Saturday, October 17, 2015

ಮನೆಗೆ ಅಕ್ರಮ ಪ್ರವೇಶಮಾಡಿ ಹಲ್ಲೆ:

     ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ನಗರದ ನ್ಯಾಯಾಲಯದ ಹತ್ತಿರ ನಡೆದಿದೆ. ವಿರಾಜಪೇಟೆ ನಗರದ ನಿವಾಸಿ ಶ್ರೀಮತಿ ಯು.ಜಿ. ಕಾವೇರಮ್ಮ ಎಂಬವರು ದಿನಾಂಕ 16-10-2015 ರಂದು ಸಮಯ ಮದ್ಯಾಹ್ನ 2-15 ಗಂಟೆಗೆ ಅವರ ತಾಯಿ ಹಾಗೂ ಮಗುವಿನೊಂದಿಗೆ ವಿರಾಜಪೇಟೆ ನಗರದ ತನ್ನ ಹಳೇಯ ಮನೆಯಲ್ಲಿರುವಾಗ್ಗೆ, ಪಿರ್ಯಾದಿಯವರ ಮನೆಯ ಹತ್ತಿರ ವಾಸವಿರುವ ಶೀಲಾ ಮತ್ತು ಶೈಲಾ ಎಂಬುವರು ಏಕಾಏಕಿ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಳೇ ವೈಷಮ್ಯದಿಂದ ದೊಣ್ಣೆಯಿಂದ ಕಾವೇರಮ್ಮ ಮತ್ತು ಅವರ ತಾಯಿಯವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾನಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮನೆಗೆ ನುಗ್ಗಿ ಹಲ್ಲೆ, ಪ್ರಕರಣ ದಾಖಲು:

    ವಿನಾ ಕಾರಣ ಮಹಿಳೆಯೊಬ್ಬರ ಮೇಲೆ ಇಬ್ಬರು ಮಹಿಳೆಯರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಗಾಯಪಡಿಸಿ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 16-10-2015 ರಂದು ಸಮಯ ಮದ್ಯಾಹ್ನ 2-00 ಪಿ.ಎಂ.ಗೆ ವಿರಾಜಪೇಟೆ ನಗರದ ನಿವಾಸಿ ಶ್ರೀಮತಿ ಶೀಲಾ ಎಂಬವರು ತಮ್ಮ ಮನೆಯಲ್ಲಿರುವಾಗ್ಗೆ ಅವರ ಪಕ್ಕದ ಮನೆಯ ವಾಸಿಯಾದ ಅಮ್ಮಕ್ಕ ಮತ್ತು ಕಾವೇರಮ್ಮ ಎಂಬುವರು ಅವರ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ವಿನಾ: ಕಾರಣ ಜಗಳ ತೆಗೆದು ಇಬ್ಬರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದು, ಕಾಡು ಮರದ ದೊಣ್ಣೆಯಿಂದ ಇಬ್ಬರು ಸೇರಿಕೊಂಡು ಶ್ರೀಮತಿ ಶೀಲಾರವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.