Monday, December 1, 2014

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯ ಸಾವು:

     ಮಡಿಕೇರಿ ತಾಲೋಕು, ಮಕ್ಕಂದೂರು ಗ್ರಾಮದ ನಿವಾಸಿ ಮೊಗೇರ ರಾಮು ಎಂಬವರ ಮಗಳು ಪರಮೇಶ್ವರಿ ಮಕ್ಕಂದೂರುವಿನ ಸರ್ಕಾರಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು ಅವಳಿಗೆ ಸುಮಾರು 1 ವರ್ಷದಿಂದ ಅಪೆಂಡಿಕ್ಸ್ ಹೊಟ್ಟೆ ನೋವು ಇದ್ದು ಈ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರೂ ಸಹಾ ಮಗಳು ಹೊಟ್ಟೆನೋವು ವಾಸಿಯಾಗದೆ ಇದ್ದು, ದಿನಾಂಕ 28-11-2014 ರಾತ್ರಿ ಪರಮೇಶ್ವರಿಯು ವಾಂತಿ ಮಾಡಿದ್ದು, ಆಕೆಯನ್ನು ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಈ ದಿನ 30-11-2014 ರಂದು ಮೃತಪಟ್ಟಿದ್ದು. ಈಕೆ ಯಾವುದೋಮಾತ್ರೆಯನ್ನು ನುಂಗಿದ ಪರಿಣಾಮವಾಗಿ ಮೃತಪಟ್ಟಿರಬಹುದೆಂದು ನಂಬಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅಕ್ರಮ ಗಾಂಜಾ ಸಾಗಾಟ, ಆರೋಪಿ ಬಂಧನ:

     ಗೋಣಿಕೊಪ್ಪ ಪೊಲೀಸ್‌ ಠಾಣಾ ಪಿ.ಎಸ್‌.ಐ. ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗೋಣಿಕೊಪ್ಪ ನಗರದ ಆರ್‌.ಎಂ.ಸಿ. ಬಳಿ ಗೋಣಿಕೊಪ್ಪ ನಗರದ ವಾಸಿಗಳಾದ ಕೃಷ್ಣ ಹಾಗೂ ಶ್ಯಾಂ ಎಂ ವ್ಯಕ್ತಿಗಳು ಬೈಕ್‌ ಸಂ. ಕೆಎ-099ಹೆಚ್ 2341 ರಲ್ಲಿ ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೆ 2000 ರೂ ಮೌಲ್ಯದ 200 ಗ್ರಾಂ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದುದನ್ನು ಗೋಣಿಕೊಪ್ಪ ಠಾಣಾಧಿಕಾರಿ ಜೆ.ಇ. ಮಹೇಶ್‌ ಹಾಗು ಸಿಬ್ಗಂದಿಗಳು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಪತ್ನಿಗೆ ಪತಿಯೊಂದ ವಂಚನೆ, ಪ್ರಕರಣ ದಾಖಲು: 

     ವ್ಯಕ್ತಿಯೊಬ್ಬರು 2ನೇ ಮದುವೆಯಾಗಿ ತನ್ನ ಪತ್ನಿಗೆ ವಂಚಿಸಿದ ಬಗ್ಗೆ ಕುಶಾಲನರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಕುಶಾಲನಗರ ಠಾಣಾ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಬಿ.ಎಸ್‌. ಸೌಮ್ಯ ಎಂಬವರು ದಿನಾಂಕ 2-12-2001 ರಂದು ಮೈಲಾರಿಯವರೊಂದಿಗೆ ವಿವಾಹವಾಗಿದ್ದು, ನಂತರದ ದಿನಗಳಲ್ಲಿ ಪತಿ-ಪತ್ನಿ ನಡುವೆ ವೈಮನಸ್ಸಾಗಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವು ನಡೆದಯುತ್ತಿದ್ದು , ದಿನಾಂಕ 5-4-2013 ರಂದು ಸಿಂಧು ಎಂಬುವರೊಂದಿಗೆ ತನ್ನ ಗಂಡ ಮೈಲಾರಿ 2ನೇ ಮದುವೆಯಾಗಿದ್ದು, ಈ ವಿಚಾರದಲ್ಲಿ ಬಿ.ಎಸ್‌. ಸೌಮ್ಯರವರು ಹಿಂಸೆ, ಹಾಗೂ ಮಾನಸಿಕವಾಗಿ ನೊಂದು ಕುಶಾಲನಗರ ಪೊಲೀಸರಿಗೆ ದೂರನ್ನು ನೀಡಿದ್ದು ಅದರಂತೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.