Saturday, January 31, 2015

ಕಾರು ಅಪಘಾತ, ಚಾಲಕನಿಗೆ ಗಾಯ:

     ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ಮಗುಚಿಬಿದ್ದು ಚಾಲಕ ಗಾಯಗೊಂಡ ಘಟನೆ ಶ್ರೀಮಂಗಲ ಸಮೀಪದ ದಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ.    ದಿನಾಂಕ 28/01/2015 ರಂದು ಕಾನೂರು ಗ್ರಾಮದ ಸಿ.ಎಎಸ್‌. ಗಣಪತಿ ಎಂಬವರು ಶ್ರೀಮಂಗಲ ಠಾಣಾ ಸರಹದ್ದಿನ ಕಾನೂರು – ಪೊನ್ನಂಪೇಟೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಮಯ 06:45 ಗಂಟೆಗೆ ರಸ್ತೆ ತಿರುವಿನಲ್ಲಿ ಕಾರನ್ನು ನಿರ್ಲಕ್ಷತನದಿಂದ ಓಡಿಸಿದ್ದರಿಂದ ಹತೋಟಿ ತಪ್ಪಿ ರಸ್ತೆಯ ಬಲಬಾಗಕ್ಕೆ ಮಗುಚಿ ಬಿದ್ದಿದ್ದು ಚಾಲಕ ಗಣಪತಿಯವರು ಗಾಯಗೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದ್ವೇಷದ ಹಿನ್ನೆಲೆ ದಾರಿತಡೆದು ಮಹಿಳೆ ಮೇಲೆ ಹಲ್ಲೆ:

      ಹಳೇ ದ್ವೇಷದ ಹಿನ್ನೆಲೆಯಲ್ಲಿ  ವ್ಯಕ್ತಿಯೊಬ್ಬರು ಮಹಿಳೆಯ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಗರ್ವಾಲೆ ಗ್ರಾಮದಿಂದ ವರದಿಯಾಗಿದೆ.  ಪಿರ್ಯಾದಿ ಶ್ರೀಮತಿ ವಿಣಾ @ ವನಜಾಕ್ಷಿ, ಗರ್ವಾಲೆ ಗ್ರಾಮ, ಸೋಮವಾರಪೇಟೆ ತಾಲೋಕು ಇವರು ದಿನಾಂಕ 30-1-2015 ರಂದು ಸಮಯ 03:30 ಪಿ. ಎಂ.ಗೆ ದನಗಳನ್ನು ಕಟ್ಟಲು ಕೊಟ್ಟಿಗೆಯ ಹತ್ತಿರ ಹೋಗುವಾಗ ಅವರ ಕುಟುಂಬದ ಟಿ,ಎಸ್, ಈರಪ್ಪ ಎಂಬುವವರ ಗದ್ದೆಯ ಸಮೀಪ ಟಿ.ಎಸ್.ತಿಮ್ಮಯ್ಯ ಎಂಬವರು ಹಳೆ ದ್ವೇಷದಿಂದ ಫಿರ್ಯಾದಿಯನ್ನು ದಾರಿ ತಡೆದು ಜಗಳ ಮಾಡಿ ಕೈಯ್ಯಲ್ಲಿದ್ದ ಕತ್ತಿಯಿಂದ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ದಾರಿ ತಡೆದು ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ: 

     ಜಾನುವಾರುಗಳನ್ನು  ಸಾಗಿಸುತ್ತಿದ್ದ ವೇಳೆ   ದಾರಿ ತಡೆದು ವ್ಯಕ್ತಿಯ ಮೇಲೆ ಗುಂಪಿನಿಂದ ಹಲ್ಲೆ ನಡೆದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವರದಿಯಾಗಿದೆ.  ಕಾಸರಗೋಡುವಿನ ಬದಿಯಡ್ಕ ನಿವಾಸಿ ಲಿಜೋ ಜಾರ್ಜ್‌ ರವರು ದಿನಾಂಕ 29-01-2015 ರಂದು ಸ್ನೇಹಿತ ಸಿಬಿ ಎಂಬುವವರ ಮುಖಾಂತರ ಸಂಪಾಜೆಯ ಸುಧಾಕರ ಎಂಬುವವರ ಬಾಪ್ತು 2 ಹಸುಗಳು ಮತ್ತು 1 ಕರುವನ್ನು ಖರೀದಿ ಮಾಡಿದ್ದು ಅವುಗಳನ್ನು ಬದಿಯಡ್ಕ ಸಾಗಿಸಲು ಫಿರ್ಯಾದಿ ಪುತ್ತೂರಿನ ಈಶ್ವರ ಮಂಗಲದ ವಾಸಿ ಮೊಹಮ್ಮದ್‌ ಶರೀಫ್‌ರವರು ಚಾಲಕನಾಗಿ ಲಿಜೋರವರ ಓಮಿನಿ ವ್ಯಾನು ನಂ ಕೆಎಲ್-14-ಡಿ-9491 ರಲ್ಲಿ 8-30 ಗಂಟೆಗೆ ಈಶ್ವರಮಂಗಲದಿಂದ ಬಂದು ಸುಧಾಕರವರ ಮನೆಯಿಂದ ದನಗಳನ್ನು ಓಮಿನಿ ವ್ಯಾನಿಗೆ ಹತ್ತಿಸಿ, ರಾತ್ರಿ ಸಮಯ ಸುಮಾರು 10-30 ಗಂಟೆಗೆ ಹೊರಟು ಸುದಾಕರನವರ ಮನೆಯ ಗೇಟಿನ ಬಳಿ ತಲುಪಿದಾಗ ಸುಧಾಕರ, ಯೋಗೇಶ್, ಸುರೇಶ, ಶ್ರೀನಿವಾಸ ಹಾಗೂ ಇತರರು ಪಿರ್ಯಾದಿಯವರನ್ನು ದಾರಿ ತಡೆದು ವಾಹನದಿಂದ ಬಲಾತ್ಕಾರವಾಗಿ ಕೆಳಗೆ ಇಳಿಸಿ ಅವರ ಕೈಗಳಲ್ಲಿದ್ದ ದೊಣ್ಣೆಗಳಿಂದ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಜಾನುವಾರುಗಳ ಸಾಟಾಟಕ್ಕೆ ಯತ್ನ, ಆರೋಪಿಗಳ ಬಂಧನ:

     ಅಕ್ರಮ ಗೋವುಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ  ಕುಟ್ಟ ಪೊಲೀಸರು  ಆರೋಪಿಗಳನ್ನು ವಶಕ್ಕೆ ಪಡೆಡುಕೊಂಡಿರುತ್ತಾರೆ.  ದಿನಾಂಕ 30-01-2015 ರಂದು ಸಮಯ ಬೆಳಿಗ್ಗೆ 04.30 ಗಂಟೆಗೆ ಕುಟ್ಟ ಠಾಣಾ ಸರಹದ್ದಿನ ಕುಟ್ಟ ಹಳೆಯ ಚೆಕ್ ಪೋಸ್ಟ್ ಬಳಿ ಆರೋಪಿಗಳಾಧ ಕೇರಳ ರಾಜ್ಯದ ತೋಲ್ಪಟ್ಟಿ ವಾಸಿಗಳಾದ ಮುಸ್ತಾಫ, ಮುನೀರ್‌ ಮತ್ತು ಸಮ್ನಾದ್‌ ಎಂಬವವರು ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ರೂ. 30,000=00 ಬೆಲೆಯ ಮೂರು ಜಾನುವಾರುಗಳನ್ನು ಅಕ್ರಮವಾಗಿ ಕೇರಳ ರಾಜ್ಯದ ಕಸಾಯಿಖಾನೆಗೆ ಮಾರಾಟ ಮಾಡಿ ಹಣಗಳಿಸುವ ಉದ್ದೇಶದಿಂದ ಕಾಲ್ನಡಿಗೆಯಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಕುಟ್ಟಪೊಲೀಸ್‌ ಠಾಣಾಪಿ.ಎಸ್‌.ಐ. ರವರಾದ ಶ್ರೀ ಜೆ. ಮಂಜು ರವರು ಪತ್ತೆ ಹಚ್ಚಿ ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Friday, January 30, 2015

ಪಾದಾಚಾರಿಗೆ ಕಾರು ಡಿಕ್ಕಿ, ಗಾಯ:
ಮಡಿಕೇರಿ ತಾಲೋಕು ಹೊದ್ದೂರು ಗ್ರಾಮದ ವಾಸಿ ಹೆಚ್‌.ಎ.ಶಿವಣ್ಣ ಎಂಬ ವ್ಯಕ್ತಿ ಈ ದಿನ ಮರ್ನಾಡು ಪಟ್ಟಣದಿಂದ ತನ್ನ ಮನೆಯ ಕಡೆಗೆ ತನ್ನ ಸ್ನೇಹಿತ ಮೋಹನನೊಂದಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ ಸುಮಾರು 01-30 ಗಂಟೆಗೆ ಹಿಂದುಗಡೆಯಿಂದ ಬಿಳಿ ಬಣ್ಣದ ಕೆಎ-12-8227 ರ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿಯವರ ಕೈಗೆ ನೋವಾಗಿದ್ದು, ಕಾರನ್ನು ನಿಲ್ಲಿಸದೇ ಅದರ ಚಾಲಕ ಹೊರಟು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ಗೆ ಬಸ್‌ಡಿಕ್ಕಿ ಸವಾರನ ದುರ್ಮರಣ:
ದಿನಾಂಕ 29-01-2015 ರಂದು ಸಮಯ 10.15 ಗಂಟೆಗೆ ಸೋಮವಾರಪೇಟೆ ತಾಲೋಕು, ಗೋಣಿಮರೂರು ಗ್ರಾಮದ ನಿವಾಸಿಬಿ.ಎಂ. ಮಹೇಶ್‌ರವರು ತಮ್ಮ ಬಾಪ್ತು ಮೋಟಾರು ಬೈಕ್‌ ಸಂ : ಕೆಎ-12, ಎಲ್‌-0688 ರಲ್ಲಿ ಗೋಣಿಮರೂರು ಕಡೆಯಿಂದ ಸೋಮವಾರಪೇಟೆ ಕಡೆಗೆ ಬರುತ್ತಿರುವಾಗ್ಗೆ, ಎದುರುಗಡೆಯಿಂದ ಕೆಎ-19, ಎಸಿ-6677 ರ ರಾಘವೇಂದ್ರ ಬಸ್ಸನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಹೇಶ್‌ರವರ ಮೋಟಾರು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಮಹೇಶ್‌ರವರ ತಲೆಯ ಭಾಗಕ್ಕೆ ರಕ್ತಗಾಯಗಳಾಗಿದ್ದು, ಗಾಯಾಳುವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲುಪಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುವ ವೇಳೆ ದಾರಿ ಮದ್ಯದಲ್ಲಿ ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕತ್ತಿಯಿಂದ  ಹಲ್ಲೆ:
ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೊದ್ದೂರು ಗ್ರಾಮದ ನಿವಾಸಿ ಡಿ.ಎಸ್‌.ಸಂಜೀವ ಎಂಬವರು ತನ್ನ ಮಗ ಚಂದನ್‌ನನ್ನು ಮಾನವ ಮನೆಯಿಂದ ಕರೆದುಕೊಂಡು ತಮ್ಮ ಮನೆಯಕಡೆ ಹೋಗುತ್ತಿದ್ದಾಗ ಅದೇ ಕಾರಣಕ್ಕೆ ಸಂಜೀವರವರ ಮಾವ ರಾಮು ಎಂಬವರು ಕತ್ತಿಯಿಂದ ಸಂಜೀವರವರ ಮೇಲೆ ಹಲ್ಲೆ ಮಾಡಿ ಗಾಯಪಡಿಸಿದ್ದು, ಹಲ್ಲೆಯನ್ನು ತಡೆಯಲು ಹೋದ ಸಂಜೀವರವರ ಪತ್ನಿ ಕೈಗೂ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಫಿ ಕಳವು ಪ್ರಕರಣ ದಾಖಲು:

ಪಿರ್ಯಾದಿ ಬಿ.ಪಿ. ಪ್ರಭಾಕರ, ತ್ಯಾಗರಾಜರಸ್ತೆ, ಸೋಮವಾರಪೇಟೆ ಇವರು ಅವರ ಬಾಬ್ತು ಕಾಫಿ ತೋಟದಿಂದ ಕೊಯ್ದು ಪಲ್ಪ್ ಮಾಡಿ ಒಣಗಿಸಲು ಹಾಕಿದ್ದ ಕಾಫಿ ಬೆಳೆಯ ಪೈಕಿ ಸುಮಾರು 200 ಕೆ.ಜಿ ತೂಕದ ಕಾಫಿ ಬೆಳೆಯನ್ನು ದಿನಾಂಕ 29.01.2015 ರಂದು ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇದರ ಅಂದಾಜು ಬೆಲೆ ಸುಮಾರು ರೂ 45,000/- ಆಗಬಹುದಾಗಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, January 29, 2015

ಬಸ್‌ಗೆ ಲಾರಿ ಡಿಕ್ಕಿ, ಇಬ್ಬರಿಗೆ ಗಾಯ:
     ಗೊಬ್ಬರ ತುಂಬಿದ ಲಾರಿಯೊಂದು ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿಯಾದ ಪರಿಣಾಂ ಇಬ್ಬರು ಗಾಯಗೊಂಡು ಬಸ್‌ ಮತ್ತು ಲಾರಿ ಜಖಂ ಗೊಂಡ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೋಯಿಕೇರಿ ಗ್ರಾಮದ ಸಿಂಕೋನ ಎಂಬಲ್ಲಿ ನಡೆದಿದೆ. ಪಿರ್ಯಾದಿ ಮಹೇಶ್‌ ಕೆ. ಉದ್ದಾರ್‌ರವರು ಕೆ.ಎಸ್‌.ಆರ್‌.ಟಿ.ಸಿ ಬಸ್‌ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 29-01-2015 ರಂದು ಕೆಎ-19-ಎಫ್‌-2982 ರ ಬಸ್ಸಿನಲ್ಲಿ ಕರ್ತವ್ಯದ ಮೇರೆ ಮಡಿಕೇರಿಯಿಂದ ಕುಶಾಲನಗರಕ್ಕೆ ಬಸ್‌ ಚಾಲಕ ಎಂ.ಬಿ ನಾಣಯ್ಯರವರೊಂದಿಗೆ ಕುಶಾಲನಗರ ಕಡೆಗೆ ಹೋಗುತ್ತಿರುವಾಗ್ಗೆ ಸಮಯ 8-20 ಎಎಂಗೆ ಸಿಂಕೋನದ ಬಳಿ ಬಸ್ಸಿನ ಹಿಂಭಾಗದಿಂದ ಬಂದ ಕೆಎ-13-ಎ-4582 ರ ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸಿನ ಚಾಲಕ ನಾಣಯ್ಯರವರ ತಲೆಗೆ, ಎಡ ಕೈಯ ಭುಜ ಹಾಗೂ ಸೊಂಟದ ಭಾಗಕ್ಕೆ ಗಾಯನೋವುಂಟಾಗಿದ್ದಲ್ಲದೆ ಬಸ್‌ ಮೋರಿಗೆ ಬಿದ್ದಿದ್ದು ಲಾರಿಯ ಕ್ಲೀನರ್‌ ಸಂತೋಷ್‌ನಿಗೂ ಸಹಾ ಬಲದ ಕಾಲಿನ ಮೊಣ ಕಾಲಿಗೆ ಗಾಯ ನೋವುಂಟಾಗಿದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವೇಗದ ಚಾಲನೆ, ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಲಾರಿ ಡಿಕ್ಕಿ.
     ದಿನಾಂಕ 28-1-2014 ರಂದು ಮಡಿಕೇರಿಯಿಂದ ಸಂಪಾಜೆ ಕಡೆಗೆ ಹೋಗುತ್ತಿದ್ದ KA-19-AA-4760 ನಂಬರಿನ ಲಾರಿಯು ಅದರ ಚಾಲಕ ಸದರಿ ವಾಹನವನ್ನು ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ರಸ್ತೆಯ ಬದಿಯಲ್ಲಿ ಅಳವಡಿಸಿದ್ದ HT/LT ಮಾರ್ಗದ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಎರಡು ಆರ್‌ಸಿಸಿ ವಿದ್ಯುತ್‌ಕಂಬಗಳು ಮುರಿದಿದ್ದು, ನಷ್ಟದ ಅಂದಾಜು ಮೌಲ್ಯ ರೂ. 19763/- ಆಗಿರುವುದಾಗಿದೆಎಂಬುದಾಗಿ ಸಂಪಾಜೆಶಾಖೆಯ ಸೆಸ್ಕ್‌ ಕಿರಿಯ ಇಂಜಿನಿಯರ್‌ ಪಿ.ಆರ್‌. ಸುಬ್ರಮಣಿ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಸ್‌ ಬೈಕ್‌ಗೆ ಡಿಕ್ಕಿ, ಸವಾರನಿಗೆ ಗಾಯ: 
     ಸೋಮವಾರಪೇಟೆ ತಾಲೋಕು ಗೋಣಿಮರೂರು ಗ್ರಾಮದ ವಿವಾಸಿ ಮಹೇಶ್‌ ಎಂಬುವವರು ದಿನಾಂಕ 29-1-2015 ರಂದು ತಮ್ಮ ಬಾಪ್ತು ಮೋಟಾರು ಬೈಕ್‌ ಸಂ : ಕೆಎ-12, ಎಲ್‌-0688 ರಲ್ಲಿ ಗೋಣಿಮರೂರು ಕಡೆಯಿಂದ ಸೋಮವಾರಪೇಟೆ ಕಡೆಗೆ ಬರುತ್ತಿರುವಾಗ್ಗೆ, ಎದುರುಗಡೆಯಿಂದ ಕೆಎ-19, ಎಸಿ-6677 ರ ರಾಘವೇಂದ್ರ ಬಸ್ಸನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಹೇಶ್‌ರವರ ಮೋಟಾರು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಮಹೇಶ್‌ರವರ ತಲೆಯ ಭಾಗಕ್ಕೆ ರಕ್ತಗಾಯಗಳಾಗಿದ್ದು, ಸದರಿಯವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲುಪಡಿಸಲಾಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. 

ವಿನಾಕಾರಣ ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ:
     ಪಿರ್ಯಾದಿ ಮೊಗೇರ ಬಿ. ಬಾಬು, ಕೂಲಿ ಕಾರ್ಮಿಕ, ವಾಸ ಮರಗೋಡು ಗ್ರಾಮ ಇವರು ದಿನಾಂಕ 28-1-2015 ರಂದು ಹೊಸ್ಕೇರಿ ಗ್ರಾಮದ ಎಂ.ಎಸ್‌. ದೇವಯ್ಯ ಎಂಬುವವರ ಕಾಫಿ ತೋಟದಲ್ಲಿ ಕಣದ ಕಾಂಪೌಂಡ್‌ ಕಟ್ಟುತ್ತಿರುವಾಗ ಹೊಸ್ಕೇರಿ ಗ್ರಾಮದ ನಿವಾಸಿ ಎಂ.ಎಸ್‌. ಭುವನೇಶ್ವರ ಎಂಬವರು ಕೆಲಸಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Wednesday, January 28, 2015

ಪತ್ನಿಯ ಮೇಲೆ ಪತಿಯ ದೌರ್ಜನ್ಯ: 
     ಮಡಿಕೇರಿ ತಾಲೋಕು, ಕರ್ಣಂಗೇರಿ ಗ್ರಾಮದ ನಿವಾಸಿ ಫಿರ್ಯಾದಿ ಶ್ರೀಮತಿ ಬಿಂದು ಎಂಬವರು  ಸುಮಾರು 10 ವರ್ಷಗಳ ಹಿಂದೆ ಸುಂಟಿಕೊಪ್ಪದ 7 ನೇ ಮೈಲಿನ ನಿವಾಸಿ ಬಾಲಕೃಷ್ಣರವರ ಮಗ ಲೋಹಿತ್‌ನನ್ನು ಪ್ರೀತಿಸಿ ಮದುವೆಯಾಗಿರುವುದಾಗಿಯು, ಮದುವೆಯಾಗಿ ಸುಮಾರು 3 ವರ್ಷ ಲೋಹಿತನು ಬಿಂದುನವರೊಂದಿಗೆ ಅನ್ಯೋನ್ಯವಾಗಿದ್ದು ನಂತರದ ದಿನಗಳಲ್ಲಿ ವಿನಾ ಕಾರಣ ಹೊಡೆಯುವುದು, ಬಡಿಯುವುದು ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ಒಂದು ವರ್ಷದಿಂದ ಬೇರೆ ಬೇರೆ ವಾಸವಾಗಿದ್ದು, ಶ್ರೀಮತಿ ಬಿಂದುರವರು ನ್ಯಾಯಾಲಯದಲ್ಲಿ ವಿಚ್ಛೇದನೆ ಅರ್ಜಿ ದಾಖಲಿಸಿದ್ದು, ದಿನಾಂಕ 27-01-2015 ರಂದು ಪಿರ್ಯಾದಿಯವರು ಕೆಲಸ ಮುಗಿಸಿ ಮನೆಗೆ ಹೊಗುತ್ತಿರುವಾಗ ಸಮಯ ಅಂದಾಜು 07-00 ಪಿ ಎಂ ಗೆ ಮನೆಯ ಮುಂದಿನ ರಸ್ತೆಯಲ್ಲಿ ಲೋಹಿತನು ಪಿರ್ಯಾದಿಯವರನ್ನು ತಡೆದು ನಿಲ್ಲಿಸಿ ನೀನು ನನ್ನ ಮೇಲೆ ಕೋರ್ಟಿನಲ್ಲಿ ಡೈವರ್ಸ್ ಕೇಸು ಹಾಕುತ್ತೀಯಾ ನಿನ್ನನ್ನು ಕೊಂದು ಬಿಡುತ್ತೇನೆಂದು ಕೊಲೆ ಬೆದರಿಕೆ ಹಾಕಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾದ ವಿಚಾರದಲ್ಲಿ ವ್ಯಕ್ತಿಯ ಕೊಲೆಗೆ ಯತ್ನ: 
     ಸೋಮವಾರಪೇಟೆ ತಾಲೋಕು, ಹಾನಗಲ್ಲು ಬಾಣೆಯಲ್ಲಿ ವಾಸವಾಗಿರುವ ಫಿರ್ಯಾದಿ ಹೆಚ್‌.ಎನ್‌. ದಿಲೀಪ್‌‌ ಎಂಬವರು ಚಿಕ್ಕಹರದೆ ಗ್ರಾಮದ ವಾಸಿ ಪವಿತ್ರ ಎಂಬವರನ್ನು ದಿನಾಂಕ 25.01.2014 ರಂದು ವಿವಾಹವಾಗಿ ದಿನಾಂಕ 26.1.2015 ರಂದು ಆಕೆಯ ಮನೆ ಚಿಕ್ಕ ಹರದೆ ಗ್ರಾಮದಲ್ಲಿ ಇರುವಾಗ್ಗೆ ರಾತ್ರಿ 02:00 ಗಂಟೆ ವೇಳೆಯಲ್ಲಿ ಪವಿತ್ರಾರವರು ಟಾಯ್ಲೇಟ್‌ ರೂಂಗೆ ಹೋಗಲು ಹೊರಗೆ ಎದ್ದು ಹೋದಾಗ ಫಿರ್ಯಾದಿಯವರು ಕೂಡ ಹಿಂದಿನಿಂದ ಹೋಗಿದ್ದು, ಮನೆಯ ಮುಂದಿನ ರಸ್ತೆಯಲ್ಲಿ ಒಂದು ಓಮಿನಿ ವ್ಯಾನ್‌ ನಿಂತಿದ್ದನ್ನು ಕಂಡು ಹತ್ತಿರ ಹೋಗಿ ನೋಡಿದಾಗ ಕೆಎ 05 ಎಂ.ಇ 1170 ರ ವ್ಯಾನ್‌ ನಲ್ಲಿ ಬಿಪಿನ್‌ದಾಸ್‌ ಎಂಬಾತ ಕುಳಿತಿದ್ದು, ಆತನನ್ನು ಏಕೆ ಈ ಹೊತ್ತಿನಲ್ಲಿ ಇಲ್ಲಿ ಇದ್ದೀಯಾ ಎಂದು ಕೇಳಿದಾಗ ನಾನು ಮದುವೆಯಾಗಬೇಕಾದ ಹುಡುಗಿಯನ್ನು ನೀನು ಮದುವೆಯಾಗಿದ್ದೀಯಾ ಎಂದು ಜಾತಿ ನಿಂದನೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ವ್ಯಾನನ್ನು ಸ್ವಲ್ಪ ಹಿಂದೆ ಚಾಲಿಸಿ ಡಿಕ್ಕಿಪಡಿಸಿ ಕೊಲೆಗೆ ಯತ್ನಿಸಿದ್ದು, ಈ ಸಂದರ್ಭದಲ್ಲಿ ಫಿರ್ಯಾದಿ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪತಿಯ ಮೇಲೆ ಪತ್ನಿ ಮತ್ತು ಇನ್ನೋರ್ವನಿಂದ ಹಲ್ಲೆ.

         ಫಿರ್ಯಾದಿ ಕೆ.ಪಿ. ಬಾಲಕೃಷ್ಣ ಎಂಬವರು ತನ್ನ ಪತ್ನಿ ನೇತ್ರಾವತಿ ಎಂಬವರೊಂದಿಗೆ ಭಾಗಮಂಡಲ ಠಾಣಾ ಸರಹದ್ದಿನ ಬಿ.ಬಾಡಗ ಗ್ರಾಮದಲ್ಲಿ ವಾಸವಾಗಿದ್ದು, ಅವರ ನೆರೆ ಮನೆಯ ನಿವಾಸಿ ಬಿಪಿನ್‌ ಎಂಬಾತ ಹಿಂದೆ ಜೈಲಿನಲ್ಲಿದ್ದು, ಆತನ್ನು ಫಿರ್ಯಾದಿಯವರ ಪತ್ನಿ ನೇತ್ರಾವತಿಯೇ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಫಿರ್ಯಾದಿಯವರ ಮನೆಗೆ ಕರೆದುಕೊಂಡು ಬಂದು ಆತ ಅಲ್ಲಿಯೇ ನೆಲೆಸಿದ್ದು, ಇದನ್ನು ವಿಚಾರಿಸಿದ ಫಿರ್ಯಾದಿಯ ಮೇಲೆ ಪತ್ನಿ ನೇತ್ರಾವತಿ ಮತ್ತು ಬಿಪಿನ್‌ರವರುಗಳು ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿ ನೋವನ್ನುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Tuesday, January 27, 2015

ಟಾಟಾ ಐರೀಸ್‌ಗೆ ಕಾರು ಡಿಕ್ಕಿ, ಐವರಿಗೆ ಗಾಯ:
     ಟಾಟಾ ಐರೀಸ್‌ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ  ಐದು ಮಂದಿ ಗಾಯಗೊಂಡ ಘಟನೆ ಭಾಗಮಂಡಲ ಹತ್ತಿರದ ಸಣ್ಣಪುಲಿಕೋಟು ಗ್ರಾಮದಲ್ಲಿ ನಡೆದಿದೆ.  ಮಡಿಕೇರಿ ತಾಲೋಕು, ಸಣ್ಣಪುಲಿಕೋಟು ಗ್ರಾಮದ ನಿವಾಸಿ ಪಿ.ರೋಹಿಣಿ ಹಾಗು ಇತರೆ ಮೂರು ಮಂದಿ      ದಿನಾಂಕ 26-1-2015 ರಂದು ಭಾಗಮಂಡಲದಿಂದ ಸಣ್ಣಪುಲಿಕೋಟು ಗ್ರಾಮಕ್ಕೆ ಟಾಟಾ ಐರೀಸ್‌ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಟಾಟಾ ಐರೀಸ್‌ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮವಾಗಿ ಚಾಲಕ, ಫಿರ್ಯಾದಿ ಪಿ. ರೋಹಿಣಿ, ಗಣೇಶ, ರೇಣು ಮತ್ತು ರಾಜು ರವರುಗಳಿಗೆ ಗಾಯಗಳಾಗಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ವ್ಯಕ್ತಿಗಳಿಂದ ಕರ್ತವ್ಯಕ್ಕೆ ಅಡ್ಡಿ,ಕೊಲೆ ಬೆದರಿಕೆ: 
      ಪಿರ್ಯಾದಿ ಎ.ಪಿ. ದೇವಯ್ಯ ಇವರು ಒಂದು ವರ್ಷದಿಂದ ಗಾಳೀಬೀಡು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 26-1-2015 ರಂದು ಗಣರಾಜ್ಯೋತ್ಸವವಾದ್ದರಿಂದ ಕಚೇರಿಯಲ್ಲಿ ಕಾರ್ಯಕ್ರಮ ಮುಗಿಸಿ ಹೊರಡುವಾಗ ಅರಣ್ಯ ಇಲಾಖೆಯವರು ಯಾವುದೇ ಅನುಮತಿ ಇಲ್ಲದೇ ಮಾಂದಲಪಟ್ಟಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ವಿಚಾರ ತಿಳಿದು ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರೆಲ್ಲರೂ ಸೇರಿ ಎರಡು ಜೀಪಿನಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುತ್ತಿರುವಾಗ ತಂಬುಕುತ್ತೀರ ರಮೇಶ ಮತ್ತು ಗಣೇಶ ರವರು ಎರಡು ಜೀಪುಗಳಲ್ಲಿ ಬಂದು ಪಿರ್ಯಾದಿಯವರಿಗೆ ಹಾಗೂ ಸರ್ವ ಸದಸ್ಯರಿಗೆ ಅವಾಚ್ಯ ಶಬ್ದಗಳಿಂದ ಬೈದು ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 
 
ಶೌಚಾಲಯ ನಿರ್ಮಿಸುವ ವಿಚಾರದಲ್ಲಿ ಜಗಳ, ಹಲ್ಲೆ:
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹಚ್ಚಿನಾಡು ಗ್ರಾಮದ ನಿವಾಸಿ ತಂಬುಕುತ್ತೀರ ಪಿ. ಮೇದಪ್ಪ ಮತ್ತು ಅವರ ಅಣ್ಣ ಗಣೇಶರವರು ಹಾಗೂ ಇತರರು ಮಾಂದಲಪಟ್ಟಿಯಲ್ಲಿರುವಾಗ್ಗೆ ಅರಣ್ಯ ಇಲಾಖೆಯವರು ಕಟ್ಟಿಸುತ್ತಿದ್ದ ಶೌಚಾಲಯವನ್ನು ಗಾಳಿಬೀಡು ಗ್ರಾಮ ಪಂಚಾಯಿತಿಯ ಅದ್ಯಕ್ಷರಾದ ಸುಭಾಷ್ ಸೋಮಯ್ಯ ಮತ್ತು ಪಂಚಾಯಿತಿಯ ಕಾರ್ಯದರ್ಶಿಯವರು ಸುಭಾಷ್‌ಸೋಮಯ್ಯನವರ ಜೀಪಿನಲ್ಲಿ ಸಮಯ 04-30 ಪಿ ಎಂಗೆ ಬಂದು ವೀಕ್ಷಣೆ ಮಾಡಿ ಅರಣ್ಯ ಅಧಿಕಾರಿಯವರಿಗೆ ಸುಭಾಷ್‌ಸೋಮಯ್ಯ ಮತ್ತು ಕಾರ್ಯದರ್ಶಿ ಯವರು ಕೆಟ್ಟ ಪದಗಳಿಂದ ಬೈದು ಪಿರ್ಯಾದಿ ತಂಬುಕುತ್ತೀರ ಸೋಮಯ್ಯನವರ ಮೇಲೆ ಕೈಗಳಿಂದ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದುಅಲ್ಲದೆ ಕೊಲೆ ಬೆದಕರಿಕೆ ಹಾಕಿರುತ್ತಾರೆಂದು ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ.

Monday, January 26, 2015

ಜೀಪುಗಳ ಮುಖಾಮುಖಿ ಡಿಕ್ಕಿ, ಜಖಂ. 
    ಈ ದಿನ ದಿನಾಂಕ 26-1-2015 ರಂದು ಬೆಳಿಗ್ಗೆ 9-00 ಗಂಟೆಗೆ ಭಗವತಿ ನಗರದ ನಿವಾಸಿ ಸುಜಿತ್‌ ಶೆಟ್ಟಿ ಎಂಬುವವರು ಮಡಿಕೇರಿ ಯಿಂದ ಅಬ್ಬಿಫಾಲ್ಸ್‌ ಕಡೆಗೆ ತಮ್ಮ ಜೀಪಿನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ವಾಸನಾರಾಯಣ ಎಂಬ ವ್ಯಕ್ತಿ ತಾನು ಚಾಲಿಸಿಕೊಂಡು ಬಂದ ಜೀಪನ್ನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ಬಂದು ಸುಜಿತ್‌ ಶೆಟ್ಟಿಯವರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಜೀಪು ಜಖಂ ಗೊಂಡಿದ್ದು, ಮಡಿಕೇರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಟೋ ರಿಕ್ಷಾ ಅಪಘಾತ, ಇಬ್ಬರಿಗೆ ಗಾಯ:
ಸೋಮವಾರಪೇಟೆ ತಾಲೋಕು ಕೂಡ್ಲೂರು ಗ್ರಾಮದ ನಿವಾಸಿಗಳಾದ ಶ್ರೀಮತಿ ಭಾಗ್ಯ ಎಂಬವರು ಅನಿತಾ ಎಂಬವರೊಂದಿಗೆ ದಿನಾಂಕ 25-1-2015 ರಂದು ಆಟೋ ರಿಕ್ಷಾದಲ್ಲಿ ಕೊಡ್ಲಿಪೇಟೆ ಡೆಗೆ ಹೋಗುತ್ತಿದ್ದಾಗ ಆಟೋ ಚಾಲಕ ಆಟೋವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬಸವನಾರೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಫಿರ್ಯಾದಿ ಶ್ರೀಮತಿ ಭಾಗ್ಯ ಹಾಗು ಅನಿತಾರವರು ಗಾಯಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀವನದಲ್ಲಿ ಜಿಗುಪ್ಸೆ, 15 ವರ್ಷ ಪ್ರಾಯದ ಹುಡುಗಿ ಆತ್ಮಹತ್ಯೆ:
   ಮಾನಸಿಕ ಅಸ್ವಸ್ಥೆ ಹಾಗು ಓದಿನಲ್ಲಿ ಆಸಕ್ತಿಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು 9ನೇ ತರಗತಿ ವಿದ್ಯಾರ್ಥಿನಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಡಿಕೇರಿ ತಾಲೋಕು ಕಟ್ಟೆಮಾಡು ಗ್ರಾಮದ ವಾಸಿ ಬಿ.ಬಿ. ಮಾಯಿಲಪ್ಪ ಎಂಬವರ ಮಗಳು 15 ವರ್ಷ ಪ್ರಾಯದ ನಯನ ಎಂಬಾಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 25-1-2015 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜಿಗುಪ್ಸೆಗೊಂಡು ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ:
     ಚಿನ್ನದ ಸರ ಕಾಣೆಯಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆಮಾಡಿಕೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ವರದಿಯಾಗಿದೆ. ವಿರಾಜಪೇಟೆ ತಾಲೋಕು, ಮುಕ್ಕಾಟಿಕೊಪ್ಪಅಮ್ಮತ್ತಿ ಎಂಬಲ್ಲಿ ವಾಸವಾಗಿದ್ದ ಶ್ರೀಮತಿ ಮುತ್ತಮ್ಮ (45) ಇವರು ಚಿನ್ನದ ಸರ ಕಾಣಿಯಾದ ಬಗ್ಗೆ ಮನನೊಂದು ದಿನಾಂಕ 24-1-2015 ರಂದು ಅವರ ಮನೆಯ ಹತ್ತಿರ  ಇರುವ ಕೆರೆಯೊಂದರಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮತಿ ಎಂ.ಕೆ. ವಿಮಲರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Sunday, January 25, 2015

ವ್ಯಕ್ತಿಯ ಅಸಹಜ ಸಾವು ಪ್ರಕರಣ ದಾಖಲು:
   ಮಂಡ್ಯ ಜಿಲ್ಲೆಯ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ನಡೆದಿದೆ. ಫಿರ್ಯಾದಿ ಶ್ರೀಮತಿ ಮಂಜುಳ ಎಂಬವರು ಮಂಡ್ಯ ಜಿಲ್ಲೆಯ ನಾಗರಘಟ್ಟ ಗ್ರಾಮದಲ್ಲಿ  ವಾಸಿಸುತ್ತಿದ್ದು, ಅವರ ಪತಿ ಉಮೇಶ ರವರು ಸೋಮವಾರಪೇಟೆ ತಾಲೋಕು, ಕಿಬ್ಬೆಟ್ಟ ಗ್ರಾಮದಲ್ಲಿ ರವಿ ಎಂಬುವವರ ಲೈನ್‌ ಮನೆಯಲ್ಲಿ ವಾಸಿಸುತ್ತಿದ್ದುಈ ದಿನ ದಿನಾಂಕ 25-01-2015 ರಂದು ಬೆಳಿಗ್ಗೆ 05.30 ಗಂಟೆಗೆ ಉಮೇಶ ರವರು ಎದೆ ನೋವಿನಿಂದ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ವಿಚಾರವನ್ನು  ಸಂಬಂಧಿ ವೀರಭದ್ರ ರವರು ಫಿರ್ಯಾದಿಯವರಿಗೆ ದೂರವಾಣಿ ಮುಖಾಂತರ ತಿಳಿಸಿದ ಮೇರೆ ಫಿರ್ಯಾದಿಯವರು ಆಸ್ಪತ್ರೆಗೆ ಬಂದು ಮೃತ ದೇಹವನ್ನು ನೋಡಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ವ್ಯಕ್ತಿಯ ಜಾತಿ ನಿಂದನೆ, ಕೊಲೆ 
     ದಿನಾಂಕ 23/01/2015 ರಂದು ಸಂಜೆ 5.00 ಗಂಟೆಗೆ ಪಿರ್ಯಾದಿ ಅನೀಶ್‌, ಸಿದ್ದಾಪುರ ನಗರ ಇವರು ತಮ್ಮ ಮನೆಯ ಹತ್ತಿರವಿರುವ ಶ್ರೀ.ಮುತ್ತಪ್ಪ ಭಗವತಿ ದೇವಸ್ಥಾನದಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳಿಗೆ ಮದುವೆ ಮಾಡಿಕೊಟ್ಟ ವಿಷಯದ ಬಗ್ಗೆ ವಿಚಾರಿಸಲು ಅಲ್ಲಿನ ಅರ್ಚಕರಾದ ರವೀಶ್ ಭಟ್ ರವರ ಬಳಿ ದೇವಸ್ಥಾನದ ಕಾರ್ಯದರ್ಶಿ ಹಾಗೂ ಗ್ರಾಮದವರೊಂದಿಗೆ ತೆರಳಿ ವಿಚಾರಿಸಿದಾಗ ಅರ್ಚಕರಾದ ರವೀಶ್ ಭಟ್ ಹಾಗೂ ಅವರ ಹೆಂಡತಿ ಮತ್ತು ಮಗ ಬಂದು ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಜಾತಿ ನಿಂದನೆಯನ್ನು ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಪಾದಾಚಾರಿಗೆ ಬೈಕ್‌ ಡಿಕ್ಕಿ:
    ವಿರಾಜಪೇಟೆ ತಾಲೋಕು ನಾಂಗಾಲ ಗ್ರಾಮದ ನಿವಾಸಿ ವಿನೋದ್‌ ಎಂಬವರು ದಿನಾಂಕ: 23-01-15ರಂದು ಸಮಯ ರಾತ್ರಿ 10-00ಗಂಟೆಗೆ ಮನೆಗೆ ಹೋಗಲು ವಿರಾಜಪೇಟೆ-ಬಿಟ್ಟಂಗಾಲ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಿಟ್ಟಂಗಾಲದ ಆರ್.ಕೆ.ಎಫ್. ಹತ್ತಿರ ಎದುರುಗಡೆಯಿಂದ ಯಜ್ಞ ಬಾರ್ ನಲ್ಲಿ ಕೆಲಸ ಮಾಡುತ್ತಿರುವ ದಿವ್ಯಾ ಎಂಬುವವರು ತಮ್ಮಮೋಟಾರ್ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವಿನೋದ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ವಿನೋದ್ ರವರು ರಸ್ತೆಯಲ್ಲಿ ಬಿದ್ದು ಅವರ ಕಾಲಿಗೆ ಹಾಗೂ ಶರೀರಕ್ಕೆ ಗಾಯವಾಗಿರುವುದಲ್ಲದೆ ಬೈಕಿನ ಸವಾರ ದಿವ್ಯಾ ರವರಿಗೆ ಸಹ ಗಾಯವಾಗಿದ್ದು, ಗಾಯಾಳು ವಿನೋದ್‌ರವರನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿ ವೈದ್ಯರ ಸಲಹೆ ಮೇರೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿನ ಬಾನವಿ ಆಸ್ಪತ್ರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, January 24, 2015


ಕೆರೆಗೆ ಜಾರಿಬಿದ್ದು ವ್ಯಕ್ತಿಯ ಸಾವು:
   ಮಡಿಕೇರಿ ತಾಲೋಕು, ಹಾಕತ್ತೂರು ಗ್ರಾಮದ ನಿವಾಸಿ ಶ್ರೀಮತಿ ಸರಸ್ವತಿ ಎಂಬುವವರ ಗಂಡ ಪೂವಪ್ಪ ಎಂಬವರು ದಿನಾಂಕ 22-1-2014 ರಂದು ತಾನು ಕೆಲಸ ಮಾಡುತ್ತಿದ್ದ ವ್ಯಕ್ತಿಯ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಣದ ವ್ಯವಹಾರ ಮಹಿಳೆ ಮೇಲೆ ಹಲ್ಲೆ:
    ಪಿರ್ಯಾದಿ ವಿ.ಜಯಮ್ಮ ವೆಂಕಟೇಶ್ ಪ್ರಾಯ 55 ವರ್ಷ, ಗ್ರಾ.ಪಂ.ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಪಾಲಿಬೆಟ್ಟ.ಇವರು ದಿನಾಂಕ 23/01/2015 ರಂದು ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವಿಶೇಷ ಸಭೆ ಇದ್ದುದರಿಂದ ಸದರಿ ಸಭೆಗೆ ಹಾಜರಾಗಲು ಗ್ರಾಮ ಪಂಚಾಯಿತಿ ಕಚೇರಿಗೆ ತಲುಪುವಾಗ್ಗೆ ಕಛೇರಿಯ ಮುಂಭಾಗದಲ್ಲಿ ಸದಸ್ಯೆ ಕಾವೇರಿ ರವರು ಫಿರ್ಯಾದಿಯವರ ದಾರಿ ತಡೆದು ನೀನು ನನಗೆ ಸಾಲದ ಹಣ ಕೊಟ್ಟಿಲ್ಲವೆಂದು ಜಗಳ ತೆಗೆದು ಕಾಲಿನಲ್ಲಿದ್ದ ಚಪ್ಪಲಿಯಿಂದ ಬಲದ ಕೈಗೆ ಹೊಡೆದು ಅಲ್ಲೆ ಇದ್ದ ಪೊರಕೆಯಿಂದ ಪಿರ್ಯಾದಿಯವರ ಬಲಕೈಗೆ ಹೊಡೆದು ಗಾಯ ನೋವು ಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಅಲ್ಯುಮಿನಿಯಂ ಪೈಪು ಕಳ್ಳತನ:
    ದಿನಾಂಕ 21-1-2015ರ ಬೆಳಿಗ್ಗೆ 11-00 ಗಂಟೆಯ ಮದ್ಯದ ಅವಧಿಯಲ್ಲಿ ವಿರಾಜಪೇಟೆ ತಾಲೋಕು ಕುಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯ ನಾಲ್ಕೇರಿ ಗ್ರಾಮದ ಫಿರ್ಯಾದಿ ಕೆ.ಎಂ. ಬೋಪಯ್ಯ ಎಂಬುವವರಿಗೆ ಸೇರಿದ ಸರ್ವೆ ನಂ.111/5ರ ಕಾಫಿ ತೋಟಕ್ಕೆ ಹೊಳೆಯಿಂದ ನೀರನ್ನು ಹಾಯಿಸಲು ಜೋಡಿಸಿದ್ದ ಸುಮಾರು 24000 ರೂ ಬೆಲೆ ಬಾಳುವ 40 ಸಿಲ್ವರ್‌ ಅಲ್ಯುಮಿನಿಯಂ ಪೈಲುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, January 23, 2015

ಜೀಪು ಅವಘಡ ಕಾರ್ಮಿಕನ ದುರ್ಮರಣ:

     ಕಾಫಿ ತುಂಬಿದ ಜೀಪೊಂದು ಚಾಲಕನ ನಿರ್ಲಕ್ಷ್ಯದಿಂದ ಅಪಘಾತಕ್ಕೀಡಾಗಿ, ಕಾರ್ಮಿಕನೋರ್ವ ಸಾವನಪ್ಪಿ, ಚಾಲಕ ಮತ್ತು ಮತ್ತೋರ್ವ ಕಾರ್ಮಿಕ ಗಾಯಗೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ: 22-01-15ರಂದು ವಿರಾಜಪೇಟೆ ತಾಲೋಕು, ಮಾಲ್ದಾರೆ ನಿವಾಸಿ ಕಾಳಯ್ಯ (37) ಎಂಬವರು ಸಹ ಕಾರ್ಮಿಕರೊಂದಿಗೆ ಚೆಂಬೆಬೆಳ್ಳೂರು ಗ್ರಾಮದ ಎ.ಎಂ. ಮೊಣ್ಣಯ್ಯ ಎಂಬುವವರ ತೋಟದಲ್ಲಿ ಕಾಫಿ ಕುಯ್ಯುವ ಕೆಲಸಕ್ಕೆ ಹೋಗಿ ಸಂಜೆ 3-30ಪಿ.ಎಂ.ಗೆ ಎ.ಎಂ. ಮೊಣ್ಣಯ್ಯನವರ ಜೀಪು ನಂ. CNZ 2870 ಮತ್ತು ಟ್ರೆಲರ್ ನಂ. CNZ 3097 ರಲ್ಲಿ ಕಾಫಿಚೀಲಗಳನ್ನು ತುಂಬಿಸಿ ಸದರಿ ಜೀಪಿನ ಹಿಂಬದಿಯ ಟ್ರೆಲರ್ ನ ಕಾಫಿ ಚೀಲದ ಮೇಲೆ ಕುಳಿತುಕೊಂಡು ವಾಪಾಸ್ಸು ಮನೆ ಕಡೆ ಹೋಗುತ್ತಿದ್ದಾಗ ತೋಟದ ಒಳಗಡೆ ಇರುವ ಮಣ್ಣು ರಸ್ತೆಯ ಇಳಿಜಾರು ರಸ್ತೆಯಲ್ಲಿ ಚಾಲಕ ಮೊಣ್ಣಯ್ಯ ನವರು ಜೀಪನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿ ಣಾಮ ಜೀಪು ಮತ್ತು ಟ್ರೇಲರ್ ಮಗುಚಿ ಬಿದ್ದು, ಟ್ರೆಲರ್ ಕಾಳಯ್ಯನವರ ಮೇಲೆ ಬಿದ್ದು ಸದರಿಯವರು ಸ್ಥಳದಲ್ಲೇ ಸಾವಿಗೀಡಾಗಿದ್ದು ಅವರ ಜೊತೆಯಲ್ಲಿದ್ದ ಸತೀಶ ಎಂಬಾತನ ಸೊಂಟದ ಭಾಗಕ್ಕೆ ಹಾಗೂ ಚಾಲಕ ಮೊಣ್ಣಯ್ಯ, ರವರ ತೊಡೆಯ ಭಾಗಕ್ಕೆ ಗಾಯಗಳಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿರುತ್ತದೆ.

ಕಾಲುಜಾರಿ ಕೆರೆಗೆ ಬಿದ್ದು ವ್ಯಕ್ತಿಯ ಸಾವು:  

ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಕುಟ್ಟ ಠಾಣಾ ಸರಹದ್ದಿನ ಕೋತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 21-01-2015 ರಂದು ಸಮಯ ಬೆಳಿಗ್ಗೆ 12.45 ಗಂಟೆಗೆ ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಕೋತೂರು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ 55 ವರ್ಷ ಪ್ರಾಯದ ಲಿಂಗಪ್ಪ ಎಂಬ ವ್ಯಕ್ತಿ ಅತಿಯಾಗಿ ಮದ್ಯಪಾನ ಮಾಡಿ ಸ್ನಾನಕ್ಕೆಂದು ಕೆರೆಗೆ ಇಳಿದಿದ್ದು, ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು, ಸಾವನಪ್ಪಿದ್ದು, ಅವರ ಪತ್ನಿ ಶ್ರೀಮತಿ ಸೀತಾರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಕಾರಿಗೆ ಮಿನಿ ಲಾರಿ ಡಿಕ್ಕಿ ಮೂವರಿಗೆ ಗಾಯ:

    ಸೋಮವಾರಪೇಟೆ ತಾಲೋಕು, ಕುಶಾಲನಗರ ನಿವಾಸಿ ಕೆ.ಎಲ್‌. ನಿಧಿ ಎಂಬವರು ದಿನಾಂಕ 22-01-2015 ತನ್ನ ಕಾರು ಸಂಖ್ಯೆ ಕೆಎ-12-ಎನ್-5350 ರಲ್ಲಿ ತಂದೆ ಲಕ್ಷ್ಮಣ ಹಾಗೂ ತಾಯಿ ಇಂದಿರಾಬಾಯಿ ರವರುಗಳೊಂದಿಗೆ ಕುಶಾಲನಗರದಿಂದ ಮರಗೋಡುವಿಗೆ ಸ್ವಂತ ಕೆಲಸದ ನಿಮಿತ್ತ ಹೋಗುತ್ತಿರುವಾಗ ಸಮಯ 4-30 ಪಿ ಎಂ ಗೆ ಅಭ್ಯತ್‌ಮಂಗಲ ಎಂಬಲ್ಲಿಗೆ ತಲುಪುವಾಗ್ಗೆ ಸಿದ್ದಾಪುರ ಕುಶಾಲನಗರ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಅಂದರೆ ಸಿದ್ದಾಪುರ ಕಡೆಯಿಂದ ಕೆ ಎಲ್-58-ಕೆ-4322 ರ ಕ್ಯಾಂಟರ್ ಮಿನಿ ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಧಿರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರಿಗೆ ಹಾಗು ಅವರ ತಂದೆ ತಾಯಿಗೆಗಾಯಗಳಾಗಿದ್ದು, ಈ ಸಂಬಂಧ ಕುಶಾಲನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:
     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದು ಅರಪಟ್ಟು ಗ್ರಾಮದ ನಿವಾಸಿ ಕೆ.ಎಂ. ಅಜ್ರುದ್ದೀನ್‌ ಎಂಬವರು ಈ ದಿನ ದಿನಾಂಕ 23-1-2015 ರಂದು ಸಮಯ ಬೆಳಿಗ್ಗೆ 10-30 ಗಂಟೆಗೆ ಕಡಂಗ ಗ್ರಾಮಕ್ಕೆ ಹೋಗಲು ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ನಿವಾಸಿ ಕೆ.ಇ. ಅಶ್ರಫ್‌ ಎಂಬವರು ಅದೇ ಸ್ಥಳಕ್ಕೆ ಬಂದಿದ್ದು, ಹಿಂದಿನ ದಿನ ಫಿರ್ಯಾದಿ ಕೆ.ಎಂ. ಅಜ್ರುದ್ದೀನ್‌ರವರ ತಾಯಿಗೆ ಸದರಿ ಅಶ್ರಫ್‌ ವಿನಾಕಾರಣ ಬೈದಿರುವ ಬಗ್ಗೆ ವಿಚಾರಿಸಿದ ಕಾರಣಕ್ಕೆ ಸದರಿ ಅಶ್ರಫ್‌ ದೊಣ್ಣೆಯಿಂದ ಕೆ.ಎಂ. ಅಜ್ರುದ್ದೀನ್‌ರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  

ಬೈಕ್‌ ಅವಘಡ ಸವಾರನಿಗೆ ಗಾಯ: 
     ದಿನಾಂಕ 22-01-2015 ರಂದು ರಾತ್ರಿ ಸಮಯ 21.40 ಗಂಟೆಗೆ ಸೋನವಾರಪೇಟೆ ತಾಲೋಕು, ಚೌಡ್ಲು ಗ್ರಾಮದ ನಿವಾಸಿ ಫಿರ್ಯಾದಿ ಎಂ.ಎಸ್‌. ಅಶೋಕ ಎಂಬುವವರ ಮಾವ ಸ್ವಾಮಿರವರು ತಮ್ಮ ಬಾಪ್ತು ಕೆಎ-12, 5127 ರ ಮೋಟಾರು ಬೈಕಿನಲ್ಲಿ ಸೋಮವಾರಪೇಟೆ ನಗರದ ಅಮ್ಮಣ್ಣ ಗ್ಯಾರೇಜಿನ ಕಡೆಯಿಂದ ತ್ರೀಷಾ ಚಿತ್ರ ಮಂದಿರದ ಮುಂಭಾಗದಲ್ಲಿ ಬರುತ್ತಿರುವಾಗ್ಗೆ, ಬೈಕಿನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಹೋಗಿದ್ದು, ಪರಿಣಾಮ ಸ್ವಾಮಿ ರವರಿಗೆ ರಕ್ತಗಾಯಗಳಾಗಿದ್ದು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ದಾಖಲು ಪಡಿಸಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Thursday, January 22, 2015

ಹುಡುಗಿ ಕಾಣೆ, ಪ್ರಕರಣ ದಾಖಲು:

ಸೋಮವಾರಪೇಟೆಯಲ್ಲಿರುವ ವಿದ್ಯಾ ಹೆಲ್ತ್‌ಕೇರ್‌ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮದಲಾಪುರ ಗ್ರಾಮದ ವಾಸಿ ಪ್ರಾಯ 19 ವರ್ಷದ ಗೀತಾಂಜಲಿ ಎಂಬವಳು ಈ ದಿನ ದಿನಾಂಕ 22.01.2015 ರಂದು ಸಮಯ 07:30 ಗಂಟೆಗೆ ವಿದ್ಯಾ ಸಂಸ್ಥೆಯಲ್ಲಿ ವಿಶೇಷ ತರಗತಿ ಇದ್ದ ಕಾರಣ ಮನೆಯಿಂದ ಬಸ್ಸಿನಲ್ಲಿ ಸೋಮವಾರಪೇಟೆಗೆ ಬಂದು ಇಳಿದು ಸಹಪಾಠಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದು, ನಂತರ ತನ್ನ ತಂದೆ ತಾಯಿಗೆ ಫೋನ್‌ ಮಾಡುತ್ತೇನೆ ಎಂದು ಸಹಪಾಠಿಗಳಿಂದ ಹಿಂದೆ ಸರಿದು ಉಳಿದುಕೊಂಡವಳು ನಂತರ ತರಗತಿಗೆ ಬಾರದೆ ಕಾಣೆಯಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿದ್ಯಾರ್ಥಿನಿಯ ದಾರಿ ತಡೆದು, ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆ:

ಮುರ್ನಾಡುವಿನ ಪ್ರಥಮ ಗ್ರೇಡ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ ಕಾಂ ವ್ಯಾಸಂಗ ಮಾಡುತ್ತಿರುವ ಎಂ.ಯು. ಭವ್ಯ (18) ಎಂಬಾಕೆ ದಿನಾಂಕ 21-01-2015 ರಂದು ಕಾಲೇಜಿನಿಂದ ತರಗತಿ ಮುಗಿಸಿ ಮೂರ್ನಾಡಿನಿಂದ ಬಸ್ಸಿನಲ್ಲಿ ಹೋಗಿ ಮುತ್ತಾರ್ಮುಡಿಯಲ್ಲಿ ಇಳಿದು ಮನೆಯ ಕಡೆಗೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಅಂದಾಜು 4-30 ಪಿ ಎಂ ಗೆ ಮುತ್ತಾರ್ಮುಡಿ ಗ್ರಾಮದ ಮೋಣಪ್ಪ ಹಾಗೂ ಕೇಶವಾನಂದ ಎಂಬ ವ್ಯಕ್ತಿಗಳು ಎದುರುಗಡೆಯಿಂದ ಬಂದು ಪಿರ್ಯಾದಿ ಭವ್ಯಳನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಇಬ್ಬರೂ ಬೈದು ಇಬ್ಬರೂ ಆಕೆಯ ಕೈಗಳನ್ನು ಹಿಡಿದುಕೊಂಡು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ್ದು ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲದೇ ಬಿಡುವುದಿಲ್ಲವೆಂದು ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, January 21, 2015

ಕುಸಿದು ಬಿದ್ದು ವ್ಯಕ್ತಿಯ ಸಾವು:

    ದಿನಾಂಕ 20-01-2015 ರಂದು ಸಮಯ ಬೆಳಿಗ್ಗೆ 11.30 ಗಂಟೆಗೆ ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಮಂಚಳ್ಳಿ ಗ್ರಾಮದ ಕಾಯಿಮಾನಿ ಜಂಕ್ಷನ್ ಬಳಿ ಫಿರ್ಯಾದಿ ಎಸ್‌.ಎಸ್‌.ರವಿ ಎಂಬವರ ಜೊತೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ರಾಜು ಎಂಬವರು ಮೂರ್ಚೆ ರೋಗದಿಂದ ರಸ್ತೆಗೆ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿ ವಿವಾದ, ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ:

    ಮಡಿಕೇರಿ ತಾಲೋಕು, ಬಿಳಿಗೇರಿ ಗ್ರಾಮದ ಪಿರ್ಯಾದಿ ಎಂ.ಕೆ. ಉಮೇಶ್‌ರವರು ದಿನಾಂಕ 20-01-2015 ರಂದು ಬೆಳಿಗ್ಗೆ ಸಮಯ 11.30 ಗಂಟೆಗೆ ಭೂ ಮಾಪನ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸರ್ವೆ ಕಾರ್ಯ ನಡೆಸುವ ಸಂಬಂದ ಬಿಳಿಗೇರಿ ಮುಖ್ಯ ರಸ್ತೆಯಲ್ಲಿರುವ ಆರೋಪಿ ಎಂ. ಮಾದಪ್ಪ ನವರ ಗೇಟಿನ ಮುಂದೆ ಮಾತನಾಡಿಕೊಂಡು ನಿಂತುಕೊಂಡಿರುವಾಗ್ಗೆ, ಸ್ಥಳದಲ್ಲಿದ್ದ ಆರೋಪಿ ಎಂ. ಮಾದಪ್ಪರವರು ಅವರ ಕೈಯಲ್ಲಿದ್ದ ದೊಣ್ಣೆಯಿಂದ ಏಕಾಏಕಿ ಫಿರ್ಯಾದಿ ಉಮೇಶ್‌ರವರ ಮೇಲೆ ಹಲ್ಲೆ ನಡೆಸಿ. ಅವಾಚ್ಯ ಶಬ್ದಗಳಿಂದ ಬೈದು ಇವತ್ತು ನೀನು ತಪ್ಪಿಸಿಕೊಂಡಿದ್ದೀಯಾ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:
 
    ಸೋಮವಾರಪೇಟೆ ಠಾಣಾ ಸರಹದ್ದಿನ ಕುಂಬೂರು ಗ್ರಾಮದ ನಿವಾಸಿ ಶ್ರೀಮತಿ ಮಂಜುಳ ರವರ ಗಂಡ ಮಂಜು ಎಂಬುವವರು ಸುಮಾರು 3 ವರ್ಷಗಳಿಂದ ಗ್ಯಾಸ್ಟಿಕ್ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಂಡರು ಗುಣಮುಖವಾಗಿರಲಿಲ್ಲ. ಇದರಿಂದ ಸದರಿ ಮಂಜುರವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19.01.2015 ರಂದು ಸಂಜೆ ಸಮಯ ಸುಮಾರು 05:00 ಗಂಟೆ ವೇಳೆಯಲ್ಲಿ ಮನೆಯಲ್ಲೇ ಇದ್ದ ಮಂಜುರವರು ಮನೆಯ ಒಳಗೆ ಕಬ್ಬಿಣದ ಪೈಪಿಗೆ ಕುತ್ತಿಗೆಗೆ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Saturday, January 17, 2015

ಪಾದಾಚಾರಿಗೆ ಸ್ಕೂಟರ್‌ ಡಿಕ್ಕಿ:
     ಸ್ಕೂಟರ್‌ವೊಂದು ಡಿಕ್ಕಿಯಾದ ಪರಿಣಾಮ ಪಾಚಾಚಾರಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಡಿಕೇರಿನಗರದ ಇಂದಿರಾಗಾಂಧಿ ವೃತ್ತದಲ್ಲಿ ನಡೆದಿದೆ. ದಿನಾಂಕ 16-1-2015 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಎಂ.ಎಂ. ಕಬೀರ್‌ ಎಂಬವರು ಇಂದಿರಾಗಾಂಧಿ ವೃತ್ತದ ಬಳಿ ಕಾಲೇಜು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್‌ ಸವಾರನೊಬ್ಬ ತನ್ನ ಸ್ಕೂಟರ್‌ನ್ನುಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎಂ.ಎಂ. ಕಬೀರ್‌ಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡು ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:
    ದಿನಾಂಕ 16-1-2015 ರಂದು ಶನಿವಾರಸಂತೆ ಪೊಲೀಸ್‌ ಠಾಣಾ ಸರಹದ್ದಿನ ಗುಂಡೂರಾವ್‌ ಬಡಾವಣೆಯಲ್ಲಿ ಎಂ.ಜೆ. ಇಸ್ವೆಕಾರ್‌ಇಸ್ವೆಕಾರ್‌ಅಹಮ್ಮದ್‌ ಎಂಬವರ ಮೇಲೆ ಜಾಕೀರ್‌ ಹುಸೇನ್‌ ಎಂಬ ವ್ಯಕ್ತಿ ಸಿಲ್ವರ್‌ ಮರದ ವ್ಯಾಪಾರದ ವಿಚಾರದಲ್ಲಿ ದಾರಿ ತಡೆದು ಹಲ್ಲೆ ನಡೆಸಿದ್ದು, ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 
ಮೋಟಾರ್‌ ಬೈಕ್‌ಗೆ ಬಸ್ಸು ಡಿಕ್ಕಿ, ಸವಾರರಿಬ್ಬರಿಗೆ ಗಾಯ: 
     ದಿನಾಂಕ 15-1-2015 ರಂದು ಕೆ.ಎಸ್‌. ಪವನ್‌ ಹಾಗು ಮಹೇಶ್‌ ಎಂಬವರು ಸೋಮವಾರಪೇಟೆ ತಾಲೋಕು ಕುಸುಬೂರು ಗ್ರಾಮದಲ್ಲಿ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಕುಶಾಲನಗರದ ಕಡೆಯಿಂದ ಬಸ್ಸನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಕೆ.ಎಸ್‌. ಫವನ್‌ ಮತ್ತು ಹಿಂಬದಿ ಸವಾರ ಮಹೇಶ್‌ರವರುಗಳು ಗಾಯಗೊಂಡು ಸದರಿಯವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, January 15, 2015

ಪೊಲೀಸ್‌ ವಾಹನಕ್ಕೆ ಲಾರಿ ಡಿಕ್ಕಿ, ಸಿಬ್ಬಂದಿ ಸಾವು, ನಾಲ್ವರಿಗೆ ಗಾಯ:

     ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ  ನಿರ್ವಹಿಸುತ್ತಿದ್ದ   ಎಆರ್‌ಎಸ್ಐ ರಾಭರ್ಟ್‌,  ಸಿಬ್ಬಂದಿಗಳಾದ    ಎಹೆಚ್‌ಸಿ ಗಿರೀಶ್, ಎಹೆಚ್‌ಸಿ  ದೇವರಾಜ, ಎಪಿಸಿ ಚಂದ್ರಪ್ಪ ಹಾಗು  ಚಾಲಕ ಚಂದ್ರಪ್ಪರವರೊಂದಿಗೆ ದಿನಾಂಕ 13-01-2015 ರಂದು ಮೈಸೂರಿನ ಕಾರಾಗೃಹದದಿಂದ ವಿಚಾರಣಾದೀನ ಖೈದಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ  ಕೆಎ-55-ಜಿ-229 ರ ಟೆಂಪೋ ಹೋಗಿ ಈ ದಿನ 14-01-2015 ರಂದು ವಾಪಾಸ್ಸು ಬರುತ್ತಿರುವಾಗ  ಸಂಪಾಜೆ ಮಡಿಕೇರಿ ಸಾರ್ವಜನಿಕ ರಸ್ತೆಯಲ್ಲಿ ಮಡಿಕೇರಿ ಕಡೆಯಿಂದ ಕೆಎ-51-ಬಿ-5754 ರ ಕಂಟೈನರ್ ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟೆಂಪೋಟ್ರಾವೆಲರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಟೆಂಪೋಟ್ರಾವೆಲರ್ ರಸ್ತೆಗೆ ಉರುಳಿ ಬಿದ್ದು ಚಾಲಕ ಚಂದ್ರಪ್ಪರವರು  ಸ್ಥಳದಲ್ಲಿ ಮೃತಪಟ್ಟಿದ್ದು   ಅಲ್ಲದೆ ಸದರಿ ವಾಹನದಲ್ಲಿ  ಪ್ರಯಾಣಿಸುತ್ತಿದ್ದ ಇತರೆ ನಾಲ್ಕು ಮಂದಿ  ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

Posted byVartika Katiyar, IPS

ಕುಟುಂಬ ಕಲಹ, ವ್ಯಕ್ತಿಯ ಕೊಲೆ: 
     ಶ್ರೀಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ಬೀರುಗ ಗ್ರಾಮದಲ್ಲಿ ನೆಲೆಸಿರುವ ಜೇನುಕುರುಬರ ಕರಿಯ ಎಂಬ ವ್ಯಕ್ತಿಯನ್ನು ಜೇನುಕುರುಬರ ಕಾಳು ಎಂಬ ವ್ಯಕ್ತಿ ದಿನಾಂಕ 13-1-2015ರಂದು ಕುಟುಂಬದ ಕಲಹದ ಹಿನ್ನೆಲೆಯಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಪತ್ರಿಕಾ ವರದಿ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:

     ಸೋಮವಾರಪೇಟೆ ತಾಲೋಕು, ಸಂಪಿಗೆದಾಳು ಗ್ರಾಮದ ನಿವಾಸಿ ಎಸ್‌.ಎಂ. ಮಹೇಶ ಎಂಬವರು ದಿನಾಂಕ 13-1-2015 ರಂದು ಬೆಳಿಗ್ಗೆ ಡೈರಿಗೆ ಹಾಲುಕೊಟ್ಟುಮನೆಗೆ ಹೋಗತ್ತಿದ್ದಾಗ ಆರೋಪಿಗಳಾದ ಎಸ್‌.ಜೆ. ರವಿ ಕುಮಾರ್‌ ಮತ್ತು ಎಸ್.ಎಸ್‌. ಹಾಲಪ್ಪ ಎಂಬವರುಗಳು ಮೋಟಾರ್‌ಸೈಕಲ್‌ನಲ್ಲಿ ಬಂದು ಪತ್ರಿಕಾ ವರದಿಯ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವ್ಯಕ್ತಿಯ ಮೇಲೆ ಹಲ್ಲೆ, ಆಸ್ಪತ್ತೆಗೆ ದಾಖಲು:

     ದಿನಾಂಕ:13-1-2015ರಂದು ಶ್ರೀಮಂಗಲ ಪೊಲೀಸ್‌ ಠಾಣಾ ಸರಹದ್ದಿನ ಹೈಸೊಡ್ಲೂರು ಗ್ರಾಮದ ನಿವಾಸಿ ಸಿ.ಎಂ. ದೇವಯ್ಯ ಎಂಬವರು ಹೈಸೊಡ್ಲೂರು ಗ್ರಾಮದಲ್ಲಿರುವ ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ಕಾಫಿ ತೋಟದಿಂದ ಒಂದು ಪಿಕ್ಕಪ್ ಜೀಪ್ ಬರುತ್ತಿದ್ದುದ್ದನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಪಿಕ್ಕಪ್ ಜೀಪಿನಲ್ಲಿದ್ದ ಅದೇ ಗ್ರಾಮದವರಾದ ಕೊಟ್ಟಂಗಡ ವಿಜು, ನೂರೇರ ಮುತ್ತಣ್ಣ, ಮಲ್ಲಂಡ ಸರಸ್ವತಿ, ವಾಣಿ, ಪೊನ್ನಮ್ಮ ರವರು ಸೇರಿ ನಮ್ಮನ್ನು ತಡೆಯಲು ನೀನು ಯಾರು ಎಂದು ಹೇಳಿ ಕತ್ತಿಯಿಂದ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಫಿರ್ಯಾದಿ ಸಿ.ಎಂ. ದೇವಯ್ಯನವರು ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿ ಕೊಟ್ಟ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, January 13, 2015

ಸ್ಕೂಟರ್‌ಗೆ ಕಾರು ಡಿಕ್ಕಿ, ಒಬ್ಬರಿಗೆ ಗಾಯ:

     ಮಡಿಕೇರಿ ನಗರದ ಎ.ವಿ. ಶಾಲೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಶ್ರೀಮತಿ ಶ್ರೀಮತಿ ಎಂಬವರು ತಮ್ಮ ಬಾಪ್ತು ಸ್ಕೂಟರ್‌ನಲ್ಲಿ ಅವರ ಅಕ್ಕ ಲೀಲಾವತಿಯವರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಆರೋಪಿ ವಿಲ್ಸನ್‌ ಎಂಬವರು ತಮ್ಮ ಬಾಪ್ತುಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡುಬಂದು ಸ್ಕೂಟರ್‌ಗೆ ಡಿಕ್ಕಿಪಡಿಸಿದ್ದು, ಸ್ಕೂಟರ್‌ ಚಾಲಿಸುತ್ತಿದ್ದ ಶ್ರೀಮತಿಯವರು ಗಾಯಗೊಂಡಿದ್ದು,  ಮಡಿಕೇರಿ ಟ್ರಾಫಿಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹೆಂಗಸು ಕಾಣೆ:

     ಶ್ರೀಮತಿ ಗೋದಾವರಿ, ಗಂಡ ಮಂಜು ಆಚಾರಿ, ಪ್ರಾಯ 35 ವರ್ಷ, ಚೇರಳ ಶ್ರೀಮಂಗಲ ಗ್ರಾಮ, ಸೋಮವಾರಪೇಟೆ ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಕೆಲವು ಸಮಯದಿಂದ ಗಂಡನ ಮನೆಯಿಂದ ಬಂದು ಫಿರ್ಯಾದಿ ಆರ್‌. ಅಶೋಕ್‌ರವರ ಮನೆಯಲ್ಲಿದ್ದು, ದಿನಾಂಕ 8-1-2015 ರಂದು ಮನೆಯಿಂದ ಹೋದಾಕೆ ಮಡಿಕೇರಿಯ ಟೋಲ್‌ಗೇಟ್‌ ಬಳಿ ಇದ್ದು, ಅಲ್ಲಿಂದ ಕಾಣೆಯಾಗಿರುತ್ತಾರೆಂದು ಸದರಿ ಆರ್. ಅಶೋಕ್‌ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Monday, January 12, 2015

ಅಪರಿಚಿತ ವ್ಯಕ್ತಿಯ ಸಾವು, ಪ್ರಕರಣ ದಾಖಲು:

      ದಿನಾಂಕ 11.01.2015 ರಂದು  ಸೋಮವಾರಪೇಟೆ ತಾಲೋಕು ಯಲಕನೂರು ಗ್ರಾಮದ ನಿವಾಸಿ ಟಿ.ಎಸ್‌. ಬಸಪ್ಪ  ಎಂಬವರು ಅವರ ಜಮೀನಿನಲ್ಲಿ ಶುಂಠಿ ಕೀಳಲು ಹೋಗಿ  ಮದ್ಯಾಹ್ನ ಊಟಕ್ಕೆಂದು ಮನೆಗೆ ಹೋಗುವಾಗ ಸಮಯ ಸುಮಾರು 1:45 ಪಿ.ಎಂ.ಗೆ ಅವರ ಜಮೀನಿನ ಪಕ್ಕದಲ್ಲಿ ಇರುವ ರಸ್ತೆಯಲ್ಲಿ ಯಾರೋ ಒಬ್ಬ ಗಂಡಸು ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದವನ್ನು ನೋಡಿ ಭಯಗೊಂಡು ರತ್ನಕರ ಎಂಬುವರಿಗೆ  ಫೋನ್ ಮಾಡಿ ತಿಳಿಸಿ  ಅವರು ಬಂದು ನೋಡುವಷ್ಟರಲ್ಲಿ ಮೃತ ಪಟ್ಟಿದ್ದು, ಆತನ ಹೆಸರು ವಿಳಾಸ ತಿಳಿಯದೇ ಇದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Sunday, January 11, 2015

ಅಂಗಡಿ ಬಾಗಿಲು ಮುರಿದು 15 ಲಕ್ಷ ಹಣ ಕಳವು:
     ಕಳ್ಳರು ಅಂಗಡಿಯ ಬಾಗಿಲು ಮುರಿದು 15 ಲಕ್ಷ ನಗದು ಕಳವು ಮಾಡಿದ ಘಟನೆ ಸುಂಟಿಕೊಪ್ಪನಗರದಲ್ಲಿ ನಡೆದಿದೆ. ದಿನಾಂಕ 10.01.15 ರಂದು ಸಮಯ ರಾತ್ರಿ 09.00 ಗಂಟೆಗೆ ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಸುಂಟಿಕೊಪ್ಪ ನಗರದ ಬಸ್ಸು ನಿಲ್ದಾಣದ ಬಳಿ ಮುಖ್ಯ ರಸ್ತೆಯ ಬದಿಯಲ್ಲಿರುವ ಫಿರ್ಯಾದಿರಫ್‌ಶಾದ್‌ ಎಂಬುವವರ ಬಾಪ್ತು ಎ.ಎಂ. ಸ್ಟೋರ್‌ ಅಂಗಡಿಗೆ ವ್ಯಾಪಾರ ಮುಗಿಸಿ ಎಂದಿನಂತೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ರಾತ್ರಿ ಸಮಯದಲ್ಲಿ ಯಾರೊ ಕಳ್ಳರು ಅಂಗಡಿಯ ಹಿಂದಿನ ಬಾಗಿಲ ಹಲಗೆಯನ್ನು ಮುರಿದು ಅಂಗಡಿಯೊಳಗೆ ನುಗ್ಗಿ ಅಂಗಡಿಯ ಕ್ಯಾಶ್‌ ಡ್ರಾ ದಲ್ಲಿದ್ದ 15,00,000/-( ಹದಿನೈದು ಲಕ್ಷ) ರೂಪಾಯಿ ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ದಿನ (11-1-2015) ಬೆಳಿಗ್ಗೆ 07.00 ಗಂಟೆಗೆ ಅಂಗಡಿ ಬಾಗಿಲು ತೆರೆದಾಗ ಕಳ್ಳತನವಾಗಿರುವುದು ಕಂಡು ಬಂದಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಮರಕ್ಕೆ ಡಿಕ್ಕಿ,ನಾಲ್ವರಿಗೆ ಗಾಯ: 
    ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಕಾರನ್ನು ಚಾಲನೆ ಮಾಡಿದ ಪರಿಣಾಮ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿ ಚಾಲಕ ಸೇರಿ ಮೂರುಜನರಿಗೆ ಗಾಯಗಳಾದ ಘಟನೆ ಮೂರ್ನಾಡು ಬಳಿಯ ಬಲಮುರಿಯಲ್ಲಿ ನಡೆದಿದೆ. ದಿನಾಂಕ 10-01-2015 ರಂದು ಸಮಯ 3-45 ಪಿ ಎಂ ಗೆ ಪಿರ್ಯಾದಿ ಮಡಿಕೇರಿ ತಾಲೋಕು ಬೇತು ಗ್ರಾಮದ ನಿವಾಸಿ ಪಿ.ಎ. ಹೈದರಾಲಿ ಎಂಬುವವರು ತನ್ನ ಸ್ನೇಹಿತರಾದ ಶಾಹಿಲ್, ನೂಮಾನ್, ಮಜೀದ್ @ ಮಹಮ್ಮದ್ ಆಲಿ ರವರೊಂದಿಗೆ ಕೆಎ-12-ಪಿ-4301 ರ ಕಾರಿನಲ್ಲಿ ಬಲಮುರಿ ಗ್ರಾಮದಿಂದ ಮುರ್ನಾಡು ಕಡೆಗೆ ಹೋಗುತ್ತಿದ್ದು, ಸದರಿ ಕಾರನ್ನು ಚಾಲಕ ಮಹಮ್ಮದ್ ಆಲಿರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಒಳ್ಳೆತ್ತೋಡು ಎಂಬಲ್ಲಿರುವ ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿಯಾಗಿ, ಪರಿಣಾಮ ಪಿರ್ಯಾದಿ ಹಾಗೂ ಸ್ನೇಹಿತರಾದ ಶಾಹಿಲ್, ನೂಮಾನ್, ಮಜೀದ್ @ ಮಹಮ್ಮದ್ ಆಲಿವರಿಗೆ ರಕ್ತ ಗಾಯಗಳಾಗಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, January 10, 2015

ಚಾಲಕನ ನಿಯಂತ್ರಣ ತಪ್ಪಿದ ಲಾರಿ ಅವಘಡ ಇಬ್ಬರಿಗೆ ಗಾಯ:
     ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿ ಮಗುಚಿದ ಪರಿಣಾಮ ಚಾಲಕ ಹಾಗು ಕ್ಲೀನರ್‌ ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಮದೆನಾಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ. ದಿನಾಂಕ 10-1-2015 ರಂದು ಮಂಗಳೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಲಾರಿ (ಕೆಎ-53-5284) ಯನ್ನು ಅದರ ಚಾಲಕ ಪರಮೇಶ @ ಕುಮಾರ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿ ಮಗುಚಿ ಬಿದ್ದು ಲಾರಿ ಚಾಲಕ ಮತ್ತು ಕ್ಲೀನರ್‌ ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕಾಣೆ, ಪ್ರಕರಣ ದಾಖಲು:
     ದಿನಾಂಕ: 09-01-14ರಂದು ವಿರಾಜಪೇಟೆ ತಾಲೋಕು, ಅಮ್ಮತ್ತಿ ಗ್ರಾಮದ ನಿವಾಸಿ ಎ.ಎಸ್‌. ಸುಜಯ್‌ ಎಂಬವರ ಹೆಂಡತಿ ಶ್ರೀಮತಿ ರೇಖಾ ಎಂಬ ಮಹಿಳೆ ಜೊತೆಯಲ್ಲಿ 1 ವರ್ಷ 7 ತಿಂಗಳ ಪ್ರಾಯದ ಶ್ರೀಜಿತ್ ಎಂಬ ಗಂಡು ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಬಟ್ಟೆ, ಬರೆ ,ಪಾತ್ರೆಗಳನ್ನು ತೆಗೆದುಕೊಂಡು ಮನೆಯಿಂದಹೋಗಿದ್ದು, ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಆಕೆಯ ಪತಿ ಎ.ಎಸ್‌. ಸುಜಯ್‌ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಜೀವನದಲ್ಲಿ ಜಿಗುಪ್ಸೆ ಯುವತಿ ಆತ್ಮಹತ್ಯೆ:
ಕುಟ್ಟ ನಗರದ ಹೂವಿನಕಾಡು ಎಸ್ಟೇಟ್‌ನ ಲೈನ್ ಮನೆಯಲ್ಲಿ ವಾಸವಾಗಿದ್ದ ಶ್ರೀಮತಿ ಕೆ.ಸೆಲ್ವಿ ಎಂಬವರ ಮಗಳು ಕು||ಕೆ.ಜಯಮಣಿಯು ಅಂಗವಿಕಲೆಯಾಗಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರೂ ವಾಸಿಯಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ಈ ದಿನ ದಿನಾಂಕ 10-01-2015 ರಂದು ಬೆಳಿಗ್ಗೆ 07.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮೈಗೆ ತಾನೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಹಿಳೆಯ ಮಾನಬಂಗಕ್ಕೆ ಯತ್ನ: 
     ದಿನಾಂಕ 10-01-15 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಸೋಮವಾರಪೇಟೆ ತಾಲೋಕು ತೋಳೂರು ಶೆಟ್ಟಳ್ಳಿ ಗ್ರಾಮದ ವನಜಾಕ್ಷಿ ಯವರು ಮನೆಯಲ್ಲಿ ಪಾತ್ರೆಗಳನ್ನು ತೋಳೆದುಕೊಂಡಿರುವಾಗ ಮನುಕುಮಾರ್‌ ಎಂಬ ವ್ಯಕ್ತಿ ಪಿರ್ಯಾದಿಯವರ ಮನೆಯ ಅಡುಗೆ ಮನೆಗೆ ಬಂದು ಬಾಗಿಲ ಹತ್ತಿರ ನಿಂತುಕೊಂಡು ನಿಮ್ಮ ಉದಯನವರು ಎಲ್ಲಿಗೆ ಹೋದರು ಎಂಬುದಾಗಿ ಕೇಳಿ ಹಿಂದಿನ ಬಾಗಿಲ ಚೀಲಕ ಹಾಕಿ ಪಿರ್ಯಾದಿವಯರ ಹತ್ತಿರ ಹೋಗಿ ಮಾತನಾಡಲು ಬಿಡದೆ ಬಾಯನ್ನು ಮುಚ್ಚಿ ಪಿರ್ಯಾದಿಯವರು ಧರಿಸಿದ ನೈಟಿಯನ್ನು ಹಿಡಿದು ಎಳೆದುಕೊಂಡು ಮಲಗುವ ಕೋಣಿಗೆ ಬಲತ್ಕಾರವಾಗಿ ಎಳೆದುಕೊಂಡು ಹೋಗಿ, ಕಿರುಚಿದರೆ ನಿನ್ನನ್ನು ಸಾಯಿಸುವುದಾಗಿ ಹೇಳಿ, ಪಿರ್ಯಾದಿಯವರು ಧರಿಸಿದ ನೈಟಿಯನ್ನು ಹರಿದುಹಾಕಿ ಮಾನಭಂಗಕ್ಕೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಕೊಲೆಗೆ 
     ಕರ್ತವ್ಯದಲ್ಲಿದ್ದ ಎ.ಎಸ್‌.ಐ. ಮತ್ತು ಸಿಬ್ಬಂದಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಬಿರುನಾಣಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 10/01/2014 ರಂದು ಸಮಯ ರಾತ್ರಿ 00.30 ಗಂಟೆಗೆ ಬಿರುನಾಣಿ ಶಾಲೆಯ ಪಕ್ಕದ ಆರೋಪಿ ಕರ್ತಮಾಡ ರತನ್ ತಿಮ್ಮಯ್ಯನು ಆತನ ಮನೆಯ ಅಂಗಳದಲ್ಲಿ ಕರ್ತವ್ಯದಲ್ಲಿದ್ದ ಬಿರುನಾಣಿ ಉಪ ಠಾಣೆಯ ಎ.ಎಸ್.ಐ. ಶ್ರೀ ಎಂ. ಸುಧಾಕರ ಮತ್ತು ಪಿರ್ಯಾಧಿ ಶ್ರೀ.ಕೆ.ಯು ಶರತ್ ರವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಎ.ಎಸ್.ಐ ಸುಧಾಕರ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ತಲೆಯ ಮಧ್ಯ ಬಾಗಕ್ಕೆ, ಬಲ ಕಣ್ಣಿನ ಭಾಗಕ್ಕೆ, ಕುತ್ತಿಗೆಗೆ , ಬಲ ಕೈ ಹಾಗೂ ಎಡ ಕೈ ಬೆರಳುಗಳಿಗೆ ಹಾಗೂ ಕೈಯ ಮಧ್ಯ ಬಾಗಕ್ಕೆ ಕಡಿದು ಕೊಲೆ ಮಾಡಲು ಪ್ರಯತ್ನಿಸಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಲಾರಿಗೆ ಕಾರು ಡಿಕ್ಕಿ, ಗಾಯಗೊಂಡ ಕಾರು ಚಾಲಕ: 
     ಪಿರ್ಯಾದಿ ವಿ.ಎಸ್‌. ಲಿಂಗೇಗೌಡ, ಲಾರಿ ಚಾಲಕ, ಹಾಸನ ಜಿಲ್ಲೆ ಇವರು ದಿನಾಂಕ 10-1-2015 ರಂದು ತಮ್ಮ ಬಾಪ್ತು ಎಂಹೆಚ್‌-04-ಹೆಚ್‌-4069 ರ ಲಾರಿಯಲ್ಲಿ ಮೋಹನ ಕಿಶೋರರವರೊಂದಿಗೆ ಕುರಿ ಗೊಬ್ಬರವನ್ನು ಬಳ್ಳಾರಿಯಿಂದ ಲೋಡು ಮಾಡಿಕೊಂಡು ಪುತ್ತೂರು ಕಡೆಗೆ ಹೋಗುತ್ತಿರುವಾಗ ಸಮಯ 1-30 ಎಎಂಗೆ ಮದೆನಾಡು ಎಂಬಲ್ಲಿ ತಲುಪುವಾಗ್ಗೆ ಎದುರುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಕೆಎ-21-ಬಿ-649 ರ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರು ಚಾಲನೆ ಮಾಡುತ್ತಿದ್ದ ಲಾರಿಯ ಬಲ ಭಾಗದ ಹಿಂದಿನ ಟಯರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಚಾಲಕ ಮಮ್ಮದ್‌ ಎಂಬುವರಿಗೆ ಗಾಯ ನೋವುಂಟಾಗಿದ್ದು , ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Friday, January 9, 2015

ಹಣ ಪಡೆದು ಹಿಂತಿರುಗಿಸದೇ ವ್ಯಕ್ತಿಗೆ ವಂಚನೆ:

     ವ್ಯಕ್ತಿಯೊಬ್ಬರಿಂದ ಸಾಲವಾಗಿ ಹಣವನ್ನು ಪಡೆದು ಮತ್ತೆ ಅದನ್ನುಮರುಪಾವತಿಸದೇ ವಂಚಿಸಿದ ಘಟನೆ ಕುಶಾಲನಗರದ ನೇತಾಜಿ ಬಡಾವಣೆಯಲ್ಲಿ ನಡೆದಿದೆ. ಕುಶಾಲನಗರದ ನೇತಾಜಿ ಬಡಾವಣೆಯ ನಿವಾಸಿ ಶ್ರೀಮತಿ ರಾಬಿಯ ಎಂಬವರಿಂದ ಕುಶಾಲನಗರದ ದಂಡಿನಪೇಟೆಯಲ್ಲಿ ವಾಸವಾಗಿರುವ ವಿಶ್ವನಾಥ ಎಂಬವರು 27-8-2013 ರಂದು ರೂ. 545000/-ಗಳನ್ನು ಸಾಲದ ರೂಪದಲ್ಲಿ ಪಡೆದುಕೊಂಡು ಹಿಂತಿರುಗಿಸದೇ ವಂಚಿಸಿರುವುದಾಗಿ ಸದರಿ ಶ್ರೀಮತಿ ರಾಬಿಯರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಲಾರಿ ಅಪಘಾತ  ಹಾನಿ:

    ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಮಗುಚಿ ಬಿದ್ದು, ಚಾಲಕ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ಮಡಿಕೇರಿ ಸಮೀಪದ ಜೋಡುಪಾಲದಲ್ಲಿ ನಡೆದಿದೆ.  ದಿನಾಂಕ 8-1-2015 ರಂದು ತಮಿಳುನಾಡಿನಿಂದ ಮಡಿಕೇರಿ ಮಾರ್ಗವಾಗಿ ಉಡುಪಿಗೆ ಹಾಲು ತುಂಬಿದ ಟ್ಯಾಂಕರ್‌ನ್ನು ಸದರಿ ಟ್ಯಾಂಕರ್‌ ಚಾಲಕ ಕುಮಾರ ಎಂಬ ವ್ಯಕ್ತಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮವಾಗಿ ಮಡಿಕೇರಿ-ಮಂಗಳೂರು ಸಾರ್ವಜನಿಕ ರಸ್ತೆ, ಜೋಡುಪಾಲ ಎಂಬಲ್ಲಿ ರಸ್ತೆ ಬದಿಯಲ್ಲಿ ಮಗುಚಿಬಿದ್ದು, ಚಾಲಕ ಕುಮಾರರವರಿಗೆ ಗಾಯಗಳಾಗದ್ದು ಟ್ಯಾಂಕರ್‌ನಲ್ಲಿ ತುಂಬಿಸಿದ ಹಾಲು ಸೋರಿ ನಷ್ಟವಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Thursday, January 8, 2015

ಆಟೋ ರಿಕ್ಷಾಕ್ಕೆ ಜೀಪು ಡಿಕ್ಕಿ, ಇಬ್ಬರಿಗೆ ಗಾಯ:

      ಆಟೋರಿಕ್ಷಾಕ್ಕೆ ಜೀಪುಡಿಕ್ಕಿಯಾಗಿ  ಆಟೋ ಚಾಲಕ ಮತ್ತು ಮಹಿಳೆಯೊಬ್ಬರು ಗಾಯಗೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ-ಒಂಟಿಯಂಗಡಿಯಲ್ಲಿ ನಡೆದಿದೆ.  ದಿನಾಂಕ: 07-01-15ರಂದು ಪಿರ್ಯಾದಿ ವಿ.ಎಂ. ಶಿವರಾಜ್, ಕೋಟೆಕೊಪ್ಪ ಗ್ರಾಮ, ವಿರಾಜಪೇಟೆ ತಾಲ್ಲೂಕು ಇವರ ತಂದೆಯವರಾದ ಮಂಜುನಾಥ್ ತಮ್ಮ ಬಾಪ್ತು ಕೆಎ.12.ಎ.979ರ ಆಟೋ ರಿಕ್ಷಾವನ್ನು ಚಾಲನೆ ಮಾಡಿಕೊಂಡು ಪಿರ್ಯಾದಿಯವರ ತಾಯಿಯನ್ನು ಕೂರಿಸಿಕೊಂಡು ಅಮ್ಮತ್ತಿಗೆ ಹೋಗುತ್ತಿರು ವಾಗ ಅಮತ್ತಿಯ ಒಂಟಿಯಂಗಡಿ ದೇವರು ಕಾಡು ಬಳಿ ಸಮಯ ಸಂಜೆ 6-30ಪಿ.ಎಂ.ಗೆ ತಲುಪುವಾಗ್ಗೆ, ಎದುರುಗಡೆಯಿಂದ ಅಂದರೆ ಅಮ್ಮತ್ತಿ ಕಡೆ ಯಿಂದ ಜೀಪು ನಂ. ಕೆಎ.12.ಎಂ. 5533ರ ಚಾಲಕನು ಜೀಪನ್ನು ಅತೀ ವೇಗ ಹಾಗೂ ಅಜಾಗರೂಕತೆ ಯಿಂದ ಚಾಲನೆ ಮಾಡಿಕೊಂಡು ಬಂದು ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿಯವರ ತಂದೆಯವರಿಗೆ ಎದೆಗೆ ನೋವಾಗಿ ರುವು ದಲ್ಲದೆ, ತಾಯಿಯವರ ಕೈ ಮುರಿದು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬೈಕ್‌ ಡಿಕ್ಕಿ ಸವಾರಿಬ್ಬರಿಗೆ ಗಾಯ:
    ಮೋಟಾರ್‌ ಸೈಕಲ್‌ನ್ನು ನಿರ್ಲಕ್ಷ್ಯದಿಂದ ಚಾಲಿಸಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಮಡಿಕೇರಿ ನಗರದ  ಮಹದೇವಪೇಟೆ ಯಲ್ಲಿ ನಡೆದಿದೆ. ದಿನಾಂಕ 7-1-2015 ರಂದು  ಗುರುಪ್ರಸಾದ್‌ ಎಂಬವರು  ಮೋಟಾರ್‌ ಸೈಕಲ್‌ವೊಂದರಲ್ಲಿ ಕುಮಾರ ಎಂಬವರನ್ನು ಕುಳ್ಳಿರಿಸಿಕೊಂಡು ವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಒಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ  ಮೋಟಾರ್‌ ಸೈಕಲ್‌ ಸವಾರರಿಬ್ಬರು ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಬಸ್ಸ್‌ ಮತ್ತು ಲಾರಿ ಮುಖಾಮುಖಿ ಡಿಕ್ಕಿ: 
      ದಿನಾಂಕ: 07-01-14ರಂದು ಪಿರ್ಯಾದಿ ರಾಘವೇಂದ್ರ, , ಚಾಲಕ ಕೆಎಸ್.ಆರ್.ಟಿ.ಸಿ. ಬಸ್ಸ್ ನಂ. 09.ಎಫ್. 5131ರ ಬಸ್ಸನಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್ಸನ್ನು ಚಾಲನೆ ಮಾಡಿಕೊಂಡು ಹುಣಸೂರಿನಿಂದ ಬೆಳಿಗ್ಗೆ 9-00ಎ.ಎಂ.ಗೆ ಮೈಸೂರಿಗೆ ಹೋಗಿ, ಮೈಸೂರಿನಿಂದ ಪ್ರಯಾಣಿಕರನ್ನು ಕರೆದುಕೊಂಡು ವಿರಾಜಪೇಟೆ ಮಾರ್ಗವಾಗಿ ತಲಚೇರಿಗೆ ಹೋಗುತ್ತಿರುವಾಗ್ಗೆ, ಸಮಯ ಮದ್ಯಾಹ್ನ 2-30 ಪಿ.ಎಂ.ಗೆ ಪೆರುಂಬಾಡಿಯಿಂದ 2 ಕಿ.ಮೀ. ಮುಂದೆ ತಲುಪುವಾಗ್ಗೆ, ಎದುರುಗಡೆ ಯಿಂದ ಎಪಿ.26.ಎಕ್ಸ್.6768ರ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗೂ ದುಡುಕುತನದಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸಿನ ಮುಂದಿನ ಗ್ಲಾಸ್ ಒಡೆದು ಹೋಗಿ, ಬಸ್ಸಿನ ಮುಂಭಾಗ ಪೂರ್ತಿ ಜಖಂಗೊಂಡಿದ್ದು ಪ್ರಯಾಣಿಕರಿಗೆ ಯಾವುದೇ ಅನಾಹುತ ವಾಗಿರುವುದಿಲ್ಲ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Posted byVartika Katiyar, IPS
ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:

    ದಿನಾಂಕ 06-01-2015 ರಂದು ಫಿರ್ಯಾದಿ ಹಾಕತ್ತೂರು ಗ್ರಾಮದ ಎ.ಬಿ. ಬೆಳ್ಳಿಯಪ್ಪರವರು ತಮ್ಮ ಗದ್ದೆಯಲ್ಲಿ ದನಗಳನ್ನು ಮೇಯಲು ಬಿಟ್ಟಿದ್ದು ಸಮಯ 3-30 ಪಿ. ಎಂ ಗೆ ದನಗಳನ್ನು ಹೊಡೆದುಕೊಂಡು ಬರಲೆಂದು ಗದ್ದೆಗೆ ಹೋಗಿ ದನಗಳನ್ನು ಹೊಡೆದುಕೊಂಡು ಬರುತ್ತಿರುವಾಗ್ಗೆ, ಅದೇ ಗ್ರಾಮದ ಕೂಪದೀರ ಕುಶ ಎಂಬುವರು ಪಿರ್ಯಾದಿಯವರನ್ನು ದಾರಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಕರುಗಳನ್ನು ನನ್ನ ಗದ್ದೆಗೆ ಬಿಟ್ಟಿರುತ್ತೀಯ ಎಂದು ಹೇಳಿ ಕೈಯ್ಲಲಿದ್ದ ಕತ್ತಿಯ ಹಿಂಬದಿಯಿಂದ ಪಿರ್ಯಾದಿಯವರ ಶರೀರದ ಭಾಗಗಳಿಗೆ ಹೊಡೆದು ಗಾಯನೋವುಂಟು ಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಕ್ಷುಲ್ಲಕ ಕಾರಣ ವ್ಯಕ್ತಿಯ ದಾರಿ ತಡೆದು ಹಲ್ಲೆ:

    ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಘತ್ತಾಳು ಗ್ರಾಮದ ನಿವಾಸಿ ಕುಶಾಲಪ್ಪ ಎಂಬವರು ದಿನಾಂಕ 05-01-2015 ರಂದು ಸಮಯ 16-00 ಗಂಟೆ ಸಮಯದಲ್ಲಿ ತಮ್ಮ ಹಸುಗಳನ್ನು ಕೊಟ್ಟಿಗೆಗೆ ಹೊಡೆದುಕೊಂಡು ಹೋಗುತ್ತಿರುವಾಗ ಅವರ ಕುಟುಂಬದವರಾದ ನಾಣಯ್ಯ, ಪೂವಣ್ಣ ಮತ್ತು ನವೀನ ರವರಗಳು ಕುಶಾಲಪ್ಪನವರ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದು,ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, January 6, 2015

ದಾರಿತಡೆದು ವ್ಯಕ್ತಿಯ ಮೇಲೆ ಹಲ್ಲೆ:
ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮಕ್ಕಂದೂರು ಗ್ರಾಮದಲ್ಲಿ ಫಿರ್ಯಾದಿ      ಯವರು ದಿನಾಂಕ 5-1-2014 ರಂದು ಸಂಜೆ 5-30 ಗಂಟೆಗೆ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಅವರ ಚಿಕ್ಕಪ್ಪ ತಂಬುಕುತ್ತಿರ ಕುಶಾಲಪ್ಪ ಎಂಬವರು ಅವರ ದಾರಿಯನ್ನು ತಡೆದು ಜಾಗದ ವಿಚಾರದಲ್ಲಿ ಜಗಳ ಮಾಡಿ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತೆಯ ಮೇಲೆ ಬಲತ್ಕಾರ, ಮಾನಸಿಕ ಕಿರುಕುಳ:
ಸಿದ್ದಾಪುರ ಠಾಣಾ ವ್ಯಾಪ್ತಿಯ ಗುಹ್ಯ ಗ್ರಾಮದ ದೇವಿಕಾಡು ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ  ಮಣಿ ಮತ್ತು ಶ್ರೀಮತಿ ಲೀಲಾ ರವರ ಮಗನಾದ ವೈ ಎಂ ಮಂಜು ಪ್ರಾಯ 24 ವರ್ಷ, ಕೂಲಿಕೆಲಸ ರವರು 2014 ಡಿಸೆಂಬರ್ ತಾರೀಖು 01 ರಂದು ಕೊಳತೋಡು ಬೈಗೋಡು ಗ್ರಾಮದ ಗಣೇಶ ತೋಟದಲ್ಲಿ ಕೂಲಿಕೆಲಸ ಮಾಡಿಕೊಂಡಿರುವ ಪಂಜರಿ ಎರವರ ಮಂಜು ಮತ್ತು ಶ್ರೀಮತಿ ಮದುರವರ ಮಗಳಾದ ಪ್ರಾಯ 14 ವರ್ಷದ ಅಪ್ರಾಪ್ತ ಬಾಲಕಿ ಕುಮಾರಿ ವೈ ಆರ್ ಕಾವ್ಯ ಳನ್ನು ಸಿದ್ದಾಪುರ ಮುತ್ತಪ್ಪ ದೇವಸ್ಥಾನದಲ್ಲಿ ಎಲ್ಲರೂ ಸೇರಿಕೊಂಡು ವಿವಾಹ ಮಾಡಿಸಿಕೊಟ್ಟಿದ್ದು, ಈಕೆಯನ್ನು ವಿವಾಹವಾದ ದಿನದಿಂದ ನಿನ್ನೆ ಸಂಜೆಯವರೆಗೆ ಈಕೆಯ ಗಂಡ ಮಂಜು ರವರು ಮಾನಸಿಕ ಮತ್ತು ದೈಹಿಕವಾಗಿ ಲೈಂಗಿಕ ಕಿರುಕುಳ ನೀಡುತ್ತಿರುವುದಲ್ಲದೆ ಈಕೆಯೊಂದಿಗೆ ಬಲತ್ಕಾರವಾಗಿ ದೈಹಿಕ ಸಂಪರ್ಕ ಹೊಂದಿರುವುದಾಗಿ ಅಲ್ಲದೆ ಈತನು ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಡಿ.ಕೆ.ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಡಗು ಜಿಲ್ಲೆ, ಮಡಿಕೇರಿ ಇವರು ನೀಡಿದ ದೂರಿನ ಮೇರೆಗೆ ಸಿದ್ದಾಪುರಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.                                                                                                             
 

Sunday, January 4, 2015

ಬೈಕ್‌ಗೆ ಪಿಕ್‌ಅಪ್‌ ಡಿಕ್ಕಿ, ವ್ಯಕ್ತಿಗೆ ಗಾಯ:
    ದಿನಾಂಕ 04.01.15 ರಂದು ಪಿರ್ಯಾದಿ ಸೋಮವಾರಪೇಟೆ ತಾಲೋಕು ಹೊಸಬೀಡು ಗ್ರಾಮದ ಹೆಚ್‌.ಬಿ. ರಮೇಶ್‌ ಎಂಬವರು ತಮ್ಮ ಬಾಬ್ತು ಮೋಟಾರ್‌ ಸೈಕಲ್‌ ನಂ ಕೆಎ 12 ಜೆ 3666 ರಲ್ಲಿ ಅವರ ಅಣ್ಣ ರಾಮಚಂದ್ರರವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಸೋಮವಾರಪೇಟೆಗೆ ಬರುವಾಗ ಸಮಯ 12: 45ಪಿ.ಎಂ ಗೆ ಸೋಮವಾರಪೇಟೆ ಪಟ್ಟಣದ ಆಲೆಕಟ್ಟೆ ರಸ್ತೆಯ ಮನೋಜ್‌ರವರ ಮಂಜುನಾಥ ವರ್ಕ ಶಾಫ್‌ ಹತ್ತಿರ ಹಿಂಬದಿಯಿಂದ ಕೆಎ 12 5076 ರ ಪಿಕ್‌ ಅಪ್‌ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರು ಚಾಲನೆ ಮಾಡುತ್ತಿದ್ದ ಮೋಟಾರ್‌ ಸೈಕಲ್‌‌ ಗೆ ಡಿಕ್ಕಿ ಪಡಿಸಿದಾಗ ಹಿಂಬದಿಯಲ್ಲಿ ಕುಳಿತಿದ್ದ ರಾಮಚಂದ್ರರವರ ಬಲ ಕಾಲಿಗೆ ರಕ್ತ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ರಾಮಚಂದ್ರರವರನ್ನು ಆಸ್ಪತ್ರೆಗೆ ದಾಖಲಿಸಿದ್ದು,ಪಿಕ್‌ ಅಪ್‌ ಚಾಲಕ ವಾಹನವನ್ನು ನಿಲ್ಲಿಸದೆ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ಮಹಿಳೆ ಮಾನಭಂಗಕ್ಕೆ ಯತ್ನ:
    ಮಡಿಕೇರಿ ತಾಲೋಕು ಅರ್ವತ್ತೊಕ್ಲು ಗ್ರಾಮದ ಪಿರ್ಯಾದಿ ಶ್ರೀಮತಿ ಉಷಾ ಮತ್ತು ಅವರ ಪತಿ ದಿನಾಂಕ 03-01-2015 ರಂದು ಮಡಿಕೇರಿಯಿಂದ ತಮ್ಮ ಮನೆ ಅರ್ವತ್ತೊಕ್ಲು ಗ್ರಾಮಕ್ಕೆ ಹೊಗುತ್ತಿರುವಾಗ ಪಿರ್ಯಾದಿಯವರ ಮನೆಯ ಹತ್ತಿರ ತಳೂರು ಕುಸುಮಾಧರ @ ತಮ್ಮಣ್ಣ ಹಾಗೂ ಅವರ ಅಣ್ಣನಾದ ಕುಮಾರಧರರವರು ದಾರಿ ತಡೆದು ಪಿರ್ಯಾದಿಯವರನ್ನು ಕೈ ಹಿಡಿದು ಎಳೆದು ಮಾನಭಂಗ ಮಾಡಲು ಯತ್ನಿಸಿದ್ದು, ಅಲ್ಲದೆ ಗಂಡ ಸೂರಿಯವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೆಲಸದವರನ್ನು ಗುಂಡು ಹೊಡೆದು ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವಾಚ್ಯ ನಿಂದಿಸಿ ವ್ಯಕ್ತಿಯ ಮೇಲೆ ಹಲ್ಲೆ: 
    ದಿನಾಂಕ 03-01-2015 ರಂದು ಸಮಯ ರಾತ್ರಿ 08-30 ಗಂಟೆಗೆ ಕುಟ್ಟ ನಗರದ ಹಳೆಯ ಪೆಟ್ರೊಲ್ ಬಂಕ್ ಬಳಿ ಆರೋಪಿ ಮುಸ್ತಾಫ ಹಾಗು ಆತನ ಜೊತೆಯಲ್ಲಿದ್ದ ಇಬ್ಬರು ಕುಟ್ಟ ನಿವಾಸಿ ಸಿ.ಎನ್‌. ಪ್ರದೀಪ್‌ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ಬೈದು ಗಾಜಿನ ಗ್ಲಾಸನ್ನು ಎಸೆದು, ಕಲ್ಲಿನಿಂದ ಬೆನ್ನಿಗೆ ಗುದ್ದಿ, ನೋವುಂಟುಪಡಿಸಿರುವುದಾಗಿ ಕುಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನೀಡಿದ ಹೇಳಿಕೆಯಂತೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. .

Saturday, January 3, 2015

ಕ್ಷುಲ್ಲಕ ಕಾರಣಕ್ಕೆ ಗುಂಪಿನಿಂದ ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ 03.01.15 ರಂದು ಪಿರ್ಯಾದಿ ಹೆಚ್‌.ಆರ್‌. ಕಿರಣ್‌, ಸೋಮವಾರಪೇಟೆ, ಹೊಸಕೋಟೆ ಗ್ರಾಮ ರವರು ಅವರ ಬಾಬ್ತು ಮೋಟಾರ್‌ ಸೈಕಲ್‌ ನಂ ಕೆಎ 12 44 ರಲ್ಲಿ ಅನಿಲ್‌ರವರೊಂದಿಗೆ ಮೋಟಾರ್‌ ಸೈಕಲ್‌ನಲ್ಲಿ ಹೊಸಕೋಟೆ ಗ್ರಾಮದಲ್ಲಿ ಹೋಗುತ್ತಿದ್ದಾಗ ಸಮಯ ಸುಮಾರು 10:30 ಗಂಟೆಗೆ ಈದ್‌ ಮಿಲಾದ್‌ ಹಬ್ಬದ ಮೆರವಣಿಗೆ ಹೋಗುತ್ತಿದ್ದು ಪಿರ್ಯಾದಿ ಚಾಲನೆ ಮಾಡುತ್ತಿದ್ದ ಮೋಟಾರ್‌ ಸೈಕಲ್‌ ಇಬ್ಬರಿಗೆ ಸ್ವಲ್ಪ ತಾಗಿದ್ದು, ಇದರಿಂದ ಸದರಿ ಮೆರವಣಿಗೆಯಲ್ಲಿದ್ದ ಸಿದ್ದೀಕ್‌ ಎಂಬ ವ್ಯಕ್ತಿ ಮೋಟಾರ್‌ ಸೈಕಲ್‌ನ್ನು ನಿಲ್ಲಿಸುವಂತೆ ಸೂಚಿಸಿ ಬೈಕ್‌ನ್ನು ನಿಲ್ಲಿಸಿದ ಕೂಡಲೇ ಸಿದ್ದೀಕ್‌ ಏಕಾಏಕಿ ಕೈಯಿಂದ ಎಡಭಾಗದ ಕೆನ್ನೆಗೆ ಹಲ್ಲೆ ನಡೆಸಿದ್ದು ಅಲ್ಲದೆ ಉನ್ನೀಸ್‌, ಇಬ್ರಾಹಿ, ಶರೀಫದ, ನೌಫದ್, ಹಮ್ಮೀದ್, ಅಶ್ರಫ್, ಹಸೀಫ್, ರಶೀದ್ ಮತ್ತು ಇತರರು ಸೇರಿಕೊಂಡು ಮನಸ್ಸಿಗೆ ಬಂದಂತೆ ಹಲ್ಲೆ ನಡೆಸಿ ನೋವು ಪಡಿಸಿ ಮೋಟಾರ್‌ ಸೈಕಲ್‌ನ್ನು ಜಖಂ ಮಾಡಿರುತ್ತಾರೆಂದು ನೀಡಿದ ದೂರಿನಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಗಳ ಮಾಡುತ್ತಿದ್ದುದನ್ನು ಪ್ರಶ್ನಿಸಿದವನ ಮೇಲೆ ಹಲ್ಲೆ:


ದಿನಾಂಕ 24-12-14ರಂದು ರಾತ್ರಿ ಸಮಯ 20-00ಗಂಟೆಗೆ ವಿರಾಜಪೇಟೆ ತಾಲೋಕು ರುಧ್ರಗುಪ್ಪೆ ಗ್ರಾಮದ ನಿವಾಸಿ ಪಂಜರಿಯವರ ವಿಜು ಎಂಬ ವ್ಯಕ್ತಿ ಪಕ್ಕದ ಮನೆಯಲ್ಲಿ ವಾಸವಿರುವ ಅವರ ಚಿಕ್ಕಪ್ಪ ಸುಬ್ರಮಣಿ, ರವರು ಚಿಕ್ಕಮ್ಮನೊಂದಿಗೆ ಗಲಾಟೆ ಮಾಡುತ್ತಿರುವುದನ್ನು ವಿಚಾರಿಸಿದ ಹಿನ್ನೆಲೆಯಲ್ಲಿ ಅವರ ಚಿಕ್ಕಪ್ಪ ಸುಬ್ರಮಣಿ, ವಿಜುರವರನ್ನು ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ, ಒಂದು ಕಾಡು ಮರದ ದೊಣ್ಣೆಯಿಂದ ಬಲ ಕಾಲಿನ ತೊಡೆಗೆ , ಬಲಕೈ ಭುಜದ ಕೆಳಗೆ ಮತ್ತು ಕುತ್ತಿಗೆಯ ಎಡ ಭಾಗದಲ್ಲಿ ಹಳೆಯ ಗಂಟಿದ್ದ ಸ್ಥಳಕ್ಕೆ ಹೊಡೆದುದ್ದಾಗಿ ನಂತರ ನೋವು ಜಾಸ್ತಿಯಾದ ಕಾರಣ ದಿನಾಂಕ 2-1-2014 ರಂದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿ ನೀಡಿದ ದೂರಿನಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


ದ್ವೇಷದಿಂದ ವ್ಯಕ್ತಿಯ ಮೇಲೆ ಇಬ್ಬರಿಂದ ಹಲ್ಲೆ: 

ದಿನಾಂಕ 2-1-2015 ರಂದು ಮಡಿಕೇರಿ ತಾಲೋಕು ಮುತ್ತಾರ್ಮುಡಿ ಗ್ರಾಮದ ಪಿ.ಸಿ. ಮೊಣ್ಣಪ್ಪ ಹಾಗು ಎಂ.ಕೆ. ಉಮೇಶ ಮತ್ತು ದೇವರಾಜು ಎಂಬ ವ್ಯಕ್ತಿಗಳ ನಡುವೆ ಜಗಳ ಏರ್ಪಟ್ಟು, ಪಿ.ಸಿ. ಮೊಣ್ಣಪ್ಪನವರನ್ನು ಸದರಿ ದೇವರಾಜು ಮತ್ತು ಉಮೇಶರವರುಗಳು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗು ಕಲ್ಲಿನಿಂದ ಹಲ್ಲೆ ನಡೆಸಿ ನೋವು ಪಡಿಸಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Friday, January 2, 2015

 ಬೆಂಕಿಹಚ್ಚಿಕೊಂಡು ವ್ಯಕ್ತಿ ಆತ್ಯಹತ್ಯೆಗೆ ಯತ್ನ:

ಮಡಿಕೇರಿ ನಗರದ ಹಿಲ್‌ ರಸ್ತೆಯಲ್ಲಿ ವಾಸವಾಗಿರುವ ಎಸ್‌.ಆರ್‌. ರವಿ ಎಂಬವರು ತಾನು ವಾಸವಾಗಿರುವ ಮನೆಯ ಮಾಲೀಕರು ರವಿಯವರಿಗೆ ನೀರಿನವಿಚಾರದಲ್ಲಿ ಹಾಗು ಮನೆಗೆ ಸಂಬಂಧಿಕರು ಬಂದಾಗ ಜೋರಾಗಿ ಮಾತನಾಡಕೂಡದೆಂದು ಜಗಳ ಮಾಡಿದ ವಿಚಾರದಲ್ಲಿ ಬೇಸರ ಪಟ್ಟುಕೊಂಡು ದಿನಾಂಕ 1-1-2015 ರಂದು ರಾತ್ರಿ ತನ್ನ ಮೇಲೆ ಸೀಮೆಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಜೀವನದಲ್ಲಿ ಜಿಗುಪ್ಸೆ, ನೇಣುಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ:

ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಸೋಮೇಶ್ವರ ದೇವಾಲಯದ ಬಳಿ ವಾಸವಾಗಿರುವ ರಾಜವರ್ಧನ (30) ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿ ದಿನ ದಿನಾಂಕ 2-1-2015 ರಂದು ತಾನು ವಾಸವಾಗಿರುವ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಹಳೇ ದ್ವೇಷ, ವ್ಯಕ್ತಿಯ ಮೇಲೆ ಹಲ್ಲೆ:

ಸೋಮವಾರಪೇಟೆ ತಾಲೋಕು ದೊಡ್ಡ ಬಿಳಹ ಗ್ರಾಮದ ನಿವಾಸಿ ಬಿ.ಎನ್‌. ಕರುಣ ಎಂಬವರು ದಿನಾಂಕ 31-12-2014 ರಂದು ರಾತ್ರಿ ತಮ್ಮ ಮನೆಯಲ್ಲಿ ಮಲಗಿದ್ದು, 12-00ಗಂಟೆಗೆ ಅದೇ ಗ್ರಾಮದ ಸಂಜು ಎಂಬ ವ್ಯಕ್ತಿ ಫೋನ್‌ ಮೂಲಕ ಶರಹ ಸೇತುವೆ ಬಳಿ ಹೊಸ ವರ್ಷದ ಪಾರ್ಟಿಗೆ ಬರಲು ತಿಳಿಸಿ ಅಲ್ಲಿಗೆ ಹೋದ ಸದರಿ ಕರುಣರವರ ಮೇಲೆ ನವೀನ್‌ ಹಲ್ಲೆ ನಡೆಸಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.