Wednesday, October 14, 2015

ಮನೆಗೆ ನುಗ್ಗಿ 14 ಲಕ್ಷ ಮೌಲ್ಯದ ಚಿನ್ನಾಭರಣ ಕಳವು:

     ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಭಾರೀ ಮೊತ್ತದ ಚಿನ್ನಾಭರಣ ಮತ್ತು ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ಪೊನ್ನಂಪೇಟೆ ನಗರದ ಮುಖ್ಯ ರಸ್ತೆಯ ಗ್ರಾಮ ಪಂಚಾಯ್ತಿ ಕಟ್ಟಡದ ಮುಂಬಾಗದಲ್ಲಿ ಶ್ರೀಮತಿ ರಾಧಿಕಾ ರವರು ತಮ್ಮ ಸಂಸಾರದೊಂದಿಗೆ ವಾಸವಾಗಿದ್ದು, ದಿನಾಂಕ 12-10-2015 ರಂದು ಮನೆಯವರೆಲ್ಲ ವೈದ್ಯಕೀಯ ತಪಾಸಣೆಗೆ ಮೈಸೂರಿಗೆ ಹೋಗಿದ್ದು, ಇದೇ ಸಮಯವನ್ನು ಸಾಧಿಸಿದ ಕಳ್ಳರು ಮನೆಯೊಳಗೆ ಬೀಗವನ್ನು ತೆರೆದು ಮನೆಯೊಳಗಿಂದ 36,000/- ರೂ ನಗದು, ಬೆಡ್ ರೂಂನಿಂದ ಹಾಗು ಮನೆಯ 1ನೇ ಅಂತಸ್ತಿನ ಅತ್ತೆ ಮಾವರವರು ಇರುವ ಕೋಣೆಗಳಿಂದ 2 ಪೀಚೆ ಕತ್ತಿ, ಚಿನ್ನದ ನಾಣ್ಯ, ಒಟ್ಟು ಅಂದಾಜು 576 ಗ್ರಾಮ ನಷ್ಟು ಅಂದಾಜು 14 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಹೊಂಡು ಹೀಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಅಪಘಾತ ಒಬ್ಬನ ದುರ್ಮರಣ, ಇಬ್ಬರಿಗೆ ಗಾಯ:

     ಮೋಟಾರ್ ಸೈಕಲ್ ನಲ್ಲಿ ಮೂವರು ಸಂಚರಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಒಬ್ಬ ಮೃತಪಟ್ಟು ಇಬ್ಬರಿಗೆ ಗಾಯಗಳಾದ ಘಟನೆ ವಿರಾಜಪೇಟೆ ಸಮೀಪದ ರಾಮನಗರದಲ್ಲಿ ನಡೆದಿದೆ. ದಿನಾಂಕ 13-10-2015 ರಂದು ಸಂಜೆ ರಾಮನಗರ ನಿವಾಸಿಗಳಾದ ಶರಣು, ಅಂಬುಜಾಕ್ಷ ಮತ್ತು ರಾಜೇಶ್ ಎಂಬವರು ಒಂದೇ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದು, ಸವಾರ ಶರಣು ಸದರಿ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಾಮನಗರದ ಸಾರ್ವಜನಿಕ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ಅವರ ಪೈಕಿ ಶರಣು ಮೃತಪಟ್ಟಿದ್ದು, ಉಳಿದ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ಅಕ್ರಮ ಮದ್ಯ ಮಾರಾಟ ಆರೋಪಿ ಬಂಧನ:

     ದಿನಾಂಕ 13-10-2015 ರಂದು ಸಮಯ 20.30 ಗಂಟೆಗೆ ಸೋಮವಾರಪೇಟೆ ಠಾಣಾಧಿಕಾರಿ ನಂದೀಶ್ ಕುಮಾರ್ ಹಾಗು ಸಿಬ್ಬಂದಿಯವರು ಸೋಮವಾರಪೇಟೆ ತಾಲೂಕು ಕೆಂಚಮ್ಮನ ಬಾಣೆ ಗ್ರಾಮದಲ್ಲಿ ಆರೋಪಿ ಸುಂದರೇಶರವರು ಅವರ ಅಂಗಡಿಯಲ್ಲಿ ಸರಕಾರದ ರಹದಾಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿ ಒಂದು ಪ್ಲಾಸ್ಟಿಕ್‌ ಚೀಲದಲ್ಲಿ ಇದ್ದ 90 ಎಂ.ಎಲ್‌ನ ORIGINAL CHOICE DELUXE VSOP BRANDY 38 ಪ್ಯಾಕ್ ಗಳು ಹಾಗೂ 180 ಎಂ.ಎಲ್‌ನ ORIGINAL CHOICE DELUXE VSOP BRANDY ಯ 5 ಬಾಟಲಿಗಳನ್ನು , ಅಮಾನತ್ತುಪಡಿಸಿಕೊಂಡು ಆರೋಪಿ ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಟ್ಟಿಹಾಕಿದ 3 ಕುರಿಗಳ ಕಳ್ಳತನ: 

    ಶನಿವಾರಸಂತೆ ಠಾಣಾ ಸರಹದ್ದಿನ 1ನೇ ವಿಭಾಗದಲ್ಲಿ ವಾಸವಿರುವ ಫಿರ್ಯಾದಿ ಎಸ್.ಎ. ಶರೀಫ್ ಎಂಬವರು ದಿನಾಂಕ 10-10-2015 ರಂದು ಸಮಯ ಸಂಜೆ 08-00 ಪಿ.ಎಂ ಗೆ ಶನಿವಾರಸಂತೆ 1 ನೇ ವಿಭಾಗದ ರಫಿ ಎಂಬವರ ಕೊಟ್ಟಿಗೆಯ ಹೊರಗೆ 10 ಕುರಿಗಳನ್ನು ಕಟ್ಟಿ ಹಾಕಿದ್ದು ದಿನಾಂಕ 11-10-2015 ರಂದು ಬೆಳಿಗ್ಗೆ 07-00 ಗಂಟೆಗೆ ಕೊಟ್ಟಿಗೆಗೆ ಹೋಗಿ ನೋಡಲಾಗಿ ಅಲ್ಲಿದ್ದ 10 ಕುರಿಗಳಲ್ಲಿ 3 ಕುರಿಗಳು ಕಳ್ಳತನವಾಗಿರುವುದು ಕಂಡು ಬಂದಿದ್ದು,ಸದರಿ ಕಳ್ಳತನವನ್ನು ಬಿದರೂರು ಗ್ರಾಮದ ಜಯಮ್ಮನವರ ಮಗ ಸುರೇಶನು ಮಾಡಿರಬಹುದೆಂದು ಸಂಶಯವಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.