Thursday, October 1, 2015

ಮಹಿಳೆಯ ಮೇಲೆ ಹಲ್ಲೆ ಮಾನಭಂಗಕ್ಕೆ ಯತ್ನ:

      ಕ್ಲುಲ್ಲಕ ಕಾರಣಕ್ಕೆ ಪತಿ ತನ್ನ ಸ್ನೇಹಿತರೊಂದಿಗೆ ಸೇರಿ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಕಡಂಗ ಗ್ರಾಮದಲ್ಲಿ ನಡೆದಿದೆ. ದಿನಾಂಕ: 30-09-15ರಂದು ಶ್ರೀಮತಿ. ಹೆಚ್.ಎಲ್.ಮಮತ @ ಪ್ರತೀಮ, ಗಂಡ: ಹೆಚ್.ಎ. ಲೋಕೇಶ್, ಕಬ್ಬಿಣಕಾಡು ಎಸ್ಟೇಟ್ ನ ಲೈನ್ ಮನೆ, ಕಕ್ಕಬ್ಬೆ ಗ್ರಾಮ, ನಾಪೋಕ್ಲು ಇವರು ತನ್ನ ತವರು ಮನೆಗೆ ಹೋಗಿದ್ದು, ಅಲ್ಲಿ ಅವರ ಅಕ್ಕ ಕೀರ್ತಿ ಸಹ ಬಂದಿದ್ದು,ಅವರುಗಳು ಮಾಯಮುಡಿ ಗ್ರಾಮಕ್ಕೆ ಹೋಗುವ ಸಲುವಾಗಿ ಬಸ್ಸಿಗಾಗಿ ಮನೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿವಾಗ್ಗೆ, ಹೆಚ್.ಎಲ್.ಮಮತ ರವರ ಗಂಡ ಲೋಕೇಶ್ ಹಾಗೂ ಆತನ ಸ್ನೇಹಿತರಾದ ದರ್ಶನ್ ಮತ್ತು ಸಂತೋಷ್ ರವರು ಏಕಾ ಏಕಿ ಬಂದು ಹೆಚ್.ಎಲ್.ಮಮತರವರ ದಾರಿ ತಡೆದು ನೀನು ನನ್ನನ್ನು ಕೇಳದೆ ಎಲ್ಲಿಗೆ ಹೋಗುತ್ತಿದ್ದೀಯಾ, ಎಂದು ಹೇಳಿ ಅಲ್ಲೇ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಲ್ಲಿನಿಂದ ಪಿ ಹೆಚ್.ಎಲ್.ಮಮತರವರ ತಲೆಯ ಹಿಂದಿನ ಮೇಲ್ಬಾಗಕ್ಕೆ ಹೊಡೆದು ಗಾಯಪಡಿಸಿರುವುದಲ್ಲದೆ, ಜೊತೆಯಲ್ಲಿದ್ದ ದರ್ಶನ್ ಮತ್ತು ಸಂತೋಷ್ ರವರು ಆಕೆಯ ಕೈಯನ್ನು ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮಹಿಳೆಮೇಲೆ ಮಹಿಳೆಯರಿಂದಲೇ ಹಲ್ಲೆ: 

     ದ್ವೇಷದ ಹಿನ್ನಲೆಯಲ್ಲಿ ಮೂವರು ಮಹಿಳೆಯರು ಸೇರಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಸಿದ್ದಾಪುರದ ಚೆನ್ನಂಗಿ ಗ್ರಾಮದಲ್ಲಿ ನಡೆದಿದೆ. ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನಂಗಿ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಜಯ ಎಂಬವರು ದಿನಾಂಕ 30/9/2015 ರಂದು ಸಂಜೆ 5.30 ಗಂಟೆಗೆ ತಮ್ಮ ವಾಸದ ಮನೆಯಲ್ಲಿ ಕೆಲಸಮಾಡಿಕೊಂಡಿರುವಾಗ್ಗೆ ಅದೇ ಗ್ರಾಮದವರಾದ ಜಯ, ಗೌರಿ, ಹಾಗೂ ಕವಿತಾ ಎಂಬ ಮಹಿಳೆಯರು ಏಕಾಏಕಿ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ದಬ್ಬೆ ಕತ್ತಿಯಿಂದ ಜಯರವರ ಬಲಕಾಲಿಗೆ ಕಡಿದು ಗಾಯವನ್ನುಂಟುಮಾಡಿದ್ದು ಅಲ್ಲದೆ ಗೌರಿ ಮತ್ತು ಕವಿತಾರವರು ಕತ್ತಿಯ ಹಿಡಿಯಿಂದ ಶ್ರೀಮತಿ ಜಯರವರ ಎದೆ ಹಾಗೂ ಶರೀರದ ಇತರ ಭಾಗಗಳಿಗೆ ಗುದ್ದಿ ಗಾಯವನ್ನುಂಟುಮಾಡಿದ್ದು ಈ ಬಗ್ಗೆ ಶ್ರೀಮತಿ ಜಯರವರು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ದನಗಳನ್ನು ಸಾಗಿಸುತ್ತಿದ್ದವರ ಮೇಲೆ ಹಲ್ಲೆ:

ಭಾಗಮಂಡಲ ಠಾಣಾ ಸರಹದ್ದಿನ ಹೊದವಾಡ ಗ್ರಾಮದ ಮೊಹಮ್ಮದ್ ಎಂಬವರು ದಿನಾಂಕ 28-9-2015 ರಂದು ಹಸೈನರ್ ಎಂಬವರೊಂದಿಗೆ ಗದ್ದೆ ಕೆಲಸಕ್ಕೆಂದು ಭಾಗಮಂಡಲದ ತಣ್ಣಿಮಾನಿ ಗ್ರಾಮದ ಸುಂದರ @ ತಮ್ಮಯ್ಯ ಎಂಬುವರಿಂದ 2 ಎತ್ತುಗಳನ್ನು ತೆಗೆದುಕೊಂಡು ನಾಪೋಕ್ಲುವಿಗೆ ಅವರ ಬಾಪ್ತು ಪಿಕ್ ಆಫ್ ವಾಹನದಲ್ಲಿ ಬರುತ್ತಿರುವಾಗ್ಗೆ ಆರೋಪಿಗಳಾದ ಪುರುಷೋತ್ತಮ,  ಜಯಂತ, ರಾಜೀವ, ಸೂರ್ತಲೆ ಕಾಶಿ, ಯಶವಂತ, ಜೀವನಕುಮಾರ್ ಹಾಗು ಮುನ್ನಾ ರವರುಗಳು ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ರೂ. 10,000/ ಗಳನ್ನು ನೀಡುವಂತೆ ಕೇಳಿದ್ದು, ಕೊಡದಿದ್ದಾಗ ಅವರುಗಳನ್ನು ಜೀಪಿನಲ್ಲಿ ಕರೆದುಕೊಂಡು ಭಾಗಮಂಡಲ ಠಾಣೆಗೆ ಒಪ್ಪಿಸಿರುವುದಾಗಿ ಅಲ್ಲದೆ ಸದರಿ ಘಟನೆಯಲ್ಲಿ ಅವರುಗಳ ಬಳಿ ಇದ್ದು ಸುಮಾರು 47,000/- ರೂ ಕಳೆದು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.