Monday, December 15, 2014

ಮದ್ಯದಂಗಡಿಗೆ ನುಗ್ಗಿ ದಾಂದಲೆ, ಹಲ್ಲೆ: 

    ವ್ಯಕ್ತಿಯೋರ್ವ ಮದ್ಯದಂಗಡಿಗೆ ನುಗ್ಗಿ ಮಾಮೂಲಿ ಕೊಡಬೇಕೆಂದು ಅಂಗಡಿ ಕೆಲಸಗಾರರೊಬ್ಬರಿಗೆ ಗದರಿಸಿ ಹಲ್ಲೆ ನಡೆಸಿ, ಮದ್ಯದ ಬಾಟಲಿಗಳನ್ನು ಒಡೆದು ನಷ್ಟ ಪಡಿಸಿದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು, ಪಾಲಿಬೆಟ್ಟದ ನಿವಾಸಿ ಎಂ. ರಾಜೇಶ್‌ರವರು ಪಾಲಿಬೆಟ್ಟದ ಲಕ್ಷ್ಮಿ ವೈನ್ಸ್ ಬ್ರಾಂಡಿ ಅಂಗಡಿಯಲ್ಲಿ ವೆಂಡರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 14-12-2014 ರಂದು ಸಂಜೆ 7-00ಗಂಟೆಗೆ ಸದರಿಯವರು ಬ್ರಾಂಡಿ ಅಂಗಡಿಯಲ್ಲಿರುವಾಗ ಅಬ್ಬೂರು ಚೆನ್ನಂಗಿ ಗ್ರಾಮದ ನಿವಾಸಿ ಕುಮಾರ ಎಂಬ ವ್ಯಕ್ತಿ ಸದರಿ ಬ್ರಾಂಡಿ ಅಂಗಡಿಗೆ  ಬಂದು ರಾಜೇಶ್‌ರವರಲ್ಲಿ ‘ನೀನು ನನಗೆ ಮಾಮೂಲಿ ಕೊಡಬೇಕೆಂದು’ ಎಂದು ಕೇಳಿದ್ದು, ಅದಕ್ಕೆ ರಾಜೇಶ್‌ರವರು ಅದನ್ನು ನಿರಾಕರಿಸಿದ್ದರಿಂದ ಸದರಿ ಕುಮಾರರವರು ಅವಾಚ್ಯ ಶಬ್ದದಿಂದ ಬೈದು ಅಲ್ಲೇ ಕೌಂಟರ್ ನಲ್ಲಿ ಇದ್ದ ಬಿಯರ್ ಬಾಟಲಿಯನ್ನು ತೆಗೆದು ರಾಜೇಶ್‌ರವರ ಗಲ್ಲಕ್ಕೆ ಹೊಡೆದು ಗಾಯವನ್ನುಂಟು ಮಾಡಿ ನಂತರ ಆತನು ಕೈಯಲ್ಲಿದ್ದ ಬಿಯರ್‌ ಬಾಟಲಿಯನ್ನು ಶೋಕೇಸ್ ಗೆ ಎಸೆದು ಶೊಕೇಸ್ ನಲ್ಲಿದ್ದ ಕೆಲವು ಮದ್ಯದ ಬಾಟಲಿಯನ್ನು ಒಡೆದು ಹಾಕಿ ಸುಮಾರು 8000=00 ರೂ ನಷ್ಟು ನಷ್ಟವುಂಟು ಮಾಡಿ ನಾಳೆಯಿಂದ ಬ್ರಾಂಡಿ ಅಂಗಡಿಯನ್ನು ನಡೆಸಲು ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಹೋಗಿರುತ್ತಾನೆಂದು ಎಂ. ರಾಜೇಶ್‌ವರು ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಮಾಡಿ ವ್ಯಕ್ತಿಯ ಕೊಲೆ, ಪ್ರಕರಣ ದಾಖಲು: 

     ಕೇರಳ ರಾಜ್ಯದ ಮಜೀದ್‌ ಎಂಬ ವ್ಯಕ್ತಿ ದಿನಾಂಕ 7-12-2014 ರಂದು ಅಸಹಜವಾಗಿ ಸಾವನಪ್ಪಿದ್ದು ಕುಟ್ಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದ ತನಿಖಾ ವೇಳೆಯಲ್ಲಿ ಮತ್ತು ಮೃತ ಮಜೀದ್‌ನ ವೈದ್ಯಕೀಯ ಮರಣೋತ್ತರ ಪರೀಕ್ಷಾ ವರದಿಯಿಂದ ಸದರಿ ವ್ಯಕ್ತಿಯನ್ನು ಯಾರೋ ಕೊಲೆ ಮಾಡಿರುತ್ತಾರೆಂದು ತಿಳಿದು ಬಂದ ಮೇರೆಗೆ ಕುಟ್ಟ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಮ್ಯಾಕ್ಸಿಕ್ಯಾಬ್‌ ಡಿಕ್ಕಿಕಾರು ಜಖಂ:

     ದಿನಾಂಕ 14-12-2014 ರಂದು ಶ್ರೀಮಂಗಲ ಠಾಣಾ ಸರಹದ್ದಿನ ಕುರ್ಚಿ ಗ್ರಾಮದಲ್ಲಿ ಮಂಚಳ್ಳಿ ಗ್ರಾಮದ ನಿವಾಸಿ ಕೆ. ಮುರುಗನ್‌ರವರ ಆಲ್ಟೋ ಕಾರಿಗೆ KA-09-B-8718ರ ಮ್ಯಾಕ್ಸಿಕ್ಯಾಬ್‌ನ್ನು ಅದರ ಚಾಲಕ ಕೃಷ್ಣ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಆಲ್ಟೋ ಕಾರು ಜಖಂ ಗೊಂಡಿದ್ದು, ಕೆ. ಮುರುಗನ್‌ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಾರುತಿ ಓಮ್ನಿ ಡಿಕ್ಕಿ ವ್ಯಕ್ತಿಯ ಸಾವು:

     ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ ಹಂಡ್ಲಿ ಗ್ರಾಮದಲ್ಲಿ ದಿನಾಂಕ 30-11-2014 ರಂದು ಸುಂದರ ಎಂಬವರಿಗೆ ಮಾರುತಿ ಓಮ್ನಿ ಡಿಕ್ಕಿಯಾದ ಪರಿಣಾಮ ಸದರಿಯವರು ತೀವ್ರವಾಗಿ ಗಾಯಗೊಂಡು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 14-12-2014 ರಂದು ಮೃತಪಟ್ಟಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.