Thursday, December 25, 2014

ಮನೆ ಕಳವು ಪ್ರಕರಣ ದಾಖಲು:     ಸಿದ್ದಾಪುರ ನಗರದ ನಿವಾಸಿ ಎಂ.ಜೆ. ಜಾರ್ಜ್ @ ಅನಿ ಎಂಬವರು ದಿನಾಂಕ 24-12-2014 ರಂದು ರಾತ್ರಿ ಸಮಯ 09.30 ಗಂಟೆಗೆ ಕ್ರಿಸ್ ಮಸ್ ಹಬ್ಬದ ಸಲುವಾಗಿ ಅವರ ಹೆಂಡತಿ ಹಾಗೂ ಅವರ ಮೂರು ಜನ ಮಕ್ಕಳ ಜೊತೆಗೆ ಅವರ ತಂದೆ ಮನೆಯಾದ ನೆಲ್ಲಿಹುದಿಕೇರಿ ಗ್ರಾಮದ ನಲ್ವತೇಕ್ರೆಗೆ ಹೋಗಿದ್ದು, ಹೋಗುವ ಸಮಯದಲ್ಲಿ ಪಿರ್ಯಾದಿಯವರು ಮನೆಗೆ ಬೀಗ ಹಾಕಿ ಹೋಗಿದ್ದು ಕ್ರಿಸ್ ಮಸ್ ಹಬ್ಬದ ಪ್ರಾರ್ಥನೆ ಸಲುವಾಗಿ ಚರ್ಚ್ ಗೆ ಹೋಗಬೇಕಾಗಿದ್ದರಿಂದ ಬಟ್ಟೆ ಬದಲಿಸುವ ಸಲುವಾಗಿ ಸದರಿಯವರು ತಂದೆ ಮನೆಯಿಂದ ಅವರ ಮನೆಗೆ ವಾಪಸ್ಸು ಸಮಯ ರಾತ್ರಿ 10.30 ಗಂಟೆಗೆ ಬಂದು ಮನೆಯ ಬಾಗಿಲನ್ನು ತೆರೆಯುವ ಸಲುವಾಗಿ ನೋಡಿದಾಗ, ಅವರು ಮನೆಗೆ ಹಾಕಿದ ಬೀಗವನ್ನು ತೆಗೆದು ಯಾರೋ ಕಳ್ಳರು ಮನೆಗೆ ನುಗ್ಗಿ 12 ಗ್ರಾಂ ನ ಚಿನ್ನದ ಸರ, 8 ಗ್ರಾಂ ನ ಚಿನ್ನದ ಕೈ ಬಳೆ, 6 ಗ್ರಾಂ ನ ಚಿನ್ನದ ಉಂಗುರ, 4 ಗ್ರಾಂ ನ ಉಂಗುರ, 2 ಗ್ರಾಂ ನ ಉಂಗುರ, ಒಟ್ಟು 4 ಗ್ರಾಂ ತೂಕದ 7 ಸಣ್ಣ ಚಿನ್ನದ ಉಂಗುರಗಳು. ಒಟ್ಟು 36 ಗ್ರಾಂ ನಿಂದ ಕೂಡಿದ್ದು ಇದರ ಅಂದಾಜು ಬೆಲೆ ರೂ 70.000/= ಮತ್ತು ಚಿಲ್ಲರೆ ರೂ 500/= ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯದ ಅಮಲಿನಲ್ಲಿ ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:
ವಿರಾಜಪೇಟೆ ತಾಲೋಕು ಬಿರುನಾಣಿ ಗ್ರಾಮದ ಪಣಿಎರವರ ರಾಜು ಎಂಬ ವ್ಯಕ್ತಿ ಮದ್ಯವನ್ನು ಸೇವಿಸಿ ಅದರ ಅಮಲಿನಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿಯವರ ಪತ್ನಿ ಸಿಂದುರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಳೇ ದ್ವೇಷದ ಹಿನ್ನೆಲೆ, ವ್ಯಕ್ತಿಯ ದಾರಿ ತಡೆದು ಹಲ್ಲೆ:

ದಿನಾಂಕ 24-12-2014 ರಂದು ಸಮಯ 10.30 ಎ.ಎಂ.ಗೆ ಕುಶಾಲನಗರ ಠಾಣಾ ಸರಹದ್ದಿಗೆ ಸೇರಿದ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಫಿರ್ಯಾದಿ ಎಂ.ಯು.ಭರತ್‌ಎಂಬುವವರು ತಮ್ಮ ಬಾಪ್ತು ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿರುವಾಗ್ಗೆ ಚಿಕ್ಕಬೆಟ್ಟಗೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳಾದ ಎಂ.ಹೆಚ್. ಮಹಮ್ಮದ್, ಕೆ.ಜಿ.ಗಿರೀಶ್ ಮತ್ತು ಎನ್.ಆರ್. ವಿಶ್ವನಾಥ್‌ರವರು ಸೇರಿ ಹಳೇ ದ್ವೇಷದಿಂದ ಅಡ್ಡಗಟ್ಟಿ ಮೋಟಾರ್‌ ಸೈಕಲ್‌ನಿಂದ ಕೆಳಗೆ ಬೀಳಿಸಿ ಮಹಮ್ಮದ್ ಮತ್ತು ವಿಶ್ವನಾಥ್‌ರವರು ಹಿಡಿದುಕೊಂಡು ಗಿರೀಶ್‌ರವರು ಬೆಲ್ಟ್‌ನಿಂದ ಬೆನ್ನಿಗೆ. ಹೊಟ್ಟೆಯ ಬಲಭಾಗಕ್ಕೆ ಹಾಗೂ ಕುತ್ತಿಗೆ ಭಾಗಕ್ಕೆ ಹೊಡೆದು ನೋವುಪಡಿಸಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯಲು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಪ್ರವೇಶ,2.3 ಲಕ್ಷ ಮೌಲ್ಯದ ಕಾಫಿ ಕಳವು: 
     ದಿನಾಂಕ: 23-12-14ರಂದು ಹಗಲು ವಿರಾಜಪೇಟೆ ತಾಲೋಕು, ವಿ.ಬಾಡಗ ಗ್ರಾಮದ ಪಿರ್ಯಾದಿ ತೀತಿಮಾಡ ಕಾವೇರಪ್ಪನವರ ಬಾಪ್ತು ಕಾಫಿ ತೋಟದಲ್ಲಿ ವಿ.ಬಾಡಗ ಗ್ರಾಮದ ವಾಸಿ ಅಮ್ಮೆಕಂಡ ಪೆಮ್ಮಯ್ಯ, ರವರ ಮೂವರು ಮದುವೆಯಾಗಿರುವ ಹೆಣ್ಣು ಮಕ್ಕಳಾದ ಎ.ಪಿ. ನಮೀತ, ಎ.ಪಿ. ಸವೀತಾ ಮತ್ತು ಎ.ಪಿ. ಸುಮಿತ್ರ, ರವರುಗಳು ಸೇರಿ ಸುಮಾರು 15 ಜನ ಕೂಲಿ ಆಳುಗಳನ್ನು ಕರೆದುಕೊಂಡು ಬಂದು ಪಿರ್ಯಾದಿಯವರ ಸರ್ವೆ ನಂ. 127/6ರ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿ ಗಿಡದಲ್ಲಿದ್ದ ಅಂದಾಜು 10,000 ಕಿ.ಗ್ರಾಂ. ಹಸಿ ಕಾಫಿ ಅಂದಾಜು ಬೆಲೆ 2,30,000/- ಯ ಕಾಫಿಯನ್ನು ಕುಯ್ದು ಕಳ್ಳತನ ಮಾಡಿ ರಸ್ತೆಯಲ್ಲಿ ನಿಲ್ಲಿಸಿದ ವಾಹನದಲ್ಲಿ ಸಾಗಿಸಿರುವುದಾಗಿ ತೀತಿಮಾಡ ಕಾವೇರಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wedesday, December 24, 2014

ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿ ವಂಚನೆ:
ಮಡಿಕೇರಿ ತಾಲೋಕು ಮೇಕೇರಿ ಗ್ರಾಮದ ನಿವಾಸಿ ಪಿರ್ಯಾದಿ ಎಂ.ಕೆ. ಮುಸ್ತಾಫ ಎಂಬವರು  ಮಡಿಕೇರಿಯ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್‌ ಶಾಖೆಯಲ್ಲಿ 67084715833 ರ ಎಸ್ ಬಿ ಖಾತೆಯನ್ನು ಹೊಂದಿದ್ದು ದಿನಾಂಕ 21-12-14 ರಂದು ಪಿರ್ಯಾದಿಯವರು ಮನೆಯಲ್ಲಿದ್ದಾಗ ಮದ್ಯಾಹ್ನ 02-30 ಪಿ ಎಂ ಗೆ ಯಾರೋ ವ್ಯಕ್ತಿ ಮೊಬೈಲ್ ಸಂಖ್ಯೆ 9448877802 ಗೆ 7250503496 ರ ನಂಬರಿನಿಂದ ಕರೆ ಮಾಡಿ ಹಿಂದಿಯಲ್ಲಿ ನಿಮ್ಮ ಎ ಟಿ ಎಂ ನಂ, ಪಾಸ್‌ ಪುಸ್ತಕ ಸಂಖ್ಯೆ, ಎ ಟಿ ಎಂ ಕಾರ್ಡಿನ ಹಿಂಬದಿಯಲ್ಲಿರುವ ಸಿರಿಯಲ್ ನಂ ನ್ನು ಕೊಡಿ ಎಂದು ಹೇಳಿದಾಗ ಪಿರ್ಯಾದಿಯವರು ನೀವು ಎಲ್ಲಿಂದ ಮಾತನಾಡುತ್ತಿದ್ದೀರಾ, ಎ ಟಿ ಎಂ ನಂ ನಿಮಗೆ ಏಕೆ ಬೇಕು ಎಂದು ಕೇಳಿದಾಗ ಅವರು ತಾನು ಬ್ಯಾಂಕಿನಿಂದ ಮಾತನಾಡುತ್ತಿದ್ದೇನೆ ನಿಮ್ಮ ಎ ಟಿ ಎಂ 3 ತಿಂಗಳಿನಿಂದ ಚಲಾವಣೆ ಆಗದ್ದರಿಂದ ಖಾತೆ ಬಂದ್ ಆಗಿದ್ದು ಅದನ್ನು ರಿನೀವ್ ಮಾಡಬೇಕು ಆದ್ದರಿಂದ ಕೇಳಿದ ವಿವರವನ್ನು ಕೊಡಿ ಎಂದು ಹೇಳಿದ ಮೇರೆಗೆ ಪಿರ್ಯಾದಿಯವರು ಎಲ್ಲಾ ವಿವರವನ್ನು ನೀಡಿದ್ದು, ದಿನಾಂಕ 21/12/2014 ಮತ್ತು 22-12-2014  ರಂದು ಪಿರ್ಯಾದಿಯವರ ಖಾತೆಯಲ್ಲಿದ್ದ 87,640 ರೂ ಗಳನ್ನು ಆನ್ ಲೈನ್ ಮುಖಾಂತರ ಡ್ರಾ ಮಾಡಿ ವಂಚಿಸಿದ್ದು  ಈ ಸಂಬಂಧ ಸದರಿಯವರ ದೂರಿನ ಮೇರೆಗೆ  ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, December 23, 2014

ಆಸ್ತಿಗೆ ಅಕ್ರಮ ಪ್ರವೇಶ ಕೊಲೆ ಬೆದರಿಕೆ:
        ಪಿರ್ಯಾದಿ ಶ್ರೀಮತಿ ವಿಜಯಮ್ಮ ಗಂಡ ಪೌತಿ ಸುಕುಮಾರ, ಪ್ರಾಯ 60 ವರ್ಷ, ವಾಸ ಪುಲಿಯೇರಿ ಗ್ರಾಮ ಇವರಿಗೆ ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಪುಲಿಯೇರಿ ಗ್ರಾಮದಲ್ಲಿ ಸರ್ವೇ.ನಂ.108/8A ರಲ್ಲಿ ಅವರ ಗಂಡನ ಮರಣಾನಂತರ ಅವರ ಸ್ವಾಧೀನಕ್ಕೆ 0.96 ಸೆಂಟ್ ಆಸ್ತಿ ಇದ್ದು ದಿನಾಂಕ 22/12/2014 ರಂದು ಸಂಜೆ 5.30 ಗಂಟೆಗೆ ಅವರ ಗ್ರಾಮದ ನಿವಾಸಿಗಳಾದ ರಾಜಪ್ಪನವರ ಮಗ ಪ್ರಕಾಶ ಹಾಗೂ ಉಣ್ಣಿ ರವರ ಮಗ ಪ್ರಮೋದ್ ಎಂಬವರು ಪಿರ್ಯಾದಿಯವರ ಆಸ್ತಿಗೆ ಅಕ್ರಮ ಪ್ರವೇಶ ಮಾಡಿ ಪ್ರಕಾಶ ಎಂಬುವವನು ಪಿರ್ಯಾದಿ ಹಾಗೂ ಶ್ರೀಜೇಶ್ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಿಬ್ಬರನ್ನು ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದು ಇದಕ್ಕೆಪ್ರಮೋದ ಎಂಬ ವ್ಯಕ್ತಿ ಕುಮ್ಮಕ್ಕು ನೀಡಿರುತ್ತಾನೆಂದು ಪಿರ್ಯಾದಿ ಶ್ರೀಮತಿ ವಿಜಯಮ್ಮನವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಲೆಗೈದ ಯುವಕ ನೇಣಿಗೆ ಶರಣು: 


     ಸೋಮವಾರಪೇಟೆ ತಾಲೋಕು, ಕೆಂಚಮ್ಮನಬಾಣೆ ನಿವಾಸಿ ಫಿರ್ಯಾದಿ ಶ್ರೀಮತಿ ಸುಂದರಿ ಇವರ ಮಗ ಮಹೇಶ ಎಂಬಾತ ನಾಪೋಕ್ಲು ಕೊಳಕೇರಿ ಗ್ರಾಮದ ರಮ್ಯ ಎಂಬುವವಳನ್ನು ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದು, ದಿನಾಂಕ 22-12-2014 ರಂದು ಬೆಳಿಗ್ಗೆ 10.30 ಗಂಟೆಗೆ ಬೇಳೂರು ಬಾಣೆಯಲ್ಲಿ ರಮ್ಯಳು ಅವಳ ಅಕ್ಕನ ಮನೆಯಿಂದ ಅಕ್ಕನ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಹೇಶನು ರಮ್ಯಳನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು, ದಿನಾಂಕ : 23-12-2014 ರಂದು ಬೆಳಿಗ್ಗೆ 10.30 ಗಂಟೆಗೆ ಬೇಳೂರು ಗ್ರಾಮದ ಸುರೇಶ ರವರ ತೋಟದ ಒಳಗೆ ಹತ್ತಿ ಮರದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.