Saturday, February 28, 2015

ಕಾಡಾನೆ ದಾಳಿ, ಮಹಿಳೆಯ ದುರ್ಮರಣ:

    ಸಿದ್ದಾಪುರ ಠಾಣಾ ಸರಹದ್ದಿನ ಮೇಕೂರು ಹೊಸ್ಕೇರಿ ಗ್ರಾಮದಲ್ಲಿರುವ ಶರವಣ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕಳಾಗಿ ಕೆಲಸನಿರ್ವಹಿಸುತ್ತಿದ್ದ 60 ವರ್ಷ ಪ್ರಾಯದ ಶ್ರೀಮತಿ ಚೋಮಿ ಎಂಬ ಮಹಿಳೆಈ ದಿನ ದಿನಾಂಕ 28-2-2015 ರಂದು ಸಮಯ ಸುಮಾರು 11:45 ಎ.ಎಂ.ಗೆ ತೋಟದಲ್ಲಿ ಒಳ್ಳೆಮೆಣಸು ಹೆಕ್ಕುವ ಕೆಲಸ ಮಾಡುತ್ತಿದ್ದಾಗ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಸದರಿ ಮಹಿಳೆ ಗಂಭೀರವಾಗಿಗಾಯಗೊಂಡು ಸ್ಥಳದಲ್ಲಿ ಯೇ ಸಾವನಪ್ಪಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.  

ಲಾರಿ ಅವಘಡ, ವ್ಯಕಿಗೆ ಗಾಯ:

    ಸೋಮವಾರಪೇಟೆ ತಾಲೋಕು, ಕೂಡಿಗೆ ಗ್ರಾಮದ ನಿವಾಸಿ ಕುಮಾರ ಎಂಬವರು ಈ ದಿನ ದಿನಾಂಕ 28-2-2015 ರಂದು ಕೆ.ಎ 12, 1678 ರ ಲಾರಿಯಲ್ಲಿ ಜಲ್ಲಿ ಹಾಗೊ ಸಿಮೆಂಟ್ ತುಂಬಿಸಿಕೊಂಡು ಲಕ್ಷಮ್ಮ ಎಂಬುವವರೊಂದಿಗೆ ಕಾಂಕ್ರಿಟ್ ಕೆಲಸಕ್ಕಾಗಿ ಕೊಡಿಗೆಯಿಂದ ಮಕ್ಕಂದೊರು ಸೊಸೈಟಿಗೆ ಸಿಂಕೋನ ಅಡ್ಡ ರಸ್ತೆಗಾಗಿ ಹೋಗುತ್ತಿರುವಾಗ್ಗೆ ಮಕ್ಕಂದೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಮೇಡನ್ನು ಹತ್ತುತ್ತಿದ್ದು ಲಾರಿಯು ಮುಂದಕ್ಕೆ ಹೋಗದೆ ಚಾಲಕ ನಿಯಂತ್ರಣ ಕಳೆದುಕೊಂಡು ಹಿಂದಕ್ಕೆ ಚಲಿಸಿ ರಸ್ತೆಯ ಪಕ್ಕದ ಗದ್ದೆಗೆ ಮಗುಚಿಕೊಂಡ ಪರಿಣಾಮ ಲಾರಿಯಲ್ಲಿದ್ದ ಕುಮಾರ ಎಂಬವರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ, ಮಾಜಿ ಸೈನಿಕನ ಆತ್ಮಹತ್ಯೆ:

     ಸಾಂಸಾರಿಕ ಜೀವನದಲ್ಲಿ ಬೇಸತ್ತು ಮಾಜಿ ಸೈನಿಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ತಾಲೋಕು ಗಾಳಿಬೀಡು ಗ್ರಾಮದಿಂದ ವರದಿಯಾಗಿದೆ. ಗಾಳಿಬೀಡು ವಣಚಲು ಗ್ರಾಮದಲ್ಲಿ ವಾಸವಾಗಿರುವ ಮಾಜಿ ಸೈನಿಕ ರಾದ ಭೀಮಯ್ಯ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27-2-2015 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಾಹನ ಡಿಕ್ಕಿ ಅಪರಿಚಿತ ವ್ಯಕ್ತಿಯ ಸಾವು:

    ಈ ದಿನ ಬೆಳಿಗ್ಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಟಕೇರಿ ಜಂಕ್ಷನ್‌ನಲ್ಲಿ ಅಪರಿಚಿತ ವಾಹನವೊಂದು ಅಪರಿಚಿತ ವ್ಯಕ್ತಿಗೆ ಡಿಕ್ಕಿಯಾಗಿ ಸದರಿ ವ್ಯಕ್ತಿ ಮೃತಪಟ್ಟಿದ್ದು, ಈ ಸಂಬಂಧ ಮದೆ ಗ್ರಾಮದ ಪಂಚಾಯ್ತಿ ಸದಸ್ಯರಾದ ಶ್ರೀ ಕೆ.ಎ. ಜಗದೀಶ್‌ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಬಸ್ಸು- ಕೋಳಿ ಸಾಗಿಸುವ ವಾಹನ ನಡುವೆ ಡಿಕ್ಕಿ, ಬಾಲಕಿಯ ದುರ್ಮರಣ:

     ಸೋಮವಾರಪೇಟೆ ತಾಲೋಕು ಹೊಸತೋಟ, ಕುಂಬೂರು ಗ್ರಾಮದ ನಿವಾಸಿ ಇ.ಕೆ. ಸಲೀಂ ಎಂಬವರು ಈ ದಿನ ಹೆಂಡತಿ ಸಲೀನಾ, ಮಕ್ಕಳಾದ ಶಾಹಿಲ್ ಮತ್ತು ಸಹನಾ ಶರೀನ್ ರವರೊಂದಿಗೆ ಸೋಮವಾರಪೇಟೆ ತಾಲ್ಲೂಕು ಗರಗಂದೂರು ಬಿ. ಗ್ರಾಮ ದಿಂದ ಕೇರಳದ ಪಾಲಕಾಡು ಎಂಬ ಸ್ಥಳಕ್ಕೆ ಹೊರಟು, ಮಡಿಕೇರಿಗೆ ಬಂದು ಮಡಿಕೇರಿಯಿಂದ ವಿರಾಜ ಪೇಟೆಗೆ ಕೆಎಸ್.ಆರ್.ಟಿಸಿ. ಬಸ್ಸಿನಲ್ಲಿ ಬರುತ್ತಿ ರುವಾಗ್ಗೆ ಸಮಯ 6-50 ಗಂಟೆಗೆ ವಿರಾಜ ಪೇಟೆಯ ಕಾಕೋಟುಪರಂಬುನ ಸಾರ್ವ ಜನಿಕ ರಸ್ತೆಯಲ್ಲಿ ಬರುತ್ತಿರುವಾಗ್ಗೆ ಮಗಳು ಸಹನಾ ಶರೀನ್ ಳಿಗೆ ಕೆಮ್ಮು ಬಂದು ಉಗುಳಲು ತಲೆಯನ್ನು ಕಿಟಕಿಯಲ್ಲಿ ಸ್ವಲ್ಪ ಹೊರಗೆ ಚಾಚಿ ದಾಗ ಎದುರುಗಡೆಯಿಂದ ಒಂದು ಕೋಳಿಗಾಡಿಯು ಅತೀವೇಗ ಹಾಗೂ ಅಜಾಗರೂಕತೆ ಯಿಂದ ಬಂದು ಬಸ್ಸ್ ನ ತುರ್ತು ನಿರ್ಗಮನದ ಬಾಗಿಲಿಗೆ ಡಿಕ್ಕಿ ಹೊಡೆದು ನಂತರ ಸಹನಾಳತಲೆಗೆ ಡಿಕ್ಕಿ ಹೊಡೆದು ತಲೆಯ ಚಿಪ್ಪು ಒಡೆದು ಚಿದ್ರವಾಗಿ ಸಹನಾ ಶರೀನ್ ಸ್ಥಳದಲ್ಲೇ ಮೃತಪಟ್ಟಿದ್ದು, ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

Friday, February 27, 2015

ಅಕ್ರಮ ಪ್ರವೇಶ, ಕೊಲೆ ಬೆದರಿಕೆ:

      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅರುವತ್ತೊಕ್ಲು ಗ್ರಾಮದ ನಿವಾಸಿ ಪಿರ್ಯಾದಿ ಕೆ.ಎಂ. ಸೋಮಣ್ಣ ರವರ ಕಾಫಿ ತೋಟಕ್ಕೆ ಅವರ ಅಣ್ಣನ ಪತ್ನಿ ಸರಸ್ವತಿ ಮತ್ತು ಅವರ ಸಂಬಂಧಿ ರಾಜುರವರು ಅಕ್ರಮ ಪ್ರವೇಶ ಮಾಡಿ ಪಿರ್ಯಾದಿಯವರು ಹಾಕಿದ್ದ ತಂತಿ ಮತ್ತು ಸಿಮೆಂಟ್ ಕಂಬಗಳನ್ನು ಬೀಳಿಸುತ್ತಿದ್ದು, ಇದನ್ನು ವಿಚಾರದಿಸಿದ ಫಿರ್ಯಾದಿಗೆ ಸರಸ್ವತಿಯವರು ಈ ಜಾಗ ನನ್ನ ಗಂಡನಿಗೆ ಸೇರಬೇಕೆಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಅವರ ಒಟ್ಟಿಗೆ ಇದ್ದ ರಾಜುರವರು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ.

ಕಾಫಿ ಕಳವು ಪ್ರಕರಣ ದಾಖಲು:
     ತೋಟದ ಕಾಫಿ ಕಣದಿಂದ ಕಾಫಿಯನ್ನು ಕಳ್ಳತನ ಮಾಡಿದ ಘಟನೆ ಸಿದ್ದಾಪುರದ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಸಿದ್ದಾಪುರ ಠಾಣಾ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ಫಿರ್ಯಾದಿ ಅಬ್ದುಲ್‌ ನಿಸಾರ್‌ ಎಂಬವರಿಗೆ ಸೇರಿದ 26 ಚೀಲ ಕಾಫಿ ಚೀಲಗಳ ಪೈಕಿ 6 ಚೀಲ ಕಾಫಿಯನ್ನು ಕನ್ನಿಕೋಡ್ ಕಾಫಿ ತೋಟದಲ್ಲಿ ಇರುವ ಕಾಫಿ ಕಣದಿಂದ ದಿನಾಂಕ 25-6-2015 ರಂದು ಯಾರೋ ಕಳ್ಳ್ರುಕಳವು ಮಾಡಿಕೊಂಡು ಹೋಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮನೆಯ ವಿಚಾರದಲ್ಲಿ ಜಗಳ, ವ್ಯಕ್ತಿಯ ಮೇಲೆ ಮೂವರಿಂದ ಹಲ್ಲೆ:
    ಸೋಮವಾರಪೇಟೆ ತಾಲೋಕು ಚೇರಳ ಶ್ರೀಮಂಗಲ ಗ್ರಾಮದಲ್ಲಿ ನೆಲೆಸಿರುವ ಕೆ.ಎ. ಪ್ರಾನ್ಸಿಸ್‌‌ ಎಂಬವರು ದಿನಾಂಕ 26-2-2015 ರಂದು ತಾವು ವಾಸವಾಗಿರುವ ಮನೆಯನ್ನು ರಿಪೇರಿ ಮಾಡಿಸಿತ್ತಿದ್ದಾಗ ಸದರಿ ಮನೆಯ ಇನ್ನೊಂದು ಭಾಗದಲ್ಲಿ ವಾಸವಾಗಿರುವ ಮನೋಜ್‌, ಚಂದ್ರಶೇಖರ್‌ ಹಾಗು ಬಿಂದುರವರುಗಳು ಸದರಿ ಮನೆಯು ಅವರುಗಳಿಗೆ ಸೇರಬೇಕೆಂದು ಜಗಳ ಮಾಡಿ ಕಬ್ಬಿಣದ ರಾಡು ಹಾಗು ಕೈಗಳಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಗಾಯಾಳು ಪ್ರಾನ್ಷಿಸ್‌ ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮನೆಯ ವಿಚಾರದಲ್ಲಿ ಮನೆಗೆ ನುಗ್ಗಿ ಹಲ್ಲೆ, ಕೊಲೆ ಬೆದರಿಕೆ:
     ಸೋಮವಾರಪೇಟೆ ತಾಲೋಕು ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಫಿರ್ಯಾದಿ ಚಂದ್ರಶೇಖರ ರವರ ಮನೆಗೆ ಅದೇ ಗ್ರಾಮದ ನಿವಾಸಿ ಕೆ.ಎ. ಪ್ರಾನ್ಸಿಸ್‌ ತನ್ನ ಹೆಂಡತಿ ಪ್ರಮೀಳಾ ಡಿಸೋಜಾ ಹಾಗೂ ಇತರ 5 ಜನರು ಕತ್ತಿ, ಕೊಡಲಿ, ಪಿಕಾಸಿಯೊಂದಿಗೆ ಪಿರ್ಯಾದಿಯವರ ಮನೆಗೆ ನುಗ್ಗಿ ಮನೆಯ ಶೀಟು ಮತ್ತು ಇಟ್ಟಿಗೆಯನ್ನು ಹುಡಿ ಮಾಡಿ ಮನೆಯಲ್ಲಿದ್ದ ಪಾತ್ರೆಗಳನ್ನು ಜಖಂಪಡಿಸಿ, ಮನೆಗೆ ಪೆಟ್ರೋಲ್ ಸುರಿದು ಸುಟ್ಟು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಪ್ರವೇಶ, ಕೊಲೆ ಬೆದರಿಕೆ: 
    ಪಿರ್ಯಾದಿ ಶ್ರೀಮತಿ ಅವ್ವಮ್ಮ ತಂದೆ ಕೆ.ಎ.ಮಹಮ್ಮದ್, ಪ್ರಾಯ 35 ವರ್ಷ, ಕುಂಜಿಲ ಗ್ರಾಮ, ಮಡಿಕೇರಿ ತಾಲೋಕು ಇವರಿಗೆ ಸೇರಿದ ಕಾಫಿ ತೋಟಕ್ಕೆ ಆರೋಪಿಗಳಾದ ರೆಹಮತುಲ್ಲಾ ಷರೀಫ್ ತಂದೆ ಲೇಟ್ ಷರೀಫ್, ಪ್ರಾಯ 55 ವರ್ಷ, ವಾಸ ಮನೆ .ನಂ.55 ಟಿಪ್ಪು ಪಾರ್ಕ್, ಉದಯಗಿರಿ ಮೈಸೂರು. ಮತ್ತು ಎಂ.ಹೆಚ್.ಅಬೂಬಕರ್ ತಂದೆ ಹುಸೈನ್, ಪ್ರಾಯ 52 ವರ್ಷ, ಕೋಂಡಂಗೇರಿ ಹಾಲುಗುಂದ ಇವರುಗಳು ಅಕ್ರಮಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದನಿಂದಿಸಿ ಕೊಲೆ ಬೆದರಿಕೆ ಹಾಕಿದ ಬಗ್ಗೆ ದಿನಾಂಕ 18/02/2015 ರಂದು ವಿರಾಜಪೇಟೆ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದು, ಸದರಿಪ್ರಕರಣದಲ್ಲಿ ತನಿಖೆನಡೆಸುವಂತೆ ನ್ಯಾಯಾಲಯ ನೀಡಿದ ಆದೇಶದಂತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

Thursday, February 26, 2015

 ಅಕ್ರಮ ಗೋ ಸಾಗಾಟ, ಇಬ್ಬರ ಬಂಧನ
            ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಕುಟ್ಟ ಪೊಲೀಸರು ಇಬ್ಬರನ್ನು ಬಂಧಿಸಿ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ದಿನಾಂಕ 26-02-2015 ರಂದು ಬಾಡಗ ಗ್ರಾಮದ ಕೆ.ಎಂ.ಕೊಲ್ಲಿಯಿಂದ ಪೂಕಂಡಿ ಪೈಸಾರಿ ಕಡೆಗೆ ಹೋಗುವ ರಸ್ತೆಯಲ್ಲಿ ಕೇರಳ ರಾಜ್ಯದ ಸನಿಲ್‌, ಟೋನಿ, ಅಬ್ದುಲ್ ಖಾದರ್‌ ಮತ್ತು ಹ್ಯಾರಿಸ್‌ ಎಂಬವರುಗಳು ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೇರಳ ರಾಜ್ಯದ ಕಸಾಯಿಖಾನೆಗೆ ಮಾರಾಟ ಮಾಡುವ ಸಲುವಾಗಿ ಜಾನುವಾರುಗಳನ್ನು ಕಾಲ್ನಡಿಗೆಯಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಕುಟ್ಟ ಠಾಣಾ ಪಿಎಸ್‌ಐ ಜೆ.ಮಂಜುರವರು ಸನಿಲ್‌ ಮತ್ತು ಟೋನಿ ಎಂಬವರನ್ನು ಬಂಧಿಸಿ ಸುಮಾರು ರೂ.40,000/- ಬೆಲೆಬಾಳುವ 5 ಜಾನುವಾರುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ತೋಟಕ್ಕೆ ಅಕ್ರಮ ಪ್ರವೇಶ, ಕೊಲೆ ಬೆದರಿಕೆ
              ವ್ಯಕ್ತಿಯೊಬ್ಬರ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಗುಂಡು ಹೊಡೆದು ಕೊಲೆ ಮಾಡಿರುವುದಾಗಿ ಬೆದರಿಸಿದ ಘಟನೆ ಮಡಿಕೇರಿ ಬಳಿಯ ಮೇಘತ್ತಾಳು ಗ್ರಾಮದಲ್ಲಿ ನಡೆದಿದೆ. ಮಕ್ಕಂದೂರು ನಿವಾಸಿ ಟಿ.ಪಿ.ಭೀಮಯ್ಯ ಎಂಬವರಿಗೆ ಮೇಘತ್ತಾಳು ಗ್ರಾಮದಲ್ಲಿ  ಕಾಫಿ ತೋಟವಿದ್ದು ದಿನಾಂಕ 26-02-2015 ರಂದು ಬೆಳಿಗ್ಗೆ  ಕಾಫಿ ಕುಯ್ಯಲು ಜನರೊಂದಿಗೆ ಹೋದ ಸಮಯದಲ್ಲಿ ಅವರ ಅಣ್ಣಂದಿರಾದ ಲೋಕಪ್ಪ, ಕುಶಾಲಪ್ಪ, ಲೋಕಪ್ಪನ ಹೆಂಡತಿ ಲೀಲಾವತಿ, ಕುಶಾಲಪ್ಪನ ಹೆಂಡತಿ ಕಾವೇರಿ ಮತ್ತು ಕಾವೇರಿಯವರ ತಾಯಿ ಚೋಂದವ್ವರವರು ಸೇರಿ ಭೀಮಯ್ಯನವರ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಭೀಮಯ್ಯನವರನ್ನು ಕುರಿತು ತೋಟದ ಒಳಗೆ ಬಂದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದು, ಲೋಕಪ್ಪನು ಕೈಯಲ್ಲಿ ಕೋವಿಯನ್ನು ಹಿಡಿದುಕೊಂಡಿದ್ದು, ಕುಶಾಲಪ್ಪನು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಕಡಿಯುವುದಾಗಿ ಬೆದರಿಕೆ ಹಾಕಿದ್ದು, ಇತರೆ  ಮೂರು ಜನ ಹೆಂಗಸರು ಕೈಯಲ್ಲಿ ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡಿದ್ದು ಭೀಮಯ್ಯನವರು ಭಯಗೊಂಡು ಅವರ ಅಣ್ಣನ ಮಕ್ಕಳಾದ ಜೋಯಪ್ಪ ಮತ್ತು ಪೂವಣ್ಣನವರೊಂದಿಗೆ ವಾಪಾಸ್ಸು ಬರುವಾಗ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆರೆಯಿಲ್ಲಿ ಮುಳುಗಿ ಯುವಕನೊಬ್ಬನ ಆಕಸ್ಮಿಕ ಸಾವು
          ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಯುವಕನೊಬ್ಬ ಸಾವಿಗೀಡಾದ ಘಟನೆ ಕುಟ್ಟ ಬಳಿಯ ಬಾಡಗ ಗ್ರಾಮದಲ್ಲಿ ನಡೆದಿದೆ. ದಿನಾಂಕ 24-02-2015 ರಂದು ಬಾಡಗ ಗ್ರಾಮದ ಮಾಯಣಮಾಡ ಶಂಕರಿ ಎಂಬವರಲ್ಲಿ ಕಾಫಿ ಕುಯ್ಯುವ ಕೆಲಸ ಮಾಡಲು ಪರಿಯಾಪಟ್ನ ತಾಲೂಕಿನ ಪಂಚವಳ್ಳಿಯಿಂದ ಬಂದಿದ್ದ ರಂಗ ಎಂಬವರ  ಮಗ ಶಿವರಾಜನು ಶಂಕರಿರವರ ಕೆರೆಗೆ ಸ್ನಾನಕ್ಕೆ ಹೋದವನು ಆಕಸ್ಮಿಕವಾಗಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Wednesday, February 25, 2015

ಸ್ಕೂಟಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸವಾರಿಬ್ಬರ ದುರ್ಮರಣ:

      ಕಟೈಂನರ್‌ ಲಾರಿಯೊಂದು ಸ್ಕೂಟಿಗೆ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ ಬಳಿ ನಡೆದಿದೆ. ದಿನಾಂಕ 24-2-2015 ರಂದು ಕಣ್ಣೂರು ಜಿಲ್ಲೆಯ ಮುಂಡೇರಿ ಗ್ರಾಮದ ನಿವಾಸಿಗಳಾದ ರಸ್ನೀದ್‌ ಹಾಗು ಸುಹೇಬ್‌ ಎಂಬವರು ಕೆಎಲ್.13.ಎಎ.4165ರ ಸ್ಕೂಟಿ ಯಲ್ಲಿ ವಿರಾಜಪೇಟೆ ಕಡೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಕೆಎಲ್.45.ಡಿ.6570ರ ಕಂಟೈನರ್ ಲಾರಿಯನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸ್ಖೂಟಿಯ ಮೇಲೆ ಬಿದ್ದ ಪರಿಣಾಮ ಸ್ಕೂಟಿಯ ಸವಾರರಿಬ್ಬರು ಸ್ಥಳದಲ್ಲೇ ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ಯಾಂಕರ್‌ ಅವಘಡ, ಅಪಾರ ಹಾನಿ:   

    ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಮಗುಚಿ ಬಿದ್ದು, ಬಾರಿ ನಷ್ಟ ಸಂಬಂಭವಿಸಿದ ಘಟನೆ ಮಡಿಕೇರಿ ಸಮೀಪದ ಬೋಯಿಕೇರಿ ಯಲ್ಲಿ ಸಂಭವಿಸಿದೆ. ದಿನಾಂಕ 24-02-2015 ರಂದು ರಾತ್ರಿ 11-45 ಗಂಟೆಗೆ ಮಂಗಳೂರು ಕಡೆಯಿಂದ ಬಂದ ಟ್ಯಾಂಕರ್ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಬೋಯಿಕೇರಿ ಗ್ರಾಮದ ನಿವಾಸಿ ಎಂ.ಕೆ. ಖಾದರ್‌ ಎಂಬವರ ಮನೆಯ ಮುಂಭಾಗದಲ್ಲಿ ಮಗುಚಿ ಬಿದ್ದು ಸದರಿಯವರ ಮನೆಯ ಮುಂಭಾಗದ ಕೋಣೆ ,ಕಾಂಪೋಂಡು ಗೇಟು ಜಖಂಗೊಂಡು ಮುರಿದು ಬಿದ್ದಿದ್ದು ಅಲ್ಲದೆ ಮನೆಯ ಮುಂದೆ ನಿಲ್ಲಿಸಿದ ಮಾರುತಿ 800 ಕಾರು ಕೂಡ ಮನೆಯ ಮೇಲ್ಚಾವಣೆ ಕುಸಿದು ಬಿದ್ದು ಜಖಂಗೊಂಡಿದ್ದು ಅಲ್ಲದೆ ಸದರಿಯವರ ಮನೆಯ ಒಳಗೆ ಇದ್ದ ಸೋನಿ ಎಲ್‌.ಇ.ಡಿ. ಟಿ.ವಿ. ಗಾಡ್ರೇಜ್, ಫರ್ನಿಚರ್, ಸಂಪೂರ್ಣ ಜಖಂಗೊಂಡಿದ್ದು ಹಾಗೂ ರಸ್ತೆಯ ಬದಿಯಲ್ಲಿದ್ದ 2 ವಿದ್ಯುತ್ ಕಂಬಗಳು ಮುರಿದು ಬಿದ್ದು ಸುಮಾರು 8 ಲಕ್ಷದಷ್ಟು ನಷ್ಟ ಸಂಭವಿಸಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಕಳವು ಪ್ರಕರಣ ದಾಖಲು: 

     ದಿನಾಂಕ 24-02-2015 ರಂದು  ಸಂಜೆ  ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಕುಟ್ಟ ನಗರದಲ್ಲಿರುವ ಜುಮ್ಮ ಮಸೀದಿಯ ಮೇಲ್ಭಾಗದಲ್ಲಿರುವ ಉಸ್ತಾದ್‌ರವರು ಉಳಿದುಕೊಳ್ಳುವ ಕೊಠಡಿಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಯಾವುದೋ ಕೀಯನ್ನು ಬಳಸಿ ಬೀಗ ತೆಗೆದು ಒಳನುಗ್ಗಿ ಅಲ್ಲಿದ್ದ ಅಲ್ಮೇರಾದ ಸೇಫ್ ಲಾಕರ್ ಬಾಗಿಲನ್ನು ಯಾವುದೋ ವಸ್ತುವಿನಿಂದ ಮೀಟಿ ತೆಗೆದು ಅಲ್ಲಿದ್ದ ರೂ 22000/- ನಗದು ಹಾಗು ಅಲ್ಮೇರಾದಲ್ಲಿದ್ದ ಲ್ಯಾಪ್ ಟಾಪ್‌ಅನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಪಿ.ಎ. ಹಂಸರವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗ ಕಾಣೆ, ಪ್ರಕರಣ ದಾಖಲು:

     ದಿನಾಂಕ 24.02.2015 ರಂದು ಸಮಯ 18.00 ಗಂಟೆಗೆ ಸಿದ್ದಾಪುರ ಠಾಣಾ ಸರಹದ್ದು ತ್ಯಾಗತ್ತೂರು ಗ್ರಾಮದ ನಿವಾಸಿ ಶ್ರೀಮತಿ ರಹಮತ್ ರವರ ಮಗ 13 ವರ್ಷ ಪ್ರಾಯದ ರಂಶೀದ್ 7 ನೇ ತರಗತಿ ವಿದ್ಯಾರ್ಥಿ ಆಂಗ್ಲೋ ವರ್ನಾಕ್ಯುಲರ್ ಶಾಲೆಯಲ್ಲಿ ಓದುತ್ತಿದ್ದು ಎಂದಿನಂತೆ ಬೆಳಿಗ್ಗೆ ಶಾಲೆಗೆಂದು ಸೈಕಲಿನಲ್ಲಿ ಹೋಗಿ ಅಲ್ಲಿಂದ ನೆಲ್ಲಿಹುದಿಕೇರಿಯಲ್ಲಿರುವ ಅವರ ಅಜ್ಜಿಯ ಮನೆಗೆ ಹೋಗಿ ಅಲ್ಲಿಂದ ಬೆಳಿಗ್ಗೆ 10.15 ಗಂಟೆಗೆ ಹೋರಟು ಹೋಗಿದ್ದು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಸಿದ್ದಾಪುರ ಠಾ ಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

Monday, February 23, 2015

ವಾಹನದ ದಾಖಲಾತಿ ವಿಷಯದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:

     ವಾಹನದ ದಾಖಲಾತಿ ವಿಚಾರದಲ್ಲಿ ವ್ಯಕ್ತಿನ್ನು ಬೈದು ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಶನಿವಾರಸಂತೆ, ಗೌಡಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 22-2-2015 ರಂದು ಸೋಮವಾರಪೇಟೆ ತಾಲೋಕು ಗೌಡಳ್ಳಿ ಗ್ರಾಮದ ಆಶಿಕ್‌ ಕುಮಾರ್‌ ಎಂಬವರು ತಮ್ಮ ಬಾಪ್ಸು ಓಮ್ನಿ ವ್ಯಾನ್‌ನ ದಾಖಲಾತಿಗಳನ್ನು ಪಡೆಯುವ ಸಲುವಾಗಿ ಅದೇ ಗ್ರಾಮದ ನಿವಾಸಿ ಲೋಹಿತ್‌ ಎಂಬವರ ಮನೆಯ ಹತ್ತಿರ ಹೋಗಿದ್ದು, ಇದೇ ವಿಚಾರವಾಗಿ ಸದರಿ ಲೋಹಿತ್‌ ಜಗಳ ಮಾಡಿ ಫಿರ್ಯಾದಿ ಆಶಿಕ್‌ಕುಮಾರ್‌ ರವರನ್ನು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿ ತಲೆಯ ಭಾಗಕ್ಕೆ ಗಾಯವಾಗಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವ್ಯಕ್ತಿಯಿಂದ ಆಟೋ ರಿಕ್ಷಾಕ್ಕೆ ಹಾನಿ, ಚಾಲಕನ ಮೇಲೆ ಹಲ್ಲೆ: 

     ಹಣದ ವಿಚಾರದಲ್ಲಿ ವ್ಯಕ್ತಿಯೋರ್ವನಿಂದ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಚಾಲಕನ ಮೇಲೆ ಹಲ್ಲೆನಡೆಸಿದ ಘಟನೆ ಕುಶಾಲನಗರ ಠಾಣಾ ಸರಹದ್ದಿನ ಗೋಂದಿಬಸವನಳ್ಳಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ 22-2-2015 ರಂದು ಪಿರ್ಯಾದಿ ಹೆಚ್‌.ಡಿ. ಮಹೇಶ ಎಂಬವರು ತಮ್ಮ ಆಟೋ ರಿಕ್ಷಾವನ್ನು ಬಾಡಿಗೆ ನಿಮಿತ್ತ ಗೋಂಧಿಬಸವನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ಆರೋಪಿ ಮಧು ಎಂಬ ವ್ಯಕ್ತಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಗೋಂಧಿಬಸವನಹಳ್ಳಿ ಗ್ರಾಮದ ನಾಲೆ ಸೇತುವೆ ಬಳಿ ಆಟೋರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಿ ಕಲ್ಲಿನಿಂದ ಆಟೋರಿಕ್ಷಾದ ಮುಂಭಾಗದ ಗ್ಲಾಸನ್ನು ಹೊಡೆದು ಪುಡಿಪುಡಿ ಮಾಡಿ, ನಂತರ ಕೈಯಿಂದ ಮತ್ತು ಕಾಲಿನಿಂದ ಪಿರ್ಯಾದಿಯವರಿಗೆ ಒದ್ದು, ದೊಣ್ಣೆಯಿಂದ ಹಲ್ಲೆಮಾಡಿ ಹಣ ಕೊಡುವಂತೆ ಕೇಳಿ ಅವಾಚ್ಯ ಶಬ್ದಗಳಿಂದ ಬೈಯ್ದಿರುವುದಾಗಿ ಗಾಯಗೊಂಡ ಪಿರ್ಯಾದಿಯವರು ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ನೀಡಿದ ಪುಕಾರಿಗೆನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾರು ಡಿಕ್ಕಿ, ವ್ಯಕ್ತಿಗೆ ಗಾಯ: 

     ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ನಿಂತಿದ್ದಾಗ ಕಾರೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಗೋಣಿಕೊಪ್ಪ ಸಮೀಪದ ಕೈಕೇರಿಯಲ್ಲಿ ಸಂಭವಿಸಿದೆ. ವಿರಾಜಪೇಟೆ ತಾಲೋಕು, ಅರ್ವತ್ತೊಕ್ಲು ಗ್ರಾಮದ ನಿವಾಸಿ ಎಂ ಇಬ್ರಾಹಿಂ ಎಂಬವರು ದಿನಾಂಕ 22-2-2015 ರಂದು ಗೋಣಿಕೊಪ್ಪ-ವಿರಾಜಪೇಟೆ ಮುಖ್ಯರಸ್ತೆ ಕೈಕೇರಿ ಗ್ರಾಮದಲ್ಲಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವಾಗ ಬೆಂಗಳೂರು ನಿವಾಸಿ ಜಾಕೀರ್‌ ರೆಹಮಾನ್‌ ಎಂಬವರು ತಮ್ಮ ವ್ಯಾಗನಾರ್‌ ಕಾರು ಸಂಖ್ಯೆ ಕೆಎ-05-ಎಂಇ-ಎಂಇ-2839 ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮವಾಗಿ ಸದರಿ ಎಂ. ಇಬ್ರಾಹಿಂ ರವರು ಗಾಯಗೊಂಡು ಬಳಿಕ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು: 

        ಶನಿವಾರಸಂತೆ ಠಾಣಾ ಸರಹದ್ದಿನ ಶನಿವಾರಸಂತೆ ನಗರದಲ್ಲಿ ರಕ್ಷಿತ್‌ ಕುಮಾರ್‌ ಎಂಬವರು ಕೆಎ-12ಕೆಎ-12-ಎ-3924 ಸಂಖ್ಯೆಯ ಟಿಪ್ಪರ್‌ ಲಾರಿಯಲ್ಲಿ ಸರಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಗಸ್ತು ಕರ್ತವ್ಯದಲ್ಲಿದ್ದ ಶನಿವಾರಸಂತೆ ಪೊಲೀಸ್‌ ಠಾಣಾ ಸಿಬ್ಬಂದಿಗಳು ಪತ್ತೆಹಚ್ಚಿದ್ದು. ಆರೋಪಿ ರಕ್ಷಿತ್‌ ಕುಮಾರ್‌ರವರ ವಿರುದ್ದ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, February 22, 2015

ಅಕ್ರಮ ಪ್ರವೇಶ, ಕಾಫಿ ಕಳವು: 
     ಪಿರ್ಯಾದಿ ಟಿ.ಪಿ. ಭೀಮಯ್ಯರವರುಮಡಿಕೇರಿ ತಾಲೋಕು ಮಕ್ಕಂದೂರು ಗ್ರಾಮದಲ್ಲಿ ವಾಸವಾಗಿದ್ದು ಇವರಿಗೆ ಮೇಘತ್ತಾಳು ಗ್ರಾಮದಲ್ಲಿ ಸರ್ವೆ ನಂ 56/1 ರಲ್ಲಿ 2 ಏಕ್ರೆ ಹಾಗೂ ಸರ್ವೆ ನಂ 58 ರಲ್ಲಿ 2.41 ಸೆಂಟ್ ಜಾಗವಿದ್ದು ಈ ಆಸ್ತಿ ವಿಚಾರದಲ್ಲಿ ಪಿರ್ಯಾದಿಯವರಿಗೂ ಅವರ ಅಣ್ಣಂದಿಯರಾದ ಲೋಕಪ್ಪ ಮತ್ತು ಕುಶಾಲಪ್ಪನವರಿಗೂ ತಕರಾರು ಇದ್ದು ಮಡಿಕೇರಿ ತಹಶೀಲ್ದಾರರವರು ಸರ್ವೆ ಮುಖಾಂತರ ಪಿರ್ಯಾದಿದಾರರಿಗೆ ಸೇರಿದ ಜಾಗವೆಂದು ತಿಳಿಸಿದ ಜಾಗದಲ್ಲಿ ಲೋಕಪ್ಪ, ಆತನ ಪತ್ನಿ ಲೀಲಾವತಿ ಮತ್ತು ಕುಶಾಲಪ್ಪನವರು ದಿನಾಂಕ 02-02-2015 ರಿಂದ ದಿನಾಂಕ 22-02-2015 ರ ವರೆಗೆ ಅಕ್ರಮ ಪ್ರವೇಶ ಮಾಡಿ ಸುಮಾರು 48,000 ರೂ ಬೆಲೆ ಬಾಳುವಷ್ಟು 35 ಚೀಲ ಹಸಿ ಕಾಫಿಯನ್ನು ಕಳವು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬತ್ತದ ಪೈರಿಗೆ ಬೆಂಕಿ, ವ್ಯಕ್ತಿಯ ಮೇಲೆ ಹಲ್ಲೆ: 
     ಸೋಮವಾರಪೇಟೆ ತಾಲೋಕು ಅವರೆದಾಳು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಗಿರಿಜಮ್ಮನವರಿಗೆ ಸೇರಿದ ಭತ್ತದ ಗದ್ದೆಗೆ ಆರೋಪಿಗಳಾದ ಪಣಿಕೇತನ, ಪ್ರಣತಿ,ಪ್ರಯಾಂಕ ಮತ್ತು ಮಲ್ಲಮ್ಮ ರವರುಗಳು ಅಕ್ರಮ ಪ್ರವೇಶ ಮಾಡಿ ಗದ್ದೆಯಲ್ಲಿ ಬೆಳದಿದ್ದ ಭತ್ತದ ಪೈರಿಗೆ ಬೆಂಕಿ ಹಾಕಿ ಹಾನಿಪಡಿಸಿದ್ದು, ಇದನ್ನು ವಿಚಾರಿಸಿದ ಫಿರ್ಯಾದಿ ಶ್ರೀಮತಿ ಗಿರಿಜಮ್ಮನವರಿಗೆ ಸದರಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ದಾರಿ ವಿಚಾರ, ವ್ಯಕ್ತಿಯ ಮೇಲೆ ಹಲ್ಲೆ: 
     ಮಡಿಕೇರಿ ತಾತಾಲೋಕು ಅವಂದೂರು ಗ್ರಾಮದ ನಿವಾಸಿ ಫಿರ್ಯಾದಿ ಕೆ.ಪಿ. ಪೂವಯ್ಯ ಮತ್ತು ಮೋಹನ್‌ಕುಮಾರ್‌ರವರಿಗೆ ಆವಂದೂರು ಗ್ರಾಮದಲ್ಲಿರುವ ಆಸ್ತಿಯ ದಾರಿಯ ವಿಚಾರದಲ್ಲಿ ತಕರಾರು ಇದ್ದು ಈ ದಿನ ಸಮಯ 4-35 ಗಂಟೆಗೆ ಫಿರ್ಯಾದಿ ಅವರ ತಂದೆ ಪಾಪಯ್ಯ ಪತ್ನಿ ಕಾವೇರಿ ಮತ್ತು ಅಣ್ಣನ ಮಕ್ಕಳಾದ ಹೇಮಂತ್ ಅಶ್ವತ್ ರವರು ಮೇಲ್ಕಂಡ ದಾರಿಗಾಗಿ ಮನೆಗೆ ಹೋಗುತ್ತಿರುವಾಗ ಮೋಹನ್ ಕುಮಾರ್ ಆತನ ಪತ್ನಿ ಟೈನಿ, ಸಹೋದರರಾದ ವಸಂತ ಮತ್ತು ಜಗದೀಶ್ ರವರು ದಾರಿಗೆ ಅಡ್ಡ ಬೇಲಿ ಹಾಕಿದ್ದು, ಯಾಕೆ ಬೇಲಿ ಹಾಕಿದ್ದಿರ ಎಂದು ಕೇಳಿದಾಗ ಮೇಲ್ಕಂಡವರು ಹಾರೆ ಕತ್ತಿ ಸುತ್ತಿಗೆಯನ್ನು ತೆಗೆದುಕೊಂಡು ಬಂದು ಹಲ್ಲೆ ನಡೆಸಿದ್ದು ಈ ವಿಚಾರವಾಗಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಆಕಸ್ಮಿಕ ವಿದ್ಯುತ್‌ ಸ್ಪರ್ಶ ಕಾರ್ಮಿಕನ ಸಾವು: 
     ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಅಮಿತ್‌ ಸಾನಾ ಎಂಬವರು ಮಡಿಕೇರಿ ತಾಲೋಕು ಕೋಡಂಬೂರು ಗ್ರಾಮದಲ್ಲಿ ಕೂಲಿ ಕೆಲಸಕ್ಕೆಂದು ಬಂದು ಚೆಟ್ಟಿಮಾಡ ಬೆಳ್ಳಿಯಪ್ಪ ಎಂಬವರ ಕಾಫಿತೋಟದಲ್ಲಿ ಕರಿಮೆಣಸು ಕುಯ್ಯುವ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಕಬ್ಬಿಣದ ಏಣಿಯನ್ನು ಎತ್ತಿ ಮರಕ್ಕೆ ಇಡುವ ಸಂದರ್ಭದಲ್ಲಿ ಅಕಸ್ಮಿಕವಾಗಿ ವಿದ್ಯುತ್‌ ತಂತಿಗೆ ಸ್ಪರ್ಶಗೊಂಡು ಸದರಿ ವ್ಯಕ್ತಿ ಅಮಿತ್‌ ಸಾನಾ ಸ್ಥಳದಲ್ಲಿ ಸಾವನಪ್ಪಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, February 21, 2015

ಸ್ಕೂಟರ್‌ಗೆ ಕಾರು ಡಿಕ್ಕಿ, ಸವಾರನಿಗೆ ಗಾಯ:

       ಸ್ಕೂಟರ್‌ ಹಾಗು ಕಾರು ಮುಖಾಮುಳಿ ಡಿಕ್ಕಿಯಾಗಿ ಸ್ಖೂಟರ್‌ ಸವಾರ ಗಾಯಗೊಂಡ ಘಟನೆ ಮಡಿಕೇರಿ ಸಮೀಪಕ ಕಾಟಕೇರಿ-ಭಾಗಮಂಡಲ ಜಂಕ್ಷನ್‌ನಲ್ಲಿ ನಡೆದಿದೆ. ಪಿರ್ಯಾದಿ ಬಿ.ಎಸ್‌. ಉಮ್ಮಪ್ಪ, ಮದೆನಾಡು ಗ್ರಾಮ ಇವರು ಈ ದಿನ ತಾ: 21-2-2015 ರಂದು ತಮ್ಮ ಬಾಪ್ತು ಕೆಎ-09-ಎಸ್-5400 ರ ಕೆನಿಟೆಕ್ ಹೋಂಡಾದಲ್ಲಿ ಮಡಿಕೇರಿಯಿಂದ ಮದೆನಾಡು ಗ್ರಾಮಕ್ಕೆ ಹೋಗುತ್ತಿರುವಾಗ ಮಂಗಳೂರು ರಸ್ತೆಯ ಕಾಟಕೇರಿ ಭಾಗಮಂಡಲ ಜಂಕ್ಷನ್ ತಲುಪುವಾಗ್ಗೆ ಮಂಗಳೂರು ಕಡೆಯಿಂದ ಕೆಎ-12-ಪಿ-6646 ರ ಕಾರನ್ನು ಅದರ ಚಾಲಕ ಶಿವಕುಮಾರ್‌ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಫಿರ್ಯಾದಿಯ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ, ನೇಣುಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಹೆ:

     ಶ್ರೀಮಂಗಲ ಠಾಣಾ ಸರಹದ್ದಿನ ಕೋಣಂಗೇರಿ ಹುದಿಕೇರಿ ಗ್ರಾಮದಲ್ಲಿ ವಾಸವಾಗಿರುವ ನೂಂಜ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 20-2-2015 ರಂದು ಮನೆಯ ಪಕ್ಕದ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿ ವ್ಯಕ್ತಿಯ ಪತ್ನಿ ಶ್ರೀಮತಿ ಪಣಿಎರವರ ಚೀತೆರವರು ನೀಡಿದ ದೂರಿನ ಮೇರೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, February 20, 2015

ರಸ್ತೆ ಅಫಘಾತ, ಕಾರಿಗೆ ಜಖಂ
          ಕಾರಿಗೆ ಕೆ.ಎಸ್‌.ಆರ್‌.ಟಿ.ಸಿ. ಬಸ್ಸೊಂದು ಡಿಕ್ಕಿಯಾದ ಪರಿಣಾಮ ಕಾರಿಗೆ ಜಖಂ ಉಂಟಾಗಿರುವ ಘಟನೆ ಮಡಿಕೇರಿ ಬಳಿಯ ಈರಳವಳಮುಡಿ ಬಳಿ ನಡೆದಿದೆ. ದಿನಾಂಕ 19/02/2015ರ ರಾತ್ರಿ ವೇಳೆ ಭಟ್ಕಳ ನಿವಾಸಿ ನೂರ್‌ ಮಹಮದ್ ಎಂಬವರು ಅವರ ಅಣ್ಣ ಅಹಮ್ಮದ್‌ರವರ ಮದುವೆ ಮೈಸೂರಿನಲ್ಲಿ ನಡೆಯಲಿದ್ದು ಮದುವೆಗೆ ಹಾಲ್ ಬುಕ್ ಮಾಡಲು ಮತ್ತು ಇತರ ವ್ಯವಸ್ಥೆಗಾಗಿ  ಅಣ್ಣ ನೂರ್ ಹಸೇನ್‌ರವರೊಂದಿಗೆ ಅವರ ಮಾರುತಿ ವ್ಯಾಗನರ್ ಕಾರು ಸಂಖ್ಯೆ ಕೆಎ-01-ಎಂಎ-1639 ರಲ್ಲಿ ಮೈಸೂರಿಗೆ ಹೋಗುತ್ತಿರುವಾಗ ಮಡಿಕೇರಿ ದಾಟಿ ಸುಮಾರು 2-3 ಕಿ ಲೋ ಮೀಟರ್ ಮುಂದೆ  ರಸ್ತೆ ತಿರುವಿನಲ್ಲಿ ಎದುರುಗಡೆಯಿಂದ ಒಂದು ಹುಲ್ಲು ತುಂಬಿದ ಲಾರಿ ಬರುತ್ತಿದ್ದುದ್ದಕ್ಕೆ ದಾರಿ  ಬಿಟ್ಟು ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕೆಎಸ್ಆರ್ ಟಿ ಸಿ ಬಸ್ಸು ನಂ ಕೆಎ-09-ಎಫ್-4715 ರನ್ನು ಅದರ ಚಾಲಕ ಭೀಮಪ್ಪರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಹುಲ್ಲು ತುಂಬಿದ ಲಾರಿಯನ್ನು ಓವರ್ ಟೇಕ್ ಮಾಡಿ ಬಂದು ನೂರ್‌ ಮಹಮದ್‌ರವರು ಚಾಲನೆ ಮಾಡುತ್ತಿದ್ದ ವ್ಯಾಗನರ್ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬ್ರೌನ್‌ ಶುಗರ್‌ ಮಾರಾಟ ಯತ್ನ, ನಾಲ್ವರ ಬಂಧನ 
        ಭಾರೀ ಮೌಲ್ಯದ ಬ್ರೌನ್‌ ಶುಗರ್‌ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ನಗರ ಪೊಲೀಸರು ಮೂವರನ್ನು ಬಂಧಿಸಿ ರೂ.55 ಲಕ್ಷ ಮೌಲ್ಯದ ಬ್ರೌನ್‌ ಶುಗರ್‌ನ್ನು ವಶಪಡಿಸಿಕೊಂಡಿದ್ದಾರೆ. ದಿನಾಂಕ 19/02/2015ರಂದು ಆರ್ಜಿ ಗ್ರಾಮದ ಶ್ರೀ ಭಗವತಿ ದೇವಸ್ಥಾನದ ಗೇಟಿನ ಮುಂಭಾಗ ಸಾರ್ವಜನಿಕ ರಸ್ತೆಯ ಬಳಿ ಕೆಲವು ವ್ಯಕ್ತಿಗಳು ವಾಹನಗಳನ್ನು ನಿಲ್ಲಿಸಿಕೊಂಡು ಬ್ರೌನ್ ಶುಗರ್ ಎಂಬ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾರೆಂದು ದೊರೆತ ಸುಳಿವಿನ ಮೇರೆಗೆ ವಿರಾಜಪೇಟೆ ನಗರ ಠಾಣಾ ಪಿಎಸ್‌ಐ ಮೋಹನ್‌ ಕುಮಾರ್‌ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ದೇವಣಗೇರಿಯ ಪಿ.ಹೆಚ್‌.ಮುಸಾನ್‌, ಆಂದ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವಿ.ರಮಣ, ರಾಮನಗರ ಜಿಲ್ಲೆಯ ಅಂದಾನ ಮೂರ್ತಿ ಮತ್ತು ಬಿಳುಗುಂದ ಗ್ರಾಮದ ಎಂ.ಬಿ. ಮಂಜುನಾಥ್‌ ಎಂಬವರು ಕಾರು ನಂಬರ್ ಕೆಎ-03-ಎಬಿ-2421 ರಲ್ಲಿ ರೂ 55 ಲಕ್ಷ ಬೆಲೆ ಬಾಳುವ 710 ಗ್ರಾಂ ಬ್ರೌನ್ ಶುಗರನ್ನು ಮಾರಾಟ ಮಾಡಲು ಇಟ್ಟುಕೊಂಡಿದ್ದನ್ನು ಪತ್ತೆ ಹಚ್ಚಿ ಬ್ರೌನ್‌ ಶುಗರ್‌, ಕಾರು ಹಾಗೂ  ಕೆಎ-12-ಎಲ್-3694 ಮತ್ತು ಕೆಎ-12-ಕೆ-1604 ರ ಎರಡು ಸ್ಕೂಟರ್‌ಗಳನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಡಿಕ್ಕಿ, ಮತ್ತೋರ್ವ ಬೈಕ್‌ ಸವಾರನ ಸಾವು
            ಹಿಂದಿನಿಂದ ಮೋಟಾರು ಬೈಕೊಂದು ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರನೋರ್ವ ಸ್ಥಳದಲ್ಲೇ ಸಾವಿಗೀಡಾದ ಘಟನೆ ಕುಶಾಲನಗರ ಬಳಿಯ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 19/02/2015ರಂದು ರಾತ್ರಿ ವೇಳೆ ಬಾಳುಗೋಡು ಬಳಿಯ ರಸಲ್‌ಪುರ ನಿವಾಸಿ ಎಂ.ಬಿ.ತಿಲಕ್‌ ಹಾಗೂ ಅವರ ತಂದೆ ಶ್ರೀನಿವಾಸ ಎಂಬವರು ಕೆಎ-12-ಕೆ-8295 ರ  ಬೈಕ್ ನಲ್ಲಿ ಗುಡ್ಡೆಹೊಸೂರಿಗೆ ಬಂದಿದ್ದು ,ನಂತರ ತಿಲಕ್‌ರವರ  ತಂದೆಯ ಸ್ನೇಹಿತ  ಸುಣ್ಣದ ಕೆರೆಯಲ್ಲಿರುವ ಅವರ ಮನೆಗೆ ಬರ ಹೇಳಿದ್ದು ತಂದೆ ಶ್ರೀನಿವಾಸ್‌ ಒಬ್ಬರೆ ಬೈಕನ್ನು ಚಾಲನೆ ಮಾಡಿಕೊಂಡು ಹೋಗಿದ್ದು ರಾತ್ರಿಯಾದ ಕಾರಣ ತಿಲಕ್‌ ಮತ್ತು ಅವರ ಸ್ನೇಹಿತ ಯೋಗೇಶ್ ರವರು  ಆಟೋದಲ್ಲಿ ಬೈಕನ್ನು ಹಿಂಬಾಲಿಸಿಕೊಂಡು ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಸುಣ್ಣದ ಕೆರೆ ಜಂಕ್ಷನ್ ಹತ್ತಿರ ತಿಲಕ್‌ರವರ ತಂದೆ ಶ್ರೀನಿವಾಸ್‌ರವರ ಬೈಕ್‌ನ ಹಿಂಬಾಗದಲ್ಲಿ ಹೋಗುತ್ತಿದ್ದ ಕೆಎ-12-ಕೆ-2300 ರ ಬೈಕ್ ಚಾಲಕ 7ನೇ ಹೊಸಕೋಟೆಯ ಉಣ್ಣಿ ಎಂಬಾತ ಬೈಕನ್ನು ಅತಿವೇಗದಿಂದ ಚಾಲಸಿ ಶ್ರೀನಿವಾಸ್‌ರವರು ಚಾಲಿಸುತ್ತದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಬೈಕ್‌ ಸಮೇತ ರಸ್ತೆಯಲ್ಲಿ ಬಿದ್ದಿದ್ದು, ಕೂಡಲೇ ತಿಲಕ್‌ ಮತ್ತು ಅವರ ಸ್ನೇಹಿತ ಸೇರಿ ಹೋಗಿ ನೋಡಿದಾಗ . ಶ್ರೀನಿವಾಸ್‌ರವರು ತಂದೆ ಮೃತ ಪಟ್ಟಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದಾರೆ. 

ಬಾಲಕಿಗೆ ಕಾರು ಡಿಕ್ಕಿ, ಬಾಲಕಿಗೆ ತೀವ್ರ ಗಾಯ
           ಪಾದಚಾರಿ ಶಾಲಾ ಬಾಲಕಿಯೊಬ್ಬಳಿಗೆ ಕಾರು ಡಿಕ್ಕಿಯಾದ ಪರಿಣಾಮ ಬಾಲಕಿಗೆ ತೀವ್ರತರವಾದ ಗಾಯಗಳಾದ ಘಟನೆ ಪೊನ್ನಂಪೇಟೆ ಬಳಿಯ ತಿತಿಮತಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 19/2/2015ರಂದು ತಿತಿಮತಿ ನಿವಾಸಿ ಎಂ.ಅಫ್ರಸ್‌ ಎಂಬವರು ಮರೂರು ಗ್ರಾಮದ ಹಮೀದ್ ಎಂಬವರ ಹೋಟೆಲ್ ಹತ್ತಿರ ನಿಂತುಕೊಂಡಿರುವಾಗ ಅವರ ತಂಗಿಯ ಮಗಳು 10 ವರ್ಷದ ಪ್ರಾಯದ ಬಾಲಕಿ ಚಂದನ ಎಂಬಾಕೆಯು ಮರೂರಿನಿಂದ ಶಾಲೆ ಮುಗಿದ ನಂತರ ವಾಪಾಸು ಮನೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತೀರುವಾಗ ಅನೆಚೌಕೂರು ಕಡೆಯಿಂದ ಕೆಎ-12-ಪಿ-696ರ  ಕಾರನ್ನು ಅದರ ಚಾಲಕ ಕುಶಾಲಪ್ಪ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬಾಲಕಿ ಚಂದನಳಿಗೆ ಡಿಕ್ಕಿ ಪಡಿಸಿದ ಪರಿಣಾಮ ಚಂದನಳ ತಲೆಗೆ ಹಾಗೂ ಕಿವಿಯ ಬಾಗಕ್ಕೆ ತೀವ್ರ ತರಹ ಗಾಯವಾಗಿದ್ದು ಕಾರು ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, February 19, 2015

ಮೋಟಾರ್‌ ಸೈಕಲ್‌ಗೆ ಕಾರು ಡಿಕ್ಕಿ ಸವಾರನಿಗೆ ಗಾಯ:
     ಮೋಟಾರ್‌ ಸೈಕಲ್‌ಗೆ ಕಾರೊಂದು ಹಿಂದಿನಿಂದ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಸುಂಟಿಕೊಪ್ಪ ನಗರದಲ್ಲಿ ನಡೆದಿದೆ.  ದಿನಾಂಕ 16-02-15 ರಂದು  ಸಮಯ 15.00  ಗಂಟೆಗೆ ಪಿರ್ಯಾದಿ ಹೆಚ್‌ವಿ. ಮಂಜುನಾಥ ಎಂಬುವವರ  ಸ್ನೇಹಿತ ಕೆ.ಬಿ. ಪ್ರಸನ್ನ ರವರು ತನ್ನ ಬಾಪ್ತು ಬೈಕ್ ನಂ ಕೆ. ಎ 12 ಕೆ 8090 ರಲ್ಲಿ ಸುಂಠಿಕೊಪ್ಪ  ಕಡೆಯಿಂದ ಕೆ.ಇ.ಬಿ ಕಛೇರಿ ಕಡೆಗೆ  ಹೋಗುತ್ತಿರುವಾಗ್ಗೆ  ಹಿಂದುಗಡೆಯಿಂದ ಕಾರು ನಂ ಟಿ.ಎನ್.  25 ಜೆ 8725 ರ ಕಾರಿನ ಚಾಲಕ ತನ್ನ  ಕಾರನ್ನು ಅತೀ ವೇಗ ಮತ್ತು ಅಜಾಗರೂ ಕತೆಯಿಂದ ಚಾಲಿಸಿಕೊಂಡು ಬಂದು ಪ್ರಸನ್ನರವರ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿ ಪ್ರಸನ್ನರವರು ಗಾಯಗೊಂಡುಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲುಪಡಿಸಿದ್ದು,  ಸುಂಟಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಆಸ್ತಿವಿಚಾರದಲ್ಲಿ  ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ:
     ಆಸ್ತಿ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಾಚುವಿನಿಂದ ತಿವಿದು ಗಾಯಪಡಿಸಿ  ಕೊಲೆ ಬೆದರಿಕೆ ಹಾಕಿದ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ  ದೊಡ್ಡಕಣಗಾಲು ಗ್ರಾಮದಲ್ಲಿ ನಡೆದಿದೆ.   ಸಣ್ಣಕಣಗಾಲು ಗ್ರಾಮದ ನಿವಾಸಿ ಚಂಗಪ್ಪ  ಹಾಗು ದೊಡ್ಡದೊಡ್ಡಕಣಗಾಲು ಗ್ರಾಮದ ಚಂದ್ರಶೇಖರ ಎಂಬವರ ನಡುವೆ ಆಸ್ತಿ ವಿವಾದದ   ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ನಡೆದಯುತ್ತಿದ್ದು, ದಿನಾಂಕ 18-2-2015 ರಂದು ಸಮಯ 11_30 ಎ.ಎಂಗೆ   ಸದ್ರಿ ವಿವಾದಿತ  ಜಾಗದ ಪೋಟೋವನ್ನು ಚಂದ್ರಶೇಖರ್ ರವರು  ತೆಗೆಸುತ್ತಿದ್ದುದನ್ನು ಗಮನಿಸಿ ಅದನ್ನು   ವಿಚಾರಿಸಿದ ಫಿರ್ಯಾದಿ ಚಂಗಪ್ಪನವರ ಕೈಗೆ ಚಂದ್ರಶೇಖರವರು   ಚಾಕುವಿನಿಂದ ಚುಚ್ಚಿ ನೋವನ್ನುಂಟುಮಾಡಿದ್ದು ಅಲ್ಲದೆ ಕೈಯಿಂದ ಹಲ್ಲೆ ನಡೆಸಿ ರಕ್ತ ಗಾಯ ಪಡಿಸಿದ್ದು,  ಅದೇ ವೇಳೆಗೆ  ಚಂದ್ರಶೇಖರವರ ಮಗ  ಮಧು ಸೂದನ್  ಎಂಬವರನು ಅಲ್ಲಿಗೆ ಬಂದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ತಿ ವಿವಾದ, ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ, ಗಾಯ:
     ದಿನಾಂಕ  18-02-2015 ರಂದು ಸಮಯ 11-30 ಗಂಟೆಗೆ  ಸೋಮವಾರಪೇಟೆತಾಲೋಕು ದೊಡ್ಡಕಣಗಾಲು ಗ್ರಾಮದ ನಿವಾಸಿ ಫಿರ್ಯಾದಿ ಮಧುಸೂದನ್‌ ರವರು  ತಮ್ಮ ಜಮೀನಿನಲ್ಲಿ ವ್ಯವಸಾಯ ಕೆಲಸ ಮಾಡಿಕೊಂಡಿರುವಾಗ್ಗೆ  ಸಣ್ಣಕಣಗಾಲು ಗ್ರಾಮದ ನಿವಾಸಿ ಆರೋಪಿ ಚಂದ್ರಪ್ಪ  ಹಾಗೂ ಪಿರ್ಯಾದಿಯವರ ತಂದೆಯವರಿಗೂ ಮಾತಿಗೆ ಮಾತು ಬೆಳೆದು ಜಗಳವಾಗುತ್ತಿದ್ದು, ಫಿರ್ಯಾದಿಯವರು ತಡೆಯಲು ಹೋದಾಗ ಮೇಲ್ಕಂಡ ಆರೋಪಿ ಚಂದ್ರಪ್ಪ ರವರು ಫಿರ್ಯಾದಿಯವರ ದಾರಿ ತಡೆದು, ಆಸ್ತಿಯ ವಿಚಾರದಲ್ಲಿ ಕೇಸು ಇದ್ದರೂ ಕೆಲಸ ಮಾಡಲು ಬಂದಿದ್ದೀಯಾ ಎಂದು ಹೇಳಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಫಿರ್ಯಾದಿಯವರ ತಲೆಗೆ ಹಾಗೂ ಎಡ ಕೈಗೆ ಕಡಿದು ರಕ್ತಗಾಯಪಡಿಸಿದ್ದು, ಫಿರ್ಯಾದಿಯ ತಂದೆಯವರಿಗೆ  ಚಂದ್ರಪ್ಪನ ಹೆಂಡತಿ ರುಕ್ಮಿಣಿಯು ದೊಣ್ಣೆಯಿಂದ ಹೊಡೆದು ಜಮೀನಿನ ವಿಚಾರಕ್ಕೆ ಬಂದರೆ ನಿಮ್ಮನ್ನು ಇದೇ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನಮೇರೆಗೆಶನಿವಾರಸಂತೆಠಾಣೆಯಲ್ಲಿ ಪ್ರಕರಣದಾಖಲಿಸಿದ  ಪೊಲೀಸರುತನಿಖೆ ಕೈಗೊಂಡಿದ್ದಾರೆ.
ಜಾಗದ ವಿಚಾರದಲ್ಲಿ ಜಗಳ , ಪ್ರಕರಣ ದಾಖಲು:
     ದಿನಾಂಕ 17-2-2015 ರಂದು ಸೋಮವಾರಪೇಟೆ ತಾಲೋಕು ಕೂಡ್ಲೂರು ಗ್ರಾಮದ ನಿವಾಸಿ ಕೆ.ಹೆಚ್‌. ಸ್ವಾಮಿ ಎಂಬವರು ಬೆಸೂರು ಗ್ರಾಮದ  ಬಸ್ಸು ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ  ಅವರ ಚಿಕ್ಕಪ್ಪ ಗಣೇಶರವರ ಮಗ ದಿನೇಶ ಎಂಬಾತ  ಜಾಗದ ಬೇಲಿಯ ವಿಚಾರದಲ್ಲಿ  ಜಗಳ ಮಾಡಿ  ಕೆ.ಹೆಚ್‌. ಸ್ವಾಮಿರವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  

Wednesday, February 18, 2015

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

      ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ತಾಲೋಕು ಕೋತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 17-02-2015 ರಂದು ಸಮಯ ಸುಮಾರು 18.45 ಗಂಟೆಗೆ ವಿರಾಜಪೇಟೆ ತಾಲ್ಲೂಕು ಕೋತೂರು ಗ್ರಾಮದಲ್ಲಿ ಪಿರ್ಯಾಧಿ ಬಿ.ಆರ್‌.ವೆಂಕಟರಮಣರವರನ್ನು ಆರೋಪಿ ಬಿ.ಜಿ. ಗಣೇಶ್‌ ಕುಮಾರ್‌ ಎಂಬವರು ಅಡ್ಡಗಟ್ಟಿ ಕೈಯ್ಯಿಂದ ಹೊಡೆದು ನೋವುಪಡಿಸಿ, ಪಾದರಕ್ಷೆಯಿಂದ ಹೊಡೆದು ಅವಮಾನ ಮಾಡಿದ್ದಲ್ಲದೆ ಪಿರ್ಯಾಧಿಯವರನ್ನು ಹಾಗೂ ಅವರ ತಮ್ಮಂದಿರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಫಿರ್ಯಾದಿ ವೆಂಕಟರಮಣನವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜಗಳ ಬಿಡಿಸಲು ಹೋದ ವ್ಯಕ್ತಿಯ ಮೇಲೆ ಹಲ್ಲೆ: 

     ಜಗಳ ಬಿಡಿಸಲು ಹೋದ ವ್ಯಕ್ತಿಯ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.  ದಿನಾಂಕ 17-2-2015 ರಂದು ರಾತ್ರಿ 10 ಗಂಟೆಯ ಸಮಯದಲ್ಲಿ ಮಡಿಕೇರಿ ನಗರದ ಜಿ.ಟಿ. ವೃತ್ತದ ಬಳಿ ಮೈಸೂರು ರಸ್ತೆಯಲ್ಲಿ ಯಾರೋ ಮೂವರು ಜಗಳ ಮಾಡಿಕೊಂಡಿದ್ದು, ಅಲ್ಲಿ ಇದ್ದ ಮರಗೋಡು ಗ್ರಾಮದ ನಿವಾಸಿ ಎ.ಎಲ್‌. ಕಿರಣ ಎಂಬವರು ಜಗಳವನ್ನು ಬಿಡಿಸಲು ಹೋದಾಗ ಆತನನ್ನು ಸದರಿ ಅಪರಿಚಿತ ವ್ಯಕ್ತಿಗಳು ಅವಾಚ್ಯವಾಗಿಬೈದು ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿ ಗಾಯಗಪಡಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಜೀವನದಲ್ಲಿ ಜಿಗುಪ್ಸೆ, ಮಹಿಳೆ ಆತ್ಮಹತ್ಯೆ: 

     ಸಂಸಾರದ ವಿಚಾರದಲ್ಲಿ ಜಿಗುಪ್ಸೆಗೊಂಡು ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಪೊಲೀಸ್‌ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 17-2-2015 ರಂದು ಕೋತೂರು ಗ್ರಾಮದಲ್ಲಿ ವಾಸ ಮಾಡಿಕೊಂಡಿರುವ ರಮೇಶ ಎಂಬವರ ಪತ್ನಿ ಶ್ರೀಮತಿ ಮಮತ ಎಂಬಾಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಪಕ್ಕದ ಕಾಫಿತೋಟದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿರುತ್ತಾರೆ.  

ವಾಹನ ದಿಕ್ಕಿ ಪಾದಾಚಾರಿಗೆ ಗಾಯ:

     ಅಪರಿಚಿತ ವಾಹನವೊಂದು ಪಾದಾಚಾರಿಯೊಬ್ಬರಿಗೆ ಡಿಕ್ಕಿಯಾದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ಗೋಣಿಕೊಪ್ಪ ಪೊಲೀಸ್‌ ಠಾಣಾ ಸರಹದ್ದಿನ ಹಾತೂರು ಗ್ರಾಮದ ನಿವಾಸಿ ಕೆ.ಟಿ. ಜಯಪ್ರಕಾಶ್‌ ಎಂಬವವರು ದಿನಾಂಕ 17-2-2015ರಂದು ಸಾಯಂಕಾಲ ಗೋಣಿಕೊಪ್ಪ ಬಸ್‌‌ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ವಾಹನ ಹಿಂಬದಿಯಿಂದ ಬಂದು ಡಿಕ್ಕಿಪಡಿಸಿ ಗಾಯಪಡಿಸಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಪ್ರಾಪ್ತೆಯ ಅಪಹರಣ ಪ್ರಕರಣ ದಾಖಲು:

     ದಿನಾಂಕ 14/2/2015 ರಂದು ಗೋಣಿಕೊಪ್ಪ ನಗರದ ಕಾಳಪ್ಪ ಕಾಲೋನಿಯಲ್ಲಿ ವಾಸವಾಗಿರುವ ಟಿ.ಎಸ್‌. ರಾಜು ಎಂಬವರ ಮಗಳು ಟಿ.ಆರ್.ಐಶ್ವರ್ಯ ಎಂದಿನಂತೆ ಬೆಳಿಗ್ಗೆ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿಗೆ ಹೋದವಳು ಮರಳಿ ಮನೆಗೆ ಬಾರದೇ ಇದ್ದು ಅಕ್ಕಪಕ್ಕದವರನ್ನು ಹಾಗೂ ಕಾಲೇಜಿನಲ್ಲಿ ವಿಚಾರಿಸಿದಾಗ ಆಕೆ ಕಾಲೇಜಿಗೆ ಹೋಗದೇ ಇರುವುದು ತಿಳಿದು ಬಂದಿದ್ದು, ದಿನಾಂಕ 14/2/15 ರಂದು ಅಪರಾಹ್ನ ಸಾನಿ ಎಂಬ ವ್ಯಕ್ತಿ ಫಿರ್ಯಾದಿಯವರ ಮೊಬೈಲ್ ಗೆ ಕರೆ ಮಾಡಿ ನಿಮ್ಮ ಮಗಳನ್ನು ಹುಡುಕುವುದು ಬೇಡ ಹುಡುಕಲು ಪ್ರಯತ್ನಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಸದರಿ ವ್ಯಕ್ತಿ ಟಿ.ಆರ್‌. ಐಶ್ವರ್ಯಳನ್ನು ಅಪಹರಿಸಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.