Saturday, October 31, 2015

ಮನೆ ಬೀಗ ಮುರಿದು ನಗದು ಕಳವು:

      ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು ಹಣ ಕಳ್ಳತನ ಮಾಡಿದ ಘಟನೆ ಕೊಡಗಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 29-10-2015 ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ ನಿವಾಸಿ ಗೌಡಂಡ ಮಾಚಯ್ಯನವರು ಸಂಜೆ 5-30 ಗಂಟೆ ಸಮಯದಲ್ಲಿ ತಮ್ಮ ಮನೆಗೆ ಬೀಗ ಹಾಕಿ ಮದುವೆ ಸಮಾರಂಭವೊಂದಕ್ಕೆ ತೆರಳಿದ್ದು, ಸಂಜೆ 5-30 ರಿಂದ ರಾತ್ರಿ 1-30 ಗಂಟೆಯ ಒಳಗಡೆ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡದು ಒಳಗೆ ಪ್ರವೇಶಿಸಿ 1,45,000 ರೂ ನಗದನ್ನು ಕಳ್ಳತನ ಮಾಡಿಕೊಂಡುದ್ದು ಹೋಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಹಿಳೆಯ ದಾರಿ ತಡೆದು ಕೊಲೆ ಬೆದರಿಕೆ: 

       ದಿನಾಂಕ 29-10-2015 ರಂದು ಸಮಯ ಸಂಜೆ 05.00 ಗಂಟೆಗೆ ಮಡಿಕೇರಿ ನಗರದ ತ್ಯಾಗರಾಜ ಕಾಲೋನಿ ನಿವಾಸಿ ಶ್ರೀಮತಿ ನೆಬೀಸಾ ರವರು ರವರು ಮಡಿಕೇರಿ ನಗರದ ಹಳೆಯ ರಾಜರಾಜೇಶ್ವರಿ ಶಾಲೆಯ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳಾದ ಶಿವು, ಮಂಜುನಾಥ, ರಮ್ಯ ಮತ್ತು ದಿನೇಶ ರವರುಗಳು ರವರುಗಳು ದಾರಿ ತಡೆದು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆ ಹಾಗು ಹಲ್ಲೆಗೆ ಯತ್ನಿಸಿರುತ್ತಾರೆಂದು ಆರೋಪಿಸಿ ಶ್ರೀಮತಿ ಶ್ರೀಮತಿ ನೆಬೀಸಾ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, October 30, 2015


ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:
     ಪೊನ್ನಂಪೇಟೆ ಠಾಣಾ ಸರಹದ್ದಿನ ಕಲ್ಲುಕೋರೆಯಲ್ಲಿ ವಾಸವಾಗಿರುವ  ಪ್ರಕಾಶ ಎಂಬವರು ಯಾವುದೇ ವಿಚಾರದಲ್ಲಿ ಮನನೊಂದು ದಿನಾಂಕ 29-10-2015 ರಂದು ಪೊನ್ನಂಪೇಟೆಯ ಕಾನೂರು ರಸ್ತೆಯಲ್ಲಿರುವ  ಸಿ.ಬಿ.ವಿನೋದ್‌ ಎಂಬವ ಕಾಫಿ ಮಿಲ್ಲಿನ ಬಳಿ  ಆತ ಕೆಲಸ ಮಾಡುತ್ತಿದ್ದ ಸಿಮೆಂಟ್ ಕಾರ್ಕಾನೆಯ ಒಂದು ಕೊಠಡಿಯಲ್ಲಿ  ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, October 29, 2015

ಕರಿಮೆಣಸು ಕಳವು:

     ಮನೆಯಲ್ಲಿ ಸಂಗ್ರಹಿಸಿಟ್ಟ ಕರಿಮೆಣಸನ್ನು ಕಳ್ಳರು ಕಳ್ಳತನ ಮಾಡಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಐಕೊಳ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೂಕು ಐಕೊಳ ಗ್ರಾಮದ ನಿವಾಸಿ ಪಿರ್ಯಾದಿ ಪಳಂಗಡ ಎ ಮೊಣ್ಣಯ್ಯ ಎಂಬವರು ಒಂದು ವಾರದ ಹಿಂದೆ ಸ್ವಂತ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದು ವಾಪಸ್ಸು ದಿನಾಂಕ 28-10-2015 ರಂದು ಸಮಯ ಬೆಳಿಗ್ಗೆ 10-00 ಗಂಟೆಗೆ ತಮ್ಮ ಮನೆ ಐಕೊಳಕ್ಕೆ ಬಂದು ನೋಡಲಾಗಿ ಮನೆಯ ಮಹಡಿಯ ಹಂಚನ್ನು ಯಾರೋ ತೆಗೆದಿರುವುದು ಕಂಡು ಬಂದು ಮನೆಯಲ್ಲಿ ಸಂಗ್ರಹಿಸಿಟ್ಟ ಒಳ್ಳೆ ಮೆಣಸಿನ ಪೈಕಿ 44 ಕೆಜಿ ಯಷ್ಟು ಒಳ್ಳೆಮೆಣಸು ಕಳುವಾಗಿರುವುದು ಕಂಡುಬಂದಿದ್ದು ಪಿರ್ಯಾದಿಯವರ ಲೈನ್‌ ಮನೆಯಲ್ಲಿ ವಾಸವಿರುವ ಕೆಲಸದಾಳು ಉಮೇಶ ಮತ್ತು ಅವನ ಸ್ನೇಹಿತರುಗಳು ಸದರಿ ಕಳ್ಳತನ ಮಾಡಿರುವ ಸಂಶಯವಿರುವುದಾಗಿ ನೀಡಿರುವ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಸೈಕಲ್ ಕಳವು:

     ಹಾಸನ ಜಿಲ್ಲೆಯ ಆದರ್ಶ ನಗರದ ನಿವಾಸಿ ಗಗನ್ ಎಂಬವರು ದಿನಾಂಕ 23-10-2015 ರಂದು ತನ್ನ ಸ್ನೇಹಿತರೊಂದಿಗೆ ಮಡಿಕೇರಿ ದಸರಕ್ಕೆ ತನ್ನ ಊರಿನಿಂದ KA 13 EB 4036 ನಂಬರಿನ ಬಿಳಿ ಬಣ್ಣದ ಅಪ್ಪಾಚಿ ಮೋಟಾರು ಸೈಕಲ್‌ನಲ್ಲಿ ಬಂದು ಮಡಿಕೇರಿಯ ಸೆಂಟ್‌ ಜೋಸೆಫ್‌ ಕಾನ್ವೆಂಟಿನ ಮೈದಾನದಲ್ಲಿ ರಾತ್ರಿ 8.45 ಗಂಟೆಗೆ ನಿಲ್ಲಿಸಿದ್ದು ಮರು ದಿನ ಬೆಳಗಿನ ಜಾವ 3.00 ಗಂಟೆಗೆ ಹೋಗಿ ನೋಡಿದಾಗ ನಿಲ್ಲಿಸಿದ್ದ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:

     ಶ್ರೀಮಂಗಲ ಠಾಣಾ ಸರಹದ್ದಿನ ಕಾಕೂರು ಗ್ರಾಮದ ನಿವಾಸಿ ಶ್ರೀಮತಿ ಪಂಜರಿಯರವರ ಮುತ್ತು ಎಂಬವರ ಪತಿ 30 ವರ್ಷ ಪ್ರಾಯದ ಗಣೇಶ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27-10-2015 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನಸಿಕ ಅಸ್ವಸ್ಥೆ ಮಹಿಳೆ ಕಾಣೆ:

     ಮಾನಸಿಕ ಅಸ್ವಸ್ಥೆ ಮಹಿಳೆಯೋರ್ವಳು ಕಾಣೆಯಾಗಿರುವ ಘಟನೆ ಅಮ್ಮತ್ತಿ ಒಂಟಿಯಂಗಡಿಯಿಂದ ವರದಿಯಾಗಿದೆ. ವಿರಾಜಪೇಟೆ ತಾಲೂಕು ಅಮ್ಮತ್ತಿ ಒಂಟಿಯಂಗಡಿಯಲ್ಲಿ ನೆಲೆಸಿರುವ ವಿ.ಎನ್. ಪ್ರವೀಣ್ ಎಂಬವರ ತಾಯಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 28-10-2015 ರಂದು ತಮ್ಮ ಮನೆಯಿಂದ ಹೊರಗೆ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Wednesday, October 28, 2015

ಅಕ್ರಮ ಗೋಸಾಗಾಟ ಪತ್ತೆ
              ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದುದನ್ನು ಗೋಣಿಕೊಪ್ಪ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 27/10/2015ರಂದು ಮಾಯಮುಡಿ ಗ್ರಾಮದ ಮಡಿಕೆಬೀಡುವಿನಿಂದ ಯಾರೋ 4 ಜನ ವ್ಯಕ್ತಿಗಳು ಪಿಕ್ ಆಪ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ಬಂದ ದೊರೆತ ಮಾಹಿತಿಯ ಮೇರೆಗೆ ಗೋಣಿಕೊಪ್ಪ ಪಿಎಸ್‌ಐ ಜೆ.ಇ.ಮಹೇಶ್‌ರವರು ಸಿಬ್ಬಂದಿಯೊಂದಿಗೆ ಹಂಚಿನ ಕಾರ್ಖಾನೆ ಬಳಿ ತಲುಪವಾಗ ಎದುರಿನಿಂದ ಕೆಎ-12-ಎ-420 ಸಂಖ್ಯೆಯ ಒಂದು ಒಂದು ಪಿಕ್ ಅಫ್ ವಾಹನ ಬರುತ್ತಿದ್ದುದನ್ನು ತಡೆದು ನಿಲ್ಲಿಸಿದಾಗ ಪಿಕ್ ಆಪ್ ವಾಹನದಲ್ಲಿ ಇದ್ದ ಚಾಲಕ ಮತ್ತು ಇತರರು ವಾಹನದಿಂದ ಹಾರಿ ಇಳಿದು ಪಕ್ಕದ ತೋಟದೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದು, ನಂತರ ಪಿಎಸ್‌ಐರವರು ಪಿಕ್ ಆಪ್ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳು ಕಂಡು ಬಂದಿದ್ದು ವಾಹನ ಮತ್ತು ಗೋವುಗಳನ್ನು ಅಮಾನತ್ತು ಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪತ್ನಿಯ ಮೇಲೆ ಹಲ್ಲೆ, ಕಿರುಕುಳ
                 ಪಾನಮತ್ತನಾಗಿ ಮತ್ನಿಯ ಮೇಲೆ ಹಲ್ಲೆ ಮಾಡಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ವಿರಾಜಪೇಟೆ ನಗರದ 5ನೇ ವಿಭಾಗದ ನಿವಾಸಿ ಸಕೀನಾರವರು ಅಫ್ಜಲ್‌ ಎಂಬವರನ್ನು 1998ನೇ ಸಾಲಿನಲ್ಲಿ  ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಪತಿ ಅಫ್ಜಲ್ ಪ್ರತಿ ದಿನ ಕುಡಿದುಕೊಂಡು ಬಂದು ಪತ್ನಿ ಸಕೀನಾರೊಂದಿಗೆ ಜಗಳ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವುದಲ್ಲದೇ ದಿನಾಂಕ 27-10-2015 ರಂದು ಅಫ್ಜಲ್‌  ಮದ್ಯಪಾನ ಮಾಡಿಕೊಂಡು ಬಂದು ಸಕೀನಾರವರಿಗೆ ದೊಣ್ಣೆಯಿಂದ ಶರೀರಕ್ಕೆ ಹೊಡೆದು ನೋವು ಪಡಿಸಿರುವುದಲ್ಲದೇ ಕೊಲೆ ಬೆದರಿಕೆ ಹಾಖಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ, ಮರಳು ವಶ
                     ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಸೋಮವಾರಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 27.10.2015 ರಂದು ಸೋಮವಾರಪೇಟೆ ಠಾಣೆ ಎಎಸ್‌ಐ ಮಂಚಯ್ಯನವರು ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿರುವಾಗ ಮಾದಾಪುರ ಹೊಳೆಯಿಂದ ಒಂದು ಟಿಪ್ಪರ್ ಲಾರಿಯಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತ್ತಿರುವುದಾಗಿ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಮಾದಾಪುರ ಸೇತುವೆ ಹತ್ತಿರ ಕಾಯುತ್ತಾ ನಿಂತಿರುವಾಗ ಮಡಿಕೇರಿ ಕಡೆಯಿಂದ ಕೆಎ-04-ಸಿ-5111 ರ ಒಂದು ಟಿಪ್ಪರ್ ಲಾರಿ ಬಂದಿದ್ದು ಅದನ್ನು ತಡೆದು ಪರಿಶೀಲಿಸಿದಾಗ ಲಾರಿಯ ಹಿಂಭಾಗದಲ್ಲಿ ಮರಳನ್ನು ತುಂಬಿರುವುದು ಕಂಡು ಬಂದಿದ್ದು, ಟಿಪ್ಪರ್ ಲಾರಿಯ ಚಾಲಕ ಐಗೂರು ಗ್ರಾಮದ ಹೇಮಂತ್‌ರವರನ್ನು ವಿಚಾರಿಸಿದಾಗ ಸರ್ಕಾರದ ಯಾವುದೇ ಪರವಾನಗಿ ಇಲ್ಲದೇ ಹೊಳೆಯಿಂದ ಮರಳನ್ನು ಕದ್ದು ತುಂಬಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದ್ದು ಸಾಗಾಟವು ಅಕ್ರಮವಾಗಿರುವುದರಿಂದ ಎಎಸ್‌ಐ ಮಂಚಯ್ಯನವರು ಮರಳು ಸಮೇತ ಲಾರಿಯನ್ನು ಅಮಾನತುಪಡಿಸಿಕೊಂಡು ಚಾಲಕನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, October 27, 2015

ಜೀವನದಲ್ಲಿ ಜಿಗುಪ್ಸೆ ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:

     ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ತಾಲೋಕು ಅರಪಟ್ಟು ಗ್ರಾಮದಲ್ಲಿ ನಡೆದಿದೆ.  ಅರಪಟ್ಟು  ಗ್ರಾಮದ ನಿವಾಸಿ 58 ವರ್ಷ ಪ್ರಾಯದ ನಿವಾಸಿ ಕಾರ್ಯಪ್ಪ ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ 26-10-2015 ರಂದು ವಿಷ  ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪತ್ನಿ ಮೇಲೆ ಪತಿಯಿಂದ ಕಿರುಕುಳ:

     ಶ್ರೀಮತಿ ಪಿ.ಕೆ. ರಾಣಿ, ಗಂಡ ಅಜಿತ್, ಪ್ರಾಯ 24 ವರ್ಷ, ತೆಲುಗರಬೀದಿ, ವಿರಾಜಪೇಟೆ ಇವರು  3 ವರ್ಷಗಳ ಹಿಂದೆ ಅಜಿತ್ ಎಂಬುವರನ್ನು ಮದುವೆಯಾಗಿದ್ದು, ಗಂಡ-ಹೆಂಡತಿ 3 ವರ್ಷದವರೆಗೆ ಅನ್ಯೋನ್ಯವಾಗಿದ್ದು, ನಂತರದ ದಿನಗಳಲ್ಲಿ  ಶ್ರೀಮತಿ ಪಿ.ಕೆ. ರಾಣಿಯವರ ಗಂಡ ಅಜಿತ್ ರವರು ವಿಪರೀತ ಮದ್ಯ ಸೇವೆನೆ ಮಾಡಿಕೊಂಡು  ಬಂದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರವುದಾಗಿದ್ದು, ದಿನಾಂಕ 25-10-2015 ರಂದು ಸಮಯ 7-30 ಪಿ.ಎಂ.ಗೆ ಶ್ರೀಮತಿ ಪಿ.ಕೆ. ರಾಣಿ,  ತನ್ನ ತಾಯಿಯಾದ ಕಾವೇರಿಯವರ ಮನೆಯಲ್ಲಿರುವಾಗ್ಗೆ  ಅವರ ಗಂಡ ಅಜಿತ್ ರವರು ಮನೆಗೆ ಬಂದು  ಜಗ ಮಾಡಿ ಮರದ ರೀಪರ್ ನಿಂದ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saturday, October 24, 2015

ಯುವತಿ ಕಾಣೆ, ಪ್ರಕರಣ ದಾಖಲು:
      ಗೋಣಿಕೊಪ್ಪ ಠಾಣಾ ಸರಹದ್ದಿನ ಚೆನ್ನಂಗೊಲ್ಲಿ ಗ್ರಾಮದ ನಿವಾಸಿ ಪಂಜರಿ ಎರವರ ಗಿರೀಜ ಎಂಬವರ ಮಗಳು 19 ವರ್ಷ ಪ್ರಾಯದ ಜಯಶ್ರೀ ಎಂಬವಳು ಗೋಣಿಕೊಪ್ಪ ಬೈಪಾಸ್ ರಸ್ತೆಯಲ್ಲಿ ಸ್ಪ್ಯಾರ್ ಪಾರ್ಟ್ಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 20/10/2015 ರಂದು ಎಂದಿನಂತೆ ಬೆಳಿಗ್ಗೆ 9.00 ಗಂಟೆಗೆ ಕೆಲಸಕ್ಕೆ ಹೋದವಳು ರಾತ್ರಿ ಮನೆಗೆ ಬಾರದೆ ಇದ್ದು ಕಾಣೆಯಾಗಿದ್ದು, ಈ ಬಗ್ಗೆ ಫಿರ್ಯಾದಿ ಶ್ರೀಮತಿ ಗಿರೀಜ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬೈಕ್ ಡಿಕ್ಕಿ:
     ಪಾದಚಾರಿಯೊಬ್ಬರಿಗೆ ಬೈಕೊಂಡು ಡಿಕ್ಕಿಯಾಗಿ ತಲೆಗೆ ಗಾಯವಾಗಿರುವ ಘಟನೆ ಸಿದ್ದಾಪುರದ ಹತ್ತಿರದ ನೆಲ್ಲಿಹದಿಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17-10-2015 ರಂದು ಸಮಯ ಅಂದಾಜು 2.30 ಪಿ.ಎಂ.ಗೆ ಸಿದ್ಧಾಪುರ ಠಾಣಾ ವ್ಯಾಪ್ತಿಗೆ ಸೇರಿದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಚೆಟ್ಟಳ್ಳಿ ಗ್ರಾಮದ ನಿವಾಸಿ ಎ.ಆರ್. ದಯಾನಂದ ಎಂಬವರ ತಂದೆ ಎ.ಎಂ. ರಾಮಪ್ಪನವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದುಗಡೆಯಿಂದ ನಂ. ಕೆಎ 12 ಜೆ 9765 ರ ಮೋಟಾರ್ ಸೈಕಲ್ ನ್ನು ಅದರ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಎ.ಎಂ. ರಾಮಪ್ಪನವರು ಕೆಳಗೆ ಬಿದ್ದು ತಲೆಯ ಎಡಭಾಗ ಮತ್ತು ಎಡಭಾಗದ ಪಕ್ಕೆಲುಬಿಗೆ ಪೆಟ್ಟಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಸಿದ್ಧಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಡಿಕೇರಿ ವೈವಾಸ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:
     ದಿನಾಂಕ 22-10-2015 ರಂದು ವಿರಾಜಪೇಟೆ ನಗರ ಠಾಣಾ ಸರಹದ್ದಿಗೆ ಸೇರಿದ ನೆಹರುನಗರದಲ್ಲಿ ನೆಹರುನಗರ ನಿವಾಸಿ ಮಣಿಕಂಠ ಎಂಬವರ ಸಹೋದರ ನವೀನ್ ರವರಿಗೆ ಹಳೇಯ ವೈಮಸ್ಸಿನಿಂದ ಬೋಜಿ ಮತ್ತು ಚರಣೆ ಎಂಬುವರು ಕೈಯಿಂದ ಹೊಡೆದ ಬಗ್ಗೆ ವಿಚಾರ ತಿಳಿದು ಮಣಿಕಂಠರವರು ನವೀನನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ವೇಳೆ ಸಮಯ 19-00 ಗಂಟೆಗೆ ಆರೋಪಿಗಳಾದ ಸಂಜಯ್ ಮತ್ತು ಸಂದೀಪರವರು ದಾರಿ ತಡೆದು ನೀನು ಏಕೆ ನವೀನ್ ನನ್ನು ವೈದ್ಯಾಧಿಕಾರಿಯವರ ಹತ್ತಿರ ಕರೆದುಕೊಂಡು ಹೋಗುತ್ತೀಯಾ ಎಂದು ಹೇಳಿ ಕೈಯಿಂದ ಇಬ್ಬರು ಶರೀರಕ್ಕೆ ಹೊಡೆದು ನೋವುಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜಿವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ವ್ಯಕ್ತಿಯ ಮೇಲೆ ಹಲ್ಲೆ, ಪ್ರಕರಣ ದಾಖಲು: 

     ಮಡಿಕೇರಿ ತಾಲೋಕು ಬಲ್ಲಮಾವಟಿ ಗ್ರಾಮದ ನಿವಾಸಿ ಬಿದ್ದಪ್ಪ ಎಂಬವರು ದಿನಾಂಕ 20/10/2015 ರಂದು ಶುಂಠಿ ಮಾರಾಟ ಮಾಡಲು ತನಗೆ ಪರಿಚಯವಿರುವ ಹೆಬ್ಬಾಲೆ ಗ್ರಾಮದ ಶೇಖರ ರವರನ್ನು ಬೇಟಿಯಾಗಿ ಶುಂಟಿ ವ್ಯಾಪಾರ ಮಾಡಲು ಕೂಡಿಗೆ ಗ್ರಾಮದ ಹರಿಪ್ರಸಾದ್ ರವರನ್ನು ಕರೆದು ಕೊಂಡು ತಮ್ಮ ಕೆ ಎಲ್ 14 ಇ 9884 ರ ಓಮಿನಿ ಕಾರ್ ನಲ್ಲಿ ಹೆಬ್ಬಾಲೆಗೆ ಹೋಗಿ ವಾಪಾಸ್ಸು ಮನೆಗೆ ಹೋಗುತ್ತಿರುವಾಗ್ಗೆ, ಸಮಯ ಸುಮಾರು 7;45 ಪಿ ಎಂಗೆ ಕುಶಾಲನಗರದ ಅತ್ತೂರು ಗ್ರಾಮದ ಹತ್ತಿರ ತಲುಪಿದಾಗ,ಅರಣ್ಯ ಇಲಾಖೆಯ ಸಿ ಬ್ಬಂದಿಗಳು ಮತ್ತು ಅಧಿಕಾರಿಗಳು ಅವರ ಇಲಾಖಾ ಜೀಪಿನಲ್ಲಿ ಬಂದು ತಡೆದು, ಪಿರ್ಯಾದಿ ಬಿದ್ದಪ್ಪ ಹಾಗು ಹರಿಪ್ರಸಾದ್ರವರನ್ನು ಕಾರಿನ ಸಮೇತ ಕುಶಾಲನಗರದ ಗಂದದಕೋಟೆಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಕಟ್ಟಡಕ್ಕೆ ಬಲವಂತವಾಗಿ ಕರೆದುಕೊಂಡುಹೋಗಿ ಪಿರ್ಯಾದಿ ಮತ್ತು ಹರಿಪ್ರಸಾದ ನವರಿಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದು ಪಿರ್ಯಾದಿಯವರ ಕಾಲಿಗೆ ತೊಡೆಗೆ ಹೊಡೆದು ನೋವು ಪಡಿಸಿ ಅರಣ್ಯ ಕೇಸು ದಾಖಲಿಸಿ ದಿನಾಂಕ 21/10/2015 ರಂದು ಕುಶಾಲನಗರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ವಿನಾಕಾರಣ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ 1)ರಂಜಿತ್, 2) ಶಿವರಾಮ, 3) ಸುರೇಶ, 4) ಸತಿಶ್, 5) ಮೇದಪ್ಪ, 6) ಮಂಜುನಾಥ ಮತ್ತು 7) ಮಂಜೇಗೌಡ ರವರು ಹಲ್ಲೆ ನಡೆಸಿ ನೋವನ್ನುಂಟು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, October 21, 2015

ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ:

     ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯ ಜಗದೀಶ್ ಎಂಬವರ ಶೆಡ್ ನಲ್ಲಿ ವಾಸವಾಗಿದ್ದು ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದ 40 ವರ್ಷ ಪ್ರಾಯದ ವಾಸು ಎಂಬ ವ್ಯಕ್ತಿ ದಿನಾಂಕ 19-10-2015 ರಂದು ರಾತ್ರಿ ಮದ್ಯವನ್ನು ಸೇವಿಸಿದ್ದು, ಯಾವುದೋ ವಿಚಾರದಲ್ಲಿ ಜಿಗುಪ್ಸೆಗೊಂಡು ತಾನು ವಾಸವಾಗಿದ್ದ ಶೆಡ್ಡಿನ ಒಳಗೆ ವಿದ್ಯಚ್ಛಕ್ತಿ ಸರ್ವಿಸ್ ವಯರಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಪತಿ-ಪತ್ನಿ ನಡುವೆ ಕಲಹ, ಪತ್ನಿಯ ಮೇಲೆ ಹಲ್ಲೆ:

     ವಿರಾಜಪೇಟೆ ತಾಲೋಕು ಕೋತೂರು ಗ್ರಾಮದ ನಿವಾಸಿ ಸುರೇಶ್ ರವರು ಶ್ರೀಮತಿ ಸುಮಿತ ಎಂಬವರನ್ನು 2005 ನೇ ಸಾಲಿನಲ್ಲಿ ಮದುವೇ ಯಾಗಿದ್ದು ಇವರಿಗೆ 2 ಮಕ್ಕಳಿದ್ದು ಈಗ ಸುಮಾರು 1 ವರ್ಷದಿಂದ ಗಂಡ ಸುರೇಶ್ ರವರು ಪತ್ನಿ ಶ್ರೀಮತಿ ಸುಮಿತರವರ ಮೇಲೆ ವಿನಾಕಾರಣ ಅನುಮಾನ ಪಟ್ಟು ಜಗಳ ಮಾಡುತ್ತಿದ್ದುರಿಂದ ಶ್ರೀಮತಿ ಸುಮಿತರವರು ಕಳೆದ ಡಿಸಂಬರ್ ತಿಂಗಳಿನಿಂದ ಗಂಡನ ಮನೆ ಬಿಟ್ಟು ಗೋಣಿಕೊಪ್ಪದ ಸಿಗೇತೋಡುವಿನಲ್ಲಿ ಇರುವ ತಾಯಿ ಮನೆಗೆ 2 ಮಕ್ಕಳೊಂದಿಗೆ ಹೋಗಿ ವಾಸವಾಗಿದ್ದು ನಂತರ ಗಂಡ-ಹೆಂಡತಿ ಯವರು ಪರಸ್ಪರ ಒಪ್ಪಂದ ಮೇರೆ ವಿವಾಹ ವಿಚ್ಚೇದನಕ್ಕಾಗಿ ನ್ಯಾಯಾಲಯಕ್ಕೆ ಅಜಿ ನೀಡಲು ದಿನಾಂಕ 19-10-201ರ ರಂದು ವಕೀಲರ ಬಳಿ ಹೋಗಿ ಮಾತನಾಡಿ ವಾಪಸ್ಸು ಮನೆಗೆ ಬರುವಾಗ್ಗೆ ಪತಿ ಸುರೇಶ ಪತ್ನಿಯ ದಾರಿ ತಡೆದು ಕೈ ಯಿಂದ ಹಲ್ಲೆಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಗುಪ್ಸೆ ಯುವಕನ ಆತ್ಮಹತ್ಯೆ:

     ಮಡಿಕೇರಿ ನಗರದ ಡೈರಿ ಫಾರಂ ಬಳಿ ವಾಸವಾಗಿದ್ದ 19 ವರ್ಷ ಪ್ರಾಯದ ಸಿದ್ದು @ ಸಿದ್ದರಾಜು ಎಂಬಾತ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19-10-2015 ರಾತ್ರಿ ನಗರದ ಡೈರಿ ಫಾರಂನಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮನೆಯಿಂದ ಚಿನ್ನಾಭರಣ ಕಳವು:

     ಮಡಿಕೇರಿ ನಗರದ ಸುಬ್ರಮಣ್ಯ ನಗರದಲ್ಲಿ ನೆಲೆಸಿರುವ ಯಶೋದ ಎಂಬವರ ಮನೆಯಲ್ಲಿ ಸತೀಶ್‌ ಎಂಬುವರು ಪೇಯಿಂಟಿಂಗ್‌ ಕೆಲಸ ಮಾಡಿಕೊಂಡಿದ್ದು ದಿನಾಂಕ 30-08-2015 ರಂದು ಪಿರ್ಯಾದಿ ಶ್ರೀಮತಿ ಯಶೋದ ನವರು ತಮ್ಮ ಮನೆಯ ಗಾಡ್ರೇಜನ್ನು ನೋಡಿದಾಗ ಗಾಡ್ರೇಜ್‌ ನಲ್ಲಿ ಇಟ್ಟಿದ್ದ ಸುಮಾರು 47,000 ರೂಪಾಯಿ ಮೌಲ್ಯದ ಚಿನ್ನ ಹಾಗು ಬೆಳ್ಳಿಯ ಆಭರಣಗಳು ಕಳವು ಆಗಿರುವುದು ಕಂಡು ಬಂದಿದು ಸದರಿ ಕಳ್ಳತನವನ್ನು ಪೇಯಿಂಟಿಂಗ್ ಕೆಲಸ ಮಾಡುವ ಸತೀಶ ಮಾಡಿರುವ ಸಂಶಯವಿರುವುದಾಗಿ ನೀಡಿದ ದೂರಿನ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Tuesday, October 20, 2015

ಅನಧಿಕೃತ ಪತ್ರಿಕೆ ಮುದ್ರಣ, ಸಾರ್ವಜನಿಕರಿಗೆ ವಂಚನೆ:

     ವ್ಯಕ್ತಿಯೊಬ್ಬರು ಯಾವುದೇ ಪರವಾನಗಿ ಇಲ್ಲದೆ ಪತ್ತಿಕೆ ಮದ್ರಿಸಿ ಪ್ರಚೋದನಾಕಾರಿ ಬರಹಗಳನ್ನು ಮುದ್ರಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಹಾಗು ಇದರ ಮೂಲಕ ಸಾರ್ವಜನಿಕರಿಗೆ ವಂಚಿಸುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 19-10-2015 ರ ಹಿಂದಿನ ದಿನಗಳಲ್ಲಿ ಸಿದ್ಧಾಪುರದಲ್ಲಿ ಸಿದ್ಧಾಪುರದ ನಿವಾಸಿ ಕೃಷ್ಣರವರ ಮಗನಾದ ಕೆ.ವಸಂತಕುಮಾರ್ ಎಂಬುವವರು ಕಾನೂನುಬದ್ಧವಾಗಿ ಯಾವುದೇ ಪರವಾನಿಗೆಯನ್ನು ಹೊಂದದೆ ಕೊಡಗು ಮಿತ್ರ ಎಂಬ ಪತ್ರಿಕೆಯನ್ನು ಮುದ್ರಿಸಿ ಅವುಗಳ ಮೇಲೆ ಆರ್.ಎನ್.ಐ. 092226 ಎಂಬ ಸಂಖ್ಯೆಯನ್ನು ನೀಡಿದ್ದು, ಅದು ನಕಲಿಯದ್ದೆಂದು ಅಂತರ್ಜಾಲದ ಮೂಲಕ ಸಂಗ್ರಹಿಸಿದ್ದು, ಈ ಪತ್ರಿಕೆಗಳನ್ನು ಸಿದ್ಧಾಪುರದ ಕೆಲವು ಅಂಗಡಿಗಳಲ್ಲಿ ಪ್ರತಿ ಪತ್ರಿಕೆಗಳನ್ನು ರೂ 10/- ರಂತೆ ಮಾರಾಟ ಮಾಡುತ್ತಿದ್ದು ಸದರಿ ಕೆ.ವಸಂತಕುಮಾರ್ ರವರು ಸಮಾಜದಲ್ಲಿ ಅಶಾಂತಿ ಮೂಡುವಂತೆ ಪತ್ರಿಕೆಗಳನ್ನು ಮುದ್ರಣ ಮಾಡುತ್ತಿದ್ದು ಹಾಗೂ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವಂತೆ ಬರವಣಿಗೆಗಳನ್ನು ಬರೆದು ಮಾರಾಟ ಮಾಡುತ್ತಿರುವುದಾಗಿ ಹಾಗೂ ಸಮಾಜದ ಕೆಲವು ಪ್ರತಿಷ್ಟಿತ ವ್ಯಕ್ತಿಗಳ ಹೆಸರನ್ನು ಬರೆಯದೆ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಹಣಕ್ಕಾಗಿ ಬರೆದುಸಾರ್ವಜನಿಕರಿಗೆ ವಂಚಿಸುತ್ತಿದ್ದಾರೆ ಎಂಬುದಾಗಿ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಹಕೀಂ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ. 

ಹಣದ ವಿಚಾರದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ:

     ಸೋಮವಾರಪೇಟೆ ತಾಲೋಕು ಹೆಬ್ಬಾಲೆ ಗ್ರಾಮದ ನಿವಾಸಿ ನೀಲಾಬಾಯಿಯವರು ದಿನಾಂಕ 17-08-2015ರಂದು ಬೆಳಿಗ್ಗೆ 06:45 ಗಂಟೆಗೆ ತಮ್ಮ ಮನೆಯಲ್ಲಿ ಇರುವಾಗ್ಗೆ ಪಕ್ಕದ ಮನೆ ವಾಸಿಗಳಾದ ಆರೋಪಿ ವಿಜಯ ಎಂಬವರು ಹಣ ಸಾಲ ಪಡೆದ ವಿಚಾರದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ನೀಲಾಬಾಯಿಯವರ ಮಗಳನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಬಟ್ಟೆಯನ್ನು ಹರಿದು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಕ್ಕಯಮ್ಮ ಮತ್ತು ಜಯಮ್ಮ ಎಂಬವರು ಸೇರಿಕೊಂಡು ನೀಲಾಬಾಯಿ ಮತ್ತು ಅವರ ಮಗಳ ಮೇಲೆ ಕೈಯಿಂದ ಹಾಗು ದೊಣ್ಣೆಯಿಂದ ಶರೀರಕ್ಕೆ ಹೊಡೆದುದ್ದಲ್ಲದೇ, ಕಾಲಿನಿಂದ ಒದ್ದು ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಮಹಿಳೆ ಕಾಣೆ ಪ್ರಕರಣ ದಾಖಲು: 

       ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುರ್ನಾಡು ನಿವಾಸಿ ಫಿರ್ಯಾದಿ ಕೆ.ಕೆ. ಮಾಧವ ಎಂಬವರ ಕೋಳಿ ಅಂಗಡಿಯಲ್ಲಿ ಸುಮಾರು 16 ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದ ತುಮಕೂರು ಮೂಲದ ಹನುಮಂತಪ್ಪರವರ ಪತ್ನಿ ಪ್ರಾಯ 47 ವರ್ಷದ ಮಂಜುಳರವರು ದಿನಾಂಕ 16-10-2015 ರಂದು ಮದ್ಯಾಹ್ನ ತನ್ನ ಕಿವಿಯ ಒಲೆಯನ್ನು ಮೂರ್ನಾಡುವಿನ ಕೃಷ್ಣ ಜ್ಯುವೇಲರಿ ಅಂಗಡಿಯಲ್ಲಿ ಗಿರವಿ ಇಟ್ಟು ರೂ 4 ಸಾವಿರ ಹಣವನ್ನು ಪಡೆದು ಪಿರ್ಯಾದಿಯವರಿಗೆ ತಿಳಿಸದೆ ಹೇಳದೆ ಕೇಳದೆ ಹೋದವಳು ಇದುವರೆಗೆ ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, October 19, 2015

ಸ್ಟೇಷನರಿ ಅಂಗಡಿಗೆ ಬೆಂಕಿ,  ಹಾನಿ:
     ಸ್ಟೇಷನರಿ ಅಂಗಡಿಗೆ ಬೆಂಕಿ ತಗುಲಿ ಸುಮಾರು 25,000 ರೂ ಸಾಮಾಗ್ರಿಗಳು ಹಾನಿಗೊಳಗಾದ ಘಟನೆ ಕುಶಾಲನಗರ ನ್ಯಾಯಾಲಯದ ಬಳಿ ಅಂಗಡಿಯೊಂದರಲ್ಲಿ ಸಂಭವಿಸಿದೆ. ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ನಿವೃತ್ತ ಎ.ಎಸ್.ಐ. ಶಿವಪ್ಪ ಎಂಬವರು ಕುಶಾಲನಗರದ ನ್ಯಾಯಾಲಯದ ಹತ್ತಿರ ಸ್ಟೇಷನರಿ ಹಾಗು ಜೆರಾಕ್ಸ್ ಅಂಗಡಿ ಯನ್ನು ನಡೆಸುತ್ತಿದ್ದು, ಸದರಿ ಅಂಗಡಿಗೆ 17-10-2015 ರಂದು ರಾತ್ರಿ ಬೆಂಕಿ ತಗುಲಿ ಅಂಗಡಿಯಲ್ಲಿ ಇಟ್ಟಿದ್ದ ಸ್ಟೇಷರಿ ಸಾಮಾಗ್ರಿಗಳು ಸುಟ್ಟು ಹೋಗಿದ್ದು ಅಲ್ಲದೆ ಜೆರಾಕ್ಸ್, ಕಂಪ್ಯೂಟರ್ ಯಂತ್ರಗಳಿಗೆ ಹಾನಿಗೊಳಗಾಗಿರುವುದಾಗಿ ಹಾಗು ಸದರಿ ಕೃತ್ಯವನ್ನು ಅವರ ಅಳಿಯ ಮೈಲಾರ್, ರಮೇಶ್ ಸಿಂಧು ಎಂಬವರು ಹಳೇ ದ್ವೇಷವನ್ನಿಟ್ಟುಕೊಂಡು ಎಸಗಿರುವ ಸಂಶಯ ವಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಸೈಕಲ್ ಡಿಕ್ಕಿ, ಗಾಯಗೊಂಡ ವೃದ್ದ. 
          ನಡೆದುಕೊಂಡು ಹೋಗಿತ್ತಿದ್ದ ವೃದ್ದರೊಬ್ಬರಿಗೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಪೊನ್ನಂಪೇಟೆ ನಗರದ ಕಾನೂರು ಜಂಕ್ಷನ್ ನಲ್ಲಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೋಕು, ಅರೇನಳ್ಳಿ ಗ್ರಾಮದ ನಿವಾಸಿ ಫಿರ್ಯಾದಿ ಎಂ.ರವಿಕುಮಾರ್ ರವರ ತಂದೆ ಮಹದೇವ ಎಂಬುವವರು ದಿನಾಂಕ 17/10/2015ರಂದು ಪೊನ್ನಂಪೇಟೆ ನಗರದ ಕಾನೂರು ಜಂಕ್ಷನ್ ನಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಶ್ರೀಮಂಗಲ ಕಡೆಯಿಂದ ಒಬ್ಬ ಮೋಟರು ಬೈಕ್ ಚಾಲಕ ಬೈಕ್ ನಂಬರು ಕೆಎ 12 ಎಲ್ 8359ರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿ ಕೊಂಡು ಬಂದು ಮಹದೇವರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಕಾಲುಗಳಿಗೆ ಮತ್ತು ತಲೆಗೆ ಹಾಗೂ ಕೈಗೆ ಪೆಟ್ಟಾಗಿದ್ದು ಅವರನ್ನು ರಾಮಕೃಷ್ಣ ಆಶ್ರಮ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿಗೆ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ದಾಖಲಿಸ ಲಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರುಗಳ ಮುಖಾಮುಖಿ, ಹಾನಿ:

      ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ನಿವಾಸಿ ಮಲ್ಲೆಂಗಡ ಸೋಮಯ್ಯ ನವರು ದಿನಾಂಕ 18/10/15 ರಂದು ಪೊನ್ನಂಪೇಟೆಯ ಬೇಗೂರಿಗೆ ಅವರ ಬಾಪ್ತು KA-04 MP-963 ERITIGA ಕಾರಿನಲ್ಲಿ ಹೋಗುತ್ತಿದ್ದಾಗ ಸಮಯ ಸುಮಾರು 12.30 ಗಂಟೆಗೆ ಹುದಿಕೇರಿ ಸಾರ್ವಜನಿಕ ರಸ್ತೆಯ ತಿರುವುವೊಂದರಲ್ಲಿ ಹುದಿಕೇರಿ ಕಡೆಯಿಂದ ಬಂದ KL 22 G 7508 EON ಕಾರಿನ ಚಾಲಕನು ಕಾರನ್ನು ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ಬಂದು ಮಲ್ಲೆಂಗಡ ಸೋಮಯ್ಯನವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರ ಕಾರಿನ ಬಲಭಾಗ ಮತ್ತು ಬಲಬದಿಯ ಟಯರ್ ಡ್ಯಾಷ್ ಬೋರ್ಡ್ ಹೆಡ್ ಲೈಟ್ ಜಖಂ ಆಗಿದ್ದು ಏರ್ ಬ್ಯಾಗ್ ಓಪನ್ ಆಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Sunday, October 18, 2015

ಅಪಾರ ಮೌಲ್ಯದ ಮರ ಕಳವು
                     ಅಪಾರ ಮೌಲ್ಯದ ಬೀಟೆ ಹಾಗೂ ಮತ್ತಿ ಮರವನ್ನು ಕಳವು ಮಾಡಿದ ಘಟನೆ ಸಿದ್ದಾಪುರ ಬಳಿಯ ಚೆನ್ನಂಗಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 09-08-2015 ರಿಂದ ದಿನಾಂಕ 22-08-2015 ರ ನಡುವೆ ಮೈಸೂರಿನ ಹೂಟಗಳ್ಳಿಯಲ್ಲಿ ವಾಸವಿರುವ ಎಂ.ಜಿ.ದಿನೇಶ್‌ ಎಂಬವರಿಗೆ ಸೇರಿದ ಚೆನ್ನಂಗಿ ಗ್ರಾಮದದಲ್ಲಿರುವ  ಪಿತ್ರಾರ್ಜಿತ ಜಾಗದಲ್ಲಿದ್ದ ಒಂದು 30 ರಿಂದ 40 ವರ್ಷ ಹಳೆಯದಾದ ಅಂದಾಜು 40 ರಿಂದ 50 ಅಡಿ ಎತ್ತರ ಬೆಳೆದು ನಿಂತಿದ್ದ ಅಂದಾಜು 5 ಲಕ್ಷ ಮೌಲ್ಯದ ಒಂದು ಬೀಟೆ ಮರ ಹಾಗೂ ಒಂದು ಮತ್ತಿ ಮರವನ್ನು ಯಾರೋ ಕಳ್ಳರು ಕಡಿದು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಬಗ್ಗೆ ಅರಣ್ಯ ಇಲಾಖೆಗೆ ಪುಕಾರು ನೀಡಿದ್ದು, ಇದುವರೆಗೂ ಎಫ್.ಓ.ಸಿ. ಆಗದ್ದರಿಂದ ತಡವಾಗಿ ಠಾಣೆಗೆ ಬಂದು ಪೊಲೀಸ್‌ ದೂರು ನೀಡಿದ್ದು ಸಿದ್ದಾಫುರ ಪೊಲೀಸರು ಅರಣ್ಯ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, October 17, 2015

ಮನೆಗೆ ಅಕ್ರಮ ಪ್ರವೇಶಮಾಡಿ ಹಲ್ಲೆ:

     ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ನಗರದ ನ್ಯಾಯಾಲಯದ ಹತ್ತಿರ ನಡೆದಿದೆ. ವಿರಾಜಪೇಟೆ ನಗರದ ನಿವಾಸಿ ಶ್ರೀಮತಿ ಯು.ಜಿ. ಕಾವೇರಮ್ಮ ಎಂಬವರು ದಿನಾಂಕ 16-10-2015 ರಂದು ಸಮಯ ಮದ್ಯಾಹ್ನ 2-15 ಗಂಟೆಗೆ ಅವರ ತಾಯಿ ಹಾಗೂ ಮಗುವಿನೊಂದಿಗೆ ವಿರಾಜಪೇಟೆ ನಗರದ ತನ್ನ ಹಳೇಯ ಮನೆಯಲ್ಲಿರುವಾಗ್ಗೆ, ಪಿರ್ಯಾದಿಯವರ ಮನೆಯ ಹತ್ತಿರ ವಾಸವಿರುವ ಶೀಲಾ ಮತ್ತು ಶೈಲಾ ಎಂಬುವರು ಏಕಾಏಕಿ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಳೇ ವೈಷಮ್ಯದಿಂದ ದೊಣ್ಣೆಯಿಂದ ಕಾವೇರಮ್ಮ ಮತ್ತು ಅವರ ತಾಯಿಯವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾನಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮನೆಗೆ ನುಗ್ಗಿ ಹಲ್ಲೆ, ಪ್ರಕರಣ ದಾಖಲು:

    ವಿನಾ ಕಾರಣ ಮಹಿಳೆಯೊಬ್ಬರ ಮೇಲೆ ಇಬ್ಬರು ಮಹಿಳೆಯರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಗಾಯಪಡಿಸಿ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 16-10-2015 ರಂದು ಸಮಯ ಮದ್ಯಾಹ್ನ 2-00 ಪಿ.ಎಂ.ಗೆ ವಿರಾಜಪೇಟೆ ನಗರದ ನಿವಾಸಿ ಶ್ರೀಮತಿ ಶೀಲಾ ಎಂಬವರು ತಮ್ಮ ಮನೆಯಲ್ಲಿರುವಾಗ್ಗೆ ಅವರ ಪಕ್ಕದ ಮನೆಯ ವಾಸಿಯಾದ ಅಮ್ಮಕ್ಕ ಮತ್ತು ಕಾವೇರಮ್ಮ ಎಂಬುವರು ಅವರ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ವಿನಾ: ಕಾರಣ ಜಗಳ ತೆಗೆದು ಇಬ್ಬರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದು, ಕಾಡು ಮರದ ದೊಣ್ಣೆಯಿಂದ ಇಬ್ಬರು ಸೇರಿಕೊಂಡು ಶ್ರೀಮತಿ ಶೀಲಾರವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, October 16, 2015

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
               ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 15/10/2015ರಂದು ನಗರದ ಚಾಮುಂಡೇಶ್ವರಿ ನಗರದ ನಿವಾಸಿ ಡಾಲುರವರು ಮನೆಯಲ್ಲಿರುವಾಗ ಇಂದಿರಾನಗರದ ಕಾರ್ತಿಕ್‌ ಎಂಬಾತನು ಆತನ ಸ್ನೇಹಿತನ ಆಟೋ ರಿಕ್ಷಾದಲ್ಲಿ ಬಂದು, ನಿನ್ನೆ ದಿನ ರಾತ್ರಿ ಗಲಾಟೆ ಸಮಯದಲ್ಲಿ ಆತನ ಮೊಬೈಲ್ ಬಿದ್ದು ಹೋಗಿದ್ದು ಹುಡುಕಲು ಕರೆದುಕೊಂಡು ಹೋಗಿ  ಚಾಮುಂಡೇಶ್ವರಿ ನಗರ ಜಂಕ್ಷನ್‌ನಲ್ಲಿ ಡಾಲುರವರು  ಮೊಬೈಲ್ ಹುಡುಕುತ್ತಿದ್ದಾಗ ಕಾರ್ತಿಕ್‌ ತನ್ನ ಸೊಂಟದಿಂದ ಚಾಕುವನ್ನು ತೆಗೆದು ಡಾಲುರವರಿಗೆ ಚುಚ್ಚಲು ಯತ್ನಿಸಿದಾಗ ಡಾಲುರವರು ಚಾಕುವನ್ನು ಕೈಯಲ್ಲಿ ಹಿಡಿದುಕೊಂಡಿದ್ದು, ಅವರ ಕೈಗೆ ಗಾಯವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೋಟಾರು ಸೈಕಲ್‌ ಕಳವು
                    ನಿಲ್ಲಿಸಿದ್ದ ಮೋಟಾರು ಸೈಕಲನ್ನು ಕಳವು ಮಾಡಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಕಾಲೂರು ಗ್ರಾಮದ ದೇವಸ್ತೂರು ನಿವಾಸಿ ಅಯ್ಯಣ್ಣ ಎಂಬವರು ಅವರ ಬಾಪ್ತು ಕೆಎ-12-ಎಲ್-9385 ರ ಮೋಟಾರ್ ಸೈಕಲನ್ನು ದಿನಾಂಕ 02-10-2015 ರಂದು ಸಮಯ ಮದ್ಯಾಹ್ನ 2.00 ಗಂಟೆಗೆ ಖಾಸಗಿ ಬಸ್ಸು ನಿಲ್ದಾಣದಲ್ಲಿರುವ ಹಾಲಿನ ಡೈರಿ ಮುಂಭಾಗದಲ್ಲಿ ಕೀ ಸಮೇತವಾಗಿ ನಿಲ್ಲಿಸಿ, ಪಕ್ಕದ ಅಂಗಡಿಗಳಿಗೆ ಹೋಗಿ ವಾಪಾಸು ಸಮಯ 2.45 ಗಂಟೆಗೆ ಬಂದು ನೋಡಿದಾಗ ಅಂದಾಜು ರೂ. 45,000/- ಮೌಲ್ಯದ ಬೈಕ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದಿನಾಂಕ 15/10/2015ರಂದು ತಡವಾಗಿ ದೂರು ನೀಡಿದ್ದು ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ ಗಾಯಾಳು ಸಾವು
                ರಸ್ತೆ ಅಫಘಾತವೊಂದರಲ್ಲಿ ಗಾಯಾಳುವಾಗಿದ್ದ ವ್ಯಕ್ತಿಯೊಬ್ಬರು ಮೃತರಾಗಿರುವುದು ತಿಳಿದು ಬಂದಿದೆ. ದಿನಾಂಕ 12/10/2015ರಂದು ಸಿದ್ದಾಪುರ ಬಳಿಯ ಗೂಡ್ಲೂರು ಚೆನ್ನಂಗಿ ಗ್ರಾಮದ ನಿವಾಸಿ ಜಾನ್‌ ಎಂಬವರು ಕೆಎಸ್‌ಆರ್‌ಟಿಸಿ ಬಸ್‌ ಒಂದರಲ್ಲಿ ಪ್ರಯಾಣಿಸುತ್ತಿದ್ದಾಗ ಸಿದ್ದಾಪುರ ಚರ್ಚ್‌ ಹಾಲ್‌ ಬಳಿ ಬಸ್‌ ಜೀಪೊಂದಕ್ಕೆ ಡಿಕ್ಕಿಯಾದ ಪರಿಣಾಮ ಜಾನ್‌ರವರಿಗೆ ತೀವ್ರ ತರದ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಿನಾಂಕ 13/10/2015ರಂದು ಗಾಯಾಳು ಜಾನ್‌ರವರು ಅಫಘಾತದ ನೋವು ಮರು ಕಳಿಸಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಂಗ್ರಹ
                      ನಾಪೋಕ್ಲು ಬಳಿಯ ಚೆರಿಯಪರಂಬು ಎಂಬಲ್ಲಿ ಪರವಂಡ ಸಾದಲಿ, ಹ್ಯಾರಿಸ್‌, ಪುಲಿಯಂಡ ಮೊಯಿದು, ಅಬ್ದುಲ್‌, ಸಾದಲಿ, ಶರೀಫ್‌ ಮತ್ತು ಅಬೂಬಕರ್‌ ಎಂಬವರುಗಳ ಅಕ್ರಮವಾಗಿ ಸರ್ಕಾರದ ಪರವಾನಗಿಯಿಲ್ಲದೆ ಸುಮಾರು 15 ಲೋಡುಗಳಷ್ಟು ಮರಳನ್ನು ಶೇಖರಿಸಿಟ್ಟಿರುವುದಾಗಿ ನಾಪೋಕ್ಲು ಹೋಬಳಿ ಕಂದಾಯ ಪರಿವೀಕ್ಷಕ ಕೆ.ಡಿ.ರಾಮಯ್ಯ ಎಂಬವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, October 15, 2015

ಶಸ್ತ್ರಚಿಕಿತ್ಸೆ ವೇಳೆ  ಯುವಕನ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ:

     ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದ ವೇಳೆ ವ್ಯಕ್ತಿಸಾವನಪ್ಪಿದ್ದು, ವೈದ್ಯರ ವಿರುದ್ಧ ದೂರು ನೀಡಿದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಆಲದಳ್ಳಿ ಗ್ರಾಮದ ನಿವಾಸಿ ಬಿ.ಕುಮಾರ ಎಂಬವರ ಮಗ 22 ವರ್ಷದ ಗಗನ್ ಎಂಬಾತನನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ವೈದ್ಯದಾರ ಡಾ: ಆನಂದ್ ಕುಮಾರ್ ಹಾಗು ಡಾ: ರವಿಕುಮಾರ್ ರವರುಗಳು ಯಾವುದೇ ಪರೀಕ್ಷೆಗಳನ್ನು ನಡೆಸದೇ ಕೇವಲ ರಕ್ತ ಪರೀಕ್ಷೆಯ ಆದಾರದ ಮೇರೆಗೆ ದಿನಾಂಕ 14-10-2015 ರಂದು ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ತಿಳಿಸಿ ಯಾವುದೇ ಪೂರ್ವ ತಯಾರಿ ಇಲ್ಲದೇ ಶಸ್ತ್ರ ಚಿಕಿತ್ಸೆಯನ್ನು ನಡೆಸಿದ ಸಂದರ್ಭದಲ್ಲಿ ಗಗನ್ ಸಾವನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮಗನ ಸಾವನಪ್ಪಿರುತ್ತಾನೆಂದು ಆರೋಪಿಸಿ ಬಿ.ಕುಮಾರ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನಾಕಾರಣ ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

    ಗೋಣಿಕೊಪ್ಪ ಠಾಣಾ ಸರಹದ್ದಿನ ಅರುವತ್ತೊಕ್ಲು ಗ್ರಾಮದ ನಿವಾಸಿ ಉದಯ ಎಂಬವರು ದಿನಾಂಕ 24-9-2015 ರಂದು ರಾತ್ರಿ 8-00 ಗಂಟೆಗೆ ಪಿ.ಹೆಚ್.ಎಸ್ ಕಾಲೋನಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಪಿ.ಎಸ್. ಸುಜೇಶ್ ಹಾಗು ರದೀಶ್ ಎಂಬವರು ಉದಯರವರನ್ನು ತಡೆದು ವಿನಾಕಾರಣ ಹಲ್ಲೆ ಮಾಡಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನ್ಯಾಯಾಲಯದಲ್ಲಿ ಸಲ್ಲಿಸಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅನಾರೋಗ್ಯದ ಹಿನ್ನಲೆ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ:

     ಸೋಮವಾರಪೇಟೆ ಠಾಣಾ ಸರಹದ್ದು ಕೋಡಹಳ್ಳಿ ಗ್ರಾಮ ಕುಮಾರಳ್ಳಿ ಶಾಂತಳ್ಳಿ ಹೋಬಳಿಯ ವಾಸಿ ಲೊಕೇಶ ಎಂಬವರ ಹೆಂಡತಿ ಅನಿತಳಿಗೆ ಸುಮಾರು 1 1/2 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು. ದಿನಾಂಕ 13-10-2015 ರಂದು ಬೆಳಿಗ್ಗೆ ತೋಟದಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಮೃತಪಟ್ಟಿರು ವ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, October 14, 2015

ಮನೆಗೆ ನುಗ್ಗಿ 14 ಲಕ್ಷ ಮೌಲ್ಯದ ಚಿನ್ನಾಭರಣ ಕಳವು:

     ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಭಾರೀ ಮೊತ್ತದ ಚಿನ್ನಾಭರಣ ಮತ್ತು ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ಪೊನ್ನಂಪೇಟೆ ನಗರದ ಮುಖ್ಯ ರಸ್ತೆಯ ಗ್ರಾಮ ಪಂಚಾಯ್ತಿ ಕಟ್ಟಡದ ಮುಂಬಾಗದಲ್ಲಿ ಶ್ರೀಮತಿ ರಾಧಿಕಾ ರವರು ತಮ್ಮ ಸಂಸಾರದೊಂದಿಗೆ ವಾಸವಾಗಿದ್ದು, ದಿನಾಂಕ 12-10-2015 ರಂದು ಮನೆಯವರೆಲ್ಲ ವೈದ್ಯಕೀಯ ತಪಾಸಣೆಗೆ ಮೈಸೂರಿಗೆ ಹೋಗಿದ್ದು, ಇದೇ ಸಮಯವನ್ನು ಸಾಧಿಸಿದ ಕಳ್ಳರು ಮನೆಯೊಳಗೆ ಬೀಗವನ್ನು ತೆರೆದು ಮನೆಯೊಳಗಿಂದ 36,000/- ರೂ ನಗದು, ಬೆಡ್ ರೂಂನಿಂದ ಹಾಗು ಮನೆಯ 1ನೇ ಅಂತಸ್ತಿನ ಅತ್ತೆ ಮಾವರವರು ಇರುವ ಕೋಣೆಗಳಿಂದ 2 ಪೀಚೆ ಕತ್ತಿ, ಚಿನ್ನದ ನಾಣ್ಯ, ಒಟ್ಟು ಅಂದಾಜು 576 ಗ್ರಾಮ ನಷ್ಟು ಅಂದಾಜು 14 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಹೊಂಡು ಹೀಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಅಪಘಾತ ಒಬ್ಬನ ದುರ್ಮರಣ, ಇಬ್ಬರಿಗೆ ಗಾಯ:

     ಮೋಟಾರ್ ಸೈಕಲ್ ನಲ್ಲಿ ಮೂವರು ಸಂಚರಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಒಬ್ಬ ಮೃತಪಟ್ಟು ಇಬ್ಬರಿಗೆ ಗಾಯಗಳಾದ ಘಟನೆ ವಿರಾಜಪೇಟೆ ಸಮೀಪದ ರಾಮನಗರದಲ್ಲಿ ನಡೆದಿದೆ. ದಿನಾಂಕ 13-10-2015 ರಂದು ಸಂಜೆ ರಾಮನಗರ ನಿವಾಸಿಗಳಾದ ಶರಣು, ಅಂಬುಜಾಕ್ಷ ಮತ್ತು ರಾಜೇಶ್ ಎಂಬವರು ಒಂದೇ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದು, ಸವಾರ ಶರಣು ಸದರಿ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಾಮನಗರದ ಸಾರ್ವಜನಿಕ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ಅವರ ಪೈಕಿ ಶರಣು ಮೃತಪಟ್ಟಿದ್ದು, ಉಳಿದ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ಅಕ್ರಮ ಮದ್ಯ ಮಾರಾಟ ಆರೋಪಿ ಬಂಧನ:

     ದಿನಾಂಕ 13-10-2015 ರಂದು ಸಮಯ 20.30 ಗಂಟೆಗೆ ಸೋಮವಾರಪೇಟೆ ಠಾಣಾಧಿಕಾರಿ ನಂದೀಶ್ ಕುಮಾರ್ ಹಾಗು ಸಿಬ್ಬಂದಿಯವರು ಸೋಮವಾರಪೇಟೆ ತಾಲೂಕು ಕೆಂಚಮ್ಮನ ಬಾಣೆ ಗ್ರಾಮದಲ್ಲಿ ಆರೋಪಿ ಸುಂದರೇಶರವರು ಅವರ ಅಂಗಡಿಯಲ್ಲಿ ಸರಕಾರದ ರಹದಾಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿ ಒಂದು ಪ್ಲಾಸ್ಟಿಕ್‌ ಚೀಲದಲ್ಲಿ ಇದ್ದ 90 ಎಂ.ಎಲ್‌ನ ORIGINAL CHOICE DELUXE VSOP BRANDY 38 ಪ್ಯಾಕ್ ಗಳು ಹಾಗೂ 180 ಎಂ.ಎಲ್‌ನ ORIGINAL CHOICE DELUXE VSOP BRANDY ಯ 5 ಬಾಟಲಿಗಳನ್ನು , ಅಮಾನತ್ತುಪಡಿಸಿಕೊಂಡು ಆರೋಪಿ ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಟ್ಟಿಹಾಕಿದ 3 ಕುರಿಗಳ ಕಳ್ಳತನ: 

    ಶನಿವಾರಸಂತೆ ಠಾಣಾ ಸರಹದ್ದಿನ 1ನೇ ವಿಭಾಗದಲ್ಲಿ ವಾಸವಿರುವ ಫಿರ್ಯಾದಿ ಎಸ್.ಎ. ಶರೀಫ್ ಎಂಬವರು ದಿನಾಂಕ 10-10-2015 ರಂದು ಸಮಯ ಸಂಜೆ 08-00 ಪಿ.ಎಂ ಗೆ ಶನಿವಾರಸಂತೆ 1 ನೇ ವಿಭಾಗದ ರಫಿ ಎಂಬವರ ಕೊಟ್ಟಿಗೆಯ ಹೊರಗೆ 10 ಕುರಿಗಳನ್ನು ಕಟ್ಟಿ ಹಾಕಿದ್ದು ದಿನಾಂಕ 11-10-2015 ರಂದು ಬೆಳಿಗ್ಗೆ 07-00 ಗಂಟೆಗೆ ಕೊಟ್ಟಿಗೆಗೆ ಹೋಗಿ ನೋಡಲಾಗಿ ಅಲ್ಲಿದ್ದ 10 ಕುರಿಗಳಲ್ಲಿ 3 ಕುರಿಗಳು ಕಳ್ಳತನವಾಗಿರುವುದು ಕಂಡು ಬಂದಿದ್ದು,ಸದರಿ ಕಳ್ಳತನವನ್ನು ಬಿದರೂರು ಗ್ರಾಮದ ಜಯಮ್ಮನವರ ಮಗ ಸುರೇಶನು ಮಾಡಿರಬಹುದೆಂದು ಸಂಶಯವಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Tuesday, October 13, 2015

ದಾರಿ ತಡೆದು ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ, ಕೊಲೆ ಬೆದರಿಕೆ:

     ವ್ಯಕ್ತಿಯೊಬ್ಬರ ದಾರಿ ತಡೆದು ಹಲ್ಲೆ ನಡೆಸಿ ಕೊಲೆಬೆದರಿಕೆಯೊಡ್ಡಿದ ಘಟನೆ ಸೋಮವಾರಪೇಟೆ ಠಾಣೆ ವ್ಯಾಪ್ತಿಯ ಶಾಂತಳ್ಳಿ ಎಂಬಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಯಡೂರು ಗ್ರಾಮದ ನಿವಾಸಿ ಪಿರ್ಯಾದಿ ಮಂಜುನಾಥ ಎಂಬವರು ತಮ್ಮ ಸಹೋದರನೊಂದಿಗೆ ಶಾಂತಳ್ಳಿಯಲ್ಲಿರುವ ತಮ್ಮ ಅಜ್ಜಿಯನ್ನು ನೋಡುವ ಸಲುವಾಗಿ ದಿನಾಂಕ 11/10/2015 ರಂದು ರಾತ್ರಿ 8-45 ಗಂಟೆಗೆ ಶಾಂತಳ್ಳಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮಾವನ ಮಗ ಜನಾರ್ಧನ ಎಂಬುವವರು ಕೈಯಲ್ಲಿ ಕತ್ತಿಯೊಂದಿಗೆ ಬಂದು ದಾರಿ ತಡೆದು ಹಳೇ ದ್ವೇಷದಿಂದ ಕತ್ತಿಯಿಂದ ತುಟಿಯ ಬಾಗಕ್ಕೆ ಕಡಿದ ಪರಿಣಾಮ ತುಟಿಯ ಕೆಳಬಾಗ ಸ್ವಲ್ಪ ತುಂಡಾಗಿ ಬಿದ್ದಿರುವುದಾಗಿ ಹಾಗು ಕೊಲೆ ಮಾಡದೇ ಬಿಡುವುದಿಲ್ಲ ಎಂಬುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ದ್ವೇಷ, ವ್ಯಕ್ತಿ ಮೇಲೆ ಹಲ್ಲೆ:

     ಹಳೇ ದ್ವೇಷದಿಂದ ವ್ಯಕ್ತಿಯೊಬ್ಬರು ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ತಾಲೋಕಿನ ಯಡೂರು ಗ್ರಾಮದಲ್ಲಿ ನಡೆದಿದೆ. ಯಡೂರು ಗ್ರಾಮದ ನಿವಾಸಿ ಎಂ. ಈಶ್ವರ ಎಂಬವರ ಮನೆಗೆ ಅವರ ಅಕ್ಕನ ಮಗನಾದ ಕೆ.ಆರ್. ಮಂಜುನಾಥ ದಿನಾಂಕ 11-10-2015 ರಂದು ರಾತ್ರಿ 9-00 ಗಂಟೆಯ ವೇಳೆಯಲ್ಲಿ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿ ಎಂ.ಈಶ್ವರರವರ ಮಗನಾದ ಜನಾರ್ಧನರವರನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣದ ದಾಖಲಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮನೆಯಿಂದ ಚಿನ್ನಾಭರಣ ಕಳವು:

     ಸೋಮವಾರಪೇಟೆ ತಾಲೋಕು ಮಾದಾಪುರದ ವಾಸಿ ಶ್ರೀಮತಿ ದಿವ್ಯ ಎಂಬವರ ಮನೆಯಲ್ಲಿನ ಬೀರುವಿನಲ್ಲಿಟ್ಟಿದ ತಾಳಿ ಚೈನು ಮತ್ತು ಅವರ ತಾಯಿಯ ಚಿನ್ನದ ಚೈನು ಕಳ್ಳತನವಾಗಿದ್ದು, ಸದರಿ ಚಿನ್ನಾಭರಣವನ್ನು ಅವರ ಪಕ್ಕದ ಮನೆಯ ನಿವಾಸಿ ಜ್ಯೋತಿ ಎಂಬವರು ಕಳ್ಳತನ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲ ಇರುವ ವಾಹನವನ್ನು ವ್ಯಕ್ತಿಗೆ ಮಾರಿ ವಂಚನೆ:

     ಖಾಸಗಿ ಸಂಸ್ಥೆಯೊಂದರಲ್ಲಿ ಸಾಲವಿರುವ ವಾಹನವನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿ ಹಣ ಪಡೆದು ವಂಚಿಸಿರುವ ಘಟನೆ ಕುಶಾಲನಗರದ ನೇತಾಜಿ ಬಡಾವಣೆಯಲ್ಲಿ ನಡೆದಿದೆ. ಕೂಡ್ಲುರು ಗ್ರಾಮದ ಶರತ್ @ ತಾಂಡವೇಶ್ವರ, ಹಾಗು ಹೆಬ್ಬಾಲೆ ಗ್ರಾಮದ ನಿವಾಸಿ ರಮೇಶ ಎಂಬವಗಳು ಸೇರಿ ಮಹೀಂದ್ರ ಪೈನಾನ್ಸ್ ನಲ್ಲಿ ಸಾಲವಿರುವ ಕಾರೊಂದನ್ನು ಕುಶಾಲನಗರದ ನೇತಾಜಿ ಬಡಾವಣೆ ನಿವಾಸಿ ಎಸ್.ಎಸ್. ಪಾಲಾಕ್ಷ ಎಂಬುವರಿಗೆ ಮಾರಾಟ ಮಾಡಿದ್ದು, ಸದರಿ ಕಾರನ್ನು ಮಹೀಂದ್ರ ಪೈನಾನ್ಸ್ ರವರು ದಿನಾಂಕ 5-10-2015 ರಂದು ವಶಕ್ಕೆ ಪಡದುಕೊಂಡಿದ್ದು, ಶರತ್ ಹಾಗು ರಮೇಶರವರು ಸಾಲದ ವಿಚಾರವನ್ನು ತಿಳಿಸದೇ 1.29 ಲಕ್ಷ ಹಣವನ್ನು ಪಡೆದುಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿಧಿಯ ಆಸೆ ತೋರಿಸಿ ಮಹಿಳೆಯ ಕೊಲೆ:

   ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಇಬ್ನಿವಳವಾಡಿ ಗ್ರಾಮದ ನಂದಿನೆರವಂಡ ಪೌತಿ ಸೋಮಯ್ಯನವರ ಮಗ ನಾಣಯ್ಯ ನವರ ಪತ್ನಿ ಆಶಾರವರನ್ನು ದಿನಾಂಕ 10-10-2015 ರಂದು ಅದೇ ಗ್ರಾಮದ ಅಯ್ಯಂಡ ಧರಣಿ ಎಂಬವರ ಮನೆಗೆ ಸದರಿ ಆಶಾರವರು ಪೂಜೆಗೆ ಬಂದಿದ್ದವರನ್ನು ಬಂಧಿಸಿ ಧರಣಿ ಮತ್ತು ಅವರ ಮಕ್ಕಳಾದ ಕವನ್‌ ಕಾರ್ಯಪ್ಪ, ಭವನ್‌ ಚಂಗಪ್ಪ ಮತ್ತು ದೇವರು ಬರುವ ಕಳ್ಳಸ್ವಾಮಿಯಾದ ಇಕ್ಬಾಲ್‌ ಅಲಿಯಾಸ್‌ ದುರ್ಗದತ್ತ ಕಾಳಿದಾಸ ನಿಧಿಯ ಆಸೆಗಾಗಿ ಕೊಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Monday, October 12, 2015

ಕೇರಳ ಅರಣ್ಯ ಇಲಾಖೆ ಅಧಿಕಾರಿ ಮೇಲೆ ಹಲ್ಲೆ:

     ಕೇರಳ ರಾಜ್ಯದ ಕಣ್ಣೂರು ಜಲ್ಲೆಯ ಫಾರೆಸ್ಟ್ ಸೆಕ್ಷೆನ್ ಅಧಿಕಾರಿ ಎಂ. ರಾಜನ್ ಎಂಬವರು ದಿನಾಂಕ: 09-10-2015 ರಂದು ವಾಚರ್ ಆಶೋಕ ಮತ್ತು ಇತರ ದಿನಕೊಲಿ ವಾಚರ್ ಗಳೊಂದಿಗೆ ಕೊಟ್ಟಯೂರು ಪಾರೆಸ್ಟ್ ರೇಂಜ್ ನಲ್ಲಿ ಟ್ರಕ್ಕಿಂಗ್ ರೊಟ್ ಚೆಕ್ಕಿಂಗ್ ಮಾಡಿ, ಊಟ ಮಾಡಲು ಮುಂದಿನ ಕರ್ನಾಟಕ ಅರಣ್ಯ ದಾಟಿ ಬಿರುನಾಣಿ ಗ್ರಾಮಕ್ಕೆ ಬರುವಾಗ್ಗೆ ರಸ್ತೆಯ ಹತ್ತಿರ ಮನೆಯಲ್ಲಿದ್ದವರು ಮನೆಯಿಂದ ಬಂದು ನೀವು ಯಾರು, ಎಲ್ಲಿಗೆ ಹೋಗುತ್ತಿದ್ದಿರ ಎಂದು ವಿಚಾರಿಸಿದ್ದು ಅದೇ ವೇಳೆ ಆರೋಪಿ ನರೇಂದ್ರ ಎಂಬವರು ಅಲ್ಲಿಗೆ ಜೀಪಿನಲ್ಲಿ ಬಂದು ಎಕಾಎಕಿ ಕೈಯಿಂದ ಹೊಡೆದುದಲ್ಲದೇ, ಅಲ್ಲೇ ಬಿದ್ದಿದ್ದ ದೊಣ್ಣೆಯಿಂದ ತಲೆಗೆ ಹೊಡೆದು ರಕ್ತ ಗಾಯ ಪಡಿಸಿರುವುದಾಗಿ ಎಂ. ರಾಜನ್ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮದ್ಯದ ಅಮಲಿನಲ್ಲಿ ಗುಂಡಿಗೆ ಬಿದ್ದು ಮಹಿಳೆಯ ಸಾವು:

    ಮಹಿಳೆಯೊಬ್ಬರು ವಿಪರೀತ ಮದ್ಯ ಸೇವಿಸಿ ಅಮಲಿನಲ್ಲಿ ಗುಂಡಿಯೊಂದಕ್ಕೆ ಬಿದ್ದು ಮೃತಪಟ್ಟ ಘಟನೆ ಸಿದ್ದಾಪುರದ ದುಬಾರೆ ಹಾಡಿಯಲ್ಲಿ ನಡೆದಿದೆ. ಕರಡಿಗೂಡು ಗ್ರಾಮದ ನಿವಾಸಿ ಮಧು ಎಂಬವರ ಪತ್ನಿ ಸಣ್ಣಮುತ್ತ ಎಂಬಾಕೆ ದಿನಾಂಕ 9-10-2015 ರಂದು ವಿಪರೀತ ಮದ್ಯ ಕುಡಿದು ಮನೆಯ ಹೊರಗೆ ಹೋಗಿದ್ದು ಮದ್ಯದ ಅಮಲಿನಲ್ಲಿ ಮನೆಯ ಹತ್ತಿರದ ಮೂರು ಅಡಿ ಆಳದ ಗುಂಡಿಗೆ ಬಿದ್ದು ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಅವಘಡ ಚಾಲಕನಿಗೆ ಗಾಯ:

     ದಿನಾಂಕ 10-10-2015 ರಂದು ದ.ಕ.ಜಿಲ್ಲೆಯ ಸೂರತ್ ಕಲ್ ನಿವಾಸಿ ಹಿದಾಯತ್ತುಲ್ಲಾ ಎಂಬವರಿಗೆ ಸೇರಿದ ಲಾರಿಯನ್ನು ಅದರ ಚಾಲಕ ಮಂಜುನಾಥ ಎಂಬವರು ಲಾರಿ ಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ಸಾರ್ವಜನಿಕ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಚಾಲಕ ಗಾಯಗೊಂಡು ಲಾರಿ ಜಖಂ ಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಮೋಟಾರ್ ಸೈಕಲ್ ಡಿಕ್ಕಿ ಸವಾರಿಗೆ ಗಾಯ:

     ಬೆಂಗಳೂರಿನ ನಿವಾಸಿ ಅರ್ಜುನ್ ಎಂಬವರು ದಿನಾಂಕ 11-10-2015 ರಂದು ನ ತನ್ನ ಸ್ಹೇಹಿತರಾದ ಬೋಪಣ್ಣ, ವೈಭವ್, ಕೌಶಿಕ್, ಹಾಗೂ ಪ್ರತಾಪ್ ರವರೊಂದಿಗೆ ಭಾಗಮಂಡಲಕ್ಕೆ ಹೋಗುವ ಸಲುವಾಗಿ ಪೊನ್ನಂಪೇಟೆಯಿಂದ ಮಡಿಕೇರಿ ಕಡೆಗೆ ಸಮಯ 08.45 ಎ.ಎಂ.ಗೆ ಬರುತ್ತಿರುವಾಗ್ಗೆ ಮೆಕೇರಿ ಬಳಿ ಮೋಟಾರ್ ಸೈಕಲ್ಲನ್ನು ಅದರ ಸವಾರ ಮಂಜು ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅರ್ಜುನ್ ರವರು ಚಾಲನೆ ಮಾಡುತ್ತಿದ್ದ ಕೆಎ-03-ಎಬಿ-8647 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲಿನಲ್ಲಿದ್ದ ಇಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Sunday, October 11, 2015

ಬೈಕ್ ಗೆ ಲಾರಿ ಡಿಕ್ಕಿ, ಸವಾರನ ದುರ್ಮರಣ:

     ಲಾರಿಯೊಂದು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ಮೃತಪಟ್ಟಿರುವ ಘಟನೆ ಕುಶಾಲನಗರ ಠಾಣಾ ಸರಹದ್ದಿನ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 10-10-2015ರಂದು ಚಿಕ್ಕಳುವಾರ ಗ್ರಾಮದ ನಿವಾಸಿ ಪಿರ್ಯಾದಿ ವಿಜಯಕುಮಾರ್ ಮತ್ತು ಎ.ಆರ್ ದಿನೇಶ್ ಎಂಬವರು ಶುಂಠಿ ವ್ಯಾಪಾರದ ಸಂಬಂಧ ಮೋಟಾರ್ ಸೈಕಲ್ ನಂ.ಕೆ.ಎ.12-ಎಲ್-8066ರಲ್ಲಿ ಬಾಣವಾರಕ್ಕೆ ಹೋಗಿ ಕೆಲಸ ಮುಗಿಸಿ ಸಮಯ ಅಂದಾಜು 02-45 ಪಿ ಎಂ ಗೆ ವಾಪಾಸ್ಸು ಬರುತ್ತಿರುವಾಗ್ಗೆ ಸಿದ್ದಲಿಂಗಪುರ ಗ್ರಾಮದ ವಿಜಿ ಎಂಬವರ ಮನೆ ಮುಂದೆ ಸಾರ್ವಜನಿಕ ರಸ್ತೆಯ ತಿರುವಿನಲ್ಲಿ ಎದುರುಗಡೆಯಿಂದ ಬಂದ ಕೆಎ 55-9819ರ ಲಾರಿಯನ್ನು ಅದರ ಚಾಲಕ ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ದಿನೇಶ್ ರವರು ಚಾಲಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಮೋಟಾರ್ ಸೈಕಲ್ ಸಮೇತ ಇಬ್ಬರೂ ಕೆಳಗೆ ಬಿದ್ದು ಹಿಂಬದಿ ಸಾವರ ವಿಜಯಕುಮಾರ್ ರವರ ಬಲಕಾಲಿಗೆ, ಬಲ ಕೈಗೆ ಗಾಯವಾಗಿದ್ದು ಬೈಕ್ ಸವಾರ ದಿನೇಶ್ ರವರಿಗೆ ಗಂಭೀರ ಗಾಯಗಳಾಗಿ ಅವರುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ದಿನೇಶ್ ರವರು ಮೃತಪಟ್ಟಿದ್ದು, ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿಯ ಆತ್ಮಹತ್ಯೆ:

     ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀಮಂಗಲ ಹತ್ತಿರದ ಹೈಸೊಡ್ಲೂರು ಗ್ರಾಮದಲ್ಲಿ ನಡೆದಿದೆ. ಹೈಸೊಡ್ಲೂರು ಗ್ರಾಮದ ನಿವಾಸಿ ಶ್ರೀಮತಿ ಪಣಿಎರವರ ಸೀತೆ ಎಂಬವರ ಪತಿ ಮಂಜು ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 9-10-2015 ರಂದು ತಾನು ವಾಸವಾಗಿದ್ದ ಲೈನುಮನೆಯಲ್ಲಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ದ್ವೇಷದ ಹಿನ್ನಲೆ, ದಾರಿ ತಡೆದು ಮಹಿಳೆ ಮೇಲೆ ಹಲ್ಲೆ:

     ಹಳೇ ವೈಷಮ್ಯದಿಂದ ಮಹಿಳೆಯೊಬ್ಬರ ದಾರಿ ತಡೆದು ಮತ್ತೋರ್ವ ಮಹಿಳೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದ ನ್ಯಾಯಾಲಯದ ಮುಂದುಗಡೆ ನಡೆದಿದೆ. ದಿನಾಂಕ 10-10-2015 ರಂದು ಸಮಯ 11.40 ಗಂಟೆಗೆ ಪಿರ್ಯಾದಿ ಶ್ರೀಮತಿ ರೀಮಾ ರವರು ನ್ಯಾಯಾಲಯದಲ್ಲಿ ಲೋಕ ಅದಾಲತ್‌ ಕರ್ತವ್ಯ ಮುಗಿಸಿಕೊಂಡು ಹೊರಗೆ ಬಂದಾಗ ಆರೋಪಿ ಮಡಿಕೇರಿ ನಗರದ ಮಂಗಳೂರು ರಸ್ತೆಯಲ್ಲಿ ನೆಲೆಸಿರುವ ಶ್ರೀಮತಿ ನೇತ್ರಾವತಿ ಎಂಬಾಕೆ ಹಳೆ ವೈಷಮ್ಯದಿಂದ ಶ್ರೀಮತಿ ರೀಮಾರವರ ದಾರಿ ತಡೆದು, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆದು ನೋವುಪಡಿಸಿ, ಅವಮಾನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾಲದ ವಿಚಾರ ವ್ಯಕ್ತಿ ಮೇಲೆ ಹಲ್ಲೆ:

    ಕೊಟ್ಟ ಸಾಲವನ್ನು ಕೇಳಿದ ವಿಚಾರದಲ್ಲಿ ಜಗಳ ಮಾಡಿ  ಸಾಲ ಕೊಟ್ಟವನ ಮೇಲೆ  ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದ ಸುಬ್ರಮಣ್ಯ ನಗರದಲ್ಲಿ ನಡೆದಿದೆ. ರಾಜೀವ ಎಂಬವರು ಮಡಿಕೇರಿ ನಗರದ ನಿವಾಸಿ ಸುನಿಲ್ ಎಂಬವರಿಗೆ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದು ಅದನ್ನು ಕೇಳಲು ದಿನಾಂಕ 9-10-2015 ರಂದು ರಾಜೀವರವರು ಸುನಿಲ್ ರವರ ಮನೆಗೆ ಹೋಗಿ ಸಾಲದ ಹಣವನ್ನು ಕೇಳಿದ್ದು ಇದರಿಂದ ಕೆರಳಿದ ಸುನಿಲ್ ಹಣವನ್ನು ನೀಡುವುದಿಲ್ಲ ಎಂದು ಹೇಳಿ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಲು ಗಣಿಗಾರಿಕೆ, ವ್ಯಕ್ತಿಗೆ ಕೊಲೆ ಬದರಿಕೆ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಕಲ್ಲೂರು ಗ್ರಾಮದಲ್ಲಿ ಎಸ್‌‌.ಕೆ ರಾಜ್‌‌‌ಕುಮಾರ್‌‌ ಮತ್ತು ವೈ.ಎಂ ಸ್ವರೂಪ್‌‌ ರವರುಗಳು ಗಣಿಗಾರಿಕೆ ನಡೆಸುತ್ತಿದ್ದು ಸದ್ರಿ ಗಣಿಗಾರಿಕೆಯನ್ನು ಪಿರ್ಯಾದಿ ಎಂ.ಎಸ್. ನಾಣಯ್ಯ ಎಂಬವರು ನಿಲ್ಲಿಸುವಂತೆ ತಿಳಿಸಿದ್ದು ಈ ವಿಚಾರವಾಗಿ ಎಸ್‌‌.ಕೆ ರಾಜ್‌‌‌ಕುಮಾರ್‌‌ ಮತ್ತು ವೈ.ಎಂ ಸ್ವರೂಪ್‌‌ ರವರುಗಳು ಕಲ್ಲೂರು ಗ್ರಾಮದ ಕೆ.ಎಸ್‌‌ ವಸಂತ ಎಂಬುವರಿಗೆ ಮೊಬೈಲ್‌‌ ಮೂಲಕ ಕರೆ‌ ಮಾಡಿ ಪಿರ್ಯಾದಿ ಮತ್ತು ಅವರ ಮಗ ಚಿಂತನ್‌‌ ರವರಿಗೆ ಎಚ್ಚರದಿಂದ ಇರಲು ಹೇಳಿ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

Saturday, October 10, 2015

ಕಾರಿಗೆ ಜೀಪು ಡಿಕ್ಕಿ
            ನಿಲ್ಲಿಸಿದ್ದ ಕಾರೊಂದಕ್ಕೆ ಜೀಪನ್ನು ಹಿಂದಕ್ಕೆ ಚಾಲಿಸಿ ಡಿಕ್ಕಿ ಪಡಿಸಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 09/10/2015ರಂದು ಮಡಿಕೇರಿ ನಗರದ ಹಿಲ್‌ ರಸ್ತೆಯಲ್ಲಿರುವ ಹಿಲ್‌ ವ್ಯೂ ಹೋಟೆಲಿನ ಮುಂಭಾಗದಲ್ಲಿ ಕೆಎ-12-ಎಂ-4765ರ ಜೀಪನ್ನು ಅದರ ಚಾಲಕನು ಅಜಾಗರೂಕತೆಯಿಂದ ಹಿಂದಕ್ಕೆ ಚಾಲಿಸಿ ಅಲ್ಲಿಯೇ ಕರ್ಣಂಗೇರಿ ನಿವಾಸಿ ಸುರೇಶ್‌ ಎಂಬವರು ನಿಲ್ಲಿಸಿದ್ದ ಅವರ ಕೆಎ-12-ಎನ್‌-439ರ ಮಾರುತಿ 800 ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿ ಉಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಸಾಗಾಟ, ಮಹಿಳೆ ಬಂಧನ
          ಮಂಗಳೂರಿನಿಂದ ಮಡಿಕೇರಿಯ ಕರ್ಣಂಗೇರಿಯ ಕಾರಾಗೃಹಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಜಿಲ್ಲಾ ಅಪರಾಧ ಪತ್ತೆ ದಳದ ನಿರೀಕ್ಷಕರಾದ ಮುರಳೀಧರ್‌ರವರು ಸಿಬ್ಬಂದಿಗಳೊಂದಿಗೆ ದಿನಾಂಕ 09/10/2015ರಂದು ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಆಟೋ ನಿಲ್ದಾಣದಲ್ಲಿ ಮಂಗಳೂರಿನ ಪಂಜೆ ಮೊಗರು ನಿವಾಸಿ ಸಫಿಯಾ ಎಂಬಾಕೆಯನ್ನು ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ ಆಕೆಯ ಬಳಿ ಸುಮಾರು 175 ಗ್ರಾಂ ಗಳಷ್ಟು ಅಕ್ರಮ ಗಾಂಜಾ ಪತ್ತೆಯಾಗಿದ್ದು ಆಕೆಯನ್ನು ಬಂಧಿಸಿ ಮಾಲು ಸಮೇತ ಮಡಿಕೇರಿ ನಗರ ಠಾಣೆಗೆ ಒಪ್ಪಿಸಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
              ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆಯಲ್ಲಿ ನಡೆದಿದೆ. ದಿನಾಂಕ 09/10/2015ರಂದು 7ನೇ ಹೊಸಕೋಟೆಯ ಊರುಗುಪ್ಪೆ ಪೈಸಾರಿ ನಿವಾಸಿ ಕೆ.ಪಿ.ರವಿ ಎಂಬಾತನು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಮಾಡಿಗೆ ನೈಲಾನ್‌ ಹಗ್ಗದಿಂದ ನೇಣು ಹಾಕಿ ಕುತ್ತಿಗೆಗೆ ಬಿಗಿದುಕೊಂಡು ಸಾವನ್ನಪ್ಪಿರುವುದಾಗಿ ರವಿಯ ಪತ್ನಿ ದೂರು ನೀಡಿದ್ದು, ರವಿಯು ಮಾನಸಿಕ ಅಸ್ವಸ್ಥನಾಗಿದ್ದು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆನ್ನಲಾಗಿದೆ. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ ಪ್ರಕರಣ
              ಮಹಿಳೆಯೊಬ್ಬರಿಗೆ ಪತಿಯ ಮನೆಯವರು ವರದಕ್ಷಿಣೆಗಾಗಿ ದೈಹಿಕ ಕಿರುಕುಳ ನೀಡಿದ ಘಟನೆ ಶನಿವಾರಸಂತೆ ಬಳಿಯ ಬೆಳ್ಳಾರಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಳ್ಳಾರಳ್ಳಿ ನಿವಾಸಿ ಕಾವ್ಯ ಎಂಬಾಕೆಯನ್ನು ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಉಮ್ಮತ್ತೂರು ನಿವಾಸಿ ಯು.ಪಿ.ಉಮೇಶ ಎಂಬಾತನಿಗೆ ವಿವಾಹ ಮಾಡಿ ಕೊಟ್ಟಿದ್ದು, ಮದುವೆಯ ನಂತರ ಪತಿ ಉಮೇಶ ಮತ್ತು ಆತನ ಮನೆಯವರಾದ ಕೆಂಚಮ್ಮ ಪುಟ್ಟಯ್ಯ, ರೂಪ ಮತ್ತು ಲೋಕೇಶ ಎಂಬವರು ಕಾವ್ಯಳನ್ನು ವರದಕ್ಷಿಣೆಗಾಘಿ ಪೀಡಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಪರಿಣಾಮ ಕಾವ್ಯಳಿಗೆ ಗರ್ಭಪಾತವಾಗಿದ್ದು, ಪುನಃ ತಂದೆಯ ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಾಲಕನಿಗೆ ಲಾರಿ ಡಿಕ್ಕಿ
              ಬಾಲಕನೋರ್ವನಿಗೆ ಲಾರಿ ಡಿಕ್ಕಿಯಾದ ಘಟನೆ ವಿರಾಜಪೇಟೆ ಬಳಿಯ ಪೆರುಂಬಾಡಿಯಲ್ಲಿ ನಡೆದಿದೆ. ದಿನಾಂಕ 7-10-2015 ರಂದು ಆರ್ಜಿ ಗ್ರಾಮದ ಪೆರುಂಬಾಡಿ ನಿವಾಸಿ ಅಶೋಕ್‌ ಕುಮಾರ್‌ ಎಂಬವರ ಮಗ ಪ್ರಿಯಾಂಕ್ ಪೆರಂಬಾಡಿ ರಸ್ತೆಯ ಬದಿಯಲ್ಲಿದ್ದಾಗ ಕೆಎಲ್-58-ಸಿ-3419 ರ ಲಾರಿಯನ್ನು ಅದರ ಚಾಲಕ ಸಿಬು ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬಾಲಕ ಪ್ರಿಯಾಂಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಪ್ರಿಯಾಂಕ್‌ಗೆ ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, October 9, 2015

ಹಳೆ ದ್ವೇಷ, ವ್ಯಕ್ತಿಯ ಮೇಲೆ ಹಲ್ಲೆ
              ಹಳೆ ದ್ವೇಷದಿಂದ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಹಲ್ಲೆ ಮಾಡಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಮೇಕೇರಿ ಗ್ರಾಮದ ನಿವಾಸಿ ಆನಂದಎಂಬವರು ದಿನಾಂಕ 8-10-2015 ರಂದು ಮಡಿಕೇರಿ ನಗರದ ಕೆ.ಇ.ಬಿ ಬಳಿ ನಿಂತಿರುವಾಗ, ಮಡಿಕೇರಿ ನಗರದವರಾದ ಜಿತಿನ್‌ ಮತ್ತು ಕುಮಾರ್‌ ಎಂಬವರು ಅಲ್ಲಿಗೆ ಬಂದು, ಆನಂದರವರು ಅಂಬಿಕಾ ಎಂಬವರೊಂದಿಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋದ ವಿಚಾರದಲ್ಲಿ ವೈಮನಸ್ಸಿನಿಂದ ಕೈಯಿಂದ ಹೊಡೆದು, ಚೂಪಾದ ವಸ್ತುವಿನಿಂದ ಅವರ ಕೆನ್ನೆಗೆ ಚುಚ್ಚಿ ಹಲ್ಲೆನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪತ್ತೆ.
              ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಸೋಮವಾರಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 08/10/2015ರ ರಾತ್ರಿ ವೇಳೆ ಸೋಮವಾರಪೇಟೆ ಠಾಣಾ ಎಎಸ್‌ಐ ರವೀಧ್ರನಾಥ್‌ರವರುಸಿಬ್ಬಂದಿಯೊಂದಿಗೆ ನಗರಗಸ್ತುತಿರುಗುತ್ತಿರುವಾಗ ಬೆಟ್ಟದಳ್ಳಿ ನಿವಾಸಿ ಆಕಾಶ್‌ ಎಂಬಾತನು ಕೆಎ-12-ಎ-5819ರ ಪಿಕ್‌ಅಪ್‌ ಜೀಪಿನಲ್ಲಿ ಸರ್ಕಾರದ ಪರವಾನಗಿಯಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಮರಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಂಶಯಾಸ್ಪದ ವ್ಯಕ್ತಿಯ ಬಂಧನ
                ರಾತ್ರಿ ವೇಳೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯೊಬ್ಬನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 07-10-2015 ರಂದು ರಾತ್ರಿ ವೇಳೆ ಸೋಮವಾರಪೇಟೆ ಠಾಣಾ ಎಎಸ್‌ಐ ರವೀಂದ್ರನಾಥ್‍ರವರು ಪೊಲೀಸ್‌ ಸಿಬ್ಬಂದಿಯೊಂದಿಗೆನಗರ  ಗಸ್ತು ಕರ್ತವ್ಯದಲ್ಲಿರುವಾಗ  ಸೋಮವಾರಪೇಟೆ ನಗರದ ಕ್ಲಬ್‍ ರಸ್ತೆ ಯ ಮಾರ್ಕೆಟ್‍ ಬಳಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಲೋಕೇಶ್‌ ಎಂಬಾತ ಯಾವುದೋ ಅಪರಾಧ ಎಸಗುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದುದನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಕದ್ದು ಸಾಗಾಟ
          ಅಕ್ರಮವಾಗಿ ಮರಳನ್ನು ಕದ್ದು ಸಾಗಾಟ ಮಾಡುತ್ತಿರುವ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಲಮುರಿ ಗ್ರಾಮದ ತೊತ್ತಿಯಂಡ ಪ್ರಭು ಎಂಬವರ ತೋಟದ ಬದಿಯಲ್ಲಿ ಕಾವೇರಿ ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಶೇಖರಿಸಿಟ್ಟಿದ್ದು ಸದ್ರಿ ಮರಳನ್ನು ಮೂರ್ನಾಡು ನಿವಾಸಿ ಸಾಮ್ರಾಟ್‌ ಎಂಬವರು ಸಾಗಿಸುತ್ತಿದ್ದು ಮರಳು ಅಕ್ರಮ ಸಾಗಾಟಕ್ಕೆ ಪೇರಿಯಂಡ ಕಾವೇರಪ್ಪ ಎಂಬವರು ಅವರ ತೋಟದೊಳಗೆ ದಾರಿ ಮಾಡಿಕೊಟ್ಟು ಸಹಕರಿಸುತ್ತಿರುವದಾಗಿ ಪಾರಾಣೆ ಕಂದಾಯ ವೃತ್ತದ ಗ್ರಾಮ ಲೆಕ್ಕಿಗ ಅನೂಪ್‌ ಸೆಬಾಸ್ಟಿನ್‌ ಎಂಬವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, October 8, 2015

ಹಣದ ವಿಚಾರದಲ್ಲಿ ಜಗಳ ದಂಪತಿ ಮೇಲೆ ಹಲ್ಲೆ:

     ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕೋತೂರು ಗ್ರಾಮದ ಗಾಂಡಂಗಡ ಪಾರ್ವತಿ ರವರ ಲೈನು ಮನೆಯಲ್ಲಿ ವಾಸವಿರುವ ಪಿರ್ಯಾಧಿ ಪಣಿಯರವರ ಸುಂದರಿ ಹಾಗು ಗಂಡ ಅಣ್ಣು ರವರು ಲೈನು ಮನೆಯಲ್ಲಿರುವಾಗ್ಗೆ ಪಣಿಯರವರ ಸುಂದರಿಯವರ ಗಂಡನ ತಮ್ಮನಾದ ಚಾಣೆ ಮನೆಯ ಮುಂದೆ ಅಂಗಳಕ್ಕೆ ಬಂದು ಹಣದ ವಿಚಾರದಲ್ಲಿ ಜಗಳ ತೆಗೆದು ಬಾಯಿಗೆ ಬಂದಂತೆ ಬೈದು ಕೈಯಲ್ಲಿದ್ದ ಕತ್ತಿಯಿಂದ ಅಣ್ಣುರವರ ತಲೆಯ ಭಾಗಕ್ಕೆ ಕಡಿದು, ಗಾಯಪಡಿಸಿ ತಡೆಯಲು ಹೋದ ಪಿರ್ಯಾಧಿಯವರ ಹಣೆಯ ಬಲಭಾಗಕ್ಕೆ ಗಾಯಡಿಸಿದ್ದು, ಚಿಕಿತ್ಸೆಗಾಗಿ ಕುಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ವಿರಾಜಪೇಟೆ ಹಾಲುಗುಂದ ಗ್ರಾಮದ ನಿವಾಸಿ ಮಾದಪ್ಪ @ ಕಾಶಿ ಎಂಬವರು ಹಾಲುಗುಂದ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಳೆಯ ದ್ವೇಷನ್ನಿಟ್ಟುಕೊಂಡು ಅದೇ ಗ್ರಾಮದ ಮುಕ್ಕಾಟಿರ ಮೋಹನ್ ಎಂಬವರು ದಾರಿ ತಡೆದು ಅವಾಚ್ಯ ಶಬ್ದಗಳಿಂದಿ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಕೊಲೆಗೆ ಯತ್ನ, ಪ್ರಕರಣ ದಾಖಲು: 

     ಗೋಣಿಕೊಪ್ಪ ನಗರದ ನಿವಾಸಿ ಪಿರ್ಯಾದಿ ಇಬ್ರಾಹಿಂ ರವರು ಗೋಣಿಕೊಪ್ಪ ನಗರದ ಮಾರ್ಕೆಟ್ ನಲ್ಲಿ ಕೆಲಸಮಾಡಿಕೊಂಡಿದ್ದು ದಿನಾಂಕ 7-10-2015 ರಂದು ಸಮಯ ಸುಮಾರು 17-30 ಗಂಟೆಗೆ ನಗರದ ಮಾರ್ಕೆಟ್ ಬಷೀರ್ ರವರ ಅಂಗಡಿಯಿಂದ ಬಟ್ಟೆಯ ಗಂಟನ್ನು ಅಂಗಡಿಯ ಹಿಂಭಾಗದಲ್ಲಿ ಇರುವ ಗೋಡಾನ್ ಗೆ ತಲೆಯ ಮೇಲೆ ಹೊತ್ತುಕೊಂಡು ಹೋಗುವಾಗ್ಗೆ ಎದರು ಗಡೆಯಿಂದ ಗೋಣಿಕೊಪ್ಪ ನಗರದ ವಾಸಿ ಈ ಪ್ರಕರಣದ ಆರೋಪಿಯಾದ ಕೃಷ್ಣ ರವರು ಬಂದು ಪಿರ್ಯಾದಿಯವರ ದಾರಿ ತಡೆದು ವಿನಾಕಾರಣ ಜಗಳ ತೆಗೆದು ಕೈನಿಂದ ಗುದ್ದಿ ಕೊಲೆ ಬೆದರಿಕೆ ಹಾಕಿ ಚಾಕುವಿನಿಂದ ಕೊಲ್ಲಲು ಪ್ರಯಾತ್ನಿಸಿದಾಗ ಸಮಯದಲ್ಲಿ ತಡೆಯಲು ಬಂದ ಅಜೀಜ್ ,ಬಂಟರ ರಾಜು ರವರಿಗೆ ಚಾಕುವಿನಿಂದ ಚುಚ್ಚಿ ಗಾಯಾಪಡಿಸಿದ್ದು ಈ ಬಗ್ಗೆ ಗೋಣಿಕೊಪ್ಪ ಸರಕಾರಿ ಆಸ್ಪತ್ರೇಗೆ ದಾಖಲಾಗಿ ನೀಡಿದ ಹೇಳಿಕೆಗೆ

Wednesday, October 7, 2015

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ಶ್ರೀಮಂಗಲ ಠಾಣಾ ಸರಹದ್ದಿನ ಹುದಿಕೇರಿಯ ನಿವಾಸಿ ನೂರೇರ ಕಾರ್ಯಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಪಿರ್ಯಾದಿ ಪಣಿಯರವರ ಶಂಕರು ರವರು ದಿನಾಂಕ 5-10-2015 ರಂದು ಶ್ರೀಮಂಗಲ ಸಂತೆಗೆ ಹೋಗಿ ಸಾಮಾನು ಖರೀದಿಸಿ ಚಿಲಿಗಿರಿ ಬಸ್ಸಿನಲ್ಲಿ ವಾಪಸ್ಸು ಲೈನು ಮನೆ ಕಡೆ ಹೊಗುತ್ತಿದ್ದಾಗ ಮದ್ಯಾಹ್ನ ಸುಮಾರು 12 .15 ಗಂಟೆ ಠಾಣಾ ಸರಹದ್ದಿನ ಟಿ ಶೆಟ್ಟಿಗೇರಿಯ ಕೊಡವ ಸಮಾಜದ ಬಳಿ ಮಂಡಗಂಡ ಬೋಪಯ್ಯನವರು ಚಿಲಿಗಿರಿ ಬಸ್ಸನ್ನು ನಿಲ್ಲಿಸಿ ಬಸ್ಸಿನಿಂದ ಕೆಳಗೆ ಇಳಿಸಿದ್ದು, ಇವರ ಪೈಕಿ ವಸಂತನವರ ಆಳು ಪಣಿಎರವರ ತಮ್ಮನ ಹೆಂಡತಿ ಕಾಣೆಯಾದ ವಿಚಾರದಲ್ಲಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಲೇವಾದೇವಿ ವ್ಯವಹಾರ:
     ಶ್ರೀ ವಿಕ್ರಮ್ ರಾಜ್ ಅರಸ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಡಿಕೇರಿ ಉಪ ವಿಭಾಗ, ಮಡಿಕೇರಿ ಇವರಿಗೆ ದೊರೆತ ಮಾಹಿತಿ ಮೇರೆಗೆ ದಿನಾಂಕ 6-10-2015 ರಂದು, ಕುಕ್ಲೂರು ಗ್ರಾಮದ ಪಿ.ಆರ್. ಹರ್ಷ ಎಂಬುವರು ಅನಧಿಕೃತವಾಗಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದು, ಅವರ ಮೇಲೆ ಧಾಳಿ ನಡೆಸಿ 2 ಖಾಲಿ ಚೆಕ್ಕುಗಳು ಗಳನ್ನು ವಶಪಡಿಸಿಕೊಂಡು ವಿರಾಜಪೇಟೆ ನಗರ ಠಾಣೆಗೆ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರರಣ ದಾಖಲಿಸಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 
ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ತನ್ನ ಹೆಂಡತಿ ಮನೆ ಬಿಟ್ಟು ತವರು ಮನೆಗೆ ಹೋದ ವಿಚಾರದಲ್ಲಿ ಬೇಸತ್ತು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ತೆರಾಲು ಗ್ರಾಮದಲ್ಲಿ ನಡೆದಿದೆ. ತೆರಾಲು ಗ್ರಾಮದ ನಿವಾಸಿ ಶ್ರೀಮತಿ ಜೇನು ಕುರುಬರ ಭಾಗ್ಯ ಎಂಬವರ 2 ನೇ ಗಂಡ ಸಂಜು ವಿಪರಿತ ಮದ್ಯಾಪಾನ ಮಾಡಿಕೊಂಡು ಮನಗೆ ಬರುತ್ತಿದ್ದ ವಿಚಾರದಲ್ಲಿ ಸದರು ಭಾಗ್ಯ ತರವರು ಮನೆಗೆ ಹೋಗಿದ್ದು ಇದೇ ವಿಚಾರದಲ್ಲಿ ಬೇಸರಗೊಂಡ ಪತಿ ಸಂಜು ದಿನಾಂಕ 5-10-2015 ರಂದು ತನ್ನ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ಮನೆಗೆ ನುಗ್ಗಿ 2.15 ಲಕ್ಷದ ಚಿನ್ನಾಭರಣ ಕಳವು:

      ಸೋಮವಾರಪೇಟೆ ನಗರದ ನಿವಾಸಿ ಮೇದುರ ಸುಬ್ಬಯ್ಯ ಎಂಬವರ ಮನೆಗೆ ದಿನಾಂಕ 05.10.2015 ರಂದು ಸಮಯ 9-00 ಗಂಟೆಯಿಂದ ಸಂಜೆ 5-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನುಗ್ಗಿ ಮಲಗುವ ಕೋಣೆಯ ಮರದ ಬೀರುವಿನಲ್ಲಿಟ್ಟಿದ್ದ 1) 40 ಗ್ರಾಂ ತೂಕದ ಚಿನ್ನದ ಚೈನ್‍ ಮತ್ತು ಕೆಂಪು ಹರಳಿನ ಚಿನ್ನದ ಪೆಂಡೆಂಟ್‍ 2)8 ಗ್ರಾಂ ತೂಕದ ಚಿನ್ನದ ಚೈನ್‍ 3)20 ಗ್ರಾಂ ತೂಕದ ಚಿನ್ನದ ಚೈನ್‍ 4)12 ಗ್ರಾಂ ತೂಕದ ಚಿನ್ನದ ಓಲೆಗಳು ಸೇರಿ ಒಟ್ಟು 2,15,000/- ರೂ ಮೌಲ್ಯದ ಚಿನ್ನಾಭರಣಗಳು ಕಳವು ಮಾಡಿಕೊಂಡು ಹೋಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Tuesday, October 6, 2015

ಟಾಟಾ ಎಸ್ ವಾಹನಕ್ಕೆ ಲಾರಿ ಡಿಕ್ಕಿ:

     ವಿರಾಜಪೇಟೆ ನಗದ ನಿವಾಸಿ ಕೆ. ಶಾರೂಖ್ ಎಂಬವರು ದಿನಾಂಕ 05/10/2015 ರಂದು ವಿರಾಜಪೇಟೆಯಿಂದ ಗೋಣಿಕೊಪ್ಪದ ಕಡೆತೆ ತಮ್ಮ ಟಾಟಾ ಏಸ್ ವಾಹನದಲ್ಲಿ ಹೋಗುತ್ತಿದ್ದಾಗ ಮೈಸೂರಿನಿಂದ ಕೇರಳದ ಕಡೆಗೆ ಚಾಲಿಸಿಕೊಂಡು ಬರುತ್ತಿದ್ದ ಲಾರಿ ಚಾಲಕ ಹೆಚ್.ಜಿ. ರಮೇಶ ಎಂಬವರು ಸದರಿ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಟಾಟಾ ಏಸ್ ವಾಹನದ ಚಾಲಕ ರಾಜೇಶ್ ರವರ ತಲೆ ಮುಖದ ಭಾಗಕ್ಕೆ ರಕ್ತಗಾಯವಾಗಿದ್ದು, ಈ ಸಂಬಂಧ ರಾಜೇಶ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀಪಿಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ: 

     ದಿನಾಂಕ 4-10-2015 ರಂದು ಸಮಯ 7.30 ಗಂಟೆಗೆ ವಿರಾಜಪೇಟೆ ತಾಲೂಕು ಶೆಟ್ಟಿಗೇರಿ ಗ್ರಾಮದ ನಿವಾಸಿ ಮನೋಹರ ಎಂಬವರು ಕೆಎ-12 ಎ 4783 ರ ಪಿಕ್‌ಅಪ್‌ ಜೀಪಿನಲ್ಲಿ ಗೋಣಿಕೊಪ್ಪದಿಂದ ಟಿ ಶೆಟ್ಟಿಗೇರಿ ಕಡೆಗೆ ಬರುತ್ತಿರುವಾಗ್ಗೆ ಹೈಸೋಡ್ಲೂರು ಗ್ರಾಮದ ಬಿಪಿಎಲ್‌ ಬಸ್‌ ತಂಗುದಾಣ ತಲುಪುವಾಗ್ಗೆ ಎದುರು ಗಡೆಯಿಂದ ಬಂದ ಕೆಎ-09- ಜೆಡ್‌ 2344 ರ ಶಿಪ್ಟ್‌ ಕಾರಿನ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಕಾರನ್ನು ಚಾಲಿಸಿಕೊಂಡು ಬಂದು ಪಿಕ್ಅಪ್ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕ ಗೋಪಾಲ್‌ಗೆ ತಲೆಗೆ ಹಾಗೂ ಶರೀರ ಕ್ಕೆ ಹಾಗೂ ಮನೋಹರರವರ ಕಾಲಿಗೆ ಪೆಟ್ಟಾಗಿದ್ದು, ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಚಿನ್ನದ ಅಂಡಿಯಿಂದ 14 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: 

     ಕುಶಾಲನಗರದ ನಿವಾಸಿ ಶಾಂತಿಲಾಲ್ ಜೈನ್ ರವರು ಕುಶಾಲನಗರದ ಫಾತಿಮಾ ಕಾಂಪ್ಲೆಕ್ಸ್ ನಲ್ಲಿ ಸುಮಾರು 20 ವರ್ಷಗಳಿಂದ ಚಿನ್ನ ಬೆಳ್ಳಿ ಅಂಗಡಿಯನ್ನು ಇಟ್ಟು ಕೊಂಡು ವ್ಯಾಪಾರ ಮಾಡಿಕೊಂಡಿದ್ದು ಸದರಿ ಅಂಗಡಿಗೆ ದಿನಾಂಕ 4-10-2015ರ ರಾತ್ರಿ ಯಾರೋ ಕಳ್ಳರು ಅಂಗಡಿಯ ಕಟ್ಟಡದ ಹಿಂಬಾಗದ ಮುಚ್ಚಿದ ವೆಂಟಿಲೇಟರ್ ಕಿಂಡಿಯನ್ನು ಒಡೆದು ಅಂಗಡಿಯ ಒಳ ನುಗ್ಗಿ ಸುಮಾರು 35 ರಿಂದ 40 ಕೆ ಜಿ ಯಷ್ಟು ಬೆಳ್ಳಿಯ ಆಭರಣ ಮತ್ತು ವಸ್ತುಗಳನ್ನು ಹಾಗು ಸುಮಾರು 400 ರಿಂದ 450 ಗ್ರಾಂ ನಷ್ಟು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಶಾಂತಿಲಾಲ್ ಜೈನ್ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕೂಲಿ ಹಣ ಕೇಳಿದ ವಿಚಾರದಲ್ಲಿ ವ್ಯಕ್ತಿಯಿಂದ ಹಲ್ಲೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಣ್ಣಂಗಾಲ ಗ್ರಾಮದ ಮಚ್ಚಾರಂಡ ಶಿವಾಜಿ ಎಂಬವರ ಲೈನುಮನೆಯಲ್ಲಿ ವಾಸವಾಗಿರುವ ಪಿರ್ಯಾದಿ ಸುರೇಶ್ ಹಾಗೂ ಅವರ ಹೆಂಡತಿ ಶಾಂತರವರು ದಿನಾಂಕ: 04-10-15ರಂದು ಸಮಯ ಸಾಯಂಕಾಲ 7-00ಪಿ.ಎಂ.ಗೆ ಕೂಲಿ ಕೆಲಸ ಮಾಡಿದ ಬಾಕಿ ಹಣವನ್ನು ಕೊಡುವಂತೆ ರೈಟರ್ ಗೋಪಾಲ ರವರ ಲೈನ್ ಮನೆ ಮುಂದೆ ಹೋಗಿ ಗೋಪಾಲರವರನ್ನು ಕೇಳಿದಾಗ ಗೋಪಾಲರವರ ಸಂಬಂಧಿಯಾದ ವಿನು ಎಂಬುವವರು ಅಲ್ಲಿಗೆ ಬಂದು ಸುರೇಶ್ ರವರನ್ನು ಕುರಿತು ನಿನಗೆ ಯಾವುದೇ ಹಣ ಕೊಡಲು ಬಾಕಿ ಇರುವುದಿಲ್ಲ ಎಂದು ಹೇಳಿ ಏಕಾ ಏಕಿ ಕೈಯಲ್ಲಿದ್ದ ದೊಣ್ಣೆಯಿಂದ ಸುರೇಶ್ ರವರ ತಲೆಯ ಹಿಂಭಾಗಕ್ಕೆ ಮತ್ತು ಎಡ ಕೈಗೆ ಹೊಡೆದು ಗಾಯಪಡಿಸಿ ರುವುದಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅತಿಯಾದ ಮದ್ಯ ಸೇವನೆ ವ್ಯಕ್ತಿಯ ಸಾವು: 

     ಮಡಿಕೇರಿ ತಾಲೋಕು ಅರೆಕಾಡು ಗ್ರಾಮದ ಮೇಜರ್ ದೇವಯ್ಯ ಎಂಬುವವರ ಕಾವೇರಿ ಎಸ್ಟೇಟ್‌ನ ಲೈನ್‌ಮನೆಯಲ್ಲಿ ವಾಸವಿರುವ ಚೋಮ ಎಂಬುವವರು ವಿಪರೀತ ಮದ್ಯಪಾನ ಮಾಡಿಕೊಂಡು ಬಂದು ರಾತ್ರಿ ಮನೆಯಲ್ಲಿ ಮಲಗಿದ್ದು, ರಾತ್ರಿ 2 ಗಂಟೆಯ ಸಮಯದಲ್ಲಿ ಮಗಳು ಎಬ್ಬಿಸಿದಾಗ ಮಾತನಾಡದೆ ಇದ್ದು, ಆತ ಮದುವೆಯಾಗದೆ ಇದ್ದು ತುಂಬಾ ಸಾರಾಯಿ ಕುಡಿಯುವ ಅಭ್ಯಾಸವುಳ್ಳವನಾಗಿದ್ದು, ಬೇಸರದಿಂದ ತುಂಬಾ ಸಾರಾಯಿ ಕುಡಿದು ವಾಂತಿ ಮಾಡಿಕೊಂಡು ಮೃತಪಟ್ಟಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Monday, October 5, 2015

ಗುಂಡು ಹಾರಿಸಿ ವ್ಯಕ್ತಿಯ ಹತ್ಯೆ:

     ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಗ್ರಾಮಪಂಚಾಯ್ತಿ ಸದಸ್ಯರೊಬ್ಬರನ್ನು ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಮೂರ್ನಾಡು ಸಮೀಪದ ಬಲಮುರಿ ಗ್ರಾಮದ ಪೆಮ್ಮಾಡುವಿನಲ್ಲಿ ನಡೆದಿದೆ. ಮಡಿಕೇರಿ ತಾಲೂಕು ಮೂರ್ನಾಡು ಬಾಡಗ ಗ್ರಾಮದ ನಿವಾಸಿ ಪೌತಿ ಚನ್ನಪ್ಪನವರ ಮಗ ಗ್ರಾಮಪಂಚಾಯ್ತಿ ಸದಸ್ಯ ಗಣೇಶ (35) ರವರನ್ನು ದಿನಾಂಕ 4-10-2015 ರಂದು ಸಂಜೆ 5-45 ಗಂಟೆಯ ಸಮಯದಲ್ಲಿ ಕುಂಜಿಲಗೇರಿ ಗ್ರಾಮದ ನಿವಾಸಿ ಪೂವಯ್ಯಎಂಬವರ ಮಗ ಕಾಮೆಯಂಡ ಸಾಮ್ರಾಟ್ ಎಂಬ ವ್ಯಕ್ತಿ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದು, ಮರಳು ತೆಗೆದು ಮಾರಾಟ ಮಡುತ್ತಿದ್ದ ವಿಷಯದಲ್ಲಿ ದ್ವೇಷವನ್ನಿಟ್ಟು ಕೊಲೆ ಮಾಡಿರುವುದಾಗಿ ಮೃತ ಗಣೇಶನವರ ಸಂಬಂಧಿ ವಿನೋದ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ಹಳೆಯ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯೊಬ್ಬರ ದಾರಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದ ಖಾಸಗಿ ಬಸ್ಸು ನಿಲ್ದಾಣದಲ್ಲಿ ನಡೆದಿದೆ. ಮಡಿಕೇರಿ ನಗರದ ಗೌಳಿಬೀದಿ ನಿವಾಸಿ ಫಿರ್ಯಾದಿ ಅಬ್ದುಲ್ ಗಫಾರ್ ಎಂಬವರು ದಿನಾಂಕ 27/09/2015 ರಂದು ಸಂಜೆ 07.30 ಗಂಟೆಗೆ ಖಾಸಗಿ ಬಸ್ ನಿಲ್ದಾಣದ ಮುಂದಿನ ಬಾಬಾ ಎಂಬವರ ಅಂಗಡಿಯ ಮುಂದೆ ಬರುತ್ತಿದ್ದಾಗ ಹುಸೇನೆ ಎಂಬವರು ದಾರಿ ತಡೆದು ಪಿರ್ಯಾದಿಯವರ ಹೆಂಡತಿ ಬಿಟ್ಟು ಹೋದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಈ ಹಿಂದೆ ಆದ ಜಗಳದ ಬಗ್ಗೆ ವೈಷಮ್ಯ ಇಟ್ಟುಕೊಂಡು, ಕೈಯಿಂದ ಹಲ್ಲೆ ಮಾಡಿ, ಕಾಲಿನಿಂದ ಒದ್ದು, ಇಟ್ಟಿಗೆಯಿಂದ ತಲೆಯ ಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದ್ದು, ಗಲಾಟೆಯನ್ನು ಬಿಡಿಸಲು ಬಂದ ಬಾಬಾರವರ ಮೇಲೂ ಹಲ್ಲೆ ಮಾಡಿದ್ದು ಅವರ ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ದಿನಾಂಕ 30-9-2015 ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಯಲ್ಲಿ ಹೋಗುತ್ತಿದ ಮಹಿಳೆಗೆ ಸ್ಕೂಟರ್್ ಡಿಕ್ಕಿ:

     ಮೂಲತ: ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆಯ ನಿವಾಸಿ ಹಾಲಿ ಮಡಿಕೇರಿ ತಾಲೂಕಿನ ಚೇರಂಬಾಣೆಯಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿರುವ ಶ್ರೀಮತಿ ಗೀತಾಬಾಯಿ ಎಂಬವರು ದಿನಾಂಕ 04-10-2015 ರಂದು ಬೆಳ್ಳಿಗ್ಗೆ 08.00 ಗಂಟೆ ಸಮಯದಲ್ಲಿ ಬೆಟ್ಟಗೇರಿ ಗ್ರಾಮದ ಬಕ್ಕ ಸೇತುವೆಗೆ ತನ್ನ ಗಂಡನೊಂದಿಗೆ ಸುಣ್ಣ ಬಳಿಯುವ ಕೆಲಸ ಮಾಡುತ್ತಿದ್ದು, ಹೊಳೆಯಿಂದ ನೀರನ್ನು ಹೊತ್ತುಕೊಂಡು ರಸ್ತೆಯಲ್ಲಿ ಬರುತ್ತಿದ್ದಾಗ, ಭಾಗಮಂಡಲ ಕಡೆಯಿಂದ ಒಂದು ಸ್ಕೂಟರ್ ಅನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಬಲ ಕೈ ಮಂಡಿ, ತಲೆಯ ಹಿಂಭಾಗ ಹಾಗೂ ಬೆನ್ನಿನ ಭಾಗಕ್ಕೆ ಪೆಟ್ಟಾಗಿ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Sunday, October 4, 2015

ಸ್ಕೂಟಿಗೆ ಜೀಪು ಡಿಕ್ಕಿ. ಸವಾರನಿಗೆ ಗಾಯ:     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮೂರ್ನಾಡು ನಿವಾಸಿ ಕಾವೇರಪ್ಪ ಎಂವವರು ದಿನಾಂಕ: 24-06-2015 ರಂದು ತಮ್ಮ ಬಾಪ್ತು ಸ್ಕೂಟಿಯಲ್ಲಿ ಮೂರ್ನಾಡುವಿನಿಂದ ವಿರಾಜಪೇಟೆಗೆ ಹೋಗುತ್ತಿರುವಾಗ ಮೂರ್ನಾಡು ಬಸ್ಸ್ ನಿಲ್ದಾಣದ ಬಳಿ ಎದುರುನಿಂದ ಬಂದ ಜೀಪಿನ ಚಾಲಕ ರೊಬ್ಬರು ಜೀಪನ್ನು ಅತೀವೇಗ ಹಾಗು ಅಜಾರೂಕತೆಯಿಂದ ಚಾಲಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟಿ ಜಖಂಗೊಂಡು ಸವಾರ ಕಾವೇರಪ್ಪನವರು ಗಾಯಗೊಂಡಿದ್ದು ಈ ಸಂಬಂಧ ಸದರಿಯವರು ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ಪುಕಾರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೈಕ್ ಗಳು ಪರಸ್ಪರ ಡಿಕ್ಕಿ, ವ್ಯಕ್ತಿಗೆ ಗಂಭೀರ ಗಾಯ:
      ಎರಡು ಬೈಕ್ ಗಳು ಪರಸ್ಪರ ಡಿಕ್ಕಿಯಾಗಿ ಹಿಂಬದಿ ಸವಾರನ ಕಾಲು ಮುರಿದಿರುವ ಘಟನೆ ಕುಶಾಲನಗರದ ಹತ್ತಿರದ ಕೂಡಿಗೆಯಲ್ಲಿ ಸಂಭವಿಸಿದೆ. ದಿನಾಂಕ 01/10/2015 ರಂದು ಸಮಯ 11 ;00 ಎ ಎಂಗೆ ಕೂಡ್ಲೂರು ಗ್ರಾಮದ ನಿವಾಸಿ ತ್ಯಾಗರಾಜು ಎಂಬವರು ತಮ್ಮ ಬಾವನವರ ಮೋಟಾರು ಸೈಕಲಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ಕೂಡ್ಲೂರಿನಿಂದ ಕೂಡಿಗೆ ಕೆನರಾ ಬ್ಯಾಂಕ್ ಕಡೆಗೆ ಹೋಗಿ ಬ್ಯಾಂಕ್ ಹತ್ತಿರ ತಲುಪುವಾಗ್ಗೆ ಕೂಡಿಗೆಯಿಂದ ಕುಶಾಲನಗರಕ್ಕೆ ಬೈಕಿನಲ್ಲಿ ಹೋಗುತ್ತಿದ್ದ ಕೂಡ್ಲೂರು ನಿವಾಸಿ ಗುರುಸ್ವಾಮಿ ಎಂಬವರು ಸದರಿ ಬೈಕನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ತ್ಯಾಗರಾಜುರವರು ಪ್ರಯಾಣಿಸುತ್ತಿದ್ದ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ತ್ಯಾಗರಾಜುರವರ ಕಾಲು ಮುರಿದು ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿ ಸಾವು, ಪ್ರಕರಣ ದಾಖಲು:     ಅಪರಿಚಿತ ವ್ಯಕ್ತಿಯೊಬ್ಬರು ಸೋಮವಾರಪೇಟೆ ನಗರದ ಬಸ್ಸು ನಿಲ್ದಾಣದಲ್ಲಿ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 3-10-2015 ರಂದು ಸೋಮವಾರಪೇಟೆ ನಗರದ ಖಾಸಗಿ ಬಸ್ಸು ನಿಲ್ದಾಣದಲ್ಲಿ ಅಂದಾಜು 55-60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿರುವ ಬಗ್ಗೆ ಸೋಮವಾರಪೇಟೆ ನಗರದ ನಿವಾಸಿ ಎಂ.ಇ. ಅದಿಲ್ ಎಂಬವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ:
     ವ್ಯಕ್ತಿಯೊಬ್ಬರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚಿಸಿದ ಘಟನೆ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. ಫಿರ್ಯಾದಿ ಮಡಿಕೇರಿ ತಾಲೋಕು ಹೆಬ್ಬೆಟ್ಟಗೇರಿ ಗ್ರಾಮದ ನಿವಾಸಿ ವಿಶ್ವನಾಥ ಎಂಬವರು ಆರೆಂಜ್ ಕೌಂಟಿಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ದಿನಾಂಕ: 07-09-2015ರ ಒಂದು ವಾರದ ಹಿಂದೆ ಸೌರಭ್ ಗುಪ್ತ ಎಂಬ ವ್ಯಕ್ತಿ ಕರೆ ಮಾಡಿ ಡೆಲ್ಲಿಯ CLICK JOBS ಕಂಪನಿಯಿಂದ ಮಾತನಾಡುತ್ತಿದ್ದು, ನಿಮಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ತಿಳಿಸಿ, ಈ ಸಂಬಂಧ ರೂ.6,100 ಗಳನ್ನು ಪಾಪತಿಸುವಂತೆ ತಿಳಿಸಿದ ಮೇರೆಗೆ ಫಿರ್ಯಾದಿಯವರು ದಿನಾಂಕ: 07-09-2015 ರಂದು 3,000 ರೂಗಳನ್ನು ಹಾಗೂ ದಿನಾಂಕ: 10-09-2015 ರಂದು 3,100 ರೂಗಳನ್ನು ಕಂಪನಿಗೆ ಪಾವತಿಸಿದ್ದು, ನಂತರ ಸೌರಬ್‌ಗುಪ್ತಾ ರವರು ಪುನಃ ಕರೆ ಮಾಡಿ ನಿಮಗೆ ಉದ್ದೋಗ ಸಿಕ್ಕಿರುವುದಾಗಿಯೂ ರೂ. 15,000/= ರೂ.ಗಳನ್ನು ಪಾವತಿಮಾಡುವಂತೆಯೂ ತಿಳಿಸಿದ್ದು, ಈ ಬಗ್ಗೆ ಪರಿಶೀಲಿಸಿದಾಗ ಸದರಿ ಕರೆಯು ವಿದೇಶದಿಂದ ಬಾರದೇ ಸ್ವದೇಶದಿಂದಲೇ ಮಾಡಿದ್ದು ತಿಳಿದು ಬಂದಿದ್ದು ಸದರಿ ವ್ಯಕ್ತಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.