Saturday, December 27, 2014

ಕಾರಿಗೆ ಲಾರಿ ಡಿಕ್ಕಿ, ನಾಲ್ಕು ಮಂದಿಗೆ ಗಾಯ:
     ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ  ನಾಲ್ಕು ಜನರು ಗಾಯಗೊಂಡ ಘಟನೆ ಸಿದ್ದಾಪುರದ ಬಳಿ ನಡೆದಿದೆ. ವಿರಾಜಪೇಟೆ ತಾಲೋಕು, ಬಾಡಗ ನಾಣಂಗಾಲ ಗ್ರಾಮದ ನಿವಾಸಿ ವಿ.ಕೆ. ಮಣಿ ಎಂಬುವವರು ಕೆ.ಎಂ.ಅಶ್ರಫ್ , ಕೆ.ಎಂ.ಹಸೈನಾರ್ ಮತ್ತು ಕೆ.ಹೆಚ್.ಉದೈಫ್ ಯವರೊಂದಿಗೆ ಮಾರುತಿ 800 ಕಾರಿನಲ್ಲಿ ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿಯೊಂದು ಸದರಿ ಕಾರಿಗೆ ಡಿಕ್ಕಿಯಾದ ಪರಿಣಾಮವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಹಾಗು ಇತರೆ ಮೂರುಮಂದಿಗೆ ರಕ್ತ ಗಾಯವಾಗಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ:
     ಕಾರೊಂದು ರಸ್ತೆಬದಿಯಲ್ಲಿ ನಿಂತಿದ್ದ ಮಹಿಳೆಗೆ ತಾಗಿದ ವಿಚಾರದಲ್ಲಿ  ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ವಿರಾಜಪೇಟೆ ಸಮೀಪದ ಐಮಂಗಲ ಗ್ರಾಮದಲ್ಲಿ ನಡೆದಿದೆ.  ವಿರಾಜಪೇಟೆ ತಾಲೋಕು, ಕಲ್ಲುಬಾಣೆ ನಿವಾಸಿ ಇ.ಕೆ. ಕುಂಞ ಅಹಮ್ಮದ್ ಎಂಬವರು ತಮ್ಮ ಬಾಪ್ಸು ಕೆಎ.51.ಎಂ.5598 ರ ಕಾರಿನಲ್ಲಿ ಸಿದ್ದಾಪುರ ದಿಂದ ವಿರಾಜಪೇಟೆ ಕಡೆಗೆ ಬರುತ್ತಿರವಾಗ ಐಮಂಗಲ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಲಾರಿಗೆ ದಾರಿ ಬಿಡುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಹೆಂಗಸಿಗೆ ಕಾರಿನ ಸೈಡ್ ಮಿರರ್ ತಾಗಿ ಕೆಳಗೆ ಬಿದ್ದು ಹೋಗಿದ್ದು ಇದೇ ವೇಳೆಯಲ್ಲಿ . ಇಸ್ಮಾ ಯಿಲ್ ಮತ್ತು ಮತ್ತೊಬ್ಬ ವ್ಯಕ್ತಿ ಒಂದು ಓಮಿನಿ ವ್ಯಾನಿ ನಲ್ಲಿ ಅಲ್ಲಿಗೆ ಬಂದು ಇ.ಕೆ. ಕುಂಞ ಅಹಮ್ಮದ್ ರವರ ಕಾರಿನ ಮುಂಭಾಗ ನಿಲ್ಲಿಸಿ ಇ.ಕೆ. ಕುಂಞ ಅಹಮ್ಮದ್ ರವರ ತಲೆಗೆ,ಎದೆಗೆ ಕೈಯಿಂದ ಹೊಡೆದುದಲ್ಲದೆ ಕೈಯಿಂದ ಬಾಯಿಗೆ ಗುದ್ದಿ ರಕ್ತ ಗಾಯಪಡಿಸಿರು ವುದಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮೋಟಾರ್‌ಸೈಕಲ್‌ ಅವಘಢ, ಇಬ್ಬರಿಗೆ ಗಾಯ:
     ಮೋಟಾರ್‌ ಸೈಕಲ್‌ ಅಪಘಾತಕ್ಕೀಡಾಗಿ  ಸವಾರರಿಬ್ಬರು ಗಾಯಗೊಂಡ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಹಳ್ಳಿಗಟ್ಟು ಗ್ರಾಮದಲ್ಲಿ ನಡೆದಿದೆ. ದಿನಾಂಕ 26-12-2014 ರಂದು ವಿರಾಜಪೇಟೆ ತಾಲೋಕು ಅರ್ವತ್ತೊಕ್ಕಲು ಗ್ರಾಮದ ನಿವಾಸಿ ನಿಖಿಲ್‌ ಎಂಬವರು ಮೋಟಾರ್‌ ಸೈಕಲ್‌ನಲ್ಲಿ ತನ್ನ ಸ್ನೇಹಿತ ರೋಹಿತ್‌ ಎಂಬವನನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಹಳ್ಳಿಗಟ್ಟು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಬೈಕ್‌ ಅಪಘಾತಕ್ಕೀಡಾಗಿ ಸದರಿ ಮೊಟಾರ್‌ ಸೈಕಲ್‌ ಸವಾರರಿಬ್ಬರು ಗಾಯಗೊಂಡಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.