Wednesday, September 30, 2015

ಹಣದ ವಿಚಾರ, ವ್ಯಕ್ತಿ ಮೇಲೆ ಹಲ್ಲೆ: 

    ದಿನಾಂಕ 26.09.2015 ರಂದು ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದ ನಿವಾಸಿ ಪಿ.ಕೆ. ರಘು ಎಂಬವರು ಮದ್ಯಾಹ್ನ 12.30 ಗಂಟೆ ಸುಮಾರಿಗೆ ಗಿರಿಜನ ಕಾಲೋನಿಯಲ್ಲಿ ಸಾವಿಗೆ ತೆರಳುತ್ತಿದ್ದಾಗ 7ನೇ ಹೊಸಕೋಟೆ ಗ್ರಾಮದ ಶಾಲೆಯ ಹತ್ತಿರ ಸ್ವಲ್ಪ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳಾದ ಉಣ್ಣಿಕೃಷ್ಣ ಹಾಗು ಶಶಿ ಎಂಬವರುಗಳು ಬೈಕಿನಲ್ಲಿ ಬಂದು ದಾರಿ ತಡೆದು ನಿಲ್ಲಿಸಿ ಕೈಯಿಂದ ಹೊಡೆದು ನೋವುಂಟುಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಬೀಗ ಮುರಿದು ಮೊಬೈಲ್ ಹಾಗು ನಗದು ಕಳವು:

    ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದ ಚೇಂದ್ರಿಮಾಡ ನಂಜಪ್ಪ ನವರ ಕಟ್ಟಡದ ಕೆಳ ಅಂತಸ್ತಿಯಲ್ಲಿ ಕೆ. ಪ್ರಮೋದ್ ಎಂಬವರು ಹೊಟೇಲ್ ವ್ಯಾಪಾರ ಮಾಡಿಕೊಂಡಿದ್ದು ಸದರಿ ಕಟ್ಟಡಕ್ಕೆ ದಿನಾಂಕ: 28-09-15ರಂದು ರಾತ್ರಿ ಯಾರೋ ಕಳ್ಳರು ಬೀಗ ಮುರಿದು ಅದ ರೊಳಗಿದ್ದ ರೂ. 22,000/- ನಗದು ಹಣವನ್ನು ಹಾಗೂ ಒಂದು ಮೊಬೈಲ್ ನ್ನು ಒಟ್ಟು 22,500/- ರೂಪಾಯಿ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ಪುಕಾರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಪತಿಯ ಕಿರುಕುಳ ಪತ್ನಿ ಆತ್ಮಹತ್ಯೆಗೆ ಯತ್ನ: 

     ಗೋಣಿಕೊಪ್ಪ ನಗರದ ನವಾಸಿ ಶ್ರೀಮತಿ ಹೆಚ್.ಎಸ್. ಜ್ಯೋತಿಯವರು 5 ವರ್ಷಗಳ ಹಿಂದೆ ಗೋಣಿಕೊಪ್ಪದ 1ನೇ ಬ್ಲಾಕ್ ವಾಸಿ ಶಿವರಾಜು ರವರನ್ನು ಮದುವೆಯಾಗಿದ್ದು, ಇವರುಗಳಿಗೆ 2 ಗಂಡುಮಕ್ಕಳು ಇದ್ದು, ಮದುವೆಯಾದ ಸ್ವಲ್ಪ ಸಮಯ ಇಬ್ಬರೂ ಅನ್ಯೋನ್ಯವಾಗಿದ್ದು, ಹೆಚ್.ಎಸ್. ಜ್ಯೋತಿಯವರು ಸ್ತ್ರೀ ಶಕ್ತಿ ಸಂಘದಿಂದ ಸುಮಾರು 55 ಸಾವಿರ ಸಾಲಮಾಡಿದಲ್ಲದೇ ಈಗ್ಗೆ ಒಂದು ವರ್ಷದ ಹಿಂದೆ ಅವರ ಗಂಡ ಶಿವರಾಜು ರವರು ಹೆಚ್.ಎಸ್. ಜ್ಯೋತಿಯವರು ಹಾಗೂ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೇ ಈ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪುಕಾರಾದ ನಂತರ ಅವರ ಬುದ್ದಿವಾದದಂತೆ ಸ್ವಲ್ಪ ಸಮಯ ಚೆನ್ನಾಗಿದ್ದು, ಸಾಲದ ಹಣವನ್ನು ಕೂಡ ಕಟ್ಟದೇ ಸುಧಾ ಎಂಬಾಕೆಯೊಡನೆ ಹೊರಟು ಹೋಗಿರುವುದರಿಂದ ಹೆಚ್.ಎಸ್. ಜ್ಯೋತಿಯವರು ದಿನಾಂಕ 13-9-2015 ರಂದು 9-30 ಪಿ.ಎಂ.ಗೆ ಮನ ನೊಂದು ಮನೆಯಲ್ಲಿದ್ದ ಇಲಿ ಔಷಧಿಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, September 29, 2015

ಅಕ್ರಮ ಜಾನುವಾರು ಸಾಗಾಟ, ಆರೋಪಿಗಳ ಬಂಧನ:


     ಅಕ್ರಮವಾಗಿ ಜಾನುವಾರುಗಳನ್ನು ಪಿಕ್ಅಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಭಾಗಮಂಡಲ ಪೊಲೀಸರು ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿರುತ್ತಾರೆ. ಭಾಗಮಂಡಲ ಠಾಣಾ ಸರಹದ್ದಿನ ತಣ್ಣಿಮಾನಿ ಗ್ರಾಮದ ನಿವಾಸಿ ಪುರುಷೋತ್ತಮ ಎಂಬವರು ನೀಡಿದ ಮಾಹಿತಿಯ ಮೇರೆಗೆ ಭಾಗಮಂಡಲ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ದಿನಾಂಕ 28-9-2015 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ತಣ್ಣಿಮಾನಿ ಗ್ರಾಮದಲ್ಲಿ ಆರೋಪಿಗಳಾದ ಹೊದವಾಡ ಗ್ರಾಮದ ನಿವಾಸಿ ಬಿ.ಎಂ. ಮೊಹಮ್ಮದ್ ಹಾಗು ಚೆರಿಯಪರಂಬು ನಿವಾಸಿ ಕೆ.ಎ. ಹಸೈನಾರ್ ಎಂಬವರು ಅಕ್ರಮವಾಗಿ ಪಿಕ್ಅಪ್ ವಾಹನದಲ್ಲಿ ಎರಡು ದನಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ದನಗಳನ್ನು ತುಂಬಿಸಿದ ವಾಹನವನ್ನು ಹಾಗು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Saturday, September 26, 2015

ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:

     ನಾಲ್ಕು ಜನರ ಗುಂಪೊಂದು ವ್ಯಕ್ತಿಯೊಬ್ಬರ ದಾರಿ ತಡೆದು ಹಳೇ ದ್ವೇಷದಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಗೋಣಿಕೊಪ್ಪ ಠಾಣಾ ಸರಹದ್ದಿನ ಅರುವತ್ತೊಕ್ಲು ಪಿಹೆಚ್ಎಸ್ ಕಾಲೋನಿಯಲ್ಲಿ ನಡೆದಿದೆ. ದಿನಾಂಕ 24/09/2015 ರಂದು ರಾತ್ರಿ ಸಮಯ 8-00 ಗಂಟೆಗೆ ಪಿ.ಹೆಚ್. ಸುಜೇಶ್ ಎಂಬವರು ಅರುವತ್ತೋಕ್ಲು ಗ್ರಾಮವಲ್ಲಿ ತನ್ನ ಮನೆಯ ಹತ್ತಿರ ಕಾರು ನಿಲ್ಲಿಸಿ ರಸ್ತೆಯಲ್ಲಿ ಮನೆಯ ಕಡೆಗೆ ನಡೆದುಕೊಂಡು ಹೋಗುವಾಗ್ಗೆ ಪಕ್ಕದ ಮನೆಯ ನಿವಾಸಿಗಳಾದ ಉದಯ ಮತ್ತು ಇತರ 3 ಜನರು ಸೇರಿ ಸುಜೇಶ್ ರವರ ದಾರಿ ತಡೆದು ಪೊಲೀಸ್ ಠಾಣೆಗೆ ದೂರು ನೀಡಿದ ವಿಚಾರದಲ್ಲಿ ದ್ವೇಷವನ್ನಿಟ್ಟುಕೊಂಡು ಅವ್ಯಾಚ ಶಬ್ದಗಳಿಂದ ಬೈಯ್ದು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ, ಕೈಯಿಂದ ಗುದ್ದಿ, ಕಾಲಿನಿಂದ ಒದ್ದು ಬೀಳಿಸಿ, ಕೊಲೆಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಹೆಂಗಸು ಕಾಣೆ ಪ್ರಕರಣ ದಾಖಲು:

    ಸುಂಟಿಕೊಪ್ಪ ಠಾಣಾ ಸರಹದ್ದಿನ ಗರಗಂದೂರು ಗ್ರಾಮದ ನಿವಾಸಿ ಬಿ.ಎಸ್. ಆನಂದ ಎಂಬವರ ಪತ್ನಿ ಶ್ರೀಮತಿ ನೇತ್ರಾ ಎಂಬವರು ನಾಲ್ಕು ದಿನಗಳಿಂದ ಹುಷಾರಿಲ್ಲದ ಕಾರಣ ಮನೆಯಲ್ಲಿದ್ದು ದಿನಾಂಕ 24.09.2015 ರಂದು ಸಹಾ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು ಪತಿ ಬಿ.ಎಸ್. ಆನಂದರವರು ಅಂದು ಕೆಲಸಕ್ಕೆ ಹೋಗಿ ಸಂಜೆ 4.15 ಗಂಟೆಗೆ ವಾಪಾಸ್ಸು ಮನೆಗೆ ಬಂದು ನೋಡುವಾಗ್ಗೆ ಪತ್ನಿ ನೇತ್ರಾ ಮನೆಯಲ್ಲಿಲ್ಲದೆ ಮನೆಗೆ ಬೀಗ ಹಾಕಿದ್ದು, ಆಕೆ ಕಾಣೆಯಾಗಿದ್ದು, ಅಕ್ಕಪಕ್ಕದ ಮನೆಯಲ್ಲಿ ಹಾಗೂ ನೆಂಟರಿಷ್ಟರ ಮನೆಯಲ್ಲೆಲ್ಲಾ ಹುಡುಕಾಡಿದಲ್ಲೂ, ಈವರೆಗೂ ಎಲ್ಲೂ ಪತ್ತೆಯಾಗದೇ ಇದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಾರ್ ಡಿಕ್ಕಿ, ಪಾದಚಾರಿಗೆ ಗಾಯ: 

     ಕಾರೊಂದು ಡಿಕ್ಕಿಯಾಗಿ ಪಾದಚಾರಿ ಗಾಯಗೊಂಡ ಘಟನೆ ಶ್ರೀಮಂಗಲ ಪಟ್ಟಣದಲ್ಲಿ ನಡೆದಿದೆ. ಶ್ರೀ ಮಡಿವಾಳರ ತಿಮ್ಮರಾಯ ಶೆಟ್ಟಿ ತಂದೆ ಪೌತಿ ಕೆಂಪಶೆಟ್ಟಿ ಪ್ರಾಯ52 ವರ್ಷ ಕೂಲಿಕೆಲಸ ವಾಸ ನಾಲ್ಕೇರಿ ಗ್ರಾಮ ಇವರು ದಿನಾಂಕ 25-09-2015 ರಂದು 10:15 .ಎಂ.ಗೆ ಶ್ರಿಮಂಗಲದ ಪೋಸ್ಟ್ ಆಪೀಸ್ ಮುಂಭಾಗದ ರಸ್ತೆಯ ಅಂಚಿನಲ್ಲಿ ಶ್ರೀಮಂಗಲದ ಬಸ್ಸು ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಟ್ಟ ಕಡೆಯಿಂದ ಗೋಣಿಕೊಪ್ಪದ ಕಡೆಗೆ ಹೋಗುತ್ತಿದ್ದ ಕಾರ್ ನಂ- ಕೆಲ್-56 ಬಿ-1080 ರನ್ನು ಅದರ ಚಾಲಕ ವೈಶಾಕ್ ಬಿ.ಪ್ರಧೀಪ್ ಎಂಬುವವರು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲಿಸಿಕೊಂಡು ಬಂದು ಮಡಿವಾಳರ ತಿಮ್ಮರಾಯ ಶೆಟ್ಟಿ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ತಲೆಯ ಭಾಗಕ್ಕೆ ಮತ್ತು ತುಟಿಯ ಭಾಗಕ್ಕೆ ಮತ್ತು ಶರೀರದ ಕೆಲವು ಬಾಗಗಳಿಗೆ ಗಾಯಾಗಳಾಗಿದ್ದು ಚಿಕಿತ್ಸೆ ಬಗ್ಗೆ ಶ್ರೀಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, September 25, 2015

ಸ್ಕೂಟರ್ ಅವಘಡ ವ್ಯಕ್ತಿ ದುರ್ಮರಣ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹಾಕತ್ತೂರು ಗ್ರಾಮದ ನಿವಾಸಿ ಶ್ರೀಮತಿ ಮೀನಾಕ್ಷಿ ಎಂಬವರ ಮಗ ಸಂತೋಷ ಎಂಬವರು ದಿನಾಂಕ 24.09.2015 ರಂದು ಸಮಯ ಸುಮಾರು 02:45 ಪಿ.ಎಂ.ಗೆ ಮರಗೋಡಿನ ಬಕ್ಕ ಎಂಬಲ್ಲಿ ತನ್ನ ಸ್ಕೂಟರ್ ನ್ನು ಚಾಲಿಸಿಕೊಂಡು ಹೋಗುವ ವೇಳೆಯಲ್ಲಿ ಸಾರ್ವಜನಿಕ ತಾರು ರಸ್ತೆಗೆ ಅಡ್ಡಲಾಗಿ ಬಿದ್ದ ಒಣಗಿದ ಮರಕ್ಕೆ ಸ್ಕುಟರ್ ಡಿಕ್ಕಿಯಾದ ಪರಿಣಾಮ ಕೆಳಗಡೆ ರಸ್ತೆಯ ಬದಿಗೆ ಬಿದ್ದು ಗಂಭೀರವಾಗಿ ಗಾಯಗೊಂಡು, ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆಯು ಫಲಕಾರಿಯಾಗದೇ ಸದರಿ ಸಂತೋಷರವರು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಜೂಜು, ಆರೋಪಿಗಳ ಬಂಧನ:

     ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳಾದ ಬಿ.ಎಸ್.ಅಚ್ಚುತ್ತ, ವಿದ್ಯಾನಗರ,ಮಡಿಕೇರಿ, ಬಿ.ಕೆ.ಕೃಷ್ಣಪ್ಪ, ಹೆಬ್ಬೆಟ್ಟಗೇರಿ, ಸಿ.ಬಿ.ಆನಂದ, ಬೆಟ್ಟತ್ತೂರು ಗ್ರಾಮ, ಮದೆನಾಡು. ಮಡಿಕೇರಿ, ಅನೀಲ್‌ ಎಫ್, ಇಂದಿರಾ ನಗರ,ಮಡಿಕೇರಿ, ಎಂ.ಬಾಷ, ಚಾಮುಂಡೇಶ್ವರಿ ನಗರ, ಮಡಿಕೇರಿ, ಎ.ಜೆ.ಬಾಲಚಂದ್ರ, ಓಂಕಾರೇಶ್ವರ ದೇವಸ್ಥಾನದ ಹತ್ತಿರ, ಮಡಿಕೇರಿ, ಸಿ.ಬಿ.ಚರಣ್‌ ಕುಮಾರ್‌, ಬೆಟ್ಟತ್ತೂರು, ಮಡಿಕೇರಿ, ಮುದ್ದು ರಾಜು @ ರಾಜು. ಬೈರೆನ ಹಳ್ಳಿ ಗ್ರಾಮ, ಕೊರೆಟಗೆರೆ ತಾಲ್ಲೂಕು, ತುಮಕೂರು, ಎ.ಕೆ.ಬೆಳ್ಯಪ್ಪ, ಭಗವತಿ ನಗರ, ಮಡಿಕೇರಿ, ವೈ.ಆರ್‌ ಕಗ್ಗೋಡ್ಲು ಗ್ರಾಮ,ಮಡಿಕೇರಿ ಹಾಗೂ ಬಿ.ಸಿ.ಕೃಷ್ಣಪ್ಪ, ಇಂದಿರಾನಗರ ಮಡಿಕೇರಿ ರವರುಗಳು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದವರನ್ನು ಮಡಿಕೇರಿ ನಗರ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಪತ್ತೆ ಹೆಚ್ಚಿ ಅವರುಗಳನ್ನು ಬಂಧಿಸಿದ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ವ್ಯಕ್ತಿಯೊಬ್ಬರ ದಾರಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಕುಶಾಲನಗರ ದಲ್ಲಿ ನಡೆದಿದೆ, ದಿನಾಂಕ 22-09-2015 ರಂದು ಸಮಯ ರಾತ್ರಿ 10-30 ಗಂಟೆಗೆ ಕುಶಾನಲನಗರದ ಗುಮ್ಮನಕೊಲ್ಲಿ ಎಂಬಲ್ಲಿ ವಾಸವಾಗಿರುವ ಮನೋಹರ ಎಂಬವರು ಮತ್ತು ಅವರ ಸ್ನೇಹಿತರಾದ ಕುಮಾರ ನವೀನ ಮತ್ತು ಮಣಿರವರೊಂದಿಗೆ ಮುಳ್ಳುಸೋಗೆಯ ಸರೋವರ ಬಾರ್ ಮುಂಬಾಗದ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತಿರುವಾಗ ಗುಮ್ಮನಕೊಲ್ಲಿಯ ನಿವಾಸಿ ಗೋಪಾಲರವರು ಮನೋಹರರವರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ಒದ್ದು ನೋವುಪಡಿಸಿದ್ದು ಅಲ್ಲದೆ ಕತ್ತಿಯನ್ನು ತೋರಿಸಿ ಕತ್ತಿಯನ್ನು ಗಾಳಿಯಲ್ಲಿ ಬೀಸಿ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಸ್ತಿಯ ನಕಲಿ ದಾಖಲೆ ಸೃಷ್ಠಿಸಿ ವಂಚನೆಗೆ ಯತ್ನ:

     ದಿನಾಂಕ 21-5-2015 ರಂದು ಸಂಜೆ 4-00 ಪಿ.ಎಂ.ನಿಂದ ದಿನಾಂಕ 24-9-2015 ರ ನಡುವಿನ ಅವಧಿಯಲ್ಲಿ ಆರೋಪಿತರಾದ ವಿರಾಜಪೇಟೆ ನಗರದ ೆಸ್.ಎಸ್. ರಾಮಮೂರ್ತಿ ರಸ್ತೆಯ ನಿವಾಸಿಗಳಾದ ತಸ್ನೀಮಾ ಅಕ್ತಾರ್, ಹಾಗೂ ಇತರರು ಶ್ರೀಮತಿ ಫರೀದಾ ರೆಹಮಾನ್ ರವರಿಗೆ ಸೇರಿದ ಆಸ್ತಿಯ ಸರ್ವೆ ನಂಬರ್ 26/1 ರಲ್ಲಿ 0.04 ಏಕ್ರೆ ಮತ್ತು ಸರ್ವೆ ನಂಬರ್ 26/2 ರಲ್ಲಿ 0.27 ಏಕ್ರೆ ನಲ್ಲಿರುವ ಕಮರ್ಶಿಯಲ್ ಕಾಂಪ್ಲೇಕ್ಸ್ ಜಾಗವನ್ನು ಶ್ರೀಮತಿ ಫರೀದಾ ರೆಹಮಾನ್ರವರ ಸ್ವಯಾರ್ಜಿತ ಆಸ್ತಿಯಾಗಿದ್ದರೂ ಸಹ ಆರೋಪಿತರು ನಕಲಿ ಸಹಿ ಮಾಡಿ ಮೋಸ ಮಾಡುವ ಉದ್ದೇಶದಿಂದ ಶ್ರೀಮತಿ ಫರೀದಾ ರೆಹಮಾನ್ ರವರು ಆರೋಪಿತರಾದ ತಸ್ಲೀಮಾ ಅಕ್ತರ್ ರವರಿಗೆ ಉದಾರ ಕೊಡುಗೆಯಾಗಿ ಕೊಟ್ಟಿರುವುದಾಗಿ ನಕಲಿ ದಾಖಲೆಗಳು ಸೃಷ್ಠಿಸಿ ವಿರಾಜಪೇಟೆ ಸಿವಿಲ್ ನ್ಯಾಯಾಲಯದಲ್ಲಿ ಧಾವೆ ಹೂಡಿ ಸದರಿ ಆಸ್ತಿಯ ಅಕ್ಕುದಾರಿಕೆಯನ್ನು ನನ್ನ ಹೆಸರಿಗೆ ಮಾಡಿಕೊಡಬೇಕಾಗಿ ನ್ಯಾಯಾಲಯದಲ್ಲಿ ಕೇಳಿಕೊಂಡು ಆಸ್ತಿಯನ್ನು ಪಡೆಯುವ ಉದ್ದೇಶದಿಂದ ವಂಚನೆ ಮಾಡಲು ಯತ್ನಿಸುತ್ತಿರುವಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿದ ಅಮಲಿನಲ್ಲಿ ಕ್ರಿಮಿನಾಶಕ ಸೇವಿಸಿ ವ್ಯಕ್ತಿಯ ಸಾವು:

     ಮದ್ಯ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬರು ಕ್ರಿಮಿನಾಶಕ ವನ್ನು ಕುಡಿದು ಸಾವನಪ್ಪಿದ ಘಟನೆ ಗೋಣಿಕೊಪ್ಪ ಠಾಣಾ ಸರಹದ್ದಿನ ಅರುವತ್ತೊಕ್ಲು ಗ್ರಾಮದಲ್ಲಿ ನಡೆದಿದೆ, ಅರುವತ್ತೊಕ್ಲು ಗ್ರಾಮದ ನಿವಾಸಿ ಪಿ.ಸಿ. ಸೋಮಶೇಖರ ಎಂಬ ವ್ಯಕ್ತಿ ದಿನಾಂಕ 21-9-2015 ರಂದು ವಿಪರೀತ ಮದ್ಯ ಸೇವಿಸಿ ಅದರ ಅಮಲಿನಲ್ಲಿ ನರ್ಸರಿ ಗಿಡಗಳಿಗೆ ಸಿಂಪಡಿಸಲು ಇಟ್ಟಿದ್ದ ಕ್ರಿಮಿನಾಶಕ ಪದಾರ್ಥವನ್ನು ಸೇವಿಸಿ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಸೇರಿಸಿದ್ದು, ದಿನಾಂಕ 23-9-2015 ರಂದು ರಾತ್ರಿ ಮೃತಪಟ್ಟಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, September 24, 2015

ಬಸ್‌ ಅವಘಢ, ಮಹಿಳೆಗೆ ಗಾಯ
                     ಚಾಲಕನ ಅಜಾಗರೂಕತೆಯಿಂದ ಮಹಿಳೆಯೊಬ್ಬರು ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟು ಗಾಯಾಳುವಾದ ಘಟನೆ ವಿರಾಜಪೇಟೆ ಬಳಿಯ ಬೇತ್ರಿಯಲ್ಲಿ ನಡೆದಿದೆ. ದಿನಾಂಕ 23-09-2015 ರಂದು ಬೇತ್ರಿ ನಾಲ್ಕೇರಿ ನಿವಾಸಿ ಕೆ.ಎಂ.ಆಲಿ ಎಂಬವರು ಬಕ್ರಿದ್ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಲು ಅವರ ಹೆಂಡತಿ ನೆಬಿಸರವರ ಜೊತೆ ಬೇತ್ರಿಯಿಂದ ಕೆಎ-12-ಎ-4041ರ ಖಾಸಗಿ ಪ್ರಿಯದರ್ಶಿನಿ ಬಸ್ ನಲ್ಲಿ ವಿರಾಜಪೇಟೆಗೆ ಹೋಗುತ್ತಿರುವಾಗ ಬೇತ್ರಿ ಬಳಿ  ಪೊಂಜಂಡ ಮಾದಪ್ಪರವರ ಮನೆ ಹತ್ತಿರ ತಿರುವಿನಲ್ಲಿ ಬಸ್ಸ್ ಚಾಲಕ ಸಂಜು ಎಂಬಾತನು ಬಸ್ಸ್ ಅನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮಬಸ್ಸಿನ ಮುಂದಿನ ಬಾಗಿಲು ತೆರೆದುಕೊಂಡು ಬಾಗಿಲ ಬಳಿಯ ಆಸನದಲ್ಲಿ ಕುಳಿತಿದ್ದ ನೆಬೀಸಾರವರು ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆಯ ಮೇಲೆ ಹಲ್ಲೆ, ಕೊಲೆ ಬೆದರಿಕೆ
                 ಸಹೋದ್ಯೋಗಿ ಹಿರಿಯ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ಕುಶಾಲನಗರ ಬಳಿಯ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 23/09/2015 ರಂದು ಸಿದ್ದಲಿಂಗಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಮ್ಮನವರು ಶಾಲೆಯಿಂದ ಸರ್ಕಾರಿ ಕೆಲಸ ನಿಮಿತ್ತ ಸೋಮವಾರಪೇಟೆ ಬಿ ಇ ಓ ಕಚೇರಿಗೆ ತೆರಳ ಬೇಕಾದ್ದುದರಿಂದ ಶಾಲೆಯ ಉಸ್ತುವಾರಿಯನ್ನು ನೋಡಿಕೊಳ್ಳಲು, ಹಿರಿಯ ಸಹ ಶಿಕ್ಷಕರಾದ ದಿನೇಶ್ ರವರಿಗೆ ವಹಿಸಿಕೊಡಲು ಜ್ಞಾಪನವನ್ನು ಬರೆದು ಕಚೇರಿಗೆ ಕರೆಸಿ ಸಹಿ ಮಾಡುವಂತೆ ಹೇಳಿದಾಗ ಸಹ ಶಿಕ್ಷಕರಾದ ದಿನೇಶ್ ರವರು ಕಚೇರಿಗೆ ಬಂದು ಶಾಲಾ ಉಸ್ತುವಾರಿ ನೋಡಿಕೊಳ್ಳುವುದಿಲ್ಲವೆಂದು ತಿರಸ್ಕರಿಸಿ ಜಯಮ್ಮನವರ ಎದೆಗೆ ಗುದ್ದಿ ಹಲ್ಲೆ ಮಾಡಿದ್ದು  ಕಚೇರಿಯಲ್ಲೆ ಇದ್ದ  ಕ್ರೀಡೆಯಲ್ಲಿ ಬಳಸುವ ಶಾಟ್ ಪುಟ್ ಗುಂಡನ್ನು ಎತ್ತಿಕೊಂಡು ಅದರಿಂದ ಸಾಯಿಸುವಾಗಿ ಕೊಲೆ ಬೆದರಿಕೆ ಹಾಕಿದ್ದು, ಜಯಮ್ಮನವರು ಬೊಬ್ಬೆ ಹಾಕಿದುದನ್ನು ಕೇಳಿ ಅಲ್ಲೆ ತರಗತಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರಾದ ಸಾವಿತ್ರಮ್ಮರವರು ಬಂದು ಸಮಾಧಾನಪಡಿಸಿರುವುದಾಗಿನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ, ಗಾಯ
                 ಪಾದಚಾರಿ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿಯಾದ ಘಟನೆ ಕುಟ್ಟ ಬಳಿಯ ಬೇರುಕೊಲ್ಲಿ ಎಂಬಲ್ಲಿ ನಡೆದಿದೆ. ದಿನಾಂಕ 23-09-2015 ರಂದು ಸಂಜೆ  ಬಾಡಗ ನಿವಾಸಿ ಪಂಜರಿ ಎರವರ ಬೋಜಿ ಎಂಬಾಕೆಯು ಕುಟ್ಟ ನಗರದ ಬಸ್ಸು ನಿಲ್ದಾಣಕ್ಕೆ ನಡೆದುಕೊಂಡು ಬರುತ್ತಿರುವಾಗ ಬೇರುಕೊಲ್ಲಿಗೆ ಹೋಗುವ ರಸ್ತೆಯ ಜಂಕ್ಷನ್ ಬಳಿ ಕೆಎ-02 ಎಂಸಿ 2442 ರ ಕಾರಿನ ಚಾಲಕ ಕೃಷ್ಣಮೂರ್ತಿ ಎಂಬಾತನು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೋಜಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪ್ರಾಪ್ತರಿಬ್ಬರ ಮದುವೆ ಪ್ರಕರಣ
                      ಅಪ್ರಾಪ್ತೆ ಬಾಲಕಯೊಬ್ಬಳನ್ನು ಕಾನೂನಿಗೆ ವಿರುದ್ದವಾಗಿ ಮದುವೆಯಾಗಿ ಆಕೆ ಗರ್ಭಿಣಿಯಾದ ಘಟನೆ ಕರಿಕೆ ಗ್ರಾಮದಲ್ಲಿ ನಡೆದಿದೆ. ಕರಿಕೆ ಗ್ರಾಮದ ನಿವಾಸಿ ಕೆ.ಕಲ್ಯಾಣಿ ಮತ್ತು ರಾಜು ರವರ 3ನೇ ಹೆಣ್ಣು ಮಗಳಾದ ಪಿ.ಆರ್. ಅರ್ಪಿತ ಎಂಬ ಆಪ್ರಾಪ್ತ ವಯಸ್ಸಿನ ಹುಡುಗಿ ಗರ್ಬಿಣಿಯಾಗಿರುವುದಾಗಿ ಊರಿನವರು ಮಾತನಡಿಕೊಳ್ಳುತ್ತಿದ್ದ ವಿಚಾರ ತಿಳಿದು ಕರಿಕೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಯಶೋದರವರು ಅರ್ಪಿತಳನ್ನು ಅವಳ ಮನೆಯಲ್ಲಿ ಭೇಟಿಯಾಗಿ ವಿಚಾರಿಸಿದಾಗ ಅವಳು ಕರಿಕೆ ಗ್ರಾಮದ 13ನೇ ಮೈಲು ನಿವಾಸಿಗಳಾದ ಕೆ.ಕಲ್ಲಾಳ ಮತ್ತು ಮಾಣಿಕ ಎಂಬುವರ 2 ನೇ ಮಗ 20 ವರ್ಷ ಪ್ರಾಯದ ಸುಕುಮಾರ ಯಾನೆ ಗಿರೀಶ್‌ ಎಂಬುವವರನ್ನು ಪ್ರೀತಿಸಿ ಮದುವೆಯಾಗಿರುವ ವಿಚಾರ ತಿಳಿದು ಬಂದಿದ್ದು,  ಸುಕುಮಾರನ ತಂದೆ ತಾಯಿ ಜೊತೆಯಲ್ಲಿ ವಾಸವಿಲ್ಲದ ಕಾರಣ ಅವನನ್ನು ಮತ್ತು ಆತನ ಸಹೋದರನನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಅರ್ಪಿತಳನ್ನು ಯಾರಿಗೂ ಹೇಳದೆ ಕೇಳದೆ ಕಲ್ಲಾರ್ ದೇವಸ್ಥಾನಕ್ಕೆ ಕರೆದುಕೊಂಡು ಪರಸ್ಪರ ಹೂವಿನ ಹಾರ ಹಾಕಿ ಮದುವೆ ಆಗಿ ಅರ್ಪಿತಾ ಮತ್ತು ಸುಕುಮಾರ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದು, ಇದೀಗ ಆಕೆ 8 ತಿಂಗಳ ಗರ್ಭಿಣಿಯಾಗಿರುತ್ತಾಳೆ. ಸದರಿ ಅರ್ಪಿತಾ ಮತ್ತು ಸುಕುಮಾರ ಅಪ್ರಾಪ್ತ ವಯಸ್ಕರಾಗಿದ್ದ ಕಾರಣ ಅವರ ಮದುವೆ ಕಾನೂನು ಪ್ರಕಾರ ಸಿಂಧು ಆಗದ ಕಾರಣ ಸುಕುಮಾರನ ವಿರುದ್ದ  ಕ್ರಮ ಕೈಗೊಳ್ಳಬೇಕೆಂದು ಯಶೊದರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಬಸ್ಸು ಮಗುಚಿ ಪ್ರಯಾಣಿಕೆರಿಗೆ ಗಾಯ
                ಚಾಲಕನ ಹತೋಟಿ ತಪ್ಪಿದ ಬಸ್ಸೊಂದು ರಸ್ತೆ ಬದಿಯ ಹಳ್ಳಕ್ಕೆ ಮಗುಚಿಕೊಂಡ ಘಟನೆ ಮಡಿಕೇರಿ ಬಳಿಯ ಮದೆನಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 22-09-2015 ರಂದು ರಾತ್ರಿ ಸಮಯ 01:30 ಗಂಟೆಗೆ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎ-19-ಎಫ್-2858 ರ KSRTC ಬಸ್ಸನ್ನು  ಮಡಿಕೇರಿ ಸಮೀಪದ ಮದೆನಾಡು ಬಳಿ ಅದರ ಚಾಲಕ ಗೋವಿಂದ ಎಂಬಾತನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲ ಭಾಗದ ರಸ್ತೆಯ ಹಳ್ಳಕ್ಕೆ ಮಗುಚಿದ್ದು  ಬಸ್ಸಿನಲ್ಲಿ ಇದ್ದ 14 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, September 23, 2015

ನೇಣುಬಿಗಿದು ವ್ಯಕ್ತಿಯ ಆತ್ಮ ಹತ್ಯೆ: 

     ಸೋಮವಾರಪೇಟೆ ಠಾಣಾ ಸರಹದ್ದಿನ ಇಗ್ಗೋಡ್ಲು ಗ್ರಾಮದ ನಿವಾಸಿ ರಾಧಾಕೃಷ್ಣ ಎಂಬವರು ಒಂದು ತಿಂಗಳಿನಿಂದ ವಾಂತಿ ಬೇದಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದರೂ ಸಹ ವಾಸಿಯಾಗದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದು, ದಿನಾಂಕ: 22-9-2015ರಂದು ಬೆಳಿಗ್ಗೆ 10:30 ಗಂಟೆಗೆ ತಮ್ಮ ಮಲಗುವ ಕೋಣೆಯಲ್ಲಿ ರಾಧಕೃಷ್ಣರವರು ಪಂಚೆಯಿಂದ ಮಲಗುವ ಕೋಣೆಯ ಮರದ ಬಿಟ್ಟಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಪ್ರಾಪ್ತ ಹುಡುಗಿ ಕಾಣೆ: 

     ಸೋಮವಾರಪೇಟೆ ತಾಲೋಕು ಕುಂದಳ್ಳಿ ಗ್ರಾಮದ ನಿವಾಸಿ ಕೆ.ಕೆ. ಪುಟ್ಟಯ್ಯ ಎಂಬವರ ಮಗಳು ಪೂಜಾ (17) ಶಾಂತಳ್ಳಿ ಸರ್ಕಾರಿ ಪ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ: 21-9-2015ರಂದು ಬೆಳಿಗ್ಗೆ 7:30 ಗಂಟೆಗೆ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದು ನಂತರ ಮನೆಗೆ ಮರಳಿ ಬಾರದೇ ಕಾಣೆಯಾಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Tuesday, September 22, 2015

ಅಂಗಡಿ ಗೋಡೆ ಕೊರೆದು ಹಣ ಹಾಗು ಮೊಬೈಲ್ ಕಳವು: 

     ವಿರಾಜಪೇಟೆ ನಗರದ ಮದ್ಯಭಾಗದಲ್ಲಿರುವ ಕೆ.ಪಿ.ಕೆ. ಅಂಗಡಿ ಗೋಡೆ ಕೊರೆದು ಹಣ ಮತ್ತು ಮೊಬೈಲ್ ಕಳ್ಳತನ ಮಾಡಿದ ಘಟನೆ ನಡೆದಿದೆ. ದಿನಾಂಕ 20-9-2015 ರಂದು ವಿರಾಜಪೇಟೆ ನಗರದ ಸಾದಲಿ ಮಸೀದಿಯ ಬಳಿ ಪೈನಾನ್ಸ್ ರಸ್ತೆಯಲ್ಲಿ ರಫ್ಸಾನ್ ಎಂಬವರಿಗೆ ಸೇರಿದ ಕೆ.ಪಿ.ಕೆ. ದಿನಸಿ ಅಂಗಡಿಯ ಗೋಡೆಯನ್ನು ಯಾರೋ ಕಳ್ಳರು ಕೊರೆದು ಒಳ ಪ್ರವೇಶಿಸಿ ಕ್ಯಾಶ್ ಡ್ರಾಯರ್ ನಿಂದ ಸುಮಾರು 22,000=00 ವ್ಯಾಪಾರದ ಹಣ ಹಾಗೂ ನೋಕಿಯಾ ಮೊಬೈಲ್ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಮೇಲೆ ದೌರ್ಜನ್ಯ:

    ಸೋಮವಾರಪೇಟೆ ಠಾಣಾ ಸರಹದ್ದಿನ ಕಿರುಕೊಡ್ಲಿ ಗ್ರಾಮದ ನಿವಾಸಿ ಶ್ರೀಮತಿ ಲಕ್ಷ್ಮಿ ಎಂಬವರಿಗೆ ಅವರ ಪತಿ ಗಣೇಶ ಹಾಗು ಮಾವ ರಾಜಯ್ಯ ಎಂಬವರು ಪ್ರತಿ ದಿನ ಮದ್ಯಪಾನ ಮಾಡಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದು, ದಿನಾಂಕ 15-9-2015 ರಂದು ಗಂಡ ಹಾಗು ಮಾವ ಪಾನಮತ್ತರಾಗಿ ಬಂದು ಲಕ್ಷ್ಮಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಲೆ ಕೂದಲನ್ನು ಎಳೆದಾಡಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ. 

ನೇಣುಬಿಗಿದು ಮಹಿಳೆ ಆತ್ಮಹತ್ಯೆ:

     ದಿನಾಂಕ 20/09/2015 ರಂದು ರಾತ್ರಿ 8.00 ಗಂಟೆಯ ನಂತರ ಗೋಣಿಕೊಪ್ಪ ಠಾಣೆ ಸರಹದ್ದಿನ ಕೈಕೇರಿ ಗ್ರಾಮದ ನಿವಾಸಿ ಶ್ರೀಮತಿ ಪಣಿಎರವರ ಗಂಗೆ ಮತ್ತು ಇವರ ಮಕ್ಕಳಾದ ಚಿಮ್ಮಿ, ಅಕ್ಕುಣಿ ರವರು ಊಟ ಮಾಡಿ ಮಲಗಿದ್ದು ರಾತ್ರಿ ಮಗಳು ಚಿಮ್ಮಿ ಕೋಣೆಯ ಮೇಳ್ಬಾಗದ ಕೌಕೋಲಿಗೆ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, September 21, 2015

ಪೊಲೀಸ್ ದಾಳಿ ಅಕ್ರಮ ಮದ್ಯ ವಶ:
     ವ್ಯಕ್ತಿಯೊಬ್ಬರು ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನಿಟ್ಟಿದ್ದ ಮದ್ಯವನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಟಿ. ಶಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಪಿ.ಎಸ್.ಐ. ಶ್ರೀಧರ್ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಶ್ರೀಮಂಗಲ ಠಾಣಾ ಸರಹದ್ದಿನ ವಗರೆ ಟಿ.ಶೆಟ್ಟಿಗೇರಿ ಗ್ರಾಮದ ಚಟ್ಟಂಗಡ ಬಿ. ಪೂವಪ್ಪನವರ ಮನೆಯ ಬಳಿ ಇರುವ ಸೌದೆ ಕೊಟ್ಟಿಗೆಯಲ್ಲಿ ಸದರಿಯವರು ಅಕ್ರಮ ವಾಗಿ ದಾಸ್ತಾನಿಟ್ಟಿದ್ದ 7.740 ಲೀಟರ್ ನಷ್ಟು ವಿವಿಧ ರೀತಿಯ 5,300/- ರೂ ಬೆಲೆ ಬಾಳುವ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಸ್ಕೂಟರ್ ಗೆ ಲಾರಿ ಡಿಕ್ಕಿ, ಸವಾರನಿಗೆ ಗಾಯ: 

    ದಿನಾಂಕ 20-09-2015 ರಂದು ಸಮಯ 5.40 ಪಿಎಂಗೆ ಬಿ.ಎಂ.ಅಯ್ಯಪ್ಪ, ತಂದೆ ಮಂದಣ್ಣ, 55 ವರ್ಷ, ಫಾರೆಸ್ಟ್ ಗಾರ್ಡ್‌ , ಇವರು ಅತ್ತೂರು ಗ್ರಾಮದ ಅರಣ್ಯದಿಂದ ಕರ್ತವ್ಯ ಮುಗಿಸಿ ತನ್ನ ಬಾಪ್ತು ಕೆಎ 12 ಜೆ 5821 ರ ಮಹೇಂದ್ರ ಸ್ಕೂಟರಿನಲ್ಲಿ ಕುಶಾಲನಗರದ ಉಪ ವಲಯ ಅರಣ್ಯಾಧಿಕಾರಿಯವರ ಕಛೇರಿಗೆ ಬರುತ್ತಿರುವಾಗ್ಗೆ ಗುಡ್ಡೆ ಹೊಸೂರಿನ ಸರ್ಕಾರಿ ಶಾಲೆಯ ಮುಂದೆ ಸಾರ್ವಜನಿಕ ಥಾರು ರಸ್ತೆಯಲ್ಲಿರುವ ಹಂಪ್ಸ್ ಬಳಿ ಸ್ಕೂಟರಿನ ವೇಗ ತಗ್ಗಿಸಿದಾಗ ಅವರ ಸ್ಕೂಟರಿನ ಹಿಂಭಾಗದಿಂದ ಬರುತ್ತಿದ್ದ ಕೆಎಲ್ 13 ಎಡಿ 8472 ರ ನ್ಯಾನೋ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಬಿ.ಎಂ. ಅಯ್ಯಪ್ಪನವರು ಕೆಳಗೆ ಬಿದ್ದು ಅವರ ಸೊಂಟ ಮತ್ತು ಬಲ ಕಾಲಿನ ಮಂಡಿಗೆ ನೋವುಂಟಾಗಿದ್ದಲ್ಲದೇ ಸ್ಕೂಟರ್ ಜಖಂಗೊಂಡಿದ್ದು, ಈ ಸಂಬಂಧ ಸದರಿ ಬಿ.ಎಂ. ಅಯ್ಯಪ್ಪನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಣದ ವಿಚಾರದಲ್ಲಿ ಜಗಳ, ಮಹಿಳೆ ಮೇಲೆ ಹಲ್ಲೆ:

    ಇಬ್ಬರ ನಡುವೆ ಹಣದ ವಿಚಾರದಲ್ಲಿ ಜಗಳವಾಗಿ ಅದನ್ನು ತಡೆಯಲು ಹೋದ ಮಹಿಳೆ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ನಡೆದಿದೆ. ಶ್ರೀಮತಿ ಜೇನು ಕರುಬರ ಕಾವೇರಿ, ಗಂಡ ರಾಜು ಪ್ರಾಯ 44 ವರ್ಷ, ಕೂಲಿ ಕೆಲಸ ವಾಸ ಸೀನಪ್ಪ ನವರ ಲೈನು ಮನೆ ಕಾರೆ ಕಾಡು ಹೊಸೂರು ಗ್ರಾಮ ಇವರು ದಿನಾಂಕ 20/09/2015 ರಂದು ಸಮಯ ಬೆಳಿಗ್ಗೆ 10-45 ಗಂಟೆಗೆ ತನ್ನ ಮಗ ಮತ್ತು ಗಂಡ ನೊಂದಿಗೆ ಗೋಣಿಕೊಪ್ಪದ ಬಸ್ ನಿಲ್ದಾಣದಲ್ಲಿ ನಿಂತು ಮಾತನಾಡುತ್ತಿರುವಾಗ್ಗೆ ಆರೋಪಿ ಮಂಜು ಎಂಬವನು ಅಲ್ಲಿಗೆ ಬಂದು ಕಾವೇರಿಯವರ ಮಗ ಸುರೇಶ್ ನೊಂದಿಗೆ ಹಣದ ವಿಚಾರದಲ್ಲಿ ಜಗಳ ಮಾಡಿದ್ದು, ಅದನ್ನು ತಡೆಯಲು ಯತ್ನಿಸಿದ ಶ್ರೀಮತಿ ಕಾವೇರಿಯವರನ್ನು ಸದರಿ ಮಂಜು ಎಳೆದಾಡಿ ಕಾಲಿನಿಂದ ಒದ್ದು ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಎಡ ಕೈ ಮೊಣ ಕೈ ಗೆ ಗುದ್ದಿ ನೋವುಂಟು ಪಡಿಸಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಟೆಂಪೋ ಅವಘಡ ಇಬ್ಬರಿಗೆ ಗಾಯ: 

    ಬಂಟ್ವಾಳ ತಾಲೂಕು, ಪಾಣೆ ಮಂಗಳೂರು, ಬಂಗಲೆಗುಡ್ಡೆ ನಿವಾಸಿ ಅಬ್ದುಲ್‌ ಖಾದರ್‌ ದಿನಾಂಕ 19.09.2015 ರಂದು ತಮ್ಮ ಅಂಗಡಿಗೆ ಹಣ್ಣು ಮತ್ತು ತರಕಾರಿ ತರಲೆಂದು ಪಾಣೆ ಮಂಗಳೂರಿನಿಂದ ನಂ. ಕೆಎ 19 ಎಎ 9516 ಮಿನಿ ಗೂಡ್ಸ್‌ ಟೆಂಪೋವನ್ನು ಬಾಡಿಗೆಗೆ ಪಡೆದುಕೊಂಡು ಚಾಲಕ ಅಬೂಬಕರ್‌ರವರೊಂದಿಗೆ ಮೈಸೂರಿಗೆ ಹೋಗುತ್ತಿರುವಾಗ್ಗೆ ಸಮಯ ರಾತ್ರಿ 02.30 ಗಂಟೆ ಸುಮಾರಿಗೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕೂರ್ಗಳ್ಳಿ ಎಸ್ಟೇಟ್‌ ಬಳಿ ತಲುಪುವಾಗ್ಗೆ ಚಾಲಕ ಅಬೂಬಕರ್‌ನು ವಾಹನವನ್ನು ಅತೀ ವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಹೋಗಿ ರಸ್ತೆ ಬಲ ಬದಿಯ ತೋಟದ ಮಣ್ಣಿನ ಬರೆಗೆ ಡಿಕ್ಕಿಪಡಿಸಿದ ಪರಿಣಾಮ ಅಬ್ದುಲ್‌ ಖಾದರ್‌ ಹಾಗೂ ಚಾಲಕ ಅಬೂಬಕರ್‌ ರವರಿಗೆ ಗಾಯಗಳಾಗಿ ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಕತ್ತಿಯಿಂದ ಹಲ್ಲೆ: 

     ಸುಂಟಿಕೊಪ್ಪ ಠಾಣಾ ಸರಹದ್ದಿನ ಕಂಬಿಬಾಣೆ ಗ್ರಾಮದ ರಾಜೀವರವರ ಲೈನು ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಜೇನುಕುರುಬರ ಪಾರ್ವತಿ ರವರು ದಿನಾಂಕ 19.09.2015 ರಂದು ಸಂಜೆ 4.00 ಗಂಟೆಗೆ ತನ್ನ ಗಂಡ ಕುಮಾರನೊಂದಿಗೆ ಮನೆಯಲ್ಲಿರುವಾಗ್ಗೆ ಪಕ್ಕದ ಲೈನುಮನೆ ಯಲ್ಲಿ ವಾಸವಿರುವ ಮಾಣಿಕ ಮತ್ತು ಮರಿಯಮ್ಮ ರವರು ಅಲ್ಲಿಗೆ ಬಂದು ಅವರ ಬೆಕ್ಕನ್ನು ನಾಯಿ ಕಚ್ಚಿ ಸಾಯಿಸಿದ ವಿಚಾರದಲ್ಲಿ ಜಗಳ ತೆಗೆದು ಅವ್ಯಾಚ್ಯ ಶಬ್ಧಳಿಂದ ಬೈಯ್ದು ಮಾಣಿಕರವರು ಕೈಯ್ಯಲ್ಲಿದ್ದ ಕತ್ತಿಯಿಂದ ಜೇನುಕುರುಬರ ಪಾರ್ವತಿಯವರ ಎದೆಯ ಭಾಗಕ್ಕೆ ಎಡಕೈಯ ತೋರು ಬೆರಳಿಗೆ ಕಡಿದು ಗಾಯಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Sunday, September 20, 2015

ಪಾದಚಾರಿಗೆ ಕಾರು ಡಿಕ್ಕಿ:

     ವ್ಯಕ್ತಿಯೊಬ್ಬರಿಗೆ ಕಾರೊಂದು ಡಿಕ್ಕಿಯಾಗಿ ರಾತ್ರಿಯಿಡೀ ರಸ್ತೆ ಬದಿಯಲ್ಲಿ ಕಳೆದು ಬೆಳಗ್ಗೆ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಲ್ಲೋಡ್ಲು ಗ್ರಾಮದ ನಿವಾಸಿ ಅಶೋಕ ಎಂಬ ವ್ಯಕ್ತಿ ದಿನಾಂಕ 18-09-2015 ರಂದು ಕೆಲಸ ಮುಗಿಸಿ ವಾಪಸ್ಸು ಮನೆಯ ಕಡೆಗೆ ಬರುತ್ತಿರುವಾಗ್ಗೆ ಸಮಯ ಅಂದಾಜು 09.00 ಪಿ.ಎಂ.ಗೆ ಕಗ್ಗೋಡ್ಲು ಗ್ರಾಮದ ಭಗವತಿ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಯಾವುದೋ ಒಂದು ಕಾರು ಅಶೋಕನವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿದ್ದು, ಅಶೋಕನ ಎಡ ಭಾಗದ ತಲೆಗೆ ಹಾಗೂ ಕಾಲಿಗೆ ಪೆಟ್ಟಾಗಿದ್ದು, ರಸ್ತೆಯ ಬದಿಯಲ್ಲೆ ಬಿದ್ದು ಹೋಗಿದ್ದು ಮರುದಿನ ದಿನಾಂಕ 19-09-2015 ರಂದು ವಿಷಯ ತಿಳಿದು ಅಶೋಕನವರ ಅಣ್ಣ ಬಿ.ಬಿ. ಮೋಹನನವರು ಸದರಿ ಅಶೋಕರವರನ್ನು ಮಡಿಕೇರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ :

     ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಠಾಣಾ ಸರಹದ್ದಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ. ಕೂಡ್ಲೂರು ಗ್ರಾಮದ ನಿವಾಸಿ ನಾಗೇಂದ್ರ ಎಂಬವರಿಗೆ ವಿಪರೀತ ಮದ್ಯಪಾನ ಮಾಡುವ ಅಬ್ಯಾಸವಿದ್ದು ಹಾಗು ಸಿಕ್ಕಿದ ಕಡೆ ತಂಗುವ ಅಬ್ಯಾಸವಿದ್ದು, ದಿನಾಂಕ 17/09/2015 ರಂದು ನಾಗೆಂದ್ರ ಕೂಡಿಗೆಯಲ್ಲಿರುವ ತಮ್ಮ ಬಾವನ ಮನೆಯಲ್ಲಿ ಉಳಿದಿದ್ದು, ದಿನಾಂಕ 18/09/2015 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದವರು ನಂತರ ವಾಪಾಸು ಮನೆಗೆ ಬಾರದೇ ಇದ್ದು,ದಿನಾಂಕ 19-9-2015 ರಂದು ವೀರಬೂಮಿಗೆ ಹೋಗುವ ರಸ್ತೆ ಬದಿಯ ಮನು ಎಂಬುವರ ತೋಟದಲ್ಲಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು, ಅವರ ಪತ್ನಿ ಶ್ರೀಮತಿ ಮಂಜುಳರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಬಹುಮಾನ ಹಣ ನೀಡುವುದಾಗಿ ಮಹಿಳೆಯಿಂದ ಬಾರೀ ಹಣ ವಂಚನೆ:
     ಮೊಬೈಲ್ ಮೂಲಕ ಕೋಟಿ ಹಣ ಬಂದಿರುವುದಾಗಿ ನಂಬಿಸಿ ಮಹಿಳಿಯೊಬ್ಬರಿಂದ ಬಾರೀ ಮೊತ್ತದ ಹಣವನ್ನು ಲಪಟಾಯಿಸಿದ ಘಟನೆ ವಿರಾಜಪೇಟೆ ನಗರ ಠಾಣೆಗೆ ವರದಿಯಾಗಿದೆ. ವಿರಾಜಪೇಟೆ ನಗರದ ಎಸ್.ಆರ್.ಎಸ್. ಲೇಒಔಟ್ ನಿವಾಸಿ ಡಿ.ಎ. ಮಜೀದ್ ಎಂಬವರ ಪತ್ನಿ ಶ್ರೀಮತಿ ಡಿ.ಎಮ್. ಜುಲೈಕಾ ಎಂಬವರಿಗೆ ದಿನಾಂಕ 24-5-2015 ರಂದು ಅವರ ಮೊಬೈಲ್ ಸಂಖ್ಯೆ 8746001944 ಗೆ ಯಾರೋ ಒಬ್ಬ ವ್ಯಕ್ತಿ ಕರೆ ಮಾಡಿ ನನ್ನ ಹೆಸರು ಜೇಮ್ಸ್ ಸ್ಮಿಥ್ ಎಂದು ಪರಿಚಯ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ಗೆ ಯು.ಕೆ.ಯಲ್ಲಿರುವ ಚವರ್ಲೆಟ್ ಕಂಪನಿಯಿಂದ 3 ಕೋಟಿ 35 ಲಕ್ಷ ವಿನ್ ಆಗಿದ್ದೀರಾ ಎಂದು ವಿಳಾಸವನ್ನು ಪಡೆದುಕೊಂಡು ನಂತರ ಅದೇ ವ್ಯಕ್ತಿಯು 1-6-2015 ರಂದು ಕರೆ ಮಾಡಿ ಎಸ್.ಬಿ.ಐ. ಬ್ಯಾಂಕ್ ನ 20197196951 ಅಕೌಂಟ್ ನಂಬರ್ ನೀಡಿ ಈ ಅಕೌಂಟ್ ಗೆ 10,000 ರೂ. ಹಣ ಕಟ್ಟಿ ರಿಜಿಸ್ಟರ್ ಮಾಡಿಸಿಕೊಳ್ಳಿ ಎಂದು ತಿಳಿಸಿದ ಮೇರೆಗೆ ಜುಲೈಕಾರವರು ಅದನ್ನು ನಂಬಿ ಹಣ ಕಟ್ಟಿ ರಿಜಿಸ್ಟರ್ ಮಾಡಿಸಿಕೊಂಡಿದ್ದು, ನಂತರ ಅಕೌಂಟ್ ನಂಬರ್ ಇತ್ಯಾದಿಗಳನ್ನು ನೀಡಿ ಜುಲೈಕಾರವರು ವಿರಾಜಪೇಟೆ ವಿವಿಧ ಬ್ಯಾಂಕಿನಿಂದ 45,04,000/= ರೂಗಳನ್ನು ನೆಟ್ ಬ್ಯಾಂಕಿಗ್ ಮುಖಾಂತರ ಸಂದಾಯ ಮಾಡಿ ಮೋಸ ಹೋಗಿದ್ದು, ಈ ಬಗ್ಗೆ ದಿನಾಂಕ 19-9-2015 ರಂದು ಸದರಿ ಜುಲೈಕಾರವರು ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Saturday, September 19, 2015

ಯುವತಿ ಕಾಣೆ, ಪ್ರಕರಣ ದಾಖಲು: 

     ಮಡಿಕೇರಿ ತಾಲೋಕು ಕಡಗದಾಳು ಗ್ರಾಮದ ಕತ್ತಲೆಕಾಡುವಿನಲ್ಲಿ ವಾಸವಾಗಿರುವ ಸಫಿಯಾ ಎಂಬವರ ಮಗಳಾದ ಉಮ್ಮುಹಭೀಬಳು (24) ದಿನಾಂಕ 17.09.2015 ರಂದು ಸಮಯ 10-30 ಗಂಟೆಗೆ ಮನೆಯಲ್ಲಿದ್ದ ಸಫಿಯಾರವರ ಸೊಸೆ ಜಾಸ್ಮಿನಾ ರವರಿಗೆ ನಾನು ಮಡಿಕೇರಿಗೆ ಹೋಗಿ ಬರುತ್ತೇನೆಂದು ತಿಳಿಸಿ ಹೋದವಳು ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಗೆ ಬಸ್ಸು ಡಿಕ್ಕಿ, ಸವಾರನಿಗೆ ಗಾಯ:
    
     ಮಡಿಕೇರಿ ತಾಲೋಕು ಕೋಪಟ್ಟಿ ಗ್ರಾಮದ ನಿವಾಸಿ ಕೆ.ಪಿ. ಅಭಿಷೇಕ್ ಎಂಬವರು ದಿನಾಂಕ 18-9-2015 ರಂದು ಅಪರಾಹ್ನ 4-00 ಗಂಟೆಗೆ ತಮ್ಮ ಮೋಟಾರ್ ಸೈಕಲ್ ನಲ್ಲಿ ಕುಶಾಲನಗರದಿಂದ ಮಡಿಕೇರಿ ಕಡೆಗೆ ಬರುತ್ತಿರುವಾಗ ಮಡಿಕೇರಿ ನಗರದ ಕೆಎಸ್ಆರ್ ಟಿಸಿ ಬಸ್ ಡಿಪೋ ಬಳಿ ಹಿಂದಿನಿಂದ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ಶನಿವಾರಸಂತೆ ಠಾಣೆ ಸರಹದ್ದಿನ ಕೂಡ್ಲೂರು ಗ್ರಾಮದ ನಿವಾಸಿ ಪಾಲಾಕ್ಷ ಎಂಬವರು ದಿನಾಂಕ 18-09-2015 ರಂದು ಸಮಯ 02-00 ಪಿ.ಎಂ ಗೆ ತಮ್ಮ ವಸಂತ ರವರೊಂದಿಗೆ ಬೈಕಿನಲ್ಲಿ ಹೋಗುತ್ತಿರುವಾಗ ಬೆಸೂರು ಗ್ರಾಮದ ಸೇತುವೆ ಹತ್ತಿರ ತಲುಪುವಾಗ್ಗೆ ಆರೋಪಿಗಳಾದ ಅದೇ ಗ್ರಾಮದ ರವಿ ಹಾಗು ಕೆಂಪ ಎಂಬವರು ಪಾಲಾಕ್ಷ ರವರ ಬೈಕನ್ನು ಅಡ್ಡಗಟ್ಟಿ ನಿಲ್ಲಿಸಿ ನೀನು ಒಬ್ಬನೇ ಸಾಲ ಕೊಟ್ಟಿರುವುದಾ, ನನ್ನನ್ನು ಹಣಕ್ಕಾಗಿ ತೊಂದರೆ ಕೊಡುತ್ತೀಯಾ ಎಂದು ಹೇಳಿ ಬೀರು ಬಾಟಲಿಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ದೊಣ್ಣೆಯಿಂದ ಸಹಾ ಶರೀರಕ್ಕೆ ಹೊಡದು ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಾರು ಬಸ್ಸಿಗೆ ಡಿಕ್ಕಿ:

     ಲೋಕೇಶ, ಕೆ.ಎಸ್.ಅರ್.ಟಿ.ಸಿ ಬಸ್ಸಿನ ಚಾಲಕ ಇವರು ದಿ:18.09.2015 ರಂದು ಬಸ್ಸನ್ನು ಮಡಿಕೇರಿಯಿಂದ ಕುಶಾಲನಗರಕ್ಕೆ ಚಾಲಿಸಿಕೊಂಡು ಹೋಗುತ್ತೀರುವಾಗ ಸಮಯ ಸಂಜೆ 18.30 ಗಂಟೆಗೆ ಸುಂಟಿಕೊಪ್ಪ ನಗರದ ಕೆ.ಇ.ಬಿ ಯ ಹತ್ತಿರ ಬರುತ್ತೀರುವಾಗ್ಗೆ ಎದುರುಗಡೆಯಿಂದ ಕೆಎ 12 ಎಂ 9076 ರ ಮಾರುತಿ ಒಮಿನಿ ಕಾರಿನ ಚಾಲಕ ಅತೀ ವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸು ಹಾಗು ಕಾರು ಎರಡು ಜಖಂ ಗೊಂಡು ಕಾರು ಚಾಲಕ ಗಾಯಗೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ಮನೆಯ ಬೀಗ ಮುರಿದು ಹಣ ಮತ್ತು ಚಿನ್ನಾಭರಣ ಕಳವು:

     ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ  ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಮತ್ತು ಹಣ ದೋಚಿದ ಘಟನೆ ಪೊನ್ನಂಪೇಟೆ ಹತ್ತಿರದ ಬೇಗೂರು ಗ್ರಾಮದಲ್ಲಿ ನಡೆದಿದೆ. ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೇಗೂರು ಗ್ರಾಮದ ನಿವಾಸಿ ಮಲ್ಲಂಡ ಬಿ. ಪೂಣಚ್ಚ ರವರು ದಿನಾಂಕ 18-9-2015 ರಂದು ತಮ್ಮ ಪತ್ನಿಯೊಂದಿಗೆ ಬೆಳಿಗ್ಗೆ 8-00 ಗಂಟೆಗೆ ಮನೆಗೆ ಬೀಗ ಹಾಕಿ ತೋಟಕ್ಕೆ ಕೆಲಸಕ್ಕೆ ಹೋಗಿದ್ದು ಸಂಜೆ 5-00 ಗಂಟೆಗೆ ವಾಪಾಸು ಮನೆಗೆ ಬಂದು ನೋಡುವಾಗ್ಗೆ ಮನೆಯ ಹಿಂಬಾಗಿಲಿನ ಬೀಗ ಒಡೆದಿರುವುದು ಕಂಡುಬಂದಿದ್ದು, ಮನೆಯ ಒಳಗಡೆ ಇಟ್ಟಿದ್ದ ಗಾಡ್ರೆಜ್ ನಿಂದ 10,000/- ರೂ ನಗದು ಹಣ ಹಾಗೂ 8 ಗ್ರಾಂ ಪತ್ತಾಕ್, 12 ಗ್ರಾಂ ಸರ,24 ಗ್ರಾಂ ಕಡಗ, 8 ಗ್ರಾಂ ನ ಒಂದು ಉಂಗುರ ತಲಾ 4 ಗ್ರಾಂ ತೂಕದ 3 ಉಂಗುರ ಕಳ್ಳತನವಾಗಿದ್ದು ಯಾರೋ ಕಳ್ಳರು ಬೆಳಿಗ್ಗೆ 8-00 ಗಂಟೆಯಿಂದ ಸಂಜೆ 5-00 ಗಂಟೆ ಒಳಗೆ ಮನೆಯ ಬೀಗವನ್ನು ಒಡೆದು ಒಳಪ್ರವೇಶಿಸಿ ಈ ಕಳ್ಳತನ ನಡೆಸಿದ್ದು ಒಟ್ಟು 1,13,000/- ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನವಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Friday, September 18, 2015

ಮಗುವಿನೊಂದಿಗೆ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನ, ಸಾವನಪ್ಪಿದ ಮಗು:

     ಗಂಡನ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಹೊಳೆ ಹಾರಿ ಮಗು ಸಾವನಪ್ಪಿ, ಮಹಿಳೆ ಬದುಕುಳಿದ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಬೋಪಯ್ಯ @ ಜಗ ಎಂಬವರು ಚಂದ್ರಕಲಾರವರನ್ನು 2012ರಲ್ಲಿ ಮದುವೆಯಾಗಿದ್ದು, ಒಂದುವರೆ ವರ್ಷದ ಗಂಡು ಮಗುವಿದ್ದು, ಬೋಪಯ್ಯನವರು ಪ್ರತಿ ದಿನ ಮದ್ಯಪಾನ ಮಾಡಿ ಪತ್ನಿ ಚಂದ್ರಕಲಾರವರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿರುವುದಾಗಿದ್ದು, ದಿನಾಂಕ 16-9-2015 ರಂದು ಮಧ್ಯಾಹ್ನ 1-00 ಗಂಟೆಯ ಸಮಯದಲ್ಲಿ ಎಂದಿನಂತೆ ಬೋಪಯ್ಯ ಮದ್ಯಪಾನ ಮಾಡಿ ಜಗಳ ತೆಗೆದು ಪತ್ನಿ ಚಂದ್ರಕಲಾರವರ ಮೇಲೆ ಹಲ್ಲೆ ನಡೆಸಿದ್ದು, ಅಲ್ಲದೆ ಮಗುವನ್ನು ತಳ್ಳಿ ಕೆಳಗೆ ಬೀಳಿಸಿದ್ದು, ಇದರಿಂದ ನೊಂದ ಜಂದ್ರಕಲಾರವರು ಬಾಡಗಬಾಣಂಗಾಲ ಗ್ರಾಮದ ಕಾವೇರಿ ಹೊಳೆಗೆ ತನ್ನ ಮಗುವಿನೊಂದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಮಗು ಸಾವನಪ್ಪಿ, ಸದರಿ ಚಂದ್ರಕಲಾರವರು ಬದುಕುಳಿದಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

ಬೈಕ್ ಡಿಕ್ಕಿ ಪಾದಚಾರಿಗೆ ಗಾಯ:

     ಪಾದಚಾರಿಯೊಬ್ಬರಿಗೆ ಮೋಟಾರ್ ಸೈಕಲ್ ಡಿಕ್ಕಿ ಯಾಗಿ ಗಾಯಗೊಂಡ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಕಾನ್ವೆಂಟ್ ಬಾಣೆ ನಿವಾಸಿ ಸುಬ್ಬಯ್ಯರವರು ಸೋಮವಾರಪೇಟೆ ನಗರದ ಆಲೆಕಟ್ಟೆ ರಸ್ತೆಯ ಮುಸ್ಲೀಂ ಸ್ಮಶಾನದ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಂ ಕೆಎ05 ಇಪಿ 9113 ಮೋಟಾರ್ ಸೈಕಲ್‌‌ನ ಸವಾರ ಸದರಿ ಮೋಟಾರ್‌ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಬ್ಬಯ್ಯರವರಿಗೆ ಡಿಕ್ಕಿಪಡಿಸಿದ ಪರಿಣಾಮ ಬಲಕಾಲಿಗೆ ಗಾಯವಾಗಿದ್ದು, ಈ ಸಂಬಂಧ ಗಾಯಾಳು ಸುಬ್ಬಯ್ಯನವರ ಮಗ ಪಿ.ಎಸ್.ಗಗನ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 


ಅಕ್ರಮ ಪ್ರವೇಶ, ಮಹಿಳೆಯ ಮಾನಭಂಗಕ್ಕೆ ಯತ್ನ: 


     ಮಹಿಳೆಯೊಬ್ಬರ ಮನೆಗೆ ಇಬ್ಬರು ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯಲ್ಲಿ ನಡೆದಿದೆ. ತ್ಯಾಗರಾಜ ಕಾಲೋನಿ ನಿವಾಸಿ ಶ್ರೀಮತಿ ಹಸೀನಾ ಎಂಬವರು ದಿನಾಂಕ 16-9-2015 ರಂದು ರಾತ್ರಿ ವೇಳೆ ತನ್ನ ಮನೆಯಲ್ಲಿರುವಾಗ್ಗೆ ತ್ಯಾಗರಾಜನಗರದ ನಿವಾಸಿಗಳಾದ ಸುಬ್ರಮಣಿ, ಚೇತನ್ ಎಂಬುವವರು ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ, ಕೈ ಹಿಡಿದು ಎಳೆದಾಡಿ ಮಾನಭಂಗಕ್ಕೆ ಪ್ರಯತ್ನಿಸಿ, ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 


ಜೀವನದಲ್ಲಿ ಜಿಗುಪ್ಸೆ, ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ: 


     ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯೊರ್ವರು ವಿಷ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ವಿರಾಜಪೇಟೆ ತಾಲೋಕು ಅತ್ತೂರು ಗ್ರಾಮದ ನಿವಾಸಿ ಸುಬ್ರಮಣಿ ಎಂಬವರ ತಂಗಿ ಶ್ರೀಮತಿ ಲೋಕನಾಯಕಿ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07/09/2015 ರಂದು ಇಲಿ ಪಾಷಣವನ್ನು ಸೇವಿಸಿದ್ದು, ಈ ಸಂಬಂದ ಗೋಣಿಕೊಪ್ಪ ಸರಕಾರಿ ಆಸ್ಪತ್ರೇಗೆ ದಾಖಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೇಯ ಬಗ್ಗೆ ಮಡಿಕೇರಿ ಮತ್ತು ಮೈಸೂರು ಸರಕಾರಿ ಆಸ್ಪತ್ರೇಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 16/09/2015 ರಂದು ಸದರಿ ಲೋಕನಾಯಕಿ ರವರು ಮೃತ ಪಟ್ಟಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 


ಮನೆಗೆ ನುಗ್ಗಿ ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ: 


     ಶನಿವಾರಸಂತೆ ಠಾಣಾ ಸರಹದ್ದಿನ ಹರೇಹಳ್ಳಿ ಗ್ರಾಮದ ನಿವಾಸಿ ನಾಗರಾಜು ಎಂಬವರ ಮಗಳಾದ ರೋಹಿಣಿ ಎಂಬವರು ದಿನಾಂಕ 17-09-2015 ರಂದು ಸಮಯ ಮಧ್ಯಾಹ್ನ 02-15 ಗಂಟೆಗೆ ಮನೆಯ ಹಾಲ್ ನಲ್ಲಿ ಒಬ್ಬರೇ ಇರುವಾಗ ಕೂಡ್ಲೂರು ಗ್ರಾಮದ ನಿವಾಸಿ ಅಬಿ ಎಂಬವರು ನಾಗರಾಜುರವರ ಮನೆಗೆ ಅಕ್ರಮ ಪ್ರವೇಶ ಮಾಡಿ ವಿನಾಕಾರಣ ಕತ್ತಿಯಿಂದ ರೋಹಿಣಿಯವರ ತಲೆಗೆ, ಎಡ ಕೆನ್ನೆಯ ಭಾಗಕ್ಕೆ ಬಲದ ಕಿವಿಯ ಬಾಗಕ್ಕೆ ಕಡಿದು ರಕ್ತಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 


ಅಕ್ರಮ ಜಾನುವಾರು ಸಾಗಾಟ ಆರೋಪಿ ಬಂಧನ:


     ಕುಟ್ಟ ವೃತ್ತ ನಿರೀಕ್ಷಕರಾದ ಶ್ರೀ ಸಿ.ಎನ್. ದಿವಾಕರ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸದರಿಯವರು ದಿನಾಂಕ 16-9-2015 ರಂದು ಬೆಳಿಗ್ಗೆ 6-00 ಗಂಟೆಗೆ ಸಿಬ್ಬಂದಿಯೊಂದಿಗೆ ಕುಟ್ಟ ಠಾಣಾ ಸರಹದ್ದಿನ ಹಳೇ ಚೆಕ್ ಪೋಸ್ಟ್ ಬಳಿ ದಾಳಿ ಮಾಡಿ , ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ಎರ್ಮಾಡು ಗ್ರಾಮದ ನಿವಾಸಿ ಸಿ.ಆರ್. ರಾಜೇಶ್, ಎಂಬವರು ಅಕ್ರಮವಾಗಿ ಪಿಕ್ಅಪ್ ವಾಹನದಲ್ಲಿ ಒಂದು ಕೋಣವನ್ನು ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿ, ಆರೋಪಿಯನ್ನು ಬಂಧಿಸಿ, ಕೋಣ ಹಾಗು ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ. Thursday, September 17, 2015

ಅಕ್ರಮ ಮದ್ಯ ಮಾರಾಟ, ಆರೋಪಿ ಬಂಧನ: 

     ಶ್ರೀಮಂಗಲ ಠಾಣಾಧಿಕಾರಿ ಶ್ರೀಧರ್ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ವಾಸ ಮಾಡಿಕೊಂಡಿರುವ ತಮಿಳರ ಕೆ. ಚಪ್ಪಾಣಿ ಎಂಬವರು ನಡೆಸುತ್ತಿರುವ ದಿನಸಿ ಅಂಗಡಿಗೆ ದಿನಾಂಖ 16-9-2015 ರಂದು 15-15 ಗಂಟೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ಕೆ. ಚಪ್ಪಣಿಯವರನ್ನು ವಶಕ್ಕೆ ತೆಗೆದುಕೊಂದು, ಅಕ್ರಮವಾಗಿ ಮಾರಾಟಕ್ಕೆ ಇಟ್ಟಿದ್ದ ಮದ್ಯವನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.  


ಮನೆಗೆ ಅಕ್ರಮ ಪ್ರವೇಶ, ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:

      ಗುಂಪೊಂದು ಅಕ್ರಮ ಕೂಟ ಕಟ್ಟಿಕೊಂಡು ವ್ಯಕ್ತಿಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಮದಿಕೇರಿ ನಗರದ ತ್ಯಾಗರಾಜ ಕಾಲೋನಿಯಲ್ಲಿ ನಡೆದಿದೆ. ದಿನಾಂಕ 15-09-2015 ರಂದು ಸಮಯ 17.45 ಗಂಟೆಗೆ ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯಲ್ಲಿ ವಾಸವಾಗಿರುವ ಶ್ರೀಮತಿ ಶಾಂತರವರು ತಮ್ಮ ಪತಿ ನಾಗಮುತ್ತುರವರೊಂದಿಗೆ ಮನೆಯಲ್ಲಿರುವಾಗ್ಗೆ ತ್ಯಾಗರಾಜ ನಗರದ ಸಲೀಂ, ಅಲಿ, ಅನೀಫ್, ಅಲ್ಮಾಸ್, ಜಬ್ಬಾರ್‌, ಅಮೀನ್‌ ಮೊಹಿಸೀನ್‌, ಮನ್ಸೂರ್‌, ಕಬೀರ್‌, ಇಬ್ಬಿ, ಹಾಗು ಇನ್ನಿತರ ಏಳೆಂಟು ಮಂದಿ ಆರೋಪಿಗಳು ಅಕ್ರಮಕೂಟ ಕಟ್ಟಿಕೊಂಡು ಏಕಾ ಏಕಿ ಶ್ರೀಮತಿ ಶಾಂತಾರವರ ಮನೆಗೆ ನುಗ್ಗಿ, ಯಾರೋ ಮಹಮ್ಮದ್‌ ಆಲಿಯವರ ಮನೆಗೆ ಕಲ್ಲು ಹೊಡೆದ ವಿಚಾರದಲ್ಲಿ ಶ್ರೀಮತಿ ಶಾಂತಾರವರನ್ನು ಅವಾಚ್ಯ ಶಬ್ದಗಳಿಂದ ಬೈದು ಅವರ ಗಂಡ ನಾಗಮುತ್ತುರವರನ್ನು ನೆಲಕ್ಕೆ ಬೀಳಿಸಿ ಕಪಾಳಕ್ಕೆ ಹೊಡೆದು ಕೊಲೆ ಬೆಧರಿಕೆ ಹಾಕಿರುವುದಾಗಿ ನೀಡಿದ ಪುಕಾರಿಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.  

ಹೆಂಗಸು ಮತ್ತು ಮಗು ಕಾಣೆ: 

     ತನ್ನ ಗಂಡ ಪ್ರತಿದಿನ ಕುಡಿದು ನೀಡುತ್ತಿರುವ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ತನ್ನ ಚಿಕ್ಕ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿ ನಂತರ ಕಾಣೆಯಾದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 16/09/2015 ರಂದು ಕಳತ್ಮಾಡು ಗ್ರಾಮದ ನಿವಾಸಿ ಕೆ.ಎಸ್ . ಪೊನ್ನಪ್ಪ ಎಂಬವರಿಗೆ ಮಗಳು ಚಂದ್ರಕಲಾ ದೂರವಾಣಿ ಕರೆಮಾಡಿ ನಾನು ನನ್ನ ಮಗುವಿನೊಂದಿಗೆ ಮನೆಬಿಟ್ಟು ಬಂದಿದ್ದೇನೆ ನನ್ನ ಗಂಡ ದಿನಂಪ್ರತಿ ಸಾರಾಯಿ ಕುಡಿಯುತ್ತಿದ್ದು ನನ್ನ ಗಂಡನೊಂದಿಗೆ ನನಗೆ ಬಾಳಲು ಇಷ್ಟವಿಲ್ಲ ನಾನು ಸಾಯುತ್ತೇನೆ ಎಂದು ತಿಳಿಸಿದ್ದು ನಂತರ ಆಕೆಯು ಯಾಣೆಯಾಗಿರುತ್ತಾಳೆ ಎಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

Wednesday, September 16, 2015

ಮನೆಗೆ ಅಕ್ರಮ ಪ್ರವೇಶ, ಮಹಿಳೆಗೆ ಕೊಲೆ ಬೆದರಿಕೆ:

     ಶ್ರೀಮತಿ ಕೆ.ಯು. ಪಧ್ಮಾರಾಣಿ ಎಂಬವರು ಅವರ ತಂದೆಯವರ ಬಾಪ್ತು ಮತ್ತಪ್ಪ ದೇವಸ್ಥಾನದ ಮುಂಭಾಗದ ಮಹದೇವಪೇಟೆ ರಸ್ತೆಯಲ್ಲಿ ರುವ ಮನೆಯಲ್ಲಿ ವಾಸವಿದ್ದು, ಬೆಂಗಳೂರಿನಲ್ಲಿಯೂ ಅವರಿಗೆ ಮನೆ ಇದ್ದು, ಆಗಿಂದಾಗ್ಗೆ ಬೆಂಗಳೂರಿಗೆ ಹೋಗಿ ಬರುತ್ತಿದ್ದು, ಅದರಂತೆ ಬೆಂಗಳೂರಿಗೆ ಹೋಗಿ 2 ತಿಂಗಳು ಆಗಿದ್ದು, ದಿನಾಂಕ 14-09-2015 ರಂದು ಸಮಯ ಬೆಳಿಗ್ಗೆ 11. 30 ಗಂಟೆಗೆ ಕೆ.ಯು. ಪದ್ಮಾವತಿ ಯವರ ಮಡಿಕೇರಿಯಲ್ಲಿರುವ ಮನೆಗೆ ಅವರ ಅಣ್ಣ ರವಿ ತಮ್ಮಯ್ಯರವರು ಅಕ್ರಮ ಪ್ರವೇಶ ಮಾಡಿದ್ದು ಈ ವಿಚಾರ ತಿಳಿದು ಸದರಿ ಪದ್ಮಾವತಿಯವರು ರವಿ ತಮ್ಮಯ್ಯನವರ ಪತ್ನಿಗೆ ದೂರವಾಣಿ ಮೂಲಕ ಮಾತನಾಡುತ್ತಿದ್ದಾಗ ಅಣ್ಣ ರವಿ ತಮ್ಮಯ್ಯ ಫೋನ್‌ ಕಿತ್ತುಕೊಂಡು ನೀನು ಬಂದು ನನ್ನ ಕೈಗೆ ಸಿಕ್ಕು ಕೋವಿಯೊಳಗೆ ತೋಟ ತುಂಬಿಸಿ ಇಟ್ಟಿದ್ದು ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗುಂಪಿನಿಂದ ವ್ಯಕ್ತಿಯ ಮೇಲೆ ಹಲ್ಲೆ ಕೊಲೆಗೆ ಯತ್ನ

     ಗುಂಪೊಂದು ಅಕ್ರಮಕೂಟ ಸೇರಿ ಗಣೇಶ ಹಬ್ಬದ ತಯಾರಿ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯಲ್ಲಿ ನಡೆದಿದೆ. ದಿನಾಂಕ 15-09-2015 ರಂದು ಸಮಯ 19.30 ಗಂಟೆಗೆ ಮಡಿಕೇರಿ ನಗರದ ತ್ಯಾಗರಾಜಕಾಲೋನಿಯ ನಿವಾಸಿ ಎಂ. ಬಾಲಕೃಷ್ಣ ಎಂಬವರು ತಮ್ಮ ಸಂಗಡಿಗರೊಂದಿಗೆ ತ್ಯಾಗರಾಜ ಕಾಲೋನಿಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಗೌರಿ ಗಣೇಶ ಹಬ್ಬದ ಸಂಬಂಧ ಕೆಲಸ ಮಾಡುತ್ತಿರುವಾಗ ಆರೋಪಿಗಳಾದ ಆಲಿ, ಕಂಟ್ರಾಕ್ಟರ್ ಸಲೀಂ, ಗ್ಯಾಸ್ ಚಾಲಕ ಸಲೀಂ, ಉರೈಸ್, ಅಲ್ಮರ್, ರಿಸ್ವಾನ್ ಹಾಗು ಇತರೆ 7 ಮಂದಿ ಅಕ್ರಮ ಕೂಟ ಕಟ್ಟಿಕೊಂಡು ಕೈಯ್ಯಲ್ಲಿ ದೊಣ್ಣೆ, ಕಲ್ಲು ಹಾಗೂ ಕಬ್ಬಿಣದ ರಾಡುಗಳನ್ನು ಹಿಡಿದುಕೊಂಡು ಬಂದು ಹಳೆಯ ವೈಷಮ್ಯದಿಂದ ಅವಾಚ್ಯ ಶಬ್ಧಗಳಿಂದ ಬೈದು, ಎಂ. ಬಾಲಕೃಷ್ಣ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ ಕೊಲೆಗೆ ಪ್ರಯತ್ನಿಸಿದ್ದು, ಗಾಯಾಳು ಎಂ. ಬಾಲಕೃಷ್ಣ ರವರು ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ನೀಡಿದ ಹೇಳಿಕೆ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯ ಮಾನಭಂಗಕ್ಕೆ ಯತ್ನ:
   10 ಜನರ ಗುಂಪೊಂದು ಅಕ್ರಮ ಕೂಟ ಸೇರಿ ಮಹಿಳೆಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯಲ್ಲಿ ನಡೆದಿದೆ. ದಿನಾಂಕ 15-09-2015 ರಂದು ಸಮಯ 19.30 ಗಂಟೆಗೆ ತ್ಯಾಗರಾಜ ಕಾಲೋನಿಯಲ್ಲಿ ಶ್ರೀಮತಿ ರಮ್ಯಾ ಎಂಬವರು ತನ್ನ ಮನೆಯಲ್ಲಿರುವಾಗ ಆರೋಪಿಗಳಾದ ಅಲ್ಮಾಸ್, ಇಬ್ರಾಹಿಂ, ಸುಹೇಲ್, ಆಲಿ, ಸಫೀರ್ ಹಾಗು ಇತರೆ 4-5 ಜನರು ಅಕ್ರಮ ಕೂಟ ಕಟ್ಟಿಕೊಂಡು ಶ್ರೀಮತಿ ರಮ್ಯಾರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವರನ್ನು ಕುರಿತು ಈಕೆ ಮುಸ್ಲಿಂ ಜನಾಂಗದಿಂದ ಹಿಂದೂ ಜನಾಂಗಕ್ಕೆ ಸೇರಿಕೊಂಡು ಹಿಂದೂಗಳ ಜೊತೆ ಸೇರಿ ನಮಗೆ ಕೇಡು ಬಯಸುತ್ತಾಳೆ, ಈಕೆಯನ್ನು ಸುಮ್ಮನೆ ಬಿಡಬಾರದು, ಈಕೆಯ ಮಾನ ಹರಾಜು ಮಾಡಬೇಕೆಂದು ಹೇಳಿ ಕುತ್ತಿಗೆಗೆ ಕೈ ಹಾಕಿ ಮಾನಭಂಗ ಮಾಡಲು ಪ್ರಯತ್ನಿಸಿ, ಅವಾಚ್ಯ ಶಬ್ಧಗಳಿಂದ ಬೈದು, ಕಾಲಿನಿಂದ ಹೊಟ್ಟೆಯ ಭಾಗಕ್ಕೆ ಒದ್ದು, ನೋವುಂಟುಪಡಿಸಿರುವುದಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಹೊಳೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ: 
    ದಿನಾಂಕ 16-09—2015 ರಂದು ಬೆಳಿಗ್ಗೆ ಸಮಯ 08.00 ಗಂಟೆಗೆ ಸೋಮವಾರಪೇಟೆ ತಾಲೋಕು, ಕೊತ್ತನಳ್ಳಿ ಗ್ರಾಮದ ನಿವಾಸಿ ಬಿದ್ದಪ್ಪರವರಿಗೆ ತಮ್ಮ ತೋಟದ ಒತ್ತಾಗಿ ಹರಿಯುತ್ತಿರುವ ಕುಮಾರಧಾರಾ ಹೊಳೆಯ ಮಧ್ಯದ ಕಲ್ಲು ಬಂಡೆಯಲ್ಲಿ ಒಬ್ಬ ಗಂಡಸಿನ ಮೃತ ದೇಹವಿರುವುದು ಕಂಡು ಬಂದಿದ್ದು, ಈ ಸಂಬಂಧ ಕೊತ್ತನಳ್ಳಿ ಗ್ರಾಮದ ನಿವಾಸಿ ಕಡ್ಡೀರ ಪೊನ್ನಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, September 15, 2015

ಎರಡು ಕಾರುಗಳ ನಡುವೆ ಅಪಘಾತ:

     ಕೇರಳದ ಮಟ್ಟನೂರು ನಿವಾಸಿ ಕೆ.ಪಿ. ಮಹಮ್ಮದ್ ಎಂಬವರು ದಿನಾಂಕ: 15-09-15ರಂದು ಬೆಳಿಗ್ಗೆ 7-30ಗಂಟೆಗೆ ಮಡಿಕೇರಿಯ ನ್ಯಾಯಾಲಯದಲ್ಲಿ ಕೆಲಸವಿದ್ದುದರಿಂದ ಅವರ ಬಾಪ್ತು ಕಾರ್ ನಂ. ಕೆಎಲ್.58.ಹೆಚ್.2299ರಲ್ಲಿ ಕೇರಳದಿಂದ ಹೊರಟು ಮಾಕುಟ್ಟ ಮಾರ್ಗವಾಗಿ ವಿರಾಜಪೇಟೆ ಕಡೆಗೆ ಬರುತ್ತಿರುವಾಗ್ಗೆ, ಮಾಕುಟ್ಟದಿಂದ ಸುಮಾರು 4 ಕಿ.ಮೀ. ಮುಂದಕ್ಕೆ ಸಮಯ ಬೆಳಿಗ್ಗೆ 10-00ಎ.ಎಂ.ಗೆ ತಲುಪುವಾಗ್ಗೆ, ಎದುರುಗಡೆ ಯಿಂದ ಅಂದರೆ ವಿರಾಜಪೇಟೆ ಕಡೆಯಿಂದ ಮಾಕುಟ್ಟ ಕಡೆಗೆ ಬರುತ್ತಿದ್ದ ಕೆಎಲ್.13. ವೈ.1317ರ ಕಾರಿನ ಚಾಲಕನು ಸದರಿ ಕಾರನ್ನು ಅತೀವೇಗ ಹಾಗೂ ಅಜಾಗರೂ ಕತೆಯಿಂದ ಚಾಲನೆ ಮಾಡಿ ಕೆ.ಪಿ. ಮಹಮ್ಮದ್ ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಕಾಲೇಜು ವಿದ್ಯಾಥಿFನಿ ಆತ್ಮಹತ್ಯೆ:

     ಕುಶಾಲನಗರದ ಹುಲುಸೆ ಗ್ರಾಮದ ನಿವಾಸಿ ಶ್ರೀಮತಿ ರೂಪರವರ ಅಕ್ಕನ ಮಗಳು ರಶ್ಮಿ ಪ್ರಾಯ 20 ವರ್ಷ ಈಕೆಯು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಂತಿಮ ಬಿ ಎ ವ್ಯಾಸಂಗ ಮಾಡುತ್ತಿದ್ದು, ಈಕೆಯು ಶ್ರೀಮತಿ ರೂಪಾರವರ ಕಚೇರಿಗೆ ದಿನಾಂಕ 14-9-2015 ರಂದು ಸಮಯ 16.30 ಗಂಟೆಗೆ ಬಂದು ಅವರ ಮನೆಯ ಕೀಯನ್ನು ಪಡೆದುಕೊಂಡು ಹೋಗಿ, ಮಂಗಳಾದೇವಿನಗರದಲ್ಲಿ ಶ್ರೀಮತಿ ರೂಪಾರವರು ವಾಸವಿರುವ ಮನೆಯಲ್ಲಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ರಶ್ಮಿಯು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸರಕಾರಿ ಜಾಗದಲ್ಲಿ ಅನಧಿಕೃತ ಪ್ಲೆಕ್ಸ್, ಪ್ರರಕರಣ ದಾಖಲು:
     ದಿನಾಂಕ 14-09-2015 ರಂದು ಶ್ರೀ ಶರತ್ ರೈ , ಮಡಿಕೇರಿ ನಗರ ಠಾಣೆ ಇವರು ಮಡಿಕೇರಿ ನಗರದಲ್ಲಿ ಗಸ್ತುಕರ್ತವ್ಯ ಮಾಡಿಕೊಂಡು ಮಡಿಕೇರಿ ನಗರದ ತ್ಯಾಗರಾಜ ಕಾಲೋನಿ ಕಡೆ ಹೋಗುತ್ತಿದ್ದಾಗ ಸಮಯ ಬೆಳಿಗ್ಗೆ 7.00 ಗಂಟೆಗೆ ತ್ಯಾಗರಾಜ ಕಾಲೋನಿಯ ಜಂಕ್ಷನ್‌ ಬಳಿ ಗದ್ದಿಗೆಗೆ ಸೇರಿದ ಜಾಗದಲ್ಲಿ ಅಭಿಷ್ಟಪ್ರದ ವಿನಾಯಕ ಯುವಕ ಸಂಘ ಇವರು ಗಣೇಶೋತ್ಸವ ಸಮಿತಿಯ ಪರವಾಗಿ ಶುಭ ಕೋರುವ ಒಂದು ಫ್ಲೆಕ್ಸ್‌‌‌‌‌ ಒಂದನ್ನು ಹಾಕಿದ್ದು, ಸದರಿ ಫ್ಲೆಕ್ಸ್‌ನ್ನು ಪುರಾತತ್ವ ಇಲಾಖೆಯಿಂದ ಅಥವಾ ಮಡಿಕೇರಿ ನಗರ ಸಭೆಯಿಂದ ಅನುಮತಿ ಪಡೆದುಕೊಳ್ಳದೇ ಹಾಕಿರುವುದು ಗಮನಕ್ಕೆ ಬಂದಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಳೇ ದ್ವೇಷದಿಂದ ವ್ಯಕ್ತಿ ಮೇಲೆ ಹಲ್ಲೆ, ಕೊಲೆ ಬೆದರಿಕೆ:

     ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ಟಿ.ಎಸ್. ಸಯ್ಯದ್ ಎಂಬವರು ದಿನಾಂಕ 14-9-2015 ರಂದು ಮದ್ಯಾಹ್ನ 12:30 ಗಂಟೆಯ ವೇಳೆಗೆ ಪಾಲಿಬೆಟ್ಟ ಬಸ್ ನಿಲ್ದಾಣದ ಪಕ್ಕದಲ್ಲಿರುವ ಒಳಮಾಳ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಅಲ್ಲಿಗೆ ಬಂದ ಸಜೇಶ್ ಎಂಬುವವರು ಹಳೇ ದ್ವೇಷದಿಂದ ಟಿ.ಎಸ್ ಸಯ್ಯದ್ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲಿನಿಂದ ತಲೆಗೆ ಹೊಡೆದು ಕಾಲಿನಿಂದ ಎದೆಗೆ ತುಳಿದು ಜೀವ ಬೆದರಿಕೆ ಹಾಕಿರುವುದರ ಸಂಬಂಧ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ಲೆಕ್ಸ್ ಗೆ ಬೆಂಕಿ, ಪ್ರಕರಣ ದಾಖಲು:

     ಮಡಿಕೇರಿ ನಗರದ ತ್ಯಾಗರಾಜ ಕಾಲೋನಿ ನಿವಾಸಿ ಸುಬ್ರಮಣಿ ರವರು ಶ್ರೀ ಅಭಿಷ್ಟಪ್ರದ ವಿನಾಯಕ ಯುವಕ ಸಂಘದ ಅದ್ಯಕ್ಷರಾಗಿದ್ದು, ತ್ಯಾಗರಾಜನಗರ ಜಂಕ್ಷನ್‌ನಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಲು ಇಚ್ಚಿಸಿ, ಈ ಬಗ್ಗೆ ಶುಭ ಕೋರುವ ಪ್ಲೆಕ್ಸ್‌ನ್ನು ಮೂರು ದಿನದ ಹಿಂದೆ ತ್ಯಾಗರಾಜನಗರ ಜಂಕ್ಷನ್‌‌ನ ರಸ್ತೆಯ ಬದಿಯಲ್ಲಿ ಅಳವಡಿಸಿದ್ದು, ಸದರಿ ಪ್ಲೆಕ್ಸ್‌ ಗೆ ದಿನಾಂಕ 13-9-2015 ರಂದು ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸದರಿ ಪ್ಲೆಕ್ಸ್‌‌ನಲ್ಲಿದ್ದ ಸರಸ್ವತಿ ದೇವರ ಚಿತ್ರವು ಸುಟ್ಟುಹೋಗಿರುತ್ತದೆ. ಆದ್ದರಿಂದ ಹಿಂದುಗಳ ಭಾವನೆಗೆ ಧಕ್ಕೆ ತರುವಂತೆ ಮಾಡಲಾಗಿದೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Monday, September 14, 2015

ಅಪರಿಚಿತ ಗಂಡಸಿನ ಮೃತದೇಹ ಪತ್ತೆ:

      ಅಪರಿಚಿತ ವ್ಯಕ್ತಿಯೊಬ್ಬರ ಮೃತ ದೇಹವೊಂದು ವಿರಾಜಪೇಟೆ ಸಮೀಪದ ನಾಲ್ಕೇರಿ ಗ್ರಾಮದ ಕಾವೇರಿ ಹೊಳೆಯಲ್ಲಿ ಪತ್ತೆಯಾದ ಬಗ್ಗೆ ವರದಿಯಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದ ಬೇತ್ರಿ ಕಾವೇರಿ ಹೊಳೆಯಲ್ಲಿ ಅಂದಾಜು 45-50 ವರುಷ ಪ್ರಾಯದ ಒಬ್ಬ ಅಪರಿಚಿರ ವ್ಯಕ್ತಿಯ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಾಲ್ಕೇರಿ ಗ್ರಾಮದ ನಿವಾಸಿ ಪಿ.ಟಿ. ರಮೇಶ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣ ದಾಖಲು:

     ವಿರಾಜಪೇಟೆ ತಾಲೋಕು ಅಮ್ಮತ್ತಿ ನಗರದ ಪಾಲಿಬೆಟ್ಟ ರಸ್ತೆಯಲ್ಲಿ ವಾಸವಾಗಿರುವ ವಿ.ಎ. ಮಿಥುನ ಎಂಬ ವ್ಯಕ್ತಿ ದಿನಾಂಕ 8-9-2015 ರಿಂದ ಕಾಣೆಯಾಗಿರುತ್ತಾರೆಂದು ಸದರಿ ವ್ಯಕ್ತಿಹ ಸಹೋದರಿ ವಿ.ಎ. ನಾಗಶ್ರೀ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಮಾರಾಟ, ಆರೋಪಿ ಬಂಧನ:

     ಕುಶಾಲನಗರ ಠಾಣಾಧಿಕಾರಿ ಶ್ರೀ ಅನೂಪ್ ಮಾದಪ್ಪ ರವರಿಗೆ ದೊರೆತ ಖಚಿರ ಮಾಹಿತಿ ಮೇರೆಗೆ ಕುಶಾಲನಗರ ಠಾಣಾ ಸರಹದ್ದಿನ ಕಣಿವೆ ರಾಮೇಶ್ವರ ದೇವಸ್ಥಾನದ ಬಳಿಯಿರುವ ನಾಲೆಗೆ ಹೋಗುವ ಮೆಟ್ಟಿಲಿನ ಬಳಿ ಹೆಚ್.ಎಸ್.ಪವನ್ ಎಂಬುವರು ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಠಾಣಾ ಸಿಬ್ಬಂದಿಯವರೊಂದಿಗೆ ದಾಳಿ ನೆಡೆಸಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಇಟ್ಟಕೊಂಡಿದ್ದ ಹೆಚ್.ಎಸ್.ಪವನ್ ರವರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:

     ಗೋಣಿಕೊಪ್ಪ ಠಾಣಾ ಸರಹದ್ದಿನ ಜೋಡುಬಟ್ಟಿ ನಿವಾಸಿ ಶ್ರೀಮತಿ ಎಂ.ಪಿ. ಲೀಲಾ ಎಂಬವರ ಪತಿ ಹೆಚ್.ಜಿ. ಕುಮಾರ ಎಂಬಾತ ವಿಪರೀತ ಕುಡಿತದ ಚಟವನ್ನು ಬೆಳೆಸಿಕೊಂಡಿದ್ದು, ಪತ್ನಿಯ ಬುದ್ದಿಮಾತಿನಿಂದ ಬೇಸತ್ತು ದಿನಾಂಕ 13-9-2015 ರಂದು ಅತಿಯಾಗಿ ಮದ್ಯ ಸೇವಿಸಿ ಮೃತಪಟ್ಟಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ವಿನಾಕಾರಣ ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ಗೋಣಿಕೊಪ್ಪ ಠಾಣಾ ಸರಹದ್ದಿನ ಮಹಿಳಾ ಸಮಾಜದ ಹತ್ತಿರ ವಾಸಾಗಿರುವ ಎಸ್. ಎ. ತಸ್ಲೀಮ್ ಎಂಬವರು ದಿನಾಂಕ 13/09/2015 ರಂದು ಸಮಯ 6-45 ಗಂಟೆಗೆ ತಮ್ಮ ಬಾಪ್ತು ಸ್ಕೂಟಿ ಸಂಖ್ಯೆ ಕೆಎ558772 ರಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಕೆಎ 12 ಎಂ 8043 ರ ಜೀಪಿನಲ್ಲಿ ಬಂದ ಕೊಕ್ಕಂಡ ಉಮೇಶ ಮತ್ತು ಇತರ 3 ಜನರು ಸದರಿಯವರ ದಾರಿ ತಡೆದು ವಿನಾ ಕರಣ ಜಗಳ ತೆಗೆದು ಅವ್ಯಾಚ್ಯ ಶಬ್ದಗಳಿಂದ ಬೈಯ್ದು ಬೀರು ಬಾಟಲಿಯಿಂದ ಹಾಗು ಕೈಗಳಿಂದ ಶರೀರದ ಭಾಗಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Sunday, September 13, 2015

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                         ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಬಳಿಯ ಆರ್ಜಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ 12-09-2015 ರಂದು ಆರ್ಜಿ ಗ್ರಾಮದ ತರಮೆ ಕಾಡು ಪೈಸಾರಿ ನಿವಾಸಿ ದಿಲೀಪ್‌ ಎಂಬವರು ಎಂದಿನಂತೆ ಅವರ ಕೆಲಸ ಮುಗಿಸಿಕೊಂಡು ರಾತ್ರಿ ಸಮಯ  ತನ್ನ ಮನೆಗೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಅದೇ ಪೈಸಾರಿಯ ನಿವಾಸಿ ಚುಂಡ ಯಾನೆ ಮುತ್ತಪ್ಪ ಎಂಬವರು  ಏಕಾ ಏಕಿ ಕೈಕೊಡಲಿ ಹಿಡಿದುಕೊಂಡು ಬಂದು ಹಳೆ ವಿಚಾರದಲ್ಲಿ ಜಗಳ ತೆಗೆದು ದಿಲೀಪ್‌ರವರ ಹಣೆ ಹಾಗೂ ಎರಡು ಕೈಗಳಿಗೆ ಕಡಿದು ಗಾಯಪಡಿಸಿದ್ದು ಆ ಸಮಯದಲ್ಲಿ ದಿಲೀಪ್‌ರವರು  ಜೋರಾಗಿ ಕೂಗಿಕೊಂಡಿದ್ದನ್ನು ಕೇಳಿಸಿಕೊಂಡ  ಪಕ್ಕದ ನಿವಾಸಿ ಪೊನ್ನಕ್ಕಿ ಹಾಗೂ ಅವರ ಮಗ ರಜಿತ್ ರವರು ಬಂದು ಬಿಡಿಸಿ ಆತನ ಕೈಯಲ್ಲಿದ್ದ ಕೈಕೊಡಲಿಯನ್ನು ಕಿತ್ತುಕೊಂಡು  ಚಿಕಿತ್ಸೆ ಬಗ್ಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು  ಒಂದು ವಾರದ ಹಿಂದೆ ದಿಲೀಪ್‌ರವರ ಬಾಪ್ತು ಕುರಿಗಳನ್ನು ಚುಂಡರವರ ಜಾಗದಲ್ಲಿ ಕಟ್ಟಿ ಹಾಕಿದ್ದಾಗ ಚುಂಡರವರು ಕುರಿಗಳ ಹಗ್ಗಗಳನ್ನು ಕಡಿದು ಬಿಟ್ಟ ವಿಚಾರವೇ ಹಲ್ಲೆಗೆ ಕಾರಣವೆನ್ನಲಾಗಿದೆ. ಈ ಸಂಬಂಧ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಶವ ಪತ್ತೆ
                 ಬೇತ್ರಿ ಗ್ರಾಮದ ಬಳಿ ಕಾವೇರಿ ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿದೆ. ದಿನಾಂಕ: 12-09-15ರಂದು ಬೇತ್ರಿ ನಿವಾಸಿ ಪಿ.ಟಿ.ರಮೇಶ್‌ ಎಂಬವರಿಗೆ ಅವರ ಗ್ರಾಮದವರಾದ ಗಣೇಶರವರು ಮೊಬೈಲ್ ಕರೆ ಮಾಡಿ ಬಡುವಂಡ ಅರುಣರವರ ತೋಟದ ಪಕ್ಕದ ಕಾವೇರಿ ಹೊಳೆಯ ಮದ್ಯದಲ್ಲಿ ಒಂದು ಮೃತ ದೇಹವು ಕಟ್ಟಡಗಳ ಮದ್ಯದಲ್ಲಿ ತೇಲುತ್ತಿರುವುದಾಗಿ ತಿಳಿಸಿದ್ದು ರಮೇಶ್‌ರವರು ಸ್ಥಳಕ್ಕೆ ಬಂದು ನೋಡಿದಾಗ ಕಾವೇರಿ ಹೊಳೆಯ ಮಧ್ಯದಲ್ಲಿ ಒಂದು ಗಂಡಸಿನ ಮೃತ ದೇಹವು ಕಟ್ಟಡಗಳ ಮಧ್ಯದಲ್ಲಿ ತೇಲುತ್ತಿದ್ದು ಕೊಳೆತ ಸ್ಥಿತಿಯಲ್ಲಿ ಇರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಕ್ಕಿಡಿಪ್‌ ಡ್ರಾ, ಮೋಸ
             ಲಕ್ಕಿ ಡಿಪ್‌ ಡ್ರಾದ ಮೂಲಕ ಬಹುಮಾನ ಬಂದಿರುವುದಾಗಿ ತಿಳಿಸಿ ನಂತರ ಬಹುಮಾನ ನೀಡದೆ ಮೋಸ ಮಾಡಿರುವ ಘಟನೆ ಗೋಣಿಕೊಪ್ಪ ನಗರದ ಹರಿಶ್ಚಂದ್ರಪುರದಲ್ಲಿ ನಡೆದಿದೆ. ಪೊನ್ನಂಪೇಟೆ ಬಳಿಯ ನಡಿಕೇರಿ ಗ್ರಾಮದ ನಿವಾಸಿ ಮಾಣಿಪಂಡ ಪೆಮ್ಮಯ್ಯ ಎಂಬವರು ಗೋಣಿಕೊಪ್ಪ ಹರಿಶ್ಚಂದ್ರಪುರದಲ್ಲಿರುವ ಸಿಲ್ವರ್ ಲೈನ್ ಚಾರಿಟೇಬಲ್ ಟ್ರಸ್ಟ್ ಎಂಬ ಟ್ರಸ್ಟ್ ಮಾಲೀಕನಾದ ಮುಸಲ್ಮಾನರ ಸಿದ್ದಿಕ್ ಎಂಬವರು ನಡೆಸುತ್ತಿರುವ ಸ್ಕೀಮ್ ವ್ಯವಹಾರದಲ್ಲಿ ವಾರಕ್ಕೆ ರೂ. 100/- ರಂತೆ ಹಣ ಕಟ್ಟಿ ವಾಹನ, ಪಾತ್ರೆ,  ಗೃಹ ಉಪಯೋಗಿ ವಸ್ತುಗಳಗಳನ್ನು ಲಾಟರಿ ಮುಖಾಂತರ ತೆಗೆದು ಸ್ಕೀಮ್ ಸದಸ್ಯರುಗಳಿಗೆ  ಕೊಡುತ್ತಿದ್ದು ಅದರಂತೆ ಪೆಮ್ಮಯ್ಯನವರು ಸದಸ್ಯರಾಗಿ 16 ಕಂತು ಹಣ ಕಟ್ಟಿದ್ದು 16ನೇ ಕಂತಿನಲ್ಲಿ ಲಾಟರಿ ತೆಗೆದಾಗ ಪೆಮ್ಮಯ್ಯನವರಿಗೆ ಡ್ರಾ ಸ್ಕಿಂನಲ್ಲಿ ಮೊದಲನೇ ಬಹುಮಾನ ಬಂದಿರುವ ಬಗ್ಗೆ ಮೊಬೈಲ್ ನಲ್ಲಿ ಮೆಸೇಜ್ ಹಾಕಿದ್ದು ಬಹುಮಾನ ಕೇಳಲು ಸದ್ರಿ ಟ್ರಸ್ಟ್‌ನ ಮಾಲೀಕ ಸಿದ್ದಿಕ್‌ರವರ ಬಳಿ ಹೋದಾಗ ಅವರು ಪೆಮ್ಮಯ್ಯನವರಿಗೆ  ಪ್ರಥಮ ಬಹುಮಾನ ಬಂದಿರುವುದಿಲ್ಲ ಕೆಲಸ ಮಾಡುವ ಹುಡುಗರು ತಪ್ಪು ತಿಳುವಳಿಕೆಯಿಂದ ಮೊದಲನೆ ಡ್ರಾ ಬಂದಿರುವುದಾಗಿ ಕೈತಪ್ಪಿನಿಂದ ತಿಳಿಸಿರುತ್ತಾರೆ ಎಂದು ಹೇಳಿ ಬಹುಮಾನ ನೀಡದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗಂಧದ ಮರ ಕಳವು, ಪ್ರಕರಣ ದಾಖಲು
                   ಅಕ್ರಮವಾಗಿ ಗಂಧದ ಮರಗಳನ್ನು ಕಡಿದು ಶೇಖರಿಸಿಟ್ಟಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಶನಿವಾರಸಂತೆ ಠಾಣೆಯ ಎಎಸ್‌ಐ ಹೆಚ್‌.ಎಂ.ಗೋವಿಂದರವರು ದಿನಾಂಕ 12/09/2015ರಂದು ಸುಂಡಳ್ಳಿ ಗ್ರಾಮದ  ಸುರೇಶ ಎಂಬವರ ಮನೆಗೆ ತೆರಳಿ ಪರಿಶೀಲಿಸಿದಾಗ ಅವರ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು ರೂ.1,70,000/- ಮೌಲ್ಯದ 35 ಕೆ.ಜಿ.ಗಂಧದ ಮರಗಳು ಪತ್ತೆಯಾಗಿದ್ದು, ಸುಂಡಳ್ಳಿ ಗ್ರಾಮದ ನಿವಾಸಿಗಳಾದ ಸುರೇಶ ಮತ್ತು ಪೃಥ್ವಿ ಎಂಬವರುಗಳು ಸೇರಿಕೊಂಡು ಗಂಧದ ಮರವನ್ನು ಅಪ್ಪಶೆಟ್ಟಳ್ಳಿ ಗ್ರಾಮದ ನಿವಾಸಿ ದೊಡ್ಡಪ್ಪ ಎಂಬವರ ಕಾಫಿ ತೋಟದಿಂದ ಕಳವು ಮಾಡಿಕೊಂಡು ಬಂದು ಸುರೇಶರವರ ಮನೆಯಲ್ಲಿ ಶೇಖರಿಸಿಟ್ಟಿರುವದಾಗಿ ತಿಳಿದು ಬಂದಿದ್ದು ಗಂಧದ ತುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, September 12, 2015

ಮಹಿಳೆಗೆ ಕಿರುಕುಳ ಪ್ರಕರಣ
               ಮಹಿಳೆಯೊಬ್ಬರಿಗೆ ಪತಿಯೇ ದೈಹಿಕ ಕಿರುಕುಳ ನೀಡಿದ ಘಟನೆ ಮಡಿಕೇರಿ ಸಮೀಪದ ಹಾಕತ್ತೂರು ಗ್ರಾಮದ ಕತ್ತಲೆಕಾಡು ಪೈಸಾರಿಯಲ್ಲಿ ನಡೆದಿದೆ. ಹಾಕತ್ತೂರು ಸಮೀಪದ ಕತ್ತಲೆಕಾಡು ಪೈಸಾರಿ ನಿವಾಶಿ ಜಿ.ಶಿಲ್ಪರವರು ದಿನಾಂಕ: 11-05-2014 ರಂದು ಹಾಕತ್ತೂರು ಗ್ರಾಮದ ಕತ್ತಲೆಕಾಡು ಪೈಸಾರಿಯ ನಿವಾಸಿ ಕುಮಾರ ರವರ ಮಗ ಶಿವ ಟಿ.ಕೆ. ರವರನ್ನು ಮದುವೆಯಾಗಿದ್ದು, ಮದುವೆಯಾದ 18 ದಿನಗಳು ಕಳೆದು ಶಿವರವರು ಉದ್ಯೋಗದ ನಿಮಿತ್ತ ಸೌದಿ ಅರೇಬಿಯಾಕ್ಕೆ ಹೋಗಿದ್ದು, ನಂತರ ದಿನಾಂಕ: 06-06-2015 ರಂದು ಸೌದಿಯಿಂದ ಕೆಲಸ ಬಿಟ್ಟು ವಾಪಾಸ್ಸು ಮನೆಗೆ ಬಂದಿದ್ದು,  ನಂತರದ ದಿನಗಳಲ್ಲಿ  ಪತಿ ಪ್ರತಿ ನಿತ್ಯ ಮದ್ಯಪಾನ ಮಾಡಿಕೊಂಡು ಬಂದು ಮದ್ಯದ ಅಮಲಿನಲ್ಲಿ ವಿನಾ ಕಾರಣ ಪತ್ನಿ ಶಿಲ್ಪರವರೊಂದಿಗೆ ಜಗಳ ತೆಗೆದು ಹೊಡೆದು ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ: 10-09-2015 ರಂದು ರಾತ್ರಿ 9-00 ಶಿವನು ಶಿಲ್ಪರವರೊಂದಿಗೆ ಜಗಳ ತೆಗೆದು ಕೈಯಿಂದ ತಲೆಗೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ 
                  ಖಾಸಗಿ ಬಸ್‌ ನಿರ್ವಾಹಕರೊಬ್ಬರ ಮೇಲೆ ಮೂವರು ಹಲ್ಲೆ ಮಾಡಿದ ಘಟನೆ ಶನಿವಾರಸಂತೆ ಬಳಿಯ ಗುಡುಗಳಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 11-09-2015 ರಂದು ಬೆಳಿಗ್ಗೆ ಸಮಯ ಎಸ್‌ಜಿಆರ್‌ಎಂಎಸ್‌ ಬಸ್‌ನಂ ಕೆಎ-12-ಬಿ-0750 ರ ಖಾಸಗಿ ಬಸ್ಸಿನ  ನಿರ್ವಾಹಕನಾದ ಅಶುಕುಮಾರ್‌ ಎಂಬವರು ಬಸ್ಸನ್ನು ಗುಡುಗಳಲೆಯ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮಡಿಕೇರಿ ಕಡೆ ಹೋಗಲು ಬಸ್‌ನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಂತೆಯೇ ಕೊಡ್ಲಿಪೇಟೆ ಕಡೆಯಿಂದ ಬಂದ ಇನ್ನೊಂದು ಖಾಸಗಿ ಬಸ್‌ ಸಂಖ್ಯೆ ಕೆಎ-19-ಸಿ-4977ರ ಬಸ್ಸಿನ ಚಾಲಕ ಗಿರೀಶನು ಅಶುಕುಮಾರ್‌ರವರ  ಬಸ್ಸನ್ನು ಅಡ್ಡಗಟ್ಟಿ ಮುಂದೆ ಹೋಗದಂತೆ ನಿಲ್ಲಿಸಿ, ಗಿರೀಶ್‌ರವರ ಬಸ್ಸಿನ  ನಿರ್ವಾಹಕ ರಾಮಕೃಷ್ಣರವರು ಅಶುಕುಮಾರ್‌ರವರನ್ನು ಅಶ್ಲೀಲ ಶಬ್ದಗಳಿಂದ ಬೈದಿದ್ದು,  ಬಸ್ಸಿನ ಏಜೆಂಟ್‌ ದಿನೇಶ್‌ರವರು ಸಹ ಅಶಕುಮಾರ್‌ರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಕೆರೆಗೆ ಹಾರಿ ವ್ಯಕ್ತಿಯ ಆತ್ಮಹತ್ಯೆ
                   ಮಾನಸಿಕ ಅಸ್ವಸ್ಥನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಘಟನೆ ಕುಟ್ಟ ಬಳಿಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 09/09/2015ರಿಂದ 11/09/2015ರ ನಡುವೆ ಬಾಡಗ ಗ್ರಾಮದ ನಿವಾಸಿ ಭೋಜಿ ಎಂಬಾಕೆಯ ಪತಿ ಚಂದ್ರ ಎಂಬವರು  ನಾಲ್ಕೇರಿ ಗ್ರಾಮದ ನಿವಾಸಿ ಕೆ.ಎಸ್‌.ತಮ್ಮಯ್ಯ ಎಂಬವರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಭೋಜಿರವರು ಕುಟ್ಟ ಠಾಣೆಯಲ್ಲಿ ದೂರು ನೀಡಿದ್ದು, ಚಂದ್ರರವರು ಮಾನಸಿಕ ಅಸ್ವಸ್ಥರಾಗಿದ್ದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆನ್ನಲಾಗಿದೆ. ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಮಹಿಳೆಯ ಮೇಲೆ ಹಲ್ಲೆ
                 ವಿಧವೆ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕುಶಾಲನಗರ ಬಳಿಯ ಕೂಡಿಗೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 11/09/2015ರಂದು ಕೂಡಿಗೆ ನಿವಾಸಿ ವಿಧವೆ ಮಹಿಳೆ ವಿಜಯ ಎಂಬಾಕೆಯು ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪಕ್ಕದ ಮನೆ ನಿವಾಸಿ ಪರಮೇಶ ಎಂಬಾತನು ಏಕಾ ಏಕಿ ಬಂದು ವಿಜಯರವರನ್ನು ಎಳೆದಾಡಿ ಹಲ್ಲೆ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದು, ವಿಜಯರವರು ಕಿರುಚಿಕೊಂಡಾಗ ಅಕ್ಕ ಪಕ್ಕದ ಮನೆಯವರುಬರುವ ವೇಳೆಗೆ ಪರಮೇಶನು ಕೂಗಾಡಿದರೆ ಕೊಲ್ಲುವುದಾಗಿ ಬೆದರಿಸಿ ಓಡಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ,.

Friday, September 11, 2015

ರಿಕ್ಷಾ ಡಿಕ್ಕಿ ಮಗುವಿಗೆ ಗಾಯ:

       ಸೋಮವಾರಪೇಟೆ ತಾಲೋಕು ಮಾದಾಪುರ ಗ್ರಾಮದ ಕಾರೆಕಾಡು ನಿವಾಸಿ ಲತೀಫ ಪಿರ್ಯಾದಿ ಯವರು ದಿನಾಂಕ 9-9-2015 ರಂದು ತನ್ನ ಅಳಿಯ ಇಬ್ರಾಹಿಂ ಸೀದಿ ರವರ ಮನೆಗೆ ಹೋಗಿದ್ದು ಸಮಯ 06:30 ಪಿ.ಎಂ ಗೆ ಇಬ್ರಾಹಿಂ ಸೀದಿರವರ ಮಗ ಮನೆಯ ಮುಂದೆ ಅಳುತ್ತಿರುವ ಶಬ್ದ ಕೇಳಿ ಇಬ್ರಾಹಿಂ ರವರೊಂದಿಗೆ ಹೋಗಿ ನೋಡಿದಾಗ ರಸ್ತೆಯ ಬದಿಯಲ್ಲಿ ಅಟವಾಡುತ್ತಿದ್ದ ಇಬ್ರಾಹಿಂ ಸೀದಿರವರ ಮಗ ಮೂರುವರೆ ವರ್ಷದ ಮಹಮದ್ ಶಾಹಿದ್ ಗೆ ಗರ್ವಾಲೆ ಕಡೆಯಿಂದ ಬರುತ್ತಿದ್ದ ಕೆಎ 12 ಎ 5965 ರ ಅಟೋ ಚಾಲಕ ರಾಜ ಎಂಬ ವ್ಯಕ್ತಿ ಸದರಿ ಆಟೋ ರಿಕ್ಷಾವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಗುವಿಗೆ ಡಿಕ್ಕಿ ಪಡಿಸಿದ್ದು ಮಗುವಿನ ಬಲಕಾಲಿಗೆ ರಕ್ತಗಾಯವಾಗಿರುತ್ತದೆ ಮಗುವನ್ನು ಚಿಕಿತ್ಸೆ ಬಗ್ಗೆ ಮದಾಪುರಕ್ಕೆ ತೋರಿಸಿ ನಂತರ ಮಂಗಳೂರಿಗೆ ಕರೆದುಕೊಂಡು ಹೋಗಿದ್ದು ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕ ರಣ ದಾಖಲಿಸಿ ಪೊಲೀಸ ರು ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಕಾಣೆ:

    ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಚೆರಿಯ ಚೆಂಬು ನಿವಾಸಿ ಬಿ.ಎ. ಮೂಸಾ ಎಂಬವರ ಮಗಳಾದ ಸಹೀರ ಎಂಬುವಳು ದಿನಾಂಕ 7-9-2015 ರಿಂದ ಕಾಣೆಯಾಗಿದ್ದು, ಈ ಸಂಬಂಧ ಮೂಸಾ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Thursday, September 10, 2015

ವಿನಾಕಾರಣ ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ:

    ಮಡಿಕೇರಿ ನಗರದ Red Fern ಹೊಟೇಲ್ ಬಳಿ ವಾಸವಿರುವ ಸಿ.ಎ. ನವೀನ್ ಎಂಬವರು ದಿನಾಂಕ 08-09-2015 ರಂದು ಸಮಯ 11.00 ಗಂಟೆಗೆ ಬಾರ್‌ನಿಂದ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ಹೋಗುತ್ತಿರುವಾಗ ಸ್ವಾಗತ್‌ ಡೆಕೋರೇಟರ್ಸ್‌ನ ಮುಂಬಾಗದ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ದೀಪಕ್‌, ಸ್ಟ್ಯಾನ್ಲಿ ಮತ್ತು ಇತರ 3 ವ್ಯಕ್ತಿಗಳ ಪೈಕಿ ಒಬ್ಬ ಹಾಯ್‌ ಎಂದಾಗ ತಿರುಗಿ ನೋಡಿದಾಗ ಏನೋ ಗುರಾಯಿಸುತ್ತೀಯ ಎಂದು ಹೇಳಿ ನವೀನವರನ್ನು ತಡೆದು ನಿಲ್ಲಿಸಿ ದೀಪಕ್ ಎಂಬುವನು ಕಲ್ಲಿನಿಂದ ತಲೆಯ ಹಿಂಬಾಗಕ್ಕೆ ಹೊಡೆದು ಗಾಯಪಡಿಸಿ ಜೊತೆಯಲ್ಲಿದ್ದವರು ಅವರ ಶರೀರದ ಭಾಗಕ್ಕೆ ಹೊಡೆದು ನೋವುಂಟುಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ:

    ನಾಪೋಕ್ಲು ನಗರದ ಬಸ್‌ ತಂಗುದಾಣದ ಶೌಚಾಲಯದ ಬಳಿ ಒಬ್ಬ ಅಪರಿಚಿತ ಗಂಡಸು ಸತ್ತು ಬಿದ್ದಿರುವುದು ಕಂಡು ಬಂದಿದ್ದು , ಅಂದಾಜು 55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವವಾಗಿದ್ದು ಈತನ ಬಗ್ಗೆ ವಿಚಾರಿಸಿದಾಗ ಗುರುತು ವಿಳಾಸ ಪತ್ತೆಯಾಗದೇ ಇದ್ದು, ನಾಪೋಕ್ಲು ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ರಸ್ತೆ ಬದಿಯಲ್ಲಿ ನಿಲ್ಲಿಸಿದ ಮೋಟಾರ್ ಸೈಕಲ್ ಕಳವು:

    ವಿರಾಜಪೇಟೆ ತಾಲೋಕು, ಇಂಜಿಲಗೆರೆ ಗ್ರಾಮದ ನಿವಾಸಿ ಪಿ.ಎಂ. ಮಧುಕುಮಾರ್ ಎಂಬವರು ದಿನಾಂಕ 7-9-2015 ರಂದು ತಮ್ಮ ಬಾಪ್ತು ಮೋಟಾರ್ ಸೈಕಲನ್ನು ಅಮ್ಮತ್ತಿನಗದಲ್ಲಿರುವ ಡಾ: ಬೋಪಣ್ಣ ನವರ ಕ್ಲೀನಿಕ್ ಬಳಿ ನಿಲ್ಲಿಸಿ ಹೋಗಿದ್ದು, ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, September 9, 2015

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ಮಡಿಕೇರಿ ತಾಲೋಕು ನೆಲಜಿ ಗ್ರಾಮದ ನಿವಾಸಿ ಮಾಳೆಯಂಡ ಅಪ್ಪಚ್ಚು ರವರು ದಿನಾಂಕ 07-09-2015 ರಂದು ಸಮಯ 7-00 ಪಿ.ಎಂ.ಗೆ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ನಾಪೋಕ್ಲು ನಗರದ ಕೆನರಾ ಬ್ಯಾಂಕ್‌ ಎದುರುಗಡೆ ಅಯ್ಯಂಗಾರ್‌ ಬೇಕರಿಯಲ್ಲಿ ಕಾಫಿ ಕುಡಿಯಲು ಹೋದಾಗ ಅವರ ಕುಟುಂಬದವರೇ ಆದ ಮಾಳೆಯಂಡ ಗಣಪತಿ @ ಗೌರವ್‌ರವರು ಅಪ್ಪಚ್ಚರವರನ್ನು ತಡೆದು ನಿಲ್ಲಿಸಿ ಪೊಲೀಸ್ ಕಂಪ್ಲೆಟ್‌ ನೀಡಿದ ವಿಚಾರದಲ್ಲಿ ಏಕಾ ಏಕಿ ಜಗಳ ತೆಗೆದು ಕೈಯಿಂದ ಮುಖಕ್ಕೆ ಹೊಡೆದು ಇನ್ನೋಬ್ಬ ಸುತನ್ ಬೋಜಪ್ಪ ಎಂಬುವನು ಸೊಂಟಕ್ಕೆ ಹೊಡೆದಿರುವುದಾಗಿ ಅಲ್ಲದೆ ಗೌರವ್‌ ಕತ್ತಿಯನ್ನು ತೆಗೆದುಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಮ್ಯಾಕ್ಸಿಮೋ ವಾಹನ ಡಿಕ್ಕಿ ಪಾದಾಚಾರಿಗೆ ಗಾಯ: 

     ಪಾದಾಚಾರಿಯೊಬ್ಬರಿಗೆ ಮ್ಯಾಕ್ಸಿಮೋ ವಾಹನವೊಂದು  ಡಿಕ್ಕಿಯಾಗಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಹುಲುಸೆ ಗ್ರಾಮದಲ್ಲಿ ನಡೆದಿದೆ.   ಸೋಮವಾರಪೇಟೆ ತಾಲೋಕು ಹುಲುಸೆ ಗ್ರಾಮದ ನಿವಾಸಿ 67 ವರ್ಷ ಪ್ರಾಯದ ಚನ್ನಯ್ಯ ಎಂಬವರು ದಿನಾಂಕ 8-9-2015 ರಂದು ಬೆಳಿಗ್ಗೆ 9-45 ಗಂಟೆಯ ಸಮಯದಲ್ಲಿ ಗುಡುಗಳಲೆ ಸಾರ್ವಜನಿಕ ರಸ್ತೆಯಲ್ಲಿ ನ ಡೆದುಕೊಂಡು ಹೋಗುತ್ತಿದ್ದಾದ ಸಂತೋಷ ಎಂಬ ವ್ಯಕ್ತಿ ಕೆಎ-12 ಎ-9776 ಸಂಖ್ಯೆ ಮ್ಯಾಕ್ಸಿಮೋ ಪ್ಲಸ್‌ ವಾಹನವನ್ನು ಅತೀ ವೇಗ ಮತ್ತು ಅಜಾಜರೂಕತೆಯಿಂದ ಚಾಲಿಸಿಕೊಂಡು ಬಂದು ಚನ್ನಯ್ಯನವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡು ಚಿಕಿತ್ಸೆ ಸಂಬಂಧ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲುಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

Tuesday, September 8, 2015

ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ
                   ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕರಿವ ಘಟನೆ ಕರ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 07/09/2015ರಂದು ಕರ್ಣಂಗೇರಿ ನಿವಾಸಿ ವಿಕ್ಟರ್‌ ಡಿಸೋಜಾ ಎಂಬವರು ಅವರ ಆಟೋ ರಿಕ್ಷಾದಲ್ಲಿ ಮಡಿಕೇರಿ ಕಡೆಗೆ ಬರುತ್ತಿರುವಾಗ ರಾಜ ರಾಜೇಶ್ವರಿ ದೇವಸ್ಥಾನದ ಕಮಾನಿನ ಬಳಿ ಶಶಿಕುಮಾರ್‌ ಎಂಬವರು ಮೋಟಾರು ಸೈಕಲಿನಲ್ಲಿ ಬಂದು ವಿಕ್ಟರ್‌ ಡಿಸೋಜಾರವರ ರಿಕ್ಷಾಕ್ಕೆ ಡಿಕ್ಕಿ ಪಡಿಸಿದ್ದು ವಿಕ್ಟರ್‌ ಡಿಸೋಜಾರವರು ರಿಕ್ಷಾ ನಿಲ್ಲಿಸಿ ನೋಡುತ್ತಿರುವಾಗ ಶಶಿಕುಮಾರ್‌ರವರು ಏಕಾ ಏಕಿ ವಿಕ್ಟರ್‌ರವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಂಬಿಸಿ ಅತ್ಯಾಚಾರ
                     ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಘಟನೆ ಸಂಪಾಜೆ ಬಳಿಯ ಚೆಂಬು ಗ್ರಾಮದಲ್ಲಿ ನಡೆದಿದೆ. ಚೆಂಬು ಗ್ರಾಮದ ಅನಿತ ಕುಮಾರಿ ಎಂಬ ಯುವತಿಯು ತನ್ನ ಸಂಬಂಧಿ ಹಾಗೂ ನೆರೆಮನೆಯವನಾದ ಓಂಪ್ರಕಾಶ್‌ ಎಂಬಾತನನ್ನು ಪ್ರೀತಿಸುತ್ತಿದ್ದು, ಓಂಪ್ರಕಾಶನು ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಒಂದು ವರ್ಷದಿಂದ ಆಕೆಯೊಂದಿಗೆ ದೈಕಿಕ ಸಂಪರ್ಕವನ್ನು ಹೊಂದಿದ್ದು ಆಕೆ ಗರ್ಭಿಣಿಯಾದ ನಂತರ ಮದುವೆಯಾಗಲು ನಿರಾಕರಿಸಿ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಜೀಪು ಡಿಕ್ಕಿ.
                     ಮೋಟಾರು ಬೈಕೊಂದಕ್ಕೆ ಜೀಪು ಡಿಕ್ಕಿಯಾದ ಘಟನೆ ಸೋಮವಾರಪೇಟೆ ಬಳಿಯ ಬಜೆಗುಂಡಿಯಲ್ಲಿ ನಡೆದಿದೆ. ದಿನಾಂಕ 7/09/2015ರಂದು ಸೋಮವಾರಪೇಟೆಯ ಎಂ.ಡಿ.ಬ್ಲಾಕ್‌ ನಿವಾಸಿ ರವಿ ಎಂಬವರು ಅವರ ಕೆಎ-12-ಎಲ್‌-4561ರ ಮೋಟಾರು ಬೈಕಿನಲ್ಲಿ ಬಜೆಗುಮಡಿಗೆ ಹೋಗಿ ವಾಪಾಸು ಬರುತ್ತಿರುವಾಗ ಎದುರುಗಡೆಯಿಂದ ಕೆಎ-12-ಎ-5720ರ ಪಿಕ್‌ಅಪ್‌ ಜೀಪನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರವಿಯವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ರವಿಯವರಿಗೆ ಗಾಯಗಳಾಗಿ ಬೈಕಿಗೆ ಹಾನಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ವ್ಯಕ್ತಿಯ ಸಾವು
                       ವೃದ್ದ ವ್ಯಕ್ತಿಯೊಬ್ಬರು ನಾಲೆಗೆ ಬಿದ್ದು ಮೃತರಾಗಿರುವ ಘಟನೆ ಕುಶಾಲನಗರ ಬಳಿಯ ಹುದುಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 06/09;/2015ರಂದು ಕೂಡ್ಲೂರು ನಿವಾಸಿ ಆನಂದ ಎಂಬವರ ಮಾವ 60 ವರ್ಷ ಪ್ರಾಯದ ಅಫ್ಪಣ್ಣಿ ಎಂಬವರು ತಿರುಗಾಡಿಕೊಂಡು ಬರಲು ಹೋದವರು ಮನೆಗೆ ಬಾರದೆ ಇದ್ದು ದಿನಾಂಕ 07/09/2015ರಂದು ಅವರ ಶವವು ಹಾರಂಗಿ ನಾಳೆಯಲ್ಲಿ ತೇಲುತ್ತಿರುವುದನ್ನು ಗ್ರಾಮಸ್ಥರು ಕಂಡು ಆನಂದರವರಿಗೆ ತಿಳಿಸಿದ್ದು ಕಾಯಿಲೆಯಿಂದ ಬಳಲುತ್ತಿದ್ದ ಅಪ್ಪಣ್ಣಿಯವರು ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದು ಮೃತರಾಗಿರಬಹುದಾಗಿ ಶಂಕಿಸಲಾಗಿದೆ. ಈ ಸಂಬಂಧ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ, ಗುಂಡು ಹೊಡೆದು ವ್ಯಕ್ತಿಯ ಹತ್ಯೆ
                           ಆಸ್ತಿ ವಿವಾದದ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಗುಂಡು ಹೊಡೆದು ಕೊಲೆ ಮಾಡಿರುವ ಘಟನೆ ಗೋಣಿಕೊಪ್ಪ ಬಳಿಯ ಕುಟ್ಟಂದಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 07/09/2015ರಂದು ಕುಟ್ಟಂದಿ ನಿವಾಸಿ ಚೇರಂಡ ಸಾಬು ನಾಣಯ್ಯ ಎಂಬವರು ಸ್ಕೂಟರಿನಲ್ಲಿ ತೋಟಕ್ಕೆ ಹೋಗುತ್ತಿರುವಾಗ ಸಾಬು ನಾಣಯ್ಯನವರ ಸೋದರನ ಮಗ ಮೋಹನ್‌ ಎಂಬಾತನು ಸಾಬು ನಾಣಯ್ಯನವರಿಗೆ ಗುಂಡು ಹೊಡೆದು ಕೊಲೆ ಮಾಡಿದ್ದು, ಆಸ್ತಿ ಸಂಬಂಧ ಇದ್ದ ಹಳೆ ವೈಷಮ್ಯವೇ ಕೃತ್ಯಕ್ಕೆ ಕಾರಣವೆನ್ನಲಾಗಿದೆ. ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, September 7, 2015

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
                         ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಬಳಿಯ ನೆಲ್ಲಿ ಹುದಿಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 06/09/2015ರಂದು ನೆಲ್ಲಿ ಹುದಿಕೇರಿ ನಿವಾಸಿ ಕೃಷ್ಣನ್ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಮುಂದಿನ ಹಾಲ್‌ನ ಪೈಪಿಗೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮೃತ ಕೃಷ್ಣನ್‌ರವರು ಅತೀವ ಮದ್ಯಪಾನ ಮಾಡುತ್ತಿದ್ದು ಮನೆಯವರು ಅದನ್ನು ಆಕ್ಷೇಪಿಸುತ್ತಿದ್ದುದೇ ಆತ್ಮಹತ್ಯೆಗೆ ಕಾರಣವಾಗಿರಬಹುದಾಗಿ ದೂರಿನಲ್ಲಿ ತಿಳಿಸಲಾಗಿದೆ. 

ಮಹಿಳೆಯೊಂದಿಗೆ ಅನುಚಿತ ವರ್ತನೆ
                       ಉದ್ಯೋಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಮಡಿಕೇರಿಯಲ್ಲಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಹಾಲಿ ಅಧ್ಯಕ್ಷರಾದ ಬಿ.ಎಸ್‌.ತಮ್ಮಯ್ಯನವರು ಅದೇ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿರುವ ಕುಸುಮ ಕುಮಾರಿ ಎಂಬವರೊಂದಿಗೆ ಕಳೆದ ಒಂದು ವರ್ಷದಿಂದ ಅನುಚಿತವಾಗಿ ವರ್ತಿಸುತ್ತಿದ್ದು, ಅನೈತಿಕ ಸಂಬಂಧಕ್ಕೆ ಆಹ್ವಾನಿಸುತ್ತಿದ್ದು ಕುಸುಮ ಕುಮಾರಿಯವರು ನಿರಾಕರಿಸಿದ ಕಾರಣಕ್ಕೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
                     ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಬಳಿಯ ಚೆನ್ನನಕೋಟೆಯಲ್ಲಿ ನಡೆದಿದೆ. ದಿನಾಂಕ 06/09/2015ರ ರ ರಾತ್ರಿ ವೇಳೆ ಚೆನ್ನನಕೋಟೆ ನಿವಾಸಿ ಸುರೇಶ ಎಂಬ ಯುವಕ ಮನೆಯ ಮಾಡಿನ ಕೌಕೋಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನು ಜಗಳವಾಡಿದ ಪರಿಣಾಮ ಅವನ ಪತ್ನಿ ತವರಿಗೆ ಹೋದ ಬಗ್ಗೆ ಬೇಸರಗೊಂಡು ಸುರೇಶನು ಆತ್ಮಹತ್ಯೆ ಮಾಡಿಕೊಂಡಿರಬಹುದೆನ್ನಲಾಗಿದೆ. ಘಟನೆಯ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, September 6, 2015

ಬೆಂಕಿ ಆಕಸ್ಮಿಕ, ಮಹಿಳೆ ಸಾವು
              ಪಿರಿಯಾಪಟ್ಟಣ ನಿವಾಸಿ ಶಿವರಾಜು ಎಂಬವರ ಮಗಳು ವಿನುತಳನ್ನು ಸುಮಾರು 15 ವರ್ಷಗಳ ಹಿಂದೆ ಕುಶಾಲನಗರ ಸಮೀಪದ ಅಳುವಾರ ಗ್ರಾಮದ ಮೂರ್ತಿಯವರಿಗೆ ಮದುವೆ ಮಾಡಿಕೊಟ್ಟಿದ್ದು, ದಿನಾಂಕ 31/08/2015 ರಂದು ರಾತ್ರಿ ಮನೆಯಲ್ಲಿ ಅಡುಗೆ ಮಾಡಲು ಅಡುಗೆ ಅನಿಲ ಖಾಲಿಯಾದ್ದರಿಂದ ಸೀಮೆ ಎಣ್ಣೆಯಿಂದ ಬೇರೆ ಸ್ಟೌನಲ್ಲಿ ಬೆಂಕಿ ಹಚ್ಚಿಸಿ ಅಡುಗೆ ಮಾಡುವಾಗ ಪಕ್ಕದ ಗೋಡೆಯ ಮೇಲಿದ್ದ ಸೀಮೆ ಎಣ್ಣೆ  ದೀಪ ಆಕಸ್ಮಿಕವಾಗಿ ಸ್ಟೌ ಮೇಲೆ ಬಿದ್ದಾಗ ಸೀಮೆ ಎಣ್ಣೆ ಸ್ಟೌ ಗೆ ಬೆಂಕಿ ಹತ್ತಿಕೊಂಡಿದ್ದು ವಿನುತರವರ ನೈಟಿಗೆ ಬೆಂಕಿ ತಾಗಿ ಗಾಯಗೊಂಡಿದ್ದು ಅಳಿಯ ಹಾಗು ಅಕ್ಕಪಕ್ಕದವರು ಕುಶಾಲನಗರ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೆ ಆರ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ವಿನುತಳಿಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 05/09/2015 ರಂದು ಮೃತ ಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                  ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಘಟನೆ ವಿರಾಜಪೇಟೆ ಬಳಿಯ ಬಿಳುಗುಂದ ಗ್ರಾಮದಲ್ಲಿ ನಡೆದಿದೆ. ಬಿಳುಗುಂದ ಗ್ರಾಮದ ವಾಸಿ ಹೆಚ್‌.ಬಿ.ಉತ್ತಪ್ಪ ಎಂಬವರು ಅದೇ ಗ್ರಾಮದ ಕರಿಮುಲ್ಲಾ ಖಾನ್ ರವರ ಕಾಫಿ ತೋಟದಲ್ಲಿ ಖಾಯಂ ಕೂಲಿ ಕೆಲಸ, ಮಾಡಿ ಕೊಂಡಿದ್ದು, ದಿನಾಂಕ: 05-09-15ರಂದು ಚೆಂಬೆಬೆಳ್ಳೂರು ಗ್ರಾಮದಿಂದ ಗೂಡ್ಸ್ ಆಟೋ ರಿಕ್ಷಾದಲ್ಲಿ ಸೌದೆ ತೆಗೆದು ಕೊಂಡು ಬಿಳುಗುಂದ ಗ್ರಾಮದ ವಾಸಿ ಪ್ರವೀಣರವರ ಮನೆಯ ಹತ್ತಿರ ಖಾಲಿ ಜಾಗದಲ್ಲಿ ಸೌದೆಯನ್ನು ಇಳಿಸಿ ನಂತರ ಸೌದೆಯನ್ನು ಪ್ರವೀಣರವರ ಮನೆಗೆ ಸಾಗಿಸಿಕೊಂಡಿರುವಾಗ, ಸಂಜೆ ಸಮಯ ಉತ್ತಪ್ಪನವರು ಕೆಲಸ ಮಾಡುವ ತೋಟದ ರೈಟರ್ ರವರ ಮಗ ಬೇಟು ಎಂಬವರು ಹತ್ತಿರ ಬಂದು ಅವಾಚ್ಯ ಪದಗಳಿಂದ ಕೊಡವ ಭಾಷೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಉತ್ತಪ್ಪನವರಿಗೆ ಬೈದು ಜಾತಿಯನ್ನು ನಿಂದಿಸಿ, ಅಲ್ಲೇ ಇದ್ದ ಸೌದೆ ತುಂಡನ್ನು ತೆಗೆದು ಕೊಂಡು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಳೆ ವೈಷಮ್ಯ, ಕತ್ತಿಯಿಂದ ಕಡಿದು ಹಲ್ಲೆ
               ಹಳೆ ವೈಷಮ್ಯದಿಂದಾಗಿ ವ್ಯಕ್ತಿಯೊಬ್ಬರ ಮೇಲೆ ಕತ್ತಿಂದ ಕಡಿದು ಕೊಲೆ ಯತ್ನ ಮಾಡಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 05-9-2015 ರಂದು ಸಂಜೆ ವೇಳೆ ಚೇಂದ್ರಿಮಾಡ ಲೋಕೇಶ್‌ ಎಂಬವರು ಹೊಸ ಬಡಾವಣೆಯಲ್ಲಿ ವಾಸವಿರುವ ತನ್ನ ತಂದೆ ತಾಯಿಯವರನ್ನು ನೋಡಲು ತೆರಳಿದ್ದು, ಆ ಮನೆಯ ಇನ್ನೊಂದು ಭಾಗದಲ್ಲಿ ವಾಸವಿರುವ ಲೋಕೇಶ್‌ರವರ ತಂಗಿ ಕವಿತಳ ಗಂಡ  ಅಭಿ ಎಂಬಾತನು ಹಳೆ ವೈಷಮ್ಯದಿಂದ, ಲೋಕೇಶ್‌ರವರನ್ನು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಮಾಡುವ ಉದ್ದೇಶದಿಂದ ತನ್ನ ಮನೆಯೊಳಗಿನಿಂದ ಕತ್ತಿಯನ್ನು ತಂದು ಲೋಕೇಶ್‌ರವರಿಗೆ ಕಡಿದು ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಲು ಜಾರಿ ಹೊಳೆಗೆ ಬಿದ್ದು ಬಾಲಕಿ ಸಾವು
                    ಹೊಳೆ ದಾಟುವಾಗ ಕಾಲು ಜಾರಿ ಹೊಳೆಗೆ ಬಿದ್ದು ಬಾಲಕಿ ಸಾವಿಗೀಡಾದ ಘಟನೆ ಬಾಳೆಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 03/09/2015 ರಂದು ಕುರ್ಚಿ ಗ್ರಾಮದ ನಿವಾಸಿ ಪಣಿ ಎರವರ ಮಣಿ ಎಂಬವರ ಮಗ ಗಣೇಶ ಮತ್ತು ಮಗಳು ಚೀತೆರವರು ಬಾಳೆಲೆಯ ತಾಣಚೀರ ಲೋಕೇಶ ಎಂಬವರ ಲೈನ್ ಮನೆಯಲ್ಲಿ ವಾಸ ಮಾಡಿಕೊಂಡಿರುವ ಅವರ ಅಜ್ಜಿ ಮನೆಗೆ ಬಂದಿದ್ದು, ಅದೇ ದಿನ ರಾತ್ರಿ 8.00 ಗಂಟೆಗೆ ಬಾಳೆಲೆಯ ತಾಣಚೀರ ಲೋಕೇಶ ರವರು ಮಣಿರವರ ಮಾಲೀಕರಾದ ಅಜ್ಜಮಾಡ ಹ್ಯಾರಿರವರಿಗೆ ದೂರವಾಣಿ ಕರೆ ಮಾಡಿ ಮಣಿರವರ ಮಗಳು ಚೀತೆ ಎಂಬವಳು ಬಾಳೆಲೆಯಲ್ಲಿ ಲಕ್ಷ್ಮಣ ತೀರ್ಥ ಹೊಳೆಯಲ್ಲಿ ಹೊಳೆ ದಾಟುವಾಗ ಕಾಲು ಜಾರಿಬಿದ್ದು ಕೊಚ್ಚಿಕೊಂಡು ಹೋಗಿರುವುದಾಗಿ ತಿಳಿದಿದ್ದು, ಹ್ಯಾರಿರವರು ವಿಚಾರವನ್ನು ಮಣಿರವರಿಗೆ ತಿಳಿಸಿದ್ದು ಮಣಿರವರು ಕೂಡಲೆ ಬಾಳೆಲೆಗೆ ಬಂದು ಅವರ ಮಗಳು ಚೀತೆ ಹೊಳೆಯಲ್ಲಿ ಕಾಲುಜಾರಿ ಬಿದ್ದ ಜಾಗದಲ್ಲಿ ಹಾಗೂ ಹೊಳೆಯಲ್ಲಿ ಮುಂದಕ್ಕೆ ಹುಡುಕಾಡಿ ಪತ್ತೆಯಾಗಿರುವುದಿಲ್ಲ. ನಂತರ ದಿನಾಂಕ 05/09/2015 ರಂದು ಮಣಿ ಮತ್ತು ಅವರ ಸಂಬಂಧಿಕರು ಚೀತೆಗಾಗಿ ಲಕ್ಷ್ಮಣ ತೀರ್ಥ ಹೊಳೆಯಲ್ಲಿ ಹುಡುಕಾಡುತ್ತಿದ್ದಾಗ ಬೆಳಿಗ್ಗೆ ಸಮಯ 9.30 ಗಂಟೆಗೆ ಆಕೆಯು ಕಾಲುಜಾರಿ ಬಿದ್ದ ಜಾಗದಿಂದ ಸುಮಾರು 1 ಕಿ.ಮೀ ಮುಂದಕ್ಕೆ ಮಣಿರವರ ಮಗಳು ಚೀತೆಯ ಮೃತದೇಹವು ಹೊಳೆಯಲ್ಲಿ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್‌ ಅವಘಢ, ವ್ಯಕ್ತಿಗೆ ಗಾಯ
               ಚಲಿಸುತ್ತಿರುವ ಬಸ್ಸಿನ ಬಾಗಿಲು ತೆರೆದುಕೊಂಡ ಪರಿಣಾಮ ವ್ಯಕ್ತಿಯೊಬ್ಬರು ಚಲಿಸುತ್ತಿರುವ ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟು ಗಾಯಗೊಂಡಿರುವ ಘಟನೆ ಸಂಪಾಜೆ ಬಳಿಯ ಕೊಯನಾಡು ಬಳಿ ನಡೆದಿದೆ.  ದಿನಾಂಕ: 02-09-2015 ರಂದು ಸುಳ್ಯ ಅಜ್ಜಾವರ ನಿವಾಸಿ ಸುಬ್ರಮಣ್ಯ ಎಂಬವರು ಅವರ ಸ್ನೇಹಿತ ಸುಳ್ಯ ಪರಿವಾರಕಾನದ ಕುಂಞ ಕೃಷ್ಣ ಮತ್ತು ಚೊಕ್ಕಾಡಿರ ಮೋಹನ ಎಂಬುವವರೊಂದಿಗೆ ಸ್ವಂತ ಕೆಲಸದ ನಿಮಿತ್ತ ಕೊಯಮತ್ತೂರಿಗೆ ಹೋಗಿದ್ದು,  ಕೆಲಸ ಮುಗಿಸಿ ವಾಪಾಸ್ಸು ಊರಿಗೆ ಮಡಿಕೇರಿಗೆ ಬಂದು ನಂತರ ಮಧುರೈ-ಮಂಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ಸು ಸಂ: ಕೆಎ-19 ಎಫ್-3298ರಲ್ಲಿ ಮಡಿಕೇರಿಯಿಂದ ಹೊರಟು ಸಮಯ ಸುಮಾರು 8-30 ಗಂಟೆಗೆ ಕೊಯನಾಡು ಶಾಲೆಯ ಬಳಿ ತಲುಪುವಾಗ್ಗೆ ಬಸ್ಸಿನ ಚಾಲಕರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಬಸ್ಸಿನ ಹಿಂಭಾಗದ ಬಾಗಿಲು ತೆರೆದುಕೊಂಡಿದ್ದು, ಬಾಗಿಲ ಬಳಿ ಸೀಟಿನಲ್ಲಿ ಕುಳಿತ್ತಿದ್ದ ಕುಂಞ ಕೃಷ್ಣರು ತೆರೆದ ಬಾಗಿಲ ಮೂಲಕ ಬಸ್ಸಿನಿಂದ ಹೊರಗಡೆ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರಿಗೆ ತೀವ್ರತರದ ಗಾಯಗಳಾಗಿರುವುದಾಗಿನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.Saturday, September 5, 2015

ಬ್ಯಾಂಕ್‌ ಅಧಿಕಾರಿ ಮೇಲೆ ಹಲ್ಲೆ: 

     ಶ್ರೀಮಂಗಲ ಠಾಣಾ ಸರಹದ್ದಿನ ಬಿರುನಾಣಿ ಬ್ಯಾಂಕ್‌ವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಂಕ್‌ ಮ್ಯಾನೇಜರ್‌ ಪಿ.ಆರ್‌. ರವಿಕಾಂತ್‌ ಎಂಬವರ ಮೇಲೆ ದಿನಾಂಕ 3-9-2015 ರಂದು ಬಿರುನಾಣಿ ಗ್ರಾಮದ ನಿವಾಸಿಗಳಾದ ಮತ್ತಣ್ಣ, ಮಾದಪ್ಪ, ಮತ್ತು ದಿನೇಶ್‌ ಎಂಬವರು ಕರ್ತವ್ಯಕ್ಕೆ ಅಡ್ಡಿಪಡಿಸಿಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

ವ್ಯಕ್ತಿಯ ಕೊಲೆ, ಪ್ರಕರಣ ದಾಖಲು:

     ವಿರಾಜಪೇಟೆ ತಾಲೋಕು ನಾಲ್ಕೇರಿ ಗ್ರಾಮದ ಬಣ್ಣಮೊಟ್ಟೆ ಪೈಸಾರಿ ಯಲ್ಲಿ ವಾಸವಾಗಿರುವ ಶ್ರೀಮತಿ ಪಂಜರಿ ಎರವರ ಮಲ್ಲಿ ಎಂಬವರ ಗಂದ ಕಾಳ ಎಂಬವರನ್ನು ದಿನಾಂಕ 3-9-2015 ರಿಂದ 4-9-2015 ರ ಬೆಳಿಗ್ಗೆ 7-00 ಗಂಟೆ ಒಳಗೆ ಯಾರೋ ಯಾವುದೋ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಈ ಸಂಬಂಧ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ವಿನಾಕಾರಣ ವ್ಯಕ್ತಿ ಮೇಲೆ ಮೂವರಿಂದ ಹಲ್ಲೆ:

     ಗೋಣಿಕೊಪ್ಪ ಠಾಣಾ ಸರಹದ್ದಿನ ಕೈಕೇರಿ ಗ್ರಾಮದಲ್ಲಿ ವಾಸವಾಗಿರುವ ಪಿ.ಎಂ. ಗಣೇಶ ಎಂಬವರು ದಿನಾಂಕ 4-9-2015 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ ತಮ್ಮ ಮನೆಯ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ನಿಂತಿದ್ದ ಕಳತ್ಮಾಡು ಗ್ರಾಮದ ನಿವಾಸಿ ಸಚಿನ್‌ ಹಾಗು ಇತರೆ ಮೂರು ಜನರು ಕತ್ತಿ ಮತ್ತು ದೊಣ್ಣೆ ಯಿಂದ ಗಣೇಶರವರ ಮೇಲೆ ಹಲ್ಲೆ ನಡೆಸಿ ರಕ್ತ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಹಳೇ ವೈಷಮ್ಯದಿಂದ ಜಗಳ ಪ್ರತ್ಯೇಕ ಪ್ರಕರಣಗಳು ದಾಖಲು:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಡಗದಾಳು ಗ್ರಾಮದ ನಿವಾಸಿಗಳಾದ ಬಿ.ಎನ್‌. ಕರುಣಾಕರ ಹಾಗು ಎನ್‌. ಮಣಿ ಎಂಬವರ ನಡುವೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಗಳವಾಗಿ ಪರಸ್ಪರ ಹೊಡೆದಾಡಿದ್ದು, ಈ ಸಂಬಂಧ ಇಬ್ಬರು ನೀಡಿದ ದೂರಿನ ಮೇರೆಗೆ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿ ಮಡಿಕೇರಿ ಗ್ರಾಮಾಂಗತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Friday, September 4, 2015

ಕೆಲಸ ನಿರ್ವಹಿಸುವ ವಿಚಾರದಲ್ಲಿ ಬೇಸರಗೊಂಡು ಮಹಿಳೆ ಆತ್ಮಹತ್ಯೆ:

      ಸಿದ್ಧಾಪುರ ಠಾಣಾ ವ್ಯಾಪ್ತಿಯ ಹೊಸೂರು ಗ್ರಾಮದ ಪುದ್ರಿಮೋಡ ಸೋಮಯ್ಯರವರ ಲೈನ್‌ಮನೆಯಲ್ಲಿ ವೈ.ಪಿ. ಚಿಪ್ಪ ಎಂಬವರ ಪತ್ನಿ ಪ್ರಾಯ 35 ವರ್ಷದ ವೈ.ಕೆ. ಗಂಗೆ ಎಂಬುವವಳು ಸಾಹುಕಾರರ ಮನೆಗೆ ಕೆಲಸ ಮಾಡಲು ಹೋಗುವ ವಿಚಾರದಲ್ಲಿ ಗಂಡ ಹೆಂಡತಿ ಮಧ್ಯೆ ಜಗಳವಾಗಿ ಗಂಗೆಯು ಬಾತ್‌ರೂಂನ ಕೌಕೋಲಿಗೆ ವೇಲ್‌ನಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಸಿದ್ದಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ: 

     ನಾಪೋಕ್ಲು ಠಾಣಾ ಸರಹದ್ದಿನ ಎಮ್ಮೆಮಾಡು ನಿವಾಸಿ ಕೆ.ಎ. ಉಮ್ಮರ್‌ ಎಂಬವರು ದಿನಾಂಕ 3-9-2015 ರಂದು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ತಮ್ಮ ಕಾಫಿ ತೋಟಕ್ಕೆ ಹೋಗುತ್ತಿರುವಾಗ ಪಣಿಯಾಣಿ ಗ್ರಾಮದ ನಿವಾಸಿ ಕರೀಂ ಎಂಬ ವ್ಯಕ್ತಿ ಕಾರಿನಲ್ಲಿ ಅಲ್ಲಿಗೆ ಬಂದು ಉಮ್ಮರ್‌ರವರ ದಾರಿ ತಡೆದು ಹಲ್ಲೆ ನಡೆಸಿದ್ದೂ ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕಾರನ್ನು ತಡೆದು ವ್ಯಕ್ತಿ ಹಲ್ಲ, ಕೊಲೆ ಬೆದರಿಕೆ: 

      ಮಡಿಕೇರಿ ತಾಲೋಕು ಪಣಿಯಾಣಿ ಗ್ರಾಮದ ನಿವಾಸಿ ಅಬ್ದುಲ್‌ ಕರೀಂ ಎಂಬವರು ದಿನಾಂಕ 03-09-2015 ರಂದು ನಾಪೋಕ್ಲುವಿನ ಅಂಚೆ ಕಛೇರಿ ಕಡೆಯಿಂದ ತನ್ನ ಮನೆಗೆ ಕಾರ್‌ನಲ್ಲಿ ಹೋಗುತ್ತಿರುವಾಗ್ಗೆ ಎಮ್ಮೆಮಾಡುವಿನ ದರ್ಗಾದ ಎದುರುಗಡೆ ತಲುಪುವಾಗ್ಗೆ ಸಮಯ ಸುಮಾರು 10-15 ಗಂಟೆಗೆ ಎಮ್ಮೆಮಾಡುವಿನ ಅಶ್ರಫ್‌ರವರ ಬೇಕರಿಯ ಬಳಿ ತಾರು ರಸ್ತೆಯಲ್ಲಿ ಆರೋಪಿಗಳಾದ ಪೂಳುಮಾಡಂಡ ಮೊಯ್ದೀನ್ ಕುಂಞ, ಕಾಳೆರ ಉಮ್ಮರ್ ಹಾಗೂ ಚಕ್ಕೆರ ಇಸ್ಮಾಯಿಲ್‌ರವರು ಕಾರನ್ನು ತಡೆದು ನಿಲ್ಲಿಸಿ, ಹಳೆ ವೈಷಮ್ಯದಿಂದ ಜಗಳ ತೆಗೆದು ಮುಖಕ್ಕೆ ಕೈಯಿಂದ ಗುದ್ದಿದ್ದು, ಜೊತೆಯಲ್ಲಿದ್ದ ಮೊಯ್ದೀನ್ ಕುಂಞನು ಅವನ ಕೈಯಲ್ಲಿದ್ದ ದೊಣ್ಣೆಯಿಂದ ಬಲಕೈಯ ಮಣಿಗಂಟಿಗೆ ಹೊಡೆದು ನೋವುಪಡಿಸಿದ್ದು, ಇಸ್ಮಾಯಿಲ್‌ನು ಕೈಯಲ್ಲಿದ್ದ ಕತ್ತಿಯಿಂದ ಕಡಿಯಲು ಯತ್ನಿಸಿ ಕೊಲೆಬೆದರಿಕೆ ಹಾಕಿರುತ್ತಾರೆಂದು ಸದರಿ ಅಬ್ದುಲ್‌ ಕರೀಂ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, September 3, 2015

ಅಪರಿಚಿತ ವ್ಯಕ್ತಿ ಸಾವು:

ಸೋಮವಾರಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಂಬೂರು ಗ್ರಾಮದಲ್ಲಿರುವ ಬಸ್ಸು ತಂಗುದಾಣದಲ್ಲಿ ಸುಮಾರು 50 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ನಿತ್ರಾಣ ಸ್ಥಿತಿಯಲ್ಲಿ ಮಲಗಿರುವುದನ್ನು ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಬೋಜ ಎಂಬವರು ನೋಡಿ ಸದರಿ ನಿತ್ರಾಣಗೊಂಡ ವ್ಯಕ್ತಿಯನ್ನು ಮಾದಾಪುರ ಪೊಲೀಸರ ಸಹಾಯದಿಂದ ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಜಿಕಿತ್ಸೆಗೆ ದಾಖಲಿಸಿದ್ದು, ಸದರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 1-9-2015 ರಂದು ಮೃತಪಟ್ಟಿದ್ದು, ಸೋಮವಾರಪೇಟೆ ಪೊಲೀಸರು ಈ ಸಂಬಂಧಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 
ಕಾರು ಡಿಕ್ಕಿ ಪಾದಾಚಾರಿಗೆ ಗಾಯ:

ಪೊನ್ನಂಪೇಟೆ ಠಾಣಾ ಸರಹದ್ದಿನ ಪೊನ್ನಂಪೇಟೆ ನಗರದ ನಿವಾಸಿ ಬಾಚರಣಿಯಂಡ ಭವಿ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಪಣಿ ಎರವರ ಜೋಗಿ ಎಂಬವರು ದಿನಾಂಕ 1-9-2015 ರಂದು ಸಂಜೆ ಪೊನ್ನಂಪೇಟೆ ನಗರದಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಮಾರುತಿ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದಚಾಲಿಸಿಕೊಂಡುಬಂದು ಸದರಿ ಜೋಗಿಯವರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ತಲೆಯ ಭಾಗಕ್ಕೆಹಾಗು ಶರೀರದ ಇತರ ಭಾಗಕ್ಕೆ ರಕ್ತ ಗಾಯವಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಕ್ಷುಲ್ಲಕ ಕಾರಣ ದೊಣ್ಣೆಯಿಂದ ವ್ಯಕ್ತಿ ಮೇಲೆ ಹಲ್ಲೆ:

ಸೋಮವಾರಪೇಟೆ ಠಾಣಾ ಸರಹದ್ದಿನ ಹರಗ ಗ್ರಾಮದ ನಿವಾಸಿ ಹೆಚ್‌.ಎಂ. ಪ್ರಕಾಶ ಎಂಬವರು ದಿ: 02-09-2015 ರಂದು ಹಗರ ಗ್ರಾಮದಲ್ಲಿ ತಮ್ಮ ಬಾಪ್ಸು ಕಾಫಿ ತೋಟಕ್ಕೆ ಪಕ್ಕದ ಮನೆ ವಾಸಿ ಮಹೇಶ ಎಂಬವರ ದನಗಳನ್ನು ಬಿಟ್ಟಿರುವ ವಿಚಾರದಲ್ಲಿ ವಿಷಯವನ್ನು ಪ್ರಸ್ತಾಪಿದ್ದ ಕಾರಣಕ್ಕೆ ಆರೋಪಿಗಳಾದ ಮಹೇಶ, ರಕ್ಷಿತ್‌ ಮತ್ತು ಜಾನಕಿ ಯವರುಗಳು ನಿನ್ನ ತೋಟಕ್ಕೆ ಕಾಂಪೌಂಡ್‍ ಕಟ್ಟಿಕೊ ಎಂದು ಹೇಳಿ ಜಗಳ ತೆಗೆದು ದೊಣ‍್ಣೆಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ಹೇಳಿಕೆ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.   
ವಿನಾಕಾರಣ ಮಹಿಳೆ ಮೇಲೆ ಕತ್ತಿಯಿಂದ ಹಲ್ಲೆ: 
     ದಿನಾಂಕ 02.09.2015 ರಂದು 20:30 ಗಂಟೆಗೆ ಹೊದ್ದೂರು ಗ್ರಾಮದ ನಿವಾಸಿ ಟಿ.ಎಂ. ಕಾವ್ಯ ಎಂಬವರು ಮತ್ತು ಅವರ ತಾಯಿಯವರು ಮನೆಯಲ್ಲಿ ಊಟ ಮಾಡುತ್ತಿರುವಾಗ ಪಕ್ಕದ ಮನೆಯಲ್ಲಿ ವಾಸವಿರುವ ಆರೋಪಿ ಉತ್ತಪ್ಪ ಎಂಬ ವ್ಯಕ್ತಿ ಏರು ಧ್ವನಿಯಿಂದ ಕಾವ್ಯನವರ ತಾಯಿಗೆ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ಉತ್ತಪ್ಪನನ್ನು ಕುರಿತು ಏಕೆ ನನಗೆ ಬೈಯುತ್ತಿದ್ದೀಯ? ಎಂದು ಕೇಳಿದಾಗ “ಕಾವ್ಯನವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಕಡಿದು ರಕ್ತಗಾಯ ಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Wednesday, September 2, 2015

ಮೋಟಾರ್‌ ಸೈಕಲ್‌ಗೆ ಜೀಪು ಡಿಕ್ಕಿ ಇಬ್ಬರಿಗೆ ಗಾಯ:

     ಜೀಪು ಮತ್ತು ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಸವಾರರಿಬ್ಬರು ಗಾಯಗೊಂಡ ಘಟನೆ ನಾಪೋಕ್ಲು ಸಮೀಪದ ಕುಂಜಿಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 31-08-2015 ರಂದು ಸಮಯ 15-00 ಗಂಟೆಗೆ ಸೋಮವಾರಪೇಟೆ ತಾಲೋಕು ದೊಡ್ಡಮಲ್ತೆ ಗ್ರಾಮದ ನಿವಾಸಿ ಡಿ.ಎಂ. ರಾಜುರವರ ಬಾಪ್ತು ಬೈಕ್ ನಂ ಕೆಎ-09-1916 ನಲ್ಲಿ ಅವರ ಸ್ನೇಹಿತ ವಸಂತರವರೊಂದಿಗೆ ಕಕ್ಕಬೆಯಿಂದ ನಾಪೋಕ್ಲು ಕಡೆಗೆ ಹೋಗುತ್ತಿರುವಾಗ್ಗೆ ಕುಂಜಿಲ ರಾಮಯ್ಯ ಮಾಸ್ಟರ್ ರವರ ಮನೆಯ ಹತ್ತಿರ ಎದುರುಗಡೆಯಿಂದ ಮಹೀಂದ್ರ ಜೀಪು ಸಂಖ್ಯೆ ಕೆಎ-21-ಎಂ-1330 ಬಂದು ಡಿಕ್ಕಿ ಪಡಿಸಿದ ಪರಿಣಾಮವಾಗಿ ಡಿ.ಎಂ. ರಾಜುರವರಿಗೂ ಮತ್ತು ಹಿಂಬದಿ ಸವಾರ ವಸಂತರವರಿಗೂ ತೀವ್ರತರದ ಗಾಯಗಳಾಗಿದ್ದು ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಶಾಲಾ ವಾಹನ ಸ್ಕೂಟಿಗೆ ಡಿಕ್ಕಿ, ಸವಾರನಿಗೆ ಗಾಯ:

      ಶಾಲಾ ವ್ಯಾನ್ ಸ್ಕೈಟಿಗೆ ಡಿಕ್ಕಿಯಾಗಿ ಸವಾರಗಾಯಗೊಂಡ ಘಟನೆ ಸೋಮವಾರಪೇಟೆಯ ಹೊಸಬೀಡು ಎಂಬಲ್ಲಿ ನಡೆದಿದೆ. ದಿನಾಂಕ: 01-09-2015 ರಂದು ಸೋಮವಾಋಪೇಟೆ ತಾಲೋಕು ಹಾನಗಲ್ಲು ಗ್ರಾಮದ ನಿವಾಸಿಹೆಚ್‌.ಆರ್‌ ಧರ್ಮಪ್ಪನವರು ತಮ್ಮ ಬಾಪ್ತು ಕೆಎ-41, ವಿ-3943 ರ ಸ್ಕೂಟಿಯಲ್ಲಿ ಸೋಮವಾರಪೇಟೆ ನಗರದ ಕಡೆಗೆ ಬರುತ್ತಿರುವಾಗ್ಗೆ ಹೊಸಬೀಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಕೆಎ-12, ಬಿ-03050 ರ ಜ್ಞಾನ ವಿಕಾಸ ಶಾಲೆಯ ವ್ಯಾನನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಧರ್ಮಪ್ಪನವರ ಸ್ಕೂಟಿಗೆ ಡಿಕ್ಕಿ ಪಡಿಸಿದ ಪರಿಣಾಮ ಧರ್ಮಪ್ಪನವರ ತಲೆಗೆ ಬಲಗೈಗೆ ಹಾಗೂ ಸೊಂಟಕ್ಕೆ ಗಾಯವಾಗಿರುವುದಾಗಿ ನೀಡಿದ ದೂರಿನಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮೊಬೈಲ್‌ ವಿಚಾರದಲ್ಲಿ ವ್ಯಕ್ತಿ ಮೇಲೆಹಲ್ಲೆ: 

    ವಿರಾಜಪೇಟೆ ತಾಲೋಕು ಮತ್ತೂರು ಗ್ರಾಮದ ನಿವಾಸಿ ಹೆಚ್. ಎಸ್ ದರ್ಶನ್ ಕುಮಾರ್ ಎಂಬವರು ಗ್ರೀನ್‌ ವ್ಯಾಲಿ ವ್ಯೂ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ 1-9-2015 ರಂದು ಸದರಿಯವರ ಮೊಬೈಲ್‌ ಕಾಣೆಯಾದ ಬಗ್ಗೆ ಅದೇ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅನಿಲ್‌ ಎಂಬವರ ನಡುವೆ ಜಗಳವಾಗಿ ಅನಿಲ್‌ ದಬ್ಬೆ ಕತ್ತಿಯಿಂದ ದರ್ಶನ್‌ ಕುಮಾರ್‌ರವರ ತಲೆಗೆ ಮತ್ತು ಎರಡು ಕಾಲುಗಳ ಮಣಿಕಂಟಿನ ಕೆಳಗಡೆ ಕಡಿದು ರಕ್ತಗಾಯಪಡಿಸಿರುವ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

ಅಕ್ರಮ ಶ್ರೀಗಂಧದ ತುಂಡುಗಳ ಸಾಗಾಟ ಆರೋಪಿ ಬಂಧನ:

    ಶ್ರೀ ಕೆ.ಎಸ್‌. ಸುಬ್ರಮಣಿ, ಎಎಸ್‌ಐ, ಪೊನ್ನಂಪೇಟೆ ಠಾಣೆ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 1-9-2015 ರಂದು ಸಿಬ್ಬಂದಿಯೊಂದಿಗೆ ಪೊನ್ನಂಪೇಟೆ ಠಾಣಾ ಸರಹದ್ದಿನ ಕಾನೂರು ಜಂಕ್ಷನ್‌ ನಲ್ಲಿ ದಾಳಿ ನಡೆಸಿ ತೂಚಮಕೇರಿ ಈಶ್ವರ ಕಾಲೋನಿ ನಿವಾಸಿ ಹೆಚ್‌.ಎಸ್‌. ರಂಜಿತ್‌ ಎಂಬವರು ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೇ ಮಾರು ವ್ಯಾನ್‌ನಲ್ಲಿ ಸುಮಾರು 6.9 ಕೆ.ಜಿ. ತೂಕವಿರುವ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಮಾಲು ಸಮೇತ ಆರೋಪಿ ಹೆಚ್‌.ಎಸ್‌. ರಂಜಿತ್‌ರವರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕೈಗೊಂಡಿರುತ್ತಾರೆ.  

ಹಳೇ ವೈಷಮ್ಯ ವ್ಯಕ್ತಿ ಮೇಲೆ ಹಲ್ಲೆ: 

    ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಕೇರಿ ಗ್ರಾಮದ ಸುಬಾಷ್‌ ನಗರದ ಪಿ.ವಿ. ರಾಜನ್‌ ರವರು ದಿನಾಂಕ: 31-08-2015 ರಂದು ಕೆಲಸ ಮುಗಿಸಿ ತಮ್ಮ ಮನೆಯಲ್ಲಿ ರಾತ್ರಿ 10-00 ಗಂಟೆಯ ವೇಳೆಯಲ್ಲಿ ಊಟ ಮುಗಿಸಿ ಹಲ್ಲು ನೋವಿದ್ದ ಕಾರಣ ನೋವಿನ ಬಾದೆಯಿಂದ ಮನೆಯ ಬಾಗಿಲಿಗೆ ಬೋಲ್ಟ್ ಹಾಕದೇ ಮಲಗಿದ್ದು, ಆ ವೇಳೆಗೆ ಆರೋಪಿ ರವಿಯು ಹಳೆಯ ವೈಷಮ್ಯದಿಂದ ಮನೆಗೆ ಅಕ್ರಮ ಪ್ರವೇಶ ಮಾಡಿ ಆತನ ಕೈಯ್ಯಲ್ಲಿದ್ದ ಕಾಡು ಮರದ ದೊಣ್ಣೆಯಿಂದ ರಾಜನ್‌ರವರ ಬೆನ್ನಿನ ಎಡಭಾಗಕ್ಕೆ ಹಾಗೂ ಸೊಂಟದ ಭಾಗಕ್ಕೆ ಮತ್ತು ಎಡಭಾಗದ ಕೈರೆಟ್ಟೆಗೆ ಹಲ್ಲೆನಡೆಸಿ ರಕ್ತಗಾಯಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ: 

   ಸೋಮವಾರಪೇಟೆ ಠಾಣಾ ಸರಹದ್ದಿನ ತಣ್ಣೀರಳ್ಳಗ್ರಾಮದ ನಿವಾಸಿ ಟಿ.ಇ. ಅಶ್ರಫ್‌ ಎಂಬವರು ದಿನಾಂಕ 1-9-2015 ರಂದು ಸಮಯ ಸಂಜೆ 7.00 ಗಂಟೆಗೆ ತಣ್ಣಿರುಹಳ್ಳದಲ್ಲಿರುವ ಮಸೀದಿಗೆ ನಮಾಜಿಗೆ ಹೋದ ಸಮಯದಲ್ಲಿ ಆರೋಪಿಗಳಾದ ಪ್ರವೀಣ, ಹರೀಶ, ಮೋಹನ, ಅಣ್ಣಪ್ಪ, ಯತೀಶ, ವಸಂತ ಮತ್ತು ಇತರರು ಮದರಸಕ್ಕೆ ನುಗ್ಗಿ, ಕೀಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ಟಿ.ಇ. ಅಶ್ರಫ್‌ನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನ, ಪ್ರಕರಣ ದಾಖಲು: 

     ಸೋಮವಾರಪೇಟೆ ಠಾಣಾ ಸರಹದ್ದಿನ ಐಗೂರು ಗ್ರಾಮದ ನಿವಾಸಿ ಶ್ರೀಮತಿ ಮರಿಯಾ ಎಂಬವರು ದಿನಾಂಕ 01/09/2015 ರಂದು ತಮ್ಮ ಮನೆಯಲ್ಲಿ ಒಬ್ಬರೇ ಇರುವಾಗ್ಗೆ ಸಮಯ 06:00 ಗಂಟೆಗೆ ಅರೋಪಿ ಗರಗಂದೂರು ಗ್ರಾಮದ ನಿವಾಸಿ ರಜಾಕ್‌ ಎಂಬಾತ ಶ್ರೀಮತಿ ಮರಿಯಾರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವರ ಕೈ ಹಿಡಿದು ನೀನು ನನ್ನೊಂದಿಗೆ ಬರುವಂತೆ ಒತ್ತಾಯ ಮಾಡಿದ್ದು, ಒಪ್ಪದೇ ಇದ್ದಾಗ ಮಾನಭಂಗ ಮಾಡುವ ಉದ್ದೇಶದಿಂದ ಪಿರ್ಯಾದಿಯವರ ಕೈಯನ್ನು ಹಿಡಿದು ಎಳೆದಾಡಿ ನೋವನ್ನುಂಟು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, September 1, 2015

ತಂದೆಯಿಂದ ಮಗನ ಮೇಲೆ ಹಲ್ಲೆ
                     ತಂದೆಯೇ ಮಗನ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಘಟನೆ ಸುಂಟಿಕೊಪ್ಪ ಬಳಿಯ ಹೇರೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ: 30.08.2015ರಂದು ಹೇರೂರು ನಿವಾಸಿ ಜಿ.ಕೆ.ರವಿ ಎಂಬವರು ರಾತ್ರಿ ಮನೆಯಲ್ಲಿ ಟಿ.ವಿ.ನೋಡಿಕೊಂಡು ಊಟ ಮಾಡುವಾಗ ರವಿ ಹಾಗೂ ಅವರ ತಂದೆ ಕುಳ್ಳಪ್ಪನವರಿಗೆ  ಊಟದ ವಿಚಾರದಲ್ಲಿ ಗಲಾಟೆ ಆಗಿದ್ದು, ತಂದೆ ಕುಳ್ಳಪ್ಪರವರು ಮಚ್ಚಿನಿಂದ ರವಿಯವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸರ್ಕಾರಿ ಜಮೀನು ಒತ್ತುವರಿ
                  ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಘಟನೆ ಬಲಮುರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 09-07-2015 ರಂದು ಮಡಿಕೇರಿಯ ಮೈತ್ರಿ ಹಾಲ್ ಬಳಿ ವಾಸವಿರುವ ದಲಿತ ಸಂಘರ್ಷ ಸಮಿತಿಯ ಸಂಚಾಲಕನಾದ ಹೆಚ್.ಎಸ್ ವಿಜಯ್‌ಕುಮಾರ್ ಹಾಗೂ ಇತರ 17 ಜನರು ಸೇರಿ ಬಲಮುರಿ ಗ್ರಾಮದ ಸರಕಾರಿ ಜಮೀನು ಸರ್ವೆ ನಂ 230/1 ರ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ದಿನಾಂಕ 28-07-2015 ರಂದು ಮಡಿಕೇರಿ ತಾಲೂಕು ತಹಸೀಲ್ದಾರರು ಈ ಒತ್ತುವರಿಯನ್ನು ತೆರವುಗೊಳಿಸಿದ್ದು, ಸರಕಾರಿ ಜಮೀನನನ್ನು ಒತ್ತುವರಿ ಮಾಡಿ ಸಾರ್ವಜನಿಕರ ಹಿತಾಸಕ್ತಿಗೆ ದಕ್ಕೆ ಮಾಡಿರುವ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪಾರಾಣೆ ವೃತ್ತದ ಗ್ರಾಮ ಲೆಕ್ಕಿಗರಾದ ಅನೂಪ್‌ ಸಬಾಸ್ಟಿನ್‌ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕತ್ತಿಯಿಂದ ಕಡಿದು ಕೊಲೆ ಯತ್ನ
                  ವ್ಯಕ್ತಿಯೊಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಯತ್ನ ಮಾಡಿದ ಘಟನೆ ನಾಪೋಕ್ಲುಬಳಿಯ ಬೇತು ಗ್ರಾಮದಲ್ಲಿ ನಡೆದಿದೆ. ದಿನಾಂಕ 30-08-2015 ರಂದು ನಾಪೋಕ್ಲು ವ್ಯಾಪ್ತಿಯಲ್ಲಿ ಕೈಲ್‌ ಮುಹೂರ್ತ ಹಬ್ಬವಿದ್ದುದರಿಂದ ಬೇತು ಗ್ರಾಮದ ಬೇತು ಕಾಲೋನಿ ನಿವಾಸಿಗಳಾದ ಕುಮಾರ, ಅವರ ತಂದೆ ಉತ್ತಪ್ಪ ಹಬ್ಬ ಮುಗಿಸಿ ರಾತ್ರಿ ಸಮಯ ಕುಮಾರನ ತಮ್ಮನ ಮನೆಯಲ್ಲಿ ಟೇಪ್ ರೆಕಾರ್ಡ್‌ ಹಾಕಿಕೊಂಡು ಕಿರಣ ಹಾಗೂ ಪೊನ್ನಣ್ಣರವರೊಂದಿಗೆ ಕುಣಿಯುತ್ತಿದ್ದಾಗ ಕಿರಣನಿಗೆ ಉತ್ತಪ್ಪನವರ ಕಾಲು ತಾಗಿದ ವಿಚಾರದಲ್ಲಿ ಕಿರಣನು  ಜಗಳ ಮಾಡಿ,  ಉತ್ತಪ್ಪರವರನ್ನು ಕೊಲೆ ಮಾಡುವ ಉದ್ದೇಶದಿಂದ ಕಿರಣನ ಮನೆಯಿಂದ ಒಂದು ಕತ್ತಿಯನ್ನು ತೆಗೆದುಕೊಂಡು ಬಂದು ಉತ್ತಪ್ಪನವರ  ಕುತ್ತಿಗೆಗೆ ಕಡಿದು ಗಾಯ ಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ಗೆ ಬಸ್‌ ಡಿಕ್ಕಿ
              ಸ್ಕೂಟರ್‌ ಒಂದಕ್ಕೆ ಬಸ್‌ ಡಿಕ್ಕಿಯಾದ ಪರಿಣಾಮ ಸ್ಕೂಟರ್‌ ಸವಾರ ಗಾಯಗೊಂಡ ಘಟನೆ ಸೋಮವಾರಪೇಟೆ ಬಳಿಯ ಐಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 31.08.15 ರಂದು ಯೆಡವಾರೆ ನಿವಾಸಿ ಶಿವಪ್ಪ ಎಂಬವರು ಅವರ ಸಂಸಾರದೊಂದಿಗೆ ಅವರ  ಕೆಎ-12-ಎಲ್ -8744 ರ ಸ್ಕೂಟಿಯಲ್ಲಿ ಐಗೂರು ಗ್ರಾಮದ ಜಂಕ್ಷನ್ ಬಳಿ ಬರುತ್ತಿರುವಾಗ ಕೆಎ-12-9509 ರ ಖಾಸಗಿ ಬಸ್ಸನ್ನು ಅದರ ಚಾಲಕ ಡಿ.ಎಂ.ದಿನೇಶ ಎಂಬವರು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಿವಪ್ಪನವರು ಚಾಲನೆ ಮಾಡುತ್ತಿದ್ದ ಸ್ಕೂಟಿಗೆ ಡಿಕ್ಕಿ ಪಡಿಸಿದ ಪರಿಣಾಮ ಶಿವಪ್ಪನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಚಿನ್ನಾಭರಣ ಕಳವು
                ಬಸ್ಸಿನಲ್ಲಿ ಮಹಿಳೆಯೊಬ್ಬರ ಬ್ಯಾಗಿನಿಂದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 31-08-2015ರಂದು ಮೈಸೂರು ಜಿಲ್ಲೆಯ ಕೆ.ಅರ್‌.ನಗರ ತಾಲೂಕಿನ ಸಾಲಿಗ್ರಾಮ ನಿವಾಸಿ ಮಂಜುಳಾ ಎಂಬವರು  ಕುಶಾಲನಗರದ ನೇತಾಜಿ ಬಡಾವಣೆಯಲ್ಲಿರುವ ಮಗಳಾದ ನಂದಿನಿ ಮನೆಗೆ ಬಂದು ವರಮಹಾಲಕ್ಷ್ಮಿ ಪೂಜೆ ಮಾಡಿ ಪೂಜೆಗೆ ತಾನು ತಂದಿದ್ದ ಚಿನ್ನ ಮತ್ತು ಮಗಳ ಚಿನ್ನದ ಆಭರಣಗಳನ್ನು ಇಟ್ಟು ಪೂಜೆ ಮಾಡಿ ನಂತರ ಇಬ್ಬರ ಚಿನ್ನಾಭರಣಗಳನ್ನು ಪೆಟ್ಟಿಗೆಯಲ್ಲಿಟ್ಟು ಕೈಚೀಲದಲ್ಲಿಟ್ಟು  ಊರಾದ ಸಾಲಿಗ್ರಾಮಕ್ಕೆ ಹೋಗಲು ಕುಶಾಲನಗರ ಬಸ್ ನಿಲ್ದಾಣಕ್ಕೆ ಬಂದು   ಬಸ್‌  ಹತ್ತಲು ಜನರು ನೂಕು ನುಗ್ಗಲು ಇದ್ದು ಅವರು ಜನರ ಮಧ್ಯೆ  ನುಗ್ಗಿ ಬಸ್ ಹತ್ತಿ ಸೀಟಿನಲ್ಲಿ ಕುಳಿತು ವ್ಯಾನಿಟಿ ಬ್ಯಾಗನ್ನು ನೋಡುವಾಗ ಅದರ ಜಿಪ್‌ ತೆರೆದಿರುವುದು ಕಂಡು ಬಂದು ಗಾಬರಿಗೊಂಡು ಬ್ಯಾಗ್ ನೊಳಗೆ ಹುಡುಕಲಾಗಿ ಅಲ್ಲಿಟ್ಟಿದ್ದ  ಅಂದಾಜು 66,000 ರೂ ಮೌಲ್ಯದ ಚಿನ್ನಾಭರಣಗಳನ್ನು ಇಟ್ಟಿದ್ದ ಬಾಕ್ಸ್ ಮತ್ತು ಅದರಲ್ಲಿದ್ದ 1000/ರೂಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.