Saturday, December 6, 2014

ಪಿಕ್‌ಅಪ್‌ಜೀಪಿಗೆ ಬೈಕ್‌‌ ಡಿಕ್ಕಿ, ಸವಾರನ ಸಾವು:
ದಿನಾಂಕ 5-12-2014 ರಂದು  ಸುರೇಶ್‌ ಎಂಬವರು ತನ್ನ ಬಾಪ್ತು ಬೊಲೆರೋ ಪಿಕ್ ಅಪ್ ಜೀಪು ಸಂ ಕೆಎ-09-ಬಿ-3458 ನಲ್ಲಿ ಮಡಿಕೇರಿಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಸಮಯ ಅಂದಾಜು 1-45 ಪಿ ಎಂ ಗೆ ಮುತ್ತಾರ್ಮುಡಿ ಎಂಬಲ್ಲಿಗೆ ತಲುಪುವಾಗ್ಗೆ ಮಡಿಕೇರಿ ವಿರಾಜಪೇಟೆ ಸಾರ್ವಜನಿಕ ಥಾರು ರಸ್ತೆಯಲ್ಲಿ ಎದುರುಗಡೆಯಿಂದ ಅಂದರೆ ವಿರಾಜಪೇಟೆ ಕಡೆಯಿಂದ ಮಡಿಕೇರಿ ಕಡೆಗೆ ಕೆಎ-12-ಜೆ-1011 ರ ಮೋಟಾರು ಸೈಕಲನ್ನು ಅನಿಲ್ ಪಳಂಗಪ್ಪ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿಕ್ ಅಪ್ ಜೀಪಿಗೆ ಡಿಕ್ಕಿಪಡಿಸಿ ಕೆಳಗಡೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಸದರಿಯವರನ್ನು ಕೂಡಲೇ ಚಿಕಿತ್ಸೆ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನಪ್ಪಿದ್ದು , ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .


ವಿನಾಕಾರಣ ವ್ಯಕ್ತಿಯ ಮೇಲೆ ಹಲ್ಲೆ:

ಶನಿವಾರಸಂತೆ ಪೊಲೀಸ್  ಠಾಣಾ ಸರಹದ್ದಿನ ಶುಂಠಿ ಗ್ರಾಮದ ನಿವಾಸಿ ಎಸ್‌.ಜೆ. ಅವಿನಾಶ್‌ ಎಂಬವರು ದಿನಾಂಕ 4-12-2014 ರಂದು ಸಂಜೆ ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ಅದೇ ಗ್ರಾಮದ ಜನಾರ್ಧನ ಪೂಜಾರಿ, ತೇಜಸ್‌ ಮತ್ತು ಸುಕನ್ಯ ಎಂಬವರು  ಅಲ್ಲಿಗೆ ಬಂದು  ಅವಿನಾಶ್‌ನವರೊಂದಿಗೆ ಜಗಳವಾಡಿ ಅವಿನಾಶ್‌ರವರರನ್ನು ಸದರಿ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ಬೈದು ಕಲ್ಲು ಹಾಗೂ ಕೈಗಳಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಎಸ್‌.ಜೆ.ಅವಿನಾಶ್‌ರವರ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.


ಮಹಿಳೆಯ ಮಾನಭಂಗಕ್ಕೆ ಯತ್ನ ಪ್ರಕರಣ ದಾಖಲು:

ದಿನಾಂಕ 4-12-2014 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ಕೋಟೆಊರು ಗ್ರಾಮದ ನಿವಾಸಿ ಶ್ರೀಮತಿ ಸುಕನ್ಯ ಎಂಬವರು ಅವರ ಮನೆಯ ಬಳಿ ಇರುವ ನೀರಿನ ಟ್ಯಾಂಕ್‌ಗೆ ಹೋಗಿ ಬರುತ್ತಿರುವಾಗ ಆರೋಪಿಗಳಾದ ಅವಿನಾಶ್‌ ಮತ್ತು ಪ್ರಕಾಶ್‌ ಎಂಬ ವ್ಯಕ್ತಿಗಳು ಮೋಟಾರ್‌ ಸೈಕಲ್‌ನಲ್ಲಿ ಅಲ್ಲಿಗೆ ಬಂದು ಸುಕನ್ಯರವರ ಕೈಹಿಡಿಡು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ್ದು, ಅದೇ ವೇಳೆ ಅಲ್ಲಿಗೆ ಬಂದ ಸದರಿ ಸುಕನ್ಯರವರ ಮಾವ ಜನಾರ್ಧನ ಪೂಜಾರಿಯವರ ಮೇಲೆ ಸದರಿ ವ್ಯಕ್ತಿಗಳು ಕತ್ತಿಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.