Saturday, October 3, 2015


ಅಕ್ರಮ ಮದ್ಯ ಮಾರಾಟ ಆರೋಪಿಗಳ ಬಂಧನ:

     ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ದಿನಾಂಕ 2-10-2015 ರಂದು ಪೊನ್ನಂಪೇಟೆ ಠಾಣಾಧಿಕಾರಿ ಎಸ್.ಎನ್. ಜಯರಾಂರವರು ಸಿಬ್ಬಂಧಿಯವರೊಂಧಿಗೆ ಗಾಂಧಿ ಜಯಂತಿ ಪ್ರಯುಕ್ತ ಗಸ್ತು ಕರ್ತವ್ಯದಲ್ಲಿರುವಾಗ್ಗೆ ಕಾನೂರು ಗ್ರಾಮದ ಬೋಪಣ್ಣನವರ ಬಿಲ್ಡಿಂಗ್ ನಲ್ಲಿ ಇರುವ ಬೇಕರಿಯ ಮುಂದೆ ಶ್ರೀಜು ಎಂಬ ವ್ಯಕ್ತಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿತನಿಂದ 180 ಎಂ.ಎಲ್ ನ ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಯ 16 ಟೆಟ್ರಾ ಪ್ಯಾಕೆಟ್ ಗಳು ಹಾಗೂ 90 ಎಂಎಲ್ ನ ಅಮೃತ್ಸ್ ಸಿಲ್ವರ್ ಕಪ್ ರೆರ್ ಬ್ರಾಂಡಿಯ 86 ಪ್ಯಾಕೆಟ್ ಗಳಿದ್ದುದ್ದನ್ನು ಸ್ವಾದೀನಕ್ಕೆ ತೆಗೆದುಕೊಂಡು ಆರೋಪಿ ಯನ್ನು ಬಂಧಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಹಣದ ವಿಚಾರದಲ್ಲಿ ದಾರಿ ತೆಡೆದು ವ್ಯಕ್ತಿ ಮೇಲೆ ಹಲ್ಲೆ: 

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಟ್ಟೆಮಾಡು ಗ್ರಾಮದ ನಿವಾಸಿ ಹೆಚ್.ಇ. ಗಿರೀಶ ಎಂಬವರು ದಿನಾಂಕ: 02-10-2015 ರಂದು ಸಮಯ ಮಧ್ಯಾಹ್ನ 1-00 ಗಂಟೆಗೆ ತಮ್ಮ ಆಟೋರಿಕ್ಷಾವನ್ನು ಬಾಡಿಗೆಗೆ ಓಡಿಸುತ್ತಿದ್ದ ಸಮಯದಲ್ಲಿ ಕೊಂಡಂಗೇರಿ ಐಕೊಳ ಜಂಕ್ಷನ್‌ನಲ್ಲಿ ಜಗದೀಶ ಎಂಬ ವ್ಯಕ್ತಿ ಹೆಚ್.ಇ. ಗಿರೀಶ ರವರ ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ ತಾನು ನೀಡಿದ್ದ 2,000 ರೂಪಾಯಿ ಹಣವನ್ನು ವಾಪಾಸ್ಸು ನೀಡುವಂತೆ ಕೇಳಿ ಜಗಳ ತೆಗೆದು ಕೈಗಳಿಂದ ಹಲ್ಲೆ ನಡೆಸಿ, ಕಾಲಿನಿಂದ ಒದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.