Sunday, May 31, 2015

ಕಾರು ಅಫಘಾತ, ಇಬ್ಬರಿಗೆ ಗಾಯ 
             ಕಾರೊಂದು ಅಫಘಾತಕ್ಕೀಡಾಗಿ ಇಬ್ಬರಿಗೆ ಗಾಯಗಳಾದ ಘಟನೆ ಕುಶಾಲನಗರ ಬಳಿಯ ದೊಡ್ಡಬೆಟ್ಟಗೇರಿ ಬಳಿ ಸಂಭವಿಸಿದೆ. ದಿನಾಂಕ 29/2015ರಂದು ಕೇರಳದ ಕೋಯಿಕ್ಕೋಡಿನ ನಿವಾಸಿ ಸಜೇಶ್‌ ಎಂಬವರು ಅವರ ಸ್ನೇಹಿತ ರಂಜಿತ್‌ ಎಂಬವರೊಂದಿಗೆ ಕೆಎಲ್‌-11-ಎಆರ್‌-2352ರ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಹಾಸನದ ಅರಕಲಗೂಡಿನಲ್ಲಿರುವ ಸ್ನೇಹಿತನ ಮನೆಗೆ ಕುಟುಂಬ ಸಮೇತರಾಗಿ ಹೋಗಿ ವಾಪಾಸು ಬರುತ್ತಿರುವಾಗ ಕುಶಾಲನಗರ ಬಳಿಯ ದೊಡ್ಡಬೆಟ್ಟಗೇರಿ ಗ್ರಾಮದ ಬಳಿ ರಸ್ತೆಯಲ್ಲಿ ಅಡ್ಡಲಾಗಿ ಬಂದ ಒಂದು ನಾಯಿಯನ್ನು ಕಂಡು ಚಾಲಕ ರಂಜಿತ್‌ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಬದಿಗೆ ಚಾಲಿಸಿದ ಪರಿಣಾಮ ಕಾರು ಅವರ ನಿಯಂತ್ರಣ ಕಳೆದುಕೊಂಡು ಕತ್ತರಿಸಿದ ಮರವೊಂದರ ಬುಡಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಎಲ್ಲರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಂಗನವಾಡಿ ಕೇಂದ್ರದಿಂದ ಆಹಾರ ಸಾಮಗ್ರಿ ಕಳವು 
                  ಅಂಗನವಾಡಿ ಕೇಂದ್ರವೊಂದರ ಬಾಗಿಲು ಮುರಿದು ಆಹಾರ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ಕೊಡ್ಲಿಪೇಟೆ ಬಳಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ನಡೆದಿದೆ. ದೊಡ್ಡಕೊಡ್ಲಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಡಿ.ಕೆ.ಶಾರದಮ್ಮ ಎಂಬವರು ದಿನಾಂಕ 28/05/2015ರಂದು ಅಂಗನವಾಡಿಯನ್ನು ಎಂದಿನಂತೆ ಮುಚ್ಚಿ ಬೀಗ ಹಾಕಿ ಹೋಗಿದ್ದು ದಿನಾಂಕ 29/05/2015ರಂದು ಗ್ರಾಮ ಪಂಚಾಯಿತಿ ಚುನಾವಣೆ ಪ್ರಯುಕ್ತ ರಜೆ ಇದ್ದುದರಿಂದ ದಿನಾಂಕ 30/05/2015ರಂದು ಅಂಗನವಾಡಿ ಕೇಂದ್ರಕ್ಕೆ ಎಂದಿನಂತೆ ಹೋಗಿ ನೋಡಿದಾಗ ಯಾರೋ ಕಳ್ಳರು ಅಂಗನವಾಡಿ ಕೇಂದ್ರದ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಕೇಂಧ್ರದಲ್ಲಿದ್ದ ಸುಮಾರು ರೂ. 3,000/- ಮೌಲ್ಯದ 100 ಕೆ.ಜಿ.ಗೋದಿ, 28 ಕೆ.ಜಿ.ತೊಗರಿಬೇಳೆ ಮತ್ತು 30 ಕೆ.ಜಿ. ಹೆಸರು ಕಾಳನ್ನು ಕಳವು ಮಾಡಿಕೊಂಡು ಹೋಗಿರುವುದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಅವಘಡ, ಹಾನಿ
            ಚಾಲಕನ ಅಜಾಗರೂಕತೆಯಿಂದ ಕಾರೊಂದು ಅವಘಡಕ್ಕೀಡಾಗಿ ಹಾನಿಹೊಳಗಾದ ಘಟನೆ ಮೂರ್ನಾಡು ನಗರದಲ್ಇ ನಡೆದಿದೆ. ದಿನಾಂಕ 30.05.2015 ರಂದು ಮಡಿಕೇರಿ ನಗರದ ಗೌಳಿಬೀದಿ ನಿವಾಸಿ ಸುಪ್ರಿಯಾ ಎಂಬವರು ಅವರ ಪತಿ ರವಿಕುಮಾರ್‌ ಎಂಬವರೊಂದಿಗೆ ಅವರ ಬಾಪ್ತು ಕೆಎ-12ಪಿ-5121 ರ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸಂಸಾರ ಸಮೇತವಾಗಿ ಕಕ್ಕಬೆಯ ಪಾಡಿ ಇಗ್ಗುತಪ್ಪ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ವಾಪಾಸ್ಸು ಮೂರ್ನಾಡು ಮೂಲಕ ಮಡಿಕೇರಿಗೆ ಬರುತ್ತಿರುವಾಗ ಸಂಜೆ  ಮೂರ್ನಾಡು ದೂರವಾಣಿ ವಿನಿಮಯ ಕೇಂದ್ರದ ಬಳಿ ಚಾಲಕ ರವಿ ಕುಮಾರ್‌ರವರು ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ಆಕಸ್ಮಿಕವಾಗಿ ರಸ್ತೆಗೆ ನುಗ್ಗಿದ ದನಗಳ ಹಿಂಡಿಗೆ ಢಿಕ್ಕಿಯಾದ ಪರಿಣಾಮ ಕಾರು ಜಖಂಗೊಂಡಿರುವುದಾಗಿದೆ.  ಕಾರಿನಲ್ಲಿದ್ದ ಯಾರಿಗೂ ಹಾನಿ ಉಂಟಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಪಾದಚಾರಿಗೆ ವಾಹನ ಡಿಕ್ಕಿ ; ಗಾಯ
            ಪಾದಚಾರಿಯೊಬ್ಬರಿಗೆ ಬೊಲೆರೋ ಜೀಪೊಂದು ಡಿಕ್ಕಿಯಾಗಿ ನಿಲ್ಲಿಸದೆ ಹೋದ ಘಟನೆ ಕುಶಾಲನಗರ ಬಳಿಯ ಕಣಿವೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 30/05/3015 ರಂದು ಕಣಿವೆ ಗ್ರಾಮದ ನಿವಾಸಿ ನಂಜುಂಡ ಎಂಬವರು ಮನೆಗೆ ಸಾಮಾನು ತರಲೆಂದು ಮನೆಯಿಂದ ಹೊರಟು ಮುಂದಿನ ಮುಖ್ಯ ರಸ್ತೆ ತಲುಪುವಾಗ ಹೆಬ್ಬಾಲೆ ಕಡೆಯಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಒಂದು ಕಪ್ಪು ಬಣ್ಣದ ಬೊಲೆರೋ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಂಜುಂಡರವರಿಗೆ  ಡಿಕ್ಕಿ ಪಡಿಸಿದ ಪರಿಣಾಮ  ನಂಜುಂಡರವರಿಗೆ ತೀವ್ರತರದ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಕ್ಕಿ ಪಡಿಸಿದ ಬೊಲೆರೋ ಜೀಪು ಚಾಲಕ ಜೀಪನ್ನು ನಿಲ್ಲಿಸದೆ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, May 30, 2015

ಮೋಟಾರ್‌ ಸೈಕಲ್‌ ಮುಖಾಮುಖಿ ನಾಲ್ವರಿಗೆ ಗಾಯ:

     ಸಿದ್ದಾಪುರ ಪೊಲೀಸ್‌ ಠಾಣಾ ಸರಹದ್ದಿನ ಬಾಡಗಬಾಣಂಗಾಲ ಗ್ರಾಮದ ನಿವಾಸಿ ಮಂಜುನಾಥ ತನ್ನ ಪತ್ನಿಯೊಂದಿಗೆ ದಿನಾಂಕ 29-5-2015 ರಂದು ತಮ್ಮ ಮೋಟಾರ್‌ ಸೈಕಲ್‌ನಲ್ಲಿ ಘಟ್ಟದಳ್ಳ ಶಾಲೆಗೆ ಹೋಗಿ ಮತದಾನ ಮಾಡಿ ಮರಳುತ್ತಿರುವಾಗ ಬಾಡಗ ಬಾಣಂಗಾಲ ಗ್ರಾಮದಲ್ಲಿ ತಲುಪುವಾಗ್ಗೆ ಹುಂಡಿ ಕಡೆಯಿಂದ ಬರುತ್ತಿದ್ದ ಮೋಟಾರ್‌ ಸೈಕಲನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಂಜುನಾಥನವರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್‌ ಸಕಲ್‌ಗಳಲ್ಲಿಪ್ರಯಾಣಿಸುತ್ತಿದ್ದ ನಾಲ್ಕು ಮಂದಿಗೆ ಗಾಯಗಳಾಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಜೀವನದಲ್ಲಿ ಜಿಗುಪ್ಸೆ, ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:

ಮಡಿಕೇರಿ ತಾಲೋಕು, ಅರೆಕಾಡು ಗ್ರಾಮದ ನವಾಸಿ ಮುತ್ತಪ್ಪ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29-5-2015 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸಿದ್ದಾಪುರಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಾರಿಗೆ ಲಾರಿ ಡಿಕ್ಕಿ, ಕಾರು ಜಖಂ:
ಮಡಿಕೇರಿ ತಾಲೋಕು, ತಾಳತ್‌ಮನೆ ಗ್ರಾಮದ ನಿವಾಸಿ ಥೋಮಸ್‌ ಡಿಸೋಜ ಎಂಬುವರು ತಮ್ಮ ಕಾರಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಲಾರಿಯನ್ನು ಅದರ ಚಾಲಕ ನಿರ್ಲಕ್ಷ್ಯ ಮತ್ತು ದುಡುಕುತನದಿಂದ ಚಲಾಯಿಸಿಕೊಂಡು ಬಂದು ಥೋಮಸ್‌ ಡಿಸೋಜರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, May 29, 2015

ಕ್ಷುಲ್ಲಕ ಕಾರಣಕ್ಕೆ, ವ್ಯಕ್ತಿ ಮೇಲೆ ಹಲ್ಲೆ: 
      ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ಪಟ್ಟಣದ ಕೆ.ಎಸ್‌.ಆರ್‌ಟಿ.ಸಿ. ಬಸ್ಸ್ ನಿಲ್ದಾಣದಲ್ಲಿ ನಡೆದಿದೆ. ದಿನಾಂಕ 27-05-15 ರಂದು ಸೋಮವಾರಪೇಟೆ ತಾಲೋಕು ನಗರಳ್ಳಿ ಗ್ರಾಮದ ರಘು ಎಂಬುವರು ತಮ್ಮ ನೆಂಟರ ಮದುವೆ ಕಾರ್ಯಕ್ರಮಕ್ಕೆ ಸೋಮವಾರಪೇಟೆಗೆ ಬಂದಿದ್ದು. ಅದೇ ಮದುವೆಗೆ ಅವರ ಸಂಬಂಧಿ ರವಿ ಮತ್ತು ಕಾವೇರಮ್ಮ ರವರು ಬಂದಿದ್ದು. ಮದುವೆ ಮುಗಿಸಿ ವಾಪಸ್ಸು ಹೋಗಲು ಸೋಮವಾರಪೇಟೆ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿ ನಿಂತಿರುವಾಗ್ಗೆ ರಘು ರವರು ರವಿರವರೊಂದಿಗೆ ಅಮ್ಮ ಸಣ್ಣಪುಟ್ಟ ವಿಚಾರಕ್ಕೆ ಯಾವಾಗಲೂ ನಮ್ಮೊಂದಿಗೆ ಜಗಳ ಮಾಡುತ್ತಾರೆ. ಅಲ್ಲದೆ ಮರ ಮಾರಿದ ಹಣ ಕೊಡು ಎಂದು ಗಲಾಟೆ ಮಾಡುತ್ತಾರೆ, ಅವರಿಗೆ ಸ್ವಲ್ಪ ಬುದ್ದಿ ಹೇಳು ಎಂದು ಹೇಳಿದ್ದು, ಇದರಿಂದ ಕೋಪಗೊಂಡ ರವಿರವರು ರಘುವರೊಂದಿಗೆ ಜಗಳ ಮಾಡಿ ರೀಪರ್‌ ನಿಂದ ಹೊಡೆದುದಲ್ಲದೆ ಕಾವೆರಮ್ಮ ರವರು ಕೈಯಿಂದ ಹೊಡೆದು ನೋವು ಪಡಿಸಿರುವುದಾಗಿ ರಘುವರ ಪತ್ನಿ ವೀಣಾ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, May 28, 2015

ಅಪ್ರಾಪ್ತ ಹುಡುಗಿ ಕಾಣೆ, ಅಪಹರಣದ ಶಂಕೆ:

      ಕಾಲೇಜಿಗೆ ಹೋದ ಹುಡುಗಿಯೊಬ್ಬಳು ಕಾಣೆಯಾದ ಘಟನೆ ವಿರಾಜಪೇಟೆ ತಾಲೋಕು ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಕರಡಿಗೋಡು ಗ್ರಾಮದ ನಿವಾಸಿ ಪಿ.ಎಂ. ಸುಂದರ ಎಂಬುವರ ಮಗಳು ಪಿ.ಎಸ್. ಗೌತಮಿ(16) ದಿನಾಂಕ 26-5-2015 ರಂದು ಬೆಳಿಗ್ಗೆ 08:30 ಗಂಟೆಗೆ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಇಲ್ಲಿಯ ತನಕ ಮನೆಗೆ ಹೋಗದೆ ಕಾಣೆಯಾಗಿದ್ದು, ಈಕೆಯ ಬಗ್ಗೆ ನೆಂಟರಿಷ್ಟರಲ್ಲಿ, ಸ್ನೇಹಿತರ ಮನೆಯಲ್ಲಿ ಹಾಗೂ ಇನ್ನೀತರ ಕಡೆಗಳಲ್ಲಿ ವಿಚಾರಿಸಿದಲ್ಲೂ ಇವಳ ಬಗ್ಗೆ ಯಾವುದೇ ಮಾಹಿತಿ ದೊರಕದೇ ಇದ್ದು, ಈಕೆ ಅಪ್ರಾಪ್ತ ವಯಸ್ಸಿನವಳಾಗಿದ್ದು ಈಕೆಯನ್ನು ಯಾರಾದರು ಅಪಹರಿಸಿರಬಹುದೆಂದು ಪಿ.ಎಂ. ಸುಂದರರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳ್ಳರ ಬಂಧನ, 1.3 ಕೋಟಿಮೌಲ್ಯದ ಚಿನ್ನಾಭರಣ ವಶ:

        ಮನೆಯೊಂದರ ಬಾಗಿಲು ಮುರಿದು ಅಪಾರ ಪ್ರಮಾಣದ ಚಿನ್ನಾಭರಣ ಹಾಗು ನಗದನ್ನು ಕಳ್ಳತನ ಮಾಡಿದ ಪ್ರಕರಣವನ್ನು  ಭೇದಿಸಿದ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿನಾಂಕ 2/5/2015ರಂದು ವಿರಾಜಪೇಟೆ ತಾಲೋಕು, ಸುಳುಗೋಡು ಗ್ರಾಮದ ನಿವಾಸಿ ಕೆ.ಯು.ಬೋಪಯ್ಯರವರು ತಮ್ಮ ಅಣ್ಣ ಪೊನ್ನಪ್ಪನವರ ಮದುವೆ ಕಾರ್ಯಕ್ರಮದ ಸಂಬಂಧ ಸಮಯ 17:30ಗಂಟೆಗೆ ಕುಟುಂಬ ಸಮೇತರಾಗಿ ಮನೆಗೆ ಬೀಗ ಹಾಕಿಕೊಂಡು ಪೊನ್ನಂಪೇಟೆಯ ಕೊಡವ ಸಮಾಜಕ್ಕೆ ಹೋಗಿದ್ದು, ಕಾರ್ಯಕ್ರಮವನ್ನು ಮುಗಿಸಿಕೊಂಡು ಮದ್ಯರಾತ್ರಿ 00:30ಗಂಟೆ ಸಮಯದಲ್ಲಿ ತಮ್ಮ ತಂದೆಯವರೊಂದಿಗೆ ಮನೆಗೆ ಬಂದು ಮುಂಭಾಗದ ಬಾಗಿಲು ತೆರೆದು ಒಳಕ್ಕೆ ಹೋಗಿ ನೋಡಲಾಗಿ ಯಾರೋ ಕಳ್ಳರು ಹಿಂಭಾಗದ ಬಾಗಿಲನ್ನು ಮೀಟಿ ತೆಗೆದು ಒಳಗೆ ಪ್ರವೇಶಿಸಿ ಮನೆಯಿಂದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡುಹೋಗಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಪ್ರಕರಣದ ತನಿಖೆಯನ್ನು ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಪಿ.ಕೆ.ರಾಜುರವರು ಕೈಗೊಂಡಿದ್ದರು.
          ಸದರಿ ಪ್ರಕರಣದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಮತಿ ವರ್ತಿಕಾ ಕಟಿಯಾರ್‌, ವಿರಾಜಪೇಟೆ ಡಿಎಸ್‌ಪಿ ಶ್ರೀ ಕುಮಾರ್ ಚಂದ್ರ, ಇವರ ಮಾರ್ಗದಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ  ಪಿ.ಕೆ.ರಾಜು,  ಪಿಎಸ್‌ಐ ಪೊನ್ನಂಪೇಟೆ ಠಾಣೆ, ಪಿಎಸ್‌ಈ  ಶ್ರೀಮಂಗಲ ಠಾಣೆ ‌ ಮತ್ತು ಅವರ ತಂಡದವರು ಕಳ್ಳತನ ಪ್ರಕರಣದ ಆರೋಪಿಗಳಾದ    (1) ಕೆ.ಜಿ.ಸುರೇಶ ತಂದೆ:ಪೌತಿ ಕೆ.ಗೋಪಾಲ ಪ್ರಾಯ 38 ವರ್ಷ,ಪುಟ್ಟೆಗೌಡರವರ ತರಕಾರಿ ಅಂಗಡಿಯಲ್ಲಿ ಕೆಲಸ, ಮಂಡಿ ಮಾರ್ಕೆಟ್‌, ನಂಜನಗೂಡು ರಸ್ತೆ ಮೈಸೂರು. ಸ್ವಂತ ಊರು:ಉಲುಗುಲಿ ರಸ್ತೆ, ಸುಂಟಿಕೊಪ್ಪ. ಸೋಮವಾರಪೇಟೆ ತಾಲ್ಲೋಕು. (2)ಎಂ.ಯೊಗೇಶ ತಂದೆ:ಮಂಚಪ್ಪ ಪ್ರಾಯ 23 ವರ್ಷ, ನಾಯಕ ಜನಾಂಗ, ಅಡುಗೆ ಕೆಲಸ, ಕೀರ್ತಿ ಬಾರ್‌, ಕೆ.ಆರ್‌.ಪುರಂ ಸರ್ಕಲ್‌, ಬೆಂಗಳೂರು. ವಾಸ:ತೆಲಗುಂದ್ಲಿ ಗ್ರಾಮ, ಚಂದ್ರಗುತ್ತಿ ಅಂಚೆ ಮತ್ತು ಹೋಬಳಿ, ಸೊರಬ ತಾಲ್ಲೋಕು,ಶಿವಮೊಗ್ಗಜಿಲ್ಲೆ. (3)ಹೆಚ್‌.ಆರ್‌.ಗಿರೀಶ ತಂದೆ:ಹೆಚ್‌.ಎಂ.ರಾಜು ಪ್ರಾಯ 22 ವರ್ಷ, ವ್ಯವಸಾಯ ವೃತ್ತಿ, ವಾಸ:ಹಂಡ್ರಂಗಿ ಗ್ರಾಮ ಮತ್ತು ಅಂಚೆ, ಕೊಣನೂರು ಹೋಬಳಿ,ಅರಕಲಗೂಡು ತಾಲ್ಲೋಕು,ಹಾಸನ ಜಿಲ್ಲೆ ಮತ್ತು (4)ರಾಜು ತಂದೆ:ಪೌತಿ ತಿರುಮಲಸ್ವಾಮಿ ಪ್ರಾಯ 48 ವರ್ಷ, ವ್ಯವಸಾಯ ವೃತ್ತಿ, ವಾಸ:ಹಂಡ್ರಂಗಿ ಗ್ರಾಮ ಮತ್ತು ಅಂಚೆ,ಕೊಣನೂರು ಹೋಬಳಿ,ಅರಕಲಗೂಡು ತಾಲ್ಲೋಕು,ಹಾಸನ ಜಿಲ್ಲೆ ಇವರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ ಒಟ್ಟು 5 ಕೆ.ಜಿ 112.95 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಈಗಿನ ಮಾರುಕಟ್ಟೆ ಮೌಲ್ಯ 1 ಕೋಟಿ 30 ಲಕ್ಷದ ಆಗಿರುತ್ತದೆ ಹಾಗೂ 1 ಲಕ್ಷದ 3 ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿರುತ್ತಾರೆ.

Wednesday, May 27, 2015

ಅಕ್ರಮ ಗೋವುಗಳ ಸಾಗಾಟ, ಪ್ರಕರಣ ದಾಖಲು:

     ಸರಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಗೋವುಗಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿರುತ್ತಾರೆ. ಕುಟ್ಟ ಪೊಲೀಸ್‌ ಠಾಣಾಧಿಕಾರಿ ಜೆ.ಮಂಜುರವರು ದಿನಾಂಕ 27-5-2015 ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಸಮಯ ಬೆಳಗಿನ ಜಾವ 5-00 ಗಂಟೆಗೆ ಕುಟ್ಟ ಠಾಣಾ ಸರಹದ್ದಿನ ಕುಟ್ಟ ಗ್ರಾಮದ ಪೈತ್‌ಎಸ್ಟೇಟ್‌ಗೆ ಹೋಗುವ ರಸ್ತೆಯಲ್ಲಿ ಮೂವರು ವ್ಯಕ್ತಿಗಳು ಬಿಳಿ ಣ್ಣದ ಕೆ-45-5801ರ ಪಿಕ್‌ಅಪ್‌ ಜೀಪಿನಲ್ಲಿ ರೂ. 40,000/- ಬೆಲೆಯ ನಾಲ್ಕು ಜಾನುವಾರುಗಳನ್ನು ಸರಿಯಾಗಿ ಮೇವು ಮತ್ತು ನೀರನ್ನು ನೀಡದೆ ಹಿಂಸೆಯಾಗುವ ರೀತಿಯಲ್ಲಿ ಸರಕಾರದ ಪರವಾನಗಿ ಇಲ್ಲದೆಅಕ್ರಮವಾಗಿ ಕೇರಳ ರಾಜ್ಯದ ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದುದನ್ನು ಪತ್ತೆ ಹೆಚ್ಚಿ ಜಾನುವಾರು ಹಾಗು ಜೀಪನ್ನು ವಶಕ್ಕೆ ತೆಗೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮೊಬೈಲ್‌ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:

     ಬಿಳಿಗೇರಿ ಗ್ರಾಮದ ನಿವಾಸಿ ಕೃಷ್ಣ ಎಂಬವರು ಒಂದು ವಾರದ ಹಿಂದೆ ಬಿಳಿಗೇರಿ ಗ್ರಾಮದ ಮಕ್ಕಳಗುಡಿಯಲ್ಲಿರುವ ಶಂಬುವವರ ಅಂಗಡಿಗೆ ಹೋಗಿದ್ದು ಅಗ ಶಂಬುರವರು ಕೃಷ್ಣ ರವರ ಮೋಬೈಲ್ ಉಪಯೋಗಿಸಿ ನೆಲಕ್ಕೆ ಬೀಳಿಸಿ ಒಡೆದುಹಾಕಿದ್ದು ಇದೇ ವಿಚಾರವಾಗಿ ದಿನಾಂಕ 26/05/2015 ರಂದು ಕೃಷ್ಣ ರವರು ಅಂಗಡಿಯ ಹತ್ತಿರ ಹೋದಾಗ ಸಂಜೆ 06:30 ಗಂಟೆಯ ಹೊತ್ತಿಗೆ ಶಂಭುರವರ ಅಂಗಡಿಯ ಮುಂಬಾಗದಲ್ಲಿ ಅರೋಪಿ ಬಿಳಿಗೇರಿ ಗ್ರಾಮದ ಸೇಂದಿ ಸುರೇಶ್ ಎಂಬ ವ್ಯಕ್ತಿ ಅಲ್ಲಿಗೆಬಂದು ಮೊಬೈಲ್‌ ವಿಚಾರದಲ್ಲಿ ಜಗಳ ಮಾಡಿ ಅಂಗಡಿಯ ಮುಂದುಗಡೆ ಇಟ್ಟಿದ್ದ ಜ್ಯೂಸ್ ಬಾಟಲಿಯಿಂದ ಕೃಷ್ಣ ಯವರ ಎದೆಗೆ, ಎಡಕಣ್ಣಿನ ಬಾಗ ಗಲ್ಲದ ಬಾಗ ಮತ್ತು ತಲೆಯ ಹಿಂಭಾಗಕ್ಕೆ ಹೊಡೆದು ಗಾಯಪಡಿಸಿದ್ದು ಅಲ್ಲದೆ ಕೊಲೆ ಮಾಡದೇ ಬಿಡುವುದಿಲ್ಲ ಎಂಬುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಕೃಷ್ಣರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದಾರೆ.

ಚುನಾವಣಾ ಪ್ರಚಾರದ ವಿಷಯದಲ್ಲಿ ಪಿಸ್ತೂಲು ತೋರಿಸಿ ಬೆದರಿಕೆ:

     ಚುನಾವಣಾ ಪ್ರಚಾರದ ವೇಳೆ ದಾರಿ ತಡೆದು ವ್ಯಕ್ತಿಗೆ ಪಿಸ್ತೂಲು ತೋರಿಸಿ ಜೀವ ಬೆದರಿಕೆ ಹಾಕಿದ ಘಟನೆ ಕುಟ್ಟ ಠಾಣಾ ಸರಹದ್ದಿನ ಕೋತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 26-5-2015 ರಂದು ಸಮಯ 11.00 ಗಂಟೆಗೆ ಕಾನೂರು ಗ್ರಾಮದ ನಿವಾಸಿ  ಎಸ್‌.ವಿ ಮಹಾದೇವಪ್ಪ ಎಂಬವರು ಚುನಾವಣಾ ಪ್ರಚಾರ ಮುಗಿಸಿ ಜೀಪಿನಲ್ಲಿ ಹೋಗುತ್ತಿದ್ದಾದ ಆರೋಪಿ ಕೋತೂರು ಗ್ರಾಮದ ಕೆ.ಆರ್‌. ಸುರೇಶ ಎಂಬವರು ಎಸ್‌.ವಿ. ಮಹಾದೇವಪ್ಪನವರ ಜೀಪನ್ನು ತಡೆದು ನಿಲ್ಲಿಸಿ ‘ನನ್ನ ವಿರುದ್ಧ ಚುನಾವಣಾ ಪ್ರಚಾರ ಮಾಡುತ್ತಿದ್ದೀಯಾ' ಎಂಬುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಪಿಸ್ತೂಲ್‌ ತೋರಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕ ನೀರಿನಲ್ಲಿ ಮುಳುಗಿ ಅರಣ್ಯ ರಕ್ಷಕ ಸಾವು:

      ಕುಶಾಲನಗರ ವಲಯದ ಮಾಲ್ದಾರೆ ಶಾಖೆಯಲ್ಲಿ ಅರಣ್ಯ ರಕ್ಷಕನಾಗಿ ಕೆಲಸ ನಿರ್ವಹಿಸಿಕೊಂಡಿರುವ ಲಾರೆನ್ಸ್‌ ರಾಬಿನ್‌ ಎಂಬವರು ದಿನಾಂಕ 25/05/2015 ರಂದು ಬೆಳಿಗ್ಗೆ 2 ಜನ ಅರಣ್ಯ ರಕ್ಷಕರೊಂದಿಗೆ ಗಸ್ತಿಗೆ ಹೊರಟು ಅವರೆಗುಂದ ಅರಣ್ಯದ ಕಡೆ ಹೋಗಿದ್ದು ಮಧ್ಯಾಹ್ನದ ವೇಳೆಗೆ ಲಾರೆನ್ಸ್ ರಾಬಿನ್ ರವರು ಊಟಮಾಡಿಕೊಂಡು ಬರುವುದಾಗಿ ತಿಳಿಸಿ ಕರಡಿಗೋಡು ಗ್ರಾಮದ ಕಡೆ ಹೋಗಿದ್ದು ಸಮಯ ಸುಮಾರು ಮಧ್ಯಾಹ್ನ 2.00 ಗಂಟೆ ವೇಳೆಯಲ್ಲಿ ಕರಡಿಗೋಡು ಕಾವೇರಿ ಹೊಳೆಯ ಬದಿಯಲ್ಲಿ ಬಟ್ಟೆಬಿಚ್ಚಿ ಕೈಕಾಲು ತೊಳೆಯಲೆಂದು ಇಳಿದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನೊಳಗೆ ಮುಳುಗಿ ಹೋಗಿದ್ದು ಸದರಿಯವರ ಮೃತ ಶರೀರವನ್ನು ಊರಿನ ಜನರು ಅಗ್ನಿಶಾಮಕ ದಳದವರು ಬಂದು ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, May 25, 2015

ಆಕಸ್ಮಿಕ ವಿದ್ಯುತ್‌ ಸ್ಪರ್ಷಗೊಂಡು ವ್ಯಕ್ತಿಯ ದುರ್ಮರಣ:

    ಅಲ್ಯುಮಿನಿಯಂ ಏಣಿ ಮೂಲಕ ಮರವೇರಿದ ವ್ಯಕ್ತಿಯೊಬ್ಬರು ವಿದ್ಯುತ್‌ ಸ್ಪರ್ಷಗೊಂಡು ಸಾವನಪ್ಪಿದ ದುರ್ಘಟನೆ ಸೋಮವಾರಪೇಟೆ ತಾಲೋಕು ಕಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಕಂಬಳ್ಳಿ ಗ್ರಾಮದಲ್ಲಿ ನೆಲೆಸಿರುವ ಕೆ.ಕೆ. ದಯಾನಂದ ಎಂಬುವರ ತಂದೆ ಕಾಳಯ್ಯ ಎಂಬವರು ದಿನಾಂಕ 24.05.2015 ರಂದು ಸಮಯ ಬೆಳಿಗ್ಗೆ 10:00 ಗಂಟೆಗೆ ತಮ್ಮ ಮನೆಯ ಹತ್ತಿರ ಇರುವ ತೋಟದಲ್ಲಿ ಹಲಸಿನಹಣ್ಣು ಕುಯ್ಯುವಸಲುವಾಗಿ ಅಲ್ಯುಮಿನಿಯಂ ಏಣಿಯ ಮೂಲಕ ಮರವೇರಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮರದ ಪಕ್ಕದಲ್ಲೇ ಹಾದು ಹೋಗಿರುವ ವಿದ್ಯುತ್‌ ತಂತಿಗೆ ಏಣಿ ತಾಗಿ ವಿದ್ಯುತ್‌ ಸ್ಪರ್ಷಗೊಂಡು ಸದರಿ ಕಾಳಯ್ಯರವರು ಏಣಿ ಸಮೇತ ನೆಲಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಕೆ.ಕೆ. ದಯಾನಂದನವರು ನೀಡಿದ ದೂರಿನಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್‌ಡಿಕ್ಕಿ,:

      ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಮೋಟಾರ್‌ ಸೈಕಲ್ ಡಿಕ್ಕಿಯಾಗಿ ಸದರಿ ವ್ಯಕ್ತಿ ಮತ್ತು ಬೈಕ್‌ ಸವಾರ ಗಾಯಗೊಂಡ ಘಟನೆ ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಪುಲಿಯೇರಿ ಗ್ರಾಮದ ನಿವಾಸಿ ಉದ್ದಪಂಡ ಎನ್‌. ಕಾರ್ಯಪ್ಪ ಎಂಬವರು ದಿನಾಂಕ 23-05-15ರಂದು ಬಿಟ್ಟಂಗಾಲದ ಕೂರ್ಗ್ ಯತ್ನಿಕ್ ಹಾಲ್ ಗೆ ಮದುವೆ ಚಪ್ಪರ ಸಮಾರಂಭಕ್ಕೆ ಬಂದು ಸಮಯ ರಾತ್ರಿ 10-20 ಪಿ.ಎಂ.ಗೆ ಸಂಬಂಧಿಕರ ಕಾರು ಹತ್ತಲು ರಸ್ತೆ ದಾಟುತ್ತಿರುವಾಗ ವಿರಾಜ ಪೇಟೆ ಕಡೆಯಿಂದ ಕೆಎ.12.ಕೆ.0278ರ ಮೋಟಾರ್ ಬೈಕ್ ಸವಾರನು ಸದರಿ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆ ಯಿಂದ ಚಾಲನೆ ಮಾಡಿಕೊಂಡು ಬಂದು ಉದ್ದಪಂಡ ಎನ್‌. ಕಾರ್ಯಪ್ಪನವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು ಅಲ್ಲದೆ ಬೈಕ್‌ ಸವಾರ ನಾಂಗಾಲ ಗ್ರಾಮದ ಪಿ.ಸಿ. ರಂಜನ್‌ರವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, May 24, 2015

ಕೆರೆಗೆ ಹಾರಿ ವ್ಯಕ್ತಿಯ ಆತ್ಮಹತ್ಯೆ:

        ತೆರಾಲು ಗ್ರಾಮದ ನಿವಾಸಿ ಬಿ.ಎಂ. ಅಣ್ಣಯ್ಯ ಎಂಬುವರ ಮಗ ಕರುಂಬಯ್ಯ ಎಂಬವರು ದಿನಾಂಕ 21-05-2015 ರಂದು ಊರಿನ ಕುಟುಂಬದ ಮದುವೆ ಕಾರ್ಯದಲ್ಲಿ ಭಾಗವಹಿಸಿ ಮನೆಗೆ ಬಂದಿದ್ದು ಯಾವುದೋ ಕಾರಣಕ್ಕೆ ಬೇಸರಗೊಂಡು ಮನೆಯ ಪಕ್ಕದಲ್ಲಿರುವ ಕೆರೆಗೆ ಹಾರಿ ಆಥ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಫಿರ್ಯಾದಿ ಅಣ್ಣಯ್ಯನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.  

ಮಿನಿ ಲಾರಿಗೆ ಮಾರುತಿ ವ್ಯಾನ್‌ ಡಿಕ್ಕಿ: 

     ದಿನಾಂಕ 23.05.2015 ರಂದು ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿ ಚಂದ್ರಶೇಖರ ಎಂಬವರು ತಮ್ಮ ಬಾಪ್ತು ಕೆಎ21 8678 ರ 407 ರ ಮಿನಿ ಲಾರಿಯಲ್ಲಿ ತೆಂಗಿನ ಕಾಯಿ ಲೋಡನ್ನು ತುಂಬಿಸಿಕೊಂಡು ಸೋಮವಾರಪೇಟೆಗೆ ಬಂದು ವಾಪಾಸ್ಸು ಕೊಣನೂರಿಗೆ ಹೋಗುತ್ತಿರುವಾಗ ಸಮಯ 12:15 ಪಿ.ಎಂಗೆ ಬಾಣವಾರದ ಸ್ವಲ್ಪ ಹಿಂದೆ ಇರುವ ಬಸವಣ್ಣ ಕಲ್ಲಿನ ಹತ್ತಿರ ರಸ್ತೆ ತಿರುವಿನಲ್ಲಿ ಬಾಣಾವಾರದ ಕಡೆಯಿಂದ ಬಂದ ಕೆಎ12 ಝೆಡ್‌ 0843 ರ ಮಾರುತಿ ಓಮಿನಿ ಕಾರಿನ ಚಾಲಕನು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಚಂದ್ರಶೇಖರರವರ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿದ್ದ ಚಾಲಕನಿಗೆ ಗಾಯಗಳಾಗಿದ್ದು ಈ ಸಂಬಂಧ ಸೋಮವಾರಪೇಟೆಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, May 22, 2015

ವ್ಯಕ್ತಿಯ ದಾರಿ ತಡೆದು ಕೊಲೆಗೆ ಯತ್ನ:

    ವ್ಯಕ್ತಿಯೊಬ್ಬರನ್ನು ದಾರಿ ತಡೆದು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ. ದಿನಾಂಕ 21.05.2015 ರಂದು ಮಡಿಕೇರಿ ಗ್ರಾಮದ ಇಬ್ನಿವಳವಾಡಿ ಗ್ರಾಮದ ನಿವಾಸಿ ಎ..ಬಿ. ಚಂಗಪ್ಪ, ಎಂಬುವರು ನಿವಾಸಿ ತಮ್ಮ ಅಯ್ಯಂಡ ಮನೆಯ ದೇವರ ಪೂಜೆ ಕಾರ್ಯಕ್ರಮ ಇದ್ದುದರಿಂದ ದೇವರ ಪೂಜೆಗೆ ಸಾಮಾನು ತರಲು ಸುಂಟಿಕೊಪ್ಪದ ಮಾರ್ಕೆಟ್‌ಗೆ ಬಂದು ನಿಂಬೆ ಹಣ್ಣು ಮತ್ತು ಎಲೆ ಅಡಿಕೆ ತೆಗೆದುಕೊಂಡ ನಂತರ ತರಕಾರಿ ಅಂಗಡಿಗೆ ಹೋಗುತ್ತಿದ್ದಾಗ ಅವರನ್ನು ಸುಂಟಿಕೊಪ್ಪದ ನಿವಾಸಿಗಳಾದ ಕೆ.ಯು.ಫಾಸಿಲ್‌, ಆರಿಸ್‌ ಹಾಗು ನಹಿಮ್‌ ಎಂಬವರುಗಳು ಗದ್ದೆಹಳ್ಳ ಎಂಬಲ್ಲಿ ತಡೆದು ನಿಲ್ಲಿಸಿ ಸುತ್ತುವರಿದು ನಿನಗೇನು ಕೊಬ್ಬು ಹೆಚ್ಚಾಗಿದೆಯಾ ಎಂದು ಬೈಯ್ದು ಒಬ್ಬನು ನಿನ್ನನ್ನು ಕೊಂದು ಬಿಡುತ್ತೇನೆಂದು ಹೇಳಿ ತನ್ನ ಬಳಿ ಇದ್ದ ಕತ್ತಿಯಿಂದ ಕೊಲೆ ಮಾಡುವ ಉದ್ದೇಶದಿಂದ ಕತ್ತಿಯನ್ನು ಬೀಸಿದ್ದು ಅಲ್ಲದೆ ಕೈ ಮುಷ್ಟಿಯಿಂದ ಗುದ್ದಿ ರಕ್ತಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದು, ಈ ಸಂಬಂಧ ಸುಂಟಿಕೊಪ್ಪ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸ್ಕಾರ್ಪಿಯೋ ವಾಹನ ಡಿಕ್ಕಿ, ವ್ಯಕ್ತಿ ದುರ್ಮರಣ: 

    ದಿನಾಂಕ 20-5-2015 ರಂದು ರಾತ್ರಿ 11.20 ಗಂಟೆಗೆ ಶಂಕರಪ್ಪನು ಕುಶಾಲನಗರದ ಬಿ.ಎಂ. ರಸ್ತೆಯಲ್ಲಿರುವ ಮಹರಾಜ ಲಾಡ್ಜಿಂಗ್ ಮತ್ತು ಬಾರ್ ಹೋಟೇಲಿನ ಎದುರು ಇರುವ ಬೀಡಾ ಅಂಗಡಿಗೆ ಬೀಡ ತರಲೆಂದು ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ರಸ್ತೆ ದಾಟುತ್ತಿರುವಾಗ ಕುಶಾಲನಗರ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ನೋಂದಣಿ ಸಂಖ್ಯೆ ಕೆಎ 35 ಎಂ 4917 ರ ಸ್ಕಾರ್ಪಿಯೋ ವಾಹನದ ಚಾಲಕನು ವಾಹನವನ್ನು ಅತಿವೇಗ ಮತ್ತು ದುಡುಕಿನಿಂದ ಚಾಲನೆ ಮಾಡಿಕೊಂಡು ಬಂದು ಶಂಕರಪ್ಪನಿಗೆ ಡಿಕ್ಕಿ ಪಡಿಸಿದ ಪರಿಣಾಮ ಶಂಕರಪ್ಪನ ತಲೆಯ ಭಾಗಕ್ಕೆ ತೀವ್ರವಾಗಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ಇಬ್ಬರ ಸಾವು: 

     ದಿನಾಂಕ 20/05/2015 ರಂದು ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎಂ.ಎ. ಕುಮಾರ್‌ ರವರ ಮನೆಗೆ ಚೆಟ್ಟಳ್ಳಿಯಿಂದ ಸಂಬಂಧಿಕರಾದ ರವಿ, ಗಣೇಶ, ಗಿರೀಶ ಮತ್ತು ಮನು ರವರು ಬಂದಿದ್ದು ಸಮಯ ಸುಮಾರು ಸಂಜೆ 4.00 ಗಂಟೆಗೆ ಪಿರ್ಯಾದಿಯವರ ಮಗ ಶಿವರಾಜ್ ರವರೊಂದಿಗೆ ರವಿ, ಗಣೇಶ, ಗಿರೀಶ ಮತ್ತು ಮನು ರವರು ಪಿರ್ಯಾದಿಯವರ ಮನೆಯ ಸಮೀಪವಿರುವ ಕಾವೇರಿ ಹೊಳೆಗೆ ಸ್ನಾನ ಮಾಡಲು ಹೋಗಿದ್ದು ಅದರಲ್ಲಿ ಶಿವರಾಜ್, ರವಿ ಮತ್ತು ಗಣೇಶ್ ರವರು ಸ್ನಾನ ಮಾಡುವ ಸಂದರ್ಭದಲ್ಲಿ ಕಾವೇರಿ ಹೊಳೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಹೋಗಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, May 21, 2015

ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ 
            ಬೆಂಕಿ ಹಚ್ಚಿಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಕೆದಮುಳ್ಳೂರು ನಿವಾಸಿ ಮಂಗಳ ಎಂಬಾಕೆಯ ಪತಿ ಮಣಿಕಂಠ ಎಂಬಾತನು 5 ವರ್ಷಗಳ ಹಿಂದೆ ಮರದಿಂದ ಬಿದ್ದು ಮೃತಪಟ್ಟಿದ್ದು, ಇದೇ ವಿಚಾರದಲ್ಲಿ ದುಃಖಿತಳಾಗಿದ್ದ ಮಂಗಳ ಮದ್ಯ ವ್ಯಸನಿಯಾಗಿದ್ದು ದಿನಾಂಕ 19/05/215ರ ರಾತ್ರಿ ವೇಳೆ ಮನೆಯಲ್ಲಿ ಸೀಮೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವುದಾಗಿ ಮಂಗಳಳ ಅತ್ತೆ ಚಿನ್ನಮ್ಮನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಟೋ ಮಗುಚಿ ಪ್ರಯಾಣಿಕರಿಗೆ ಗಾಯ
           ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡ ಪರಿಣಾಮ ಆಟೋದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 20-5-2015 ರಂದು ವಿರಾಜಪೇಟೆ ನಗರದ ದಖನ್ನಿ ಮೊಹಲ್ಲಾದ ನಿವಾಸಿ ಕೋಮಲ ಹಾಗೂ ರಂಗೇಗೌಡ, ಗುರುವಮ್ಮ, ಯಶೋಧ, ಮಂಜುಳ ಮತ್ತು ಇತರೇ 10 ಜನರು ಎಂದಿನಂತೆ ಕೂಲಿ ಕೆಲಸದ ನಿಮಿತ್ತ ಆಪೆ ಆಟೋ ಸಂಖ್ಯೆ ಕೆಎ-12-ಎ-5635 ರಲ್ಲಿ ಕದನೂರಿಗೆ ಹೋಗುತ್ತಿರುವಾಗ ವಿರಾಜಪೇಟೆ ನಗರದ ಮೂರ್ನಾಡು ರಸ್ತೆಯ ಕೆ.ಇ.ಬಿ. ಕಚೇರಿಯ ಬಳಿ ರಸ್ತೆಯಲ್ಲಿ ಆಟೋ ಚಾಲಕ ಜಯಕುಮಾರ್ ಎಂಬುವನು ಆಟೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಓಡಿಸಿದ ಪರಿಣಾಮ ಆಟೋ ರಿಕ್ಷಾವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯ ಮಗುಚಿಕೊಂಡಿದ್ದು ಆಟೋದಲ್ಲಿದ್ದ ಎಲ್ಲರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಲಾರಿ ಮಗುಚಿ ಮನೆಗೆ ಹಾನಿ
            ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಮಗುಚಿಕೊಂಡ ಘಟನೆ ಮಡಿಕೇರಿ ಬಳಿಯ ಬೋಯಿಕೇರಿಯಲ್ಲಿ ನಡೆದಿದೆ. ದಿನಾಂಕ 20.05.2015 ರಂದು  ಕೆಎ-07-ಎ-1414 ರ ಲಾರಿಯ ಚಾಲಕನು ಮರಳು ತುಂಬಿದ  ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಇಬ್ನಿವಳವಾಡಿ ಗ್ರಾಮದ ಬೋಯಿಕೇರಿ  ವಾಸಿ  ಕೆ.ಕೆ.ತುಳಸಿದಾಸ್ ರವರ ಮನೆಯ ಮುಂಭಾಗದ ಗೋಡೆಗೆ ಡಿಕ್ಕಿ ಪಡಿಸಿದ ಪರಿಣಾಮ ಲಾರಿ ಮನೆಯ ಮೇಲೆ ಮಗುಚಿಬಿದ್ದು ಲಾರಿಯಲ್ಲಿದ್ದವರಿಗೆ ಗಾಯವಾಗಿದ್ದು ಅಲ್ಲದೇ ತುಳಸಿದಾಸ್‌ರವರ ಮನೆಯ ಗೋಡೆ, ಹೆಂಚು, ಮೇಲ್ಚಾವಣಿ ಜಖಂಗೊಂಡಿದ್ದು ರೂ.1,25,000/- ನಷ್ಟ ಉಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಢಿದ್ದಾರೆ. 

ಅಪರಿಚಿತ ಮಹಿಳೆಯ ಶವ ಪತ್ತೆ, ಕೊಲೆ ಶಂಕೆ 
                   ಅಪರಿಚಿತ ಮಹಿಳೆಯೊಬ್ಬರ ಶವವೊಂದು ಕುಶಾಲನಗರ ಬಳಿಯ ದೊಡ್ಡ ಬೆಟ್ಟಗೇರಿ ಗ್ರಾಮದಲ್ಲಿ ಪತ್ತೆಯಾಗಿದೆ. ದಿನಾಂಕ 20-05-2015ರಂದು ಬಸವನಹಳ್ಳಿಲ ನಿವಾಸಿ ಬಿ.ಎಸ್‌.ಚಂದ್ರಶೇಖರ್‌ ಎಂಬವರು  ಗ್ರಾಮ ಪಂಚಾಯಿತಿ ಚುಣಾವಣೆ ಬಗ್ಗೆ ಮತಗಳನ್ನು ಕೇಳಲು ತಮ್ಮ ಗ್ರಾಮ ಹಾಗು ಪಕ್ಕದ ಗ್ರಾಮವಾದ ದೊಡ್ಡಬೆಟ್ಟಗೇರಿಗೆ ಹೋಗಿ ಮತಗಳನ್ನು ಕೇಳಲು ಸ್ನೇಹಿತರೊಂದಿಗೆ ನಡೆದುಕೊಂಡು ಗುಡ್ಡೆಹೊಸೂರಿನಿಂದ ಕಾಲ್ನಡಿಗೆಯಲ್ಲಿ ದೊಡ್ಡಬೆಟ್ಟಗೇರಿಗೆ ಹೋಗುತ್ತಿರುವಾಗ ದೊಡ್ಡಬೆಟ್ಟಗೇರಿಯ ವಿಠಲ ಎಂಬವರ ಮನೆಯ ಹತ್ತಿರವಿರುವ ತಾರು ರಸ್ತೆಯ ಸೇತುವೆಯ ಹತ್ತಿರ  ಸೇತುವೆಯ ಕೆಳಭಾಗದಲ್ಲಿ ಕಾಣುವಂತೆ ಹೆಂಗಸಿನ ಶವವೊಂದು ಬಿದ್ದಿರುವುದು ಗೋಚರಿಸಿದ್ದು ತಕ್ಷಣ ಅವರು ಸೇತುವೆಯ ಕೇಳಗೆ ಹೋಗಿ ನೋಡಲಾಗಿ ಅಂದಾಜು ಪ್ರಾಯ 25ರಿಂದ 30ವರ್ಷದೊಳಗಿನ ಹೆಂಗಸು ಅಂಗಾತವಾಗಿ ಬಿದ್ದಿರುವುದು ಕಂಡು ಬಂದಿದ್ದು ಯಾರೋ ದುಷ್ಕರ್ಮಿಗಳು ತಲೆಯ ಭಾಗಕ್ಕೆ ಯಾವುದೋ ಆಯುಧದಿಂದ ಹೊಡೆದಿರುವ ಗಾಯದ ಗುರುತು ಕಂಡು ಬಂದಿರುವುದರಿಂದ ಸದ್ರಿ ಅಪರಿಚಿತ ಮಹಿಳೆಯನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಸೇತುವೆಯ ಮೇಲಿನಿಂದ ಕೆಳಗೆ ಎಸೆದಿರಬಹುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Wednesday, May 20, 2015

ಹಣದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:
     ದಿನಾಂಕ  17-05-15ರಂದು   ಅಮ್ಮತ್ತಿ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ ಪುಟ್ಬಾಲ್ ಪಂದ್ಯಾಟಕ್ಕೆ ವಿರಾಜಪೇಟೆ ತಾಲೋಕು, ಕಾರ್ಮಾಡು ಗ್ರಾಮದ ನಿವಾಸಿ ವಿ.ಕೆ. ಮನು ಎಂಬುವವರು  ಹಾಗೂ  ಇತರ ಚಾಲಕರು ಹಾಗೂ ಸಾರ್ವಜನಿಕರು ಒಟ್ಟು 15 ಜನರು ಸೇರಿ ಚೆನೈನಿಂದ ಒಂದು ತಂಡವನ್ನು ತಂದು ಆಟವಾಡಿಸಲು ತೀರ್ಮಾ ನಿಸಿ, ಸದ್ರಿ ತಂಡಕ್ಕೆ ಒಬ್ಬಬ್ಬರು ತಲಾ 1000/-  ಗಳಂತೆ ನಿಗದಿಪಡಿಸಿದ್ದು, ದಿನಾಂಕ 18-5-2015 ರಂದು   ಸದರಿ ಹಣದ ವಿಚಾರದಲ್ಲಿ  ವಿ.ಕೆ. ಮನು ಹಾಗೂ ಮುರುಗೇಶ ಎಂಬವರ ನಡುವೆ ಜಗಳವಾಗಿದ್ದು  ನಂತರ  ದಿನಾಂಕ  19-05-15ರಂದು ವಿ.ಕೆ. ಮನುರವರು  ಬೆಳಿಗ್ಗೆ 8-00ಗಂಟೆಗೆ ಅಮ್ಮತ್ತಿ ನಗರದ  ಲಾರಿ ನಿಲ್ದಾಣದಲ್ಲಿ ಮಿನಿ  ಲಾರಿಯಲ್ಲಿ ಕುಳಿತುಕೊಂಡಿ ರುವಾಗ್ಗೆ, ಮುರುಗೇಶನು ಬಂದು ರಾಡಿನಿಂದ ಹಲ್ಲೆ ನಡೆಸಿ ನೋವನ್ನುಂಟುಮಾಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 
Posted byVartika Katiyar, IPS
Tuesday, May 19, 2015

ಮನೆಗೆ ನುಗ್ಗಿ ಚಿನ್ನಾಭರಣ ಕಳವು: 
     ಪಿರ್ಯಾಧಿ ಸುನಿಲ್‌ ಎಂಬವರು ಅಭ್ಯತ್ ಮಂಗಲ ಗ್ರಾಮದ ಡೋಳುಪಾಡಿ ಮಾಚಯ್ಯನವರ ಲೈನ್ ಮನೆಯಲ್ಲಿ ವಾಸವಿದ್ದು ದಿನಾಂಕ 17-05-2015 ರಂದು ಸದರಿಯವರ ಪತ್ನಿಯ ತಾಯಿ ಮನೆಗೆ ಪತ್ನಿಯೊಂದಿಗೆ ತೆರಳಿದ್ದು ಇದೇ ಸಮಯದಲ್ಲಿ ಫಿರ್ಯಾಧಿಯ ಮನೆಯ ಒಳಗಡೆ ಗಾಡ್ರೇಜ್ ನ ಬೀರುವಿನಲ್ಲಿಟ್ಟಿದ್ದ ಮೂರು ಜೊತೆ ಚಿನ್ನದ ಓಲೆ, ತಾಳಿ ಹಾಗೂ ಕಾಲು ಚೈನ್ ಗಳನ್ನು ಗಾಡ್ರೇಜ್ ನ ಬೀಗ ಹೊಡೆದು ಸಮಯ ಸುಮಾರು ರಾತ್ರಿ 12-00 ಗಂಟೆಯ ನಂತರ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಇದೇ ಗ್ರಾಮದ ಕಿಟ್ಟು ಮತ್ತು ವನಿತರವರ 2 ನೇ ಮಗ ಭರತ್ ರವರ ಮೇಲೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.  

ದರ್ಗಾದ ಬಾಗಿಲು ಮುರಿದು ಭಂಡಾರ ಕಳವು:

     ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಎಡಪಾಲ ಮುಸ್ಲಿಂ ಜಮಾಅತ್‌ನ ಎಡಪಾಲ ಅಂಡತ್‌ ಮಾನಿ ದರ್ಗಾದ ಮುಂದಿನ ಬಾಗಿಲನ್ನು ಒಡೆದು ದರ್ಗಾದ ಒಳಗಿನ ಹರಕೆ ಭಂಡಾರವನ್ನು ಹಾಗೂ ದರ್ಗಾದ ಕಾಂಪೌಂಡಿಗೆ ಒತ್ತಾಗಿರುವ ಹರಕೆ ಭಂಡಾರವನ್ನು ಒಡೆದು ಅದರಲ್ಲಿರುವ ಅಂದಾಜು 5000 ರೂ ಹಣವನ್ನು ದಿನಾಂಕ 17-05-2015 ರಂದು ರಾತ್ರಿ ಯಾರೋ ದುಷ್ಕರ್ಮಿಗಳು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಎಡಪಾಲ ಮುಸ್ಲಿಂ ಜಮಾ-ಅತ್‌ ಅಧ್ಯಕ್ಷರಾದ ವೈ.ಎಂ. ಹಂಸರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೋಟಾರ್‌ ಸೈಕಲ್‌ಗೆ ಲಾರಿ ಡಿಕ್ಕಿ, ಸವಾರ ಸಾವು: 

    ಸೋಮವಾರಪೇಟೆ ತಾಲೋಕು, ಅಬ್ಬುರುಕಟ್ಟೆ ಗ್ರಾಮದ ನಿವಾಸಿ ಕೆ. ಅಬುಬಕರ್‌ ರವರ ಮಗ 20 ವರ್ಷ ಪ್ರಾಯದ ಸಮೀರ್ ವಿರಾಜಪೇಟೆ ಎಸ್‌ಕೆ.ಎಸ್‌ ಮೈಕ್ರೋ ಫೈನಾನ್ಸ್‌ ಲಿಮಿಟೆಡ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 18-5-2015 ರಂದು ಕೆಎ-12-ಎಲ್-5633 ರ ಬೈಕ್‌ನಲ್ಲಿ ಬಾವಲಿ ಗ್ರಾಮದಿಂದ ವಾಪಾಸು ಬರುತ್ತಿರುವಾಗ ಪಾರಾಣೆಯಿಂದ ಬಾವಲಿ ಕಡೆಗೆ ಹೋಗುತ್ತಿದ್ದ ಲಾರಿ ನಂ ಕೆಎ-19-ಎಎ-65 ರ ಲಾರಿ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ಸಮೀರ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿದ್ದು, ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

Monday, May 18, 2015

ವೇಗದ ಚಾಲನೆ. ಮಗುಚಿಕೊಂಡ ಜೀಪು:
     ದಿನಾಂಕ: 17-05-15ರಂದು ಪಿರ್ಯಾದಿ ಶಾಜಿ ಜೋಸ್‌ ಎಂಬುವರು ತಾಮರ ರೆಸಾರ್ಟ್ ಗೆ ಸೇರಿದ ಕೆಎ.05.ಎಂಜೆ.3054 ಬೊಲೆರೋ ಜೀಪನಲ್ಲಿ ಚಾಲಕ ಸತೀಶ್, ರವರೊಂದಿಗೆ ವಿರಾಜಪೇಟೆ ನಗರದ  ಕೊಡವ ಸಮಾಜದ ಪಕ್ಕ ಇರುವ ವಸತಿ ಗೃಹದಿಂದ ಯುವಕಪಾಡಿಯಲ್ಲಿರುವ ತಾಮರಾ ರೆಸಾರ್ಟ್ ಗೆ ಹೊರಟು ಕರಡದ ವಿಜಯಬ್ಯಾಂಕ್ ನಿಂದ ಸುಮಾರು 300ಮೀಟರ್ ಹಿಂದೆ ಸಮಯ ಬೆಳಿಗ್ಗೆ 05-30ಎ.ಎಂ.ಗೆ ಹೋಗುತ್ತಿರುವಾಗ ಸದ್ರಿ ಜೀಪಿನ  ಚಾಲಕ ಸತೀಶನು ಜೀಪನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಬಲ ಭಾಗದ ಕಾಫಿ ತೋಟಕ್ಕೆ ಜೀಪು ನುಗ್ಗಿ ಮಗುಚಿಕೊಂಡು ಜೀಪು  ಜಖಂಗೊಂಡಿರುವುದಾಗಿ ನೀಡಿದ ಪುಕಾರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರು ಅಪಘಾತ, ಇಬ್ಬರಿಗೆ ಗಾಯ:
     ದಿನಾಂಕ: 23-01-15ರಂದು ಪಿರ್ಯಾದಿ  ಎಂ.ಕೆ. ನಾಜೀಮ್, ತಂದೆ: ವಿ.ಎಂ. ಖಾಸಿಂ, ಪ್ರಾಯ: 28ವರ್ಷ, ಮತ್ತೆಹಿಲ್ ಹೌಸ್, ತಿರುಮೆನ್ ಅಂಚೆ, ಕೊಕ್ಕಡವು ವಯಾ ಚಿರುಪುಜ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ.  ಇವರು  ತಮ್ಮ  ಬಾಪ್ತು ಕೆಎ.51.ಎಂಇ. 7814 ರ ಕಾರಿನಲ್ಲಿ  ಬೆಂಗಳೂರಿನಿಂದ ಕಣ್ಣನೂರಿಗೆ ಹೋಗುತ್ತಿದ್ದು,  ಸದ್ರಿ ಕಾರನ್ನು  ರವೀಂದ್ರನ್ ಎಂಬುವವರು ಚಾಲನೆ ಮಾಡುತ್ತಿದ್ದು, ಸದ್ರಿ ಕಾರನ್ನು  ಅತೀವೇಗ ಹಾಗೂ ಅಜಾಗರೂಕತೆ ಯಿಂದ ಚಾಲನೆ ಮಾಡಿದ ಪರಿಣಾಮ ಕಾರು ರಸ್ತೆಯ ಬದಿಯಲ್ಲಿದ್ದ ಸೇತುವೆಗೆ ಡಿಕ್ಕಿಯಾಗಿದ್ದು, ಪರಿಣಾಮ ಪಿರ್ಯಾದಿಯವರ ಬಲ ಕೈ ಹಾಗೂ ಹಣೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿರುವುದಲ್ಲದೆ, ಚಾಲಕ  ರವೀಂದ್ರನ್ ರವರಿಗೂ ಗಾಯವಾಗಿ ರುವುದಾಗಿ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿದ್ದು, ಅದರ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದಿನಾಂಕ     17-05-15 ರಂದು ಪ್ರಕರಣ ದಾಖಲಿಸಿ ಮುಂದಿನತನಿಖೆ ಕೈಗೊಂಡಿರುವುದಾಗಿದೆ.
ಕಾರು – ಬೈಕ್‌ ಮುಖಾಮುಖಿ ಡಿಕ್ಕಿ:
     ರಿಕ್ಷಾವನ್ನು ಹಿಂದಿಕ್ಕುವ ತವಕದಲ್ಲಿ  ಬೈಕ್‌ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರು ಮತ್ತು ಬೈಕ್‌ ಜಖಂಗೊಂಡಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.  ದಿನಾಂಕ 17-5-2015 ರಂದು 5-00 ಪಿ.ಎಂ.ಗೆ  ಎನ್‌.ಎ ಸೋಮಯ್ಯ, ಎಎಸ್‌ಐ, ಮಡಿಕೇರಿ ಗ್ರಾಮಾಂತರ ಠಾಣೆ ಇವರು ಮಡಿಕೇರಿ ನಗರದ ಹೊಸಬಡಾವಣೆ ಕಡೆಯಿಂದ ಪೊಲೀಸ್‌ ಠಾಣೆ ಕಡೆಗೆ ಹೋಗುತ್ತಿದ್ದಾದ ಎದುರುಗಡೆಯಿಂದ ಕೆಎ-9- ಇಎಕ್ಸ್‌-7065 ರ ಮೋಟಾರ್‌ ಸೈಕಲ್‌ನಲ್ಲಿಬಂದ ವ್ಯಕ್ತಿ  ಸದರಿ ಮೋಟಾರ್‌ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋ ರಿಕ್ಷಾವೊಂದನ್ನು  ಹಿಂದಿಕ್ಕುವ ಸಮಯದಲ್ಲಿ ಮೋಟಾರ್‌ ಸೈಕಲ್‌ ಕಾರಿಗೆ ಡಿಕ್ಕಿಯಾಗಿ  ಕಾರು ಮತ್ತು ಮೋಟಾರ್‌ ಸೈಕಲ್‌ ಜಖಂಗೊಂಡಿದ್ದು, ಈ ಸಂಬಂಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 
ಪ್ರವಾಸಕ್ಕೆ ಬಂದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು:
     ಬೆಂಗಳೂರಿನ ಕೆ.ಆರ್‌.ಪುರಂ ನಿವಾಸಿ ಸಿ.ರಾಜೇಶ್‌ ಎಂಬವರು ಮತ್ತು ಅವರ ಗೆಳೆಯರಾದ ಪ್ರವೀಣ್ , ಆಕಾಶ್, ರಾಕೇಶ್, ರಾಜೇಶ್, ನಿತಿನ್, ಗೌತಮ್ , ಪ್ರಶಾಂತ್ , ಜಗದೀಶ್, ಹರೀಶ್, ಹರ್ಷ, ಪ್ರವಾಸಕ್ಕೆಂದು ಕೊಡಗು ಜಿಲ್ಲೆಗೆ ಬಂದು ಈ ದಿನ ದಿ: 17-05-2015 ರಂದು ಮದ್ಯಾಹ್ನ 02:00 ಗಂಟೆಗೆ ದುಬಾರೆಗೆ ಹೋಗಿದ್ದು ಕಾವೇರಿ ನದಿಯಲ್ಲಿ ಈಜಾಡುವ ಸಂಧರ್ಬದಲ್ಲಿ ಸ್ನೇಹಿತರಾದ ಪ್ರಶಾಂತ್ ಹಾಗೂ ಹರ್ಷರವರು ನೀರಿನಲ್ಲಿ ಮುಳುಗಿದ್ದು, ಅವರ ಪೈಕಿ ಪ್ರಶಾಂತ್‌ನನ್ನು ರಾಫ್ಟಿಂಗ್ ಕೆಲಸ ಮಾಡುತ್ತಿದ್ದವರು ರಕ್ಷಿಸಿದ್ದು, ಹರ್ಷ ಎಂಬಾತನು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Sunday, May 17, 2015

ಮಹಿಳೆಯಿಂದ ಕಳ್ಳತನಕ್ಕೆ ಯತ್ನ, ಪ್ರಕರಣ ದಾಖಲು:

     ಪ್ರಯಾಣಿಕರೊಬ್ಬರ ಬ್ಯಾಗ್‌ನ್ನು ಮಹಿಳೆಯೊಬ್ಬಳು ಕಳ್ಳತನ ಮಾಡಲು ಯತ್ನಿಸಿದ ಘಟನೆ ಕುಶಾಲನಗರ ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ. ದಿನಾಂಕ 16-5-2015 ರಂದು ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ಮುನೀರ್‌ ಎಂಬವರು ಮೈಸೂರಿಗೆ ಹೋಗುವ ಸಲುವಾಗಿ ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದು, ಕುಳಿತುಕೊಳ್ಳಲು ಹಾಕಿರುವ ಕುರ್ಚಿಯಲ್ಲಿ ತನ್ನ ಬ್ಯಾಗ್‌ನ್ನು ಇಟ್ಟು ತನ್ನ ಸ್ನೇಹಿತನೊಂದಿಗೆ ಮಾತನಾಡಿಕೊಂಡಿರುವಾಗ ಮೈಸೂರು ಜಿಲ್ಲೆಯ ಕೆ.ಆರ್‌.ನಗರದ ನಿವಾಸಿ ಜ್ಯೋತಿ ಎಂಬ ಮಹಿಳೆ ಮುನೀರ್‌ರವರ ಬ್ಯಾಗ್‌ನ ಜಿಫ್‌ನ್ನು ತೆಗೆದು ಬ್ಯಾಗ್‌ನಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಲು ಯತ್ನಿಸಿರುತ್ತಾರೆಂದು ಸದರಿ ಮುನೀರ್‌ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಕೂಟಿಗೆ ಬೈಕ್‌ ಡಿಕ್ಕಿ, ಮಹಿಳೆಗೆ ಗಾಯ:

     ಮಹಿಳೆಯೊಬ್ಬರು ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್‌ವೊಂದು ಹಿಂದಿನಿಂದ ಬಂದು ಡಿಕ್ಕಿಯಾಗಿ ಸದರಿ ಮಹಿಳೆ ಗಾಯಗೊಂಡ ಘಟನೆ ಗೋಣಿಕೊಪ್ಪ ಸಮೀಪದ ಅರುವತ್ತೊಕ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 16-5-2015 ರಂದು ಅರುವತ್ತೊಕ್ಲು ಗ್ರಾಮದ ಶ್ರೀಮತಿ ದಮಯಂತಿ ಎಂಬವರು ತಮ್ಮ ಬಾಪ್ಸು ಸ್ಕೂಟಿಯಲ್ಲಿ ಅರುವತ್ತೊಕ್ಲು ಗ್ರಾಮಪಂಚಾಯ್ತಿಯ ಕಡೆಗೆ ಹೋಗುತ್ತಿದ್ದಾಗ ಕೆಎ-30-ಎಲ್‌8621ರ ಬೈಕ್‌ ಸವಾರ ಸದರಿ ಬೈಕನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟಿ ಚಲಾಯಿಸುತ್ತಿದ್ದ ದಮಯಂತಿಯವರ ತಲೆಗೆ ಹಾಗು ಬಲ ಭುಜಕ್ಕೆ ರಕ್ತಗಾಯವಾಗಿದ್ದು, ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಫೇಸ್‌ಬುಕ್‌ನಲ್ಲಿ ಕೆಟ್ಟ ಸಂದೇಶ ರವಾನೆ:

     ಮಹಿಳೆಯೊಬ್ಬರ ಫೇಸ್‌ ಬುಕ್‌ಗೆ ವ್ಯಕ್ತಿಯಿಂದ ಕೆಟ್ಟದಾಗಿ ಸಂದೇಶ ರವಾನಿಸಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಮಡಿಕೇರಿ ತಾಲೋಕು ಬಿಳಿಗೇರಿ ಗ್ರಾಮದ ನಿವಾಸಿ ಎಂ.ವಿ. ಸವಿತ ಎಂಬವರು ಫೇಸ್‌ ಬುಕ್‌ನಲ್ಲಿ ಖಾತೆಯನ್ನು ಹೊಂದಿದ್ದು, ಸದರಿ ಖಾತೆಗೆ ಹೊಸ್ಕೇರಿ ಗ್ರಾಮದ ನಿವಾಸಿ ಮಂಡೀರ ಹರೀಶ್‌ ಎಂಬವರು ಫಿರ್ಯಾದಿ ಎಂ.ವಿ. ಸವಿತರವರ ಗಂಡನ ಬಗ್ಗೆ ಕೆಟ್ಟದಾಗಿ ಸಂದೇಶ ರವಾನಿಸಿದ್ದು, ಸದರಿ ಸಂದೇಶದಿಂದ ಮಾನಸಿಕ ಹಿಂಸೆ ಹಾಗು ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಎ.ಟಿ.ಎಂ. ಕಾರ್ಡ್ ಮಾಹಿತಿ ಪಡೆದು ವಂಚನೆ:

     ಮಡಿಕೇರಿ ನಗರದ ಹಿಲ್‌ರಸ್ತೆ ನಿವಾಸಿ ಫಿರ್ಯಾದಿ ಶ್ರೀಮತಿ ಜಕಿಯಾ ಖಾನಂ ಎಂಬುವವರ ಮೊಬೈಲ್‌ಗೆ ಕತೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿ RBI ನಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ ತಾವು ನೀಡುತ್ತಿರುವ ಹೊಸ ನಂಬರ್ 9027 ರನ್ನು ಬರೆದಿಟ್ಟುಕೊಳ್ಳುವಂತೆ ತಿಳಿಸಿ, ಫಿರ್ಯಾದಿಯವರ ಕಾರ್ಪೋರೇಷನ್ ಬ್ಯಾಂಕಿನ ಎ.ಟಿ.ಎಂ. ಕಾರ್ಡಿನ ಪೂರ್ಣ ಮಾಹಿತಿಯನ್ನು ಪಡೆದುಕೊಂಡು, ನಂತರ ಮತ್ತೊಂದು ಎ.ಟಿ.ಎಂ. ಕಾರ್ಡಿನ ಬಗ್ಗೆ ವಿಚಾರಿಸಿದಾಗ, ಫಿರ್ಯಾದಿಯವರಿಗೆ ಸಂಶಯ ಬಂದು ಯಾವುದೇ ಮಾಹಿತಿಯನ್ನು ನೀಡದೇ ಕೂಡಲೇ ಬ್ಯಾಂಕಿಗೆ ಹೋಗುವಷ್ಟರಲ್ಲಿ ಅವರ ಖಾತೆ ಸಂ: 000700101017593 ರಿಂದ 7 ಬಾರಿ ಹಣ ಡ್ರಾ ಆಗಿದ್ದು, ತನ್ನ ಕಾರ್ಪೋರೇಷನ್ ಬ್ಯಾಂಕಿನ ಖಾತೆ ಯಲ್ಲಿದ್ದ ರೂ.34,802/= ಗಳಷ್ಟು ಹಣವನ್ನು ಮೋಸದಿಂದ ಡ್ರಾ ಮಾಡಿದ್ದು ಈ ಸಂಬಂಧ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಹೆಂಗಸು ಕಾಣೆ:

     ದಿನಾಂಕ 15-05-2015 ರಂದು  ಮಡಿಕೇರಿ ನಗರ ಸುಬ್ರಮಣ್ಯನಗರ ನಿವಾಸಿ ಪಿರ್ಯಾದಿ ಅರುಣ್‌ಗಿರಿಯವರು ಮಂಗಳೂರಿಗೆ ಹೋಗಿದ್ದು, ಅದೇ ದಿನ ರಾತ್ರಿ 12-00 ಗಂಟೆಗೆ ವಾಪಾಸ್ಸು ಮನೆಗೆ ಬಂದು ನೋಡಿದಾಗ ಪತ್ನಿ ದೇವಿ ಸುಮಂತ ಮನೆಯಲ್ಲಿರದೇ ಕಾಣೆಯಾಗಿದ್ದು, ಮನೆ ಮಾಲೀಕರನ್ನು ವಿಚಾರಿಸಲಾಗಿ ಬೆಳಿಗ್ಗೆ ಸಮಯ 10-00 ಗಂಟೆಗೆ ಯಾರೋ ಒಬ್ಬ ಯುವಕನೊಂದಿಗೆ ಹೋಗಿರುವುದಾಗಿ ತಿಳಿಸಿದ್ದು, ನನ್ನ ಪತ್ನಿಯನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.Friday, May 15, 2015

ವಿದ್ಯುತ್‌ ಸ್ಪರ್ಷ, ಕಾಲೇಜು ವಿದ್ಯಾರ್ಥಿ ದುರ್ಮರಣ:

    ಅರಣ್ಯ ಕಾಲೇಜು ವಿದ್ಯಾರ್ಥಿಯೋರ್ವ ಪ್ರಾಯೋಗಿಕ ತರಬೇತಿ ಪಡೆಯುತ್ತಿದ್ದವೇಳೆ ಆಕಸ್ಮಿಕ ವಿದ್ಯುತ್‌ ಸ್ಪರ್ಷಗೊಂಡು ಸಾವನಪ್ಪಿದ ಘಟನೆ ಪೊನ್ನಂಪೇಟೆ ಅರಣ್ಯ ಕಾಲೇಜಿನ ತೋಟಗಾರಿಕಾ ಕೇಂದ್ರದಲ್ಲಿ ಸಂಭವಿಸಿದೆ. ಮಡಿಕೇರಿ ತಾಲೋಕು, ಸಂಪಾಜೆ ಗ್ರಾಮದಲ್ಲಿ ನೆಲೆಸಿರುವ ಟಿ.ಕೆ. ಕುರಿಯಕೋಸು ಎಂಬುವವರ ಮಗ ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಥಮ ವರ್ಷದ ಬಿ.ಎಸ್ಸ್‌.ಸಿ ವಿದ್ಯಾರ್ಥಿ ರಂಜಿತ್‌ ಎಂಬಾತ ದಿನಾಂಕ 14-5-2015 ರಂದು ಸಮಯ 11:00 ಗಂಟೆಗೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಭತ್ತದ ಗದ್ದೆಯ ಅವರಣದಲ್ಲಿ ಪ್ರಾಯೋಗಿಕ ತರಭೇತಿ ನಡೆಯುವ ಸಮಯದಲ್ಲಿ ಲೇವಲಿಂಗ್‌ ರಾಡ್‌ನ್ನು ತೆಗದುಕೊಂಡು ಸರ್ವೇ ಮಾಡುತ್ತಿರುವಾಗ ಕೆಳಭಾಗದಲ್ಲಿ ಅಂದರೆ ನೆಲದಿಂದ 8 ಅಡಿ ಎತ್ತರದಲ್ಲಿ ಹಾದುಹೋಗಿರುವ ವಿದ್ಯುತ್‌ ತಂತಿಗೆ ರಂಜೀತ್‌ರವರ ಲೇವಲಿಂಗ್‌ ರಾಡ್‌ ತಗುಲಿ ಆಘಾತಗೊಂಡಿದ್ದು ನಂತರ ಸಹಪಾಠಿಗಳು ಪೊನ್ನಂಪೇಟೆಯ ರಾಮಕೃಷ್ಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಸಾವನಪ್ಪಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ತೋಟದಿಂದ ಮರ ಕಳುವು: 

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಟಗೇರಿ ಗ್ರಾಮದ ನಿವಾಸಿ ಎನ್‌.ಸಿ. ರಾಘವ ಎಂಬುವರಿಗೆ ಸೇರಿದ ಸರ್ವೆ ನಂ 78/8 ಮತ್ತು ಅವರ ತಂಗಿಗೆ ಸೇರಿದ ಸರ್ವೆ ನಂ 78/7 ರ ಆಸ್ತಿ ಯಲ್ಲಿ ದಿನಾಂಕ 05-05-15 ರಂದು ಸಮಾಯ 03.00 ಪಿಎಂ ಗೆ ಎರಡನೆ ಮೊಣ್ಣಂಗೇರಿ ಗ್ರಾಮದ ನಿವಾಸಿ ವಿಠಲ ನಾಯಕ್‌, ಕಾಟಕೇರಿಯ ಶಿವಪ್ಪ ಪೂಜಾರಿ ಮತ್ತು ದೇಲಾಂಬಡಿಯ ಅಸೈನಾರ್ ಇವರುಗಳು ಸೇರಿ 21 ಬಳಂಜಿ ಮರ ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಮರಗಳನ್ನು ಹಾಗೂ ತೋಟದಲ್ಲಿ ಇದ್ದ ಕ್ರಿಮೀನಾಶಕ ಸ್ವ್ರೇ ಪಂಪು ಮತ್ತು ಪೈಪನ್ನು ಸಹ ಕಳವು ಮಾಡಿದ್ದು ಇವುಗಳ ಅಂದಾಜು ಬೆಲೆ 6000 ರೂಪಾಯಿ ಆಗಿದ್ದು, ಒಟ್ಟು ಕಳುವಾದ ಸ್ವತ್ತಿನ ಮೌಲ್ಯ ರೂ 10.06,000 ಗಳಾಗಿರುತ್ತವೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, May 14, 2015

ಬೈಕ್‌ಗೆ ಕ್ಯಾಂಟರ್‌ ಡಿಕ್ಕಿ,ಗಾಯಗೊಂಡ ಸವಾರ: 
     ದಿನಾಂಕ 12.05.2015 ರಂದು ಸಮಯ 07:00 ಪಿ.ಎಂಗೆ ಸೋಮವಾರಪೇಟೆ ತಾಲೋಕು ತೋಳೂರುಶೆಟ್ಟಳ್ಳಿ ಗ್ರಾಮದ ನಿವಾಸಿ ಎಸ್‌.ಎನ್‌. ವೀರೇಶ್‌ ಎಂಬವರು ಸೋಮವಾರಪೇಟೆಯಿಂದ ತೋಳೂರು ಶೆಟ್ಟಳ್ಳಿ ಗ್ರಾಮಕ್ಕೆ ಅವರ ಬಾಪ್ತು ಕೆಎ12 ಜೆ 2762 ರ ಮೋಟಾರ್‌‌ ಸೈಕಲ್‌‌ನಲ್ಲಿ ಹೋಗುತ್ತಿದ್ದು, ರಾಜು ಎಂಬವರ ಮನೆಯ ಮುಂಭಾಗ ತಲುಪುವಾಗ್ಗೆ ಎದುರುಗಡೆಯಿಂದ ಬಂದ ಕೆಎ06 8735 ರ ಕ್ಯಾಂಟರ್‌‌ ಚಾಲಕನು ಸದರಿ ಕ್ಯಾಂಟರ್‌ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವೀರೇಶ್‌ರವರ ಮೋಟಾರ್‌ ಸೈಕಲ್‌‌ಗೆ ಡಿಕ್ಕಿಪಡಿಸಿ ಕ್ಯಾಂಟರ್‌‌ನ್ನು ನಿಲ್ಲಿಸದೇ ಹೋಗಿದ್ದು, ಇದರ ಪರಿಣಾಮ ಸವಾರವೀರೇಶ್‌ರವರು ಗಾಯಗೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ಮೋಟಾರ್‌ ಸೈಕಲ್‌ ಅವಘಢ ಸವಾರನಿಗೆಗಾಯ: 
     ದಿನಾಂಕ: 13-05-15ರಂದು ಸೂರಪ್ಪ ಎಂಬ ವ್ಯಕ್ತಿ ತನ್ನ ಬಾಪ್ತು ಕೆಎ.12.ಇ.3292ರ ಮೋಟಾರ್ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋದ ಪರಿಣಾಮ ವಿರಾಜಪೇಟೆ ತಾಲೋಕು ಬಿಟ್ಟಂಗಾಲ ಸಾರ್ವಜನಿಕ ರಸ್ತೆಯ ಅಪಘಾತಕ್ಕೀಡಾದ ಪರಿಣಾಮವಾಗಿಸದರಿ ಸೂರಪ್ಪನವರ ತಲೆ ಹಾಗೂ ಕಿವಿಯ ಭಾಗಕ್ಕೆ ಪೆಟ್ಟಾಗಿದ್ದು ರಕ್ತ ಗಾಯವಾಗಿದ್ದು, ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಮುಕ್ಕಾಟ್ಟೀರ ಚರ್ಮಣ ಎಂಬವರು ಅಪಘಾತದ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ದೂರನ್ನು ನೀಡಿದ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

Tuesday, May 12, 2015

ದಾರಿ ತಡೆದು ಹಲ್ಲೆ, ಪ್ರಕರಣ ದಾಖಲು:

      ವಿರಾಜಪೇಟೆ ತಾಲೋಕು ಕಂಡಂಗಾಲ ಗ್ರಾಮದ ನಿವಾಸಿ ಬಲ್ಲಾಡಿಚಂಡ ಕೆ.ಮುತ್ತಮ್ಮ ಎಂಬವರು ದಿನಾಂಕ: 11-05-15ರಂದು ಆರೋಗ್ಯ ಸರಿಯಿಲ್ಲದ ಕಾರಣ ಅವರ ಮಗಳು ದೇಚಮ್ಮ ರವರೊಂದಿಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ವಾಪಾಸ್ಸು ಮನೆಯ ಕಡೆಗೆ ಕಂಡಂಗಾಲದ ಈಶ್ವರ ದೇವಸ್ಥಾನಕ್ಕೆ ಹೋಗುವ ದಾರಿಯ ಪಕ್ಕ ಅವರ ಮಗಳಾದ ದೇಚಮ್ಮ ಮತ್ತು ಸಾದಲಿ ರವರೊಂದಿಗೆ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಸಮಯ ಸಂಜೆ 4-00ಗಂಟೆಗೆ ಕಂಡಂಗಾಲದ ಕೆಂಜಂಗಡ ಸುಬ್ರಮಣಿ ರವರ ಪತ್ನಿ ಸ್ವಾತಿ ಮತ್ತು ಕೆಂಜಂಗಡ ಲೇಟ್ ಮುತ್ತಪ್ಪನ ಪತ್ನಿ ಪುಷ್ಪ ರವರು ಪಿರ್ಯಾದಿಯವರನ್ನು ದಾರಿ ತಡೆದು ಸದರಿ ಸ್ವಾತಿ ಮತ್ತು ಪುಷ್ಪ ರವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಡು ಮರದ ದೊಣ್ಣೆಯಿಂದ ಹಲ್ಲೆನಡೆಸಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ:

    ಬಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಜೆ.ಕೆ. ರಾಜುರವರ ಮಗಳಾದ ಪ್ರಾಯ 14ವರ್ಷದ ಸುಶೀಲರವರು ಪೊನ್ನಂಪೇಟೆಯ ಪದವಿ ಪೂರ್ವ ಕಾಲೇಜಿಗೆ ಫಲಿತಾಂಶ ನೋಡಲು ಹೋಗಿದ್ದು ವಾಪಾಸು ಮನೆಗೆ ಬಾರದೆ ರಾಜ ಎಂಬಾತನೊಂದಿಗೆ ಹೋಗಿರುವ ಬಗ್ಗೆ ಹುಡುಗೆ ಕಾಣೆ ಪ್ರಕರಣ ದಾಖಲಿಸಿದ ಪೊನ್ನಂಪೇಟೆ ಪೊಲೀಸರು ದಿನಾಂಕ 11/5/15 ರಂದು ಅಪಹರಣವಾದ ಕು:ಸುಶೀಲಾಳನ್ನು ಪತಂಬರ ಎಸ್ಟೇಟ್‌, ಗದ್ದೆಮನೆ ಅತ್ತೂರು ಗ್ರಾಮ ಗೋಣಿಕೊಪ್ಪದಿಂದ ಪತ್ತೆ ಮಾಡಿ ಕರೆತಂದಿದ್ದು, ಆರೋಪಿತನಾದ ರಾಜನು ಸುಶೀಲಾಳು ಪೊನ್ನಂಪೇಟೆಯ ಪದವಿ ಪೂರ್ವ ಕಾಲೇಜಿಗೆ ಫಲಿತಾಂಶ ನೋಡಲು ಬಂದಾಗ ಅಕೆಯನ್ನು ಅಪಹರಿಸಿಕೊಂಡು ಹೋಗಿದ್ದು ತನ್ನ ಸ್ವಾಧಿನದಲ್ಲಿಟ್ಟುಕೊಂಡು ದಿ:10.4.15 ರಿಂದ ದಿ:10.5.15 ರ ತನಕ ಸುಶೀಲಾಳನ್ನು ಅತ್ಯಾಚಾರ ಮಾಡಿರುತ್ತಾನೆಂದು ಹುಡುಗಿಯ ಅಪ್ಪ ಜೆ.ಕೆ. ರಾಜುರವರು ನೀಡಿದ ದೂರಿನ ಮೇರೆಗೆ ರಾಜನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. Sunday, May 10, 2015

ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಹೆ:

     ವ್ಯಕ್ತಿಯೊಬ್ಬರು ಪತ್ನಿಯ ಅಗಲಿಕೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶ್ರೀಮಂಗಲ ಠಾಣೆಗೆ ವರದಿಯಾಗಿದೆ. ಬಿರುನಾಣಿ ಗ್ರಾಮದಲ್ಲಿ ವಾಸವಾಗಿದ್ದ ಕರ್ತಮಾಡ ಕಾರ್ಯಪ್ಪ ಎಂಬವರ ಪತ್ನಿ 2 ವರ್ಷಗಳ ಹಿಂದೆ ಮೃತಪಟ್ಟಿದ್ದು ಇದರಿಂದ ಮನನೊಂದ ಪತಿ ದಿನಾಂಕ8-5-2015 ರಂದು ಮನೆಯ ಬಳಿ ಇರುವ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಇನೋವಾ ಕಾರು ಡಿಕ್ಕಿ, ವ್ಯಕ್ತಿ ಸಾವು:

    ಸುಳ್ಯ ತಾಲೋಕು ಬೆಳ್ಳಾರೆ ನಿವಾಸಿಫಿರ್ಯಾಧಿ ಮಂಜುನಾಥ ಮತ್ತು ಆತನ ಸ್ನೇಹಿತ ಪ್ರವೀಣ್ ರವರು ಸ್ನೇಹಿತ ನಟರಾಜು ರವರ ಬಾಪ್ತು ಕೆಎ-21-ಎಸ್-7988 ಮೋಟರ್ ಬೈಕ್ ನಲ್ಲಿ ದಿನಾಂಕ 09-05-15 ರಂದು ಸಂಬಂಧಿಕರ ಮದುವೆಗೆಂದು ಮಡಿಕೇರಿಯ ಗೌಡ ಸಮಾಜಕ್ಕೆ ಬಂದು ನಂತರ ಮದುವೆ ಮುಗಿಸಿ ದಿನಾಂಕ 10.05.15 ವಾಪಸ್ಸು ಫಿರ್ಯಾಧಿ ಯವರು ಬೈಕ್‌ನ್ನು ಚಾಲನೆಮಾಡಿಕೊಂಡು ಹೊಗುತ್ತಿರುವಾಗ್ಗೆ ಸಮಯ 11-45 ಗಂಟೆಗೆ ಜೋಡುಪಾಲದ ನೀರಿನ ಅಬ್ಬಿ ದಾಟಿ ಸ್ವಲ್ಪ ಮುಂದೆ ತಿರುವು ರಸ್ತೆಯಲ್ಲಿ ಹೊಗುತ್ತರುವಾಗ್ಗೆ ಎದುರು ಕಡೆಯಿಂದ ಕೆಎ-19-ಎಂಇ-9394 ರ ಇನೋವ ಕಾರನ್ನು ಅದರ ಚಾಲಕ ಬಷೀರ್ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರವೀಣ್ ನ ತಲೆಯ ಭಾಗಕ್ಕೆ ಗಂಭಿರ ಗಾಯವಾಗಿದ್ದು ಹಾಗೂ ಫಿರ್ಯಾಧಿಯವರ ಬಲ ಕಾಲು ಹಾಗೂ ಸೊಂಟದ ಭಾಗಕ್ಕೆ ಗಾಯವಾಗಿದ್ದು ಇನೋವ ಕಾರಿನಲ್ಲಿ ಇಬ್ಬರನ್ನು ಚಿಕಿತ್ಸೆ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿದ್ದು ಪ್ರವೀಣ್ ನು ಚಿಕಿತ್ಸೆ ಪಡೆಯುವಾಗ ಸಮಯ 12-55 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಟ್ರಾಕ್ಟರ್‌ ಬೈಕ್‌ಗೆ ಡಿಕ್ಕಿ, ಸವಾರನಿಗೆ ಗಾಯ:

     ಈ ದಿನ ಶನಿವಾರಸಂತೆ ಠಾಣಾ ಸರಹದ್ದಿನ ಕಿತ್ತೂರಿನ ನಿವಾಸಿಯಾದ ಮಂಜುನಾಥ ಎಂಬುವರು ಶನಿವಾರಸಂತೆ ನಗರದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಶಿವರಾಜ ಎಂಬ ವ್ಯಕ್ತಿ ತಮ್ಮ ಟ್ರಾಕ್ಟರ್‌ನ್ನು ವೇಗವಾಗಿ ಚಾಲಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಮಂಜುನಾಥರವರು ಗಾಯಗೊಂಡಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Saturday, May 9, 2015

ಗುಂಪಿನಿಂದ ಹೊಟೇಲ್‌ಗೆ ನುಗ್ಗಿ ಗಲಾಟೆ, ಕೊಲೆ ಬೆದರಿಕೆ:
     ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಪಿರ್ಯಾದಿ ವಿ.ಎ.ಗಫೂರ್ ರವರು ಮತ್ತು ಅವರ ಅಣ್ಣನು ಸೇರಿ ಹೋಟೆಲ್ ವೃತ್ತಿ ನಡೆಸುತ್ತಿದ್ದು ದಿನಾಂಕ 08/05/2015 ರಂದು ರಾತ್ರಿ 9.00 ಗಂಟೆಗೆ ಪಿರ್ಯಾದಿ ಹೋಟೆಲ್ ನಲ್ಲಿ ವ್ಯಾಪಾರ ನಡೆಸುತ್ತಿದ್ದ ಸಂದರ್ಭ ಆರೋಪಿಗಳಾದ ಎನ್.ಡಿ.ಕುಟ್ಟಪ್ಪ, ವಿ.ಎಸ್.ಸಜಿ, ಬಿ.ಆರ್.ಭರತ್, ಕಬೀರ್, ಮಣಿ ಮಾಸ್ಟರ್ ಮತ್ತು ಅನಿಲ್ ಕುಟ್ಟಪ್ಪನ್ರವರುಗಳು ಗುಂಪು ಸೇರಿಕೊಂಡು ಇನೋವಾ ಕಾರಿನಲ್ಲಿ ಬಂದು ಫಿರ್ಯಾದಿಯ ಹೊಟೇಲ್‌ ಮುಂಭಾಗದಲ್ಲಿ ಇಳಿದು ಕತ್ತಿ, ದೊಣ್ಣೆ ಹಾಗೂ ಇತರೆ ಆಯುಧಗಳನ್ನು ಹಿಡಿದು ಹೋಟೆಲ್ ಒಳಗೆ ನುಗ್ಗಿ ಟೀ ಗ್ಲಾಸ್ ಗಳನ್ನು ಒಡೆದು ಹಾಕಿ ಅಶ್ರಫ್ ಎಲ್ಲಿದ್ದಾನೆ ಎಂದು ಕೇಳಿ ಅವಾಚ್ಯ ಶಬ್ದಗಳಿಂದ ಪಿರ್ಯಾದಿಯನ್ನು ಅವರ ಮನೆಯವರನ್ನು ನಿಂದಿಸಿ ಅಶ್ರಫ್ ನನ್ನು ಕೊಲ್ಲುವುದಾಗಿ ಹೇಳಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನೀರಿನಲ್ಲಿ ಮುಳುಗಿ ಬಾಲಕಿ ಸಾವು:
    ಕುಟ್ಟ ಠಾಣಾ ಸರಹದ್ದಿನ ಬಾಡಗ ಗ್ರಾಮದ ಪೈತ್‌ ಎಸ್ಟೇಟ್‌ನಲ್ಲಿ ನೆಲೆಸಿರುವ ಅಸ್ಸಾಂ ಮೂಲಕ ವ್ಯಕ್ತಿ ಪಿಲುಶ್ವೇಕ್‌ ಎಂಬವರ ಮಗಳಾದ 12 ವರ್ಷ ಪ್ರಾಯದ ಫಿರೋಜ ಬೇಗಂ ಸ್ನಾನ ಮಾಡುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾರಿಗೆ ಬೈಕ್‌ ಡಿಕ್ಕಿ ಸವಾರನಿಗೆ ಗಾಯ:
    ಪುತ್ತೂರಿನ ಕಬಕ ಗ್ರಾಮದ ನಿವಾಸಿ ದೀಪಕ್‌ ಶ್ಯಾಂ ರವರು ತನ್ನ ಚಿಕ್ಕಪ್ಪನಾದ ಶಂಕರಭಟ್ಟರ ಇಕೋ ಕಾರು ಸಂಖ್ಯೆ ಕೆಎ-02-ಎಂಎಫ್-8562 ರಲ್ಲಿ ಚಿಕ್ಕಪ್ಪನಾದ ಶಂಕರಭಟ್ಟ, ಮಹಾಲಿಂಗಭಟ್ಟ ಮತ್ತು ಪಿರ್ಯಾದಿಯವರ ಸ್ನೇಹಿತನಾದ ದಯಾನಂದಪೈರವರೊಂದಿಗೆ ಮೈಸೂರಿನಿಂದ ಪುತ್ತೂರಿಗೆ ಹೋಗುತ್ತಿರುವಾಗ ಸಮಯ 8-00 ಪಿ ಎಂ ಗೆ ದೇವರಕೊಲ್ಲಿ ಎಂಬಲ್ಲಿಗೆ ತಲುಪುವಾಗ್ಗೆ ಸಂಪಾಜೆ ಕಡೆಯಿಂದ ಕೆಎ-01-ಹೆಚ್.ಬಿ-6740 ರ ಮೋಟಾರು ಸೈಕಲನ್ನು ಅದರ ಚಾಲಕ ಸುನಿಲ್ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿಪಡಿಸಿ ಬೈಕು ಸಮೇತ ರಸ್ತೆಗೆ ಬಿದ್ದು ತಲೆಗೆ ಗಾಯವಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, May 8, 2015

ಅನೈತಿಕ ಸಂಬಂಧದ ಶಂಕೆ, ಪತಿಯಿಂದ ಪತ್ನಿಯ ಕೊಲೆ: 

     ಅನೈತಿಕ ಸಂಬಂಧದ ಅನುಮಾನದಿಂದ ಪತಿಯೇ ಪತ್ನಿಯನ್ನು ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೈದ ಘಟನ ಪೊನ್ನಂಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊನ್ನಂಪೇಟೆ ಠಾಣಾ ಸರಹದ್ದಿನ ಮಲ್ಲೂರು ನಿಟ್ಟೂರು ಗ್ರಾಮದ ಚಕ್ಕೇರ ಅಯ್ಯಪ್ಪ ಎಂಬುವರ ಲೈನು ಮನೆಯಲ್ಲಿ ವಾಸವಾಗಿರುವ ಸುಬ್ಬು ಹಾಗು ಆತನ ಪತ್ನಿ ಅಕ್ಕಚ್ಚಿ ಎಂಬುವರು ವಾಸವಾಗಿದ್ದು, ತನ್ನ ಪತ್ನಿ ಅಕ್ಕಚ್ಚಿ ಶಂಕರ ಎಂಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾಳೆ ಎಂದು ಶಂಕೆಗೊಂಡು ಇದೇ ವಿಚಾರದಲ್ಲಿ ಗಂಡ ಹೆಂಡಿರ ಮಧ್ಯೆ ಅಗಾಗ್ಗೆ ಜಗಳ ನಡೆಯುತ್ತಿತ್ತು. ಇದೇ ವಿಚಾರದಲ್ಲಿ ವೈಷಮ್ಯ ಇಟ್ಟುಕೊಂಡು ದಿನಾಂಕ 6-5-2015 ರಂದು ರಾತ್ರಿ ಸುಬ್ಬ ತನ್ನ ಪತ್ನಿ ಅಕ್ಕಚ್ಚಿಯನ್ನು ದೊಣ್ಣೆ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು , ಈ ಸಂಬಂಧ ಮೃತೆ ಅಕ್ಕಚ್ಚಿಯ ತಾಯಿ ಪಣಿಎರವರ ಚಿಡಿಯ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.   

ಹುಡುಗಿ ಕಾಣೆ, ಪ್ರಕರಣ ದಾಖಲು:

     ಸೋಮವಾರಪೇಟೆ ತಾಲೋಕು ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಶ್ರೀಮತಿ ವಾಣಿ ಕಾಳಪ್ಪ ಎಂಬವರ ಮಗಳು 25 ವರ್ಷ ಪ್ರಾಯದ ಕೆ ಸಿ ಶಬರಿಯು ಮೈಸೂರಿನ ಜೆ ಎಸ್ ಎಸ್ ನ ಜಾಬ್ ಟ್ರೈನಿಂಗ್ ಶಾಲೆಯಲ್ಲಿ 2 ವರ್ಷದಿಂದ ವ್ಯಾಸಾಂಗ ಮಾಡುತ್ತಿದ್ದು ಅಲ್ಲಿಯೇ ತಂಗಿದ್ದು, ದಿನಾಂಕ 26-04-2015 ರಂದು ಮೈಸೂರಿನ ಜೆ ಎಸ್ ಎಸ್ ಶಾಲೆಯಿಂದ ಮನೆಗೆ ಹೋಗುವುದಾಗಿ ಅನುಮತಿ ಪಡೆದುಕೊಂಡು ಅಲ್ಲಿಂದ ಹೊರಟು ಬಂದಿದ್ದು ಇದುವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆಂದು ಫಿರ್ಯಾದಿ ಶ್ರೀಮತಿ ವಾಣಿ ಕಾಳಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಾಫಿ ಮಾರಾಟ ಮಾಡುವುದಾಗಿ ಮುಂಗಡ ಹಣ ಪಡೆದು ವಂಚನೆ:

   ಶ್ರೀ ಎಂ.ಪಿ.ಬಾದು @ ಅಬ್ದುಲ್ ರಹಿಮಾನ್‌ರವರು ಮಡಿಕೇರಿ ನಗರದಲ್ಲಿ ಕಾಫಿ ಹಾಗೂ ಕರಿಮೆಣಸು ವ್ಯಾಪಾರಿಯಾಗಿದ್ದು, ಸದರಿಯವರು 2014ನೇ ಸಾಲಿನ ಎಪ್ರಿಲ್ ತಿಂಗಳ 2ನೇ ವಾರದಲ್ಲಿ ಇಬ್ನಿವಳವಾಡಿ ಗ್ರಾಮದ ನಂದಿನೆರವಂಡ ಮಧು ಗಣಪತಿಯವರಿಗೆ ತಲಾ 50 ಕೆ.ಜಿಯ ಒಂದು ಚೀಲಕ್ಕೆ ರೂ. 3,560/= ಗಳಂತೆ 84 ಚೀಲ ರೊಬೆಸ್ಟಾ ಚೆರಿ ಕಾಫಿಯನ್ನು 2 ದಿನಗಳಲ್ಲಿ ಕೊಡುವಂತೆ ಒಪ್ಪಂದ ಮಾಡಿಕೊಂಡು ರೂ. 2,60,000/= ಹಣವನ್ನು ಬಾದುರವರು ಮಧುವರಿಗೆ ಕೊಟ್ಟಿದ್ದು, ಸದರಿ ಮಧುರವರು ಕಾಫಿಯನ್ನು ಬಾದುರವಿಗೆ ಕೊಡದೇ ಮೂರನೇ ವ್ಯಕ್ತಿಗೆ ಮಾರಾಟ ಮಾಡಿ ಎಂ.ಪಿ.ಬಾದು @ ಅಬ್ದುಲ್ ರಹಿಮಾನ್‌ರವರಿಗೆ ಹಣವನ್ನು ಸಹ ನೀಡದೆ ಮೋಸ ಮಾಡಿರುವುದಾಗಿ ಘನ ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದಪೊಲೀಸರು ತನಿಖೆ ಕೈಗೊಂಡಿದ್ದಾರೆ.

Thursday, May 7, 2015

ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ
                ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಕುಶಾಲನಗರ ಬಳಿಯ ರಸಲ್‌ಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 6/5/2015 ರಂದು ರಾತ್ರಿ ಸಮಯ 9-00 ಪಿ.ಎಂ. ವೇಳೆಗೆ ರಸಲ್‌ಪುರ ಯೋಗೇಶರವರು ರಸಲ್ ಪುರ ಬಾಳುಗೋಡು ಗ್ರಾಮದ ರಾಜಾ ಪ್ಯಾಲೇಸ್‌ ಹೋಟೇಲ್ ಮುಂಭಾಗದಲ್ಲಿ ಪ್ರಕಾಶ್, ಲೋಹಿತ, ಲಕ್ಷ್ಮಣ ಹಾಗೂ ಹೋಟೇಲ್ ಮಾಲೀಕ ರಾಜೇಶ್ ರವರೊಂದಿಗೆ ಮಾತನಾಡಿಕೊಂಡು ನಿಂತಿರುವಾಗ ಅಲ್ಲಿಗೆ  ರಸಲ್‌ಪುರ ನಿವಾಸಿ ಸುಜಾ ಯಾನೆ ಶಾಂತಕುಮಾರ್ ರವರು ಹೀರೋ ಹೋಂಡಾ ಬೈಕಿನಲ್ಲಿ ಬಂದು ಯೋಗೇಶನೊಂದಿಗೆ ಹಂದಿ ವ್ಯಾಪಾರದ ವಿಷಯವಾಗಿ ಜಗಳವಾಡಿ  ತನ್ನ ಕೈಯಲ್ಲಿದ್ದ ಚಾಕುವಿನಿಂದ ಯೋಗೇಶನ ಎದೆಗೆ ಇರಿದ ಪರಿಣಾಮ ಯೋಗೇಶ ಸಾವಿಗೀಡಾಗಿದ್ದು ಸುಜನು ಯೋಗೇಶನಿಗೆ ಚಾಕುವಿನಿಂದ ಇರಿದಿರುವುದನ್ನು ತಾನು ಕಣ್ಣಾರೆ ನೋಡಿರುವುದಾಗಿ ಮೃತ ಯೋಗೇಶನ ಪತ್ನಿ ಸರಿತಾರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಮೇಲೆ ಹಲ್ಲೆ
               ಬೀದಿ ದೀಪಕ್ಕೆ ಕಲ್ಲು ಹೊಡೆಯುತ್ತಿದ್ದಾತನನ್ನು ಆಕ್ಷೇಪಿಸಿದ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಶನಿವಾರಸಂತೆ ಬಳಿಯ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 06/05/2014ರಂದು ಮುಳ್ಳೂರು ನಿವಾಸಿ ಸುನಂದಾ ಎಂಬಾಕೆಯು ಮನೆಯಲ್ಲಿರುವಾಗ ಪಕ್ಕದ ಮನೆಯ ನಿವಾಸಿಯಾದ ದಿನೇಶ ಎಂಬಾತನು ರಸ್ತೆಯ ಬೀದಿ ದೀಪಕ್ಕೆ ಕಲ್ಲನ್ನು ಹೊಡೆಯುತ್ತಿದ್ದುದನ್ನು ಸುನಂದರವರು ಆಕ್ಷೇಪಿಸಿದುದನ್ನು ಕಾರಣವಾಘಿಟ್ಟುಕೊಂಡು ದಿನೇಶನು ಸುನಂದರವರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದು ಬಿಡಿಸಲು ಬಂದ ಪುಟ್ಟಸ್ವಾಮಿ ಮತ್ತು ರಂಗನಾಥ ಎಂಬವರಿಗೂ ಸಹ ದೊಣ್ಣೆಯಿಂದ ಹೊಡೆದಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿ ಮಹಿಳೆಗೆ ಬಸ್‌ ಡಿಕ್ಕಿ ; ಸಾವು
            ಪಾದಚಾರಿ ಮಹಿಳೆಯೊಬ್ಬರಿಗೆ ಬಸ್‌ ಡಿಕ್ಕಿಯಾಗಿ ಮಹಿಳೆ ಸಾವಿಗೀಡಾದ ಘಟನೆ ಕುಟ್ಟ ನಗರದಲ್ಲಿ ನಡೆದಿದೆ. ದಿನಾಂಕ 06-05-2015 ರಂದು ಹುದಿಕೇರಿ ನಿವಾಸಿ ಪಣಿ ಎರವರ ರಾಜು ಎಂಬವರ  ಹೆಂಡತಿ  ಅಮ್ಮುಣಿ ಎಂಬವರು ಕುಟ್ಟ ನಗರದ ಎ.ಪಿ.ಸಿ.ಎಂ.ಎಸ್ ಬ್ಯಾಂಕ್‌ನ ಕಡೆಯಿಂದ ಶ್ರೀ ಕೃಷ್ಣ ದೇವಸ್ಥಾನದ ಕಡೆಗೆ ರಸ್ತೆ ದಾಟುತ್ತಿದ್ದಾಗ ಕುಟ್ಟ ಬಸ್ ನಿಲ್ದಾಣ ಕಡೆಯಿಂದ ಕೆ.ಎ-09 ಎಫ್-4157 ರ ಕೆ.ಎಸ್.ಆರ್.ಟಿ.ಸಿ ಬಸ್‌ನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಮ್ಮುಣಿಯವರಿಗೆ ಢಿಕ್ಕಿಪಡಿಸಿದ ಪರಿಣಾಮ ಬಸ್‌ನ ಚಕ್ರ ಕೆಳಗೆ ಬಿದ್ದ ಅಂ್ಂಉಣಿಯವರ ಮೇಲೆ ಹರಿದು ಅಮ್ಮುಣಿಯವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಬಸ್‌ ಡಿಕ್ಕಿ ; ಮಹಿಳೆ ಸಾವು
           ಬೈಕಿಗೆ ಬಸ್‌ ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಕುಟ್ಟ ನಗರದಲ್ಲಿ ನಡೆದಿದೆ. ದಿನಾಂಕ 06-05-2015 ರಂದು ಸಮಯ ಬೆಳಿಗ್ಗೆ ಕುಟ್ಟ ನಿವಾಸಿ ಹೆಚ್‌.ಕೆ.ಲಕ್ಷ್ಮಣ ಎಂಬವರು ಅವರ ಮೋಟಾರ್ ಸೈಕಲ್‌ ನಂ ಕೆ.ಎ-12 ಜೆ-3974 ರಲ್ಲಿ ಪತ್ನಿ ಮೀನರವರನ್ನು ಕೂರಿಸಿಕೊಂಡು ಕುಟ್ಟ ನಗರದಿಂದ ಮನೆಯ ಕಡೆಗೆ ಹೋಗುತ್ತಿರುವಾಗ ಕುಟ್ಟ ನಗರದಲ್ಲಿರುವ ಸಿ.ಬಿ.ಟಿ ಆರ್ಕೇಡ್ ಕಟ್ಟಡದ ಮುಂಭಾಗದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕೆ.ಎ-09 ಎಫ್-3770 ಕೆ.ಎಸ್.ಆರ್.ಟಿ.ಸಿ ಬಸ್‌ ನ್ನು ಅದರ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲಕ್ಷ್ಮಣರವರು ಚಾಲಿಸುತ್ತಿದ್ದ  ಮೋಟಾರ್ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿದ್ದು ಹಿಂದಿಯಲ್ಲಿ ಕುಳಿತಿದ್ದ ಮೀನ ರವರು ಮೋಟಾರ್ ಸೈಕಲ್‌ನಿಂದ ಕೆಳಗಡೆ ಬಿದ್ದಾಗ ಅವರ ತಲೆಗೆ ಬಸ್‌ನ ಚಕ್ರ ಹರಿದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Wednesday, May 6, 2015

ಕರ್ತವ್ಯಕ್ಕೆ ಅಡ್ಡಿ, ಪ್ರಕರಣ ದಾಖಲು:
    ಕರ್ತವ್ಯದಲ್ಲಿದ್ದ ಪೊಲೀಸ್‌ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 5-5-2015 ರಂದು ಸಂಜೆ 7-00 ಗಂಟೆಗೆ ಗೋಣಿಕೊಪ್ಪ ಠಾಣಾಧಿಕಾರಿ ಜೆ.ಇ. ಮಹೇಶ್‌ರವರು ಗೋಣಿಕೊಪ್ಪ ನಗರದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ವಾಹನ ನಿಲುಗಡೆ ನಿಷೇಧ ಜಾಗದಲ್ಲಿ ವಾಹನವನ್ನು ನಿಲ್ಲಿಸಿದ ಆರೋಪಿ ಪೊನ್ನಿಮಾಡ ಜಯಂತ್‌ ರವರಲ್ಲಿ ವಾಹನ ತೆಗೆಯಲು ತಿಳಿಸಿದ ಸಂದರ್ಭದಲ್ಲಿ, ಠಾಣಾಧಿಕಾರಿಯವನ್ನು ಅವಾಚ್ಯ ಶಬ್ದಗಳಿಂದ ಬೈದು, ಎದೆಯ ಭಾಗಕ್ಕೆ ಕೈಯನ್ನು ಹಾಕಿ ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮನೆಯ ಬೀಗ ಮುರಿದು ಚಿನ್ನಾಭರಣ ಕಳ್ಳತನ: 

     ಮಡಿಕೇರಿ ತಾಲೋಕು, ಹೊದ್ದೂರು ಗ್ರಾಮದ ನಿವಾಸಿ ಎ.ಎಸ್‌‌. ಸವಿತ ಎಂಬವರು ಹಾಗೂ ಅವರ ಗಂಡನ ಅಕ್ಕ ದೇವಕಿಯವರು ಒಂದೇ ಮನೆಯಲ್ಲಿ ಎರಡು ಭಾಗವಾಗಿ ವಾಸಮಾಡಿಕೊಂಡಿದ್ದು, ದಿನಾಂಕ 05-05-2015 ರಂದು ಮನೆಗೆ ಬೀಗ ಹಾಕಿಕೊಂಡು ಸಮಯ 08-30 ಎ ಎಂ ಗೆ ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿ ಚಿನ್ನಾಭರಣ, ಬೆಳ್ಳಿಯ ಆಭರಣ ಮತ್ತು ಸೀರೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿದ ಒಟ್ಟು ಮೌಲ್ಯ ರೂ.23,400-00 ಆಗಬಹುದೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯ ನಿರತ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ: 
     ಕರ್ತವ್ಯ ನಿರತ ಅಧಿಕಾರಿಯೊಬ್ಬರ ವ್ಯಕ್ತಿಯೊಬ್ಬರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 5-5-2015 ರಂದು ಸಂಜೆ 7-30 ಗಂಟೆಗೆ ಗೋಣಿಕೊಪ್ಪ ನಗರದಲ್ಲಿ ಗೋಣಿಕೊಪ್ಪ ಠಾಣಾಧಿಕಾರಿ ಜೆ.ಇ. ಮಹೇಶ್‌ರವರು ಗಸ್ತು ಕರ್ತವ್ಯದಲ್ಲಿದ್ದಾಗ ವಾಹನ ನಿಲುಗಡೆ ನಿಷೇಧ ಜಾಗದಲ್ಲಿ ಕೈಕೇರಿ ಗ್ರಾಮದ ನಿವಾಸಿ ಪೊನ್ನಿಮಾಡ ಜಯಂತ್‌ ಎಂಬ ವ್ಯಕ್ತಿ ತನ್ನ ಕಾರನ್ನು ನಿಲ್ಲಿಸಿದ್ದು, ಸದರಿ ಕಾರನ್ನು ಬೇರೆಡೆ ನಿಲ್ಲಿಸುವಂತೆ ಕೇಳಿಕೊಂಡಾಗ ಸದರಿ ವ್ಯಕ್ತಿ ಠಾಣಾಧಿಕಾರಿಯವರನ್ನು ಅವಾಚ್ಯವಾಗಿ ಬೈದು ಎದೆಯ ಭಾಗಕ್ಕೆ ಕೈಯನ್ನು ಹಾಕಿ ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ:

     ವ್ಯಕ್ತಿಯ ಅಂತ್ಯಕ್ರಿಯೆಗೆ ತಡವಾಗಿ ಬಂದರೆಂಬ ಕಾರಣಕ್ಕೆ ವ್ಯಕ್ತಿಯ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಕನ್ನಂಡ ಬಾಣೆಯಲ್ಲಿ ನಡೆದಿದೆ. ಪುತ್ತೂರು ತಾಲೋಕು ಕೇನಾಜೆ ಗ್ರಾಮದ ನಿವಾಸಿ ಎಸ್‌. ದಯಾನಂದ ಎಂಬವರು ದಿನಾಂಕ 5-5-2015 ರಂದು ಮಡಿಕೇರಿಯಲ್ಲಿ ನಡೆದೆ ತಮ್ಮ ಮಾವನ ಅಂತ್ಯಕ್ರಿಯೆಗೆ ತಡವಾಗಿ ಬಂದರೆಂಬ ಕಾರಣಕ್ಕೆ ಜಗಳ ಮಾಡಿ ಕಬ್ಬಿಣದ ರಾಡಿನಿಂದಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಮನುಷ್ಯ ಕಾಣೆ ಪ್ರಕರಣ ದಾಖಲು:

    ಸೋಮವಾರಪೇಟೆ ನಗರದ ಐ.ಬಿ ರಸ್ತೆಯಲ್ಲಿರುವ ಚಂದ್ರಕಾಂತರವರ ಲೈನ್‌ ಮನೆಯಲ್ಲಿ ವಾಸವಿರುವ ಶ್ರೀಮತಿ ದೀಪ ಎಂಬವರ ಗಂಡ ವಸಂತ ಪ್ರಾಯ 26 ವರ್ಷ ಇವರು ದಿನಾಂಕ 01.05.2015 ರಂದು ಮದ್ಯಪಾನ ಮಾಡಿಕೊಂಡು ಮನೆಗೆ ಬಂದು ದೀಪರವರೊಂದಿಗೆ ಜಗಳವಾಡಿ ತಕ್ಷಣ ಮನೆಯಿಂದ ಹೊರಟು ಹೋದವರು ಮತ್ತೆ ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿದ್ದು, ಶ್ರೀಮತಿ ದೀಪಾರವರು ನೀಡಿದ ದೂರಿನ ಮೆರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Tuesday, May 5, 2015

ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ: 

     ಪಿರಿಯಾಪಟ್ಟಣ ತಾಲೋಕು ದೊಡ್ಡಹೊಸೂರು ಗ್ರಾಮದ ನಿವಾಸಿ ಶ್ರೀಮತಿ ಚಂದ್ರಕಲಾ ಎಂಬುವರ ಪತಿ ಬಸವರಾಜು ರವರು ದಿನಾಂಕ 29-4-2015 ರಂದು ಸಮಯ 8-00 ಎ.ಎಂಗೆ ಮನೆಯಿಂದ ಹೋದವರು ಮರಳಿ ಮನೆಗೆ ಬಾರದೆ ಇದ್ದು, ದಿನಾಂಕ 4-5-2015 ರಂದು ಸಮಯ 8-00 ಎ.ಎಂಗೆ ಕುಶಾಲನಗರದ ನಿಸರ್ಗ ದಾಮದ ಹತ್ತಿರ ಇರುವ ಕಾವೇರಿ ಹೊಳೆಯಲ್ಲಿ ಬಸವರಾಜುರವರು ಮೃತಪಟ್ಟಿರುವುದು ಕಂಡುಬಂದಿದ್ದು, ಸದರಿಯವರಿಗೆ ಸಾರಾಯಿ ಕುಡಿಯುವ ಅಬ್ಯಾಸವಿದ್ದು ಯಾವುದೋ ಬೇಸರದಿಂದ ಕಾವೇರಿ ಹೊಳೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಫಿರ್ಯಾದಿ ಚಂದ್ರಕಲಾರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ:

     ಶನಿವಾರಸಂತೆ ಠಾಣಾ ಸರಹದ್ದಿನ ಹಾರೆ-ಹೊಸೂರು ಗ್ರಾಮದ ವಾಸಿ ಶೇಖರ ಎಂಬವರು ದಿನಾಂಕ 03-05-2015 ರಂದು ಸಂಜೆ 05-00 ಗಂಟೆಗೆ ಕ್ಯಾತನಹಳ್ಳಿ ಗ್ರಾಮದ ಶೇಖರ ಎಂಬವರ ಕೆರೆಯಲ್ಲಿ ಮೀನನ್ನು ಹಿಡಿಯುತ್ತಿರುವಾಗ್ಗೆ ಆರೋಪಿಗಳಾದ ಕ್ಯಾತನಳ್ಳಿ ಗ್ರಾಮದ ಅಣ್ಣಯ್ಯ ಮತ್ತು ಕುಮಾರ ಎಂಬವರು ಅಲ್ಲಿಗೆ ಬಂದು ನಮ್ಮ ಸಾಹುಕಾರರ ಕೆರೆಯಲ್ಲಿ ಏಕೆ ಮೀನನ್ನು ಹಿಡಿಯುತ್ತೀರಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಶೇಖರರವರ ತಲೆಯ ಎಡ ಭಾಗಕ್ಕೆ ಕಡಿದು ರಕ್ತಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ವ್ಯಾನಿಗೆ ಟಿಪ್ಪರ್‌ ಲಾರಿ ಡಿಕ್ಕಿ ಚಾಲಕ ಸೇರಿ 10 ಜನರಿಗೆ ಗಾಯ: 

     ದಿನಾಂಕ 04.05.2015 ರಂದು ಫಿರ್ಯಾದಿ ಕುಕ್ಕೆಸುಬ್ರಮಣ್ಯ ನಿವಾಸಿ ಸೀನನಾಯ್ಕ ಎಂಬುವರು ತಮ್ಮ ಬಾಪ್ತು ಕೆಎ12 ಎ 4005 ರ ವ್ಯಾನಿನಲ್ಲಿ 16 ಜನರನ್ನು ಕೂರಿಸಿಕೊಂಡು ಸುಬ್ರಮಣ್ಯದಿಂದ ನಗರೂರು ಗ್ರಾಮಕ್ಕೆ ಬಾಡಿಗೆಗೆ ಬಂದಿದ್ದು, ವಾಪಾಸ್ಸು ಹೋಗುತ್ತಿರುವಾಗ್ಗೆ ಸಮಯ 03:00 ಪಿ.ಎಂಗೆ ಸೋಮವಾರಪೇಟೆ ತಾಲೋಕು ಹೆಮ್ಮನ ಗದ್ದೆ ಎಂಬಲ್ಲಿ ತಲುಪುವಾಗ್ಗೆ ಎದುರುಗಡೆಯಿಂದ ಬಂದ ಕೆಎ12 ಬಿ 228 ರ ಟಿಪ್ಪರ್‌ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಫಿರ್ಯಾದಿಯವರ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನ ಮುಂಭಾಗ ಜಖಂಗೊಂಡು ಫಿರ್ಯಾದಿಯವರಿಗೆ ಹಾಗೂ ವ್ಯಾನಿನಲ್ಲಿದ್ದ 8-10 ಜನರಿಗೆ ರಕ್ತಗಾಯಗಳಾಗಿರುತ್ತವೆ ಎಂಬುದಾಗಿನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಬ್ಯಾಂಕಿನಲ್ಲಿಟ್ಟ ಚೆಕ್‌ ಕಳವು:

     ವಿರಾಜಪೇಟೆ ನಗರದ ಮೊಗರಗಲ್ಲಿಯಲ್ಲಿ ವಾಸವಾಗಿರುವ ಪಿರ್ಯಾದಿ ಶ್ರೀಮತಿ ವಿಲಾಶಿನಿರವರು ವಿರಾಜಪೇಟೆ ನಗರದ ಕೆ,ಡಿ,ಡಿ.ಸಿ ಬ್ಯಾಂಕಿನಲ್ಲಿ ಪಿಗ್ಮಿ ಕಾಲೆಕ್ಟೆರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಸದರಿಯವರು ಅವರಿಗೆ ಸಂಭಂದಿಸಿದ ಚೆಕ್ ಗಳನ್ನು ಅವರ ಬ್ಯಾಂಕಿನಲ್ಲಿ ಓಳಗಡೆ ಇಟ್ಟು ಪಿಗ್ಮಿ ವಸೂಲಾತಿಗೆ ಹೊರಗಡೆ ಹೋದಾಗ ಬ್ಯಾಂಕಿನಲ್ಲಿ ಇಟ್ಟಿದ್ದ ಚೆಕ್ಸ ಸಂಖ್ಯೆ 009404 ರನ್ನು ಯಾರೂ ಕಳ್ಳತನ ಮಾಡಿಕೊಂಡು ಹೋಗಿದ್ದು,ಈ ಚಕ್ ಅನ್ನು ವಿರಾಜಫೇಟೆ ನಗರದ ಅರಸು ನಗರದ ವಾಸಿ ವರ್ಗಿಸ್ ರವರು ಬ್ಯಾಂಕಿಗೆ ನಗದಿರಣ ಮಾಡಲು ಬಂದಿರುವುದಾಗಿ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, May 4, 2015

ಆಕಸ್ಮಿಕ ವಿದ್ಯುತ್‌ ಸ್ಪರ್ಶ ವ್ಯಕ್ತಿ ಸಾವು: 

     ತೋಟ ಕಾರ್ಮಿಕರೊಬ್ಬರು ಅಲ್ಯೂಮಿನಿಯಂ ಏಣಿಯನ್ನು ಉಪಯೋಗಿಸಿ ಮರವೇರುವಾಗ ಆಕಸ್ಮಿಕ ವಿದ್ಯುತ್‌ ತಗುಲಿ ಸಾವಿಗೀಡಾದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಹರಿಹರ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಹರಿಹರ ಗ್ರಾಮದಲ್ಲಿ ಶಿವಣ್ಣ ಎಂಬುವರು ತನ್ನ ಪತ್ನಿಯೊಂದಿಗೆ ವಾಸವಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ದಿನಾಂಕ 3-2-2015 ರಂದು ಹರಿಹರ ಬಾಚೀರ ರಾಮು ಗೌಡ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಮರ ಏರಲು ಅಲ್ಯೂಮಿನಿಯಂ ಏಣಿಯನ್ನು ಕಾಫಿ ತೋಟದಲ್ಲಿದ್ದ ಮರಕ್ಕೆ ಇಟ್ಟು ಹತ್ತುವಾಗ ಏಣಿ ಇಟ್ಟ ಮರದ ಮೇಲ್ಬಾಗದ ಪಕ್ಕದಲ್ಲಿ ಇದ್ದ ಕರೆಂಟ್ ತಂತಿಗೆ ಏಣಿ ತಗುಲಿ ಕರೆಂಟ್ ಸ್ಪರ್ಶಗೊಂಡು ಶಿವಣ್ಣ ಮೃತಪಟ್ಟಿದ್ದು, ಶ್ರೀಮಂಗಲ ಪೊಲೀಸರು ಮೃತರ ಪತ್ನಿ ಶ್ರೀಮತಿ ಲಕ್ಷ್ಮಿ ಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಅನಾರೋಗ್ಯ ಮತ್ತು ಸಾಲ ಹಿನ್ನೆಲೆ, ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ವ್ಯಕ್ತಿಯೊಬ್ಬರು ಪಡೆದ ಸಾಲವನ್ನು ಮರುಪಾವತಿಸುವ ವಿಚಾರದಲ್ಲಿ ನೊಂದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀಮಂಗಲ ಠಾಣಾ ಸರದ್ದಿನ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಮಂಡೂರು ಗ್ರಾಮದ ನಿವಾಸಿ ಅಜ್ಜಿಕುಟ್ಟೀರ ದೇವಯ್ಯ ಎಂಬುವರ ಲೈನುಮನೆಯಲ್ಲಿ ವಾಸವಾಗಿದ್ದ ವ್ಯಕ್ತಿ ವಾನಂಡ ಉತ್ತಯ್ಯನವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದುದಲ್ಲದೆ ತಾನು ಮಾಡಿದ ಸಾಲವನ್ನು ತೀರಿಸಲು ಕಷ್ಟಕರವಾದ ಕಾರಣ ದಿನಾಂಕ 3-5-2015 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿ ವ್ಯಕ್ತಿಯ ಪತ್ನಿ ಶ್ರೀಮತಿ ವಾನಂಡ ಲಲಿತ ರವರು ನೀಡಿದದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ. 

ಚಲಿಸುತ್ತಿದ್ದ ಬೈಕ್‌ನಿಂದ ಬಿದ್ದು ಮಹಿಳೆಯ ದುರ್ಮರಣ:

     ಆಸ್ಪತ್ರೆಗೆ ಚಿಕಿತ್ಸೆಗಾಗಿ ಮಗನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಬೈಕ್‌ನಿಂದ ಬಿದ್ದು ಮೃತಪಟ್ಟ ಘಟನೆ ಶ್ರೀಮಂಗಲ ಸಮೀಪದ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಬೆಳ್ಳೂರು ಗ್ರಾಮದ ನಿವಾಸಿ ಕಳ್ಳೆಂಗಡ ಪಿ. ಕಾರ್ಯಪ್ಪ ಎಂಬುವರ ಪತ್ನಿ ಶಾಂತಿರವರು ಶ್ರೀಮಂಗಲ ಆಸ್ಪತ್ರೆಗೆ ತನ್ನ ಮಗ ಹರೀಶ್‌ರವರ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿದ್ದಾಗ, ಮೋಟಾರ್‌ ಸೈಕಲನ್ನು ಅತೀ ವೇಗ ಮತ್ತುಅಜಾಗರೂಕತೆಯಿಂದ ಓಡಿಸಿದ ಪರಿಣಾಮ ಬೈಕ್‌ನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಶಾಂತಿರವರು ಕೆಳಗೆ ರಸ್ತೆಗೆ ಬಿದ್ದು ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮನೆ ಕಳವು, ಪ್ರಕರಣ ದಾಖಲು:

     ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಸುಳುಗೋಡು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಸುಳುಗೋಡು ಗ್ರಾಮದ ನಿವಾಸಿ ಕೆ.ಯು. ಬೋಪಯ್ಯ ಎಂಬುವರು ದಿನಾಂಕ 2/5/2015ರಂದು ಅವರ ಅಣ್ಣ ಪೊನ್ನಪ್ಪರವರ ಮದುವೆ ಸಂಬಂಧ ಸಮಯ 5.30 ಗಂಟೆಗೆ ಮನೆಗೆ ಬೀಗ ಹಾಕಿ ಪೊನ್ನಂಪೇಟೆ ಕೊಡವ ಸಮಾಜಕ್ಕೆ ಹೋಗಿದ್ದು ನಂತರ ರಾತ್ರಿ ಸಮಯ 00.30ಗಂಟೆಗೆ ಮನೆಗೆ ವಾಪಾಸು ಬಂದು ನೋಡುವಾಗ್ಗೆ ಯರೋ ಕಳ್ಳರು ಮನೆಯ ಹಿಂಭಾಗದ ಬಾಗಿಲನ್ನು ಮೀಟಿ ತೆಗೆದು ಒಳಗೆ ಪ್ರವೇಶ ಮಾಡಿ ಡೈನಿಂಗ್ ಹಾಲ್ ಪಕ್ಕದಲ್ಲಿರುವ ಗೋಡೆ ಬೀರುವಿನ ಡ್ರಾಗಳನ್ನು ತೆರೆದು ಆರು ಚಿನ್ನದ ಬಳೆಗಳು, 2 ಸಿಂಗಲ್ ಬಳೆಗಳು, ಒಂದು ಮೂರು ಎಳೆಯ ಚೈನ್, ಒಂದು ಡೈಮಂಡ್ ನೇಕ್ಲೇಸ್, ಒಂದು ಎರಡು ಎಳೆಯ ಚೈನ್, ಒಂದು ಕರಿಮಣಿ ಸರ ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದ್ರಿ ಚಿನ್ನಾಭರಣಗಳ ಒಟ್ಟು ಸುಮಾರು 1,50,000ರೂ ಬೆಲೆ ಬಾಳುತ್ತವೆ ಎಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿತನಿಖೆ ಕೈಗೊಂಡಿದ್ದಾರೆ.

Sunday, May 3, 2015

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

     ಅಕ್ರಮವಾಗಿ ಟ್ರಾಕ್ಟರ್‌ನಲ್ಲಿ ಮರಳು ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ದಿನಾಂಕ 3-5-2015 ರಂದು ಶನಿವಾರಸಂತೆ ಠಾಣಾಧಿಕಾರಿ ರವಿಕಿರಣ್‌ರವರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ವ್ಯಕ್ತಿಯೊಬ್ಬರು ಕೆಎ-13 ಟಿ-2014 ರ ಟ್ರಾಕ್ಟರ್‌ನಲ್ಲಿ ಸರಕಾರದ ಪರವಾನಗಿ ಇಲ್ಲದೆ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಸುಮಾರು 5000 ರೂ ಬೆಲೆ ಬಾಳುವ ಮರಳನ್ನು ವಶಕ್ಕೆ ತೆಗೆದುಕೊಂಡು ಆರೋಪಿ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿದ್ದಾರೆ, 

ಮನುಷ್ಯ ಕಾಣೆ ಪ್ರಕರಣ ದಾಖಲು:

     ಸ್ನೇಹಿತನ ನಿಶ್ಚಿತಾರ್ಥಕೆಂದು ಉಡುಪಿಗೆ ಹೋದ ವ್ಯಕ್ತಿ ಕಾಣೆಯಾಗಿರುವ ಘಟನೆ ಕುಶಾಲನಗರದ  ಗುಮ್ಮನಕೊಲ್ಲಿ ಗ್ರಾಮದಲ್ಲಿ ನಡೆದಿದೆ.   ಗುಮ್ಮನಕೊಲ್ಲಿ ನಿವಾಸಿ ಹೆಚ್‌.ಎಲ್‌ ದೇವಣ್ಣ ಎಂಬವರ ಮಗ ಡಿ. ಲಿಖಿತ್‌ ಎಂಬವರು ದಿನಾಂಕ 25-4-2015 ರಂದು 8-30 ಎ.ಎಂಗೆ ಸ್ನೇಹಿತನ ಮದುವೆ ನಿಶ್ಚಿತಾರ್ಥಕ್ಕೆ ಉಡುಪಿಗೆ ಹೋಗಿದ್ದು, ಹೋಗುವಾಗ ಮಂಗಳೂರು ವಿಶ್ವವಿದ್ಯಾಲಯದಿಂದ ಅಂಕಪಟ್ಟಿ ಪಡೆದುಕೊಂಡು ಬರುವುದಾಗಿ ತಿಳಿಸಿ ಹೋಗಿದ್ದು, ನಂತರ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಫಿರ್ಯಾದಿ ದೇವಣ್ಣನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

ಹುಡುಗಿ ಕಾಣೆ, ವ್ಯಕ್ತಿಯ ಜೊತೆ ಹೋಗಿರುವ ಶಂಕೆ:

ಹಾಸನದ ಸಕಲೇಶಪುರದ ನಿವಾಸಿಕೆ.ಇ. ನಾಗೇಶ್‌ ಎಂಬವರ ಮಗಳು ರಶ್ಮಿಯು ಸೋಮವಾರಪೇಟೆಗೆ ಕಂಪ್ಯೂಟರ್‌‌ ತರಬೇತಿಗೆಂದು ತನ್ನ ಭಾವ ಹಾನಗಲ್ಲು ಗ್ರಾಮದ ಹೆಚ್‌. ಎಸ್‌ ಸುದರವರ ಮನೆಯಿಂದ ಹೋಗುತ್ತಿದ್ದು, ದಿನಾಂಕ 30.04.2015 ರಂದು ಬೆಳಿಗ್ಗೆ ಮನೆಯಿಂದ ಕಂಪ್ಯೂಟರ್‌‌ ತರಬೇತಿಗೆ ಹೋದವಳು ವಾಪಾಸ್ಸು ಮನೆಗೆ ಬಾರದೆ ಇದ್ದು, ಅಕ್ಕಪಕ್ಕದವರಲ್ಲಿ, ನೆಂಟರಿಷ್ಟರಲ್ಲಿ ವಿಚಾರಿಸಿದಲ್ಲೂ ರಶ್ಮಿಯು ಪತ್ತೆಯಾಗದೇ ಇದ್ದು ಅವಳು ಹಾನಸ ಜಿಲ್ಲೆ ಯಶಳೂರು ಹೋಬಳಿ, ಕರಗೂರು ಗ್ರಾಮದ ವಿನೋದ್‌‌ ತಂದೆ ವಿರೇಶ ಎಂಬ ವ್ಯಕ್ತಿಯ ಜೊತೆ ಹೋಗಿರಬಹುದೆಂದು ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.Saturday, May 2, 2015

ಆಕಸ್ಮಿಕ ಕೀಟನಾಶಕ ಸೇವಿಸಿದ ವೃದ್ದೆಯ ಸಾವು:
     ವೃದ್ದೆಯೊಬ್ಬರು ಔಷಧಿ ಬದಲು ಕೀಟನಾಶಕ ಸೇವಿಸಿ ಸಾವಿಗೀಡಾದ ಘಟನೆ ಸೋಮವಾರಪೇಟೆಯ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದೆ. ಕಿಬ್ಬೆಟ್ಟ ಗ್ರಾಮದ ನಿವಾಸಿ ಕೆ.ಎಂ. ನೇಮರಾಜು ಎಂಬುವರ ತಾಯಿ ನಾಗಮ್ಮ (70) ರವರು ಸುಮಾರು ವರ್ಷಗಳಿಂದ ಗ್ಯಾಸ್ಟ್ರಿಕ್‌ ಖಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 08.04.2015 ರಂದು ಆಕಸ್ಮಿಕವಾಗಿ ಔಷಧಿಯೆಂದು ಭಾವಿಸಿ ಮನೆಯಲ್ಲಿದ್ದ ಕೀಟನಾಶಕವನ್ನು ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 01.05.2015 ಮೃತಪಟ್ಟಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಸ್ತಿ ವಿಚಾರದದಲ್ಲಿ ಜಗಳ ವ್ಯಕ್ತಿ ಮೇಲೆ ಹಲ್ಲೆ:
     ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಕಾಸ್ಪಾಡಿ ಗಿರಿಯಪ್ಪ ಎಂಬುವರು ದಿನಾಂಕ 1-05-2015 ರಂದು ಸಮಯ 10-30 ಎ.ಎಂಗೆ ತಮ್ಮ ಮನೆಯ ಅಂಗಳದಲ್ಲಿರುವಾಗ್ಗೆ ಅವರ ಅಣ್ಣನಾದ ರವೀದ್ರ, ರವೀದ್ರರವರ ಪತ್ನಿ ಗೀತಾ ಮತ್ತು ಅವರ ಮಗ ಸಚಿನ್‌ರವರು ಬಂದು ನೀನು ಮದುವೆಯಾಗಿರುವುದಿಲ್ಲ ನೀನು ಕುಡಿದು ಬಂದು ಆಗಾಗ ನಮ್ಮೊಂದಿಗೆ ಜಗಳ ಮಾಡುತ್ತಿದ್ದೀಯಾ, ನಿನ್ನ ಆಸ್ತಿಯನ್ನು ನನಗೆ ಬರೆದು ಕೊಡು ಎಂದು ಹೇಳೀದಾಗ ಮಾತಿಗೆ ಮಾತು ಬೆಳೆದು, ತಂದೆಯ ಆಸ್ತಿ ತನಗೆ ಹಕ್ಕು ಇದೆ ಎಂದು ಹೇಳಿದಾಗ ರವೀಂದ್ರನು ಅಲ್ಲೇ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ಗಿರಿಯಪ್ಪನವರು ಬಲದ ಕೈ ರಟ್ಟೆಯ ಬಾಗಕ್ಕೆ, ಹೊಡೆದು ನೋವು ಪಡಿಸಿದ್ದು ಸಚಿನ್‌ರವರು ಬಲದ ಕಾಲಿನ ತೊಡೆಗೆ ದೊಣ್ಣೆಯಿಂದ ಹೊಡೆದು ನೋವು ಪಡಿಸಿದ್ದು, ಗೀತಾರವರು ಅವಾಚ್ಯ ಶ್ದಗಳಿಮದ ಬೈದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದಾರಿತಡೆದು ಹಲ್ಲೆ, ಕೊಲೆ 
     ಮಡಿಕೇರಿ ತಾಲೋಕು ಮುಕ್ಕೋಡ್ಲು ಗ್ರಾಮದ ನವಾಸಿ ಕನ್ನಿಕಂಡ ಪೂಣಚ್ಚ ಎಂಬವರ ಮನೆಯ ಪಕ್ಕದಲ್ಲಿ ಅವರ ಚಿಕ್ಕಮ್ಮನ ಮಗ ಪೂವಯ್ಯ ಹಾಗೂ ಅವರ ಹೆಂಡತಿ ಕುಸುಮರವರು ವಾಸಮಾಡಿಕೊಂಡಿದ್ದು ದಿನಾಂಕ 30-04-2015 ರಂದು ಸಮಯ 5-40 ಪಿಎಂಗೆ ಕನ್ನಕಂಡ ಪೂಣಚ್ಚನವರು ಮಕ್ಕಳೊಂದಿಗೆ ಕೋಟೆ ಬೆಟ್ಟ ದೇವಸ್ಥಾನಕ್ಕೆ ಹೋಗುತ್ತಿರುವಾಗ ಕುಸುಮ ಹಾಗೂ ಪೂವಯ್ಯರವರು ದಾರಿ ತಡೆದು ನೀವುಗಳು ಈ ರಸ್ತೆಗಾಗಿ ತಿರುಗಾಡಬಾರದೆಂದು ಹೇಳಿ ದೊಣ್ಣೆಯಿಂದ ಪೂಣಚ್ಚನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ, 

ಜೀಪು ಅಪಘಾತ ಮಕ್ಕಳು ಸೇರಿದಂತೆ 12 ಜನರಿಗೆ ಗಾಯ:
     ಮಡಿಕೇರಿ ನಗರದ ಮಂಗಳಾದೇವಿನಗರ ನಿವಾಸಿ ಧರ್ಮರಾಜ್‌ ಎಂಬುವರು ದಿನಾಂಕ 01-05-2015 ರಂದು ಅವರ ಪತ್ನಿ ಪೂರ್ಣಿಮಾ ಹಾಗೂ ಮಕ್ಕಳಾದ ಸೂರ್ಯ ಪ್ರಕಾಶ್ ಹಾಗೂ ರಕ್ಷಿತ್ ಹಾಗೂ ಪಿರ್ಯಾಧಿಯ ಸಂಬಂದಿಕರಾದ ರಮೇಶ, ರಮೇಶನ ಪತ್ನಿ ಭವ್ಯ ಹಾಗೂ ಅವರ ಮಕ್ಕಳಾದ ರಂಜನ್, ರೋಹನ್ ಮತ್ತು ಪಿರ್ಯಾಧಿಯ ಅತ್ತೆಯವರಾದ ಸರೋಜಾ ಹಾಗೂ ಪಿರ್ಯಾಧಿಯ ಪತ್ನಿಯ ತಂಗಿ ರಾಜೇಶ್ವರಿ ಹಾಗೂ ರಾಜೇಶ್ವರಿಯ ಮಗ ವಿಕಾಸ್ ರವರೊಂದಿಗೆ ಮಾಂದಲ್ ಪಟ್ಟಿ ನೋಡಲು ಮನೆಯಿಂದ ಹೊರಟು ಚಂದನ್ ಪೊನ್ನಣ್ಣ ನವರು ಚಾಲಿಸುತ್ತಿದ್ದ ಕೆಎ-12-ಎನ್-9252 ರ ಜೀಪಿನಲ್ಲಿ ಅಬ್ಬಿಪಾಲ್ಸ್ ಜಂಕ್ಷನ್ ನಿಂದ ಹೊರಟು ಮಾಂದಲ್ ಪಟ್ಟಿ ಕಡೆಗೆ ಹೋಗುತ್ತಿರುವಾಗ್ಗೆ ದೇವಸ್ತೂರು ಎಂಬಲ್ಲಿಗೆ ತಲುಪುವಾಗ್ಗೆ ಆರೋಪಿಯು ಜೀಪನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ, ಜೀಪು ರಸ್ತೆ ಬದಿಯ ಹಳ್ಳಕ್ಕೆ ಮಗುಚಿ ಬಿದ್ದ ಪರಿಣಾಮ, ಧರ್ಮರಾಜ್‌ ಹಾಗೂ ಜೀಪಿನಲ್ಲಿದ್ದ ಎಲ್ಲಾರೂ ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ, ಮಹಿಳೆ ಕೊಲೆ:
     ಸೋಮವಾರಪೇಟೆ ಠಾಣಾ ಸರಹದ್ದಿನ ಎಂ ಡಿ ಬ್ಲಾಕ್ ವಾಸಿ ಅಬ್ಬಾಸ್ ರವರ ಮಗನಾದ ಹಾರಿಸ್ ರವರಿಗೆ ಸಕಲೇಶಪುರ ತಾಲ್ಲೂಕು ಅಚ್ಚಂಗಿ ಗ್ರಾಮದ ಆಯಿಷಾರವರ ಮಗಳಾದ ಅಪ್ಸಾಳನ್ನು 2013 ನೇ ಸಾಲಿನಲ್ಲಿ ಮದುವೆ ಮಾಡಿಕೊಟ್ಟಿದ್ದು , ಅಪ್ಸಾಳ ಗಂಡ ಹಾರೀಸ್ ಮತ್ತು ಅವರ ತಂದೆ ಅಬ್ಬಾಸ್, ತಾಯಿ ಜುಬೇದಾ ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡಿ ಆಕೆಯನ್ನು ದಿ:01-05-2015 ರಂದು ಆಕೆಯ ಗಂಡ ಮತ್ತು ಅವರ ಮನೆಯವರು ನೇಣು ಹಾಕಿ ಕೊಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.