Sunday, August 30, 2015

ಕೆರೆಗೆ ಹಾರಿ ವ್ಯಕ್ತಿಯ ಆತ್ಮಹತ್ಯೆ
                      ಕೆರೆಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ರುದ್ರಗುಪ್ಪೆ ಗ್ರಾಮದಲ್ಲಿ ನಡೆದಿದೆ. ದಿನಾಂಕ: 27-08-15ರಂದು ಕಂಡಂಗಾಲ ಗ್ರಾಮದ  ಕೆ.ಜಿ. ಕುಟ್ಟಪ್ಪ ನವರು ವಿರಾಜಪೇಟೆ ನಗರದ ಸೆರೆನಿಟಿ ಹಾಲ್‌ನಲ್ಲಿ ಮದುವೆಗೆ ಬಂದಿದ್ದು,  ದಿನಾಂಕ  28-08-15ರಂದು ಕುಟ್ಟಪ್ಪನವರ ಅಣ್ಣ ಕೆ.ಜಿ.ಕಾರ್ಯಪ್ಪನವರಿಗೆ ಇನ್ನೊಬ್ಬ ಸೋದರ ದೇವಯ್ಯನವರು ಫೋನ್‌  ಮಾಡಿ ಕುಟ್ಟಪ್ಪನವರು ಕಾಣೆಯಾಗಿರುವ ವಿಚಾರ ತಿಳಿಸಿದ ಮೇರೆ ಕಾರ್ಯಪ್ಪ ಹಾಗೂ ದೇವಯ್ಯರವರು ಕುಟ್ಟಪ್ಪರವರನ್ನು ಸುತ್ತಾ ಮುತ್ತ ಹುಡುಕಿದ್ದು ಪತ್ತೆಯಾಗಿರುವುದಿಲ್ಲ. ನಂತರ ದಿನಾಂಕ: 29-08-15ರಂದು ಕಾರ್ಯಪ್ಪನವರು ಮನೆಯಲ್ಲಿರುವಾಗ  ಸಹೋದರ ದೇವಯ್ಯನವರು  ದೂರವಾಣಿ ಕರೆ ಮಾಡಿ ಕುಟ್ಟಪ್ಪನ ಮೃತದೇಹ ಅವರ ಕೆರೆಯಲ್ಲಿ ತೇಲುತ್ತಿರುವುದಾಗಿ ತಿಳಿಸಿದ ಮೇರೆ  ಹೋಗಿ ನೋಡಲಾಗಿ ಕುಟ್ಟಪ್ಪನವರ ಮೃತ ದೇಹ ನೀರಿನಲ್ಲಿ ತೇಲು ತ್ತಿದ್ದು, ಮದುವೆಗೆ ಹೋದವನು ವಿಪರೀತ ಮದ್ಯಪಾನ ಮಾಡಿದ ಅಮಲಿನಲ್ಲಿ ಕೆರೆಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ನೇಣು ಬಿಗಿದುಕೊಂಡು ಮಹಿಳೆಯ ಆತ್ಮಹತ್ಯೆ
                        ನೇಣು ಬಿಗಿದುಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮ್ಮತ್ತಿ ಬಳಿಯ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 29-08-2015 ರಂದು ಕಾರ್ಮಾಡು ನಿವಾಸಿ ಕುಟ್ಟಂಡ ಕಾವೇರಪ್ಪ ಎಂಬವರು  ಎಂದಿನಂತೆ ಬೆಳಿಗ್ಗೆ ತೊಟಕ್ಕೆ ಹೋಗಿ  ಸಂಜೆ ಮನೆಯ ಹಿಂಬಾಗಿಲಿನಿಂದ ಒಳಗೆ ಹೋಗಿ ಹೆಂಡತಿಯನ್ನು ಕರೆದಾಗ ಯಾವುದೇ ಉತ್ತರ ಬಾರದೇ ಇದ್ದಾಗ ಮಲಗುವ ಕೋಣೆಯಲ್ಲಿ ನೋಡಲಾಗಿ ಅವರ ಹೆಂಡತಿ ಲಲಿತಾರವರು ಮನೆಯ ಮಲಗುವ ಕೋಣೆಯಲ್ಲಿ  ಮಂಚದ ಮೇಲೆ ಒಂದು ಸ್ಟೂಲ್ ಇಟ್ಟು ಅದರ ಸಹಾಯದಿಂದ ಸೀಲಿಂಗ್‌ ಫ್ಯಾನಿನ ಹುಕ್ಕಿಗೆ ಸೀರೆಯನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಮೃತೆಯು ಸುಮಾರು 10 ವರ್ಷದಿಂದ ಸಕ್ಕರೆ ಖಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖವಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು  ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, August 29, 2015

ಪಾದಚಾರಿಗೆ ಕಾರು ಡಿಕ್ಕಿ.
                   ಪಾದಚಾರಿಯೊಬ್ಬನಿಗೆ ಕಾರನ್ನು ಡಿಕ್ಕಿ ಪಡಿಸಿ ಕಾರನ್ನು ನಿಲ್ಲಿಸದೆ ಪರಾರಿಯಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 28-8-2015 ರಂದು ತೋರ ಗ್ರಾಮದ ನಿವಾಸಿ ಕುಶಾಲಪ್ಪ ಎಂಬವರು  ವಿರಾಜಪೇಟೆ ನಗರದ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹತ್ತಿರದ ಇಳಿಜಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಒಂದು ಮಾರುತಿ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಒಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಕುಶಾಲಪ್ಪನವರು ಪ್ರಜ್ಞಾಹೀನವಾಗಿ ಬಿದ್ದಿದ್ದು, ಮಾರುತಿ ಕಾರನ್ನು ಅದರ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ನಂತರ ಕುಶಾಲಪ್ಪನವರನ್ನು  ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲುಪಡಿಸಿ ನಂತರ ಮಡಿಕೇರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಿಕ್ಷಾಕ್ಕೆ ಮಿನಿ ಲಾರಿ ಡಿಕ್ಕಿ, ನಾಲ್ವರಿಗೆ ಗಾಯ
                    ರಿಕ್ಷಾವೊಂದಕ್ಕೆ ಮಿನಿ ಲಾರಿಯೊಂದು ಡಿಕ್ಕಿಯಾದ ಪರಿಣಾಮ ರಿಕ್ಷಾ ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕನಿಗೆ ಗಾಯಗಳಾದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 28-8-2015 ರಂದು ಗೋಣಿಕೊಪ್ಪದ ಕೈಕೇರಿ ನಿವಾಸಿ ಹೆಚ್‌.ಸಿ.ಸಂಜುಕುಮಾರ್‌ ಎಂಬವರು ಅವರ ಆಟೋ ರಿಕ್ಷಾ ಸಂಖ್ಯೆ  ಕೆಎ-12-ಎ-7050 ರಲ್ಲಿ ಗೋಣಿಕೊಪ್ಪದಿಂದ ಬಾಡಗ ಬಾಣಂಗಾಲ ಗ್ರಾಮಕ್ಕೆ ಅವರ ಸ್ನೇಹಿತರಾದ ರಮೇಶ, ಸುಭಾಷ್ ಮತ್ತು ಮಂಜುರವರುಗಳನ್ನು ಕೂರಿಸಿಕೊಂಡು  ಪಾಲಿಬೆಟ್ಟ ಸಿದ್ದಾಪುರ ಮುಖ್ಯ ರಸ್ತೆಯಿಂದ ಬಾಡಗ ಬಾಣಂಗಾಲ ಗ್ರಾಮದ ಮಟ್ಟ ಪೈಸಾರಿ ಎಂಬಲ್ಲಿಗೆ ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ-12-ಎ-1467 ರ 407 ಮಿನಿಲಾರಿಯನ್ನು ಅದರ ಚಾಲಕ ನಾಗೇಶ ಎಂಬುವವರು ಅತಿವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಅದರಲ್ಲಿದ್ದ ನಾಲ್ವರಿಗೂ ಗಾಯಗಳಾಗಿದ್ದು, ಆಟೋ ರಿಕ್ಷಾವು ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಅಕ್ರಮ ಲಾಟರಿ ಮಾರಾಟ ಪ್ರಕರಣ , ಬಂಧನ
              ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ಓರ್ವನ್ನು ಸಿದ್ದಾಪುರ ಪೊಲೀಸರು ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ್ದಾರೆ. ಕೇರಳ ರಾಜ್ಯದಿಂದ ಲಾಟರಿ ಟಿಕೇಟ್ ಗಳನ್ನು ತಂದು ಚೆನ್ನನಕೋಟೆ ನಗರದ ಅಂಚೆ ಕಚೇರಿ ಬಳಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆಂಬ ಸಿಕ್ಕಿದ ಮಾಹಿತಿಯ ಮೇರೆಗೆ ಸಿದ್ದಾಪುರ ಠಾಣಾಧಿಕಾರಿ ಬಿ.ಜಿ.ಕುಮಾರ್‌ರವರು ಸಿಬ್ಬಂದಿಗಳೊಂದಿಗೆ ತೆರಳಿ ಚೆನ್ನನಕೋಟೆ ಅಂಚೆ ಕಚೇರಿ ಮುಂಭಾಗದಲ್ಲಿ ಪೂವಯ್ಯ ಎಂಬಾತನು  ಅಂಚೆ ಕಚೇರಿಯ ಮುಂಭಾಗದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು ತಂದು ಸರ್ಕಾರದ ಯಾವುದೇ ರಹದಾರಿ ಇಲ್ಲದೇ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. .

ಅಕ್ರಮ ಲಾಟರಿ ಮಾರಾಟ ಪ್ರಕರಣ , ಬಂಧನ
                ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ಓರ್ವನ್ನು ಸಿದ್ದಾಪುರ ಪೊಲೀಸರು ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ್ದಾರೆ. ಕೇರಳ ರಾಜ್ಯದಿಂದ ಲಾಟರಿ ಟಿಕೇಟ್ ಗಳನ್ನು ತಂದು ಚೆನ್ನನಕೋಟೆ ಗಣಪತಿ ದೇವಸ್ಥಾನದ  ಬಳಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆಂಬ ಸಿಕ್ಕಿದ ಮಾಹಿತಿಯ ಮೇರೆಗೆ ಸಿದ್ದಾಪುರ ಠಾಣಾಧಿಕಾರಿ ಬಿ.ಜಿ.ಕುಮಾರ್‌ರವರು ಸಿಬ್ಬಂದಿಗಳೊಂದಿಗೆ ತೆರಳಿ  ಚೆನ್ನಯ್ಯನಕೋಟೆ ಗಣಪತಿ ದೇವಸ್ಥಾನದ ಹತ್ತಿರದ ಜಂಕ್ಷನ್ ಬಳಿ ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು  ಮಾರಾಟ ಮಾಡುತ್ತಿದ್ದ ಹೊಲಮಾಳ ಪೈಸಾರಿಯ ಹೆಚ್.ಎಲ್ ದೇವರಾಜು ಎಂಬಾತನನ್ನು ಸಹಾ ಬಂದಿಸಿ ಆತನಿಂದ ಕೇರಳ ರಾಜ್ಯದ ಲಾಟರಿಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಅಕ್ರಮ ಲಾಟರಿ ಮಾರಾಟ ಓರ್ವನ ಬಂಧನ
                 ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ ಓರ್ವನನ್ನು ಬಂಧಿಸಿದ ಗೋಣಿಕೊಪ್ಪ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಗೋಣಿಕೊಪ್ಪ ನಗರದ 3ನೇ ವಿಭಾಗದ ಪಟೇಲ್ ನಗರದ ದಿನಸಿ ಅಂಗಡಿಯಲ್ಲಿ ಒಬ್ಬ ವ್ಯಕ್ತಿಯು ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಖಚಿತ ವರ್ತಮಾನದ ಮೇರೆ ಗೋಣಿಕೊಪ್ಪ ಠಾಣಾಧಿಕಾರಿ ಜೆ.ಇ.ಮಹೇಶ್‌ರವರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ಗೋಣಿಕೊಪ್ಪ ನಗರದ ಪಟೇಲ್‌ ನಗರದ ನಿವಾಸಿ ಪಿ.ಕೆ.ರಾಜ ಎಂಬಾತನ್ನು ವಶಕ್ಕೆ ತೆಗೆದುಕೊಂಡು ಆತನ ಬಳಿ ಇದ್ದ ವಿವಿಧ ರೀತಿಯ ಒಟ್ಟು 46 ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಹಾಗೂ 1500 ರೂ ನಗದು ಹಣವನ್ನು ಮಹಜರು ಮೂಲಕ ಅಮಾನತ್ತುಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, August 28, 2015

ಮನೆಯಿಂದ ಚಿನ್ನಾಭರಣ ಮತ್ತು ನಗದು ಕಳವು:

     ರಾತ್ರಿ ವೇಳೆ  ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದನ್ನು ಕಳ್ಳತನ ಮಾಡಿರುವ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ಗೋಣಿಕೊಪ್ಪ ನಗರದ 8ನೇ ವಿಭಾಗದ ಮುಖ್ಯ ರಸ್ತೆಯಲ್ಲಿ ಕೃಷ್ಣಪ್ಪ ಎಂಬವರಿಗೆ ಸೇರಿದ ಮನೆ ಇದ್ದು, ದಿನಾಂಕ 26-8-2015 ರಂದು ರಾತ್ರಿ ಕೃಷ್ಣಪ್ಪ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳು ರಾತ್ರಿ 12.00 ಗಂಟೆ ಸಮಯಕ್ಕೆ ಮನೆಯ ಬಾಗಿಲನ್ನು ಹಾಕಿ ಮನೆಯ ಮೇಲ್ಬಾಗದ ಸಿಟ್ ಔಟ್ ಬಾಗಿಲನ್ನು ಹಾಕದೆ ಮಲಗಿದ್ದು ಮರು ದಿನ ದಿನಾಂಕ 27-8-2015 ರಂದು ಬೆಳಿಗ್ಗೆ ಸಮಯ 5.00 ಗಂಟೆಗೆ ಎದ್ದು ನೋಡುವಾಗ್ಗೆ ಯಾರೋ ಕಳ್ಳರು ಸಿಟ್ ಔಟ್ ನ ಬಾಗಿಲಿನ ಮೂಲಕ ಮನೆಯೊಳಗೆ ಬಂದು ದೇವರ ಗುಡಿಯಿಂದ ಚಿಕ್ಕಪುಟ್ಟ ದೇವರ ವಿಗ್ರಹಗಳನ್ನು ಹಾಗೂ ಮೇಜಿನ ಮೇಲಿಟ್ಟಿದ್ದ ಬೀರುವಿನ ಕೀಯನ್ನು ಉಪಯೋಗಿಸಿ ಲಾಕರ್ ತೆರೆದು ಬೀರುವಿನಲ್ಲಿಟ್ಟಿದ್ದ ಚಿನ್ನದ 1) 10 ಗ್ರಾಂನ ಚಿನ್ನದ ಸರ, 2) 20 ಗ್ರಾಂನ ನೆಕ್ಲೇಸ್, 3) 15 ಗ್ರಾಂನ ಪೆಂಡೆಂಟ್, 4) 50 ಗ್ರಾಂನ 10 ಜೊತೆ ವಾಲೆ,5) 20 ಗ್ರಾಂನ2 ಉಂಗುರ, 6) 40 ಗ್ರಾಂನ ಬಿಸ್ಕೇಟ್, 7) 18 ಗ್ರಾಂನ 2 ಜುಮುಕಿ. ಇವುಗಳ ಅಂದಾಜು ಬೆಲೆ 4 ಲಕ್ಷದ 50 ಸಾವಿರ ಹಾಗೂ ಡ್ರಾಯರ್ ಮೇಲಿಟ್ಟಿದ್ದ ರೂ. 50 ಸಾವಿರ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಸದರಿ ಕೃಷ್ಣಪ್ಪನವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಕೊಲೆ,ಪ್ರಕರಣ ದಾಖಲು:

     ಕುಶಾಲನಗರ ಠಾಣಾ ವ್ಯಾಪ್ತಿಯ ಎಸ್.ಎಲ್.ಎನ್ ಕಂಪೆನಿಯಲ್ಲಿ ಮಿಷನ್ ಕೆಲಸ ಮಾಡಿಕೊಂಡಿರುವ ಅಂದಾಜು ಪ್ರಾಯ 35 ವರ್ಷದ ಲಕ್ಷಣ ಎಂಬ ವ್ಯಕ್ತಿ ದಿನಾಂಕ 26-8-10 ರಂದು ಸಮಯ 7-30 ಪಿಎಂಗೆ ಎಂದಿನಂತೆ ಕೆಲಸ ಮುಗಿದ ಮೇಲೆ ವಾಪಾಸು ಆತ ವಾಸಿಸುವ ಸ್ಥಳಕ್ಕೆ ಹೋಗದೆ ಕರಿಯಪ್ಪ ಬಡಾವಣೆಯಲ್ಲಿರುವ ಮಾಲೀಕರ ಸೈಟಿನಲ್ಲಿರುವ ಸೆಂಟ್ರಿಂಗ್ ಸಾಮಾನುಗಳನ್ನು ಎಸ್.ಎಲ್.ಎನ್ ಶೆಡ್ಡಿಗೆ ತಂದು ಗುಡ್ಡದಯ್ಯ, ಭೂಷಣರವರೊಂದಿಗೆ ವಾಪಾಸು ಹೋಗಿದ್ದ, ದಿನಾಂಕ 27-08-2015 ರಂದು ಬೆಳಿಗ್ಗೆ 7-30 ಗಂಟೆಗೆ ದನಗಳ ವಾಸ್ ಪನ್ ಡೈರಿಯಲ್ಲಿ ಸದರಿ ಲಕ್ಷ್ಮಣರವರು ಸಾವನಪ್ಪಿರುವುದು ಕಂಡು ಬಂದಿದ್ದು, ಆತನ ಬೆನ್ನು ಮತ್ತು ತಲೆಯ ಹಿಂಬಾಗದಲ್ಲಿ ರಕ್ತ ಸುರಿದಿರುವುದು ಕಂಡು ಬಂದಿದ್ದು ಸದ್ರಿಯವರನ್ನು ಯಾರೋ ಹೊಡೆದು ಕೊಲೆ ಮಾಡಿ ಅಲ್ಲಿ ಹಾಕಿರಬಹುದಾಗಿ ಕುಶಾಲನಗರ ಯು. ಸುಜಿತ್‌ ಶೆಟ್ಟಿ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಹುಡುಗನ ಶವ ಪತ್ತೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕದನೂರು ಹೊಳೆ ಯಲ್ಲಿ ಒಬ್ಬ ಅಪರಿಚಿತ ಯುವಕನ ಮೃತದೇಹವು ಪತ್ತೆಯಾಗಿದ್ದು, ವಿರಾಜಪೇಟೆ ತಾಲೋಕು ಕೆದಮುಳ್ಳೂರು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯಾದ ಸುಬ್ಬಯ್ಯನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅಪ್ರಾಪ್ತ ಹುಡುಗಿ ಕಾಣೆ:

     ಶನಿವಾರಸಂತೆ ಠಾಣಾ ಸರಹದ್ದಿನ ತ್ಯಾಗರಾಜ ಕಾಲೋನಿಯ ನಿವಾಸಿಯಾದ ಶ್ರೀಮತಿ ಭಾಗ್ಯ ಎಂಬವರ ಮಗಳಾದ 16 ವರ್ಷ ಪ್ರಾಯದ ಡಿ.ಆರ್‌. ಸುಪ್ರೀತ ಎಂಬಾಕೆ ದಿನಾಂಕ 26-8-2015 ರಂದು ಸಮಯ 13.30 ಗಂಟೆಯ ಸಮಯದಲ್ಲಿ ಅನಾರೋಗ್ಯದ ನಿಮಿತ್ತ  ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆಂದು ಶ್ರೀಮತಿ ಭಾಗ್ಯನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Thursday, August 27, 2015


ಬಹುಮಾನ ಬಂದಿರುವುದಾಗಿ ನಂಬಿಸಿ ವಂಚನೆ:

       ಮಡಿಕೇರಿ ನಗರದ ಇಂದಿರಾ ನಗರದ ನಿವಾಸಿ ಶ್ರೀಮತಿ ಮೇರಿ ಲವಿಟ   ಎಂಬವರಿಗೆ 2015ನೇ ಜನವರಿ ತಿಂಗಳಲ್ಲಿ Deal Branch online Pvt. Ltd  ಎಂಬ ಕಂಪೆನಿಯಿಂದ  ಸಿದ್ದಾರ್ಥ ಹಾಗು ವಿನಿತ್‌ ನಾಯರ್‌ ಎಂಬವರು  ಮೊಬೈಲ್‌ ದೂರವಾಣಿ ಮೂಲಕ ಕರೆ ಮಾಡಿ  ಬಹುಮಾನ ಬಂದಿರುವುದಾಗಿಯೂ, ಸದರಿ ಬಹುಮಾನವನ್ನು ಪಡೆಯಲು  ಅವರ ಖಾತೆಗೆ ಹಣ ಸಂದಾಯ ಮಾಡುವಂತೆಯೂ ತಿಳಿಸಿದ್ದು ಅದರ ಮೇರೆಗೆ  ಕಂಪೆನಿಯ ಖಾತೆಗೆ 82,500/- ರೂ. ಗಳನ್ನು ಸಂದಾಯ ಮಾಡಿದ್ದು,  ನಂತರ ಸದರಿ ಕಂಪೆನಿಯವರು  ಯಾವುದೇ ಬಹುಮಾನದ ಮೊತ್ತ ನೀಡದೇ  ಮೋಸ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Wednesday, August 26, 2015

ವ್ಯಕ್ತಿ ಕಾಣೆ, ಪ್ರಕರಣ ದಾಖಲು:

     ಮಡಿಕೇರಿ ನಗರದ ಕುಂಬಳಗೇರಿ ಉಕ್ಕುಡಉಕ್ಕುಡದ ನಿವಾಸಿ ಶ್ರೀಮತಿ ಶ್ರೀಮತಿ ದಿವ್ಯರವರ ಪತಿ ಉಮೇಶ ಪ್ರಾಯ 35 ವರ್ಷ ಇವರು ತಮ್ಮ ಮನೆ ಕುಂಬಳಗೇರಿ ಉಕ್ಕುಡ ದಿಂದ ದಿನಾಂಕ 18-8-2015 ರಂದು ಸಮಯ 11.00 ಗಂಟೆಗೆ ಕುಶಾಲನಗರಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಇದುವರೆಗೆ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಆನೆ ದಾಳಿ ವ್ಯಕ್ತಿಯ ದುರ್ಮರಣ:

     ಕಾಡಿನಲ್ಲಿ ಹೋಗುತ್ತಿದ್ದಾಗ ವ್ಯಕ್ತಿಯೋರ್ವರು ಆನೆ ದಾಳಿಗೆ ಬಲಿಯಾದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ತಿತಿಮತಿ ಜಂಗಲಾಡಿ ಎಡತೊರೆ ಕಾಡಿನಲ್ಲಿ ನಡೆದಿದೆ. ದಿನಾಂಕ 25-8-2015 ರಂದು ಬೆಳಿಗ್ಗೆ 8-15 ಗಂಟೆಗೆ ತಿತಿಮತಿ ಜಂಗಲಾಡಿ ಎಡತೊರೆ ಎಂಬಲ್ಲಿ ವಾಸವಾಗಿರುವ ಸಣ್ಣಪ್ಪ ಎಂಬವರು ಶಾಲಾ ಮಕ್ಕಳೊಂದಿಗೆ ಕೂಲಿ ಕೆಲಸಕ್ಕೆ ಎಡತೊರೆ ಗ್ರಾಮಕ್ಕೆ ದ್ದಾಗ ಕಾಡಿನೊಳಗಿನಿಂದ ಹಠಾತ್ತಾನೆ ಆನೆಯೊಂದು ಅವರ ಮೇಲೆ ದಾಳಿ ಮಾಡಿದ ಪರಿಣಾಮ ಅವರ ಜೊತೆಯಲ್ಲಿದ್ದ ಜೆ.ಬಿ ರಾಜು, (38) ರವರು ಸ್ಥಳದಲ್ಲೇ ಸಾವನಪ್ಪಿದ್ದು ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ:

      ದಿನಾಂಕ 18-8-2015 ರಂದು ಸಮಯ 11-00 ಎ.ಎಂಗೆ ಕುಶಾಲನಗರ ಶಿರ ಹೊಳಲು ಗ್ರಾಮದ ನಿವಾಸಿ ಪುಷ್ಪಾವತಿ ಎಂಬವರ ಮಗ ಪ್ರಾಯ 28 ವರ್ಷದ ಮೋಹನ ಎಂಬವರು ಮದಲಾಪುರದ ನಿವಾಸಿಗಳಾದ ಪಾಪಣ್ಣ ಮತ್ತು ಯಶವಂತ ರವರು ಸಾರಾಯಿ ಕುಡಿಸಿ ಶ್ರೀಗಂಧ ಮಾರಾಟ ಮಾಡುವ ವಿಚಾರ ಮಾತನಾಡಿ ಅದನ್ನು ಮೊಬೈಲ್ನಲ್ಲಿ ರೆಕಾರ್ಡಿಂಗ್ ಮಾಡಿ ಹೆದರಿಸಿದ ಬಗ್ಗೆ ಪತ್ರವನ್ನು ಬರದಿಟ್ಟು ಹಾರಂಗಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿ ಪಾಪಾಣ್ಣ ಮತ್ತು ಯಶವಂತರವರು ಭಯ ಹುಟ್ಟಿಸಿದ್ದರಿಂದ ಆತ ಹೆದರಿ ಹಾರಂಗಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪ್ರಾಪ್ರ ಬಾಲಕ ನಾಪತ್ತೆ:

     ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕಾಜೂರು ಗ್ರಾಮದ ನಿವಾಸಿಯಾದ ಅಣ್ಣೆಗೌಡ ಎಂಬವರ ಮಗಳ ಮಗ ಪ್ರಾಯ 15 ವರ್ಷದ ಹೆಚ್‌.ಎಸ್‌. ದಿನಾಂಕ 24.08.2015 ರಂದು ಎಂದಿನಂತೆ ಸಮಯ 08.20 ರಂದು ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವನು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಕಾವೇರಿ ಹೊಳೆಯಲ್ಲಿ ಕಾಣೆಯಾದ ಮಹಿಳೆಯ ಮೃತ ದೇಹ, ಕೊಲೆ ಶಂಕೆ:

     ಸಿದ್ದಾಪುರ ಠಾಣಾ ಸರಹದ್ದಿನ ಗುಹ್ಯ ಗ್ರಾಮದ ನಿವಾಸಿ ಎ.ಸಿ. ಸುಬ್ಬಯ್ಯ ಎಂಬವರ ಕಾಫಿ ತೋಟದ ಲೈನು ಮನೆಯಲ್ಲಿ ಸುಮಾರು 7 ವರ್ಷಗಳಿಂದ ವಿಜಯ ಹಾಗೂ ಆತನ ಹೆಂಡತಿ ವಿನೋದ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ದಿನಾಂಕ 22-7-2015 ರಂದು ವಿಯಜನ ಪತ್ನಿ ವಿನೋದ ಕಾಣೆಯಾದ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ವೇಳೆ ದಿನಾಂಕ 24-8-2015 ರಂದು ಸದರಿ ವಿನೋದಳ ಮೃತ ದೇಹವು ಕಾವೇರಿ ನದಿಯಲ್ಲಿ ದೊರಕಿದ್ದು, ಆಕೆಯನ್ನು ಆಕೆಯ ಪತಿ ವಿಜಯ ಕೊಲೆ ಮಾಡಿ ಹೊಳೆಗೆ ಹಾಕಿರುರಬಹುದೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

Tuesday, August 25, 2015

ಮದ್ಯದ ಅಮಲಿನಲ್ಲಿ ಬರೆಯಿಂದ ಬಿದ್ದು ಮಹಿಳೆಯ ದುರ್ಮರಣ:

      ಮಹಿಳೆಯೊಬ್ಬರು ವಿಪರೀತ ಮದ್ಯ ಸೇವಿಸಿ ಮದ್ಯದ ಅಮಲಿನಲ್ಲಿ ಬರೆಮೇಲಿಂದ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಾವಾಡಿ ಗ್ರಾಮದ ಮಂದಣ್ಣ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಜೇನುಕುರುಬರ ರವಿ ಎಂಬವರ ಪತ್ನಿ ಶ್ರೀಮತಿ ಜಾನು ಎಂಬುವರು ದಿನಾಂಕ 23-8-2015 ರಂದು ರಾತ್ರಿ ವಿಪರೀತ ಮದ್ಯ ಸೇವಿಸಿ ಮನೆಯ ಹಾದಿಯಲ್ಲಿರುವ ಬರೆಯ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಬರೆಯ ಮೇಲಿಂದ ಕೆಳಗೆ ಬಿದ್ದುಸಾವನಪ್ಪಿದ್ದು, ಈ ಸಂಬಂಧ ಆಕೆಯ ಪತಿ ನೇಜುಕುರುಬರ ರವಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗಂಡ ಮತ್ತು ಮನೆಯವರಿಂದ ಮಹಿಳೆಗೆ ವರದಕ್ಚಿಣೆ ಕಿರುಕುಳ:

     ಮಹಿಳೆಯೊಬ್ಬರಿಗೆ ಗಂಡ ಹಾಗು ಮನೆಯವರು ಸೇರಿ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ದಿನಾಂಕ 20.05.2013 ರಂದು ನಮಿತರವರನ್ನು ಆರೋಪಿ ಜಗದೀಶ್ ರವರು ಮದುವೆಯಾಗಿದ್ದು, 6 ತಿಂಗಳ ಕಾಲ ಚೆನ್ನಾಗಿದ್ದು ನಂತರ ವರದಕ್ಷಿಣೆಗಾಗಿ ಗಂಡ ಜಗದೀಶ, ಮಾವ ಗಣಪತಿ, ಅತ್ತೆ ಪೂವಮ್ಮ, ಭಾವ ದಯಾನಂದ, ಭಾವನ ಹೆಂಡತಿ ಮೀರಾ ಹಾಗೂ ಅತ್ತಿಗೆ ಕಸ್ತೂರಿ ರವರುಗಳು ಕಿರುಕುಳ ನೀಡುತ್ತಿದ್ದುದಲ್ಲದೆ ಅತ್ತೆ ಪೂವಮ್ಮ, ಮಾವ ಗಣಪತಿ, ಗಂಡ ಜಗದೀಶ ರವರು ಕೊಲೆ ಮಾಡಲು ಪ್ರಯತ್ನಿಸಿರುವುದಾಗಿಯೂ ಅಲ್ಲದೇ ಗಂಡನ ಅಣ್ಣ ದಯಾನಂದ, ಅಣ್ಣನ ಹೆಂಡತಿ ಮೀರ, ಗಂಡನ ಅಕ್ಕ ಕಸ್ತೂರಿಯವರು ಪ್ರಚೋದನೆ ನೀಡುತ್ತಿದ್ದುದಾಗಿ ನಮಿತರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ ಪೊಲೀಸರು ಮುಂದಿನ ತನಿಖೆಕೈಗೊಂಡಿದ್ದಾರೆ.  
ಅಕ್ರಮ ಮದ್ಯ ಮಾರಾಟ ಆರೋಪಿ ಬಂಧನ:
     ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದಿನಾಂಕ 24-8-2015 ರಂದು 14-30 ಗಂಟೆಗೆ ಗೋಣಿಕೊಪ್ಪ ಠಾಣಾಧಿಕಾರಿ ಎಂ. ಮಹೇಶ್‌ ರವರಿಗೆ ದೊರೆತ ಮಾಹಿತಿಯ ಮೇರೆಗೆ ಸದರಿಯವರು ಹಾಗೂ ಸಿಬ್ಬಂದಿಯವರು ಪೊನ್ನಂಪೇಟೆ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದ ನಿವಾಸಿ ಮಲೆಯಾಳಿ ಮಣಿ ಎಂಬವರು ನಡೆಸುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿ   ಸದರಿ ಮಣಿಯವರು ಸರ್ಕಾರದ ಪರವಾನಗೆ ಇಲ್ಲದೆ ಅಕ್ರಮವಾಗಿ ತನ್ನ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡಲು 180 ಎಂ.ಎಲ್ ನ ಎರಡು ಒರಿಜಿನಲ್ ಚಾಯ್ಸ್ ಬ್ರಾಂಡಿ ಬಾಟಲಿ ಹಾಗೂ ಒಂದು ಲೀಟರ್ ನೀರು ಹಾಗೂ 2 ಗಾಜಿನ ಲೋಟಗಳನ್ನು ಇಟ್ಟುಕೊಂಡು ಹಾಡಿಯ ಜನಗಳಿಗೆ ಮದ್ಯ ಸೇವಿಸಲು ಕರೆಯುತ್ತಿದ್ದುದನ್ನು ಪತ್ತೆಯಚ್ಚಿ ಆರೋಪಿಯನ್ನುಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, August 24, 2015

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ
                ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ: 22-08-15ರಂದು ಬಿಟ್ಟಂಗಾಲ ನಿವಾಸಿ ಶಂಭು ಎಂಬವರು  ರಾತ್ರಿ ಊಟ ಮಾಡಿ ಮಲಗಿದ್ದು,  ದಿನಾಂಕ: 23-08-15ರಂದು ಬೆಳಗಿನ ಜಾವ ಶಂಭುರವರು ಎದ್ದು ವಾಂತಿ ಮಾಡಿದ್ದು, ನಂತರ ಬೆಳಿಗ್ಗೆ ಶಂಭುರವರ ಪತ್ನಿ ತಂಗುರವರು  ಎದ್ದು ಗಂಡ ಶಂಭುರವರನ್ನು ನೋಡಿದಾಗ ಶಂಭುರವರು ಮೃತಪಟ್ಟಿದ್ದು ಬಾಯಿಂದ ಯಾವುದೋ ವಿಷದ ವಾಸನೆ ಬರುತ್ತಿತ್ತೆನ್ನಲಾಗಿದೆ. ಶಂಭುರವರು ಯಾವುದೋ ವಿಚಾರಕ್ಕೆ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಅಕ್ರಮ ಲಾಟರಿ ಮಾರಾಟ, ಓರ್ವನ ಬಂಧನ
                 ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಗಳನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ದಿನಾಂಕ 23/08/2015 ಗೋಣಿಕೊಪ್ಪ ಬಸ್ಸು ನಿಲ್ದಾಣದ ತಂಗುದಾಣದಲ್ಲಿ ಒಬ್ಬ ವ್ಯಕ್ತಿಯು ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಖಚಿತ ವರ್ತಮಾನದ ಮೇರೆ ಗೋಣಿಕೊಪ್ಪ ಠಾಣಾಧಿಕಾರಿ ಜೆ.ಇ.ಮಹೇಶ್‌ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಧಾಳಿಮಾಡಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಗಳನ್ನು ಮಾರಾಟ ಮಾಡುತ್ತಿದ್ದ ಬಾಳಾಜಿ ಗ್ರಾಮದ ಕೆ.ಕೆ.ವೆಂಕಟೇಶ್‌ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ಆತನ ಬಳಿ ಇದ್ದ ವಿವಿಧ ರೀತಿಯ ಒಟ್ಟು 132 ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಾಲಕ ಕಾಣೆ, ಅಪಹರಣ ಶಂಕೆ
             ಶಾಲಾ ಬಾಲಕನೊಬ್ಬ ಕಾಣೆಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರದ ಇಂದಿರಾ ಬಡಾವಣೆಯ ನಿವಾಸಿ ರೆಹಮತ್ ಎಂಬಾಕೆಯ ಮಗ 14 ವರ್ಷ ಪ್ರಾಯದ ಮಗನಾದ ಮೊಹಮ್ಮದ್ ಬಶೀರ್ ಕುಶಾಲನಗರದ ಜೂನಿಯರ್ ಕಾಲೇಜಿನಲ್ಲಿ 9 ನೇ ತರಗತಿ ಓದುತ್ತಿದ್ದು, ದಿನಾಂಕ 15/08/2015 ರಂದು  ಬಶೀರನು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನೋಡಲು ಕುಶಾಲನಗರದ ಪ್ರಾಥಮಿಕ ಶಾಲೆ ಮೈದಾನಕ್ಕೆ ಹೋದವನು ವಾಪಾಸ್ಸು ಮನೆಗೆ ಬಾರದ್ದರಿಂದ ಎಲ್ಲಾಕಡೆ ಹುಡುಕಿ ವಿಚಾರಿಸಿದರೂ  ಪತ್ತೆಯಾಗದ ಕಾರಣ ಈತನನ್ನು ಯಾರೋ ಅಪಹರಿಸಿರುವ ಸಂಶಯವಿರುತ್ತದೆಂದು ಶಂಕಿಸಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗುಂಡು ಹಾರಿಸಿ ಗೂಳಿಯ ಹತ್ಯೆ
                 ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಗೂಳಿಯೊಂದನ್ನು ಗುಂಡು ಹೊಡೆದು ಹತ್ಯೆ ಮಾಡಿದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ದಿನಾಂಕ 23/08/2015ರಂದು ಪಾಲಿಬೆಟ್ಟದ ಟಾಟಾ ಕಾಫಿ ಎಸ್ಟೇಟಿನ ಅಧಿಕಾರಿ ಪಿ.ಎಸ್‌.ಪ್ರಭಾಕರ್‌ ಎಂಬವರಿಗೆ ಕಾಫಿ ತೋಟದ ಕಾವಲುಗಾರರಾದ ರಾಮಯ್ಯ.ಕೆ.ಕೆ. ರವರು ಫೋನ್ ಮಾಡಿ  37 ನೇ ಬ್ಲಾಕ್ ನಲ್ಲಿರುವ ಕಾಫಿ   ತೋಟಕ್ಕೆ ಅಜೀಜ್‌, ಹಂಸ, ವಿನೋದ್‌, ಉಸ್ಮಾನ್‌ ಮತ್ತು ಲೋಕೇಶ್‌ ಎಂಬವರುಗಳು ಅಕ್ರಮ ಪ್ರವೇಶ ಮಾಡಿ ಕಾಫಿ ತೋಟದೊಳಗಿದ್ದ ಸುಮಾರು 400 ಕೆ.ಜಿ. ತೂಕದ ಒಂದು ಬೀಡಾಡಿ ಹೋರಿಯನ್ನು ಕೊಂದು  ಮಾಂಸ ಮಾಡಿ ಮಾರಾಟ ಮಾಡಿ ಹಣ ಮಾಡುವ ಉದ್ದೇಶದಿಂದ  ಗುಂಡು ಹಾರಿಸಿ ಕೊಂದು ಹಾಕಿರುವುದಾಗಿ ತಿಳಿಸಿದ್ದು, ಪ್ರಭಾಕರ್‌ರವರು ಸ್ಥಳಕ್ಕೆ ಹೋಗಿ ನೋಡಿದಾಗ ಹೋರಿಯನ್ನು ಹತ್ಯೆ ಮಾಡಿರುವುದನ್ನು ನಾಲ್ವರು ಆರೋಪಿಗಳು ಹಾಗೂ ಇವರು ಉಪಯೋಗಿಸಿದ ಒಂಟಿ ನಳಿಗೆ ಕೋವಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಕಾಣೆ ಪ್ರಕರಣ ದಾಖಲು
                ಮನೆಯಲ್ಲಿದ್ದ ಮಹಿಳೆಯೊಬ್ಬರು ಕಾಣೆಯಾದ ಪ್ರಕರಣ ಸಿದ್ದಾಪುರ ಬಳಿಯ ಗುಹ್ಯ ಗ್ರಾಮದಲ್ಲಿ ನಡೆದಿದೆ. ದಿನಾಂಕ 22-8-2015 ರಂದು ಗುಹ್ಯ ಗ್ರಾಮದ ನಿವಾಸಿ ಹೆಚ್‌.ಕೆ.ವಿಜಯ ಹಾಗು ಆತನ ಹೆಂಡತಿ ವಿನೋದ ಹಾಗೂ ಎರಡು ಮಕ್ಕಳು ರಾತ್ರಿ ಊಟ ಮಾಡಿ ಮಲಗಿದ್ದು, ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ಹೆಂಡತಿ ವಿನೋದ ಮಲಗಿದ್ದಲ್ಲಿ ಇರಲಿಲ್ಲವೆನ್ನಲಾಗಿದೆ. ಇಬ್ಬರು ಮಕ್ಕಳು ಹಾಸಿಗೆಯಲ್ಲಿ ಮಲಗಿದ್ದು, ನಂತರ ವಿಜಯರವರು ತನ್ನ ತೋಟದ ಸಾಹುಕಾರರಿಗೆ ವಿಷಯ ತಿಳಿಸಿ ಹುಡುಕಾಡಿ ಎಲ್ಲೂ ಪತ್ತೆಯಾಗದೇ ಇದ್ದು ನಂತರ ಹೆಂಡತಿಯ ಊರಾದ ಮಿರ್ಲೆ ಸಾಲಿಗ್ರಾಮಕ್ಕೆ ಹೆಂಡತಿಯ ತಂಗಿ ಲತಾಳಿಗೆ ದೂರವಾಣಿ ಕರೆಮಾಡಿ ವಿಷಯವನ್ನು ತಿಳಿಸಿದಾಗ ಅಲ್ಲಿಗೂ ಸಹ ಬಂದಿರುವುದಿಲ್ಲವೆಂದು ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಶವ ಪತ್ತೆ
               ಅಪರಿಚಿತ ಶವವೊಂದು ಕುಶಾಲನಗರ ಬಳಿಯ ಬ್ಯಾಡಗೊಟ್ಟ ಗ್ರಾಮದ ನಾಲೆಯಲ್ಲಿ ಪತ್ತೆಯಾಗಿದೆ. ದಿನಾಂಕ 22-08-2015ರಂದು ಕುಶಾಲನಗರದ ಇಂದಿರಾನಗರ ನಿವಾಸಿ ಇಬ್ರಾಹಿಂ ಎಂಬವರು ಶುಂಠಿ ವ್ಯಾಪಾರದ ನಿಮಿತ್ತ ಸಮಯ ಬ್ಯಾಡಗೊಟ್ಟ ಗ್ರಾಮದ ನಲ್ಲೂರು ಬಳಿಯ ನಾಲೆಯ ದಡದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಾಲೆಯ ಗೇಟ್ ಹಾಕಿರುವುದರಿಂದ ಅದರ ಪಕ್ಕದಲ್ಲಿ ಅಂದಾಜು 40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹವೊಂದು ನೀರಿನಲ್ಲಿ ತೇಲುತ್ತಿರುವದನ್ನು ಕಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ತೇಗದ ಮರ ಸಂಗ್ರಹ, ಪ್ರಕರಣ ದಾಖಲು
               ಅಕ್ರಮವಾಗಿ ತೇಗದ ಮರಗಳನ್ನು ಕಡಿದು ನಾಟಾಗಳನ್ನಾಗಿ ಮಾಡಿ ಮರಳಿನಲ್ಲಿ ಹೂತಿಟ್ಟಿದ್ದ ಪ್ರಕರಣವೊಂದನ್ನು ಕುಶಾಲನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.  ಮದಲಾಪುರ ಗ್ರಾಮದ ತಾಯಪ್ಪ  ಎಂಬವರು ತಮ್ಮ ಜಮೀನಿನ ಪಕ್ಕದಲ್ಲಿ ಸರ್ಕಾರಿ ಜಾಗದಿಂದ ಅಕ್ರಮವಾಗಿ ತೇಗದ ಮರವನ್ನು ಕಡಿದು ನಾಟಾಗಳನ್ನಾಗಿ ಮಾಡಿ  ಮರಳಿನಲ್ಲಿ ಮುಚ್ಚಿಟ್ಟಿರುವುದಾಗಿ  ದೊರೆತ ಮಾಹಿತಿಯ ಮೇರೆಗೆ ದಿನಾಂಕ 23/08/2015ರಂದು ಕುಶಾಲನಗರ ಠಾಣಾ ಪಿಎಸ್‌ಐ ಅನೂಪ್‌ ಮಾದಪ್ಪರವರು ಸಿಬ್ಬಂದಿಗಳೊಂದಿಗೆ ಮದಲಾಪುರ  ಗ್ರಾಮದ  ಬಳಿ ಹಾರಂಗಿ  ನಾಲೆಯ  ಬಲದಂಡೆಯ  ಮೇಲಿರುವ  ಬ್ಯಾಡಗೊಟ್ಟ  ಗ್ರಾಮದಲ್ಲಿರುವ  ತಾಯಪ್ಪವನವರ  ಜಾಗಕ್ಕೆ  ಬಂದಾಗ ಅಲ್ಲಿದ್ದ ಇವ್ವರು ವ್ಯಕ್ತಿಗಳು ಓಡಲು  ಪ್ರಯತ್ನಿಸಿದ್ದು  ಅವರನ್ನು ಹಿಡಿದು  ಪಕ್ಕದಲ್ಲಿದ್ದ  ಜೆಸಿಬಿ ಯಂತ್ರದಿಂದ ಮಣ್ಣು ತೆಗೆಸಲಾಗಿದ್ದ  ಜಾಗದಲ್ಲಿ  ಹಾಕಲಾಗಿದ್ದ  ಮರಳನ್ನು  ಕೆದಕಿದಾಗ ವಿವಿಧ ಅಳತೆಯ 6 ತೇಗದ ಮರದ ನಾಟಾಗಳು ಕಂಡು ಬಂದಿದ್ದು  ಅವುಗಳನ್ನು ಅಮಾನತು ಪಡಿಸಿಕೊಂಡು ಅಲ್ಲಿದ್ದ ಹುದುಗೂರು ಗ್ರಾಮದ ತಾಯಪ್ಪ ಮತ್ತು ಆತನ ಮಗ ಸತೀಶರವರನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
                  ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡರುವ ಘಟನೆ ವಿರಾಜಪೇಟೆ ಬಳಿಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 23/08/2015ರಂದು ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ಮನು ಎಂಬವರು ಮನೆಯಲ್ಲಿ ಚೂಡಿದಾರದ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೀಗ ಮುರಿದು ಚಿನ್ನಾಭರಣ ಕಳವು
             ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆಯ ಚಿನ್ನಾಭರಣ, ನಗದನ್ನು ಕಳವು ಮಾಡಿರುವ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ವಿರಾಜಪೇಟೆ ನಗರದ ಚರ್ಚ್ ರಸ್ತೆಯಲ್ಲಿ ವಾಸವಾಗಿರುವ ಚೆರುವಾಳಂಡ ನಂಜಮ್ಮ ಎಂಬವರು ದಿನಾಂಕ 21-08-2015 ರಂದು  ತೋಟದ ಕೆಲಸ ಮಾಡಿಸುವ ಸಲುವಾಗಿ ಕೋಕೇರಿ ಗ್ರಾಮಕ್ಕೆ  ಮನೆಯ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು,  ದಿನಾಂಕ 23-08-2015 ರಂದು  ಅವರ ಮನೆಯ ಹಿಂಭಾಗದ ಬಾಡಿಗೆಯ ಮನೆಯಲ್ಲಿ ವಾಸವಿರುವ ಶಿಕ್ಷಕರಾದ ಯಲ್ಲಪ್ಪ ಪೂಜಾರಿಯವರು ದೂರವಾಣಿಯ ಮೂಲಕ ಕರೆ ಮಾಡಿ ನಂಜಮ್ಮನವರ ಮನೆಯ ಮುಂಬಾಗಿಲನ್ನು ಯಾರೋ ಒಡೆದಂತೆ ಕಾಣುತ್ತದೆ ಎಂದು ತಿಳಿಸಿದ್ದು  ಕೂಡಲೇ ನಂಜಮ್ಮನವರು ತನ್ನ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮುಂಬಾಗಿಲಿನ ಬೀಗದ ಪತ್ತಿಯನ್ನು ಹಾಗೂ ಡೋರ್ ಲಾಕ್ ನ್ನು ಯಾವುದೋ ಹರಿತವಾದ ಆಯುದದಿಂದ ಮೀಟಿ ಬಾಗಿಲನ್ನು ತೆರೆದು ಒಳನುಗ್ಗಿ ಮಲಗುವ ಕೋಣೆಯೊಳಗಿದ್ದ ಕಬೋರ್ಡ್ ಡ್ರಾಯರ್ ನಲ್ಲಿಟ್ಟಿದ್ದ 20,000 ಸಾವಿರ ನಗದು ಒಂದು ಎಲ್.ಸಿ.ಡಿ ಸೋನಿ ಟಿ.ವಿರೂ (25,000 ಬೆಲೆ) ಹಾಗೂ 1,04000 ರೂ ಬೆಲೆಯ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

Sunday, August 23, 2015

ಮೋಟಾರು ಬೈಕು ಡಿಕ್ಕಿ, ಇಬ್ಬರಿಗೆ ಗಾಯ
                ಮೋಟಾರು ಬೈಕೊಂದಕ್ಕೆ ಹಿಂದಿನಿಂದ ಮತ್ತೊಂದು ಮೋಟಾರು ಬೈಕು ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಕುಶಾಲನಗರ ಬಳಿಯ ಗುಡ್ಡೆಹೊಸೂರುವಿನಲ್ಲಿ ನಡೆದಿದೆ. ದಿನಾಂಕ 21-8-2015 ರಂದು ಚೇರಂಬಾಣೆ ನಿವಾಸಿ ಜಯಂತಿ ಎಂಬವರು  ಅವರ ಪಕ್ಕದ ಮನೆಯ ನಿವಾಸಿಯಾದ ರಘುನಾಥರವರ ಬಾಪ್ತು ನೋಂದಣಿಯಾಗದ ಮೋಟಾರ್ ಸೈಕಲ್ ನಲ್ಲಿ ಕುಳಿತುಕೊಂಡು ಕುಶಾಲನಗರಕ್ಕೆ ಬಂದು ವಾಪಸು ಚೇರಂಬಾಣೆಗೆ ಹೋಗುತ್ತಿರುವಾಗ ಗುಡ್ಡೆಹೊಸೂರು ಜಂಕ್ಷನ್ ಬಳಿ ಹಿಂಬಾಗದಿಂದ ಬರುತಿದ್ದ ಮೋಟಾರ್ ಸೈಕಲ್ ನಂ ಕೆಎ 12 ಎಲ್ 6658 ರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಮೋಟಾರು ಸೈಕಲನ್ನು ಚಾಲನೆ ಮಾಡಿಕೊಂಡು ಬಂದು ಜಯಂತಿಯವರು  ಹೋಗುತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಜಯಂತಿ ಹಾಗೂ ರಘುನಾಥರವರು ಕೆಳಗೆ  ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ
                 ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಶನಿವಾರಸಂತೆ ನಗರದಲ್ಲಿ ನಡೆದಿದೆ. ದಿನಾಂಕ 22/08/2015ರಂದು ಶನಿವಾರಸಂತೆಯ ತ್ಯಾಗರಾಜ ಕಾಲೊನಿ ನಿವಾಸಿ ಸಿ.ಸಿ.ದಿನೇಶ ಎಂಬವರು ನಗರದ ಕೆ.ಆರ್‌.ಸಿ ವೃತ್ತದ ಬಳಿ ನಿಂತುಕೊಂಡಿರುವಾಗ ಅಲ್ಲಿಗೆ ಬಂದ ತ್ಯಾಗರಾಜ ಕಾಲೋನಿಯ ಬಸಪ್ಪ ಎಂಬವರು ದಿನೇಶರವರ ಅಣ್ಣ ಕರಿಸ್ವಾಮಿಯವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಲು ಅಪೇಕ್ಷಿದ್ದು ಆಗ ದಿನೇಶರವರು ಮೊಬೈಲ್‌ನಲ್ಲಿ ಕರೆನ್ಸಿ ಇಲ್ಲದಿದ್ದು ಕರೆನ್ಸಿಹಾಕಿಸಿಕೊಂಡು ಬರುವುದಾಗಿ ಹೇಳಿದ ಕಾರಣಕ್ಕೆ ಬಸಪ್ಪರವರು ಏಕಾಏಕಿ ಜಗಳ ತೆಗೆದು ದಿನೇಶರವರ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಶವ ಪತ್ತೆ
                   ಕಕ್ಕಬೆ ಕುಂಜಿಲ ಗ್ರಾಮದಲ್ಲಿ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿದೆ. ದಿನಾಂಕ 22/08/2015ರಂದು ಕಕ್ಕಬೆಯಿಂದ ಚೆಯ್ಯಂಡಾಣೆಗೆ ಹೋಗುವ ಸಾರ್ವಜನಿಕ ರಸ್ತೆಯ ಬದಿ ವಿದ್ಯುತ್‌ ಕಂಬಗಳನ್ನು ಶೇಖರಿಸಿಟ್ಟಿದ್ದ ಸ್ಥಳದ ಬಳಿ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿದ್ದು ವಿ.ಎ.ಉಸ್ಮಾನ್‌ ಎಂಬವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಿಕ್ಷಾ ಅವಘಢ, ನಾಲ್ವರಿಗೆ ಗಾಯ
                 ರಿಕ್ಷಾವೊಂದು ಮಗುಚಿಕೊಂಡು ನಾಲ್ವರಿಗೆ ಗಾಯಗಳಾದ ಘಟನೆ ವಿರಾಜಪೇಟೆ ಬಳಿಯ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 21-08-15ರಂದು ಮಡಿಕೇರಿಯ ರೇಸ್‌ ಕೋರ್ಸ್‌ ರಸ್ತೆ ನಿವಾಸಿ ಶಶಿ ಎಂಬವರು  ಗ್ರೇಸಿ, ಮೋಳಿ ಹಾಗೂ ಲೇಖನ ಎಂಬವರೊಂದಿಗೆ ಗೋಣಿಕೊಪ್ಪದಲ್ಲಿರುವ ಮೋಳಿರವರ ಅಕ್ಕ ಎಲ್ಸಿ ರವರನ್ನು ನೋಡಿಕೊಂಡು ಬರುವ ಸಲುವಾಗಿ ರಾತ್ರಿ 11-00ಗಂಟೆಗೆ ಮಡಿಕೇರಿಯಿಂದ ಕೆಎ-12-ಎ-7118ರ ಆಟೋರಿಕ್ಷಾದಲ್ಲಿ ಹೊರಟುನಡುರಾತ್ರಿ ವೇಳೆ  ವಿರಾಜಪೇಟೆಯ ಬಿಟ್ಟಂಗಾಲದ ಬಳಿಯ  ಮಾಕುಟ್ಟ ರಸ್ತೆಯ ಜಂಕ್ಷನ್ ಬಳಿ ತಿರುವಿನಲ್ಲಿ ಆಟೋ ರಿಕ್ಷಾ ಚಾಲಕ ಅನಿಲ್‌ ಎಂಬವರ ನಿಯಂತ್ರಣ ತಪ್ಪಿ ಮಗುಚಿಕೊಂಡ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಶಶಿ, ಗ್ರೇಸಿ, ಮೋಳಿ ಹಾಗೂ ಲೇಖನರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಲಾತ್ಕಾರ ಹಣ ವಸೂಲಿ
               ವ್ಯಕ್ತಿಯೊಬ್ಬರಿಂದ ಬಲಾತ್ಕಾರವಾಗಿ ಹಣ ವಸೂಲಿ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ಗೋಣಿಕೊಪ್ಪ ನಗರದಲ್ಲಿ ಇತ್ತೀಚೆಗೆ ನಡೆದಿದೆ. ದಿನಾಂಕ 11/07/2015 ರಂದು ಹಾಗೂ ನಂತರದ ದಿನಗಳಲ್ಲಿ ಕುಪ್ಪಣಮಾಡ ಪೂಣಚ್ಚ, ಮುಕ್ಕಾಟಿರ ಪೆಮ್ಮಯ್ಯ ಮತ್ತು ಕರ್ತಮಾಡ ಗಿರೀಶ ಎಂಬವರುಗಳು  ಕೆಎ-04-3007ರ ಸ್ಕಾರ್ಪಿಯೋ ಹಾಗೂ ಮತ್ತೊಂದು ಮಾರುತಿ ರಿಟ್ಜ್‌ ಕಾರಿನಲ್ಲಿ ಗೋಣಿಕೊಪ್ಪ ನಗರದ ಎಂ.ಎ.ಸಿದ್ದಿಕ್‌ ಎಂಬವರ ಫರ್ನಿಚರ್ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ  ಮಾಮೂಲಿ ಹಣ ಕೊಡಬೇಕು ಇಲ್ಲದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ್ದು, ಆಗ ಸಿದ್ದಿಕ್‌ರವರು ತನ್ನಲ್ಲಿ ಹಣವಿಲ್ಲವೆಂದು ಅವರುಗಳು ಸಿದ್ದಿಕ್‌ರವರನ್ನು  ಬಲವಂತವಾಗಿ ಸ್ಕಾರ್ಪಿಯೋ ವಾಹನದೊಳಗೆ ಎಳೆದುಕೊಂಡಾಗ ಸಿದ್ದಿಕ್‌ರವರು ಜೇಬಿನಲ್ಲಿದ್ದ 20 ಸಾವಿರ ಹಣವನ್ನು ಕೊಟ್ಟಿದ್ದಾಗಿ ಹಾಗೂ ಬ್ಯಾಂಕಿನ 1 ಚೆಕ್ ಗೆ ಬಲವಂತವಾಗಿ ಸಹಿ ಮಾಡಿಸಿಕೊಂಡು ವಾಹನದಿಂದ ಇಳಿಸಿದ್ದು,  ನಂತರ ಸಂಜೆ ಪುನಃ ಮಾರುತಿ ರಿಟ್ಜ್  ಕಾರಿನಲ್ಲಿ ಗಿರೀಶನು ಬಂದು ಬಲವಂತವಾಗಿ ಸಿಕ್ಕಿಕ್‌ರವರನ್ನು ಕಾರಿಗೆ  ಹತ್ತಿಸಿಕೊಂಡು ಗೋಣಿಕೊಪ್ಪ, ಕೈಕೇರಿ, ಒಂಟಿಯಂಗಡಿ ಕಡೆಗೆ ಕರೆದುಕೊಂಡು ಹೋಗಿ ಹಣ ಕೊಡುವಂತೆ ಬೆದರಿಸಿದಾಗ ಜೇಬಿನಲ್ಲಿದ್ದ 5 ಸಾವಿರ ಹಣವನ್ನು ಕೊಟ್ಟಿರುವುದಾಗಿ ಪುನಃ ಸಿದ್ದಿಕ್‌ರವರಿಗೆ  ಮೊಬೈಲ್ ಕರೆ ಮಾಡಿ ಅವರಿಗೆ  ತಿಂಗಳಿಗೆ ಮಾಮೂಲಿ ಹಣ ಕೊಡಬೇಕು ಇಲ್ಲದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, August 20, 2015

ಹುಡುಗಿ ಕಾಣೆ, ಪ್ರಕರಣ ದಾಖಲು: 

     ಸಿದ್ದಾಪುರ ಠಾಣಾ ವ್ಯಾಪ್ತಿಯ ವಾಲ್ನೂರು ತ್ಯಾಗತ್ತೂರು ಗ್ರಾಮದ ನಿವಾಸಿ ಶ್ರೀಮತಿ ಪಾತೀಮಾ ಎಂಬವರ ಮಗಳಾದ 19 ವರ್ಷ ಪ್ರಾಯದ ಶಾಹಿದಾ ನೆಲ್ಲಿಹುದಿಕೇರಿಯ ಹಾಜರಾ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರತಿ ದಿವಸ ಮನೆಯಿಂದ ಅಂದರೆ ವಾಲ್ನೂರಿನಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದು ದಿನಾಂಕ 18-8-2015 ರಂದು ಆಕೆ ಕೆಲಸಕ್ಕೆ ಹೋದವಳು ಸಂಜೆಯಾದರೂ ಮನೆಗೆ ಬಾರದೆ ಇದ್ದು ಎಲ್ಲಕಡೆಗಳಲ್ಲಿ ಹುಡುಕಾಡಿ ಎಲ್ಲಿಯೂ ಪತ್ತೆಯಾಗದೆ ಇದ್ದು, ಆಕೆಗೆ ಅದೇ ಗ್ರಾಮದ ವಾಸಿ ಇಬ್ರಾಹಿಂ ರವರೊಂದಿಗೆ ಸ್ನೇಹವಿದ್ದು ಆತನೊಂದಿಗೆ ಹೋಗಿರಬಹುದೆಂಬ ಸಂಶಯವಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Wednesday, August 19, 2015

ಜೀಪು ಮಗುಚಿ ಚಾಲಕನ ದುರ್ಮರಣ
                 ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮಗುಚಿಕೊಂಡ ಪರಿಣಾಮ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದ ಘಟನೆ ಮಡಿಕೇರಿ ನಗರದ ಕಾನ್ವೆಂಟ್‌ ಬಳಿ ಸಂಭವಿಸಿದೆ. ದಿನಾಂಕ 18/08/2015ರಂದು ಸುಂಟಿಕೊಪ್ಪದ ಸುಲೈಮಾನ್‌ ಎಂಬವರು ಅವರ ಜೀಪು ಸಂಖ್ಯೆ ಕೆಎ-09-ಎಂ-4453ರಲ್ಲಿ ಸುಂಟಿಕೊಪ್ಪದಿಂದ ಗಾಳಿಬೀಡಿನ ವೈಲ್ಡ್‌ ಫ್ಲವರ್‌ ತೋಟಕ್ಕೆ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಬರುತ್ತಿರುವಾಗ ನಗರದ ಕಾನ್ವೆಂಟ್‌ ಹಿಂಭಾಗದ ಭಗವತಿ ವರ್ಕ್‌ಶಾಪ್‌ ಬಳಿ ಜೀಪು ಸುಲೈಮಾನ್‌ರವರ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಗುದ್ದಿದ ಪರಿಣಾಮ ಕೆಳಗೆ ಬಿದ್ದ ಸುಲೈಮಾನ್‌ರವರ ಮೇಲೆ ಜೀಪು ಮಗುಚಿ ಸುಲೈಮಾನ್‌ರವರು ಸ್ಥಲದಲ್ಲೇ ಸಾವಿಗೀಡಾಗಿದ್ದು ಜೀಪಿನಲ್ಲಿದ್ದ ಇತರೆ ಕಾರ್ಮಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
              ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಬಳಿಯ ಗದ್ದೆ ನೆಲಜಿ ಎಸ್ಟೇಟಿನಲ್ಲಿ ನಡೆದಿದೆ. ದಿನಾಂಕ 17/08/2015ರಂದು ಗದ್ದೆ ಎಸ್ಟೇಟಿನ ಲೈನುಮನೆಯಲ್ಲಿ ವಾಸವಿರುವ ಅಣ್ಣಿ ಎಂಬವರು ಅವರ ಕಾಲು ನೋವಿನ ವಿಚಾರವಾಗಿ ಜುಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಪತ್ನಿ ಸರೋಜರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಡಿಕ್ಕಿ, ಹಾನಿ
                ಕಾರೊಂದಕ್ಕೆ ಮತ್ತೊಂದು ಕಾರು ಡಿಕ್ಕಿಯಾಗಿ ಹಾನಿಗೊಳಗಾದ ಘಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 18/08/2015 ರಂದು ಕಿರುಗೂರು ನಿವಾಸಿ ಪ್ರಕಾಶ್‌ ಎಂಬವರು ಅವರ ಕಾರು ಸಂಖ್ಯೆ ಕೆಎ-12-ಪಿ-4781ರಲ್ಲಿ ನಲ್ಲೂರು ಗ್ರಾಮದಿಂದ ಪೊನ್ನಂಪೇಟೆಯ ಕಾನೂರು ಜಂಕ್ಷನ್ ಬಳಿ ಬಂದು ಸ್ವಂತ ಕೆಲಸವನ್ನು ಮುಗಿಸಿಕೊಂಡು ವಾಪಾಸ್ಸು ಬಸ್‌ ಸ್ಟಾಂಡ್ ಹತ್ತಿ ಬರುತ್ತಿರುವಾಗ ಪೊನ್ನಂಪೇಟೆ  ಆಶ್ರಮದ ಎಡ ಭಾಗದಲ್ಲಿ ನಿಂತಿದ್ದ ಕೆಎ-03-ಪಿ-8432ರ ಒಂದು ಮಾರುತಿ ಎಸ್ಟೀಮ್ ಕಾರನ್ನು ಅದರ ಚಾಲಕ ಬಾನಂಗಡ ಪೂಣಚ್ಚ ಎಂಬವರು  ಹಿಂದುಗಡೆ ರಿವರ್ಸ್ ತೆಗೆಯುವಾಗ ಪ್ರಕಾಶ್‌ರವರ ಕಾರಿನ ಎಡಭಾಗಕ್ಕೆ  ಗುದ್ದಿ  ಹಾನಿಗೊಳಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸರಗಳ್ಳತನ ಪ್ರಕರಣ
                  ಬಸ್ಸು ಹತ್ತುವ ಸಂದರ್ಭ ಮಹಿಳೆಯೊಬ್ಬರ ಸರಗಳ್ಳತನ ಮಾಡಿದ ಘಟನೆ ಕುಶಲನಗರದಲ್ಲಿ ನಡೆದಿದೆ. ಪಿರಿಯಾಪಟ್ಟಣ ನಿವಾಸಿ ರತ್ನಮ್ಮ ಎಂಬವರು ದಿನಾಂಕ 18-8-2015 ರಂದು ಸಂಜೆ ಮಗಳ ಮನೆಗೆ ಹೋಗಲು ಪಿರಿಯಾಪಟ್ಟಣದಿಂದ ಕುಶಾಲನಗರಕ್ಕೆ ಬಂದು ಕುಶಾಲನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕೊಣನೂರು ಕಡೆಗೆ ಬಸ್ ಹತ್ತಲು ಹೋದಾಗ ಬಸ್ಸಿನಲ್ಲಿ ವಿಪರೀತ ಜನ ಸಂದಣಿ ಇದ್ದು ಬಸ್‌ ಏರಿ  ಒಳಗೆ ಕುಳಿತಾಗ ಅವರ ಕುತ್ತಿಗೆಯಲ್ಲಿದ್ದ ರೂ. 65,000/- ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಯಾರೊ ಕಳ್ಳತನ ಮಾಡಿರುವುದು ಕಂಡುಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, August 18, 2015

ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು
              ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಗೋಣಿಕೊಪ್ಪ ಪೊಲೀಸರು ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ದಿನಾಂಕ 17/08/2015ರಂದು ಗೋಣಿಕೊಪ್ಪ ಠಾಣಾಧಿಕಾರಿ ಜೆ.ಇ.ಮಹೇಶ್‌ರವರಿಗೆ ಹಾತೂರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಪಿಎಸ್‌ಐರವರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಹಾತೂರು ಗ್ರಾಮದ ಕೊಕ್ಕಂಡ ವಿಶ್ವನಾಥ್ ರವರ ವಾಸದ ಮನೆಯ ಪಕ್ಕದಲ್ಲಿರುವ ಕಾರು ಶೆಡ್ಡಿನ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಸದ್ರಿ ವಿಶ್ವನಾಥ್‌ರವರು  ಒಂದು ಕೈಯಲ್ಲಿ ಮದ್ಯದ ಬಾಟಲಿ ಮತ್ತು ಮತ್ತೊಂದು ಕೈಯಲ್ಲಿ ಗಾಜಿನ ಲೋಟವನ್ನು ಹಿಡಿದುಕೊಂಡು ಚಿಲ್ಲರೆಯಾಗಿ ಮಾರಾಟ ಮಾಡಲು ಸಾರ್ವಜನಿಕರನ್ನು ಆಹ್ವಾನಿಸುತ್ತಿದ್ದುದ್ದು ಕಂಡು ಬಂದಿದ್ದು ಪೊಲೀಸರನ್ನು ಕಂಡೊಡನೆ ಓಡಿ ಹೋಗಿದ್ದು ಪೊಲೀಸರು ಸ್ಥಲದಲ್ಲಿ ದೊರೆತ ಮದ್ಯ ಬಾಟಲಿಗಳನ್ನು ಅಮಾನತು ಪಡಿಸಿ ಓಡಿ ಹೋದ ಕೊಕ್ಕಂಡ ವಿಶ್ವನಾಥ್‌ರವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ
                ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಸಮೀಪದ ಸೀಗೆಹೊಸೂರು ಗ್ರಾಮದಲ್ಲಿ ನಡೆದಿದೆ. ಸೀಗೆ ಹೊಸೂರು ಗ್ರಾಮದ ನಿವಾಸಿ ಸತೀಶ್‌ ಕುಮಾರ್‌ ಎಂಬವರ ತಂದೆ  ಪ್ರಾಯ 53 ವರ್ಷದ ಟಿ.ಸಿ.ಚಂದ್ರಶೇಖರ ರವರಿಗೆ ಮದ್ಯಪಾನ ಮಾಡುವ ಅಬ್ಯಾಸವಿದ್ದು, ದಿನಾಂಕ 17-8-2015 ರಂದು  ಚಂದ್ರಶೇಖರ್ ರವರು ಯವುದೋ ವಿಷ ಪದಾರ್ಥವನ್ನು ಸೇವಿಸಿ ಒದ್ದಾಡುತಿದ್ದಾಗ ಸತೀಶ್‌ ಕುಮಾರ್‌ರವರ  ದೊಡ್ಡಪ್ಪ ಪ್ರಸನ್ನ ರವರು ತಕ್ಷಣ ಚಂದರಶೇಖರ ರವರನ್ನು ಚಿಕಿತ್ಸೆ ಬಗ್ಗೆ ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಸತೀಶ್‌ಕುಮಾರ್‌ವರಿಗೆ ಫೋನ್ ಮುಖಾಂತರ ತಿಳಿಸಿದ್ದು, ಅವರು ಬಂದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಆಂಬ್ಯೂಲೆನ್ಸ್ ನಲ್ಲಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿಗೆ ಕರೆದುಕೊಂಡು ಹೋಗುತಿರುವಾಗ ಸುಂಟಿಕೊಪ್ಪದ ಬಳಿ ಮೃತರಾಗಿರುವುದಾಗಿನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗೋದಾಮಿನಿಂದ ಕಾಳು ಮೆಣಸು ಕಳವು
             ತೋಟದ ಗೋದಾಮಿನಿಂದ ಅಪಾರ ಮೌಲ್ಯದ ಕಾಳು ಮೆಣಸು ಕಳವು ಮಾಡಿದ ಘಟನೆ ಸಿದ್ದಾಪುರ ಬಳಿಯ ಚೆನ್ನನಕೋಟೆಯಲ್ಲಿ ನಡೆದಿದೆ. ಚೆನ್ನನಕೋಟೆಯ ಬೀಚ್‌ಲ್ಯಾಂಡ್‌ ಎಸ್ಟೇಟಿನ ಗೋದಾಮಿನಲ್ಲಿ 450 ಕೆ.ಜಿ.ಯಷ್ಟು ಕಾಳುಮೆಣಸನ್ನು ಶೇಖರಿಸಲಾಗಿದ್ದು ದಿನಾಂಕ 17/08/2015ರಂದು ಬೆಳಿಗ್ಗೆ ತೋಟದ ಮ್ಯಾನೇಜರ್‌ ಕೃಷ್ನನ್‌ ಎಂಬವರು ಗೋದಾಮಿನ ಬಳಿ ನೋಡಿದಾಗ ಗೋದಾಮಿನ ಬೀಗ ಇಲ್ಲದಿರುವುದನ್ನು ಕಂಡು ಸಂಶಯಿತರಾಗಿ ಹೋಗಿ ನೋಡಿದಾಗ ಯಾರೋ ಕಳ್ಳರು ಗೋದಾಮಿನ ಬೀಗ ಮುರಿದು ಒಳ ಪ್ರವೇಶಿಸಿ ಅಂದಾಜು ರೂ.2,70,000/- ಮೌಲ್ಯದ 450 ಕೆ.ಜಿ.ಕರಿಮೆಣಸನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, August 17, 2015

ಬೈಕ್‌ಗೆ ಲಾರಿ ಡಿಕ್ಕಿ ಸವಾರನ ದುರ್ಮರಣ:

     ಸೋಮವಾರಪೇಟೆ ಠಾಣಾ ಸರಹದ್ದಿನ ಹೊನವಳ್ಳಿ ಗ್ರಾಮದ ನಿವಾಸಿ ಶ್ರೀಮತಿ ರೇಖಾ ಎಂಬವರ ಪತಿ ಸೋಮಣಿರವರು ತಮ್ಮ ಬಾಪ್ತು ಬೈಕ್ ಸಂಖ್ಯೆ ಕೆಎ 12 ಈ 6121 ರಲ್ಲಿ ಬೀಟಿಕಟ್ಟೆಯಿಂದ ಅವರ ಮನಗೆ ಬರುತ್ತಿರುವಾಗ್ಗೆ ಹೊನವಳ್ಳಿ ಗ್ರಾಮದ ಅವರ ಮನೆಯ ಹತ್ತಿರ ರಸ್ತೆಯಲ್ಲಿ ಸೋಮವಾರಪೇಟೆ ಕಡೆಯಿಂದ ಬರುತ್ತಿದ್ದ ಟಿಂಬರ್ ಲಾರಿ ಸಂಖ್ಯೆ ಕೆಎ 19 ಬಿ 2378 ರ ಲಾರಿಯು ಡಿಕ್ಕಿ ಯಾಗಿ ಸದರಿ ಅಪಘಾತದಲ್ಲಿ ಸೋಮಣಿ ರವರು ಮೃತ ಪಟ್ಟಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರಿಮೆಣಸು ಕಳವು, ಪ್ರಕರಣ ದಾಖಲು:

     ಶ್ರೀಮಂಗಲ ಠಾಣಾ ಸರಹದ್ದಿನ ಬಾಡಗರಕೇರಿ ಗ್ರಾಮದ ನಿವಾಸಿ ಚೆಪ್ಪುಡೀರ ಹರ್ಷ ಎಂಬವರು ತಮ್ಮ ಮನೆಯ ಹತ್ತಿರದ ಗೋದಾಮಿನಲ್ಲಿ ಕಾಫಿ ಹಾಗು ಕರಿಮೆಣಸನ್ನು ಶೇಖರಿಸಿಟ್ಟಿದ್ದು, ದಿನಾಂಕ 16-8-2015 ರಂದು ಶೇಖರಿಸಿಟ್ಟ ಕಾಫಿ ಮತ್ತು ಮರಿಮೆಣಸನ್ನು ಮಾರಾಟ ಮಾಡಲು ಗೋದಾಮಿನ ಬೀಗವನ್ನು ತೆರೆದಾದ ಶೇಖರಿಸಿಟ್ಟಿದ್ದ ಅಂದಾಜು 2.75 ಲಕ್ಷ ಬೆಲೆ ಬಾಳುವ 5.5 ಕ್ವಿಂಟಾಲ್‌ ಕರಿಮೆಣಸನ್ನು ಯಾರೋ ಕಳವು ಮಾಡಿದುವುದು ಕಂಡು ಬಂದಿದ್ದು, ಸದರಿ ಕಳ್ಳತನವನ್ನು ಅವರ ತೋಟದ ರೈಟರ್‌ ಆದ ತೆರಾಲು ಗ್ರಾಮದ ಬಲ್ಯಮಿದೇರಿರ ಕಿಶೋರ್‌ ರವರು ಮಾಡಿರುತ್ತಾರೆಂದು ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.Sunday, August 16, 2015

ಗುಂಡು ಹೊಡೆದುಕೊಂಡು ವ್ಯಕ್ತಿಯ ಆತ್ಮಹತ್ಯೆ
                  ಗುಂಡು ಹೊಡೆದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಬಳಿಯ ಕೈಕಾಡು ಗ್ರಾಮದಲ್ಲಿ ನಡೆದಿದೆ. ಕೈಕಾಡು ನಿವಾಸಿ ಕುಲ್ಲಚೆಟ್ಟಿರ ಪೃಥ್ವಿ ಎಂಬಾತನಿಗೆ ಅತಿಯಾದ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ 15/08/2015ರಂದು ಮನೆಯೊಳಗಡೆ ಸ್ವಯಂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಇತ್ತೀಚೆಗೆ ಮೂರು ದಿನಗಳಿಂದ ಆತನ ತಂದೆಯು ಆತನನ್ನು ಹೊರಗಡೆ ಹೋಗಲು ಬಿಡದೆ ಮದ್ಯಪಾನ ಮಾಡಲು ಬಿಡಲಿಲ್ಲವೆನ್ನಲಾಗಿದ್ದು ಮದ್ಯಪಾನ ಮಾಡಲು ಹಣವಿಲ್ಲದೆ ಜುಗುಪ್ಸೆಗೊಂಡು ಪೃಥ್ವಿಯು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎನ್ನಲಾಗಿದೆ. ಘಟನೆಯ ಸಂಬಂಧ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಆರು ಜನರ ಬಂಧನ 
                ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಶನಿವಾರಸಂತೆ ಪೊಲೀಸರು ಆರು ಜನರನ್ನು ಬಂಧಿಸಿ ಮೊಕದ್ದಮೆ ಧಾಖಲಿಸಿದ್ದಾರೆ. ದಿನಾಂಕ 15/08/2015ರ ಸಂಜೆ ವೇಳೆ ಶನಿವಾರಸಂತೆ ನಗರದ ಪ್ರವಾಸಿ ಮಂದಿರದ ಹಿಂದಿನ ಜಾಗದಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಜೂಜಾಡುತ್ತಿರುವದಾಗಿ ದೊರೆ ಸುಳಿವಿನ ಮೇರೆಗೆ ಶನಿವಾರಸಂತೆ ಠಾಣಾ ಪಿಎಸ್‌ಐ ರವಿಕಿರಣ್‌ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾಳಿ ನಡೆಸಿ ಅಕ್ರಮವಾಗಿ ಜೂಜಾಡುತ್ತಿದ್ದ ಶರತ್‌, ಮಹೇಶ, ಸ್ವಾಮಿ, ದಿಲೀಪ್‌, ಕೀರ್ತಿ ಮತ್ತು ಪ್ರಸಾದ್‌ ಎಂಬವರನ್ನು ಬಂಧಿಸಿ, ಜೂಜಾಡಲು ಬಳಸಿದ್ದ ಇಸ್ಪೇಟು ಎಲೆಗಳು ಹಾಗೂ ಪಣವಾಗಿಟ್ಟಿದ್ದ ರೂ.4, 765/- ನಗದು ಹಣವನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ.
                   ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ವಿರಾಜಪೇಟೆ ಬಳಿಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 14-8-2015 ರಂದು ಮೈಸೂರು ನಿವಾಸಿ ಶಿವಕುಮಾರ್‌ ಎ ಮೋರೆ ಎಂಬವರು  ಅವರ ಗೆಳೆಯ ರಾದ ಜಾಯ್ಸ್ ಜಾರ್ಜ್, ಗೌತಮ್ ಮತ್ತು ಜಯಮೋಹನ್ ರೊಂದಿಗೆ ಚೆಂಬೆಬೆಳ್ಳೂರಿನ ಕೂರ್ಗ್ ಒ ಫಾರ್ಮ್ ಹೋಮ್ ಸ್ಟೇಗೆ ಗೆ ಬಂದು ಅಲ್ಲಿ ಆ ದಿನ ತಂಗಿದ್ದು ದಿನಾಂಕ 15/8/2015 ರಂದು ರಾತ್ರಿ ಹೋಂ ಸ್ಟೇಯಲ್ಲಿ ಊಟ ಮುಗಿಸಿ ಇರುವಾಗ ರಾತ್ರಿ 11.30 ಗಂಟೆಗೆ ದೀಪಕ್ ಕುಶಾಲಪ್ಪಎಂಬವರು ಶಿವಕುಮಾರ್‌ರವರನ್ನು ವಿನಾ ಕಾರಣ ಹೀಯಾಳಿಸಿದುದನ್ನು ಶಿವಕುಮಾರ್‌ರವರು ಆಕ್ಷೇಪಿಸಿದ ಕಾರಣಕ್ಕೆ ದೀಪಕ್‌ ಕುಶಾಲಪ್ಪನವರು ಮತ್ತು  ಜೊತೆಗಾರ ರಾದ ಅರುಣ ಮತ್ತು ಇತರರು ಬೀರು ಬಾಟಲಿಯಿಂದ ತಲೆಗೆ ಹೊಡೆದು ದೊಣ್ಣೆಯಿಂದ ಶರೀರಕ್ಕೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, August 15, 2015

ಅಪರಿಚಿತ ವ್ಯಕ್ತಿಗಳಿಂದ ಸುಲಿಗೆ: 

    ಕೇರಳ ರಾಜ್ಯದ ಪಯ್ಯನೂರು ನಿವಾಸಿ ಸಜಿ ಎಂಬವರು ಟಿಎನ್ 36 ಬಿ 8889 ರ ಲಾರಿಯಲ್ಲಿ ಲೋಡರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 13-8-2015 ರಂದು ಮಕ್ಕಂದೂರಿನ ಬಾಲಾಜಿ ಎಸ್ಟೇಟಿನಿಂದ ಪಾನುವಾಳ ಮರವನ್ನು ಲೋಡ್ ಮಾಡಿಕೊಂಡು ಲೋಡರ್ ಗಳಾದ ಬಿಜು, ಬಿನು, ಫೈಸಲ್, ಗಣೇಶ, ರತನ್, ಸುಂದರ, ಜಾನ್ ಮತ್ತು ಲಾರಿ ಚಾಲಕ ಶಿವುರವರೊಂದಿಗೆ ಸೋಮವಾರಪೇಟೆಯ ಕೋವರ್‌ಕೊಲ್ಲಿ ಮುಖಾಂತರ ಕುಶಾಲನಗರ ಮಾರ್ಗವಾಗಿ ತಮಿಳುನಾಡಿಗೆ ಹೋಗುತ್ತಿರುವಾಗ ರಾತ್ರಿ 9.30 ಗಂಟೆ ಸುಮಾರಿಗೆ ಕುಶಾಲನಗರದ ಕೂಡುಮಂಗಳೂರು ಬಳಿ ರಸ್ತೆಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಲಾರಿಯಲ್ಲಿದ್ದ ಮರಕ್ಕೆ ಕಟ್ಟಲಾಗಿದ್ದ ಹಗ್ಗವನ್ನು ಬಿಗಿ ಮಾಡುತ್ತಿರುವಾಗ್ಗೆ ಕೆಎ 12 ಕೆ 1910 ರ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಲಾರಿಯ ಬಳಿ ಬಂದು ತಾವು ಅರಣ್ಯ ಇಲಾಖೆಯ ಅಧಿಕಾರಿಗಳೆಂದು ಹೇಳಿ ಲಾರಿಯ ದಾಖಲಾತಿಗಳನ್ನು ಕೇಳಿ ಒಬ್ಬಾತ ಲೋಡ್ರ್‌ ಸಜಿಯವರ ಮುಖಕ್ಕೆ ಹೊಡೆದು ಕುತ್ತಿಗೆಯನ್ನು ಅದುಮಿ ಕೊಲ್ಲುವುದಾಗಿ ಬೆದರಿಸಿದ್ದು, ಇನ್ನೊಬ್ಬಾತ ಸಿಯವರ ಜೇಬಿಗೆ ಕೈ ಹಾಕಿ ಜೇಬಿನಲ್ಲಿದ್ದ 12,000 ರೂ. ಹಣವನ್ನು ದೋಚಿ ನಂತರ ಇಬ್ಬರೂ ತಾವು ಬಂದಿದ್ದ ಬೈಕಿನಲ್ಲಿ ಹೊರಟು ಹೋಗಿರುತ್ತಾರೆಂದು ನೀಡಿದ ದೂರಿನಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ. 

ಬಸ್ಸು ಡಿಕ್ಕಿ, ಪಾದಾಚಾರಿಗೆ ಗಾಯ:

     ಕುಟ್ಟ ಠಾಣಾ ಸರಹದ್ದಿನ ಕುಟ್ಟ ಗ್ರಾಮದ ತೀತಿರ ಅಯ್ಯಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಪಂಜರಿ ಯರವರ ಮಾಚಿ ಎಂಬವರು ದಿನಾಂಕ 14-8-2015 ರಂದು ತೈಲಾ ಕುಟ್ಟ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಹಾ ಲಕ್ಷ್ಮಿ ಖಾಸಿಗಿ ಬಸ್ಸಿನ ಚಾಲಕ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಾಚಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ಕಾಲು ಮತ್ತು ತಲೆಗೆ ಗಾಯಗಳಾಗಿದ್ದು, ಕುಟ್ಟ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.  

ಕಾಲೇಜು ವಿದ್ಯಾರ್ಥಿಗಳ ನಡುವೆ ಕಲಹ:

     ಕುಶಾಲನಗರದ ಎಂಜಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ಜುಬೇರ್‌ ಹಾಗು ಮಧು ಎಂಬವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ವಾಗಿ ಮಧು ಜುಬೇರ್‌ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು ಅಲ್ಲದೆ ಇದನ್ನು ವಿಚಾರಿಸಿದ ಜುಬೇರ್‌ ಸ್ನೇಹಿತನಾದ ಇಸಾಮ್‌ ಮೇಲೂ ಮಧು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗ ಮಾರಾಟ ಮಾಡುವಲ್ಲಿ ವಂಚನೆ, ಪ್ರಕರಣ ದಾಖಲು:

     ಕುಶಾಲನಗರ ದ ಬೈಚನಳ್ಳಿ ಗ್ರಾಮದ ನಿವಾಸಿ ಎನ್‌.ಹೆಚ್‌. ರಾಮಚಂದ್ರ ಎಂಬವರು ದಿನಾಂಕ 6-3-2015 ರಂದು ಸೀಗೆಹೊಸೂರು ಗ್ರಾಮದ ನಿವಾಸಿಗಳಾದ ತಿಲೊತ್ತಮೆ, ಪ್ರಭು, ಹೇಮಲತಾ ಹಾಗೂ ಸವಿತಾರವರುಗಳಿಂದ ಸ.ನಂ 1/2ಬಿ9 ರ 2.75 ಎಕರೆ ಪೈಕಿ 2 ಎಕರೆ ಕೃಷಿ ಜಾಗವನ್ನು 18,00,000/- ರೂಗಳಿಗೆ ಅಗ್ರಿಮೆಂಟ್ ಮುಖಾಂತರ ಕ್ರಯಕ್ಕೆ ಪಡೆದು ಸ್ವಾಧೀನ ಹೊಂದಿಕೊಂಡು ವ್ಯವಸಾಯ ಮಾಡಿಕೊಂಡಿದ್ದು, ಜಾಗದ ಬಾಪ್ತು 7,00,000/- ಹಣವನ್ನು ಮೇಲ್ಕಂಡ ವ್ಯಕ್ತಿಗಳು ಸದರಿ ರಾಮಚಂದ್ರ ರವರಿಂದ ನಗದು ರೂಪದಲ್ಲಿ ಪಡೆದುಕೊಂಡಿದ್ದು, ಅಲ್ಲದೆ ಮೇಲ್ಕಂಡ ವ್ಯಕ್ತಿಗಳು ಎನ್‌.ಹೆಚ್‌. ರಾಮಚಂದ್ರರವರಿಗೆ ಮಾರಾಟ ಮಾಡಿದ ಜಾಗವನ್ನು ಕುಶಾಲನಗರ ನಿವಾಸಿ ಟಿ.ವಿ.ರವಿ ಎಂಬುವರಿಗೆ ಮಾರಾಟದ ಅಗ್ರಿಮೆಂಟ್ ಮುಖಾಂತರ ಮಾರಾಟ ಮಾಡಿ ಅವರಿಂದ ರೂ 10,00,000/- ಹಣವನ್ನು ಪಡೆದುಕೊಂಡಿರುವ ಮೂಲಕ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Friday, August 14, 2015

ಬೈಕ್‌ ಡಿಕ್ಕಿ ಪಾದಾಚಾರಿಗೆ ಗಾಯ:

      ಸೋಮವಾರಪೇಟೆ ಠಾಣಾ ಸರಹದ್ದಿನ ದುಂಡಳ್ಳಿ ಗ್ರಾಮದ ನಿವಾಸಿ ಶಿವಾಜಿಯವರು ದಿನಾಂಕ 12-8-2015 ರಂದು ಶನಿವಾರಸಂತೆಯ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಹಿಂಬದಿಯಿಂದ ಕೆ-46-ಕೆ-46-ಜೆ-60ಕೆ-46-ಜೆ-6084ಕೆ-46-ಜೆ-6084ರ ಪಲ್ಸರ್‌ ಬೈಕ್‌ಸವಾರನೊಬ್ಬ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿ ಗಾಯಪಡಿಸಿದ್ದು ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ವಿದ್ಯಾಥಿನಿಯರಿಗೆ ಶಿಕ್ಷಕನಿಂದ ಕಿರುಕುಳ: 
 
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೆಟ್ಟಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರತೀಶ್ ಎಂಬುವವರು ಅಲ್ಲಿನ ಕೆಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಬಗ್ಗೆ ದೂರಿ ಕೊಡಗು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Thursday, August 13, 2015

ಹುಡುಗಿ ಕಾಣೆ, ಪ್ರಕರಣ ದಾಖಲು:

     ಸೋಮವಾರಪೇಟೆ ತಾಲೋಕು ಕೊಡ್ಲಿಪೇಟೆ ಯಲ್ಲಿ ವಾಸವಾಗಿರುವ ಎಂ.ಎಂ. ಇಕ್ಬಾಲ್‌ ಹುಸೈನ್‌ ಎಂಬವರ ಮಗಳಾದ 22 ವರ್ಷ ಪ್ರಾಯದ ಕೆ.ಐ. ಅಫ್ರಿನ್‌ ತಾಜ್‌ ಎಂಬವರು ಕೊಡ್ಲಿಪೇಟೆಯ ಕಲ್ಲುಮಠ ಎಸ್‌.ಕೆ.ಎಸ್‌. ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 11-8-2015 ರಂದು ಶಾಲೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ಶಾಲೆಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿದ್ದು ಅದೇ ಶಾಲೆಯ ಶಿಕ್ಷಕ ಮಂಜುನಾಥ ಎಂಬ ವ್ಯಕ್ತಿಯೂ ಕಾಣೆಯಾಗಿದ್ದು, ಮಂಜುನಾಥನ ಜೊತೆಯಲ್ಲಿ ಹೋಗಿರಬಹುದೆಂದು ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಹಳೇ ದ್ವೇಷ, ಕೋವಿಯಿಂದ ಗುಂಡು ಹಾರಿಸಿ ಕೊಲೆಗೆ ಯತ್ನ:

     ದಿನಾಂಕ: 12-08-15ರಂದು ಸಂಜೆ 6-45 ಗಂಟೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕದನೂರು ಗ್ರಾಮದಲ್ಲಿ ಪಿರ್ಯಾದಿ ಪಾಲೇಕಂಡ ನಂಜಪ್ಪ ಎಂಬವರು ತಮ್ಮ ಮನೆಯವರಾದ ಪೊನ್ನಪ್ಪ ರವರೊಂದಿಗೆ ತಮ್ಮ ಐನ್ ಮನೆ ಗೇಟಿನ ಹತ್ತಿರ ನಿಂತು ಮಾತನಾಡಿಕೊಂಡಿದ್ದು, ನಂತರ ಇಬ್ಬರು ತಮ್ಮ ತಮ್ಮ ಮನೆಗೆ ಹೊರಟ ಸಮಯದಲ್ಲಿ ನಂಜಪ್ಪನವರ ಮನೆಯವರಾದ ಕುಟ್ಟಯ್ಯ ಎಂಬುವವರು ಈ ಹಿಂದೆ ನಂಜಪ್ಪನವರ ಪತ್ನಿಯ ಕುತ್ತಿಗೆಯಿಂದ ಚೈನ್ ಕೀಳಲು ಪ್ರಯತ್ನಿಸಿದ ವಿಚಾರದಲ್ಲಿ ನಂಜಪ್ಪನವರು ಪೊಲೀಸ್ ಠಾಣೆಗೆ ಪುಕಾರು ನೀಡಿದ ವಿಚಾರದಲ್ಲಿ ಹಳೇ ದ್ವೇಷದಿಂದ ಕುಟ್ಟಯ್ಯನು ತನ್ನ ಕೈಯಲ್ಲಿದ್ದ ಒಂಟಿ ನಳಿಗೆ ಕೋವಿಯಿಂದ ಉದ್ದೇಶಪೂರ್ವಕವಾಗಿ ನಂಜಪ್ಪನವರ ಎದೆಯ ಎಡ ಭಾಗಕ್ಕೆ ಗುಂಡು ಹೊಡೆದು ರಕ್ತ ಗಾಯಪಡಿಸಿ ಕೊಲೆಗೆ ಪ್ರಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ಗೆ ಲಾರಿ ಡಿಕ್ಕಿ ಸವಾರನಿಗೆ ಗಾಯ:

      ಪಿರಿಯಾಪಟ್ಟಣ ನಿವಾಸಿ ಪ್ರತಾಪಎಂಬವರ ಭಾವ ಹರಿಹರ ಎಂಬವರು ದಿನಾಂಕ 10-08-2015ರಂದು ತನ್ನ ಬಾಪ್ತು ಕೆ ಎ 12 ಎಲ್ 7757 ರ ಮೋಟಾರ್ ಸೈಕಲ್ ನಲ್ಲಿ ಹೆಬ್ಬಾಲೆಯಿಂದ ಮಣಜೂರು ಗ್ರಾಮಕ್ಕೆ ಹೋಗುತ್ತಿರುವಾಗ್ಗೆ ಸಮಯ 08:30 ಪಿ ಎಂಗೆ ಮಣಜೂರು ಗ್ರಾಮದ ಕೊಲ್ಲಿಹಳ್ಳದ ಬಳಿ ತಲುಪುವಾಗ್ಗೆ ಹೆಬ್ಬಾಲೆ ಕಡೆಯಿಂದ ಬಂದ ಲಾರಿ ಕೆ ಎ 02 ಡಿ 9948ರ ಚಾಲಕನು ಲಾರಿಯನ್ನು ಅತಿ ವೇಗ ಹಾಗು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ ಗೆ ಡಿಕ್ಕಿಪಡಿಸಿದ್ದು, ಪರಿಣಾಮ ಬೈಕ್ ನಿಂದ ಕೆಳಗೆ ಬಿದ್ದ ಹರಿಹರನವರ ತಲೆಗೆ, ಸೊಂಟಕ್ಕೆ ಹಾಗು ಕಾಲಿಗೆ ಗಾಯವಾಗಿದ್ದು ಅವರನ್ನು ಚಿಕಿತ್ಸೆಗಾಗಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರು ಜೆ ಎಸ್ ಎಸ್ ದಾಖಲಿಸಲಾಗಿದ್ದು ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  

ಆರೋಗ್ಯ ಕೇಂದ್ರದಿಂದ ಬ್ಯಾಟರಿ ಕಳವು:

     ಭಾಗಮಂಡಲ ಪೊಲೀಸ್‌ ಠಾಣಾ ವ್ಯಾಪ್ತಿಯ ಭಾಗಮಂಡಲ  ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅಳವಡಿಸಲಾದ ಸೋಲಾರ್‌ ಲೈಟ್‌ಗೆ ಸಂಬಂಧಿಸಿದ ಸೋಲಾರ್‌ ಪ್ಲೇಟ್‌ ಮತ್ತು 45000 ರೂ ಬೆಲೆಬಾಳುವ ಬ್ಯಾಟ್ರಿಗಳನ್ನು ದಿನಾಂಕ 11- 8-2015ರ 23-00 ಗಂಟೆ ಹಾಗು ದಿನಾಂಕ 12-8-2015ರ ಬೆಳಗ್ಗೆ 6-00 ಗಂಟೆಯ ಅವಧಿಯೊಳಗೆ ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗೋಪಾಲರಾಜ್‌ರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, August 12, 2015

ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ದಾಖಲು:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಉಲುಗುಲಿ ಗ್ರಾಮದ ನಿವಾಸಿ ಕೃಷ್ಣ ಎಂಬವರ ಪತ್ನಿ ಶ್ರೀಮತಿ ಪುಷ್ಪ ರವರಿಗೆ ಉಲುಗುಲಿ ಎಸ್ಟೇಟ್ ಮ್ಯಾನೇಜರ್‌ ಮಹಮ್ಮದ್‌ ಎಂಬವರು ಲೈನುಮನೆಯ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿದ ವಿಚಾರದಲ್ಲಿ ಜಾತಿ ನಿಂದನೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

ವಿದ್ಯಾರ್ಥಿನಿಗೆ ಬೈಕ್‌ ಡಿಕ್ಕಿ:

     ಪೊನ್ನಂಪೇಟೆ ಠಾಣಾ ಸರದಹದ್ದಿನ ಕೃಷ್ಣ ಕಾಲೋನಿ ನಿವಾಸಿ ವೆಂಕಟೇಶ್‌ ಎಂಬವರ ಮಗಳು ಕುಮಾರಿ ಹೆಚ್.ಎಲ್. ದಿವ್ಯ ಎಂಬವರು ಪೊನ್ನಂಪೇಟೆ ನಗರದ ಕೃಷ್ಣ ಕಾಲೋನಿಯಿಂದ ಪಕ್ಕದ ಮನೆಯ ಪದ್ಮರವರೊಂದಿಗೆ ಹೋರಟು ಕಾನೂರು ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಸಮಯ 9.00 ಗಂಟೆಗೆ ನಮ್ಮಹಿಂಬದಿಯಿಂದ ಕೆಎ 12 ಎಲ್ 3672 ರ ಬೈಕನ್ನು ಅದರ ಸವಾರನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ದಿವ್ಯಳು ಕೆಳಗೆ ಬಿದ್ದು ಗಾಯಗೊಂಡಿದ್ದು ಹಾಲಿ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊನ್ನಂಪೇಟೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  

ಅಂಗಡಿಯಿಂದ ಆಭರಣ ಕಳವು, ಪ್ರಕರಣ ದಾಖಲು:

     ಕುಶಾಲನಗರದ ಐ.ಬಿ. ರಸ್ತೆಯಲ್ಲಿ ವಾಸವಾಗಿರುವ ಪಿ.ಕೆ. ಸರ್ಪುದ್ದೀನ್ ಎಂಬವರು ಕುಶಾಲನಗರದ ಐ ಬಿ ಬಳಿ ಗಲ್ಫ್ ಸ್ಟೋರಸ್‌ ಅಂಗಡಿಯನ್ನು ಇಟ್ಟುಕೊಂಡು ವ್ಯಾಪರ ಮಾಡಿಕೊಂಡಿದ್ದು ದಿನಾಂಕ 09-08-2015ರಂದು ಸಮಯ 09:00ಪಿ ಎಂಗೆ ವ್ಯಾಪಾರ ಮುಗಿಸಿ ಅಂಗಡಿಯ ಸಿ ಸಿ ಕ್ಯಾಮಾರವನ್ನು ಪರಿಶೀಲಿಸುತ್ತಿರುವಾಗ್ಗೆ ಸದ್ರಿ ದಿವಸದಂದು ಸಮಯ ಮದ್ಯಾಹ್ನ 03:00ಗಂಟೆಗೆ ಅಂಗಡಿಗೆ ಎರಡು ಜನ ಮಹಿಳೆಯರು ಬಂದಿದ್ದು ಸಾಮಾನನ್ನು ಖರೀದಿಸುವಾಗ ಪಿರ್ಯಾದಿಯವರು ಬೇರೆ ಗ್ರಾಹಕರೊಂದಿಗೆ ವ್ಯಾಪಾರದಲ್ಲಿ ಮಗ್ನರಾಗಿರುವ ಸಂದಂರ್ಭದಲ್ಲಿ ಅಂಗಡಿಯಲ್ಲಿದ್ದ 3 ಸರ, ಒಂದು ಜೊತೆ ಓಲೆ, ಒಂದು ಬ್ರಾಸ್ ಲೆಟ್ ಮತ್ತು ಸಿಲ್ವರ್ ಕವರಿಂಗ್ ಇರುವ ಎರಡು ಜೊತೆ ಕಾಲುಚೈನು ಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು ಕಳುವಾದ ವಸ್ತುಗಳ ಮೌಲ್ಯ 5,500/ರೂ ಆಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದಾರೆ.

Tuesday, August 11, 2015

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಸಿದ್ದಾಪುರ ಠಾಣಾ ಸರಹದ್ದಿನ ಹಚ್ಚಿನಾಡು ಗ್ರಾಮದ ವಾಸಿ ಗಣಪತಿ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಕವಿತ ಎಂಬವರ ಗಂಡ ಮಂಜು ಎಂಬವರಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು , ದಿನಾಂಕ 9-8-2015 ರಂದು ಸದರಿ ಮಂಜು ಕುಡಿದ ಅಮಲಿನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.  

ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ:

     ಹುಣಸೂರು ತಾಲೋಕು ಬಿಳಿಕೆರೆ ನಿವಾಸಿ ಸ್ವಾಮಿಗೌಡ ಎಂಬವರ ಮಗಳಾದ ಪಲ್ಲವಿಯನ್ನು ಕುಶಾಲನಗರದ ಬೈಚನಹಳ್ಳಿ ಗ್ರಾಮದ ದೇವರಾಜು ಎಂಬವರೊಂದಿಗೆ 5 ವರ್ಷಗಳ ಹಿಂದೆ ಮದುವೆ ಯಾಗಿದ್ದು 3 ವರ್ಷದ ಗಂಡು ಮಗು ಇದ್ದು ,ದಿನಾಂಕ 09/08/2015 ರಂದು ಪಲ್ಲವಿ ತಮ್ಮ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

ಅಕ್ರಮ ಲಾಟರಿ ಮಾರಾಟ ಆರೋಪಿ ಪೊಲೀಸ್‌ ವಶಕ್ಕೆ: 

    ದಿನಾಂಕ 10/08/2015 ರಂದು ಸಮಯ 10-00 ಗಂಟೆಗೆ ಗೋಣಿಕೊಪ್ಪ ಠಾಣಾಧಿಕಾರಿ ಜೆ.ಇ. ಮಹೇಶ್‌ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ಗೋಣಿಕೊಪ್ಪ ಬಸ್ಸು ನಿಲ್ದಾಣದ ತಂಗುದಾಣದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ಆತನ ಬಳಿ ಇದ್ದ ವಿವಿಧ ರೀತಿಯ ವಿವಿದ ಬೆಲೆಯ 32 ಲಾಟರಿ ಟಿಕೇಟುಗಳನ್ನು ಮತ್ತು ಆರೋಪಿ ಕೈ ಯಲ್ಲಿದ್ದ ನಗದು ಹಣ 1590 ರೂಪಾಯಿಗಳನ್ನು ಆರೋಪಿ ಸಮೇತ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: 

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೇರಳ ಶ್ರೀಮಂಗಲ ಗ್ರಾಮದ ಶ್ರೀಮತಿ ಚಂದ್ರಿ ಎಂಬವರ ಮಗಳು ಶಾಂತಿಗೆ 16 ವರ್ಷ ಪ್ರಾಯ ವಾಗಿದ್ದು ಈಕೆಯು ಚೆಟ್ಟಳ್ಳಿ ಪ್ರೌಢ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಾಂಗ ಮಾಡಿಕೊಂಡಿದ್ದು, ದಿನಾಂಕ 10-08-2015 ರಂದು ಬೆಳಿಗ್ಗೆ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದು ಸಮಯ ಅಂದಾಜು 04.15 ಪಿ.ಎಂ.ಗೆ ಧರ್ಮಸ್ಥಳ ಸಂಘದ ಸಾಲದ ಹಣವನ್ನು ಕಟ್ಟಲು ನಡೆದುಕೊಂಡು ಹೋಗುತ್ತಿರುವಾಗ್ಗೆ ಸಮಯ ಸುಮಾರು 04-25 ಪಿ.ಎಂ.ಗೆ ಪೆರಂಬುಕೊಲ್ಲಿಯ ಶಿವ ಎಂಬ ವ್ಯಕ್ತಿ ಬೈಕಿನಲ್ಲಿ ಸುಣ್ಣದ ಗೂಡಿಗೆ ಬಂದು ಬಲತ್ಕಾರವಾಗಿ ಶಾಂತಿಯ ಕೈ ಹಿಡಿದು ಕಾಫಿ ತೋಟದ ಒಳಗೆ ಎಳೆದುಕೊಂಡು ಹೋಗಿ ಬಲತ್ಕಾರವಾಗಿ ಅತ್ಯಾಚಾರ ಮಾಡಿರುತ್ತಾನೆಂದು ನೀಡಿದ ದೂರಿನಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Monday, August 10, 2015

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ಮಡಿಕೇರಿ ನಗರದ ಚರ್ಚ್‌ಸೈಡ್‌ ಹೋಟೇಲಿನ ಮುಂದೆ ದಿನಾಂಕ 8-8-2015 ರಂದು ಸಮಯ ರಾತ್ರಿ 10-00 ಗಂಟೆಗೆ ಆರೋಪಿಗಳಾದ ಗಿರೀಶ, ಮಂಜು, ವಿನು ನುಮತ್ತು ಗಿರೀಶ ರವರುಗಳು ಸೇರಿ ಮಡಿಕೇರಿ ನಗರದ ಲಿವಾ ಕ್ಲೀನಿಕ್‌ ಬಳಿ ವಾಸವಾಗಿರುವ ವಿ.ಜಿ. ಸತೀಶ್‌ ಎಂಬವರ ದಾರಿ ತಡೆದು ಹಣದ ವಿಚಾರದಲ್ಲಿ ಜಗಳ ಮಾಡಿ ಕೈಗಳಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ವಿ.ಜಿ. ಸತೀಶ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರುಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ, ಪ್ರಕರಣದಾಖಲು:

     ದಿನಾಂಕ 9-8-2015 ರಂದು ಕುಟ್ಟ ವೃತ್ತ ನಿರೀಕ್ಷಕರಾದ ಶ್ರೀ ಸಿ.ಎನ್‌. ದಿವಾಕರ ಎಂಬವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸದರಿಯವರು ಸಿಬ್ಬಂದಿಯೊಂದಿಗೆ ಕುಟ್ಟ ಠಾಣಾ ಸರಹದ್ದಿನ ಪೈತ್‌ ಎಸ್ಟೇಟ್‌ ಹತ್ತಿರ ಪಿಕ್‌ಅಪ್‌ ವಾಹನದಲ್ಲಿ ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೇ 9 ಜಾನುವಾರುಗಳನ್ನು ಕೇರಳ ರಾಜ್ಯಕ್ಕೆ ಸಾಗಿಸಿತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ನಡೆಸಿ ವಾಹನ ಮತ್ತು 9 ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳಾದ ಬಶೀರ್‌, ಮುಸ್ತಫ, ಮತ್ತು ಖಾದರ್‌ (ಮೂವರು ತೋಲ್ಪಟ್ಟಿ ಗ್ರಾಮದ ನಿವಾಸಿಗಳು) ರವರುಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನಕ್ರಮ ಕೈಗೊಂಡಿದ್ದಾರೆ.  

ಅಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವು: 

     ಶ್ರೀಮಂಗಲ ಠಾಣಾ ಸರಹದ್ದಿನ ಈಸ್ಟ್‌ ನೆಮ್ಮಲೆ ಗ್ರಾಮದ ನಿವಾಸಿ ಚೆಂಗಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಪಣಿಎರವರ ಜಮೂನಾ ಎಂಬವರ ತಾಯಿ ಗೌರಿ ಎಂಬ ಮಹಿಳೆ ದಿನಾಂಖ 26-07-2015 ರಂದು ರಾತ್ರಿ ಚಳಿ ಜಾಸ್ತಿಯಾಗಿ ಮನೆಯಲ್ಲಿ ಬೆಂಕಿ ಹಾಕಿಕೊಂಡು ಮಲಗಿದ್ದು ನಂತರ ರಾತ್ರಿ ಅವದಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಸುಟ್ಟಗಾಯವಾದ ಮೇರೆಗೆ ಚಿಕಿತ್ಸೆ ಬಗ್ಗೆ ಆಸ್ವತ್ರೆಗೆ ದಾಖಲಾಗಿದ್ದು ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 09-08-2015 ರಂದು ಮೃತಪಟ್ಟಿದ್ದು ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು: 

     ಮಡಿಕೇರಿ ತಾಲೋಕು ಹೊದ್ದೂರು ಗ್ರಾಮದ ನಿವಾಸಿ ಟಿ.ಪಿ. ಇಂದ್ರ ಎಂಬವರು ದಿನಾಂಕ 07-07-2015 ರಂದು ಬೆಳಿಗ್ಗೆ 08-00 ಗಂಟೆಗೆ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿದ್ದು, ಸಾಯಂಕಾಲ ಸಮಯ 17—00 ಗಂಟೆಗೆ ವಾಪಾಸ್ಸು ಮನೆಗೆ ಬಂದು ಒಳಗೆ ನುಗ್ಗಿದಾಗ ಮನೆಯಲ್ಲಿ ಸಾಮಾನುಗಳೆಲ್ಲವೂ ಚಲ್ಲಾಪಿಲ್ಲಿಯಾಗಿದ್ದು, ಪರಿಶೀಲಿಸ ಲಾಗಿ ಗಾದ್ರೇಜಿನ ಒಳಗೆ ಇಟ್ಟಿದ್ದ ಸುಮಾರು 24,000/= ಮೌಲ್ಯದ ಚಿನ್ನಾಭರಣಗಳನ್ನು ಕಳುವಾಗಿರುವುದು ಕಂಡು ಬಂದಿದ್ದು, ಈ ಕಳ್ಳತನವನ್ನು ಮನೋಜ್ ಎಂಬವರು ಮಾಡಿರಬಹುದೆಂದು ಸಂಶಯವಿರುವುದಾಗಿ ಟಿ.ಪಿ. ಇಂದ್ರರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Saturday, August 8, 2015

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

        ನಾಪೋಕ್ಲು ಪೊಲೀಸ್‌ ಠಾಣೆ ಸರಹದ್ದಿನ ಬಲಮುರಿ ಗ್ರಾಮದ ನಿವಾಸಿ ಎಚ್‌.ಎ ಶರಣು ಎಂಬವರು ದಿನಾಂಕ 6-8-2015 ರಂದು 20-30 ಗಂಟೆಗೆ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾ ಅದೇ ಗ್ರಾಮದ ಗಿರೀಶ ಎಂಬವರು ತನ್ನ ಪತ್ನಿಯ ಜೊತೆ ಮಾತನಾಡಿರುವ ವಿಚಾರದಲ್ಲಿ ದಾರಿ ತಡೆದು ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಈ ಸಂಬಂಧ ಎಚ್‌.ಎ. ಶರಣು ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ:

     ವಿರಾಜಪೇಟೆ ತಾಲೋಕು ನಾಲ್ಕೇರಿ ಗ್ರಾಮದ ನಿವಾಸಿ ಪಿ.ಎಸ್‌. ರವಿ ಎಂಬವರ ತಂದೆ 52 ವರ್ಷ ಪ್ರಾಯದ ಚೋಮ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 5-8-2015 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ರವಿ ಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಅಪ್ರಾಪ್ತೆ ಮೇಲೆ ಯುವಕನಿಂದ ಕಿರುಕುಳ: 

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಳುಗುಂದ ಗ್ರಾಮದ ನಿವಾಸಿ ಯು.ಎಸ್‌. ಪೂವಮ್ಮ ಎಂಬವರ ಮಗಳು ಪ್ರಾಯ: 11 ವರ್ಷದ ಪುಣ್ಯ ಶಾಲೆಯಿಂದ ಮನೆಗೆ ಬರುತ್ತಿರುವಾಗ್ಗೆ, ದಾರಿಯಲ್ಲಿ ಹೆಚ್.ಕೃಷ್ಣಪ್ಪ ಎಂಬುವವರ ಮಗನಾದ ಯೋಗೇಶ್, ರವರು ಪುಣ್ಯಳಿಗೆ ದೈಹಿಕ ಕಿರುಕುಳ ಕೊಟ್ಟಿರುತ್ತಾನೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, August 7, 2015

ಆಕಸ್ಮಿಕ ಹೊಳೆಗೆ ಬಿದ್ದು, ವ್ಯಕ್ತಿಯ ಸಾವು: 

     ಗೋಣಿಕೊಪ್ಪ ಠಾಣಾ ಸರಹದ್ದಿನ ಬಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಪಿ.ಬಿ. ಸಿಂಧು ಎಂಬವರ ತಂದೆ ಪರಿಯ ಎಂಬವರು ಮನೆಕೆಲಸಕ್ಕಾಗಿ ಮನೆಯ ಹತ್ತಿರ ಇರುವ ಸೇತುವೆಯ ಮೇಲ್ಬಾಗದಲ್ಲಿ ಕೆಂದರೆಕಾಡು ಹೊಳೆಯ ದಡದಲ್ಲಿ ದಿನಾಂಕ 5/08/2015 ರಂದು ಮರಳು ತೆಗೆಯುತ್ತಿದ್ದಾಗ ಸಮಯ 10.30 ರಿಂದ 11.00 ಗಂಟೆಯ ಮಧ್ಯೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿದ್ದು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಿಮೆಣಸ ಕಳವು, ಪ್ರಕರಣ ದಾಖಲು:

     ಪೊನ್ನಂಪೇಟೆ ಠಾಣೆ ಸರಹದ್ದಿನ ದೇವರಪುರ ತಿತಿಮತಿ ಗ್ರಾಮದ ನಿವಾಸಿ ಎ.ಆರ್‌. ಕೃಷ್ಣ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಯಾರೋ ಕಳ್ಳರು ನುಗ್ಗಿ ಶೇಖರಿಸಿಟ್ಟಿದ್ದ ಸುಮಾರು 6.7. ಲಕ್ಷ ಮೌಲ್ಯದ ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Thursday, August 6, 2015

ಕತ್ತಿಯಿಂದ ಕಡಿದು ಕೊಲೆಗೆ ಯತ್ನ: 

     ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಇಬ್ಬರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಪಾಲೂರು ಗ್ರಾಮದಲ್ಲಿ ನಡೆದಿದೆ. ಪಾಲೂರು ಗ್ರಾಮದ ನಿವಾಸಿ ಕೆ.ಆರ್‌. ರಾಜೇಶ ಎಂಬವರು ದಿನಾಂಕ 5-8-2015 ರಂದು ತನ್ನ ತಂದೆಯೊಂದಿಗೆ ಪಾಲೂರಿನ ಕಡೆಗೆ ಹೋಗುತ್ತಿದ್ದಾಗ ಅದೇ ಗ್ರಾಮದ ಆರೋಪಿ ದೊರೆರಾಜು ಎಂಬಾತ ಕೆ.ಆರ್‌. ರಾಜೇಶರವರ ದಾರಿ ತಡೆದು ಪೊಲೀಸ್‌ ಠಾಣೆಯಲ್ಲಿ ದೊರೆರಾಜುರವರ ವಿರುದ್ಧ ದೂರು ನೀಡಿದ ವಿಚಾರದಲ್ಲಿ ಜಗಳ ಮಾಡಿ ಕತ್ತಿಯಿಂದ ರಾಜೇಶನವರ ತಂದೆಯ ಮೇಲೆ ಕತ್ತಿಯಿಂದ ಕಡಿದು ಗಾಯಪಡಿಸಿದ್ದೂ ಅಲ್ಲದೆ ರಾಜೇಶನವರ ಮೇಲೂ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿ ಕೊಲೆಗೆ ಯತ್ನಿಸಿರುವುದಾಗಿ ನೀಡಿದ ದೂರಿನಮೇರೆಗೆ ನಾಪೋಕ್ಲು ಪೊಲೀಸರುಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಹಳೇ ದ್ವೇಷ, ವ್ಯಕ್ತಿಯ ಕೊಲೆಗೆ ಯತ್ನ: 

     ಮಡಿಕೇರಿ ತಾಲೋಕು ಪಾಲೂರು ಗ್ರಾಮದ ನಿವಾಸಿ ದೊರೆರಾಜು ಎಂಬವರ ಮತ್ತು ಅವರ ಮನೆಯ ಪಕ್ಕದ ನಿವಾಸಿ ರಾಮಚಂದ್ರ ಮತ್ತು ಅವರ ಮಗ ರಾಜೇಶ ಎಂಬವರ ನಡುವೆ 6 ತಿಂಗಳ ಹಿಂದೆ ರಾಮಚಂದ್ರನವರ ತಂಗಿಯ ಮಗಳು ದಿವ್ಯ ಎಂಬವಳು ಖಾಯಿಲೆಯಿಂದ ಸಾವನಪ್ಪಿ ಸದರಿ ಸಾವು ದೊರೆರಾಜುರವರು ಮಾಟ ಮಾಡಿದ ಕಾರಣಕ್ಕೆ ಆಗಿರುವುದಾಗಿ ರಾಮಚಂದ್ರ ಮತ್ತು ಅವರ ಕುಟುಂಬದವರು ದ್ವೇಷವನ್ನಿಟ್ಟುಕೊಂಡು ಜಗಳ ನಡೆಯುತ್ತಿದ್ದು, ದಿನಾಂಕ 5-8-2015 ರಂದು ದೊರೆರಾಜುರವರು ಪಾಲೂರಿನಲ್ಲಿರುವ ಉಮೇಶನವರ ಅಂಗಡಿಗೆ ಹೋಗುವಾತ್ತಿರುವಾಗ್ಗೆ ಅಲ್ಲಿಗೆ ಬಂದ ರಾಮಚಂದ್ರ ಮತ್ತುಅವರ ಮಗ ರಾಜೇಶ ರವರು ಜಗಳ ಮಾಡಿದ್ದು ಈ ಜಗಳದಲ್ಲಿ ಅವರುಗಳು ಪರಸ್ಪರ ಕತ್ತಿಯಿಂದ ಹಲ್ಲೆ ನಡೆಸಿದ್ದು, ಈ ಸಂಬಂಧ ನಾಪೋಕ್ಲುಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ದಾರಿತಡೆದು ವ್ಯಕ್ತಿಯ ನಿಂದನೆ, ಬೆದರಿಕೆ:

      ದಿನಾಂಕ 05-08-2015ರಂದು ಸಮಯ 11-20 ಗಂಟೆಗೆ ಮೊಹಮ್ಮದ್ ಹನೀಫ ಎಂಬುವವರು ಸಂಪಾಜೆ ಪಯಸ್ವಿಸಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಾಲಚಂದ್ರ ಕಳಗಿ ಎಂಬವರ ಬಗ್ಗೆ ಜಾಲತಾಣದಲ್ಲಿ ಪ್ರಕಟಿಸಿರುವ ಬಗ್ಗೆ ವಿಚಾರಿಸಲು ಹೋದಾಗ ಸಹಕಾರ ಸಂಘದ ಗೇಟಿನ ಮುಂಭಾಗದಲ್ಲಿ ಆರೋಪಿ ಮೊಹಮ್ಮದ್‌ ಹನೀಫ ರವರು ಬಾಲಚಂದ್ರರವರ ದಾರಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಬಗ್ಗೆ ನೀಡಿದ ದೂರಿನಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಅನಾರೋಗ್ಯದ ಹಿನ್ನೆಲೆ ಮಹಿಳೆಯ ಆತ್ಮಹತ್ಯೆ: 

     ವಿರಾಜಪೇಟೆ ತಾಲೋಕು ಕುಕ್ಲೂರು ಗ್ರಾಮದ ತಾತಂಡ ದೇವಕ್ಕಿ ಎಂಬುವರ ಲೈನುಮನೆಯಲ್ಲಿ ವಾಸವಾಗಿರುವ ಪಣಿಎರವರ ಬೋಜ ಎಂಬವರ ಪತ್ನಿ ಚುಂಡೆ (28) ಎಂಬವರು ಅನಾರೋಗ್ಯದ ಹಿನ್ನೆಲೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, August 5, 2015

ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು:
     ಕುಶಾಲನಗರ ಠಾಣಾಧಿಕಾರಿ ಶ್ರೀ ಅನೂಪ್‌ ಮಾದಪ್ಪ ಇವರಿಗೆದೊರೆತ ಖಚಿತ ವರ್ತಮಾನದ ಮೇರೆಗೆ  ಸಿಬ್ಬಂದಿಯೊಂದಿಗೆ ದಿನಾಂಕ 4-8-2015 ರಂದು ಕುಶಾಲನಗರದ ಮಾದಾಪಟ್ಟನ ದ ವಾಸಿ ಸೋಮಶೇಖರ ಎಂಬವರ ಮನೆಗೆ ದಾಳಿ ಮಾಡಿ ಸದರಿಯವರುಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ಸೋಮಶೇಖರ ರವರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 
ಪತ್ನಿ ಮೇಲೆ ಬೆಂಕಿ ಹಚ್ಚಿ ಕೊಲೆಗೆ ಯತ್ನ:
     ಕುಟ್ಟ ಠಾಣಾ ಸರಹದ್ದಿನ ಮಂಚಳ್ಳಿ ಗ್ರಾಮದ ನಿವಾಸಿ ಪಂಜರಿ ಎರವರ ಮುತ್ತ ಎಂಬ ವ್ಯಕ್ತಿ ದಿನಾಂಕ 4-8-2015 ರಂದು ಸಂಜೆ 4-30 ಗಂಟೆಯ ಸಮಯದಲ್ಲಿ ತನ್ನ ಪತ್ನಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಆಕೆಯ ಮೇಲೆ ಸೀಮೆಣ್ಣೆಯನ್ನು ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದು ಈ ಸಂಬಂಧ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 
ಜೀವನದಲ್ಲಿ ಜಿಗುಪ್ಸೆ ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:
     ಸುಂಟಿಕೊಪ್ಪ ಪೊಲೀಸ್‌ ಠಾಣಾ ಸರಹದ್ದಿನ ಕೆ. ಬೈಚನಳ್ಳಿ ಕಾನ್‌ಬೈಲ್‌ ಗ್ರಾಮದಲ್ಲಿ ವಾಸವಾಗಿರುವ ಅಣ್ಣು ನಾಯ್ಕ ಎಂಬವರ ಮಗ ಲೋಹಿತ್‌ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 4-8-2015 ರಂದು  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tuesday, August 4, 2015

ಮದ್ಯದಂಗಡಿಗೆ ನುಗ್ಗಿ ನಗದು ಕಳವು: 

     ವಿರಾಜಪೇಟೆ ನಗರದ ಮದ್ಯಭಾಗದಲ್ಲಿರುವ ಮದ್ಯದಂಗಡಿಗೆ ನುಗ್ಗಿ ನಗದು ಕಳ್ಳತನ ಮಾಡಿದ ಘಟನೆ ನಡೆದಿದೆ. ನಗರದ ಮುಖ್ಯ ರಸ್ತೆಯಲ್ಲಿರುವ ಫೆಡರೇಷನ್‌ ಬ್ರಾಂದಿ ಅಂಗಡಿಗೆ ದಿನಾಂಕ 2-8-2015 ರ ರಾತ್ರಿ ಯಾರೋ ಕಳ್ಳರು ಮೇಲ್ಛಾವಣಿಯ ಹಂಚನ್ನು ತೆಗೆದು ಒಳನುಗ್ಗಿ ಅಂಗಡಿಯ ಸೆಟ್ಟರ್ಸ್ ನ್ನು ಕಬ್ಬಿಣದ ರಾಡಿನಿಂದ ಜಗ್ಗಿಸಿ ಅಂಗಡಿಯಲ್ಲಿಟ್ಟಿದ್ದ ವ್ಯಾಪಾರ ಮಾಡಿದ ಹಣ 84,700/- ರೂಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಸದರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಕೆ.ಕೆ. ಶಿಬು ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಜಾನುವಾರುಗಳ ಸಾಗಾಟ, ಪ್ರಕರಣ ದಾಖಲು: 

     ಕುಟ್ಟ ಠಾಣಾಧಿಕಾರಿ ಶ್ರೀ ಜೆ. ಮಂಜುರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 3-8-2015 ರಂದು ಬೆಳಗಿನ ಜಾವ 5-00 ಗಂಟೆಗೆ ಸಿಬ್ಬಂದಿಯೊಂದಿಗೆ ಕುಟ್ಟ ಹಳೇ ಚೆಕ್‌ ಪೋಷ್ಟ್‌ ಬಳಿ 3 ಜಾನುವಾರುಗಳನ್ನು ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಸದರಿ ವ್ಯಕ್ತಿಗಳು ಸರಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಸದರಿ ಜಾನುವಾರುಗಳನ್ನು ಸಾಗಿಸುತ್ತಿದ್ದು, ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಯುವಕ ಕಾಣೆ, ಪ್ರಕರಣ ದಾಖಲು: 

     ವಿರಾಜಪೇಟೆ ತಾಲೋಕು ಬಾಡಗ ಬಾಣಂಗಾಲ ಗ್ರಾಮದಲ್ಲಿರುವ ಮೈಲಾಥಪುರ ಎಸ್ಟೇಟ್‌ನಲ್ಲಿವಾಸ ವಾಗಿರುವ ಕಾವೇರಿ ಎಂಬವರ ಮಗ ಸುಮಾರು 27 ವರ್ಷದ ಧರ್ಮ ಎಂಬಾತ ದಿನಾಂಕ 02-08-2015 ರ ಸಂಜೆ 5:00 ಗಂಟೆಗೆ ಮನೆಯಿಂದ ಹೋದವನು ಇದುವರೆಗೂ ಮನೆಗೆ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾನೆಂದು ಸದರಿ ಕಾವೇರಿಯವರು ನೀಡಿದ ದೂರಿನನ್ವಯ ಸಿದ್ದಾಪುರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನತನಿಖೆಕೈಗೊಂಡಿದ್ದಾರೆ.  

ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ: 

     ವಿರಾಜಪೇಟೆ ತಾಲೋಕು ಮಾಲ್ದಾರೆ ಗ್ರಾಮದ ನಿವಾಸಿ ಉದಯಸೂರ್ಯ ಎಂಬವರ ಮಗಳು ಯು. ದಿವ್ಯಕಲಾ ಎಂಬವರ ಮನೆಯ ಪಕ್ಕದ ನಿವಾಸಿ ಧರ್ಮ ಎಂಬ ವ್ಯಕ್ತಿ ದಿವ್ಯಕಲಾಳನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆಯಾಗುವುದಾಗಿ ಆಗಿದ್ದಾಂಗ್ಗೆ ದೈಹಿಕ ಸಂಪರ್ಕ ಹೊಂದಿ, ಬೇಡವೆಂದು ವಿರೋದಿಸಿದರೂ ಸಹ ಗದರಿಸಿ ದೈಹಿಕ ಸಂಪರ್ಕ ನಡೆಸುತ್ತಿದ್ದು, ದಿನಾಂಕ 30-7-2015 ರ ಹಿಂದಿನ ದಿನಗಳಲ್ಲಿ ಸದರಿ ಧರ್ಮ ದಿವ್ಯಕಲಾಳನ್ನು ಮದುವೆಯಾಗುವುದಿಲ್ಲವೆಂದು ಹೇಳಿದ ಕಾರಣಕ್ಕೆ ಈ ವಿಚಾರವನ್ನು ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಧರ್ಮ ಸದರಿ ದಿವ್ಯಕಲಾಳನ್ನು ಕೂಡಲೇ ಮದುವೆ ಮಾಡಿಕೊಳ್ಳುತ್ತೇನೆಂದು ಒಪ್ಪಿಕೊಂಡು ಹೋಗಿದ್ದು, ನಂತರ ಸದರಿ ವ್ಯಕ್ತಿ ದಿವ್ಯಕಲಾ ಕೀಳು ಜಾತಿಗೆ ಸೇರಿದವಳೆಂದು ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

ಪರಸ್ಪರ ಕಾರುಗಳು ಡಿಕ್ಕಿ, ಒಬ್ಬನಿಗೆ ಗಾಯ: 

     ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಜೋಡುಪಾಲದಲ್ಲಿ ಸಂಭವಿಸಿದೆ. ಕಾಸರಗೋಡು ನಿವಾಸಿ ನಾಸರ್‌ ಕೊತ್ತಿಕಲ್‌ ಹಾಗೂ ಖಾಲಿದ್, ಆಸಿಫ್‍ ರವರುಗಳು ಸ್ವಂತ ಕೆಲಸದ ನಿಮಿತ್ತ ಅವರ ಬಾಪ್ತು ಕಾರು ನಂ: ಕೆಎಲ್-07 ಎಎಸ್-8393 ರಲ್ಲಿ ದಿನಾಂಕ 3-8-2015 ರಂದು ತಮ್ಮ ಊರಿಗೆ ಹೋಗಲು ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿದ್ದಾಗ ಸಮಯ ಅಂದಾಜು 3-45 ಪಿ.ಎಂ.ಗೆ ಜೋಡುಪಾಲ ಎಂಬಲ್ಲಿ ತಲುಪುವಾಗ್ಗೆ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕೆಎ-03 ಎಬಿ-2862ರ ಕಾರನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾಸರ್‌ರವರ ಕಾರಿಗೆ ಢಿಕ್ಕಿ ಪಡಿಸಿದ್ದು, ಪರಿಣಾಮವಾಗಿ ಸದರಿ ನಾಸರ್‌ರವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, August 3, 2015

ಆಟೋಗೆ ಕಾರು ಡಿಕ್ಕಿ ಮೂವರಿಗೆ ಗಾಯ:

       ವಿರಾಜಪೇಟೆ ಚೆಂಬೆಬೊಳ್ಳೂರು ಗ್ರಾಮದ ನಿವಾಸಿ ವಿ.ಜಿ. ಗಿರೀಶ ಎಂಬವರು ದಿನಾಂಕ 31-7-2015 ರಂದು 19-30 ಗಂಟೆಗೆ ತಮ್ಮ ಬಾಪ್ತು ಆಟೋ ರಿಕ್ಷಾದಲ್ಲಿ ವಿರಾಜಪೇಟೆ ನಗರದ ಕಡೆಗೆ ಹೋಗುತ್ತಿರುವಾಗ ನಗರದ ರಾಜರಾಜೇಶ್ವರಿ ಚಿತ್ರಮಂದಿರದ ಬಳಿ ಹಿಂಬದಿಯಿಂದ ಮಾರುತಿ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾದಲ್ಲಿದ್ದ ವಿ.ಜಿ. ಗಿರೀಶರವರ ಪತ್ನಿ ಮತ್ತು ಮಗುವಿಗೆ ಗಾಯಗಳಾಗಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ವಿಷ ಸೇವನೆಯಿಂದ ಮಹಿಳೆಸಾವು:


     ಗೋಣಿಕೊಪ್ಪ ಠಾಣಾ ಸರಹದ್ದಿನ ಕೈಕೇರಿಗ್ರಾಮದ ನಿವಾಸಿ ಪಿ.ಕೆ. ಮಂಜು ಎಂಬವರ ತಾಯಿ ಕಾಳಿರವರಿಗೆ ಮೊದಲಿನಿಂದಲೇ ಹಲ್ಲು ನೋವು ಇದ್ದು ವೈಧ್ಯರಿಗೆ ತೋರಿಸಿ ಹಲ್ಲು ಉಜ್ಜುವ ಪೇಸ್ಟ್ ಔಷಧಿ ತೆಗೆದುಕೊಂಡಿದ್ದು ದಿನಾಂಕ 27/07/2015 ರಂದು ತಾಯಿಯವರು ಹಲ್ಲು ಉಜ್ಜುವ ಪೇಸ್ಟ್ ಎಂದು ತಿಳಿದು ಹತ್ತಿರದಲ್ಲಿ ಇಟ್ಟಿದ ಇಲಿಗೆ ಹಾಕುವ ವಿಷವನ್ನು ಸೇವಿಸಿದ್ದು ಚಿಕಿತ್ಸೆ ಬಗ್ಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Saturday, August 1, 2015

ವ್ಯಕ್ತಿಯ ನಿಂದನೆ, ಜೀವ ಬೆದರಿಕೆ:

     ದಿನಾಂಕ: 30-07-2015 ರಂದು ಶ್ರೀಮಂಗಲ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ ನಡೆಸಿದ್ದು, ಸದ್ರಿ ಗ್ರಾಮ ಸಭೆಯಲ್ಲಿದ್ದ ಅಜ್ಜಮಾಡ ಜಯ, ಗ್ರಾಮಪಂಚಾಯಿತಿ ಸದಸ್ಯರು, ಕಾಳಯ್ಯ, ಗ್ರಾಮಪಂಚಾಯಿತಿ ಅದ್ಯಕ್ಷರು, ಪಿಡಿಒ ಮತ್ತು ಅವರ ಬೆಂಬಲಿಗರು ಗ್ರಾಮ ಪಂಚಾಯಿತಿ ಅವರಣದ ಸಭೆಯಲ್ಲಿ ಆನೇಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿದ್ದ ಸಮಯದಲ್ಲಿ ಎಂ.ಟಿ. ಕಾರ್ಯಪ್ಪನವರಿಗೆ ನೀನು ಲಾಯರು ಕೇಲಸ ಮಾಡು ಇಲ್ಲೇಕೆ ಬಂದಿದ್ದಿಯ? ಎಂದು ಅವ್ಯಾಚ ಶಬ್ದಗಳಿಂದ ಬೈದುದಲ್ಲದೆ ಅಜ್ಜಮಾಡ ಜಯ ರವರು ಎಂ.ಟಿ. ಕಾರ್ಯಪ್ಪನವರನ್ನು ಕುರಿತು ನಿನ್ನನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹುಡುಗಿ ಕಾಣೆ, ಪ್ರಕರಣ ದಾಖಲು:

    ಗೋಣಿಕೊಪ್ಪ ನಗರದ ಅಳೇ ಅಂಚೆ ಕಚೇರಿ ಬಳಿ ವಾಸವಾಗಿರುವ ಶ್ರೀಮತಿ ಜಮೀಲ ಎಂಬವರ ಮಗಳು ಪ್ರಾಯ 18 ವರ್ಷದ ರಂಶಿಲಾಳು ದಿನಾಂಕ 29/07/2015 ರಂದು ಮಧ್ಯಾಹ್ನ 1.00 ಗಂಟೆಗೆ ಮನೆಗೆ ಸಾಮಾನು ತರಲೆಂದು ಅಂಗಡಿಗೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಶ್ರೀಮತಿ ಜಮೀಲರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಲಬಾದೆಯಿಂದ ವ್ಯಕ್ತಿ ಆತ್ಮಹತ್ಯೆ:

     ಸೋಮವಾರಪೇಟೆ ಠಾಣಾ ಸರಹದ್ದಿನ ಶಾಂತಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಧನಲಕ್ಷ್ಮಿ ಎಂಬವರ ಪತಿ ಸುರೇಶ(44) ಎಂಬವರು ವಿ.ಎಸ್‌.ಎಸ್‌.ಎನ್‌ ಬ್ಯಾಂಕ್‌ ಹಾಗು ಪಿ.ಎಲ್‌.ಡಿ. ಬ್ಯಾಂಕ್‌ನಿಂದ ಸಾಲ ಪಡೆದುಕೊಂಡಿದ್ದು ಸದರಿ ಸಾಲವನ್ನು ತೀರಿಸಲಾಗಿದೆ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಸದರಿಯವರ ಪತ್ನಿ ಶ್ರೀಮತಿ ಧನಲಕ್ಷ್ಮಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.