Saturday, October 24, 2015

ಯುವತಿ ಕಾಣೆ, ಪ್ರಕರಣ ದಾಖಲು:
      ಗೋಣಿಕೊಪ್ಪ ಠಾಣಾ ಸರಹದ್ದಿನ ಚೆನ್ನಂಗೊಲ್ಲಿ ಗ್ರಾಮದ ನಿವಾಸಿ ಪಂಜರಿ ಎರವರ ಗಿರೀಜ ಎಂಬವರ ಮಗಳು 19 ವರ್ಷ ಪ್ರಾಯದ ಜಯಶ್ರೀ ಎಂಬವಳು ಗೋಣಿಕೊಪ್ಪ ಬೈಪಾಸ್ ರಸ್ತೆಯಲ್ಲಿ ಸ್ಪ್ಯಾರ್ ಪಾರ್ಟ್ಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 20/10/2015 ರಂದು ಎಂದಿನಂತೆ ಬೆಳಿಗ್ಗೆ 9.00 ಗಂಟೆಗೆ ಕೆಲಸಕ್ಕೆ ಹೋದವಳು ರಾತ್ರಿ ಮನೆಗೆ ಬಾರದೆ ಇದ್ದು ಕಾಣೆಯಾಗಿದ್ದು, ಈ ಬಗ್ಗೆ ಫಿರ್ಯಾದಿ ಶ್ರೀಮತಿ ಗಿರೀಜ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬೈಕ್ ಡಿಕ್ಕಿ:
     ಪಾದಚಾರಿಯೊಬ್ಬರಿಗೆ ಬೈಕೊಂಡು ಡಿಕ್ಕಿಯಾಗಿ ತಲೆಗೆ ಗಾಯವಾಗಿರುವ ಘಟನೆ ಸಿದ್ದಾಪುರದ ಹತ್ತಿರದ ನೆಲ್ಲಿಹದಿಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17-10-2015 ರಂದು ಸಮಯ ಅಂದಾಜು 2.30 ಪಿ.ಎಂ.ಗೆ ಸಿದ್ಧಾಪುರ ಠಾಣಾ ವ್ಯಾಪ್ತಿಗೆ ಸೇರಿದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಚೆಟ್ಟಳ್ಳಿ ಗ್ರಾಮದ ನಿವಾಸಿ ಎ.ಆರ್. ದಯಾನಂದ ಎಂಬವರ ತಂದೆ ಎ.ಎಂ. ರಾಮಪ್ಪನವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದುಗಡೆಯಿಂದ ನಂ. ಕೆಎ 12 ಜೆ 9765 ರ ಮೋಟಾರ್ ಸೈಕಲ್ ನ್ನು ಅದರ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಎ.ಎಂ. ರಾಮಪ್ಪನವರು ಕೆಳಗೆ ಬಿದ್ದು ತಲೆಯ ಎಡಭಾಗ ಮತ್ತು ಎಡಭಾಗದ ಪಕ್ಕೆಲುಬಿಗೆ ಪೆಟ್ಟಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಸಿದ್ಧಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಡಿಕೇರಿ ವೈವಾಸ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:
     ದಿನಾಂಕ 22-10-2015 ರಂದು ವಿರಾಜಪೇಟೆ ನಗರ ಠಾಣಾ ಸರಹದ್ದಿಗೆ ಸೇರಿದ ನೆಹರುನಗರದಲ್ಲಿ ನೆಹರುನಗರ ನಿವಾಸಿ ಮಣಿಕಂಠ ಎಂಬವರ ಸಹೋದರ ನವೀನ್ ರವರಿಗೆ ಹಳೇಯ ವೈಮಸ್ಸಿನಿಂದ ಬೋಜಿ ಮತ್ತು ಚರಣೆ ಎಂಬುವರು ಕೈಯಿಂದ ಹೊಡೆದ ಬಗ್ಗೆ ವಿಚಾರ ತಿಳಿದು ಮಣಿಕಂಠರವರು ನವೀನನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ವೇಳೆ ಸಮಯ 19-00 ಗಂಟೆಗೆ ಆರೋಪಿಗಳಾದ ಸಂಜಯ್ ಮತ್ತು ಸಂದೀಪರವರು ದಾರಿ ತಡೆದು ನೀನು ಏಕೆ ನವೀನ್ ನನ್ನು ವೈದ್ಯಾಧಿಕಾರಿಯವರ ಹತ್ತಿರ ಕರೆದುಕೊಂಡು ಹೋಗುತ್ತೀಯಾ ಎಂದು ಹೇಳಿ ಕೈಯಿಂದ ಇಬ್ಬರು ಶರೀರಕ್ಕೆ ಹೊಡೆದು ನೋವುಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜಿವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ವ್ಯಕ್ತಿಯ ಮೇಲೆ ಹಲ್ಲೆ, ಪ್ರಕರಣ ದಾಖಲು: 

     ಮಡಿಕೇರಿ ತಾಲೋಕು ಬಲ್ಲಮಾವಟಿ ಗ್ರಾಮದ ನಿವಾಸಿ ಬಿದ್ದಪ್ಪ ಎಂಬವರು ದಿನಾಂಕ 20/10/2015 ರಂದು ಶುಂಠಿ ಮಾರಾಟ ಮಾಡಲು ತನಗೆ ಪರಿಚಯವಿರುವ ಹೆಬ್ಬಾಲೆ ಗ್ರಾಮದ ಶೇಖರ ರವರನ್ನು ಬೇಟಿಯಾಗಿ ಶುಂಟಿ ವ್ಯಾಪಾರ ಮಾಡಲು ಕೂಡಿಗೆ ಗ್ರಾಮದ ಹರಿಪ್ರಸಾದ್ ರವರನ್ನು ಕರೆದು ಕೊಂಡು ತಮ್ಮ ಕೆ ಎಲ್ 14 ಇ 9884 ರ ಓಮಿನಿ ಕಾರ್ ನಲ್ಲಿ ಹೆಬ್ಬಾಲೆಗೆ ಹೋಗಿ ವಾಪಾಸ್ಸು ಮನೆಗೆ ಹೋಗುತ್ತಿರುವಾಗ್ಗೆ, ಸಮಯ ಸುಮಾರು 7;45 ಪಿ ಎಂಗೆ ಕುಶಾಲನಗರದ ಅತ್ತೂರು ಗ್ರಾಮದ ಹತ್ತಿರ ತಲುಪಿದಾಗ,ಅರಣ್ಯ ಇಲಾಖೆಯ ಸಿ ಬ್ಬಂದಿಗಳು ಮತ್ತು ಅಧಿಕಾರಿಗಳು ಅವರ ಇಲಾಖಾ ಜೀಪಿನಲ್ಲಿ ಬಂದು ತಡೆದು, ಪಿರ್ಯಾದಿ ಬಿದ್ದಪ್ಪ ಹಾಗು ಹರಿಪ್ರಸಾದ್ರವರನ್ನು ಕಾರಿನ ಸಮೇತ ಕುಶಾಲನಗರದ ಗಂದದಕೋಟೆಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಕಟ್ಟಡಕ್ಕೆ ಬಲವಂತವಾಗಿ ಕರೆದುಕೊಂಡುಹೋಗಿ ಪಿರ್ಯಾದಿ ಮತ್ತು ಹರಿಪ್ರಸಾದ ನವರಿಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದು ಪಿರ್ಯಾದಿಯವರ ಕಾಲಿಗೆ ತೊಡೆಗೆ ಹೊಡೆದು ನೋವು ಪಡಿಸಿ ಅರಣ್ಯ ಕೇಸು ದಾಖಲಿಸಿ ದಿನಾಂಕ 21/10/2015 ರಂದು ಕುಶಾಲನಗರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ವಿನಾಕಾರಣ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ 1)ರಂಜಿತ್, 2) ಶಿವರಾಮ, 3) ಸುರೇಶ, 4) ಸತಿಶ್, 5) ಮೇದಪ್ಪ, 6) ಮಂಜುನಾಥ ಮತ್ತು 7) ಮಂಜೇಗೌಡ ರವರು ಹಲ್ಲೆ ನಡೆಸಿ ನೋವನ್ನುಂಟು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.