Tuesday, June 30, 2015

ಹುಡುಗಿ ಕಾಣೆ: 

     ಶ್ರೀಮಂಗಲ ಠಾಣಾ ಸರಹದ್ದಿನ ಈಸ್ಟ್‌ನೆಮ್ಮಲೆ ಗ್ರಾಮದ ನಿವಾಸಿ ಬಾದುಮಡ ಎನ್‌.ದೇವಯ್ಯ ಎಂಬವರ ಮಗಳಾದ ಕಾವ್ಯ ಎಂಬಾಕೆ ದಿನಾಂಕ 25-6-2015 ರಂದು ಪಿ.ಯು.ಸಿ. ಪೂರಕ ಪರೀಕ್ಷೆ ಬರೆಯುವ ಬಗ್ಗೆ ಶಾಲೆಗೆ ಹೋಗಿ ಬರುವುದಾಗಿ ತಿಳಿಸಿ ಹೋದಾಕೆ ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆಂದು ಆಕೆಯ ತಂದೆ ಎನ್‌. ದೇವಯ್ಯನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

ನಿವೇಶನ ಮಾರಾಟದಲ್ಲಿ ಹಣ ಪಡೆದು ವ್ಯಕ್ತಿಗೆ ವಂಚನೆ: 

    ಸೋಮವಾರಪೇಟೆ ನಗರದ ರೇಂಜರ್‌ ಬ್ಲಾಕ್‌ ನಿವಾಸಿ ಪಿ. ನಾಗೇಶ್‌, ಎಲ್‌ಐಸಿ ಡೆವಲಪ್‌ಮೆಂಟ್‌ ಅಧಿಕಾರಿ ಹಾಗು ಮೈಸೂರು ನಿವಾಸಿಗಳಾದ ಶ್ರೀಮತಿ ಜಮುನ ಶ್ರೀಮತಿ ಕೀರ್ತಿ ಕಿರಣ, ಕೆ.ವೆಂಕಟೇಶ್‌ ಶೆಟ್ಟಿ ರವರುಗಳು ಕುಟುಂಬ ಸ್ನೇಹಿತರಾಗಿದ್ದು, ಶ್ರೀಮತಿ ಜಮುನರವರು ಮೈಸೂರಿನ ರೂಪ ನಗರದಲ್ಲಿ ಇರುವ ಅವರ ಬಾಪ್ತು ಸ್ವತ್ತು ಸೈಟ್‌ ಸಂಖ್ಯೆ : 1278 ಅನ್ನು ಪಿ. ನಾಗೇಶ್‌ರವರಿಗೆ ಮಾರಾಟ ಮಾಡಲು ಶ್ರೀಮತಿ ಕೀರ್ತಿ ಕಿರಣ ಮತ್ತು ಕೆ.ವೆಂಕಟೇಶ್‌ಶೆಟ್ಟಿ ರವರುಗಳು ಸೇರಿ ಒಟ್ಟು 40,00,000/- ರೂ. ಗಳಿಗೆ ಮಾರಾಟ ಮಾಡುವ ಬಗ್ಗೆ ದಿನಾಂಕ 05-05-2012 ರಂದು ಒಪ್ಪಂದ ಕರಾರು ಮಾಡಿಕೊಂಡು ಮುಂಗಡವಾಗಿ 11,00,000/- ಗಳನ್ನು ಪಡೆದುಕೊಂಡಿದ್ದು, ನಂತರ ಪಿ.ನಾಗೇಶ್‌ರವರು ಹಲವಾರು ಬಾರಿ ಕೇಳಿದರೂ ಸದ್ರಿ ಸೈಟನ್ನು ಶುದ್ದ ಕ್ರಯ ಕರಾರು ಮಾಡಿಕೊಡದೆ ಮೋಸ ಮಾಡಿರುವ ಬಗ್ಗೆ ಪಿ. ನಾಗೇಶ್‌ರವರು ನ್ಯಾಯಾಲಯದಲ್ಲಿ ದಾಖಲು ಮಾಡಿದ ಖಾಸಗಿ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅನಾರೋಗ್ಯದ ಹಿನ್ನೆಲೆ, ಮಹಿಳೆ ಆತ್ಮಹತ್ಯೆ: 

     ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡುಮಂಗಳೂರು ನಿವಾಸಿ ಶ್ರೀಮತಿ ಆಶಾ ಎಂಬವರ ತಾಯಿ ಮಂಜುಳ ಪ್ರಾಯ 45 ವರ್ಷ ರವರು ಅನಾರೋಗ್ಯದಿಂದ ಬಳಲುತ್ತಿದ್ದು ದಿನಾಂಕ 28-6-2015 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮತಿ ಆಶಾರವರ ದೂರಿನನ್ವಯ ಕುಶಾಲನಗರ ಠಾಣೆಯಲ್ಲಿ ಪ್ರಕರಣದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. 

ಅಪ್ರಾಪ್ತಹುಡುಗಿ ಕಾಣೆ, ಅಪಹರಣ ಶಂಕೆ:

     ವಿರಾಜಪೇಟೆ ತಾಲೋಕು ಬಾಳೆಲೆಗ್ರಾಮದ ನಿವಾಸಿ ಹೆಚ್‌.ಸಿ. ರಮೇಶ್‌ ಎಂಬವರ 17 ವರ್ಷ ಪ್ರಾಯ ಕು.ಡಯಾನ ಇವಳು ದ್ವೀತಿಯ ಪಿ.ಯು.ಸಿ ತೆರ್ಗಡೆಯಾಗಿ ಮನೆಯಲ್ಲಿದ್ದು, ದಿನಾಂಕ 26.6.2015 ರಂದು ಆಕೆಯನ್ನು ಅವರ ಪಕ್ಕದ ಮನೆಯ ವಾಸಿ ರಮೇಶರವರ ಮಗ ಗೌತಮ್‌ ಎಂಬಾತ ಅಪಹರಿಸಿ ಕೊಂಡು ಹೋಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Monday, June 29, 2015

ಜೀವನದಲ್ಲಿ ಜಿಗುಪ್ಸೆ, ವೃದ್ದೆ ಆತ್ಮಹತ್ಯೆ:
    ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ನಾಂಗಾಲ ಗ್ರಾಮದ ನಿವಾಸಿ ಶ್ರೀಮತಿ ಗಂಗವ್ವ ಎಂಬವರು ತನ್ನ ಮಗ ಚಿಟ್ಯಪ್ಪ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಸುಮಾರು ವರ್ಷಗಳಾದರೂ ವಾಸಿಯಾಗಿದೇ ಇರುವ ಕಾರಣದಿಂದ ಜಿಗುಪ್ಸೆಗೊಂಡು ದಿನಾಂಕ 28-6-2015 ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣ, ವ್ಯಕ್ತಿ ಮೇಲೆ ಹಲ್ಲೆ: 

    ಮಡಿಕೇರಿ ತಾಲೋಕು, ಮಕ್ಕಂದೂರು ಗ್ರಾಮದ ಎಂಎ. ಲಯ ಎಂಬವರು ದಿನಾಂಕ 28-06-2015 ರಂದು ಮಡಿಕೇರಿ ಮೇಲಿನ ಗೌಡ ಸಮಾಜದಲ್ಲಿ ಕನ್ನಿಕಂಡ ಶ್ಯಾಮ್‌ ಸುಬ್ಬಯ್ಯ ಎಂಬವರ ಮಧುವೆ ನಿಶ್ಚಿತಾರ್ಥಕ್ಕೆ ಹೋಗಿ ಸಮಯ ಮದ್ಯಾಹ್ನ 2.00 ಗಂಟೆಗೆ ಸಮಾಜದ ಹೊರಗಡೆ ಅಂಗಳದಲ್ಲಿ ನಿಂತುಕೊಂಡಿರುವಾಗ್ಗೆ ಕನ್ನಿಕಂಡ ಗಣಪತಿ ಮತ್ತು ಹೊಟ್ಟೆಯಂಡ ದೇವಯ್ಯ ರವರು ಮುಕ್ಕೋಡ್ಲುವಿನಲ್ಲಿ ದೇವಸ್ಥಾನ ಕಟ್ಟುವ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮುನುಷ್ಯ ಕಾಣೆ, ಪ್ರಕರಣ ದಾಖಲು: 

     ಶನಿವಾರಸಂತೆ ಠಾಣೆ ಸರಹದ್ದಿನ ಶನಿವಾರಸಂತೆಯ ತ್ಯಾಗರಾಜಕಾಲೋನಿಯಲ್ಲಿ ವಾಸವಾಗಿರುವ ಶ್ರೀಮತಿ ಧನಲಕ್ಷ್ಮಿ ಎಂಬವರ ತಂದೆ ಹೆಚ್‌.ಎನ್‌. ಕೃಷ್ಣ ಶೆಟ್ಟಿ ಎಂಬವರು ದಿನಾಂಕ 24-6-2015 ರಂದು ಕೆ.ಆರ್‌.ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ:

     ಕೊಡಗು ಜಿಲ್ಲೆಯಸುಂಟಿಕೊಪ್ಪ ನಿವಾಸಿ ಅಖಿಲೇಶ್‌ ಬಸಪ್ಪ ಎಂಬವರು ದಿನಾಂಕ 27-06-2015 ರಂದು ನನ್ನ ಸ್ನೇಹಿತರೊಂದಿಗೆ ಮಡಿಕೇರಿಯ ಗಾಲ್ಪ್ ಗೆ ಹೋಗಿದ್ದು ರಾತ್ರಿ ಸಮಯ ಸುಮಾರು 11.30 ಪಿ.ಎಂ ಗೆ ಸದರಿಯವರು ಕ್ಲಬ್ ನಲ್ಲಿ ಕೂತು ಮಾತಾಡಿಕೊಂಡಿರುವಾಗ್ಗೆ ಅಲ್ಲಿಗೆ ಬಂದ ಮಹಾವೀರ ಎಂಬವರ ಸ್ನೇಹಿತರಾದ ಬೋಪಣ್ಣ, ಅಯ್ಯಪ್ಪ ಹಾಗೂ ಇತರರು ಅವರನ್ನು ಪರಿಚಯಿಸಿಕೊಂಡು ನಂತರ ಅವರೊಂದಿಗೆ ಕೊಡವ ಬಾಷೆ ಮಾತನಾಡದೆ ಕನ್ನಡದಲ್ಲಿ ಮಾತನಾಡಿದ ಬಗ್ಗೆ ಜಗಳ ತೆಗೆದು ಅಯ್ಯಪ್ಪ, ಬೋಪಣ್ಣ ಹಾಗೂ ಇತರರು ಕೈಯಿಂದ ಅಖಿಲೇಶ್‌ ರವರ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಸದರಿ ಅಖಿಲೇಶ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, June 28, 2015

ವ್ಯಕ್ತಿ ಮೇಲೆ ಹಲ್ಲೆ, ಪ್ರಕರಣ ದಾಖಲು: 

      ಮಡಿಕೇರಿ ನಗರದ ಮಂಗಳ ದೇವಿ ನಗರದ ನಿವಾಸಿ ಪಿರ್ಯಾದಿ ಶ್ರೀ ಗಣೇಶ್ ರವರ ಅಣ್ಣ ಕನಕರಾಜು ರವರು ಹಿಲ್ ರಸ್ತೆಯಲ್ಲಿ ರೇಡಿಯೇಟರ್ ರಿಪೇರಿ ಅಂಗಡಿ ಮಳಿಗೆಯನ್ನು ನಡೆಸುತ್ತಿದ್ದು, ಪ್ರಸ್ತುತ ಅಂಗಡಿಯನ್ನು ಮಳಿಗೆಯನ್ನು ಮಾರಾಟ ಮಾಡಿರುತ್ತಾರೆ. ದಿನಾಂಕ 26-6-2015 ರಂದು ಸದರಿ ಅಂಗಡಿ ಮಳಿಗೆಯ ಒಂದು ಭಾಗ ಜರಿದು ಬಿದಿದ್ದು, ಈ ವಿಷಯವಾಗಿ ಆರೋಪಿ ಸಮೀರ್ ಮತ್ತು ಶಕೀಲ್ ರವರು ಕನಕರಾಜುರವರೊಂದಿಗೆ ಜಗಳ ಮಾಡಿ, ಅಂಗಡಿಯೊಳಗೆ ಇದ್ದ ಸಾಮಾಗ್ರಿಗಳನ್ನು ಸಾಗಿಸಲು ಬಂದ ಪಿರ್ಯಾದಿಯವರನ್ನು ಸಮಯ 14.30 ಗಂಟೆಗೆ ತಬ್ಬಿ ಹಿಡಿದು ಚಾಕುವಿನಿಂದ ತಲೆಗೆ ಹೊಡೆದು ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್‌ಸೈಕಲ್‌ಗೆ ಸ್ಕೂಟಿ ಡಿಕ್ಕಿ, ಸವಾರರಿಗೆ ಗಾಯ:

     ದಿನಾಂಕ 27/05/2015 ರಂದು ಸಮಯ 3.00 ಪಿ.ಎಂ.ಗೆ ಅತ್ತೂರು ಗ್ರಾಮದ ನಿವಾಸಿ ಎಂ.ಅಬು ಎಂಬವರು ತಮ್ಮ ಬಾಪ್ತು ಮೋಟಾರು ಸೈಕಲ್ ನಂ ಕೆಎ-12-ಹೆಚ್-466 ರಲ್ಲಿ ಗದ್ದೆಮನೆಯಿಂದ ಗೋಣಿಕೊಪ್ಪಕ್ಕೆ ಬರುತ್ತಿರುವಾಗ್ಗೆ ಪಾಲಿಬೆಟ್ಟ ರಸ್ತೆಯಲ್ಲಿರುವ ಸ್ವಸ್ತಿ ಇಂಜಿನಿಯರಿಂಗ್ ವರ್ಕ್ ಶಾಪ್ ನ ಹತ್ತಿರ ತಲುಪಿದಾಗ ಹಿಂಬದಿಯಿಂದ ಕೆಎ-12-1936ರ ಸ್ಕೂಟಿ ಸವಾರನು ಅತೀವೇಗ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಎಂ.ಅಬು ರವರ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರಿಗೂ ಹಾಗೂ ಸ್ಕೂಟಿ ಸವಾರನಿಗೂ ಗಾಯಗಳಾಗಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾಣೆಯಾದ ವ್ಯಕ್ತಿ ಶವವಾಗಿ ಹೊಳೆಯಲ್ಲಿ ಪತ್ತೆ, ಕೊಲೆ ಶಂಕೆ: 

      ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಪುಲಿಯೇರಿ ಗ್ರಾಮದ ನಿವಾಸಿ ಶ್ರೀಮತಿ ಉದ್ದಪಂಡ ಎನ್. ಪೊನ್ನಮ್ಮ ಎಂಬವರ ಮಗ ಕಿಸ್ಮ ಕಾರ್ಯಪ್ಪನು ಪುಲಿಯೇರಿ ಗ್ರಾಮಕ್ಕೆ 23-06-2015 ರಂದು ಬೆಳಿಗ್ಗೆ 10:30 ಗಂಟೆಗೆ ಹೋಗಿದ್ದು, ನಂತರ ಪೊನ್ನಮ್ಮನವರ ಮಗಳು ರೇಷ್ಮಾಳ ಮನೆಗೆ ಹೋಗಿ ಸಿಲಿಂಡರ್‌ ತೆಗೆದುಕೊಂಡು ಬರುತ್ತಿದ್ದೇನೆಂದು ಸಂಜೆ ಸುಮಾರು 07:00 ಗಂಟೆಯ ಸಮಯದಲ್ಲಿ ತಾಯಿ ಪೊನ್ನಮ್ಮನವರಿಗೆ ಮೊಬೈಲ್‌ ಮೂಲಕ ತಿಳಿಸಿದ್ದು ನಂತರ ಮನೆಗೆ ಬಾರದೇ ಕಾಣೆಯಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಮನುಷ್ಯ ಕಾಣೆಪ್ರಕರಣದಾಖಲಾಗಿದ್ದು, ದಿನಾಂಕ 27-6-2015 ರಂದು 03:30 ಪಿ.ಎಂ ಗೆ ಬಿಟ್ಟಂಗಾಲ ಗ್ರಾಮದ ಸೇತುವೆ ಕೆಳಭಾಗ ಹೊಳೆಯಲ್ಲಿ ಕಾಣೆಯಾದ ಕಾರ್ಯಪ್ಪನು ಓಡಿಸುತ್ತಿದ್ದ ಕಾರು ಹಾಗೂ ಕಾರ್ಯಪ್ಪರವರ ಮೃತದೇಹ ಬಿದ್ದಿರುವುದು ಕಂಡು ಬಂದಿದ್ದು, ಈ ಹಿಂದೆ ರಂಜನ್‌ ಎಂಬ ವ್ಯಕ್ತಿಗೆ ಕಾರ್ಯಪ್ಪನವರು ಕಾರನ್ನು ಡಿಕ್ಕಿಪಡಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆ ಬಗ್ಗೆ ಹಣ ನೀಡುವ ವಿಚಾರದಲ್ಲಿ ಜಗಳವಾಗಿದ್ದು ಈ ಕಾರಣದಿಂದ ಕಾರ್ಯಪ್ಪರವರನ್ನು ಕೊಲೆ ಮಾಡಿ ಕಾರನ್ನು ಬಿಟ್ಟಂಗಾಲದ ಸೇತುವೆಯ ತೋಡಿನಲ್ಲಿ ಬೀಳಿಸಿರಬಹುದು ಎಂಬ ಅನುಮಾನವಿದೆ ಎಂಬುದಾಗಿ ಶ್ರೀಮತಿ ಉದ್ದಪಂಡ ಎನ್‌. ಪೊನ್ನಮ್ಮನವರು ನೀಡಿದದೂರಿನಮೇರೆಗೆ ವಿರಾಜಪೇಟೆಗ್ರಾಮಾಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, June 26, 2015

ವೈಯುಕ್ತಿಕ ಕಾರಣ, ವ್ಯಕ್ತಿ ಆತ್ಮಹತ್ಯೆ:

    ಮಂಡ್ಯ ಜಿಲ್ಲೆಯ ನಿವಾಸಿ ಕುಮಾರ ಎಂಬವರು ಸೋಮವಾರಪೇಟೆ ತಾಲೋಕು ಎಡವಾರೆ ಗ್ರಾಮದ ಸೋಮಣ್ಣ ಎಂಬುವರ ಲೈನು ಮನೆಯಲ್ಲಿ ವಾಸವಾಗಿದ್ದು, ಯಾವುದೋ ವೈಯುಕ್ತಿಕ ಕಾರಣದಿಂದ ಬೇಸತ್ತು ದಿನಾಂಕ 25-6-2015 ರಂದು ತಮ್ಮ ಮನೆಯ ತೋಟವೊಂದರಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮನುಷ್ಯ ಕಾಣೆ, ಪ್ರಕರಣ ದಾಖಲು:

     ವಿರಾಜಪೇಟೆ ತಾಲೋಕು, ಹಳ್ಳಿಗಟ್ಟು ಗ್ರಾಮದ ನಿವಾಸಿ ಕಾರ್ಯಪ್ಪ ಎಂಬವರು ದಿನಾಂಕ 23-6-2015 ರಂದು ಪುಲಿಯೇರಿ ಗ್ರಾಮಕ್ಕೆ ಹೋಗಿ ಬರುವುದಾಗಿ ತಮ್ಮ ಪತ್ನಿ ಶ್ರೀಮತಿ ನೀತುರವರಿಗೆ ತಿಳಿಸಿ ತಮ್ಮ ಬಾಪ್ತು ಕಾರಿಯನಲ್ಲಿ ಹೋಗಿದ್ದು, ತದನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, June 25, 2015

ಸ್ಕೂಟರ್‌ಗಳ ಮುಖಾಮುಖಿ, ಒಬ್ಬನ ದುರ್ಮರಣ:

     ದಿನಾಂಕ 23/06/2015 ರಂದು ಸಮಯ ಸುಮಾರು 17.30 ಗಂಟೆಗೆ ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದ ಮಂಗಳೂರು ಮೈಸೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕುಶಾಲನಗರ ಕಡೆಯಿಂದ ಬಂದ ಕೆಎ 03 ಎಲ್‌ 4723 ರ ಸ್ಕೂಟರ್‌ ಮತ್ತು ಮಡಿಕೇರಿ ಕಡೆಯಿಂದ ಬಂದ ಕೆಎ12 ಎಲ್‌ 2280 ರ ಸ್ಕೂಟರ್‌ ಎರಡೂ ಮುಖಾಮುಖಿ ಡಿಕ್ಕಿಯಾಗಿ ರಸ್ತೆಯಲ್ಲಿ ಮಗುಚಿಕೊಂಡಿದ್ದು ಎರಡೂ ಸ್ಕೂಟರ್‌ ಸವಾರರಿಗೆ ಸಹಾ ರಕ್ತಗಾಯವಾಗಿದ್ದು ಅವರನ್ನು ಸ್ಥಳೀಯರು ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ ನಂತರ ಗಾಯಾಳುಗಳ ಕಡೆಯವರೇ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿಗೆ ಕರೆದುಕೊಂಡು ಹೋಗಿದ್ದು ನಂತರ ರಾತ್ರಿ 02.30 ಗಂಟೆಗೆ ಕೆಎ12 ಎಲ್‌ 2280ರ ಸ್ಕೂಟರ್‌ ಸವಾರ ಶ್ರೀಧರ್‌ ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈಸಂಬಂಧ ಸುಂಟಿಕೊಪ್ಪ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಕಾರು ಅಪಘಾತ ಇಬ್ಬರಿಗೆ ಗಾಯ:

     ಹಾವೇರಿ ಜಿಲ್ಲೆಯ ನಿವಾಸಿ ಎಸ್‌.ಕೆ. ಬೋಜ ಎಂಬವರು ದಿನಾಂಕ 19-6-2015 ರಂದು ತಮ್ಮ ಕಾರಿನಲ್ಲಿ ಸಂಜೀವ ಹಾಗು ಮೇಘ ಎಂಬವರೊಂದಿಗೆ ಹಾವೇರಿಯಿಂದ ಮಡಿಕೇರಿಯ ಕಡೆಗೆ ಬರುತ್ತಿದ್ದಾಗ ಸೋಮವಾರಪೇಟೆ ಠಾಣಾ ಸರಹದ್ದಿನ ನಗರೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ತಲುಪುವಾಗ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೇಘ ಮತ್ತು ಸಂಜೀವರವರಿಗೆ ಗಾಯಗಳಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ಅನಾಥ ಶವ ಪತ್ತೆ, ಪ್ರಕರಣ ದಾಖಲು:
     ಸುಂಟಿಕೊಪ್ಪ ಠಾಣಾ ಸರಹದ್ದಿನ ಸುಂಟಿಕೊಪ್ಪ ಮಾರುಕಟ್ಟೆಯಲ್ಲಿ ಒಂದು ಅನಾಥ ಶವ ಪತ್ತೆಯಾಗಿದ್ದು, ಇದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದು, ಸುಂಟಿಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯವರಾದ ಸಚಿನ್‌ ಎಂಬವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, June 24, 2015

ಹಳೆ ದ್ವೇಷ, ವ್ಯಕ್ತಿ ಮೇಲೆ ಹಲ್ಲೆ: 

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಕರಿಕೆ ಗ್ರಾಮದ ಚೆತ್ತುಕಾಯ ನಿವಾಸಿ ಚೆನ್ನಪ್ಪ ನಾಯ್ಕ ಎಂಬವರು ದಿನಾಂಕ 14-6-2015 ರಂದು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳ ವಿಜಯೋತ್ಸಕ್ಕೆ ಭಾಗಿಯಾಗಿ ಎಳ್ಳುಕೊಚ್ಚಿಯಿಂದ ಮರಳುವ ಸಂದರ್ಭದಲ್ಲಿ ಕರಿಕೆ ಗ್ರಾಮದ ಚೆತ್ತುಕಾಯ ನಿವಾಸಿಗಾದ ಶಿವಪ್ರಸಾದ್‌, ರಾಮಚಂದ್ರ ಹಾಗು ಗಣೇಶ್‌ರವರುಗಳು ಸೇರಿ ಹಳೇ ದ್ವೇಷದಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅಕ್ರಮ ಗೋವುಗಳ ಸಾಗಾಟ, ಆರೋಪಿ ಬಂಧನ:

ಕುಟ್ಟ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಶ್ರೀ ಪಿ.ಎಂ. ಗಣೇಶ್‌ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 21-6-2015 ರಂದು ಕುಟ್ಟ ಠಾಣಾಸರಹದ್ದಿನ ಕುಟ್ಟ ಹಳೇ ಚೆಕ್‌ಪೋಸ್ಟ್‌ ಬಳಿ ಆರೋಪಿಗಳಾದ ದಿನೇಶ್‌ದಿನೇಶ್‌, ಖಾದರ್‌, ಹಳವಿ, ಮುಸ್ತಾಫ ಮತ್ತು ಇಬ್ಬರು ಸೇರಿ 7 ಜಾನುವಾರುಗಳನ್ನು ಕೇರಳ ಕೇರಳ ರಾಜ್ಯದ ಮಾನಂದವಾಡಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಗೋವುಗಳ ಸಮೇತವಾಗಿ ಆರೋಪಿಗಳನ್ನು ವಶಕ್ಕೆತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಹುಡುಗಿ ಕಾಣೆ:
      ಸುಂಟಿಕೊಪ್ಪ ಠಾಣಾ ಸರಹದ್ದಿಗೆ ಸೇರಿದ 7ನೇ ಹೊಸಕೋಟೆ ಗ್ರಾಮದ ಪಿ.ಜಿ. ವಿಶ್ವನಾಥ ಎಂಬವರ ಮಗಳು ಶರಣ್ಯಳು ದಿನಾಂಕ 23-6-2015 ರಂದು ಕುಶಾಲನಗರದಿಂದ ಕಾಣೆಯಾಗಿದ್ದುಈ ಸಂಬಂಧ ಪಿ.ಜಿ.ವಿಶ್ವನಾಥ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, June 23, 2015

ಆಸ್ತಿ ವಿವಾದದ ಹಿನ್ನಲೆಯಲ್ಲಿ ಜಗಳ, ಇಬ್ಬರಿಗೆ ಗಾಯ: 

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಲೂರು ನಿವಾಸಿ ಪೂವಯ್ಯನವರಿಗೆ ಸೇರಿದ ಜಾಗಕ್ಕೆ ಅದೇ ಗ್ರಾಮದ ನಿವಾಸಿಯಾದ ಪರಸು @ಪ್ರಕಾಶ್‌ ಎಂಬವರು ಬೀಲಿಯನ್ನು ಹಾಕಿದ್ದು ಅದನ್ನು ತೆರವುಗೊಳಿಸಲು ಹೋದ ಪೂವಯ್ಯನವರನ್ನು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಹಲ್ಲೆ ನಡೆಸಿದ್ದು, ಜಗಳವನ್ನು ಬಿಡಿಸಲು ಬಂದ ಪೂವಯ್ಯನವರ ಪತ್ನಿ ಯಶೋಧ ಹಾಗು ಮಗ ಸೋಮಯ್ಯನವರ ಮೇಲೂ ಕತ್ತಿಯಿಂದ ಹಾಗು ದೊಣ್ಣೆಯಿಂದ ಹಲೆನಡೆಸಿ ಗಾಯಗೊಳಿಸಿದ್ದು, ಈ ಸಂಬಂಧ ಪೂವಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರುತನಿಖೆ ಕೈಗೊಂಡಿದ್ದಾರೆ.  

ಚಲಿಸುತ್ತಿದ್ದ ಕಾರಿನ ಚಕ್ರ ಸ್ಫೋಟ, ಅಪಾಯದಿಂದ ಪಾರಾದ ಚಾಲಕ:

ದಿನಾಂಕ 22/06/2015 ರಂದು ಮದ್ಯಾಹ್ನ ಹಾಸನ ಜಿಲ್ಲೆಯ ನಿವಾಸಿ ಶಿವಶಂಕರ್‌ ಎಂಬವರ ಇನ್ನೋವಾ ಕಾರನ್ನು ಮಂಜುನಾಥ ಎಂಬುವರು ಹಾಸನದಿಂದ ಕುಶಲನಗರಕ್ಕೆ ಚಾಲನೆ ಮಾಡಿಕೊಂಡು ಬಂದು ಕೂಡಿಗೆ ಕಡೆಗೆ ಹೋಗುತ್ತಿರುವಾಗ್ಗೆ ಕೂಡ್ಲೂರು ತಲುಪಿದಾಗ ಕಾರನ್ನು ವೇಗವಾಗಿ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮವಾಗಿ ಕಾರಿನ ಹಿಂಬಾಗದ ಟಯರ್ ಸ್ಫೋಟಗೊಂಡು ಕಾರು ಎಡಕ್ಕೆ ಮಗುಚಿ ಕಾರಿನ ನಾಲ್ಕು ಬಾಗಿಲುಗಳು , ಕಾರಿನ ಮುಂಬಾಗ ಮತ್ತು ರೇಡಿಯೇಟರ್ ಜಖಂಗೊಂಡಿದ್ದು ಯಾವುದೇ ಅಪಾಯದಿಂದ ಪಾರಾಗಿದ್ದು, ಈ ಸಂಬಂಧ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮನೆ, ವಿದ್ಯುತ್‌ ಕಂಬ ಮತ್ತು ಮೋಟಾರ್‌ ಸೈಕಲ್‌ಗೆ ಲಾರಿ ಡಿಕ್ಕಿ, 4 ಲಕ್ಷ ನಷ್ಟ: 

    ದಿನಾಂಕ 21-06-2015 ರಂದು ಸಮಯ ಅಂದಾಜು 5-00 ಪಿ.ಎಂ.ಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಇಬ್ನಿವಳವಾಡಿ ಗ್ರಾಮದ ನಿವಾಸಿ ಕೆ.ಕೆ.ತುಲಸೀದಾಸ್ ಮತ್ತು ಸಂತೋಷ್‌ರವರು ಅವರ ಮನೆಯ ಹತ್ತಿರ ಮಾತನಾಡಿ ಕೊಂಡು ನಿಂತಿರುವಾಗ್ಗೆ ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ಸಾರ್ವಜನಿಕ ತಾರು ರಸ್ತೆಯಲ್ಲಿ ಒಂದು ಲಾರಿ ಸಂ: ಕೆಎ-45-1780ರ ಚಾಲಕ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆ.ಕೆ.ತುಲಸೀದಾಸ್ರವರ ಮನೆಗೆ ಹಾಗೂ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಪಡಿಸಿ, ಲಾರಿಯನ್ನು ಮಗುಚಿ ಬೀಳಿಸಿದ ಪರಿಣಾಮ ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ವಿದ್ಯುತ್ ಕಂಬ ಹಾಗೂ ಕೆ.ಕೆ.ತುಲಸೀದಾಸ್ರವರ ಮನೆಯು ಸಹಾ ಜಖಂ ಗೊಂಡಿದ್ದು, ಅಲ್ಲದೆ ಕೆ.ಕೆ.ತುಲಸೀದಾಸ್‌ರವರಿಗೆ ಸೇರಿದ ಮೋಟಾರ್ ಸೈಕಲ್ ಜಖಂ ಗೊಂಡಿದ್ದು, ಅಂದಾಜು 4 ಲಕ್ಷ ರೂಪಾಯಿ ನಷ್ಟ ಉಂಟಾಗಿರುವುದಾಗಿ ನೀಡಿದ ದೂರಿನ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.

Sunday, June 21, 2015

ಹುಡುಗಿಯರು ಕಾಣೆ ಪ್ರಕರಣ 

     ವಿರಾಜಪೇಟೆ ತಾಲೋಕು, ನಡಿಕೇರಿ ಗ್ರಾಮದ ನಿವಾಸಿ ಶ್ರೀಮತಿ ಮಾನಿಪಂಡ ರೀಟಾ ಎಂಬವರ ಮಗಳು ದಿವ್ಯಾ ಬೋಜಮ್ಮಳು ಪೊನ್ನಂಪೇಟೆ ಜೂನಿಯರ್‌ ಕಾಲೇಜಿನಲ್ಲಿ 10ನೇ ತರಗತಿ ಓದುತ್ತಿದ್ದು, ದಿನಾಂಕ 15.6.15 ರಂದು ಬೆಳಿಗ್ಗೆ ಶಾಲೆಗೆ ಹೋಗುವಾಗ ನಾನು 2 ದಿವಸ ಮನೆಗೆ ಬರುವುದಿಲ್ಲ ನಾನು ನನ್ನ ಗೆಳತಿ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು, ದಿನಾಂಕ17.6.15 ರ ಸಂಜೆ ಆದರೂ ಮನೆಗೆ ಬಂದಿರುವುದಿಲ್ಲ. ಹಾಗೆಯೇ ದಿವ್ಯಾ ಬೋಜಮ್ಮಳ ಶಾಲೆಯಲ್ಲಿ ಓದುತ್ತಿರುವ ಆಕೆಯ ಸ್ನೇಹಿತೆ ಮೇಘಾನಾ ಕೂಡ ತಾನು ಸ್ನೇಹಿತೆ ಮನೆಗೆ ಹೋಗುವುದಾಗಿ ತಿಳಿಸಿದ್ದು ಆಕೆಯೂ ಆಕೆಯ ಮನೆಗೆ ಹೋಗದೆ ಕಾಣೆಯಾಗಿದ್ದು, ಈ ಸಂಬಂಧ ಸದರಿಯವರ ಪೋಷಕರಾದ ಶ್ರೀಮತಿ ಮಾನಿಪಂಡ ರೀಟಾ ಮತ್ತು ಮೇರಿಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಪತ್ನಿಯ ಮೇಲೆ ಪತಿಯಿಂದ ಹಲ್ಲೆ:

     ಕುಶಾಲನಗರ ಠಾಣಾ ಸರಹದ್ದಿನ ಬ್ಯಾಡಗೊಟ್ಟ ಗ್ರಾಮದ ವಾಸಿ ಶ್ರೀಮತಿ ನಾಗರತ್ನ ಎಂಬವರು ದಿನಾಂಕ 18-06-2015 ರಂದು ತಮ್ಮ ಮನೆಯಲ್ಲಿರುವಾಗ್ಗೆ ಸಮಯ 11:00 ಗಂಟೆ ರಾತ್ರಿ ಆಕೆಯ ಗಂಡ ನಾರಯಣ ಎಂಬವರು ವಿಪರೀತ ಬ್ರಾಂದಿ ಕುಡಿದು ಬಂದು ಪತ್ನಿ ನಾಗರತ್ನರವರೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದಿ ಬೈದು, ಕತ್ತಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದು, ಈ ಸಂಬಂಧ ಶ್ರೀಮತಿ ನಾಗರತ್ನರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿವಿಚಾರದಲ್ಲಿ ಅಣ್ಣ-ತಮ್ಮನ ನಡುವೆ ಜಗಳ, 2 ಪ್ರಕರಣಗಳು ದಾಖಲು: 

     ವಿರಾಜಪೇಟೆ ತಾಲೋಕು, ಆರ್ಜಿ ಗ್ರಾಮದ ಕಲ್ಲುಬಾಣೆ ನಿವಾಸಿ ವಿಲ್ಫ್ರೆಡ್ ಪಿಂಟೋ ಹಾಗೂ ಅವರ ಅಣ್ಣ ಲೂಯಿಸ್ ಪಿಂಟೋ ಮತ್ತು ಎಲಿಯಮ್ಮ ಎಂಬವರುಗಳ ನಡುವೆ ಆಸ್ತಿಯ ವಿಚಾರದಲ್ಲಿ ವೈಮನಸ್ಸು ಇದ್ದು, ಇದರ ಬಗ್ಗೆ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದು. ದಿನಾಂಕ 20-6-2015 ರಂದು ಸಮಯ ಬೆಳಿಗ್ಗೆ 6-45 ಎ.ಎಂ.ಗೆ ಇಬ್ಬರ ನಡುವೆ ಜಗಳವಾಗಿ ಪರಸ್ಪರ ಕೈಗಳಿಂದ ಮತ್ತು ದೊಣ್ಣಯಿಂದ ಹೊಡೆದಾಡಿದ್ದು, ಇಬ್ಬರು ನೀಡಿದ ಪ್ರತ್ಯೇಕ ದೂರುಗಳ ಮೇರೆಗೆ ವಿರಾಜಪೇಟೆ ನಗರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಹಿಳೆಗೆ ಕೊಲೆ ಬೆದರಿಕೆ, ಪ್ರಕರಣ ದಾಖಲು:

    ದಿನಾಂಕ 27/05/2015 ರಂದು ಸಮಯ ರಾತ್ರಿ 8.30 ಗಂಟೆಗೆ ಹಾತೂರು ಗ್ರಾಮದ ನಿವಾಸಿ ಶ್ರೀಮತಿ ಲಲಿತ ಎಂಬುವರ ಮನೆಯ ಹತ್ತಿರ ಅದೇ ಗ್ರಾಮದ ವಿ.ಜಿ. ಮಧುಸೂದನ್‌ ಎಂಬವರು ಮಾರುತಿ ಓಮಿನಿ ವ್ಯಾನ್ ನಲ್ಲಿ ಅಕ್ರಮವಾಗಿ ಮಧ್ಯವನ್ನು ತಂದು ಮನೆಯ ಹತ್ತಿರ ಅಕ್ರಮ ಪ್ರವೇಶ ಮಾಡಿ ಲಲಿತರವರ ಕೆಲಸದ ಆಳುಗಳಿಗೆ ಗ್ರಾಮ ಪಂಚಾಯಿತಿ ಚುನಾವಣಾ ಸಂಬಂದ ಮಧ್ಯ ಮತ್ತು ಹಣವನ್ನು ಹಂಚುತ್ತಿದ್ದುದ್ದನ್ನು ಪ್ರಶ್ನಿಸಿದಕ್ಕೆ ವಿ.ಜಿ. ಮಧುಸೂದನ್‌ರವರು ನಿನ್ನನ್ನು ಹೊಡೆದು ಕೊಲ್ಲುವುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿ ನ್ಯಾಯಾಲಯದಲ್ಲಿ ದಾಖಲಿಸಿದ ಖಾಸಗಿ ದೂರಿನ ಮೇರೆಗೆ ದಿನಾಂಕ 20-6-2015 ರಂದು ಗೋಣಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Saturday, June 20, 2015


ಹಳೇ ದ್ವೇಷ, ಮಹಿಳೆ ಮೇಲೆ ಹಲ್ಲೆ: 

     ವಿರಾಜಪೇಟೆ ತಾಲೋಕು, ಆರ್ಜಿ ಗ್ರಾಮದ ನಿವಾಸಿ ಶ್ರೀಮತಿ ಲುವಿನಾಪಿಂಟೋ ಯವರು ತನ್ನ ವಾಸದ ಮನೆಯ ಹತ್ತಿರ ಹೋಗುವಾಗ್ಗೆ ಅಂಗಳದ ಜಗುಲಿಯಲ್ಲಿ ಅವರ 6ನೇ ಮಗ ವಿಲ್ಪರ್ಡ್ ಪಿಂಟೋ ಹಾಗೂ ಆತನ ಹೆಂಡತಿ ತನುಜಾ ರವರು ಹಳೇ ವೈಮನಸ್ಸಿನಿಂದ ತಡೆದು ನೀನು ಮನೆಗೆ ಬರುವುದು ಬೇಡವೆಂದು ಹೇಳಿ ಕೈಯಿಂದ ಕುತ್ತಿಗೆ ಹಿಡಿದು ತಳ್ಳಿದ್ದು, ಇದನ್ನು ವಿಚಾರಿಸಿದ ಅವರ ಮಗ ಮ್ಯಾನುವಲ್ ಪಿಂಟೋ ಮೇಲೆ ಮರದ ದೊಣ್ಣೆ ಯಿಂದ ಹೊಡೆದಿರುವುದಲ್ಲದೇ ಕತ್ತಿಯನ್ನು ತೋರಿಸಿ ಈ ಮುದುಕಿಯನ್ನು ಬಿಡುವುದು ಬೇಡವೆಂದು ಕೊಲೆಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ದಾರಿ ತಡೆದು ಹಲ್ಲೆ, ಪ್ರಕರಣ ದಾಖಲು:

ಸುಳ್ಯ ತಾಲೋಕಿನ ಅರಂತೋಡು ಗ್ರಾಮದ ನಿವಾಸಿ ಸುನಂದಕುಮಾರ್ ರವರು ವ್ಯಾನನ್ನು ನಿಲ್ಲಿಸುವ ಸಲುವಾಗಿ ಸತೀಶ್ ಎಂಬವರ ಜೋತೆ ಸುಮಾರು 8.00 ಪಿ ಎಂಗೆ ಸಂಪಾಜೆ ಪೆಟ್ರೋಲ್ ಬಂಕ್ ಮುಂದಿನ ರಸ್ತೆಯ ಬಳಿ ಹೋಗುವಾಗ ಹರಿಪ್ರಸಾದ್, ಗೂನಡ್ಕದ ಸಂಪತ್ ಮತ್ತು ಕಲ್ಲುಗುಂಡಿ ಮನೋಹರ ಸೇರಿ ಸುನಂದಕುಮಾರ್‌‌ರವರ ವಾಹನವನ್ನು ತಡೆದು ನಿಲ್ಲಿಸಿ ಜಗಳ ಮಾಡಿ ದೋಣ್ಣೆಯಿಂದ ಎಡಭಾಗದ ಕಿವಿಯ ಭಾಗಕ್ಕೆ ಬೆನ್ನಿಗೆ ಹೊಡೆದನು ಅಲ್ಲದೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Friday, June 19, 2015

ಹೆಂಗಸು ಕಾಣೆ: 

ಶನಿವಾರಸಂತೆ ಪೊಲೀಸ್ ಠಾಣಾ ಸರಹ ದ್ದಿನ ಕಾಜೂರು ಗ್ರಾಮದ ವಾಸಿ ಜಿ.ಕೆ.ಗೋವಿಂದ ಎಂಬುವರ ಪತ್ನಿ ಮಮತ, ಪ್ರಾಯ 29 ವರ್ಷ, ಇವರು ದಿನಾಂಕ 20-02-2015 ರಂದು ಸಮಯ ಬೆಳಿಗ್ಗೆ 10-00 ಗಂಟೆಗೆ ಮನೆಯಿಂದ ತಾಳಿಯನ್ನು ಬಿಚ್ಚಿ ದೇವರ ಕೋಣೆಯಲ್ಲಿ ಇಟ್ಟು ಮನೆಯಿಂದ ಕಾಣೆಯಾಗಿದ್ದು, ಈ ಸಂಬಂಧ ಶನಿವಾರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಕೆಲಸದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೂಡಿಗೆ ಗ್ರಾಮದ ನಿವಾಸಿ ಶೇಖಬ್ಬ ಎಂಬವರ ಮೇಲೆ ಟಿಂಬರ್‌ ಲೋಡಿಂಗ್‌ ಕೆಲಸದ ವಿಚಾರದಲ್ಲಿ ನಾಪೋಕ್ಲು ನಿವಾಸಿ ಇಸ್ಮಾಯಿಲ್‌ ಎಂಬವರು ಜಗಳ ಮಾಡಿ ಹಲ್ಲೆ ನಡೆಸಿರುತ್ತಾರೆಂದು ಶೇಖಬ್ಬ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.  

ವಿದ್ಯುತ್‌ ಸ್ಪರ್ಷಗೊಂಡು ವ್ಯಕ್ತಿಯ ಸಾವು:

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕೈಸರವಳ್ಳಿ ಗ್ರಾಮದ ವಾಸಿ ರವಿಕುಮಾರ್ ಎಂಬವ ಅರ ತಂದೆ ಮಲ್ಲಪ್ಪ (65) ಎಂಬವರು ದಿನಾಂಕ 18-06-2015 ರಂದು ಸಮಯ ಬೆಳಿಗ್ಗೆ ಸುಮಾರು 09-45 ಗಂಟೆಗೆ ತಮ್ಮ ಮನೆಯ ಎದುರುಗಡೆಯಾಗಿ ಧನಗಳನ್ನು ಗದ್ದೆಗೆ ಹೊಡೆದುಕೊಂಡು ಹೋಗುತ್ತಿದ್ದಾಗ ಸೇತುವೆಯ ಬಳಿ ಇದ್ದ ವಿಧ್ಯುತ್ ತಂತಿಯು ಆಕಸ್ಮಿಕವಾಗಿ ತುಂಡಾಗಿ ಅವರ ಮೇಲೆ ಬಿದ್ದು ಮೈ ಮೇಲೆ ವಿಧ್ಯುತ್ ಹರಿದು ಮೃತಪಟ್ಟಿದ್ದು, ಈ ಸಂಬಂಧ ಶನಿವಾಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, June 18, 2015

ಮದುವೆ ವಿಚಾರದಲ್ಲಿ ಜಗಳ ವ್ಯಕ್ತಿ ಮೇಲೆ ಹಲ್ಲೆ:

     ಸೋಮವಾರಪೇಟೆ ಠಾಣಾ ಸರಹದ್ದಿನ ಕಾಗಡಿಕಟ್ಟೆ ಗ್ರಾಮದ ನಿವಾಸಿ ಕೆ.ಎ. ಹಮೀದ್‌ ಎಂಬವರು ದಿನಾಂಕ 15-06-2015 ರಂದು ಸಮಯ 13.00 ಕಾಗಡಿಕಟ್ಟೆ ಮಸೀಗೆ ಹೋಗಿ ಪ್ರಾರ್ಥನೆ ಮುಗಿಸಿ ವಾಪಾಸ್ಸು ಬರುತ್ತಿದ್ದಾಗ ಕುಶಾಲನಗರದಿಂದ ಮಹಮ್ಮದ್‌ ಆಲಿ ಮತ್ತು ಅವರ ಕಡೆಯವರು ಅವರ ಸಂಬಂಧಿಕರ ಮದುವೆ ವಿಚಾರದಲ್ಲಿ ಜಗಳ ಮಾಡಿ ಕೆ.ಎ. ಹಮೀದ್‌ರವರ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಮುಂದಿನ ಕ್ರಮ ಕೈಗೊಂಡಿದ್ದಾರೆ. 

ಶಾಲಾ ಬಾಲಕನಿಗೆ ಸ್ಕೂಟಿ ಡಿಕ್ಕಿ:
     ಸೋಮವಾರಪೇಟೆ ತಾಲೋಕು, ಬಜೆಗುಂಡಿ ಗ್ರಾಮದ ನಿವಾಸಿ ಸಿ. ನಾಗರಾಜು, ಎಂಬುವರ ತಮ್ಮನ ಮಗ ಪ್ರೀತಮ್‌ ಎಂದಿನಂತೆ ಶಾಲೆಗೆ ಹೋಗಿ ಶಾಲೆ ಮುಗಿಸಿ ವಾಪಾಸ್ಸು ಸಂಜೆ 04.00 ಗಂಟೆಗೆ ಮನೆಗೆ ಹೋಗಲು ಓ.ಎಲ್‌.ವಿ.ಕಾನ್ವೆಂಟ್‌ ಶಾಲೆಯ ಗೇಟಿನಿಂದ ಸ್ವಲ್ಪ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಸ್ಕೂಟಿ ಸವಾರನೊಬ್ಬ ಸ್ಕೂಟಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪ್ರೀತಮ್‌ಗೆ ಡಿಕ್ಕಿ ಪಡಿಸಿ ಸ್ಕೂಟಿಯನ್ನು ನಿಲ್ಲಿಸದೆ ಹೋಗಿದ್ದು, ಪ್ರೀತಮ್‌ಗೆ ಗಾಯಗಳಾಗಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿ ಆತ್ಮಹತ್ಯೆ:

ಮಡಿಕೇರಿ ತಾಲೋಕು, ಕಡಗದಾಳು ಗ್ರಾಮದ ನಿವಾಸಿ ಲೋಕೇಶ ಎಂಬ ವ್ಯಕ್ತಿ ತನ್ನ ತಾಯಿ ತೀರಿಕೊಂಡ ವಿಚಾರದಲ್ಲಿ ಬೇಸರಿಸಿಕೊಂಡು ದಿನಾಂಕ 17-6-2015 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನಕ್ರಮ ಜರುಗಿಸಿರುತ್ತಾರೆ.

Wednesday, June 17, 2015

ಸ್ಕೂಟರ್‌ಗೆ ಕಾರು ಡಿಕ್ಕಿ, ಇಬ್ಬರಿಗೆ ಗಾಯ
             ಸ್ಕೂಟರ್‌ಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಸ್ಕೂಟರ್‌ ಸವಾರರಿಬ್ಬರಿಗೆ ಗಾಯಗಳಾದ ಘಟನೆ ಗೋಣಿಕೊಪ್ಪ ಬಳಿಯ ಹಾತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 16/6/2015 ರಂದು ಹಾತೂರು ಗ್ರಾಮದ ವಿರಾಜಪೇಟೆ-ಗೋಣಿಕೊಪ್ಪ ಸಾರ್ವಜನಿಕ ರಸ್ತೆಯಲ್ಲಿ ಕೆಎಲ್-13-ಎಕ್ಸ್-5142ರ ಕಾರಿನ ಚಾಲಕ ಕಾರನ್ನು ಅಜಾಗರೂಕತೆಯಿಂದ ವೇಗವಾಗಿ ಚಾಲಿಸಿಕೊಂಡು ಬಂದು ಕೆಎ-12-ಕ್ಯೂ-0623 ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರ ಹಾತೂರು ಗ್ರಾಮದ ಶೌಕತ್‌ ಮತ್ತು ಹಾಗೂ ಹಿಂಬದಿ ಸವಾರರಿಗೆ ಗಾಯಗಳು ಉಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಎಟಿಎಂ ಕಾರ್ಡ್‌ನಿಂದ ಹಣ ಪಡೆದು ವಂಚನೆ 
              ಬ್ಯಾಂಕ್‌ ಎಟಿಎಂ ಕಾರ್ಡಿನ ಮೂಲಕ ವ್ಯಕ್ತಿಯೊಬ್ಬರ ಹಣವನ್ನು ಪಡೆದುಕೊಂಡು ವಂಚಿಸಿದ ಘಟನೆ ಗೋಣಿಕೊಪ್ಪದ ಬಳಿ ನಡೆದಿದೆ. ಗೋಣಿಕೊಪ್ಪ ಬಳಿಯ ಹಳ್ಳಿಗಟ್ಟು ನಿವಾಸಿ ಎಂ.ಎಂ.ಅಯ್ಯಣ್ಣ ಎಂಬವರಿಗೆ ಸೇರಿದ ವಿಜಯಾ ಬ್ಯಾಂಕಿನ ವಿಸಾ ಗ್ಲೋಬಲ್‌ ಎಟಿಎಂ ಕಾರ್ಡಿನ ಪಿನ್‌ ಸಂಖ್ಯೆಯನ್ನು ಯಾರೋ ಅಪರಿಚಿತರು ಮೋಸದಿಂದ ಪಡೆದು ಅಯ್ಯಣ್ಣನವರ ಬ್ಯಾಂಕ್‌ ಖಾತೆಯಿಂದ ಸುಮಾರು ರೂ.2,13,789/- ಗಳನ್ನು ಎಟಿಎಂ ಕಾರ್ಡಿನ ಮೂಲಕ ಪಡೆದು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕತ್ತಿಯಿಂದ ಕಡಿದು ಮಹಿಳೆಯ ಮೇಲೆ ಹಲ್ಲೆ
             ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ಬಳಿಯ ಗೋಣಿಮರೂರು ಗ್ರಾಮದಲ್ಲಿ ನಡೆದಿದೆ. ಗೋಣಿಮರೂರು ನಿವಾಸಿ ಕಾಂಚನ ಎಂಬ ಮಹಿಳೆಯು ಸುಮಾರು 2 ತಿಂಗಳಿನಿಂದ ಅದೇ ಗ್ರಾಮದ ನಿವಾಸಿ  ಜೆ.ಕೆ ರಾಜುವಿನೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು 15 ದಿನಗಳಿಂದ ಬೇರೆ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರಿಂದ ದಿನಾಂಕ 15/06/2015 ರಂದು ಜೆ.ಕೆ.ರಾಜು ಕಾಂಚನರವರನ್ನು ಕೆಲಸಕ್ಕೆ ಕರೆದಾಗ ಆಕೆಯು ನಿರಾಕರಿಸಿದ ಕಾರಣಕ್ಕೆ ರಾತ್ರಿ 08:00 ಗಂಟೆಗೆ ಕಾಂಚನರವರು  ಮನೆಯ ಹತ್ತಿರ ಹೋಗುತ್ತಿರುವಾಗ ಹಿಂಬದಿಯಿಂದ ಬಂದು ತಲೆಯ ಎಡಬಾಗಕ್ಕೆ ಕತ್ತಿಯಿಂದ ಕಡಿದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಅಪಹರಣ
              ಮಹಿಳೆಯೊಬ್ಬರನ್ನು ಬಲಾತ್ಕಾರವಾಗಿ ಅಪಹರಿಸಿ ಆಕೆಯ ಪತಿಯ ಮೇಲೆ ಹಲ್ಲೆ ಮಾಡಿದ ಘಟನೆ ಕುಶಾಲನಗರ ಬಳಿಯ ತೊರೆನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 15-6-2015 ರಂದು ಸೋಮವಾರಪೇಟೆಯಲ್ಲಿ ನಿಗದಿಯಾಗಿದ್ದ ಗ್ರಾಮ ಪಂಚಾಯತ್‌ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕ್ರಿಯೆಗೆ ತೊರೆನೂರು ನಿವಾಸಿ ಟಿ.ವಿ.ದೇವರಾಜು ಹಾಗೂ ಅವರ ಹೆಂಡತಿ ರೂಪರವರು ಹೋಗುತ್ತಿರುವಾಗ  ಚಿಕ್ಕಅಳುವಾರ ಗ್ರಾಮದ ದೇವರಾಜು ಎಂಬುವರು ತನ್ನ ಸಂಗಡಿಗರಾದ ಸೋಮಪ್ಪ, ಚಂದ್ರು ಹಾಗೂ ಇತರರೊಂದಿಗೆ  ಸೇರಿ ದೇವರಾಜುರವರನ್ನು  ಹಾಗೂ ರೂಪರವರನ್ನು ಬಲವಂತವಾಗಿ ಕೆಎ 12 ಜೆಡ್ 3623 ರ ಬಿಳಿ ಬಣ್ಣದ ಬೊಲೇರೋ ಜೀಪಿನಲ್ಲಿ ಹತ್ತಿಸಿಕೊಳ್ಳಲು ಯತ್ನಿಸಿದ್ದು ಟಿ.ವಿ. ದೇವರಾಜುರವರು  ಜೋರಾಗಿ ಕಿರುಚುಕೊಂಡಾಗ ದೇವರಾಜು ಹಾಗೂ ಅವರ ಸಂಗಡಿಗರು ಅವರ ಮೇಲೆ ಹಲ್ಲೆ ನಡೆಸಿ ಮೇದರ ಜಾತಿಯ ಬಗ್ಗೆ ನಿಂದನೆ ಮಾಡಿ ಅವರ ಹೆಂಡತಿ ರೂಪರವರನ್ನು ಬಲವಂತವಾಗಿ ಜೀಪಿಗೆ ಹತ್ತಿಸಿಕೊಂಡು ಹೋಗಿದ್ದು ನಂತರ ಟಿ.ವಿ.ದೇವರಾಜುರವರು ಹೆಂಡತಿ ರೂಪರವರಿಗೆ ಕರೆ ಮಾಡಿದಾಗ ರೂಪರವರು ಸೋಮವಾರಪೇಟೆಯ ಶಾಸಕರ ಕಛೇರಿಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಸಿದ್ದು . ತದನಂತರ ರೂಪರವರಿಗೆ ಕರೆ ಮಾಡಲಾಗಿ ಫೋನ್ ಸ್ವಿಚ್ ಆಫ್ ಆಗಿದ್ದು, ರೂಪರವರನ್ನು ಮನೆಗೆ ಕರೆದುಕೊಂಡು ಬಂದು ಬಿಡಬಹುದೆಂದು ಭಾವಿಸಿ ಕಾಯುತಿದ್ದು ಆದಾಗ್ಯೂ ಪತ್ನಿ ಮನೆಗೆ ಬಾರದ ಕಾರಣ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಿಕ್ಷಾಕ್ಕೆ ಬೈಕ್‌ ಡಿಕ್ಕಿ
             ರಿಕ್ಷಾವೊಂದಕ್ಕೆ ಬೈಕೊಂದು ಡಿಕ್ಕಿಯಾದ ಪರಿಣಾಮ ರಿಕ್ಷಾ ಪ್ರಯಾಣಿಕರಗಿ ಗಾಯಗಳಾದ ಘಟನೆ ಸುಂಟಿಕೊಪ್ಪ ಬಳಿಯ ಮಾದಾಪುರ ರಸ್ತೆಯಲ್ಲಿ ನಡೆದಿದೆ. ದಿನಾಂಕ 16.06.2105 ರಂದು ಉಲುಗುಲಿ ನಿವಾಸಿ ಜಗದೀಶ್‌ ಎಂಬವರು ಅವರ ಆಟೋ ರಿಕ್ಷಾ ನಂ. ಕೆಎ-12-ಎ-8213ರಲ್ಲಿ ಸುಂಟಿಕೊಪ್ಪದಿಂದ ಗರಗಂದೂರುವಿಗೆ ಬಾಡಿಗೆಗೆ ಹೋಗಿ ವಾಪಾಸ್ಸು ಆಟೋದಲ್ಲಿ ಕಾರ್ತಿಕ್‌, ಅಣ್ಣಿ, ಸುಧಾ ಎಂಬವರನ್ನು ಕೂರಿಸಿಕೊಂಡು ಬರುತ್ತಿರುವಾಗ ಸುಂಟಿಕೊಪ್ಪ ಬಳಿಯ ಮಾದಾಫುರ ರಸ್ತೆಯ ಕೆಂಚೆಟ್ಟಿ ಎಂಬಲ್ಲಿ ಎದುರುಗಡೆಯಿಂದ ಬಂದ ಕೆಎ-12-ಎಲ್‌-8153 ರ ಮೋಟಾರು ಸೈಕಲ್‌ ಸವಾರ ಮಹಮದ್‌ ಆಲಿ ಎಂಬಾತನು  ಮೋಟಾರು ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಜಗದೀಶ್‌ರವರ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋರಿಕ್ಷಾದ ಮುಂಭಾಗ ಜಖಂಗೊಂಡಿರುವುದಲ್ಲದೆ ಆಟೋ ದಲ್ಲಿದ್ದ ಕಾರ್ತಿಕ್‌ರವರಿಗೆ ಗಾಯಗಳುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Tuesday, June 16, 2015

ಅಕ್ರಮ ಜಾನುವಾರು ಸಾಗಾಟ 
                 ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಕುಟ್ಟ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಿನಾಂಕ 15/06/2015ರ ಸಂಜೆ ವೇಳೆ ಕುಟ್ಟ ಬಳಿಯ ಪೈತ್‌ ಎಸ್ಟೇಟಿನ ಜಂಕ್ಷನ್‌ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಕೇರಳಕ್ಕೆ ಸುಮಾರು ರೂ.10,000/- ಬೆಲೆ ಬಾಳುವ ಒಂದು ಜಾನುವಾರನ್ನು ಕೇರಳಕ್ಕೆ ಅಕ್ರಮವಾಗಿ ಕಾಲ್ನಡಿಗೆಯ ಮೂಲಕ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಕುಟ್ಟ ಪಿಎಸ್‌ಐ ಜೆ.ಮಂಜುರವರು ಇಬ್ಬರನ್ನು ಬಂಧಿಸಿ ಜಾನುವಾರನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಳೆ ವೈಷಮ್ಯ, ಕತ್ತಿಯಿಂದ ಹಲ್ಲೆ 
                ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆ ಶನಿವಾರಸಂತೆ ಬಳಿಯ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 15/06/2015ರಂದು ಸಂಜೆ ಗೋಪಾಲಪುರ ನಿವಾಸಿ ಜಿ.ಎಂ.ಗಣೇಶ ಎಂಬವರು ಮನೆಯಲ್ಲಿರುವಾಗ ಅದೇ ಗ್ರಾಮದ ನಿವಾಸಿ ವಿ.ಸಿ.ಸತೀಶ ಎಂಬಾತನು ಗಣೇಶರವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಗದ್ದೆಯ ವಿಚಾರದ ಹಳೆ ವೈಷಮ್ಯವನ್ನಿಟ್ಟುಕೊಂಡು ಗಣೇಶ ಮತ್ತು ಅವರ ಮಗ ಜಯಂತರವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಣದ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ 
               ಹಣದ ವಿಚಾರವಾಗಿ ಜಗಳವಾಗಿ ವ್ಯಕ್ತಿಯೊಬ್ಬರ ಮೇಲೆ ಬಾಟಲಿಯಿಂದ ಹಲ್ಲೆ ಮಾಡಿದ ಘಟನೆ ಕುಟ್ಟ ನಗರದಲ್ಲಿ ನಡೆದಿದೆ. ದಿನಾಂಕ 14/06/2015ರಂದು ಕುಟ್ಟ ಬಳಿಯ ಪೂಜೆಕಲ್‌ ನಿವಾಸಿ ಷಣ್ಮುಗವೇಲು ಎಂಬವರು ಕುಟ್ಟ ನಗರದ ಸಪ್ತಗಿರಿ ಬಾರ್‌ನ ಕಟ್ಟಡದ ಬಳಿ ಸ್ನೇಹಿತ ರಾಜೇಶ್‌ರವರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಅಲ್ಲಿಗೆ ಬಂದ ತಮಿಳರ ಶಂಕರ ಎಂಬಾತ ಹಣದ ವಿಚಾರದಲ್ಲಿ ಜಗಳವಾಡಿ ಖಾಲಿ ಬಿಯರ್ ಬಾಟಲಿಯಿಂದ ಷಣ್ಮುಗವೇಲುರವರ ತಲೆಗೆ ಹೊಡೆದು ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ 
              ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ರಾಡಿನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಬಳಿಯ ಐಗೂರಿನಲ್ಲಿ ನಡೆದಿದೆ. ದಿನಾಂಕ 15/06/2015ರಂದು ಕಿರಗಂದೂರು ನಿವಾಸಿ ಕೆ.ಕೆ.ಚಂದ್ರ ಎಂಬವರು ಐಗೂರು ನಗರದಲ್ಲಿ ರಿಕ್ಷಾವನ್ನು ನಿಲ್ಲಿಸಿಕೊಂಡಿದ್ದಾಗ ಅಲ್ಲಿಗೆ ಸಿಎನ್‌ವಿ  9917ರ ಮೋಟಾರು ಸೈಕಲ್‌ನಲ್ಲಿ ಬಂದ ಕಿರಗಂದೂರು ನಿವಾಸಿಗಳಾದ ನರಸಿಂಹ ಮತ್ತು ಅನಂತ ಎಂಬವರು ಬಂದು ಚಂದ್ರರವರ ಜೊತೆ ವಿನಾ ಕಾರಣ ಜಗಳವಾಡಿ ಕೈಯಲ್ಲಿದ್ದ ರಾಡಿನಿಂದ ಚಂದ್ರರವರಿಗೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, June 15, 2015

ಬೈಕ್‌ ಡಿಕ್ಕಿ, ಮಹಿಳೆಗೆ ಗಾಯ:

    ಹುಣಸೂರು ನಿವಾಸಿ ಕೃಷ್ಣೇಗೌಡ ಎಂಬವರು ಹಾಗೂ ಅವರ ಹೆಂಡತಿ ಲಕ್ಷ್ಮೀ ಹಾಗೂ ಅಳಿಯ ನಟರಾಜ್ ರವರು ಬೈಚನಹಳ್ಳಿಯಿಂದ ಕುಶಾಲನಗರದ ಗಣೇಶ್ ಭವನ ಹೋಟೆಲ್ ನ ಮುಂದಿನ ಥಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಂ ಕೆಎ 12 ಜೆ 6023 ರ ಸ್ಕೂಟರನ್ನು ಅದರ ಸವಾರನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಲಕ್ಷ್ಮೀ ಯವರಿಗೆ ಹಿಂಬದಿಯಿಂದ ಡಿಕ್ಕಿಪಡಿಸಿದ ಪರಿಣಾಮ ಲಕ್ಷ್ಮೀರವರು ಗಾಯಗೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Posted byVartika Katiyar, IPS
Sunday, June 14, 2015

ಅನಾರೋಗ್ಯ ಹಿನ್ನೆಲೆ , ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ:

     ಕುಶಾಲನಗರ ಠಾಣಾ ಸರಹದ್ದಿನ ಬೈಚನಳ್ಳಿ ಗ್ರಾಮದ ನಿವಾಸಿ ಮಹೇಶ ಎಂಬವರು ಇತ್ತೀಚಿನ ದಿನಗಳಲ್ಲಿ ಮಾನಸಿಕ ಅಸ್ವಸ್ಥಗೊಂಡು ವಿಪರೀತ ಮದ್ಯಪಾನ ಮಾಡುತ್ತಿದ್ದುದರಿಂದ ದಿ: 10/6/15 ರಂದು ಅವರನ್ನು ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಅನಾರೋಗ್ಯದಿಂದ ಬೇಸತ್ತ ಸದರಿಯವರು ದಿನಾಂಕ 13/6/15 ರಂದು ತನ್ನ ಮನೆಯ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಶ್ರೀಮತಿ ಮಹದೇವಿಯವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಬೈಕ್‌ ಡಿಕ್ಕಿ ಪಾದಾಚಾರಿಗೆ ಗಾಯ: 

     ಗೋಣಿಕೊಪ್ಪ ಠಾಣಾ ಸರಹದ್ದಿನ ಹರಿಶ್ಚಂದ್ರ ಪುರದಲ್ಲಿ ನೆಲೆಸಿರುವ ಎಂ.ಬಿ ಹುಸೇನ್‌ ರವರ ತಂದೆ ದಿನಾಂಕ 13/6/15 ರಂದು ಹರಿಶ್ಚಂದ್ರಪುರದ ಮದರಸಕ್ಕೆ ಹೋಗಿ ವಾಪಾಸು ಅವರ ಬಾಪ್ತು ಟೀ ಅಂಗಡಿಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಹಿಂಬದಿಯಿಂದ ಮೋಟಾರು ಸೈಕಲ್ ನ ಸವಾರನೊಬ್ಬ ಸದರಿ ಮೋಟಾರ್‌ ಸೈಕಲನ್ನು ವೇಗದಿಂದ ಓಡಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಕಿವಿಗೆ, ತಲೆಗೆ ಬೆನ್ನಿನ ಭಾಗಕ್ಕೆ ಗಾಯ ಪಡಿಸಿ ಸವಾರನು ಮೋಟಾರು ಸೈಕಲ್ ನ್ನು ನಿಲ್ಲಿಸದೇ ಹೋಗಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಾರುತಿ ವ್ಯಾನ್‌ ಕಳವು,:

     ಕುಶಾಲನಗರದ ಬಸ್‌ ನಿಲ್ದಾಣ ಬಳಿ ನಿಲ್ಲಿಸಿದ್ದ ಮಾರುತಿ ವ್ಯಾನ್‌ವೊಂದು ಕಳ್ಳತನವಾದ ಘಟನೆ ನಡೆದಿದೆ. ಕುಶಾಲನಗರದಜನತಾ ಕಾಲೋನಿಯ ನಿವಾಸಿ ಎಸ್‌.ಬಿ. ಪರಮೇಶ್‌ ಎಂಬವರು ತಮ್ಮ ಬಾಪ್ತು ಮಾರುತಿ ವ್ಯಾನ್‌ನ್ನು ದಿನಾಂಕ 8-6-2015 ರಂದು ಕುಶಾಲನಗರ ಬಸ್‌ನಿಲ್ದಾಣದ ಬಳಿ ನಿಲ್ಲಿಸಿದ್ದು, ಸದರಿ ವ್ಯಾನ್‌ನ್ನು ಯಾರೋಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, June 13, 2015

ಒತ್ತಾಯದ ಮತಾಂತರ, ಪ್ರಕರಣ ದಾಖಲು:

     ದಿನಾಂಕ 4/6/2015ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ತಿತಿಮತಿ ಗ್ರಾಮದ ನಿವಾಸಿ ಪಿ.ಎನ್‌. ಯೋಗೇಶ್‌ ಎಂಬವರು ಮನೆಯಲ್ಲಿ ಇರುವಾಗ್ಗೆ ತಿತಿಮತಿ ಚೌಡಿ ಕಟ್ಟೆ ಪೈಸಾರಿ ವಾಸಿ ಸುಬ್ರಮಣ್ಯಿ ಎಂಬ ವ್ಯಕ್ತಿ ಅವರ ಮನೆಗೆ ಬಂದು ಹಿಂದು ಧರ್ಮವನ್ನು ಬಿಟ್ಟು ಕ್ರೈಸ್ತ ಧರ್ಮಕ್ಕೆ ಬರಬೇಕೆಂದು ಒತ್ತಡ ಹಾಕಿದ್ದು, ಅದನ್ನು ಪಿ.ಎನ್‌. ಯೋಗೇಶ್‌ ತಿರಸ್ಕರಿಸಿದ್ದು, ದಿನಾಂಕ 11/6/2015ರಂದು ಸಮಯ ಬೆಳಿಗ್ಗೆ 9.00ಗಂಟೆಯ ಸಮಯದಲ್ಲಿ ಪಿ.ಎನ್‌. ಯೋಗೇಶ್‌ ರವರು ತಮ್ಮಮನೆಯಲ್ಲಿ ಇರುವಾಗ್ಗೆ ಸದರಿ ಸುಬ್ರಮಣ್ಯಿ ಮನೆಗೆ ಬಂದು ನೀನು ಕ್ರೈಸ್ತ ಧರ್ಮಕ್ಕೆ ಸೇರಬೇಕು ನೀನು ನನ್ನ ಜೊತೆ ಬರದಿದ್ದರೆ ಕೊಲೆ ಮಾಡುತ್ತೇನೆ. ಎಂದು ಹೆದರಿಸಿದ್ದು, ನಂತರ ಪಿ.ಎನ್‌. ಯೋಗೇಶ್‌ ರವರು ಬರುವುದಿಲ್ಲ ಎಂದಾಗ ಅವರ ಕೈಯನ್ನು ಸುಬ್ರಮಣ್ಯಿ ಹಿಡಿದು ಎಳೆದುಕೊಂಡು ಮೈಸೂರಿಗೆ ಕೆ.ಆರ್.ಟಿ.ಸಿ. ಬಸ್ಸುನಲ್ಲಿ ಕರೆದುಕೊಂಡು ಹೋಗಿ ಮೈಸೂರಿನ ಬಸ್ಸು ನಿಲ್ದಾಣದ ಪಕ್ಕವಿರುವ ಚರ್ಚ್ ಬಲತ್ಕಾರವಾಗಿ ಎಳೆದುಕೊಂಡು ಹೋಗಿ ಕುತ್ತಿಗೆ ಒಂದು ಮಣಿ ಸರ(ಮಾಲೆ) ಅದರಲ್ಲಿ ಯೇಸು ಕ್ರಿಸ್ತ್ ರವರ ಶೀಲುಬೆ ಹಾಕಿ ಅಲ್ಲದೆ ಕರ ಪತ್ರಗಳನ್ನು ನೀಡಿರುವ ಬಗ್ಗೆ ಪಿ.ಎನ್‌. ಯೋಗೇಶ್‌ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮನೆಯ ಬೀಗ ಕಿತ್ತು, ಮೊಬೈಲ್‌ ಕಳ್ಳತನ:

     ಗೋಣಿಕೊಪ್ಪ ಠಾಣಾ ಸರಹದ್ದಿನ ನೇತಾಜಿ ಲೇಔಟ್‌ನ್ಲಿ ಬ.ವಿ. ಶೆಣೈ ಹಾಗು ತನ್ನ ಕುಟುಂಬದೊಂದಿಗೆ ವಾಸವಾಗಿದ್ದು, ದಿನಾಂಕ 12/5/15 ರಂದು ಅವರು ಎಂದಿನಂತೆ ಬೆಳಿಗ್ಗೆ 9-30 ಗಂಟೆಗೆ ಕರ್ತವ್ಯಕ್ಕೆ ತೆರಳಿದ್ದು ಪತ್ನಿಯು ಸಹ ಸಮಯ 10-15 ಎ.ಎಂಗೆ ಮನೆಯ ಮುಂದಿನ ಬಾಗಿಲಿಗೆ ಬೀಗ ಹಾಕಿ ಪೊನ್ನಂಪೇಟೆಗೆ ಕೆಲಸದ ನಿಮಿತ್ತ ಹೋಗಿದ್ದ ಸಂದರ್ಭದಲ್ಲಿ ಯಾರೋ ಕಳ್ಳರುಮನೆಯ ಬಾಗಿಲಿಗೆ ಹಾಕಿದ್ದ ಬೀಗದ ಪತ್ತಿಯನ್ನು ಬೀಗ ಸಮೇತ ಕಿತ್ತು ಬಾಗಿಲು ತೆರೆದು ಮನೆಯ ಒಳಗೆ ಪ್ರವೇಶಿಸಿ ಮಲಗುವ ಕೋಣೆಯಲ್ಲಿಟ್ಟಿದ್ದ ಎರಡು ಬೀರುವಿನ ಲಾಕನ್ನು ಮೀಟಿ ತೆಗೆದು ರೂ 10.000 ಬೆಲೆಬಾಳುವ ಸ್ಯಾಮ್ಸಂಗ್ ಸಿಮ್ ಕಾರ್ಡ್ ರಹಿತ ಮೊಬ್ಯೆಲ್ ಸೆಟನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿನಾಕಾರಣ ಅಪರಿಚಿತ ವ್ಯಕ್ತಿಗಳಿಂದ ವ್ಯಕ್ತಿ ಮೇಲೆ ಹಲ್ಲೆ:

    ದಿನಾಂಕ 11-06-2015 ರಂದು ಸಮಯ ರಾತ್ರಿ ಸುಮಾರು 09.30 ರಿಂದ 10.00 ಗಂಟೆಯ ನಡುವಿನ ವೇಳೆಯಲ್ಲಿ ಮಡಿಕೇರಿ ನಗರದ ಕನ್ನಂಡಬಾಣೆ ಯಲ್ಲಿ ವಾಸವಾಗಿರುವ ಪ್ರವೀಣಕುಮಾರ್ ರವರು ನಗರದ ಚಿತ್ರಾ ಲಾಡ್ಜ್ ನ ಬಳಿ ನಿಂತಿರುವಾಗ್ಗೆ ಯಾರೋ 3 ಜನ ಅಪರಿಚಿತರು ಬಂದು ಸದರಿಯವರನ್ನು ನೀನು ನಮ್ಮೊಂದಿಗೆ ಬಾ, ನಿನ್ನೊಂದಿಗೆ ಮಾತನಾಡಲು ಇದೆ ಎಂದು ಹೇಳಿದ್ದು, ಅವರೊಂದಿಗೆ ಪ್ರವೀಣ್‌ಕುಮಾರ್‌ರವರು ಪಕ್ಕದ ಮೋರಿಯ ಬಳಿ ಹೋದಾಗ ಅಪರಿಚಿತ ವ್ಯಕ್ತಿಗಳು ಪ್ರವೀಣ್‌ಕುಮಾರ್‌ರವರನ್ನು ತಡೆದು, ಏಕಾಏಕಿ, ವಿನಾ ಕಾರಣ ಕಲ್ಲಿನಿಂದ ತಲೆಯ ಭಾಗಕ್ಕೆ, ಬಲ ಕೈ, ಎಡ ಕೈ ಹಾಗೂ ಮೂಗಿನ ಭಾಗಕ್ಕೆ ಹೊಡೆದು ನೋವು ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, June 10, 2015

ಅಪ್ರಾಪ್ತ ಹುಡುಗಿ ಮೇಲೆ ಅತ್ಯಾಚಾರ:
     ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ವಾಸಿ ಟಿ.ಎಂ. ಅಬ್ದುಲ್ಲಾ ಎಂಬವರ ಮಗಳಾದ ತಸ್ಲೀನಾ ಎಂಬಾಕೆ ದಿನಾಂಕ 6-6-2015 ರಂದು ಕೆಲಸಕ್ಕೆಂದು ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ದಿನಾಂಕ 7-6-2015 ರಂದು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಕಾಣೆಯಾದ ಹುಡುಗಿಯನ್ನು ಪತ್ತೆ ಮಾಡಲು ತನಿಖೆಕೈಗೊಂಡಿದ್ದು, ಸದರಿ ಪ್ರಕರಣದಲ್ಲಿ ಆರೋಪಿ ಪಾರವಂಗಡ ಬೋಪಣ್ಣ ಎಂಬ ವ್ಯಕ್ತಿ ತಸ್ಲೀನಾ ಎಂಬಾಕೆಯನ್ನು ಪುಸಲಾಯಿಸಿ ಶ್ರೀಮಂಗಲಕ್ಕೆ ಕರೆದುಕೊಂಡು ಹೋಗಿ ಆಕೆಯ ಇಚ್ಚೆಯ ವಿರುದ್ಧವಾಗಿ ದೈಹಿಕ ಅತ್ಯಾಚಾರ ವೆಸಗಿದ್ದು, ದಿನಾಂಕ 08-06-2015 ರಂದು ಬೆಳಿಗ್ಗೆ 06.00 ಗಂಟೆಗೆ ಆಕೆಯನ್ನು ಶ್ರೀಮಂಗಲದಿಂದ ಸರ್ಕಾರಿ ಬಸ್ಸಿನಲ್ಲಿ ವಿರಾಜಪೇಟೆಗೆ ಕರೆದುಕೊಂಡು ಬಂದು ವಿರಾಜಪೇಟೆಯಿಂದ ಮಡಿಕೇರಿಗೆ ಖಾಸಗಿ ಬಸ್ಸಿನಲ್ಲಿ ಸಮಯ 10.30 ಎ.ಎಂ.ಗೆ ಕರೆದುಕೊಂಡು ಬಂದು ಮಡಿಕೇರಿಯಲ್ಲಿ ಬಿಟ್ಟು ತಿಳಿಸದೆ ಎಲ್ಲಿಗೋ ಹೊರಟು ಹೋಗಿದ್ದು ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಮಹಿಳೆಗೆ ಗಾಯ:
     ವಿರಾಜಪೇಟೆ ತಾಲೋಕು, ಗೋಣಿಕೊಪ್ಪ ನಗರದ ನಿವಾಸ ಶ್ರೀಮತಿ ಉಷಾ ಎಂಬವರು ದಿನಾಂಕ 2-6-2015 ರಂದು ಮೂರ್ನಾಡಿಗೆ ಮದುವೆ ಸಮಾಂಭಕ್ಕೆ ಹೋಗಿ ವಾಪಾಸು ಖಾಸಗಿ ಬಸ್ಸಾದ ಲಕ್ಷೀಗಣೇಶ ಬಸ್ಸಿನಲ್ಲಿ ವಿರಾಜಪೇಟೆ ಕಡೆಗೆ ಬರುತ್ತಿದ್ದಾಗ ಬಸ್ಸಿನ ಚಾಲಕ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮವಾಗಿ ಬಸ್ಸಿನ ಸೀಟಿನಲ್ಲಿ ಕುಳಿತ್ತಿದ್ದ ಸದರಿ ಉಷಾರವರು ಬಸ್ಸಿನ ಒಳಗೆ ಬಿದ್ದು ನಂತರ ಮುಂಬಾಗಿಲಿನ ಮೂಲಕ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಸ್ತೆ ಅಪಘಾತ, ಸ್ಕೂಟಿ ಸವಾರನ ಸಾವು:
     ಸೋಮಯ್ಯ ಎಂಬ ವ್ಯಕ್ತಿ ಹಾಕತ್ತುರು ಗ್ರಾಮದಲ್ಲಿ ವಾಸವಾಗಿದ್ದು ದಿನಾಂಕ: 07-06-2015 ರಂದು ಮಡಿಕೇರಿಯ ವ್ಯಾಲಿವ್ಯೂ ಹೊಟೇಲಿನಲ್ಲಿ ಸಂಬಂಧಿಕರ ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಬಾಗವಹಿಸಿ ನಂತರ ವಾಪಾಸು ತಮ್ಮ ಬಾಬ್ತು ಸ್ಕೂಟಿ ನಂ: ಕೆಎ-09-ಇಸಿ-4734 ರಲ್ಲಿ ಮನೆಗೆ ಹೋಗುತ್ತಿದ್ದಾಗ ಸಂಜೆ ಸುಮಾರು 4-00 ಗಂಟೆಗೆ ಹಾಕತ್ತುರಿನಿಂದ ಮರಗೋಡಿಗೆ ಹೋಗುವ ತಾರುರಸ್ತೆಯಲ್ಲಿ ತೊಂಬತ್ತುಮನೆ ಬಸ್ಸು ನಿಲ್ದಾಣದ ಹತ್ತಿರ ಸ್ಕೂಟಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಸ್ಕೂಟಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸೋಮಯ್ಯನವರ ತೆಲಯ ಮುಂಭಾಗಕ್ಕೆ ತೀವ್ರ ಜಖಂ ಉಂಟಾಗಿದ್ದು ಅವರನ್ನು ಮಡಿಕೇರಿಯ ವೈವಾಸ್ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಅದೇ ದಿನ ಅವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿನ ವೈಧ್ಯರ ಸಲಹೆಯಂತೆ ಅವರನ್ನು ಅದೇ ದಿನ ಬೆಂಗಳೂರಿಗೆ ಕರೆದುಕೊಂಡು ಹೋಗಿ ನಿಮಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಅವರು ಈ ದಿನ ದಿನಾಂಕ: 09-06-2015 ರಂದು ಸಂಜೆ 5-00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, June 9, 2015

ಬೈಕ್‌ಗೆ ಜೀಪು ಡಿಕ್ಕಿ, ಇಬ್ಬರಿಗೆ ಗಾಯ: 
     ದಿನಾಂಕ 07-06-2015 ರಂದು ಸೋಮವಾರಪೇಟೆ ತಾಲೋಕು, ಗೌಡಳ್ಳಿ ಗ್ರಾಮದ ನಿವಾಸಿ ಸಿ.ಕೆ. ಶಿವಕುಮಾರ್‌ ರವರು ತಮ್ಮ ಭಾಪ್ತು ಮೋಟಾರು ಸೈಕಲ್ ನಂ ಕೆ.ಎ 12 ಹಚ್ 9331 ಬೈಕಿನಲ್ಲಿ ಹಿಂಬದಿ ಸವಾರನಾಗಿ ತಮ್ಮ ತಂದೆಯವರನ್ನು ಕೂರಿಸಿಕೊಂಡು ಸೋಮವಾರಪೇಟೆ ಯಿಂದ ಗೌಡಳ್ಳಿ ಗ್ರಾಮದ ಕಡೆಗೆ ಹೋಗುವಾಗ ಶಿವಪುರ ಗ್ರಾಮದ ಬಳಿ ಸಮಯ 4-45 ಪಿ.ಎಂ.ಗೆ ಎದುರುಗಡೆಯಿಂದ ಕೆ.ಎ. 14 ಎನ್ 625 ಬೊಲೇರೋ ಜೀಪನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಿ.ಕೆ. ಶಿವಕುಮಾರ್‌ ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಮತ್ತು ಅವರ ತಂದೆ ಬೈಕ್ ಸಮೇತ ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 


ಹುಡುಗಿ ಕಾಣೆ, ಅಪಹರಣದ ಶಂಕೆ: 

      ಸಿದ್ದಾಪುರ ಪೊಲೀಸ್‌ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಟಿ.ಎಂ. ಅಬ್ದುಲ್ಲಾ ಎಂಬವರ ಮಗಳು ತಸಲೀನಾ ಎಂಬುವವಳು ದಿನಾಂಕ 6-6-2015 ರಂದು ಬೆಳಿಗ್ಗೆ 10:00 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಎಲ್ಲಾ ಕಡೆ ವಿಚಾರಿಸಿದಾಗ ಪಾರವಂಗಡ ಬೋಪಣ್ಣ ಎಂಬುವವರು ಕಳೆದ 2 ತಿಂಗಳಿನಿಂದ ನನ್ನ ಮಗಳ ಜೊತೆ ಫೋನ್ ನಲ್ಲಿ ಸಂಪರ್ಕವಿದ್ದು, ಅವಳಿಗೆ ಕೆಲಸಕೊಡಿಸುವ ಆಸೆಯನ್ನು ತೋರಿಸಿ ಅವಳನ್ನು ಅಪಹರಿಸಿರುವ ಶಂಕೆಯಿರುತ್ತೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 


ವಿನಾಕಾರಣ ವ್ಯಕ್ತಿಯ ನಿಂದನೆ, ಕೊಲೆ ಬೆದರಿಕೆ: 

    ಮಡಿಕೇರಿ ತಾಲೋಕು ಮುಕ್ಕೋಡ್ಲು ಗ್ರಾಮದ ನಿವಾಸಿ ಟಿ.ಎಂ. ಪೂವಯ್ಯ ಎಂಬವರು ದಿನಾಂಕ 06-07-2015 ರಂದು 4.00 ಪಿ ಎಂ ಗೆ ಅವಂಡಿಯ ಮನು ಮುದ್ದಪ್ಪ ನವರ ಗದ್ದೆಯಲ್ಲಿ ಟ್ರಾಕ್ಟರ್ನಿಂದ ಊಳುತ್ತಿರುವಾಗ ಅದೇ ಗ್ರಾಮದ ಹಂಚೆಟ್ಟಿರ ಮಾದಪ್ಪ ಮತ್ತು ಅತನ ತಮ್ಮನಾದ ನಂಜಪ್ಪ ನವರು ಅವರ ಗದ್ದೆಯಲ್ಲಿ ಪಿಕಪ್ ನಲ್ಲಿ ಕುಳಿತು ಕೊಂಡು ಅವಾಚ್ಯ ಶಬ್ಬಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 


ಮನೆಯ ಬೀಗ ಮುರಿದು ಚಿನ್ನಾಭರಣ ಕಳವು: 

   ಎ.ಎಂ. ಸಾದುಲಿ ಎಂಬವರು ಪೊನ್ನಂಪೇಟೆಯ ಕಾಟ್ರಕೊಲ್ಲಿ ವಾಸಿಯಾಗಿದ್ದು, ದಿ:6.6.15 ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ತಮ್ಮ ಸಂಸಾರದೊಂದಿಗೆ ವಿರಾಜಪೇಟೆಯಲ್ಲಿರುವ ಮಾವನವರ ಮನೆಗೆ ಹೋಗಿದ್ದು, ರಾತ್ರಿ ಮಾವನ ಮನೆಯಲ್ಲಿ ತಂಗಿದ್ದು, ಅಂದು ರಾತ್ರಿ ಯಾರೋ ಕಳ್ಳರು ಅವರ ಮನೆಯ ಬೀಗ ಮತ್ತು ಡೋರ್‌ ಲಾಕ್‌ ಒಡೆದು ಒಳಗೆ ಪ್ರವೇಶಿಸಿ ಬೆಡ್‌ ರೂಮಿನಲ್ಲಿದ್ದ ಆಲ್ಮೇರಾವನ್ನು ಒಡೆದು ಅದರಲ್ಲಿಟ್ಟಿದ್ದ ಸುಮಾರು 48 ಗ್ರಾಂನ ಒಂದು ನೆಕ್ಲೇಸ್‌, ನಾಲ್ಕು ಚಿನ್ನದ ಉಂಗುರ, ಸುಮಾರು 16 ಗ್ರಾಂನ ಒಂದು ಚೈನ್‌, 38 ಗ್ರಾಮಿನ ಮೂರು ಚಿನ್ನದ ಬಳೆ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಇವುಗಳ ಮೊತ್ತ ಸುಮಾರು 2 ಲಕ್ಷ ರೂ ಆಗಿರುವುದಾಗಿನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, June 4, 2015

ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ವ್ಯಕ್ತಿ ಮೇಲೆ ಹಲ್ಲೆ: 
     ದಿನಾಂಕ 3/06/2015 ರಂದು ಸಮಯ 6;00 ಪಿ ಎಂಗೆ ಮಹೇಶ್‌ ಬಿ.ಬಿ. ಎಂಬವರು ಕುಶಾಲನಗರದ ಹತ್ತಿರದ ಬಸವನಳ್ಳಿ ಗ್ರಾಮದಲ್ಲಿರುವ ತಮ್ಮ ಮನೆಯ ಮುಂದುಗದೆ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡಿರುವಾಗ್ಗೆ ಅವರ ಪಕ್ಕದ ಮನೆ ವಾಸಿ ಸುನಿಲ್ ಮತ್ತು ಅವನ ಜೊತೆಯಲ್ಲಿದ್ದ ಇಬ್ಬರು ಬಂದು ನಿಮ್ಮ ಮನೆಯ ಕೋಳಿಗಳು ನಮ್ಮ ಮನೆಯ ಮುಂದೆ ಗಲೀಜು ಮಾಡುತ್ತವೆ ಎಂದು ಜಗಳ ತೆಗೆದು ಅವಾಚ್ಯವಾಗಿ ಬೈದು ಕತ್ತಿಯಿಂದ ಮಹೇಶ್‌ರವರ ತಲೆಯ ಮದ್ಯಬಾಗಕ್ಕೆ ಕಡಿದು ರಕ್ತಗಾಯ ಪಡಿಸಿದನು. ನಂತರ ಆತನ ಜೊತೆಗಿದ್ದ ಇಬ್ಬರು ಕೈಯಿಂದ ಹೊಡೆದು ಕಾಲಿನಿಂದ ಒದ್ದು ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನಕ್ರಮ ಕೈಗೊಂಡಿದ್ದಾರೆ.

ಮನೆಯ ಬೀಗ ಮುರಿದು ನಗದು ಕಳವು:
     ಮಡಿಕೇರಿ ನಗರದ ಕೇಂದ್ರೀಯ ವಿದ್ಯಾಲಯದ ಬಳಿ ವಾಸವಾಗಿರುವ ಸುಲೋಚನ ಎಂಬವರು ದಿನಾಂಕ 03-06-2015 ರಂದು ಬೆಳಿಗ್ಗೆ 10.00 ಗಂಟೆಗೆ ತನ್ನ ಮೊಮ್ಮಗನನ್ನು ವಿರಾಜಪೇಟೆ ಸಂತ ಅಣ್ಣಮ್ಮ ಕಾಲೇಜಿನಲ್ಲಿ ಪಿ.ಯು.ಸಿ ವ್ಯಾಸಂಗಕ್ಕೆ ಸೇರಿಸಲು ಕರೆದುಕೊಂಡು ಹೋಗುವಾಗ ಮನೆಯ ಮಲಗುವ ಕೋಣೆಯ ಗಾಡ್ರೇಜ್‌ ಬೀರೋವಿನಲ್ಲಿ 15,000/= ರೂಪಾಯಿ ನಗದನ್ನು ಇಟ್ಟು ಮನೆಯ ಮುಂದಿನ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು, ವಾಪಾಸ್ಸು ಮದ್ಯಾಹ್ನ 3.00 ಗಂಟೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲು ತೆರೆದಿದ್ದು ಹಾಕಿದ ಬೀಗ ಇರಲಿಲ್ಲ. ನಂತರ ಮನೆಯ ಒಳಗೆ ಹೋಗಿ ನೋಡಿದಾಗ ಮಲಗುವ ರೂಮಿನಲ್ಲಿಟ್ಟಿದ್ದ ಗಾಡ್ರೇಜ್‌ ಬೀರೊವನ್ನು ಯಾರೋ ಕಳ್ಳರು ಒಡೆದು ಬಟ್ಟೆಗಳನ್ನು ಚಲ್ಲಾ ಪಿಲ್ಲಿ ಮಾಡಿ ಬೀರೋವಿನಲ್ಲಿಟ್ಟಿದ್ದ 15,000 ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಪುಕಾರಿಗೆ ಮಡಿಕೇರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಗಳ ಮುಖಾಮುಖಿ ಡಿಕ್ಕಿ:
     ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಕೀರ್ತಿಕುಮಾರ್‌ರವರು ತಮ್ಮ ಬಾಪ್ತು ಸ್ವರಾಜ್‌ ಮಜ್‌ದಾ ಲಾರಿಯಲ್ಲಿ ಕಾಫಿ ಮೂಟೆಗಳನ್ನು ತುಂಬಿಸಿಕೊಂಡು ಕುಶಾಲನಗರ ಕಡೆಗೆ ಹೋಗುತ್ತಿದ್ದಾಗ ಮಂಗಳೂರು ರಸ್ತೆಯಲ್ಲಿ ಮಡಿಕೇರಿ ನಗರದ ಕಡೆಯಿಂದ ಲಾರಿಯನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಕೀರ್ತಿಕುಮಾರ್‌ರವರ ಸ್ವರಾಜ್‌ ಮಜ್ದಾ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಲಾರಿ ಚಾಲಕ ಅನಿಲ್‌ ಗಾಯಗೊಂಡಿದ್ದು ಲಾರಿಗಳು ಜಖಂ ಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ 
     ಸೋಮವಾರಪೇಟೆ ತಾಲೋಕು ನಗರೂರು ಗ್ರಾಮದ ನಿವಾಸಿ ಶ್ರೀಮತಿ ರಾಜಮ್ಮ ನವರು ದಿನಾಂಕ 03.6.15 ರಂದು ಸಮಯ 07:00 ಎ.ಎಂಗೆ ಅವರ ಗಂಡ ರಂಗೇಗೌಡರವರೊಂದಿಗೆ ಅವರ ಮನೆಯ ಹತ್ತಿರ ಇರುವಾಗ ಅದೇ ಗ್ರಾಮದಉಮೇಶ, ಬಾನು, ಬೆಟ್ಟಯ್ಯರವರು ಅಲ್ಲಿಗೆ ಬಂದು ಹಳೇ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು, ರಂಗೇಗೌಡನವರ ಮೇಲೆ ಉಮೇಶನು ದೊಣ್ಣೆಯಿಂದ ಕೈಕಾಲಿಗೆ ಹೊಡೆದು , ಬಾಬು ಕೈಯಿಂದ ಹೊಡೆದು, ಬೆಟ್ಟಯ್ಯನು ಕಾಲಿನಿಂದ ಒದ್ದು ನೋವುಂಟುಪಡಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, June 2, 2015

ದಾರಿ ವಿಚಾರ, ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:

     ದಾರಿ ವಿಚಾರದಲ್ಲಿ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯ ದಾರಿ ತಡೆದು ಕತ್ತಿ ಮ್ತು ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ತಾಲೋಕು ನೀರುಗುಂದ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು, ನೀರುಗುಂದ ದ ಗ್ರಾಮದ ನಿವಾಸಿಯಾದ ಶ್ರೀಮತಿ ಈರಮ್ಮ ಹಾಗು ಅವರ ಪಕ್ಕದ ಮನೆಯ ನಿವಾಸಿ ಗಣೇಶ ಎಂಬುವರ ನಡುವೆ ದಾರಿಯ ವಿಚಾರದಲ್ಲಿ ವಿವಾದವಿದ್ದು, ಅದೇ ದ್ವೇಷದಿಂದ ದಿನಾಂಕ 1-6-2015 ರಂದು ಶ್ರೀಮತಿ ಈರಮ್ಮನವರು ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಗಣೇಶರವರು ರುಕ್ಮಿಣಿ, ಮಹೇಂದ್ರ, ಪುಟ್ಟಮ್ಮ ಮತ್ತು ಧನಂಜಯ ರವರುಗಳೊಂದಿಗೆ ಸೇರಿ ದಾರಿ ತಡೆದು ದಾರಿಯ ವಿಚಾರದಲ್ಲಿ ಜಗಳ ಮಾಡಿ ಈರಮ್ಮನವರ ಮೇಲೆ ಕೈಯಿಂದ ಮತ್ತು ಕತ್ತಿಯಿಂದ ಹಲ್ಲೆ ನಡೆಸಿ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ನಾಲ್ವರಿಂದ ವ್ಯಕ್ತಿ ಮೇಲೆ ಹಲ್ಲೆ:

     ಕ್ಷುಲ್ಲಕ ಕಾರಣಕ್ಕೆ  ನಾಲ್ಕು ಮಂದಿ ಇದ್ದ ಗುಂಪು  ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘನೆ ಮಡಿಕೇರಿ ನಗರದ  ಕಾವೇರಿ ಚಿತ್ರಮಂದಿರದ ಹತ್ತಿರ ನಡೆದಿದೆ.  ದಿನಾಂಕ 31-05-2015 ರಂದು ರಾತ್ರಿ 11.00 ಗಂಟೆಗೆ ಮಡಿಕೇರಿ ನಗರದ ಕಾವೇರಿಮಹಲ್ ಥಿಯೇಟರ್‌ನ ಪಕ್ಕದಲ್ಲಿ ಮಡಿಕೇರಿ ನಗರದ ತ್ಯಾಗರಾಜ ಕಾಲೋನಿ ನಿವಾಸಿ ಮಣಿ ಎಂಬವರು ಸಂಗಡಿಗರು ಮಾತನಾಡಿಕೊಂಡಿರುವಾಗ್ಗೆ ಅಲ್ಲಿಗೆ ಬಂದ ಪಿ.ಸಿ. ಜೀವನ್‌, ಸಿ. ಆಲ್ವಿನ್‌, ಎನ್‌. ಜಗದೀಶ ಮತ್ತು ಕೆ. ಜಯಪ್ರಕಾಶ ಬೆಂಕಿ ಪೊಟ್ಟಣದ ವಿಚಾರದಲ್ಲಿ ಮಣಿ ಹಾಗೂ ಸಂಗಡಿಗರನ್ನು ತಡೆದು ನಿಲ್ಲಿಸಿ ಜಗಳ ತೆಗೆದು ಮಣಿಯವರ ತಲೆಯ ಭಾಗಕ್ಕೆ ಪಂಚ್‌ನಿಂದ ಹಾಗೂ ಕಲ್ಲಿನಿಂದ ಗುದ್ದಿ ಗಾಯಪಡಿಸಿದ್ದಲ್ಲದೆ ತಡೆಯಲು ಬಂದ ಕುಮಾರಸ್ವಾಮಿ ಎಂಬವರಿಗೆ ಕೈಯ್ಯಿಂದ ಹೊಡೆದು ಚಾಕುವಿನಿಂದ ತಿವಿದು ಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ಮಣಿರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರದ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, June 1, 2015

ಕಲ್ಲುಕೊರೆ ಸಿಡಿದು ವ್ಯಕ್ತಿಗೆ ಗಾಯ:

     ಕಲ್ಲುಕೋರೆಯಿಂದ ಸಿಡಿದ ಕಲ್ಲೊಂದು ವ್ಯಕ್ತಿಯೊಬ್ಬರ ಮನೆಯ ಮೇಲೆ ಬಿದ್ದು ಮನೆಯ ಶೀಟ್‌ ಒಡೆದು ಹಾನಿಯಾಗಿದ್ದು ಅಲ್ಲದೆ ಮನೆಯೊಳಗೆ ಇದ್ದ ವ್ಯಕ್ತಿಯ ತಲೆ ಕೈಗಳಿಗೆ ಗಾಯವಾದ ಘಟನೆ ಸೋಮವಾರಪೇಟೆ ತಾಲೋಕು ಯಲಕನೂರು ಗ್ರಮದಲ್ಲಿ ನಡೆದಿದೆ. ದಿನಾಂಕ 30-05-2015 ರಂದು ಸಮಯ 18.00 ಗಂಟೆಗೆ ಯಲಕನೂರು ಗ್ರಾಮದ ನಿವಾಸಿ ಕೆ.ಜೆ. ಪ್ರಸನ್ನ ಎಂಬವರು ತಮ್ಮ ತಂದೆ ಜೋಯಪ್ಪನವರೊಂದಿಗೆ ತಮ್ಮ ಮನೆಯಲ್ಲಿ ಇರುವಾಗ ಮನೆಯ ಪಕ್ಕದಲ್ಲಿ ವಿಜಯ ಎಂಬವರಿಗೆ ಸೇರಿದ ಕಲ್ಲು ಕೋರೆಯಿಂದ ನಿರ್ಲಕ್ಷ್ಯತನ ಹಾಗು ಯಾವುದೇ ಮುನ್ನೆಚ್ಚರಿಕೆ ನೀಡದೆ ಮುಂಜಾಗ್ರತೆ ವಹಿಸದೆ ಡೈನಮೈಟ್ ಸಿಡಿಸಿ ಕಲ್ಲು ಒಡೆಯುತ್ತಿದ್ದುದರಿಂದ ಸದರಿ ಕಲ್ಲುಕೋರೆಯಿಂದ ಕಲ್ಲು ಸಿಡಿದು ಒಂದು ಕಲ್ಲು ಕೆ.ಜೆ. ಪ್ರಸನ್ನರವರ ಮನೆಯ ಮೇಲೆ ಬಿದ್ದು, ಮನೆಯ ಶೀಟ್ ಒಡೆದು ಮನೆಯ ಒಳಗಡೆ ಅಡುಗೆ ಕೋಣೆಯಲ್ಲಿ ಇದ್ದ ಜೋಯಪ್ಪ ರವರ ತಲೆಗೆ ಮತ್ತು ಎಡಕೈಗೆ ಗಾಯವಾಗಿದ್ದು, ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲುಪಡಿಸಲಾಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬೈಕ್‌ ಡಿಕ್ಕಿ, ಸವಾರರಿಬ್ಬರಿಗೆ ಗಾಯ:

      ಮೋಟಾರ್‌ ಸೈಕಲೊಂದು ‌ ಕಾರಿಗೆ ಡಿಕ್ಕಿಯಾದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಮತ್ತು ಹಿಂಬದಿ ಸವಾರ ಗಾಯಗೊಂಡು ಕಾರು ಜಖಂ ಗೊಂಡಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 31-5-2015 ರಂದು ಸಂಜೆ 8-00 ಪಿಎಂ.ಗೆ ಮಡಿಕೇರಿ ನಿವಾಸಿ ಲಾಯಡ್‌ ಎಂಬ ಯುವಕ ತನ್ನ ಆರ್‌-15 ಮೋಟಾರ್‌ ಸೈಕಲ್‌ನಲ್ಲಿ ತನ್ನ ಸ್ನೇಹಿತನೊಂದಿಗೆ ಮಡಿಕೇರಿ ನಗರದ ಜಿ.ಟಿ. ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರೊಂದಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಲಾಯಡ್‌ ಹಾಗು ಹಿಂಬದಿ ಸವಾರ ಗಾಯಗೊಂಡಿದ್ದು, ಅಲ್ಲದೆ ಈ ಅಪಘಾತದಲ್ಲಿ ಕಾರು ಸಹ ಜಖಂ ಗೊಂಡಿರುವುದಾಗಿ ಕಡಗದಾಳು ಗ್ರಾಮದ ನಿವಾಸಿ ಹೆಚ್‌.ಎಸ್‌. ಬಿದ್ದಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನಲೆ, ದಾರಿ ತಡೆದು ಕೊಲೆ ಬೆದರಿಕೆ:
     ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬೇರೆ ಅಭ್ಯರ್ಥಿಯ ಪರ ಪ್ರಚಾರ ಮಾಡಿದ ಕಾರಣದ ಮೇಲೆ ದಾರಿ ತಡೆದು ವ್ಯಕ್ತಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಸೋಮವಾರಪೇಟೆ ತಾಲೋಕು ಕುಂಬೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 31-05-2015 ರಂದು ಬೆಳಿಗ್ಗೆ ಸಮಯ 10.30 ಗಂಟೆಗೆ ಕುಂಬೂರು ಗ್ರಾಮದ ನಿವಾಸಿ ಎ.ಪಿ. ಧರ್ಮಪ್ಪ ಎಂಬವರು ಕುಂಬೂರು ಗ್ರಾಮದ ಹೋಟೇಲ್‌ವೊಂದರಲ್ಲಿ ಕಾಫಿ ಕುಡಿಯುತ್ತಿರುವಾಗ್ಗೆ, ಆರೋಪಿ ಎನ್‌.ಎನ್‌. ಪ್ರಸನ್ನ ಎಂಬವರು ಅಲ್ಲಿಗೆ ಸ್ಕೂಟರ್‌ನಲ್ಲಿ ಬಂದು ಎ.ಪಿ. ಧರ್ಮಪ್ಪನವರನ್ನು ಉದ್ದೇಶಿಸಿ ಚುನಾವಣೆ ಸಂದರ್ಭದಲ್ಲಿ ಭಾಸ್ಕರ್‌ರವರ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದೀಯಾ, ನನಗೆ ನೀನು ಮತ ಹಾಕದೆ ಮೋಸ ಮಾಡಿದ್ದೀಯಾ ಎಂದು ಜಗಳ ತೆಗೆದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಸದರಿ ಧರ್ಮಪ್ಪನವರನ್ನು ಹಿಡಿದು ತಳ್ಳಿ ಚುನಾವಣಾ ಪಲಿತಾಂಶ ಬರಲಿ ಆಗ ನಿನ್ನನ್ನು ನನ್ನ ಮನೆಯಲ್ಲಿರುವ ಕೋವಿಯಿಂದ ನನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಕೊಟ್ಟ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಖೆ ಕೈಗೊಂಡಿದ್ದಾರೆ.

ಸ್ಕೂಟರಿಗೆ ಬಸ್‌ ಡಿಕ್ಕಿಇಬ್ಬರಿಗೆ ಗಾಯ:

     ಸ್ಕೂಟರಿಗೆ ಕೆ.ಎಸ್‌.ಆರ್‌.ಟಿ.ಸಿ ಬಸ್ಸೊಂದು ಡಿಕ್ಕಿಯಾಗಿ ಸ್ಕೂಟರ್‌ ಸವಾರರಿಬ್ಬರು ಗಾಯಗೊಂಡ ಘಟನೆ ಮಡಿಕೇರಿ ನಗರದ ಮೈಸೂರು ರಸ್ತೆ ಕಾಮಧೇನು ಪೆಟ್ರೋಲ್‌ಬಂಕ್‌ ಬಳಿ ಸಂಭವಿಸಿದೆ. ದಿನಾಂಕ 31-5-2015 ರಂದು ಸೋಮವಾರೆಪೇಟೆ ತಾಲೋಕು ಗರ್ವಾಲೆ ಗ್ರಾಮದ ನಿವಾಸಿ ಬಾಚಳೀರ ಪೊನ್ನಪ್ಪ ಎಂಬವರು ಆನಂದ್‌ ಎಂಬವರೊಂದಿಗೆ ತಮ್ಮ ಸ್ಕೂಟರ್‌ನಲ್ಲಿ ಮಡಿಕೇರಿ ನಗರದಿಂದ ಗರ್ವಾಲೆ ಕಡೆಗೆ ಹೋಗುತ್ತಿರುವಾಗ್ಗೆ ನಗರದ ಮೈಸೂರು ರಸ್ತೆಯ ಕಾಮಧೇನು ಪೆಟ್ರೋಲ್‌ ಬಂಕ್‌ ಬಳಿ ಹಿಂದಿನಿಂದ ಬಂದ ಕೆ.ಎಸ್‌.ಆರ್‌.ಟಿ.ಸಿ ಬಸ್‌ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್‌ರಸ್ತೆಗೆ ಮಗುಚಿ ಬಿದ್ದು ಸ್ಕೂಟರ್‌ ಸವಾರ ಪೊನ್ನಪ್ಪ ಹಾಗು ಹಿಂಬದಿ ಸವಾರ ಆನಂದ ರವರುಗಳು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಟ್ರಾಫಿಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.