Sunday, November 30, 2014

ವಿನಾಕಾರಣ ವ್ಯಕ್ತಿಯ ಮೇಲೆ ಹಲ್ಲೆ:
ದಿನಾಂಕ 23-11-2014 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಕೆ.ಆರ್‌.ಸಿ ವೃತ್ತದಲ್ಲಿ ಆಟೋ ಚಾಲಕರು ಹಾಗು ಮಾಲಿಕರು ಆಯೋಜಿಸಿರುವ ರಸಮಂಜರಿ ಕಾರ್ಯಕ್ರಮದಲ್ಲಿ ಬೆಳ್ಳರಳ್ಳಿ ಗ್ರಾಮದ ನಿವಾಸಿಯಾದ ವಿನೋದ್‌ಕುಮಾರ್‌ ಎಂಬ ವ್ಯಕ್ತಿ ವೇದಿಕೆ ಮೇಲೆ ನುಗ್ಗಲು ಯತ್ನಿಸಿದ್ದು ಅಲ್ಲೇ ನಿಂತಿದ್ದ ದುಂಡಳ್ಳಿ ಗ್ರಾಮದ ನಿವಾಸಿ ಹೆಚ್.ಡಿ. ಲೋಕೇಶ್‌ ಎಂಬವರು ತಡೆದು ಏಕೆ ನುಗ್ಗುತ್ತಿದ್ದಿಯಾ ಎಂದು ಕೇಳಿದ್ದು, ಇದೇ ಕಾರಣದಿಂದ ವಿನೋದ್‌ಕುಮಾರನ್ನು ಹೆಚ್‌.ಡಿ. ಲೋಕೇಶರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ನೋವನ್ನುಂಟುಮಾಡಿದ್ದು, ಸದರಿ ಲೋಕೇಶ ಹಾಸನದ ಅರಕಲಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ದಿನಾಂಕ 30-11-2014 ರಂದು ಶನಿವಾರಸಂತೆ ಠಾಣೆಗೆ ದೂರನ್ನು ನೀಡಿದ್ದು ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯದ ಅಮಲಿನಲ್ಲಿ ಸೀಮೆಣ್ಣೆ ಸುರಿದು ಬೆಂಕಿಹಚ್ಚಿಕೊಂಡು 
ಮಹಿಳೆ ಆತ್ಮಹತ್ಯೆ:

ಮಹಿಳೆಯೋರ್ವಳು ಮದ್ಯದ ಅಮಲಿನಲ್ಲಿ ಗಂಡನೊಂದಿಗೆ ಜಗಳ ಮಾಡಿ ಮೈಮೇಲೆ ಸೀಮೆಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಠಾಣಾ ಸರಹದ್ದಿನ ಬಾಡಗ ಗ್ರಾಮದಲ್ಲಿ ನಡೆದಿದೆ. ಬಾಡಗ ಗ್ರಾಮದ ನಿವಾಸಿ ಮಣಿ ಎಂಬವರ ಪತ್ನಿ ಶ್ರೀಮತಿ ಗೀತಾ (22)ಎಂಬ ಮಹಿಳೆ ದಿನಾಂಕ 25-11-2014 ರಂದು ಮನೆಯ ವಿಚಾರದಲ್ಲಿ ತನ್ನ ಗಂಡನೊಂದಿಗೆ ಜಗಳ ಮಾಡಿ ಮದ್ಯದ ಮಲಿನಲ್ಲಿ ಸೀಮೆಣ್ಣೆಯನ್ನು ತನ್ನ ಮೈಗೆ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸದರಿಯಾಕೆಯನ್ನು ಚಿಕಿತ್ಸೆಗೆ ಮೈಸೂರಿನ ಕೆ.ಆರ್‌. ಆಸ್ಪತ್ತೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 29-11-2014 ರಂದು ಆಕೆ ಮೃತಪಟ್ಟಿದ್ದು, ಕುಟ್ಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.Saturday, November 29, 2014

ಪತಿಯಿಂದ ಪತ್ನಿಯ ಕೊಲೆ:
    ಪತಿಯೋರ್ವ ತನ್ನ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮಕ್ಕಂದೂರು ಗ್ರಾಮದ ಉದಯಗಿರಿಯಲ್ಲಿ ನಡೆದಿದೆ. ಮಡಿಕೇರಿ ಗ್ರಾಮದ ಮಕ್ಕಂದೂರು ಗ್ರಾಮದ ಬಿ.ಎ. ಹರೀಶ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಸಂತೋಷ ಎಂಬ ವ್ಯಕ್ತಿ ತನ್ನ 2ನೇ ಪತ್ನಿ ಗೀತಾರವರನ್ನು ದಿನಾಂಕ 28-11-2014 ರಂದು ರಾತ್ರಿ ಉದಯಗಿರಿ ಪಕ್ಕದ ಪುಟ್ಟಿಚಂಡ ಪೂವಯ್ಯ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಅಣ್ಣು ಎಂಬವರ ಮನೆಗೆ ಕರೆದುಕೊಂಡು ಹೋಗಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅರಣ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿ,ಹಲ್ಲೆ, ಪ್ರಕರಣ ದಾಖಲು: 
    ಶ್ರೀ ಶಿವಶಂಕರ್ ಐ.ಎಪ್.ಎಸ್ ರವರು ಕಳೆದ 3 ತಿಂಗಳಿಂದ ಕೊಡಗು ಜಿಲ್ಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ 28-11-2014 ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಬಗ್ಗೆ ರಾಜ್ಯ ಮಟ್ಟದ ಸಮಿತಿ ಸದಸ್ಯರೊಂದಿಗೆ ಚರ್ಚಾ ಸಭೆಗೆ ಹಾಜರಾಗಿದ್ದು, ಸಭೆ ನಡೆಯುತ್ತಿದ್ದ ವೇಳೆ ಅಂದಾಜು 16.00 ಗಂಟೆಗೆ ಸದರಿ ಶಿವಶಂಕರ್‌ ಮತ್ತು ಎ.ಸಿ ಯವರು ಸದರಿ ಕಸ್ತೂರಿ ರಂಗನ್ ವರದಿಯ ವಿಷಯವಾಗಿ ಪರಪ್ಸರ ಚರ್ಚೆಯಲ್ಲಿ ನಿರತರಾಗಿದ್ದ ವೇಳೆ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಸಭೆಯಲ್ಲಿ ಹಾಜರಿದ್ದ ನಂದಾ ಸುಬ್ಬಯ್ಯ, ರಾಜಾರಾವ್‌, ಸುಭಾಷ್‌ ಸೋಮಯ್ಯ, ಎಸ್‌.ಜಿ. ಮೇದಪ್ಪ, ಹಾಗು ಮಧು ದೇವಯ್ಯ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಸಭೆಯಿಂದ ಹೊರಹೋಗಲು ಹೇಳಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:
     ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಕುಶಾಲನಗರ ಠಾಣಾ ಸರಹದ್ದಿನ ರಂಗಸಮುದ್ರದ ಕಬ್ಬಿನ ಗದ್ದೆಯಲ್ಲಿ ವಾಸವಾಗಿದ್ದ ಸುನಿಲ್‌ಕುಮಾರ್‌ (40) ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 25-11-2014 ರಂದು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ದಿನಾಂಕ 28-11-2014 ರಂದು ಮೃತಪಟ್ಟಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Friday, November 28, 2014

ನೀರಿಗೆ ಬಿದ್ದು ವ್ಯಕ್ತಿಯ ಸಾವು:
     ವ್ಯಕ್ತಿಯೋರ್ವ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಡಿಕೇರಿ ತಾಲೋಕು ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ಮೂಲಕ ವ್ಯಕ್ತಿ ದೇವದಾಸ್‌ ಎಂಬವರು ಮಡಿಕೇರಿ ತಾಲೋಕಿನ ಕಟ್ಟೆಮಾಡು ಗ್ರಾಮದಲ್ಲಿ ವಾಸವಾಗಿ ಇಟ್ಟಿಗೆ ಕೆಲಸ ಮಾಡುತ್ತಿದ್ದು ಈ ದಿನ ಬೆಳಗ್ಗೆ 8-00 ಗಂಟೆಗೆ ನೀರು ತರಲು ಹತ್ತಿರದ ಹೊಳೆಗೆ ಹೋದ ಸಂದರ್ಭದಲ್ಲಿ ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

ಮಹಿಳೆ ಕತ್ತಿನಿಂದ ಚಿನ್ನದ ಸರ ದೋಚಿ ಪರಾರಿ:

     ಬಸ್ಸನ್ನು ಹತ್ತುವ ಸಂದರ್ಭದಲ್ಲಿ ಕಳ್ಳನೊಬ್ಬ ಮಹಿಳೆಯ ಕತ್ತಿನಿಂದ ಚಿನ್ನದ ಸರವನ್ನು ದೋಚಿ ಪರಾರಿಯಾದ ಘಟನೆ ಕುಶಾಲನಗರ ಠಾಣಾ ಸರಹದ್ದಿನ ಕೂಡಿಗೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 27-11-2014 ರಂದು ಸೋಮವಾರಪೇಟೆ, ಮಹದೇಶ್ವರ ಬ್ಲಾಕ್‌ ನಿವಾಸಿ ಎಸ್‌.ವಿ. ಪ್ರೇಮ ಎಂಬವರು ಸೋಮವಾರಪೇಟೆ ಕಡೆಗೆ ಹೋಗಲು ಖಾಸಗಿ ಬಸ್ಸನ್ನು ಹತ್ತುವ ವೇಳೆ ಯಾರೋ ಕಳ್ಳ ಸದರಿ ಮಹಿಳೆಯ ಕುತ್ತಿಗೆಯಿಂದ 28 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದು, ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, November 27, 2014

ಸಾಲದ ಹಣ ಮರುಪಾವತಿಸದೇ ವಂಚನೆ, ಪ್ರಕರಣ ದಾಖಲು:
     ವಿರಾಜಪೇಟೆ ತಾಲೋಕು, ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಕೆ.ಪಿ.ಆಶಿಕ್ ಎಂಬವರಿಂದ , ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ನಿವಾಸಿ  ಬಿ.ಎ.ಅಬ್ದುಲ್ಲಾ ರವರು 2013 ನೇ ಸಾಲಿನ ಜುಲೈ ತಿಂಗಳಲ್ಲಿ 2,35,000/- ರೂ. ಗಳನ್ನು ಸಾಲವಾಗಿ ಪಡೆದುಕೊಂಡಿದ್ದು ದಿನಾಂಕ 16/09/2013 ರಂದು ಪಡೆದುಕೊಂಡಿದ್ದ ಸಾಲದ ಹಣವನ್ನು ಮರುಪಾವತಿ ಮಾಡುವುದಾಗಿ ಒಪ್ಪಂದ ಪತ್ರ ಮಾಡಿಕೊಟ್ಟಿದ್ದು ಸದರಿ ಬಿ.ಎ.ಅಬ್ದುಲ್ಲಾ ಸಾಲದ ಹಣವನ್ನು ವಾಪಸ್ಸು ಕೊಡದೇ ಮೋಸ ಮಾಡಿರುವುದಾಗಿ ಆರೋಪಿಸಿ ಕೆ.ಪಿ.ಆಶಿಕ್ ಮಾನ್ಯ ವಿರಾಜಪೇಟೆ ಸಿವಿಲ್ ಜಡ್ಜ್(ಕಿ.ವಿ) ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿದ್ದನ್ನು ನ್ಯಾಯಾಲಯದ ನಿರ್ದೇಶನದಂತೆ ಸಿದ್ದಾಪುರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. 
ಹಲ್ಲೆ, ಪ್ರಕರಣ ದಾಖಲು:
        ದಿನಾಂಕ  25-11-2014 ರಂದು ರಾತ್ರಿ 20.00 ಗಂಟೆಗೆ ಸೋಮವಾರಪೇಟೆ ತಾಲೋಕು, ಯಡವನಾಡು ಗ್ರಾಮದ ನಿವಾಸಿ ಸಿ.ಡಿ. ಶಿವರಾಜುರವರು  ತನ್ನ ಮನೆಯಲ್ಲಿರುವಾಗ್ಗೆ ಅದೇ ಗ್ರಾಮದ ನಿವಾಸಿ ಹೂವಯ್ಯ @ ಕೀರ್ತಿ  ಎಂಬ ವ್ಯಕ್ತಿ  ಅಲ್ಲಿಗೆ ಬಂದು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಶಿವರಾಜುರವರ ಮೇಲೆ ಹಲ್ಲೆ ನಡೆಸಿದ್ದು, ತಡೆಯಲು ಬಂದ ಪತ್ನಿ ನಾಗರತ್ನಮ್ಮ ರವರಿಗೂ ದೊಣ್ಣೆಯಿಂದ ಹೊಡೆದು ನೋವುಪಡಿಸಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.   

Wednesday, November 26, 2014

ಅಪ್ರಾಪ್ತ ಬಾಲಕ ಕಾಣೆ, ಪ್ರಕರಣ ದಾಖಲು:
     ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಮನೆಯಿಂದ ಕಾಣೆಯಾದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ಹೊಸೂರು ಬೆಟ್ಟಗೇರಿ ಗ್ರಾಮದ ನಿವಾಸಿ ಕೊಂಗಂಡ ಬೆಳ್ಳಿಯಪ್ಪನವರ ಲೈನು ಮನೆಯಲ್ಲಿ ವಾಸವಾಗಿರುವ ವೈ.ಎಸ್‌. ಜಿಮ್ಮಿ ಎಂಬುವವರ ಹಿರಿಯ ಮಗ 12 ವರ್ಷ ಪ್ರಾಯದ ಮುತ್ತನು ಬೆಟ್ಟಗೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು, ದಿನಾಂಕ 15-11-2014 ರಂದು ಆತನನ್ನು ಮನೆಯಲ್ಲಿ ಬಿಟ್ಟು ಜಿಮ್ಮಿ ರವರು ಕೆಲಸಕ್ಕೆ ಹೋಗಿದ್ದು, ಸಂಜೆ ಮನೆಗೆ ಮರಳಿ ಬಂದಾಗ ಮನೆಯಿಂದ ಸದರಿ ಬಾಲಕ ಕಾಣೆಯಾಗಿದ್ದು ಇಲ್ಲಿಯ ವರೆಗೆ ಹುಡುಕಿ ಪತ್ತೆಯಾಗದೇ ಇದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಗುವಿನ ಮೇಲೆ ಬಾಲಕನಿಂದ ಅತ್ಯಾಚಾರ:

     4 ವರ್ಷ ಪ್ರಾಯದ ಮಗುವಿನ ಮೇಲೆ 14 ವರ್ಷದ ಬಾಲಕನೋರ್ವ ಅತ್ಯಾಚಾರ ವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಡಿಕೇರಿ ನಿವಾಸಿ ಶ್ರೀಮತಿ ಸರಳ ಎಂಬವರು ತನ್ನ 4 ವರ್ಷದ ಮಗಳಾದ ಶಿವಾನಿಯನ್ನು ತನ್ನ ತಾಯಿಯ ಮನೆಯಲ್ಲಿ ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದು, ಮಡಿಕೇರಿ ನಗರದ ಗೌಳಿ ಬೀದಿಯಲ್ಲಿ ವಾಸವಾಗಿರುವ ಕುಮಾರ್‌ ಎಂಬವರ ಮಗ ಶರಣ್‌ (14) ಎಂಬವನು ದಿನಾಂಕ 6-9-2014 ರಂದು ಸದರಿ ಶಿವಾನಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ವೆಸಗಿದ್ದು, ಈ ಬಗ್ಗೆ ಶಿವಾನಿಗೆ ಹುಷಾರು ತಪ್ಪಿದ ಕಾರಣ ವೈದ್ಯರು ತಪಾಸಣೆ ಮಾಡಿದ ಸಂದರ್ಭದಲ್ಲಿ  ಅತ್ಯಾಚಾರ ವಾಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಣದ ವಿಚಾರದಲ್ಲಿ ವ್ಯಕ್ತಿಯ ದಾರಿ ತಡೆದು ಹಲ್ಲೆ:

    ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿ ವ್ಯಕ್ತಿಗಳಿಬ್ಬರು ಹಲ್ಲೆ ನಡೆಸಿದ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಕೋಟೆಯೂರು ಗ್ರಾಮದಲ್ಲಿ ನಡೆದಿದೆ. ಕೋಟೆಯೂರು ಗ್ರಾಮದ ನಿವಾಸಿ ಕೆ.ಜೆ. ಉಮೇಶ್‌ ಎಂಬವರು ದಿನಾಂಕ 24-11-2014 ರಂದು ಕೋಟೆಯೂರು ಗ್ರಾಮದಲ್ಲಿ ತಮ್ಮ ಮನೆಗೆ ಹೋಗುತ್ತಿದ್ದಾಗ ಅದೇ ಗ್ರಾಮದ ಪ್ರಕಾಶ್‌ ಹಾಗು ಅವಿನಾಶ್‌ ಎಂಬವರು ದಾರಿ ತಡೆದು ಹಣದ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯ ವಾರ್ಡ್‌ನಲ್ಲಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ:

    ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ರಾಜು ಎಂಬವರ ಮಗಳಾದ 15 ವರ್ಷ ಪ್ರಾಯದ ಕಾವ್ಯಳು ಚಿಕಿತ್ಸೆಯ ಸಂಬಂಧ ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ದಿನಾಂಕ 23-11-2014 ರಂದು ತಾನು ದಾಖಲಾಗಿರುವ ಸರ್ಜಿಕಲ್‌ ವಾಡ್‌ನಲ್ಲಿ ಇರುವಾಗ್ಗೆ ರಾತ್ರಿ 1-00 ಗಂಟೆಗೆ ಯಾರೋ ಅಪರಿಚಿರ ವ್ಯಕ್ತಿ ಬಂದು ಆಕೆಯ ಕೈಯಿಡಿದು ಹೊರಗೆ ಎಳೆದುಕೊಂಡು ಹೋಗಿದ್ದು, ಆ ಸಂದರ್ಭದಲ್ಲಿ ಆಕೆ ಕಿರುಚಾಡಿದಾಗ ಸದರಿ ವ್ಯಕ್ತಿ ಅಲ್ಲಿಂದ ಪರಾರಿಯಾಗಿತ್ತಾನೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, November 25, 2014

ಜೀಪು ಅವಘಡ, ಮಹಿಳೆ ಸಾವು:

     ದಿನಾಂಕ 25-11-2014 ರಂದು ಬೆಳಿಗ್ಗೆ ಸಿದ್ದಾಪುರನಗರದ ಅಂಬೇಡ್ಕರ್‌ ನಗರದ ನಿವಾಸಿ ಶ್ರೀಮತಿ ಹೆಚ್‌.ಎಸ್‌. ಕುಮಾರಿ ಎಂದಿನಂತೆ ಕೆಲಸಗಾರರಾದ ಲಿಲ್ಲಿ ಹಾಗು ಇತರರೊಂದಿಗೆ ಕೆಲಸದ ನಿಮಿತ ಕೆ.ಎ.15ಎಂ.765 ರ ಜೀಪಿನಲ್ಲಿ ಸಿದ್ದಾಪುರದಿಂದ ಅಮ್ಮತ್ತಿಗೆ ಹೋಗುತ್ತಿರುವಾಗ ಪುಲಿಯೇರಿ ಗ್ರಾಮದ ಆನಂದ ಪುರ ಟಾಟಾ ಕಾಫಿ ತೋಟದ ತಿರುವು ರಸ್ತೆಯ ಹತ್ತಿರ ತಲುಪುವಾಗ್ಗೆ ಜೀಪಿನ ಚಾಲಕ ರಿಜೇಶ್ ಎಂಬವರು ಜೀಪನ್ನು ಅತಿವೇಗ ಹಾಗೂ ಅಜಾಗೂರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಜೀಪಿನ ಹಿಂಭಾಗದ ಡೋರು ತೆಗೆದುಕೊಂಡು ಡೋರಿನ ಪಕ್ಕದಲ್ಲಿ ಕುಳಿತ್ತಿದ್ದ ಲಿಲ್ಲಿರವರು ಜೀಪಿನಿಂದ ಕೆಳಗೆ ಬಿದ್ದು, ತಲೆಯ ಹಿಂಭಾಗಕ್ಕೆ ಗಾಯವಾಗಿದ್ದು, ತಕ್ಷಣ ಅದೇ ಜೀಪಿನಲ್ಲಿ ಚಿಕಿತ್ಸೆಯ ಬಗ್ಗೆ ಅಮ್ಮತ್ತಿ ಆರ್.ಐ.ಹೆಚ್ ಪಿ ಆಸ್ಪತ್ರೆಗೆ ಲಿಲ್ಲಿರವರನ್ನು ಕರೆದುಕೊಂಡು ಚಿಕಿತ್ಸೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಮಯ ಲಿಲ್ಲಿಯವರು ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.  

ಅಕ್ರಮ ವಿದ್ಯುತ್‌ ಸಂಪರ್ಕ ಅಳವಡಿಕೆ:

     ಸೋಮವಾರಪೇಟೆ ಪೊಲೀಸ್‌ ಠಾಣಾ ಸರಹದ್ದಿನ ಸೂರ್ಲಬ್ಬಿ ಗ್ರಾಮದ ಮುದ್ದಂಡ ಬಿ ಪಟ್ಟು ಸೋಮಯ್ಯ ಎಂಬವರು ಭತ್ತದ ಗದ್ದೆಯ ಕಬ್ಬಿಣ ತಂತಿಯನ್ನು ಅಳವಡಿಸಿ ಅಕ್ರಮವಾಗಿ ನಿಗಮದ ಕಂಬದಿಂದ ನೇರವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡು ಗದ್ದೆಯ ಸುತ್ತ ಮರದ ಒಣ ಕೋಲುಗಳನ್ನು ನೆಟ್ಟು ಅದಕ್ಕೆ ಎರಡು ಕಬ್ಬಿಣದ ತಂತಿಯನ್ನು ಹಾಕಿ ನೇರ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿ ವಿದ್ಯುತ್‌ ಹರಿಯುವಂತೆ ಮಾಡಿ, ಕಬ್ಬಿಣದ ತಂತಿಯನ್ನು ಮನುಷ್ಯರು ಮತ್ತು ಪ್ರಾಣಿಗಳು ಮುಟ್ಟಿದರೆ ಪ್ರಾಣಕ್ಕೆ ತೊಂದರೆಯಾಗುವಂತೆ ಮಾಡಿದ ಸಂಬಂಧ ಮಾದಾಪುರ ಸೆಸ್ಕ್ ಶಾಖೆಯ ಶಾಖಾಧಿಕಾರಿಯಾದ ಪಿ.ಸಿ. ರಮೇಶ್‌ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

Monday, November 24, 2014

ಮದುವೆ ವಿಚಾರದಲ್ಲಿ ಮಹಿಳೆ ಮೇಲೆ ಹಲ್ಲೆ:

     ಮಗಳನ್ನು ಮದುವೆ ಮಾಡಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಹುಡುಗಿ ತಾಯಿ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ರುದ್ರಬೀಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 23/11/14 ರಂದು ಜೆ.ಕೆ. ಚಂದ್ರಿ ಎಂಬವರು ತನ್ನ ಗಂಡ ಜೆ.ಕೆ.ಚೆಲುವ, ಮಗ ಜೆ.ಕೆ.ಮನು ರವರು ತಾವು ವಾಸವಿರುವ ರುದ್ರಬೀಡು ಗ್ರಾಮದ ಮದ್ರೀರ ಅಪ್ಪಾಜಿರವರ ಲೈನು ಮನೆಯಲ್ಲಿರುವಾಗ್ಗೆ ಜೆ.ಕೆ. ನಾಣು ಎಂಬಾತನು ಅಲ್ಲಿಗೆ ಬಂದು ಜಿ.ಕೆ.ಚಂದ್ರಿಯ ಅಕ್ಕನ ಮಗಳು ಸೀತೆಯನ್ನು ತನಗೆ ಮದುವೆ ಮಾಡಿಸದೇ ತನ್ನ ತಮ್ಮನಿಗೆ ಮದುವೆ ಮಾಡಿಸಿದ ವಿಚಾರದಲ್ಲಿ ಜಗಳ ಮಾಡಿ ಮುಖದ 2 ಭಾಗಕ್ಕೂ ಬ್ಲೇಡಿನಿಂದ ಕುಯ್ದು ಗಾಯಗೊಳಿಸಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಖೂಟರ್‌ ಆಟೋ ರಿಕ್ಷಾ ಪರಸ್ಪರ ಡಿಕ್ಕಿ, ಇಬ್ಬರಿಗೆ ಗಾಯ:

      ಸ್ಕೂಟರ್‌ವೊಂದು ಆಟೋರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ಸ್ಕೂಟರ್‌ ಸವಾರ ಮತ್ತು ರಿಕ್ಷಾ ಚಾಲಕ ಗಾಯಗೊಂಡ ಬಗ್ಗೆ ಪ್ರಕರಣ ಮಡಿಕೇರಿ ಟ್ರಾಫಿಕ್‌ ಠಾಣೆಯಲ್ಲಿ ದಾಖಲಾಗಿದೆ. ದಿನಾಂಕ 23-11-2014 ರಂದು ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿ ಉತ್ತಮ್‌ ರಾಮ್‌ ಎಂಬವರು ತಮ್ಮ ಬಾಪ್ಸು ಸ್ಕೂಟರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡುಬಂದು ಓ.ಜಿ. ವಿನೋದ್‌ ಎಂಬವರು ಚಾಲನೆ ಮಾಡುತ್ತಿದ್ದ ಆಟೋ ರಿಕ್ಚಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಅವರಿಬ್ಬರಿಗೂ ಗಾಯಗಳಾಗಿದ್ದು, ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.


Sunday, November 23, 2014

ಮಹಿಳೆ ಮೇಲೆ ದೌರ್ಜನ್ಯ: 

ಸಿದ್ದಾಪುರದ ಅಂಬೇಡ್ಕರ್‌ನಗರದಲ್ಲಿ ವಾಸವಾಗಿರುವ ಶ್ರೀಮತಿ ಹೆಚ್‌.ಎಸ್‌ ಗಾಯತ್ರಿ ಎಂಬವರು ದಿನಾಂಕ 22/11/2014 ರಂದು ಆದೇ ಗ್ರಾಮದ ಮಂಗಳ ಎಂಬವರ ಮನೆಯ ಬಳಿ ಧರ್ಮಸ್ಥಳ ಸಂಘದ ಸಭೆಯಲ್ಲಿ ಭಾಗವಹಿಸಿದ್ದು  ಸದರಿ ಸಭೆಯಲ್ಲಿ   ಅದೇ ಗ್ರಾಮದ ನಿವಾಸಿ ಜಗದೀಶ್ವರಿ ಮತ್ತು ಗಾಯತ್ರಿ ನಡುವೆ ಸಂಘದ ಹಣದ ವಿಚಾರದಲ್ಲಿ ಜಗಳವಾಗಿದ್ದು, ಇದೇ ವಿಚಾರದಲ್ಲಿ ಸದರಿ ರಾಜೇಶ್ವರಿಯವರ ಗಂಡ ಮಣಿ ಎಂಬ ವ್ಯಕ್ತಿ ಸಂಜೆ 6.30 ಗಂಟೆಗೆ ಸಂಘದ ಸ್ಥಳಕ್ಕೆ ಬಂದು ಏಕೆ ನನ್ನ ಹೆಂಡತಿಯೊಂದಿಗೆ ಜಗಳ ಮಾಡಿದೆ ಎಂದು ಹೇಳಿ ಗಾಯತ್ರಿಯವರು ಧರಿಸಿದ ಬಟ್ಟೆಯನ್ನು ಹಿಡಿದು ಎಳೆದಾಡಿ ದೊಣ್ಣೆಯಿಂದ ತಲೆಯ ಭಾಗಕ್ಕೆ ಹೊಡೆದು ಗಾಯಪಡಿಸಿದ್ದು ಈ ವಿಚಾರವಾಗಿ ಸದರಿ ಗಾಯತ್ರಿಯವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಣದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಕೊಲೆ ಬೆದರಿಕೆ:

ದಿನಾಂಕ: 20-11-14ರಂದು ಸಮಯ ಸಂಜೆ 4-00ಗಂಟೆಗೆ ವಿರಾಜಪೇಟೆ ತಾಲೋಕು ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ಸಿ.ಕೆ. ಬೋಪಣ್ಣ ಎಂಬವರ ಮನೆಗೆ ಅವರ ಅಕ್ಕ ವಾರಿಜಾ ಹಾಗೂ ಟೆಡ್ ಪೂಣಚ್ಚರವರು ಬಂದು ಸದರಿ ಸಿ.ಕೆ. ಬೋಪಣ್ಣರವರನ್ನು ಕುರಿತು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಅಮ್ಮನ ಹಣವನ್ನು ಲಪಟಾಯಿಸಲು ನಾಟಕವಾಡುತ್ತೀಯಾ ಎಂದು ಹೇಳಿ ಕೈಯಿಂದ  ಅವರ  ಎದೆಯ ಭಾಗಕ್ಕೆ ಹೊಡೆದು ನೋವನ್ನುಂಟು ಮಾಡಿದ್ದೂ ಅಲ್ಲದೆ  ಕೊಲೆಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

ವಿದ್ಯುತ್‌ ಸ್ಪರ್ಷದಿಂದ ಕಾಡಾಣೆ ಸಾವು:

ಪೊನ್ನಂಪೇಟೆ ಠಾಣಾ ಸರಹದ್ದಿಗೆ ಸೇರಿದ ನೊಕ್ಯ ಗ್ರಾಮದ ಚೌಡಿಕಟ್ಟೆಯ ನಿವಾಸಿ ಅರುಣ್ ಕುಮಾರ್ ಎಂಬವರಿಗೆ ಸೇರಿದ ಭತ್ತ ಕೃಷಿ ಮಾಡದ ಗದ್ದೆಯಲ್ಲಿ ಹೆಣ್ಣು ಕಾಡಾನೆಯೊಂದು ಮೃತಪಟ್ಟಿರುವುದು ಕಂಡುಬಂದಿದ್ದು, ಸದರಿ ಅರುಣ್ ಕುಮಾರ್‌ರವರು ತಮ್ಮ ಕೃಷಿ ಮಾಡಿದ ಭತ್ತದ ಗದ್ದೆಗೆ ಅಳವಡಿಸಿದ ಸೋಲಾರ್‌ ವಿದ್ಯುತ್‌ಗೆ ಸ್ಪರ್ಷಗೊಂಡು ಸದರಿ ಕಾಡಾನೆಯು ಸಾವನ್ನಪ್ಪಿರಬಹುದೆಂದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ತಿತಿಮತಿ ವಲಯದ ಅರಣ್ಯಾಧಿಕಾರಿ ಕೆ.ಪಿ. ಗೋಪಾಲ್‌ರವರು  ಪೊನ್ನಂಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Saturday, November 22, 2014

ಹಣದ ವಿಚಾರದಲ್ಲಿ ಜಗಳ, ವ್ಯಕ್ತಿಯ ಮೇಲೆ ಹಲ್ಲೆ:

      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ನಿವಾಸಿ ಬಿ.ಎಲ್‌. ಜನಾರ್ಧನ ಎಂಬವರು ದಿನಾಂಕ 20-11-2014 ರಂದು ಮೂರ್ನಾಡು ನಗರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಿರಣ ಎಂಬುವವರು ಸ್ನೇಹಿತನ ಆಟೋ ರಿಕ್ಷಾದಲ್ಲಿ ಬಂದು ಬಿ.ಎಲ್‌. ಜನಾರ್ಧನ ರವರಿಗೆ ಗಾರೆ ಕೆಲಸ ಮಾಡುವ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

ಜಾತಿ ನಿಂದನೆ, ಪ್ರಕರಣ ದಾಖಲು:

       ಮಡಿಕೇರಿ ತಾಲೋಕು ಎಂ.ಬಾಡಗ ಗ್ರಾಮದ ನಿವಾಸಿ ಹೆಚ್‌.ಎ. ಕಿರಣ ಪರಿಶಿಷ್ಥ ಜಾತಿಗೆ ಸೇರಿದವರಾಗಿದ್ದು ದಿನಾಂಕ 20-11-2014 ರಂದು ತರಕಾರಿಯನ್ನು ಮೂರ್ನಾಡುನಗರಕ್ಕೆ ಹೋಗಿದ್ದಾಗ ಜನಾರ್ಧನ ಎಂಬ ವ್ಯಕ್ತಿ ಕಿರಣರವರ ದಾರಿ ತಡೆದು ಕೆಲಸದ ವಿಚಾರದಲ್ಲಿ ಜಗಳ ಮಾಡಿ ಜಾತಿ ನಿಂದನೆ ಮಾಡಿದ್ದು ಅಲ್ಲದೆ ಕೈಯಿಂದ ಹಲ್ಲೆ ನಡೆಸಿದ್ದು ಈ ಸಂಬಂಧ ಹೆಚ್‌.ಎಲ್‌. ಕಿರಣ ರವರ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Friday, November 21, 2014

ಕಾಯಿಲೆಯಿಂದ ಬೇಸತ್ತ ವ್ಯಕ್ತಿ ನೇಣಿಗೆ ಶರಣು:

       ಟಿ.ಬಿ. ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಹತ್ತಿರದ ಕೊಟ್ಟೋಳಿ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಕೊಟ್ಟೋಳಿ ಗ್ರಾಮದ ನಿವಾಸಿ ರಾಮನಾಯಕ್‌ ಎಂಬವರ ಮಗ 30 ವರ್ಷ ಪ್ರಾಯದ ಪಿ.ಆರ್‌. ಸಂತೋಷ್‌ ಎಂಬ ವ್ಯಕ್ತಿ ಕೆಲವು ವರ್ಷಗಳಿಂದ ಟಿ.ಬಿ. ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಪ್ರತಿ ದಿನ ಮದ್ಯಪಾನ ಮಾಡುವುದು ಮಾಡುತ್ತಿದ್ದು, ದಿನಾಂಕ 20-11-2014 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

ಮರದಿಂದ ಜಾರಿ ಬಿದ್ದು ವ್ಯಕ್ತಿಯ ಸಾವು:

      ಮರದ ಕೊಂಬೆ ಕಡಿಯಲು ಮರವೇರಿದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನಪ್ಪಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಕರಡಿಗೋಡು ಗ್ರಾಮದ ಹೊಳೆಕೆರೆ ಪೈಸಾರಿಯಲ್ಲಿ ವಾಸ ಮಾಡಿಕೊಂಡಿದ್ದ ಕೂಲಿ ಕಾರ್ಮಿಕ ಪೊನ್ನಪ್ಪ (32) ಎಂಬ ವ್ಯಕ್ತಿ ದಿನಾಂಕ 20-11-2014 ರಂದು ಕರಡಿಗೋಡು ಗ್ರಾಮದ ಕಾಫಿತೋಟವೊಂದಕ್ಕೆ ಹೋಗಿ ಮರವೇರಿ ಕೊಂಬೆಗಳನ್ನು ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಗಂಭೀರ ಗಾಯಗೊಂಡು ಸಾವನಪ್ಪಿದ್ದು ಸಿದ್ದಾಪುರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೋಟಾರ್‌ ಸೈಕಲ್‌ಗೆ ಬಸ್‌ ಡಿಕ್ಕಿ ಇಬ್ಬರಿಗೆ ಗಾಯ:

     ಸೋಮವಾರಪೇಟೆ, ಕೂವರ್‌ಕೊಲ್ಲಿ ಯ ನಿವಾಸಿ ಶ್ರೀನಿವಾಸ ಎಂಬವರು ದಿನಾಂಕ ತಮ್ಮ ಮೋಟಾರ್‌ ಸೈಕಲ್‌ನಲ್ಲಿ ತಮ್ಮ ಪತ್ನಿ ಶ್ರೀಮತಿ ಸುನಿತಾ ಎಂಬವರೊಂದಿಗೆ ಸೋಮವಾರಪೇಟೆ ನಗರದಲ್ಲಿ ಹೋಗುತ್ತಿದ್ದಾಗ, ಖಾಸಗಿ ಬಸ್ಸವೊಂದನ್ನು ಅದರ ಚಾಲಕ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್‌ ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಶ್ರೀನಿವಾಸ ಹಾಗು ಅವರ ಪತ್ನಿ ಸುನಿತಾರವರು ಗಾಯಗೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಅನಾರೋಗ್ಯ ಹಿನ್ನಲೆ ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ: 

     ಬಿ.ಎಸ್‌. ಶೇಖರ (58) ಎಂಬವರು ತನ್ನ ಸಂಸಾರದೊಂದಿಗೆ ವಿರಾಜಪೇಟೆ ತಾಲೋಕು ಕರಡ ಗ್ರಾಮದ ಐತಿಚಂಡ ಪ್ರಕಾಶ್‌ ಎಂಬವರ ಲೈನ್‌ಮನೆಯಲ್ಲಿ ನೆಲೆಸಿದ್ದು, ಸುಮಾರು 5-6 ವರ್ಷಗಳಿಂದ ಅಸ್ತಮ ಕಾಯಿಲೆಯಿಂದ ಬಳಲುತ್ತಿದ್ದು,ಇದೇ ವಿಚಾರದಲ್ಲಿ ತಾನು ಬದುಕುವುದಿಲ್ಲವೆಂದು ಹೇಳುತ್ತಿದ್ದು, ಸದರಿ ಬಿ.ಎಸ್. ಶೇಖರ್ ರವರು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ: 20-11-14ರಂದು ಯಾವುದೋ ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸದರಿ ವ್ಯಕ್ತಿಯ ಪತ್ನಿ ಶ್ರೀಮತಿ ಗಿರೀಜಾರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.

ಕಾರಿಗೆ ಬೈಕ್‌ ಡಿಕ್ಕಿ, ಸವಾರ ಸಾವು:

     ಕಾರನ್ನು ಹಿಂದಿಕ್ಕುವ ಭರದದಲ್ಲಿದ್ದ ಬೈಕ್‌ ಸವಾರನೊಬ್ಬ ಜೀಪಿಗೆ ಡಿಕ್ಕಿಯಾಗಿ ಸಾವಿಗೀಡಾಗಿದ್ದು, ಹಿಂಬದಿ ಸವಾರ ಗಾಯಗೊಂಡ ಘಟನೆ ಮಡಿಕೇರಿ ತಾಲೋಕು ಹೊದ್ದೂರು ಗ್ರಾಮದಲ್ಲಿ ನಡೆದಿದೆ. ಕೊಳಗದಾಳು ಗ್ರಾಮದ ನಿವಾಸಿ ಪಿ.ಟಿ. ತಮ್ಮಯ್ಯನವರು ಈ ದಿನ ದಿನಾಂಕ 21/11/2014  ತಮ್ಮ ಬಾಪ್ತು ಜೀಪಿನಲ್ಲಿ ಮೂರ್ನಾಡು ಕಡೆಯಿಂದ ನಾಪೋಕ್ಲು ಕಡೆಗೆ ಹೋಗುತ್ತಿದ್ದಾಗ ಮೋಟಾರ್‌ ಸೈಕಲ್‌ ಸವಾರನೊಬ್ಬ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರನ್ನು ಹಿಂದಿಕ್ಕುವ ರಭಸದಲ್ಲಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಸವಾರ ಮಂಜುನಾಥ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡು, ಹಿಂಬದಿ ಸವಾರನೂ ಸಹ ಗಾಯಗೊಂಡಿದ್ದು, ಸದರಿಯವರು ಚಿಕಿತ್ಸೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಮಂಜುನಾಥ ಮೃತಪಟ್ಟಿರುತ್ತಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, November 20, 2014

ಕೌಟುಂಬಿಕ ಕಲಹ ವ್ಯಕ್ತಿಗೆ ಕಿರುಕುಳ, ವಂಚನೆ:

ಮಡಿಕೇರಿ ತಾಲೋಕು, ಮೇಘತ್ತಾಳು ಗ್ರಾಮದಲ್ಲಿ ಶ್ರೀಮತಿ ಚನ್ನಪಂಡ ಕೆ. ಕ್ಷಮಿ ಹಾಗು ಆಕೆಯ ಗಂಡ ಕುಟ್ಟಪ್ಪ ಹಾಗೂ ಬುದ್ದಿಮಾಂದ್ಯ ಮಗ ನಾಚಪ್ಪನೊಂದಿಗೆ ವಾಸವಿದ್ದು, ಅವರ ಕುಟುಂಬದರೇ ಚನ್ನಪಂಡ ಮಂದಣ್ಣ, ಚನ್ನಪಂಡ ನಾಣ್ಯಪ್ಪ, ಶ್ರೀಮತಿ ಪೂವಮ್ಮ, ಮತ್ತು ಶ್ರೀಮತಿ ಗಂಗಮ್ಮರವರು ಸೇರಿ ಕೆಲ ವರ್ಷಗಳಿಂದ ಕಿರುಕುಳ, ಚಿತ್ರಹಿಂಸೆ, ದೈಹಿಕ ದೌರ್ಜನ್ಯ ಕೊಲೆ ಬೆದರಿಕೆ ಹಾಕಿ ಮನೆಯಿಂದ ಹೊರಗೆ ಹೋಗುವಂತೆ ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದುದರಿಂದ ಬೇರೆ ಮನೆ ಮಾಡಿ ವಾಸವಾಗಿರುವುದಾಗಿದ್ದು, ಆದಾಗ್ಯೂ ಮತ್ತೆ ಮತ್ತೆ ಕಿರುಕುಳ ನೀಡಿ ಹೀನಾಮಾನವಾಗಿ ಬೈದು ನಾಣ್ಯಪ್ಪ ಕತ್ತಿಯಿಂದ ಹಲ್ಲೆ ಮಾಡಿ, ಹಸುವನ್ನು ಕಡಿದು, ಹೋರಿಯನ್ನು ಚುಚ್ಚಿ ಸಾಯಿಸಿದ್ದು, ಕೆಲಸದವರಿಗೆಕೆಲಸ ಮಾಡದಂತೆ ತೊಂದರೆ ಮಾಡುತ್ತಿರುವುದಾಗಿ, ಮತ್ತು ಬುದ್ದಿಮಾಂದ್ಯ ಮಗ ನಾಚಪ್ಪನಿಗೆ ಮಂದಣ್ಣ ಬೈದು ಕೋಲಿನಿಂದ ಹೊಡೆದು ಹಾಕಿರುತ್ತಾರೆಂದುನೀಡಿದ ದೂರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  

ಅಕ್ರಮ ಸಾಗಾಟ ಹಿನ್ನೆಲೆ ವ್ಯಕ್ತಿಯ ಮೇಲೆಗುಂಡು ಹಾರಿಸಿ ಕೊಲೆಗೆ ಯತ್ನ:

 ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವಿಚಾರದಲ್ಲಿ ನಾಲ್ಕು ಜನರುಸೇರಿ ವ್ಯಕ್ತಿಯ ಮನೆಗೆ ಅಕ್ರಮ ಪ್ರವೇಶಮಾಡಿ ಜೀವ ಬೆದರಿಕೆ ಹಾಕಿ ರಿವಾಲ್ವರ್‌ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 18-11-14ರಂದು ಹೆಗ್ಗಳ ಗ್ರಾಮದ ನಿವಾಸಿ ಎನ್‌. ರಾಜು ಎಂಬವರ ಮನೆಯ ಮುಂದೆ ಇರುವ ಹೊಳೆಯಲ್ಲಿ ಹೆಗ್ಗಳ ಗ್ರಾಮದ ನಿವಾಸಿಗಳಾದ ಅಚ್ಚಪಂಡ ಮಹೇಶ್ ಗಣಪತಿ, ಅವರ ಸಹೋದರ ಹರೀಶ್ ಮತ್ತು ಅವರ ಕೆಲಸಗಾರರು ಅಕ್ರಮವಾಗಿ ಮರಳು ತೆಗೆಯು ತ್ತಿದ್ದಾಗ ಇದನ್ನು ನೋಡಿದ ಎನ್‌. ರಾಜುರವರು ಪೊಲೀಸ್ ಠಾಣೆಗೆ ಪೋನ್ ಮೂಲಕ ತಿಳಿಸಿದ ವಿಚಾರದಲ್ಲಿ ಸದರಿ ನಾಲ್ಕು ಜನ ಸೇರಿ ಎನ್‌. ರಾಜುರವರ ಮನೆಗೆ ಏಕಾ ಏಕಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ, ಸಂಸಾರವನ್ನು ಕೊಲ್ಲುವುದಾಗಿ ಮಹೇಶ್ ರವರು ಅವರ ರಿವಾಲ್ವರ್ ತೋರಿಸಿ ಜೀವ ಬೆದರಿಕೆ ಒಡ್ಡಿ ಅವರ ರಿವಾಲ್ವರ್ ನಿಂದ ಮನೆಯೊಳಗೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುತ್ತಾರೆಂದುನೀಡಿದ ದೂರಿನ ಮೇರೆಗೆವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
ವಿದೇಶಿ ಮೂಲದ ವ್ಯಕ್ತಿಯ ಸಾವು:


ಯುನೈಟೆಡ್ ಆಫ್ ಕಿಂಗ್ ಡಮ್ ಆಫ್ ಗ್ರೇಟ್ ಬ್ರಿಟನ್ ನ ಪ್ರಜೆ Richard Ivan East Wood – aged 70 years, Hollins Close Street , Hampsthwaite, Harrogate Town, ಯವರು ದಿನಾಂಕ 15/11/2014 ರಂದು ಬಾರತಕ್ಕೆ ಪ್ರವಾಸಕ್ಕೆ ಬಂದು ಸಿದ್ದಾಪುರ ಠಾಣಾ ಸರಹದ್ದಿನ ಆರೆಂಜ್‌ಕೌಂಟಿ ವಸತಿ ಗೃಹದಲ್ಲಿ ತಂಗಿದ್ದು, ಸದರಿ ವ್ಯಕ್ತಿ ಈ ದಿನ ದಿನಾಂಕ 20-11-2014 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದು , ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, November 19, 2014

ಇಬ್ಬರ ನಡುವೆ ಜಗಳ, ಪರಸ್ಪರ ಕೊಲೆ ಬೆದರಿಕೆ:
 
     ಗಳಿಬ್ಬರು  ಜಗಳವಾಡಿ ಪರಸ್ಪರ  ಕೊಲೆ   ಬೆದರಿಕೆ ಹಾಕಿದ ಬಗ್ಗೆ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ  ಪ್ರತ್ಯೇಕ ಎರಡು ಪ್ರಕರಣಳಗಳನ್ನು ದಾಖಲಿಸಿದ್ದಾರೆ.     ಸೋಮವಾರಪೇಟೆ ತಾಲೋಕು ಊರುಗುತ್ತಿಗ್ರಾಮದ ನಿವಾಸಿಗಳಾದ ತೇಜಕುಮಾರ್  ಮತ್ತು ಶರತ್‌ಚಂದ್ರ ಎಂಬ ವ್ಯಕ್ತಿಗಳು   ಹಳೇ ದ್ವೇಷವನ್ನು ಇಟ್ಟುಕೊಂಡು ಜಗಳವಾಡಿ  ಪರಸ್ಪರ ಕೊಲೆ ಮಾಡುವುದಾಘಿ  ಬೆದರಿಕೆ ಹಾಕಿದ್ದು, ಈ ಸಂಬಂಧ   ಸದರಿ ಇಬ್ಬರು ವ್ಯಕ್ತಿಗಳು  ನೀಡಿದ ದೂರಿನ ಮೇರೆಗೆ ಶನಿವಾಸಂತೆ ಪೊಲೀಸರು ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತಾರೆ. 
 
ಗೂಡ್ಸ್‌ವಾಹನ ಅವಘಡ:
 
     ‌ವಾಹನವೊಂದು  ರೋಡ್‌ ಪ್ರೊಟೆಕ್ಟರ್‌ಗೆ ಡಿಕ್ಕಿಯಾಗಿ ಜಖಂಗೊಂಡ ಘಟನೆ ಮಡಿಕೇರಿ ಸಮೀಪದ ಸಿಂಕೋನ ಬಳಿ ನಡೆದಿದೆ.  ದಿನಾಂಕ 18-11-2014 ರಂದು ರಾತ್ರಿ  ಮಂಗಳೂರು ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದ  ಮೀನು ತುಂಬಿದ ಗೂಡ್ಸ್‌ ವಾಹನವನ್ನು ಅದರ ಚಾಲಕ ಅಬ್ದುಲ್‌ ಅಜೀಜ್‌ ಎಂಬವರು ಚಾಲಿಸಿಕೊಂಡು ಬಂದು  ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಸಿಂಕೋನ ಎಂಬಲ್ಲಿ  ರೋಡ್‌ ಪ್ರೊಟೆಕ್ಟರ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿ ವಾಹನದ ಮುಂದಿನ ಭಾಗ ಪೂರ್ಣ ಜಖಂ ಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಮದುವೆ ವಿಚಾರದಲ್ಲಿ ವಂಚನೆ, ಪ್ರಕರಣ ದಾಖಲು:
 
ಮಾನಸಿಕ  ಖಾಯಿಲೆ ಇರುವ ವಿಚಾರವನ್ನು ಮುಚ್ಚಿಟ್ಟು  ದಂಪತಿಗಳು ತಮ್ಮ ಮಗಳನ್ನು  ಮದುವೆ ಮಾಡಿಸಿದ ಘಟನೆ ಬಗ್ಗೆ ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.  ವಿರಾಜಪೇಟೆ ತಾಲೋಕು ಶ್ರೀಮಂಗಲ ಗ್ರಾಮದ ನಿವಾಸಿ ಲೇಟ್‌ ಮಾಚಯ್ಯ ಎಂಬವರ ಪುತ್ರ ಎಂ.ಎಂ. ಬಿಷನ್‌ ಎಂಬ ವ್ಯಕ್ತಿಗೆ   ಬೆಂಗಳೂರಿನಲ್ಲಿ ನೆಲೆಸಿರುವ ಮೂಲತ: ಕೊಡಗಿನವರಾದ  ಪಿ.ಬಿ. ಕುಶಾಲಪ್ಪ ಮತ್ತು ಅವರ ಪತ್ನಿ ಶ್ರೀಮತಿ ಪಿ.ಕೆ. ಕಾವೇರಮ್ಮ ರವರು ತಮ್ಮ ಮಗಳು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ  ರಜನಿಯನ್ನು  ಖಾಯಿಲೆ ಇರುವ ವಿಚಾರವನ್ನು ಮುಚ್ಚಿಟ್ಟು ಮದುವೆ ಮಾಡಿಸಿ ವಂಚಿಸಿರುತ್ತಾರೆಂದು  ಆರೋಪಿಸಿ ಎಂ.ಎಂ. ಬಿಷಪ್‌ರವರು ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ  ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
 
 

Tuesday, November 18, 2014

ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯ ದುರ್ಮರಣ:

     ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನಪ್ಪಿದ ಘಟನೆ ವಿರಾಜಪೇಟೆ ತಾಲೋಕು ತಿತಿಮತಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17.11.2014 ರಂದು ತಿತಿಮತಿ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಮಣಿ ಎಂಬ ವ್ಯಕ್ತಿ ಮನೆಯ ಹತ್ತಿರದ ಅಂಗಡಿಯೊಂದಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಅದೇ ಗ್ರಾಮದ ಕೆರೆಯೊಂದರಲ್ಲಿ ಕಾಲು ಜಾರಿ ಬಿದ್ದು ದುರ್ಮರಣಕ್ಕೀಡಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ರಸ್ತೆಬದಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಗೆ ಬೈಕ್‌ಡಿಕ್ಕಿ:

     ಖಾಸಗಿ ಬಸ್ಸಿನ ನೌಕರನಿಗೆ ಬೈಕ್‌ ಡಿಕ್ಕಿಯಾಗಿ ಗಾಯಗೊಂಡ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 17-11-2014 ರಂದು ರಾತ್ರಿ 10-00 ಗಂಟೆಗೆ ಖಾಸಗಿ ಬಸ್ಸನ್ನು ಎಂ.ಪಿ. ಜಗಧೀಶ್‌ ಎಂಬ ವ್ಯಕ್ತಿ ತೊಳೆಯುತ್ತಿದ್ದಾಗ ಶ್ರೀನಿವಾಸ ಎಂಬ ವ್ಯಕ್ತಿ ತನ್ನ ಮೋಟಾರ್‌ ಸೈಕಲ್‌ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಜಗಧೀಶ್‌ ರವರು ಗಾಯಗೊಂಡಿರುತ್ತಾರೆ. ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಕಾರಿಗೆ ಆಟೋ ಡಿಕ್ಕಿ, ಕಾರು ಜಖಂ:

     ಸಿದ್ದಾಪುರಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದ ಅತ್ತಿಮಂಗಲ ಜಂಕ್ಷನ್‌ ಬಳಿ ಕೆ.ಬಿ. ವಿನುಕುಮಾರ್‌ ಎಂಬವರು ತಮ್ಮ ಬಾಪ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರುಗಡೆಯಿಂದ ಎಂ.ಪಿ. ಶಾಫಿ ಎಂಬ ವ್ಯಕ್ತಿ ತನ್ನ ಆಟೋ ರಿಕ್ಷಾ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿರುವುದಾಗಿ ಕೆ.ಬಿ. ವಿನುಕುಮಾರ್‌ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, November 17, 2014

ಬೈಕ್‌ ಖರೀದಿಸಲು ಹಣ ನೀಡದ ಹಿನ್ನೆಲೆ, ಯುವಕನ ಆತ್ಮಹತ್ಯೆ:

     ಯುವಕನೋರ್ವ ಬೈಕ್‌ ಖರೀದಿಸಿ ಕೊಡಲಿಲ್ಲ ಎಂಬ ಕಾರಣಕ್ಕೆ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮೈತಾಡಿ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಮೈತಾಡಿ ಗ್ರಾಮದ ನಿವಾಸಿ ಶ್ರೀಮತಿ ತೊತ್ತೇರ ರೀಟಾ ಎಂಬವರ ಮಗ 20 ವರ್ಷ ಪ್ರಾಯದ ವಿಶ್ವನಾಥ್‌ @ ನಿತಿನ್‌ ಎಂಬ ಯುವಕ ಮನೆಯವರು ಬೈಕ್‌ನ್ನು ಖರೀದಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಕಳೆನಾಶಕ ಜೌಷಧಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

ವಿನಾಕಾರಣ ಪತಿಯಿಂದ ಪತ್ನಿಯ ಮೇಲೆ ಹಲ್ಲೆ: 

      ಮಡಿಕೇರಿ ತಾಲೋಕು ಮುತ್ತಾರ್‌ಮುಡಿ ಗ್ರಾಮದ ನಿವಾಸಿ ಆರ್‌. ಚಂದ್ರಾವತಿ ಎಂಬವರು 16-11-2014 ರಂದು ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿರುವಾಗ ಆಕೆಯ ಗಂಡ ಗಂಡ ವಿನೋದ್ ರವರು ಮನೆಗೆ ಬಂದು ಪಿರ್ಯಾದಿಯವರ ಮೇಲೆ ಸಂಶಯಪಟ್ಟು ನೀನು ಎಲ್ಲಿಗೆ ಹೋಗಿದ್ದೆ ಎಂದು ಹೇಳಿ ಕಂಚಿನ ದೇವರ ದೀಪದಿಂದ ಮತ್ತು ಪ್ಲಾಸ್ಟಿಕ್ ಕುರ್ಚಿಯಿಂದ ಮತ್ತು ಮರದ ದೊಣ್ಣೆಯಿಂದ ಪತ್ನಿಯ ಬೆನ್ನಿನ ಭಾಗ, ಎಡಕೈಗೆ, ಎಡ ಮಂಡಿಯ ಭಾಗಕ್ಕೆ ಮತ್ತು ಕೆನ್ನೆಗೆ ಹೊಡೆದು ಗಾಯಪಡಿಸಿದಿದ್ದು, ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಪತಿ ವಿನೋದ್‌ರವರ ವಿರುದ್ದ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

ಹಳೆ ದ್ವೇಷ, ವ್ಯಕ್ತಿಯ ಮೇಲೆ ಹಲ್ಲೆ:

      ಹಳೇ ದ್ವೇಷದಿಂದ ವ್ಯಕ್ತಿಯನ್ನು ಅವಾಚ್ಯವಾಗಿ ನಿಂದಿಸಿ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುರ್ನಾಡು ನಗರದಲ್ಲಿ ನಡೆದಿದೆ. ದಿನಾಂಕ 16-11-2014 ರಂದು ಕಾಂತೂರು ಗ್ರಾಮದ ನಿವಾಸಿ ಹೆಚ್‌.ಜಿ. ಚೆಲುವ ಎಂಬ ವ್ಯಕ್ತಿಯ ಮೇಲೆ ಹರೀಶ ಎಂಬ ವ್ಯಕ್ತಿ ಹಳೇ ದ್ವೇಷದಿಂದ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಬಾಟಲಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

 

Saturday, November 15, 2014

ಅಕ್ರಮ ತಂಬಾಕು ಉತ್ಪನ್ನ ಮಾರಾಟ ; ಎರಡು ಪ್ರಕರಣ ದಾಖಲು 
      ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. 
  • ದಿನಾಂಕ 13/11/2014ರಂದು ಮಡಿಕೇರಿ ನಗರದ ಕೋಟೆ ಆವರಣದ ನ್ಯಾಯಾಲಯ ಕಟ್ಟಡ ಸಮುಚ್ಚಯದ ಹಿಂಭಾಗದಲ್ಲಿರುವ ಕ್ಯಾಂಟೀನಿನಲ್ಲಿ ಬಾಲಕೃಷ್ಣ ಎಂಬವರು ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ನಗರ ಠಾಣಾಧಿಕಾರಿ ಸುರೇಶ್‌ ಬೋಪಣ್ಣನವರು ಸುಮಾರು ರೂ. 3,500/- ಗಳಷ್ಟು ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
  • ದಿನಾಂಕ 13/11/2014ರಂದು ಮಡಿಕೇರಿ ನಗರದ ಕೋಟೆ ಆವರಣದ ಸಾರ್ವಜನಿಕ ಗ್ರಂಥಾಲಯದ ಬಳಿ ಇರುವ  ಕ್ಯಾಂಟೀನಿನಲ್ಲಿ ಸುಧೀರ್‌ ಎಂಬವರು ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ನಗರ ಠಾಣಾಧಿಕಾರಿ ಸುರೇಶ್‌ ಬೋಪಣ್ಣನವರು ಸುಮಾರು ರೂ. 1,315/- ಗಳಷ್ಟು ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರು ಡಿಕ್ಕಿ ; ಇಬ್ಬರಿಗೆ ಗಾಯ
           ಕಾರುಗಳೆರಡು ಪರಸ್ಪರ ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಸಿದ್ದಾಪುರ ಬಳಿಯ ವಾಲ್ನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 14-11-2014 ರಂದು ಕುಶಾಲನಗರದ ಮುಳ್ಳುಸೋಗೆ ನಿವಾಸಿ ರಘು ಎಂಬವರು ವ್ಯಾಪಾರ ಕೆಲಸ ಮಾಡಿಕೊಂಡು ಸಿದ್ದಾಪುರದಿಂದ ವಾಪಾಸ್ಸು ಅವರ ಮಾರುತಿ ಓಮಿನಿ ವ್ಯಾನು  ಸಂಖ್ಯೆ ಕೆಎ-51-ಪಿ-8146 ರಲ್ಲಿ  ಸ್ನೇಹಿತ ಮಧುರವರನ್ನು ಕೂರಿಸಿಕೊಂಡು ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ವಾಲ್ನೂರು ಬಳಿ  ಕುಶಾಲನಗರದ ಕಡೆಯಿಂದ ಸಾರ್ವಜನಿಕ ರಸ್ತೆಯಲ್ಲಿ ಎದುರಿಗೆ ಬಂದ ಕೇರಳದ ಕೋಯಿಕ್ಕೋಡ್‌ ನಿವಾಸಿ ಪಿ.ಎ.ರಿಯಾಜ್‌ ಎಂಬವರು ಅವರ ಕೆಎಲ್-10-ಎಎನ್-1004 ರ ಇನ್ನೋವಾ ಕಾರನ್ನು ಅತಿವೇಗ ಮತ್ತು ಅಜಾಗುರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಘುರವರು ಚಾಳಿಸುತ್ತಿದ್ದ ಮಾರುತಿ ಓಮಿನಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ರಘು ಹಾಗೂ ಮಧುರವರಿಗೆ ತೀವ್ರ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ನೇಣು ಬಿಗಿದುಕೊಂಡು ಯುವಕನ ಆತ್ಮಹತ್ಯೆ 
     ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ದೇವಣಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 13/11/2014ರ ಸಂಜೆ ದೇವಣಗೇರಿ ಗ್ರಾಮದ ಐಚಂಡ ಜೂಬಿ ಎಂಬವರ ಮಗ 32 ವರ್ಷ ಪ್ರಾಯದ ಗಿರೀಶ ಎಂಬಾತನು ಮನೆಯಲ್ಲಿ ವಿಪರೀತ ಮದ್ಯಪಾನ ಮಾಡಿ ಊಟ ಮಾಡದೆ ಕೊಠಡಿ ಸೇರಿಕೊಂಡಿದ್ದು ಬೆಳಿಗ್ಗೆ ತಾಯಿ ನೋಡಿದಾಗ ಮನೆಯ ಹೊರಗೆ ಕೊಟ್ಟಿಗೆಯ ಮಾಡಿಗೆ ಗಿರೀಶನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂದಿದ್ದು ವಿಪರೀತ ಮದ್ಯ ವ್ಯಸನಿಯಾಗಿದ್ದು ಜೀವನದಲ್ಲಿ ಜುಗುಪ್ಸೆಗೊಂಡು ಆಗಾಗ್ಗೆ ತಾನು ಬದುಕಿ ಪ್ರಯೋಜನವಿಲ್ಲವೆನ್ನುತ್ತಿದ್ದನೆನ್ನಲಾಗಿದ್ದು ಆತ್ಮಹತ್ಯೆಗೆ ಹೆಚ್ಚಿನ ಕಾರಣ ತಿಳಿದಿಲ್ಲವೆನ್ನಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Friday, November 14, 2014

ಮಹಿಳೆಯ ಮೇಲೆ ಹಲ್ಲೆ ; ಪ್ರಕರಣ 
      ಮಹಿಳೆಯೊಬ್ಬರ ಮೇಲೆ ಬೆತ್ತದಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಕುಶಾಲನಗರ ಬಳಿಯ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 13/11/2014ರಂದು ಗೊಂದಿಬಸವನಹಳ್ಳಿ ನಿವಾಸಿ ಪ್ರೇಮ ಎಂಬವರು ಮುಳ್ಳುಸೋಗೆ ಗ್ರಾಮದ ಅವರ ಮಗಳ ಮನೆಗೆ ಬಂದಿದ್ದು, ಮಗಳು ಮನೆಯಲ್ಲಿ ಇಲ್ಲದೆ ಇದ್ದ ಕಾರಣ ಹೊರಗೆ ಕುಳಿತಿರುವಾಗ ಮಗಳ ಅತ್ತೆ ತಾಯಮ್ಮ ಪ್ರೇಮಾರವರ ಮಗಳಿಗೆ ಬೈಯ್ಯುತ್ತಿದ್ದುದನ್ನು ಕೇಳಿ ಆಕ್ಷೇಪಿಸಿದಾಗ ಅಲ್ಲೇ ಇದ್ದ ತಾಯಮ್ಮ,ರವರ ಮಗ ಇಂದ್ರೇಶನು ಮನೆಯೊಳಗಿನಿಂದ ಇಂದು ಬೆತ್ತವನ್ನು ತಂದು ಪ್ರೇಮಾರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಲೇಜಿಗೆ ಹೋದ ಯುವತಿ ಕಾಣೆ 
        ಕಾಲೇಜಿಗೆಂದು ಹೋದ ಅಪ್ರಾಪ್ತ ಪ್ರಾಯದ ಯುವತಿಯೋರ್ವಳು ಕಾಣೆಯಾಗಿರುವ ಪ್ರಕರಣ ವಿರಾಜಪೇಟೆ ನರದಲ್ಲಿ ನಡೆದಿದೆ. ದಿನಾಂಕ 12-11-2014 ರಂದು  ವಿರಾಜಪೇಟೆ ನಗರದ ಬಂಗಾಳಿ ಬೀದಿಯ ನಿವಾಸಿ  ಕೆ.ಎಂ. ಯಮುನಾ ಎಂಬವರ ಮಗಳಾದ 16 ವರ್ಷ ಪ್ರಾಯದ ಜ್ಯೋತಿಕಾಳು ಗೋಣಿಕೊಪ್ಪ ಕಾವೇರಿ ಕಾಲೇಜಿಗೆ ಹೋಗುತ್ತೇನೆಂದು ಹೋದವಳು ಕಾಲೇಜಿಗೂ ಹೋಗದೇ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈ ಬಗ್ಗೆ ತಿಳಿದವರಲ್ಲಿ ವಿಚಾರ ಮಾಡಿದಾಗ ಮಗಳು ಜ್ಯೋತಿಕಾಳನ್ನು ನೆರೆ ಮನೆಯವನಾದ ಆದಿಲ್ ಎಂಬ 17 ವರ್ಷ ಪ್ರಾಯದ ಹುಡುಗ ಬಲತ್ಕಾರವಾಗಿ ಕರೆದುಕೊಂಡು ಹೋಗಿರುತ್ತಾರೆಂದು ಸಮೀಲ್‌ ಎಂಬವರು ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ 
        ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ಕದನೂರು ಗ್ರಾಮದಲ್ಲಿ ನಡೆದಿದೆ.ವಿರಾಜಪೇಟೆ ಶಿವಕೇರಿ ನಿವಾಸಿ ಸುಬ್ಬಯ್ಯ ಎಂಬವರು ದಿನಾಂಕ 12/11/2014ರಂದು ತಾನು ಎಲ್ಲಿಯಾದರೂ ಹೋಗಿ ಸಾಯುವುದಾಗಿ ಪತ್ನಿ ಶಿಲ್ಪರವರಿಗೆ ಫೋನ್‌ ಮೂಲಕ ತಿಳಿಸಿ ಹೋದವರು ಮನೆಗೆ ಬಾರದೆ ಇದ್ದು, ಎಲ್ಲಿ ಹುಡುಕಿದರೂ ಪತ್ತೆಯಾಗದಿದ್ದು, ದಿನಾಂಕ 13/11/2014ರಂದು ಸುಬ್ಬಯ್ಯನವರು ಕದನೂರು ಸೇತುವೆ ಸಮೀಪವಿರುವ ನರ್ಸರಿಯೊಂದರ ಬಳಿ ಯಾವುದೋ ವಿಷ ಸೇವಿಸಿ ಒದ್ದಾಡುತ್ತಿದ್ದಾತನನ್ನು ಖಮಡು ವಿರಾಜಪೇಟೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಿದರೂ ಪ್ರಯೋಜನವಾಗದೆ ಮೃತರಾಗಿರುವುದಾಗಿ ದೂರು ನೀಡಿದ್ದು, ಸುಮಾರು 3 ವರ್ಷಗಳಿಂದ ಸುಬ್ಬಯ್ಯನವರಿಗೆ ಯಾವುದೋ ಹೊಟ್ಟೆನೋವು ಕಾಯಿಲೆ ಇದ್ದು ವಾಸಿಯಾಗದೇ ಇದ್ದ ಕಾರಣ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆನ್ನಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, November 13, 2014

ಪತಿಯ ಹಿಂಸೆ  ಪತ್ನಿ ಆತ್ಮಹತ್ಯೆಗೆ ಶರಣು:
     ಮಹಿಳೆಯೊಬ್ಬರು ದಿನಾಂಕ 11-11-2014 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ತನಿಖಾ ಸಮಯ ಸದರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ತನ್ನ ಪತಿ ತರುಣೇಶ್ @ ಗಣೇಶರವರು ಪ್ರತಿ ನಿತ್ಯ ಪಾನಮತ್ತನಾಗಿ ಬಂದು ಹೊಡೆಯುವುದು, ಬೈಯುವುದು, ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದುದರ ಪರಿಣಾಂವಾಗಿ ಮಾನಸಿಕವಾಗಿ ನೊಂದು ಸದರಿ ವಸಂತಿಯವರು ದಿನಾಂಕ 11-11-2014 ರಂದು ರಾತ್ರಿ ತಮ್ಮ ಮನೆಯ ಹತ್ತಿರದ ತೋಟದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿಮಡಿಕೇರಿ ಗ್ರಾಮಾಂತರ ಪೊಲೀಸರು ಸದರಿ ಮಹಿಳೆಯ ಪತಿ  ತರುಣೇಶ್ @ ಗಣೇಶ್‌ ವಿರುದ್ದ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  
 
ವೇಗದ ಚಾಲನೆ, ಪಿಕ್‌ಅಪ್‌ ಅಪಘಾತ ಚಾಲಕನ ಸಾವು:
      ಅತೀ ವೇಗ ಹಾಗು ನಿರ್ಲಕ್ಷ್ಯ ಚಾಲನೆಯಿಂದ ಪಿಕ್‌ಅಪ್‌ ವಾಹನವೊಂದು ಅವಘಡಕ್ಕೀಡಾಗಿ ಚಾಲಕ ಸಾವನಪ್ಪಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಲಮುರಿ ಗ್ರಾಮದಲ್ಲಿ ಸಂಭವಿಸಿದೆ. ಮಡಿಕೇರಿ ಗಾಲೋಕು ಹೊದ್ದೂರು-ವಾಟೆಕಾಡು ಗ್ರಾಮದ ನಿವಾಸಿ ಸುರೇಶ ಎಂಬ ವ್ಯಕ್ತಿ ದಿನಾಂಕ 12-11-2014 ರಂದು ತಾನು ಚಾಲಿಸುತ್ತಿದ್ದ ಪಿಕ್‌ಅಪ್‌ ವಾಹನವನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಹೊದ್ದೂರು ಗ್ರಾಮದ ಮಾರಿ ದೇವಾಲಯದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ವಾಹನ ಅಪಘಾತಕ್ಕೀಡಾಗಿ ಚಾಲಕ ಸುರೇಶ ತೀವ್ರ ಗಾಯಗೊಂಡು ಸಾವನಪ್ಪಿದ್ದು, ಸದರಿ ವಾಹನದಲ್ಲಿ ಇದ್ದ ದೀಪು ಎಂಬ ವ್ಯಕ್ತಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.  

ಅಪರಿಚಿತ ಮಹಿಳೆಗೆ ಮೋಟಾರ್‌ ಸೈಕಲ್‌ ಡಿಕ್ಕಿ:

     ಅಪರಿಚಿತ ಮಹಿಳೆಯೊಬ್ಬರಿಗೆ ಮೋಟಾರ್‌ ಸೈಕಲ್‌ವೊಂದು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಘಟನೆ ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ನಡೆದಿದೆ. ದಿನಾಂಕ 12-11-2014 ರಂದು ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತಮಹಿಳೆಯೋರ್ವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೋಟಾರ್‌ ಸೈಕಲ್‌ನಲ್ಲಿ ಬಂದು ಡಿಕ್ಕಿಪಡಿಸಿ ಮೋಟಾರ್‌ ಸೈಕಲನ್ನು ನಿಲ್ಲಿಸದೇ ಹೋಗಿದ್ದು, ತೀವ್ರಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಡಿಕೇರಿ ಟ್ರಾಫಿಕ್‌ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:

   ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಠನೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿವರದಿಯಾಗಿದೆ. ವಿರಾಜಪೇಟೆ ನಗರದ ಶಿವಕೇರಿ ನಿವಾಸಿ ಸುಬ್ಬಯ್ಯ (48) ಎಂಬವರು ಕೆಲವು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 12-11-2014 ರಂದು ವಿಷ ಸೇವಿಸಿಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪಾದಾಚಾರಿಗೆ ಬೈಕ್‌ ಡಿಕ್ಕಿ.

    ದಿನಾಂಕ 11-11-2014 ರಂದು ಸಮಯ 19.30 ಗಂಟೆಗೆ ವಿರಾಜಪೇಟೆ ತಾಲ್ಲೂಕು ಕುಟ್ಟ ನಗರದ ಹೂವಿನಕಾಡು ಎಸ್ಟೇಟ್‌ನ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಜೇಜುಕುರುಬರ ರಾಮು ಎಂಬವರು ನಡೆದುಕೊಂಡು ಹೋಗುತ್ತಿರುವಾಗ್ಗೆ ಎದುರುಗಡೆಯಿಂದ ಒಂದು ಮೋಟಾರ್ ಸೈಕಲ್‌ನ್ನು ಅದರ ಸವಾರನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಮುವರಿಗೆ ಢಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು, ಕುಟ್ಟ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.Wednesday, November 12, 2014

ಮಹಿಳೆಯ ಆತ್ಮಹತ್ಯೆ, ಕೊಲೆ ಶಂಕೆ:

       ಮಹಿಳೆಯೊಬ್ಬರು ಮರವೊಂದಕ್ಕೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಪೆರಾಜೆ ಗ್ರಾಮದಲ್ಲಿ ನಡೆದಿದೆ. ಪೆರಾಜೆ ಗ್ರಾಮದ ನಿವಾಸಿ ಬಿ.ಆರ್‌. ವೆಂಕಟರಮಣ ಎಂಬುವವರ ಮಗಳಾದ ವಸಂತಿ @ ವಿನುರವರನ್ನು 2000 ನೇ ಇಸವಿಯಲ್ಲಿ ಪೆರಾಜೆ ಗ್ರಾಮದ ನಿಡ್ಯಮಲೆ ಪೌತಿ ಪೊನ್ನಪ್ಪನವರ ಮಗನಾದ ತರುಣೇಶ್ @ ಗಣೇಶರವರಿಗೆ ವಿವಾಹ ಮಾಡಿಕೊಟ್ಟಿದ್ದು ಇವರಿಗೆ 4 ಜನ ಮಕ್ಕಳಿದ್ದು ಪತಿ ತರುಣೇಶ್‌ ರವರು ಸುಮಾರು 10 ವರ್ಷಗಳಿಂದ ಪಾನಮತ್ತನಾಗಿ ಹೆಂಡತಿಗೆ ಹೊಡೆಯುವುದು, ಬೈಯುವುದು, ದೈಹಿಕ ಮಾತ್ತು ಮಾನಸಿಕ ಹಿಂಸೆಯನ್ನು ನೀಡುತ್ತಾ ಬಂದಿದ್ದು ದಿನಾಂಕ 11-11-2014 ರಂದು ರಾತ್ರಿ ಸಮಯ ವಸಂತಿಯವರು ಮನೆಯಿಂದ ಕಾಣೆಯಾಗಿದ ಹಿನ್ನೆಲೆಯಲ್ಲಿ ಆಕೆಯನ್ನು ಹುಡುಕಿ ನೋಡಿದಾಗ ಮನೆಯ ಹತ್ತಿರದ ಅಡಿಕೆ ತೋಟದಲ್ಲಿ ಮರದ ಕೊಂಬೆಯಲ್ಲಿ ತೂಗಿದ ರೀತಿಯಲ್ಲಿ ಮೃತಪಟ್ಟಿದ್ದು ಸದರಿ ವಸಂತಿಯವರನ್ನು ಪತಿ ತರುಣೇಶ್‌ರವರು ಕೊಲೆ ಮಾಡಿರಬೇಕೆಂದು ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನುದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಪಾದಾಚಾರಿಗೆ ಬೈಕ್‌ ಡಿಕ್ಕಿ, ಗಾಯ:

ಮೂರ್ನಾಡು ಗ್ರಾಮದ ನಿವಾಸಿ ಕೆರೆಮನೆ ಸುಶೀಲ ಎಂಬವರು ದಿನಾಂಕ 08-11-2014 ರಂದು ರಾತ್ರಿ ಮೂರ್ನಾಡು ನಗರದಲ್ಲಿರುವ ರಾಮಮಂದಿರ ದೇವಸ್ಥನಕ್ಕೆ ಹೋಗಿ ಪೂಜೆ ಮಗುಸಿ ವಾಪಾಸ್ಸು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಕೊಂಡಂಗೇರಿ ಜಂಕ್ಷನ್ ಬಳಿ ಮೂರ್ನಾಡು ಕಡೆಯಿಂದ ಮಡಿಕೇರಿ ಕಡೆಗೆ ಲವ ಎಂಬ ವ್ಯಕ್ತಿ ತನ್ನ ಮೋಟಾರ್‌ ಸೈಕಲನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಾಲಿಸಿಕೊಂಡು ಬಂದು ಸುಶೀಲಾರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೋಟಾರ್‌ ಸೈಕಲ್‌ಗೆ ಕಾರು ಡಿಕ್ಕಿ, ಇಬ್ಬರಿಗೆ ಗಾಯ:

ದಿನಾಂಕ 11-11-2014 ರಂದು ಗುಹ್ಯ ಗ್ರಾಮದ ನಿವಾಸಿ ಸಿ.ಜೆ. ಯಶ್ವಂತ್‌ ಎಂಬವರು ತನ್ನ ಸ್ನೇಹಿತ ವಸಂತ ಎಂಬವರೊಂದಿಗೆ ಮೋಟಾರ್‌ ಸೈಕಲ್‌ನಲ್ಲಿ ಸಿದ್ದಾಪುರದ ಕಡೆಗೆ ಹೋಗುತ್ತಿದ್ದಾಗ, ಎದುರುಗಡೆಯಿಂದ ಯಾಹ್ಯ ಎಂಬ ವ್ಯಕ್ತಿ ತನ್ನ ಬಾಪ್ತು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಯಶ್ವಂತ್‌ ಹಾಗು ಹಿಂಬದಿ ಸವಾರ ವಸಂತರವರು ಗಾಯಗೊಂಡಿರುತ್ತಾರೆ. ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಗುವನ್ನು ಕಳುಹಿಸಿಕೊಡಲು ನಿರಾಕರಣೆ, ಪ್ರಕರಣ ದಾಖಲು:

      ಶ್ರೀಮತಿ ಭವಾನಿ ಎಂಬ ಮಹಿಳೆ ಪಾಲಂಗಾಲ ಗ್ರಾಮದ ನಡಿಕೇರಿಯಂಡ ಬಬ್ಬು ಯಾನೆ ಮೇದಪ್ಪ ರವರ ತೋಟದಲ್ಲಿ ಅವರ ಸಂಸಾರದೊಂದಿಗೆ ಕೆಲಸ ಮಾಡಿಕೊಂಡು ಅವರ ಲೈನ್ ಮನೆಯಲ್ಲಿ ವಾಸವಾಗಿದ್ದು, ಆಕೆಯ ಗಂಡ ಈ ನಡುವೆ ಮೃತಪಟ್ಟು ತಾನು ಹೆರಿಗೆಗಾಗಿ ತನ್ನ ತಾಯಿ ಮನೆ ಇರುವ ಹೆಗ್ಗಳ ಗ್ರಾಮಕ್ಕೆ ಹೋದ ಸಂದರ್ಭದಲ್ಲಿ ತನ್ನ 3 ವರ್ಷದ ಮಂಜು ಎಂಬ ಗಂಡು ಮಗುವನ್ನು ಬಬ್ಬು ಯಾನೆ ಮೇದಪ್ಪನವರ ಮನೆಯಲ್ಲಿ ಬಿಟ್ಟು ಹೋಗಿದ್ದು, ಇದೀಗ ತನ್ನ ಮಗುವನ್ನು ನೀಡುವಂತೆ ನಡಿಕೇರಿ ಯಂಡ ಬಬ್ಬು ಯಾನೆ ಮೇದಪ್ಪ ಹಾಗೂ ಅವರ ಪತ್ನಿರವರನ್ನು ಕೇಳಿದಲ್ಲು, ತನ್ನ ಗಂಡ ಸಾಲ ಮಾಡಿದ್ದನ್ನು ಮರು ಪಾವತಿಸಿದರೆ ಮಾತ್ರ ಮಗುವನ್ನು ಕೊಡುವುದಾಗಿ, ಇಲ್ಲದಿದ್ದರೆ ಮಗುವನ್ನು ಹಿಂತಿರುಗಿಸು ವುದಿಲ್ಲ ಎಂದು ಗದರಿಸಿರುತ್ತಾರೆಂದು ಶ್ರೀಮತಿ ಭವಾನಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

Tuesday, November 11, 2014

ಮನುಷ್ಯ ಕಾಣೆ, ಪ್ರಕರಣ ದಾಖಲು:

     ಮನೆಯಿಂದ ಹೋದ ವ್ಯಕ್ತಿಯೋರ್ವ ಮರಳಿ ಮನೆಗೆ ಬಾರದೇ ಕಾಣೆಯಾದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಾಕೋಟುಪರಂಬು ಗ್ರಾಮದಲ್ಲಿ ನಡೆದಿದೆ. ಕಾಕೋಟುಪರಂಬು ಗ್ರಾಮದ ನಿವಾಸಿ ಮಂಡೇಟಿತ ಪಿ. ಪೂಣಚ್ಚ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ರಾಜು ಎಂಬ ವ್ಯಕ್ತಿ ದಿನಾಂಕ 29-10-2014 ರಂದು ಮನೆಯಿಂದ ಎಲ್ಲಿಗೋ ಹೋಗಿದ್ದು, ಇಲ್ಲಿಯವರೆಗೆ ಮರಳಿಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಸದರಿ ವ್ಯಕ್ತಿಯ ಪತ್ನಿ ಶ್ರೀಮತಿ ಪಂಚರಿಯರವರ ಶ್ರೀಮತಿ ಮುತ್ತಿ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆ, ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:

      ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ನಡೆದಿದೆ. ತಣ್ಣಿಮಾನಿ ಗ್ರಾಮದ ನಿವಾಸಿ ದಿನೇಶ (50) ಎಂಬವರು ದಿನಾಂಕ 10-11-2014 ರಂದು ವಿಷ ವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು, ಸದರಿಯವರನ್ನು ಭಾಗಮಂಡಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಸದರಿ ವ್ಯಕ್ತಿ ಸಾವನಪ್ಪಿದ್ದು, ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 

ನಿಲ್ಲಿಸಿದ್ದ ಕಾರಿನ ಚಕ್ರಗಳ ಕಳವು:

      ಮದೆನಾಡು ಗ್ರಾಮದ ನಿವಾಸಿ ಎಂ.ಎ. ಮೊಹಮ್ಮದ್‌ರವರು ದಿನಾಂಕ 09-11-2014 ರಂದು ರಾತ್ರಿ 09.00 ಗಂಟೆಗೆ ತಮ್ಮ ಸಂಸಾರದೊಂದಿಗೆ ಗೋಣಿಕೊಪ್ಪಕ್ಕೆ ಹೋಗಿ ರಾತ್ರಿ ಸಮಯ 12.00 ಗಂಟೆಗೆ ವಾಪಾಸ್ಸು ಮದೆನಾಡಿನ ತಮ್ಮ ಮನೆಗೆ ಬಂದು ಕಾರನ್ನು ಮನೆಯ ಕೆಳಭಾಗದಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸಿದ್ದು, ದಿನಾಂಕ 10-11-2014 ರಂದು ಬೆಳಿಗ್ಗೆ ಸಮಯ ಸುಮಾರು 07.00 ಗಂಟೆಗೆ ಕಾರಿನ ಬಳಿ ಬಂದಾಗ ಕಾರಿನ ಬಲಭಾಗದ ಮುಂಭಾಗದ ಹಾಗೂ ಹಿಂಭಾಗದ ಎರಡು ಚಕ್ರಗಳನ್ನು ಡಿಸ್ಕ್ ಸಮೇತ ಕಳವು ಮಾಡಿದ್ದಲ್ಲದೇ, ಕಾರಿನ ಒಳಗಿದ್ದ ಟೇಪ್ ರೇಕಾರ್ಡರ್ ಕೂಡ ಕಳವು ಆಗಿದ್ದು, ಇವುಗಳ ಒಟ್ಟು ಅಂದಾಜು ಬೆಲೆ 11,000 ಆಗಬಹುದಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

Monday, November 10, 2014

ಅಪ್ರಾಪ್ತತೆಯನ್ನು ಮದುವೆಯಾಗುವುದಾಗಿ ನಂಬಿಸಿ  ಅತ್ಯಾಚಾರ:
    ಯುವಕನೋರ್ವ ಅಪ್ರಾಪ್ತ ಹುಡುಗಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಡಿಕೇರಿ ತಾಲೋಕು ಹಾಕತ್ತೂರು ಗ್ರಾಮದಿಂದ ವರದಿಯಾಗಿದೆ. ಹಾಕತ್ತೂರು ನಿವಾಸಿ ನವೀನ್‌ ಕುಮಾರ್‌ ಎಂಬವರ ಮಗಳು ಪ್ರಾಯ 14 ವರ್ಷದ ಹೆಚ್‌.ಎನ್‌. ಸಹನಾ ಮರಗೋಡು ಗ್ರಾಮದ ಭಾರತೀ ಪ್ರೌಢ ಶಾಲೆಯಲ್ಲಿ 9 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ 05-11-2014 ರಂದು ಬೆಳಿಗ್ಗೆ 07.15 ವಸತಿ ನಿಲಯಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದು,  ವಸತಿ ನಿಲಯಕ್ಕೆ ಹೋಗದೆ  ಕಾಣೆಯಾಗಿದ್ದು,  ಆಕೆ ಒಂದು ವರ್ಷದಿಂದ ಮಹೇಶ ಎಂಬ ಯುವಕ ಪರಿಚಯವಾಗಿದ್ದು, ಆತನು ತನ್ನನ್ನು ಮದುವೆಯಾಗುವುದಾಗಿ ಹೇಳಿ ಸದರಿ ಮಹೇಶನು ಹೆಚ್ ಡಿ ಕೋಟೆಯ ಕಳವುಹುಂಡಿ ಎಂಬಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ ಅವರ ಮನೆಯಲ್ಲಿ ಇರಿಸಿ ದಿನಾಂಕ 07-11-2014 ರಂದು ಸಮಯ 10-30 ಪಿ ಎಂ ಗೆ ಸಹನಾಳ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿರುದಾಗಿ ಆಕೆಯ ತಂದೆ ನವೀನ್‌ ಕುಮಾರ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
ಕ್ಚುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಇಬ್ಬರಿಂದ ಹಲ್ಲೆ:
   ಒಳ್ಳೆಯ ಹಂದಿ ಮಾಂಸವನ್ನು ನೀಡಿಲಿಲ್ಲ  ಎಂಬ ವಿಚಾರದಲ್ಲಿ ವ್ಯಕ್ತಿಗಳಿಬ್ಬರು ಮಾಂಸ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಕುಟ್ಟ ಗ್ರಾಮದ ನಿವಾಸಿ ಶಿವ ಎಂಬವರು ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಹಂದಿ ಮಾಂಸದ ವ್ಯಾಪರ ಮಾಡಿಕೊಂಡಿದ್ದು ದಿನಾಂಕ 9-11-2014 ರಂದು ಸಮಯ 03:30 ಗಂಟೆಗೆ ಅರೋಪಿಗಳಾದ ಚೊಟ್ಟೆಯಂಡಮಾಡ ಹರೀಶ್ ಮತ್ತು ದೇಖಮಾಡ ಕಾರ್ಯಪ್ಪರವರು ಅಲ್ಲಿಗೆ ಬಂದು ನೀನು ಒಳ್ಳೆಯ ಹಂದಿ ಮಾಂಸ ಕೊಟ್ಟಿರುವುದಿಲ್ಲ ಎಂದು ಹೇಳಿ ಜಗಳ ಮಾಡಿ ಶಿವರವರ ಮೇಲೆ ಕೈಗಳಿಂದ ಹಲ್ಲೆನಡೆಸಿದ್ದು ಅಲ್ಲದೆ ಕಲ್ಲಿನಿಂದ ಹಲ್ಲೆ ನಡೆಸಿ ನೋವನ್ನುಂಟು ಮಾಡಿರುತ್ತಾರೆಂದು ನೀಡಿದ ದೂರಿನಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 

ಹಳೆಯ ದ್ವೇಷ, ವ್ಯಕ್ತಿಯಮೇಲೆ 4 ಮಂದಿಯಿಂದ ಹಲ್ಲೆ. 

     ಹಳೆಯ ದ್ವೇಷದ ಹಿನ್ನೆಲೆಯಲ್ಲಿ  ವ್ಯಕ್ತಿಯ ಮೇಲೆ 4 ಜನರು ಸೇರಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ ಘಟನೆ ಕುಶಾಲನಗರ ಠಾಣಾ ಸರಹದ್ದಿನ ಹುಲಸೆ ಗ್ರಾಮದಲ್ಲಿ ನಡೆದಿದೆ. ದಿನಾಂಕ. 01-11-2014 ರಂದು ಸಮಯ 7-30 ಗಂಟೆಗೆ ರಾಜೇಶ ಎಂಬವರು ಹುಲುಸೆ ಬಸವೇಶ್ವರ ದೇವಾಲಯಕ್ಕೆ ಪೂಜೆಗೆ ಹೋಗಿದ್ದು, ಅಲ್ಲಿ ಪಟಾಕಿಯನ್ನು ಹೊಡೆಯುತ್ತಿದ್ದವರನ್ನು ಕುರಿತು ದೂರದಲ್ಲಿ ಪಟಾಕಿ ಹೊಡೆಯಿರಿ ಎಂದು ಹೇಳಿದ್ದು, ಅದನ್ನು ಗಮನಿಸಿದ ಮದುಸೂದನ, ಗಿರೀಶ, ಚಂದ್ರಶೇಖರ, ಕಿರಣ್ ರವರುಗಳು ಹಳೆಯ ದ್ವೇಷದಿಂದ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ರಾಜೇಶ್‌ರವರು ಗಾಯಗೊಂಡು ಚಿಕಿತ್ಸೆಯ ಸಂಬಂಧ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಾಗಿದ್ದು ದಿನಾಂಕ 9-11-2014 ರಂದು ಸದರಿ ಘಟನೆಯ ಬಗ್ಗೆ ಕುಶಾಲನಗರ ಪೊಲೀಸರಿಗೆ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣ
ದಾಖಲಿಸಿಕೊಂಡಿರುತ್ತಾರೆ.

ರಸ್ತೆಗೆ ಮಗುಚಿದ ಜೀಪು, ಒಬ್ಬನಿಗೆ ಗಾಯ:


     ಮಡಿಕೇರಿ ತಾಲೋಕು ಬೆಟ್ಟತ್ತೂರು ಗ್ರಾಮದಲ್ಲಿ ದಿನಾಂಕ 09-11-2014 ರಂದು ಬೆಳಿಗ್ಗೆ ವೈ.ಹಾಲೇಶ್‌ ಎಂಬವರು ಕೆ.ಎ-21 9219 ರ ಪಿಕ್‌ಅಪ್‌ ಜೀಪಿನಲ್ಲಿ ಜಲ್ಲಿ ತುಂಬಿಸಿಕೊಂಡು ಹೋಗುತ್ತಿರುವಾಗ್ಗೆ ಸದರಿ ಪಿಕ್‌ಅಪ್‌ ಜೀಪಿನ ಚಾಲಕ ರಜೂಕ್‌‌ ಎಂಬವರು ಜೀಪನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಸ್ತೆಯ ಪಕ್ಕದ ಚರಂಡಿಗೆ ಮಗುಚಿಕೊಂಡು ಜೀಪಿನಲ್ಲಿದ್ದ ವೈ. ಹಾಲೇಶ್‌ರವರ ಎಡ ಮೊಣ ಕೈ, ಎದೆ, ಸೊಂಟ ಹಾಗೂ ಬಲದ ಕೈಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ.

Sunday, November 9, 2014

ಬೆಂಕಿ ಹಚ್ಚಿಕೊಂಡು ಯುವಕನ ಆತ್ಮಹತ್ಯೆ 
       ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ಬಳಿಯ ಐಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 04/11/2014ರಂದು ಐಗೂರು ಗ್ರಾಮದ ನಿವಾಸಿ ಮಹೇಶ್ ಎಂಬಾತನ ಚಿಕ್ಕಮ್ಮನ ಮಗ ರಾಜೇಶ ಎಂಬಾತನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೈಗೆ ಸ್ವಯಂ ಸೀಮೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನು ಸೋಮವಾರಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಅರ್‌.ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 09/11/2014ರ ಮುಂಜಾವು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿರುವುದಿಲ್ಲ. 

ನಕಲಿ ಅಂಕಪಟ್ಟಿ ಪ್ರಕರಣ ; ಮೊಕದ್ದಮೆ ದಾಖಲು
      ನಕಲಿ ಪದವಿ ಅಂಕಪಟ್ಟಿ ನೀಡಿ ನೌಕರಿ ಗಿಟ್ಟಿಸಿಕೊಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಪೊನ್ನಂಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.  ಪೊನ್ನಂಪೇಟೆಯ ನಂ 2802 ನೇ ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಪೊನ್ನಂಪೇಟೆ ಸಂಘದ 1 ನೇ ಕಿರಿಯ ಗುಮಾಸ್ತೆ ಹುದ್ದೆಗೆ ದಿನಾಂಕ 28-8-2004 ರಂದು ಭರ್ತಿಗಾಗಿ ಶಕ್ತಿ ದಿನ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಸದರಿ ಹುದ್ದೆಗೆ ಬಿ.ಕಾಂ ಪದವೀಧರ ಅಥವಾ ಇತರೆ ಪದವೀಧರರಾಗಿದ್ದು  ಸಹಕಾರ ತರಭೇತಿಯ ಹುದ್ದೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ  ಹುದ್ದೆಗೆ ಹುದೂರಿನ ನಿವಾಸಿ ಶ್ರೀಮತಿ ಎ.ಕೆ.ಅನಿತಾ ಎಂಬವರು ತಾನು ಬಿ.ಎ. ಪದವೀಧರರರೆಂದು  ನಕಲಿ ಅಂಕಪಟ್ಟಿ ನೀಡಿ 2004 ನೇ ಸಾಲಿನಲ್ಲಿ ನೌಕರಿ ಪಡೆದುಕೊಂಡಿದ್ದು ತದನಂತರ ಮುಖ್ಯ ಕಾರ್ಯನಿರ್ವಹಣಾದಿಕಾರಿಯಾಗಿ ಬಡ್ತಿ ಪಡೆದುಕೊಂಡಿದ್ದು ತನ್ನ ಅಧಿಕಾರಾವಧಿಯಲ್ಲಿ ಎಲ್ಲಾ ಮೂಲ ದಾಖಲಾತಿಗಳನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡು ತನ್ನ ಸೇವಾ ಪುಸ್ತಕದ ಕಾಲಂ 7(ಎ) ರಲ್ಲಿ ಶೈಕ್ಷಣಿಕ ವಿದ್ಯಾರ್ಹತೆಯ್ನನು B.A COURSE M. A ಎಂದು ತಿದ್ದು ಪಡಿ ಮಾಡಿ  ಸಂಘಕ್ಕೆ ಮೋಸ ವಂಚನೆ ಮಾಡುವ ಉದ್ದೇಶದಿಂದ ಸಂಘದ ಸೇವಾ ಪುಸ್ತಕ ಸೇರಿದಂತೆ ಇತರ ದಾಖಲಾತಿಗಳನ್ನು ತಿದ್ದುಪಡಿ  ಮಾಡಿ ದಾಖಲಾತಿಗಳನ್ನು ದುರುಪಯೋಗ ಮಾಡಿ ಸಂಘಕ್ಕೆ ಲಕ್ಷಾಂತರ ಹಣ ನಷ್ಟ ಮಾಡಿರುವುದಾಗಿ ಸಂಘದ ಅಧ್ಯಕ್ಷ ಎ.ಕೆ.ಜನಾರ್ಧನರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಡಿಕ್ಕಿ; ಪ್ರಕರಣ ದಾಖಲು 
         ಕಾರುಗಳೆರಡು ಪರಸ್ಪರ ಡಿಕ್ಕಿಯಾಗಿ ಹಾನಿಗೊಳಗಾದ ಘಟನೆ ಮಡಿಕೇರಿ ಸಮೀಪದ ಜೋಡುಪಾಲ ಎಂಬಲ್ಲಿ ನಡೆದಿದೆ. ಕೇರಳದ ಕಾಸರಗೋಡು ನಿವಾಸಿ ಮುನೀರ್‌ ಎಂಬವರು ದಿನಾಂಕ 08-10-2014 ರಂದು ಸ್ವಂತ ಕೆಲಸದ ನಿಮಿತ್ತ ಅವರ ಬಾಪ್ತು ನಂ ಕೆಎಲ್‌-60 ಡಿ- 4649 ರ ಆಲ್ಟೋ ಕಾರಿನಲ್ಲಿ ಕಾಸರಗೋಡುವಿನಿಂದ ಮೈಸೂರಿಗೆ ಬರುತ್ತಿದ್ದಾಗ  ಬೆಳಿಗ್ಗೆ 8.00 ಗಂಟೆಗೆ ಮದೆನಾಡು ಗ್ರಾಮದ ಜೋಡುಪಾಲ ಎಂಬಲ್ಲಿ ಎದುರುಗಡೆಯಿಂದ ಕೆಎ-19 ಎಎ-3159 ರ ಕಾರನ್ನು ಅದರ ಚಾಲಕ ಮಂಗಳೂರಿನ ಪದವಿನಂಗಡಿಯ ರೋಹನ್ ಟೆಲ್ಲಿಸ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುನೀರ್‌ರವರು  ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರ  ಆಲ್ಟೋ ಕಾರಿನ ಮುಂಭಾಗದ ಗ್ಲಾಸ್‌ ಹಾಗೂ ಬಲಭಾಗದ ಹೆಡ್‌ಲೈಟ್‌, ಬಂಪರ್‌, ಬಾನೆಟ್‌ ಜಖಂಗೊಂಡಿದ್ದು, ಕಾರಿನಲ್ಲಿದ್ದವರಿಗೆ ಯಾವುದೇ ಗಾಯನೋವುಗಳು ಉಂಟಾಗಿರುವುದಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಅಪ್ರಾಪ್ತ ಬಾಲಕಿ ನಾಪತ್ತೆ ; ಅಪಹರಣ ಶಂಕೆ 
       ಅಪ್ರಾಪ್ತ ಶಾಲಾ ಬಾಲಕಿಯೊಬ್ಬಳು ನಾಪತ್ತೆಯಾದ ಘಟನೆ ಮಡಿಕೇರಿ ಸಮೀಪದ ಹುಲಿತಾಳ ಗ್ರಾಮದಲ್ಲಿ ನಡೆದಿದೆ. ಹಾಕತ್ತೂರು ಬಳಿಯ ಹುಲಿತಾಳ ನಿವಾಸಿ ನವೀನ್‌ ಕುಮಾರ್‌ ಎಂಬವರ ಮಗಳು 14 ವರ್ಷದ ಪ್ರಾಯದ ಹೆಚ್‌.ಎನ್‌. ಸಹನಾ ಎಂಬವಳು ಮರಗೋಡು ಗ್ರಾಮದ ಭಾರತೀ ಪ್ರೌಢ ಶಾಲೆಯಲ್ಲಿ 9 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಗೆ ಸಂಬಂಧಪಟ್ಟ ಬಾಲಕಿಯರ ವಸತಿ ನಿಲಯದಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಿದ್ದು, ಸಹನಾಳು ಇತ್ತೀಚೆಗೆ ಹಾಕತ್ತೂರು ಗ್ರಾಮದಲ್ಲಿರುವ ತನ್ನ ಮನೆಗೆ ರಜೆಯಲ್ಲಿ ಬಂದು ರಜೆ ಮುಗಿಸಿ ದಿನಾಂಕ 05-11-2014 ರಂದು ಬಟ್ಟೆಬರೆಗಳನ್ನು ತೆಗೆದುಕೊಂಡು ವಸತಿ ನಿಲಯಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದು, ದಿನಾಂಕ 06-11-2014 ರಂದು ಅದೇ  ಶಾಲೆಯಲ್ಲಿ ಓದುತ್ತಿದ್ದ ಸಹನಾಳ ತಮ್ಮ ಸುಹಾಸನು ಶಾಲೆಯ ಹಿಂದಿ ಶಿಕ್ಷಕರು ಸಹಾನಾ ಶಾಲೆಗೆ ಬಂದಿರುವುದಿಲ್ಲ ಎಂದು ತಿಳಿಸಿರುವುದಾಗಿ ತನ್ನ ತಂದೆಗೆ ತಿಳಿಸಿದ್ದು  ನಂತರ ಶಾಲೆಯ ಮುಖ್ಯೋಪಾಧ್ಯಾಯರು ಸಹ ನವೀನ್‌ ಕುಮಾರ್‌ರವರಿಗೆ  ದೂರವಾಣಿ ಕರೆ ಮಾಡಿ ಸಹನಾಳು ವಸತಿ ನಿಲಯಕ್ಕೆ ಮತ್ತು ಶಾಲೆಗೆ ಹೋಗಿರುವುದಿಲ್ಲವೆಂದು ತಿಳಿಸಿದ್ದು  ನಂತರ ನವೀನ್‌ ಕುಮಾರ್‌ರವರು ಮಗಳು ಸಹನಾಳನ್ನು ಅಕ್ಕ ಪಕ್ಕದಲ್ಲಿ ನೆಂಟರಿಷ್ಟರ ಮನೆಗಳಲ್ಲಿ ಹುಡುಕಿದ್ದು  ಪತ್ತೆಯಾಗದ್ದರಿಂದ ತನ್ನ ಅಪ್ರಾಪ್ತ ವಯಸ್ಸಿನ ಮಗಳು ಸಹಾನಾಳನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದೆಂದು ಶಂಕಿಸಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ನೇಣು ಬಿಗಿದುಕೊಂಡು ಮಹಿಳೆಯ ಆತ್ಮಹತ್ಯೆ 
           ಸೀರೆಯಿಂದ ನೇಣು ಬಿಗಿದುಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊದ್ದೂರು ಗ್ರಾಮದ ಬೊಳಿ ಬಾಣೆ ಪೈಸಾರಿಯಲ್ಲಿ ನಡೆದಿದೆ. ದಿನಾಂಕ 07-11-2014 ರಂದು ರಾತ್ರಿ ವೇಳೆ ಬೊಳಿಬಾಣೆ ಪೈಸಾರಿ ನಿವಾಸಿ ಬಿ.ಎಸ್‌.ವಾಣಿ ಎಂಬವರು ಮನೆಯವರೊಂದಿಗೆ ಊಟ ಮಾಡಿ ಟಿ.ವಿ. ನೋಡುತ್ತಿರುವಾಗ್ಗೆ ಹೊರಗಡೆ ಏನೋ ಶಬ್ದ ಕೇಳಿ ಹೊರಗೆ ಬಂದು ನೋಡಿದಾಗ  ಹಿಂಬಾಗದ ಸೌದೆ ಕೊಟ್ಟಿಗೆಯಲ್ಲಿ ಅಡ್ಡಲಾಗಿ ಹಾಕಿದ್ದ ಅಡಿಕೆ ಮರದ ಮಾಡಿಗೆ ಅವರ  ತಾಯಿ ಅಕ್ಕಮ್ಮ ರವರು ಸೀರೆಯಿಂದ ನೇಣು ಬಿಗಿದುಕೊಂಡು ನೇತಾಡುತ್ತಿದ್ದು, ಕೂಡಲೇ ವಾಣಿಯವರ ತಂದೆ ಐತಪ್ಪರವರು ಕತ್ತಿಯಿಂದ ಸೀರೆಯನ್ನು ಕತ್ತರಿಸಿ ಕಾರಿನಿನಲ್ಲಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಕ್ಕಮ್ಮ ರವರನ್ನು ಪರೀಕ್ಷಿಸಿದ ವೈದ್ಯರು ಅಕ್ಕಮ್ಮ ರವರು ಮೃತಪಟ್ಟಿರುವುದೆಂದು ತಿಳಿಸಿದರೆನ್ನಲಾಗಿದೆ. ಮೃತೆ  ಅಕ್ಕಮ್ಮರವರಿಗೆ 51 ವರ್ಷ ವಯಸ್ಸಾಗಿದ್ದು, ಈಗ್ಗೆ 2 ವರ್ಷಗಳಿಂದ ಅವರಿಗೆ ಹೊಟ್ಟೆನೋವಿನ ಸಮಸ್ಯೆ ಇದ್ದು, ಚಿಕಿತ್ಸೆ ಪಡೆದುಕೊಂಡಿದ್ದರೂ ಗುಣಮುಖರಾಗದ ಕಾರಣ ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಅಕ್ಕಮ್ಮರವರು ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಅಕ್ರಮ ಮದ್ಯ ಮಾರಾಟ ; ಓರ್ವನ ಬಂಧನ
       ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಸೋಮವಾರಪೇಟೆ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರಪೇಟೆ ಬಳಿಯ ಕೆಂಚಮ್ಮನ ಬಾಣೆ ಎಂಬಲ್ಲಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ಠಾಣೆ ಪಿಎಸ್‌ಐ ನಂದೀಶ್‌ ಕುಮಾರ್‌ರವರು ದಿನಾಂಕ 08.11.2014 ರಂದು ಸಮಯ ಬೆಳಿಗ್ಗೆ 08:15 ಗಂಟೆಗೆ ಕೆಂಚಮ್ಮನ ಬಾಣೆ ನಿವಾಸಿ ಸುಂದರೇಶರವರು ಅವರ ಅಂಗಡಿಯಲ್ಲಿ ಸರಕಾರದ ರಹದಾಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿ ಒಂದು ಪ್ಲಾಸ್ಟಿಕ್‌ ಚೀಲದಲ್ಲಿ 180 ಎಂ.ಎಲ್‌ನ ORIGINAL CHOICE DELUXE VSOP BRANDY ಯ 32 ಬಾಟಲಿಗಳನ್ನು ಅಮಾನತ್ತುಪಡಿಸಿಕೊಂಡು ಸುಂದರೇಶರವರನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, November 8, 2014

ಮನೆಗೆ ಅಕ್ರಮ ಪ್ರವೇಶ, ಕೊಲೆ ಬೆದರಿಕೆ
        ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 6-11-2014ರಂದು ರಾತ್ರಿ ಸಮಯ ಗಂಟೆಗೆ ಕುರ್ಚಿ ಗ್ರಾಮದ ಮಚ್ಚಮಾಡ ಕರುಂಬಯ್ಯ ಎಂಬುವವರು ಅದೇ ಗ್ರಾಮದ ನಿವಾಸಿ ರಾಣಿ ಎಂಬ ಮಹಿಳೆಯ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಕೈಹಿಡಿದು ಎಳೆದು ಅವಾಚ್ಯ ಶಬ್ದಗಳಿಂದ ಬೈದು ಆಕೆಯ  ಮಗಳನ್ನು ಆತನೊಂದಿಗೆ ಕಳುಹಿಸುವಂತೆಯೂ ಇಲ್ಲದಿದ್ದರೆ  ಗುಂಡು ಹೊಡೆದು ಕೊಲೆ ಮಾಡುವುದಾಗಿ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಮೊಬೈಲ್‌ ಹಾಗೂ ನಗದು ಕಳವು 
        ಕಪಾಟನ್ನು  ಮುರಿದು ಮೊಬೈಲ್‌ ಹಾಗೂ ನಗದು ಕಳವು ಮಾಡಿದ ಪ್ರಕರಣ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 03/11/2014ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಆದಂ ಎಂಬವರು ಪಟ್ಟಣ ಪಂಚಾಯಿತಿ ಕಚೇರಿಯ ಅಲ್ಯುಮಿನಿಯಂ ಕಪಾಟಿನಲ್ಲಿ ಒಂದು ಸಾಮ್ಸಂಗ್‌ ಕಂಪೆನಿಯ ಮೊಬೈಲ್‌ ಹಾಗೂ ರೂ.5,000/- ನಗದನ್ನು ಇಟ್ಟಿದ್ದು, ದಿನಾಂಕ 05/11/2014ರಂದು ಬಂದು ನೋಡಿದಾಗ ಕಪಾಟಿನ ಅಲ್ಯುಮಿನಿಯಂ ಫ್ಯಾಬ್ರಿಕೇಷನ್‌ನ್ನು ಮುರಿದು ಅಲ್ಲಿಟ್ಟಿದ್ದ ಮೊಬೈಲ್‌ ಹಾಗೂ ನಗದನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಸಿಬ್ಬಂದಿಗಳನ್ನು ವಿಚಾರಿಸಿದಾಗ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾ ನಿರ್ವಾಣಿ, ಸದಸ್ಯರಾದ ಬಿ.ಇ.ರಮೇಶ್‌ ಮತ್ತು ಕಿರಿಯ ಅಭಿಯಂತರ ವೀರೇಂದ್ರ ಕುಮಾರ್‌ರವರು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ದಾರಿ ವಿವಾದ ; ಇಬ್ಬರ ಮೇಲೆ ಹಲ್ಲೆ 
      ದಾರಿ ವಿವಾದದಿಂದ ಜಗಳವಾಗಿ ಇಬ್ಬರು ವ್ಯಕ್ತಿಗಳ ಮೇಲೆ ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ಬಳಿಯ ಜಂಬೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 07/11/2014ರಂದು ಜಂಬೂರು ನಿವಾಸಿ ಎಸ್‌.ಪಿ.ವಾಸುದೇವ ಮತ್ತು ಆತನ ಭಾವ ಪೊನ್ನಪ್ಪ ಮತ್ತು ಪೊನ್ನಪ್ಪನ ಪತ್ನಿ ಪ್ರೇಮರವರ ನಡುವೆ ದಾರಿಯ ವಿಚಾರವಾಗಿ ಜಗಳವಾಗಿದ್ದು, ಪೊನ್ನಪ್ಪ ಹಾಗೂ ಪ್ರೇಮರವರು ಕತ್ತಿ ಹಾಗೂ ದೊಣ್ಣೆಯಿಂದ ವಾಸುದೇವರವರ ಮೇಲೆ ಹಲ್ಲೆ ನಡೆಸಿದ್ದು, ಜಗಳ ತಡೆಯಲು ಬಂದ ವಾಸುದೇವರವರ ಮಗ ಅನಿಲ್‌ ಕುಮಾರ್‌ನ ಮೇಲೂ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸಬ್‌ ಮರ್ಸಿಬಲ್‌ ಪಂಪ್‌ ಕಳವು 
         ಬಾವಿಗೆ ಆಳವಡಿಸಿದ್ದ ಸಬ್‌ ಮರ್ಸಿಬಲ್‌ ಪಂಪನ್ನು ಕಳವು ಮಾಡಿದ ಪ್ರಕರಣ ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ವೆಸ್ಟ್‌ ನೆಮ್ಮಲೆ ಗ್ರಾಮದ ನಿವಾಸಿ ಲವ ಎಂಬವರು ಟಿ.ಶೆಟ್ಟಿಗೇರಿ ಗ್ರಾಮದಲ್ಲಿರುವ ಅವರ ಹೊಸ ಮನೆಯ ಜಾಗದ ಬಾವಿಯಲ್ಲಿ ಒಂದು ಸಬ್‌ ಮರ್ಸಿಬಲ್‌ ಪಂಪನ್ನು ಆಳವಡಿಸಿದ್ದು, ದಿನಾಂಕ 06/11/2014ರಂದು ಹೊಸ ಮನೆಯ ಬಳಿ ಹೋದಾಗ ಬಾವಿಗ ಅಳವಡಿಸಿದ್ದ ಸಬ್‌ ಮರ್ಸಿಬಲ್‌ ಪಂಪನ್ನು ಯಾರೋ ಕಳವು ಮಾಡಿರುವುದು ತಿಳಿದು ಬಂದಿದ್ದು ಆ ನಂತರ ಅಕ್ಕ ಪಕ್ಕದವರನ್ನು ಮತ್ತು ಇತರೆಡೆಗಳಲ್ಲಿ ವಿಚಾರಿಸಿದಾಗ ಟಿ.ಶೆಟ್ಟಿಗೇರಿ ಗ್ರಾಮದ ಚೀಪೆಕೊಲ್ಲಿ ಪೈಸಾರಿ ನಿವಾಸಿ ಜಯ ಎಂಬಾತನು ಸಬ್‌ ಮರ್ಸಿಬಲ್‌ ಪಂಪನ್ನು ಕಳವು ಮಾಡಿಕೊಂಡು ಗೋಣಿಕೊಪ್ಪದ ಅನಿಲ್‌ ಎಂಬವರ ಅಂಗಡಿಗೆ ಮಾರಾಟ ಮಾಡಲು ತೆಗೆದುಕೊಂಡುಹೋಗಿರುವ ಬಗ್ಗೆ ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಹುಡುಗಿ ಕಾಣೆ ; ಪ್ರಕರಣ ದಾಖಲು 
      ಮನೆಯಿಂದ ಹೊರಗೆ ಹೋದ ಹುಡುಗಿಯೊಬ್ಬಳು ಮನೆಗೆ ಬಾರದೆ ಕಾಣೆಯಾದ ಪ್ರಕರಣ ಕುಶಾಲನಗರ ಬಳಿಯ ಹೊಸಪಟ್ನ ಗ್ರಾಮದಲ್ಲಿ ನಡೆದಿದೆ. ಕೂಡ್ಲೂರು ಬಳಿಯ ನವಗ್ರಾಮದ ನಿವಾಸಿ ಸಾರಾ ಎಂಬಾಕೆಯ ಮಗಳು 18 ವರ್ಷ ಪ್ರಾಯದ ಸಕೀನಾ ಎಂಬಾಕೆಯು ದಿನಾಂಕ 04/11/2014ರಂದು ಮನೆಯಿಂದ ಹೊರಗೆ ಹೋಗಿದ್ದು ಮನೆಗೆ ವಾಪಾಸು ಬಾರದೇ ಇದ್ದ ಕಾರಣ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು ಸಕೀನಾಳ ತಾಯಿ ಸಾರಾರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Friday, November 7, 2014

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ
           ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಗೋಣಿಕೊಪ್ಪ ಬಳಿಯ ಬಾಳಾಜಿ ಗ್ರಾಮದ ಚೆನ್ನಂಗೊಲ್ಲಿ ಪೈಸಾರಿಯಲ್ಲಿ ನಡೆದಿದೆ. ದಿನಾಂಕ 05/11/2014ರಂದು ಚೆನ್ನಂಗೊಲ್ಲಿ ನಿವಾಸಿ ಎಂ.ಜಿ.ರೀಟಾ ಎಂಬವರು ಮನೆಯಲ್ಲಿರುವಾಗ ಅದೇ ಗ್ರಾಮದ ನಿವಾಸಿ ವಿ.ಎಸ್.ಪ್ರದೀಪ್ ಎಂಬವರು ಮನೆಗೆ ಬಂದು ಆತನ ಪತ್ನಿ ಕಾಣದೇ ಇದ್ದು ರೀಟಾರವರ ಮನೆಯಲ್ಲಿದ್ದಾರೆಯೇ ಎಂದು ಕೇಳಿದ್ದು ರೀಟಾರವರು ಇಲ್ಲವೆಂದಾಗ ಪ್ರದೀಪ್ ಆಕೆ ರೀಟಾಳ ಮನೆಯಲ್ಲಿಯೇ ಇರುವುದಾಗಿ ಹೇಳಿ ಜಗಳವಾಡಿ ಕೈಯಲ್ಲಿದ್ದ ಮರಗೆಲಸದ ಉಳಿಯಿಂದ ಅಲ್ಲೇ ಇದ್ದ ಜೈಸನ್‌ ಎಂಬವರ ಕೈಗೆ ಗೀರಿ ಹಲ್ಲೆ ಮಾಡಿದ್ದು, ಬಿಡಿಸಲು ಹೋದ ರೀಟಾರವರಿಗೂ ಉಳಿಯಿಂದ ಗೀರಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಆಟೋ ರಿಕ್ಷಾ ಡಿಕ್ಕಿ ; ಗಾಯ
            ರಿಕ್ಷಾಗಳೆರಡು ಪರಸ್ಪರ ಡಿಕ್ಕಿಯಾಗಿ ಮೂವರಿಗೆ ಗಾಯಗಳಾದ ಘಟನೆ ನಾಪೋಕ್ಲು ನಗರದಲ್ಲಿ ನಡೆದಿದೆ. ದಿನಾಂಕ 06-11-2014 ರಂದು ಕೂಡಿಗೆ ನಿವಾಸಿ ನಾಗರಗೌಡ ಎಂಬವರು ಅವರ ತಂದೆ ಶಿವಲಿಂಗೇಗೌಡ, ತಾಯಿ ಲತಾ ಹಾಗೂ ತಮ್ಮ ಸಂಜಯ್‌ರವರೊಂದಿಗೆ ಅವರ ಆಟೋರಿಕ್ಷಾ ನಂ ಕೆಎ-12-ಬಿ-0439 ರಲ್ಲಿ ಎಮ್ಮೆಮಾಡು ದರ್ಗಾ ನೋಡುವ ಸಲುವಾಗಿ ಎಮ್ಮೆಮಾಡು ದರ್ಗಾಕ್ಕೆ ಬಂದು ಅಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ಸು ಬರುವಾಗ ನಾಪೋಕ್ಲು ನಗರದ ಶರ್ಪುರವರ ಮನೆ ಮುಂಬಾಗದಲ್ಲಿ ರಸ್ತೆಯಲ್ಲಿ ಎದುರುಗಡೆಯಿಂದ ಕೆಎ-12-ಎ-9735ರ ಒಂದು ಆಟೋರಿಕ್ಷಾವನ್ನು ಅದರ ಅದರ ಚಾಲಕ ಮರಂದೋಡ ಗ್ರಾಮದ ಗಣೇಶ್ ಎಂಬಾತನು ವೇಗವಾಗಿ ಚಾಲಿಸಿಕೊಂಡು ಬಂದು ನಾಗರ ಗೌಡರವರ ತಂದೆ ಓಡಿಸುತ್ತಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬಸ್ಸು ಡಿಕ್ಕಿ.
           ಕಾರಿಗೆ ಬಸ್ಸೊಂದು ಡಿಕ್ಕಿಯಾದ ಪರಿಣಾಮ ಕಾರು ಜಖಂಗೊಂಡ ಘಟನೆ ವಿರಾಜಪೇಟೆ ಬಳಿಯ ಬಾಳುಗೋಡು ಗ್ರಾಮದಲ್ಲಿ ನಡೆದಿದೆ.ದಿನಾಂಕ 06-11-14ರಂದು ರುದ್ರಗುಪ್ಪೆ ನಿವಾಸಿ ಕೆ.ಪಿ.ಅಯ್ಯಪ್ಪ ಎಂಬವರು ಅವರ ಬಾಪ್ತು ಕಾರು ಸಂಖ್ಯೆ ಕೆಎ-53-ಪಿ-2898 ರಲ್ಲಿ ಸ್ನೇಹಿತ ಅಪ್ಪಚ್ಚು ರವರನ್ನು ಜೊತೆಯಲ್ಲಿ ಕರೆದುಕೊಂಡು ಬೆಂಗಳೂರಿನಿಂದ ಹೊರಟು ಸಮಯ ರಾತ್ರಿ 12-30ಗಂಟೆಗೆ ವಿರಾಜಪೇಟೆಗೆ ತಲುಪಿ, ಊಟ ಮಾಡಲು ಸಲುವಾಗಿ ಪೆರುಂಬಾಡಿಯ ಮಾಮ್ಸ್ ಕಿಚನ್ ಗೆ ಹೋಗಿ ಅಲ್ಲಿ ಹೊಟೇಲ್ ಮುಚ್ಚಿದ್ದರಿಂದ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ಬಾಳುಗೋಡು ಗ್ರಾಮದ ದೇವಪ್ಪ ರವರ ತೋಟದ ಪಕ್ಕದಲ್ಲಿರುವ ಸಾರ್ವಜನಿಜಕ ರಸ್ತೆಯ ತಿರುವಿನಲ್ಲಿ ಸಮಯ ರಾತ್ರಿ 2-30ಗಂಟೆಗೆ ಎದುರುಗಡೆಯಿಂದ ಕೆಎ-01-ಎಸಿ-2237ರ ಪಿ.ಕೆ. ಟ್ರಾವೆಲ್ಸ್ ಬಸ್ಸಿನ ಚಾಲಕನು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿ ಕಾರಿನ ಮುಂಭಾಗ ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಜೂಜಾಟ ; ಆರು ಜನರ ಬಂಧನ 
          ಅಕ್ರಮವಾಗಿ ಜೂಜಾಡುತ್ತಿದ್ದ ಆರು ಜನರನ್ನು ಕುಶಾಲನಗರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ದಿನಾಂಕ 06/11/2014 ರಂದು ಕುಶಾಲನಗರದ ಐ ಬಿಯ ಹಿಂಬಾಗ ಕೆಲವು ವ್ಯಕ್ತಿಗಳು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದಾರೆಂದು ದೊರೆತ ಖಚಿತ ಮಾಹಿತಿ ಮೇರೆ ಕುಶಾಲನಗರ ಠಾಣಾಧಿಕಾರಿ ಅನೂಪ್‌ ಮಾದಪ್ಪನವರು  ಠಾಣಾ ಸಿಬ್ಬಂದಿಗಳೊಂದಿಗೆ ಐ ಬಿಯ ಹಿಂಬಾಗಕ್ಕೆ ತೆರಳಿದ ಮರದ ಕೆಳಗೆ ಮರೆಯಾಗಿ ಕುಳಿತು ಅಕ್ರಮವಾಗಿ ಜೂಜಾಡುತ್ತಿದ್ದ ಮಹೇಶ್‌, ರಾಜ, ಲೋಕೇಶ್‌, ಯೋಗೇಶ್‌, ಪ್ರದೀಪ್‌ ಮತ್ತು ಸುರೇಶ್‌ ಎಂಬವರನ್ನು  ಸಿಬ್ಬಂದಿಗಳೊಂದಿಗೆ ಸುತ್ತುವರಿದು ಬಂಧಿಸಿ ಜೂಜಾಟಕ್ಕೆ ಬಳಸಿದ ಪ್ಲಾಸ್ಟಿಕ್ ಚೀಲ, 52 ಇಸ್ಪಿಟ್ ಎಲೆಗಳು ಮತ್ತು ಪಣಕ್ಕಿಟ್ಟಿದ್ದ 13,415/- ರೂ ಹಣವನ್ನು  ಅಮಾನತ್ತು ಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ಪ್ರಕರಣ ದಾಖಲು 
       ಅಪ್ರಾಪ್ತ ಬಾಲಕಿಯೊಬ್ಬಳನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವ ಘಟನೆ ಪೊನ್ನಂಪೇಟೆ ಬಳಿಯ ಹೆಬ್ಬಾಲೆ - ಭದ್ರಗೊಳ ಗ್ರಾಮದ ನೆಹರು ಕಾಲೋನಿಯಲ್ಲಿ ನಡೆದಿದೆ. ಸುಮಾರು 8 ತಿಂಗಳ ಹಿಂದಿನಿಂದ ಗ್ರಾಮದ ನೆಹರು ಕಾಲೋನಿ ನಿವಾಸಿ ಪರಿಶಿಷ್ಟ ವರ್ಗದ ಯರವ ಜನಾಂಗಕ್ಕೆ ಸೇರಿದ 17 ವರ್ಷ ಪ್ರಾಯದ ಕುಮಾರಿ ಪಿ.ಜಿ.ಜ್ಯೋತಿಯನ್ನು ಆಕೆಯ ಮನೆಯ ಪಕ್ಕದ ವಾಸಿ ಆರೋಪಿ ಟಿ.ಕೆ.ಅರುಣನು ಆಕೆಯನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಆಕೆಯ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಲತ್ಕಾರದಿಂಧ ಅತ್ಯಾಚಾರ ನಡೆಸಿದ್ದು ನಂತರ ವಾರಕ್ಕೆ ಎರಡು ಮೂರು ಸಲ ಬಂದು ಆಗಾಗ್ಗೆ ಅತ್ಯಾಚಾರ ಮಾಡುತ್ತಿದ್ದು ಜ್ಯೋತಿಯು ಆರು ತಿಂಗಳ ಗರ್ಭವತಿಯಾಗಿದ್ದು ವಿವಾಹವಾಗಲು ಅರುಣನು ನಿರಾಕರಿಸಿದ್ದರಿಂದ ಈ ದಿನ ಜ್ಯೋತಿಯು ತಾಯಿಗೆ ವಿಚಾರವನ್ನು ತಿಳಿಸಿದ್ದು ಆಕೆಯ ತಾಯಿ ಜ್ಯೋತಿಯ ಸೋದರಮಾವ ಚಾತರವರಿಗೆ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Thursday, November 6, 2014

ಬೈಸಿಕಲ್‌ಗೆ ಮೋಟಾರ್‌ ಸೈಕಲ್‌ ಡಿಕ್ಕಿ, ಬಾಲಕಿಗೆ ಗಂಬೀರ ಗಾಯ:

ಶಾಲಾ ಬಾಲಕಿಯೊಬ್ಬಳು ಬೈಸಿಕಲ್‌ನಲ್ಲಿ ಶಾಲೆಗೆ ಹೋಗುತ್ತಿರುವಾಗ ವೇಗವಾಗಿ ಬಂದ ಮೋಟಾರ್‌ ಸೈಕಲ್‌ ಡಿಕ್ಕಿಯಾಗಿ ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರಸಂತೆಯ ಚಂಗಡಹಳ್ಳಿ ರಸ್ತೆಯಲ್ಲಿ ನಡೆದಿದೆ. ದಿನಾಂಕ 5-11-2014 ರಂದು ಬೆಳಿಗ್ಗೆ 11-30 ಗಂಟೆಗೆ ಶನಿವಾರಸಂತೆ ನಿವಾಸಿ ಭುವನೇಶ್‌ ಎಂಬವರ ಮಗಳು ಸಿಂಚನ ತನ್ನ ಬೈಸಿಕಲ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಹೆರೂರು ಗ್ರಾಮದ ನಿವಾಸಿ ರಜೀತ್‌ ಎಂಬ ವ್ಯಕ್ತಿ ತನ್ನ ಮೋಟಾರ್‌ ಸೈಕಲ್‌ನ್ನು ಅತೀ ವೇಗ ಮತ್ತುಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಸಿಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಬೈಸಿಕಲ್‌ನಲ್ಲಿ ಸವಾರಿ ಮಾಡುತ್ತಿದ್ದ ಬಾಲಕಿ ಸಿಂಚನಾ ಗಂಬೀರ ಗಾಯಗೊಂಡು ಆಕೆಯನ್ನುಚಿಕಿತ್ಸೆಯ ಸಂಬಂಧ ಹಾಸನ ಆಸ್ಪತ್ರೆಗೆ ಕ್ರೆದುಕೊಂಡು ಹೋಗಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.  

ಸಾಲ ಬಾದೆ, ವ್ಯಕ್ತಿಯ ಆತ್ಮಹತ್ಯೆ: 

ಸಾಲ ಬಾದೆಯಿಂದ ಮನನೊಂದು ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ಸಮೀಪದ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ಬಿ.ಶೆಟ್ಟಿಗೇರಿ ಗ್ರಾಮದ ವಾಸಿ ಹರೀಶ @ ಉತ್ತಪ್ಪ ಎಂಬವರು ದಿನಾಂಕ 3-10-2014 ರಿಂದ ತಮ್ಮ ಮನೆಯಿಂದ ಕಾಣೆಯಾಗಿದ್ದು, ದಿನಾಂಕ 5-11-2014 ರಂದು ಸದರಿಯವರ ಮೃತದೇಹವು ನಿಟ್ಟೂರು ಗ್ರಾಮದ ಎಂ. ವಿಠಲ ಎಂಬವರ ಕೆರೆಯಲ್ಲಿ ಪತ್ತೆಯಾಗಿದ್ದು, ಇವರು ಕೆಲವು ವ್ಯಕ್ತಿಗಳಿಂದ ಸಾಲವನ್ನು ಪಡೆದಿದ್ದ ವಿಚಾರದಲ್ಲಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದಿ ಸದರಿಯವರ ಪತ್ನಿ ಶ್ರೀಮತಿ ಬಿ.ಡಿ. ಅನಿತಾರವರು ನೀಡಿದ ದೂರಿನಮೇರೆಗೆ ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

2 ಲಕ್ಷ ರುಪಾಯಿ ಮೌಲ್ಯದ ಬ್ಯಾಟರಿ ಕಳವು: 

ಮೊಬೈಲ್‌ ಟವರ್‌ಗೆ ಅಳವಡಿಸಿದ ಬ್ಯಾಟರಿಗಳನ್ನು ಕಳ್ಳತನ ಮಾಡಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಗಾಳೀಬೀಡು ಕ್ಲಬ್‌ಮಹೀಂದ್ರ ಬಳಿಯಲ್ಲಿ ನಡೆದಿದೆ. ದಿನಾಂಕ 1-11-2014 ರಿಂದ 4-11-2014ರ 4-30 ಗಂಟೆಯ ನಡುವೆ ಮಡಿಕೇರಿ ತಾಲೋಕು ಗಾಳಿಬೀಡು ನಲ್ಲಿರುವ ಏರ್‌ಟೆಲ್‌ ಟವರ್‌ಗೆ ಅಳವಡಿಸಿದ ಸೆಲ್ಪ್ ನ ಮುಂಭಾಗಿಲಿನ ಬೀಗವನ್ನು ಕಬ್ಬಿಣದ ಚಿಲಕ ಸಮೇತ ತೆಗೆದು ಒಳನುಗ್ಗಿ ಸೆಲ್ಪ್‌ ನ ಒಳಗಡೆ ಇದ್ದ ಟವರಿಗೆ ಅಳವಡಿಸಿದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 24 ವಿಡೋಸ್ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಸೆಕ್ಯೂರಿಟಿ ಸೂಪರ್‌ವೈಸರ್‌ ಹೆಚ್‌.ಎಂ. ಶಿಶಿರ ಎಂಬವರು ನೀಡಿದ ದೂರಿನಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಮತ್ತೋರ್ವ ವ್ಯಕ್ತಿ ಗಾಜಿನ ಬಾಟಲಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಹೊದ್ದೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 5-11-2014 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಎಂ.ಬಾಡಗ ಗ್ರಾಮದ ನಿವಾಸಿ ಬಿ.ವಿ. ರವೀಂದ್ರ ಎಂಬವರ ಮೇಲೆ ಹೊದ್ದೂರು ಗ್ರಾಮದ ಅಭಿ ಎಂಬ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಬಿ.ಬಿ. ರವೀಂದ್ರರವರು ನೀಡಿದ ದೂರಿನ ಮೇರೆಗೆ ಮಡಿಕೇರಿಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಪಿಕ್‌ಅಪ್‌ ಜೀಪಿಗೆ ಮೋಟಾರ್‌ ಸೈಕಲ್‌ ಡಿಕ್ಕಿ, ಸವಾರರಿಬ್ಬರಿಗೆ ಗಾಯ:

ದಿನಾಂಕ 5-11-2014 ರಂದು ಕುಶಾಲನಗರದ ಕಡೆಯಿಂದ ಕೇರಳದ ಕಡೆಗೆ ಹೋಗುತ್ತಿದ್ದ ಪಿಕ್‌ಅಪ್‌ ಜೀಪಿಗೆ ಅಭ್ಯತ್‌ಮಂಗಲದ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್‌ ಸೈಕಲ್‌ ಸವಾರ ಸದರಿ ಮೋಟಾರ್‌ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಮತ್ತು ಹಿಂಬದಿ ಸವಾರರಿಬ್ಬರಿಗೂ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡಿರುತ್ತಾರೆ.  

ಅನಾರೋಗ್ಯದ ಹಿನ್ನಲೆ ವ್ಯಕ್ತಿ ಆತ್ಮಹತ್ಯೆ:

ಪಿ.ಎನ್. ಚಿಕ್ಕಣ್ಣ, ತಂದೆ: ನೆಲ್ಲಿ, ಪ್ರಾಯ: 50ವರ್ಷ, ಕೂಲಿ ಕೆಲಸ, ವಾಸ: ಮುರುವಂಡ ಸಂಜು,ರವರ ಲೈನ್ ಮನೆ, ಕೊಳ್ತೋಡು ಬೈಗೋಡು ಗ್ರಾಮ, ವಿರಾಜಪೇಟೆ ತಾಲ್ಲೂಕು ಇವರಿಗೆ ಸುಮಾರು ಒಂದು ವರ್ಷದಿಂದ ಹೊಟ್ಟೆ ನೋವು ಇದ್ದು, ಹೊಟ್ಟೆ ನೋವಿಗೆ ಔಷಧಿ ತೆಗೆದುಕೊಳ್ಳುತ್ತಿದ್ದರು ವಾಸಿಯಾಗದ್ದರಿಂದ ವಿಪರೀತ ಮದ್ಯಪಾನ ಮಾಡುತ್ತಿದ್ದು, ಇದೇ ವಿಚಾರದಲ್ಲಿ ಮನಸ್ಸಿಗೆ ಬೇಸರಗೊಂಡು ದಿನಾಂಕ: 05-11-14ರಂದು ರಾತ್ರಿ 7-30ಗಂಟೆಗೆ ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುತ್ತಾರೆಂದು ಸದರಿಯವರ ಪತ್ನಿ ಪಂಜರಿಎರವರ ಸಿ. ಮೀನಾರವರುನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

Wednesday, November 5, 2014

ದುಷ್ಕರ್ಮಿಗಳಿಂದ ಗುಂಡು ಹಾರಿಸಿ ವ್ಯಕ್ತಿಯ ಕೊಲೆ:

     ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವನನ್ನು ದಾರಿ ತಡೆದು ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ನಾಪೋಕ್ಲು ಪೊಲೀಸ್‌ ಠಾಣಾ ಸರಹದ್ದಿನ ಬಾವಲಿ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೋಕು ಕಿರಂದಾಡು ಗ್ರಾಮದ ನಿವಾಸಿ ಪಾಡಿಚೆಟ್ಟೀರ ಭೀಮಯ್ಯ ರವರ ಮಗ 36 ವರ್ಷದ ದಿನೇಶ್‌ ಎಂಬವರು ಪಾರಾಣೆಯಲ್ಲಿ ದೀನಸಿ ಅಂಗಡಿಯನ್ನು ನಡೆಸುತ್ತಿದ್ದು, ದಿನಾಂಕ 4-10-2014 ರಂದು ಎಂದಿನಂತೆ ರಾತ್ರಿ ತನ್ನ ಸ್ಕೂಟರ್‌ನಲ್ಲಿ ತನ್ನ ಮನೆಯ ಕಡೆಗೆ ಹೋಗುತ್ತಿದ್ದಾದ ಬಾವಲಿ ಜಂಕ್ಷನ್‌ನಲ್ಲಿ ಯಾರೋ ದುಷ್ಕರ್ಮಿಗಳು ರಸ್ತೆಗೆ ಅಡ್ಡಲಾಗಿ ಕೇಬಲ್‌ ವಯರ್‌ನ್ನು ಕಟ್ಟಿ ಆತನನ್ನು ಬೀಳಿಸಿ ಆತನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿನಲ್ಲಿ ಮುಳುಗಿ ಬಾಲಕಿ ಸಾವು:

    ವಿರಾಜಪೇಟೆ ತಾಲೋಕು ನಿಟ್ಟೂರು ಗ್ರಾಮದ ನಿವಾಸಿ ಪೂವಯ್ಯನವರ ಲೈನ್‌ ಮನೆಯಲ್ಲಿ ಅಸ್ಸಾಂ ಮೂಲದ ಮಹಿಳೆ ಅಸದ ಎಂಬವರು ತನ್ನ ಮೂವರು ಮಕ್ಕಳೊಂದಿಗೆ ವಾಸವಾಗಿದ್ದು, ದಿನಾಂಕ 3-11-2014 ರಂದು ಸದರಿ ಮಹಿಳೆಯ ಮಗಳು  6 ವರ್ಷದ ಎಲಿಜಾ ಎಂಬವಳು ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ಹೊಳೆಯಲ್ಲಿ ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಈ ಸಂಬಂಧ ಪೂವಯ್ಯನವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕ್ಷುಲ್ಲಕ ಕಾರಣಕ್ಕೆ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ:

   ನಡೆದುಕೊಂಡು ಹೋಗುತ್ತಿದ ಮೂವರು ವ್ಯಕ್ತಿಗಳ ದಾರಿ ತಡೆದು ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಹೈಸೊಡ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 3-11-2014 ರಂದು ಹೈಸೊಡ್ಲೂರು ಗ್ರಾಮದ ಕುಶಾಲಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಪಣಿಎರವರ ಕರಿಯರವರು ಮನು ಮತ್ತು ರಾಜು ರವರೊಂದಿಗೆ ಹತ್ತಿರದ ಹೊಳೆಗೆ ಬಟ್ಟೆಹೊಗೆಯಲೆಂದು ಹೋಗುತ್ತಿದ್ದಾಗ, ಅದೇ ಗ್ರಾಮದ ಬಿಲ್ಲವರ ರಮೇಶ ಎಂಬ ವ್ಯಕ್ತಿ ಅವರ ದಾರಿ ತಡೆದು, ಗದರಿಸಿ ಕತ್ತಿಯಿಂದ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಪಣಿಎರವರ ಕರಿಯ ಮತ್ತು ಮನುರವರಿಗೆ ತೀವ್ರ ಗಾಯಗಳಾಗಿ ಮೂಸೂರಿನ ಕೆ.ಆರ್‌. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಈ ಸಂಬಂಧ ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಸಾಲ ಬಾದೆಯಿಂದ ಅಂಚೆ ಇಲಾಖೆಯ ಸಿಬ್ಬಂದಿಯ ಆತ್ಮಹತ್ಯೆ:
      ಸಾಲಬಾದೆಯಿಂದ ಮನನೊಂದು ಅಂಚೆ ಇಲಾಖೆಯ ಪೋಸ್ಟ್‌ಮ್ಯಾನ್‌ ಒಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀಮಂಗಲ ಸಮೀಲದ ತೂಚಮಕೇರಿ ಗ್ರಾಮದಲ್ಲಿ ನಡೆದಿದೆ. ಶ್ರೀಮಂಗಲ ಠಾಣಾ ವ್ಯಾಪ್ತಿಯ ಬಲ್ಯಮಂಡೂರು ಅಂಚೆ ಕಛೇರಿಯಲ್ಲಿ ಪೋಸ್ಟ್‌ ಮ್ಯಾನ್‌ ಆಗಿ ಕೆಲಸ ನಿರ್ವಹಿಸುತ್ತಿರುವ ಕರುಂಬಯ್ಯ (44) ಎಂಬವರು ಕೆಲ ವ್ಯಕ್ತಿಗಳಿಂದ ಪಡೆದ ಸಾಲದ ಹಣಕ್ಕೆ ಹೆಚ್ಚಿನ ಬಡ್ಡಿಯ ಹಣವನ್ನು ವಸೂಲಿ ಮಾಡಿ ಪುನ ಬಡ್ಡಿಬೇಕೆಂದು ಕಿರುಕುಳ ನೀಡಿದ ವಿಚಾರದಲ್ಲಿ ಮತ್ತು ತಾನು ಕೆಲಸ ಮಾಡುತ್ತಿದ್ದ ಕಛೇರಿಯ ಪೋಸ್ಟ್‌ ಮಾಸ್ಟರ್‌ ಸಿ.ಸಿ.ಸೀತಮ್ಮ ಪೋಸ್ಟ್ ಮಾಸ್ಟರ್ ಸೀತಮ್ಮರವರ ಹಣದ ದುರುಪಯೋಗದ ಆರೋಪಣೆಯಲ್ಲಿ ಬಾಗಿ ಮಾಡಿದ ವಿಚಾರದಲ್ಲಿ ನೊಂದು ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸುಂಟಿಕೊಪ್ಪ ಪೊಲೀಸರು ಮಾಚಿಮಾಡ ಸುಜನ್, ಕೊಟ್ಟಂಗಡ ಜೋಯಪ್ಪ, ಕೊಳ್ಳಿಮಾಡ ಸುರೇಂದ್ರ, ಚಿಂಡಮಾಡ ನವೀನ್, ಮೇಚಮಾಡ ದಿವ್ಯ, ಸಿ.ಸಿ. ಸೀತಮ್ಮ ರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಹೆ

      ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಜಿಗುಪ್ಸೆಗೊಂಡು ವಿಷ ಸೇವಿಸಿ ಸಾವನಪ್ಪಿದ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಗಾಂಧೀನಗರದ ವಾಸಿ ಅರುಣ ಎಂಬ ವ್ಯಕ್ತಿ ಸುಮಾರು 2-3 ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ವಾಸಿಯಾಗದೆ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 04.11.2014 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡು ಸದರಿಯವರನ್ನು ಚಿಕಿತ್ಸೆಗೆ ಮಂಗಳೂರಿನ ಗ್ಲೋಬಲ್‌ ಮಲ್ಟಿ ಸ್ಪೆಸಾಲಿಟಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಫಲಕಾರಿಯಾಗದೆ ಈ ದಿನ ದಿನಾಂಕ 05.11.14 ರಂದು ಸಮಯ 3:00 ಎ.ಎಂ ಗೆ ಮೃತ ಪಟ್ಟಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡಿರುತ್ತಾರೆ.

Tuesday, November 4, 2014

ಮದ್ಯಪಾನದ ಅಮಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ:
        ಅತಿಯಾದ ಮದ್ಯಪಾನ ಮಾಡಿ ಮದ್ಯದ ಅಮಲಿನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಠಾಣ ಸರಹದ್ದಿನ ಅತ್ತೂರು-ನಲ್ಲೂರು ಗ್ರಾಮದಲ್ಲಿ ನಡೆದಿದೆ. ಅತ್ತೂರು-ನಲ್ಲೂರು ಗ್ರಾಮದಲ್ಲಿ ವಾಸವಾಗಿರುವ ಚಿನ್ನಸ್ವಾಮಿ ಮಾದಯ್ಯ ಎಂಬ ವ್ಯಕ್ತಿ ದಿನಾಂಕ 2-11-2014 ರಂದು ಅತಿಯಾಗಿ ಮದ್ಯಪಾದನ ಮಾಡಿ ಅಕ್ಕಪಕ್ಕದ ಮನೆಯವರಲ್ಲಿ ಜಗಳವಾಡಿಮದ್ಯದ ಅಮಲಿನಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅತಿಯಾದ ಮದ್ಯಪಾನ ಮಾಡಿದ ವ್ಯಕ್ತಿಯ ಸಾವು:
     ವ್ಯಕ್ತಿಯೋರ್ವ ದಾರಿಯಲ್ಲಿ ಮೃತಪಟ್ಟು ಬಿದ್ದಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಹಾರೆಹೊಸೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 3-11-2014 ರಂದು ಶನಿವಾರಸಂತೆಯ ಗೌಡೇನಹಳ್ಳಿ ನಿವಾಸಿ ಶಾಂತಯ್ಯ ಎಂಬುವವರ ಮಗ ಗಿರೀಶ ಹಾರೆಹೊಸೂರು ಗ್ರಾಮದಲ್ಲಿರುವ ಲಿಂಗರಾಜು ಎಂಬವರ ಅಂಗಡಿಯ ಮುಂದೆ ಸತ್ತು ಬಿದ್ದಿದ್ದು, ಆತನಿಗೆ ವಿಪರೀತ ಮದ್ಯ ಕುಡಿಯುವ ಚಟವಿರುವುದಾಗಿ ತಿಳಿದುಬಂದಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  
ಬೈಕ್‌ ಅಪಘಾತ ಒಬ್ಬನಿಗೆ ಗಾಯ:
     ಮೋಟಾರ್‌ ಸೈಕಲನ್ನು ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಶನಿವಾರಸಂತೆ ಠಾಣಾ ವ್ಯಾಪ್ತಿಯ ಸಂಪಿಗೆದಾಳು ಗ್ರಾಮದಲ್ಲಿ ಮೋಟಾರ್‌ ಸೈಕಲ್‌ ಅಪಘಾತಕ್ಕೀಡಾಗಿ ಹಿಂಬದಿ ಸವಾರ ಕಾಳಿಂಗಪ್ಪ ಎಂಬವರು ಗಾಯಗೊಂಡಿದ್ದು, ಮೋಟಾರ್‌ ಸೈಕಲ್‌ ಸವಾರ ಹಾಸನ ಜಿಲ್ಲೆ, ಹುಲುಗು ಗ್ರಾಮದ ನಿವಾಸಿ ಸುಬ್ರಮಣಿ ಎಂಬವರ ವಿರುದ್ದ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ.

 ವ್ಯಕ್ತಿಗೆ ಕೊಲೆ ಬೆದರಿಕೆ, ಪ್ರಕರಣ ದಾಖಲು:

     ಶನಿವಾರಸಂತೆ ಠಾಣಾ ಸರಹದ್ದಿನ ನಿಲುವಾಗಿಲು ಗ್ರಾಮದಲ್ಲಿ ವಾಸವಾಗಿರುವ ಎನ್‌.ಎನ್‌. ಧರ್ಮಪ್ಪ ಎಂಬವರ ಮಗ ಎಂ.ಡಿ. ಲಿಂಗರಾಜು ಎಂಬವರು ಬೆಂಗಳೂರಿನಲ್ಲಿ ನೆಲೆಸಿದ್ದು, ಅವರ ಮೊಬೈಲ್‌ ಗೆ ಅನಾಮದೇಯ ವ್ಯಕ್ತಿ ದೂರವಾಣಿ ಮೂಲಕ ಕೊಲೆಬೆದಕಿಕೆ ಹಾಕಿದ್ದು, ಇವರಿಗೆ ಅದೇ ಗ್ರಾಮದ ರವಿ ಮತ್ತು ಮನು @ವಿಶ್ವನಾಥ ಎಂಬ ವ್ಯಕ್ತಿಗಳು ಕುಮ್ಮಕ್ಕು ನೀಡಿರುತ್ತಾರೆಂದು ಎನ್.ಎನ್‌. ಧರ್ಮಪ್ಪನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  

Monday, November 3, 2014

ಶಾಲೆಯ ಬೀಗ ಒಡೆದು ಕಳ್ಳತನಕ್ಕೆ ಯತ್ನ , ಪ್ರಕರಣ ದಾಖಲು:  

    ಶಾಲೆಯ ಹೆಂಚುಗಳನ್ನು ತೆಗೆದು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಕುಟ್ಟ ಪಟ್ಟಣದಲ್ಲಿ ನಡೆದಿದೆ. ದಿನಾಂಕ 01-11-2014 ರಂದು ಬೆಳಿಗ್ಗೆ 11.30 ಗಂಟೆಯಿಂದ ದಿನಾಂಕ 03-11-2014 ರಂದು ಬೆಳಿಗ್ಗೆ 09.00 ಗಂಟೆಯ ಮಧ್ಯದ ಅವಧಿಯಲ್ಲಿ ವಿರಾಜಪೇಟೆ ತಾಲ್ಲೂಕು ಕುಟ್ಟ ಗ್ರಾಮದಲ್ಲಿರುವ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ ಶಿಕ್ಷಕರ ಕೊಠಡಿಯ ಹೆಂಚನ್ನು ತೆಗೆದು ಒಳ ನುಗ್ಗಿ ಕಂಪ್ಯೂಟರ್ ಕೊಠಡಿಯ ಕಿಟಕಿಗಳ ಗಾಜನ್ನು ಒಡೆದು, ಬೀಗ ಒಡೆದು ಕಳ್ಳತನ ಮಾಡಲು ಪ್ರಯತ್ನಿಸಿದ್ದು, ಈ ಕೃತ್ಯವನ್ನು ಈ ಹಿಂದೆ ಅದೇ ಶಾಲೆಯಲ್ಲಿ ಓದುತ್ತಿದ್ದ ಸುಬ್ರಮಣ್ಯನ್ @ ಕುಟ್ಟಪ್ಪಿ ಎಂಬಾತನು ಮಾಡಿರಬಹುದಾಗಿ ಸಂಶಯವಿರುತ್ತದೆ ಎಂದು ಸದರಿ ಶಾಲೆಯ ಮುಖ್ಯೋಪಾದ್ಯಾಯಿನಿಯಾದ ಪಿ.ಡಿ. ಮುತ್ತಮ್ಮನವರು ನೀಡಿದ ದೂರಿನ  ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಸಿಕೊಂಡಿರುತ್ತಾರೆ. 

ಮೋಟಾರ್‌ ಸೈಕಲ್‌ಗೆ ಕಾರು ಡಿಕ್ಕಿ, ಇಬ್ಬರಿಗೆ ಗಾಯ:

    ಮೋಟಾರ್‌ ಸೈಕಲ್‌ಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಕುಶಾಲನಗರ ಠಾಣಾ ಸರಹದ್ದಿನ ಚಿಕ್ಕತ್ತೂರು  ಗ್ರಾಮದಲ್ಲಿ  ನಡೆದಿದೆ. ದಿನಾಂಕ 2-11-2014 ರಂದು ಕುಶಾಲನಗರ ಠಾಣಾ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ  ಫಾರೆಸ್ಟ್‌ ರಸ್ತೆಯಲ್ಲಿ ಕೃಷ್ಣೇಗೌಡ ಎಂಬ ವ್ಯಕ್ತಿಯು ತನ್ನ ಬಾಪ್ತು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎದುರುಗಡೆಯಿಂದ ಬರುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಹಾಗು ಹಿಂಬದಿ ಸವಾರ ಗಾಯಗೊಂಡಿದ್ದು, ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಜಲಪಾತಕ್ಕೆ ಬಿದ್ದು ಇಂಜಿನಿಯರ್‌ ವಿದ್ಯಾರ್ಥಿಯ ದುರ್ಮರಣ:

     ಜಲಪಾತ ವೀಕ್ಷಿಸಲು ಹೋದ ಇಂಜಿನಿಯರ್‌ ವಿದ್ಯಾರ್ಥಿನಿ ಕಾಲು ಜಾರಿ ಜಲಪಾತಕ್ಕೆ ಬಿದ್ದು ಸಾವನಪ್ಪಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಮಲ್ಲಳ್ಳಿ ಜಲಪಾತದಲ್ಲಿ ಸಂಭವಿಸಿದೆ. ದಿನಾಂಕ 2-11-2014 ರಂದು ಹಾಸನ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವಿದ್ಯಾರ್ಥಿಗಳು ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತ ವೀಕ್ಷಿಸಲು ತೆರಳಿದ್ದು, ತೇಜಶ್ರೀ ಎಂಬಾಕೆ ಜಲಪಾತದ ನೀರಿನಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು, ಸಾವಿಗೀಡಾಗಿದ್ದು, ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Sunday, November 2, 2014

ಕತ್ತು ಕುಯ್ದು ವೃದ್ದೆಯ ಕೊಲೆ, ಚಿನ್ನಾಭರಣ ಮತ್ತು ನಗದು ಸುಲಿಗೆ:

    ದುಷ್ಕರ್ಮಿಗಳು ಮನೆಗೆ ನುಗ್ಗಿ ವೃದ್ದೆಯ ಕತ್ತು ಕುಯ್ದು ಕೊಲೆ ಮಾಡಿ   ಕರಿಮಣಿಸರ ಹಾಗು ಮನೆಯಿಂದ ಹಣ  ದೋಚಿದ ಘಟನೆ ಮತ್ತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 1/11/2014ರಂದು ರಾತ್ರಿ ಸಮಯ 08.30ಗಂಟೆಯಿಂದ 10.00ಗಂಟೆಯ ನಡುವಿನ ಸಮಯದಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆಯ ಸರಹದ್ದಿನ ಮತ್ತೂರು ಗ್ರಾಮದ ಕೆ.ಜಿ. ಸುಬ್ಬಯ್ಯ ಎಂಬವರ ಅಕ್ಕ ಪಾರ್ವತಿರವರ ವಾಸದ ಮನೆಯ ಮತ್ತು ಅಂಗಡಿಯ ಮನೆಯಲ್ಲಿ ಯರೋ ದುಷ್ಕರ್ಮಿಗಳು ನುಗ್ಗಿ ಸದರಿ ಪಾರ್ವತಿ(65) ರವರ ಕುತ್ತಿಗೆ ಕುಯ್ದು ಕೊಲೆ ಮಾಡಿ ಅವರ ಕುತ್ತಿಗೆಯಲ್ಲಿ ಇದ್ದ ಸುಮಾರು 20 ವರ್ಷದ ಹಳೇಯ ರೂ 10,000 ಮೌಲ್ಯದ ಒಂದು ಪವನ್ ತೂಕದ ಚಿನ್ನದ ಕರಿ ಮಣಿ ಸರ ಮನೆಯ ಗ್ರಾಡೇಜು ಬೀರುನಲ್ಲಿ ಹಣ ಮತ್ತು ಅಂಗಡಿ ಟೇಬಲ್ ನ ಡ್ರಾದಲ್ಲಿದ್ದ ಹಣವನ್ನು ದೋಚಿಕೊಂಡು ಹೋಗಿದ್ದು, ಕೆ.ಜಿ. ಸುಬ್ಬಯ್ಯನವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ವ್ಯಕ್ತಿಗಳಿದ ಕೊಲೆ ಬೆದರಿಕೆ, ಪ್ರಕರಣ ದಾಖಲು:

   ವಿರಾಜಪೇಟೆ ತಾಲೋಕು ಬಾಡಗರಕೇರಿ ಗ್ರಾಮದ ನಿವಾಸಿ ನಿಖಿತ್‌ಎಂಬವರಿಗೆ ಅದೇ ಗ್ರಾಮದ ನಿವಾಸಿಗಳಾದ ಜೋನಿರ ಜೀವನ್‌, ಕಾಳಯ್ಯ, ನೀಲಮ್ಮ, ಡಿಕ್ಕಿ ಮತ್ತು ಜೋನಿರ ಮಧುರವರುಳಗು ಕೊಲೆ ಮೊಕದ್ದಮೆಯನ್ನು ವಾಪಾಸುಪಡೆಯುವಂತೆ ಒತ್ತಾಯಿಸಿ ಆ ವಿಚಾರದಲ್ಲಿ ತಮಗೂ ಹಾಗು ತಮ್ಮ ಮನೆಯವರಿಗೂ ಕೊಲೆ ಬೆದರಿಕೆ ಒಡ್ಡುತ್ತಿದ್ದು, ಅವರ ವಿರುದ್ದ ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 

ನಿಯಂತ್ರಣ ಕಳೆದ ಕಾರು ಮರಕ್ಕೆ ಡಿಕ್ಕಿ, ಅಪಾಯದಿಂದ ಪ್ರಯಾಣಿರು ಪಾರು:

    ಬೆಂಗಳೂರಿನ ನಿವಾಸಿಗಳಾದ ಮಂಜೇಶ ಎಂಬವರು 4 ಮಂದಿ ಸ್ನೇಹಿತರೊಂದಿಗೆ   ದಿನಾಂಕ 1-11-2014 ರಂದು ಮಡಿಕೇರಿಗೆ ಪ್ರವಾಸಕ್ಕೆ ಬಂದಿದ್ದು,  ಭಾಗಮಂಡಲಕ್ಕೆ ತೆರಳುವ ಸಮಯದಲ್ಲಿ ಅವರ ವಾಹನಕ್ಕೆ ಹಸುವೊಂದು ಆಕಸ್ಮಿಕವಾಗಿ ಅಡ್ಡ ಬಂದು ಗಾಡಿ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಅಪ್ಪಳಿಸಿದ ಪರಿಣಾಮ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವರು ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿರುತ್ರಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಲಾರಿಅವಘಡ. ಇಬ್ಬರಿಗೆ ಗಾಯ:

   ಲೋಡ್‌ ಲಾರಿಯೊಂದ ಅಪಘತಕ್ಕೀಡಾಗಿ  ಚಾಲಕ ಸೇರಿದಂತೆ  ವ್ಯಕ್ತ್ರಿ ಪ್ರಾಣಾಪಾಯದಿಂದ ಪಾರಾದ ಘಟನೆ ವಿರಾಜಪೇಟೆ  ಸಮೀಪದ ಮಾಕುಟ್ಟದಲ್ಲಿ ನಡೆದಿದೆ.  ದಿನಾಂಕ 1-11-2014 ರಂದು ಆಂದ್ರಪ್ರದೇಶದಿಂದ ಕೇರಳದ ಕಡೆಗೆ ತೆರಳುತ್ತಿದ್ದ ಲಾರಿಯೊಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ವಾಟೆಕೊಲ್ಲಿ, ಮಾಕುಟ್ಟ ಎಂಬಲ್ಲಿ ಅಪಘಾತಕ್ಕೀಡಾಗಿದ್ದು, ಸದರಿ ಲಾರಿಯಲ್ಲಿದ್ದ ಪಿಂಚಲಯ್ಯ ಹಾಗು ಲಾರಿ ಚಾಲಕ ಶೇಕ್‌ಮುಸ್ತಾನ ಎಂಬವರಿಗೆ ಗಾಯಗಳಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

ನೀರಿನ ವಿಚಾರಲ್ಲಿ ಮಹಿಳೆ ಮೇಲೆ ಹಲ್ಲೆ:

ಮಹಿಳೆಯೊಬ್ಬರ ಮೇಲೆ    ನೀರು ತೆಗೆದುಕೊಂಡು ಹೋದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಹೆಮ್ಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 31-10-2014 ರಂದು ಹೆಮ್ಮಾಡು ಗ್ರಾಮದ ನಿವಾಸಿ ರಾಣೆ ಎಂಬ ಮಹಿಳೆಯ ಮೇಲೆ ಅದೇ ಗ್ರಾಮದವರಾದ ಗೊಂಬೆ,ಕೃತಿಕಾ, ಮತ್ತು ದೇವಕ್ಕಿ ಎಂಬವರು ನೀರಿನ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Saturday, November 1, 2014

ಮಹಿಳೆಯ ಮೇಲೆ ದಾರಿ ತಡೆದು ಹಲ್ಲೆ
          ಮಹಿಳೆಯೊಬ್ಬರನ್ನು ದಾರಿ ತಡೆದು ಹಲ್ಲೆ ಮಾಡಿದ ಘಟನೆ ಶ್ರೀಮಂಗಲ ಬಳೀಯ ಬೆಳ್ಳೂರು ಗ್ರಾಮದ ಹೆಮ್ಮಾಡುವಿನಲ್ಲಿ ನಡೆದಿದೆ. ದಿನಾಂಕ 31/10/2014ರ ಸಂಜೆ ಬೆಳ್ಳೂರು ಗ್ರಾಮದ ಹೆಮ್ಮಾಡುವಿನ ಅಂಗನವಾಡಿ ಕಾರ್ಯಕರ್ತೆ ಗೊಂಬೆರವರು ಅಂಗನವಾಡಿಗೆ ಹೋಗುವ ಸಮಯದಲ್ಲಿ ಅದೇ ಗ್ರಾಮದ ನಿರ್ಮಲ ಮತ್ತು ರಾಣಿ ಎಂಬುವವರು ಅವರನ್ನು ದಾರಿ ತಡೆದುಹಳೆ ವೈಷಮ್ಯದಿಂದ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿದ್ಯುತ್‌ ಮೋಟಾರು ಮತ್ತು ವೈರು ಕಳವು 
       ಸರ್ವಿಸ್‌ ಸ್ಟೇಷನ್‌ ಒಂದರ ಬೀಗ ಮುರಿದು ವಿದ್ಯುತ್‌ ಮೋಟಾರು ಮತ್ತು ವಯರು ಕಳವು ಮಾಡಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 30/10/2014ರಂದು ರಾತ್ರಿ ವೇಳೆ ಗೋಣಿಕೊಪ್ಪ ನಗರದ ಪ್ರಿಯಾ ಸರ್ವಿಸ್‌ ಸ್ಟೇಷನ್‌ನ ರೋಲಿಂಗ್‌ ಷಟರ್‌ನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ರೂ.22,000/- ಬೆಲೆ ಬಾಳುವ 5 ಹೆಚ್‌ಪಿಯ ಮೋಟಾರು ಮತ್ತು ವಯರುಗಳನ್ನು ಕಳವು ಮಾಡಿರುವುದಾಗಿ ಮಾಲೀಕ ಕೆ.ಎಂ.ಕಾವೇರಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕರಿಮೆಣಸು ಬಳ್ಳಿ ನಾಶ : ಪ್ರಕರಣ ದಾಖಲು 
        ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕರಿಮೆಣಸು ಬಳ್ಳಿಗಳನ್ನು ಕಡಿದು ನಾಶ ಮಾಡಿದ ಘಟನೆ ವಿರಾಜಪೇಟೆ ಬಳಿಯ 1ನೇ ರುದ್ರಗುಪ್ಪೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 29/10/2014ರಂದು ರುದ್ರಗುಪ್ಪೆ ನಿವಾಸಿ ಕೊಟ್ರಂಡ ಕುಟ್ಟಪ್ಪ ಎಂಬವರು ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಸಮಾರಂಭವೊಂದಕ್ಕೆ ಹೋಗಿದ್ದು ಆ ಸಮಯದಲ್ಲಿ ಕುಟುಂಬದವರೇ ಆದ ಕೊಟ್ರಂಡ ದೇವಯ್ಯ ಎಂಬವರು ಕುಟ್ಟಪ್ಪನವರ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು 16 ಕರಿಮೆಣಸು ಬಳ್ಳಿಗಳನ್ನು ಕಡಿದು ಲಕ್ಷಾಂತರ ರೂಪಾಯಿಗಳಷ್ಟು ನಷ್ಟವುಂಟು ಮಾಡಿದ್ದಾರೆನ್ನಲಾಗಿದ್ದು ಜಾಗದ ವಿಚಾರದಲ್ಲಿದ್ದ ಹಳೆ ದ್ವೇಷವೇ ಈ ಕೃತ್ಯಕ್ಕೆ ಕಾರಣವೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ 
      ಜೀವನದಲ್ಲಿ ನೊಂದು ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 30/10/2014ರಂದು ಮಕ್ಕಂದೂರು ನಿವಾಸಿ ಶ್ರೀನಿವಾಸ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.