ Samsung Battery 10, Samsung Companyಯ Ear phones 10, ಈ ಮೇಲ್ಕಂಡ ಸ್ವತ್ತುಗಳ ಒಟ್ಟು ಮೌಲ್ಯ ಅಂದಾಜು 23,000ರೂ ಗಳಾಗಿದ್ದು ಈ ಸಂಬಂಧ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡಿರುತ್ತಾರೆ. 

ಕಾರು ಡಿಕ್ಕಿ, ಪಾದಾಚಾರಿಗೆ ಗಾಯ:
      ಪಾದಾಚಾರಿಗೆ ಕಾರು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಕುಟ್ಟ ಠಾಣಾ ಸರಹದ್ದಿನ ಬಾಡಗ ಗ್ರಾಮದಲ್ಲಿ ನಡೆದಿದೆ. ದಿನಾಂಕ 27-10-2014 ರಂದು ಸಮಯ 15.00 ಗಂಟೆಗೆ ವಿರಾಜಪೇಟೆ ತಾಲ್ಲೂಕು ಬಾಡಗ ಗ್ರಾಮದ ಪಲ್ಲೇರಿ ಬಳಿ, ಮೂಸೂರು ಜಿಲ್ಲೆ ರೇವಣ್ಣ ಎಂಬಾತ ಬಾಡಗ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಕೆ.ಎ-12 ಪಿ-2813 ರ ಕಾರನ್ನು ಅದರ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಢಿಕ್ಕಿಪಡಿಸಿದ ಪರಿಣಾಮ, ರೇವಣ್ಣನ ಎಡ ಕಾಲಿನ ಮಂಡಿಯ ಕೆಳಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು,ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಈ ಸಂಬಂಧ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಬೈಕ್‌ಗಳ ಮುಖಾಮುಖಿ ಡಿಕ್ಕಿ, ಎಎಸ್‌ಐ ಸೇರಿ ಒಬ್ಬನಿಗೆ ಗಾಯ:
     ದಿನಾಂಕ 28-10-2014 ರಂದು ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ಶ್ರೀ ಕೆ.ಎಸ್‌. ಮೇದಪ್ಪನವರು ಇಲಾಖಾ ಮೋಟಾರ್‌ ಸೈಕಲ್‌ನಲ್ಲಿ ತಿತಿಮತಿ-ಹುಣಸೂರು ಮುಖ್ಯ ರಸ್ತೆಯಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ ಎದುರುಗಡೆಯಿಂದ ಮರಪಾಲ ಗ್ರಾಮದ ನಿವಾಸಿ ಗಣೇಶ ಎಂಬುವವರು ತಮ್ಮ ಬಾಪ್ಸು ಮೋಟಾರ್‌ ಸೈಕಲ್‌ನನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎಎಸ್‌ಐ ಕೆ.ಎಸ್‌. ಮೇದಪ್ಪನವರು ಚಾಲಿಸುತ್ತಿದ್ದ ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಎಎಸ್‌ಐ ರವರು ಗಾಯಗೊಂಡಿದ್ದು ಅಲ್ಲದೆ ಮೋಟಾರ್‌ಸೈಕಲ್‌ ಸವಾರ ಗಣೇಶ ರವರಿಗೂ ಗಾಯಗಳಾಗಿದ್ದು, ಈ ಸಂಬಂಧ ಪೊನ್ನಂಪೇಟೆಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆ, ನೇಣು ಬಿಗಿದು ಮಹಿಳೆ ಆತ್ಮಹತ್ಯೆ:

     ವಿರಾಜಪೇಟೆ ತಾಲ್ಲೂಕು ನಾಲ್ಕೇರಿ ಗ್ರಾಮದ ಕಳ್ಳೇಂಗಡ ಪೂಣಚ್ಚರವರ ಲೈನ್ ಮನೆಯಲ್ಲಿ ವಾಸವಾಗಿದ್ದ ಶ್ರೀಮತಿ ಪಣಿಎರವರ ಪಾಚೆ ಎಂಬವರು ತನ್ನ ಗಂಡ ಮೃತಪಟ್ಟ ವಿಚಾರದಲ್ಲಿ ಬೇಸರಗೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28-10-2014 ರಂದು ಬೆಳಿಗ್ಗೆ ಪೂಣಚ್ಚರವರ ಕಾಫಿ ತೋಟದಲ್ಲಿರುವ ಮಾವಿನ ಮರಕ್ಕೆ ನೈಲಾನ್ ವೇಲ್‌ನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

Tuesday, October 28, 2014

 ಟ್ರ್ಯಾಕ್ಟರ್‌ ಮಗುಚಿ  ಇಬ್ಬರು ಮಕ್ಕಳ ದಾರುಣ ಸಾವು 
       ಟ್ರ್ಯಾಕ್ಟರೊಂದು ಮಗುಚಿ ಬಿದ್ದು ಅದರಲ್ಲಿದ್ದ ಮಣ್ಣು ಮುಚ್ಚಿ ಇಬರು ಮಕ್ಕಳು ದಾರುಣವಾಗಿ ಸಾವಿಗೀಡಾದ ಘಟನೆ ಪೊನ್ನಂಪೇಟೆ ಬಳಿಯ ಬಿಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 27/10/2014 ರಂದು ಬಿಳೂರು ನಿವಾಸಿ ಕಾಂಡೇರ ಸೋಮಯ್ಯ ಎಂಬವರು  ಅವರ ರಸ್ತೆಗೆ ಟ್ರ್ಯಾಕ್ಟರ್‌ ಒಂದರಲ್ಲಿ ಮಣ್ಣು ಹಾಕಿಸಲೆಂದು ಮಣ್ಣು ತುಂಬಿಸಿಕೊಂಡು ಹೋಗುತ್ತಿದ್ದಾಗ ಕೆಲಸಗಾರ ಪಿ.ಕೆ.ಜೋಗಿ ಎಂಬಾತನು ಆತನ ಮಗ 8 ವರ್ಷ ಪ್ರಾಯದ ಪೊನ್ನು ಹಾಗೂ ಸಂಬಧಿಕ ಹುಡುಗ 15 ವರ್ಷ ಪ್ರಾಯದ ಗಣೇಶ ಎಂಬವರನ್ನು ಸಹಾ ಟ್ರ್ಯಾಕ್ಟರ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರುವಾಗ ಬಿಳೂರು ಗ್ರಾಮದ ರಸ್ತೆಯಲ್ಲಿ ಎದುರಿನಿಂದ ಒಂದು ರಿಕ್ಷಾ ಬಂದಿದ್ದು ರಿಕ್ಷಾಕ್ಕೆ ದಾರಿ ಬಿಡುವ ಸಲುವಾಗಿ ಟ್ರ್ಯಾಕ್ಟರ್‌ ಚಾಲಕ ಸುಬ್ರಮಣಿ ಟ್ರ್ಯಾಕ್ಟರ್‌ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಟ್ರ್ಯಾಕ್ಟರ್‌ ಚರಂಡಿಗೆ ಮಗುಚುಬಿದ್ದು ಅದರಲ್ಲಿದ್ದ ಇಬ್ಬರು ಮಕ್ಕಳು ಕೆಳಗೆ ಬಿದ್ದು ಅವರ ಮೇಲೆ ಮಣ್ಣು ಬಿದ್ದು ಮುಚ್ಚಿಕೊಂಡ ಪರಿಣಾಮ ಇಬ್ಬರೂ ಮಕ್ಕಳು ದಾರುಣವಾಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗೂಡ್ಸ್ ವಾಹನ ಮಗುಚಿ ಇಬ್ಬರಿಗೆ ಗಾಯ 
         ಗೂಡ್ಸ್‌ ವಾಹನವೊಂದು ಮಗುಚಿ ಬಿದ್ದು ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಭಾಗಮಂಡಲ ಠಾಣೆಯಲ್ಲಿ ತಡವಾಗಿ ವರದಿಯಾಗಿದೆ. ದಿನಾಂಕ 09/10/2014ರಂದು ಕೇರಳದ ಕಾಂಞಂಗಾಡಿನ ನಿವಾಸಿ ಮಹಮದ್ ಆಸಿಫ್ ಎಂಬವರ ತಮ್ಮ ಮಹಮದ್‌ ಅಸಕರ್ ಹಾಗೂ ಆತನ ಸ್ನೇಹಿತ ನಷಾದ್‌ ಎಂಬವರು ಶಾಲೆಗೆ ರಜೆ ಇದ್ದ ಕಾರಣ ಫಯಾಜ್‌ ಎಂಬವರ ಕೆಎಲ್‌-60-ಎಫ್‌-292ರ ಟಾಟಾ 407 ಗೂಡ್ಸ್‌ ವಾಹನದಲ್ಲಿ ಮೈಸೂರಿಗೆ ಹೋಗಿದ್ದು, ವಾಪಾಸು ವಾಹನದಲ್ಲಿ ತರಕಾರಿ ತುಂಬಿಕೊಂಡು ಕಾಂಞಂಗಾಡಿಗೆ ಬರುತ್ತಿರುವಾಗ ಕರಿಕೆಯ ಬಳಿ ಚಾಲಕ ಫಯಾಜ್‌ನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ಗೂಡ್ಸ್‌ ವಾಹನವು ಮಗುಚಿ ಬಿದ್ದು ನಷಾದ್‌ ಹಾಗೂ ಮಹಮದ್‌ ಅಸ್ಕರ್‌ಗೆ ಗಾಯಗಳಾಗಿರುವುದಾಗಿ ಮೊಬೈಲ್‌ ಫೋನ್‌ ಮೂಲಕ ಮಹಮದ್‌ ಆಸಿಫ್‌ರವರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕಾಂಞಂಗಾಡ್‌ ಮತ್ತು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ದಿನಾಂಕ 27/10/2014ರಂದುನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿವಾಹಿತ ಮಹಿಳೆ ನಾಪತ್ತೆ ; ಪ್ರಕರಣ ದಾಖಲು 
         ವಿವಾಹಿತ ಮಹಿಳೆಯೋರ್ವರು ಪತಿಯ ಮನೆಯಿಂದ ನಾಪತ್ತೆಯಾದ ಪ್ರಕರಣ ನಾಪೋಕ್ಲು ಬಳಿಯ ಯವಕಪಾಡಿ ಗ್ರಾಮದಲ್ಲಿ ನಡೆದಿದೆ. ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದ ನಿವಾಸಿ ಎಂ.ಎ.ಬಸಪ್ಪ ಎಂಬವರ ಮಗಳು ನಯನ ಎಂಬಾಕೆಯನ್ನು ಯವಕಪಾಡಿ ಗ್ರಾಮದ ನಾಗೇಶ್‌ ಎಂಬವರು ವಿವಾಹವಾಗಿದ್ದು, ದಿನಾಂಕ 15/10/2014ರಿಂದ ನಯನಳು ಪತಿಯ ಮನೆಯಿಂದ ನಾಪತ್ತೆಯಾಗಿರುವುದಾಗಿ ನಯನಳ ಅತ್ತೆ ಸಾವಿತ್ರಿಯವರು ದೂರವಾಣಿ ಮೂಲಕ ತಿಳಿಸಿರುವುದಾಗಿ ನಯನಳ ತಂದೆ ಬಸಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ 
           ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೊಂಡ ಘಟನೆ ಸೋಮವಾರಪೇಟೆ ಬಳಿಯ ಹಾನಗಲ್ಲು ಬಾಣೆಯಲ್ಲಿ ನಡೆದಿದೆ. ಹಾನಗಲ್ಲು ಬಾಣೆ ನಿವಾಸಿ ಆಶಾ ಎಂಬವರ ಪತಿ ಪ್ರಭ ಎಂಬವರು ನಿತ್ಯ ಮದ್ಯಪಾನ ಮಾಡುತ್ತಿದ್ದು ದಿನಾಂಕ 27/10/2014ರಂದು ಮನೆಯಿಂದ ಹೊರಗೆ ಹೋಗಿ ಸಂಜೆ ಮನೆಗೆ ಬರುವಾಗ ಯಾವುದೋ ವಿಷ ಸೇವಿಸಿ ಮನೆಗೆ ಬಂದು ತಾನು ವಿಷ ಸೇವನೆ ಮಾಡಿರುವುದಾಗಿ ಪತ್ನಿ ಆಶಾಳಿಗೆ ತಿಳಿಸಿದ್ದು, ಕೂಡಲೇ ಆಶಾರವರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಶಾಲಾ ಆಟದ ಸಾಮಗ್ರಿ ಕಳವು 
             ಶಾಲಾ ರಜೆಯ ಸಮಯದಲ್ಲಿ ಕಳ್ಳರು ಶಾಲೆಯ ಕೊಠಡಿಯೊಂದರ ಬೀಗ ಮುರಿದು ಆಟದ ಸಾಮಗ್ರಿಗಳನ್ನು ಕಳವು ಮಾಡಿರುವ ಪ್ರಕರಣ ಮಾದಾಪುರದಲ್ಲಿ ನಡೆದಿದೆ. ದಿನಾಂಕ 03/10/2014ರಿಂದ 26/10/2014ರ ವರೆಗೆ ಮಾದಾಪುರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ದಸರಾ ರಜೆ ಇದ್ದು ಈ ಸಂದರ್ಭದಲ್ಲಿ ಶಾಲೆಯ ಆಟದ ಸಾಮಗ್ರಿಗಳಿರುವ ಕೊಠಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಸುಮಾರು. ರೂ. 9000/- ಬೆಲೆ ಬಾಳುವ ಆಟದ ಸಾಮಗ್ರಿಗಳನ್ನು ಕಳವು ಮಾಡಿರುವುದಾಗಿ ಶಾಲಾ ಮುಖ್ಯೋಪಾಧ್ಯಾಯರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಕಳ್ಳರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. 

Monday, October 27, 2014

ಜಗಳ ಬಿಡಿಸಲು ಹೋದ ವ್ಯಕ್ತಿಯ ಮೇಲೆ ಹಲ್ಲೆ 
         ಜಗಳ ಬಿಡಿಸಲು ಹೋದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ಬಳಿಯ ಕಕ್ಕೆ ಹೊಳೆ ಜಂಕ್ಷನ್‌ನಲ್ಲಿ ನಡೆದಿದೆ. ದಿನಾಂಕ 26/10/2014ರ ರಾತ್ರಿ ವೇಳೆ ಸೋಮವಾರಪೇಟೆ ನಗರದ ನಿವಾಸಿ ಕೆ.ಬಿ.ಸುರೇಶ ಎಂಬವರು ನಗರದ ಕಕ್ಕೆಹೊಳೆ ಪಕ್ಕದಲ್ಲಿರುವ ಕೃಷ್ಣ ಬೇಕರಿಗೆ ತಿಂಡಿ ಖರೀದಿಲೆಂದು ಹೋದಾಗ ಅಲ್ಲಿ ಬೇಕರಿ ಮಾಲೀಕ ಶಿವಸ್ವಾಮಿ ಎಂಬವರೊಂದಿಗೆ ಕಾನ್ವೆಂಟ್‌ ಬಾಣೆ ನಿವಾಸಿಗಳಾದ ಚರಂಜೀವಿ, ಪ್ರೇಂಸಾಗರ್‌ ಮತ್ತು ಹೇಮಂತ್‌ ಎಂಬವರುಗಳು ಜಗಳವಾಡುತ್ತಿದ್ದುದನ್ನು ಕಂಡು ಸಮಾಧಾನಪಡಿಸಲು ಹೋದಾಗ ಮೂವರೂ ಸೇರಿ ಸುರೇಶ್‌ರವರ ಮೇಲೆ ಕೈಯಿಂದ ಹೊಡೆದು ಚಾಕುವಿನಿಂದ ತಿವಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ವಾಲಿಸ್ ವಾಹನ ಮತ್ತು ಜೀಪು ಅಫಘಾತ ; ಇಬ್ಬರಿಗೆ ಗಾಯ 
       ಕ್ವಾಲಿಸ್‌ ವಾಹನಕ್ಕೆ ಜೀಪೊಂದು ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಮಡಿಕೇರಿ ನಗರದ ಚೈನ್‌ ಗೇಟ್‌ ಬಳಿ ಸಂಭವಿಸಿದೆ. ದಿನಾಂಕ 26/10/2014ರ ಸಂಜೆ ವೇಳೆ ವಿರಾಜಪೇಟೆಯ ಪಂಜರಪೇಟೆ ನಿವಾಸಿ ಪರ್ವೇಝ್‌ ಎಂಬವರು ಅವರ ಕೆಎ-02-ಪಿ-6236ರ ಟೊಯೊಟಾ ಕ್ವಾಲಿಸ್‌ ವಾಹನದಲ್ಲಿ ಕುಶಾಲನಗರ ಕಡೆಗೆ ಹೋಗುತ್ತಿರುವಾಗ ನಗರದ ಚೈನ್‌ ಗೇಟ್‌ ಬಳಿ ಮ್ಯಾನಸ್‌ ಕಾಂಪೌಂಡ್‌ ಕಡೆಯಿಂದ ಕೆಎ-12-ಎನ್‌-6051ರ ಜೀಪನ್ನು ಅದರ ಚಾಲಕ ಮಿಥುನ್‌ ಎಂಬವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ಪರ್ವೇಝ್‌ರವರ ಕ್ವಾಲಿಸ್ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ವಾಹನದಲ್ಲಿದ್ದ ಆಶಾ ಮತ್ತು ಜನಾರ್ಧನ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿನಾ ಕಾರಣ ಮಹಿಳೆಯ ಮೇಲೆ ಹಲ್ಲೆ 
      ವಿನಾ ಕಾರಣ ಮಹಿಳೆಯೊಬ್ಬರ ಮೇಲೆ ಗುಂಪು ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಬಳಿಯ ಚೌಡ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 26/10/2014 ಸಂಜೆ ವೇಳೆ ಚೌಡ್ಲು ಗ್ರಾಮದ ಗಾಂದಿನಗರ ನಿವಾಸಿ ಗೌರಿ ಎಂಬವರು ಮನೆಯ ಮುಂದಿನ ಅಂಗಳದಲ್ಲಿರುವಾಗ  ಅಲ್ಲಿಗೆ ಬಂದ ಅದೇ ಗ್ರಾಮದ ಸತೀಶ, ಶಂಕರ, ರಾಜೇಶ್ವರಿ, ದಿಲೀಪ, ರೇಣುಕಾ ಮತ್ತು ಸವಿತಾ ಎಂಬವರು ವಿನಾಕಾರಣ ಗೌರಿಯೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿದ್ದು ಚಾಕುವಿನಿಂದ ಕೈಗೆ ಗೀರಿ ಗಾಯಗೊಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವರದಕ್ಷಿಣೆ ಕಿರುಕುಳ : ಪ್ರಕರಣ ದಾಖಲು 
     ಪತಿ ಹಾಗೂ ಪತಿಯ ಕುಟುಂಬದವರಿಂದ ಮಹಿಳೆಯೊಬ್ಬಳು ವರದಕ್ಷಿಣೆ ಕಿರುಕುಳಕ್ಕೊಳಗಾದ ಘಟನೆ ಶನಿವಾರಸಂತೆ ನಗರದ ಗುಂಡೂರಾವ್‌ ಬಡಾವಣೆಯಯಲ್ಲಿ ನಡೆದಿದೆ. ನಗರದ ನಿವಾಸಿ ನಾಜಿಯಾ ಭಾನು ಎಂಬವರು ಸುಮಾರು ನಾಲ್ಕು ವರ್ಷಗಳ ಹಿಂದೆ ಅನ್ಸರ್‌ ಖಾನ್‌ ಎಂಬವರನ್ನು ವಿವಾಹವಾಗಿದ್ದು, ಮದುವೆಯ ಸಮಯದಲ್ಲಿ ವರದಕ್ಷಿಣೆಯನ್ನು ಕೊಟ್ಟಿದ್ದರೂ ಸಹಾ ನಂತರ ಪುನಃ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದು, ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಕ್ಕಳಾಗಲಿಲ್ಲವೆನ್ನುವ ಕಾರಣದಿಂದ ಪತಿ ಅನ್ಸರ್‌ ಖಾನ್, ಅತ್ತೆ ಖುರ್ಷಿದುನ್ನಿಸಾ ಮತ್ತು ನಾದಿನಿ ಷಾಜಿಯಾರವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೋಟಾರು ಬೈಕಿಗೆ ಜೀಪು ಡಿಕ್ಕಿ ; ಇಬ್ಬರಿಗೆ ಗಾಯ 
      ಮೋಟಾರು ಬೈಕೊಂದಕ್ಕೆ ಜೀಪು ಡಿಕ್ಕಿಯಾದ ಬೈಕು ಸವಾರರಿಬ್ಬರಿಗೆ ಗಾಯಗಳಾದ ಘಟನೆ ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ನಿವಾಸಿಯಾದ ಆರ್‌ ಹರ್ಷ ಎಂಬವರು ತನ್ನ ಸ್ನೇಹಿತರೊಂದಿಗೆ ದಿನಾಂಕ 26/10/2014ರಂದು ಅವರ ಮೋಟಾರು ಬೈಕ್‌ ಸಂಖ್ಯೆ ಕೆಎ-03-ಇಯು-9386ರಲ್ಲಿ ಧರ್ಮಸ್ಥಳದಿಂದ ಮಡಿಕೇರಿಯತ್ತ ಬರುತ್ತಿರುವಾಗ ಕಾಟಕೇರಿ ಬಳಿ ಮಂಗಳೂರು ರಸ್ತೆಯಲ್ಲಿ ಕೆಎ-51-ಎಂ-1492ರ ಬೊಲೆರೋ ಜೀಪಿನ ಚಾಲಕ ಸುರೇಶ್‌ ಎಂಬಾತನು ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹರ್ಷರವರು ಓಡಿಸುತ್ತಿದ್ದ ಮೋಟಾರು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಹರ್ಷ ಹಾಗೂ ಆತನ ಸ್ನೇಹಿತ ರಾಜೇಶ್‌ರವರು ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಶೀಲ ಶಂಕಿಸಿ ಪತ್ನಿಯ ಮೇಲೆ ಹಲ್ಲೆ 
      ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. 7ನೇ ಹೊಸಕೋಟೆ ನಿವಾಸಿ ಭಾಗ್ಯ ಎಂಬಾಕೆಯ ಪತಿ ಮಂಜು ಎಂಬವರು ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಜಗಳ ಮಾಡುತ್ತಿದ್ದು, ದಿನಾಂಕ 24/10/2014ರಂದು ರಾತ್ರಿ ಭಾಗ್ಯರವರು ಮನೆಯಲ್ಲಿ ಊಟ ಮುಗಿಸಿ ಮಗಳೊಂದಿಗೆ ಮೂತ್ರ ವಿಸರ್ಜನೆಗೆಂದು ಹೊರಗೆ ಬಂದಾಗ ಪತಿ ಮಂಜು ಭಾಗ್ಯಳ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, October 26, 2014

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ 
       ಕ್ಷುಲ್ಲಕ ಕಾರಣಕ್ಕೆ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿಧ ಘಟನೆ ಕೊಡ್ಲಿಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 24/10/2014ರ ಸಂಜೆ ವೇಳೆ ನೀರುಗುಂದ ನಿವಾಸಿ ಪರಿಶಿಷ್ಟ ಜನಾಂಗದ ದರ್ಶನ್‌ ಎಂಬವರು ಕೊಡ್ಲಿಪೇಟೆ ಬಸ್‌ ನಿಲ್ದಾಣದಲ್ಲಿ ಅವರ ಸ್ನೇಹಿತರೊಂದಿಗೆ ಮಾತನಾಡಿಕೊಂಡಿರುವಾಗ ಅಲ್ಲಿಗೆ ಬಂದ ನೀರುಗುಂದ ಗ್ರಾಮದ ಕರುಣಾಕರ, ನಂದೀಶ, ಮಂಜ ಮತ್ತು ಇತರೆ 5 ಜನರು ದರ್ಶನ್‌ರವರೊಂದಿಗೆ ಜಗಳವಾಡಿ ಅಶ್ಲೀಲ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ವರದಿಯಾಗಿದೆ. ದಿನಾಂಕ 23/10/2014ರಂದು ಆರೋಪಿಗಳಲ್ಲಿಬ್ಬರಾದ ಮನೋಹರ ಮತ್ತು ಮಂಜರವರು ದರ್ಶನ್‌ರವರ ಮನೆಯ ಮುಂದೆ ಅತಿ ವೇಗವಾಗಿ ಬೈಕ್‌ ಚಾಲಿಸಿದ್ದನ್ನು ದರ್ಶನ್‌ರವರು ಪ್ರಶ್ನಿಸಿದ್ದೇ ಘಟನೆಗೆ ಕಾರಣವೆನ್ನಲಾಗಿದೆ. ಶನಿವಾರಸಂತೆ ಪೊಲೀಸರು ಈ ಸಂಬಂಧ ದರ್ಶನ್‌ರವರ ಮೇಲೆ ಹಲ್ಲೆ ಮಾಡಿದ 8 ಜನರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪ್ರಾಪ್ತರಿಬ್ಬರ ಮದುವೆ ಯತ್ನ, ಪ್ರಕರಣ ದಾಖಲು 
       ಅಪ್ರಾಪ್ತರಿಬ್ಬರಿಗೆ ಮದುವೆ ಮಾಡಿಸಲು ಯತ್ನಿಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಿಗ್ಗಾಲುವಿನಲ್ಲಿ ನಡೆದಿದೆ. ದಿನಾಂಕ 25/10/2014ರಂದು ಮಡಿಕೇರಿಯ ಶಿಶು ಅಭಿವೃದ್ದಿ ಅಧಿಕಾರಿ ಪಾರ್ವತಿ ಎಂಬವರು ಕಿಗ್ಗಾಲುವಿನ ನಿವಾಸಿ ಅಪ್ರಾಪ್ತ ವಯಸ್ಸಿನ ದಿನೇಶ ಹಾಗೂ ಮೂರ್ನಾಡುವಿನ ನಿವಾಸಿ ಭೀಮಯ್ಯ ಎಂಬವರ ಮಗಳು 16 ವರ್ಷ ಪ್ರಾಯದ ರಮ್ಯ ಎಂಬ ಬಾಲಕಿಯೊಂದಿಗೆ ದಿನಾಂಕ 26/10/2014ರಂದು ಮದುವೆ ನಡೆಸಲು ಅವರ ಪೋಷಕರು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿರುವುದಾಗಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಬಂಧ ವಿಚಾರಣೆ ನಡೆಸಿದಾಗ ದಿನೇಶನ ಕಾರಣದಿಂದ ತಾನು 3 ತಿಂಗಳ ಗರ್ಭೀಣಿಯಾಗಿರುವುದಾಗಿ ಬಾಲಕಿ ರಮ್ಯಳು ತಿಳಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಈ ಸಂಬಂಧ ಅತ್ಯಾಚಾರ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಸ್ತಿ ವಿಚಾರಕ್ಕೆ ಮಹಿಳೆಯ ಮೇಲೆ ಹಲ್ಲೆ 
      ಆಸ್ತಿ ವಿಚಾರವಾಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಭಾಗಮಂಡಲ ಬಳಿಯ ಪದಕಲ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 24/10/2014ರಂದು ಪದಕಲ್ಲು ನಿವಾಸಿ ಪೂಣಚ್ಚ ಎಂಬವರ ತಮ್ಮ ಗಣೇಶ ಹಾಗೂ ಆತನ ಪತ್ನಿ ಜ್ಯೋತಿ ಎಂಬವರು ಜೆಸಿಬಿ ಯಂತ್ರದ ತರಿಸಿ ಅದರ ಸಹಾಯದಿಂದ ಪೂಣಚ್ಚನವರ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಸುಮಾರು 25 ಕಾಫಿ ಗಿಡಗಳನ್ನು ಕಿತ್ತು ನೆಲಸಮ ಮಾಡುತ್ತಿರುವುದನ್ನು ಕಂಡ ಪೂಣಚ್ಚನವರ ಪತ್ನಿ ಮುತ್ತವ್ವನವರು ವಿಚಾರಿಸಲು ಹೋದಾಗ ಗಣೇಶ ಹಾಗೂ ಜ್ಯೋತಿಯುವರು ಮುತ್ತವ್ವನವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಮತ್ತು ರಿಕ್ಷಾ ಡಿಕ್ಕಿ, ಇಬ್ಬರಿಗೆ ಗಾಯ 
       ರಿಕ್ಷಾವೊಂದಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾದ ಘಟನೆ ಮೂರ್ನಾಡು ಬಳೀಯ ಬಾಡಗ ಗ್ರಾಮದಲ್ಲಿ ನಡೆದಿದೆ. ದಿನಾಂಕ 24/10/2014ರಂದು ಕಿಗ್ಗಾಲು ನಿವಾಸಿ ಬಿ.ಎ.ದಿನಕರ ಎಂಬವರು ಅವರ ಆಟೋ ರಿಕ್ಷಾ ಸಂಖ್ಯೆ ಕೆಎ-12-ಎ-9710ರಲ್ಲಿ ತಿಮ್ಮಯ್ಯ ಎಂಬವರನ್ನು ಬಾಡಿಗೆಗೆ ಕರೆದುಕೊಂಡು ಕಿಗ್ಗಾಲಿಗೆ ಹೋಗುತ್ತಿರುವಾಗ ವಿರಾಜಪೇಟೆ ರಸ್ತೆಯ ಎಂ.ಬಾಡಗ ಗ್ರಾಮದ ಬೇಟೆ ಚಾಮುಂಡಿ ದೇವಸ್ಥಾನದ ರಸ್ತೆಯ ಬಳಿ ಎದುರಿನಿಂದ ಕೆಎ-12-ಎನ್‌-1252ರ ಮಾರುತಿ ಕಾರನ್ನು ಅದರ ಚಾಲಕ ಸಂಜು ಸುಬ್ಬಯ್ಯ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ದಿನಕರರವರು ಚಾಲಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ದಿನಕರ ಹಾಗೂ ರಿಕ್ಷಾ ಪ್ರಯಾಣಿಕ ತಿಮ್ಮಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹೆಂಗಸು ಕಾಣೆ ಪ್ರಕರಣ ದಾಖಲು 
      ಮಹಿಳೆಯೋರ್ವಳು ಮನೆಯಿಂದ ಹೋಗಿ ನಾಪತ್ತೆಯಾದ ಪ್ರಕರಣ ಮಡಿಕೇರಿ ನಗರದ ಎಲ್‌ಐಸಿ ಕಚೇರಿಯ ಬಳಿ ನಡೆದಿದೆ. ನಗರದ ಎಲ್‌ಐಸಿ ಕಚೇರಿ ಬಳಿಯ ನಿವಾಸಿ ರಿಚರ್ಡ್‌ ಎಂಬವರ ಪತ್ನಿ ಹಿಲ್ಡಾ ಎಂಬವರು ಸುಮಾರು 12 ವರ್ಷಗಳಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡಿಕೊಂಡಿದ್ದು, ದಿನಾಂಕ 13/10/2014ರಂದು ಬೆಳಿಗ್ಗೆ ಪಾಲಿಬೆಟ್ಟದ ಹಾಸ್ಟೆಲ್‌ ಒಂದರಲ್ಲಿ ಕೆಲಸ ದೊರೆಯುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು ನಂತರ ವಾಪಾಸು ಬಾರದೇ ಇದ್ದ ಕಾರಣ ಆಕೆಯನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದಿದ್ದು, ಇತ್ತೀಚೆಗೆ ಆಕೆ ಸ್ವಾಮಿ ಎಂಬಾತನೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದು, ಆತನೊಂದಿಗೆ ಹೋಗಿರಬಹುದಾಗಿ ಶಂಕಿಸಿ ಹಿಲ್ಡಾಳ ಪತಿ ರಿಚರ್ಡ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Saturday, October 25, 2014

ಪರಸ್ಪರ ಕಾರು ಡಿಕ್ಕಿ, ಗಾಯ 
       ಕಾರುಗಳೆರಡು ಪರಸ್ಪರ ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಶನಿವಾರಸಂತೆ ನಗರದಲ್ಲಿ ನಡೆದಿದೆ. ದಿನಾಂಕ 23/10/2014ರಂದು ಸಕಲೇಶಪುರ ತಾಲೂಕಿನ ಹುಣಸವಳ್ಳಿ ನಿವಾಸಿ ಹೆಚ್‌.ಸಿ.ಮಂಜುನಾಥ ಎಂಬವರು ಅವರ ಸ್ವಂತ ಕೆಲಸದ ನಿಮಿತ್ತ ಶನಿವಾರಸಂತೆಗೆ ಅವರ ಮಾರುತಿ ಓಮಿನಿ ವ್ಯಾನು ಸಂಖ್ಯೆ ಕೆಎ-46-ಎಂ-2446ರಲ್ಲಿ ಬಂದು ವಾಪಾಸು ಹೋಗುವಾಗ ಶನಿವಾರಸಂತೆ ನಗರದ ರಾಮ ಮಂದಿರದ ಬಳಿ ಎದುರಿನಿಂದ ಕೆಎ-02-ಎಂ-4838ರ ಮಾರುತಿ ಕಾರನ್ನು ಅದರ ಚಾಲಕ ಮಜರ್‌ ಪಾಷ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಂಜುನಾಥರವರ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ಮಂಜುನಾಥ ಮತ್ತು ಮಜರ್ ಪಾಷರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯ ವರ್ತನೆ, ಕೊಲೆ ಬೆದರಿಕೆ 
          ಮನೆಯಲ್ಲಿ ಒಬ್ಬಳೇ ಇದ್ದ ಅಪ್ರಾಪ್ತ ಬಾಲಕಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 24/10/2014ರಂದು 7ನೇ ಹೊಸಕೋಟೆ ನಿವಾಸಿ ಭಾಸ್ಕರ ಎಂಬವರ ಮಗಳು 15 ವರ್ಷ ಪ್ರಾಯದ ತೀರ್ಥಶ್ರೀ ಎಂಬ ಬಾಲಕಿಯು ಒಬ್ಬಳೇ ಮನೆಯಲ್ಲಿ ಇದ್ದಾಗ ಅದೇ ಗ್ರಾಮದ ಕುಮಾರನ್‌ ಎಂಬಾತನು ಕತ್ತಿ ಕೇಳುವ ನೆವದಲ್ಲಿ ಬಂದು ಮನೆಯೊಳಗೆ ಪ್ರವೇಶಿಸಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಅದೇ ವೇಳೆಗೆ ಬಾಲಕಿಯ ಪೋಷಕರು ಮನೆಗೆ ಬಂದಾಗ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಬಸ್ಸು ಡಿಕ್ಕಿ, ಇಬ್ಬರಿಗೆ ಗಾಯ 
        ಕಾರೊಂದಕ್ಕೆ ಬಸ್ಸು ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ವಿರಾಜಪೇಟೆ ಬಳಿಯ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 24/10/2014ರಂದು ಬೆಂಗಳೂರು ನಿವಾಸಿ ಎಂ.ಡಿ.ಭೀಮಯ್ಯ ಎಂಬವರು ಅವರ ಕಾರು ಕೆಎ-03-ಎಂಪಿ-9473ರಲ್ಲಿ ತಂದೆ ಪೂವಪ್ಪ, ಪತ್ನಿ ನೇತ್ರಾ ಮತ್ತು ಕೆಲಸದಾಕೆ ಗೀತಾ ಎಂಬವರೊಂದಿಗೆ ಮಡಿಕೇರಿಗೆ ಬಂದು ವಾಪಾಸು ತೆರಾಲು ಗ್ರಾಮಕ್ಕೆ ಹೋಗುತ್ತಿರುವಾಗ ಬಿಟ್ಟಂಗಾಲ ಬಳಿ ಕೆಎ-40-ಎಫ್‌-991ರ ಕೆ.ಎಸ್‌.ಆರ್‌.ಟಿ.ಸಿ. ಬಸ್ಸನ್ನು ಅದರ ಚಾಲಕ ಶ್ರೀಮಂತ್ ಮಾಳ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭೀಮಯ್ಯನವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿಗೆ ಹಾನಿಯಾಗಿ ಕಾರಿನಲ್ಲಿದ್ದ ಭೀಮಯ್ಯ ಮತ್ತು ಗೀತಾರವರಿಗೆ ಗಾಯಗಳಾಗಿರುವುದಾಗಿ ದೂರು ನೀಡಿದ್ದು, ಅದೇ ರೀತಿ ಕಾರು ಚಾಲಕ ಭೀಮಯ್ಯನವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಪಡಿಸಿರುವುದಾಗಿ ಬಸ್ಸು ಚಾಲಕ ಶ್ರೀಮಂತ್‌ ಮಾಳ ಸಹಾ ದೂರು ನೀಡಿದ್ದು  ವಿರಾಜಪೇಟೆ ಗ್ರಾಮಾಂತರ ಪೊಲೀಸರು ಎರಡೂ ದೂರುಗಳ ಮೇಲೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳುಗಾರಿಕೆ ಪ್ರಕರಣ ದಾಖಲು 
            ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಪ್ರಕರಣವೊಂದನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ್ದಾರೆ. ದಿನಾಂಕ 24/10/2014ರಂದು ಮೂರ್ನಾಡಿನ ಮುತ್ತಾರ್ಮುಡಿಯ ಮುತ್ತಾರ್ಮುಡಿ ಹೊಳೆಯಲ್ಲಿ ಯಾರೋ ಅಕ್ರಮವಾಗಿ ಮರಳು ತೆಗೆಯುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಮೂರ್ನಾಡು ಉಪ ಠಾಣೆಯ ಎಎಸ್‌ಐ ಡಿ.ಟಿ.ಬಿದ್ದಪ್ಪನವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಹೊಳೆಯಲ್ಲಿ ಒಂದು ತೆಪ್ಪವನ್ನುಪಯೋಗಿಸಿ ಮೂವರು ಮರಳು ತೆಗೆಯುತ್ತಿದ್ದುದು ಕಂಡು ಬಂದಿದ್ದು, ಪೊಲೀಸರನ್ನು ಕಂಡ ಮೂವರೂ ಸ್ಥಳದಿಂದ ಓಡಿ ಹೋಗಿದ್ದು, ಅಕ್ರಮ ಮರಳುಗಾರಿಕೆಗೆ ಉಪಯೋಗಿಸಿದ ತೆಪ್ಪ ಮತ್ತು ಇನತನಿತರ ಪರಿಕರಗಳನ್ನು ವಶಪಡಿಸಿಕೊಂಡು ಮರಳು ತೆಗೆಯುತ್ತಿದ್ದವರ ಬಗ್ಗೆ ಸಾರ್ವಜನಿಕರಲ್ಲಿ ವಿಚಾರಿಸಿ ತಿಳಿದು ಬಂದಂತೆ ಕಾಂತೂರು ಮೂರ್ನಾಡು ಗ್ರಾಮದ ಹೆಚ್‌.ಡಿ.ರವಿ, ಹೆಚ್‌.ಎನ್‌.ರಾಜ ಮತ್ತು ಹೆಚ್‌.ಬಿ.ಬೋಪಣ್ಣ ಎಂಬವರ ಮೇಲೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕುದಿಯುವ ನೀರಿಗೆ ಬಿದ್ದು ವ್ಯಕ್ತಿಯ ಆಕಸ್ಮಿಕ ಸಾವು 
       ಕುದಿಯುವ ನೀರಿಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಮಡಿಕೇರಿ ನಗರದ ಮಹದೇವಪೇಟೆಯಲ್ಲಿ ನಡೆದಿದೆ. ದಿನಾಂಕ 18/10/2014ರಂದು ಮಹದೇವಪೇಟೆ ನಿವಾಸಿ ಮಹಮದ್‌ ತಾಸಿನ್‌ ಎಂಬಾತನು ಸ್ನಾನಕ್ಕೆಂದು ಸ್ನಾನ ಗೃಹಕ್ಕೆ ತೆರಳಿದ್ದು ಅಲ್ಲಿ ಅಪಸ್ಮಾರ ರೋಗದ ಪರಿಣಾಮ ಆಕಸ್ಮಿಕವಾಗಿ ಕುದಿಯುವ ನೀರಿಗೆ ಬಿದ್ದು ನಂತರ ಚಿಕಿತ್ಸೆಗೆಂದು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 24/10/2014ರಂದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಜೀಪು ಡಿಕ್ಕಿ, ಇಬ್ಬರಿಗೆ ಗಾಯ 
       ಬೈಕಿಗೆ ಜೀಪು ಡಿಕ್ಕಿಯಾಗಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಜಂಕ್ಷನ್‌ನಲ್ಲಿ ನಡೆದಿದೆ. ದಿನಾಂಕ 22/10/2014ರಂದು ಶ್ರೀಮಂಗಲದ ಕೆ.ಕೆ.ಆರ್‌.ಟಿ ಎಸ್ಟೇಟ್ ನಿವಾಸಿ ಪರಮಶಿವ ಮತ್ತು ಅವರ ಅಣ್ಣ ಅರ್ಜುನ ಎಂಬವರು ಕೆಎ-12-ಎಲ್‌-2584ರ ಮೋಟಾರು ಬೈಕಿನಲ್ಲಿ ಟಿ.ಶೆಟ್ಟಿಗೇರಿಯ ವೆಸ್ಟ್‌ ನೆಮ್ಮಲೆಗೆ ಹೋಗುವ ಜಂಕ್ಷನ್‌ನ ಬಳಿ ಹೋಗು್ತಿರುವಾಗ ಕೆಎ-12-ಎಂ-9179ರ ಜೀಪು ಚಾಲಕ ಭಾನು ಎಂಬಾತ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪರಮಶಿವರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರೂ ಬೈಕಿನಿಂದ ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 


      

Friday, October 24, 2014

ವೀಸಾ ಕೊಡಿಸುವುದಾಗಿ ನಂಬಿಸಿ ವಂಚನೆ 
     ವಿದೇಶಕ್ಕೆ ಹೋಗಲು ವಿಸಾ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ಹಣವನ್ನು ವಂಚಿಸಿದ ಘಟನೆ ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ.ದಿನಾಂಕ 19/08/2014ರಂದು ಎಮ್ಮೆಮಾಡು ನಿವಾಸಿ ಪಿ.ಇ.ಹಂಸ ಮತ್ತು ಸಿ.ಕೆ.ಉಮ್ಮರ್‌ ಮತ್ತು ಆಲಿ ಎಂಬವರನ್ನು ಉದ್ಯೋಗ ನಿಮಿತ್ತ ಮಲೇಷ್ಯಕ್ಕೆ ಕಳುಹಿಸುವುದಾಗಿ ಕುಶಾಲನಗರ ನಿವಾಸಿ ಅಹಮದ್‌ ಎಂಬವರು ನಂಬಿಸಿ ವಿಸಾವನ್ನು ಪಡೆಯುವಸಲುವಾಗಿ ಹಂಸ, ಉಮ್ಮರ್ ಮತ್ತು ಆಲಿರವರುಗಳಿಂದ ಅವರ ಪಾಸ್‌ಪೋರ್ಟ್‌ ಮತ್ತು ಸುಮಾರು ರೂ. 6 ಲಕ್ಷಗಳಷ್ಟು ಹಣವನ್ನು ಪಡೆದುಕೊಂಡು ಯಾವುದೇ ವೀಸಾವನ್ನು ಮಾಡಿಕೊಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ನುಗ್ಗಿ ಬೆಳ್ಳಿ ಸಾಮಗ್ರಿ ಕಳವು 
    ಮನೆಯೊಂದರ ಮಾಡಿನ ಹೆಂಚು ತೆಗೆದು ಒಳನುಗ್ಗಿ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ಶನಿವಾರಸಂತೆ ಬಳಿಯ ಒಡೆಯನಪುರ ಗ್ರಾಮದಲ್ಲಿ ನಡೆದಿದೆ. ಒಡೆಯನಪುರ ನಿವಾಸಿ ಜೆ.ಪಿ.ಪುಟ್ಟಪ್ಪ ಎಂಬವರು ದಿನಾಂಕ 22/10/2014ರಂದು ಕುಟುಂಬ ಸಮೇತ ಬೆಂಗಳೂರಿಗೆ ಹೋಗಿದ್ದು, ದಿನಾಂಕ 23/10/2014ರಂದು ವಾಪಾಸು ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಹೆಂಚನ್ನು ತೆಗೆದು ಒಳ ನುಗ್ಗಿ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ 
      ಜೀವನದಲ್ಲಿ ಜುಗುಪ್ಸೆಗೊಂಡು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಸಮೀಪದ ಅರುವತ್ತೊಕ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 22/10/2014ರಂದು ಅರುವತೊಕ್ಲು ನಿವಾಸಿ 60 ವರ್ಷ ಪ್ರಾಯದ ಜಾನಕಿ ಎಂಬವರು  ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ವಿಷಯ ತಿಳಿದ ಜಾನಕಿಯವರ ಮಗ ಚಂದ್ರ ಎಂಬವರು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತರಾಗಿದ್ದು, ಅನಾರೋಗ್ಯ ಹಾಗೂ ಅತಿಯಾದ ಮದ್ಯಪಾನದಿಂದಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರ ಸಾಗಾಟ, ಇಬ್ಬರ ಬಂಧನ 
       ಅಕ್ರಮವಾಗಿ ಅಪಾರ ಬೆಲೆಯ ಮರ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಸೋಮವಾರಪೇಟೆ ಪೊಲೀಸರು ಇಬ್ಬರನ್ನು ಬಂಧಿಸಿ ಮರವನ್ನು ವಶಪಡಿಸಿಕೊಂಡಿದ್ದಾರೆ. ದಿನಾಂಕ 23/10/2014ರಂದು ಅಕ್ರಮವಾಗಿ ಮರ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಪ್ರದೀಪ್‌ ಕುಮಾರ್‌ರವರು ಸೋಮವಾರಪೇಟೆಯ ಆಲೆಕಟ್ಟೆ ಬಳಿ ಹಾನಗಲ್ಲು ನಿವಾಸಿಗಳಾದ ಆನಂದ ಹಾಗೂ ಗುರಪ್ಪ ಎಂಬವರು ಕೆಎ-12-6919 ರ ಪಿಕ್‌ ಅಪ್‌ ಜೀಪಿನಲ್ಲಿ ಸುಮಾರು ರೂ. 1,00,000/- ಬೆಲೆ ಬಾಳುವ ಬೀಟೆ ಮರದ ನಾಟಾಗಳನ್ನುಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಇಬ್ಬರನ್ನೂ ಬಂಧಿಸಿ ಮರವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, October 23, 2014

ಹಳೇ ವೈಷಮ್ಯ, ವ್ಯಕ್ತಿಯ ಕೊಲೆಗೆ ಯತ್ನ:

     ಹಳೇ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಸೇರಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಎಂ. ಬಾಡಗ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೋಕು, ಎಂ. ಬಾಡಗ ಗ್ರಾಮದ ನಿವಾಸಿ ಅಚ್ಚಕಾಳೀರ ದಿಲೀಪ್‌ ರವರನ್ನು ಅವರ ಕುಟುಂಬದವರೇ ಆದ ಕಿರಣ ಮತ್ತು ಅಶ್ವತ್ ರವರು ಈ ಹಿಂದೆ ಜಗಳವಾದ ಹಿನ್ನಲೆಯಲ್ಲಿ ದ್ವೇಷವನ್ನಿಟ್ಟುಕೊಂಡು ದಿನಾಂಕ 22-10-2014 ರಂದು ಅಚ್ಚಕಾಳೀರ ದಿಲೀಪ್‌ ರವರ ಮನೆಯ ಹತ್ತಿರ ಕಾರಿನಲ್ಲಿ ಬಂದು ಸದರಿಯವರನ್ನುಎಳೆದು ಕಾರಿನಲ್ಲಿ ಹತ್ತಿಸಿಕೊಂಡು ಮೂರ್ನಾಡು ಕೊಂಡಂಗೇರಿ ಜಂಕ್ಷನ್‌ ರಸ್ತೆಯಲ್ಲಿರುವ ಅಶ್ವತ್‌ನ ಆಟೋ ಸ್ಪೇರ್ ಪಾರ್ಟ್ಸ್ ಅಂಗಡಿ ಒಳಗಡೆ ಹಾಕಿ ಸೆಟ್ರಸ್ ಬಂದ್‌ ಮಾಡಿ ಕೊಲ್ಲುವ ಉದ್ದೇಶದಿಂದ ರಬ್ಬರ್ ಪೀಸ್‌ಗಳಿಂದ ಸ್ಕ್ರೂ ಡ್ರೈವರ್ ನಿಂದ ಶರೀರಕ್ಕೆ ಹಲ್ಲೆ ನಡೆಸಿ ಗಂಭೀರ ಗಾಯಗಳನ್ನು ಮಾಡಿದ್ದು , ಈ ಸಂಬಂಧ ಮಡಿಕೇರಿ ಗ್ರಾಮಾಂತರಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ದ್ವೇಷದ ಹಿನ್ನಲೆ, ವ್ಯಕ್ತಿಯ ದಾರಿ ತಡೆದು ಹಲ್ಲೆ:

      ಮಡಿಕೇರಿ ತಾಲೋಕು ಮಕ್ಕಂದೂರು ಗ್ರಾಮದ ನಿವಾಸಿ ಎಂ.ಎಂ. ಶಂಶುದ್ದೀನ್‌ರವರು ದಿನಾಂಕ 22-10-2014 ರಂದು ವ್ಯಕ್ತಿ ಅಬ್ಬಿಫಾಲ್ಸ್‌ ರಸ್ತೆಯಲ್ಲಿ ಲಾರಿಯನ್ನು ನಿಲ್ಲಿಸಿಕೊಂಡು ಇರುವಾಗ ಕೃಷ್ಣಪ್ಪ @ ರೆಮ್ಮಿ ಎಂಬ ವ್ಯಕ್ತಿ ಅಲ್ಲಿಗೆ ಬಂದು ಹಳೆಯ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

ರಸ್ತೆ ಅಪಘಾತ, ಲಾರಿ ಚಾಲಕನ ಸಾವು:

     ದಿನಾಂಕ 16-10-2014 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ್- ವಿರಾಜಪೇಟೆ ಸಾರ್ವಜನಿಕ ರಸ್ತೆಯಲ್ಲಿ ಲಾರಿ ಅಪಘಾತವಾಗಿದ್ದು, ಸದರಿ ಲಾರಿಯ ಚಾಲಕ ಕೇರಳರಳದ ಕಣ್ಣಾನೂರಿನ ನಿವಾಸಿ ಸಿ.ಎಂ. ವಿಜಯನ್‌ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗೆ ಕಣ್ಣಾನೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಆತ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 22-10-2014 ರಂದು ಮೃತಪಟ್ಟಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಮಡಿರುತ್ತಾರೆ. 

ಕಾರುಗಳು ಮುಖಾಮುಖಿ ಡಿಕ್ಕಿ:

     ಮಡಿಕೇರಿ ಸಮೀಪದ ಸಂಪಿಗೆ ಕಟ್ಟೆ ಯಲ್ಲಿ ವಾಸವಾಗಿರುವ ಮುರಳೀದರ ಹಾಗು ಅವರ ಕುಟುಂಬದವರು ದಿನಾಂಕ19-10-2014 ರಂದು ರಾತ್ರ 11-30 ಗಂಟೆಗೆ ಕಾರಿನಲ್ಲಿ ಮಡಿಕೇರಿ ಕಡೆಗೆ ಬರುತ್ತಿದ್ದಾರ ಕೆದಕಲ್‌ ತಿರುವಿನಲ್ಲಿ ಇದುರುಗಡೆಯಿಂದ ಬಂದ ಕಾರನ್ನು ಅದರ ಚಾಲ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುರಳೀದರ ರವರ ಕಾರಿಗೆಡಿಕ್ಕಿ ಪಡಿಸಿ ಕಾರಿನಲ್ಲಿ ಪ್ರಯಾಣಿಸಿಸುತ್ತಿದ್ದ ವರಿಗೆ ಗಾಯಗಳಾಗಿದ್ದು ಅಲ್ಲದೆ ಕಾರು ಜಖಂ ಗೊಂಡಿದ್ದು, ಸುಂಟಿಕೊಪ್ಪ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Wednesday, October 22, 2014

ಅಕ್ರಮ ಪಟಾಕಿ ಮಾರಾಟ, ಓರ್ವನ ಬಂಧನ 
      ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಸಿದ್ದಾಪುರ ಪೊಲೀಸರು ಬಂಧಿಸಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ದಿನಾಂಕ 21/10/2014ರಂದು ಸಿದ್ದಾಪುರ ನಗರದಲ್ಲಿ ಓರ್ವ ವ್ಯಕ್ತಿ ಯಾವುದೇ ರಹದಾರಿ ಇಲ್ಲದೆ ಪಟಾಕಿಗಳನ್ನು ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಠಾಣೆಯ ಎ.ಎಸ್‌.ಐ ಹೆಚ್‌.ವೈ.ರಾಜುರವರು ಸಿಬ್ಬಂದಿಗಳೊಂದಿಗೆ ಸಿದ್ದಾಪುರ ನಗರದ ಮುಖ್ಯ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಬಟ್ಟೆ ಅಂಗಡಿಯ ಬಳಿ ತೆರಳಿದಾಗ ಸಿದ್ದಾಪುರ ನಿವಾಸಿ ಪಿ.ಧರ್ಮರಾಜು ಎಂಬವರು ಅಂಗಡಿಯ ಮುಂದೆ ಯಾವುದೇ ರಹದಾರಿ ಇಲ್ಲದೆ ಅಕ್ರಮವಾಗಿ ಪಟಾಕಿಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಧರ್ಮರಾಜುರವರನ್ನು ಬಂಧಿಸಿ ಆತನಿಂದ ಸುಮಾರು ರೂ.6,000/- ಬೆಲೆ ಬಾಳುವ ಪಟಾಕಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ 
     ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 21/10/2014ರಂದು ಕರ್ಣಂಗೇರಿಯ ನಿವಾಸಿ ಕೊಕ್ಕಲೆರ ಕಾವೇರಪ್ಪ ಎಂಬವರ ತೋಟದ ಲೈನು ಮನೆಯಲ್ಲಿ ವಾಸವಿರುವ ಗೀತಾ ಎಂಬಾಕೆಯ ಪತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಿವಾಸಿ ಜನಾರ್ಧನ ಎಂಬವರು ಮನೆಯ ಛಾವಣಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
     ಗೀತಾರವರು ಮೃತ ಜನಾರ್ಧನರವನ್ನು 7 ವರ್ಷಗಳ ಹಿಂದೆ ಮದುವೆಯಾಗಿದ್ದು, ನಂತರದ ದಿನಗಳಲ್ಲಿ ಪತಿಯ ಮನೆ ತೊರೆದು ಕರ್ಣಂಗೇರಿಯಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದು, ಕೌಟುಂಬಿಕ ಹೊಂದಾಣಿಕೆಯ ಕೊರತೆಯೇ ಜರ್ನಾರ್ಧನರವರ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. 

ಆಸ್ತಿ ವಿವಾದ ವ್ಯಕ್ತಿಗೆ ಕೊಲೆ ಬೆದರಿಕೆ 
        ಆಸತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಕೊಲೆ ಬೆದರಿಕೆ ಒಡ್ಡಿರುವ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 23/09/2014ರಂದು ಹೆಗ್ಗಳ ನಿವಾಸಿ ಕೆ.ರಾಜ ಎಂಬವರು ನಗರದ ಮುಸ್ಲಿಂ ಸಮುದಾಯದ ಸ್ಮಶಾನದ ಬಳಿ ಕೆಲಸ ಮಾಡಿಕೊಂಡಿರುವಾಗ ಕೇರಳದ ಕೋಯಿಕ್ಕೋಡ್ ನಿವಾಸಿಗಳಾದ ಪ್ರದೀಶ್‌, ವಿನೋದ್‌ ಹಾಗೂ ವಿರಾಜಪೇಟೆಯ ಆರ್ಜಿ ನಿವಾಸಿ ಆಲ್ಬರ್ಟ್‌ ಡಿ'ಸೋಜಾರವರು ಬಂದು ರಾಜರವರ ಕೋಯಿಕ್ಕೋಡ್‌ ನಗರದ ಚೇವಾಯೂರ್‌ನಲ್ಲಿರುವ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಕೋಯಕ್ಕೋಡ್‌ ನಗರಕ್ಕೆ ಕೂಡಲೇ ಬರುಂತೆ ಬಲಾತ್ಕರಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ರಾಜರವರು ನ್ಯಾಯಾಲಯಕ್ಕೆ ನೀಡಿದ ದೂರನ್ನು ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯವು ನೀಡಿದ ನಿರ್ದೇಶನದ ಮೇರೆಗೆ ವಿರಾಜಪೇಟೆ ಗ್ರಾಮಾಂತರ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಬೈಕ್‌ ಅಫಘಾತ, ಓರ್ವನಿಗೆ ಗಾಯ 
      ಚಾಲಕನ ನಿಯಂತ್ರಣ ತಪ್ಪಿ ಬೈಕೊಂದು ಅಫಘಾತಕ್ಕೀಡಾದ ಘಟನೆ ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 21/10/2014ರಂದು ಮೈಸೂರಿನ ನಿವಾಸಿಗಳಾದ ರಾಹುಲ್‌, ಸಿದ್ದೇಶ್‌ ಮತ್ತು ಶ್ರೇಯಸ್‌ ಎಂಬವರುಗಳು ಎರಡು ಬೈಕುಗಳಲ್ಲಿ ಪ್ರವಾಸಕ್ಕೆಂದು ಕೊಡಗಿಗೆ ಬಂದಿದ್ದು, ನಾಪೋಕ್ಲು ಸಮೀಪದ ಚೇಲಾವರ ಜಲಪಾತ ವೀಕ್ಷಿಸಿಕೊಂಡು ವಾಪಾಸು ನಾಪೋಕ್ಲು ಕಡೆ ಹೋಗುತ್ತಿರುವಾಗ ಕೊಳಕೇರಿ ಬಳಿ ಶ್ರೇಯಸ್‌ನು ಆತ ಚಾಲಿಸುತ್ತಿದ್ದ ಕೆಎ-09-ಇಟಿ-7957ರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ಆತನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದ ಪರಿಣಾಮ ಶ್ರೇಯಸ್‌ಗೆ ಗಂಭೀರ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅತೀವ ಮದ್ಯಪಾನ, ವ್ಯಕ್ತಿಯ ಸಾವು 
      ಅತೀವ ಮದ್ಯಪಾನದಿಂದಾಗಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಶನಿವಾರಸಂತೆ ಬಳಿಯ ಗುಡುಗಳಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 20/10/2014ರಂದು ಗುಡುಗಳಲೆ ನಿವಾಸಿ ರಾಜಸ್ಥಾನ ಮೂಲದ ಹೇಮಾ ಎಂಬವರ ಪತಿ ರಾಂಸಿಂಗ್‌ ಎಂಬಾತನು ವಿಪರೀತ ಮದ್ಯಪಾನ ಮಾಡಿಕೊಂಡು ಎಲ್ಲಿಯೋ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಬಂದು ರಾತ್ರಿ ಮನೆಯಲ್ಲಿ ಮಲಗಿದ್ದು, ಬೆಳಿಗ್ಗೆಯಾದರೂ ಎದ್ದೇಳದ ಕಾರಣ ಪತ್ನಿ ಹೇಮಾರವರು ಹೋಗಿ ನೋಡುವಾಗ ರಾಂಸಿಂಗ್‌ರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, October 21, 2014

 ಪಿ.ಜಿ. ಸೆಂಟರ್‌ನಿಂದ ಬಾಲಕ ಕಾಣೆ:

     ಮಡಿಕೇರಿ ತಾಲೋಕು, ನರಿಯಂದಡ ಗ್ರಾಮದ ವಾಸಿ ಶ್ರೀಮತಿ ಎಂ.ಜಿ.ಶ್ಯಾಮಲ ಎಂಬುವವರ .ಮಗ ಪ್ರಾಯ 15 ವರೆ ವರ್ಷದ ಎಂ ಜಿ ಸುನಿಲ್ ಕಾರ್ಯಪ್ಪ ನು ಪಾಲಿಬೆಟ್ಟದ ಲೂರ್ಡ್ಸ್ ಕಾನ್ವೆಂಟ್ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದು, ಈತನು ಸಿದ್ದಾಪುರ ಮೈಸೂರು ರಸ್ತೆಯಲ್ಲಿ ಇರುವ ಪಿ ಜಿ ಸೆಂಟರ್ ನಲ್ಲಿ ಎರಡು ವರ್ಷದಿಂದ ಇದ್ದುಕೊಂಡು ವ್ಯಾಸಂಗವನ್ನು ಮಾಡಿಕೊಂಡಿದ್ದು ದಿನಾಂಕ 20-10-2014 ರಂದು ಸಮಯ ಬೆಳಿಗ್ಗೆ ಪತ್ರವನ್ನು ಬರೆದು ಇಟ್ಟು ಮನೆಯಿಂದ ಅವನ ಬಟ್ಟೆಬರೆಗಳನ್ನು ತೆಗೆದುಕೊಂಡು ಎಲ್ಲಿಗೋ ಹೋಗಿದ್ದು ತದನಂತರ ಕಾಣೆಯಾಗಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಹಳೇ ದ್ವೇಷ, ಹಲ್ಲೆ: 
    ಮಡಿಕೇರಿ ನಗರದ ದಾಸವಾಳದಲ್ಲಿ ವಾಸವಾಗಿರುವ ಬಿ.ಕೆ. ರಶ್ಮಿ ಎಂಬವರು ದಿನಾಂಕ 20-10-2014 ರಂದು ಮಧ್ಯಾಹ್ನ 02.30 ರಸಮಯದಲ್ಲಿ ತಮ್ಮ ಮನೆಯ ಹೊರಗಡೆ ನಿಂತುಕೊಂಡಿರುವಾಗ್ಗೆ ಸುರೇಶ್‌ ಎಂಬವರು ಅಲ್ಲಿಗೆ ಬಂದು ಆಸ್ತಿಯ ವಿಚಾರದಲ್ಲಿ ಹಳೆ ವೈಷಮ್ಯವನ್ನು ಇಟ್ಟುಕೊಂಡು ಜಗಳ ಮಾಡಿ ಅವಾಷ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಲು ಯತ್ನಿಸಿದ್ದುಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  

Monday, October 20, 2014

ಮೊಬೈಲ್‌ ಟವರ್‌ಗೆ ಅಳವಡಿಸಿದ 2 ಲಕ್ಷ ಮೌಲ್ಯದ ಬ್ಯಾಟರಿ ಕಳವು:

     ಮೊಬೈಲ್‌ ಟವರ್‌ಗೆ ಅಳವಡಿಸಿದ ಸುಮಾರು 2 ಲ ಕ್ಷ ರೂಪಾಯಿ ಮೌಲ್ಯದ ಬ್ಯಾಟರಿಗಳು ಕಳ್ಳತನವಾದ ಘಟನೆ ಮಡಿಕೇರಿ ತಾಲೋಕು ಇಬ್ನಿವಳವಾಡಿ ಗ್ರಾಮದಲ್ಲಿ ನಡೆದಿದೆ. ಹೆಚ್.ಎಂ. ಶಿಶಿರ ಎಂಬವವರು ಸುಮಾರು 1 ತಿಂಗಳಿನಿಂದ ನಿಶಾ ಕಂಪೆನಿಯಲ್ಲಿ ಸೆಕ್ಯೂರಿಟಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 20-10-2014 ರಂದು ಸಮಯ    5-30 ಎಎಂಗೆ ಟೆಕ್ನಿಶಿಯನ್‌ ದೇವರಾಜುರವರು ಕರೆ ಮಾಡಿ ಇಬ್ನಿವಳವಾಡಿ ಗ್ರಾಮದಲ್ಲಿ ಅಳವಡಿಸಿದ ಏರ್‌ಟೆಲ್‌ ಟವರ್‌ ಸೈಟ್‌ ಐಡಿ- ಐ.ಬಿ.ಎನ್‌.ವಿ.ಡಿ -1 ಸೈಟ್‌ನ ಟವರ್‌ನಲ್ಲಿ ಏನೋ ತೊಂದರೆಯಾಗಿರುವುದಾಗಿ ತಿಳಿಸಿದ್ದು ಅದರಂತೆ ಹೆಚ್.ಎಂ. ಶಿಶಿರರವರು ಹೋಗಿ ನೋಡಲಾಗಿ ಏರ್‌ಟೆಲ್‌ ಟವರಿಗೆ ಅಳವಡಿಸಿದ ಇಂಡೋಸ್‌ ಕಂಪೆನಿಗೆ ಸೇರಿದ 24 ಬ್ಯಾಟೆರಿಗಳ ಪೈಕಿ 22 ಬ್ಯಾಟರಿಗನ್ನು ಯಾರೋ ಕಳ್ಳರು ಕಳವು ಮಾಡಿದ್ದು ಇವುಗಳ ಒಟ್ಟು ಮೌಲ್ಯ 2,00,000 ರೂ ಆಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಪೊಲೀಸ್‌ ದಾಳಿ, ಅಕ್ರಮ ಗೋವು ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ:

    ಅಕ್ರಮವಾಗಿ ಗೋವುಗಳನ್ನು ಕಟಾವು ಮಾಡಲು ಸಾಗಾಟ ಮಾಡುತ್ತಿದ್ದವರ ಮೇಲೆ ಮಡಿಕೇರಿ ನಗರ ಪೊಲೀಸರು ದಾಳಿ ನಡೆಸಿದ್ದಾರೆ. ದಿನಾಂಕ 20-10-2014 ರಂದು ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಿಗೆ ದೊರೆತ ಮಾಹಿತಿಯ ಮೇರೆಗೆ, ಮಡಿಕೇರಿ ನಗರ ಅಪರಾಧ ವಿಭಾಗದ ಪೊಲೀಸ್‌ ಉಪ ನಿರೀಕ್ಷಕರಾದ ಕೆ.ಪಿ. ಹರಿಶ್ಚಂದ್ರರವರು ಸಿಬ್ಬಂದಿಯೊಂದಿಗೆ ಮಡಿಕೇರಿ ತಾಲೋಕು, ಮದೆನಾಡು ಗ್ರಾಮದಲ್ಲಿ ದಾಳಿ ನಡೆಸಿ ಮದೆ ಮಾದೂರಪ್ಪ ದೇವಸ್ಥಾನದ ರಸ್ತೆಯಲ್ಲಿ ಯಾರೋ ಕಳ್ಳರು ದನಗಳನ್ನು ಕಟಾವು ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕೇರಳದ ಕಡೆಗೆ ಸಾಗಿಸಲು ಹೊಡೆದುಕೊಂಡು ಹೋಗುತ್ತಿದ್ದುದನ್ನು ಪತ್ತೆಹಚ್ಚಿ 3 ದನಗಳನ್ನು ಹಾಗೂ ಆರೋಪಿಯಾದ ಹೊದವಾಡ ಗ್ರಾಮದ ನಿವಾಸಿ ಕೆ. ಇ ರಜಾಕ್, ತಂದೆ ಕೆ ಎಸ್ ಇಬ್ರಾಹಿಂ, ಪ್ರಾಯ 31 ವರ್ಷ, ದನದ ವ್ಯಾಪಾರಿ, ಇವರನ್ನು ವಶಕ್ಕೆತೆಗೆದುಕೊಂಡು, ಅವರ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿರುತ್ತಾರೆ.  

ಕಾರ್‌ ಹಾಗು ಜೀಪ್‌ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಾಯ:

   ವಿರಾಜಪೇಟೆ ತಾಲೋಕು ಗುಹ್ಯ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಗೀತಾ ಎಂಬವರು  ದಿನಾಂಕ 19-10-2014 ರಂದು ಸದನ್‌ ಎಂಬವರ  ಬಾಪ್ತು ಮಾರುತಿ 800 ಕಾರು ನಂ ಕೆಎ-12-ಪಿ-9528 ರಲ್ಲಿ ಅಭ್ಯತ್‌ಮಂಗಲಕ್ಕೆ ಹೋಗುತ್ತಿರುವಾಗ ಕುಶಾಲನಗರ ಸಿದ್ದಾಪುರ ತಾರು ರಸ್ತೆಯಲ್ಲಿ ಎದುರುಗಡೆಯಿಂದ ಕೆಎ-12-ಪಿ-7193 ರ ಬೊಲೆರೋ ಜೀಪನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿ ಕೊಂಡು ಬಂದು ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಶ್ರೀಮತಿ ಗೀತಾರವರ ಕಾಲಿಗೆ ಗಾಯವಾಗಿದ್ದು ಸದರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ,ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಮಡಿರುತ್ತಾರೆ.

ಹಣದ ವಿಚಾರ, ಮಹಿಳೆ ಮೇಲೆ ಹಲ್ಲೆ:

    ಮಡಿಕೇರಿ ತಾಲೋಕು ಕಾಂತೂರು ಮೂರ್ನಾಡು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಚೈತ್ರ ರವರೊಂದಿಗೆ ಆರೋಪಿ ಶಿವಪ್ರಕಾಶ್‌ ಎಂಬವರು ಹಣದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೀದು ಹಲ್ಲೆ ನಡೆಸಿ ನೋವನ್ನುಂಟುಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ಸದರಿಶ್ರೀಮತಿ ಚೈತ್ರ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

Sunday, October 19, 2014


ಕ್ಷುಲ್ಲಕ ಕಾರನ, ಮಹಿಳೆ ಮೇಲೆ ಹಲ್ಲೆ:  
        ಕ್ಷುಲ್ಲಕ ಕಾರಣಕ್ಕೆ  ಮಹಿಳೆ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದಲ್ಲಿ ನಡೆದಿದೆ.  ಸೋಮವಾರಪೇಟೆ ತಾಲೋಕು ಚೌಡ್ಲು ಗ್ರಾಮದ ನಿವಾಸಿ ಶ್ರೀಮತಿ ವಿಜಯ ರವರು ದಿನಾಂಕ 18/10/2014 ರಂದು ಸಮಯ 07:00 ಪಿ.ಎಂ ಗೆ ಮಾರುತಿ ಓಮಿನಿ ವ್ಯಾನ್‌ನ್ನು ನಿಲ್ಲಿಸಿದ್ದ ವಿಚಾರವಾಗಿ ಮಂಜುನಾಥ ಎಂಬ ವ್ಯಕ್ತಿ ಜಗಳ ತೆಗೆದು ಶ್ರೀಮತಿ ವಿಜಯರವರ ಗಂಡ ರಮೇಶ ರವರನ್ನು ತಳ್ಳುತ್ತಿದ್ದಾಗ ಇದನ್ನು ಕಂಡು ಬಿಡಿಸಲು ಹೋದ  ಶ್ರೀಮತಿ ವಿಜಯಾರವರ ಹೊಟ್ಟೆಯ ಭಾಗಕ್ಕೆ ಮಂಜುನಾಥರವರು ಕಾಲಿನಿಂದ ಒದ್ದು ನೋವನ್ನುಂಟು ಮಾಡಿದ್ದು ಅಲ್ಲದೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

Friday, October 17, 2014

ದ್ವೇಷದ ಹಿನ್ನೆಲೆ ವ್ಯಕ್ತಿಯ ದಾರಿ ತಡೆದು ಹಲ್ಲೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದು ಮರಗೋಡು ಗ್ರಾಮದ ನಿವಾಸಿ ಬಿ.ಎಸ್‌. ಹರಿಶ್ಚಂದ್ರ ಮರಗೊಡು ಪಟ್ಟಣದಲ್ಲಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದು ಈ ದಿನ ದಿನಾಂಕ 17-10-2014 ರಂದು ಎಂದಿನಂತೆ ಅಂಗಡಿಯಲ್ಲಿ ಇದ್ದು ಸಂಜೆ 06-15 ಪಿ ಎಂ ಗೆ ಅಂಗಡಿಯನ್ನು ಮುಚ್ಚಿ ತನ್ನ ಬಾಪ್ತು ಕೆಎ-12-ಎಲ್-9999 ಬೈಕಿನಲ್ಲಿ ಮನೆ ಕಡೆಗೆ ಹೋಗುವಾಗ ಕುರಿ ಮಾಂಸದ ಅಂಗಡಿಯ ಬಳಿ ತಲುಪುವಾಗ್ಗೆ ಕೊಂಪುಳೀರ ಶೇಖರ ಹಾಗೂ ಪಾಪಣ್ಣನವರು ಬಂದು ಬೈಕನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ನೀನು ನಮ್ಮ ಮರಳು ಲಾರಿಯನ್ನು ಪೊಲೀಸರಿಗೆ ಹೇಳಿ ಹಿಡಿಸಿದ್ದೀಯಾ, ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಮೂಗು, ಮುಖ, ಎದೆಯ ಬಲ ಭಾಗಕ್ಕೆ ಗುದ್ದಿ ನೋವು ಪಡಿಸಿದ್ದು, ನಂತರ ಚಿಕಿತ್ಸೆಯ ಬಗ್ಗೆ ತನ್ನ ಕಾರಿನಲ್ಲಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಹೊಗಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

Thursday, October 16, 2014

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಮೇಲೆ ಹಲ್ಲೆ: 

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಇನ್ನೋರ್ವ ವ್ಯಕ್ತಿ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .ಸೋಮವಾರಪೇಟೆ ತಾಲೋಕು, ಕುಸುಬೂರು ಗ್ರಾಮದ ನಿವಾಸಿ ಜಿ.ಎಂ.ಯೋಗೇಶ್‌ ಎಂಬವರು ಈ ದಿನ 12-00 ಗಂಟೆ ಸಮಯದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಗೇಟ್ ಬಳಿ ನಿಂತುಕೊಂಡಿರುವಾಗ್ಗೆ ಸೋಮವಾರಪೇಟೆ ತಾಲೋಕು ಕರ್ಕಳ್ಳಿ ಬಾಣೆಯ ವಾಸಿ ಮನೋಹರ್ ಎಂಬ ವ್ಯಕ್ತಿ ಅಲ್ಲಿಗೆ ಬಂದು ಹಸಿ ಮೆಣಸಿನ ಕಾಯಿ ವಿಚಾರವಾಗಿ ಜಗಳ ತೆಗೆದು ಹಲ್ಲೆ ಬಿದ್ದಿದ್ದ ಬಿದಿರಿನ ದೊಣ್ಣೆಯಿಂದ ಜಿ.ಎಂ. ಯೋಗೇಶ್‌ರವರ ಹಣೆಯ ಭಾಗಕ್ಕೆ ಹಾಗೂ ಕಣ್ಣಿನ ಭಾಗಕ್ಕೆ ಹೊಡೆದು ಗಾಯಪಡಿಸಿದ್ದು ನಂತರ ಸದರಿಯವರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಸದರಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಬ್ಯಾಂಕ್‌ ಚೆಕ್‌ಗಳ ಮೂಲಕ ಪಾಲುದಾರನಿಗೆ ವಂಚನೆ: 

     ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ವಾಸವಾಗಿರುವ ಮತ್ರಂಡ ರವಿ ಉತ್ತಯ್ಯರವರು ಹಾಗೂ ಪೊನ್ನಂಪೇಟೆ ನಿವಾಸಿ ಎಂ.ಪಿ. ಅಪ್ಪಚ್ಚು ಎಂಬವರು 2000 ಸಾಲಿನಲ್ಲಿ ಜಂಟಿಯಾಗಿ ಪೊನ್ನಂಪೇಟೆ ನಗರದಲ್ಲಿ ಸೌತ್ ವಿಂಡ್ ಬಾರ್ ಅಂಡ್ ರೆಸ್ಟೊರೆಂಟ್ ಎಂಬ ಬಾರನ್ನು ನಡೆಸಿ ವ್ಯಾಪಾರ ಮಾಡಿಕೊಂಡಿದ್ದು ವ್ಯಾಪಾರ ವ್ಯವಹಾರದ ಸಂದರ್ಭದಲ್ಲಿ ಮತ್ರಂಡ ರವಿ ಉತ್ತಯ್ಯರವರು ತನ್ನ ಪಾಲುದಾರರಾದ ಎಂ.ಪಿ. ಅಪ್ಪಚ್ಚುರವರಿಗೆ ಖಾಲಿ ಚೆಕ್ಕುಗಳನ್ನು ನೀಡಿದ್ದು ನಂತರ 2006 ನೇ ಸಾಲಿನಲ್ಲಿ ಸದರಿಯವರ ವ್ಯಾಪಾರವು ನಷ್ಟವಾದ್ದರಿಂದ ಬಾರನ್ನು ಮುಚ್ಚಿದ್ದು ಮತ್ರಂಡ ರವಿ ಉತ್ತಯ್ಯರವರು ನೀಡಿದ ಚೆಕ್ಕನ್ನು ಎಂ.ಪಿ.ಅಪ್ಪಚ್ಚು ದರ್ಬಳಕೆ ಮಾಡಿಕೊಂಡು ರೂ 20,00,000/- ಸದರಿ ಚೆಕ್‌ಗಳಲ್ಲಿ ನಮೂದಿಸಿ ಹಣವನ್ನು ಟೌನ್ ಬ್ಯಾಂಕ್ ಪೊನ್ನಂಪೇಟೆ ಶಾಖೆಯಲ್ಲಿ ಚೆಕ್ಕನ್ನು ನೀಡಿನಗದೀಕರಿಸಲು ಪ್ರಯತ್ನಿಸಿದ್ದು ಅಲ್ಲದೆ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Wednesday, October 15, 2014

ನಗರ ಪೊಲೀಸರಿಂದ ಬೈಕ್‌ ಕಳ್ಳನ ಬಂಧನ, 5 ಬೈಕ್‌ಗಳ ವಶ:
ಆರೋಪಿ ಮತ್ತು ವಶಪಡಿಸಿಕೊಂಡ ಬೈಕ್‌ಗಳು
      ಪೊಲೀಸ್‌ ಕಾರ್ಯಾಚರಣೆಯಲ್ಲಿ ಬೈಕ್‌ ಕಳ್ಳನೊಬ್ಬನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಡಿಕೇರಿ ನಗರ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಕಳವು ಆದ 5 ಬೈಕ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ಮಡಿಕೇರಿ ನಗರದ ಗೌಳಿಬೀದಿಯಲ್ಲಿ ವಾಸವಾಗಿರುವ ಬಸವರಾಜು ಎಂಬವರು ತಮ್ಮ ಮನೆಯ ಮುಂದುಗಡೆ ತಮ್ಮ ಬಾಪ್ತು ಸ್ಕೂಟರನ್ನು ನಿಲ್ಲಿಸಿದ್ದನ್ನು ದಿನಾಂಕ 23-7-2014ರ ರಾತ್ರಿ ಯಾರೋ ಕಳ್ಳರು ಸದರಿ ಸ್ಕೂಟರನ್ನುಕಳ್ಳತನ ಮಾಡಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಈ ದಿನ ದಿನಾಂಕ 15-10-2014 ರಂದು ನಾಪೋಕ್ಲು ಸಮೀಪ ಸೇತುವೆ ಬಳಿ ಸದರಿ ಸ್ಕೂಟರ್‌ ಕಳ್ಳ ನಾಪೋಕ್ಲು ಚೆರಿಯಪರಂಬು ನಿವಾಸಿ ರಾಜು ಎಂಬುವವರ ಮಗ 21 ವರ್ಷ ಪ್ರಾಯದ ನಿಶಾಂತ್‌@ ಮೋಹನ್ ಕುಮಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನಂತರದ ಕಾರ್ಯಾಚರಣೆಯಲ್ಲಿ ಈ ಹಿಂದೆ ಕಳ್ಳತನ ಮಾಡಿದ 4 ದ್ವಿಚಕ್ರವಾಹನಗಳನ್ನು ಸದರಿ ವ್ಯಕ್ತಿಯಿಂದ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಯವರ ಮಾರ್ಗದರ್ಶನದಂತೆ ಮಡಿಕೇರಿ ನಗರ ಪೊಲೀಸರು ಈ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ತಿ ವಿವಾದ, ಮೂವರು ವ್ಯಕ್ತಿಗಳಮೇಲೆ ಗುಂಪಿನಿಂದ ಹಲ್ಲೆ:

     ಮಡಿಕೇರಿ ತಾಲೋಕು, ಪೆರಾಜೆ ಗ್ರಾಮದ ನಿವಾಸಿ ಪೆರಾಜೆ ದಿನೇಶ್‌ ಮತ್ತು ಅವರ ಕುಟುಂಬದವರಾದ ಲೋಕಯ್ಯನವರಿಗೂ ಜಾಗದ ವಿಚಾರದಲ್ಲಿ ವೈಷಮ್ಯವಿದ್ದು ದಿನಾಂಕ 14-10-2014 ರಂದು ಪೆರಾಜೆ ದಿನೇಶ್‌ ರವರು ತನ್ನ ತಂದೆ ಬೋಜಪ್ಪ, ಅಣ್ಣ ಹರಿಪ್ರಸಾದ್‌ ಹಾಗೂ ದೊಡ್ಡಪ್ಪ ಜನಾರ್ಧನರೊಂದಿಗೆ ಪಿಕ್ ಅಪ್ ಜೀಪಿನಲ್ಲಿ ಮನೆಯ ಕಡೆಗೆ ಹೋಗುತ್ತಿದ್ದಾಗ ಪೆರಾಜೆಯಲ್ಲಿರುವ ಭವಾನಿಶಂಕರ್‌ ಎಂಬವರ ಅಂಗಡಿಯ ಹತ್ತಿರ ತಲುಪುವಾಗ್ಗೆ ಆರೋಪಿ ಭವಾನಿಶಂಕರ್ ರವರು ಅವರ ಮಾರುತಿ 800 ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಲೋಕಯ್ಯ, ಭವಿತ್‌, ಯೋಗಿತ್‌, ಯುವನಂದ, ತೀರ್ಥ ಪ್ರಸಾದ್‌, ಹಾಘು ಪದ್ಮಯ್ಯ ರವರುಗಳು ಸೇರಿ ಕಾರಿನಿಂದ ಕೋವಿ ಹಾಗೂ ದೊಣ್ಣೆಯನ್ನು ಹಿಡಿದುಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದು, ಈ ಘಟನೆಯಲ್ಲಿ ಪೆರಾಜೆ ದಿನೇಶ್‌  ಬೋಜಪ್ಪ, ಹರಿಪ್ರಸಾದ್‌ ಹಾಗೂ ಜನಾರ್ಧನರವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಡಿ.ಸಿ.ಐ.ಬಿ.ಪೊಲೀಸರಿಂದ ಅಕ್ರಮ ಮರಳು ವಶ, ಪ್ರಕರಣ ದಾಖಲು:

     ಕೊಡಗು ಜಿಲ್ಲಾ ಅಪರಾಧ ದಳದ ಪ್ರಭಾರ ಪೊಲೀಸ್ ನಿರೀಕ್ಷಕರಾದ ಶ್ರೀ ಎಸ್ ನಾಗೇಶ್‌ರವರಿಗೆ ದೊರೆತ ಖಿಚಿತ ವರ್ತಮಾನದ ಮೇರೆಗೆ ಸದರಿಯವರು ಸಿಬ್ಬಂದಿಯೊಂದಿಗೆ ದಿನಾಂಕ 14-10-2014 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಟಕೇರಿ ಗ್ರಾಮಕ್ಕೆ ತೆರಳಿ ಕಾಟಕೇರಿ ಜಂಕ್ಷನ್‌ನಲ್ಲಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬೆಳಿಗ್ಗೆ 10-00 ಗಂಟೆಯಿಂದ ಸಂಪಾಜೆ ಕಡೆಯಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಲಾರಿಗಳನ್ನು ತಡೆದು ತಪಾಸಣೆ ಮಾಡಿ ಅಕ್ರಮವಾಗಿ ಕೆಎ-20-ಸಿ-5339, ಕೆಎ-19-ಡಿ-866, ಕೆಎ-19-ಎಎ-906 ರ 3 ಲಾರಿಗಳಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ದಿ, ಲಾರಿಗಳನ್ನುವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ದ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಜೂಜು ಅಡ್ಡೆಯ ಮೇಲೆ ಪೊಲೀಸ್‌ದಾಳಿ: 

     ಕುಶಾಲನಗರ ಠಾಣಾಧಿಕಾರಿ ಶ್ರೀ ಅನೂಪ್‌ ಮಾದಪ್ಪ ಇವರಿಗೆ ದೊರೆತ ಖಚಿತ ಮಾಹಿತಿಯಮೇರೆಗೆ ಸದರಿಯವರು ಸಿಬ್ಬಂದಿಯೊಂದಿಗೆ ದಿನಾಂಕ 14-10-2014 ರಂದು ಕುಶಾಲನಗರ ಪೊಲೀಸ್ ಠಾಣಾ ಸರಹದ್ದಿನ ಆನೆ ಕಾಡು ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಜೂಜಾಡುತ್ತಿದ್ದ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿ 7 ಮಂದಿ ವ್ಯಕ್ತಿಗಳು ಹಣವನ್ನು ಪಣವಾಗಿಟ್ಟುಕೊಂಡು ಇಸ್ಪಿಟ್ ಎಲೆಗಳಿಂದ ಜೂಜಾಡುತ್ತಿದ್ದುದನ್ನು ಪತ್ತೆಹಚ್ಚಿ 7 ಜನ ಆರೋಪಿಗಳನ್ನು, ಕೃತ್ಯಕ್ಕೆ ಬಳಸಿದ 52 ಇಸ್ಪಿಟ್ ಹಾಳೆಗಳು ಮತ್ತು ನಗದು ಹಣ 3,175-00 ರುಪಾಯಿಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ: 

     ದಿನಾಂಕ 13.10.2014 ರಂದು ಸಮಯ 19:30 ಗಂಟೆಗೆ ಸೋಮವಾಪೇಟೆ ಠಾಣಾ ಸರಹದ್ದಿನ ಬಜೆಗುಂಡಿ ನಿವಾಸಿ ಪ್ರೇಮ್‌ಕುಮಾರ್‌ರವರು ಸ್ನೇಹಿತ ರಾಮು ಎಂಬ ವ್ಯಕ್ತಿಯೊಂದಿಗೆ ಬಂದು ಕೆ.ಎಸ್.ಆರ್ ಟಿ.ಸಿ ಬಸ್‌ ನಿಲ್ದಾಣದ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ್ಗೆ ಬಜೆಗುಂಡಿ ಗ್ರಾಮದ ಜಗಧೀಶ ಮತ್ತು ಬಸವರಾಜುರವರು ಸದರಿಯವರ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈಯ್ದು, ದೊಣ್ಣೆಯಿಂದ ಮುಖದ ಭಾಗಕ್ಕೆ ಹೊಡೆದು,ನೋವನ್ನುಂಟುಮಾಡಿದ್ದು ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನುದಾಖಲಿಸಿಕೊಂಡಿರುತ್ತಾರೆ.

Tuesday, October 14, 2014

ಹೋಟೆಲ್ ಬಾಗಿಲು ಮುರಿದು ನಗದು ಮೊಬೈಲ್‌ ಕಳವು 
      ಹೋಟೆಲೊಂದರ ಬಾಗಿಲು ಮುರಿದು ನಗದು ಹಾಗೂ ಮೊಬೈಲ್‌ಗಳನ್ನು ಕಳವು ಮಾಡಿದ ಘಟನೆ ಅಭ್ಯತ್‌ಮಂಗಲ ಗ್ರಾಮದಲ್ಲಿ ನಡೆದಿದೆ. ಅಭ್ಯತ್‌ಮಂಗಲ ಗ್ರಾಮದ ನಿವಾಸಿ ಸೈಫುದ್ದೀನ್ ಎಂಬವರು ಗ್ರಾಮದ ಒಂಟಿಯಂಗಡಿ ಎಂಬಲ್ಲಿ ಹೋಟೆಲ್‌ ಒಂದನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು, ದಿನಾಂಕ 12/10/2014ರ ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ಹೋಗಿದ್ದು, ಮಾರನೆ ದಿನ ಬೆಳಿಗ್ಗೆ ಬಂದು ನೋಡುವಾಗ ಯಾರೋ ಕಳ್ಳರು ಹೋಟೆಲ್‌ನ ಹಿಂಬದಿಯ ಬಾಗಿಲು ಮುರಿದು ಒಳ ಪ್ರವೇಶಿಸಿ ಹೋಟೆಲ್‌ನಲ್ಲಿದ್ದ ಎರಡು ಮೊಬೈಲ್‌ ಹಾಗೂ ನಗದು ರೂ.1800/- ಸೇರಿದಂತೆ ಒಟ್ಟು ರೂ. 12,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹೊಳೆಯಲ್ಲಿ ಮುಳುಗಿ ವ್ಯಕ್ತಿಯ ಸಾವು 
     ಹೊಳೆಯಲ್ಲಿ ಮುಳುಗಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಕುಶಾಲನಗರ ಬಳಿಯ ದುಬಾರೆಯಲ್ಲಿ ನಡೆದಿದೆ. ಪಾಲಿಬೆಟ್ಟದಲ್ಲಿ ಮರಗೆಲಸ ವೃತ್ತಿ ಮಾಡಿಕೊಂಡಿರುವ ಕೇರಳ ರಾಜ್ಯದ ನಿವಾಸಿ ರಾಬಿ ಹಾಗೂ ಅವರ 6 ಜನ ಸ್ನೇಹಿತರು ದಿನಾಂಕ 12/10/2014ರಂದು ಪ್ರವಾಸಕ್ಕೆಂದು ದುಬಾರೆಗೆ ಬಂದಿದ್ದು, ಎಲ್ಲರೂ ದುಬಾರೆಯ ಕಾವೇರಿ ಹೊಳೆಯಲ್ಲಿ ಈಜಾಡುತ್ತಿರುವಾಗ ಜೊತೆಯಲ್ಲಿದ್ದ ರಜಿ ಎಂಬಾತ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಎಲ್ಲರೂ ಸೇರಿ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ನಂತರ ದಿನಾಂಕ 13/10/2014ರಂದು ರಜಿಯ ಮೃತ ದೇಹ ಕಾವೇರಿ ಹೊಳೆಯಲ್ಲಿ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಕಾಣೆಯಾದ ವ್ಯಕತಿಯ ಮೃತ ದೇಹ ಪತ್ತೆ. 
      ಕಾಣೆಯಾದ ವ್ಯಕ್ತಿಯೊಬ್ಬರ ಮೃತ ದೇಹವು ಬಾವಿಯಲ್ಲಿ ಪತ್ತೆಯಾದ ಘಟನೆ ವಿರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 13/10/2014ರಂದು ಕೆದಮುಳ್ಳೂರು ಗ್ರಾಮದ ನಿವಾಸಿ ಬಿ.ಎನ್‌.ಸುಬ್ರಮಣಿ ಎಂಬವರ ತಮ್ಮ ಮೋಹನ್‌ ಕುಮಾರ್‌ ಎಂಬವರ ಮೃತ ದೇಹವು ಮನೆಯ ಪಕ್ಕದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದ್ದು, ಮೋಹನ್‌ ಕುಮಾರ್‌ರವರು ದಿನಾಂಕ 10/10/2014ರಿಂದ ಕಾಣೆಯಾಗಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ಮೋಹನ್‌ ಕುಮಾರ್‌ರವರಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು, ಮದ್ಯದ ನಶೆಯಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ಮೃತರಾಗಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ದಾರಿ ತಡೆದು ವ್ಯಕ್ತಿಯ ಮೇಲೆ ಗುಂಪು ಹಲ್ಲೆ 
       ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಖಿರುವ ಘಟನೆ ಸಿದ್ದಾಪುರ ಬಳಿಯ ನೆಲ್ಲಿ ಹುದಿಕೇರಿಯಲ್ಲಿ ನಡೆದಿದೆ. ದಿನಾಂಕ 13/10/2014ರ ರಾತ್ರಿ ವೇಳೆ ಗುಹ್ಯ ಗ್ರಾಮದ ನಿವಾಸಿ ಎನ್‌.ಕೆ.ಅನಿಲ್‌ ಎಂಬವರು ಕೆಲಸ ಮುಗಿಸಿ ಮನೆಗೆ ಅವರ ಬೈಕಿನಲ್ಲಿ ಹೋಗುತ್ತಿರುವಾಗ ನೆಲ್ಲಿ ಹುದಿಕೇರಿ ಬಳಿ ರಸ್ತೆ ಮಧ್ಯೆ ಹಲವು ವ್ಯಕ್ತಿಗಳು ನಿಂತಿದ್ದು ಅನಿಲ್‌ರವರು ದಾರಿಗಾಗಿ ಹಾರ್ನ್‌ ಮಾಡಿದಾಗ ಗುಂಪಿನಲ್ಲಿದ್ದ ಸುಜಿತ್‌, ವಿಜು, ಟೋನಿ, ಅಪ್ಪಣು, ಸುಭಾಷ್‌ ಎಂಬವರು ಸೇರಿ ಅನಿಲ್‌ರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಾರ್‌ನ ವೆಂಟಿಲೇಟರ್ ಮುರಿದು ನಗದು ಕಳವು 
    ಬಾರ್‌ ಒಂದರ ವೆಂಟಿಲೇಟರ್  ಮುರಿದು ನಗದನ್ನು ಕಳವು ಮಾಡಿದ ಘಟನೆ ಸುಂಟಿಕೊಪ್ಪ ನಗರದಲ್ಲಿ ನಡೆದಿದೆ. ಸುಂಟಿಕೊಪ್ಪದ ಗದ್ದೆಹಳ್ಳದ ಬಳಿ ಇರುವ ವಂದನಾ ಬಾರ್‌ನ ಮಾಲೀಕ ಪಿ.ಎಸ್‌.ಜಿತೇಂಧ್ರ ಎಂಬವರು ದಿನಾಂಕ 12/10/2014ರ ರಾತ್ರಿ ಬೀಗ ಹಾಕಿ ಮನೆಗೆ ತೆರಳಿದ್ದು, ದಿನಾಂಕ 13/10/2014ರಂದು ಬಾರಿನ ಕ್ಯಾಷಿಯರ್‌ ಚಂದ್ರಶೇಖರ್‌ ಎಂಬವರು ಬಂದು ಬೀಗ ತೆರೆದು ನೋಡಿದಾಗ ಯಾರೋ ಕಳ್ಳರು ಬಾರಿನ ಗೋಡೆಯ ವೆಂಟಿಲೇಟರ್‌ನ್ನು ಮುರಿದು ಒಳ ಪ್ರವೇಶಿಸಿ ಗಲ್ಲಾ ಪೆಟ್ಟಿಗೆಯಲ್ಲಿದ್ದ ರೂ. 24,000/- ನಗದನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Sunday, October 12, 2014

ಅಂಚೆ ಸಿಬ್ಬಂದಿಯಿಂದ ಹಣ ದುರುಪಯೋಗ 
      ಅಂಚೆ ಸಿಬ್ಬಂದಿಯಿಂದ ಸಾರ್ವಜನಿಕರ ಹಣ ದುರುಪಯೋಗಗೊಂಡಿರುವ ಘಟನೆ ಕುಶಾಲನಗರ ಬಳಿಯ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ. ಹೆಬ್ಬಾಲೆ ಗ್ರಾಮದ ಶಾಖಾ ಅಂಚೆ ಕಚೇರಿಯಲ್ಲಿ ಹೆಬ್ಬಾಲೆ ನಿವಾಸಿ ರಾಜು ಎಂಬವರು ಅಂಚೆ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಸೋಮವಾರಪೇಟೆ ಅಂಚೆ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಕಾಂತರಾಜುರವರು ಹೆಬ್ಬಾಲೆಯ ಶಾಖಾ ಅಂಚೆ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಸಂದರ್ಭ, ಅಂಚೆ ಪಾಲಕ ರಾಜುರವರು ಶಿರಂಗಾಲ ಗ್ರಾಮದ ರಾಜಶೇಖರ್ ಎಂಬವರು ಧರ್ಮಸ್ಥಳಕ್ಕೆ ಮನಿಯಾರ್ಡರ್ ಮಾಡಿದ್ದ ರೂ.1,000/- ಗಳನ್ನು ತಿದ್ದಿ ರೂ.100/- ಎಂದೂ ಹೆಬ್ಬಾಲೆ ಗ್ರಾಮದ ಮಧು ಎಂಬವರು ಮಾಡಿದ್ದ ರೂ.501/-ರ ಮನಿಯಾರ್ಡರನ್ನು ತಿದ್ದಿ ರೂ.50/- ಎಂದು ಬದಲಾಯಿಸಿರುವುದು ಕಂಡು ಬಂದಿದ್ದು ಅಲ್ಲದೆ ಇನ್ನಿತರ ಹಲವು ಸಾರ್ವಜನಿಕರ ಮನಿಯಾರ್ಡರುಗಳ ಹಣದ ಮೊತ್ತವನ್ನು ತಿದ್ದಿ ದುರುಪಯೋಗಪಡಿಸಿಕೊಂಡಿರುವುದು ಕಂಡು ಬಂದಿರುವುದಾಗಿ ಕಾಂತರಾಜುರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಹೆಬ್ಬಾಲೆ ಅಂಚೆ ಪಾಲಕ ಎಂ.ಸಿ.ರಾಜುರವರ ವಿರುದ್ದ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಗೆ ಕಿರುಕುಳ; ಪ್ರಕರಣ ದಾಖಲು 
       ವಿವಾಹಿತ ಮಹಿಳೆಯೋರ್ವರಿಗೆ ಪತಿಯ ಮನೆಯವರು ಕಿರುಕುಳ ನೀಡಿರುವ ಪ್ರಕರಣವೊಂದು ನಾಪೋಕ್ಲು ಠಾಣೆಯಲ್ಲಿ ದಾಖಲಾಗಿದೆ. ಮರಂದೋಡ ಗ್ರಾಮದ ನಿವಾಸಿ ಎಂ.ಬಿ.ಗೀತ ಯಾನೆ ಕವಿತ ಎಂಬವರು ಎಂ.ಎ.ಬೆಲ್ಲುರವರನ್ನು 5 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆಯಾದ 15 ದಿನಗಳ ನಂತರ ಪತಿ ಬೆಲ್ಲುರವರು ಗೀತಾರವರೊಂದಿಗೆ ವಿನಾ ಕಾರಣ ಜಗಳವಾಡುವುದು ಮಾಡುತ್ತಿದ್ದು, ನಂತರ ಪತಿ ಬೆಲ್ಲುವಿನ ತಮ್ಮ ಪೂವಯ್ಯ ಅತ್ತೆ ಕಾವೇರಮ್ಮರವರು ಸೇರಿಕೊಂಡು ಗೀತಾರವರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ನೀಡುತ್ತಿದ್ದರೆನ್ನಲಾಗಿದೆ. ಇದರಿಂದ ನೊಂದ ಗೀತಾ ಈಗ್ಗೆ 5 ತಿಂಗಳ ಹಿಂದೆ ಪತಿಯ ಮನೆಯನ್ನು ತೊರೆದು ಮೈಸೂರಿನಲ್ಲಿರುವ ಆಕೆಯ ಅಕ್ಕನ ಮನೆಗೆ ಹೋಗಿ ನೆಲೆಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಗೀತಾರ ಪತಿ, ಮೈದುನ ಹಾಗೂ ಅತ್ತೆಯ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, October 11, 2014

ಗಂಡಸು ಕಾಣೆ, ಪ್ರಕರಣ ದಾಖಲು:

    ವಿರಾಜಪೇಟೆ ತಾಲೋಕು, ಕೆದಮುಳ್ಳೂರು ಗ್ರಾಮದ ನಿವಾಸಿ ಮೋಹನ್‌ ಕುಮಾರ್‌ ಎಂಬವರು ದಿನಾಂಕ 10-10-14ರಂದು ಆರೋಗ್ಯ ಸರಿಯಿಲ್ಲದೆ ಕೆಲಸಕ್ಕೆ ಹೋಗದೆ ಮನೆಯಲ್ಲಿ ಮಲಗಿದ್ದು, ನಂತರ ಮದ್ಯಾಹ್ನ 3-30ಗಂಟೆಗೆ ತನ್ನ ಮೊಬೈಲ್ ಪೋನ್, ಚಪ್ಪಲಿ, ಪರ್ಸ್ ಎಲ್ಲವನ್ನು ಮನೆಯಲ್ಲಿ ಬಿಟ್ಟು ಮನೆಯಿಂದ ಹೋಗಿದ್ದು, ನಂತರ ಮನೆಗೆ  ಬಾರದೆ ಕಾಣೆಯಾಗಿದ್ದು, ಸದರಿಯವರ ಪತ್ನಿ ಬಿ.ಎಂ. ರಾಧಿಕಾರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಕ್ರಮ ಮರ ಶೇಖರಣೆ, ಪ್ರಕರಣ ದಾಖಲು:

         ವಿರಾಜಪೇಟೆ ಗ್ರಾಮಾಂತರ ಠಾಣಾ ಪಿ.ಎಸ್‌.ಐ. ಕೆ.ಕೆ. ರಘು ರವರಿಗೆ ದೊರೆತ ಖಚಿತ ಮಾಹಿತಿಯ ಆದಾರದ ಮೇರೆಗೆ ಸದರಿಯವರು ಸಿಬ್ಬಂದಿಯೊಂದಿಗೆ ವಿರಾಜಪೇಟೆ ತಾಲೋಕು ಹೆಗ್ಗಳ ಗ್ರಾಮದ ವಾಸಿ ಪಟ್ಟಡ ಚಂಗಪ್ಪ ನವರ ಕಾಫಿ ತೋಟಕ್ಕೆ ದಿನಾಂಕ 10-10-2014 ರಂದು ಅಪರಾಹ್ನ 2-00 ಗಂಟೆಗೆ ದಾಳಿ ನಡೆಸಿ ತೋಟದ ಬಳಿ ನಿಲ್ಲಿಸಿದ್ದ ಸ್ವರಾಜ್‌ ಮಜ್ದಾ ಲಾರಿಯಲ್ಲಿ ಒಂದು ನಂದಿ ಮರದ ತುಂಡು ಇದ್ದು, ಸದರಿ ಲಾರಿ ನಿಂತಿದ್ದ ತೋಟದ ಪಕ್ಕದಲ್ಲಿ 5 ನಂದಿ ಮರದ ತುಂಡು ಗಳನ್ನು ಗರಗಸದಿಂದ ಕುಯ್ದು ಶೇಖರಿಸಿಟ್ಟಿದ್ದು, ಸದರಿ 6 ವಿವಿಧ ಅಳತೆಯ ನಂದಿ ಮರದ ತುಂಡುಗಳ ಅಂದಾಜು ಬೆಲೆ ರೂ. 45,000/- ಹಾಗೂ ಸ್ವರಾಜ್ ಮಜ್ದಾ ಲಾರಿಯ ಬೆಲೆ ರೂ.2,00,000/- ಆಗಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮಹಿಳೆಯ ಮಾನಕ್ಕೆ ದಕ್ಕೆ, ಪ್ರಕರಣ ದಾಖಲು:

      ಮಹಿಳೆಯೊಬ್ಬರು  ಮನೆಯ ಬಾತ್‌ರೂಂ ನಲ್ಲಿ ಸ್ನಾನಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ವೀಕ್ಷಿಸಿ ಮಾನಕ್ಕೆ ದಕ್ಕೆ ಪಡಿಸಿದ ಘಟನೆ ವಿರಾಜಪೇಟೆ ಸಮೀಪದ ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ 09-10-14ರಂದು ಸಂಜೆ 18-30ಗಂಟೆಗೆ ವಿರಾಜಪೇಟೆ ತಾಲೋಕು, ಬೋಯಿಕೇರಿ ಗ್ರಾಮದ ನಿವಾಸಿ ಎ.ಎಂ. ಉಮೇಶ್ ಮುತ್ತಣ್ಣರವರ ಮಗಳು ಶಿವಾನಿ ಎಂಬಾಕೆ ಅವರ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆಯಲ್ಲಿ ಮನೆಯ ಪಕ್ಕದ ನಿವಾಸಿ ಸುಜಿತ್ ಎಂಬುವವನು ಶಿವಾನಿರವರ ಮಾನಕ್ಕೆ ಧಕ್ಕೆ ವುಂಟಾಗುವ ರೀತಿಯಲ್ಲಿ ಬಚ್ಚಲು ಮನೆಯ ಗೋಡೆ ಏರಿ ಶಿವಾನಿರವರು ಸ್ನಾನ ಮಾಡುತ್ತಿರುವುದನ್ನು ವೀಕ್ಷಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಾಲಕನ ನಿರ್ಲಕ್ಷ್ಯ, ಲಾರಿಅವಘಡ:

ಚಾಲಕನ ನಿರ್ಲಕ್ಷ್ಯದಿಂದ  ಲಾರಿ ಅವಘಡಕ್ಕೀಡಾಗಿ ಲಾರಿ ಜಖಂಗೊಂಡ ಘಟನೆ  ವಿರಾಜಪೇಟೆ ಬಳಿಯ ಮಾಕುಟ್ಟದಲ್ಲಿ ನಡೆದಿದೆ.   ದಿನಾಂಕ: 08-10-14ರಂದು ಕೆ.ಜಯರಾಮ್, ವಾಸ: ಹೆಚ್.ಎಂ. ದೊಡ್ಡಿಯ ಸಂಗಮ್ ರಸ್ತೆ, ಕನಕಪುರ ತಾಲ್ಲೂಕು, ರಾಮನಗರ. ಅವರ ಬಾಪ್ತು ಲಾರಿ ನಂ. ಕೆಎ.32.ಎ.2079ರಲ್ಲಿ POP ಶೀಟ್ ಗಳನ್ನು ಲಾರಿಯಲ್ಲಿ ಲೋಡ್ ಮಾಡಿಕೊಂಡು ಕೇರಳದ ಕಣ್ಣನೂರಿಗೆ ತೆಗೆದು ಕೊಂಡು ಹೋಗುತ್ತಿದ್ದ ವೇಳೆ ಸದರಿ ಲಾರಿಯನ್ನು ಚಾಲಕ ಪ್ರವೀಣ ಎಂಬವರು ವಿರಾಜಪೇಟೆ ತಾಲ್ಲೂಕು ಮಾಕುಟ್ಟ ಬಳಿ ಅತೀವೇಗ ಹಾಗೂ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ ಪರಿಣಾಮ ಲಾರಿಯು ಇಳಿಜಾರು ತಿರುವು ರಸ್ತೆಯ ಎಡ ಭಾಗದ ಚರಂಡಿಗೆ ಬಿದ್ದು ಲಾರಿಯು ಪೂರ್ಣ ಜಖಂಗೊಂಡಿದ್ದು ಲಾರಿಯಲ್ಲಿದ್ದ POP ಶೀಟ್ ಗಳು ಸಂಪೂರ್ಣ ಜಖಂಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  

ದ್ವೇಷ,ವ್ಯಕ್ತಿಯ ಮೇಲೆ ಹಲ್ಲೆ: 

     ಹಳೇ ದ್ವೇಷವನ್ನಿಟ್ಟುಕೊಂಡು  ಇಬ್ಬರು ವ್ಯಕ್ತಿಗಳು ವ್ಯಕ್ತಿಯೋರ್ವನ ಮೇಲೆ ಹಲ್ಲೆನಡೆಸಿದ ಘಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ.  ಪೊನ್ನಂಪೇಟೆ ಠಾಣಾ ಸರಹದ್ದಿನ ಬೇಗೂರು ಗ್ರಾಮದ ನಿವಾಸಿ ಎ.ಎಸ್ .ಪ್ರತಾಪ್ ಎಂಬವರು ದಿನಾಂಕ 25-9-2014 ರಂದು 3-30 ಪಿ.ಎಂ ಗೆ ಪೊನ್ನಂಪೇಟೆ ನಗರದ ದುರ್ಗಾ ಬೋಜಿ ವೈನ್ ಶಾಪ್ ನ ಮುಂಭಾಗ ನಿಂತಿರುವಾಗ್ಗೆ ಅದೇ ಗ್ರಾಮದ ಕೆ.ಬಿ. ಪ್ರಕಾಶ್‌ ಮತ್ತು ಕೆ.ಪಿ. ರಾಜೇಶ್‌ ಎಂಬವರು ಬ್ರಾಂಡಿ ಕುಡಿದು ಖಾಲಿ ಪ್ಲಾಸ್ಟಿಕ್ ಬಾಟಲಿಯನ್ನು ಎ.ಎಸ್‌. ಪ್ರತಾಪ್‌ನವರ ಮೇಲೆ ಎಸೆದು ಗಲಾಟೆ ಮಾಡಿ ಹಲ್ಲೆ ನಡೆಸಿ ನೋವನ್ನುಂಟುಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಚಾಕುವಿನಿಂದ ತಿವಿಯಲು ಬಂದಿರುತ್ತಾರೆಂದು ನ್ಯಾಲಯಲಕ್ಕೆ ದೂರನ್ನು ನೀಡಿದ್ದು, ಸದರಿ ನ್ಯಾಯಾಲಯದಆದೇಶದ ಮೇರೆಗೆ ಪೊನ್ನಂಪೇಟೆ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಬ್ಯಾಂಕ್‌ ಖಾತೆಯಿಂದ ಹಣ ದುರುಪಯೋಗ ಪ್ರಕರಣ ದಾಖಲು:

ಪಿ.ಎಫ್. ಪಿಂಟೋ, ರೆಸಿಡೆನ್ಸಿ ರೋಡ್, ಬೆಂಗಳೂರು ಇವರಿಗೆ 97 ವರ್ಷ ಪ್ರಾಯದವರಾಗಿದ್ದು, ಮಗ ಟ್ರೆವರ್ ಪಿಂಟೋ ಇವರ ಎಲ್ಲಾ ವ್ಯವಹಾರಗಳಿಗೆ ನೇಮಕಗೊಂಡಿದ್ದು ಪಿ.ಎಫ್. ಪಿಂಟೋ ರವರು ನೆಲ್ಲಿಹುದಿಕೇರಿ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಎಸ್.ಬಿ. ಖಾತೆಯನ್ನು ಹೊಂದಿದ್ದು, ಎಲ್ಲಾ ಆದಾಯದ ಹಣವನ್ನು ಸದರಿ ಖಾತೆಗೆ ಜಮಾ ಮಾಡಿದ್ದು, ಸದರಿ ಸದರಿಯವರ ಮಗ ಲೆಸ್ಲಿ ಪಿಂಟೋ, ಸಂಬಂಧಿಗಳಾದ ಕೆನ್ನತ್ ಫಿಲಿಪ್ ಪಿಂಟೋ, ಮತ್ತು ಸುನೀಲ್ ಜೋಸೆಫ್ ಪಿಂಟೋ ಇವರುಗಳು ಸೇರಿ ಖಾತೆಯಿಂದ ಗೊತ್ತಿಲ್ಲದಂತೆ ಹಣವನ್ನು ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದು, ಅಲ್ಲದೇ ಆಸ್ತಿಯ ದಾಖಲೆಗಳನ್ನು ಕಂದಾಯಇಲಾಖೆ ಅಧೀಕಾರಿಗಳನ್ನು ಶಾಮೀಲು ಮಾಡಿ ತಿದ್ದಿ ಕೊಟ್ಯಾಂತರ ಹಣವನ್ನು ನಷ್ಟಪಡಿಸಿನಷ್ಟಪಡಿಸಿರುತ್ತಾರೆಂದು ಪಿ.ಎಫ್. ಪಿಂಟೋ, ರವರು ನ್ಯಾಯಾಲಯಕ್ಕೆ ದೂರನ್ನು ನೀಡಿದ್ದು, ನ್ಯಾಯಾಲಯದ ಆದೇಶದಂತೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನತನಿಖೆ ಕೈಗೊಂಡಿರುತ್ತಾರೆ.

Friday, October 10, 2014

ವ್ಯಕ್ತಿಯ ಜೊತೆ ಮಹಿಳೆ ಸಂಬಂಧ, ಗುಂಪಿನಿಂದ ಮೂವರ ಮೇಲೆ ಹಲ್ಲೆ:
     ಮಹಿಳೆಯೊಬ್ಬರು ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿರುವ ವಿಚಾರವಾಗಿ ಅಪಪ್ರಚಾರ ಮಾಡಲಾಗಿದೆ ಎಂಬ ಕಾರಣಕ್ಕೆ ಗುಂಪೊಂದು   ಮಹಿಳೆ ಮತ್ತು ಆಕೆಯ ಗಂಡ ಮತ್ತು ಮಗಳ ಮೇಲೆ ಹಲ್ಲೆ ನಡೆಸಿದ ಘಟನೆ ಸಿದ್ದಾಪುರ ಸಮೀಪದ ಚೆನ್ನಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ. ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನಯ್ಯನ ಕೋಟೆ ಗ್ರಾಮದಲ್ಲಿ ನೆಲೆಸಿರುವ ಶ್ರೀಮತಿ ಪಲ್ಲವಿ ಎಂಬ ಮಹಿಳೆ ಅದೇ ಗ್ರಾಮದ ಸಿ.ಕುಮಾರ ಎಂಬವರ ಮಗನ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾಳೆ ಎಂಬ ವಿಚಾರವನ್ನು ಸಿ. ಕುಮಾರ ರವರರ ಮನೆಯವರು ಊರಿನಲ್ಲಿ ಅಪ್ರಪ್ರಚಾರ ಮಾಡುತ್ತಿದ್ದಾರೆಎಂಬ ಕಾರಣಕ್ಕೆ ಸದರಿ ಪಲ್ಲವಿ ಅದೇ ಗ್ರಾಮದ (1) ಜಗ್ಗ ( 2) ಪರ್ಸ (3) ಲೋಕೇಶ (4) ಮಂಜು, (5) ಮಲ್ಲೇಶ (6) ನಂದೀಶ, ಹಾಗು (7) ಧಾಮ ರವರರ ಗುಂಪು ಕಟ್ಟಿಕೊಂಡು ದಿನಾಂಕ 9-10-2014 ರಂದು ಚೆನ್ನಯ್ಯನ ಕೋಟೆ ಜಂಕ್ಷನ್‌ನಲ್ಲಿ ಅಂಜಲಿ, ಸಿ.ಕುಮಾರ ಮತ್ತು ಇಂದಿರಾರವರ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಮೂವರ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿರುತ್ತಾರೆ ಹಾಗು ಈ ಘಟನೆಯಲ್ಲಿ ಶ್ರೀಮತಿ ಇಂದಿರಾರವರು ಗಾಯಗೊಂಡಿರುವುದಾಗಿ ಸಿ. ಕುಮಾರರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಅಕ್ರಮ ಮದ್ಯಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ:     

   ಸಿದ್ದಾಪುರ ಠಾಣಾಧಿಕಾರಿ ಹರಿವರ್ಧನರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸದರಿಯವರು ತಮ್ಮ ಸಿಂಬಂದಿಯೊಂದಿಗೆ ಸಿದ್ದಾಪುರ ನಗರದ ಮೈಸೂರು ರಸ್ತೆಯ ಜಂಕ್ಷನ್‌ ಬಳಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ  ಆರೋಪಿಗಳಾದ ಹೆಚ್‌.ಎಸ್‌. ಅರ್ಜುನ ಮತ್ತು ಪಿ.ಎಸ್‌. ಅಜಯ್‌ ಎಂಬವರುಗಳಿಂದ  4,443 ರೂ ಬೆಲೆಬಾಳುವ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಜಾಗದ ವಿಚಾರದಲ್ಲಿ ಜಗಳ, ಕೊಲೆ ಬೆದರಿಕೆ:

    ಸಿದ್ದಾಪುರ ಠಾಣಾ ಸರಹದ್ದಿನ ಕಳತ್ಮಾಡು ಗ್ರಾಮದ ನಿವಾಸಿ ಕತ್ರಿಕೊಲ್ಲಿ ಆರ್‌. ಗಣೇಶ್‌ ಎಂಬವರಿಗೆ ಸೇರಿದ ಜಾಗದಲ್ಲಿ ದಿನಾಂಕ 9-10-2014 ರಂದು ಸದರಿಯವರ ಆಳುಗಳು ಕೆಲಸ ಮಾಡುತ್ತಿದ್ದಾಗ ಅವರ ತಮ್ಮ ಅಣ್ಣಯ್ಯ ಎಂಬವರು ಬಂದು ಕೆಲಸಕ್ಕೆ ಅಡ್ಡಿಪಡಿಸಿ 'ಈ ಜಾಗ ನನಗೆ ಸೇರಬೇಕು' ಎಂದು ಜಗಳ ಮಾಡಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಆರ್‌. ಗಣೇಶ್‌ರವರು ಸಿದ್ದಾಪುರ ಠಾಣೆಯಲ್ಲಿ ದೂರನ್ನು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಬೈಕ್‌ಗಳ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಾಯ: 

    ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರರಿಬ್ಬಿರು ಗಾಯಗೊಂಡು ಘಟನೆ ನಾಪೋಕ್ಲು ನಗರದಲ್ಲಿ ನಡೆದಿದೆ. ನಾಪೋಕ್ಲು ನಗರದಲ್ಲಿರುವ ಹ್ಯಾರೀಸ್‌ ಎಂಬುವವರ ಹಾರ್ಡ್‌ವೇರ್‌ನಲ್ಲಿ ಕೆಲಸ ಮಾಡುತ್ತಿರುವ ಮುಜುಬುರ್‌ ರೆಹಮಾನ್‌ ಎಂಬವರು ದಿನಾಂಕ 9-10-2014 ರಂದು ಸಮಯ 1-30 ಗಂಟೆಗೆ ಕೆಎ-12-ಎಲ್- 5707 ರ ಸ್ಟಾರ್‌ ಸಿಟಿ ಬೈಕ್‌ನಲ್ಲಿ ಕಿರಣ್‌ ಎಂಬವರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ನಾಪೋಕ್ಲು ನಗರದ ಆಲ್ತಾಫ್‌ ಎಂಬವರಿಗೆ ಸೇರಿದ ವರ್ಕ್‌ಶಾಪ್‌ನ ಎದುರು ನೆಲಜಿ ರಸ್ತೆ ಕಡೆಯಿಂದ ಕೆಎ-12-ಕೆ-1416 ರ ಬೈಕ್ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಎರಡೂ ಬೈಕ್‌ನ ಸವಾರರಿಗೆ ಗಾಯಗಳಾಗಿದ್ದು, ನಾಪೋಕ್ಲು ಪೊಲೀಸರು ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುತ್ತಾರೆ.

ಕಾಲು ಜಾರಿ ಹೊಳೆಗೆ ಬಿದ್ದು ಮಹಿಳೆಯ ದುರ್ಮರಣ:

     ಸೇತುವೆ ದಾಟುವಾಗಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದ ಮಹಿಳೆಯೋರ್ವರು ಸಾವನ್ನಪ್ಪಿದಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ದೇವನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 7-10-2014 ರಂದು ಪೊನ್ನಂಪೇಟೆ, ನಿಟ್ಟೂರು ಗ್ರಾಮದ ಅಳಮೇಂಗಡ ಪೊನ್ನಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಪಣಿ ಎರವರ ಬೊಳ್ಳಿರವರ ಪತ್ನಿ ಶ್ರೀಮತಿ ತಂಗಿ ಎಂಬ ಮಹಿಳೆ ದೇವನೂರು ಗ್ರಾಮದಲ್ಲಿ ಹರಿಯುವ ಕೀರೆಹೊಳೆಗೆ ಕಟ್ಟಿರುವ ಸಿಮೆಂಟ್‌ ಕಟ್ಟೆಯನ್ನು ದಾಟುವಾಗ ಆತಸ್ಮಿಕ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದು, ದಿನಾಂಕ 9-10.2014 ರಂದು ಸದರಿ ಮಹಿಳೆಯ ಮೃತದೇಹ ದೊರೆತಿದೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕಾಣೆ ಪ್ರಕರಣ ದಾಖಲು:

ಮಾನಿಸಿಕ ಅಸ್ವಸ್ಥೆ ಎಂದು ಹೇಳಲಾದ ಮಹಿಳೆಯೊಬ್ಬರು ಕಾಣೆಯಾದ ಘಟನೆ ಗೋಣಿಕೊಪ್ಪ ಠಾಣಾ ಸರಹದ್ದಿನ ಮಾಯಮುಡಿ ಗ್ರಾಮದಲ್ಲಿ ನಡೆದಿದೆ. ಮಾಯಮುಡಿ ಗ್ರಾಮದ ನಿವಾಸಿ ಸಣ್ಣುವಂಡ ಪೂವಯ್ಯ ಎಂಬವರ ಲೈನುಮನೆಯಲ್ಲಿ ವಾಸ ಮಾಡಿಕೊಂಡಿರುವ ಪೂವಯ್ಯ ಎಂಬವರ ಪತ್ನಿ ಶ್ರೀಮತಿ ರತಿ ಎಂಬವರು ದಿನಾಂಕ 5-10-2014ರಂದು ಸದರಿಯವರ ಸ್ವಂತ HgÀÄ PÉÃgÀ¼ÀzÀ wgÀĪɮè PÁªÀA¨ÁUÀAಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಊರಿಗೂ ಹೋಗದೆ ಸದರಿ ದಿನದಂದು ಕಾಣೆಯಾಗಿದ್ದು,ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ,   

Thursday, October 9, 2014

ಪ್ರಯಾಣದ ವೇಳೆ ಕೈಯಿಂದ ಚಿನ್ನದ ಬ್ರಾಸ್ ಲೈಟ್‌ ಕಳವು:

      ವಾಹನದಲ್ಲಿ ಪ್ರಯಾಣಿಸುತ್ತಿದ್ದ  ಅಸ್ವಸ್ಥ ವ್ಯಕ್ತಿಯ ಕೈಯಲ್ಲಿದ್ದ ಚಿನ್ನದ ಬ್ರಾಸ್ ಲೈಟ್ ಕಳ್ಳತನವಾಗಿರುವ ಘಟನೆ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 1-10-204 ರಂದು ನೆಲ್ಲಿಹುದಿಕೇರಿ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿರುವ ಬಿ.ಸಿ. ಆನಂದ ಎಂಬವರು ಸದರಿಯವರ ಚಿಕ್ಕಪ್ಪನ ಮಗ ದಾಮೋದರ ಎಂಬ ವ್ಯಕ್ತಿ ಯೊಂದಿಗೆ ವೈವಾಸ್‌ ಆಸ್ಪತ್ತೆಗೆ ಚಿಕಿತ್ಸೆಗಾಗಿ ಹೋಗಿ ಮರಳಿ ಮನೆಗೆ ಸದರಿ ವ್ಯಾನ್‌ನಲ್ಲಿ ನಿದ್ರಿಸಿಕೊಂಡು ಪ್ರಯಾಣಿಸುತ್ತಿದ್ದಾದ ಕೈಯಲ್ಲಿದ್ದ ಚಿನ್ನದ ಬ್ರಾಸ್ ಲೈಟು ಕಾಣದಾಗಿದ್ದು ಬಳಿಕ ಹುಡುಕಿ ಸಿಗದೇ ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರಬಹುದಾಗಿ ದಿನಾಂಕ 8-10-2014 ರಂದು ಸಿದ್ದಾಪುರ ಠಾಣೆಯಲ್ಲಿ ದೂರನ್ನು ನೀಡಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

 ಬೆಂಕಿಯಿಂದ ಸುಟ್ಟು ಗಾಯಗೊಂಡ ವ್ಯಕ್ತಿಯ ಮರಣ:

      ಆಕಸ್ಮಿಕವಾಗಿ ಬೆಂಕಿ ತಗುಲಿ ತೀವ್ರ ಗಾಯಗೊಂಡು ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವನಪ್ಪಿದ ಘಟನೆ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ. ಶ್ರೀಮಂಗಲ ಗ್ರಾಮದಲ್ಲಿ ವಾಸವಾಗಿದ್ದ ಅಜೀಜ್‌ (35) ಎಂಬ ವ್ಯಕ್ತಿಗೆ ದಿನಾಂಕ 30-9-2014 ರಂದು ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ತೀವ್ರ ಗಾಯಗಳಾದ ಪರಿಣಾಮ ಸದರಿಯವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 8-10-2014 ರಂದು ಸದರಿಯವರು ಮೃತಪಟ್ಟಿದ್ದು, ಈ ಸಂಬಂಧ ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   
ಮನೆ ನುಗ್ಗಿ  ಚಿನ್ನಾಭರಣ ಕಳವು:

     ಮನೆಗೆ ಹಾಕಿದ ಬೀಗವನ್ನು ಮುರಿದು ಚಿನ್ನಾಭರಣ ಕಳವು ಮಾಡಿದ ಘಟನೆ ಸೋಮವಾರಪೇಟೆ ತಾಲೋಕು ಲಕ್ನಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 15-9-2014ರಂದು ಸೋಮವಾರಪೇಟೆತಾಲೋಕು ಲಕ್ನಿ ಗ್ರಾಮದ ನಿವಾಸಿ ಎಲ್‌ .ಆರ್‌. ಸುನಂದ ಎಂಬವರು ತಮ್ಮ ಮನೆಗೆ ಬೀಗ ಹಾಕಿ ಹೊರಗಡೆ ಹೋಗಿ ತಡವಾಗಿ ಮನೆಗೆ ಬಂದಿದ್ದು, ಮರುದಿನ ನೋಡಲಾಗಿ ತಮ್ಮ ಮನೆಯಒಳಗಿನ ಬೀರುವಿನ ಬಾಗಿಲನ್ನು ಕಬ್ಬಿಣದ ರಾಡ್‌ನ್ನು ಉಪಯೋಗಿಸಿ ಒಡೆದು ಬೀರುವಿನಿಂದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಂಡುಬಂದಿದ್ದು, ಸದರಿ ಕಳ್ಳತನವನ್ನು ಗುಡುಗಳಲೆ ಗ್ರಾಮದ ಮದನ್‌ ಎಂಬ ವ್ಯಕ್ತಿ ಮಾಡಿರಬಹುದೆಂದು ಸಂಶಯ ವ್ಯಕ್ತಿಪಡಿಸಿ ದೂರನ್ನು ನೀಡಿದ್ದು, ಅದರಂತೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

ಆಸ್ತಿಯ ವಿಚಾರದಲ್ಲಿ ವ್ಯಕ್ತಿಯಿಂದ ಹಲ್ಲೆ:

     ದಿನಾಂಕ 6-9-2014 ರಂದು ನಾಕೂರು ಶಿರಂಗಾಲ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ವಿಜಯ ಲಕ್ಷ್ಮಿ ಎಂಬವರಿಗೆ ಅದೇ ಗ್ರಾಮದ ರಾಜು ಎಂಬ ವ್ಯಕ್ತಿ ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಡುವ ವಿಚಾರದಲ್ಲಿ ಜಗಳ ಮಾಡಿ ರೀಪರ್‌ ಪಟ್ಟಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

Wednesday, October 8, 2014

ಜೀಪು ಡಿಕ್ಕಿ, ಸ್ಕೂಟರ್ ಸವಾರ ಗಾಯಾಳು   
        ಸ್ಕೂಟರೊಂದಕ್ಕೆ ಜೀಪು ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರನಿಗೆ ಗಾಯಗಳಾದ ಘಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 07/10/2014ರಂದು ಪೊನ್ನಂಪೇಟೆಯ ಹಳ್ಳಿಗಟ್ಟು ನಿವಾಸಿ ಎಂ.ಎ.ಯೂಸುಫ್ ಎಂಬವರು ಅವರ ಸ್ಕೂಟರ್ ಸಂಖ್ಯೆ ಕೆಎ-12-ಕೆ-6587ರಲ್ಲಿ ಪೊನ್ನಂಪೇಟೆಯಿಂದ ಗೋಣಿಕೊಪ್ಪ ಕಡೆಗೆ ಹೋಗುತ್ತಿರುವಾಗ ಪೊನ್ನಂಪೇಟೆ ನಗರದ ಅರಣ್ಯ ಇಲಾಖೆಯ ಡಿಪೋದ ಬಳಿ ಗೋಣಿಕೊಪ್ಪ ಕಡೆಯಿಂದ ಕೆಎಲ್‌-12-ಎಫ್-229ರ ಪಿಕ್‌ಅಪ್‌ ಜೀಪನ್ನು ಅದರ ಚಾಲಕ ಶ್ರೇಯಸ್ ಕುಮಾರ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಯೂಸುಫ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಯೂಸುಫ್‌ರವರು ಕೆಳಗೆ ಬಿದ್ದು ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಸ್ತಿ ವಿವಾದ, ಹಲ್ಲೆ; ಕೊಲೆ ಬೆದರಿಕೆ 
       ಆಸ್ತಿ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ಕೊಡ್ಲಿಪೇಟೆ ಹೋಬಳಿಯ ಕೆಳಕೊಡ್ಲಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 28/09/2014ರಂದು ಕೆಳಕೊಡ್ಲಿ ಗ್ರಾಮದ ನಿವಾಸಿ ಎಂ.ಪಿ.ಮುತ್ತಯ್ಯ ಎಂಬವರ ಮಗ ತಿಲಕ್ ಎಂಬಾತನಿಗೆ ಅದೇ ಗ್ರಾಮದ ನಿವಾಸಿ ಕೆ.ಪಿ.ನಂಜುಂಡಯ್ಯ ಎಂಬವರು ಆಸ್ತಿ ವಿಚಾರದ ವೈಷಮ್ಯದಿಂದ ಹಲ್ಲೆ ಮಾಡಿ ಮುತ್ತಯ್ಯ ಮತ್ತು ಅವರ ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ  ನ್ಯಾಯಾಲಯದ ಅನುಮತಿ ಪಡೆದು ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅವಘಡ, ಹಿಂಬದಿ ಸವಾರನಿಗೆ ಗಾಯ 
      ಮೋಟಾರು ಬೈಕ್ ಒಂದು ಅಫಘಾತಕ್ಕೀಡಾಗಿ ಹಿಂಬದಿ ಸವಾರನಿಗೆ ಗಾಯಗಳಾದ ಘಟನೆ ಸಿದ್ದಾಪುರ ಬಳಿಯ ನೆಲ್ಲಿ ಹುದಿಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 07/102/104ರಂದು ಸಂಜೆ ವೇಳೆ ನೆಲ್ಲಿ ಹುದಿಕೇರಿ ನಿವಾಸಿ ದಿಶತ್ ಎಂಬವರು ಕೆಲಸ ಮುಗಿಸಿ ಕೆಎ-12-ಜೆ-3221ರ ಮೋಟಾರು ಬೈಕಿನಲ್ಲಿ ಸಿ.ಎಸ್.ಸುಜಿತ್ ಎಂಬವರನ್ನು ಕೂರಿಸಿಕೊಂಡು ಅಭ್ಯತ್ ಮಂಗಲ ಗ್ರಾಮದಿಂದ ನೆಲ್ಲಿ ಹುದಿಕೇರಿ ಕಡೆಗೆ ಬರುತ್ತಿರುವಾಗ ನೆಲ್ಲಿಹುದಿಕೇರಿ ಗ್ರಾಮದ ರಸ್ತೆಯಲ್ಲಿ ದಿಶತ್‌ರವರು ಮೋಟಾರು ಬೈಕನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಮೋಟಾರು ಬೈಕು ಆತನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದ ಪರಿಣಾಮ ಬೈಕಿನ ಹಿಂಬದಿಯಲ್ಲಿದ್ದ ಸುಜಿತ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೋಟಾರು ಬೈಕ್ ಕಳವು 
       ನಿಲ್ಲಿಸಿದ್ದ ಮೋಟಾರು ಬೈಕೊಂದು ಕಳವಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 05/10/2014ರಂದು ಹಾಸನ ನಿವಾಸಿ ರೂಪೇಶ್ ಎಂಬವರು ಅವರ ಸ್ನೇಹಿತ ಲಲಿತ್‌ಕುಮಾರ್‌ ಎಂಬವರ ಕೆಎ-20-ಕ್ಯು-555 ರ ಯಮಹಾ 135 ಮೋಟಾರು ಸೈಕಲನ್ನು ಪಡೆದುಕೊಂಡು ಇನ್ನೊಬ್ಬ ಸ್ನೇಹಿತ ಹರೀಶ್‌ ಎಂಬವರೊಂದಿಗೆ ರಾತ್ರಿ 01:00 ಗಂಟೆಗೆ ದಸರಾ ವೀಕ್ಷಣೆಗೆಂದು ಮಡಿಕೇರಿಗೆ ಬಂದು ಬೈಕನ್ನು ಮ್ಯಾನ್ಸ್‌ ಕಾಂಪೌಂಡಿನಲ್ಲಿ ನಿಲ್ಲಿಸಿ ದಸರಾ ವೀಕ್ಷಿಸಿ ಬೆಳಿಗ್ಗೆ ಬಂದು ನೋಡುವಾಗ ಬೈಕ್ ಕಾಣೆಯಾಗಿದ್ದು, ಯಾರೋ ಕಳ್ಳರು ಕಳವು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Tuesday, October 7, 2014

ಅಪರಿಚಿತರಿಂದ ವ್ಯಕ್ತಿಯ ಕೊಲೆ ಯತ್ನ 
          ಅಪರಿಚಿತ ವ್ಯಕ್ತಿಗಳಿಬ್ಬರು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಪೊನ್ನಂಪೇಟೆ ಬಳಿಯ ಕಾನೂರು ಗ್ರಾಮದಲ್ಲಿ ನಡೆದಿದೆ. ಮೈಸೂರಿನ ಸಿದ್ದಾರ್ಥನಗರದ ನಿವಾಸಿ ವಕೀಲರಾದ ಕೆ.ಎ.ಬೋಪಣ್ಣ ಎಂಬವರು ದಿನಾಂಕ 05/10/2014ರಂದು ಕಾನೂರಿನಲ್ಲಿರುವ ಅವರ ಮಾವ ಸಿ.ಬಿ.ಮೊಣ್ಣಪ್ಪನವರ ಮನೆಗೆ ಬಂದಿದ್ದು, ದಿನಾಂಕ 06/10/2014ರ ರಾತ್ರಿ ಎಲ್ಲರೊಂದಿಗೆ ಮನೆಯಲ್ಲಿರುವ ಸಂದರ್ಭ ಮನೆಯ ಕರೆಗಂಟೆ ಬಾರಿಸಿದ ಶಬ್ದ ಕೇಳಿ ಬೋಪಣ್ಣರವರು ಹೋಗಿ ಬಾಗಿಲು ತೆರೆದರೆನ್ನಲಾಗಿದೆ. ಆಗ ಹೊರಗಡೆ ಇಬ್ಬರು ಅಪರಿಚಿತರು ನಿಂತಿದ್ದು, ಅವರಲ್ಲಿ ಓರ್ವ ಏಕಾ ಏಕಿ ಕೈಯಲ್ಲಿದ್ದ ಚಾಕುವಿನಿಂದ ಬೋಪಣ್ಣನವರ ಹೊಟ್ಟೆಗೆ ಚುಚ್ಚಿದ್ದು, ಮತ್ತೊಮ್ಮೆ ಚುಚ್ಚಲು ಪ್ರಯತ್ನಿಸುವಾಗ ಬೋಪಣ್ಣರವರು ಕಿರುಚಿಕೊಂಡಾಗ ಮನೆಯವರೆಲ್ಲರೂ ಬಂದ ಕಾರಣ ಇಬ್ಬರೂ ಅಲ್ಲಿಂದ ಓಡಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಾಹನ ಅಫಘಾತ, ಮಹಿಳೆಗೆ ಗಾಯ 
        ಸ್ಕಾರ್ಪಿಯೋ ವಾಹನವೊಂದು ಮಾರುತಿ ವ್ಯಾನು ಹಾಗೂ ಕಾರಿಗೆ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಗಾಯಾಳುವಾದ ಘಟನೆ ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 06/10/2014ರಂದು ಮದೆನಾಡು ಗ್ರಾಮದ ನಿವಾಸಿ ಎ.ಪಿ.ಮನೋರಮ ಎಂಬವರು ಅವರ ಮಗಳು ಶಿವಾಲಿ ಎಂಬಾಕೆಯನ್ನು ಪ್ರವಾಸದ ನಿಮಿತ್ತ ಶಾಲೆಗೆ ಬಿಟ್ಟು ವಾಪಾಸು ಮನೆಗೆ ಅವರ ಮಾರುತಿ 800 ಕಾರು ಸಂಖ್ಯೆ ಕೆಎ-12-ಎಂ-1934ರಲ್ಲಿ ಹೋಗುತ್ತಿರುವಾಗ ಕಾಟಕೇರಿ ಬಳಿ ಮಂಗಳೂರು ಕಡೆಯಿಂದ ಕೆಎಲ್‌-18-ಬಿ-3430 ರ ಒಂದು ಸ್ಕಾರ್ಪಿಯೋ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಮನೋರಮರವರು ಹೋಗುತ್ತಿದ್ದ ಕಾರಿನ ಮುಂದೆ ಹೋಗುತ್ತಿದ್ದ ಕೆಎ-12-ಎಂ-7374ರ ಮಾರುತಿ ಓಮಿನಿ ವ್ಯಾನಿಗೆ ಡಿಕ್ಕಿಪಡಿಸಿ ನಂತರ ಬಂದು ಮನೋರಮರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮನೋರಮರವರ ಕಾರಿನಲ್ಲಿದ್ದ ಎ.ಪಿ.ಪೊನ್ನಮ್ಮ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಜೀಪು ಅಫಘಾತ ಹಸುಳೆ ಸಾವು 
        ಭೀಕರ ರಸ್ತೆ ಅಫಘಾತವೊಂದರಲ್ಲಿ ಎರಡು ವರ್ಷದ ಹಸುಳೆ ಬಾಲಕಿ ಸಾವಿಗೀಡಾದ ಘಟನೆ ಮೂರ್ನಾಡು ಬಳಿಯ ಎಂ.ಬಾಡಗ ಗ್ರಾಮದಲ್ಲಿ ನಡೆದಿದೆ. ದಿನಾಂಕ 06/10/2014ರಂದು ಎಂ.ಬಾಡಗ ಗ್ರಾಮದ ಅರುಣಾಚಲಂ ಎಂಬವರ ಕಾಫಿ ತೋಟದ ಲೈನು ಮನೆಯಲ್ಲಿ ವಾಸವಿರುವ ಮೂಲತಃ ಅಸ್ಸಾಂ ರಾಜ್ಯದ ನಿವಾಸಿಯಾದ ಅಬ್ದುಲ್  ಹನೀಫ್‌ರವರು  ಸಹ ಕೆಲಸಗಾರರೊಂದಿಗೆ ಕೆಎ-12-ಎ-7210ರ ಪಿಕ್‌ಅಪ್ ಜೀಪಿಗೆ ಸೌದೆ ತುಂಬಿಸಿ ನಂತರ ಜೀಪು ಚಾಲಕ ಕಣ್ಣನ್ ಎಂಬಾತನು ಜೀಪನ್ನು ಏಕಾ ಏಕಿ ಅಜಾಗರೂಕತೆಯಿಂದ ಮುಂದಕ್ಕೆ ಚಾಲಿಸಿದ ಪರಿಣಾಮ ಜೀಪು ಮುಂದೆ ಆಟವಾಡುತ್ತಿದ್ದ ಅಬ್ದುಲ್ ಹನೀಫ್‌ರವರ ಮಗಳು ಎರಡು ವರ್ಷ ಪ್ರಾಯದ ರಿಯಾ ಎಂಬ ಬಾಲಕಿಯ ಮೇಲೆ ಹತ್ತಿದ್ದು ಬಾಲಕಿ ರಿಯಾಳು ದುರ್ಮರಣಕ್ಕೀಡಾಗಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Monday, October 6, 2014

ಇಬ್ಬರ ಮೇಲೆ ಗುಂಪು ಹಲ್ಲೆ
         ಇಬ್ಬರ ಮೇಲೆ ಹಲವು ವ್ಯಕ್ತಿಗಳು ಗುಂಪು ಹಲ್ಲೆ ಮಾಡಿದ ಘಟನೆ ಶ್ರೀಮಂಗಲ ಬಳಿಯ ಬಿರುನಾಣಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 5/10/2014ರಂದು ಬಿರುನಾಣಿ ಗ್ರಾಮದ ಕುಪ್ಪಣಮಾಡ ಕುಟುಂಬಸ್ಥರು ಅವರ ಐನ್ ಮನೆ ವಿಚಾರವಾಗಿ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಭಾಗವಹಿಸಿದ್ದ ಕುಪ್ಪಣಮಾಡ ಮುದ್ದಪ್ಪ ಹಾಗೂ ಅವರ ಮಗ ಬೋಪಣ್ಣರವರೊಂದಿಗೆ ಅವರ ಕುಟುಂಬಸ್ಥರಾದ ಕುಪ್ಪಣಮಾಡ ಪೂಣಚ್ಚ, ಮೋಟಯ್ಯ ಮತ್ತು ಇತರರು ವಿನಾ ಕಾರಣ ಜಗಳವಾಡಿದ್ದು, ನಂತರ ಮುದ್ದಪ್ಪ ಹಾಗೂ ಬೋಪಣ್ಣ ಸಭೆಯಿಂದ ಹೊರಗೆ ಹೋಗುತ್ತಿರುವಾಗ ಪೂಣಚ್ಚ, ಮೋಟಯ್ಯ ಹಾಗೂ ಇತರರು ಅವರನ್ನು ದಾರಿ ತಡೆದು ಕೈಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೋಟಾರು ಬೈಕು ಟಾಟಾ ಸುಮೋ ಪರಸ್ಪರ ಡಿಕ್ಕಿ 
             ಮೋಟಾರು ಬೈಕೊಂದಕ್ಕೆ ಟಾಟಾ ಸುಮೋ ಡಿಕ್ಕಿಯಾದ ಪರಿಣಾಮ ಮೋಟಾರು ಬೈಕ್ ಸವಾರನಿಗೆ ಗಾಯಗಳಾದ ಘಟನೆ ಶನಿವಾರಸಂತೆಯ ರಾಮನಹಳ್ಳಿ ಜಂಕ್ಷನ್ ಬಳಿ ನಡೆದಿದೆ. ದಿನಾಂಕ 05/10/2014ರಂದು ನಂದಿಗುಂದ ಗ್ರಾಮದ ನಿವಾಸಿ ಜಗದೀಶ ಎಂಬವರು ಕೆಲಸದ ನಿಮಿತ್ತ ಅವರ ಮೋಟಾರು ಸೈಕಲ್ ಸಂಖ್ಯೆ ಕೆಎ-13-ಆರ್‌-839 ರಲ್ಲಿ ಶನಿವಾರಸಂತೆಗೆ ಬಂದು ವಾಪಾಸು ಮನೆಗೆ ಹೋಗುತ್ತಿರುವಾಗ ರಾಮನಹಳ್ಳಿ ಜಂಕ್ಷನ್ ಬಳಿ ಸೋಮವಾರಪೇಟೆ ಕಡೆಯಿಂದ ಕೆಎ-15-5305ರ ಟಾಟಾ ಸುಮೋ ವಾಹನವನ್ನು ಅದರ ಚಾಲಕ ಶಿವಮೊಗ್ಗ ನಗರದ ಸತ್ಯನಾರಾಯಣ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜಗದೀಶರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಜಗದೀಶರವರು ಬೈಕಿನಿಂದ ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ 
           ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂರ್ನಾಡು ಸಮೀಪದ ಮುತ್ತಾರ್ಮುಡಿ ಗ್ರಾಮದಲ್ಲಿ ನಡೆದಿದೆ. ಮುತ್ತಾರ್ಮುಡಿ ಗ್ರಾಮದ ನಿವಾಸಿ ಶಾಂತಿ ಎಂಬವರ ಪತಿ ಮುತ್ತ ಎಂಬವರು ದಿನಾಂಕ 05/10/2014ರಂದು ಕೂಲಿ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು, ಕೆಲಸಕ್ಕೆ ಹೋದ ಪತ್ನಿ ಶಾಂತಿರವರು ಸಂಜೆ ವೇಳೆ ಮನೆಗೆ ಬಂದು ನೋಡುವಾಗ ಮನೆಯ ಬಾಗಿಲ ಬಳಿ ಮುತ್ತರವರು ಯಾವುದೋ ವಿಷ ಸೇವಿಸಿ ಮೃತನಾಗಿರುವುದು ಕಂಡು ಬಂದಿದ್ದು, ಅತಿಯಾದ ಮದ್ಯ ಪಾನ ಹಾಗೂ ಅನಾರೋಗ್ಯದ ಕಾರಣ ಮುತ್ತರವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹುಡುಗ ಕಾಣೆ ಪ್ರಕರಣ 
      ಜಲಪಾತದ ನೀರಿನಲ್ಲಿ ಮುಳುಗಿದ ಹುಡುಗನೋರ್ವ ಕಾಣೆಯಾದ ಘಟನೆ ನಗರದ ಬಳಿಯ ಅಬ್ಬಿ ಫಾಲ್ಸ್ ಬಳಿ ನಡೆದಿದೆ. ದಿನಾಂಕ 04/10/2014ರಂದು ತಮಿಳು ನಾಡಿನ ಚೆನ್ನೈ ನಿವಾಸಿ ಜಿ.ಶೇಖರ್ ಎಂಬವರ ಮಗ ಮಗೇಶ್ ಎಂಬಾತನು ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದು, ಸಂಜೆ ವೇಳೆ ನಗರದ ಬಳಿ ಇರುವ ಅಬ್ಬಿ ಫಾಲ್ಸ್‌ ಜಲಪಾತ ವೀಕ್ಷಿಸಲು ತೆರಳಿದ ಮಗೇಶ್ ಈಜಾಡಲೆಂದು ಜಲಪಾತದ ಕೆಳಗಿನ ನೀರಿಗೆ ಇಳಿದಿದ್ದು, ನೀರಿನಲ್ಲಿ ಮುಳುಗಿ ಕಾಣೆಯಾಗಿರುವುದಾಗಿ ಮಗೇಶನ ತಂದೆ ಶೇಖರ್ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಮೇಲೆ ಕಲ್ಲಿನಿಂದ ಹಲ್ಲೆ 
         ಮಹಿಳೆಯೊಬ್ಬರ ಮೇಲೆ  ಕಲ್ಲಿನಿಂದ ಹಲ್ಲೆ ಮಾಡಿದ ಘಟನೆ ಮಡಿಕೇರಿ ನಗರದ ದಾಸವಾಳ ರಸ್ತೆ ಬಳಿ ನಡೆದಿದೆ. ದಿನಾಂಕ 05/10/2014ರ ಸಂಜೆ ವೇಳೆ ನಗರದ ದಾಸವಾಳ ರಸ್ತೆ ನಿವಾಸಿ ಪ್ರಮೀಳ ಎಂಬವರ ಪತಿ ಕಿಶೋರ್‌ ಎಂಬವರ ಅಣ್ಣ ಸುರೇಶ್ ಎಂಬವರು ವಿಪರೀತ ಮದ್ಯಪಾನ ಮಾಡಿ ಮನೆಯ ಹೊರಗೆ ನಿಂತು ಪ್ರಮೀಳರವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ನಿಂದಿಸುತ್ತಿದ್ದು, ಪ್ರಮೀಳರವರು ಈ ಬಗ್ಗೆ ಸುರೇಶರವರನ್ನು ವಿಚಾರಿಸುವಾಗ ಸುರೇಶ ಏಕಾಏಕಿ ಕಲ್ಲಿನಿಂದ ಪ್ರಮೀಳರವರ ಮೇಲೆ ಹೊಡೆದು ಹಲ್ಲೆ ಮಾಡಿದ್ದು, ತಡೆಯಲು ಬಂದ ಪ್ರಮೀಳರವರ ಮಗಳ ಮೇಲೂ ಹಲ್ಲೆಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಪೊಲೀಸ್‌ ಅನುಯಾಯಿ ನಾಪತ್ತೆ, 
           ದಸರಾ ಬಂದೋಬಸ್ತು ಕರ್ತವ್ಯಕ್ಕೆಂದು ಬಂದ ಪೊಲೀಸ್‌ ಅನುಯಾಯಿಯೊಬ್ಬ ನಾಪತ್ತೆಯಾದ ಪ್ರಕರಣ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 04/10/2014ರಂದು ನಡೆದ ದಸರಾ ಉತ್ಸವದ ಬಂದೋಬಸ್ತು ಕರ್ತವ್ಯಕ್ಕೆಂದು ಬೆಂಗಳೂರಿನ ಕೆಎಸ್‌ಆರ್‌ಪಿ 1ನೇ ಬೆಟಾಲಿಯನ್‌ನ ಪೊಲೀಸ್‌ ಸಿಬ್ಬಂದಿಗಳು  ಮಡಿಕೇರಿಗೆ ಬಂದು ನಗರದ ಮೈತ್ರಿ ಪೊಲೀಸ್‌ ಸಮುದಾಯ ಭವನದಲ್ಲಿ ತಂಗಿದ್ದರು. ರಾತ್ರಿ ಬಂದೋಬಸ್ತು ಕರ್ತವ್ಯಕ್ಕೆಂದ ಎಲ್ಲಾ ಸಿಬ್ಬಂದಿಗಳು ತೆರಳಿದ್ದು, ಮೈತ್ರಿ ಭವನದಲ್ಲಿ ಉಳಿದಿದ್ದ ಪೊಲೀಸ್‌ ಅನುಯಾಯಿ ಪುಟ್ಟಸ್ವಾಮಿ ಎಂಬವರು ತನ್ನೊಂದಿಗಿದ್ದ ಇತರ ಯಾರಿಗೂ ಮಾಹಿತಿ ನೀಡದೆ ಎಲ್ಲಿಗೋ ಹೋಗಿ ಕಾಣೆಯಾಗಿರುವುದಾಗಿ ತುಕಡಿಯ ನೇತೃತ್ವ ವಹಿಸಿದ್ದ ಎಆರ್‌ಎಸ್‌ಐ ಶಿವಾನಂದ ಮೂರ್ತಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಡಿಕ್ಕಿ ಪ್ರಕರಣ ದಾಖಲು 
         ಕಾರುಗಳೆರಡು ಪರಸ್ಪರ ಡಿಕ್ಕಿಯಾಗಿರುವ ಘಟನೆ ಪೊನ್ನಂಪೇಟೆ ಬಳಿಯ ಬೇಗೂರುಕೊಲ್ಲಿ ಎಂಬಲ್ಲಿ ನಡೆದಿದೆ. ದಿನಾಂಕ 05/10/2014ರಂದು ವಿರಾಜಪೇಟೆ ಬಳಿಯ ಬಿಟ್ಟಂಗಾಲ ನಿವಾಸಿ ಪೂಜಾ ಎಂಬವರು ಅವರ ತಾಯಿಯೊಂದಿಗೆ ಅವರ ಫೋರ್ಡ್‌ ಫಿಗೋ ಕಾರು ಸಂಖ್ಯೆ ಕೆಎ-05-ಹೆಚ್‌ಎನ್-2702ರಲ್ಲಿ ಬಾಡಗರ ಕೇರಿಯ ಮೃತ್ಯುಂಜಯ ದೇವಸ್ಥಾನಕ್ಕೆ ಹೋಗುತ್ತಿರುವಾಗ ಪೊನ್ನಂಪೇಟೆ ಬಳಿಯ ಬೇಗೂರು ಕೊಲ್ಲಿ ಎಂಬಲ್ಲಿನ ತಿರುವು ರಸ್ತೆಯಲ್ಲಿ ಶ್ರೀಮಂಗಲ ಕಡೆಯಿಂದ ಒಂದು ಮಾರುತಿ ಆಲ್ಟೋ ಕಾರು ಸಂಖ್ಯೆ ಕೆಎ-03-ಎಂಸಿ-4916ನ್ನು ಆದರ ಚಾಲಕನಾದ ಬಾಡಗರಕೇರಿಯ ಪೋರಾಡ್ ನಿವಾಸಿ ಎಂ.ವಿ.ಗಣಪತಿ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ತಮ್ಮ ಕಾರಿಗೆ ಡಿಕ್ಕಿ ಪಡಸಿದ ಪರಿಣಾಮ ಕಾರು ಮಗುಚಿ ಬಿದ್ದು ತನಗೆ ಹಾಗು ತಾಯಿಗೆ ಗಾಯಗಳಾಗಿರುವುದಾಗಿ ಪೂಜಾರವರು ಪೊನ್ನಂಪೇಟೆ ಠಾಣೆಯಲ್ಲಿ ದೂರು ನೀಡಿದ್ದು, ಇದೇ ರೀತಿ ಪೂಜಾರವರು ಅತಿ ವೇಋಗ ಮತ್ತು ಅಜಾಗರೂಕತೆಯಿಂದ ಕಾರು ಚಾಲಿಸಿಕೊಂಡು ಬಂದು ತನ್ನ ಕಾರಿಗೆ ಡಿಕ್ಕಿಪಡಿಸಿರುವುದಾಗಿ ಗಣಪತಿಯವರೂ ಸಹಾ ಪೊನ್ನಂಪೇಟೆ ಠಾಣೆಯಲ್ಲಿ ದೂರು ನೀಡಿರುತ್ತಾರೆ. 
          ಪೊನ್ನಂಪೇಟೆ ಪೊಲೀಸರು ಉಭಯ ಕಡೆಯವರ ದೂರನ್ನು ದಾಖಲಿಸಿಕೊಂಡು ತನಿಖಯ ಕೈಗೊಂಡಿದ್ದಾರೆ. 

Sunday, October 5, 2014

ಲಾರಿ ಅಪಘಾತ, ಒಬ್ಬನ ಸಾವು, 7 ಮಂದಿಗೆ ಗಾಯ:
 
    ಲಾರಿಯೊಂದು ರಸ್ತೆಬದಿಗೆ ಮಗುಚಿ ಬಿದ್ದ ಪರಿಣಾಮ ಒಬ್ಬ ಸಾವನ್ನಪ್ಪಿ 7 ಮಂದಿ ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಜೋಡುಪಾಲ ಎಂಬಲ್ಲಿ ನಡೆದಿದೆ.  ದಿನಾಂಕ 4-10-2014 ರಂದು ಕೆಎ-27-ಎ-3798 ರ ಲಾರಿಯನ್ನು ಅದರ ಚಾಲಕ ಚಿನ್ನಸ್ವಾಮಿ ಎಂಬ ವ್ಯಕ್ತಿ  ಚಾಲಿಸಿಕೊಂಡು  ಮಡಿಕೇರಿ ಕಡೆಗೆ ಬರುತ್ತಿದ್ದು ಸಮಯ 09-30 ಎಎಂ ಗೆ ಮದೆ ಗ್ರಾಮದ ಜೋಡುಪಾಲ ಎಂಬಲ್ಲಿಗೆ ತಲುಪುವಾಗ್ಗೆ ಚಾಲಕ ಚಿನ್ನಸ್ವಾಮಿಯು ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ  ಲಾರಿಯು ರಸ್ತೆಯ  ಎಡ ಬದಿಗೆ ಮಗುಚಿ ಬಿದ್ದು ಲಾರಿಯಲ್ಲಿದ್ದ ಚಾಲಕ ಚಿನ್ನಸ್ವಾಮಿ, ಬನ್‌ಸಿಂಗ್, ದೌಲತ್, ಸಂದೀಪ್, ಬಿಪಿನ್, ಸುಜಯ್, ಮುನಿಯಪ್ಪನ್, ಸಾದಾರಂ, ಆಯುಭ್‌ರವರುಗಳಿಗೆ  ಗಾಯಗಳಾಗಿದ್ದು, ಸದರಿಯವರುಗಳನ್ನು ಆಸ್ಪತ್ರೆಗೆ  ಸಾಗಿಸಿದ್ದು,   ಗಾಯಾಳುಗಳ ಪೈಕಿ ಬನ್‌ಸಿಂಗ್‌ ಎಂಬಾತ ಮೃತಪಟ್ಟಿದ್ದು,  ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನದನ್ನು ದಾಖಲಿಸಿಕೊಂಡಿರುತ್ತಾರೆ. ಮೃತ ವ್ಯಕ್ತಿ ಹಾಗು ಗಾಯಾಳುಗಳು  ತಮಿಳುನಾಡು ರಾಜ್ಯದ  ತಿರುಚಂಗೊಡು ತಾಲೋಕಿನವರಾಗಿರುತ್ತಾರೆ. 
 
ಕ್ರಿಮಿನಾಶಕ ಸೇವಿಸಿದ ವ್ಯಕ್ತಿಯ ಸಾವು:

     ಬ್ರಾಂದಿಯೆಂದು ಬಾವಿಸಿ ಕ್ರಿಮಿನಾಶಕ ಪದಾರ್ಥವನ್ನು ಸೇವಿಸಿದ ವ್ಯಕ್ತಿಯೊಬ್ಬ ಸಾವನಪ್ಪದ ಘಟನೆ  ನಡೆದಿದೆ.  ವಿರಾಜಪೇಟೆ ತಾಲೋಕು ಕಾಕೋಟುಪರಂಬು ನಿವಾಸಿ ನಾರಾಯಣ ಎಂಬವರಿಗೆ ವಿಪರೀತ ಮದ್ಯ ಕುಡಿಯುವ ಚಟವಿದ್ದು, ದಿನಾಂಕ 2-10-2014 ರಂದು ಮನೆಯ ಮುಂಬಾಗದ ಗೋಡೌನ್‌ ನಲ್ಲಿಟ್ಟಿದ್ದ ಕ್ರಿಮಿನಾಶಕವನ್ನು ಬ್ರಾಂದಿಯೆಂದು ಬಾವಿಸಿ ಕುಡಿದು ಅಸ್ವಸ್ಥನಾಗಿದ್ದು, ಸದರಿಯವರುನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 3-10-2014 ರಂದು ಮೃತರಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಕಾರು ಅಪಘಾತ ಪ್ರಾಣಾಪಾಯದಿಂದ ಇಬ್ಬರು ಪಾರು:

     ದುಡುಕುತನದಿಂದ ಚಾಲಿಸಿದ ಕಾರು ನಿಯಂತ್ರಣ ಕಳೆದು 20 ಅಡಿ ಆಳಕ್ಕೆ ಬಿದ್ದು, ಚಾಲಕ ಸೇರಿ ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾದ ಘಟನೆ ಮಡಿಕೇರಿ ಸಮೀಪದ ಮೇಕೇರಿಯಲ್ಲಿ ನಡೆದಿದೆ. ದಿನಾಂಕ 3-10-2014 ರಂದು ಸತ್ಯಕುಮಾರ್‌ ಎಂಬವರು ಕೆಎ-12 ಎ-639 ಸಂಖ್ಯೆಯ ಕಾರನ್ನು ಮಡಿಕೇರಿಯಿಂದ ಮೇಕೇರಿ ಕಡೆಗೆ ದುಡುಕಿನಿಂದ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಸ್ತೆ ಬದಿಯಲ್ಲಿ ಸದರಿ ಕಾರು ಮಗುಚಿಕೊಂಡು ಸುಮಾರು 20 ಅಡಿ ಆಳಕ್ಕೆ ಬಿದ್ದು, ಕಾರಿನಲ್ಲಿದ್ದ ಚಾಲಕ ಮತ್ತು ವಿ.ಪಿ. ಸುರೇಶ್‌ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಡಿಕೇರಿ ಟ್ರಾಫಿಕ್‌ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಪಾದಾಚಾರಿಗೆ ಬೈಕ್‌ ಡಿಕ್ಕಿ, ಗಾಯ:

    ದಿನಾಂಕ 4-10-2014 ರಂದು ಮಡಿಕೇರಿ ನಗರದ ಹಿಲ್‌ ರಸ್ತೆಯಲ್ಲಿ ಮಡಿಕೇರಿ ನಗರದ ಹಿಲ್‌ರಸ್ತೆಯಲ್ಲಿರುವ ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ರಾಜ ಎಂಬ ವ್ಯಕ್ತಿ ದಿನಾಂಕ 4-10-2014 ರಂದು ಊಟಕ್ಕೆಂದು ಮಾರ್ಕೆಟ್‌ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿಯೋರ್ವ ತನ್ನ ಮೋಟಾರ್‌ ಸೈಕಲ್‌ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಪಡಿಸಿದ್ದು ನಂತರ ಮೋಟಾರ್‌ ಸೈಕಲನ್ನು ನಿಲ್ಲಿಸದೇ ಹೋಗಿರುತ್ತಾನೆ. ಈ ಸಂಬಂಧ ಮಡಿಕೇರಿ ಟ್ರಾಫಿಕ್‌ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  

ಸ್ಕೂಟಿಗೆ ವ್ಯಾನ್‌ ಡಿಕ್ಕಿ, ಸವಾರನಿಗೆ ಗಾಯ:

     ಸ್ಕೂಟಿಯೊಂದಕ್ಕೆ  ಹಿಂಬದಿಯಿಂದ ಬಂದ ಮಾರುತಿ ವ್ಯಾನ್‌ ಡಿಕ್ಕಿಯಾಗಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ.  ‌ ದಿನಾಂಕ:04/10/2014 ರಂದು ಸಮಯ 20:20 ಗಂಟೆಗೆ ಡಿ,ಎಸ್,ಗಿರೀಶ್ ರವರು ಕೆ,ಎ.12- 2686 ರ ಸ್ಕೂಟಿಯಲ್ಲಿ ಸೋಮವಾರಪೇಟೆ ನಗರದ ಕಾರ್ಪೋರೆಷನ್‌ ಬ್ಯಾಂಕ್ ಕಟ್ಟಡದ ಮುಂದಿನ ಥಾರು ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಕೆ,ಎ,12-4018 ರ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮ ಗಿರೀಶ್‌ರವರು ಗಾಯಗೊಂಡಿದ್ದು, ಗಾಯಾಳುವಿನ ಪತ್ನಿ ಶ್ರೀಮತಿ ಚಂದ್ರಕಲಾ ಸೋಮವಾರಪೇಟೆ ನಗರ ಇವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

Saturday, October 4, 2014

ಮನೆಯ ಬಾಗಿಲು ಮುರಿದು, 3 ಲಕ್ಷ ನಗದು ಕಳವು:  

     ಮನೆಯ ಹಿಂದಿನ ಬಾಗಿಲನ್ನು ಮುರಿದು ಗಾದ್ರೇಜ್‌ನ ಸೇಫ್ ಲಾಕರ್‌ನಲ್ಲಿ ಇಟ್ಟಿದ್ದ 3 ಲಕ್ಷ ಹಣ ಕಳ್ಳತನವಾದ ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕರ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ಕರ್ಣಂಗೇರಿ ಗ್ರಾಮದ ವಾಸಿ ಸಿ.ಪಿ. ಉತ್ತಪ್ಪನವರು ಕೆಲಸ ನಿಮಿತ್ತ ಮನೆಗೆ ಬೀಗ ಹಾಕಿ ಹೋಗಿದ್ದು ಸಂಜೆ 7-00 ಗಂಟೆಗೆ ಮನೆಗೆ ಹೋದಾಗ ಮನೆಯ ಹಿಂದಿನ ಬಾಗಿಲಿನ ಬೋಲ್ಟ್ ನ್ನು ಯಾರೋ ಕಳ್ಳರು ಯಾವುದೋ ಆಯುದವನ್ನು ಉಪಯೋಗಿಸಿ ಮುರಿದು ಮನೆಯೊಳಗೆ ಪ್ರವೇಶಿಸಿ ಮಲಗುವ ಕೋಣೆಯ ಒಳಗಡೆ ಇಟ್ಟಿದ್ದ ಗಾದ್ರೇಜಿನ ಸೇಫ್‌ ಲಾಕರ್‌ನಿಂದ 3,00,000 ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಸಿ.ಪಿ. ಉತ್ತಪ್ಪನವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ವಾಹನ ನಿಲುಗಡೆ ವಿಚಾರದಲ್ಲಿ ಜಗಳ ವ್ಯಕ್ತಿಯ ಮೇಲೆ ಹಲ್ಲೆ:

    ವಾಹನ ನಿಲುಗಡೆ ವಿಷಯದಲ್ಲಿ  ಜಗಳ ಮಾಡಿ ವ್ಯಕ್ತಿಯ ಮೇಲೆ ಮೂರು  ವ್ಯಕ್ತಿಗಳು ಹಲ್ಲೆನಡೆಸಿದ ಘಟನೆ  ಮಡಿಕೇರಿ ಸಮೀಪದ ಅಬ್ಬಿಫಾಲ್ಸ್‌ ಬಳಿ ನಡೆದಿದೆ.   ಮಡಿಕೇರಿ ತಾಲೋಕು ಕರ್ಣಂಗೇರಿ ಗ್ರಾಮದ ರಾಜೇಶ್ವರಿ ನಗರದಲ್ಲಿ ವಾಸವಾಗಿರುವ ಎಂ.ಎಂ. ಸಂಶುದ್ದೀನ್‌ ರವರು ದಿನಾಂಕ 03-10-2014 ರಂದು ಸಮಯ 03-30 ಪಿ ಎಂ ಗೆ ಅಬ್ಬಿಫಾಲ್ಸ್ ನ ಬಸ್ ಪಾರ್ಕಿಂಗ್ ಜಾಗದಲ್ಲಿ ಪಾರ್ಕಿಂಗ್ ಕೆಲಸ ಮಾಡುತ್ತಿರುವಾಗ್ಗೆ ಅಲ್ಲೇ ಇದ್ದ ಕೃಷ್ಣಪ್ಪ @ ರೆಮ್ಮಿ , ಆನಂದ ಹಾಗೂ ಅವರ ಜೊತೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕೈಯಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಎಂಎಂ. ಸಂಶುದ್ದೀನ್‌ರನ್ನು ಅವಾಚ್ಯ ಶಬ್ದಗಳಿಂದ ಬೈದು ಮೂವರೂ ದೊಣ್ಣೆಯಿಂದ ಹಲ್ಲೆ ನಡೆಸಿ ಕಾಲಿನಿಂದ ಒದ್ದು ನೋವನ್ನುಂಟು ಮಾಡಿದ್ದು ಅಲ್ಲದೆ ಕತ್ತಿಯಿಂದ ಕಡಿದು ಕೊಲ್ಲುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಸದರಿ ಸಂಶುದ್ದೀನ್‌ನವರು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರನ್ನು ನೀಡಿದ್ದು, ಅದರಂತೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ. 

ಕ್ಷುಲ್ಲಕ ಕಾರಣ, ವ್ಯಕ್ತಿಯ ಮೇಲೆ ಹಲ್ಲೆ :
 
     ವಾಹನ ನಿಲ್ಲಿಸಿದ ವಿಚಾರದಲ್ಲಿ  ಜಗಳ ಮಾಡಿ ವ್ಯಕ್ತಿಗೆ ಹಲ್ಲೆ ಮಾಡಿ ಗಾಯಪಡಿಸಿದ ಘಟನೆ ಅಬ್ಬಿಫಾಲ್ಸ್‌ ಬಳಿ ನಡಿದೆದೆ.  ಮಡಿಕೇರಿ ತಾಲೋಕು ಕರ್ಣಂಗೇರಿ ಗ್ರಾಮದ ವಾಸಿ ಹೆಚ್‌.ಟಿ. ಆನಂದ ಇವರು ಮಿನಿ ಬಸ್‌ಕಂಡ್ಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ 3-10-2014 ರಂದು ಅಬ್ಬಿಫಾಲ್ಸ್ ಬಸ್ ಪಾರ್ಕಿಂಗ್ ಹತ್ತಿರ ಇರುವ ಉದಯ ಎಂಬುವವರ ಅಂಗಡಿಯ ಹತ್ತಿರ ತನ್ನ ಸ್ನೇಹಿತರೊಬ್ಬರೊಂದಿಗೆ ಮಾತನಾಡಿಕೊಂಡಿರುವಾಗ ಅಬ್ಬಿಫಾಲ್ಸ್‌ ನ್ನು ಟೆಂಡರ್ ಪಡೆದುಕೊಂಡಿರುವ ಮನು ಉತ್ತಪ್ಪ ಹಾಗೂ ಅವರ ವಾಹನ ಚಾಲಕ ಸಂಶು ಎಂಬ ವ್ಯಕ್ತಿ ಅಲ್ಲಿಗೆ ಬಂದು ಕಾರನ್ನು ನಿಲ್ಲಿಸುವ ವಿಚಾರದಲ್ಲಿ ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಸದರಿ ಹೆಚ್‌.ಟಿ. ಆನಂದ ಚಿಕಿತ್ಸೆಗೆ ದಾಖಲಾಗಿ ಘಟನೆಯ ಬಗ್ಗೆ ಮಡಿಕೇರಿಗ್ರಾಮಾಂತರ ಪೊಲೀಸರಿಗೆ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Friday, October 3, 2014

ವರದಕ್ಷಿಣೆ ಕಿರುಕುಳ, ಮಹಿಳೆಯ ಆತ್ಮಹತ್ಯೆ:
 
     ಮಡಿಕೇರಿ ತಾಲೋಕು ಕೊಳಗದಾಳು ಗ್ರಾಮದ ನಿವಾಸಿ ಬಾಚಿರಣಿಯಂಡ ಬಸಪ್ಪ ರವರ  ಮಗಳು ಹೇಮಲತ @ ಸರೀತಾಳನ್ನು  ದಿನಾಂಕ 07/02/2013 ರಂದು   ಶ್ರೀಮಂಗಲ ಠಾಣಾ ಸರಹದ್ದಿನ ತಾವಳಗೇರಿ ಗ್ರಾಮದ ನಿವಾಸಿ  ಮಚ್ಚಮಾಡ  ಸುಬ್ಬಯ್ಯರವರ  ಮಗ ಮಚ್ಚಮಾಡ  ಅಯ್ಯಪ್ಪನು ಪ್ರೀತಿಸಿ  ವಿವಾಹವಾಗಿ ತಾವಳಗೇರಿ ಗ್ರಾಮದಲ್ಲಿ ವಾಸವಿದ್ದು 3 ತಿಂಗಳ ಬಳಿಕ   ಅಯ್ಯಪ್ಪನವರ ತಂದೆ ಮಚ್ಚಮಾಡ  ಸುಬ್ಬಯ್ಯ,ತಾಯಿ ಮಚ್ಚಮಾಡ ಮಲ್ಲಿಗೆ  ಹಾಗು ಸೇರಿ  ವರದಕ್ಷಿಣೆಗಾಗಿ   ಮಾನಸಿಕ ಮತ್ತು ದೈಹಿಕ  ಹಿಂಸೆಯನ್ನು ಕೊಡಲಾರಂಬಿಸಿ 15 ಲಕ್ಷ ರೂಪಾಯಿ  ವರದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟಿದ್ದು ಇದರಿಂದ ಮನನೊಂದ ಹೇಮಲತ @ ಸರೀತಾ  ದಿನಾಂಕ 02/10/2014 ರಂದು  ಸಂಜೆ 04:00 ಗಂಟೆಗೆ ನೇಣಿ ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುತ್ತಾಳೆಂದು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ  ಬಾಚಿರಣಿಯಂಡ ಬಸಪ್ಪನವರು ದೂರನ್ನು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
ಪಾದಾಚಾರಿಗೆ ಕಾರು ಡಿಕ್ಕಿ:
 
ದಿನಾಂಕ; 02-10-14ರಂದು ಸಮಯ ಮದ್ಯಾಹ್ನ 12-00ಗಂಟೆಗೆ ಮಗ್ಗುಲ ಗ್ರಾಮದ ನಿವಾಸಿ ಜೇನುಕುರುಬರ ಚಂದ್ರ ಎಂಬವರು  ನಾಂಗಾಲಕ್ಕೆ ಗ್ರಾಮಕ್ಕೆ ಹೋಗುತ್ತಿರುವಾಗ್ಗೆ ಅಂಬಟ್ಟಿಯ ಗ್ರಾಮದ ಸಾರ್ವಜನಿಕ ತಾರು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಎದುರುಗಡೆಯಿಂದ ಅಂದರೆ ಗೋಣಿ ಕೊಪ್ಪ ಕಡೆಯಿಂದ ಒಂದು ಬಳಿ ಬಣ್ಣದ ಟಾಟಾ ಸುಮೋ ನಂ. ಕೆಎ.34.ಎ.7582ರನ್ನು ಅದರ ಚಾಲಕ ಅತೀವೇಗ ಹಾಗೂ  ಅಡ್ಡಾ ದಿಡ್ಡಿಯಾಗಿ ಚಾಲಿಸಿಕೊಂಡು ಬಂದು ಸದರಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  
 

Thursday, October 2, 2014

ಮನೆಯಿಂದ ಚಿನ್ನಾಭರಣ ಕಳವು: 

    ದಿನಾಂಕ: 25-05-14ರಂದು ವಿರಾಜಪೇಟೆ ತಾಲೋಕು, ನಲ್ವತ್ತೊಕ್ಲು ಗ್ರಾಮದ ನಿವಾಸಿ ಈರ್ಶಾದ್ ಅಹಮ್ಮದ್‌ ರವರ ಮನೆಯ ಗಾಡ್ರೇಜ್ ಬೀರುವಿನಲ್ಲಿಟ್ಟಿದ್ದ (1) ಒಂದು ಚಿನ್ನದ ತಾಳಿ ಸರ, (2) ಒಂದು ನೆಕ್ಲೆಸ್ ಕಳ್ಳತನವಾಗಿದ್ದು, ಸದರಿ ಕಳ್ಳತನವನ್ನು ಈರ್ಶಾದ್ ಅಹಮ್ಮದ್‌ ರವರ ಅಣ್ಣನ ಮಗಳಾದ ಜುಮ್ರಾ ಫಾತೀಮ ಎಂಬಾಕೆ ಹಿಂದಿನ ದಿನಗಳಲ್ಲಿ ಅಂದರೆ ದಿನಾಂಕ 25-5-2014 ರಿಂದ 28-5-2014 ರ ಒಳಗೆ ಆಕೆ ಸದರಿ ಮನೆಯಲ್ಲಿದ್ದ ಸಂದರ್ಭದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಆರೋಪಿಸಿ ವಿರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ಈರ್ಶಾದ್‌ ಅಹಮ್ಮದ್‌ರವರು ದಿನಾಂಕ 1-10-2014ರಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಅಕ್ರಮ ಪ್ರವೇಶ, ಬೇಲಿ ನಾಶ:

    ವ್ಯಕ್ತಿಯೊಬ್ಬರ ಕಾಫಿ ತೋಟಕ್ಕೆ ಅಕ್ರಮ ಪ್ರವೇಶಮಾಡಿ ತೋಟಕ್ಕೆ ಹಾಕಿದ ಬೇಲಿನ್ನು ಕಿತ್ತು ನಾಶಪಡಿಸಿ ಕೊಲೆಬೆದರಿಕೆ ಹಾಕಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ವಡ್ಡರಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 1-10-2014 ರಂದು ಬೆಳಿಗ್ಗೆ 9-30 ಗಂಟೆಗೆ ವಡ್ಡರಮಾಡು ಗ್ರಾಮದ ನಿವಾಸಿ ಹೆಚ್‌.ಎಸ್‌. ಶೇಖರ ಎಂಬವರ ಬಾಪ್ತು ಸರ್ವೆ ನಂ 81/189 ರ 21 ಸೆಂಟ್ ಜಾಗಕ್ಕೆ ಅದೇ ಗ್ರಾಮದ ತೀತೀರ ಜನ ಹಾಗುಆತನ ಹೆಂಡತಿ ಅತಿಕ್ರಮ ಪ್ರವೇಶ ಮಾಡಿ ಹಾಕಿದ್ದ ಬೇಲಿಯನ್ನು ಕಿತ್ತು ಹಾಕಿ ನಷ್ಟಪಡಿಸಿದ್ದು ಅಲ್ಲದೆ ಈ ಬಗ್ಗೆ ವಿಚಾರಿಸಿದ ಹೆಚ್‌.ಎಸ್‌. ಶೇಕರವರನ್ನು ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಕ್ರಿಮಿನಾಶಕ ಬೆರೆಸಿದ ಹಾಲನ್ನು ಕುಡಿದು ಮಹಿಳೆಯ ಸಾವು:

    ದಿನಾಂಕ 1-10-2014 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ತಿತಿಮತಿ ಗ್ರಾಮದ ವಿಜಯನಗರದ ನಿವಾಸಿ ದಾಮೋದರ ಎಂಬವರು ತಮ್ಮ ಮನೆಯಲ್ಲಿ ಅಡುಗೆ ಮಾಡಿದ ಆಹಾರವನ್ನು ಬೆಕ್ಕುಗಳು ತಿಂದು ಹೋಗುತ್ತಿದ್ದುದರಿಂದ ಹಾಲಿನಲ್ಲಿ ಕ್ರಿಮಿನಾಶಕವನ್ನು ಬೆರೆಸಿ ಇಟ್ಟಿದ್ದು ಅದನ್ನು ಅರಿಯದೆ ಸದರು ದಾಮೋದರವರ ಪತ್ನಿ ಮಂಜುಳಾ ಎಂಬವರು ಸದರಿ ಹಾಲನ್ನು ಕುಡಿದ ಪರಿಣಾಮ ಅಸ್ವಸ್ಥಗೊಂಡು ಚಿಕಿತ್ಸೆವೇಳೆ ಮೃತಪಟ್ಟಿದ್ದು, ಈ ಸಂಬಂಧ ಮೃತರ ಮಗ ಸುಗುಣ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಪತ್ನಿಯನ್ನು ವಂಚಿಸಿ 2ನೇ ಮದುವೆ:

    ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ವಂಚಿಸಿ 2ನೇ ಮದುವೆಯಾದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ಹೈಸೊಡ್ಲೂರು ಗ್ರಾಮದ ನಿವಾಸಿ ರೋಹಿತ್‌ ಮೇದಪ್ಪ ಹಾಗು ಹೆಚ್‌.ಜೆ. ಸ್ವಾತಿ ಎಂಬವರು ದಿನಾಂಕ 16-4-2009 ರಂದು ವಿವಾಹವಾಗಿದ್ದು, ವಿವಾವ ವಿಚ್ಛೇಧನ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ಇದ್ದು, ದಿನಾಂಕ 18-9-2014 ರಂದು ಸದರಿ ರೋಹಿತ್‌ ಮೇದಪ್ಪನವರು ಪತ್ನಿ ಸ್ವಾತಿಗೆ ತಿಳಿಯದಂತೆ ಗೋಣಿಕೊಪ್ಪ ನಗರದಲ್ಲಿರುವ  ಕ್ಯೂಸಿನ ಪಾಪೇರ ಹೊಟೇಲ್‌ನಲ್ಲಿ 2ನೇ ಮದುವೆಯಾಗಿ ವಂಚಿಸಿರುವುದಾಗಿ ಗೋಣಿಕೊಪ್ಪ ಠಾಣೆಗೆ ಶ್ರೀಮತಿ ಹೆಚ್‌.ಜೆ. ಸ್ವಾತಿಯವರು ದೂರನ್ನು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಕೈಗೊಂಡಿದ್ದಾರೆ.  

ಲಾರಿ ವಿದ್ಯುತ್‌ಕಂಬಕ್ಕೆ ಡಿಕ್ಕಿ, ಕಾರಿಗೆ ಹಾನಿ:

    ದಿನಾಂಕ 1-10-2014 ರಂದು ಮುಂಜಾನೆ ಲಾರಿಯೊಂದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗೋಣಿಕೊಪ್ಪ ನಗರದ ಚಡ್‌ಖಾನ್‌ ಬಜಾರ್‌ ಬಳಿ ಮುಖ್ಯ  ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿ ಬಳಿಕ ರಸ್ತೆಯಲ್ಲಿ ನಿಲ್ಲಿಸಿದ ಬಾಳೆಲೆ ಗ್ರಾಮದ ನಿವಾಸಿ ಮುದ್ದಿಯಡ ಪೊನ್ನಣ್ಣ ಎಂಬವರ ಬಾಪ್ತು ಕಾರಿಗೆ ಡಿಕ್ಕಿಯಾಗಿ ಜಖಂಗೊಂಡಿದ್ದು, ಈ ಸಂಬಂಧ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಮಹಿಳೆ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನ:

    ದಿನಾಂಕ 1-10-2014 ರಂದು ಕುಶಾಲನಗರದ ಹಳೇಗೋಟೆ ಗ್ರಾಮದಲ್ಲಿ ಶ್ರೀಮತಿ ಶಾಹಿರ ಎಂಬಾಕೆಯ ಮೇಲೆ ಹಳೇ ದ್ವೇಷವನ್ನಿಟ್ಟುಕೊಂಡು ಅದೇ ಗ್ರಾಮದ ನಿವಾಸಿನಿವಾಸಿಗಳಾದ ಸ್ವಾಮಿ ಹಾಗು ದೇವರಾಜು ಎಂಬ ವ್ಯಕ್ತಿಗಳು ದೊಣ್ಣೆಯಿಂದ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿರುತ್ತಾರೆಂದು ಶಾಹಿರ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಕೊಂಡಿರುತ್ತಾರೆ. 

ಮನೆಯ ಬೀಗ ಮುರಿದು ಬಂದೂಕು ಮತ್ತು ನಗದು ಕಳ್ಳತನ:

    ನಾಪೋಕ್ಲು ಪೊಲೀಸ್‌ ಠಾಣಾ ಸರಹದ್ದಿನ ಕೋಣಂಜಗೇರಿ ಗ್ರಾಮದ ನಿವಾಸಿ ಪಿ.ಯು. ಸೋಮಯ್ಯ ಎಂಬವರಿಗೆ ಸೇರಿದ ತೋಟದ ಮನೆಯ ಬೀಗವನ್ನು ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯೊಳಗಿಂದ ಒಂದು ಒಂಟಿ ನಳಿಗೆಯ ಬಂದೂಕು, 12-ತೋಟಗಳು ಮತ್ತು 2000 ನಗದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತಾರೆ.  

Wednesday, October 1, 2014

ಹಣದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:

         ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಮಡಿಕೇರಿ ನಗರದ ಗದ್ದಿಗೆ ಬಳಿ ನಡೆದಿದೆ. ಮಡಿಕೇರಿ ನಗರದ ನಿವಾಸಿ ಅಬೂಬಕ್ಕರ್ ಎಂಬವರಿಂದ  ಮಡಿಕೇರಿ ನಗರದ ಗದ್ದಿಗೆ ನಿವಾಸಿ  ಕೆ.ಎ. ಹಂಸ ಎಂಬವರು  15000-00 ರೂ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದು ಅದನ್ನು ಮರಳಿ ಕೊಡಲಿಲ್ಲ ಎಂಬ ಕಾರಣಕ್ಕೆ ಅಬೂಬಕ್ಕರ್‌ ರವರು ದಿನಾಂಕ 30-9-2014 ರಂದು ಬೆಳಿಗ್ಗೆ 7.00 ಗಂಟೆಗೆ ಕೆ.,ಎ. ಹಂಸರವರ ದಾರಿ ತಡೆದು ಹೀನಾಯವಾಗಿ ಬೈದಿದ್ದಲ್ಲದೆ ಪುನ: ಸುಮಾರು 7.30 ಗಂಟೆಗೆ ತನ್ನ ಮಗ ನಾಸಿರ್ ನೊಂದಿಗೆ ಕೆ.ಎ. ಹಂಸರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿ ಮನೆಯ ಹೊರಗೆ ನಿಲ್ಲಿಸಿದ್ದ ಸ್ಕೂಟಿಯನ್ನು ಎಳೆದು ಬೀಳಿಸಿ ಜಖಂ ಗೊಳಿಸಿ ರೂ 5000-00 ನಷ್ಟ ಪಡಿಸಿರುವುದಾಗಿ ಕೆ.ಎ. ಹಂಸರವರು  ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  

ಆಸ್ಪತ್ರೆಯಲ್ಲಿ ಅಪರಿಚಿರ ವ್ಯಕ್ತಿಯ ಸಾವು:

     ಮಡಿಕೇರಿ ಜಿಲ್ಲಾ ಆಸ್ಪತ್ತೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ಚಿಕಿತ್ಸೆಯ ಸಂದರ್ಭದಲ್ಲಿ ಮೃತಪಟ್ಟಿರುವ ಪ್ರಕರಣ ಮಡಿಕೇರಿ ನಗರ ಠಾಣೆಯಲ್ಲಿ ವರದಿಯಾಗಿದೆ. ಅಂದಾಜು 50 ವರ್ಷ ಪ್ರಾಯದ ರಾಮು ಎಂಬ ವ್ಯಕ್ತಿಯನ್ನು ದಿನಾಂಕ 16-7-2014 ರಂದು 108 ಆಂಬುಲೆನ್ಸ್‌ನವರು ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಪಡಿಸಿದ್ದು, ಸದರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗಿದೆ ದಿನಾಂಕ 28-9-2014 ರಂದು ಮೃತಪಟ್ಟಿದ್ದು, ಮಡಿಕೇರಿ ನಗರ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.