Wednesday, December 31, 2014

ಬೈಕ್‌ ಡಿಕ್ಕಿ ಶಾಲಾ ಬಾಲಕನಿಗೆ ಗಾಯ: .

      ಬಾಗಮಂಡಲ ನಿವಾಸಿ ಎ.ಯು. ಕವಿಪ್ರಸಾದ್‌ ಎಂಬವರ  ಮಗ ಪ್ರಾಯ 5  ವರ್ಷದ ತ್ರಿಶೂಲ್ ನನ್ನು  ಭಾಗಮಂಡಲದ ಸರಕಾರಿ ಪ್ರಾಥಾಮಿಕ ಶಾಲೆಗೆ ಕಳುಹಿಸುತ್ತಿದ್ದು, ದಿನಾಂಕ 29-12-14 ರಂದು ಶಾಲಾ ಅಧ್ಯಾಪಕರು ಶಾಲಾ ಮಕ್ಕಳನ್ನು ಮದ್ಯಾಹ್ನದ ಸಮಯದಲ್ಲಿ ಭಗಂಡೇಶ್ವರ ದೇವಾಲಯದ ಅಯ್ಯಪ್ಪ ಸ್ವಾಮಿ ಪೂಜೆಗೆ ಕರೆದುಕೊಂಡು ಹೋಗಿದ್ದು , 02-00 ಪಿ.ಎಂಗೆ ಊಟ ಮಾಡಿ ಸಂಗಮದ ಬಳಿ ರಸ್ತೆ ದಾಟುತ್ತಿರುವಾಗ್ಗೆ  ಒಬ್ಬ ಅಪರಿಚಿತ ಬೈಕ್ ಸವಾರನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಚಾಲನೆ ಮಾಡಿಕೊಂಡು ಬಂದು ಬಾಲಕ ತ್ರಿಶೂಲ್‌ನಿಗೆ  ಡಿಕ್ಕಿಪಡಿಸಿದ ಪರಿಣಾಮ ಸದರಿ ಬಾಲಕ ರಸ್ತೆಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ವಾಹನ ಅಪಘಾತ ವ್ಯಕ್ತಿಗೆ ಗಾಯ:

     ಸೋಮವಾರಪೇಟೆ ತಾಲೋಕು ಕರ್ಕಳ್ಳಿ ಗ್ರಾಮದ ಕೆ.ಟಿ. ಸುಭಾಷ್‌ ಎಂಬವರು ತಮ್ಮ ಬಾಪ್ತು ಟಿಪ್ಪರ್‌ ವಾಹನದಲ್ಲಿ  ಐಗೂರು ಗ್ರಾಮದಿಂದ ಸೋಮವಾರಪೇಟೆ ಕಡೆಗೆ ಹೋಗುತ್ತಿದ್ದಾಗ ಸೋಮವಾರಪೇಟೆ ಕಡೆಯಿಂದ ಬಂದಂತಹ ಓಮ್ನಿ ವ್ಯಾನ್‌ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಟಿಪ್ಪರ್‌ ಚಾಲಕ ಗಾಯಗೊಂಡಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.  

Tuesday, December 30, 2014

ಬೆಂಕಿ ತಗುಲಿ ಮಹಿಳೆ ಸಾವು:
     ಮಹಿಳೆಯೊಬ್ಬರು ಆಕಸ್ಮಿಕ ಬೆಂಕಿ ತಗುಲಿ ಸಾವನಪ್ಪಿದ ಘಟನೆ ಮಡಿಕೇರಿ ಹತ್ತಿರದ ಕಡಗದಾಳು ಗ್ರಾಮದಲ್ಲಿ ನಡೆದಿದೆ. ಕಡಗದಾಳು ಗ್ರಾಮದ ನಿವಾಸಿ ಶ್ರೀಮತಿ ಇಂದಿರಾ ಎಂಬವರ ತಾಯಿ 48 ವರ್ಷ ಪ್ರಾಯದ ನಾಗಮ್ಮರವರು ದಿನಾಂಕ 26-12-2014 ರಂದು ಸಮಯ ಅಂದಾಜು 04-30 ಪಿ ಎಂ ಗೆ ಅಡಿಗೆ ಮನೆಯಲ್ಲಿ ಒಲೆಗೆ ಬೆಂಕಿ ಹೊತ್ತಿಸುವಾಗ್ಗೆ ಆಕಸ್ಮಿಕವಾಗಿ ಬೆಂಕಿ ಧರಿಸಿದ್ದ ನೈಲಾನ್ ಸೀರೆಗೆ ಹೊತ್ತಿಕೊಂಡು ತೀವ್ರವಾಗಿ ಗಾಯಗೊಂಡ ಸದರಿ ನಾಗಮ್ಮನವರು ಮಡಿಕೇರಿ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ದಿನಾಂಕ 30-12-2014 ಸಾವನಪ್ಪಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೈಕ್‌ ಡಿಕ್ಕಿ ಪಾದಾಚಾರಿಗೆ ಗಾಯ:

     ಮಡಿಕೇರಿ ತಾಲೋಕು 2ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ಶ್ರೀಮತಿ ಲೀಲಾವತಿ ಎಂಬವರು ದಿನಾಂಕ 29-12-2014 ರಂದು ಸಮಯ 08-45 ಎಎಂಗೆ ತೋಟಕ್ಕೆ ಕೆಲಸದವರನ್ನು ಕರೆಯುವ ಸಲುವಾಗಿ ತನ್ನ ಮನೆಯಿಂದ ಹೊರಟು ಮಡಿಕೇರಿ, ಮಂಗಳೂರು ಸಾರ್ವಜನಿಕ ತಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ 2 ಮೊಣ್ಣಂಗೇರಿ ಗ್ರಾಮದ ಬಳಿ ಹಿಂದಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕೆಎ-19-ಇಎ-8701 ರ ಮೋಟಾರ್‌ ಸೈಕಲಿನ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾಡಾನೆದಾಳಿ ಮಹಿಳೆ ಸಾವು:

      ವಿರಾಜಪೇಟೆ ತಾಲೋಕು ಕದನೂರು ಗ್ರಾಮದ ನಿವಾಸಿ ಪುಟ್ಟಿಚಂಡ ಪೊನ್ನಮ್ಮ (70) ನವರು ದಿನಾಂಕ 29-12-2014 ರಂದು ಬಾಡಗ ಬಾಣಂಗಾಲ ಗ್ರಾಮದ ತಮ್ಮ ಮಗಳ ಮನೆಗೆ ಹೋಗಿ ಮನೆಯಿಂದ ಮುಖ್ಯ ರಸ್ತೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾಡಾನೆಯೊಂದು ದಾಳಿ ಮಾಡಿ ಸಾವನಪ್ಪಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಸ್ನಾನ ಮಾಡುತ್ತಿದ್ದ ವ್ಯಕ್ತಿ ಕೆರೆಯ ನೀರಿನಲ್ಲಿ ಮುಳುಗಿ ಸಾವು:

    ದಿನಾಂಕ 28-12-2014 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾನನಕಾಡು ಕಾಫಿ ತೋಟದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಪ್ರಕಾಶ ಎಂಬಾತ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಆಸ್ಮಿಕ ಬೆಂಕಿ ತಗುಲಿ ಮಹಿಳೆಯ ದುರ್ಮರಣ:

     ದಿನಾಂಕ 28/12/14 ರಂದು ಬೆಳಿಗ್ಗೆ 10.15 ಗಂಟೆ ಸಮಯದಲ್ಲಿ ಶ್ರೀಮತಿ ನಿವೀತ ಎಂಬ ಮಹಿಳೆ ಮತ್ತೂರು ಗ್ರಾಮದ ತನ್ನ ಗಂಡನ ಮನೆಯಲ್ಲಿ ನೀರು ಕಾಯಿಸುವ ಒಲೆಗೆ ಬೆಂಕಿ ಹಚ್ಚುವ ಸಲುವಾಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವಾಗ ಆಕಸ್ಮಿಕವಾಗಿ ಬಟ್ಟೆಗೆ ಬೆಂಕಿ ತಗುಲಿ ಹೊತ್ತಿಕೊಂಡ ಪರಿಣಾಮ ನಿವೀತಾರವರ ಮುಖ ತಲೆ, ಕೈ ಕಾಲು ಮತ್ತು ಎದೆಯ ಭಾಗಕ್ಕೆ ಸುಟ್ಟ ಗಾಯಗಳಾಗಿದ್ದು, ಗೋಣಿಕೊಪ್ಪಲಿನ ಲೋಪಮುದ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಬೃಂದಾವನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ್ಗೆ ದಿನಾಂಕ 29/12/14 ರಂದು ಬೆಳಿಗ್ಗೆ 6.00 ಗಂಟೆಗೆ ಸದರಿ ಶ್ರೀಮತಿ ನಿವೀತಾರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, December 29, 2014

 ಮಹಿಳೆಗೆ ಮೋಟಾರು ಸೈಕಲ್‌ ಡಿಕ್ಕಿ 
         ಮಹಿಳೆಯೊಬ್ಬರಿಗೆ ಮೋಟಾರು ಸೈಕಲ್‌ ಒಂದು ಡಿಕ್ಕಿಯಾದ ಘಟನೆ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 29-12-2014 ರಂದು ಬೆಳಿಗ್ಗೆ ಎರಡನೇ ಮೊಣ್ಣಂಗೇರಿ ನಿವಾಸಿ ಲೀಲಾವತಿ ಎಂಬವರು  ತೋಟಕ್ಕೆ ಕೆಲಸದವರನ್ನು ಕರೆಯುವ ಸಲುವಾಗಿ ತನ್ನ ಮನೆಯಿಂದ ಹೊರಟು ಮಡಿಕೇರಿ, ಮಂಗಳೂರು ಸಾರ್ವಜನಿಕ ತಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ 2 ಮೊಣ್ಣಂಗೇರಿ ಗ್ರಾಮದ ಬಳಿ ಹಿಂದಿನಿಂದ ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕೆಎ-19-ಇಎ-8701 ರ ಮೋಟಾರ್‌ ಸೈಕಲಿನ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲೀಲಾವತಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ಕೆಳಗೆ ಬಿದ್ದು ಗಾಯಗಳಾಗಿದ್ದು, ಮೋಟಾರು ಸೈಕಲ್‌ ಸವಾರನು ಬೈಕನ್ನು ನಿಲ್ಲಿಸದೆ ಪರಾರಿಯಾಗಿರುವುದಾಗಿ ನೀಡಿದ ದೂರಿನೆ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ
           ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಸಮೀಪದ ಬೊಳ್ಳುಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 28-12-14ರಂದು ಬೊಳ್ಳುಮಾಡು ನಿವಾಸಿ ಪಾಲಚಂಡ ರೇವತಿ ಎಂಬವರು ಬೊಳ್ಳುಮಾಡು ನಿವಾಸಿ  ಚಿಟ್ಟಿಯಪ್ಪ ಎಂಬವರ ತಾಯಿಯಾದ ಕಾಮವ್ವರವರನ್ನು ಮಾತನಾಡಿಸಿಕೊಂಡು ಬರಲು ಕಾಮವ್ವರವರ ಮನೆಗೆ ಹೋಗಿ ಅವರನ್ನು ಮಾತನಾಡಿಸಿ ವಾಪಾಸ್ಸು ಮನೆಯ ಹತ್ತಿರ ತಲುಪುವಾಗ ಚಿಟ್ಟಿಯಪ್ಪರವರು ರೇವತಿಯವರು ಮನೆಗೆ ಹೋದ ಬಗ್ಗೆ ಆಕ್ಷೇಪಿಸಿ ಜಗಳವಾಡಿ ಒಂದು ದೊಣ್ಣೆಯಿಂದ ರೇವತಿಯವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅನುಮಾನಾಸ್ಪದ ವ್ಯಕ್ತಿಯ ಬಂಧನ
         ಅನುಮಾನಾಸ್ಪದವಾಗಿ ರಾತ್ರಿ ವೇಳೆ ಸುತ್ತಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ದಿನಾಂಕ  28-12-14ರಂದು ಸಮಯ ಬೆಳಗಿನ ಜಾವ 12-30ಎ.ಎಂ.ಗೆ ಕಾಕೋಟು ಪರಂಬು ಗ್ರಾಮದಿಂದ ಮಂಡೇಟ್ಟಿರ ಬಿನು ಎಂಬುವ ವರು ಠಾಣೆಗೆ ದೂರವಾಣಿ ಕರೆ ಮಾಡಿ ಕಾಕೋಟುಪರಂಬು ಗ್ರಾಮದ ಕುಂಞೀರ ಮನು ಎಂಬುವವರ ಅಂಗಡಿಯ ಮುಂದೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ಅನುಮಾನಾಸ್ಪದವಾಗಿ ನಿಂತಿರುವುದಾಗಿ ತಿಳಿಸಿದ ಮೇರೆ ವಿರಾಜಪೇಟೆ ಠಾಣೆಯ ಮುಖ್ಯ ಪೇದೆ ಎಂ.ಟಿ.ಪ್ರವೀಣ್‌ಕುಮಾರ್‌ರವರು ಸಹೋದ್ಯೋಗಿಯೊಂದಿಗೆ  ಕಾಕೋಟು ಪರಂಬು ಗ್ರಾಮಕ್ಕೆ ತೆರಳಿ ಕುಂಞೀರ ಮನು ರವರ ಅಂಗಡಿ ಮುಂದೆ ತಲುಪುವಾಗ ಅಂಗಡಿ ಮುಂದೆ ನಿಂತಿದ್ದ ವ್ಯಕ್ತಿಯು ಓಡಲು ಯತ್ನಿಸಿದ್ದು, ಆತನನ್ನು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ಆತನು ತನ್ನ ಹೆಸರನ್ನು ಸಮರ್ಪಕವಾಗಿ ನೀಡದೆ ಪಣಿ ಎರವರ ಸುರೇಶ, ಕಾನೂರು ಗ್ರಾಮ ಎಂಬುದಾಗಿ ತಿಳಿಸಿದ್ದು,  ಆತನು ಯಾವುದೋ ಅಪರಾಧ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದಿರಬಹುದಾಗಿ ಸಂಶಯಿಸಿ ಆತನನ್ನು ಬಂಧಿಸಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Sunday, December 28, 2014

ಕಾರು ಡಿಕ್ಕಿ, ಇಬ್ಬರು ಮಹಿಳೆಯರಿಗೆ ಗಾಯ:

     ದಿನಾಂಕ:26-12-14ರಂದು ಪಿರ್ಯಾದಿ ಶ್ರೀಮತಿ. ನಬೀಸ, ಐಮಂಗಲ ಗ್ರಾಮ, ವಿರಾಜಪೇಟೆ ಇವರು ಸೊಸೆ ನುಬಿನಾರೊಂದಿಗೆ ಐಮಂಗಲ ಗ್ರಾಮದಿಂದ ವಿರಾಜಪೇಟೆ ನಗರಕ್ಕೆ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹಿಂದಿನಿಂದ ಅಂದರೆ ಅಮತ್ತಿ ಕಡೆಯಿಂದ ಕೆಎ.51.ಎಂ.5598ರ ಆಲ್ಟೋ ಕಾರಿನ ಚಾಲಕನು ಸದರಿ ಕಾರನ್ನು ಅತೀವೇಗ ಹಾಗೂ ದುಡುಕುತನದಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರಿಗೆ ಹಾಗೂ ಅವರ ಸೊಸೆಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿಯವರು ರಸ್ತೆಗೆ ಬಿದ್ದು ಎಡ ಕಣ್ಣಿನ ಹುಬ್ಬು, ಎಡ ಕಾಲು ಮೊಣ ಕಾಲಿಗೆ ಮತ್ತು ಮೇಲ್ಬಾಗದ ಹಲ್ಲಿಗೆ ಪೆಟ್ಟಾಗಿರುವುದಲ್ಲದೆ ಜೊತೆಯಲ್ಲಿದ್ದ ಪಿರ್ಯಾದಿಯವರ ಸೊಸೆ ನುಬೀನಾ, ರವರಿಗೆ ಕಾರು ತಾಗಿ ಶರೀರಕ್ಕೆ ನೋವಾಗಿರುವುದಾಗಿಯೂ, ಪಿರ್ಯಾದಿಯ ವರು ಚಿಕಿತ್ಸೆ ಬಗ್ಗೆ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆಟೋ ಅಪಘಾತ ಇಬ್ಬರಿಗೆ ಗಾಯ:
     ದಿನಾಂಕ 25-12-2014 ರಂದು ಸಮಯ 5.45 ಪಿ.ಎಂ.ಗೆ ಕುಶಾಲನಗರ ಠಾಣಾ ಸರಹದ್ದಿಗೆ ಸೇರಿದ ಹೆಗ್ಗಡಹಳ್ಳಿ ಗ್ರಾಮದಲ್ಲಿ ಪ್ರಸನ್ನ, ಕೂಡಿಗೆ ಗ್ರಾಮ, ಕುಶಾಲನಗರ ಇವರ ಚಿಕ್ಕಮ್ಮ ಪ್ರಮೀಳ ಮತ್ತು ಬೋಜೇಗೌಡರವರು ಕೂಡಿಗೆಯಿಂದ ಕೆಲಸ ಮುಗಿಸಿಕೊಂಡು ನಂ. ಕೆಎ 12-8756 ರ ಆಟೋರಿಕ್ಷದಲ್ಲಿ ವಾಪಾಸು ಮನೆಗೆ ಹೋಗುತ್ತಿರುವಾಗ ರಸ್ತೆ ತಿರುವಿನಲ್ಲಿ ಆಟೋರಿಕ್ಷವನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದ ಪರಿಣಾಮ ಆಟೋರಿಕ್ಷ ಮಗುಚಿ ಬಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ರಮೀಳ ಮತ್ತು ಬೋಜೇಗೌಡರವರು ಆಟೋರಿಕ್ಷದಿಂದ ಕೆಳಗೆ ಬಿದ್ದು ಇಬ್ಬರಿಗೂ ಗಾಯನೋವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದು ಈ ಸಂಬಂಧ ಕುಶಾಳನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗಂಡನ ಕಿರುಕುಳ ಪತ್ನಿ ಆತ್ಮಹತ್ಯೆ:
     ಮಡಿಕೇರಿ ತಾಲೋಕು ಕಾಲೂರು ಗ್ರಾಮದ ನಿವಾಸಿ ಕೆ.ಕೆ. ಭೀಮಯ್ಯನವರ ಅಕ್ಕ ಶೃತಿ ಎಂಬವರನ್ನು ಬಲ್ಲಮಾವಟಿ ಗ್ರಾಮದ ಮಾದೆಯಂಡ ರಾಜೇಶ್‌ ಎಂಬವರಿಗೆ ಮದುವೆಮಾಡಿಕೊಟ್ಟಿದ್ದು, ಸದರಿ ರಾಜೇಶ ಸಣ್ಣಪುಟ್ಟ ವಿಷಯಗಳಿಗೆ ಪತ್ನಿಯೊಂದಿಗೆ ಜಗಳ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು, ಅಲ್ಲದೆ ‘ನನ್ನ ಜೊತೆ ಸಂಸಾರ ನಡೆಸಲು ನಿನಗೆ ಯೋಗ್ಯತೆ ಇಲ್ಲ, ನೀನು ಸಾಯಿ’ ಎಂಬುದಾಗಿ ಹೇಳುತ್ತಿದ್ದು, ಇದರಿಂದ ಮಾನಸಿಕವಾಗಿ ನೊಂದ ಶೃತಿ ದಿನಾಂಕ 27-12-2014 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆಯ ಆತ್ಮಹತ್ಯೆಗೆ ಗಂಡ ರಾಜೇಶ ಕಾರಣವೆಂದು ಆರೋಪಿಸಿ ಕೆ.ಕೆ. ಭೀಮಯ್ಯ ನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, December 27, 2014

ಕಾರಿಗೆ ಲಾರಿ ಡಿಕ್ಕಿ, ನಾಲ್ಕು ಮಂದಿಗೆ ಗಾಯ:
     ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ  ನಾಲ್ಕು ಜನರು ಗಾಯಗೊಂಡ ಘಟನೆ ಸಿದ್ದಾಪುರದ ಬಳಿ ನಡೆದಿದೆ. ವಿರಾಜಪೇಟೆ ತಾಲೋಕು, ಬಾಡಗ ನಾಣಂಗಾಲ ಗ್ರಾಮದ ನಿವಾಸಿ ವಿ.ಕೆ. ಮಣಿ ಎಂಬುವವರು ಕೆ.ಎಂ.ಅಶ್ರಫ್ , ಕೆ.ಎಂ.ಹಸೈನಾರ್ ಮತ್ತು ಕೆ.ಹೆಚ್.ಉದೈಫ್ ಯವರೊಂದಿಗೆ ಮಾರುತಿ 800 ಕಾರಿನಲ್ಲಿ ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿಯೊಂದು ಸದರಿ ಕಾರಿಗೆ ಡಿಕ್ಕಿಯಾದ ಪರಿಣಾಮವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಹಾಗು ಇತರೆ ಮೂರುಮಂದಿಗೆ ರಕ್ತ ಗಾಯವಾಗಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ:
     ಕಾರೊಂದು ರಸ್ತೆಬದಿಯಲ್ಲಿ ನಿಂತಿದ್ದ ಮಹಿಳೆಗೆ ತಾಗಿದ ವಿಚಾರದಲ್ಲಿ  ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ವಿರಾಜಪೇಟೆ ಸಮೀಪದ ಐಮಂಗಲ ಗ್ರಾಮದಲ್ಲಿ ನಡೆದಿದೆ.  ವಿರಾಜಪೇಟೆ ತಾಲೋಕು, ಕಲ್ಲುಬಾಣೆ ನಿವಾಸಿ ಇ.ಕೆ. ಕುಂಞ ಅಹಮ್ಮದ್ ಎಂಬವರು ತಮ್ಮ ಬಾಪ್ಸು ಕೆಎ.51.ಎಂ.5598 ರ ಕಾರಿನಲ್ಲಿ ಸಿದ್ದಾಪುರ ದಿಂದ ವಿರಾಜಪೇಟೆ ಕಡೆಗೆ ಬರುತ್ತಿರವಾಗ ಐಮಂಗಲ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಲಾರಿಗೆ ದಾರಿ ಬಿಡುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಹೆಂಗಸಿಗೆ ಕಾರಿನ ಸೈಡ್ ಮಿರರ್ ತಾಗಿ ಕೆಳಗೆ ಬಿದ್ದು ಹೋಗಿದ್ದು ಇದೇ ವೇಳೆಯಲ್ಲಿ . ಇಸ್ಮಾ ಯಿಲ್ ಮತ್ತು ಮತ್ತೊಬ್ಬ ವ್ಯಕ್ತಿ ಒಂದು ಓಮಿನಿ ವ್ಯಾನಿ ನಲ್ಲಿ ಅಲ್ಲಿಗೆ ಬಂದು ಇ.ಕೆ. ಕುಂಞ ಅಹಮ್ಮದ್ ರವರ ಕಾರಿನ ಮುಂಭಾಗ ನಿಲ್ಲಿಸಿ ಇ.ಕೆ. ಕುಂಞ ಅಹಮ್ಮದ್ ರವರ ತಲೆಗೆ,ಎದೆಗೆ ಕೈಯಿಂದ ಹೊಡೆದುದಲ್ಲದೆ ಕೈಯಿಂದ ಬಾಯಿಗೆ ಗುದ್ದಿ ರಕ್ತ ಗಾಯಪಡಿಸಿರು ವುದಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮೋಟಾರ್‌ಸೈಕಲ್‌ ಅವಘಢ, ಇಬ್ಬರಿಗೆ ಗಾಯ:
     ಮೋಟಾರ್‌ ಸೈಕಲ್‌ ಅಪಘಾತಕ್ಕೀಡಾಗಿ  ಸವಾರರಿಬ್ಬರು ಗಾಯಗೊಂಡ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಹಳ್ಳಿಗಟ್ಟು ಗ್ರಾಮದಲ್ಲಿ ನಡೆದಿದೆ. ದಿನಾಂಕ 26-12-2014 ರಂದು ವಿರಾಜಪೇಟೆ ತಾಲೋಕು ಅರ್ವತ್ತೊಕ್ಕಲು ಗ್ರಾಮದ ನಿವಾಸಿ ನಿಖಿಲ್‌ ಎಂಬವರು ಮೋಟಾರ್‌ ಸೈಕಲ್‌ನಲ್ಲಿ ತನ್ನ ಸ್ನೇಹಿತ ರೋಹಿತ್‌ ಎಂಬವನನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಹಳ್ಳಿಗಟ್ಟು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಬೈಕ್‌ ಅಪಘಾತಕ್ಕೀಡಾಗಿ ಸದರಿ ಮೊಟಾರ್‌ ಸೈಕಲ್‌ ಸವಾರರಿಬ್ಬರು ಗಾಯಗೊಂಡಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, December 26, 2014

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
       ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಗುಂಪು ಹಲ್ಲೆ ಮಾಡಿದ ಘಟನೆ ಕುಶಾಲನಗರ ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 24-12-2014 ರಂದು  ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ದೊಡ್ಡ ಬೆಟ್ಟಗೇರಿ ನಿವಾಸಿ ಭರತ್‌ ಎಂಬವರು ಅವರ  ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿರುವಾಗ ಅವರ  ಹೆಂಡತಿಯ ಮನೆಯ ಮುಂದಿನ ಥಾರು ರಸ್ತೆಯಲ್ಲಿ ಎಂ.ಹೆಚ್. ಮಹಮ್ಮದ್, ಕೆ.ಜಿ.ಗಿರೀಶ್ ಮತ್ತು ಎನ್.ಆರ್. ವಿಶ್ವನಾಥ್‌ ಎಂಬವರುಗಳು  ಸೇರಿ ಹಳೇ ದ್ವೇಷದಿಂದ ಭರತ್‌ರವರನ್ನು ಅಡ್ಡಗಟ್ಟಿ ಮೋಟಾರ್‌ ಸೈಕಲ್‌ನಿಂದ ಕೆಳಗೆ ಬೀಳಿಸಿ ಮೂವರೂ ಸೇರಿ ಹಲ್ಲೆಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ನುಗ್ಗಿ ಚಿನ್ನಾಭರಣ ಕಳವು 
      ಮನೆಯೊಂದಕ್ಕೆ ನುಗ್ಗಿದ ಕಳ್ಳರು ಭಾರೀ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಸಿದ್ದಾಪುರ ಬಳಿಯ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಕರಡಿಗೋಡು ನಿವಾಸಿ ಎಂ.ಜೆ.ಜಾರ್ಜ್‌ ಎಂಬವರು  ದಿನಾಂಕ 24-12-2014 ರಂದು ರಾತ್ರಿ  ಕ್ರಿಸ್ ಮಸ್ ಹಬ್ಬದ ಸಲುವಾಗಿಕುಟುಂಬದೊಂದಿಗೆ ಅವರ ತಂದೆ ಮನೆಯಾದ ನೆಲ್ಲಿಹುದಿಕೇರಿ ಗ್ರಾಮದ ನಲ್ವತೇಕ್ರೆಗೆ ಮನೆಗೆ ಹೋಗಿದ್ದು,  ಕ್ರಿಸ್ ಮಸ್ ಹಬ್ಬದ ಪ್ರಾರ್ಥನೆ ಸಲುವಾಗಿ ಚರ್ಚ್ ಗೆ ಹೋಗಬೇಕಾಗಿದ್ದರಿಂದ ಬಟ್ಟೆ ಬದಲಿಸುವ ಸಲುವಾಗಿ ಜಾರ್ಜ್‌ರವರು  ತಂದೆ ಮನೆಯಿಂದ ಅವರ ಮನೆಗೆ ವಾಪಸ್ಸು ಸಮಯ ರಾತ್ರಿ 10.30 ಗಂಟೆಗೆ ಬಂದು ಮನೆಯ ಬಾಗಿಲನ್ನು ತೆರೆಯುವ ಸಲುವಾಗಿ ನೋಡಿದಾಗ, ಮನೆಗೆ ಹಾಕಿದ ಬೀಗ ಕಾಣದಿದ್ದು ಸಂಶಯಗೊಂಡು ಬಾಗಿಲನ್ನು ದೂಡಿದಾಗ, ಬಾಗಿಲು ಒಳಭಾಗದಿಂದ ಲಾಕ್ ಆಗಿರುವುದು ಕಂಡು ಬಂದಿದ್ದರಿಂದ ಪಿರ್ಯಾದಿಯವರು ಜೋರಾಗಿ ಬಾಗಿಲನ್ನು ತಳ್ಳಿದಾಗ ಬಾಗಿಲು ತೆರೆದುಕೊಂಡಿದ್ದು, ನೋಡಲಾಗಿ ಹಿಂಬಾಗದ ಬಾಗಿಲು ತೆರೆದಿರುವುದು ಕಂಡು ಬಂದಿರುವುದಾಗಿದೆ. ತಕ್ಷಣ  ಅಕ್ಕಪಕ್ಕದ ಮನೆಯವರಿಗೆ ತಿಳಿಸಿದಾಗ ಎಲ್ಲರೂ ಬಂದು ಪಿರ್ಯಾದಿಯೊಂದಿಗೆ ಮನೆಯ ಒಳಗೆ ಬಂದು ನೋಡಿದ್ದು ಪಿರ್ಯಾದಿ ಮನೆಯ ಒಳಗೆ ನೋಡಿದಾಗ, ಹಾಲ್ ನಲ್ಲಿ ಇದ್ದ ಗಾದ್ರೇಜ್ ಬೀರುವನ್ನು ಕಳ್ಳರು ತೆರೆದು ಅದರ ಒಳಗೆ ಲಾಕ್ ಮಾಡಲಾದ ಲಾಕರ್ ನ್ನು ಯಾವುದೋ ಆಯುಧದಿಂದ ಮೀಟಿ ತೆರೆದು ಸುಮಾರು ರೂ.70,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಫೈನಾನ್ಸ್ ಕಚೇರಿ ಬೀಗ ಮುರಿದು ಅಪಾರ ಹಣ ಕಳವು 
    ಫೈನಾನ್ಸ್‌ ಕಂಪೆನಿಯೊಂದರ ಬೀಗ ಮುರಿದು ಅಪಾರ ಮೌಲ್ಯದ ಹಣವನ್ನು ಕಳವು ಮಾಡಿದ ಘಟನೆ ಶನಿವಾರಸಂತೆ ನಗರದಲ್ಲಿ ನಡೆದಿದೆ.   ಮಾದ್ರೆ ಹೊಸಳ್ಳಿ ಗ್ರಾಮದ ಹೆಚ್.ವಿ ದಿನೇಶ ಎಂಬವರು  ಕಳೆದ 3 ವರ್ಷ ಗಳಿಂದ ಶನಿವಾರಸಂತೆಯ ಕೆಆರ್ ಸಿ ಸರ್ಕಲ್ ನಲ್ಲಿ ಗಂಗಾಧರ ಎಂಬುವವರ ಕಾಂಪ್ಲೆಕ್ಸ್ನ ಮಳಿಗೆಯಲ್ಲಿ ಫೈನಾನ್ಸ್‌ ಕಚೇರಿ  ಇಟ್ಟುಕೊಂಡಿದ್ದು, ದಿನಾಂಕ :24-12-2014 ರಂದು ಸಂಜೆ ಸಮಯ ವ್ಯವಹಾರವನ್ನು ಮುಗಿಸಿ ಲೇವಾದೇವಿಗಾರರಿಗೆ  ಕೊಡಬೇಕಾಗಿದ ಹಣ 1,05,000/- ಹಾಗೂ ಕಲೆಕ್ಷನ್ ಹಣ 35,000 ಅಲ್ಲದೆ ಡ್ರಾಯರ್ ನಲ್ಲಿ ಇದ್ದಂತಹ ಚಿಲ್ಲರೆ ಹಣ 2,000 ರೂ ಒಟ್ಟು ಹಣ 1,42,000 ರೂಗಳನ್ನು ಗಾಡ್ರಜ್ ಮತ್ತು ಡ್ರಾಯರ್ ನಲ್ಲಿಟ್ಟು ಮನೆಗೆ ಹೋಗಿದ್ದು ಬೆಳಿಗ್ಗೆ ಕಚೇರಿಯಲ್ಲಿ ಕೆಲಸ ಮಾಡುವ ಸುಷ್ಮ ಎಂಬುವವರು ಬಂದು ನೋಡುವಾಗ ಕಚೇರಿಯ ರೋಲಿಂಗ್‌ ಶಟರ್ ಗೆ ಹಾಕಿದ ಬೀಗವು ಒಡೆದಿರುವುದನ್ನು ನೋಡಿ ಫೋನ್ ಮೂಲಕ ದಿನೇಶ್‌ರವರಿಗೆ  ವಿಷಯ ತಿಳಿಸಿ ಕೂಡಲೆ ಅವರು ಬಂದು ನೋಡುವಾಗ ಗಾಡ್ರೇಜ್ ಮತ್ತು ಡ್ರಾಯರ್ ನಲ್ಲಿಟ್ಟಿದ್ದ ಒಟ್ಟು 1,42,000 ರೂ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, December 25, 2014

ಮನೆ ಕಳವು ಪ್ರಕರಣ ದಾಖಲು:     ಸಿದ್ದಾಪುರ ನಗರದ ನಿವಾಸಿ ಎಂ.ಜೆ. ಜಾರ್ಜ್ @ ಅನಿ ಎಂಬವರು ದಿನಾಂಕ 24-12-2014 ರಂದು ರಾತ್ರಿ ಸಮಯ 09.30 ಗಂಟೆಗೆ ಕ್ರಿಸ್ ಮಸ್ ಹಬ್ಬದ ಸಲುವಾಗಿ ಅವರ ಹೆಂಡತಿ ಹಾಗೂ ಅವರ ಮೂರು ಜನ ಮಕ್ಕಳ ಜೊತೆಗೆ ಅವರ ತಂದೆ ಮನೆಯಾದ ನೆಲ್ಲಿಹುದಿಕೇರಿ ಗ್ರಾಮದ ನಲ್ವತೇಕ್ರೆಗೆ ಹೋಗಿದ್ದು, ಹೋಗುವ ಸಮಯದಲ್ಲಿ ಪಿರ್ಯಾದಿಯವರು ಮನೆಗೆ ಬೀಗ ಹಾಕಿ ಹೋಗಿದ್ದು ಕ್ರಿಸ್ ಮಸ್ ಹಬ್ಬದ ಪ್ರಾರ್ಥನೆ ಸಲುವಾಗಿ ಚರ್ಚ್ ಗೆ ಹೋಗಬೇಕಾಗಿದ್ದರಿಂದ ಬಟ್ಟೆ ಬದಲಿಸುವ ಸಲುವಾಗಿ ಸದರಿಯವರು ತಂದೆ ಮನೆಯಿಂದ ಅವರ ಮನೆಗೆ ವಾಪಸ್ಸು ಸಮಯ ರಾತ್ರಿ 10.30 ಗಂಟೆಗೆ ಬಂದು ಮನೆಯ ಬಾಗಿಲನ್ನು ತೆರೆಯುವ ಸಲುವಾಗಿ ನೋಡಿದಾಗ, ಅವರು ಮನೆಗೆ ಹಾಕಿದ ಬೀಗವನ್ನು ತೆಗೆದು ಯಾರೋ ಕಳ್ಳರು ಮನೆಗೆ ನುಗ್ಗಿ 12 ಗ್ರಾಂ ನ ಚಿನ್ನದ ಸರ, 8 ಗ್ರಾಂ ನ ಚಿನ್ನದ ಕೈ ಬಳೆ, 6 ಗ್ರಾಂ ನ ಚಿನ್ನದ ಉಂಗುರ, 4 ಗ್ರಾಂ ನ ಉಂಗುರ, 2 ಗ್ರಾಂ ನ ಉಂಗುರ, ಒಟ್ಟು 4 ಗ್ರಾಂ ತೂಕದ 7 ಸಣ್ಣ ಚಿನ್ನದ ಉಂಗುರಗಳು. ಒಟ್ಟು 36 ಗ್ರಾಂ ನಿಂದ ಕೂಡಿದ್ದು ಇದರ ಅಂದಾಜು ಬೆಲೆ ರೂ 70.000/= ಮತ್ತು ಚಿಲ್ಲರೆ ರೂ 500/= ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯದ ಅಮಲಿನಲ್ಲಿ ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:
ವಿರಾಜಪೇಟೆ ತಾಲೋಕು ಬಿರುನಾಣಿ ಗ್ರಾಮದ ಪಣಿಎರವರ ರಾಜು ಎಂಬ ವ್ಯಕ್ತಿ ಮದ್ಯವನ್ನು ಸೇವಿಸಿ ಅದರ ಅಮಲಿನಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿಯವರ ಪತ್ನಿ ಸಿಂದುರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಳೇ ದ್ವೇಷದ ಹಿನ್ನೆಲೆ, ವ್ಯಕ್ತಿಯ ದಾರಿ ತಡೆದು ಹಲ್ಲೆ:

ದಿನಾಂಕ 24-12-2014 ರಂದು ಸಮಯ 10.30 ಎ.ಎಂ.ಗೆ ಕುಶಾಲನಗರ ಠಾಣಾ ಸರಹದ್ದಿಗೆ ಸೇರಿದ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಫಿರ್ಯಾದಿ ಎಂ.ಯು.ಭರತ್‌ಎಂಬುವವರು ತಮ್ಮ ಬಾಪ್ತು ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿರುವಾಗ್ಗೆ ಚಿಕ್ಕಬೆಟ್ಟಗೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳಾದ ಎಂ.ಹೆಚ್. ಮಹಮ್ಮದ್, ಕೆ.ಜಿ.ಗಿರೀಶ್ ಮತ್ತು ಎನ್.ಆರ್. ವಿಶ್ವನಾಥ್‌ರವರು ಸೇರಿ ಹಳೇ ದ್ವೇಷದಿಂದ ಅಡ್ಡಗಟ್ಟಿ ಮೋಟಾರ್‌ ಸೈಕಲ್‌ನಿಂದ ಕೆಳಗೆ ಬೀಳಿಸಿ ಮಹಮ್ಮದ್ ಮತ್ತು ವಿಶ್ವನಾಥ್‌ರವರು ಹಿಡಿದುಕೊಂಡು ಗಿರೀಶ್‌ರವರು ಬೆಲ್ಟ್‌ನಿಂದ ಬೆನ್ನಿಗೆ. ಹೊಟ್ಟೆಯ ಬಲಭಾಗಕ್ಕೆ ಹಾಗೂ ಕುತ್ತಿಗೆ ಭಾಗಕ್ಕೆ ಹೊಡೆದು ನೋವುಪಡಿಸಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯಲು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಪ್ರವೇಶ,2.3 ಲಕ್ಷ ಮೌಲ್ಯದ ಕಾಫಿ ಕಳವು: 
     ದಿನಾಂಕ: 23-12-14ರಂದು ಹಗಲು ವಿರಾಜಪೇಟೆ ತಾಲೋಕು, ವಿ.ಬಾಡಗ ಗ್ರಾಮದ ಪಿರ್ಯಾದಿ ತೀತಿಮಾಡ ಕಾವೇರಪ್ಪನವರ ಬಾಪ್ತು ಕಾಫಿ ತೋಟದಲ್ಲಿ ವಿ.ಬಾಡಗ ಗ್ರಾಮದ ವಾಸಿ ಅಮ್ಮೆಕಂಡ ಪೆಮ್ಮಯ್ಯ, ರವರ ಮೂವರು ಮದುವೆಯಾಗಿರುವ ಹೆಣ್ಣು ಮಕ್ಕಳಾದ ಎ.ಪಿ. ನಮೀತ, ಎ.ಪಿ. ಸವೀತಾ ಮತ್ತು ಎ.ಪಿ. ಸುಮಿತ್ರ, ರವರುಗಳು ಸೇರಿ ಸುಮಾರು 15 ಜನ ಕೂಲಿ ಆಳುಗಳನ್ನು ಕರೆದುಕೊಂಡು ಬಂದು ಪಿರ್ಯಾದಿಯವರ ಸರ್ವೆ ನಂ. 127/6ರ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿ ಗಿಡದಲ್ಲಿದ್ದ ಅಂದಾಜು 10,000 ಕಿ.ಗ್ರಾಂ. ಹಸಿ ಕಾಫಿ ಅಂದಾಜು ಬೆಲೆ 2,30,000/- ಯ ಕಾಫಿಯನ್ನು ಕುಯ್ದು ಕಳ್ಳತನ ಮಾಡಿ ರಸ್ತೆಯಲ್ಲಿ ನಿಲ್ಲಿಸಿದ ವಾಹನದಲ್ಲಿ ಸಾಗಿಸಿರುವುದಾಗಿ ತೀತಿಮಾಡ ಕಾವೇರಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wedesday, December 24, 2014

ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿ ವಂಚನೆ:
ಮಡಿಕೇರಿ ತಾಲೋಕು ಮೇಕೇರಿ ಗ್ರಾಮದ ನಿವಾಸಿ ಪಿರ್ಯಾದಿ ಎಂ.ಕೆ. ಮುಸ್ತಾಫ ಎಂಬವರು  ಮಡಿಕೇರಿಯ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್‌ ಶಾಖೆಯಲ್ಲಿ 67084715833 ರ ಎಸ್ ಬಿ ಖಾತೆಯನ್ನು ಹೊಂದಿದ್ದು ದಿನಾಂಕ 21-12-14 ರಂದು ಪಿರ್ಯಾದಿಯವರು ಮನೆಯಲ್ಲಿದ್ದಾಗ ಮದ್ಯಾಹ್ನ 02-30 ಪಿ ಎಂ ಗೆ ಯಾರೋ ವ್ಯಕ್ತಿ ಮೊಬೈಲ್ ಸಂಖ್ಯೆ 9448877802 ಗೆ 7250503496 ರ ನಂಬರಿನಿಂದ ಕರೆ ಮಾಡಿ ಹಿಂದಿಯಲ್ಲಿ ನಿಮ್ಮ ಎ ಟಿ ಎಂ ನಂ, ಪಾಸ್‌ ಪುಸ್ತಕ ಸಂಖ್ಯೆ, ಎ ಟಿ ಎಂ ಕಾರ್ಡಿನ ಹಿಂಬದಿಯಲ್ಲಿರುವ ಸಿರಿಯಲ್ ನಂ ನ್ನು ಕೊಡಿ ಎಂದು ಹೇಳಿದಾಗ ಪಿರ್ಯಾದಿಯವರು ನೀವು ಎಲ್ಲಿಂದ ಮಾತನಾಡುತ್ತಿದ್ದೀರಾ, ಎ ಟಿ ಎಂ ನಂ ನಿಮಗೆ ಏಕೆ ಬೇಕು ಎಂದು ಕೇಳಿದಾಗ ಅವರು ತಾನು ಬ್ಯಾಂಕಿನಿಂದ ಮಾತನಾಡುತ್ತಿದ್ದೇನೆ ನಿಮ್ಮ ಎ ಟಿ ಎಂ 3 ತಿಂಗಳಿನಿಂದ ಚಲಾವಣೆ ಆಗದ್ದರಿಂದ ಖಾತೆ ಬಂದ್ ಆಗಿದ್ದು ಅದನ್ನು ರಿನೀವ್ ಮಾಡಬೇಕು ಆದ್ದರಿಂದ ಕೇಳಿದ ವಿವರವನ್ನು ಕೊಡಿ ಎಂದು ಹೇಳಿದ ಮೇರೆಗೆ ಪಿರ್ಯಾದಿಯವರು ಎಲ್ಲಾ ವಿವರವನ್ನು ನೀಡಿದ್ದು, ದಿನಾಂಕ 21/12/2014 ಮತ್ತು 22-12-2014  ರಂದು ಪಿರ್ಯಾದಿಯವರ ಖಾತೆಯಲ್ಲಿದ್ದ 87,640 ರೂ ಗಳನ್ನು ಆನ್ ಲೈನ್ ಮುಖಾಂತರ ಡ್ರಾ ಮಾಡಿ ವಂಚಿಸಿದ್ದು  ಈ ಸಂಬಂಧ ಸದರಿಯವರ ದೂರಿನ ಮೇರೆಗೆ  ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, December 23, 2014

ಆಸ್ತಿಗೆ ಅಕ್ರಮ ಪ್ರವೇಶ ಕೊಲೆ ಬೆದರಿಕೆ:
        ಪಿರ್ಯಾದಿ ಶ್ರೀಮತಿ ವಿಜಯಮ್ಮ ಗಂಡ ಪೌತಿ ಸುಕುಮಾರ, ಪ್ರಾಯ 60 ವರ್ಷ, ವಾಸ ಪುಲಿಯೇರಿ ಗ್ರಾಮ ಇವರಿಗೆ ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಪುಲಿಯೇರಿ ಗ್ರಾಮದಲ್ಲಿ ಸರ್ವೇ.ನಂ.108/8A ರಲ್ಲಿ ಅವರ ಗಂಡನ ಮರಣಾನಂತರ ಅವರ ಸ್ವಾಧೀನಕ್ಕೆ 0.96 ಸೆಂಟ್ ಆಸ್ತಿ ಇದ್ದು ದಿನಾಂಕ 22/12/2014 ರಂದು ಸಂಜೆ 5.30 ಗಂಟೆಗೆ ಅವರ ಗ್ರಾಮದ ನಿವಾಸಿಗಳಾದ ರಾಜಪ್ಪನವರ ಮಗ ಪ್ರಕಾಶ ಹಾಗೂ ಉಣ್ಣಿ ರವರ ಮಗ ಪ್ರಮೋದ್ ಎಂಬವರು ಪಿರ್ಯಾದಿಯವರ ಆಸ್ತಿಗೆ ಅಕ್ರಮ ಪ್ರವೇಶ ಮಾಡಿ ಪ್ರಕಾಶ ಎಂಬುವವನು ಪಿರ್ಯಾದಿ ಹಾಗೂ ಶ್ರೀಜೇಶ್ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಿಬ್ಬರನ್ನು ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದು ಇದಕ್ಕೆಪ್ರಮೋದ ಎಂಬ ವ್ಯಕ್ತಿ ಕುಮ್ಮಕ್ಕು ನೀಡಿರುತ್ತಾನೆಂದು ಪಿರ್ಯಾದಿ ಶ್ರೀಮತಿ ವಿಜಯಮ್ಮನವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಲೆಗೈದ ಯುವಕ ನೇಣಿಗೆ ಶರಣು: 


     ಸೋಮವಾರಪೇಟೆ ತಾಲೋಕು, ಕೆಂಚಮ್ಮನಬಾಣೆ ನಿವಾಸಿ ಫಿರ್ಯಾದಿ ಶ್ರೀಮತಿ ಸುಂದರಿ ಇವರ ಮಗ ಮಹೇಶ ಎಂಬಾತ ನಾಪೋಕ್ಲು ಕೊಳಕೇರಿ ಗ್ರಾಮದ ರಮ್ಯ ಎಂಬುವವಳನ್ನು ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದು, ದಿನಾಂಕ 22-12-2014 ರಂದು ಬೆಳಿಗ್ಗೆ 10.30 ಗಂಟೆಗೆ ಬೇಳೂರು ಬಾಣೆಯಲ್ಲಿ ರಮ್ಯಳು ಅವಳ ಅಕ್ಕನ ಮನೆಯಿಂದ ಅಕ್ಕನ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಹೇಶನು ರಮ್ಯಳನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು, ದಿನಾಂಕ : 23-12-2014 ರಂದು ಬೆಳಿಗ್ಗೆ 10.30 ಗಂಟೆಗೆ ಬೇಳೂರು ಗ್ರಾಮದ ಸುರೇಶ ರವರ ತೋಟದ ಒಳಗೆ ಹತ್ತಿ ಮರದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Monday, December 22, 2014

 ಕತ್ತಿಯಿಂದ ಕಡಿದು ಯುವತಿಯ ಕೊಲೆ.
        ಮಡಿಕೇರಿ ತಾಲೋಕು ಕೊಳಕೇರಿ ಗ್ರಾಮದ ನಿವಾಸಿ ಶ್ರೀಮತಿ ಗೋಪಿ ಯವರ ಮಗಳಾದ ರಮ್ಯಳು ನರ್ಸಿಂಗ್‌ ಮಾಡಿ ಚೆನ್ನಪಟ್ಟಣದ ಲಕ್ಷ್ಮಿ ದೇವಮ್ಮ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡಿಕೊಂಡಿದ್ದು, ಶ್ರೀಮತಿ ಗೋಪಿ ತನ್ನ ಹಿರಿಯ ಮಗಳನ್ನು ಕೆಂಚಮ್ಮನ ಬಾಣೆಯಲ್ಲಿರುವ ಆನಂದ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದು, ಹಿರಿಯ ಮಗಳನ್ನು ನೋಡಿಕೊಂಡು ಬರಲು ಆಗಾಗ್ಗೆ ಸದರಿಯವರು ಹಾಗೂ ರಮ್ಯಳು ಹೋಗುತ್ತಿದ್ದ ಸಮಯದಲ್ಲಿ ಮಹೇಶ ಎಂಬುವವನ ಆಟೋಚಾಲಕನ ಪರಿಚಯವಾಗಿ ಆತನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದು, ಇದನ್ನು ಆತ ತಪ್ಪಾಗಿ ತಿಳಿದುಕೊಂಡು ರಮ್ಯಳನ್ನು ಪ್ರೀತಿಸುವುದಾಗಿ ತಿಳಿದುಕೊಂಡು ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದು, ಒಂದು ವರ್ಷದ ಹಿಂದೆ ಶ್ರೀಮತಿ ಗೋಪಿ ಮನೆಗೆ ಬಂದು ರಮ್ಯಳನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದು, ಮದುವೆ ಮಾಡಿಕೊಡಲಾಗುವುದಿಲ್ಲ ಎಂದು ಹೇಳಿದಾಗ ಮಹೇಶನು ಬಂದು ಗಲಾಟೆ ಮಾಡಿ ತೊಂದರೆ ನೀಡುತ್ತಿದ್ದು ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ದೂರು ನೀಡಿ ತೀರ್ಮಾನವಾಗಿರುತ್ತದೆ. ದಿನಾಂಕ : 20-12-2014 ರಂದು ಶ್ರೀಮತಿ ಗೋಪಿ ತನ್ನ ಮಗಳು ರಮ್ಯಳೊಂದಿಗೆ ಹಿರಿಯ ಮಗಳ ಮನೆಗೆ ಬಂದಿದ್ದು, ಈ ದಿನ ದಿ: 22-12-2014 ರಂದು ರಮ್ಯಳು ಐಗೂರಿನ ಆಸ್ಪತ್ರೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದರಿಂದ ನಾಗಮಣಿ ಎಂಬುವವರೊಂದಿಗೆ ರಮ್ಯಳನ್ನು ಕಳುಹಿಸಿ ಕೊಟ್ಟಿದ್ದು, ಈ ಸಮಯದಲ್ಲಿ ಸದರಿ ರಮ್ಯಳನ್ನು ಕತ್ತಿಯಿಂದ ಕಡಿದು ಮಹೇಶನು ಕೊಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, December 21, 2014

 ವಿದ್ಯಾರ್ಥಿಗೆ ಸಹಪಾಠಿಗಳಿಂದ ಹಲ್ಲೆ: 

ಸೋಮವಾರಪೇಟೆ ತಾಲೋಕು ಆಲೂರು ಸಿದ್ದಾಪುರ ಗ್ರಾಮದ ಭಾಗ್ಯಾನಂದ ಎಂಬವರ ಮಗ 17 ವರ್ಷದ ದುಷ್ಯಂತ್‌ ಎಂಬಾತ ಈ ದಿನ  ಎಂದಿನಂತೆ ಆಲೂರು ಸಿದ್ದಾಪುರದ ಐಟಿಐ ಕಾಲೇಜು ಮುಗಿಸಿ ಮನೆಗೆ ವಾಪಾಸಾಗಲು ಆಲೂರು ಸಿದ್ದಾಪುರದ ಕೆ.ಎನ್‌.ಬಿ. ಸ್ಟೋರ್‌ ಅಂಗಡಿಯ ಮುಂದುಗಡೆ ನಿಂತುಕೊಂಡಿರುವ ಸಮಯದಲ್ಲಿ ಸದರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳಾದ ಸುರೂಪ್‌, ಸಂದೀಪ್‌, ಅಜಯ ಮತ್ತು ವಿಜಯ ಎಂಬವರು ಅಲ್ಲಿಗೆ ಬಂದು ಅವರ ಬಳಿ ಮೊಬೈಲ್‌ ಇರುವ ವಿಚಾರವನ್ನು ಶಿಕ್ಷಕರಿಗೆ ತಿಳಿಸಿದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆ ಮತ್ತು ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಸದರಿ ಗಾಯಾಳು ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ, ಪ್ರಕರಣ ದಾಖಲು:

ವಿರಾಜಪೇಟೆ ತಾಲೋಕು ಅಮ್ಮತ್ತಿ ಒಂಟಿಯಂಗಡಿ ಗ್ರಾಮದ ಚಾಮುಂಡಿ ಪೈಸಾರಿಯಲ್ಲಿ ವಾಸವಾಗಿರುವ ಶ್ರೀಮತಿ ಶಾಂತ ಎಂಬವರ ಗಂಡ ಎ.ವಿ.ಚಂದ್ರ (48) ಇವರು ದಿನಾಂಕ: 19-12-14ರಂದು ಅವರ ಮೋಟಾರ್ ಬೈಕ್‌ನಲ್ಲಿ ಮನೆಯಿಂದ ಹೋಗಿದ್ದು ನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ಶ್ರೀಮತಿ ಶಾಂತರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮುಂದೆ ಸಾಗುತ್ತಿದ್ದ ಕಾರಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿ, ಚಾಲಕ ಸೇರಿ ಮೂವರಿಗೆ ಗಾಯ.

ದಿನಾಂಕ 19-12-2014 ರಂದು ಎಸ್‌. ಅಶೋಕ್‌ ಎಂಬವರು ಕೆಎ-11-ಎಂ-5415 ರ ಓಕ್ಸ್ ವ್ಯಾಗನ್ ಪೋಲೋ ಕಾರಿನಲ್ಲಿ ತನ್ನ ತಾಯಿ ಸರಸ್ವತಿ, ತಮ್ಮ ದಯಾನಂದರವರೊಂದಿಗೆ ಮಂಡ್ಯಕ್ಕೆ ಹೋಗುತ್ತಿರುವಾಗ ಸಮಯ 15-50 ಗಂಟೆಗೆ ಬೊಯಿಕೇರಿ ಎಂಬಲ್ಲಿಗೆ ತಲುಪುವಾಗ್ಗೆ ಹಿಂದಿನಿಂದ ಕೆಎ-09-ಎಂಎ-5649 ರ ಇನ್ನೋವಾ ಕಾರನ್ನು ಅದರ ಚಾಲಕ ಭರತ್‌ರಾಜ್‌ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸದರಿ ಅಶೋಕ್‌ ರವರು ಚಾಲನೆ ಮಾಡುತ್ತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಆಶೋಕ್‌ರವರ ಕಾರಿನಲ್ಲಿದ್ದ ಯಾರಿಗೂ ಗಾಯನೋವು ಆಗದೇ, ಡಿಕ್ಕಿ ಪಡಿಸಿದ ಇನ್ನೋವಾ ಕಾರಿನಲ್ಲಿದ್ದ ಚಾಲಕ ಹಾಗೂ ಇತರ ಮೂರು ಜನರಿಗೆ ರಕ್ತ ಗಾಯಗಳಾಗಿದ್ದು ಎರಡೂ ವಾಹನಗಳು ಜಖಂಗೊಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Saturday, December 20, 2014

ಬೈಕ್‌ಗೆ ಲಾರಿ ಡಿಕ್ಕಿ, ಸವಾರನಿಗೆ ಗಾಯ:

      ಲಾರಿಯೊಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿಯಾದ ಪರಿಣಾಮ ಸವಾರ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅಭ್ಯತ್‌ಮಂಗಲ ದಲ್ಲಿ ನಡೆದಿದೆ. ದಿನಾಂಕ 19-12-2014 ರಂದು ಅಮ್ಮತ್ತಿ ಹಸೂರು ಬೆಟ್ಟಗೇರಿ ಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿರೂಪಾಕ್ಷಾ ಎಂಬವರು ತಮ್ಮ ಬಾಪ್ಸು ಮೋಟಾರ್‌ಸೈಕಲ್‌ನಲ್ಲಿ ಆಭ್ಯತ್‌ಮಂಗಲದ ಸಾರ್ವಜನಿಕರಸ್ತೆಯಲ್ಲಿ ಹೋಗುತ್ತಿದ್ದಾದ ಎದುಗುಗಡೆಯಿಂದ ಬಂದ ಲಾರಿಯನ್ನು ಅದರ ಚಾಲಕ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್‌ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಮೋಟಾರ್‌ ಸೈಕಲ್‌ ಸವಾರ ವಿರೂಪಾಕ್ಷ ನವರಿಗೆ ಗಾಯಗಳಾಗಿದ್ದು, ಸದರಿಯವರನ್ನು ಚಿಕಿತ್ಸೆಗೆ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧಪ್ರಕರಣ ದಾಖಲಾಗಿದೆ.  

ಆಸ್ತಿವಿಚಾರದಲ್ಲಿ ವ್ಯಕ್ತಿಗಳ ಮೇಲೆ ದಾರಿ ತಡೆದು ಹಲ್ಲೆ:

     ಆಸ್ತಿ ವಿಚಾರದಲ್ಲಿ ವ್ಯಕ್ತಿಯೊಬ್ಬರು ಮಹಿಳೆ ಹಾಗು ಆಕೆಯ ಪತಿ ಹಾಗು ಅಣ್ಣರವರನ್ನು ದಾರಿಯಲ್ಲಿ ತಡೆದು ಹಲ್ಲೆ ನಡೆಸಿ ಮಾನಭಂಗಕ್ಕೆಯತ್ನಿಸಿದಘಟನೆ ಮಡಿಕೇರಿ ನಗರದ ಕೋಟೆ ಆವರಣದಲ್ಲಿ ನಡೆದಿದೆ. ದಿನಾಂಕ 19-12-2014 ರಂದು ಕುಶಾಲನಗರದ ಮುಳ್ಳುಸೋಗೆ ಗ್ರಾಮದ ನಿವಾಸಿ ಶ್ರೀಮತಿ ಹೇಮಲತಾರವರು ತಮ್ಮ ಗಂಡ ಹಾಗು ಗಂಡನೊಂದಿಗೆ ಜಾಗದ ವಿಚಾರವಾಗಿ ವಕೀರೊಂದಿಗೆ ಚರ್ಚಿಸಿ ವಾಪಾಸು ಕೋಟೆ ಆವರಣದಿಂದ ಹೋಗುತ್ತಿದ್ದಾಗ ಕೇಂದ್ರ ಗ್ರಂಥಾಲಯದ ಹತ್ತಿರ ಆರೋಪಿ ಕುಮಾರ್‌ ಎಂಬವರು ಟಾಟಾ ಏಸ್‌ ವಾಹನದಲ್ಲಿ ಅಲ್ಲಿಗೆ ಬಂದು ಪಿರ್ಯಾದಿ ಮತ್ತು ಅವರ ಗಂಡ ಮತ್ತು ಅಣ್ಣನವರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದು ಅಲ್ಲದೆ ಹೇಮಲತಾರವರ ಸೀರೆಯನ್ನು ಎಳೆದಾಡಿ ಮಾನಭಂಗಕ್ಕೆ ಪ್ರಯತ್ನಿಸಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದಬೈದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, December 19, 2014

ಮನೆಗೆ ನುಗ್ಗಿ ಬೆಂಕಿ ಹಚ್ಚಿ ವ್ಯಕ್ತಿಯ ಮೇಲೆ ಹಲ್ಲೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ನಲ್ವತ್ತೊಕ್ಲು ಗ್ರಾಮದ ಬಿ.ಕೆ. ದೇವಕಿ ಎಂಬವರು ದಿನಾಂಕ: 18-12-14ರಂದು ಸಂಜೆ 7-00ಗಂಟೆಗೆ ತಮ್ಮ ಮನೆಯಲ್ಲಿರುವಾಗ್ಗೆ ಅದೇ ಗ್ರಾಮದ ಸುಬ್ರಮಣಿ ಎಂಬ ವ್ಯಕ್ತಿ ಅಲ್ಲಿಗೆ ಬಂದು ಬಿ.ಕೆ. ದೇವಕಿ ಮತ್ತು ಗೀತಾ ಎಂಬವರನ್ನು ಸಾಯಿಸುವುದಾಗಿ ಹೇಳಿ ಮನೆಯೊಳಗೆ ಇದ್ದ ಗೋಣಿಚೀಲಕ್ಕೆ ಸೀಮೆಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿ ನಂತರ ದೇವಕಿಯವರನ್ನು ಹೊರಗೆ ಎಳೆದುಕೊಂಡು ಬಂದು ದೊಣ್ಣೆಯಿಂದ ಹಲ್ಲೆ ನಡೆಸಿರುವುದಲ್ಲದೆ ಮನೆಯ ಪಕ್ಕದಲ್ಲಿರುವ ಸೌದೆ ಶೆಡ್ಡಿಗೆ ಬೆಂಕಿ ಕೊಟ್ಟು ಶೆಡ್ನ್ನು ಸುಟ್ಟು ಹಾಕಿದ್ದು, ಮನೆಯನ್ನು ಹಾನಿಪಡಿಸಿದ್ದು, ಮನೆಯಲ್ಲಿದ್ದ ಬಟ್ಟೆ, 2 ಹಾಸಿಗೆ ಸೂಟ್ ಕೇಸ್‌ ಸುಟ್ಟು ಹಾಕಿ ನಷ್ಟಪಡಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮದ್ಯ ಮಾರಾಟಕ್ಕೆ ಯತ್ನ, ಪ್ರಕರಣ ದಾಖಲು:

       ದಿನಾಂಕ 18-12-2014 ರಂದು ಸಮಯ 18.15 ಗಂಟೆಗೆ ವಿರಾಜಪೇಟೆ ತಾಲ್ಲೂಕು ಕೋತೂರು ಗ್ರಾಮದ ಪಿ.ಎಂ.ಕೃಷ್ಣಕುಟ್ಟಿ ಎಂಬವರು ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ತನ್ನ ಭಾಫ್ತು ದಿನಸಿ ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದ ರೂ. 920=00 ಬೆಲೆಯ ಮದ್ಯವನ್ನು ಕುಟ್ಟಪೊಲೀಸ್‌ಠಾಣಾ ಪಿ.ಎಸ್‌.ಐ. ರವರಾದ ಜೆ. ಮಂಜು ಹಾಗು ಸಿಬ್ಬಂದಿಯವರು ಪತ್ತೆ ಹಚ್ಚಿ ಮಾಲನ್ನುವಶಕ್ಕೆ ತೆಗೆದುಕೊಂಡು ಆರೋಪಿ ಕೋತೂರು ಗ್ರಾಮದ ಕೃಷ್ಣ ಕುಟ್ಟಿ ಎಂಬವರ ಮೇಲೆ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ

Wednesday, December 17, 2014

ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಗೆ ವಂಚನೆ:

     ಸೋಮವಾರಪೇಟೆ ತಾಲೋಕು, ಬಳಗುಂದ ಗ್ರಾಮದ ಬಿ.ಜೆ. ಪ್ರಶಾಂತ್‌ ಎಂಬವರಿಗೆ 2013ರ ಜುಲೈ ತಿಂಗಳಲ್ಲಿ ರವಿ, . ಅಜೀಶ್‌, ಪ್ರಭಾಸಿನಿ ಮತ್ತು ಮೊಹಮ್ಮದ್‌ ಅಬೂಬಕರ್‌ ಎಂಬ ವ್ಯಕ್ತಿಗಳು ದುಬೈನ ಎಮಿರೇಟ್ಸ್‌ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ನಂಬಿಸಿ ರೂ 2,30,000/- ಹಣವನ್ನು ಪಡೆದು ವಂಚಿಸಿದ್ದು, ಒಂದು ವರ್ಷವಾದರೂ ಕೆಲಸವನ್ನು ಮಾಡಿಕೊಡದೆ, ಹಣವನ್ನು ಸಹ ವಾಪಾಸ್ಸು ಕೊಡದೆ ಮೋಸ ಮಾಡಿರುವುದಾಗಿ ಕೊಟ್ಟ ದೂರಿಗೆ ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿರ ವ್ಯಕ್ತಿಗಳಿಂದ ದಾರಿ ತಡೆದು ಹಲ್ಲೆ:

    ದಿನಾಂಕ 16-12-2014 ರಂದು ಸುಂಟಿಕೊಪ್ಪದ ವಾಸಿ ಕೆ.ಎ. ಉಸ್ಮಾನ್‌ ಎಂಬವರು ತಮ್ಮಭಾಪ್ತು ಕಾರು ನಂ ಕೆ.ಎ-04-ಜಡ್-47 ರಲ್ಲಿ ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ಗುಡ್ಡೆಹೊಸೂರಿನ ಜಂಕ್ಷನ್ ಬಳಿ ಸಮಯ 11-30 ಪಿ.ಎಂ.ಗೆ ಕೆಲವು ದುಷ್ಕರ್ಮಿಗಳು ಕಾರನ್ನು ತಡೆದು ನಿಲ್ಲಿಸಿ ಕಲ್ಲು ದೊಣ್ಣೆ ಬಾಟಲುಗಳಿಂದ ಕಾರಿನ ಹಿಂಬಾಗ ಮತ್ತು ಕಾರಿನ ಎರಡೂ ಬದಿಗೆ ಜಖಂ ಪಡಿಸಿ ಕೆ.ಎ. ಉಸ್ಮಾನ್‌ ರವರಿಗೂ ಮತ್ತು ಅವರ ಬಾವ ಅಬ್ದುಲ್ಲ ರವರ ತಲೆಗೆ ಹಲ್ಲೆ ನಡೆಸಿದ್ದು, ಈ ಸಂಬಂಧ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, December 16, 2014

ವಿನಾಕಾರಣ ವ್ಯಕ್ತಿಯ ಮೇಲೆ ಹಲ್ಲೆ: 

       ದಿನಾಂಕ :15.12.14 ರಂದು ಸಮಯ ರಾತ್ರಿ 8:00 ಗಂಟೆಗೆ ನಲ್ಲೂರು ಗ್ರಾಮದ ತೀತಿರ ಸತೀಶ ಎಂಬವರು ತಮ್ಮ ಮನೆಯ ಮುಂದೆ ನಿಂತಿರುವಾಗ್ಗೆ, ಸದರಿಯವರ ಅಣ್ಣ ಕುಮಾರ, ಮತ್ತು ಸಿದ್ಧ, ಸುಬ್ಬ, ಗೊಂಬೆರವರುಗಳು ಅಲ್ಲಿಗೆ ಬಂದು ವಿನಾಕಾರಣ ಜಗಳವಾಡಿ ದೊಣ್ಣೆ ಹಾಗು ಕೈಗಳಿಂದ ಹಲ್ಲೆನಡೆಸಿದ್ದು ಈ ಸಂಬಂಧ ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ:

     ಮಡಿಕೇರಿ ತಾಲೋಕು ಅರುವತ್ತೊಕ್ಲು ಗ್ರಾಮದ ನಿವಾಸಿ ಪಿ.ಎಂ. ಪೂವಯ್ಯ ಎಂಬವರ ಮೇಲೆ ಅವರ ಸಹೋದರ ಪಿ.ಎಂ. ಪೊನ್ನಪ್ಪನವರು ಅವರ ಮನೆಯ ಜಗುಲಿ ಮೇಲೆ ಕುಳಿತ ಕ್ಷುಲ್ಲಕ ವಿಚಾರದಲ್ಲಿ ಜಗಳ ಮಾಡಿ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮರದಿಂದ ಬಿದ್ದು ವ್ಯಕ್ತಿಯ ದುರ್ಮರಣ:

     ಕುಶಾಲನಗರ ಠಾಣಾ ಸರಹದ್ದಿನ ಶಿರಂಗಾಲ ಗ್ರಾಮದ ನಿವಾಸಿ ದಾದಾ ದಾದಾ (52) ದಿನಾಂಕ 15-12-2014 ರಂದು ತೆಂಗಿನ ಮರವೇರಿ ಕೆಲಸ ನಿರ್ವಹಿಸುತ್ತಿದ್ದಾಗ ತೆಂಗಿನ ಮರದ ಬುಡ ಆಕಸ್ಮಿಕವಾಗಿ ತುಂಡಾಗಿ ಮರದ ಮೇಲಿದ್ದ ದಾದರವರು ಮರ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದು, ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಬಿದ್ದು ಮಹಿಳೆ ಸಾವು:

     ಮೂರ್ಚೆರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಹಾನಗಲ್ಲು ಬಾಣೆ ಎಂಬಲ್ಲಿ ನಡೆದಿದೆ. ಶ್ರೀಮತಿ ಗಿರಿಜಾ ಎಂಬವರ ಮಗಳಾದ ಯಮುನಾ ಎಂಬ ಮಹಿಳೆ ಮೂರ್ಚೆ ರೋಗದಿಂದ ಬಳಲುತ್ತಿದ್ದು ಈಕೆಗೆ ಕೆಲವು ದಿನಗಳಿಂದ ಬುದ್ಧಿ ಭ್ರಮಣೆಯಾಗಿ ದಿನಾಂಕ 15-12-2014 ರಂದು ರಾತ್ರಿ ಹಾನಗಲ್ಲು ಗ್ರಾಮದ ದೀಣೆ ಮನೆ ಪೊನ್ನಪ್ಪ ಎಂಬ ವ್ಯಕ್ತಿಗೆ ಸೇರಿದ ಪಂಪ್‌ಸೆಟ್‌ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು, ಸೋಮವಾರಪೇಟೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

Monday, December 15, 2014

ಮದ್ಯದಂಗಡಿಗೆ ನುಗ್ಗಿ ದಾಂದಲೆ, ಹಲ್ಲೆ: 

    ವ್ಯಕ್ತಿಯೋರ್ವ ಮದ್ಯದಂಗಡಿಗೆ ನುಗ್ಗಿ ಮಾಮೂಲಿ ಕೊಡಬೇಕೆಂದು ಅಂಗಡಿ ಕೆಲಸಗಾರರೊಬ್ಬರಿಗೆ ಗದರಿಸಿ ಹಲ್ಲೆ ನಡೆಸಿ, ಮದ್ಯದ ಬಾಟಲಿಗಳನ್ನು ಒಡೆದು ನಷ್ಟ ಪಡಿಸಿದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು, ಪಾಲಿಬೆಟ್ಟದ ನಿವಾಸಿ ಎಂ. ರಾಜೇಶ್‌ರವರು ಪಾಲಿಬೆಟ್ಟದ ಲಕ್ಷ್ಮಿ ವೈನ್ಸ್ ಬ್ರಾಂಡಿ ಅಂಗಡಿಯಲ್ಲಿ ವೆಂಡರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 14-12-2014 ರಂದು ಸಂಜೆ 7-00ಗಂಟೆಗೆ ಸದರಿಯವರು ಬ್ರಾಂಡಿ ಅಂಗಡಿಯಲ್ಲಿರುವಾಗ ಅಬ್ಬೂರು ಚೆನ್ನಂಗಿ ಗ್ರಾಮದ ನಿವಾಸಿ ಕುಮಾರ ಎಂಬ ವ್ಯಕ್ತಿ ಸದರಿ ಬ್ರಾಂಡಿ ಅಂಗಡಿಗೆ  ಬಂದು ರಾಜೇಶ್‌ರವರಲ್ಲಿ ‘ನೀನು ನನಗೆ ಮಾಮೂಲಿ ಕೊಡಬೇಕೆಂದು’ ಎಂದು ಕೇಳಿದ್ದು, ಅದಕ್ಕೆ ರಾಜೇಶ್‌ರವರು ಅದನ್ನು ನಿರಾಕರಿಸಿದ್ದರಿಂದ ಸದರಿ ಕುಮಾರರವರು ಅವಾಚ್ಯ ಶಬ್ದದಿಂದ ಬೈದು ಅಲ್ಲೇ ಕೌಂಟರ್ ನಲ್ಲಿ ಇದ್ದ ಬಿಯರ್ ಬಾಟಲಿಯನ್ನು ತೆಗೆದು ರಾಜೇಶ್‌ರವರ ಗಲ್ಲಕ್ಕೆ ಹೊಡೆದು ಗಾಯವನ್ನುಂಟು ಮಾಡಿ ನಂತರ ಆತನು ಕೈಯಲ್ಲಿದ್ದ ಬಿಯರ್‌ ಬಾಟಲಿಯನ್ನು ಶೋಕೇಸ್ ಗೆ ಎಸೆದು ಶೊಕೇಸ್ ನಲ್ಲಿದ್ದ ಕೆಲವು ಮದ್ಯದ ಬಾಟಲಿಯನ್ನು ಒಡೆದು ಹಾಕಿ ಸುಮಾರು 8000=00 ರೂ ನಷ್ಟು ನಷ್ಟವುಂಟು ಮಾಡಿ ನಾಳೆಯಿಂದ ಬ್ರಾಂಡಿ ಅಂಗಡಿಯನ್ನು ನಡೆಸಲು ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಹೋಗಿರುತ್ತಾನೆಂದು ಎಂ. ರಾಜೇಶ್‌ವರು ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಮಾಡಿ ವ್ಯಕ್ತಿಯ ಕೊಲೆ, ಪ್ರಕರಣ ದಾಖಲು: 

     ಕೇರಳ ರಾಜ್ಯದ ಮಜೀದ್‌ ಎಂಬ ವ್ಯಕ್ತಿ ದಿನಾಂಕ 7-12-2014 ರಂದು ಅಸಹಜವಾಗಿ ಸಾವನಪ್ಪಿದ್ದು ಕುಟ್ಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದ ತನಿಖಾ ವೇಳೆಯಲ್ಲಿ ಮತ್ತು ಮೃತ ಮಜೀದ್‌ನ ವೈದ್ಯಕೀಯ ಮರಣೋತ್ತರ ಪರೀಕ್ಷಾ ವರದಿಯಿಂದ ಸದರಿ ವ್ಯಕ್ತಿಯನ್ನು ಯಾರೋ ಕೊಲೆ ಮಾಡಿರುತ್ತಾರೆಂದು ತಿಳಿದು ಬಂದ ಮೇರೆಗೆ ಕುಟ್ಟ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಮ್ಯಾಕ್ಸಿಕ್ಯಾಬ್‌ ಡಿಕ್ಕಿಕಾರು ಜಖಂ:

     ದಿನಾಂಕ 14-12-2014 ರಂದು ಶ್ರೀಮಂಗಲ ಠಾಣಾ ಸರಹದ್ದಿನ ಕುರ್ಚಿ ಗ್ರಾಮದಲ್ಲಿ ಮಂಚಳ್ಳಿ ಗ್ರಾಮದ ನಿವಾಸಿ ಕೆ. ಮುರುಗನ್‌ರವರ ಆಲ್ಟೋ ಕಾರಿಗೆ KA-09-B-8718ರ ಮ್ಯಾಕ್ಸಿಕ್ಯಾಬ್‌ನ್ನು ಅದರ ಚಾಲಕ ಕೃಷ್ಣ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಆಲ್ಟೋ ಕಾರು ಜಖಂ ಗೊಂಡಿದ್ದು, ಕೆ. ಮುರುಗನ್‌ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಾರುತಿ ಓಮ್ನಿ ಡಿಕ್ಕಿ ವ್ಯಕ್ತಿಯ ಸಾವು:

     ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ ಹಂಡ್ಲಿ ಗ್ರಾಮದಲ್ಲಿ ದಿನಾಂಕ 30-11-2014 ರಂದು ಸುಂದರ ಎಂಬವರಿಗೆ ಮಾರುತಿ ಓಮ್ನಿ ಡಿಕ್ಕಿಯಾದ ಪರಿಣಾಮ ಸದರಿಯವರು ತೀವ್ರವಾಗಿ ಗಾಯಗೊಂಡು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 14-12-2014 ರಂದು ಮೃತಪಟ್ಟಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Sunday, December 14, 2014

ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:
      ವಾಹನಕ್ಕೆ ದಾರಿ ಬಿಡುವ ವಿಚಾರದಲ್ಲಿ ಎರಡು ವಾಹನಗಳ ಚಾಲಕರುಗಳ ನಡುವೆ ಜಗಳವಾದ ಹಿನ್ನಲೆಯಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಮಾಕುಟ್ಟ ಬಳಿ ನಡೆದಿದೆ. ವಿರಾಜಪೇಟೆ ನಗರದ ಮೀನುಪೇಟೆ ನಿವಾಸಿ ಪ್ರಶಾಂತ್‌ ಎಂಬವರು ದಿನಾಂಕ: 12-12-14 ರಂದು ಕೆಎ.12.ಎ.7329ರ ಲಾರಿಯಲ್ಲಿ ಕಣ್ಣಾನೂರಿನಿಂದ ವಿರಾಜಪೇಟೆಗೆ ಬರುತ್ತಿರು ವಾಗ್ಗೆ, ಸಮಯ 4-00ಗಂಟೆಗೆ ಮಾಕುಟ್ಟ ಬಳಿ ತಲುಪುವಾಗ್ಗೆ, ವಾಹನ ಸೈಡ್ ಕೊಡುವ ವಿಚಾರದಲ್ಲಿ ಸದರಿಯವರಿಗೆ ಹಾಗೂ ಆರೋಪಿ ಕೆಎಲ್.59.ಡಿ.5341ರ ಮಹೇಂದ್ರ ಲೋಡ್ ಕಿಂಗ್ ವ್ಯಾನ್ ಚಾಲಕನಿಗೂ ಮಾತಿನ ಜಗಳವಾಗಿ ನಂತರ ಪ್ರಶಾಂತ್‌ರವರು ಮಾಕುಟ್ಟದಿಂದ 3 ಕಿ.ಮೀ. ವಿರಾಜಪೇಟೆ ಕಡೆಗೆ ಬರುತ್ತಿರು ವಾಗ್ಗೆ, ಮಹೇಂದ್ರ ಲೋಡ್ ಕಿಂಗ್ ವ್ಯಾನ್ ಚಾಲಕನು ವಾಪಾಸ್ಸು ಬಂದು ಲಾರಿಯನ್ನು ಅಡ್ಡಗಟ್ಟಿ ಏಕಾಏಕಿ ಕಬ್ಬಿಣದ ರಾಡಿನಿಂದ ಪ್ರಶಾಂತ್‌ರವರ ಸೊಂಟಕ್ಕೆ ಹಾಗೂ ಬಲ ಭಾಗದ ಮಂಡಿಯ ಭಾಗಕ್ಕೆ ಹೊಡೆದುದಲ್ಲದೆ, ಲಾರಿಯ ಮುಂದಿನ ಗ್ಲಾಸ್‌ನ್ನು ಮತ್ತು ಬಲ ಭಾಗದ ಕ್ವಾಟರ್ ಗ್ಲಾಸ್ ಒಡೆದು ಹಾನಿ ಪಡಿಸಿದ್ದು ಅಲ್ಲದೆ ಲಾರಿಗೆ ಬೆಂಕಿ ಹಾಕಿ ಕೊಂದು ಹಾಕುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 

ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಸ್ಕೂಟಿ ಡಿಕ್ಕಿ, ಗಾಯ:
     ದಿನಾಂಕ13-12-2014 ರಂದು ಶ್ರೀಮತಿ ವಾಣಿಬೆಳ್ಯಪ್ಪ ಹಾಗು ಇಟ್ಟೀರ ಶುಭದೇವಯ್ಯ ಎಂಬವರು ಗೋಣಿಕೊಪ್ಪದ ಪರಿಮಳಮಂಗಳ ವಿಹಾರದಲ್ಲಿ ಮದುವೆ ಕಾರ್ಯಕ್ರಮವಿದ್ದುದರಿಂದ ಸದರಿ ಮಂಗಳವಿಹಾರದ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ ಮಾತನಾಡಿಕೊಂಡು ಇರುವ ವೇಳೆಯಲ್ಲಿ ವಿರಾಜಪೇಟೆ ಕಡೆಯಿಂದ ಒಂದು ಕಪ್ಪು ಬಣ್ಣದ ಕೈನೆಟಿಕ್‌ ಸ್ಕೂಟಿಯನ್ನು ಅದರ ಸವಾರ ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ಬಂದು ವಾಣಿಬೆಳ್ಯಪ್ಪನವರಿಗೆ ಡಿಕ್ಕಿಪಡಿಸಿದ ಪರಿಣಾಮ ವಾಣಿಬೆಳ್ಯಪ್ಪನವರು ರಸ್ತೆ ಮೇಲೆ ಬಿದ್ದು ತಲೆ ಮತ್ತು ಕೈಗಳಿಗೆ ಗಾಯಗಳಾಗಿದ್ದು, ಸ್ಕೂಟಿಯ ಚಾಲಕನ್ನು ವಾಹನವನ್ನು ನಿಲ್ಲಿಸದೇ ಹೋಗಿದ್ದು, ಈ ಸಂಬಂಧ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನುಷ್ಯಕಾಣೆ ಪ್ರಕರಣ ದಾಖಲು:
     ಕುಶಾಲನಗರ ಠಾಣಾ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ನಿವಾಸಿ ಲೋಕೇಶ ಎಂಬವರ ಮೊದಲನೆ ಹೆಂಡತಿಯ ಮಗ 23 ವರ್ಷ ಪ್ರಾಯದ ಶ್ರೀನಿವಾಸನಿಗೆ ವಿಪರೀತ ಮದ್ಯಪಾನ ಮಾಡುವ ಅಬ್ಯಾಸವಿದ್ದು ,ದಿನಾಂಕ 03/12/2014 ರಂದು ಸಂಜೆ 8 ಪಿ ಎಂಗೆ ಶ್ರೀನಿವಾಸನು ಕುಡಿದು ಮನೆಗೆ ಬಂದಿದ್ದು ಈ ವಿಚಾರದಲ್ಲಿ ಆತನ ತಂದೆ ಗಧರಿಸಿದ್ದು ಈ ವಿಚಾರದಲ್ಲಿ ಶ್ರೀನಿವಾಸನು ಬೇಸರ ಮಾಡಿಕೊಂಡು ಮನೆಬಿಟ್ಟು ಹೋಗಿ ತದನಂತರ ಮನೆಗೆ ಬಾರದೆ ಕಾಣೆಯಾಗಿರುತ್ತಾನೆಂದು ಲೋಕೇಶನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಸ್ತಿ ವಿಚಾರದಲ್ಲಿ ವ್ಯಕ್ತಿಯ ದಾರಿ ತಡೆದು ಕೊಲೆ ಬೆದರಿಕೆ:
     ದಿನಾಂಕ: 13-12-14ರಂದು ಸಮಯ ಬೆಳಿಗ್ಗೆ 9-45ಗಂಟೆಗೆ ವಿರಾಜಪೇಟೆ ತಾಲೋಕು ಕುಂಜಿಲಗೇರಿ ಗ್ರಾಮದ ಎಂ.ಪಿ. ಸೋಮಯ್ಯ ಎಂಬವರು ತಮ್ಮ ತೋಟಕ್ಕೆ ಹೋಗು ತ್ತಿರುವಾಗ್ಗೆ, ಅದೇ ಗ್ರಾಮದ ಅರಸು ಕಾರ್ಯಪ್ಪ ಎಂಬ ವ್ಯಕ್ತಿ ಕೆಎ.12. ಎನ್. 2622ರ ಸಿಲ್ವರ್ ಕಲರ್ ಬೊಲೆರೋ ಮಹೇಂದ್ರ ಜೀಪಿನಲ್ಲಿ ಕೋವಿ ಸಮೇತವಾಗಿ ಅಲ್ಲಿಗೆ ಬಂದು ಎಂ.ಪಿ. ಸೋಮಯ್ಯನವರ ದಾರಿ ತಡೆದು ನಿನ್ನನ್ನು ಯಾರು ಬೆಂಗಳೂರಿನಿಂದ ಬರಲಿಕ್ಕೆ ಹೇಳಿರುವುದು, ನನ್ನ ಅನುಮತಿ ಇಲ್ಲದೆ ನೀನು ಈ ಊರಿಗೆ ಬರುವಂತಿಲ್ಲ. ನಿನಗೆ ಇಲ್ಲಿ ಯಾವುದೇ ಆಸ್ತಿಯ ಹಕ್ಕಿರು ವುದಿಲ್ಲ. ಎಲ್ಲಾ ಆಸ್ತಿಯು ತನ್ನ ಎರಡು ಗಂಡು ಮಕ್ಕಳಿಗೆ ಸೇರಬೇಕಾಗಿದ್ದು, ಆಸ್ತಿಗೆ ಕಾಲಿಟ್ಟರೆ ನಿನ್ನ ಕುಟುಂಬ ಸಮೇತ ಗುಂಡು ಹೊಡೆದು ಕೊಲ್ಲುತ್ತೇನೆಂದು ಅವಾಚ್ಯ ಶಬ್ದ ಗಳಿಂದ ಬೈದಿರುವುದಲ್ಲದೆ ಕೋವಿ ಯಿಂದ ಗುಂಡು ಹೊಡೆದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 
Saturday, December 13, 2014

ಅಕ್ರಮ ಜೂಜು ಪ್ರಕರಣ ದಾಖಲು:
ಅಕ್ರಮ ಜೂಜಾಟ ನಡೆಸುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 12-12-2014 ರಂದು ಶನಿವಾರಸಂತೆ ಪೊಲೀಸ್‌ ಠಾಣಾ ಸರಹದ್ದಿನ ಗಾರೆಕಟ್ಟೆ ಗ್ರಾಮದಲ್ಲಿ ಆರೋಪಿಗಳಾದ ಶಿವಕುಮಾರ್, ಜೋಸೆಫ್‌, ರಾಜೇಶ್‌, ಸುರೇಶ @ ಅಪ್ಪು ಹಾಗು ಕಾತರಾಜು ಎಂಬವರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದು, ಅವರ ಮೇಲೆ ಶನಿವಾರಸಂತೆ ಠಾಣಾಧಿಕಾರಿ ಎಸ್‌.ಎಸ್‌. ರವಿಕಿರಣ್‌ರವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್‌ ದಾಳಿ:
ಪೊನ್ನಂಪೇಟೆ ಪೊಲೀಸ್‌ ಠಾಣಾ ಸರಹದ್ದಿನ ಧನುಗಾಲ ಗ್ರಾಮದ ಎಸ್‌.ಜೆ. ಲೋಕೇಶ್‌ ಎಂಬವರು ತಮ್ಮ ಬಾಪ್ತು ಕಾಫಿ ತೋಟದಲ್ಲಿ ಆಕ್ರಮವಾಗಿ ಜನರ ಜೀವಕ್ಕೆ ಹಾನಿಯಾಗುವ ಸ್ಪೋಟಕ ವಸ್ತುಗಳನ್ನು ಬಳಸಿಕೊಂಡು ಕಲ್ಲು ಕೋರೆಯಲ್ಲಿ ಕಲ್ಲುಗಳನ್ನು ಸ್ಪೋಟಿಸಲು ಟ್ರಾಕ್ಟರ್ ಮತ್ತು ಕಂಪ್ ಪ್ರಷರ್ ಯಂತ್ರದ ಮೂಲಕ ಬಂಡೆ ಕಲ್ಲುಗಳನ್ನು ತೂತು ಮಾಡಿ ಕಲ್ಲನ್ನು ಸ್ಪೋಟಿಸಲು ಇತರರೊಂದಿಗೆ ತಯಾರಿ ನಡೆಸಿದ್ದು ಅವರ ಮೇಲೆ ಪೊನ್ನಂಪೇಟೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮನೆ ಕಳವು:
ವಿರಾಜಪೇಟೆ ತಾಲೋಕು ಅರಮೇರಿ ಗ್ರಾಮದ ಶ್ರೀಮತಿ ಕಾವೇರಿ ಎಂಬವರ ಮನೆಗೆ ದಿನಾಂಕ 11-12-2014ರಂದು ಸಮಯ ಬೆಳಿಗ್ಗೆ 7-00 ಗಂಟೆಯಿಂದ 11-00 ಗಂಟೆಯ ನಡುವೆ ಯಾರೋ ಕಳ್ಳರು ನುಗ್ಗಿ ಬೀರು ಪೆಟ್ಟಿಗೆಯಿಂದ ಶ್ರೀಮತಿ ಕಾವೇರಿಯವರ ಮಗಳಿಗೆ ಸೇರಿದ ಗೋಲ್ಡ್‌ ಮೆಡಲ್‌ನ್ನು ಹಾಗು ನಗದು ರೂ.150/-ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ದಾರಿ ತಡೆದು ಹಲ್ಲೆ: 
ದಿನಾಂಕ 11-12-2014 ರಂದು ಸಮಯ 5-30 ಪಿಎಂಗೆ ಕುಶಾಲನಗರದ ಮುಳ್ಳುಸೋಗೆ ನಿವಾಸಿ ಆಟೋ ಚಾಲಕ ಬಿ. ಕೃಷ್ಣ ರವರು ಕುಶಾಲನಗರದ ಗಣಪತಿ ದೇವಾಸ್ಥಾನದ ಮುಂಬಾಗದಲ್ಲಿ ಹೋಗುತ್ತಿರುವಾಗ್ಗೆ ರಿಜ್ವಾನ್ ಎಂಬ ವ್ಯಕ್ತಿ ಅವರ ದಾರಿ ತಡೆದು ನಿಲ್ಲಿಸಿ ನನ್ನ ಆಟೋ ರಿಕ್ಷಾವನ್ನು ಏಕೆ ಓವರ್ ಟೆಕ್ ಮಾಡುತ್ತಿಯಾ ಎಂದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಅವರ ಎದೆಯ ಬಾಗಕ್ಕೆ ಗುದ್ದಿ ನೋವುಪಡಿಸಿದ್ದು, ಇದೇ ತರ ನಡೆದು ಕೊಂಡರೆ ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಈ ಸಂಬಂಧ ಕುಶಾಲನಗರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲುಪಡಿಸಿಕೊಂಡಿರುತ್ತಾರೆ.

Thursday, December 11, 2014

ವ್ಯಕ್ತಿಯ ಮೇಲೆ ಹಲ್ಲೆ, ಪ್ರಕರಣ ದಾಖಲು: 

ಸೋಮವಾರಪೇಟೆ ತಾಲೋಕು, ಇಗ್ಗೋಡ್ಲು ಗ್ರಾಮದ ನಿವಾಸಿ ಎ.ಎನ್‌. ದೇವಯ್ಯ ಎಂಬವರು ದಿನಾಂಕ 11.12.2014 ರಂದು ಸಮಯ 14:0 ಗಂಟೆಗೆ ಅವರ ಮನೆಯ ಅಂಗಳದ ಬದಿಯಲ್ಲಿದ್ದ ಕಲ್ಲು ಬಂಡೆಗಳನ್ನು ಜೇಸಿಬಿಯಲ್ಲಿ ತೆರವುಗೊಳಿಸುತ್ತಿರುವಾಗ ಅದೇ ಗ್ರಾಮದ ಸುರೇಶ್ ಮತ್ತು ಅವರ ಪತ್ನಿ ಯಶೋದರವರು ಕತ್ತಿ ಮತ್ತು ದೊಣ್ಣೆ ಯನ್ನು ತೆಗೆದುಕೊಂಡು ಅಲ್ಲಗೆ ಬಂದು ಸುರೇಶರವರು ದೊಣ್ಣೆಯಿಂದ ಎ.ಎನ್‌. ದೇವಯ್ಯರವರ ತಲೆಗೆ ಕತ್ತಿಯಿಂದ ಕಡಿದು ದೊಣ್ಣೆಯಿಂದ ಹೊಡೆದು ಮೈ ಕೈಗೆ ಗಾಯ ಪಡಿಸಿ, ಅವ್ಯಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿಗೆ, ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಣದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:

ಮಡಿಕೇರಿ ನಗರದ ಉಕ್ಕುಡದ ನಿವಾಸಿ ಹೆಚ್.ಆರ್‌. ಸುಂದರ ರವರ ಮೇಲೆ ಮಕ್ಕಂದೂರು ಗ್ರಾಮದ ನಿವಾಸಿ ಧರ್ಮೇಂದ್ರ ಎಂಬ ವ್ಯಕ್ತಿ ದಿನಾಂಕ 6-12-2014 ರಂದು ಮದುವೆ ಸಮಾರಂಭದಲ್ಲಿ ಹಣ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ಮಾದ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, December 9, 2014

ಟಿಪ್ಪರ್‌ ಲಾರಿ ಕಳ್ಳತನ:

ಸೋಮವಾರಪೇಟೆ ತಾಲೋಕು, ಬೆಸೂರು ಗ್ರಾಮದ ನಿವಾಸಿ ಬಿ.ವಿ. ವಸಂತರವರಿಗೆ ಸೇರಿದ ಟಿಪ್ಪರ್‌ ಲಾರಿ ಕೆಎ-12-ಎ-7891 ರನ್ನು ದಿನಾಂಕ 05-12-2014 ರಂದು ಎಂದಿನಂತೆ ಬಾಡಿಗೆ ಕೆಲಸ ಮುಗಿಸಿಕೊಂಡು ಚಾಲಕ ಕೇಶವ ಟಿಪ್ಪರನ್ನು ತಂದು ಬೆಸೂರು ಗ್ರಾಮದ ಅವರ ಮನೆಯ ಬಳಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಸದರಿ ವಾಹನದ ಬೆಲೆ ಅಂದಾಜು ಮೌಲ್ಯ ರೂ. 11 ಲಕ್ಷ ಆಗಿರುತ್ತದೆ ಎಂದು ಬಿ.ವಿ. ವಸಂತರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:

ವಿರಾಜಪೇಟೆ ತಾಲೋಕು, ಕಳತ್ಮಾಡು ಗ್ರಾಮದ ನಿವಾಸಿ ಬಿ.ಕೆ. ತಿಮ್ಮಪ್ಪ ಪೂಜಾರಿ (70) ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 7-12-2014 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಪಕ್ಕದ ಕಾಫಿ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿಯವರ ಮಗ ಬಿ.ಟಿ. ಸುಬ್ರಮಣಿಯವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ವ್ಯಕ್ತಿಯ ಅಸಹಜ ಸಾವು, ಕೊಲೆ ಶಂಕೆ:

ಸಿದ್ದಾಪುರ ಠಾಣಾ ಸರಹದ್ದಿನ ಹೊಸೂರು ಗ್ರಾಮದ ನಿವಾಸಿ ಸಿ.ಸಿ. ಉತ್ತಪ್ಪನವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಪ್ಪು @ ದೀಪು ಎಂಬ ವ್ಯಕ್ತಿಯ ಮೃತ ದೇಹವು ದಿನಾಂಕ 7-12-2014 ರಂದು ಹೊಸೂರು ಗ್ರಾಮದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಬಿದ್ದಿರುವುದು ಕಂಡು ಬಂದಿದ್ದು, ಈತನನ್ನು ಯಾರೋ ಕೊಲೆ ಮಾಡಿರಬಹುದೆಂದು ಅನುಮಾನ ಇರುತ್ತದೆ ಎಂಬುದಾಗಿ ಸಿ .ಸಿ. ಉತ್ತಪ್ಪನವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಕೊಲೆ ಮೊಕದ್ದಮೆಯನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Monday, December 8, 2014

ಮಹಿಳೆ ಕೊಲೆ, ಪ್ರಕರಣ ದಾಖಲು:

     ಮಹಿಳೆಯೊಬ್ಬರನ್ನು ಗಂಡ-ಹೆಂಡತಿ ಸೇರಿ ಕೊಲೆ ಮಾಡಿ ಹೂತು ಕಾಕಿದ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಕಕ್ಕಬೆ-ಕಬ್ಬನಕಾಡು ಕಾಫಿ ಎಸ್ಟೇಟ್‌ನಲ್ಲಿ ನಡೆದಿದೆ. ಬಿ.ಆರ್‌. ರಾಜಶೇಖರಯ್ಯ ಹಾಗು ಆತನ ಪತ್ನಿ ಶಾಂತಮ್ಮ ಎಂಬವರು ಮಡಿಕೇರಿ ತಾಲೋಕು ಯವಕಪಾಡಿ ಗ್ರಾಮದ ಕುಲ್ಲಚೆಂಡ ದೀಪಕ್‌ ರವರಿಗೆ ಸೇರಿದ ಕಬ್ಬನಕಾಡು ತೋಟದಲ್ಲಿ ನೆಲೆಸಿದ್ದು, ಅವರ ಮನೆಯಲ್ಲಿ ಶ್ರೀಮತಿ ರೇಣುಕಾ ಎಂಬ ಮಹಿಳೆ ಕೂಡಾ ವಾಸವಾಗಿದ್ದು, ದಿನಾಂಕ 6-12-2014ರಂದು ಬಿ.ಆರ್‌. ರಾಜಶೇಖರಯ್ಯ ಹಾಗು ಆತನ ಪತ್ನಿ ಶಾಂತಮ್ಮ ರೇಣುಕಾನವರೊಂದಿಗೆ ಜಗಳವಾಡಿ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದ, ನಂತರ ಅವರು ವಾಸವಾಗಿದ್ದ ಲೈನುಮನೆಯ ಹತ್ತಿರ ಗುಂಡಿಯಲ್ಲಿ ಹೂತು ಹಾಕಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಕುಲ್ಲಚೆಂಡ್‌ ದೀಪಕ್‌ ನಾಣಯ್ಯನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಾರುರಿ ಕಾರಿಗೆ ಸ್ಕೂಟರ್‌ ಡಿಕ್ಕಿ, ಮೂವರಿಗೆ ಗಾಯ: 

      ಸೋಮವಾರಪೇಟೆ ತಾಲೋಕು, ಗರಗಂದೂರು ಗ್ರಾಮದನಿವಾಸಿ ಎಂ.ವಿ. ಅರುಣ್‌ ಕುಮಾರ್‌ ಎಂಬವರು ದಿನಾಂಕ 7-12-2014 ರಂದು ತಮ್ಮ ಬಾಪ್ತು ಮಾರುತಿ 800 ಕಾರಿನಲ್ಲಿ ತನ್ನ ಪತ್ನಿಯೊಂದಿಗೆ ಸಂಗಯ್ಯನಪುರದಿಂದ ಸೋಮವಾರಪೇಟೆ ಕಡೆಗೆ ಬರುತ್ತಿರುವಾಗ ಸೋಮವಾರಪೇಟೆ ಬಾಣಾವರ ಮುಖ್ಯ ರಸ್ತೆಯ ಕಲ್ಲು ಬಸವ ಎಂಬಲ್ಲಿರುವ ರಸ್ತೆಯ ತಿರುವಿನಲ್ಲಿ ಎ ಎದುರುಗಡೆಯಿಂದ ಕೆಎ-09-ಹೆಚ್‌ಸಿ-0584 ಸಂಖ್ಯೆಯ ಹೊಂಡಾ ಆಕ್ಟಿವ ಸ್ಕೂಟರಿನಲ್ಲಿ ಮೂರು ಜನರು ಬಂದಿದ್ದು, ಸದರಿ ಸ್ಕೂಟರಿನ ಸವಾರ ಸ್ಕೂಟರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿ ಸ್ಕೂಟರಿನಲ್ಲಿದ್ದ ಮೂವರಿಗೂ ಗಾಯಗಳಾಗಿ ಸ್ಕೂಟರ್‌ ಹಾಗೂ ಕಾರು ಜಖಂ ಆಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.  

ಹಣದ ವಿಚಾರ ವ್ಯಕ್ತಿ ಮೇಲೆ ಹಲ್ಲೆ:

     ಹಣದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಬೀಯರ್‌ ಬಾಟಲಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಮಡಿಕೇರಿ ನಗರದ ಕಾವೇರಿ ಹಾಲ್‌ ನಲ್ಲಿ ನಡೆದಿದೆ. ದಿನಾಂಕ 7-12-2014 ರಂದು ಮಡಿಕೇರಿ ನಗರದ ಉಕ್ಕಡ ನಿವಾಸಿ ಸುಂದರ ಎಂಬ ವ್ಯಕ್ತಿ ಹೆಚ್‌.ಟಿ. ಧರ್ಮೇಂದ್ರ ಎಂಬವರೊಂದಿಗೆ ಹಣದ ವಿಚಾರದಲ್ಲಿ ಜಗಳ ಮಾಡಿ ಬೀಯರ್‌ ಬಾಟಲ್‌ನಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಪರೀತ ಮದ್ಯ ಸೇವಿಸಿ ವ್ಯಕ್ತಿಯ ಸಾವು:

     ವ್ಯಕ್ತಿಯೊಬ್ಬರು ವಿಪರೀತ ಮದ್ಯ ಸೇವಿಸಿದ ಪರಿಣಾಮ ನಿತ್ರಾಣಗೊಂಡು ಸಾವನಪ್ಪಿದ ಘಟನೆ ಗೋಣಿಕೊಪ್ಪ ಬಸ್‌‌ ನಿಲ್ದಾಣದಲ್ಲಿ ನಡೆದಿದೆ. ಗೋಣಿಕೊಪ್ಪ ನಗರದ 2ನೇ ವಿಭಾಗದ ನಿವಾಸಿ 58 ವರ್ಷದ ರಾಮಕೃಷ್ಣ ಎಂಬವರು ದಿನಾಂಕ 7-12-2014 ರಂದು ವಿಪರೀತ ಮದ್ಯವನ್ನು ಸೇವಿಸಿ ಗೋಣಿಕೊಪ್ಪ ನಗರದ ಬಸ್ಸು ನಿಲ್ದಾಣದ ಮೆಟ್ಟಲುಗಳ ಮೇಲೆ ಮಲಗಿದ್ದವರು ಮೃತಪಟ್ಟಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿರುತ್ತದೆ.

Sunday, December 7, 2014

ವ್ಯಕ್ತಿಯೊಬ್ಬರ ಅಸ್ವಾಭಾವಿಕ ಸಾವು
           ವ್ಯಕ್ತಿಯೊಬ್ಬರು ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ಗೋಣಿಕೊಪ್ಪ ನಗರದ ನಿವಾಸಿ ಕಾವ್ಯ ಎಂಬವರು ದಿನಾಂಕ 06/12/2014ರಂದು ತನ್ನ ಪತಿ ವರ್ಗೀಸ್‌(35) ಎಂಬವರು ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವಿರಾಜಪೇಟೆ ನಗರ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ವರ್ಗೀಸ್‌ರವರ ಸಾವಿಗೆ ಕಾರಣ ತಿಳಿದುಬಂದಿಲ್ಲವೆನ್ನಲಾಗಿದೆ.

ಬೈಕ್ ಲಾರಿ ಡಿಕ್ಕಿ, ಬೈಕ್‌ ಸವಾರರಿಗೆ ಗಾಯ
       ಬೈಕೊಂದಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರರಿಗೆ ಗಾಯಗಳಾದ ಘಟನೆ ವಿರಾಜಪೇಟೆ ಬಳಿಯ ಮಾಕುಟ್ಟದಲ್ಲಿ ನಡೆದಿದೆ. ದಿನಾಂಕ 06/12/2014ರಂದು ಕೇರಳ ರಾಜ್ಯದ ಕಣ್ಣೂರಿನ ತಳಿಪರಂಬು ನಿವಾಸಿಗಳಾದ ಮೊಹಮ್ಮದ್‌ ಜಾಸರ್‌ ಎಂಬವರು ಅವರ ಸ್ನೇಹಿತರಾದ ನಿಧುಲ್‌ ಕೃಷ್ಣನ್‌, ಮೊಹಮ್ಮದ್‌ ಪರಹಾನ್‌, ತಾಮಿಲ್‌ ಹ್ಯಾರಿಸ್‌ ಎಂಬವರೊಂದಿಗೆ ಎರಡು ಮೋಟಾರು ಬೈಕುಗಳಲ್ಲಿ ಮಡಿಕೇರಿಗೆಂದು ಹೊರಟಿದ್ದು, ಮಾಕುಟ್ಟ ಬಳಿಯ ವಾಟೆಕೊಲ್ಲಿ ಎಂಬಲ್ಲಿ ಎದುರುಗಡೆಯಿಂದ ಕೆಎ-55-2499 ರ ಲಾರಿಯನ್ನು ಅದರ ಚಾಲಕ ಸಿ.ಇ.ಸಿರಾಜ್‌ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೊಹಮ್ಮದ್ ಪರಹಾನ್‌ ಚಾಲಿಸುತ್ತಿದ್ದ ಕೆಎಲ್-31-ಸಿ-8962 ರ ಮೋಟಾರು ಸೈಕಲ್‌ ಗೆ ಡಿಕ್ಕಿಪಡಿಸಿದ ಪರಿಣಾಮ ಮೊಹಮ್ಮದ್ ಪರಹಾನ್‌ ಹಾಗೂ ಹಿಂಬದಿ ಸವಾರ ಶಾಮೀಲ್ ಹ್ಯಾರೀಸ್‌ರವರುಗಳಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರು ಡಿಕ್ಕಿ; ಹಾನಿ
                ಕಾರುಗಳೆರಡು ಪರಸ್ಪರ ಡಿಕ್ಕಿಯಾದ ಪರಿಣಾಮ ಕಾರುಗಳಿಗೆ ಹಾನಿಯಾದ ಘಟನೆ ಮಡಿಕೇರಿ ಬಳಿಯ ಉಡೋತ್‌ ಮೊಟ್ಟೆ ಎಂಬಲ್ಲಿ ನಡೆದಿದೆ. ದಿನಾಂಕ 06-12-14 ರಂದು ಬಿ.ಬಾಡಗ ಗ್ರಾಮದ ಕೆ.ಎನ್‌.ಸುದೀಪ್‌ ಎಂಬವರು ಸ್ವಂತ ಕೆಲಸ ನಿಮಿತ್ತ ಅವರ ತಂದೆಯವರೊಂದಿಗೆ ಕೆಎ-12-ಪಿ-7268 ರ ಕಾರಿನಲ್ಲಿ ಮಡಿಕೇರಿಗೆ ಬಂದು ವಾಪಾಸ್ಸು ಮನೆಗೆ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಕಾಟಕೇರಿ ಗ್ರಾಮದ ಉಡೋತ್‌ಮೊಟ್ಟೆ ಎಂಬಲ್ಲಿ ಎದುರುಗಡೆಯಿಂದ ಭಾಗಮಂಡಲ ಕಡೆಯಿಂದ ಮಡಿಕೇರಿ ಕಡೆಗೆ ಕೆಎ-03-ಎಂ.ಎನ್-5540 ರ ಕಾರನ್ನು ಅದರ ಚಾಲಕ ರಮೇಶರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಸುದೀಪ್‌ರವರ ಕಾರು ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, December 6, 2014

ಪಿಕ್‌ಅಪ್‌ಜೀಪಿಗೆ ಬೈಕ್‌‌ ಡಿಕ್ಕಿ, ಸವಾರನ ಸಾವು:
ದಿನಾಂಕ 5-12-2014 ರಂದು  ಸುರೇಶ್‌ ಎಂಬವರು ತನ್ನ ಬಾಪ್ತು ಬೊಲೆರೋ ಪಿಕ್ ಅಪ್ ಜೀಪು ಸಂ ಕೆಎ-09-ಬಿ-3458 ನಲ್ಲಿ ಮಡಿಕೇರಿಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಸಮಯ ಅಂದಾಜು 1-45 ಪಿ ಎಂ ಗೆ ಮುತ್ತಾರ್ಮುಡಿ ಎಂಬಲ್ಲಿಗೆ ತಲುಪುವಾಗ್ಗೆ ಮಡಿಕೇರಿ ವಿರಾಜಪೇಟೆ ಸಾರ್ವಜನಿಕ ಥಾರು ರಸ್ತೆಯಲ್ಲಿ ಎದುರುಗಡೆಯಿಂದ ಅಂದರೆ ವಿರಾಜಪೇಟೆ ಕಡೆಯಿಂದ ಮಡಿಕೇರಿ ಕಡೆಗೆ ಕೆಎ-12-ಜೆ-1011 ರ ಮೋಟಾರು ಸೈಕಲನ್ನು ಅನಿಲ್ ಪಳಂಗಪ್ಪ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿಕ್ ಅಪ್ ಜೀಪಿಗೆ ಡಿಕ್ಕಿಪಡಿಸಿ ಕೆಳಗಡೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಸದರಿಯವರನ್ನು ಕೂಡಲೇ ಚಿಕಿತ್ಸೆ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನಪ್ಪಿದ್ದು , ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .


ವಿನಾಕಾರಣ ವ್ಯಕ್ತಿಯ ಮೇಲೆ ಹಲ್ಲೆ:

ಶನಿವಾರಸಂತೆ ಪೊಲೀಸ್  ಠಾಣಾ ಸರಹದ್ದಿನ ಶುಂಠಿ ಗ್ರಾಮದ ನಿವಾಸಿ ಎಸ್‌.ಜೆ. ಅವಿನಾಶ್‌ ಎಂಬವರು ದಿನಾಂಕ 4-12-2014 ರಂದು ಸಂಜೆ ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ಅದೇ ಗ್ರಾಮದ ಜನಾರ್ಧನ ಪೂಜಾರಿ, ತೇಜಸ್‌ ಮತ್ತು ಸುಕನ್ಯ ಎಂಬವರು  ಅಲ್ಲಿಗೆ ಬಂದು  ಅವಿನಾಶ್‌ನವರೊಂದಿಗೆ ಜಗಳವಾಡಿ ಅವಿನಾಶ್‌ರವರರನ್ನು ಸದರಿ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ಬೈದು ಕಲ್ಲು ಹಾಗೂ ಕೈಗಳಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಎಸ್‌.ಜೆ.ಅವಿನಾಶ್‌ರವರ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.


ಮಹಿಳೆಯ ಮಾನಭಂಗಕ್ಕೆ ಯತ್ನ ಪ್ರಕರಣ ದಾಖಲು:

ದಿನಾಂಕ 4-12-2014 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ಕೋಟೆಊರು ಗ್ರಾಮದ ನಿವಾಸಿ ಶ್ರೀಮತಿ ಸುಕನ್ಯ ಎಂಬವರು ಅವರ ಮನೆಯ ಬಳಿ ಇರುವ ನೀರಿನ ಟ್ಯಾಂಕ್‌ಗೆ ಹೋಗಿ ಬರುತ್ತಿರುವಾಗ ಆರೋಪಿಗಳಾದ ಅವಿನಾಶ್‌ ಮತ್ತು ಪ್ರಕಾಶ್‌ ಎಂಬ ವ್ಯಕ್ತಿಗಳು ಮೋಟಾರ್‌ ಸೈಕಲ್‌ನಲ್ಲಿ ಅಲ್ಲಿಗೆ ಬಂದು ಸುಕನ್ಯರವರ ಕೈಹಿಡಿಡು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ್ದು, ಅದೇ ವೇಳೆ ಅಲ್ಲಿಗೆ ಬಂದ ಸದರಿ ಸುಕನ್ಯರವರ ಮಾವ ಜನಾರ್ಧನ ಪೂಜಾರಿಯವರ ಮೇಲೆ ಸದರಿ ವ್ಯಕ್ತಿಗಳು ಕತ್ತಿಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. Friday, December 5, 2014

ಮದುವೆ ವಿಚಾರ, ಯುವತಿ ಆತ್ಮಹತ್ಯೆ:

     ವಿರಾಜಪೇಟೆ ತಾಲೋಕು, ಕಡಂಗಮರೂರು ಗ್ರಾಮದ ನಿವಾಸಿ ಎ.ಪಿ. ಪೆಮ್ಮಯ್ಯ ಎಂಬವರ ಮಗಳು ಕುಮಾರಿ. ಎ.ಪಿ. ಲಿಖಿತಾ, ಎಂಬವಳು ಮದುವೆ ಒಪ್ಪಂದವಾದ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 04-12-14 ರಂದು ಸಮಯ 13-00ಗಂಟೆಗೆ ಅವಳು ಮಲಗುವ ಕೋಣೆಯ ಮರದ ಕೌಕೋಲಿಗೆ ಚೂಢಿದಾರದ ವೇಲ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ಆಕೆಯ ತಂದೆ ಎ.ಪಿ ಪೆಮ್ಮಯ್ಯನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ: 

ದಿನಾಂಕ 4-12-2014 ರಂದು ಬೆಳಿಗ್ಗೆ ಕುಶಾಲನಗರದ ಸುಂದರನಗರದ ನಿವಾಸಿ ಎಸ್‌.ಎನ್‌. ಸುರೇಶ್‌ ಎಂಬವರು ಸುಂದರನಗರದ ಪೈಯರ್‌ ಸ್ಟೇಷನ್‌ ಬಳಿ ನಡೆದುಕೊಂಡುಹೋಗುತ್ತಿದ್ದಾಗ ಆರೋಪಿಗಳಾದ ಆನಂದ, ಕುಂಜ್ಞಿ ಮೋನು, ಕೆದಕಲ್ ಚಂದ್ರ, ಸೃಜಿತ್ ಮತ್ತು ಮೋಹನ್ ಎಂಬವರು ಸೇರಿ ಸುರೇಶ್‌ರವರ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ಹಾಗು ಕೈಗಳಿಂದ ಹಲ್ಲೆ ನಡೆಸಿದ್ದು, ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ಎಸ್‌.ಎನ್. ಸುರೇಶ್‌ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಅಪ್ರಾಪ್ತೆ ಮೇಲೆ ಚಿಕ್ಕಪ್ಪ ನಿಂದ ಅತ್ಯಾಚಾರ, ಪ್ರಕರಣ ದಾಖಲು:

ಮಡಿಕೇರಿ ತಾಲೋಕು ನೆಲಜಿ ಗ್ರಾಮದ ನಿವಾಸಿ ದಿವಂಗತ ಕಾಳಪ್ಪ ಎಂಬವರ ಮಗಳಾಧ 15 ವರ್ಷದ ಟಿ.ಕೆ. ಜಯಶ್ರೀ ಮೇಲೆ 2011ನೇ ಇಸವಿಯಲ್ಲಿ ಹಾಗು 2013ನೇ ಇಸವಿಯಲ್ಲಿ ರಜಾ ದಿನಗಳಲ್ಲಿ ಮನೆಯಲ್ಲಿದ್ದಾಗ ಆಕೆಯ ಚಿಕ್ಕಪ್ಪ ರಾಜಪ್ಪ ಎಂಬ ವ್ಯಕ್ತಿ ಅತ್ಯಾಚಾರ ವೆಸಗಿರುತ್ತಾರೆಂದು ದಿನಾಂಕ 4-12-2014 ರಂದು ಸದರಿ ಟಿ.ಕೆ. ಜಯಶ್ರೀ ಎಂಬಾಕೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.  

Thursday, December 4, 2014

ಅನ್ಯ ವ್ಯಕ್ತಿಯ ಚೆಕ್‌ನ್ನು ನೀಡಿ ವ್ಯಕ್ತಿಗೆ ವಂಚನೆ:   

     ಅನ್ಯ ವ್ಯಕ್ತಿಯ ಚೆಕ್‌ನ್ನು ವ್ಯಕ್ತಿಗೆ ನೀಡಿ ನಂಬಿಕೆ ದ್ರೋಹವೆಸಗಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಧನುಗಾಲ ಗ್ರಾಮದಲ್ಲಿ ನ ಡೆದಿದೆ. ವಿರಾಜಪೇಟೆ ತಾಲೋಕು, ಧನುಗಾಲ ಗ್ರಾಮದ ನಿವಾಸಿ ಟಿ.ವಿ. ಶ್ರೀಧರ್‌ ಎಂಬವರಿಂದ ಅದೇ ಗ್ರಾಮದ ನಿವಾಸಿಗಳಾದ ಅಜಿಜ್ @ ಅಚ್ಚಿ ಮತ್ತು ಎಸ್.ಎಂ.ಪೈಸಲ್ ಎಂಬವರು ದಿನಾಂಕ 24-7-2014 ರಂದು ರೂ 1,03,000/- ಹಣವನ್ನು ಪಡೆದುಕೊಂಡಿದ್ದು, ಸದರಿ ಹಣಕ್ಕೆ ಮಾಯಮುಡಿಯಲ್ಲಿರುವ ವಿ.ಎಸ್.ಎಸ್.ಎನ್ ಬ್ಯಾಂಕ್‌ ಚೆಕ್ ನ್ನು ನೀಡಿದ್ದು ಸದರಿ ಚೆಕ್ಕಿನ ಖಾತೆಯಲ್ಲಿ ಹಣವು ಇಲ್ಲದೆ ಇರುವುದರಿಂದ ಬ್ಯಾಂಕಿನಲ್ಲಿ ವಿಚಾರಿಸಲಾಗಿ ಎಸ್‌.ಎಂ. ಪೈಸಲ್‌ನವರ ಬಾಪ್ತು ಚೆಕ್‌ನ್ನು ಅಜಿತ್‌ @ ಅಚ್ಚಿ ರವರು ಟಿ.ವಿ. ಶ್ರೀಧರ್‌ಗೆ ನೀಡಿದ ಚೆಕ್‌ ತನ್ನದೆಂದು ಹೇಳಿ ನಂಬಿಕೆ ದ್ರೋಹ ಮತ್ತು ಮೋಸ ಮಾಡಿದ್ದು ಅಲ್ಲದೆ ಈ ಬಗ್ಗೆ ಸದರಿ ವ್ಯಕ್ತಿಗಳಲ್ಲಿ ವಿಚಾರಿಸಿದಾಗಿ ಸದರಿ ಇಬ್ಬರು ವ್ಯಕ್ತಿಗಳು ಶ್ರೀಧರ್‌ರವರ ಮನೆಗೆ ಅಕ್ರಮಪ್ರವೇಶ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನ್ಯಾಯಾಲಯಕ್ಕೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಅನಾರೋಗ್ಯದ ಹಿನ್ನೆಲೆ ವೃದ್ದೆಯ ಆತ್ಮಹತ್ಯೆ:
     ಅನಾರೋಗ್ಯದಿಂದ ಬಳಲುತ್ತಿದ್ದ 61 ವರ್ಷ ಪ್ರಾಯದ ವೃದ್ದೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ. ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶ್ರೀಮತಿ ಲಕ್ಷ್ಮಿ ಎಂಬವರು ಅನಾರೋಗ್ಯದಿಂದಬಳಲುತ್ತಿದ್ದು, ಇದೇ ವಿಚಾರವಾಗಿ ಜಿಗುಪ್ಸೆಗೊಂಡು ದಿನಾಂಕ 3-11-2014 ರಂದು ಮನೆಯಲ್ಲಿ ಯಾರೂ ಇಲ್ಲದೆ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿಯವರ ಮಗ ಟಿ.ಬಿ. ರಾಜೇಶ್‌ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಸ್ಸಿನಿಂದ ಚಿನ್ನಾಭರಣ ಇಟ್ಟಿದ್ದ ಸೂಟ್‌ಕೇಸ್‌ ಮತ್ತು ಕಿಟ್‌ಬ್ಯಾಗ್‌ ಕಳವು:
     ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನಾಭರಣ ಮತ್ತು ಸೀರೆಗಳಿರುವ ಸೂಟ್‌ಕೇಸ್‌ ಮತ್ತು ಕಿಟ್‌ಬ್ಯಾಗ್‌ಗಳು ಕಳ್ಳತನವಾದ ಘಟನೆ ಮಡಿಕೇರಿ ನಗರ ಠಾಣೆಯಲ್ಲಿ ವರದಿಯಾಗಿದೆ. ಬೆಂಗಳೂರಿನ ನಿವಾಸಿ ಶ್ರೀಮತಿ ಸಾವಿತ್ರಿಶಿವಾನಂದ್‌ ಎಂಬವರು ತನ್ನ ತಂಗಿ ವೇದಾವತಿಯೊಂದಿಗೆ ದಿನಾಂಕ 3-12-2014 ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನಿಂದ ಮಡಿಕೇರಿಗೆ ಐರಾವತ ಬಸ್ಸಿನಲ್ಲಿ ಬಂದಿದ್ದು, ಅವರಿಗೆ ಸೇರಿದ ಒಂದು ಸೂಟ್‌ಕೇಸ್‌ ಮತ್ತು 2 ಕಿಟ್‌ ಬ್ಯಾಗ್‌ಗಳಲ್ಲಿ 10 ರೇಷ್ಮೆ ಸೀರೆಗಳು. 100 ಗ್ರಾಂ ಚಿನ್ನದ ಸರ, 50 ಗ್ರಾಂ ಮುತ್ತಿನ ನೆಕ್ಲೇಸ್‌, 50 ಗ್ರಾಂ ಕಲ್ಲಿನ ನೆಕ್ಲೇಸ್‌, 8 ಗ್ರಾಂ ಮುತ್ತಿನ 2 ಜೊತೆ ಓಲೆಗಳನ್ನು ಇಟ್ಟಿದ್ದು, ಸದರಿಸೂಟ್‌ಕೇಸ್‌ ಮತ್ತು ಬ್ಯಾಗ್‌ಗಳನ್ನು ಕ್ಯಾರಿಯರ್‌ನಲ್ಲಿ ಇಟ್ಟಿದ್ದು, ಮಡಿಕೇರಿಗೆ ಬಂದು ಬಸ್ಸು ಇಳಿಯುವ ಸಂದರ್ಭದಲ್ಲಿ ಸದರಿಸೂಟ್‌ ಕೇಸ್‌ ಮತ್ತು ಬ್ಯಾಗ್‌ಗಳು ಕಳುವಾದ ಬಗ್ಗೆ ಗಮನಕ್ಕೆ ಬಂದಿದ್ದು, ಕಳುವಾದ ಚಿನ್ನಾಭರಣ ಮತ್ತು ಸೀರೆಗಳ ಒಟ್ಟು ಮೌಲ್ಯ ಅಂದಾಜು ರೂ. 6,00,000/- ಗಳಾಗಿದ್ದು, ಈ ಬಗ್ಗೆ ಮಡಿಕೇರಿ ನಗರ ಪೊಲೀಸ್‌ ಠಾಣೆಗೆ ಶ್ರೀಮತಿ ಸಾವಿತ್ರಿ ಶಿವಾನಂದರವರು ದೂರನ್ನು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

ಹಣದ ವಿಚಾರದಲ್ಲಿ ಬೇಸತ್ತು ವ್ಯಕ್ತಿಯ ಆತ್ಮಹತ್ಯೆ

        ಹಣ ಸಾಲ ಪಡೆದ ವಿಚಾರದಲ್ಲಿ ವ್ಯಕ್ತಿಯೊಬ್ಬ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡದಿದೆ. ಕುಶಾಲನಗರ ಠಾಣಾ ವ್ಯಾಪ್ತಿಯ ತೊರನೂರು ಗ್ರಾಮದ ನಿವಾಸಿ ಪ್ರಶಾಂತ ಎಂಬ ವ್ಯಕ್ತಿ ಗ್ರಾಮದ ಕೆಲವು ವ್ಯಕ್ತಿಗಳಿಂದ ಸಾಲವನ್ನು ಪಡೆದುಕೊಂಡಿದ್ದು, ಇದೇ ವಿಚಾರವಾಗಿ ಬೇಸತ್ತು ದಿನಾಂಕ 1-12-2014 ರಂದು ಯಾವುದೋವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಆತ ಮೃತಪಟ್ಟಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Wednesday, December 3, 2014

ಮರದ ಕೊಂಬೆ ಬಿದ್ದು ವ್ಯಕ್ತಿಯ ಸಾವು:  
     ದಿನಾಂಕ 25-11-14ರಂದು ಬೆಳಿಗ್ಗೆ ವಿರಾಜಪೇಟೆ ತಾಲೋಕು ಕಡಂಗಮರೂರು ಗ್ರಾಮದ ನಿವಾಸಿ ಶ್ರೀಮತಿ ಸೈನಬ ರವರ ಗಂಡ ಇಬ್ರಾಹಿಂ, ರವರು ಸೌದೆಗಾಗಿ ಒಣಗಿದ ಹಲಸಿನ ಮರವನ್ನು ಗರಗಸದಿಂದ ಕುಯ್ಯುವಾಗ ಮರದ ಒಣಗಿದ ರೆಂಬೆಗಳು ಇಂಬ್ರಾಹಿಂರವರ ತಲೆ ಮತ್ತು ಬೆನ್ನಿನ ಭಾಗಕ್ಕೆ ಬಿದ್ದು ತುಂಬಾ ಪೆಟ್ಟಾಗಿ ಚಿಕಿತ್ಸೆ ಬಗ್ಗೆ ಮಂಗಳೂರು ಯನಪೋಯ ಆಸ್ಪತ್ರೆ ಯಲ್ಲಿ ದಾಖಲಾಗಿದ್ದು, ದಿನಾಂಕ: 01-12-14ರಂದು ರಾತ್ರಿ 10-00ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Tuesday, December 2, 2014

ಬೈಕ್‌ಗೆ ಕಾರು ಡಿಕ್ಕಿ, ಸವಾರನಿಗೆ ಗಾಯ: 

     ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ರೇಂಜರ್‌ ಬ್ಲಾಕ್‌ ನಿವಾಸಿಯಾದ ಸುನಿಲ್‌ ಕುಮಾರ್‌ ಎಂಬವರು ಈ ದಿನ ದಿನಾಂ 2-12-2014 ರಂದು ತನ್ನ ಬಾಪ್ತು ಮೋಟಾರು ಸೈಕಲ್ ನಂ ಕೆಎ 12 ಕೆ 7073 ರಲ್ಲಿ ಜಿ.ಸಿ.ವೇದಿಕೆ ಕಡೆಯಿಂದ ಹಾಲಿನ ಡೈರಿಯ ಕಡೆಗೆ ಬರುತ್ತಿದ್ದಾಗ, ಹಿಂದುಗಡೆಯಿಂದ ಬಂದ ದಿನೇಶ್ ಎಂಬವರು ತಮ್ಮ ಕಾರನ್ನು ಅತೀ ವೇಗ ಮತ್ತು ಅಜಾಗರೂಕಯಿಂದ ಚಾಲಿಸಿಕೊಂಡು ಬಂದು ಮೋಟಾರ್‌ ಸೈಕಲ್‌ ಹಿಂದುಗಡೆಗೆ ಡಿಕ್ಕಿಪಡಿಸಿದ ಪರಿಣಾಮ, ಸವಾರ ಸುನಿಲ್‌ಕುಮಾರ್‌ರವರು ಮೋಟಾರು ಸೈಕಲ್ ಸಮೇತ ಬಿದ್ದು ಅವರ ಎಡ ಕೈಯ ಮೇಲೆ ಕಾರಿನ ಚಕ್ರಹರಿದು ಗಾಯವಾಗಿದ್ದು, ಹಾಲಿ ಸದರಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸ್ಕೂಟರ್‌ಗೆ ಮಾರುತಿ ಕಾರು ಡಿಕ್ಕಿ, ಮಹಿಳೆ ಸಾವು:

     ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನಪ್ಪಿ ಸವಾರ ಗಾಯಗೊಂಡ ಘಟನೆ ಸೋಮವಾರಪೇಟೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 1-12-2014 ರಂದು ಸೋಮವಾರಪೇಟೆ ತಾಲೋಕು ಮಾದ್ರೆ ಗ್ರಾಮದ ನಿವಾಸಿ ಎನ್‌.ಎಸ್‌. ಪಾಲಾಕ್ಷ ಎಂಬವರು ತನ್ನ ಪತ್ನಿಧನಲಕ್ಷಿಯೊಂದಿಗೆ ಹಿರಿಕರ ಗ್ರಾಮಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದು, ಗೋಪಾಲಪುರ ಗ್ರಾಮದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಶ್ರೀನಿವಾಸ ಎಂಬ ವ್ಯಕ್ತಿ ಮಾರುತಿ-800 ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲಿಸಿಕೊಂಡು ಬಂದು ಎನ್‌.ಎಸ್‌. ಪಾಲಾಕ್ಷ್ಯರ ವರ ಸ್ಕೂಟರ್‌ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಸವಾರ ಎನ್‌.ಎಸ್‌. ಪಾಲಕ್ಷರವರು ಗಾಯಗೊಂಡು ಅವರ ಪತ್ನಿ ಸಾವನಪ್ಪಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.   

ಮದ್ಯಪಾನ ಮಾಡಿದ ಯುವಕರಿಬ್ಬರಿಂದ ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ 1-12-2014 ರಂದು ಮುರ್ನಾಡು ನಿವಾಸಿ ಹೆಚ್‌.ಎಸ್‌. ರಾಮಚಂದ್ರ ಎಂಬವರು ತಮ್ಮ ಗೂಡ್ಸ್‌ ವಾಹನದಲ್ಲಿ ಮಡಿಕೇರಿ ತಾಲೋಕು ಕೋಡಂಬೂರು ಗ್ರಾಮದಿಂದ ಮೂರ್ನಾಡು ಕಡೆಗೆ ಬರುತ್ತಿದ್ದಾಗ ಸುನತ್‌ ಹಾಗು ಮಂದಣ್ಣ ಎಂಬ ವ್ಯಕ್ತಿಗಳಿಬ್ಬರು ಮೋಟಾರ್‌ ಸೈಕಲನ್ನು ರಸ್ತೆಬದಿ ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದು, ಗೂಡ್ಸ್‌ವಾಹನವು ಹೋಗಲು ಸ್ಥಳ ಇಲ್ಲದರಿಂದ ಗೂಡ್ಸ್‌ ಚಾಲಕ ರಾಮಚಂದ್ರ್ರವರು ಮೋಟಾರ್‌ ಸೈಕಲನ್ನು ರಸ್ತೆಬದಿಗೆ ತಳ್ಳಿ ನಿಲ್ಲಿಸಿದ್ದು, ಇದರಿಂದ ಕೋಪಗೊಂಡ ಇಬ್ಬರು ವ್ಯಕ್ತಿಗಳು ರಾಮಚಂದ್ರರವರನ್ನು ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ ಕಲ್ಲಿನಿಂದ ಮತ್ತುಕೈಗಳಿಂದ ಹಲ್ಲೆ ನಡೆಸಿರುತ್ತಾರೆಂದು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರನ್ನು ನೀಡಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

Monday, December 1, 2014

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯ ಸಾವು:

     ಮಡಿಕೇರಿ ತಾಲೋಕು, ಮಕ್ಕಂದೂರು ಗ್ರಾಮದ ನಿವಾಸಿ ಮೊಗೇರ ರಾಮು ಎಂಬವರ ಮಗಳು ಪರಮೇಶ್ವರಿ ಮಕ್ಕಂದೂರುವಿನ ಸರ್ಕಾರಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು ಅವಳಿಗೆ ಸುಮಾರು 1 ವರ್ಷದಿಂದ ಅಪೆಂಡಿಕ್ಸ್ ಹೊಟ್ಟೆ ನೋವು ಇದ್ದು ಈ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರೂ ಸಹಾ ಮಗಳು ಹೊಟ್ಟೆನೋವು ವಾಸಿಯಾಗದೆ ಇದ್ದು, ದಿನಾಂಕ 28-11-2014 ರಾತ್ರಿ ಪರಮೇಶ್ವರಿಯು ವಾಂತಿ ಮಾಡಿದ್ದು, ಆಕೆಯನ್ನು ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಈ ದಿನ 30-11-2014 ರಂದು ಮೃತಪಟ್ಟಿದ್ದು. ಈಕೆ ಯಾವುದೋಮಾತ್ರೆಯನ್ನು ನುಂಗಿದ ಪರಿಣಾಮವಾಗಿ ಮೃತಪಟ್ಟಿರಬಹುದೆಂದು ನಂಬಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅಕ್ರಮ ಗಾಂಜಾ ಸಾಗಾಟ, ಆರೋಪಿ ಬಂಧನ:

     ಗೋಣಿಕೊಪ್ಪ ಪೊಲೀಸ್‌ ಠಾಣಾ ಪಿ.ಎಸ್‌.ಐ. ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗೋಣಿಕೊಪ್ಪ ನಗರದ ಆರ್‌.ಎಂ.ಸಿ. ಬಳಿ ಗೋಣಿಕೊಪ್ಪ ನಗರದ ವಾಸಿಗಳಾದ ಕೃಷ್ಣ ಹಾಗೂ ಶ್ಯಾಂ ಎಂ ವ್ಯಕ್ತಿಗಳು ಬೈಕ್‌ ಸಂ. ಕೆಎ-099ಹೆಚ್ 2341 ರಲ್ಲಿ ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೆ 2000 ರೂ ಮೌಲ್ಯದ 200 ಗ್ರಾಂ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದುದನ್ನು ಗೋಣಿಕೊಪ್ಪ ಠಾಣಾಧಿಕಾರಿ ಜೆ.ಇ. ಮಹೇಶ್‌ ಹಾಗು ಸಿಬ್ಗಂದಿಗಳು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಪತ್ನಿಗೆ ಪತಿಯೊಂದ ವಂಚನೆ, ಪ್ರಕರಣ ದಾಖಲು: 

     ವ್ಯಕ್ತಿಯೊಬ್ಬರು 2ನೇ ಮದುವೆಯಾಗಿ ತನ್ನ ಪತ್ನಿಗೆ ವಂಚಿಸಿದ ಬಗ್ಗೆ ಕುಶಾಲನರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಕುಶಾಲನಗರ ಠಾಣಾ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಬಿ.ಎಸ್‌. ಸೌಮ್ಯ ಎಂಬವರು ದಿನಾಂಕ 2-12-2001 ರಂದು ಮೈಲಾರಿಯವರೊಂದಿಗೆ ವಿವಾಹವಾಗಿದ್ದು, ನಂತರದ ದಿನಗಳಲ್ಲಿ ಪತಿ-ಪತ್ನಿ ನಡುವೆ ವೈಮನಸ್ಸಾಗಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವು ನಡೆದಯುತ್ತಿದ್ದು , ದಿನಾಂಕ 5-4-2013 ರಂದು ಸಿಂಧು ಎಂಬುವರೊಂದಿಗೆ ತನ್ನ ಗಂಡ ಮೈಲಾರಿ 2ನೇ ಮದುವೆಯಾಗಿದ್ದು, ಈ ವಿಚಾರದಲ್ಲಿ ಬಿ.ಎಸ್‌. ಸೌಮ್ಯರವರು ಹಿಂಸೆ, ಹಾಗೂ ಮಾನಸಿಕವಾಗಿ ನೊಂದು ಕುಶಾಲನಗರ ಪೊಲೀಸರಿಗೆ ದೂರನ್ನು ನೀಡಿದ್ದು ಅದರಂತೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.