Friday, July 31, 2015

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

     ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ತಾಲೋಕು ಕಾಕೂರು ಗ್ರಾಮದಲ್ಲಿ ನಡೆದಿದೆ. ಕುಮಟೂರು ಗ್ರಾಮದ ಕೊಟ್ಟಂಗಡ ಎಸ್‌.ದೇವಯ್ಯ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಕಾವೇರಿ ಎಂಬವರ ಪತಿ ಕರ್ಪ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29-7-2015 ರಂದುನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಅಪಘಾತ:

    ಲಾರಿಯೊಂದು ಅಪಘಾತಕ್ಕೀಡಾಗಿ ಲಾರಿಯಲ್ಲಿ ತುಂದಿಸಿದ್ದ ಮಾರ್ಬೆಲ್‌ ಗಳು ಹಾನಿಗೀಡಾದ ಘಟನೆ ಮಡಿಕೇರಿ ಸಮೀಪದ ಜೋಡುಪಾಲ ಬಳಿ ನಡೆದಿದೆ. ದಿನಾಂಕ 29-7-2015 ರಂದು ಬೆಳಿಗ್ಗೆ 4-30 ಗಂಟೆಗೆ ಮಾದಯ್ಯನ್‌ ಎಂಬವರು ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಮಾರ್ಬೆಲ್‌ ತುಂಬಿದ ಲಾರಿಯನ್ನು ಚಾಲಿಸಿಕೊಂಡು ಹೋಗುತ್ತಿರುವಾಗ ಜೋಡುಪಾಲ ಸಾರ್ವಜನಿಕ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಮಗುಚಿ ಬಿದ್ದು, ಲಾರಿಯಲ್ಲಿ ತುಂಬಿಸಿದ್ದ ಮಾರ್ಬೆಲ್‌ಗಳು ಹಾನಿಗೊಳಗಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕಿ ಮೇಲೆಅತ್ಯಾಚಾರ:

    ವಿರಾಜಪೇಟೆ ತಾಲ್ಲೂಕು ಕೋಣನಕಟ್ಟೆ ಗ್ರಾಮದ ರೂಬಿ ಎಸ್ಟೇಟ್‌ನಲ್ಲಿ ವಾಸವಿರುವ ಶಿವು ಎಂಬುವವರ ಮಗಳಾದ ಸೋನಿಯ ಎಂಬ 13 ವರ್ಷದ ಅಪ್ರಾಪ್ತ ಬಾಲಕಿಯು ಅದೇ ಗ್ರಾಮದ ಕುಮಾರ ಎಂಬುವವನಿಂದ ಅತ್ಯಾಚಾರಕ್ಕೊಳಗಾಗಿ ಒಂದೂವರೆ ತಿಂಗಳು ಗರ್ಭಿಣಿಯಾಗಿರುತ್ತಾಳೆ ಎಂದು ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ದಿ:29.7.2015 ರಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆಕೈಗೊಂಡಿರುತ್ತಾರೆ.

ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ನಿಂದನೆ:

    ದಿನಾಂಕ 30-07-2015 ರಂದು ಶ್ರೀಮಂಗಲ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ ನಡೆಸಿದ್ದು, ಸದ್ರಿ ಗ್ರಾಮ ಸಭೆಗೆ ಅಗಮಿಸಿದ್ದ ಎಂ.ಟಿ. ಕಾರ್ಯಪ್ಪ ಮತ್ತು ಇತರರು ಗ್ರಾಮ ಪಂಚಾಯಿತಿ ಅದ್ಯಕ್ಷಕರಿಗೆ ಮತ್ತು ಇತರ ಗ್ರಾಮಸ್ಥರಿಗೆ ಅವ್ಯಾಚ ಶಬ್ದಗಳಿಂದ ¨ನಿಂದಿಸಿ ಅದ್ಯಕ್ಷಕರಿಗೆ ಮತ್ತು ಪಿ.ಡಿ.ಒ ರವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ಶ್ರೀಮತಿ ಎ.ಎನ್. ಮುತ್ತಮ್ಮ , ಗ್ರಾಮ ಪಂಚಾಯಿತಿ ಅದ್ಯಕ್ಷರು, ಶ್ರೀಮಂಗಲ ಇವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರದಿಂದ ಬಿದ್ದು ವ್ಯಕ್ತಿ ದುರ್ಮರಣ:

    ದಿನಾಂಕ 30-7-2015 ರಂದು ಕುಟ್ಟ ಪೊಲೀಸ್‌ ಠಾಣಾ ಸರಹದ್ದಿನ ಕೆ. ಬಾಡಗ ಗ್ರಾಮದ ವಾಸಿ ಕಳ್ಳೆಂಗಡ ಬೋಸ್‌ ಬೋಪಯ್ಯನವರ ಲೈನು ಮನೆಯಲ್ಲಿ ವಾಸವಾಗಿದ್ದ ಪಣಿ ಎರವರ ಚೋಮ ಎಂಬವರು ಮರಕ್ಕೆ ಹತ್ತಿ ಕೆಲಸ ಮಾಡುತ್ತಿದ್ದಾದ ಆಕಸ್ಮಿಕ ಕೆಳಗೆ ಬಿದ್ದು, ಗಂಭೀರ ಗಾಯಗೊಂಡು ಚಿಕಿತ್ಸೆ ಸಮಯದಲ್ಲಿ ಮೃತಪಟ್ಟಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗಿ ಕಾಣೆ, ಪ್ರಕರಣ ದಾಖಲು:

    ಗೋಣಿಕೊಪ್ಪ ಠಾಣಾ ಸರಹದ್ದಿನ ಬಾಳಾಜಿ ಗ್ರಾಮದ ನಿವಾಸಿ ಬಿ.ಎಸ್‌. ಸುನಿಲ್‌ ಎಂಬವರ ಮಗಳಾದ ರಮ್ಯಾ ಎಂಬಾಕೆ ದಿನಾಂಕ 29-7-2015 ರಂದು ಎಂದಿನಂತೆ ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು  ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ರಾಜೇಶ್‌, ಆಟೋ ಚಾಲಕ, ಸುಂಟಿಕೊಪ್ಪ ಎಂಬಾತ  ರಮ್ಯಾಳನ್ನು ಅಪಹರಿಸಿರಬಹುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Thursday, July 30, 2015

ಹಳೆ ವೈಷಮ್ಯ, ವ್ಯಕ್ತಿಯ ಮೇಲೆ ಹಲ್ಲೆ
                  ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ರಿಕ್ಷಾವನ್ನು ಜಖಂಗೊಳಿಸಿದ ಘಟನೆ ಸೋಮವಾರಪೇಟೆ ಬಳಿಯ ಭುವಂಗಾಲದಲ್ಲಿ ನಡೆದಿದೆ. ದಿನಾಂಕ 29.07.2015 ರಂದು ಬಾಣಾವರ ನಿವಾಸಿ ಭಾನುಮೂರ್ತಿ ಎಂಬವರು  ಅವರ ಆಟೋ ರಿಕ್ಷಾಕ್ಕೆ ಡೀಸೆಲ್‌ ಹಾಕಿಸಲು ಆಲೂರಿಗೆ ಹೋಗುತ್ತಿರುವಾಗ ಭುವಂಗಾಲ ಗ್ರಾಮದ ಹತ್ತಿರ ಸುಮೇಶ ಮತ್ತು ಆತನ ಸ್ನೇಹಿತರು ಆಟೋ ರಿಕ್ಷಾವನ್ನು ತಡೆದು ಹಳೆಯ ವೈಮನಸ್ಸಿನಿಂದ ದೊಣ್ಣೆಯಿಂದ ಕೈಗೆ ಹೊಡೆದು, ಕಲ್ಲಿನಿಂದ ಆಟೋ ರಿಕ್ಷಾದ ಮುಂದಿನ ಗ್ಲಾಸನ್ನು ಒಡೆದುಹಾಕಿ 4,000/- ರೂಗಳಷ್ಟು ನಷ್ಟಪಡಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೋಟಾರು ಬೈಕಿಗೆ ಸ್ಕೂಟರ್‌ ಡಿಕ್ಕಿ
             ಮೋಟಾರು ಬೈಕಿಗೆ ಸ್ಕೂಟರೊಂದು ಡಿಕ್ಕಿಯಾದ ಪರಿಣಾಮ ಬೈಕು ಸವಾರನಿಗೆ ಗಾಯಗಳಾದ ಘಟನೆ ಕುಶಾಲನಗರ ಬಳಿಯ ಕೂಡಿಗೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 28-07-2015ರಂದು ಕೂಡಿಗೆ ನಿವಾಸಿ ಯೋಗೇಶ್‌ ಕುಮಾರ್‌ ಎಂಬವರು  ಸ್ವಂತ ಕೆಲಸದ ನಿಮಿತ ಕೂಡಿಗೆ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೂಡಿಗೆಯ ನ್ಯೂ ಸ್ಟಾರ್ ಹೋಟೆಲ್ ನ ಮುಂದೆ ಒಂದು ಮೋಟಾರ್ ಬೈಕ್ ನ್ನು ಅದರ ಚಾಲಕ ಟಾಟಾ ಕಾಫಿ ವರ್ಕ್ಸ ಕಡೆಗೆ ಇಂಡಿಕೇಟರ್ ಹಾಕಿ ತಿರುಗಿಸುತ್ತಿದ್ದಾಗ ಅದರ ಹಿಂದಿನಿಂದ ಬಂದ ಕೆಎ-12-ಎಲ್‌-9318ರ ಸ್ಕೂಟಿಯ ಚಾಲಕಿ ಅನಿತಾ ಎಂಬವರು ಸ್ಕೂಟಿಯನ್ನು ಅತಿ ವೇಗ ಮತ್ತು ದುಡುಕಿನಿಂದ ಚಾಲನೆ ಮಾಡಿ ಏಕಾಏಕಿ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ನ ಸವಾರ ಕೆಳಗೆ ಬಿದ್ದು ಹೋದರು. ಕೂಡಲೇ ಯೋಗೇಶ್‌ರವರು ಹೋಗಿ ನೋಡಲಾಗಿ ಬೈಕ್ ನಂ ಕೆಎ-09-ಇಎನ್-6286 ಆಗಿದ್ದು ಅದರ ಚಾಲಕ  ವಸಂತ್ ಕುಮಾರ್ ಎಂಬವರಾಗಿದ್ದು, ಅವರ ಬಲಕಾಲಿನ ಮಂಡಿಗೆ ಗಾಯ ನೋವಾಗಿದ್ದು, ಅವರನ್ನು ಗುರುಪ್ರಸಾದ್ ಎಂಬವರು ಚಿಕಿತ್ಸೆ ಬಗ್ಗೆ ಹಾಸನಕ್ಕೆ ಕರೆದುಕೊ0ಡು ಹೋಗಿರುವುದಾಗಿದೆ ಎಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸಿಲಿಂಡರ್‌ ಕಳವು 
                   ಅಂಗನವಾಡಿ ಕೇಂದ್ರವೊಂದರ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಗ್ಯಾಸ್‌ ಸಿಲಿಂಡರನ್ನು ಕಳವು ಮಾಡಿದ ಘಟನೆ ಶನಿವಾರಸಂತೆ ಬಳಿಯ ಮೂದರವಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 28/07/2015ರ ರಾತ್ರಿ ವೇಳೆ ಮೂದರವಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಯಾರೋ ಕಳ್ಳರು ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಕೇಂದ್ರದೊಳಗಿದ್ದ ರೂ.3,000 ಬೆಲೆಯ  ಗ್ಯಾಸ್‌ ಸಿಲಿಂಡರನ್ನು ಕಳವು ಮಾಡಿರುವುದಾಗಿ ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿಯವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Wednesday, July 29, 2015

ಮೋಟಾರ್‌ ಸೈಕಲ್‌ಗೆ ಲಾರಿ ಡಿಕ್ಕಿ ಸವಾರನ ದುರ್ಮರಣ:

      ಕುಶಾಲನಗರ ಠಾಣಾ ವ್ಯಾಪ್ತಿಯ ಸುಂದರನಗರದಲ್ಲಿ ವಾಸಗಿರುವ ಶ್ರೀಮತಿ ಸುಶೀಲಾ ಎಂಬವರ ಪತಿ ಭೀಮಯ್ಯ @ ರಾಜ ಎಂಬವರು ದಿನಾಂಕ 27-7-2015 ರಂದು ರಾತ್ರಿ 11-30 ಗಂಟೆಗೆ ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮರ ತುಂಬಿಸಿದ ಲಾರಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನಪ್ಪಿದ್ದು, ಈ ಸಂಬಂಧ ಶ್ರೀಮತಿ ಸುಶೀಲಾರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ:

     ಅಸ್ಸಾಂ ಮೂಲದವರು ಎನ್ನಲಾದ ಭಾಗಿನ್‌ ಹಾಗು ಸಂಗಡಿಗರು ಶ್ರೀಮಂಗಲ ಠಾಣಾ ಸರಹದ್ದಿನ ಹೈಸೊಡ್ಲೂರು ಗ್ರಾಮದಲ್ಲಿ ಪೂಣಚ್ಚ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದು ಅವರ ಪೈಕಿ ಚಂದನ್‌ ಬುಮೇಶ್‌ ಎಂಬವರ ಪತ್ನಿ ದುಲಾರಿ ಎಂಬಾಕೆಯು ದಿನಾಂಕ 27-7-2015 ರಂದು ರಾತ್ರಿ 8-00 ಗಂಟೆಗೆ ಯಾವುದೋ ವಿಚಾರಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶ್ರೀಮಂಗಲ ಪೊಲೀಸರು ಠಾಣೆಯಲ್ಲಿ ಪ್ರಕರಣದ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಅಂಗಡಿಗೆ ನುಗ್ಗಿ ಕಳ್ಳತನ: 

    ದಿನಾಂಕ 28-07-15 ರಂದು ಸುಂಟಿಕೊಪ್ಪ ನಗರದಲ್ಲಿ ಶ್ರೀ ರಮೇಶ್‌ ಎಂಬವರು ಹೋಂ ವರ್ಲ್ಡ್ ಎಲೆಕ್ಟ್ರಾನಿಕ್ಸ್‌ ಅಂಗಡಿಯನ್ನು ಇಟ್ಟುಕೊಂಡಿದ್ದು, ದಿನಾಂಕ 27-07-2015 ರಂದು ಸಂಜೆ 20-15 ಗಂಟೆಗೆ ಸದರಿಯವರು ಅಂಗಡಿದಗೆ ಬೀಗ ಹಾಕಿ ತನ್ನ ಮನೆಗೆ ತೆರಳಿದ್ದು ಈ ದಿನ 29-7-2015 ರ ಬೆಳಿಗ್ಗೆ 9-15 ಗಂಟೆಗೆ ಬಂದು ಅಂಗಡಿ ಬಾಗಿಲು ತೆಗೆದಾಗ ಅಂಗಡಿಯ ಹಿಂಬಾಗದ ವೆಂಟಿಲೇಟರ್ ರಾಡನ್ನು ಮುರಿದು ಒಳಗೆ ನುಗ್ಗಿದ ಕಳ್ಳ್ರು ಅಂಗಡಿಯಲ್ಲಿದ್ದ ಸುಮಾರು 11 ಎಲ್.ಇ.ಡಿ. ಟಿ.ವಿ. ಮತ್ತು ಇತರ ಕಲವು ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಸದರಿ ರಮೇಶ್‌ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆಕೈಗೊಂಡಿದ್ದಾರೆ.  

ಸಹಕಾರ ಬ್ಯಾಂಕ್‌ನ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನ:

     ದಿನಾಂಕ 26-07-2015 ರ ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 27-07-2015 ರ ಬೆಳಿಗ್ಗೆ 09.30 ಗಂಟೆಯ ಮಧ್ಯದ ಅವಧಿಯಲ್ಲಿ ಮಡಿಕೇರಿ ನಗರದ ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌ನ ಮುಂಭಾಗದ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ನುಗ್ಗಿ ದಾಖಲಾತಿಗಳನ್ನು ಎಳೆದು ಹಾಕಿ ಕಪಾಟನ್ನು ತೆರೆದು ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿ ಸಂಘಡ ವ್ಯವಸ್ಥಾಪಕರಾದ ಶ್ರೀಮತಿಶೈಲಿ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪತಿಯಿಂದ ಪತ್ನಿಯ ಕೊಲೆ:

    ಪೊನ್ನಂಪೇಟೆ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದ ತಟ್ಟೆಕೆರೆ ಹಾಡಿಯಲ್ಲಿ ವಾಸವಾಗಿರುವ ರಾಜು ಎಂಬ ವ್ಯಕ್ತಿ ತನ್ನ ಪತ್ನಿ ಸಣ್ಣಮ್ಮ ಎಂಬಾಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದು, ಸಣ್ಣಮ್ಮಳ ಅಣ್ಣ ಜೆ.ಎಂ. ರಾಮ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Tuesday, July 28, 2015

ದೂರವಾಣಿ ಮೂಲಕ ನಿಂದನೆ ಕೊಲೆ ಬೆದರಿಕೆ:

      ಶ್ರೀಮತಿ ಟಿ.ಎ.ರತ್ನಪ್ರಭ, ವಲಯ ಅರಣ್ಯ ಅಧಿಕಾರಿ, ಮಾಕುಟ್ಟ ವಲಯ ವಿರಾಜಪೇಟೆ ಇವರು ವಿರಾಜಪೇಟೆ ನಗರದ ನಿರ್ಸಗ ಬಡಾವಣೆಯಲ್ಲಿ ವಾಸವಾಗಿದ್ದು ದಿ 25-07-2015 ರಂದು ರಾತ್ರಿ 09-35 ಗಂಟೆಗೆ ಮತ್ತು 27-07-2015 ರಂದು ಬೆಳಿಗ್ಗೆ 09-50 ಗಂಟೆಗೆ ಸದರಿಯವರ ಬಾಪ್ತು ಮೊಬೈಲ್ ನಂ 9448604942 ಗೆ ಆರೋಪಿಗಳಾದ ಮೋಹನ್‌ ಮತ್ತು ಸುನಂದ ಎಂಬವರು ತಮ್ಮ ಮೊಬೈಲ್‌ ದೂರವಾಣಿ ಮೂಲಕ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ‘ನಿನ್ನನ್ನು ಎಲ್ಲರ ಎದುರು ರೇಪ್ ಮಾಡುವುದಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದ್ವೇಷದ ಹಿನ್ನೆಲೆ, ವ್ಯಕ್ತಿಯ ಮೇಲೆ ಹಲ್ಲೆ:

     ವಿರಾಜಪೇಟೆ ತಾಲೋಕು ತೂಚಮಕೇರಿ ಗ್ರಾಮದ ನಿವಾಸಿ ಕೆ.ಎಂ. ಗಣಪತಿ ಎಂಬವರು ದಿನಾಂಕ 27-7-2015 ರಂದು ಬೆಳಗ್ಗೆ 11-00 ಗಂಟೆಯ ಸಮಯದಲ್ಲಿ ಪೊನ್ನಂಪೇಟೆ ನಗರದ ಅಯ್ಯಂಗೇರಿ ಬೇಕರಿ ಹತ್ತಿರ ನಿಂತುಕೊಂಡಿರುವಾಗ್ಗೆ ಬಲ್ಯಮಂಡೂರು ಗ್ರಾಮದ ಮಾಚಿಮಾಡ ಸುಬ್ರಮಣಿ ಎಂಬವರು ಅಲ್ಲಿಗೆ ಕಾರಿನಲ್ಲಿ ಬಂದು ಹಳೇ ದ್ವೇಷದಿಂದ ಕಾರಿನ ಜಾಕಿ ರಾಡಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆಕೈಗೊಂಡಿದ್ದಾರೆ.

ಪರಸ್ಪರ ಕಾರುಗಳ ಡಿಕ್ಕಿ, ಹಾನಿ:

     ಬೆಂಗಳೂರು ನಿವಾಸಿ ಸುಧಾಕರ ಜಿ ಪವರ್‌ ಎಂಬವರು ದಿನಾಂಕ 27-07-2015 ರಂದು ಮಂಗಳೂರಿನಿಂದ ಹೊರಟು ಮಡಿಕೇರಿ ಮಾರ್ಗವಾಗಿ ಬೆಂಗಳೂರಿಗೆ ಹೊಗುವ ಸಮಯದಲ್ಲಿ ಸಮಯ ಸುಮಾರು 10.45 ಎ.ಎಂಗೆ ಮಡಿಕೇರಿ ಬಳಿಯ ದೇವರಕೊಲ್ಲಿ ತಿರುವು ಬಳಿ ತಲುಪುವಾಗ್ಗೆ ಎದುರು ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರುಕತೆಯಿಂದ ಚಾಲಿಸಿಕೊಂಡು ಬಂದು ಸುಧಾಕರರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ಕಾರುಗಳುಜಖಂ ಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, July 27, 2015

ದಾರಿ ತಡೆದು ವ್ಯಕ್ತಿ ಗೆ ಜೀವ ಬೆದರಿಕೆ: 

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ರುದ್ರಗುಪ್ಪೆ ಗ್ರಾಮದ ನಿವಾಸಿ ಅಟ್ರಂಗಡ ಪಿ. ಉತ್ತಯ್ಯ ಎಂಬವರನ್ನು ದಿನಾಂಕ 26-7-2015 ರಂದು ಅವರ ಮನೆಯ ಮುಂದುಗಡೆ ಅದೇ ಗ್ರಾಮದ ನಿವಾಸಿಗಳಾದ ಅಟ್ರಂಗಡ ರೋಷನ್‌ ಮತ್ತು ದರ್ಶನ್‌ಎಂಬವರು ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿ ದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ: 

    ಸೋಮವಾರಪೇಟೆ ಠಾಣಾ ಸರಹದ್ದಿನ ನೇಗಳ್ಳಿ ಗ್ರಾಮದ ನಿವಾಸಿ ದಿವಾಕರ್‌ ಎಂಬವರು ದಿನಾಂಕ 26-7-2015 ರಂದು ಮೇಘ ಎಂಬವರ ಮನೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಅದೇ ಗ್ರಾಮದ ಹರೀಶ್‌ ಎಂಬವರು ವಿನಾಕಾರಣ ಅವರ ದಾರಿ ತಡೆದು ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಹಿಳೆಗೆ ಕೊಲೆ ಬೆದರಿಕೆ:

     ಸೋಮವಾರ ಪೇಟೆ ತಾಲೋಕು ಹರಗ ಗ್ರಾಮದ ನಿವಾಸಿ ಶ್ರೀಮತಿ ರುಕ್ಮಿಣಿ ಎಂಬವರು ದಿನಾಂಕ 08-07-2015 ರಂದು ಬೆಳಿಗ್ಗೆ 9:30 ಗಂಟೆಗೆ ಅಂಗನವಾಡಿ ಕರ್ತವ್ಯಕ್ಕೆ ಹೋಗುತ್ತಿರುವ ಸಮಯ ದಲ್ಲಿ ಆರೋಪಿಳಾದ ಜೋಯಪ್ಪ, ಸತೀಶ ಹಾಗು ಜಯಂತಿ ಎಂಬವರು ಶ್ರೀಮತಿ ರುಕ್ಮಿಣಿರವರಿಗೆ ಸೇರಿದ ಜಾಗದ ಬೇಲಿಯನ್ನು ಕಡಿಯುತ್ತದ್ದು, ಇದನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ನೀನು ಜಾಸ್ತಿ ಮಾತನಾಡಿದರೆ ನಿನ್ನನ್ನು ರೇಪ್ ಮಾಡುವುದಾಗಿ ಹೇಳಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನ್ಯಾಯಾಲಯಕ್ಕೆ ದೂರನ್ನು ನೀಡಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ವಾಹನ ಅಪಘಾತ ಚಾಲಕನ ಸಾವು:

     ಪಿರಿಯಾಪಟ್ಟಣ ತಾಲೋಕು ದೋರೆಕೆರೆ ರಾವಂದೂರು ಗ್ರಾಮದ ನಿವಾಸಿ ಡಿ.ಕೆ. ರವಿ ಎಂಬವರ ದಿನಾಂಕ 26-7-2105 ರಂದು 407 ಗೂಡ್ಸ್‌ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ತ್ಯಾಗತ್ತೂರು ಎಂಬಲ್ಲಿ ಅಪಘತಕ್ಕೀಡಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿಮೃತಪಟ್ಟಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, July 25, 2015

ಜೂಜು, ಆರೋಪಿಗಳ ವಿರುದ್ದ ಪ್ರಕರಣ:

     ದಿನಾಂಕ 24/07/2015 ರಂದು ಗೋಣಿಕೊಪ್ಪ ವತ್ತ ನಿರೀಕ್ಷಕರಿಗೆ ದೊರೆಕ ಖಚಿತ ವರ್ತಮಾನದ ಮೇರೆಗೆ ಗೋಣಿಕೊಪ್ಪ ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಯವರೊಂದಿಗೆ ಗೋಣಿಕೊಪ್ಪ ಮಾರ್ಕೆಟ್ ನ ಗುಜರಿ ಅಂಗಡಿ ಮುಂದುಗಡೆ ಇರುವ ಕಾಡಿನಲ್ಲಿ ಸರ್ಕಾರದ ಪರವಾನಗಿ ಇಲ್ಲದೇ 1990 ರೂಪಾಯಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ 52 ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿದ್ದ ಕೆ ಪಳನಿ ಸ್ವಾ, ಆರ್. ರವಿ, ರಾಘವೇಂದ್ರ, ಶಿವಕುಮಾರ ಮತ್ತು ಕುಮಾರ ಎಂಬವರ ಮೇಲೆ ದಾಳಿ ಮಾಡಿ ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಕ್ಷುಲ್ಲಕ ಕಾರಣ ಬಸ್‌ ನಿರ್ವಾಹಕರ ಮೇಲೆ ವ್ಯಕ್ತಿಗಳಿಂದ ಹಲ್ಲೆ: 

     ದಿನಾಂಕ 14-07-2015 ರಂದು ಸಮಯ 4-30 ಪಿ.ಎಂಗೆ ಯುವ್ರಾಜ ರಾಥೋಡ್‌, ಬಸ್‌ ನಿರ್ವಾಹಕ, ಹುಣಸೂರು ಘಟಕ ಇವರು ಕೆಎ 09 ಎಫ್ 4724 ರಲ್ಲಿ ಪ್ರಯಾಣಿಕರನ್ನು ಮೈಸೂರಿನಿಂದ ಕುಶಾಲನಗರಕ್ಕೆ ಕರೆತರುವಾಗ ಟಾಪ್ ಇನ್ ಟೌನ್ ಹೋಟೆಲ್ ಮುಂಬಾಗ ಬರುವಾಗ ಅಜಾದ್ ಮತ್ತು ಶಿಬಿಲ್ ರವರು ನಾವು ಮಂಗಳೂರಿಗೆ ಹೋಗಬೇಕು ಎಂದು ಕೇಳಿದ್ದು, ಅವರನ್ನು ನೀವು ಕುಶಾಲನಗರದಲ್ಲಿ ಇಳಿದು ಬೇರೆ ಬಸ್ ಗೆ ಮಂಗಳೂರಿಗೆ ಹೋಗಬಹುದೆಂದು ಬಸ್‌ ನಿರ್ವಾಹಕ ರಾಥೋಡ್‌ರವರು ಹೇಳಿದ್ದು ಇದರಿಂದ ಶಿಬಿಲ್ ಎಂಬುವರು ಕೈಯಿಂದ ರಾಥೋಡ್‌ರವರ ಕೆನ್ನೆಗೆ ಹೊಡೆದಿದ್ದು, ನಂತರ ಅಲ್ಲೇ ಇದ್ದ ಅಜಾದ್ ಎಂಬುವರು ಅವಾಚ್ಯಶಬ್ದಗಳಿಂದ ನಿಂದಿಸಿ ಚಾಚುವಿನಿಂದತಿವಿದುಗಾಯಪಡಿಸಿದ್ದು, ಈ ಸಂಬಂಧ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ:

     ಶನಿವಾರಸಂತೆಯ ನಂದಿಗುಂದ ಗ್ರಾಮದ ನಿವಾಸಿ ಶ್ರೀಮತಿ ಜಯಲಕ್ಷ್ಮಿ ಯವರ ಗಂಡ ಕುಮಾರ್‌ರವರು ಒಂದು ಓಮಿನಿ ವ್ಯಾನನ್ನು ಖರೀದಿಸಲು ಸುಂಟಿಕೊಪ್ಪದಲ್ಲಿ ಕಿಶೋರ್‌ ರವರ ಸಹಾಯದಿಂದ ವ್ಯವಹಾರ ನಡೆಸಿ ರೂ. 60,000/- ಗಳನ್ನು ವ್ಯಾನ್‌ ಮಾಲೀಕರಿಗೆ ನೀಡಿದ್ದು, ಉಳಿದ 6,000/- ರೂ ಕೊಡಲು ಬಾಕಿ ಇದ್ದು, ಪತ್ನಿಯ ಚಿನ್ನವನ್ನು ಬ್ಯಾಂಕಿನಲ್ಲಿ ಇಟ್ಟು ರೂ. 40,000/- ಸಾಲ ಪಡೆದು ದಿನಾಂಕ : 20-07-2015 ರಂದು ಸಮಯ 14.00 ಗಂಟೆಗೆ ಹಣವನ್ನು ತೆಗೆದುಕೊಂಡು ಮಡಿಕೇರಿಯಲ್ಲಿರುವ ಕಿಶೋರ್‌ ರವರಿಗೆ ಕೊಡುತ್ತೇನೆಂದು ಹೇಳಿ ಹೋದವರು ಮಾದಾಪುರದಲ್ಲಿ ಇರುವ ಕುಮಾರರವರ ಅಕ್ಕ ಕುಮಾರಿಯವರ ಮನೆಗೆ ಹೋಗಿ ವಿಷಯ ತಿಳಿಸಿ ಅಲ್ಲಿಂದ ಹೋದವರು ಕಾಣೆಯಾಗಿರುತ್ತಾರೆಂದು ಸದರಿ ಶ್ರೀಮತಿ ಜಯಲಕ್ಷ್ಮಿ ಯವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, July 24, 2015


ಬಸ್ಸಿಗೆ ಕಾರು ಡಿಕ್ಕಿ:

      ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಾರೊಂದು ಡಿಕ್ಕಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಕಾಟಕೇರಿಯಲ್ಲಿ ನಡೆದಿದೆ. ದಿನಾಂಕ 23-7-2015 ರಂದು ಮಂಗಳೂರು ಘಟಕದ ಕೆಎಸ್‌ಆರ್‌ಟಿಸಿ ಬಸ್ಸನ್ನು ಮೋಹನ ನಾರಾಯಣ ಚೌದುರಿ ಎಂಬವರು ಚಾಲಾಯಿಸಿಕೊಂಡು ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಕಾಟಕೇರಿಎಂಬವಲ್ಲಿ ಎದುರುಗಡೆಯಿಂದ ಕಾರೊಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರು ಮತ್ತು ಬಸ್ಸು ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಜೂಜಾಟ, ಆರೋಪಿಗಳ ಬಂಧನ: 

    ಶನಿವಾರಸಂತೆ ಠಾಣಾಧಿಕಾರಿ ಶ್ರೀ ರವಿಕಿರಣ್‌ ರವರಿಗೆ ದೊರೆತ ಖಚಿತ ವರ್ತಮಾನ ವರದಿಯ ಆದಾರದ ಮೇರೆಗೆ ದಿನಾಂಕ 23-7-2015 ರಂದು ತಮ್ಮ ಸಿಬ್ಬಂದಿಯೊಂದಿಗೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ತ್ಯಾಗ್ರಾಜ ಕಾಲೋನಿಯಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಜೂಜಾಡುತ್ತಿದ್ದ ವ್ಯಕ್ತಿಗಳಾದ ಹೆಚ್‌.ಎಂ. ತೋಟಪ್ಪ, ಕೆ.ಆರ್‌. ರವಿ, ಆರ್‌. ಪ್ರವೀಣ್‌, ಎಸ್‌.ಜಿ. ಮಧು, ಎಂ.ಎಸ್‌. ಮುನೀರ್‌ ಹಾಗು ಎಸ್‌.ಎನ್‌. ಮಹೇಶ್‌ ಎಂಬವರ ಮೇಲೆ ದಾಳಿ ಮಾಡಿ ಸದರಿಯವರನ್ನುವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಪತಿಯಿಂದ ಪತ್ನಿಯ ಮೇಲೆ ಹಲ್ಲೆ, ಪ್ರಕರಣ ದಾಖಲು:

    ಪೊನ್ನಂಪೇಟೆ ಠಾಣಾ ಸರಹದ್ದಿನ ಪೊನ್ನಪ್ಪಸಂತೆ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಶ್ವೇತಾರವರು 8 ವರ್ಷಗಳ ಹಿಂದೆ ಬಾಳೆಲೆ ಗ್ರಾಮದ ದಿನೇಶಎಂಬವರನ್ನುವಿವಾವವಾಗಿದ್ದು ಅವರ ನಡುವೆ ಮನಸ್ತಾಪಗೊಂಡು ಸುಮಾರು 8 ತಿಂಗಳ ಹಿಂದೆ ಗಂಡ ದಿನೇಶ ಪತ್ನಿಯನ್ನು ಬಿಟ್ಟು ಹೋಗಿ ಬೇರೆ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 21.7.15 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ದಿನೇಶ ಪತ್ನಿ ಶ್ವೇತಾರವರ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಸೌದೆ ದೊಣ್ಣೆಯಿಂದ ಹಲ್ಲೆ

Thursday, July 23, 2015

ಮಹಿಳೆಯ ದೌರ್ಜನ್ಯ, ಪ್ರಕರಣ ದಾಖಲು: 

    ವಿರಾಜಪೇಟೆ ತಾಲೋಕು, ಕೈಕೇರಿ ಗ್ರಾಮದ ನಿವಾಸಿ ಶ್ರೀಮತಿ ಜೋಸ್ನಾ ಎಂಬವರು ಪೋರಂಗಡ ಪೊನ್ನಪ್ಪ ಎಂಬವರನ್ನು 2002ನೇ ಸಾಲಿನಲ್ಲಿ ಮದುವೆಯಾಗಿದ್ದು ಒಂದು ಹೆಣ್ಣು ಮಗು ಇದ್ದು ದಿನಾಂಕ 09/10/2014 ರ ಹಿಂದಿನ ದಿನಗಳಲ್ಲಿ ಸದರಿ ಪೊನ್ನಪ್ಪನವರು ಮಧ್ಯಪಾನ ಮಾಡಿ ಪತ್ನಿ ಜೋಸ್ನಾರವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು ಈ ಬಗ್ಗೆ ಪೊನ್ನಂಪೇಟೆ ನ್ಯಾಯಾಲಯದಲ್ಲಿ ಡೊಮೆಸ್ಟಿಕ್ ವೈಲೆನ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿದ್ದು ಪೊನ್ನಪ್ಪನವರ ಪೊನ್ನಪ್ಪನ ಮೇಲೆಕಾನೂನು ಕ್ರಮದ ಬಗ್ಗೆ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಹಳೇ ದ್ವೇಷ, ವ್ಯಕ್ತಿಗೆ ಕೊಲೆ ಬೆದರಿಕೆ:

      ಸುಂಟಿಕೊಪ್ಪನಗರದಲ್ಲಿ ವಾಸವಾಗಿರುವ ಮೊಹಿದೀನ್‌ ಎಂಬವರು ದಿನಾಂಕ 18-7-2015 ರಂದು ಸಂಜೆ 7-30 ಗಂಟೆಯ ಸಮಯದಲ್ಲಿ ತನ್ನ ಸ್ನೇಹಿತರಾದ ಇಬ್ರಾಹಿಂ ಮತ್ತು ಅಬ್ದುಲ್ಲಾ ರವರ ಜೊತೆ ಕೆ.ಇ.ಬಿ. ಬಳಿ ನಿಂತಿರುವಾಗ್ಗೆ, ಆರೋಪಿ ಕೆ ಎ ಉಸ್ಮಾನ್ ತಂದೆ ಆದಂ ರವರು ಬಂದು ಹಳೇ ದ್ವೇಷದಿಂದ ಮೊಹಿದೀನ್‌ರವರನ್ನು ‘ ಒಂದು ವಾರದ ಒಳಗೆ ಕೊಲ್ಲುತ್ತೇನೆ ರಸ್ತೆಗೆ ತಂತಿ ಕಟ್ಟಿ ತಲೆ ಕತ್ತರಿಸುತ್ತೇನೆ,’ ಎಂದು ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ವರದಕ್ಷಿಣೆ ಕಿರುಕುಳ:

     ಮಹಿಳೆಯೊಬ್ಬರಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ ಘಟನೆ ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಸೂರ್ಲಬಿ ಗ್ರಾಮದದಲ್ಲಿ ವಾಸವಾಗಿರುವ ಶ್ರೀಮತಿ ಬಿ.ಜಿ. ಹರಿಣಿ ಎಂಬವರು ದಿ: 16-11-2011 ರಂದು ಗುರುಪ್ರಸಾದ್‌ ಎಂಬವರನ್ನು ಮದುವೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಆಕೆಯ ಪತಿ ಹಾಗು ಮಾವ ಪುಷ್ಪರಾಜ್‌ ರವರು ಸೇರಿ ಹರಿಣಿಯವರಿಗೆ ಮಾನಸಿಕ ಮತ್ಉ ದೈಹಿಕ ಕುರುಕುಳ ನೀಡುತ್ತಿರುವುದಾಗಿ ಮತ್ತು ವರದಕ್ಷಿಣೆ ಹಣ ತರುವಂತೆ ದೌರ್ಜನ್ಯ ನಡೆಸುತ್ತಿದ್ದು ದಿನಾಂಕ 22-7-2015 ರಂದು ಹಣ ತರುವಂತೆ ಹೇಳಿ ಮನೆಯಿಂದ ಹೊರಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದಾರೆ.

Wednesday, July 22, 2015

ದಾರಿ ತಡೆದಯ ವ್ಯಕ್ತಿಯ ಕೊಲೆ ಬೆದರಿಕೆ:

      ದಾರಿ ವಿಚಾರದಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ವಿರಾಜಪೇಟೆ ತಾಲೋಕು ಬಾಡಗರಕೇರಿ ಗ್ರಾಮದಲ್ಲಿ ನಡೆದಿದೆ. ಶ್ರೀಮಂಗಲ ಠಾಣಾ ಸರಹದ್ದಿನ ಬಾಡಗರಕೇರಿ ಗ್ರಾಮದ ನಿವಾಸಿ ಅಣ್ಣೀರ ಗಣೇಶ ಎಂಬವರು ದಿನಾಂಕ 20-7-2015 ರಂದು ತಮ್ಮ ಹೆಂಡತಿಯೊಂದಿಗೆ ಶ್ರೀಮಂಗಲಕ್ಕೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ಉತ್ತಪ್ಪ, ಮತ್ತು ಉತ್ತಪ್ಪನವರ ಮಗ ತಮ್ಮುರವರು ಗಣೇಶರವರ ದಾರಿ ತಡೆದು ದಾರಿಯ ವಿಚಾರದಲ್ಲಿ ಜಗಳ ಮಾಡಿ ಕೊಲೆ ಮಾಡುವ ಉದ್ದೇಶದಿಂದ ದೊಣ್ಣೆಯಿಂದ ಹಲ್ಲೆ ನಡೆಸಿಗಾಯಗೊಳಿಸಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಗೆ ಗೂಡ್ಸ್‌ ಆಟೋ ಡಿಕ್ಕಿ:

     ಪಿರ್ಯಾದಿ ಹೆಚ್‌.ಬಿ. ಉಮೇಶ್‌ರಾವ್‌ ಎಂಬವರು ದಿನಾಂಕ 21.07.2015 ರಂದು ಕೆಎ-25ಎ-3308 ರ ಲಾರಿಯಲ್ಲಿ VRL ಪಾರ್ಸಲ್‍ ತುಂಬಿಕೊಂಡು ಮಂಗಳೂರಿ ನಿಂದ ಮೈಸೂರಿಗೆ ಮಡಿಕೇರಿ ಮಾರ್ಗವಾಗಿ ಸಂಪಾಜೆ ಹತ್ತಿರದ ಚಡಾವು ಗ್ರಾಮದ ಬಳಿ ಹೋಗುತ್ತಿರುವಾಗ ಎದರುಗಡೆಯಿಂದ ಕೆಎ-21ಎ-8782 ರ ಗೂಡ್ಸ್ ಆಟೋವನ್ನು ಅದರ ಚಾಲಕ ಇಶಾಕ ಎಂಬವರು ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಾರಿಗೆ ಡಿಕ್ಕಿ ಪಡಿಸಿರುವ ಪರಿಣಾಮ ಗೂಡ್ಸ್ ಆಟೋದಲ್ಲಿದ್ದವರಿಗೆ ಗಾಯವಾಗಿದ್ದು ಅಲ್ಲದೆ ಲಾರಿ ಹಾಗು ಗೂಡ್ಸ್ ಆಟೋ ಜಖಂ ಗೊಂಡಿದ್ದು, ಮಡಿಕೇರಿ ಗ್ರಾಮಾಂತರಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ಪೊನ್ನಂಪೇಟೆ ಠಾಣಾ ಸರಹದ್ದಿನ ತೊರೆಬೀದಿ ಯಲ್ಲಿ ವಾಸವಾಗಿರುವ ಶ್ರೀಮತಿ ಗುಲ್‌ಶೀರಾ ಎಂಬವರ ಪತಿ ಸೈಯದ್‌ ಜಲೀಲ್‌ ಎಂಬವರು ದಿನಾಂಕ 20-7-2015 ರಂದು ರಾತ್ರಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಹೆಂಗಸು ಕಾಣೆ, ಪ್ರಕರಣ ದಾಖಲು:

     ಮಡಿಕೇರಿ ತಾಲೋಕು ಕೋಣಂಜಂಗೇರಿ ಗ್ರಾಮದ ನಿವಾಸಿ ಬಿ.ಎಂ. ಮಂದಣ್ಣ ಎಂಬವರ ಪತ್ನಿ ಶ್ರೀಮತಿ ಮೈನಾ ಮುತ್ತಮ್ಮ (57) ಎಂಬವರು ದಿನಾಂಕ 15-7-2015 ರಂದು ಮಡಿಕೇರಿಯಲ್ಲಿರುವ ತಮ್ಮ ತಮ್ಮನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಪಾರಾಣೆಯಿಂದಬಸ್ಸು ಹತ್ತಿ ಹೋದವರು ನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ನಾಪೋಕಲ್ಉ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

     ಹೊಟೇಲ್‌ನಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿ ಮೇಲೆ ವಿನಾ ಕಾರಣ ಹಲ್ಲೆ ನಡೆದ ಘಟನೆ ಮಡಿಕೇರಿ ನಗರದ ಹೊಟೇಲ್‌ವೊಂದರಲ್ಲಿ ನಡೆದಿದೆ. ಮಡಿಕೇರಿ ನಗರದ ಕಾನ್ವೆಂಟ್‌ ಬಳಿ ವಾಸವಾಗಿರುವ ಕೆ.ಎಲ್‌ ಸತೀಶ್‌ ಎಂಬವರು ದಿನಾಂಕ 20-7-2015 ರಂದು ಸಾಯಂಕಾಲ 16.30 ಗಂಟೆಗೆ ಹಿಲ್ ರಸ್ತೆಯಲ್ಲಿರುವ ಕೃಷ್ಣರವರ ಬಾಪ್ತು ಕ್ಯಾಂಟೀನಿನಲ್ಲಿ ಊಟ ಮಾಡುತ್ತಿದ್ದಾಗ ಕೈಯಿಂದ ಅನ್ನ ಚೆಲ್ಲಿದ ವಿಷಯದಲ್ಲಿ ಎದುರು ಕುಳಿತು ಊಟ ಮಾಡುತ್ತಿದ್ದ ಅಪರಿಚಿತ ವ್ಯಕ್ತಿಯು ಜಗಳ ಮಾಡಿ, ಸತೀಶ್‌ ರವರು ಹೊರಗೆ ಹೋದಾಗ ಕೈಯಿಂದ ತಳ್ಳಿ ಬೀಳಿಸಿ ಕಲ್ಲಿನಿಂದ ತಲೆಯ ಹಿಂಭಾಗಕ್ಕೆ ಮತ್ತು ಬಲ ಭಾಗಕ್ಕೆ ಹೊಡೆದು ಗಾಯಪಡಿಸಿರುತ್ತಾರೆಂದು ಕೆ.ಎಲ್‌ ಸತೀಶ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, July 21, 2015

ಹುಡುಗಿ ಕಾಣೆ:

     ಪೊನ್ನಂಪೇಟೆ ಪೊಲೀಸ್‌ ಠಾಣಾ ಸರಹದ್ದಿನ ಕೋಣನಕಟ್ಟೆ ಗ್ರಾಮದ ನಿವಾಸಿ ಶ್ರೀಮತಿ ಬೆಟ್ಟಕುರುಬರ ಚಿಮ್ಮಿ ಎಂಬವರ ಮಗಳು ಕೆ.ಕೆ. ಅಂಜನಾ ಎಂಬವಳು ದಿನಾಂಕ 17-7-2015 ರಂದು ಮನೆಯಿಂದ ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಮತ್ತ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಮಡಿಕೇರಿ ತಾಲೋಕು ಕಿರುಂದಾಡು ಗ್ರಾಮದ ನಿವಾಸಿ ಎಂ.ಎಸ್‌. ಚಿಣ್ಣಪ್ಪ ಎಂಬವರ ಸಹೋದರ ಗಣಪತಿ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡುದಿನಾಂಕ 15-7-2015 ರಂದು ತಮ್ಮ ಕುಟುಂಬದ ಐನ್‌ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೂಜು, ನಾಲ್ವರ ಬಂಧನ:

     ಪೊನ್ನಂಪೇಟೆ ಪೊಲೀಸ್‌‌ ಠಾಣಾಧಿಕಾರಿ ಎಸ್‌.ಎನ್‌. ಜಯರಾಮ್‌ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 20-7-2015 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ಬೇಗೂರು ಗ್ರಾಮದ ಮಾಪಿಳ್ಳೆತೋಡು ಎಂಬಲ್ಲಿ ಇಸ್ಪೀಟ್‌ ಎಲೆಗಳನ್ನು ಬಳಸಿ ಹಣವನ್ನುಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದ ವ್ಯಕ್ತಿಗಳ ಮೇಲೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಗಳಾದ ಅಂತೋಣಿ, ಕುಮಾರ, ಚಂದ್ರ ಮತ್ತು ಕೃಷ್ಣ ಎಂಬವರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿಯ ಅಸಹಜ ಸಾವು, ಪ್ರಕರಣ ದಾಖಲು:

       ಸೋಮವಾರಪೇಟೆ ಠಾಣಾ ಸರಹದ್ದಿನ ಜಂಬೂರು ಗ್ರಾಮದ ನಿವಾಸಿ ಪಿ.ಧರ್ಮ ಎಂಬವರು ದಿನಾಂಕ 29-6-2015 ರಂದು ರಾತ್ರಿ ಮಾದಾಪುರ ಚರ್ಚ್‌ ಬಳಿ ಕಾಂಕ್ರೀಟ್‌ ರಸ್ತೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಸದರಿಯವರನ್ನು ಚಿಕಿತ್ಸೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಸದರಿಯವರು ಆಸ್ಪತ್ರೆಯಲ್ಲಿ ಸಾವನಪ್ಪಿದ್ದು, ಮೃತ ಶರೀರವನ್ನು ಮಾದಾಪುರದ ಜಾರುಕೊಲ್ಲಿ ಎಂಬಲ್ಲಿ ಶವಸಂಸ್ಕಾರ ನಡೆಸಿದ್ದು, ಸದರಿ ಧರ್ಮನ ಸಾವುಸಹಜವಾಗಿರದೇ ಯಾವುದೋ ವಾಹನ ಡಿಕ್ಕಿಯಾಗಿ ಅಥವಾ ಯಾರೋ ಕೊಲೆ ಮಾಡುವ ಉದ್ದೇಶದಿಂದಹಲ್ಲೆ ನಡೆಸಿರಬಹುದೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Monday, July 20, 2015

 ಬೈಕಿಗೆ ಬಸ್‌ ಡಿಕ್ಕಿ, ಬೈಕ್‌ ಸವಾರನ ಸಾವು 
               ಮೋಟಾರು ಬೈಕಿಗೆ ಬಸ್ಸೊಂದು ಡಿಕ್ಕಿಯಾದ ಪರಿಣಾಮ ಬಸ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಗೋಣಿಕೊಪ್ಪಲಿನ ಅರುವತ್ತೊಕ್ಲುವಿನಲ್ಲಿ ನಡೆದಿದೆ. ದಿನಾಂಕ 20/07/2015ರಂದು ಮುಂಜಾನೆ ಕಿರುಗೂರು ನಿವಾಸಿ ಸುಬ್ರಮಣಿ ಎಂಬವರು ಅವರ ಸಂಬಂಧಿ ಮೀನಾಕ್ಷಿ ಎಂಬವರನ್ನು ಮಾನಂದವಾಡಿ ಆಸ್ಪತ್ರೆಗೆ ಆಂಬುಲೆನ್ಸ್‌ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದು. ಸುಬ್ರಮಣಿಯವರು ಆಂಬುಲೆನ್ಸ್‌ನ ಹಿಂಭಾಗದಲ್ಲಿ ಒಂದು ಬೈಕಿನಲ್ಲಿ ಹಾಗೂ ಮತ್ತೋರ್ವ ಕೃಷ್ಣ ಎಂಬವರು ಮುಂಭಾಗದಲ್ಲಿ ಕೆಎ-12-ಕೆ-7661ರ ಮೋಟಾರು ಬೈಕಿನಲ್ಲಿ ಹೋಗುತ್ತಿರುವಾಗ ಗೋಣಿಕೊಪ್ಪ ಬಳಿ ಅರುವತೊಕ್ಲುವಿನಲ್ಲಿ ಎದುರುಗಡೆಯಿಂದ ಕೆಎ-01-ಎಎ-7322ರ ಬಸ್ಸೊಂದನ್ನು ಅದರ ಚಾಲಕ ಬೆಂಗಳೂರು ನಿವಾಸಿ ಸುರೇಶ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೃಷ್ಣರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಕೃಷ್ಣರವರು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ವ್ಯಕ್ತಿಯ ಸಾವು 
               ಅಪರಿಚಿತ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಬಳಿಯ ಪುಲಿಯೆರಿ ಗ್ರಾಮದಲ್ಲಿ ನಡೆದಿದೆ. ಪುಲಿಯೆರಿ ಗ್ರಾಮದ ಆನಂದಪುರದ ಬಸ್‌ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ದಿನವೂ ತಂಗುತ್ತಿದ್ದು ದಿನಾಂಕ 18/07/2015ರಂದು ಆ ವ್ಯಕ್ತಿಯು ಬಸ್‌ ತಂಗುದಾಣದಲ್ಲಿಯೇ ಸಾವಿಗೀಡಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                 ಮೋಟಾರು ಬೈಕಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಬೈಕು ಸವಾರರಿಬ್ಬರಿಗೆ ಗಾಯಗಳಾದ ಘಟನೆ ಮಡಿಕೇರಿ ನಗರದ ಅರಣ್ಯ ಭವನದ ಬಳಿ ನಡೆದಿದೆ. ದಿನಾಂಕ 19/07/2015ರಂದು ಮಕ್ಕಂದೂರು ನಿವಾಸಿ ಶರತ್‌ ಎಂಬವರು ಅವರ ಸ್ನೇಹಿತ ಪ್ರಶಾಂತ್ ಎಂಬವರೊಂದಿಗೆ ಅವರ ಮೋಟಾರು ಬೈಕಿನಲ್ಲಿ ಮಡಿಕೇರಿಗೆ ಬಂದು ವಾಪಾಸು ಹೋಗುತ್ತಿರುವಾಗ ನಗರದ ಅರಣ್ಯ ಭವನದ ಬಳಿ ಕುಶಾಲನಗರ ಕಡೆಯಿಂದ ಕೆಎ-12-ಪಿ-5521ರ ಮಾರುತಿ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಬೈಕು ಸವಾರರಾದ ಶರತ್‌ ಹಾಗೂ ಪ್ರಶಾಂತ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸಾಲ ಕಟ್ಟಲಾಗದೆ ವ್ಯಕ್ತಿಯ ಆತ್ಮಹತ್ಯೆ 
          ಬ್ಯಾಂಕು ಹಾಗೂ ಇತರೆಡೆಗಳಿಂದ ಮಾಡಿದ ಸಾಲವನ್ನು ತೀರಿಸಲಾಗದೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರಸಂತೆ ಬಳಿಯ ಚೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿಡ್ತ  ಗ್ರಾಮದ ನಿವಾಸಿ ದೇವಾನಂದ ಎಂಬವರು ಕೃಷಿಕರಾಗಿದ್ದು ವ್ಯವಸಾಯದ ಉದ್ದೇಶಕ್ಕಾಗಿ ಬ್ಯಾಂಕು ಹಾಗೂ ಸ್ನೇಹಿತರಿಂದ ಹಲವು ಲಕ್ಷ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದು ಕೈಸಾಲ ನೀಡಿದ ಪರಿಚಯಸ್ಥರಲ್ಲೊಬ್ಬರಾದ ಪ್ರಕಾಶ್‌ ಎಂಬವರು ನ್ಯಾಯಾಲಯದಲ್ಲಿ ಕೇಸು ಹಾಕಿದ್ದು, ವ್ಯವಸಾಯದಿಂದ ನಷ್ಟ ಉಂಟಾಗಿ ಸಾಲ ತೀರಿಸಲಾಗದೆ ಜುಗುಪ್ಸೆಗೊಂಡ ದೇವಾನಂದರವರು ದಿನಾಂಕ 19/07/2015ರಂದು ಚೌಡೇನಹಳ್ಳಿಗ್ರಾಮದ ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
               ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 19/07/2015 ರಂದು ಕರ್ಕಳ್ಳಿ ಬಾಣೆಯ ವಾಸಿ ಮೋಹನ್ ಎಂಬುವವರು ಸೋಮವಾರಪೇಟೆ ನಗರದ ಸೋಮು ಎಂಬವರ ತರಕಾರಿ ಅಂಗಡಿಯ ಬಳಿ ಚೌಡ್ಲು ನಿವಾಸಿ ಹೆಚ್‌.ಟಿ.ರವಿ ಎಂಬವರೊಂದಿಗೆ  50 ರೂ ಹಣವನ್ನು ಕೊಡುವಂತೆ ಕೇಳಿದ್ದು ರವಿಯವರು  ಹಣವಿಲ್ಲವೆಂದು ಹೇಳಿದಾಗ ಮೋಹನ್‌ರವರು ರವಿಯವರಿಗೆ ಅಶ್ಲೀಲ ಶಬ್ದಗಳಿಂದ ಬೈದು ಅಂಗಡಿಯ ಸಮೀಪ ಬಿದ್ದಿದ್ದ ಒಂದು ಮರದ ರೀಪರ್ ಪಟ್ಟಿಯನ್ನು ತೆಗೆದು ರವಿಯ ಮುಖಕ್ಕೆ ಹೊಡೆದು  ತೀವ್ರತರವಾದ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, July 18, 2015

ವಿಷ ಸೇವಿಸಿ ಮಹಿಳೆಯ ಆತ್ಮಹತ್ಯೆ 
                     ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ಕರಡ ಗ್ರಾಮದಲ್ಲಿ ನಡೆದಿದೆ. ಕರಡ ಗ್ರಾಮದ ನಿವಾಸಿ ಕಮಲ ಎಂಬವರ ಮಗಳು ಸರೋಜಿನಿಯು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತನಗೆ ಕೇರಳದಲ್ಲಿ ಕೆಲಸ ಆಗಿದೆ ತಾನು ಹೋಗುವುದಾಗಿ ಮನೆಯಿಂದ ಹೋದವಳು 2 ವಾರದ ನಂತರ ತಾನು  ನೆಲ್ಸನ್ ಎಂಬುವವರನ್ನು ಮದುವೆಯಾಗಿ ಕೇರಳದಲ್ಲಿರುವುದಾಗಿ ತಿಳಿಸಿದ್ದು, ಅಲ್ಲದೆ ನೆಲ್ಸನ್ ಗೆ ಈ ಹಿಂದೆ ಮದುವೆಯಾಗಿ ಎರಡು ಹೆಣ್ಣು ಮಕ್ಕಳಿದ್ದು, ಈಗ್ಗೆ ನಾಲ್ಕು ತಿಂಗಳ ಹಿಂದೆ ಸರೋಜಿನಿ ಕೇರಳದಿಂದ ಬಂದು ಕರಡದ ಕರ್ನಲ್ ಅಪ್ಪಯ್ಯರವರ ಲೈನ್ ಮನೆಯಲ್ಲಿ ತನ್ನ ಗಂಡ ಹಾಗೂ ಅವರ ಮೊದಲ ಹೆಂಡತಿ ಅನು, ಅವರ ಎರಡು ಮಕ್ಕಳೊಂದಿಗೆ ವಾಸ ವಾಗಿದ್ದು, ದಿನಾಂಕ 17/07/2015ರಂದು ಯಾವುದೋ ವಿಚಾರವನ್ನು  ತನ್ನ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ವಸ್ತುವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಮಗುಚಿ ಇಬ್ಬರಿಗೆ ಗಾಯ 
               ಚಾಲಕನ ಅಜಾಗರೂಕತೆಯಿಂದ ಕಾರೊಂದು ಮಗುಚಿಬಿದ್ದು ಇಬ್ಬರಿಗೆ ಗಾಯಗಳಾದ ಘಟನೆ ಶನಿವಾರಸಂತೆ ಬಳಿಯ ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17/07/2015ರಂದು ದಾವಣಗೆರೆ ನಿವಾಸಿ ಸಮರ್ಥರಾಮು ಎಂಬವರು ಅವರ ಕುಟುಂಬದೊಂದಿಗೆ ಅವರ ಸ್ನೇಹಿತನ ಬಾಪ್ತು ಮಾರುತಿ ಓಮಿನಿ ವ್ಯಾನು ಸಂಖ್ಯೆ ಕೆಎ-17-ಪಿ-3729 ರಲ್ಲಿ ಚಾಲಕ ಹರಿಕಿರಣ್‌ರವರೊಂದಿಗೆ ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದು, ಬೆಳಿಗ್ಗೆ  ಸಮಯದಲ್ಲಿ ಶನಿವಾರಸಂತೆ ಮಾರ್ಗವಾಗಿ ಮಡಿಕೇರಿಗೆ ಹೋಗುತ್ತಿರುವಾಗ ಚಾಲಕ ಹರಿಕಿರಣ್‌ರವರು ರಾಮೇನಹಳ್ಳಿಯ ಪ್ರೇಮ ಎಂಬವರ ಮನೆಯ ಬಳಿ ವ್ಯಾನನ್ನು ಅತೀವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ವ್ಯಾನು  ರಸ್ತೆಯ ಬದಿಯಲ್ಲಿದ್ದ  ಗುಂಡಿಗೆ ಮಗುಚಿಕೊಂಡಿದ್ದು ಸಮರ್ಥರಾಮು ಮತ್ತು ಕಾರಿನ ಚಾಲಕ ಹರಿಕಿರಣ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
                  ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಬಳಿಯ ಹಕ್ಕೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 16-7-2015 ರಂದು ರಾತ್ರಿಯಿಂದ ದಿನಾಂಕ 17-7-2015 ರಂದು ಬೆಳಗಿನ ಸಮಯದ  ನಡುವೆ ಹಕ್ಕೆ ಗ್ರಾಮದ ನಿವಾಸಿ ಪದ್ಮ ಎಂಬಾಕೆಯ ಪತಿ ನಟರಾಜು ಎಂಬಾತನು ಆತನ  ಮನೆಯ ಮುಂದಿನ ಮಾವಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮೃತನು ಅತಿಯಾಗಿ ಮದ್ಯಪಾನ ಮಾಡುವ ಚಟವಿದ್ದು ಮದ್ಯಪಾನದ ಮತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವ್ಯಕ್ತಿಗೆ ಕಾರು ಡಿಕ್ಕಿ, ಗಾಯ
             ವ್ಯಕ್ತಿಯೊಬ್ಬನಿಗೆ ಕಾರು ಡಿಕ್ಕಿಯಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 17/07/2015ರಂದು ಇಬ್ನಿವಳವಾಡಿ ಗ್ರಾಮದ ನಿವಾಸಿ ಸಿಸ್ಸಿ ಉತ್ತಪ್ಪ ಎಂಬವರು ಅವರ ಪತಿ ಸಿ.ಜಿ.ಉತ್ತಪ್ಪ ಎಂಬವರೊಂದಿಗೆ ಅವರ ಕಾರಿನಲ್ಲಿ ನಗರಕ್ಕೆ ಬಂದು ನಗರದ ಸರ್ಕಾರಿ ಆಸ್ಪತ್ರೆಯ ಬಳಿಯ ಹಳೆ ಆರ್‌ಟಿಓ ಕಚೇರಿಯ ಬಳಿ ಅಂಗಡಿಯಿಂದ ಸಾಮಗ್ರಿಗಳನ್ನು ಖರೀದಿಸಿಕೊಂಡು ಬಂದು ಕಾರಿನ ಬಾಗಿಲು ತೆಗೆಯುವಾಗ ಪಿವೈ-2929ರ ಸಂಖ್ಯೆಯ ಇನ್ನೋವಾ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉತ್ತಪ್ಪನವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಉತ್ತಪ್ಪನವರಿಗೆ ಗಾಯಗಳಾಗಿದ್ದು ಡಿಕ್ಕಿ ಪಡಿಸಿದ ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಿಕ್‌ಅಪ್‌ ಜೀಪು ಡಿಕ್ಕಿ, ಒಬ್ಬರ ಸಾವು 
                ಪಾದಚಾರಿಗಳಿಗೆ ಜೀಪೊಂದು ಡಿಕ್ಕಿಯಾದ ಪರಿಣಾಮ ಒಬ್ಬರು ಸಾವಿಗೀಡಾಗಿ ಮತ್ತೋರ್ವರಿಗೆ ಗಾಯಗಳಾದ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 17-7-2015 ರಂದು ಮಂಗಳೂರು ನಿವಾಸಿ ರಮೇಶ್‌ ಎಂಬವರು ಅವರ ಬಾಪ್ತು  ಕೆಎ 19 ಎಂಈ 7900 ರ ವಾಹನವನ್ನು ಕುಶಾಲನಗರದ ಮಾದಾಪಟ್ನ ಬಳಿಯ ಎಸ್.ಎಲ್.ಎನ್ ಪೆಟ್ರೋಲ್ ಬಂಕ್ ಮುಂದಿನ ರಸ್ತೆಯ ಎಡಬಾಗದಲ್ಲಿ ನಿಲ್ಲಿಸಿ ನಡೆದುಕೊಂಡು ಹೋಗುತಿರುವಾಗ ಮಡಿಕೇರಿ ಕಡೆಯಿಂದ ಪಿಕ್ಅಪ್ ಜೀಪ್ ನಂ ಕೆಎ 12 ಎ 6570 ರ ಚಾಲಕನು ಜೀಪನ್ನು ಅತಿವೇಗ ಹಾಗೂ ಆಜಾಗರೂಕತೆಯಿಂದ ಓಡಿಸಿಕೊಂಡು ಬಂದು ಕುಶಾಲನಗರ ಕಡೆಯಿಂದ ನಡೆದುಕೊಂಡು ಹೋಗುತ್ತಿದ್ದ ಇಬ್ಬರು  ಪಾದಚಾರಿಗಳಿಗೆ ಡಿಕ್ಕಿಪಡಿಸಿದ ಪರಿಣಾಮ ಅವರುಗಳಿಗೆ ಗಾಯವಾಗಿದ್ದು ನಂತರ ಅವರನ್ನು ಯಾವುದೋ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕುಶಾಲನಗರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ  ಜಾಕಿರ್ ಎಂಬುವರು ಮೃತಪಟ್ಟಿದ್ದು ಮತ್ತು ಇನ್ನೋರ್ವ ಮುಸ್ತಫಾ ಎಂಬುವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿಗೆ ಕರೆದುಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ . 

Friday, July 17, 2015

ಮನುಷ್ಯ ಕಾಣೆ, ಪ್ರಕರಣ ದಾಖಲು:

     ಸೋಮವಾರಪೇಟೆ ಚೌಡ್ಲು ಗ್ರಾಮದ ನಿವಾಸಿ ಶ್ರೀಮತಿ ಸಿ.ಎಂ. ನಂಜಮ್ಮ ಎಂಬವರ ಮಗ ಹೆಚ್‌.ಪಿ. ಶಿವ (37) ಎಂಬವರು ದಿನಾಂಕ 10-7-2015 ರಂದು ತಾನು ನಗ್ರಕ್ಕೆ ಹೋಗಿ ಬರುತ್ತೇನೆಂದು ತಿಳಿಸಿ ಹೋಗಿದ್ದು, ನಂತರ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಶ್ರೀಮತಿ ನಂಜಮ್ಮನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ವಿನಾಕಾರಣ ವ್ಯಕ್ತಿಯಿಂದ ಹಲ್ಲೆ:

     ಶನಿವಾರಸಂತೆ ಠಾಣಾ ಸರಹದ್ದಿನ ನಾಗವಾರ ಗ್ರಾಮದ ನಿವಾಸಿ ಶ್ರೀಮತಿ ವೈ.ಎಂ. ನಂದಿನಿ ಎಂಬವರು ದಿನಾಂಕ 16-7-2015 ರಂದು ತಮ್ಮ ಜಮೀನಿನಲ್ಲಿ ಕೆಲಸ ಮಾಡಿಕೊಂಡಿರುವಾಗ ಅವರ ಪಕ್ಕದ ಮನೆ ನಿವಾಸಿ ಹರೀಶ ಎಂಬವರು ಅಲ್ಲಿಗೆ ಬಂದು ನಂದಿನಿಯವರೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಇದನ್ನು ಕೇಳಿದ ನಂದಿನ ತಮ್ಮ ಪಾಲಾಕ್ಷ ಎಂಬವರು ಇದನ್ನು ವಿಚಾರಿಸಿದ ಕಾರಣಕ್ಕೆ ಆರೋಪಿ ಹರೀಶ ಮರದ ದೊಣ್ಣೆಯಿಂದ ನಂದಿನಿ ಹಾಗು ಅವರ ತಮ್ಮ ಪಾಲಾಕ್ಷರವರ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕೆಎಸ್ಆರ್‌ಟಿಸಿ ಬಸ್‌ ಡಿಕ್ಕಿ ಪಾದಾಚಾರಿಗೆ ಗಾಯ:

    ಶನಿವಾರಸಂತೆ ಠಾಣಾ ಸರಹದ್ದಿನ ಗೌಡಳ್ಳಿ ಗ್ರಾಮದ ನಿವಾಸಿ ಜಿ.ಎಂ. ಯಶವಂತ ಎಂಬವರು ದಿನಾಂಕ 16-7-2015ರಂದು ಗೌಡಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಚಾಲಕ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮವಾಗಿ ಯಶವಂತರವರು ಗಾಯಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅಧಿಕ ಬಡ್ಡಿಗೆ ಸಾಲ, ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು:

     ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೋಕು ಕೊಪ್ಪ ಗ್ರಾಮದ ನಿವಾಸಿ ಎಂ ಕೃಷ್ಣ ಎಂಬವರು ತಮ್ಮ ಬಾಪ್ಸು ಆಟೋ ರಿಕ್ಷಾವನ್ನು ಒತ್ತೆಯಿಟ್ಟು ಕೊಡಗು ಜಿಲ್ಲೆಯ ನೆಲ್ಲಿಹುದಿಕೇರಿನಿವಾಸಿ ಸೇದುರಾಮನ್‌ ಎಂಬವರಿಂದ ಸಾಲವನ್ನು ಪಡೆದು ಕೊಂಡಿದ್ದು, ಸದರಿ ಸೇದುರಾಮನ್‌ರವರು ಸಾಲದ ಹಣಕ್ಕೆ ಹೆಚ್ಚಿನ ಬಡ್ಡಿ ಹಣ ನೀಡುವಂತೆ ತೊಂದರೆ ಕೊಡುತ್ತಿದ್ದಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, July 15, 2015


ಅನಧಿಕೃತ ಬಡ್ಡಿ ವ್ಯವಹಾರ, ವ್ಯಕ್ತಿ ವಿರುದ್ಧ ಪ್ರಕರಣ ದಾಖಲು:

      ಗೋಣಿಕೊಪ್ಪ ನಗರದ ವೆಂಕಟಪ್ಪ ಬಡಾವಣೆಯ ವಾಸಿ ಮಾಚಿಮಾಡ ಜಗದೀಶ್ ಎಂಬವರು ಅನಧಿಕೃತವಾಗಿ ಬಡ್ಡಿ ವ್ಯವಹಾರ ನಡೆಸುತ್ತಿರುವುದಾಗಿ ವಿಕ್ರಂ ರಾಜೇ ಅರಸ್ ಉಪ ವಿಭಾಗೀಯ ಸಹಾಯಕ ನಿಬಂಧಕ್ರು ಸಹಕಾರ ಇಲಾಖೆ. ಮಡಿಕೇರಿ.ಇವರಿಗೆ ಬಂದ ಖಚಿತ ವರ್ತಮಾನದ ಮೇರೆ ಸಿಬ್ಬಂದಿಯವರು ಹಾಗೂ ಗೋಣಿಕೊಪ್ಪ ಪೊಲೀಸರೊಂದಿಗೆ ದಿನಾಂಕ 14/7/2015 ರಂದು ಧಾಳಿ ನಡೆಸಿ ಆರೋಪಿ ಬಳಿ ಇದ್ದ 2 ತುಂಬಿದ ಚೆಕ್, 1 ಖಾಲಿ ಚೆಕ್ ನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

 ಹೆಚ್ಚು ಬಡ್ಡಿ ವಸೂಲಿ ಪ್ರಕರಣ ದಾಖಲು:

     ವಿರಾಜಪೇಟೆ ತಾಲೋಕು ಬಲ್ಯಮಂಡೂರು ಗ್ರಾಮದ ನಿವಾಸಿ ಶ್ರೀಮತಿ ವಾಣಿ ಎಂಬವರು ಅದೇ ಗ್ರಾಮದ ನಿವಾಸಿ ಕೊಟ್ಟಂಗಡ ಚಿಟ್ಟಿಯಪ್ಪ ಎಂಬವರಿಂದ ಸಾಲದ ರೂಪದಲ್ಲಿ ಹಣ ಪಡೆದುಕೊಂಡಿದ್ದು, ಸದರಿ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ಪಡೆಯುವ ಉದ್ದೇಶದಿಂದ ಸಾಲ ನೀಡಿದ ಸಂದರ್ಭದಲ್ಲಿ ಶ್ರೀಮತಿ ವಾಣಿಯವರಿಂದ ಪಡೆದುಕೊಂಡ ಬ್ಯಾಂಕ್‌ ಚೆಕ್‌ನ ಆದಾರದ ಮೇರೆಗೆ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ. 

 ಅಪರಿಚಿತ ವ್ಯಕ್ತಿಗಳಿಂದ ಸುಲಿಗೆ:

     ದಿನಾಂಕ 11-7-2015 ರಂದು ರಾತ್ರಿ 08:00 ಗಂಟೆಗೆ ವಿರಾಜಪೇಟೆ ತಾಲೋಕುನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಟಿ.ಆರ್‌ ಶಿವದಾಸ್‌ ಎಂಬವರು ತನ್ನ ಬೊಲೆರೋ ಜೀಪಿನಲ್ಲಿ ಸಾಕುನಾಯಿಯೊಂದಿಗೆ ಸಿದ್ದಾಪುರ ನಗರದ ಮೈಸೂರು ರಸ್ತೆಗಾಗಿ ಬಂದು ಸುಜೈರವರ ಮನೆಗೆ ಹೋಗುವ ರಸ್ತೆಯ ತಿರುವಿನ ಸಾರ್ವಜನಿಕ ರಸ್ತೆಯ ಬದಿಯಲ್ಲಿ ತನ್ನ ವಾಹನವನ್ನು ನಿಲ್ಲಿಸಿ ನಾಯಿಯನ್ನು ಕೆಳಗೆ ಇಳಿಸಿ ನಾಯಿ ಮೂತ್ರ ಮಾಡುವ ಸಂದರ್ಬದಲ್ಲಿ ಮಾಲ್ದಾರೆ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಜೀಪಿನಿಂದ ಮೂವರು ಅಪರಿಚಿತ ವ್ಯಕ್ತಿಗಳುಇಳಿದು ಟಿ.ಆರ್‌ ಶಿವದಾಸ್‌ರವರ ಹೆಸರನ್ನು ಕರೆದು ಹಿಂಬಧಿಯಿಂದ ಬಂದು ಕಾರಿನ ಬೀಗದ ಕೀ ಹಾಗೂ ಬಿಳಿ ಬಣ್ಣದ ಸ್ಯಾಮ್ ಸಂಗ್ ಜಿ.ಟಿ. 19200 ಮಾಡೆಲ್ ಮೊಬೈಲ್ ಹಾಗೂ ಅದರಲ್ಲಿದ್ದ ಸಿಮ್ ನಂ 9448217395 ರನ್ನು ಕಿತ್ತುಕೊಂಡು ಅವರನ್ನು ತಳ್ಳಿ ಬೀಳಿಸಿ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್‌ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

Monday, July 13, 2015

 ವ್ಯಕ್ತಿಗೆ ನಿಂದನೆ, ಕೊಲೆ ಬೆದರಿಕೆ:

     ಗೋಣಿಕೊಪ್ಪ ಪೊಲೀಸ್‌ ಠಾಣಾ ಸರಹದ್ದಿನ ಪಾಲಿಬೆಟ್ಟ ರಸ್ತೆಯಲ್ಲಿಕೆ.ಎಂ. ಅಬ್ದುಲ್ಲಾ ಅಜೀಜ್‌ ಎಂಬವರಿಗೆ ಸೇರಿದ ನ್ಯಾಯಬೆಲೆ ಅಂಗಡಿಗೆ ದಿನಾಂಕ 12-7-2015 ರಂದು ಕುಪ್ಪಣಮಾಡ ಪೂಣಚ್ಚ, ರಶೀದ, ಕುಸುಮ ಶರೀಫ ಎಂಬವರು ಬಂದು 10 ಕೆ.ಜಿ ಅಕ್ಕಿಕೊಡುವಂತೆ ಕೇಳಿದ್ದು, ಕಾರ್ಡ್‌ ಇಲ್ಲದೆ ಅಕ್ಕಿ ಕೊಡಲು ನಿರಾಕರಿಸಿದ ಎಂ. ಅಬ್ದುಲ್ ಅಜೀಜ್‌ರವರನ್ನು ಸದರಿ ವ್ಯಕ್ತಿಗಳು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

ವಿದ್ಯುತ್‌ ಸ್ಪರ್ಷದಿಂದ ಕಾಡಾಣೆ ಸಾವು:

     ವಿರಾಜಪೇಟೆ ತಾಲೋಕು ಮಾಯಮುಡಿ ಗ್ರಾಮದಲ್ಲಿ ಎನ್.ಹೆಚ್.ನಾಸರ್‌ ಎಂಬವರ ಕಾಫಿ ತೋಟದಲ್ಲಿ ಅಂದಾಜು 45-50 ವರ್ಷದ ಒಂದು ಕಾಡಾನೆ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದು, ಸದರಿ ತೋಟದಲ್ಲಿ ಸುಮಾರು 12 ಅಡಿ ಎತ್ತರದಲ್ಲಿ ಹಾದು ಹೋದ ವಿದ್ಯುತ್‌ ತಂತಿಗೆ ಸ್ಪರ್ಷಗೊಂಡ ಆನೆ ಸಾವನಪ್ಪಿರುವುದು ಕಂಡು ಬಂದಿದ್ದು ಗೋಣಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.  

ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿ ಸಾವು:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಾವಲಿ ಗ್ರಾಮದ ನಿವಾಸಿ ಪಿ.ಎ. ಮಜೀದ್‌ ಎಂಬವರ ಅಣ್ಣ ಪಿ.ಎ. ಹಮೀದ್, ರವರು ಕುಂಜಿಲಗೇರಿ ಗ್ರಾಮದ ಚೊಟ್ಟೇರ ಅಶೋಕ ಎಂಬವರ ತೋಟದಲ್ಲಿ ದಿನಾಂಕ: 12-07-15ರಂದು ಅಲ್ಯುಮಿನಿಯಂ ಏಣಿ ಯಲ್ಲಿ ಹತ್ತಿ ಕೆಲಸ ಮಾಡುತ್ತಿರುವಾಗ ಮರದ ಪಕ್ಕದಲ್ಲಿ ಹಾದುಹೋದ ವಿದ್ಯುಚ್ಛಕ್ತಿ ತಂತಿಗೆ ತಗುಲಿ ಗಂಬೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾದ ಸಾವನಪ್ಪಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ಯಾಂಕರ್‌ ಡಿಕ್ಕಿ, ಪಾದಾಚಾರಿ ಸಾವು:

ದಿನಾಂಕ 11-7-2015 ರಂದು ರಾತ್ರಿ 9-30 ಗಂಟೆಗೆ ಸತೀಶ ಎಂಬ ವ್ಯಕ್ತಿ ಕುಶಾಲನಗರ ಠಾಣಾ ವ್ಯಾಪ್ತಿಯ ಗುಡ್ಡಹೊಸೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೆಎ 19 ಎಬಿ 6677 ರ ಟ್ಯಾಂಕರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಅಕ್ರಮ ಪ್ರವೇಶ, ಪ್ರಕರಣದಾಖಲು: 

    ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮಕ್ಕಂದೂರು ಗ್ರಾಮದಲ್ಲಿ ಎಂ.ಐ. ಇಮ್ತಿಯಾಜ್‌ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ದಿನಾಂಕ 10-7-2015 ರಂದು ಆರೋಪಿಗಳಾದ ರವಿಕುಶಾಲಪ್ಪ, ಕಿಶನ್, ಕುಶ, ಮನೋಜ್, ಚುಮ್ಮಿಬಿದ್ದಪ್ಪ, ಬಿ.ಎಸ್ ಸತೀಶ್, ಅಜಿತ್ (ಮೂಕಂಬಿಕಾ ಎಲೆಕ್ಟ್ರಾನಿಕ್ಸ್ ಮಡಿಕೇರಿ) ಚೇತನ್, ಪ್ರಸನ್ನಭಟ್ ಮತ್ತು ಇತರರು ಅಕ್ರಮ ಪ್ರವೇಶ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದಪೊಲೀಸರು ಮುಂದಿನತನಿಖೆ ಕೈಗೊಂಡಿದ್ದಾರೆ.

Sunday, July 12, 2015

ಆಟೋ ರಿಕ್ಷಾಕ್ಕೆ ಸ್ಕೂಟರ್‌ ಡಿಕ್ಕಿ:
     ಮಡಿಕೇರಿ ನಗರದ ರಾಣಿಪೇಟೆಯಲ್ಲಿ ವಾಸವಾಗಿರುವ ಹೆಚ್‌.ಎಂ. ಸಂತೋಷ್‌ ಕುಮಾರ್‌ ರವರು ದಿನಾಂಕ 10-7-2015 ರಂದು ತಮ್ಮ ಆಪ್ತು ಆಟೋ ರಿಕ್ಷಾದಲ್ಲಿ  ಮಡಿಕೇರಿ ನಗರದ ಕದಂಬ ವೈನ್ಸ್‌ ಮುಂದುಗಡೆ ಹೋಗುತ್ತಿದ್ದಾಗ ಇದುರುಗಡೆಯಿಂದ ಐಮುಡಿಯಂಡ ದೇವಯ್ಯ ಎಂಬವರು ಸ್ಕೂಟರ್‌ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಆಕ್ಮಸಿಕ ಬೆಂಕಿ ತಗುಲು ಮಹಿಳೆಯ ದುರ್ಮರಣ:
     ಮಡಿಕೇರಿ ತಾಲೋಕಿನ ಕಗ್ಗೋಡ್ಲು ಗ್ರಾಮದಲ್ಲಿ ಸೋಮಯ್ಯ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಎನ್‌.ಬಿ. ರಾಜ ಎಂಬವರ ಪತ್ನಿ ಬಿ.ಚಂದ್ರಾವತಿ  ಸೀಮೆಎಣ್ಣೆ  ದೀಪ ಹುರಿಸುತ್ತಿದ್ದಾಗ ಆಕಸ್ಮಿಕವಾಗಿ ಕ್ಯಾನ ಕೆಳಗೆ ಬಿದ್ದು ಬೆಂಕಿ ಹೊತ್ತಿಕೊಂಡು ಅಕೆಯ ಮೈಗೂ ಬೆಂಕಿ ತಗುಲು ತೀವ್ರವಾಗಿ ಗಾಯಗೊಂಡಿದ್ದು ಆಕೆಯನ್ನು ಮೈಸೂರಿನ ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿಕ್ಸೆಗೆ ದಾಖಲು ಪಡಿಸಿ  ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 10-7-2015 ರಂದು ಮರಣ ಹೊಂದಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, July 10, 2015

ರೆಸಾರ್ಟ್ ನಿಂದ ಚಿನ್ನದ ತಾಳಿ ಚೈನು ಕಳವು: 

     ಕೇರಳ ರಾಜ್ಯದ ಕೋಯಿಕೋಡು ನಿವಾಸಿ ಯಾಸರ್‌ ಎಂಬುವರು ದಿನಾಂಕ 14-01-2015ರಂದು ಕುಶಾಲನಗರದ ಪಾಮ್ ಎರಾ ರೇಸಾಟ್ ನ ಕಾಟೇಜ್ ನಂ 107ರಲ್ಲಿ ತನ್ನ ಹೆಂಡತಿಯೊಂದಿಗೆ ತಂಗಿದ್ದು ಮಲಗುವ ಮುನ್ನ ತನ್ನ ಹೆಂಡತಿ ಪೆಂಡೆಂಟ್ ಇರುವ ಚಿನ್ನದ ತಾಳಿ ಚೈನನ್ನು ರೂಂ ನ ಟೇಬಲ್ ಮೇಲೆ ಇಟ್ಟು ಮಲಗಿದ್ದು ಬೆಳಿಗ್ಗೆ ಎಂದು ನೋಡಲಾಗಿ ಟೇಬಲ್ ಮೇಲೆ ಚಿನ್ನದ ತಾಳಿ ಕಾಣೆಯಾಗಿದ್ದು ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇದರ ಅಂದಾಜು ಮೌಲ್ಯ 45,000/- ಅಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮನುಷ್ಯ ಕಾಣೆ: 

     ಹಾಸನ ಜಿಲ್ಲೆಯ ಕೋಣನೂರು ಗ್ರಾಮದ ನಿವಾಸಿ ಪಾಪಯ್ಯ ಎಂಬವರ ಮಗ ರಾಜು ಪ್ರಾಯ 35ವರ್ಷ ಇವರು ತೊರೆನೂರು ಗ್ರಾಮದ ಕೆಂಚಯ್ಯನ ಮಗಳಾದ ಜಯಲಕ್ಷ್ಮಿ ಯನ್ನು ಆರು ವರ್ಷದ ಹಿಂದೆ ವಿವಾಹವಾಗಿದ್ದು , ನಂತರ ಹೆಂಡತಿಯ ಮನೆಯಲ್ಲೆ ಇದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎರಡು ತಿಂಗಳಿಂದ ರಾಜು ಕಾಣೆಯಾಗಿದ್ದು , ಈಗ್ಗೆ ಎರಡು ತಿಂಗಳ ಹಿಂದೆ ತನ್ನ ಹೆಂಡತಿಯ ಮನೆಯಿಂದ ಶುಂಠಿ ಕೆಲಸಕ್ಕೆ ಹಾಸನದ ಕಡೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದವನು ಈವರೆಗೂ ಹೆಂಡತಿ ಮನೆಗಾಗಲೀ ಪಿರ್ಯಾದಿ ಮನೆಗಾಗಲೀ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ. 

ಮನುಷ್ಯ ಕಾಣೆ: 

    ವಿರಾಜಪೇಟೆ ತಾಲೋಕು, ಚೆಂಬೆಬೆಳ್ಳೂರು ಗ್ರಾಮದ ನಿವಾಸಿಶ್ರೀಮತಿ ಹೆಚ್‌.ಎಸ್‌. ಸರಸು ಎಂಬುವರ ಗಂಡ ಶಿವಪ್ಪ ನವರು ಪಿಡ್ಸ್ ಕಾಯಿಲೆ ಮತ್ತು ಎಡ ಕೈ ನೋವು ಇದ್ದು, ದಿನಾಂಕ: 30-06-15 ರಂದು ಬೆಳಿಗ್ಗೆ 11-00 ಗಂಟೆಗೆ ತಾನು ವಿರಾಜಪೇಟೆಯಲ್ಲಿ ಅಡುಗೆ ಕೆಲಸದ ಬಗ್ಗೆ ಹೋಗು ತ್ತಿದ್ದೇನೆಂದು ತಿಳಿಸಿ ಮನೆಯಿಂದ ಹೋಗಿದ್ದು, ನಂತರ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಹೆಚ್‌.ಎಸ್‌. ಸರಸು ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Thursday, July 9, 2015

ಬೈಕ್‌ಗೆ ರಿಕ್ಷಾ ಡಿಕ್ಕಿ, ಇಬ್ಬರಿಗೆ ಗಾಯ:

     ಮೂಲತ:  ಮೈಸೂರಿನ ನಿವಾಸಿಯಾದ ತೇಜಸ್‌ ಎಂಬವರು ದಿನಾಂಕ 6.7.15 ರಂದು ಸ್ನೇಹಿತ ಸೂರಜ್‌ ರವರೊಂದಿಗೆ ತಮ್ಮ ಭಾಪ್ತು  ಕೆಎ.09.ಹೆಚ್‌ಡಿ.1418 ರ ಮೋಟಾರ್‌ ಸೈಕಲ್‌ ನಲ್ಲಿ  ಶ್ರೀಮಂಗಲದ ಇರ್ಪು ಪಾಲ್ಸ್  ನೋಡಿಕೊಂಡು  ವಾಪಾಸ್ಸು ಮೈಸೂರಿಗೆ ಹೋಗುತ್ತಿದ್ದಾಗ   ತಿತಿಮತಿ ಗ್ರಾಮದ ಮತ್ತಿಗೊಡು ಆನೆ ಕ್ಯಾಂಪ್‌ ಬಳಿ ಹೋಗುತ್ತಿದ್ದಾಗ  ಎದುರುಗಡೆಯಿಂದ  ಕೆಎ.12.ಎ.6014 ರ ಅಟೋ ರಿಕ್ಷಾ ಚಾಲಕನು ತನ್ನ ಆಟೋ ರಿಕ್ಷಾವನ್ನು ಅತೀ ವೇಗ ಮತ್ತು ಅಜಾಗರೂಕತೆ ಯಿಂದ ಚಾಲಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿಪಡಿಸಿದಪರಿಣಾಮ  ತೇಜಸ್‌ ಹಾಗು ಸೂರಜ್‌ರವರು ಗಾಯಗೊಂಡಿದ್ದು ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Wednesday, July 8, 2015

ಮಹಿಳೆಗೆ ಕಾರು ಡಿಕ್ಕಿ:

     ಸಿದ್ದಾಪುರ ಠಾಣಾ ಸರಹದ್ದಿನ ಗುಹ್ಯ ಗ್ರಾಮದ ನಿವಾಸಿ ಶ್ರೀಮತಿ ಕಾಳಿ ಎಂಬವರು ದಿನಾಂಕ 7-7-2015 ರಂದು ಸಿದ್ದಾಪುರ ನಗರದ ಪಾಲಿಬೆಟ್ಟ ರಸ್ತೆಯ ಜಂಕ್ಷನ್ ಬಳಿ ರಾತ್ರಿ 08:00 ಗಂಟೆಯ ವೇಳೆಗೆ ಮನೆಕಡೆ ಹೋಗುವ ಸಲುವಾಗಿ ಆಟೋ ರಿಕ್ಷಾವನ್ನು ಕಾಯುತ್ತಿರುವಾಗ್ಗೆ ವಿರಾಜಪೇಟೆ ರಸ್ತೆಯ ಕಡೆಯಿಂದ ಕೆ.ಎ.01ಜೆಡ್ 4429 ರ ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಎಡ ಸೊಂಟ ಹಾಗೂ ಎರಡು ಕೈಗಳಿಗೆ ಗಾಯಗಳಾಗಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ: 

     ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕುಡುಂಬೂರು ತಿತಿಮತಿ ಗ್ರಾಮದಲ್ಲಿ ವಾಸವಾಗಿರುವ ಜೆ.ಎ. ಮುತ್ತಪ್ಪಎಂಬವರು ದಿನಾಂಕ 7.7.15 ರಂದು ಬೆಳಿಗ್ಗೆ 8:00 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗುತ್ತಿರುವಾಗ್ಗೆ ಕುಡುಂಬೂರು ಪೈಸಾರಿ ವಾಸಿ ಮಣಿಕಂಠನು ಸೋಮಪ್ಪನವರ ಅಂಗಡಿಯ ಮುಂದೆ ತಮ್ಮ ಬಾಪ್ತು ಆಟೋ ರಿಕ್ಷಾದಲ್ಲಿ ಬಂದು ಮುತ್ತಪ್ಪನವರನ್ನು ತಡೆದು ನಿಲ್ಲಿಸಿ ಗ್ರಾಮ ಪಂಚಾಯ್ತಿ ಚುನಾವಣಾ ಸಮಯದಲ್ಲಿ ವಿರೋಧವಾಗಿ ನಡೆದುಕೊಂಡಿದ್ದಿಯಾ ಎಂದು ಜಗಳ ತೆಗೆದು ಅಟೋ ರಿಕ್ಷಾದಿಂದ ಕಬ್ಬಿಣದ ರಾಡನ್ನು ತೆಗೆದು ಏಕಾಏಕಿ ಮುತ್ತಪ್ಪನವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದು, ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, July 7, 2015

ವ್ಯಾಪಾರದಲ್ಲಿ ನಷ್ಟ, ವ್ಯಕ್ತಿ ಆತ್ಮಹತ್ಯೆ: 

     ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ವ್ಯಕ್ತಿಯೊಬ್ಬರು ಜಿಗುಪ್ಸೆಗೊಂಡು ನೇಣು ಹಾಕಿಗೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ಶನಿವಾರಸಂತೆ ಸಮೀಪದ ಬಿದರೂರು ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಬಿದರೂರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಪದ್ಮಮ್ಮ ಎಂಬವರ ಮಗ 35 ವರ್ಷ ಪ್ರಾಯದ ಮಹೇಂದ್ರ ಕುಮಾರ್‌ ಎಂಬವರು 2 ಷರ್ವದಿಂದ ಗುಡುಗಳಲೆ ಗ್ರಾಮದಲ್ಲಿ ಎಲೆಕ್ಟ್ರಿಕ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡಿಕೊಂಡಿದ್ದು, ಸದರಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದು, ಇದರಿಂದ ಜಿಗುಪ್ಸೆಗೊಂಡು 5-7-2015 ರಂದು ತನ್ನ ಮನೆಯ ಪಕ್ಕದ ದನದ ಕೊಟ್ಟಿಗೆಯಲ್ಲಿ ಕುತ್ತಿಗೆಗೆನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೆಂಗಸು ಕಾಣೆ:

     ಗರ್ಭಿಣಿ ಮಹಿಳೆಯೊಬ್ಬರು ತಮ್ಮ ಮನೆಯಿಂದ ಕಾಣೆಯಾದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೊಳ್ತೋಡು ಬೈಗೋಡು ಗ್ರಾಮದಲ್ಲಿ ನಡೆದಿದೆ. ಮಾಂಗೇರಮುತ್ತಪ್ಪ ಎಂಬವರ ಹೆಂಡತಿ ನಿಶಾ, ರವರು 5 ತಿಂಗಳ ಗರ್ಭಿಣಿಯಾಗಿದ್ದು, ದಿನಾಂಕ 06-07-15 ವರು ಬೆಳಿಗ್ಗೆ 8-30ಗಂಟೆಗೆ ಮಾಂಗೇರ ಮುತ್ತಪ್ಪ ನವರು ತೋಟಕ್ಕೆ ಹೋದ ಸಮಯದಲ್ಲಿ ಪತ್ನಿ ನಿಶಾರವರು ಯಾವುದೋ ಒಂದು ಕಪ್ಪು ಬಣ್ಣದ ಕಾರಿನಲ್ಲಿ ಮನೆಯಿಂದ ಹೋಗಿರುವ ಬಗ್ಗೆ ತಿಳಿದು ಬಂದಿದ್ದು ಮತ್ತೆ ಮ್ರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂದು ಆಕೆಯ ಮಾಂಗೇರ ಮುತ್ತಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಹೆಂಗಸು ಕಾಣೆ, ಪ್ರಕರಣ ದಾಖಲು: 

     ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ತಿತಿಮತಿ- ನೋಕ್ಯ ಗ್ರಾಮದ ನಿವಾಸಿ ಹೆಚ್‌.ಆರ್‌. ವಸಂತ ಎಂಬವರ ಪತ್ನಿ ಶ್ರೀಮತಿ ಶಶಿ ಎಂಬವರು ದಿನಾಂಕ 29-6-2-15 ರಂದು ತಮ್ಮಮನೆಯಿಂದ ಕಾಣೆಯಾಗಿದ್ದು, ಈ ಸಂಬಂಧ 6-7-2015 ರಂದು ಹೆಚ್‌.ಆರ್‌. ವಸಂತರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾಡಾನೆ ತುಳಿದು ಗಾಯಗೊಂಡ ವ್ಯಕ್ತಿಯ ಸಾವು:

     ಕೆಲದಿನಗಳ ಹಿಂದೆ ಕಾಡಾನೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗಿದ ಸಾವನಪ್ಪಿದ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಅತ್ತೂರು-ನಲ್ಲೂರು ಗ್ರಾಮದಲ್ಲಿ ನಡೆದಿದೆ. ಅತ್ತೂರು ನಲ್ಲೂರು ಗ್ರಾಮದಲ್ಲಿ ರುವ ವಿಜಯ ಎಸ್ಟೇಟ್‌ ಲೈನುಮನೆಯಲ್ಲಿ ವಾಸವಾಗಿದ್ದ ಕುಮಾರ (68) ಎಂಬವರು ದಿನಾಂಕ 14-5-2015 ರಂದು ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಮಯ ಕಾಡಾನೆಯೊಂದು ದಾಳಿ ಮಾಡಿದ್ದು ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ಕುಮಾರರವರು ದಿನಾಂಕ 6-7-2015 ರಂದು ಮೃತಪಟ್ಟಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹುಡುಗಿ ಕಾಣೆ: 

    ಯುವತಿಯೋರ್ವಳು ತನ್ನ ಮನೆಯಿಂದ ಕಾಣೆಯಾದ ಘಟನೆ ಕುಶಾಲನಗರದ ದಂಡಿನಪೇಟೆ ಯಲ್ಲಿ ನಡೆದಿದೆ. ಕುಶಾಲನಗದ ದಂಡಿನಪೇಟೆ 2ನೇ ಬ್ಲಾಕ್‌ನಲ್ಲಿ ವಾಸವಾಗಿರುವ ಚಂದ್ರಕಾಂತ ಎಂಬವರ ಮಗಳಾದ 21 ವರ್ಷ ಪ್ರಾಯದ ಮೇಘ ಎಂಬಾಕೆ ದಿನಾಂಕ 2-7-2015 ರಂದು ರಾತ್ರಿ 10-00 ಗಂಟೆಯ ಸಮಯದಿಂದ ತಮ್ಮ ಮನೆಯಿಂದ ಕಾಣೆಯಾಗಿದ್ದು, ಚಂದ್ರಕಾಂತ್‌ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.  

ಕುಡಿದ ಅಮಲಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ:

     ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಮಲ್ಲಂಗೆರೆ ಗ್ರಾಮದಿಂದ ವರದಿಯಾಗಿದೆ. ಮಲ್ಲಂಗೆರೆ ಗ್ರಾಮದಲ್ಲಿ ವಾಸಿಸುತ್ತಿದ್ದ ರವಿ ಎಂಬ ವ್ಯಕ್ತಿಗೆ ಪ್ರತಿದಿನ ಮದ್ಯಪಾನ ಮಾಡುವ ಅಭ್ಯಾಸವಿದ್ದು, ತನ್ನ ಪತ್ನಿ ಕುಡಿತದ ಬಗ್ಗೆ ಬುದ್ದಿವಾದ ಹೇಳಿದ ಕಾರಣಕ್ಕೆ ಬೇಸತ್ತು ದಿನಾಂಕ 5-7-2015 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Monday, July 6, 2015

ಕ್ಷುಲ್ಲಕ ವಿಚಾರದಲ್ಲಿ ವ್ಯಕ್ತಿ ಮೇಲೆ ಕತ್ತಿಯಿಂದ ಹಲ್ಲೆ: 

     ವಿರಾಜಪೇಟೆ ತಾಲೋಕು, ಕಿರುಗೂರು ಗ್ರಾಮದ ನಿವಾಸಿ ಮಣಿ ಎಂಬವರು ದಿನಾಂಕ 5-7-2015 ರಂದು ತಮ್ಮ ಪತ್ನಿ ಮಂಜುಳರವರೊಂದಿಗೆ ಕೂಲಿಕೆಲಸ ಮುಗಿಸಿಕೊಂಡು ಕಿರುಗೂರು ಗ್ರಾಮದ ತಮ್ಮ ಮನೆಗೆ ವಾಪಾಸ್ಸು ಹೋಗುತ್ತಿರುವಾಗ್ಗೆ, ಸಮಯ ಸಂಜೆ 6:15 ಗಂಟೆಗೆ ಪೊನ್ನಂಪೇಟೆಯ ಕೆ.ಈ.ಬಿ ಹತ್ತಿರ ದಿನೇಶ ಎಂಬಾತನು ಮಣಿಯವರನ್ನು ಕುರಿತು ನನಗೆ ನೀನು 2 ದಿನದ ಹಿಂದೆ ಏಕೆ ಬೈದೆ ಎಂದು ಹೇಳಿ ಕತ್ತಿಯಿಂದ ಪಿರ್ಯಾಧಿಯವರ ಎಡದ ಕಣ್ಣಿನ ಹತ್ತಿರ ಹೊಡೆದು ಗಾಯಪಡಿಸಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಶಾಲಾ ವಿದ್ಯಾರ್ಥಿ ಕಾಣೆ, ಪ್ರಕರಣ ದಾಖಲು:

     ಕುಶಾಲನಗರ ಠಾಣಾ ಸರಹದ್ದಿನ ಸೀಗೆಹೊಸೂರು ಗ್ರಾಮದ ದೇವಯ್ಯ ಎಂಬವರ ಮಗ 15 ವರ್ಷ ಪ್ರಾಯದ ವೆಂಜಿತ್ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಡ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದು ಮನೆಯಿಂದ ಎಂದಿನಂತೆ ಬೆಳಿಗ್ಗೆ 08-30 ಎ ಎಂಗೆ ಶಾಲೆಗೆ ಹೋದವನು ಈವರೆಗೆ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ದೇವಯ್ಯನವರದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಮೇಲೆ ದೌರ್ಜನ್ಯ, ನೇಣುಬಿಗಿದುಕೊಂಡು ಆತ್ಮಹತ್ಯೆ: 

     ಗಂಡನ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರದ ಸುಂದರನಗರ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಮುಳ್ಳೂರು ಗ್ರಾಮದ ನಿವಾಸಿ ರಾಜಮ್ಮ ಎಂಬವರ ಮಗಳಾದ ಪೂರ್ಣಿಮಾಳನ್ನು ಈಗ್ಗೆ 6 ವರ್ಷಗಳ ಹಿಂದೆ ಕುಶಾಲನಗರದ ಸುಂದರ ನಗರದ ನಿವಾಸಿ ಗಣೇಶ ಎಂಬವರು ಮದುವೆಯಾಗಿದ್ದು,, 5 ವರ್ಷ ಪ್ರಾಯದ ಪ್ರೇಕ್ಷಿತ್ ಎಂಬ ಮಗನಿರುತ್ತಾನೆ. ಮಗ ಹುಟ್ಟಿದ ನಂತರ ಗಣೇಶನು ಮದ್ಯ ಸೇವಿಸುವ ಅಭ್ಯಾಸ ಬೆಳೆಸಿಕೊಂಡಿದ್ದು, ಪೂರ್ಣಿಮಾಳನ್ನು ಚೆನ್ನಾಗಿ ನೋಡಿಕೊಳ್ಳದೇ ಆಕೆಯ ಚಿನ್ನಾಭರಣಗಳನ್ನೆಲ್ಲಾ ಮಾರಾಟ ಮಾಡಿ ಮತ್ತು ಮದ್ಯಪಾನ ಮಾಡಲು ತಾಯಿ ಮನೆಯಿಂದ ಹಣ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ಇದರಿಂದಾಗಿ ಅವರ ಮಗುವನ್ನು ಪಿರ್ಯಾದಿಯವರೇ ಸಾಕುತ್ತಿದ್ದು, ಪೂರ್ಣಿಮಾಳು ಸಹ 6 ತಿಂಗಳು ಗಂಡನ ಮನೆಯಲ್ಲಿ 6 ತಿಂಗಳು ತಾಯಿ ಮನೆಯಲ್ಲಿ ಇರುತ್ತಿದ್ದಳು. ಇದರಿಂದ ನೊಂದ ಪೂರ್ಣಿಮ ದಿನಾಂಕ 4-7-2015 ರಂದು ತನ್ನ ಗಂಡನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯತಾಯಿ ರಾಜಮ್ಮನವರು ನೀಡಿದ ದೂರಿನಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲು ಗೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ. 

ಮಾರುತಿ ಓಮ್ನಿ ಡಿಕ್ಕಿ, ವ್ಯಕ್ತಿಗೆ ಗಾಯ: 

     ಅಜಾಗರೂಕತೆ ಚಾಲನೆಯಿಂದ ಮಾರುತಿಓಮ್ನಿಯೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಕೈ ಮುರಿದಿರುವ ಬಗ್ಗೆ ವಿರಾಜಪೇಟೆ ಸಮೀಪದ ಕದನೂರಿನಲ್ಲಿ ನಡೆದಿದೆ. ದಿನಾಂಕ 02-07-15ರಂದು ಮೂರ್ನಾಡುವಿನ ಶಾಸ್ತ್ರಿನಗರದ ನಿವಾಸಿ ಕಾವೇರಿ ಕಾಲೇಜು ವಿದ್ಯಾರ್ಥಿ ಪಂಡಿಕಂಡ ಎಸ್‌. ಉತ್ತಪ್ಪ ಎಂಬಾತ ಆತನ ಸ್ನೇಹಿತ ಕಾವೇರಪ್ಪ, ರವರ ಮಾರುತಿ ವ್ಯಾನ್ ನಂ. ಕೆಎ.12.ಜೆಡ್.3079 ರಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜ್ ಗೆ ಹೋಗಿ ವಾಪಾಸ್ಸು ಸಂಜೆ 5-15 ಪಿ.ಎಂ.ಗೆ ಮುರ್ನಾಡು ಕಡೆಗೆ ಹೋಗುತ್ತಿದ್ದಾಗ ವಿರಾಜಪೇಟೆಯ ಕದನೂರು ತಲುಪುವಾಗ್ಗೆ ಕಾವೇರಪ್ಪನವರು ಸದರಿ ವ್ಯಾನನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಎಡ ಬದಿಯ ಮರವೊಂದಕ್ಕೆ ಡಿಕ್ಕಿಪಡಿಸಿದ ಪರಿಣಾಮ ಉತ್ತಪ್ಪನ ಎಡ ಕೈಯ ತೋಳಿನ ಭಾಗದ ಮೊಳೆ ಮುರಿದು ಹೋಗಿದ್ದು ಮಂಗಳೂರಿನ ತೇಜಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 5-7-2015 ರಂದು ಅಪಘಾತವಾದ ಬಗ್ಗೆ ನೀಡಿದ ದೂರಿನಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿತನಿಖೆಕೈಗೊಂಡಿದ್ದಾರೆ.

Posted byVartika Katiyar, IPS

ಗೋಡೌನ್‌ ಬೀಗ ಮುರಿದು ಕರಿಮೆಣಸು ಕಳವು: 

   ವಿರಾಜಪೇಟೆ ತಾಲೋಕು ಕಡಂಗ ಅರಪಟ್ಟು ಗ್ರಾಮದ ನಿವಾಸಿ ಪಿ.ಎಂ. ಮೊಹಮ್ಮದ್‌ ಎಂಬವರು ತನ್ನ ಬಾಫ್ತು ಗೊಡೋನಿಗೆ ಸಂಜೆ 7.00 ಗಂಟೆಗೆ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ 04-07-15 ರಂದು ಸಂಜೆ 6.00 ಪಿ.ಎಂ ಗೆ ಗೊಡೋನಿಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ಗೊಡೋನಿನ ಬೀಗವನ್ನು ಆಕ್ಸಲ್ ಬ್ಲೆಡ್ ನಿಂದ ಮುರಿದು ಒಳಗೆ ನುಗ್ಗಿ ಗೊಡೋನಿನ ಒಳಗೆ ಶೇಖರಿಸಿ ಇಟ್ಟಂತಹ 2 ನೇ ದರ್ಜೆಯ ಸುಮಾರು 80 ಕೆ.ಜಿ.ಯಷ್ಠು 4 ಚೀಲದಲ್ಲಿ ಇದ್ದ ಕರಿ ಮೆಣಸನ್ನು ಕಳವು ಮಾಡಿಕೊಂಡು ಹೋಗಿದ್ದು ಸದರಿ ಕರಿ ಮೆಣಸಿನ ಅಂದಾಜು ಮೌಲ್ಯ 23,500/- ಆಗಬಹುದೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

ಯುವಕ ಕಾಣೆ, ಪ್ರಕರಣ ದಾಖಲು: 

     ಮಕ್ಕಂದೂರು ಗ್ರಾಮದ ನಿವಾಸಿ ಶ್ರೀ ಎಂ.ಕೆ.ವೇಣುರವರ ಮಗ ಪ್ರಾಯ 21 ವರ್ಷದ ಸಿಜು ಎಂಬಾತನು ತನ್ನ ತಂದೆ ತಾಯಿಯವರೊಂದಿಗೆ ವಾಸವಾಗಿದ್ದು, ದಿನಾಂಕ: 02-07-2015ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯಿಂದ ತೆರಳಿದವನು ವಾಪಾಸ್ಸು ಮನೆಗೆ ಮರಳದೆ ಕಾಣೆಯಾಗಿದ್ದು, ಎಂ.ವೇಣುರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

Saturday, July 4, 2015

ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವಕನ ಆತ್ಮಹತ್ಯೆ:

     ಕುಶಾಲನಗರ, ಹೆಬ್ಬಾಲೆ ಗ್ರಾಮದ ನಿವಾಸಿ ಸುರೇಶ ಎಂಬವರ ಮಗ 24 ವರ್ಷ ಪ್ರಾಯದ ಅಜಿತ್‌ ಕುಮಾರ್ ಎಂಬಾತ ಎದುರು ಮನೆಯ ನಿವಾಸಿ ಪರಮೇಶ ಎಂಬ ವ್ಯಕ್ತಿಯ ಹೆಂಡತಿ ಪ್ರಮಿಳ ಎಂಬುವಳನ್ನು ಪ್ರೀತಿಸುತ್ತಿದ್ದು, ಸದರಿ ಪ್ರಮಿಳ ಅಜಿತ್ ಕುಮಾರ್ ನನ್ನು ಇಷ್ಟಪಡುತಿಲ್ಲವೆಂದು ಹೇಳಿದ ಕಾರಣಕ್ಕೆ ಅಜಿತ್ ಕುಮಾರನು ಬೇಸರಗೊಂಡು ದಿನಾಂಕ 2-7-2015 ರಂದು ಯಾವುದೊ ವಿಷ ಪಧಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಹಾಸ್ಟೇಲ್‌ನಲ್ಲಿ ಇರಲು ಇಷ್ಟವಿಲ್ಲದೆ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆ:

    ಹಾಸ್ಟೇಲ್‌ನಲ್ಲಿ ಇರಲು ಇಷ್ಟ ಇಲ್ಲದ ಕಾರಣದಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾದಾಪುರದ ಐರೂರು ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಕುಂಬಾರಗಡಿಗೆ ಗ್ರಾಮದ ನಿವಾಸಿ ದಿ: ವೀರಪ್ಪ ಎಂಬವರ ಮಗಳಾದ ಕುಮಾರಿ ನಿಶಿತಾ ಕುಶಾಲನಗರದ ಮುಕಾಂಬಿಕ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, ಅಲ್ಲಿನ ಜನರಲ್‌ ಹಾಸ್ಟೇಲ್‌ನಲ್ಲಿ ವಾಸಮಾಡುತ್ತಿದ್ದು, ಅಲ್ಲಿ ನೆಲೆಸಲು ಇಷ್ಟ ಇಲ್ಲದೇ ಇರುವ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30-6-2015 ರಂದು ಯಾವುದೋ ವಿಷ ಪಧಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡು ಆಕೆಯನ್ನು ಚಿಕಿತ್ಸೆಗೆ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 3-7-2005 ರಂದು ಆಕೆ ಮೃತಪಟ್ಟಿದ್ದು, ಸೋಮವಾರಪೇಟೆ ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ದಾರಿತಡೆದು ವ್ಯಕ್ತಿ ಮೇಲೆ ಹಲ್ಲೆ:

     ದಿನಾಂಕ 2-7-2015 ರಂದು ರಾತ್ರಿ 9-30 ಗಂಟೆಗೆ ಕುಶಾಲನಗರದ ಮುಳ್ಳುಸೋಗೆ ಗ್ರಾಮದ ನಿವಾಸಿ ಶೇಖರ್‌ ಪೂಜಾರಿ ಎಂಬವರು ಕುಶಾಲನಗರದ ದಂಡಿನಪೇಟೆಯಲ್ಲಿನ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವಾಗ ಒಬ್ಬ ಹುಡುಗ ಅಂಗಡಿಯ ಮುಂದೆ ಕಸವನ್ನು ಬಿಸಾಡಿದ್ದು ಇದನ್ನು ವಿಚಾರಿಸಿದ ಕಾರಣಕ್ಕೆ ಇರ್ಫಾನ್ ಎಂಬ ವ್ಯಕ್ತಿ ಶೇಖರ್‌ಪೂಜಾರಿಯವರ ದಾರಿ ತಡೆದು ನಿಲ್ಲಿಸಿ ಬಲಗೈಯಿಂದ ಬಲಕಣ್ಣಿನ ಕೆಳ ಬಾಗಕ್ಕೆ ಗುದ್ದಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮನುಷ್ಯ ಕಾಣೆ, ಪ್ರಕರಣ ದಾಖಲು:

     ಪಿರಿಯಾಪಟ್ಟಣ ತಾಲೋಕಿನ ಬೂದಿತಿಟ್ಟು ಗ್ರಾಮದ ಪುಟ್ಟ (46) ಎಂಬವರು ದಿನಾಂಕ 24-6-2015 ರಂದು ತನ್ನ ಮಗಳಾದ ನಂದಿನಿ ಎಂಬಾಕೆಯನ್ನು ಸಿದ್ದಾಪುರ ಪೊಲೀಸ್‌ ಠಾಣಾ ಸರಹದ್ದಿನ ಬೈರಂಬಾಡ ಕ್ರೂಟನ್‌ ಎಸ್ಟೇಟ್‌ನ ಲೈನ್‌ ಮನೆಯಲ್ಲಿ ವಾಸವಾಗಿರುವ ಪಲ್ಲವಿ ಎಂಬವರ ಮನೆಯಿಂದ ಕರೆದುಕೊಂಡು ಬರುವ ಸಲುವಾಗಿ ಹೋಗಿದ್ದು, ಅಂದು ಅಪರಾಹ್ನ 4-00 ಗಂಟೆಗೆ ತನ್ನ ಮಗಳ ಜೊತೆಗೆ ಸದರಿ ಮನೆಯಿಂದ ಹೋಗಿದ್ದು, ಅಂದಿನಿಂದ ಅವರಿಬ್ಬರು ಕಾಣೆಯಾಗಿದ್ದು, ನಂತರ ದಿನಾಂಕ 29-6-2015 ರಂದು ಕಾಣೆಯಾದ ನಂದಿನಿಯ ಮೃತ ದೇಹವು ವಿರಾಜಪೇಟೆ ತಾಲೋಕಿನ ಕಂಡಂಗಾಲ ಗ್ರಾಮದ ತೋಡೊಂದರಲ್ಲಿ ಸಿಕ್ಕಿದ್ದು, ಕಾಣೆಯಾದ ಪುಟ್ಟ ಎಂಬಾತನ ಪತ್ತೆಯಾಗದೆ ಇದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Friday, July 3, 2015

ಜೀಪು ಡಿಕ್ಕಿ, ಪಾದಾಚಾರಿಗೆ ಗಾಯ: 

ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎಂ.ಸಿ. ಮನೋಜ್‌ ಎಂಬವರು ದಿನಾಂಖ 1-7-2015 ರಂದು ತಮ್ಮ ಪರಿಚಿತ ವ್ಯಕ್ತಿಯೊಂದಿಗೆ ನೆಲ್ಲಿಹುದಿಕೇರಿಯ ಎಂ.ಜಿ.ಕಾಲೋನಿಯ ರಸ್ತೆಗೆ ಹೋಗುತ್ತಿರುವಾಗ್ಗೆ ಅತ್ತಿಮಂಗಲ ಕಡೆಯಿಂದ ಸಿದ್ದಾಪುರ ಕಡೆಗೆ ಕೆಎ-11-ಎಂ-2864 ರ ಮಹೇಂದ್ರ ಬೊಲೆರೋ ಜೀಪಿನ ಚಾಲಕ ಪ್ರದೀಶ್ ಎಂಬವರು ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಂ.ಸಿ.ಮನೋಜ್‌ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಬಲಕಾಲಿನ ಮಣಿಗಂಟಿಗೆ, ಬಲಕಾಲಿನ ಮಂಡಿಗೆ, ಎಡಭಾಗದ ಸೊಂಟಕ್ಕೆ ಬಲಕೈಯ ಮತ್ತು ಎಡಕೈಯ ಮೊಣಕೈಗೆ ಗಲ್ಲ ಮತ್ತು ಮೂಗಿನ ಭಾಗಕ್ಕೆ ರಕ್ತಗಾಯವಾಗಿದ್ದು ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಹಣದ ವಿಚಾರದಲ್ಲಿ ವ್ಯಕ್ತಿಯ ದಾರಿ ತಡೆದು ಹಲ್ಲೆ:

ದಿ: 02-07-2015 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ಸುಳುಗಳಲೆ ಗ್ರಾಮದ ನಿವಾಸಿ ನರಸಿಂಹ ಎಂಬವರು ಬೆಳಿಗ್ಗೆ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿದ್ದು ಕೆಲಸ ಮುಗಿಸಿ ವಾಪಾಸು ಮದ್ಯಾಹ್ನ ಸಮಯ ಸುಮಾರು 12-30 ಪಿ. ಎಂಗೆ ಮನೆಗೆ ಬರುತ್ತಿರುವಾಗ್ಗೆ ಶನಿವಾರಸಂತೆ ಸುಳುಗಳಲೆ ಕಾಲೋನಿಯ ಈಶ್ವರ ಎಂಬವರ ಮನೆಯ ಮುಂದೆ ತಲುಪುವಾಗ್ಗೆ ಅಣ್ಣಾಚಿ ಮಂಜ ಮತ್ತು ರಾಜೇಂದ್ರ ರವರು ದಾರಿಯಲ್ಲಿ ಸಿಕ್ಕಿ ನರಸಿಂಹರವ್ರನ್ನು ದಾರಿ ತಡೆದು ತಡೆದು ನಿಲ್ಲಿಸಿ ನಿನಗೆ ಹಣ ಬೇಕಾ ಎಂದು ಹೇಳಿ ದೊಣ್ಣೆಯಿಂದ ಶರೀರದ ಭಾಗಕ್ಕೆ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ವಿಚಾರವಾಗಿ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಟ್ರಾಕ್ಟರ್‌ ಡಿಕ್ಕಿ ವ್ಯಕ್ತಿ ಸಾವು:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಟ್ಟೆಮಾಡು ಗ್ರಾಮದಲ್ಲಿ ವಾಸವಾಗಿರುವ ರಾಜು ಎಂಬವರು ದಿನಾಂಕ 2-7-2015 ರಂದು ಹೆರೂರು ಗ್ರಾಮದಲ್ಲಿ ಟ್ರಾಕ್ಟರ್‌ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, July 2, 2015

ದೇವಾಲಯದ ಹುಂಡಿ ಕಳ್ಳತನಕ್ಕೆ ಯತ್ನ:

    ನಾಪೋಕ್ಲು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಶ್ರೀ ಪಾಡಿ ಇಗ್ಗುತಪ್ಪದೇವಾಲಯದ ಮುಂದಿನ ಭಾಗದಲ್ಲಿ ಇಟ್ಟಿರುವ ಕಾಣಿಕಿ ಹುಂಡಿಯನ್ನು ದಿನಾಂಕ 3-6-2015 ರ ರಾತ್ರಿ ಯಾರೋ ಕಳ್ಳರು ಒಡೆದು ಹಾಕಿ ಕಳ್ಳತನಕ್ಕೆ ಪ್ರಯತ್ನಿಸಿದ್ದು, ಈ ಸಂಬಂಧ ಸದರಿ ದೇವಾಲಯದ ಪಾರುಪತ್ಯೆಗಾರ್ರಾದ ಶ್ರೀ ಪಿ.ಟಿ. ತಮ್ಮಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಡಾನೆ ದಾಳಿ ವ್ಯಕ್ತಿ ಸಾವು:

    ದಿನಾಂಕ 30-06-2015 ರಂದು ಸಮಯ 07.30 ಪಿ.ಎಂ ಗೆ ಸಿದ್ದಾಪುರ ಠಾಣಾ ವ್ಯಾಪ್ತಿಯ ವಾಲ್ನೂರು ತ್ಯಾಗತ್ತೂರಿನ ಬಾಳೆಗುಂಡಿ ಗಿರಿಜನರ ಹಾಡಿಯ ಬಳಿ ಸ್ವಲ್ಪ ದೂರದಲ್ಲಿ ಜೆ.ಟಿ. ಕುಮಾರ ಎಂಬವರು ಕೆಲಸ ಮುಗಿಸಿಕೊಂಡು ಚಂದ್ರಪ್ಪರವರೊಂದಿಗೆ ಮನೆಗೆ ಬರುತ್ತಿದ್ದಾಗ ಕಾಡಾನೆ ದಾಳಿ ಮಾಡಿದ್ದು ಪರಿಣಾಮ ಸದರಿ ಕುಮಾರನವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಹುಡುಗಿ ಮೇಲೆ ಅತ್ಯಾಚಾರ:

    ಮಡಿಕೇರಿ ನಗರದ ಹೊಸ ಬಡಾವಣೆಯಲ್ಲಿರುವ ಸಫಿ ಅಹಮ್ಮದ್‌ ಖಾನ್‌ ಎಂಬವರಿಗೆ ಸೇರಿದ ಹೋಂಸ್ಟೇ ನಲ್ಲಿ 2012ನೇ ಇಸವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಾಮರಾಜ ನಗರ ಜಿಲ್ಲೆಯ ನಿವಾಸಿ ಮಹದೇವಸ್ವಾಮಿ ಎಂಬವರ ಮಗಳಾದ ಕು: ಕೆ.ಎಂ. ಮಹದೇವಮ್ಮ,(16) ಎಂಬಾಕೆಯ ಮೇಲೆ ಸಫಿ ಅಹಮ್ಮದ್‌ ಖಾನ್‌ ರವರು ಬಲತ್ಕಾಗ ಅತ್ಯಾಚಾರ ಮಾಡಿದ್ದು ಅಲ್ಲದೆ, ಸದರಿ ವ್ಯಕ್ತಿಯ ಸ್ನೇಹಿತ ಮಡಿಕೇರಿ ನಗರದ ಹೊಸಬಡಾವಣೆ ನಿವಾಸಿ ಸಂಶು ಎಂಬ ವ್ಯಕ್ತಿ ಅದೇ ಹೋಂಸ್ಟೇನಲ್ಲಿ ಮಹದೇವಮ್ಮಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುತ್ತಾರೆಂದು ಕುಳ ಮಹದೇವಮ್ಮ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗ್ರಾ, ಪಂಚಾಯ್ತಿ ಚುನಾವಣೆ ಹಿನ್ನೆಲೆ, ವ್ಯಕ್ತಿಯ ದಾರಿ ತಡೆದು ಹಲ್ಲೆ:

    ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೆಟ್ಟಳ್ಳಿ ಗ್ರಾಮದ ನಿವಾಸಿ ಪುತ್ತೇರಿರ ಪಪ್ಪು ತಿಮ್ಮಯ್ಯ ಹಾಗು ಅದೇ ಗ್ರಾಮದ ನಿವಾಸಿ ಆರ್‌. ವೀರಯ್ಯ ಎಂಬವರುಗಳ ನಡುವೆ ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಡೆನ್ನಿ ಬರೂಶ್‌ಎಂಬ ವ್ಯಕ್ತಿಗೆಸಹಾಯ ಮಾಡಿರುವ ವಿಚಾರದಲ್ಲಿ ಜಗಳ ನಡೆದು ಪರಸ್ಪರ ಬೈದಾಡಿ ಹಲ್ಲೆ ನಡೆಸಿದ್ದು, ಸದರಿ ಇಬ್ಬರು ನೀಡಿದ ಪ್ರತ್ಯೇಕ ದೂರುಗಳ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೇವಾಲಯ ಕೆಡವಿ ಶೌಚಾಲಯ ನಿರ್ಮಾಣ, ಪ್ರಕರಣ ದಾಖಲು:

    ಮಡಿಕೇರಿ ತಾಲೋಕು ಮಕ್ಕಂದೂರು ಗ್ರಾಮದ ನಿವಾಸಿಗಳಾದ ಬಾಸ್ಕರ, ಶ್ರೀಧರ, ಅಯ್ಯಪ್ಪ ಎಂಬ ಸಹೋದರರು ಈಗ್ಗೆ ಸುಮಾರು 1 ವರ್ಷದ ಹಿಂದೆ ಶ್ರೀ ಸುಬ್ರಮಣ್ಯ ದೇವರ ಗುಡಿ ಇದ್ದ ತಮ್ಮ ಆಸ್ತಿಯನ್ನು ನಿಜಾಮುದ್ದಿನ್‌ ಮತ್ತು ರಿಯಾಜ್‌ ರವರಿಗೆ ಮಾರಟ ಮಾಡಿದ್ದು ಸದರಿ ಜಾಗದಲ್ಲಿದ್ದ ಶ್ರೀ ಸುಬ್ರಮಣ್ಯ ದೇವಸ್ಥಾನವನ್ನು ಮೂವರು ಅಣ್ಣತಮ್ಮಂದಿರು ಕೆಡವಿದ್ದು ಸದರಿ ಜಾಗದಲ್ಲಿ ನಿಜಾಮುದ್ದಿನ್‌ ಮತ್ತು ರಿಯಾಜ್‌ವರು ಶೌಚಾಲಯವನ್ನು ನಿರ್ಮಿಸಿರುತ್ತಾರೆ ಇದರಿಂದ ಹಿಂದುಗಳ ಬಾವನೆಗಳಿಗೆ ಧಕ್ಕೆಯಾಗಿದೆ ಎಂದು ಮಕ್ಕಂದೂರು ಗ್ರಾಮದ ನಿವಾಸಿ ಕೆ.ಎಂ. ಅರವಿಂದ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಿಳೆಗೆ ವರದಕ್ಷಿಣೆ ಕಿರುಕುಳ:

    ವಿರಾಜಪೇಟೆ ತಾಲೋಕು ಕಲ್ಲುಬಾಣೆ ನಿವಾಸಿ ಶ್ರೀಮತಿ ರಸಿಯಾ ಎಂಬವರನ್ನು ತಿತಿಮತಿ ಮರೂರು ಗ್ರಾಮದ ಮೊಹಮ್ಮದ್‌ ಎಂಬವರ ಮಗ ಶಮೀರ್‌ ಎಂಬವರು ಮದುವೆಯಾಗಿದ್ದು, ಮದುವೆ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ 40 ಪವನ್‌ ಚಿನ್ನಾಭರಣ ಮತ್ತು 70 ಸಾವಿರ ಹಣವನ್ನು ಪಡೆದುಕೊಂಡಿದ್ದು, ಮದುವೆಯಾದ ದಿನದಿಂದ ರಸಿಯಾರವರ ಗಂಡ ಶಮೀರ್‌ ಹಾಗು ಅವರ ಮನೆಯವರು ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿರುತ್ತಾರೆಂದು ಹಾಗು ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, July 1, 2015

ವಿವಾಹಿತ ಮಹಿಳೆಗೆ ವರದಕ್ಷಿಣೆ ಕಿರುಕುಳ 
                ವಿವಾಹಿತ ಮಹಿಳೆಯೊಬ್ಬರಿಗೆ ಪತಿಯೇ ವರದಕ್ಷಿಣೆ ಕಿರುಕುಳ ನೀಡುತ್ತಿರುವ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ವಿರಾಜಪೇಟೆ ಬಳೀಯ ಕಲ್ಲು ಬಾಣೆಯ ನಿವಾಸಿ ರಸಿಯಾ ಎಂಬಾಕೆಯನ್ನು ತಿತಿಮತಿ ಬಳಿಯ ಮರೂರು ಗ್ರಾಮದ ನಿವಾಸಿ ಸಮೀರ್‌ ಎಂಬಾತನಿಗೆ 2006ನೇ ಇಸವಿಯಲ್ಲಿ ಮದುವೆ ಮಾಡಿ ಕೊಟ್ಟಿದ್ದು ಮದುವೆಯ ಸಮಯದಲ್ಲಿ ಚಿನ್ನಾಭರಣ ಮತ್ತು ನಗದನ್ನು ಉಡುಗೊರೆಯಾಗಿ ಸಮೀರ್‌ರವರಿಗೆ ರಸಿಯಾರವರ ಮನೆಯವರು ನೀಡಿದ್ದು, ಆದಾಗ್ಯೂ ಪತಿ ಸಮೀರ್‌ ಮತ್ತು ಕುಟುಂಬಸ್ಥರಾದ ಆತನ ಅಣ್ಣನ ಪತ್ನಿ ಜಮೀಲಾ, ಆಸಿಯಾ ಹಾಗೂ ಸೈದು ಎಂಬವರು ಸೇರಿಕೊಂಡು ಪುನಃ ಹಣವನ್ನು ವರದಕ್ಷಿಣೆಯಾಗಿ ತರುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸೆಸ್ಕ್‌ ಸಿಬ್ಬಂದಿಯ ಮೇಲೆ ಹಲ್ಲೆ 
             ಸೆಸ್ಕ್‌ ಸಿಬ್ಬಂದಿಯೊಬ್ಬರ ಮೇಲೆ ವಿನಾ ಕಾರಣ ಹಲ್ಲೆ ನಡೆಸಿದ ಘಟನೆ ಮಾದಾಪುರದಲ್ಲಿ ನಡೆದಿದೆ. ದಿನಾಂಕ 29-06-2015 ರಂದು ಚೆಸ್ಕಾಂ ಇಲಾಖೆಯಲ್ಲಿ ಮಾದಾಪುರದ ಲೈನ್‌ ಮ್ಯಾನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಡಿಕೇರಿ ನಿವಾಸಿ ಎ.ಎಸ್‌.ಮೂರ್ತಿ ಎಂಬವರು ಎಂದಿನಂತೆ ಕರ್ತವ್ಯ ಮುಗಿಸಿ ಮಡಿಕೇರಿಗೆ ಬಸ್ಸು ಸಿಗದ ಕಾರಣ ಮಾದಾಪುರಕ್ಕೆ ಬಂದು ಅಲ್ಲಿ ಹನೀಫ್‌ ಎಂಬವರಿಗೆ ಸೇರಿದ ವ್ಯಾನ್‌ ನಿಂತಿದ್ದು, ಸಮಯ ರಾತ್ರಿ 19.45 ಗಂಟೆಗೆ ಅವರನ್ನು ವ್ಯಾನ್‌ ಶುಂಠಿಕೊಪ್ಪದ ಕಡೆಗೆ ಹೋಗುತ್ತದೆಯೇ ಎಂದು ಕೇಳುವಾಗ ಪಕ್ಕದಲ್ಲಿ ನಿಂತಿದ್ದ ಗರಗಂದೂರು ಗ್ರಾಮದ ರಂಜನ್‌ ಹಾಗೂ ಸತೀಶ ಎಂಬವರು ವಿನಾ ಕಾರಣ  ಅಶ್ಲೀಲ ಶಬ್ದಗಳಿಂದ ಮೂರ್ತಿಯವರಿಗೆ  ಬೈಯ್ದು ಕೈಯಿಂದ ಮತ್ತು ಕಲ್ಲಿನಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪ್ರಾಪ್ತ ಬಾಲಕಿಯ ಅಪಹರಣ
              ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿರುವ ಘಟನೆ ಬಾಳೆಲೆ ಬಳಿಯ ಕೊಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ಕೊಟ್ಟಗೇರಿ ನಿವಾಸಿ ಹೆಚ್.ಎನ್.ಅಣ್ಣಯ್ಯ ಎಂಬವರ  ಹಿರಿಯ ಮಗಳಾದ ಅಕ್ಷತಾರವರು ದಿನಾಂಕ 13/06/2015 ರಂದು ಕಾಣೆಯಾಗಿದ್ದು, ಇದರ ಬಗ್ಗೆ ಆಕೆಯ ಸ್ನೇಹಿತರನ್ನು ವಿಚಾರಿಸಿದ್ದು ಕೊಟ್ಟಗೇರಿ ಗ್ರಾಮದ ರತ್ತು ರವರ ಮನೆಯಲ್ಲಿ ಇರುವುದಾಗಿ ತಿಳಿದುಬಂದ ಮೇರೆ ಊರಿನ ಪ್ರಮುಖರ ಸಮಕ್ಷಮದಲ್ಲಿ ಮಗಳನ್ನು ಕರೆದುಕೊಂಡು ಮನೆಗೆ ಹೋಗಿರುವುದಾಗಿದೆ. ದಿನಾಂಕ 29/06/2015 ರಂದು ಮಧ್ಯಾಹ್ನ 12.30 ಗಂಟೆಗೆ ರತ್ತು ರವರ ಮಗ ತಿಲಕ್ ರವರು ಮನೆಯ ಹತ್ತಿರ ಬಂದು ಮಗಳಿಗೆ ಇಲ್ಲಸಲ್ಲದ ಆಮಿಷ ಒಡ್ಡಿ  17 ವರ್ಷದ ಅಪ್ರಾಪ್ತೆ ಬಾಲಕಿ ಅಕ್ಷತಳನ್ನು ಅಪಹರಿಸಿಕೊಂಡು ಹೋಗಿದ್ದು, ಇದರ ಬಗ್ಗೆ ಠಾಣೆಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.