ಪಿರ್ಯಾದಿ ಶ್ರೀ ವಿ.ಸಿ ಮುಸ್ತಾಫ ತಂದೆ ಪೌತಿ ಮಹಮ್ಮದ್ ರವರಿಗೆ 4 ತಿಂಗಳ ಹಿಂದೆ ಅವರ ಸ್ನೇಹಿತರಾದ ಕೆ.ಪಿ. ಅಶ್ರಫ್ರವರು ಹಳೆಯ ಇನ್ನೋವಾ ಕಾರ್ ಖರೀದಿಸುವ ಸಂಬಂಧ ದಿನಾಂಕ 07-01-15 ರಂದು ಸ್ನೇಹಿತ ನಾಸಿರ್ ಮತ್ತು ರಶೀದ್ ರವರ ಜೊತೆ ಮಡಿಕೇರಿಗೆ ಬಂದಾಗ ನಾಸಿರ್ ಮತ್ತು ರಶೀದ್ ರವರು ಇನ್ನೋವಾ ಕಾರಿನ ಮಾಲಿಕ ರು ಹೊರಗಡೆ ಹೋಗಿದ್ದು ನಾಳೆ ಬರುತ್ತಾ ರೆ ಎಂದು ಹೇಳಿ ನಾವೆಲ್ಲರೂ ಸ್ನೇಹಿತನ ಮನೆಯಲ್ಲಿ ತಂಗುವ ಎಂದು ಹೇಳಿ ಮಡಿಕೇರಿಯಿಂದ ಸೋಮವಾರ ಪೇಟೆ ರಸ್ತೆಯಲ್ಲಿ ಸುಮಾರು 16 ಕಿ ಮಿ ದೂ ರ ದಲ್ಲಿರುವ ಒಂದು ಮನೆಗೆ ಕರೆದುಕೊಂಡು ಹೋದಾಗ ಸಮಯ ಸುಮಾರು ರಾತ್ರಿ 8.00 ಗಂಟೆಗೆ ಸದ್ರಿ ಮನೆಯಲ್ಲಿ ಒಬ್ಬಳು ಹೆಂಗಸು ಮತ್ತು ಒಬ್ಬಳು ಹುಡುಗಿ ಇದ್ದು, ಇವರ ಜೊತೆ ಮಾತನಾಡಿಕೊಂಡಿರುವಾಗ್ಗೆ ಅಲ್ಲಿಗೆ 3 ಜನ ಪೊಲೀಸರು ಬಂದು ಇವರಿಗೆ ಮನಬಂದಂತೆ ಥಳಿಸಿ ಅನೈತಿಕ ಕೆಲಸದಲ್ಲಿ ತೊಡಗಿರುವುದಾಗಿ ಆಪಾದಿಸಿ ಕೇಸುಹಾಕುವುದಾಗಿ ಬೆದರಿಸಿ ಎಲ್ಲರನ್ನೂಬೇರೆ ಬೇರೆ ಕೋಣೆಯಲ್ಲಿ ಬಲವಂತವಾಗಿ ಕೂಡಿ ಹಾಕಿ ಬಟ್ಟೆಯನ್ನು ಬಿಚ್ಚಿಸಿ ಅಲ್ಲಿದ್ದ ಹೆಂಗಸರೊಂದಿಗೆ ಪೋಟೋ ತೆಗೆಸಿ, ಮುಸ್ತಾಫರವರ ಬಳಿ ಇದ್ದ 3 ಮೊಬೈಲ್ ಪೋನ್ ಮತ್ತು ಪರ್ಸಿನಲ್ಲಿದ್ದ 24,500 ರೂ ಹಣವನ್ನು ತೆಗೆದು ತೆಗೆದುಕೊಂದು ನಂತರ ಪುನ: ರಾತ್ರಿ 10.30 ಗಂಟೆಗೆ ಒಬ್ಬ ಪೊಲೀಸ್ ಇನ್ಸ್ ಪೆಕ್ಟ ರ್ ಸಮವಸ್ತ್ರ ದಲ್ಲಿ ಬಂದು ನಾಲ್ವ ರನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ನಿಮಗೆ ಕೇಸು ಹಾಕುವುದಿಲ್ಲ, 25 ಲಕ್ಷ ಹಣ ಕೊಡಿ ಎಂದು ಕೇಳಿದ ಮೇರೆಗೆ 4 ಲಕ್ಷ ಹಣ ಕೊಡುತ್ತೇವೆ ಎಂದು ಒಪ್ಪಿ ದಿನಾಂಕ 08-01-15 ರಂದು ಊರಿಗೆ ಹೋಗಿ ಮುಸ್ತಾಫ್ರವರು ಈ ಪೊಲೀಸರಿಗೆ ಪರಿಚಯವಿದ್ದ ಶಪೀಕ್ ರವರ ಬಳಿ 2 ಲಕ್ಷಹಣವನ್ನು ಕೊಟ್ಟಿದ್ದು, ದಿನಾಂಕ29-4-2015 ರಂದುಪತ್ರಿಕೆಯಲ್ಲಿ ನೋಡಿದಾಗ ಸುಂಠಿಕೊಪ್ಪ ಬಳಿ ನಕಲಿ ಪೊಲೀಸರ ವೇಷ ಹಾಕಿ ವಂಚಿಸಿದ್ದ ಪ್ರಕರಣವೊಂದನ್ನು ಓದಿದ್ದು, ಮೇಲ್ಕಂಡ ಘಟನೆ ನಡೆದ ಬಗ್ಗೆ ಸಂಶಯ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Thursday, April 30, 2015
ಪಿರ್ಯಾದಿ ಶ್ರೀ ವಿ.ಸಿ ಮುಸ್ತಾಫ ತಂದೆ ಪೌತಿ ಮಹಮ್ಮದ್ ರವರಿಗೆ 4 ತಿಂಗಳ ಹಿಂದೆ ಅವರ ಸ್ನೇಹಿತರಾದ ಕೆ.ಪಿ. ಅಶ್ರಫ್ರವರು ಹಳೆಯ ಇನ್ನೋವಾ ಕಾರ್ ಖರೀದಿಸುವ ಸಂಬಂಧ ದಿನಾಂಕ 07-01-15 ರಂದು ಸ್ನೇಹಿತ ನಾಸಿರ್ ಮತ್ತು ರಶೀದ್ ರವರ ಜೊತೆ ಮಡಿಕೇರಿಗೆ ಬಂದಾಗ ನಾಸಿರ್ ಮತ್ತು ರಶೀದ್ ರವರು ಇನ್ನೋವಾ ಕಾರಿನ ಮಾಲಿಕ ರು ಹೊರಗಡೆ ಹೋಗಿದ್ದು ನಾಳೆ ಬರುತ್ತಾ ರೆ ಎಂದು ಹೇಳಿ ನಾವೆಲ್ಲರೂ ಸ್ನೇಹಿತನ ಮನೆಯಲ್ಲಿ ತಂಗುವ ಎಂದು ಹೇಳಿ ಮಡಿಕೇರಿಯಿಂದ ಸೋಮವಾರ ಪೇಟೆ ರಸ್ತೆಯಲ್ಲಿ ಸುಮಾರು 16 ಕಿ ಮಿ ದೂ ರ ದಲ್ಲಿರುವ ಒಂದು ಮನೆಗೆ ಕರೆದುಕೊಂಡು ಹೋದಾಗ ಸಮಯ ಸುಮಾರು ರಾತ್ರಿ 8.00 ಗಂಟೆಗೆ ಸದ್ರಿ ಮನೆಯಲ್ಲಿ ಒಬ್ಬಳು ಹೆಂಗಸು ಮತ್ತು ಒಬ್ಬಳು ಹುಡುಗಿ ಇದ್ದು, ಇವರ ಜೊತೆ ಮಾತನಾಡಿಕೊಂಡಿರುವಾಗ್ಗೆ ಅಲ್ಲಿಗೆ 3 ಜನ ಪೊಲೀಸರು ಬಂದು ಇವರಿಗೆ ಮನಬಂದಂತೆ ಥಳಿಸಿ ಅನೈತಿಕ ಕೆಲಸದಲ್ಲಿ ತೊಡಗಿರುವುದಾಗಿ ಆಪಾದಿಸಿ ಕೇಸುಹಾಕುವುದಾಗಿ ಬೆದರಿಸಿ ಎಲ್ಲರನ್ನೂಬೇರೆ ಬೇರೆ ಕೋಣೆಯಲ್ಲಿ ಬಲವಂತವಾಗಿ ಕೂಡಿ ಹಾಕಿ ಬಟ್ಟೆಯನ್ನು ಬಿಚ್ಚಿಸಿ ಅಲ್ಲಿದ್ದ ಹೆಂಗಸರೊಂದಿಗೆ ಪೋಟೋ ತೆಗೆಸಿ, ಮುಸ್ತಾಫರವರ ಬಳಿ ಇದ್ದ 3 ಮೊಬೈಲ್ ಪೋನ್ ಮತ್ತು ಪರ್ಸಿನಲ್ಲಿದ್ದ 24,500 ರೂ ಹಣವನ್ನು ತೆಗೆದು ತೆಗೆದುಕೊಂದು ನಂತರ ಪುನ: ರಾತ್ರಿ 10.30 ಗಂಟೆಗೆ ಒಬ್ಬ ಪೊಲೀಸ್ ಇನ್ಸ್ ಪೆಕ್ಟ ರ್ ಸಮವಸ್ತ್ರ ದಲ್ಲಿ ಬಂದು ನಾಲ್ವ ರನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ನಿಮಗೆ ಕೇಸು ಹಾಕುವುದಿಲ್ಲ, 25 ಲಕ್ಷ ಹಣ ಕೊಡಿ ಎಂದು ಕೇಳಿದ ಮೇರೆಗೆ 4 ಲಕ್ಷ ಹಣ ಕೊಡುತ್ತೇವೆ ಎಂದು ಒಪ್ಪಿ ದಿನಾಂಕ 08-01-15 ರಂದು ಊರಿಗೆ ಹೋಗಿ ಮುಸ್ತಾಫ್ರವರು ಈ ಪೊಲೀಸರಿಗೆ ಪರಿಚಯವಿದ್ದ ಶಪೀಕ್ ರವರ ಬಳಿ 2 ಲಕ್ಷಹಣವನ್ನು ಕೊಟ್ಟಿದ್ದು, ದಿನಾಂಕ29-4-2015 ರಂದುಪತ್ರಿಕೆಯಲ್ಲಿ ನೋಡಿದಾಗ ಸುಂಠಿಕೊಪ್ಪ ಬಳಿ ನಕಲಿ ಪೊಲೀಸರ ವೇಷ ಹಾಕಿ ವಂಚಿಸಿದ್ದ ಪ್ರಕರಣವೊಂದನ್ನು ಓದಿದ್ದು, ಮೇಲ್ಕಂಡ ಘಟನೆ ನಡೆದ ಬಗ್ಗೆ ಸಂಶಯ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Tuesday, April 28, 2015
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 25-04-2015 ರಂದು ಪಿರಿಯಾಪಟ್ಟಣದ ಆವರ್ತಿ ನಿವಾಸಿ ಭರತ್ ಮತ್ತು ಸ್ನೇಹಿತರಾದ ಸುನೀಲ್ . ಪ್ರೀತಮ್ ಹಾಗೂ ಶಿವಕುಮಾರ್ ರವರೊಂದಿಗೆ ಕುಶಾಲನಗರದ ಅತಿಥಿ ಹೋಟೆಲ್ ನ ಪಕ್ಕದಲ್ಲಿರುವ ಬಾಷಾರವರ ಶಾಮಿಯಾನ ಅಂಗಡಿಯ ಪಕ್ಕದಲ್ಲಿ ಮಾತನಾಡಿಕೊಂಡಿರುವಾಗ, ಶಮೀರ್, ಹಜಾರ್ ಮತ್ತು ಕಬೀರ್ ಎಂಬವರು ಬಂದು ಹಳೆಯ ವೈಷಮ್ಯದ ಕಾರಣದಿಂದ ಭರತ್ರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟ, ಆರೋಪಿ ಬಂಧನ
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಶನಿವಾರಸಂತೆ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಬೆಟ್ದದಳ್ಳಿ ಗ್ರಾಮದಲ್ಲಿ ಯಾರೋ ವ್ಯಕ್ತಿಯೊಬ್ಬರು ಮದ್ಯವನ್ನು ಕುಡಿಯಲು ಸಾರ್ವಜನಿಕ ಸ್ಥಳದಲ್ಲಿ ಅನುವು ಮಾಡಿಕೊಟ್ಟಿರುತ್ತಾರೆ ಎಂದು ಮಾಹಿತಿ ಬಂದ ಮೇರೆಗೆ ಶನಿವಾರಸಂತೆ ಪಿಎಸ್ಐ ರವಿಕಿರಣ್ ರವರು ಪಂಚರು ಹಾಗೂ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಿದಾಗ ಬಿ.ಎಸ್.ಸರೋಜಮ್ಮ ಎಂಬ ಮಹಿಳೆಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಅನುವು ಮಾಡಿಕೊಟ್ಟಿರುವುದನ್ನು ಪತ್ತೆ ಹಚ್ಚಿ ಆರೋಪಿ ಮಹಿಳೆ ಸರೋಜಮ್ಮನವರನ್ನು ಬಂಧಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Monday, April 27, 2015
Sunday, April 26, 2015
Saturday, April 25, 2015
Friday, April 24, 2015
ಹಣ ಕಾಸಿನ ವಿಚಾರದ ಮನಸ್ತಾಪದ ಕಾರಣದಿಂದ ವ್ಯಕ್ತಿಯೊಬ್ಬನನ್ನು ಗುಂಡು ಹೊಡೆದು ಕೊಲೆ ಮಾಡಿ, ಗುಂಡು ಹೊಡೆದಾತ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ಬಳಿಯ ಕೊತ್ತನಳ್ಳಿ ಗ್ರಾಮದಲ್ಲಿ ನಡೆದಿದೆ. ಕೊತ್ತನಳ್ಳಿ ಗ್ರಾಮದ ನಿವಾಸಿ ಲೋಕೇಶ ಮತ್ತು ಅದೇ ಗ್ರಾಮದ ಅಶೋಕ ಎಂಬವರು ಸುಮಾರು 2 ವರ್ಷಗಳಿಂದ ಒಂದು ಪಿಕ್ ಅಪ್ ಜೀಪು ಇಟ್ಟುಕೊಂಡು ಮರಳು ಮತ್ತು ಮರ ವ್ಯಾಪಾರ ಮಾಡಿಕೊಂಡು ಬಂದ ಲಾಭದಲ್ಲಿ ಇಬ್ಬರು ಹಂಚಿಕೊಳ್ಳುತ್ತಿದ್ದರು . ಒಂದು ವರ್ಷದಿಂದ ಲಾಭದ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಮನಸ್ತಾಪ ಇಟ್ಟುಕೊಂಡು ಇಬ್ಬರಿಗೂ ಮಾತುಕತೆ ಇರಲಿಲ್ಲವೆನ್ನಲಾಗಿದ್ದು, . ದಿನಾಂಕ 22/04/2015ರಂದು ರಾತ್ರಿ ಲೋಕೇಶನು ಮನೆಯಲ್ಲಿ ಮೊಬೈಲ್ ನಲ್ಲಿ ನೆಟ್ ವರ್ಕ್ ಸಿಗುತ್ತಿಲ್ಲ ಎಂಬ ಕಾರಣದಿಂದ ಹೊರಗಡೆ ಹೋಗಿ ಮಾತನಾಡಿ ಬರುವುದಾಗಿ ತಾಯಿ ದೇವಕಿಗೆ ಹೇಳಿ ಎಂದು ಮನೆಯ ಮುಂದಿನ ರಸ್ತೆಗೆ ಹೋಗಿದ್ದು, ಸ್ವಲ್ಪ ಹೊತ್ತಿನ ನಂತರ ಅಶೋಕರವರ ಮನೆಯ ಹತ್ತಿರ ಗಲಾಟೆ ಶಬ್ದ ಕೇಳಿ ಅಲ್ಲಿಗೆ ಲೋಕೇಶನ ತಾಯಿ ದೇವಕಿ ಹೋಗುತ್ತಿರುವಾಗ ಅಶೋಕನ ಕೈಯಲ್ಲಿ ಕೋವಿ ಇದ್ದು, ದೇವಕಿಯವರು ಮಗನ ಹತ್ತಿರ ತಲುಪುವಷ್ಟರಲ್ಲಿ ಅಶೋಕನು ಲೋಕೇಶನಿಗೆ ಗುಂಡು ಹಾರಿಸಿದ್ದು, ಲೋಕೇಶ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿರುವುದಾಗಿದೆ. ನಂತರ ಅಶೋಕನು ಕೋವಿ ಹಿಡಿದುಕೊಂಡು ಅವರ ಮನೆ ಕಡೆ ಹೋದವನು ಸ್ವಲ್ಪ ಸಮಯದಲ್ಲೇ ಅವನು ಕೂಡ ಗುಂಡು ಹೊಡೆದುಕೊಂಡು ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹೊಳೆಯಲ್ಲಿ ಅಪರಿಚಿತ ಶವ ಪತ್ತೆ
ಅಪರಿಚಿತ ಶವವೊಂದು ವಿರಾಜಪೇಟೆ ಬಳಿಯ ಕದನೂರು ಹೊಳೆಯಲ್ಲಿ ಪತ್ತೆಯಾಗಿದೆ. ದಿನಾಂಕ 23-04-2015 ರಂದು ಕದನೂರು ಪಂಚಾಯಿತಿ ಸದಸ್ಯ ಕೆ.ಟಿ.ಚಂಗಪ್ಪ ಎಂಬವರು ಕದನೂರು ಹೊಳೆಯ ಸೇತುವೆ ಬಳಿ ಕೆಲಸದ ನಿಮಿತ್ತ ಇರುವಾಗ ಅಲ್ಲಿಯ ಗ್ರಾಮಸ್ಥರು ಹೊಳೆಯಲ್ಲಿ ಒಂದು ಶವವು ನೀರಿನಲ್ಲಿ ಮುಳುಗಿ ಕಾಲುಗಳು ಕಾಣುತ್ತಿರುವುದಾಗಿ ಮಾತನಾಡಿಕೊಂಡಿರುವುದನ್ನು ತಿಳಿದು ಕದನೂರು ಸೇತುವೆಯ ಮುಂದಿನ ನರ್ಸರಿಯ ಪಕ್ಕದ ಹೊಳೆಮಾಡಿಯ ಬಳಿ ಹೋಗಿ ನೋಡಲಾಗಿ ಹೊಳೆಯ ಮಧ್ಯ ಭಾಗದಲ್ಲಿ ಒಂದು ಅಪರಿಚಿತ ಶವವು ನೀರಿನಲ್ಲಿ ಮುಳುಗಿ ಎರಡು ಕಾಲಿನ ಪಾದಗಳು ನೀರಿನಲ್ಲಿ ಕಾಣುತ್ತಿದ್ದು , ನದಿಯ ದಡದಲ್ಲಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ಕ್ ಚಪ್ಪಲಿ ಹಾಗೂ ನೀರಿನಲ್ಲಿ ಒಂದು ಕಪ್ಪು ಬಣ್ಣದ ಚಪ್ಪಲಿ ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವೃದ್ದ ಮಹಿಳೆ ಕಾಣೆ.
ವೃದ್ದ ಮಹಿಳೆಯೊಬ್ಬರು ಮನೆಯಿಂದ ಕಾಣೆಯಾದ ಘಟನೆ ಸೋಮವಾರಪೇಟೆ ಬಳಿಯ ದೊಡ್ಡ ಮೆಳ್ತೆ ಗ್ರಾಮದಲ್ಲಿ ನಡೆದಿದೆ. ದೊಡ್ಡ ಮೆಳ್ತೆ ಗ್ರಾಮದ ನಿವಾಸಿ ಗಿರಿಜ ಎಂಬವರ ತಾಯಿ 60ವರ್ಷ ಪ್ರಾಯದ ಸುಶೀಲಮ್ಮ ಎಂಬವರು ದಿನಾಂ :20/04/2015 ರಂದು ಮನೆಯಿಂದ ಹೊರಗೆ ಹೋದವರು ವಾಪಸ್ಸು ಮನೆಗೆ ಬಾರದೆ ಎಲ್ಲಾ ಕಡೆ ಹುಡುಕಿದರೂ ಪತ್ತೆ ಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮನುಷ್ಯ ಕಾಣೆ ಪ್ರಕರಣ
ನಗರಕ್ಕೆ ಬಂದವ್ಯಕ್ತಿಯೊಬ್ಬ ಮನೆಗೆ ಹಿಂದಿರುಗದೆ ಕಾಣೆಯಾಧ ಘಟನೆ ಸೋಮವಾರಪೇಟೆ ಬಳಿಯ ಕುಂದಳ್ಳಿ ಗ್ರಾಮದಲ್ಲಿ ನಡೆದಿದೆ. ಕೂಮದಳ್ಳಿ ಗ್ರಾಮದ ನಿವಾಸಿ ಕೆ.ಪಿ. ಶಾಂತಪ್ಪ ಎಂಬವರ ತಮ್ಮನಾದ ಕೆ.ಪಿ. ದೇವರಾಜು ಎಂಬವರು ದಿನಾಂಕ 20/04/2015 ರಂದು ಸೋಮವಾರಪೇಟೆ ಪಟ್ಟಣಕ್ಕೆ ಬಂದವರು ವಾಪಸ್ಸು ಮನೆಗೆ ಬಾರದೆ ಮೊಬೈಲ್ ಸಂಪರ್ಕಕ್ಕು ಸಿಕ್ಕದೆ ಎಲ್ಲಾ ಕಡೆ ಹುಡುಕಿದರೂ ಪತ್ತೆ ಯಾಗದೆ ಇರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಾರಿಗೆ ಬಸ್ಸು ಡಿಕ್ಕಿ; ಇಬ್ಬರಿಗೆ ಗಾಯ
ಕಾರಿಗೆ ಬಸ್ಸೊಂದು ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಸೋಮವಾರಪೇಟೆ ಬಳಿಯ ಐಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 23.04.15 ರಂದು ಕಿರಗಂದೂರು ನಿವಾಶಿ ಮದನ್ ಎಂಬವರು ಅವರ ಕೆಎ 12 ಪಿ 9841 ರ ಕಾರಿನಲ್ಲಿ ತಂದೆ ಮುತ್ತಪ್ಪ, ರಂಜಿತಾ ಹಾಗೂ ಇತರರನ್ನು ಕೂರಿಸಿಕೊಂಡು ಐಗೂರು ಗ್ರಾಮದ ಹತ್ತಿರ ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ 19 ಎ.ಡಿ 2235 ರ ಎಸ್.ಜಿ.ಆರ್.ಎಂ.ಎಸ್ ಬಸ್ಸಿನ ಚಾಲಕ ಲಿಂಗರಾಜುರವರು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮದನ್ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮದನ್ ಮತ್ತು ರಂಜಿತಾರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Thursday, April 23, 2015
Wednesday, April 22, 2015
ಶಾಲೆಯ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನ:
ಸರಕಾರಿ ಪ್ರಾಥಮಿಕ ಶಾಲೆಯೊಂದರ ಬೀಗವನ್ನು ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ವಿರಾಜಪೇಟೆ ತಾಲೋಕಿನ ಕಾಕೋಟುಪರಂಬುವಿನಲ್ಲಿ ನಡೆದಿದೆ. ದಿನಾಂಕ 19-1-2015 ರಿಂದ 21-4-2015ರ ಸಂಜೆ 5-30 ಗಂಟೆಯ ಒಳಗೆ ವಿರಾಜಪೇಟೆ ತಾಲೋಕು, ಕಾಕೋಟುಪರಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ ಶಾಲಾ ಕಡತಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿದ್ದು ಅಲ್ಲದೆ ಮುಖ್ಯೋಪಾದ್ಯಾಯರ ಕೊಠಡಿಯ ಬೀವನ್ನು ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ಭಾರತಿ ರವರು ನೀಡಿದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೋಟಾರ್ ಸೈಕಲ್ಗೆ ವ್ಯಾನ್ ಡಿಕ್ಕಿ, ಇಬ್ಬರಿಗೆಗಾಯ:
ದಿನಾಂಕ 16-4-2015 ರಂದು ಹಾಸನದ ಮಾದ್ನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಕುಮಾರ ಹಾಗು ಶಿವ ಎಂಬುವರು ಮೋಟಾರ್ ಸೈಕಲ್ನಲ್ಲಿ ಕೊಡ್ಲಿಪೇಟೆ ಕಡೆಯಿಂದ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಟಾಟಾ 207 ವ್ಯಾನನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಹಾಗು ಹಿಂಬದಿ ಸವಾರ ಗಾಯಗೊಂಡಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
Tuesday, April 21, 2015
ಮೋಟಾರ್ ಸೈಕಲ್ಗೆ ಕೆಎಸ್ಆರ್ಟಿಸಿ ಬಸ್ಸು ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ವಿರಾಜಪೇಟೆ ಬಳಿಯ ಬಿಟ್ಟಂಗಾಲದಲ್ಲಿ ನಡೆದಿದೆ. ದಿನಾಂಕ 20-4-2015 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ಸುನಿಲ್ ಹಾಗು ದಸ್ತು ಎಂಬುವವರು ಕೆಎ.12.ಜೆ.292ರ ಹಿರೋ ಹೋಂಡಾ ಬೈಕ್ ನಲ್ಲಿ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಬಿಟ್ಟಂಗಾಲದ ಯಜ್ಞ ಟವರಿನ್ ನ ಮುಂದೆ ಸಾರ್ವಜನಿಕ ರಸ್ತೆಯ ಬಳಿ ತಲುಪುವಾಗ್ಗೆ, ಹಿಂಬದಿಯಿಂದ ಗೋಣಿಕೊಪ್ಪದಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದ ಕೆಎ.01.ಎಫ್.0088ರ ಬಸ್ಸಿನ ಚಾಲಕನು ಸದರಿ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆ ಯಿಂದ ಚಾಲನೆ ಮಾಡಿಕೊಂಡು ಬಂದು ಸುನೀಲ್ ಮತ್ತು ದಸ್ತುರವರು ಹೋಗುತ್ತಿದ್ದ ಮೋಟಾರ್ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಸುನೀಲ್ ಮತ್ತು ದಸ್ತು ರವರು ರಸ್ತೆಗೆ ಬಿದ್ದು ಗಾಯಗಳಾಗಿದ್ದು ಈ ಸಂಬಂಧ ವಿರಾಜಪೇಟೆಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಮತ್ತು ಕಾರಿಗೆ ಲಾರಿ ಡಿಕ್ಕಿ, ವಾಹನಗಳು ಜಖಂ:
ಫಿರ್ಯಾದಿ ಸುಂಟಿಕೊಪ್ಪ ನಿವಾಸಿಯಾದ ಗಾಸ್ಟರ್ ಡಿಸಿಲ್ವಾರವರು ತನ್ನ ಸ್ನೇಹಿತ ಅಶೋಕರವರ ಹೋಂಡಾ ಡಿಯಾ ಸಂಖ್ಯೆ ಕೆಎ-12-ಎಲ್-6814 ರಲ್ಲಿ ಸ್ವಂತ ಕೆಲಸಕ್ಕಾಗಿ ಮಡಿಕೇರಿಗೆ ಬಂದು ಕೆಲಸ ಮುಗಿಸಿ ವಾಪಾಸ್ಸು ಸುಂಟಿಕೊಪ್ಪಕ್ಕೆ ಹೋಗುತ್ತಿರುವಾಗ ಸಮಯ 6-15 ಪಿ ಎಂ ಗೆ ಬೋಯಿಕೇರಿ ತಲುಪಿದಾಗ ಪೋಸ್ಟ್ ಆಫೀಸಿನ ಬಳಿ ಸ್ನೇಹಿತ ಸಿದ್ದಾರ್ಥನನ್ನು ಕಂಡು ಬೈಕು ನಿಲ್ಲಿಸಿ ಬೈಕಿನಿಂದ ಇಳಿದು ಮಾತನಾಡಿಕೊಂಡಿರುವಾಗ್ಗೆ ಮಡಿಕೇರಿ ಕಡೆಯಿಂದ ಕೆಎ-01-4893 ರ ಲಾರಿಯನ್ನು ಅದರ ಚಾಲಕ ಶಂಕರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಪಿರ್ಯಾದಿಯವರು ನಿಲ್ಲಿಸಿದ್ದ ಬೈಕಿಗೆ ಡಿಕ್ಕಿ ಪಡಿಸಿ ಜಖಂಪಡಿಸಿ ಮುಂದು ಹೋಗಿ ಕೆಎ-03-ಎಂವಿ-6349 ರ ಕಾರಿಗೆ ಡಿಕ್ಕಿ ಪಡಿಸಿ ಜಖಂ ಪಡಿಸಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅಪ್ರಾತ್ತೆ ಹುಡುಗಿ ಕಾಣೆ:
ಸುಂಟಿಕೊಪ್ಪ ನಗರದಲ್ಲಿರುವ ನರಸಿಂಹ ಎಂಬವರ ಅಂಗಡಿಯಲ್ಲಿ 16 ವರ್ಷ ಪ್ರಾಯ ದ ನಂದಿನಿ ರಾಡ್ರಿಗಸ್ ಎಂಬಾಕೆಯು ಸೇಲ್ಸ್ ಗರ್ಲ ಅಗಿ ಕೆಲಸ ಮಾಡಿಕೊಂಡಿದ್ದವಳು ದಿನಾಂಕ 12.04.15 ರಂದು ಬೆಳಿಗ್ಗೆ ಅಂಗಡಿಗೆ ತನ್ನ ತಂಗಿ ರೆನಿಶಾ ರಾಡ್ರಿಗಸ್ ಎಂಬಾಕೆಯನ್ನು ಸಹ ಕರೆದುಕೊಂಡು ಹೋಗಿದ್ದು, ಮದ್ಯಾಹ್ನ 1.00 ಗಂಟೆಗೆ ಮನೆಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆಂದು ತಂಗಿ ರೆನಿಶಾ ರಾಡ್ರಿಗಸ್ಳಿಗೆ ಹೇಳಿ ಅಂಗಡಿಯಿಂದ ಹೋದವಳು ವಾಪಾಸ್ಸು ಅಂಗಡಿಗೂ ಬಾರದೆ ಮನೆಗೂ ಹೋಗದೆ ಕಾಣೆಯಾಗಿದ್ದು ನಂತರ ಆಕೆಯನ್ನು ನೆಂಟರಿಷ್ಟರ ಮನೆಗಳಲ್ಲಿ ಹಾಗೂ ಅಕೆಯ ಸ್ನೇಹಿತ ಮನೆ ಎಲ್ಲಾ ಕಡೆ ಹುಡುಕಿದಲ್ಲೂ ಎಲ್ಲಿಯೂ ಪತ್ತೆಯಾಗದೆ ಇದ್ದು, ಫಿರ್ಯಾದಿ ಸಿರಿಲಾ ರಾಡ್ರಿಗಸ್ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೆಂಗಸು ಕಾಣೆ ಪ್ರಕರಣ ದಾಖಲು:
ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಎಂ.ಚೆಂಬು ಗ್ರಾಮದಲ್ಲಿ ವಾಸವಾಗಿರುವ ಫಿರ್ಯಾದಿ ಕೆ. ಕುಶಾಲಪ್ಪ ಗೌಡ ಎಂಬುವವರ ಮಗಳು ದಯಾಲಕ್ಷ್ಮೀಯ ಎಂಬಾಕೆಯನ್ನು 10 ವರ್ಷದ ಹಿಂದೆ ಡಿ. ಚೆಂಬು ಗ್ರಾಮದ ಪ್ರದೀಪ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದು, ಈಕೆಗೆ ಎರಡು ಹೆಣ್ಣು ಮಕ್ಕಳು ಇದ್ದು ಈಗ ಒಂದು ವರ್ಷದಿಂದ ಅಳಿಯ ಪ್ರದೀಪ ಹಾಗೂ ಫಿರ್ಯಾದಿಯವರ ಮಗಳು ದಯಾಲಕ್ಷ್ಮಿಗೆ ಅನ್ಯೋನ್ಯತೆ ಇಲ್ಲದೇ ಇದ್ದು, ಈಗ ಎರಡುವರೆ ತಿಂಗಳ ಹಿಂದೆ ಎರಡು ಮಕ್ಕಳನ್ನು ಫಿರ್ಯಾದಿಯವರ ಮನೆಯಲ್ಲಿ ಬಿಟ್ಟು ಬೆಂಗಳೂರಿಗೆ ಕೆಲಸಕ್ಕೆಂದು ಹೋದವಳು ಮಾರ್ಚ್ 12 ನೇ ತಾರೀಖಿನಂದು ದೂರವಾಣಿ ಕರೆ ಮಾಡಿ ಯಲಹಂಕದಲ್ಲಿ ಎಲ್ಲಿಯೋ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ನಂತರದ ದಿನಗಳಿಂದ ಆಕೆಯು ಕಾಣೆಯಾಗಿರುತ್ತಾಳೆಂದು ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆ, ಪ್ರಕರಣ ದಾಖಲು:
ತೋಟದ ಕೆಲಸಕ್ಕೆಂದು ಮನೆಯಿಂದ ಹೋದ ಹುಡುಗನೊಬ್ಬ ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ವಿರಾಜಪೇಟೆ ತಾಲೋಕು ಒಂಟಿಯಂಗಡಿಯಲ್ಲಿ ನಡೆದಿದೆ. ಒಂಟಿಯಂಗಡಿಯಲ್ಲಿ ವಾಸವಾಗಿರುವ ಶ್ರೀಮತಿ ಲಕ್ಷ್ಮಿ ಎಂಬುವರ ಮಗ ಮಂಜು ಎಂಬಾತ ದಿನಾಂಕ 31-3-2015 ರಂದು ತೋಟಕ್ಕೆ ಕೆಲಸಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ತನ್ನ ಮಗ ಮಂಜುವನ್ನು ಯಾರೋ ಅಪಹರಣ ಮಾಡಿರುವ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮಾರುತಿ ಓಮ್ನಿಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:
ದಿನಾಂಕ 20-4-2014 ರಂದು ಸೋಮವಾರಪೇಟೆ ತಾಲೋಕು ಗರಗಂದೂರು ಗ್ರಾಮದ ನಿವಾಸಿ ಜೆ.ಇ. ದೇವಯ್ಯ ಎಂಬುವರು ತಮ್ಮ ಬಾಪ್ತು ಓಮ್ನಿ ವ್ಯಾನಿನಲ್ಲಿ ಉತ್ತಯ್ಯ ಎಂಬುವವರೊಂದಿಗೆ ಮಾದಾಪುರ ಪೆಟ್ರೋಲ್ಬಂಕ್ ಬಳಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಅಬ್ದುಲ್ಲಾ ಎಂಬ ವ್ಯಕ್ತಿ ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ಅಬ್ದುಲ್ಲಾ, ಜೆ.ಇ. ದೇವಯ್ಯ ನವರು ಗಾಯಗೊಂಡು ಅಪಘಾತಕ್ಕೀಡಾದ ಕಾರು ಮತ್ತು ವ್ಯಾನ್ ಜಖಂ ಗೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ, ಗಾಯಗೊಂಡ ಪಾದಚಾರಿ:
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಹಿಂಬದಿಯಿಂದ ಬೈಕೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಸೋಮವಾರಪೇಟೆ ನಗರದ ಗಣಪತಿ ದೇವಾಲಯದ ಬಳಿ ನಡೆದಿದೆ. ದಿನಾಂಕ 20-4-2015 ರಂದು 14-00 ಗಂಟೆಯ ಸಮಯದಲ್ಲಿ ಫಿರ್ಯಾದಿ ಎಂ. ಶಿವ , ಕಾನ್ವೆಂಟ್ ಬಡಾವಣೆ, ಇವರು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಹಿಂದದಿಯಿಂದ ರವಿ ಎಂಬವರು ಮೋಟಾರ್ ಸೈಕಲ್ ಸಂಖ್ಯೆ ಕೆಎ-12 ಹೆಚ್-ಹೆಚ್-6008 ರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಎಂ.ಶಿವರವರು ಗಾಯಗೊಂಡಿದ್ದು, ಸೋಮವಾರಪೇಟೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Monday, April 20, 2015
Saturday, April 18, 2015
ಹೊಳೆಯ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕಕ್ಕಬೆ-ಕುಂಜಿಲ ಗ್ರಾಮದಿಂದ ವರದಿಯಾಗಿದೆ. ನಾಪೋಕ್ಲು ಠಾಣಾ ಸರಹದ್ದಿನ ಕುಂಜಿಲ ಗ್ರಾಮಪಂಚಾಯ್ತಿಯ ಕರವಸೂಲಿಗಾರರಾಗಿ ಕೆಲಸ ನಿರ್ವಹಿಸುತ್ತಿರುವ ಎ.ಎಂ. ಹರೀಶ್ ಎಂಬವರಿಗೆ ಕಕ್ಕಬೆ ಸೇತುವೆಯ ಹೊಳೆ ನೀರಿನಲ್ಲಿ ತೇಲುತ್ತಿದ್ದ ಅಪರಿಚಿತ ಅಂದಾಜು 45 ವರ್ಷ ಪ್ರಾಯದ ಪುರುಷ ಮೃತದೇಹ ಕಂಡುಬಂದಿದ್ದು, ಈ ವಿಚಾರವನ್ನು ನಾಪೋಕ್ಲು ಪೊಲೀಸ್ ಠಾಣೆಗೆ ತಿಳಿಸಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆಸ್ತಿಗಾಗಿ ಕಿರುಕುಳ ಹಲ್ಲೆ:
ವಿರಾಜಪೇಟೆ ತಾಲೋಕು, ಕಡಂಗಮರೂರು ಗ್ರಾಮದ ನಿವಾಸಿ ಫಿರ್ಯಾದಿ ಟಿ.ಎನ್. ಮಂಜುಳ ಎಂಬುವರ ತಂದೆ ಟಿ.ಕೆ ನಟರಾಜ್ ಮತ್ತು ತಾಯಿಯವರು ಅಜ್ಜಿ ಮನೆಯಾದ ತುಳಸಿಯಮ್ಮ ರವರ ಮನೆಯಲ್ಲಿ ವಾಸವಾಗಿದ್ದು, ತುಳಸಿಯಮ್ಮ ರವರನ್ನು ನೋಡಿಕೊಂಡಿರುವುದಾಗಿದೆ. ಅವರ ಸಂಬಂಧಿಗಳಾದ ಮಾವನ ಮಗನಾದ ರಾಜ, ಅಳಿಯ ಮಣಿ, ಮಗಳು ಲತಾ, ಬೇಬಿ ಹಾಗೂ ಅತ್ತೆಯಾದ ವೀರಮ್ಮ, ರವರುಗಳು ಆಸ್ತಿಗೋಸ್ಕರ ತುಳಸಿಯಮ್ಮ ರವರನ್ನು ನಿಂದಿಸುವುದು, ಹಾಗೂ ತಾಯಿ ಯನ್ನು ನೋಡಿಕೊಳ್ಳುತ್ತಿರುವ ಈಶ್ವರಿ ಹಾಗೂ ಕುಟುಂಬದವರನ್ನು ಮನೆ ಬಿಟ್ಟು ತೆರಳುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು ದಿನಾಂಕ: 15-04-15 ರಂದು ರಾತ್ರಿ 7-00 ಗಂಟೆಗೆ ಮೇಲ್ಕಾಣಿಸಿದರು ಏಕಾಏಕಿ ಮನೆಗೆ ನುಗ್ಗಿ ಟಿ.ಕೆ. ನಟರಾಜ ಹಾಗು ಅವರ ಪತ್ನಿ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಮನೆ ಬಿಟ್ಟುಹೋಗದೇ ಇದ್ದಲ್ಲಿ ಎಲ್ಲರನ್ನು ಕಡಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮನೆ ರಿಪೇರಿ ವಿಚಾರ, ವ್ಯಕ್ತಿಗೆ ಕೊಲೆ ಬೆದರಿಕೆ:
ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಡಂಗಮರೂರು ಗ್ರಾಮದಲ್ಲಿ ಫಿರ್ಯಾದಿ ದೊರೆಸ್ವಾಮಿ ಎಂಬುವರ ಪತ್ನಿ ವೀರಮ್ಮ ಹಾಗು ಈಶ್ವರ, ಧರ್ಮ, ಮಂಜುಳ ರವರುಗಳ ನಡುವೆ ಮನೆಗೆ ಶೀಟುಗಳನ್ನು ಹಾಕುವವಿಚಾರದಲ್ಲಿ ಜಗಳವಾಗಿ ಈಶ್ವರ, ಧರ್ಮ, ಮಂಜುಳರವರು ಸೇರಿ ವೀರಮ್ಮನವರನ್ನು ಬೈದು ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ಫಿರ್ಯಾದಿ ವೀರಮ್ಮನಗರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್ಗೆ ಕಾರು ಡಿಕ್ಕಿ ಗಾಯಗೊಂಡ ಸವಾರ:
ಕಾರು ಬೈಕ್ಗೆ ಡಿಕ್ಕಿ, ಸವಾರರಿಬ್ಬರಿಗೆ ಗಾಯ:
ಹಾಸನ ಜಿಲ್ಲೆಯ ಹೊಳೆನರಸಿಪುರ ಗ್ರಾಮದ ನಿವಾಸಿ ಮಂಜುನಾಥ ಎಂಬುವರು ತಮ್ಮ ಬಾವ ಸಿದ್ದಲಿಂಗರಾಜು ರವರೊಂದಿಗೆ ಮೋಟಾರ್ ಸೈಕಲ್ನಲ್ಲಿ ದಿನಾಂಕ 17-4-2015 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಶುಂಠಿ ಗ್ರಾಮದ ನಿವಾಸಿ ಕೀರ್ತಿ ಎಂಬುವರು ತಮ್ಮ ಕಾರನ್ನು ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲಿನಲ್ಲಿ ಪ್ರಯಾಣಿಸುತ್ತಿದ್ದ ಮಂಜುನಾಥ ಹಾಗು ಸಿದ್ದಲಿಂಗರಾಜುರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Friday, April 17, 2015
Thursday, April 16, 2015
ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಸೇರಿದ ಹೊದ್ದೂರು ಪೈಸಾರಿಯಲ್ಲಿ ವಾಸವಾಗಿರುವ ಹೆಚ್ ಸಿ ವಿಜಯ ಎಂಬುವವರ ಮಗಳಾದ ನಿವೇಧಿತ ಎಂಬ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಚೆಂಬೆಬೆಳ್ಳೂರು ಗ್ರಾಮದ ಆಕೆಯ ದೂರದ ಸಂಬಂದಿ ಮಂಜು ಎಂಬುವವರು ಆಗಿಂದಾಗ್ಗೆ ಮನೆಗೆ ಬರುತ್ತಿದ್ದು, ಸಲುಗೆಯಿಂದ ಇದ್ದು ಮದುವೆಯಾಗುತ್ತೇನೆಂದು ನಂಬಿಸಿ ತನ್ನ ಮನೆಯಲ್ಲೆ ಸುಮಾರು 9 ತಿಂಗಳಿನಿಂದ ಅತ್ಯಾಚಾರ ಮಾಡಿ ಮಗುವಿನ ಜನನಕ್ಕೆ ಕಾರಣನಾಗಿದ್ದು ಈ ಸಂಬಂಧ ಶ್ರೀಮತಿ ಬಿ.ಎನ್. ಪಾರ್ವತಿ, ಶಿಶು ಅಭಿವೃದ್ದಿ ಅಧಿಕಾರಿ, ಮಡಿಕೇರಿರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಅಪ್ರಾಪ್ತ ವಯಸ್ಸಿನ ಹುಡುಗಿಕಾಣೆ, ಅಪಹರಣ ಶಂಕೆ:
ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಈರಳವಳಮುಡಿ ಗ್ರಾಮದಲ್ಲಿ ನೆಲೆಸಿರುವ ಗಾಯತ್ರಿಸರದಾರ್ ಎಂಬುವರ 16 ವರ್ಷ ಪ್ರಾಯದ ಶೀಲಸರ್ದಾರ್ಳು ಚೆಟ್ಟಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದು ದಿನಾಂಕ 14-04-2015 ರಂದು ಆಕೆಯು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ನಂತರ ತನ್ನ ತಂದೆ-ತಾಯಿಯವರು ಕೆಲಸ ಮಾಡುತ್ತಿದ್ದ ಜಾಗಕ್ಕೆ ಹೋಗಿಬರುವುದಾಗಿ ತಿಳಿಸಿ ಮನೆಯಿಂದ ಹೋದವಳು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಈಕೆಯನ್ನು ಯಾರೋ ಅಪಹರಿಸಿರುವ ಶಂಕೆ ಇರುವುದಾಗಿ ನೀಡಿರುವ ದೂರಿನ ಮೇರೆಗೆಮಡಿಕೇರಿಗ್ರಾಮಾಂತರಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
Wednesday, April 15, 2015
ಅಪ್ರಾಪ್ತ ಹುಡುಗಿಯನ್ನು ಯುವಕರಿಬ್ಬರು ಅಪಹರಿಸಿ ಅತ್ಯಾಚಾರ ವೆಸಗಿದ ಘಟನೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಳುಗೋಡು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಸುಳುಗೋಡು ಗ್ರಾಮದ ನಿವಾಸಿ ಶ್ರೀಮತಿ ಭಾಗ್ಯವತಿ ಎಂಬುವರ 14 ವರ್ಷ ಪ್ರಾಯದ ಮಗಳಾದ ಗೌರಮ್ಮಎಂಬಾಕೆ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ 18-3-2015 ರಂದು ಪರೀಕ್ಷೆಯ ತಯಾರಿಗಾಗಿ ಮನೆಯಿಂದ ಹೋಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಪೊನ್ನಂಪೇಟೆ ಠಾಣೆಯಲ್ಲಿ ಹುಡುಗಿ ಕಾಣೆ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡ ಪೊಲೀಸರು ಸದರಿ ಗೌರಮ್ಮಳನ್ನು ಬೆಂಗಳೂರಿನ ಕುಂಬಳಗೋಡಿನಲ್ಲಿ ಪತ್ತೆ ಹಚ್ಚಿದ್ದು, ಸದರಿಯಾಕೆಯನ್ನು ಧನುಗಾಲ ಗ್ರಾಮದ ನಿವಾಸಿ ಎ.ಎ. ಸಂಷೀರ್ ಹಾಗು ಕೇರಳ ಮೂಲಕ ವ್ಯಕ್ತಿ ಕೆ.ಪಿ. ಅಜಯ್, ಎಂಬುವರು ಅಪಹರಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಹಣದ ವಿಚಾರ, ವ್ಯಕ್ತಿಯ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ:
ಕೊಟ್ಟ ಸಾಲವನ್ನು ಹಿಂತಿರುಗಿಸಿ ಕೊಡುವಂತೆ ಕೇಳಿದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಬ್ಯಾಟ್ನಿಂದ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಹತ್ತಿರದ ಪಾಲಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ: 14-04-15ರಂದು ಸಮಯ ಸಂಜೆ 6-00ಗಂಟೆಗೆ ಪಾಲಂಗಾಲ ಗ್ರಾಮದ ಪೂಣಚ್ಚ ಎಂಬುವರ ಮಗ ಎನ್.ಆರ್. ದೀಕ್ಷಿತ್ರವರು ಅದೇ ಗ್ರಾಮದ ಕೋಲೆಯಂಡ ಮಿಟ್ಟುರವರ ಮಗ ಅಭಿನ್ ರವರಿಗೆ ಎರಡು ತಿಂಗಳ ಹಿಂದೆ ರೂ. 8000/- ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿದ್ದು, ಅದನ್ನು ಮರಳಿ ಕೊಡುವಂತೆ ಕೇಳಿದ ಕಾರಣಕ್ಕೆ ಅಭಿನ್ ತಾನು ಹಣ ಕೊಡುವುದಿಲ್ಲ ಎಂದು ಹೇಳಿ ಆತನ ಕೈಯಲ್ಲಿದ್ದ ಕ್ರಿಕೇಟ್ ಬ್ಯಾಟ್ ನಿಂದ ದೀಕ್ಷಿತ್ರವರ ಬಲ ಕಿವಿಯ ಹತ್ತಿರ, ತಲೆಗೆ ಹಾಗೂ ಎಡದ ಕೈಗೆ ಹೊಡೆದು ನೋವುಪಡಿಸಿ ರುವುದಲ್ಲದೆ ಇನ್ನೊಂದು ಸಾರಿ ಹಣ ಕೇಳಿದರೆ ನಿನ್ನನ್ನು ಮುಗಿಸುತ್ತೇನೆಂದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಡುಗೆ ಕೆಲಸ ಮಾಡುತ್ತಿದ್ದ ವೇಳೆ ಸೀರೆಗೆ ಬೆಂಕಿ ಹತ್ತಿಕೊಂಡು ಗಂಭೀರ ಗಾಯಗೊಂಡ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಪಣಿಎರವರ ಜಾನಿ ಎಂಬುವರ ತಾಯಿ ಮಾರೆ ಎಂಬುವರು ದಿನಾಂಕ 12-4-2015 ರಂದು ರಾತ್ರಿತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಸಂದರ್ಭ ಆಕೆಯ ಸೀರಿಗೆ ಆಕಸ್ಮಿಕ ಬೆಂಕಿ ಹತ್ತಿಕೊಂಡ ಪರಿಣಾಮ ಗಂಭೀರ ಗಾಯಗೊಂಡು, ಚಿಕಿತ್ಸೆ ಸಂಬಂಧ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 14-4-2015 ರಂದು ಆಕೆ ಮೃತಪಟ್ಟಿದ್ದು, ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾಡಾನೆ ದಾಳಿ ವ್ಯಕ್ತಿಯ ದುರ್ಮರಣ:
ಮನೆಗೆ ಹಿಂತಿರುಗುತ್ತಿರುವಾಗ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಜಿಲ್ಲೆಯ ಪಾಲಿಬೆಟ್ಟದಲ್ಲಿ ನಡೆದಿದೆ. ಬಿಬಿಟಿಸಿ ಕಾಫಿ ತೋಟದ ಕಾರ್ಮಿಕ ಬಜಾರ್ ಬಹುದ್ದೂರ್ ಎಂಬ ವ್ಯಕ್ತಿ ದಿನಾಂಕ 13-4-2015 ರಂದು ಸಂಜೆ ಸಿದ್ದಾಪುರದಿಂದ ಪಾಲಿಬೆಟ್ಟಕ್ಕೆ ತಮ್ಮ ವಾಸದ ಮನೆಯ ಕಡೆಗೆ ಹೋಗುತ್ತಿರುವಾಗ ಕಾಡಾನೆಯೊಂದು ಅವರ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ಸಾವನಪ್ಪಿದ್ದು, ಸಿದ್ದಾಪುರ
Tuesday, April 14, 2015
ವ್ಯಕ್ತಿಯೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಪ್ರಕರಣ ಗೋಣಿಕೊಪ್ಪ ಬಳಿಯ ಕುಟ್ಟಂದಿ ಗ್ರಾಮದಲ್ಲಿ ನಡೆದಿದೆ. ಕುಟ್ಟಂದಿ ಗ್ರಾಮದ ನಿವಾಸಿ ಅಪ್ಪಂಡೇರಂಡ ಮೇದಪ್ಪ ಎಂಬವರ ಲೈನು ಮನೆಯಲ್ಲಿ ಅಂದಾಜು 60 ವರ್ಷ ಪ್ರಾಯದ ಜಾಣಮರಿ ಎಂಬಾತ ಕೆಲವು ವರ್ಷಗಳಿಂದ ಒಬ್ಬಂಟಿಗನಾಗಿ ವಾಸವಿದ್ದು ಕೂಲಿಕೆಲಸ ಮಾಡಿಕೊಂಡಿದ್ದರು. ಇನ್ನೊಂದು ಅಂಕಣದಲ್ಲಿ ಮಾದೇವಿ ಎಂಬ ಹೆಂಗಸು ವಾಸವಿದ್ದು ಈಕೆಯು ಈಗ್ಗೆ 10 ದಿವಸಗಳ ಹಿಂದೆ ಹೆಚ್.ಡಿ ಕೋಟೆ ತನ್ನ ಊರಿಗೆ ಹೋಗಿದ್ದು ಜಾಣ ಮರಿ ಒಬ್ಬನೇ ಇದ್ದನೆನ್ನಲಾಗಿದೆ. ದಿನಾಂಕ 13/04/2015 ರಂದು ಮದ್ಯಾಹ್ನ ಮಾದೇವಿಯು ತನ್ನ ಸಂಬಂಧಿಕರೊಂದಿಗೆ ಮನೆಗೆ ಬಂದು ನೋಡಿದಾಗ ಜಾಣ ಮರಿ ಲೈನಿನಲ್ಲಿ ಕೊಲೆಯಾಗಿರುವುದಾಗಿ ಕಂಡು ಬಂದಿದ್ದು ವಿಷಯವನ್ನು ಮೇದಪ್ಪನವರಿಗೆ ತಿಳಿಸಿದ ಮೇರೆ ಮೇದಪ್ಪನವರು ಜಾಣ ಮರಿ ವಾಸವಿದ್ದ ಲೈನು ಮನೆಗೆ ಬಂದು ನೋಡುವಾಗ ಜಾಣ ಮರಿಯ ಕುತ್ತಿಗೆಯ ಭಾಗ, ಮತ್ತು ಕೆಳ ಹೊಟ್ಟೆಯ ಭಾಗಕ್ಕೆ ಯಾರೋ ಅಪರಿಚಿತರು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದು ಕಂಡು ಬಂದಿತೆನ್ನಲಾಗಿದ್ದು ಕೊಲೆಗೆ ಕಾರಣ ತಿಳಿದುಬಂದಿರುವುದಿಲ್ಲ. ಈ ಸಂಬಂಧ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಾರಿಗೆ ಲಾರಿ ಡಿಕ್ಕಿ ; ಕಾರು ಚಾಲಕ ಗಾಯಾಳು
ಕಾರಿಗೆ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಕಾರು ಚಾಲಕನಿಗೆ ಗಾಯಗಳಾದ ಘಟನೆ ಮಡಿಕೇರಿ ಬಳಿಯ ಕಾಟಕೇರಿ ಬಳಿ ನಡೆದಿದೆ. ಬೆಂಗಳೂರು ನಗರದ ಬ್ಯಾಟರಾಯನಪುರದ ನಿವಾಸಿ ಮೋಹನ್ ಚಂದ್ರ ಎಂಬವರು ದಿನಾಂಕ 11-04-2015 ರಂದು ಅವರ ಕೆಎ-03-ಎಂಎಸ್-9927 ರ ಡಸ್ಟರ್ ಕಾರಿನಲ್ಲಿ ಸ್ನೇಹಿತ ಪ್ರಕಾಶ್ ರವರೊಂದಿಗೆ ಬೆಂಗಳೂರಿನಿಂದ ಮಡಿಕೇರಿಗೆ ಪ್ರವಾಸಿ ತಾಣಗಳನ್ನು ನೋಡಲು ಬಂದಿದ್ದು, ಮಡಿಕೇರಿಯ ಹೋಂ ಸ್ಟೇಯಲ್ಲಿ ಉಳಿದುಕೊಂಡಿದ್ದು, ದಿನಾಂಕ 13-04-2015 ರಂದು ಸ್ನೇಹಿತನೊಂದಿಗೆ ಕಾಟಕೇರಿಯಲ್ಲಿರುವ ಎಸ್ಟೇಟ್ ಅನ್ನು ನೋಡಿಕೊಂಡು ವಾಪಾಸ್ಸು ಮಡಿಕೇರಿ ಕಡೆಗೆ ಬರುತ್ತಿರುವಾಗ ಪೂಪಂಡ ಸೇತುವೆಯ ಬಳಿ ಎದುರುಗಡೆಯಿಂದ ಕೆಎ-13-ಎ-8507 ರ ಲಾರಿಯನ್ನು ಅದರ ಚಾಲಕ ಮಹೇಶ ಎಂಬಾತ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಹನಚಂದ್ರರವರು ಚಾಲಿಸುತ್ತಿದ್ದ ಕಾರಿನ ಬಲ ಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರು ಸಂಪುರ್ಣ ಜಖಂಗೊಂಡು ಕಾರಿನಲ್ಲಿದ್ದ ಮೋಹನ ಚಂದ್ರರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ; ಕೊಲೆ ಬೆದರಿಕೆ
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ದಾರಿ ತಡೆದು ಹಲ್ಲೆ ಮಾಡಿ ಕೊಲೆಬೆದರಿಕೆ ಹಾಕಿದ ಘಟನೆ ಪೊನ್ನಂಪೇಟೆ ಬಳಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 13.4.15 ರಂದು ಶ್ರೀಮಂಗಲ ಬಳಿಯ ತಾವಳಗೇರಿ ನಿವಾಸಿ ದೇವಯ್ಯ ಎಂಬವರು ತಮ್ಮ ಸಹೋದರಿ ಸರಸ್ವತಿಯವರ ಜೊತೆ ಬೆಕ್ಕೆಸೂಡ್ಲೂರು ಗ್ರಾಮದಲ್ಲಿ ಮಾಚಂಗಡ ಟಾಟಾ ಎಂಬವರ ತಿಥಿ ಕರ್ಮಾಂತರಕ್ಕೆ ಜೀಪಿನಲ್ಲಿ ಹೋಗಿ ವಾಪಾಸ್ಸು ಬರುತ್ತಿರುವಾಗ ಮಾಚಂಗಡ ಪೆಮ್ಮಯ್ಯ ಮತ್ತು ಮೊಣ್ಣಪ್ಪ ಎಂಬವರು ಬೈಕ್ನಲ್ಲಿ ಬಂದು ವಿನಾ ಕಾರಣ ಜಗಳ ತೆಗೆದು ದೇವಯ್ಯನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸಹಕಾರ ಸಂಘದ ಬೀಗ ಮುರಿದು ಕಳವಿಗೆ ಯತ್ನ
ಸಹಕಾರ ಸಂಘವೊಂದರ ಬೀಗ ಮುರಿದು ಕಳವಿಗೆ ಯತ್ನಿಸಿರುವ ಘಟನೆ ಮಡಿಕೇರಿ ಬಳಿಯ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ. ಮಕ್ಕಂದೂರು ನಿವಾಸಿ ಸಿ.ಎಂ.ಕುಟ್ಟಪ್ಪ ಎಂಬವರು ಮಕ್ಕಂದೂರುವಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ವಹಣಾಧಿಕಾರಿಯಾಗಿದ್ದು ದಿನಾಂಕ 11-04-2015 ರಂದು ಎಂದಿನಂತೆ ಕಚೇರಿಗೆ ಬಂದು ಕೆಲಸ ನಿರ್ವಹಿಸಿ ಮದ್ಯಾಹ್ನ ಬಾಗಿಲಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಸಹಕಾರ ಸಂಘದ ರಾತ್ರಿ ಭದ್ರತೆಗಾಗಿ ಬಿ.ಇ. ಚಂದ್ರ ಎಂಬುವವರು ಇದ್ದು ದಿನಾಂಕ 12/04/2015ರಂದು ರಾತ್ರಿ ಯಾರೋ ಇಬ್ಬರು ಕಳ್ಳರು ಸಂಘದ ಮುಂಭಾಗದ ಬಾಗಿಲಿನ ಗೇಟನ್ನು ಮುರಿದು ಸಂಘದ 2 ಬೀಗವನ್ನು ಒಡೆಯಲು ಪ್ರಯತ್ನಿಸಿದ್ದು ತಾನು ಗಾಳಿಯಲ್ಲಿ ಗುಂಡು ಹಾರಿಸಿದಾಗ ಅವರು ಓಡಿ ಹೋಗಿರುತ್ತಾರೆ ಎಂದು ಕಾವಲುಗಾರ ಚಂದ್ರರವರು ಕುಟ್ಟಪ್ಪನವರಿಗೆ ದೂರವಾಣಿ ಮೂಲಕ ತಿಳಿಸಿದ್ದು ನಂತರ ದಿನಾಂಕ 13-04-2015 ರಂದು ಕುಟ್ಟಪ್ಪನವರು ಸಂಘಕ್ಕೆ ಹೋಗಿ ನೋಡಿದಾಗ ಸಹಕಾರ ಸಂಘದ ಬಾಗಿಲಿನ ಎರಡು ಬೀಗವನ್ನು ಯಾವುದೋ ಆಯುಧದಿಂದ ಒಡೆದು ಹಾಕಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ಧಾರೆ.
ಹಳೆ ವೈಷಮ್ಯದಿಂದ ವ್ಯಕ್ತಿಯ ಮೇಲೆ ಹಲ್ಲೆ
ಹಳೆ ದ್ವೇಷದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಖಿದ ಘಟನೆ ಶನಿವಾರಸಂತೆ ಬಳಿಯ ಮಾದೇಗೋಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 11-04-2015 ರಂದು ಸಂಜೆ ಸಮಯ ನಂದಿಗುಂದ ಗ್ರಾಮದ ನಿವಾಸಿ ಗೋಪಿ ಎಂಬವರ ಅಕ್ಕ ವಲ್ಲಿ ರವರ ಮಾದೇಗೋಡು ಗ್ರಾಮದಲ್ಲಿರುವ ಮನೆಗೆ ಅದೇ ಗ್ರಾಮದ ನಿವಾಸಿ ಮೋಹನ ಎಂಬಾತನು ಹಳೆಯ ವೈಷಮ್ಯ ಇಟ್ಟುಕೊಂಡು ಅಕ್ರಮ ಪ್ರವೇಶ ಮಾಡಿ ಅಕ್ಕನ ಮಗ ಮುರುಗನ ಜೊತೆ ಜಗಳ ಮಾಡಿ ಕತ್ತಿಯಿಂದ ಕಡಿದು ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Monday, April 13, 2015
ಕಾರಿಗೆ ಓಮ್ನಿ ವ್ಯಾನ್ ಡಿಕ್ಕಿ ಇಬ್ಬರಿಗೆ ಗಾಯ:
ದಾರಿ ತಡೆದು ವ್ಯಕ್ತಿಯ ಕೊಲೆಗೆ ಯತ್ನ:
Sunday, April 12, 2015
ಆಸ್ತಿ ವಿವಾದದ ಸಂಬಂಧ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಡಿಕೇರಿ ಬಳಿಯ ಮುಕ್ಕೋಡ್ಲು ಗ್ರಾಮದಲ್ಲಿ ನಡೆದಿದೆ. ಮುಕ್ಕೋಡ್ಲು ಗ್ರಾಮದ ನಿವಾಸಿ ಶಾಂತೆಯಂಡ ಪೊನ್ನಪ್ಪ ಹಾಗೂ ಅವರ ಕುಟುಂಬದವರಾದ ಕಾವೇರಪ್ಪರವರಿಗೂ ಆಸ್ತಿಯ ವಿಚಾರದಲ್ಲಿ ಸುಮಾರು 7-8 ವರ್ಷಗಳಿಂದ ತಕರಾರು ಇದ್ದು, ದಿನಾಂಕ 11-04-2015 ರಂದು ಪೊನ್ನಪ್ಪ ಮತ್ತು ಅವರ ಮಗ ಸಂತೋಷ್ ಮದ್ಯಾಹ್ನ ಊಟ ಮಾಡಿ ಮನೆಯಿಂದ ತೋಟಕ್ಕೆ ಹೋಗುವಾಗ ದಾರಿಯ ಬದಿಯಲ್ಲಿ ಅವಿತು ಕುಳಿತ್ತಿದ್ದ ಕಾವೇರಪ್ಪ, ಸುಬ್ಬಯ್ಯ, ಸುಬ್ಬಯ್ಯನ ಮಗ ಮತ್ತು ಇತರೆ ಇಬ್ಬರು ಒಮ್ಮೆಲೇ ದಾರಿಗೆ ಅಡ್ಡಲಾಗಿ ಬಂದು ತಡೆದು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಸುಬ್ಬಯ್ಯನು ಕತ್ತಿಯಿಂದ ಪೊನ್ನಪ್ಪನವರ ಎಡ ಹಣೆಯ ಭಾಗಕ್ಕೆ ಕಡಿದಿದ್ದು, ಸುಬ್ಬಯ್ಯನ ಮಗ ಹಾಗೂ ಇನ್ನೊಬ್ಬ ದೊಣ್ಣೆಯಿಂದ ಹೊಡೆದು ಗಾಯ ನೋವುಂಟುಪಡಿಸಿದ್ದು, ಕಾವೇರಪ್ಪನು ಕತ್ತಿಯಿಂದ ಪೊನ್ನಪ್ಪನವರ ಮಗ ಸಂತೋಷನ ತಲೆಗೆ ಕಡಿದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬಸ್ಗೆ ಲಾರಿ ಡಿಕ್ಕಿ ; ಪ್ರಯಾಣಿಕರಿಗೆ ಗಾಯ
ಬಸ್ ಒಂದಕ್ಕೆ ಲಾರಿ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ಮಡಿಕೇರಿ ಬಳಿಯ ಬೋಯಿಕೇರಿಯಲ್ಲಿ ನಡೆದಿದೆ. ದಿನಾಂಕ 11/04/2015ರ ಅಪರಾಹ್ನ ಇಬ್ನಿವಳವಾಡಿ ಗ್ರಾಮದ ಬೋಯಿಕೇರಿಯ ಬಳಿ ಮೈಸೂರಿನಿಂದ ಪುತ್ತೂರಿಗೆ ಹೋಗುತ್ತಿದ್ದ ಕೆಎ-19-ಎಫ್-3112 ರ ಕೆಎಸ್ಆರ್ಟಿಸಿ ಬಸ್ ಗತೆ ಎದುರುಗಡೆಯಿಂದ ಕೆಎ-09-ಬಿ-2759 ರ ಟಿಪ್ಪರ್ ಲಾರಿಯನ್ನು ಅದರ ಚಾಲಕ ರವಿ ಎಂಬುವವರು ಅತಿವೇಗ ಮತ್ತು ಜರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 7-8 ಜನರಿಗೂ ಗಂಭೀರ ಸ್ವರೂಪದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಜೂಜಾಟ, ನಾಲ್ವರ ಬಂಧನ
ಅಕ್ರಮವಾಗಿ ಜೂಜಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ವಿರಾಜಪೇಟೆ ಗ್ರಾಮಾಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ದಿನಾಂಕ: 11-04-15ರಂದು ಕದನೂರು ಬಳಿಯ ಕೆ.ಬೋಯಿಕೇರಿ ಗ್ರಾಮದಲ್ಲಿ ವಾಸವಿರುವ ಪೆಮ್ಮಂಡ ಕೆ.ಪ್ರಸಾದ್ ರವರ ಮನೆಯ ಬಳಿ ಇರುವ ಕುಟ್ಟಂಡ ಕುಟುಂಬ ಸ್ಥರಿಗೆ ಸೇರಿದ ಜಾಗದ ಒತ್ತಾಗಿ ಇರುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಕೆಲವರು ಅಕ್ರಮವಾಗಿ ಜೂಜಾಟ ಆಡುತ್ತಿದ್ದಾರೆ ಎಂದು ದೊರೆತ ಸುಳಿವಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪಿಎಸ್ಐ ನಂಜುಂಡ ಸ್ವಾಮಿಯವರು ಠಾಣಾ ಸಿಬ್ಬಂದಿಯೊಂದಿಗೆ ಕುಟ್ಟಂಡ ಕುಟುಂಬಸ್ಥರಿಗೆ ಸೇರಿದ ಜಾಗದ ಒತ್ತಾಗಿ ಇರುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಧಾಳಿ ಮಾಡಿ ಸ್ಥಳದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಪ್ರಶಾಂತ್, ಸುನಿಲ್, ಮನು ಮತ್ತು ಶಿವಣ್ಣ ಗೌಡ ಎಂಬ ನಾಲ್ಕು ಜನರನ್ನು ಬಂಧಿಸಿ ಜೂಜಾಡಲು ಪಣವಾಗಿ ಉಪಯೋಗಿಸಿದ್ದ ರೂ.17,570/- ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಂಚಿಸಿ ಆಸ್ತಿ ಮಾರಾಟ ; ಪ್ರಕರಣ ದಾಖಲು
ಸರ್ಕಾರಿ ಪಯಸಾರಿ ಆಸ್ತಿಯನ್ನು ಮೋಸದಿಂದ ಬೇರೊಬ್ಬರಿಗೆ ಮಾರಾಟ ಮಾಡಿ ವಂಚಿಸಿದ ಘಟನೆ ಕುಶಾಲನಗರ ಬಳಿಯ ಚಿಕ್ಕತ್ತೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕತತ್ತೂರು ನಿವಾಸಿ ಬೋಪಯ್ಯ ಎಂಬವರು ಅದೇ ಗ್ರಾಮದ ನಿವಾಸಿ ಪ್ರಭಾಕರ ಎಂಬವರಿಂದ 2007 ನೇ ಸಾಲಿನಲ್ಲಿ ಚಿಕ್ಕತ್ತೂರು ಗ್ರಾಮದಲ್ಲಿ 1 ಎಕರೆ ಜಾಗವನ್ನು ಖರೀದಿಸಿದ್ದು ರೂ 3,90,000/ ಗೆ ಒಪ್ಪಂದ ಮಾಡಿಕೊಂಡು ಮುಂಗಡವಾಗಿ 1,50,000/- ಹಣವನ್ನು ಬೋಪಯ್ಯನವರು ಪ್ರಭಾಕರರವರಿಗೆ ನೀಡಿದ್ದು ನಂತರದ ದಿನಗಳಲ್ಲಿ ಪ್ರಭಾಕರರವರು ಬೋಪಯ್ಯನವರಿಂದ ರೂ. 2,25,000/- ಹಣವನ್ನು ಪಡೆದುಕೊಂಡಿದ್ದು ನಂತರ ಬೋಪಯ್ಯನವರು ತಾವು ಖರೀದಿಸಿದ ಜಾಗಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದುಕೊಳ್ಳಲು ಸಂಬಂಧಪಟ್ಟ ಕಛೇರಿಗೆ ಹೋಗಿ ವಿಚಾರಿಸಲಾಗಿ ಜಾಗವು ಸರಕಾರಿ ಪೈಸಾರಿ ಜಾಗವಾಗಿರುತ್ತದೆ ಎಂಬುದಾಗಿ ತಿಳಿದು ಬಂದಿದ್ದು ಪ್ರಭಾಕರ ಮತ್ತು ಅವರ ಕುಟುಂಬಸ್ಥರು ಸರ್ಕಾರಿ ಜಾಗವನ್ನು ಮೋಸದಿಂದ ತನಗೆ ಮಾರಾಟ ಮಾಡಿರುವುದಾಗಿ ಬೋಪಯ್ಯನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕರಿಮೆಣಸು ಕಳವು ಆರೋಪಿ ಬಂಧನ
ತೋಟವೊಂದರಿಂದ ಕರಿಮೆಣಸು ಕಳವು ಮಾಡಿದ ಪ್ರಕರಣ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ಪಿರ್ಯಾದಿಯವರು ಈ ದಿನ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದು, ಅದರಲ್ಲಿ ಕಾಫಿ ಒಳ್ಳೆಮೆಣಸು ಕೃಷಿ ಮಾಢಿಕೊಂಡು ಜೀವನ ಸಾಗಿಸುತ್ತಿರುವುದಾಗಿದೆ. ಪೊನ್ನಂಪೇಟೆ ನಗರದ ನಿವಾಸಿ ಅಡ್ಡಂಡ ಜನಾರ್ಧನ ಎಂಬವರು ದಿ:11.4.2015 ರಂದು ತಮ್ಮ ತೋಟಕ್ಕೆ ಹೋಗುತ್ತಿರುವಾಗ ಅವರ ತೋಟದಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಚಿಣ್ಣ ಎಂಬಾತನು ತನ್ನ ಕೈಯಲ್ಲಿ ಪ್ಲಾಸ್ಟೀಕ್ ಚೀಲ ಹಿಡಿದುಕೊಂಡು ತೋಟದಿಂದ ಹೊರಕ್ಕೆ ಹೋಗುತ್ತಿರುವುದನ್ನು ಕಂಡು ಅನುಮಾನಗೊಂಡು ಅವನ ಕೈಯಲ್ಲಿದ್ದ ಪ್ಲಾಸ್ಟೀಕ್ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ 10 ಕೆ.ಜಿ ಯಷ್ಟು ಬಿಡಿಸಿದ ಒಳ್ಳೆಮೆಣಸು ಇರುವುದು ಕಂಡು ಬಂದಿದ್ದು, ಈ ಬಗ್ಗೆ ಚಿಣ್ಣನನ್ನು ವಿಚಾರ ಮಾಡಿದಾಗ ತಾನು ಜನಾರ್ಧನರವರ ತೋಟದಿಂದ ಒಳ್ಳೆ ಮೆಣಸನ್ನು ಕದ್ದು ಕುಯ್ದು ತೋಟದ ಒಳಗಡೆ ಒಣಗಿಸಿ ಮಾರಾಟ ಮಾಡಲು ತೆಗದುಕೊಂಡು ಹೋಗುತ್ತಿರುವುದಾಗಿ ಎಂದು ತಿಳಿಸಿದ್ದು ಜನಾರ್ಧನರವರು ಚಿಣ್ಣನನ್ನು ಕರಿಮೆಣಸು ಸಮೇತ ಪೊಲೀಸರಿಗೆ ಒಪ್ಪಿಸಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Saturday, April 11, 2015
ಹಳೆ ದ್ವೇಷದಿಂದವ್ಯಕ್ತಿಯೊಬ್ಬರ ಮನೆಯ ಗೇಟನ್ನು ಮುರಿದು ಹಾನಿಗೊಳಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ವಿರಾಜಪೇಟೆ ಬಳಿಯ ನಲ್ವತೊಕ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ: 08-04-15ರಂದು ಸಂಜೆ ನಲ್ವತೊಕ್ಲು ಗ್ರಾಮದ ನಿವಾಸಿಗಳಾದ ಬಿಪಿನ್ ಅಯ್ಯಣ್ಣ, ಬೋಪಣ್ಣ ಮತ್ತು ಸೋಮಣ್ಣ ಎಂಬವರುಗಳು ಹಳೆ ದ್ವೇಷದಿಂದ ಅದೇ ಗ್ರಾಮದ ನಿವಾಸಿ ಮುಕ್ಕಾಟಿರ ಪಿ ಬಿದ್ದಪ್ಪ ಎಂಬವರ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಬಿದ್ದಪ್ಪನವರ ಮನೆಯ ಸಮೀಪವಿರುವ ಬಿದಿರನ್ನು ಕಡಿದು ಹಾಕಿ ಗೇಟಿನ ಬೀಗವನ್ನು ಮುರಿದು ಜಖಂಗೊಳಿಸಿ ಅವರ ತಂದೆ ತಾಯಿಗೆ ಕತ್ತಿ ಮತ್ತು ಕೋವಿಯನ್ನು ತೋರಿಸಿ ಕೊಲೆ ಬೆದರಿಕೆ ಹಾಕಿರುವುದಲ್ಲದೆ ದಿನಾಂಕ: 09-04-15ರಂದು ಬೋಪಣ್ಣ ಮತ್ತು ಸೋಮಣ್ಣರವರುಗಳು ಬಿದ್ದಪ್ಪನವರ ಮೊಬೈಲ್ ಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಪುನಃ ಈ ದಿನ 10-04-15ರಂದು ಮದ್ಯಾಹ್ನ ಪುನಃ ಬಿದ್ದಪ್ಪನವರ ಮೊಬೈಲ್ ಗೆ ಬೋಪಣ್ಣ ಮತ್ತು ಸೋಮಣ್ಣ ರವರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬಸ್ ಹರಿದು ವ್ಯಕ್ತಿಯ ಸಾವು
ಬಸ್ ಕಾಯುತ್ತಾ ನಿಂತಿದ್ದ ವ್ಯಕ್ತಿಯೊಬ್ಬರ ಮೇಲೆ ಬಸ್ ಹರಿದು ಸಾವಿಗೀಡಾದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 10/04/2015 ರಂದು ಧನುಗಾಲ ನಿವಾಸಿ ಎ.ಎಂ.ರಿಯಾಜ್ ಎಂಬವರು ಗೋಣಿಕೊಪ್ಪ ಬಸ್ ನಿಲ್ದಾಣಕ್ಕೆ ಬಂದು ಅವರ ಭಾವ ಯೂಸಪ್ ರವರರನ್ನು ಬಸ್ ಹತ್ತಿಸಲು ಬಸ್ ಕಾಯುತ್ತಾ ನಿಂತಿದ್ದಾಗ ಸಂಜೆ 4-45 ಗಂಟೆಗೆ ಪೊನ್ನಂಪೇಟೆ ಕಡೆಯಿಂದ ಬಂದ ಕೆಎ-20-ಎ-8129ರ ವೆಂಕಟೇಶ್ವರ ಬಸ್ಸಿನ ಚಾಲಕ ಚಂದ್ರ ಎಂಬಾತನು ಬಸನ್ನು ನಿರ್ಲಕ್ಷ್ಯ ಮತ್ತು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಯೂಸುಫ್ರವರಿಗೆ ಡಿಕ್ಕಿ ಪಡಿಸಿದ್ದು ಅವರು ಕೆಳಗೆ ಬಿದ್ದಾಗ ಅವರ ಎಡಭಾಗದ ಎದೆಯ ಮೇಲೆ ಬಸ್ಸಿನ ಮುಂದಿನ ಎಡ ಚಕ್ರ ಹತ್ತಿದ್ದು ಕೂಡಲೇ ರಿಯಾಜ್ ಮತ್ತು ಆಸಿಫ್ ರವರು ಸೇರಿ ಯೂಸುಫ್ರವರನ್ನು ಒಂದು ಆಟೋ ರಿಕ್ಷಾದಲ್ಲಿ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ವೈದ್ಯರು ಪರೀಕ್ಷೆ ಮಾಡಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆಂಬುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬೈಕಿಗೆ ಜೀಪು ಡಿಕ್ಕಿ ; ಇಬ್ಬರಿಗೆ ಗಾಯ
ಬೈಕಿಗೆ ಜೀಪೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರಿಗೆ ಗಾಯಗಳಾದ ಘಟನೆ ಸೋಮವಾರಪೇಟೆ ನಗರದ ಆನೆಕೆರೆ ಜಂಕ್ಷನ್ನಲ್ಲಿ ನಡೆದಿದೆ. ದಿನಾಂಕ 10.04.2015 ರಂದು ಶನಿವಾರಸಂತೆ ಬಳಿಯ ಗೌಡಳ್ಳಿ ನಿವಾಸಿ ಶಶಿಕುಮಾರ್ ಮತ್ತು ಅವರ ಸ್ನೇಹಿತ ಮಹೇಶ್ ಎಂಬವರು ಸೋಮವಾರಪೇಟೆಯಿಂದ ಗೌಡಳ್ಳಿ ಕಡೆಗೆ ಕೆಎ-12-ಎಲ್-639 ರ ಪಲ್ಸರ್ ಬೈಕಿನಲ್ಲಿ ಹೋಗುತ್ತಿರುವಾಗ ಸೋಮವಾರಪೇಟೆಯ ಆನೆಕೆರೆ ಜಂಕ್ಷನ್ನ ಹತ್ತಿರ ಶನಿವಾರಸಂತೆ ಕಡೆಯಿಂದ ಬರುತ್ತಿದ್ದ ಕೆಎ-46-4285 ರ ಬೊಲೆರೋ ಪಿಕ್ಅಪ್ ಜೀಪನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದಚಾಲನೆ ಮಾಡಿಕೊಂಡು ಬಂದು ಶಶಿಕುಮಾರ್ರವರು ಚಾಲಿಸುತ್ತಿದ್ದ ಮೋಟಾರ್ ಸೈಕಲ್ಗೆ ಡಿಕ್ಕಿಪಡಿಸಿದ ಪರಿಣಾಮ ಶಶಿಕುಮಾರ್ ಹಾಗೂ ಮಹೇಶ ಬೈಕಿನಿಂದ ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Friday, April 10, 2015
ಮರ ಕಡಿಯುವ ವಿಚಾರದ ಹಿನ್ನೆಲೆ ವ್ಯಕ್ತಿಯ ಮೇಲೆ ಹಲ್ಲೆ:
ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಮಣಗಲಿ ಗ್ರಾಮದ ನಿವಾಸಿ ಎಂ.ಎಸ್. ಶಾಂತಮಲ್ಲಪ್ಪ ಎಂಬುವರ ತೋಟದಲ್ಲಿದ್ದ ಸಿಲ್ವರ್ ಮರಗಳನ್ನು ಕಡಿಯುವ ವಿಚಾರದಲ್ಲಿ ಸದರಿಯವರಿಗೂ ಮತ್ತು ಅದೇ ಗ್ರಾಮದ ನಿವಾಸಿ ಕಾಳಿಂಗಪ್ಪ ಎಂಬವರಿಗೆ ಜಗಳ ವಾಗಿ ಕಾಳಿಂಗಪ್ಪನವರು ಶಾಂತಮಲ್ಲಪ್ಪನವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ತಲೆ ಭಾಗಕ್ಕೆ ಕಡಿದು ಗಾಯಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗುಂಪಿನಿಂದ ದಾರಿ ತಡೆದು ವ್ಯಕ್ತಿಯ ಕೊಲೆಗೆ ಯತ್ನ:
ಸೋಮವಾರಪೇಟೆ ಠಾಣಾ ಸರಹದ್ದಿನ ದೊಡ್ಡಮಳ್ತೆ ಗ್ರಾಮದ ನಿವಾಸಿ ಹೆಚ್.ಆರ್. ಕಾಮತ್ ರವರು ದಿನಾಂಕ 9-4-2015 ರಂದು ಸ್ನೇಹಿತರೊಂದಿಗೆ ಕಾವಾಡಿಕಟ್ಟೆ ಆಟದ ಮೈದಾನದಲ್ಲಿ ಆಟವಾಡಿ ಸಂಜೆ 6-00 ಗಂಟೆಗೆ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳಾದ ಜಾಕೀರ್, ಮುಜಾಹಿದ್, ಇರ್ಫಾನ್ ಪಾಷಾ, ಅಕ್ಮಲ್ ಹಾಗು ಇತರರು ಸೇರಿಕೊಂಡು ಜೀಪಿನಲ್ಲಿ ಬಂದು ಹಳೆಯ ದ್ವೇಷದಿಂದ ಕತ್ತಿ ದೊಣ್ಣೆ ಮತ್ತು ಕಬ್ಬಿಣದ ರಾಡಿನಿಂದ ಕಾಮತ್ ಹಾಗು ಅವರ ಸ್ನೇಹಿತರಾದ ಈಶ್ವರ ಮತ್ತು ಮೋಹನ್ರವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುತ್ತಾರೆಂದು ನೀಡಿದ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಡಿಗೆ ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆಹಲ್ಲೆ, ಪ್ರಕರಣ ದಾಖಲು:
ಪೊನ್ನಂಪೇಟೆ ಠಾಣಾ ಸರಹದ್ದಿನ ಕೊಟ್ಟಗೇರಿ ಗ್ರಾಮದ ನಿವಾಸಿ ಶರತ್ ಎಂಬುವರು ತಮ್ಮ ಕೆ.ಎ.12.ಎ.8144 ರ ಪಿಕ್ಅಪ್ ಜೀಪಿನಲ್ಲಿ ಬಾಳೆಲೆ ಗ್ರಾಮದಲ್ಲಿ ಕಾಫಿ ಅಂಗಡಿಯನ್ನು ಹೊಂದಿರುವ ಜೆಸ್ಸಿನ್ ಬೋಪಣ್ಣರವರ ಕಾಫಿಯನ್ನು 10 ಟ್ರಿಪ್ ನಲ್ಲಿ ಸಾಗಾಟ ಮಾಡಿದ್ದು ಅದರ ಭಾಪ್ತು 4,000/- ಬಾಡಿಗೆ ಹಣ ಕೊಡಲು ಬಾಕಿ ಇದ್ದು, ದಿ: 9.4.15 ರ 17:15 ಗಂಟೆಗೆ ಬಾಡಿಗೆ ಹಣ ಕೇಳಲು ಹೋದಾಗ ಜೇಸಿನ್ ಬೋಪಣ್ಣರವರು ಪಿರ್ಯಾದಿಯವರನ್ನು ದೂಡಿ ಹಲ್ಲೆ ಮಾಡಿ ಗಾಯಗೊಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Thursday, April 9, 2015
ಅಕ್ರಮವಾಗಿ ಕರ್ಪಚಕ್ಕೆ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 8-4-2015 ರಂದು ವಿರಾಜಪೇಟೆ ಠಾಣಾಧಿಕಾರಿ ಎಂ.ನಂಜುಂಡಸ್ವಾಮಿ ಯವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳೊಂದಿಗೆ ಅಮ್ಮತ್ತಿ ಗ್ರಾಮಕ್ಕೆ ತೆರಳಿ ಕೆಎ.04.ಎನ್.7923ರ ಬಿಳಿ ಬಣ್ಣದ ಮಾರುತಿ ಓಮಿನಿ ವ್ಯಾನಿನಲ್ಲಿ ಅಮ್ಮತ್ತಿ ಕಡೆಯಿಂದ ಒಂಟಿಯಂಗಡಿ ಕಡೆಗೆ ಅಕ್ರಮವಾಗಿ ಕರ್ಪ ಚಕ್ಕೆಯನ್ನು ಸಾಗಿಸುತ್ತಿದ್ದ ಪಿ.ಎ. ಖಾಲಿದ್ ಹಾಗು ಕೆ. ಸೌಮನ್ ಎಂಬುವರುಗಳ ಮೇಲೆ ದಾಳಿ ನಡೆಸಿ ರೂ.10000 ಬೆಲೆಯ 5 ಗೋಣಿಚೀಲ ಒಣಗಿದ ಸುಮಾರು 200ಕೆ.ಜಿ. ಕರ್ಪಚಕ್ಕೆ ಯನ್ನು ವಶಪಡಿಸಿಕೊಂಡು ಆರೋಪಿಗಳನ್ನು ವಾಹನ ಸಮೇತವಾಗಿ ಬಂದಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅನಾರೋಗ್ಯದ ಹಿನ್ನಲೆ, ನೀರಿಗೆ ಹಾರಿ ವೃದ್ದೆಯ ಆತ್ಮಹತ್ಯೆ:
ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕಾಟ್ರಕೊಲ್ಲಿ ಎಂಬಲ್ಲಿ ನಡೆದಿದೆ. ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕಾಟ್ರಕೊಲ್ಲಿ ಎಂಬಲ್ಲಿ ವಾಸವಾಗಿರುವ 85 ವರ್ಷ ಪ್ರಾಯದ ಗಂಗಮ್ಮ ಎಂಬುವರು ಕೆಲವು ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಇದರಿಂದ ಬೇಸತ್ತು ದಿನಾಂಕ 8-4-2015 ರಂದು ಮನೆಯ ಹತ್ತಿರದಬಾವಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಳೇ ದ್ವೇಷ, ವ್ಯಕ್ತಿಯ ಮೇಲೆ ಹಲ್ಲೆ:
ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲುಕೆನೆ ಗ್ರಾಮದ ನಿವಾಸಿ ಕೃಷ್ಣೇಗೌಡ ಎಂಬವರಿಗೆ ಅದೇ ಗ್ರಾಮದ ರಂಗ್ರಾಜು, ಗಾಯತ್ರಿ, ಪವನ ಮತ್ತು ಅಭಿಷೇಕ ಎಂಬುವರು ಸೇರಿ ಹಳೇ ದ್ವೇಷವನ್ನಿಟ್ಟುಕೊಂಡು ವಿನಾಕಾರಣಜಗಳ ಮಾಡಿ ಕತ್ತಿ, ದೊಣ್ಣೆ, ಕಲ್ಲು ಹಾಗೂ ಗುದ್ದಲಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಕೃಷ್ಣೇಗೌಡ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
Wednesday, April 8, 2015
ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ತಿವಿದು ಹಲ್ಲೆ ಮಾಡಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 07/04/2015 ರಂದು ರಾತ್ರಿ ಸಮಯ ನಗರದ ನಿವಾಸಿ ಕೆ.ಸಿ.ಅಣ್ಣಯ್ಯ ಎಂಬವರು ಪಾನಿಪುರಿ ತಿನ್ನುವ ಸಲುವಾಗಿ ಗೋಣಿಕೊಪ್ಪ ಬಸ್ಸು ನಿಲ್ದಾಣದ ಬಳಿಯಿರುವ ಜಕ್ರಿಯರವರ ಪಾನಿಪುರಿ ಅಂಗಡಿಗೆ ಹೋಗಿ, ಪಾನಿಪುರಿ ಕೊಡುವಂತೆ ಕೇಳಿದ್ದು, ಜಕ್ರಿಯರವರು ಅಣ್ಣಯ್ಯನನ್ನು ಕುರಿತು ಅಶ್ಲೀಲವಾಗಿ ನಿಂದಿಸಿದುದನ್ನು ಅಣ್ಣಯ್ಯನವರಯ ಪ್ರಶ್ನಿಸಿದನ್ನೇ ಕಾರಣವಾಗಿಟ್ಟುಕೊಂಡು ಜಕ್ರಿಯರವರು ಅಲ್ಲಿಯೇ ಇದ್ದ ಈರುಳ್ಳಿ ಕುಯ್ಯುವ ಚಾಕುವಿನಿಂದ ಕುತ್ತಿಗೆಯ ಭಾಗಕ್ಕೆ ತಿವಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬಾಲಕನಿಗೆ ಕಾರು ಡಿಕ್ಕಿ ; ಕೊಲೆ ಬೆದರಿಕೆ
ಬಾಲಕನಿಗೆ ಕಾರು ಡಿಕ್ಕಿ ಮಾಡಿದ ಬಗ್ಗೆ ಕೇಳಲು ಹೋದ ವ್ಯಕ್ತಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಕುಶಾಲನಗರದ ದಂಡಿನಪೇಟೆಯಲ್ಲಿ ನಡೆದಿದೆ. ದಿನಾಂಕ 05/04/2015 ರಂದು ರಾತ್ರಿ ಕುಶಾಲನಗರದ ದಂಡಿನಪೇಟೆ ನಿವಾಸಿ ಮನ್ಸೂರ್ ಆಲಿ ಎಂಬವರು ತಮ್ಮ ಮನೆಯವರೊಂದಿಗೆ ಮನೆಯ ಮುಂದೆ ಕುಳಿತಿದ್ದಾಗ, ಕೆಎ-12-ಪಿ-5204 ರ ಅಲ್ಟೋ ಕಾರನ್ನು ಅವರ ಭಾವ ಮೀರ್ ಮೊಯಿದ್ದೀನ್ ರವರು ಅತಿ ವೇಗ ಹಾಗು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮನ್ಸೂರ್ ಆಲಿಯವರ ಮಗನಿಗೆ ಡಿಕ್ಕಿಪಡಿಸಿದ್ದು , ಈ ಬಗ್ಗೆ ಕೇಳಲು ಹೋದ ಮನ್ಸೂರ್ ಆಲಿಯವರಿಗೆ ಮೀರ್ ಮೊಯಿದ್ದೀನ್ ಕೊಲೆ ಬೆದರಿಕೆ ಹಾಕಿದ ಬಗ್ಗೆ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಪ್ರಾಪ್ತ ಬಾಲಕಿಯ ಅಪಹರಣ
ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿರುವ ಘಟನೆ ಸಿದ್ದಾಪುರ ನಗರದಲ್ಲಿ ನಡೆದಿದೆ. ದಿನಾಂಕ 07/04/2015ರಂದು ನೆಲ್ಲಿಹುದಿಕೇರಿ ನಿವಾಸಿ ಪಿ.ವಿ.ಹಂಸ ಎಂಬವರ ಮಗಳು 17 ವರ್ಷ ಪ್ರಾಯದ ಬಾಲಕಿ ಫಾತಿಮತ್ ಸೂರಾ ಮದ್ಯಾಹ್ನ 02:00 ಗಂಟೆಯ ವೇಳೆಗೆ ಅಂಗನವಾಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು, ನಂತರ 03:00 ಗಂಟೆಗೆ ಹಂಸರವರ ನೆರೆಯ ಮನೆಯ ನಿವಾಸಿ ಮಮ್ಮು ಎಂಬುವವರು ದೂರವಾಣಿ ಕರೆ ಮಾಡಿ ನಿನ್ನ ಮಗಳು ಫಾತಿಮತ್ ಸೂರಾಳು ಮನೆಯಲ್ಲಿದ್ದಾಳೆಯೇ ಎಂದು ವಿಚಾರಿಸಿದ್ದು ಹಂಸರವರು ಆಕೆ ಅಂಗನವಾಡಿಗೆ ಹೋಗಿದ್ದಾಳೆಂದು ಹೇಳಿದ್ದು ಆಗ ಮಮ್ಮುರವರು ಆಕೆಯು ಜ್ಯೋತಿ ನಗರದ ನಿವಾಸಿ ಗಫೂರ್ ಎಂಬುವವನೊಂದಿಗೆ ಹೋಗಿದ್ದಾಳೆ ಎಂದು ಆಟೋ ಚಾಲಕ ತಾಹೀರ್ ತನಗೆ ದೂರವಾಣಿ ಮೂಲಕ ಹೇಳಿರುತ್ತಾನೆ ಎಂದು ಹೇಳಿದಳು, ತಕ್ಷಣ ಹಂಸರವರು ಮನೆಯಿಂದ ಸಿದ್ದಾಪುರ ತೆರಳಿ ತಾಹೀರ್ ನನ್ನು ವಿಚಾರಿದ್ದು ಫಾತಿಮತ್ ಸೂರಾ ನಲ್ವತ್ತೇಕ್ರೆಯಿಂದ ತಾಹಿರ್ನ ಆಟೋ ರಿಕ್ಷಾಕ್ಕೆ ಹತ್ತಿ ಆಸ್ಪತ್ರೆಗೆ ಹೋಗಬೇಕೆಂದು ಹೇಳಿ, ಮೈಸೂರು ರಸ್ತೆಯಲ್ಲಿರುವ ನಂದ ಕ್ಲಿನಿಕ್ ಹತ್ತಿರ ಬಂದು ಇಳಿದುಕೊಂಡಿದ್ದು, ಆ ವೇಳೆಗೆ ಗಫೂರ್ ಎಂಬುವವನು ಅಲ್ಲಿ ನಿಂತಿದ್ದು, ಇವರಿಬ್ಬರೂ ಮಾತನಾಡಿಕೊಂಡಿದ್ದು, ನಂತರ ಇಬ್ಬರೂ ಕಾಣೆಯಾಗಿರುತ್ತಾರೆ ಎಂದು ತಾಹಿರ್ ತಿಳಿಸಿದ್ದು ತಕ್ಷಣ ಹಂಸರವರು ತಾಹೀರ್ ನೊಂದಿಗೆ ಪಾಲಿಬೆಟ್ಟ ಹಾಗೂ ಇತರ ಕಡೆಗಳಲ್ಲಿ ಹುಡುಕಿದ್ದು ಮಗಳು ಪತ್ತೆಯಾಗದ ಕಾರಣ ಮಗಳು ಫಾತಿಮತ್ ಸೂರಾಳನ್ನು ಗಫೂರ್ ಎಂಬುವವರು ಕರೆದುಕೊಂಡು ಹೋಗಿರಬಹುದೆಂದು ಶಂಕೆ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಜೀಪಿಗೆ ಬಸ್ ಡಿಕ್ಕಿ ; ಗಾಯ
ಪೊಲೀಸ್ ಜೀಪೊಂದಕ್ಕೆ ಬಸ್ ಡಿಕ್ಕಿಯಾದ ಪರಿಣಾಮ ಜೀಪಿನಲ್ಲಿದ್ದ ಸಿಬ್ಬಂದಿಗಳಿಗೆ ಗಾಯಗಳಾದ ಘಟನೆ ಸಿದ್ದಾಪುರ ಬಳಿಯ ಪಾಲಿಬೆಟ್ಟದಲ್ಲಿ ನಡೆದಿದೆ. ದಿನಾಂಕ 7-04-2015 ರಂದು ಸಿದ್ದಾಪುರ ಠಾಣಾ ಪಿಎಸ್ಐ. ಶ್ರೀ ಹರಿವರ್ಧನ್ ರವರು ಚಾಲಕ ಗೋವರ್ಧನ್ರವರು ಚಾಲಿಸುತ್ತಿದ್ದ ಇಲಾಖಾ ಜೀಪು ನಂ ಕೆಎ-12-ಜಿ-474 ರಲ್ಲಿ ಪೊನ್ನಂಪೇಟೆ ಠಾಣಾ ಸರಹದ್ದಿನಲ್ಲಿ ನಡೆಯುವ ಹೈಟೆನ್ಷನ್ ಬಂದೂಬಸ್ತ್ ಕರ್ತವ್ಯಕ್ಕೆ ತೆರಳಿದ್ದು, ಬಂದೂಬಸ್ತ್ ಕರ್ತವ್ಯವನ್ನು ನಿರ್ವಹಿಸಿ ಪೊನ್ನಂಪೇಟೆಯಿಂದ ಹೊರಟು ಗೋಣಿಕೊಪ್ಪ ಮಾರ್ಗವಾಗಿ ಸಿದ್ದಾಪುರಕ್ಕೆ ಬರುತ್ತಿದ್ದ ಸಂದರ್ಭ ಪಾಲಿಬೆಟ್ಟದ ಟಾಟಾ ಕಂಪೆನಿ ಮುಕಾ ಎಸ್ಟೇಟ್ ನ ಹತ್ತಿರ ಸಂಜೆ ಸುಮಾರು 05:30 ಗಂಟೆಗೆ ಎದುರುಗಡೆಯಿಂದ ಗೋಣಿಕೊಪ್ಪದ ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಂ ಕೆಎ-09-ಎಫ್-4771 ನ್ನು ಅದರ ಚಾಲಕ ಸತೀಶ್ ಎಂಬವರು ಬಸ್ಸನ್ನು ರಸ್ತೆಯ ಬಲಬದಿಗಾಗಿ ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಾಲಿಸಿಕೊಂಡು ಬಂದು ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಜೀಪಿಗೆ ಹಾನಿಯುಂಟಾಗಿ ಜೀಪಿನಲ್ಲಿದ್ದ ಚಾಲಕ ಗೋವರ್ಧನ್ ಮತ್ತು ಪಿಎಸ್ಐ ಹರಿವರ್ಧನ್ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Tuesday, April 7, 2015
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಶ್ರೀಮಂಗಲ ಸಮೀಪದ ಬಾಡಗರಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ: 6-4-2015ರಂದು ಸಂಜೆ ಬಾಡಗರಕೇರಿಯ ಪೋರಾಡಿನ ಟೀ ಎಸ್ಟೇಟ್ ಒಂದರ ಲೈನ್ ಮನೆಯಲ್ಲಿ ವಾಸವಿರುವ ಸುಧಾ ಎಂಬಾಕೆಯ ಗಂಡ ರಾಜನು ಬೇರೋಬ್ಬ ವ್ಯಕ್ತಿಯೊಂದಿಗೆ ಸುಧಾಳು ವಾಸವಿರುವ ಲೈನುಮನೆಗೆ ಬಂದು ಸುಧಾಳೊಂದಿಗೆ ಮಾತನಾಡುತ್ತಿದ್ದು, ಇದನ್ನು ಕಂಡ ಅರ್ಜುನ ಎಂಬವರು ರಾಜನು ಸುಧಾಳೊಂದಿಗೆ ಮಾತನಾಡುವುದನ್ನು ಆಕ್ಷೇಪಿಸಿದ್ದು ಆಗ ರಾಜನು ಅಂಗಳಕ್ಕೆ ಬಂದು ಸೌದೆ ದೊಣ್ಣೆಯೊಂದನ್ನು ತೆಗೆದು ಅರ್ಜುನರವರ ತಲೆಯ ಹಿಂಭಾಗಕ್ಕೆ ಹೊಡೆದು ಗಾಯಗೊಳಿಸಿದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು
ಆಕಸ್ಮಿಕವಾಗಿ ಕಾವೇರಿ ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವಿಗೀಡಾದ ಘಟನೆ ಮೂರ್ನಾಡು ಬಳಿಯ ಬಾಡಗ ಗ್ರಾಮದಲ್ಲಿ ನಡೆದಿದೆ. ದಿನಾಂಕ 06/04/2015ರಂದು ಕಗ್ಗೋಡ್ಲು ಗ್ರಾಮದ ನಿವಾಸಿ ಹೊನ್ನದ ಜಗದೀಶ ಎಂಬವರ ಮಗ ಅವಿನ್ ಹಾಗೂ ಆತನ ಸ್ನೇಹಿತ ಅಯ್ಯಪ್ಪ ಎಂಬ ಯುವಕರು ಮತ್ತು ಸ್ನೇಹಿತರು ಬಾಡಗ ಗ್ರಾಮದ ಬಳಿ ಕಾವೇರಿ ಹೊಳೆಯಲ್ಲಿ ಈಜಲು ಹೋಗಿದ್ದು ಹೊಳೆಯ ಆಳವಿರುವ ಸ್ಥಳದಲ್ಲಿ ಮುಳುಗಿ ಅವಿನ್ ಹಾಗೂ ಅಯ್ಯಪ್ಪ ಇಬ್ಬರೂ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮವಾಗಿ ಜೂಜಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಗೋಣಿಕೊಪ್ಪ ಪೊಲೀಸರು ಏಳು ಜನರನ್ನು ಬಂಧಿಸಿ ಕ್ರಮ ಕೈಗೊಂಢಿದ್ದಾರೆ. ದಿನಾಂಕ 06/04/2015 ರಂದು ಗೋಣಿಕೊಪ್ಪ ಠಾಣಾ ಪಿಎಸ್ಐ ಜೆ.ಇ.ಮಹೇಶ್ರವರು ಸಿಬ್ಬಂದಿಯವರೊಂದಿಗೆ ಗಸ್ತಿನಲ್ಲಿರುವಾಗ ಗೋಣಿಕೊಪ್ಪ ಕೈಕೇರಿ ಗ್ರಾಮದಲ್ಲಿರುವ ಪಡಿಕಲ್ ಅಜಿತ್ ರವರ ವಾಸದ ಮನೆಯ ಮುಂದುಗಡೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಕೆಲವರು ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಕುಶಾಲಪ್ಪ, ಮಹದೇವ, ಭಾನು ಪ್ರಸಾದ್, ಜಪ್ಪೆ ರಾಜ, ಪಿ.ಎ.ರಾಜ, ಅಜಿತ್ ಗೌಡ ಮತ್ತು ಮತ್ತಾಯಿ ಎಂಬವರನ್ನು ಬಂಧಿಸಿ ಜೂಜಾಡಲು ಬಳಸಿದ್ದ ರೂ.2,500/-ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮೋಟಾರು ಬೈಕ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಸುಂಟಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 05/04/2015 ರಂದು ರಾತ್ರಿ 10.00 ಗಂಟೆಗೆ ಸುಂಟಿಕೊಪ್ಪ ನಗರದ ನಿವಾಸಿ ಸ್ವಾಮಿ ಎಂಬವರ ಭಾವ ಸುರೇಶ್ಕುಮಾರ್ ಎಂಬಾತನು ಹೊಟೇಲ್ಗೆ ಸಾಂಬಾರ್ ತರಲು ಹೋಗಿ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿರುವಾಗ ಕೆಎ-12-ಎಲ್-3435 ರ ಮೋಟಾರ್ ಸೈಕಲ್ನ ಚಾಲಕ ಅನುಷ್ ಎಂಬಾತನು ಮೋಟಾರು ಸೈಕಲನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಸುರೇಶ್ ಕುಮಾರನಿಗೆ ಡಿಕ್ಕಿಪಡಿಸಿ ಗಾಯಗೊಂಡಿದ್ದು ಸುಂಟಿ ಕೊಪ್ಪ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದು ಮನೆಯಲ್ಲಿ ಊಟ ಮಾಡಿ ಮಲಗಿದ್ದು, ಮಾರನೇ ದಿನ ಬೆಳಿಗ್ಗೆ ಎಬ್ಬಿಸಿದಾಗ ಸುರೇಶ್ಕುಮಾರನು ಮಾತನಾಡದೆ ಇದ್ದು, ಕೂಡಲೇ ಸುಂಟಿಕೊಪ್ಪ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದಾಗ ವೈಧ್ಯರು ಮೃತಪಟ್ಟಿ ರುವುದಾಗಿ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Monday, April 6, 2015
ಕ್ಷುಲ್ಲಕ ಕಾರಣಕ್ಕೆ ಮಗನೇ ತಾಯಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ಸಂಪಾಜೆ ಬಳಿಯ ಚಡಾವು ಎಂಬಲ್ಲಿ ನಡೆದಿದೆ. ದಿನಾಂಕ 04-04-2015 ಸಂಪಾಜೆಯ ಬಳಿಯ ಚಡಾವು ನಿವಾಸಿ ಶ್ರೀಮತಿ ಗಂಗಮ್ಮರವರು ಮನೆಯ ಅಂಗಳದಲ್ಲಿ ನಿಂತುಕೊಂಡಿರುವುವಾಗ ಆಕೆಯ ಕಿರಿಯ ಮಗ ಅನಿಲನು ಕೆಲಸಕ್ಕೆ ಹೋಗದೇ ಸುತ್ತಾಡಿಕೊಂಡು ಮನೆಗೆ ಬಂದಾಗ ಗಂಗಮ್ಮನವರು ಮಗ ಅನಿಲ್ ಕೆಲಸಕ್ಕೆ ಹೋಗದೆ ಇರುವ ಬಗ್ಗೆ ಕೇಳಿದಾಗ ಅನಿಲ್ನು ಅಂಗಳದಲ್ಲಿ ಬಿದ್ದಿದ್ದ ಒಂದು ದೊಣ್ಣೆಯಿಂದ ಆಕೆಯ ಹೊಟ್ಟೆ, ಎಡಕಣ್ಣಿನ ಭಾಗಕ್ಕೆ ಹೊಡೆದು, ಕಾಲಿನಿಂದ ಹೊಟ್ಟೆಯ ಭಾಗಕ್ಕೆ ಒದ್ದು ಗಾಯಪಡಿಸಿದ್ದು, ಈ ಘಟನೆಯನ್ನು ಸಂಬಂಧಿಕರಾದ ತೇಜಾವತಿ ಮತ್ತು ಸುಲೋಚನಾರವರು ನೋಡಿ ಅನಿಲ್ನನ್ನು ಹೊಡೆಯದಂತೆ ತಡೆದು ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರಗೆ ದಾಖಲು ಮಾಡಿದ್ದು, ನಂತರ ಗಾಯಗೊಂಡ ಗಂಗಮ್ಮ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲುಪಡಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 05-04-2015 ರಂದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿಯ ಮೇಲೆ ಹಲ್ಲೆ
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಘಟನೆ ಗೋಣಿಕೊಪ್ಪ ಬಳಿಯ ಅರುವತೊಕ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 05/04/2015 ರಂದು ಪೊನ್ನಂಪೇಟೆಯ ಜೋಡುಬೆಟ್ಟಿ ನಿವಾಸಿ ಹೆಚ್.ಡಿ.ಭೋಜ ಎಂಬವರು ಗ್ರಾಮ ಪಂಚಾಯಿತಿ ವತಿಯಿಂದ ಕಾಫಿ ಬೋರ್ರ್ಡ್ ಬಳಿ ನೀರು ಬಿಡುತ್ತಿರುವಾಗ ಫಿಲಿಪೋಸ್ ಮ್ಯಾಥ್ಯೂ ಎಂಬವರು ಸ್ಥಳಕ್ಕೆ ಹೋಗಿ ವಿನಾ ಕಾರಣ ಭೋಜರವರನ್ನು ಕುರಿತು ಬೈದು ಅವರ ಜಾತಿಯನ್ನು ನೀಮದಿಸಿ ಕೈಯಿಂದ ಕೆನ್ನೆಗೆ ಹೊಡೆದು ಕೆಳ ಹೊಟ್ಟೆಯ ಭಾಗಕ್ಕೆ ಕಾಲಿನಿಂದ ಒದ್ದು ನೋವು ಪಡಿಸಿ ಕೊಲ್ಲಲು ಪ್ರಯತ್ನ ಮಾಡಿರುವುದಾಗಿ ದೂರು ನೀಡಿದ್ದು,ಇದೇ ಘಟನೆಗೆ ಸಂಬಂಧಿಸಿದಂತೆ ಭೋಜರವರು ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕಿನಲ್ಲಿ ಗುದ್ದಿ ಬೀಳಿಸಿ ಹಲ್ಲೆ ಮಾಡಿರುವುದಾಗಿ ಪಿಲಿಪೋಸ್ ಮ್ಯಾಥ್ಯೂರವರು ಸಹಾ ದೂರು ನೀಡಿದ್ದು ಗೋಣಿಕೊಪ್ಪ ಪೊಲೀಸರು ಎರಡೂ ದೂರನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಾರು ಡಿಕ್ಕಿ ; ಪಾದಚಾರಿ ದುರ್ಮರಣ
ಪಾದಚಾರಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ಗೋಣಿಕೊಪ್ಪ ನಗರದ ಕಾವೇರಿ ಕಾಲೇಜು ಬಳಿ ನಡೆದಿದೆ. ದಿನಾಂಕ 05/04/2015 ರಂದು ಕೈಕೇರಿ ನಿವಾಸಿ ಮಹಮದ್ ಫಿರೋಜ್ ಎಂಬವರು ಕೈಕೇರಿ ಗ್ರಾಮದಿಂದ ಸಹಪಾಠಿಗಳೊಂದಿಗೆ ಗೋಣಿಕೊಪ್ಪದ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಕಾವೇರಿ ಕಾಲೇಜಿನ ಮುಂಭಾಗ ಎದುರುಗಡೆಯಿಂದ ಬಂದ ಕೆಎ-12-ಪಿ-7975 ರ ಕಾರನ್ನು ಅದರ ಚಾಲಕ ನೂರೇರ ವಿನುರವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡುಬಂದು ಮಹಮ್ಮದ್ ಇಸ್ಲಾಂ ಮತ್ತು ಮಹಮ್ಮದ್ ಇಂತಿಯಾಜ್ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಮಹಮ್ಮದ್ ಇಸ್ಲಾಂ ಸ್ಥಳದಲ್ಲೇ ಮೃತ ಪಟ್ಟಿದ್ದು ಮಹಮ್ಮದ್ ಇಂತಿಯಾಜ್ಗೆ ಗಾಯವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಜೂಜಾಟ ಇಬ್ಬರ ಬಂಧನ
ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ: 05-04-15ರಂದು ಕೊಮ್ಮೆತ್ತೋಡು ಗ್ರಾಮದ ಮದರಸ ಹಾಗೂ ಭೀಮಯ್ಯ ಎಂಬವರ ಗದ್ದೆಯ ಮಧ್ಯ ಭಾಗದಲ್ಲಿ ನೀರು ಹರಿಯುವ ತೋಡಿನ ದಡದಲ್ಲಿ ಕೆಲವರು ಅಕ್ರಮವಾಗಿ ಜೂಜಾಟ ಆಡುತ್ತಿದ್ದಾರೆ ಎಂಬ ಕಚಿತ ಸುಳಿವಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪಿಎಸ್ಐ ನಂಜುಂಡ ಸ್ವಾಮಿಯವರು ತಮ್ಮ ಠಾಣಾ ಸಿಬ್ಬಂದಿ ಹಾಗೂ ಪಂಚ ರೊಂದಿಗೆ ಕೊಮ್ಮೆತ್ತೋಡು ಗ್ರಾಮದ ಜೂಜಾಟ ನಡೆಯುತ್ತಿದೆ ಎನ್ನಲಾದ ಸ್ಥಳಕ್ಕೆ ದಾಳಿ ಮಾಡಿದ್ದು ಸ್ಥಳದಲ್ಲಿ 4 ಜನ ವ್ಯಕ್ತಿಗಳು ಜೂಜಾಟ ಆಡುತ್ತಿದ್ದು ಪೊಲೀಸರನ್ನು ಕಂಡ ನೋಡಿ ಇಬ್ಬರು ವ್ಯಕ್ತಿಗಳು ಕಣದಿಂದ ಓಡಿ ಹೋಗಿದ್ದು, ಉಳಿದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಜೂಜಾಟಕ್ಕೆ ಬಳಸಿದ್ದ ರೂ.2200/- ರೂಪಾಯಿ ನಗದು ಹಣವನ್ನು ಮತ್ತು 52 ಇಸ್ಪೇಟ್ ಎಲೆಗಳನ್ನು ಮಹಜರು ಮೊಲಕ ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Sunday, April 5, 2015
Saturday, April 4, 2015
ಎರಡು ಮೋಟಾರ್ ಸೈಕಲ್ಗಳು ಪರಸ್ಪರ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ವಿರಾಜಪೇಟೆ ಹತ್ತಿರದ ಕಾಕೋಟು ಪರಂಬುವಿನಲ್ಲಿ ನಡೆದಿದೆ. ದಿನಾಂಕ 2-4-2015 ರಂದು ಎಂ.ಕೆ. ಚಂದ್ರ ಎಂಬವರು ರಾಬಿನ್ ಎಂಬುವರೊಂದಿಗೆ ತಮ್ಮ ಮೋಟಾರ್ ಸೈಕಲ್ನಲ್ಲಿ ವಿರಾಜಪೇಟೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಜೀವನ್ ಎಂಬುವರು ತಮ್ಮ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎಂ.ಕೆ. ಚಂದ್ರ ರವರ ಮೋಟಾರ್ ಸೈಕಲ್ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ನಲ್ಲಿದ್ದ ಸವಾರರಿಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾದಚಾರಿಗೆ ದ್ವಿಚಕ್ರವಾಹನ ಡಿಕ್ಕಿ:
ಪಾದಚಾರಿಯೊಬ್ಬರಿಗೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಕೊಡ್ಲಿಪೇಟೆಯಲ್ಲಿ ನಡೆದಿದೆ. ಶನಿವಾರಸಂತೆ ಠಾಣಾ ಸರಹದ್ದಿನ ಸುಳುಗಳಲೆ ಕಾಲೋನಿ ನಿವಾಸಿ ರೋಹಿತ್ ಎಂಬುವರು ಸ್ನೇಹಿತ ಸಲೀಂ ಎಂಬುವರೊಂದಿಗೆ ಕೊಡ್ಲಿಪೇಟೆಯ ಕಾಲೇಜು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಕೆ.ಎ-12-ಕೆ-3073 ರ ಮೋಟಾರ್ ಸೈಕಲ್ ಸವಾರ ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಸಲೀಂ ರವರು ಗಾಯಗೊಂಡಿದ್ದು, ಶನಿವಾರಸಂತೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆಟೋ ಅವಘಡ ಇಬ್ಬರಿಗೆ ಗಾಯ:
ಚಾಲಕನ ನಿಯಂತ್ರಣ ಕಳೆದುಕೊಂಡ ಆಟೋ ರಿಕ್ಷಾವೊಂದು ರಸ್ತೆಯಲ್ಲಿ ಮಗುಚಿ ಬಿದ್ದು ಇಬ್ಬರು ಗಾಯಗೊಂಡ ಘಟನೆ ವಿರಾಜಪೇಟೆ ಹತ್ತಿರದ ಕಡಂಗಮರೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಬೊಳ್ಳುಮಾಡು ಗ್ರಾಮದ ನಿವಾಸಿ ಹೆಚ್.ಎಸ್. ದಯಾನಂದ ಎಂಬುವರು ತಮ್ಮ ಸ್ನೇಹಿತರೊಂದಿಗೆ ಕಡಂಗಮರೂರು ಗ್ರಾಮದ ಕಡೆಗೆ ಹೋಗುತ್ತಿದ್ದಾಗ ರಿಕ್ಷಾ ಚಾಲಕ ರವಿ ಎಂಬವರು ಸದರಿ ಆಟೋರಿಕ್ಷಾವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿ ಮಗುಚಿ ಬಿದ್ದು ರಿಕ್ಚಾದಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Friday, April 3, 2015
ಪಾದಚಾರಿ ಬಾಲಕನೊಬ್ಬನಿಗೆ ಕಾರು ಡಿಕ್ಕಿಯಾದ ಪರಿಣಾಮ ಗಾಯಗಳಾಗಿರುವ ಘಟನೆ ಭಾಗಮಂಡಲ ಬಳಿಯ ಪದಕಲ್ಲು ಎಂಬಲ್ಲಿ ನಡೆದಿದೆ. ದಿನಾಂಕ 01-04-2015 ರಂದು ಪದಕಲ್ಲು ನಿವಾಸಿ ಇಂದುಕುಮಾರಿ ಎಂಬವರು ಅವರ ತಾಯಿ ಮನೆಗೆ ಆಕೆಯ ಮಗ ಪವನ್ ನನ್ನು ಬಿಟ್ಟು ಬರಲೆಂದು ಪದಕಲ್ಲು ಗ್ರಾಮದ ದೇವಸ್ಥಾನದ ಮುಂದೆ ರಸ್ತೆಯ ಬದಿಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಮಡಿಕೇರಿ ಬಳಿಯ ಮೇಕೇರಿಯ ಶಾಂತಿ ಎಸ್ಟೇಟಿನ ಕುಶಾಲ್ ಶೆಟ್ಟಿ ಎಂಬಾತನು ಆತನ ಕೆಎ-04-ಎಂಹೆಚ್- 2167ರ ಬಿಳಿ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆಯ ಎಡ ಭಾಗದಲ್ಲಿದ್ದ ಮಗ ಪವನ್ ಗೆ ಡಿಕ್ಕಿಪಡಿಸಿದ್ದು, ಕಾರಿನ ಹಿಂಭಾಗದ ಎಡಭಾಗದ ಚಕ್ರಕ್ಕೆ ಆಕೆಯ ಮಗ ಪವನ್ನ ಬಲಕಾಲು ಸಿಕ್ಕಿ ಜಖಂ ಆಗಿದ್ದು, ಅಲ್ಲದೇ ತಲೆಯ ಹಿಂಭಾಗಕ್ಕೆಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಮೇಲೆ ಹಲ್ಲೆ
ಪತ್ನಿಯ ಮೇಲೆ ಪತಿಯು ವಿನಾ ಕಾರಣ ಹಲ್ಲೆ ಮಾಡಿದ ಘಟನೆ ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದಲ್ಲಿ ನಡೆದಿದೆ. ಕುರ್ಚಿ ಗ್ರಾಮದ ಮಚ್ಚಮಾಡ ಕರುಂಬಯ್ಯ ನವರ ಲೈನು ಮನೆಯಲ್ಲಿ ವಾಸವಿರುವ ಪಂಜರಿ ಎರವರ ಪೊನ್ನೆ ಎಂಬ ಮಹಿಳೆಯು ಸುಮಾ ರು 6 ವರ್ಷಗಳ ಹಿಂದೆ ಅದೇ ಗ್ರಾಮದ ಪಂಜರಿಎರವರ ಚಿಣ್ಣರವರನ್ನು ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ನಂತರ ಚಿಣ್ಣರವರು ಸುಮಾರು ಈಗ್ಗೆ 4 ವರ್ಷಗಳಿಂದ ಪತ್ನಿ ಪೊನ್ನೆಯನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದು, ಸಾಹುಕಾರರು ಮತ್ತು ತಂದೆ ಚಮಯ ರವರು ಬುದ್ದಿವಾದ ಹೇಳಿದರೂ ಸುಧಾರಿಸದೇ ಇದ್ದು, ದಿನಾಂಕ 02-04-2015 ರಂದು ಸಂಜೆ ಗಂಡ ಚಿಣ್ಣನು ಪತ್ನಿ ಪೊನ್ನೆಯನ್ನು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಲ್ಲಿ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರವಾಸಿಗಳಾಗಿ ಬಂದು ಜಲಪಾತ ವೀಕ್ಷಿಸಲೆಂದು ಬಂದ ಇಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವಿಗೀಡಾದ ಘಟನೆ ಸೋಮವಾರಪೇಟೆ ಬಳಿಯ ಮಲ್ಲಳ್ಳಿ ಜಲಪಾತದ ಬಳಿ ನಡೆದಿದೆ. ದಿನಾಂಕ : 02-04-2015 ರಂದು ಹಾಸನ ಜಿಲ್ಲೆಯ ಸಕಲೇಶಪುರದ ಬಾಗೆಯ ಜೆಎಸ್ಎಸ್ ಪಬ್ಲಿಕ್ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತ ವೀಕ್ಷಿಸಲು ಪ್ರವಾಸ ಬಂದಿದ್ದು, ಅಪರಾಹ್ನ ಜೊತೆಯಲ್ಲಿದ್ದ ಹಾಸ್ಟೆಲ್ ವಾರ್ಡನ್ ಶಿವಕುಮಾರ್ ಮತ್ತು ವಿದ್ಯಾರ್ಥಿ ಮದನ್ರವರು ಜಲಪಾತದಲ್ಲಿ ಕೈಕಾಲು ಮುಖ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಆಳವಾದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮೋಟಾರು ಬೈಕಿನಲ್ಲಿ ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಹಿಂದಿನಿಂದ ಕಾರೊಂದು ಡಿಕ್ಕಿಯಾದ ಘಟನೆ ಸೋಮವಾರಪೇಟೆ ಬಳಿಯ ನಗರೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ : 31-03-2015 ರಂದು ಸೋಮವಾರಪೇಟೆ ಠಾಣಯ ಪೊಲೀಸ್ ಸಿಬ್ಬಂದಿ ಕುಶಾಲಪ್ಪ ಮೂಲ್ಯ ಎಂಬವರು ಕರ್ತವ್ಯ ಮುಗಿಸಿಕೊಂಡು ಅವರ ಮೋಟಾರು ಬೈಕು ಸಂಖ್ಯೆ ಕೆಎ-12-ಜೆ-158 ರಲ್ಲಿ ಸೋಮವಾರಪೇಟೆಯಿಂದ ಮದಲಾಪುರ ಕಡೆಗೆ ಹೋಗುತ್ತಿರುವಾಗ ನಗರೂರು ಬಳಿ ಹಿಂದಿನಿಂದ ಒಂದು ಟಾಟಾ ಇಂಡಿಕಾ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕುಶಾಲಪ್ಪ ಮೂಲ್ಯರವರು ಚಾಲಿಸುತ್ತಿದ್ದ ಮೋಟಾರು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ತೀವ್ರ ಗಾಯಗಳಾಗಿ ಪ್ರಜ್ಞೆ ತಪ್ಪಿ ಹೋಗಿದ್ದು ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರಗೆ ದಾಖಲಿಸಲಾಗಿದೆ. ಡಿಕ್ಕಿಪಡಿಸಿದ ಕಾರು ಚಾಲಕ ಕಾರನ್ನು ನಿಲ್ಲಿಸದೆ ಹೋಗಿದ್ದು ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಸುಂಟಿಕೊಪ್ಪ ಬಳಿಯ ಹೇರೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 01.04.2015 ರಂದು ಸಮಯ ರಾತ್ರಿ 8.30 ಗಂಟೆಗೆ ಹೇರೂರು ಗ್ರಾಮದ ಕಾಲೋನಿಯಲ್ಲಿ ವಾಸವಿರುವ ಕೂರ ಹಾಗೂ ನಾಗೇಶ್ ಎಂಬವರ ನಡುವಿನ ಹಳೆ ವೈಷಮ್ಯದ ಕಾರಣದಿಂದಾಗಿ ಕೂರ, ಮಾದಪ್ಪ, ಅಣ್ಣಯ್ಯ ಮತ್ತು ಕುಮಾರ ಎಂಬವರು ಸೇರಿಕೊಂಡು ನಾಗೇಶ್ರವರನ್ನು ಕೊಲೆ ಮಾಡುವ ಉದ್ದೇಶದಿಂದ ಮಾದಪ್ಪ ಕತ್ತಿಯಿಂದ ನಾಗೇಶ್ನ ಮುಖದ ಭಾಗಕ್ಕೆ ಕಡೆದು ಗಾಯಪಡಿಸಿರುವುದಲ್ಲದೆ ಇತರರು ಕೈಯಿಂದ ನಾಗೇಶನ ಶರೀರಕ್ಕೆ ಹೊಡೆದು ಕಾಲಿನಿಂದ ಒದ್ದು, ನೋವುಂಟುಮಾಡಿರುತ್ತಾರೆಂದು ಹೇರೂರು ನಿವಾಸಿ ರಾಜು ಎಂಬವರುನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Thursday, April 2, 2015
Wednesday, April 1, 2015
ಜೀವನದಲ್ಲಿಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:
ವಿರಾಜಪೇಟೆ ತಾಲೋಕು ಗುಹ್ಯ ಗ್ರಾಮದ ನಿವಾಸಿ ಸಿ. ಅಂಥೋಣಿ ಎಂಬವರು ಕೆಲವು ವರ್ಷಗಳಿಂದ ಹೊಟ್ಟೆನೋವಿನಿಂದ ನರಳುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 31-3-2015ರ ನಾಲ್ಕು ದಿವಸಗಳ ಹಿಂದೆ ಇಬ್ನಿವಳವಾಡಿ ಗ್ರಾಮದ ನೀರುಕೊಲ್ಲಿ ಎಂಬಲ್ಲಿ ಕಾಫಿತೋಟವೊಂದರಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಾಲಾ ಉಗ್ರಾಣದಿಂದ ಕಬ್ಬಿಣ ಕಳವು:
ವಿರಾಜಪೇಟೆ ನಗರದಲ್ಲಿರುವ ತ್ರಿವೇಣಿ ಪ್ರೌಢಶಾಲೆಯ ದಾಸ್ತಾನು ಕೊಠಡಿಲ್ಲಿ ಶೇಖರಿಸಿಟ್ಟಿದ್ದ ವಾಹನದ 53 ಕಬ್ಬಿಣ್ಣದ ಲೀಫ್ ಗಳನ್ನು ಹಿಂದೆ ಸದರಿ ಶಾಲೆಯ ವಾಹನದಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕುಕ್ಲೂರು ಗ್ರಾಮದ ನಿವಾಸಿ ದೀಪಕ್ ಎಂಬಾತ ಕಳವುಮಾಡಿಕೊಂಡು ಹೋಗಿದ್ದು ಇದರ ಬೆಲೆ ಅಂದಾಜು ರೂ.20000/- ಗಳಾಗಬಹುದು ಎಂದು ತ್ರಿವೇಣಿ ಪ್ರೌಢ ಶಾಲೆಯ ಕಾರ್ಯದರ್ಶಿ ಯವರಾದ ಸಿ.ಎಂ. ನಾಣಯ್ಯರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮಹಿಳೆ ಮೇಲೆ ಅತ್ಯಾಚಾರ, ಪ್ರಕರಣದಾಖಲು:
ಸೌದೆಗೆ ಹೋದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಬಲಾತ್ಕಾರ ಅತ್ಯಾಚಾರ ನಡೆಸಿದಘಟನೆ ಗೋಣಿಕೊಪ್ಪ ಠಾಣಾ ಸರಹದ್ದಿನ ಹಾತೂರು ಗ್ರಾಮದಲ್ಲಿ ನಡೆದಿದೆ. ಹಾತೂರು ಗ್ರಾಮದ ನಿವಾಸಿ ಅಣ್ಣಪ್ಪ ಎಂಬವರ ಪತ್ನಿ ಶ್ರೀಮತಿ ದೇವಿ ಎಂಬವರು ದಿನಾಂಕ 31-3-2015 ರಂದು ಹಾತೂರು ಗ್ರಾಮದ ತಮ್ಮ ಮಾಲೀಕರ ಕಾಫಿ ತೋಟಕ್ಕೆ ಸೌದೆ ತರಲು ಹೋಗಿದ್ದು, ಅಲ್ಲಿಗೆ ಆರೋಪಿ ಮುಕ್ಕಾಟಿರ ಸುಬ್ರಮಣಿ ಎಂಬುವರು ಹೋಗಿ ಸದರಿ ಶ್ರೀಮತಿ ದೇವಿಯವರ ಮೇಲೆ ಬಲತ್ಕಾರವಾಗಿ ಅತ್ಯಾಚಾರ ಮಾಡಿರುವುದಾಗಿ ಫಿರ್ಯಾದಿ ಶ್ರೀಮತಿ ದೇವಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.