Sunday, December 28, 2014

ಕಾರು ಡಿಕ್ಕಿ, ಇಬ್ಬರು ಮಹಿಳೆಯರಿಗೆ ಗಾಯ:

     ದಿನಾಂಕ:26-12-14ರಂದು ಪಿರ್ಯಾದಿ ಶ್ರೀಮತಿ. ನಬೀಸ, ಐಮಂಗಲ ಗ್ರಾಮ, ವಿರಾಜಪೇಟೆ ಇವರು ಸೊಸೆ ನುಬಿನಾರೊಂದಿಗೆ ಐಮಂಗಲ ಗ್ರಾಮದಿಂದ ವಿರಾಜಪೇಟೆ ನಗರಕ್ಕೆ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹಿಂದಿನಿಂದ ಅಂದರೆ ಅಮತ್ತಿ ಕಡೆಯಿಂದ ಕೆಎ.51.ಎಂ.5598ರ ಆಲ್ಟೋ ಕಾರಿನ ಚಾಲಕನು ಸದರಿ ಕಾರನ್ನು ಅತೀವೇಗ ಹಾಗೂ ದುಡುಕುತನದಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರಿಗೆ ಹಾಗೂ ಅವರ ಸೊಸೆಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿಯವರು ರಸ್ತೆಗೆ ಬಿದ್ದು ಎಡ ಕಣ್ಣಿನ ಹುಬ್ಬು, ಎಡ ಕಾಲು ಮೊಣ ಕಾಲಿಗೆ ಮತ್ತು ಮೇಲ್ಬಾಗದ ಹಲ್ಲಿಗೆ ಪೆಟ್ಟಾಗಿರುವುದಲ್ಲದೆ ಜೊತೆಯಲ್ಲಿದ್ದ ಪಿರ್ಯಾದಿಯವರ ಸೊಸೆ ನುಬೀನಾ, ರವರಿಗೆ ಕಾರು ತಾಗಿ ಶರೀರಕ್ಕೆ ನೋವಾಗಿರುವುದಾಗಿಯೂ, ಪಿರ್ಯಾದಿಯ ವರು ಚಿಕಿತ್ಸೆ ಬಗ್ಗೆ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆಟೋ ಅಪಘಾತ ಇಬ್ಬರಿಗೆ ಗಾಯ:
     ದಿನಾಂಕ 25-12-2014 ರಂದು ಸಮಯ 5.45 ಪಿ.ಎಂ.ಗೆ ಕುಶಾಲನಗರ ಠಾಣಾ ಸರಹದ್ದಿಗೆ ಸೇರಿದ ಹೆಗ್ಗಡಹಳ್ಳಿ ಗ್ರಾಮದಲ್ಲಿ ಪ್ರಸನ್ನ, ಕೂಡಿಗೆ ಗ್ರಾಮ, ಕುಶಾಲನಗರ ಇವರ ಚಿಕ್ಕಮ್ಮ ಪ್ರಮೀಳ ಮತ್ತು ಬೋಜೇಗೌಡರವರು ಕೂಡಿಗೆಯಿಂದ ಕೆಲಸ ಮುಗಿಸಿಕೊಂಡು ನಂ. ಕೆಎ 12-8756 ರ ಆಟೋರಿಕ್ಷದಲ್ಲಿ ವಾಪಾಸು ಮನೆಗೆ ಹೋಗುತ್ತಿರುವಾಗ ರಸ್ತೆ ತಿರುವಿನಲ್ಲಿ ಆಟೋರಿಕ್ಷವನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದ ಪರಿಣಾಮ ಆಟೋರಿಕ್ಷ ಮಗುಚಿ ಬಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ರಮೀಳ ಮತ್ತು ಬೋಜೇಗೌಡರವರು ಆಟೋರಿಕ್ಷದಿಂದ ಕೆಳಗೆ ಬಿದ್ದು ಇಬ್ಬರಿಗೂ ಗಾಯನೋವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದು ಈ ಸಂಬಂಧ ಕುಶಾಳನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗಂಡನ ಕಿರುಕುಳ ಪತ್ನಿ ಆತ್ಮಹತ್ಯೆ:
     ಮಡಿಕೇರಿ ತಾಲೋಕು ಕಾಲೂರು ಗ್ರಾಮದ ನಿವಾಸಿ ಕೆ.ಕೆ. ಭೀಮಯ್ಯನವರ ಅಕ್ಕ ಶೃತಿ ಎಂಬವರನ್ನು ಬಲ್ಲಮಾವಟಿ ಗ್ರಾಮದ ಮಾದೆಯಂಡ ರಾಜೇಶ್‌ ಎಂಬವರಿಗೆ ಮದುವೆಮಾಡಿಕೊಟ್ಟಿದ್ದು, ಸದರಿ ರಾಜೇಶ ಸಣ್ಣಪುಟ್ಟ ವಿಷಯಗಳಿಗೆ ಪತ್ನಿಯೊಂದಿಗೆ ಜಗಳ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು, ಅಲ್ಲದೆ ‘ನನ್ನ ಜೊತೆ ಸಂಸಾರ ನಡೆಸಲು ನಿನಗೆ ಯೋಗ್ಯತೆ ಇಲ್ಲ, ನೀನು ಸಾಯಿ’ ಎಂಬುದಾಗಿ ಹೇಳುತ್ತಿದ್ದು, ಇದರಿಂದ ಮಾನಸಿಕವಾಗಿ ನೊಂದ ಶೃತಿ ದಿನಾಂಕ 27-12-2014 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆಯ ಆತ್ಮಹತ್ಯೆಗೆ ಗಂಡ ರಾಜೇಶ ಕಾರಣವೆಂದು ಆರೋಪಿಸಿ ಕೆ.ಕೆ. ಭೀಮಯ್ಯ ನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.