Monday, November 30, 2015

ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ದಾಖಲು:

      ವ್ಯಕ್ತಿಯೊಬ್ಬರು ಮಹಿಳೆಯೊಬ್ಬರ ಕೈಹಿದು ಎಳೆದಾಡಿ ದೌರ್ಜನ್ಯವೆಸಗಿದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಕಿರಗೂರು ಗ್ರಾಮದಲ್ಲಿ ನಡೆದಿದೆ. ಪಿರ್ಯಾದಿ ಶ್ರೀಮತಿ ಪಂಜರಿ ಎರವರ ಮಾರೆ @ ಭಾಗ್ಯ ತಮ್ಮ ಗಂಡನೊಂದಿಗೆ ಕಿರುಗೂರು ಗ್ರಾಮದಲ್ಲಿ ಚೆಪ್ಪುಡೀರ ರೋಶನ್ @ ದಿಲೀಪ್ ಎಂಬವರ ಲೈನ್ ಮನೆಯಲ್ಲಿ ವಾಸಮಾಡಿಕೊಂಡಿದ್ದು, ಸದರಿ ಚೆಪ್ಪುಡೀರ ರೋಶನ್ @ ದಿಲೀಪ್ ರವರ ತೊಟದಲ್ಲಿ ಕೂಲಿಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 28/11/2015 ರಂದು ಶ್ರೀಮತಿ ಪಂಜರಿ ಎರವರ ಮಾರೆಯವರು ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವಾಗ ಆರೋಪಿ ಚೆಪ್ಪುಡೀರ ರೋಶನ್ @ ದಿಲೀಪ್ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಶ್ರೀಮತಿ ಪಂಜರಿ ಎರವರ ಮಾರೆಯವರ ಕೈಹಿಡಿದು ತೋಟದೊಳಗೆ ಎಳೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೋಟಾರ್ ಸೈಕಲ್ ಅವಘಡ ಸವಾರನಿಗೆ ಗಾಯ:

     ದಿನಾಂಕ: 29-11-15ರಂದು ಸಮಯ ಸಂಜೆ 6-45ಗಂಟೆಗೆ ವಿರಾಜಪೇಟೆ ತಾಲೂಕು ಪಾಲಿಬೆಟ್ಟದಲ್ಲಿರುವ ಕೂರ್ಗ್ ಕ್ಲಿಪ್ಸ್ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿರುವ ಡ್ಯಾನಿಯಲ್ ತಮ್ಮ ಮೋಟಾರ್ ಸೈಕಲ್ ಕೆಎ.05.ಹೆಚ್.ಎನ್.2780 ಪಲ್ಸರ್ ಬೈಕ್ನಲ್ಲಿ ಪಾಲಿಬೆಟ್ಟದಿಂದ ಅಮ್ಮತ್ತಿ ಕಡೆಗೆ ಬರುತ್ತಿದ್ದಾಗ ಮುಕ್ಕಾಟಿಕೊಪ್ಪಲು ಅಮ್ಮತ್ತಿ ಎಂಬಲ್ಲಿ ತಲುಪುವಾಗ್ಗೆ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಹೋಗಿ ಗಾಯಗೊಂಡಿದ್ದು, ಈ ಸಂಬಂಧ ಮುಕ್ಕಾಟಿಕೊಪ್ಪಲು ಅಮ್ಮತ್ತಿ ನಿವಾಸಿ ಪಿ.ಸಿ.ಸುರೇಶ್ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯ ಆತ್ಮಹತ್ಯೆ:

     ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ವಾಸಿ ಹಾಲಿ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಿಗ್ಗಾಲು ಗ್ರಾಮದಲ್ಲಿ ನೆಲಸಿ ಕೂಲಿ ಕೆಲಸ ಮಾಡಿಕೊಂಡಿರುವ ಮಾದೇಶ ಎಂಬ ವ್ಯಕ್ತಿ ಹೊಟ್ಟೆನೋವಿನಿಂದ ಬಳಲುತ್ತಿದ್ದು ಇದರಿಂದ ನೊಂದು ದಿನಾಂಕ 29-11-2015 ರಂದು ತಾನು ವಾಸವಾಗಿದ್ದ ಲೈನು ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೈಕ್ ಅವಘಡ ವ್ಯಕ್ತಿಯ ಸಾವು,

    ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅತ್ತಿಮಂಗಲ, ಅಭ್ಯತ್ ಮಂಗಲ ಎಂಬಲ್ಲಿ ದಿನಾಂಕ 10-11-2015 ರಂದು ಸಂಜೆ ನಲ್ಲತಂಬಿ ಎಂಬ ವ್ಯಕ್ತಿ ತಮ್ಮ ಬಾಪ್ಸು ಟಿ.ವಿ.ಎಸ್. ಬೈಕ್ ನಲ್ಲಿ ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಬೈಕ್ ಅಪಘಾತಕ್ಕೀಡಾಗಿ ಸದರಿ ನಲ್ಲತಂಬಿಯವರು ಸಾವನಪ್ಪಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

Sunday, November 29, 2015

ಜೀವನದಲ್ಲಿ ಜಿಗುಪ್ಸೆ, ಉಪನ್ಯಾಸಕ ಆತ್ಮಹತ್ಯೆ:

      ಜೀವನದಲ್ಲಿ ಜಿಗುಪ್ಸೆಗೊಂಡು ಡೆಂಟಲ್ ಕಾಲೇಜಿನ ಉಪನ್ಯಾಸಕನೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ಫಿರ್ಯಾದಿ ಕೆ.ಎಸ್ ಭದ್ರಗಿರಿ ಎಂಬವರು ಹಾಲಿ ಬೆಂಗಳೂರಿನಲ್ಲಿ ಬಿ.ಎಸ್.ಎನ್.ಎಲ್. ನೌಕರರಾಗಿದ್ದು ಅವರ ಮಗ ಗಣೇಶಬಾಬು ಎಂಬವರು ವಿರಾಜಪೇಟೆ ಡೆಂಟಲ್ ಕಾಲೇಜಿನಲ್ಲಿ ಉಪನ್ಯಾಶಕನಾಗಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27-11-2015 ರಂದು ರಾತ್ರಿ ತಾವು ವಾಸವಾಗಿದ್ದ ವಿರಾಜಪೇಟೆ ನಗರದ ತಿಮ್ಮಯ್ಯ ಲೇಔಟ್ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ತಂದೆ ಕೆ.ಎಸ್. ಭದ್ರಗಿರಿ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕಾರಿಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಸವಾರನ ದುರ್ಮರಣ:

     ಬೈಕೊಂದು ಕಾರಿಗೆ ಡಿಕ್ಕಿಯಾಗಿ ಸವಾರ ಸಾವನಪ್ಪಿ ಹಿಂಬದಿ ಸವಾರ ಗಾಯಗೊಂಡ ಘಟನೆ ಕುಶಾಲನಗರದ ಕೂಡಿಗೆ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ. ದಿನಾಂಕ 28/11/15 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ಕುಶಾಲನಗರದ ಮುಳ್ಳುಸೋಗೆ ಗ್ರಾಮದ ನಿವಾಸಿ ಕೆ.ಟಿ. ಚಂದ್ರರಾಜು ಎಂಬವರ ಮಗ ಸುರೇಂದ್ರನು ತನ್ನ ಬಾಪ್ತು ಕೆಎ 12 ಜೆ 2310 ರ ಮೋಟಾರ್ ಸೈಕಲಿನ ಹಿಂಬದಿಯಲ್ಲಿ ತನ್ನ ಸ್ನೇಹಿತ ಗಿರೀಶ ಎಂಬಾತನನ್ನು ಕೂರಿಸಿಕೊಂಡು ಕುಶಾಲನಗರದಿಂದ ಕೂಡಿಗೆ ಕಡೆಗೆ ಹೋಗುವಾಗ್ಗೆ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಕೂಡುಮಂಗಳೂರು ಗ್ರಾಮದ ಕೃಷ್ಣಪ್ಪ ಎಂಬುವರ ಮನೆಯ ಮುಂದೆ ಮುಖ್ಯರಸ್ತೆಯಲ್ಲಿ ಕೆಎ 12- 8528 ರ ಇಂಡಿಕಾ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಸುರೇಂದ್ರನ ತಲೆ ಮತ್ತು ಶರೀರಕ್ಕೆ ತೀವ್ರ ತರಹದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಸವಾರನಿಗೂ ಗಾಯವಾಗಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೋಟದ ಶೆಡ್ಡಿನಿಂದ ಕಳುವಿಗೆ ಯತ್ನ, ಪ್ರಕರಣ ದಾಖಲು:

     ದಿನಾಂಕ: 28/11/2015 ರಂದು 3.15 ಗಂಟೆಗೆ ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಕೇರಿ ನಿವಾಸಿ ಮೇರಿ ಲ್ಯಾಂಡ್ ಸನ್ ಸೀನ್ ತೋಟದ ಮಾಲಿಕರಿಗೆ ಸೇರಿದ ತೋಟದ ಮನೆಯ ಹತ್ತಿರವಿರುವ ಶೆಡ್ಡಿನಲ್ಲಿರುವ ಕೆಲವು ಕಬ್ಬಣದ ಪೀಸುಗಳು ಮತ್ತು ಟ್ರಾಕ್ಟರ್ ನ ಬಿಡಿ ಭಾಗಗಳನ್ನು ಜೋಯಿಸನ್ ಕ್ರಿಸ್ತ ಮತ್ತು ಬಿಶನ್ ಜೋಶೆಫ್ ಎಂಬವರು ಕಳವು ಮಾಡಲು ಪ್ರಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರುತಿ ಓಮ್ನಿಗೆ ಕೆಎಸ್ಆರ್ ಟಿಸಿ ಬಸ್ಸು ಡಿಕ್ಕಿ ಇಬ್ಬರ ಸಾವು:

     ಕೆ.ಎಸ್.ಆರ್ .ಟಿ.ಸಿ ಬಸ್ಸು ಮಾರುತಿ ವ್ಯಾನಿಗೆ ಡಿಕ್ಕಿಯಾಗಿ ಇಬ್ಬರು ಸಾವನಪ್ಪಿ ವ್ಯಾನಿನಲ್ಲಿದ್ದ ಇತರರು ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಕಾಟಕೇರಿಯಲ್ಲಿ ನಡೆದಿದೆ. ಹಾಕತ್ತೂರು ಗ್ರಾಮದ ನಿವಾಸಿ ಹಂಸ ಎಂಬವರು ದಿನಾಂಕ 28-11-2015 ರಂದು ತಮ್ಮ ಅಣ್ಣ ಬಷೀರ್, ಹಾಗೂ ಅವರ ಹೆಂಡತಿ ಮಕ್ಕಳೊಂದಿಗೆ ಅವರ ಮಾರುತಿ ಓಮಿತಿ ವ್ಯಾನ್ ಸಂಖ್ಯೆ: ಕೆಎ-04 ಬಿ-5684 ರಲ್ಲಿ ಪುತ್ತೂರಿನಿಂದ ವಾಪಾಸ್ಸು ಹಾಕತ್ತೂರಿಗೆ ಬರುತ್ತಿದ್ದಾಗ ಮಡಿಕೇರಿ ಕಡೆಯಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸು (ನಂ: KA-11 F-0219) ಮಾರುತಿ ವ್ಯಾನ್‌ ಗೆ ಢಿಕ್ಕಿ ಪಡಿಯಾದ ಪರಿಣಾಮ ವ್ಯಾನ್ ನಲ್ಲಿದ್ದ ಎಲ್ಲರು ಗಾಯಗೊಂಡು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ನಂತರ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಹಂಸ ಹಾಗೂ ಮೊಹಮ್ಮದ್ ರಾಶಿಕ್ ರವರು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ:

     ಮಡಿಕೇರಿ ತಾಲೂಕು ಕುದುರೆಪಾಯ ಎಂಬಲ್ಲಿ ವಾಸವಾಗಿರುವ ಬೊಳ್ಳೂರು ತಿಮ್ಮಪ್ಪ ಎಂಬವರ ಪತ್ನಿ ಶ್ರೀಮತಿ ಲಲಿತ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27-11-2015 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಪತಿ ಬೊಳ್ಳೂರು ತಿಮ್ಮಪ್ಪನವವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರನ್ನು ಹಿಂದಕ್ಕೆ ಪಡೆಯುವಂತೆ ವ್ಯಕ್ತಿಗೆ ಬೆದರಿಕೆ:

     ದಿನಾಂಕ 20-11-2015 ರಂದು ಸಮಯ 3-30 ಪಿ.ಎಂಗೆ ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ಎಂ.ಇ.ಅಬ್ಬಾಸ್ ರವರು ತಮ್ಮ ಸಂಗಡಿಗರಾದ ಶಿವಕುಮಾರ್, ಮುಬರಾಕ್ ಮತ್ತು ರಜಕ್ ರವರೊಂದಿಗೆ ಕುಶಾಲನಗರದ ಬಸ್ಸು ನಿಲ್ದಾಣಕ್ಕೆ ನಡೆದುಕೊಂಡು ಹೋಗುವಾಗ ನೊಂದಣಿಯಾಗದ ಮಾರುತಿ ಓಮಿನಿಯಲ್ಲಿ 5 ಮಂದಿ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ವಿವೇಕ್ ಪೂವಯ್ಯನವರ ಮೇಲೆ ನೀಡಿರುವ ದೂರನ್ನು ವಾಸಾಸು ಪಡೆಯಬೇಕು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನೀನು ದೂರು ವಾಪಾಸು ಪಡೆಯದಿದ್ದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:
      ಶ್ರೀಮಂಗಲ ಠಾಣಾ ಸರಹದ್ದಿನ ತೆರಾಲು ಗ್ರಾಮದ ನಿವಾಸಿ ಪಣಿಎರವರ ಪಪ್ಪಣ್ಣ ಎಂಬವರ ತಂದೆ ಬೊಳ್ಳಿ ಎಂಬ ವ್ಯಕ್ತಿ ದಿನಾಂಕ 27-11-2015 ರಂದು ರಾತ್ರಿ ಯಾವುದೋ ವಿಚಾರದಲ್ಲಿ ನೊಂದು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಫಿರ್ಯಾದಿ ಪಪ್ಪಣ್ಣನವರ ದೂರಿನನ್ವಯ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Saturday, November 28, 2015

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

ಶನಿವಾರಸಂತೆ ಠಾಣಾ ಪಿ.ಎಸ್.ಐ. ರವಿಕಿರಣ್ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 26.11.2015 ರಂದು ಸಿಬ್ಬಂದಿಯೊಂದಿಗೆ ಶನಿವಾರಸಂತೆಯ ಅರಣ್ಯ ಕಚೇರಿಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ದಾಳಿ ಮಾಡಿ ಅಭಿಷೇಕ್ ಎಂಬವರು ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳನ್ನು ಟ್ರಾಕ್ಟರ್ ನಂ ಕೆ.ಎ-11-ಟಿ.ಎ-99 ರಲ್ಲಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಮಾಲು ಸಮೇತ ಆರೋಪಿಯನ್ನು ವಶಕ್ಕೆ ತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಪತಿಯಿಂದಲೇ ಪತ್ನಿ ಕೊಲೆ:

     ವಿರಾಜಪೇಟೆ ತಾಲೂಕು ಬೈಗೋಡು ಗ್ರಾಮದ ನಿವಾಸಿ ಮುಕ್ಕಾಟ್ಟೀರ ನಾಚಪ್ಪ, ರವರ ಲೈನ್ ಮನೆಯಲ್ಲಿ ವಾಸವಿರುವ ಗಣೇಶ ಎಂಬ ವ್ಯಕ್ತಿ ದಿನಾಂಕ 26-11-2015 ರಂದು ರಾತ್ರಿ ತನ್ನ ಪತ್ನಿ ಡಿಂಕಿಯನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ದು, ಪಿ.ಜೆ. ಬಸವ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ಲ್ಯಾಪ್ ಟಾಪ್ ಮೊಬೈಲ್ ಕಳವು:

    ಮಡಿಕೇರಿ ನಗರದ ಐಟಿಐ ಬಳಿ ವಾಸವಾಗಿರುವ ಪಿರ್ಯಾದಿ ಕು.ಅಕ್ಷಿತಾ ಟೀನಾ ರವರು ಅಲ್ಟೀಮೇಟ್ ಡ್ಯಾನ್ಸ್ ಅಕಾಡೆಮಿಯಲ್ಲಿ ನೃತ್ಯ ಶಿಕ್ಷಕಿಯಾಗಿದ್ದು, ದಿನಾಂಕ 22-10-2015 ರಂದು ಆಯುಧಪೂಜೆಯ ದಿವಸ ಗಾಂಧಿ ಮೈದಾನದಲ್ಲಿ ರಾತ್ರಿ ನೃತ್ಯ ಕಾರ್ಯಕ್ರಮ ನೀಡಲು ತೆರಳಿದ್ದು, ಸಮಯ ರಾತ್ರಿ 11.10 ಗಂಟೆಗೆ ತನ್ನ ಬಳಿ ಇದ್ದ ಲ್ಯಾಪ್ ಟಾಪ್, ಮೊಬೈಲ್ ಮತ್ತು ಇತರ ವಸ್ತುಗಳಿದ್ದ ಬ್ಯಾಗನ್ನು ಸ್ಟೇಜಿನ ಹಿಂಭಾಗ ಇಟ್ಟು, ಮುಂಭಾಗದಲ್ಲಿ ಮಕ್ಕಳ ಡ್ಯಾನ್ಸ್ ತಯಾರಿಗೆಂದು ಹೋಗಿ ವಾಪಾಸು ಬಂದು ನೋಡಿದಾಗ ಬ್ಯಾಗು ಕಾಣದೆ ಇದ್ದು, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಸದರಿ ಬ್ಯಾಗನ್ನು ಅವರಿಗೆ ಪರಿಚಯವಿರುವ ಮದನ್ ಮತ್ತು ಮಹೇಶರವರು ಕಳವು ಮಾಡಿಕೊಂಡು ಹೋಗಿರ ಬಹುದೆಂದು ಅನುಮಾನವಿರುವುದಾಗಿ ದಿನಾಂಕ 26-11-2015 ರಂದು ಕು: ಅಕ್ಷಿತಾ ಟೀನಾನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕುಡಿತದ ಅಮಲಿನಲ್ಲಿ ಮಹಿಳೆಯ ಆತ್ಮಹತ್ಯೆ:
     ಸಿದ್ದಾಪುರ ಠಾಣಾ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ವಾಸವಾಗಿರುವ ಬಿಡುವಂಡ ಬಿದ್ದಪ್ಪರವರ ಲೈನುಮನೆಯಲ್ಲಿ ವಾಸವಿರುವ ಫಿರ್ಯಾದಿ ಪಣಿ ಎರವರ ಚೋಮ ಎಂಬವರ ಹೆಂಡತಿ ಪ್ರಾಯ 55 ವರ್ಷದ ಕಮಲರವರಿಗೆ ಮದ್ಯಪಾನ ಮಾಡುವ ಚಟವಿದ್ದು ಯಾವುದೋ ವಿಚಾರದಲ್ಲಿ ಬೇಸರಗೊಂಡು ದಿನಾಂಕ 26-11-2015 ರಂದು ರಾತ್ರಿ ತಮ್ಮ ವಾಸದ ಮನೆಯ ಹತ್ತಿರದ ಕಾಫಿತೋಟದ ಕಾಫಿಗಿಡದ ಕೊಂಬೆಗೆ ವೇಲಿನಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, November 26, 2015

ಮೋಟಾರ್ ಸೈಕಲ್ – ಜೀಪು ನಡುವೆ ಅಪಘಾತ ಸವಾರರಿಬ್ಬರಿಗೆ ಗಾಯ:
    ಮೋಟಾರ್ ಸೈಕಲ್ ಮತ್ತು ಜೀಪು ನಡುವೆ ಅಪಘಾತ ಸಂಭವಿಸಿ ಮೋಟಾರ್ ಸೈಕಲ್ ಸವಾರರಿಬ್ಬರು ಗಾಯಗೊಂಡ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಮಹದೇಶ್ವರ ಬ್ಲಾಕ್ ನಿವಾಸಿ ಹೆಚ್.ಜಿ ಗಣೇಶ ರವರು ದಿನಾಂಕ 25-11-2015 ರಂದು ಕೆಎ-12, 3951 ರ ಮೋಟಾರು ಸೈಕಲ್ ನಲ್ಲಿ ಹರೀಶ ಎಂಬವರನ್ನು ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡು ಸಮಯ 08.,15 ಗಂಟೆಗೆ ಸೋಮವಾರಪೇಟೆ ನಗರದ ರಾಜರಾಜೇಶ್ವರಿ ಸ್ಟ್ಯಾಚ್ಯೂ ಬಳಿ ಹೋಗುತ್ತಿರುವಾಗ್ಗೆ ಎದುರುಗಡೆಯಿಂದ ಸಿಕೆಎಸ್-2284 ರ ಜೀಪನ್ನು ಅದರ ಚಾಲಕ ವಿಶ್ವಾಶ್ ಎಂಬವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರು ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಗಣೇಶ ಮತ್ತು ಹರೀಶರವರಿಗೆ ರಕ್ತಗಾಯಗಳಾಗಿರುವುದಾಗಿ ನೀಡಿದ ದೂರಿನನ್ವಯ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಗೋವುಗಳ ಸಾಗಾಟ ಪತ್ತೆ, ಪ್ರಕರಣ ದಾಖಲು:

    ಅಕ್ರಮವಾಗಿ ಎರಡು ವಾಹನಗಳಲ್ಲಿ ಗೋವುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಶನಿವಾರಸಂತೆ ಠಾಣಾ ವ್ಯಾಪ್ತಿಯ ಹಂಡ್ಲಿ ಗ್ರಾಮದಲ್ಲಿ ಆರೋಪಿಗಳಾದ ಹಾಸನ ಜಿಲ್ಲೆಯ ಮಲ್ಲಿಪಟ್ಟಣ ನಿವಾಸಿಗಳಾದ ಅಬ್ದುಲ್ಲಾ, ವಾಸಿಂ ಖಾನ್ ಮತ್ತು ನಯಾಜ್ ಎಂಬವರುಗಳು ದಿನಾಂಕ ಪೂವಾಹ್ನ 10-00 ಗಂಟೆಗೆ ಎರಡು ವಾಹಗಳಲ್ಲಿ ಒಟ್ಟು 8 ಜಾನುವಾರುಗಳನ್ನು ಸರಕಾರದ ಪರವಾನಗಿ ಇಲ್ಲದೇ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಶನಿವಾರಸಂತೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಗಂಡಸು ಕಾಣೆ ಪ್ರಕರಣ ದಾಖಲು:

    ಸೋಮವಾರಪೇಟೆ ತಾಲೂಕು ಕಿರಿಕೊಡ್ಲಿ ಗ್ರಾಮದ ನಿವಾಸಿ ಶ್ರೀಮತಿ ಕೆ.ಆರ್. ಸುಮಿತ್ರ ಎಂಬವರ ಗಂಡ ಪ್ರಕಾಶ್ ನಾಯಕ್ ರವರು ದಿನಾಂಕ 19-11-2015 ರಂದು ಸಮಯ ಮಧ್ಯಾಹ್ನ 02-00 ಗಂಟೆಗೆ ಚೀಟಿ ಹಣವನ್ನು ಹೊಂದಿಸುವುದಾಗಿ ಹೇಳಿ ಮನೆಯಿಂದ ಹೋದವರು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಜೀವನದಲ್ಲಿ ಜಿಗುಪ್ಸೆ, ನೇಣುಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ:

    ಮೂರ್ಚೆರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಅರುವತ್ತೊಕ್ಲು ಗ್ರಾಮದ ಮೈಸೂರಮ್ಮ ಕಾಲೋನಿಯಲ್ಲಿ ವಾಸವಾಗಿರುವ ವಿ.ಎಂ. ಮಂಜು ಎಂಬವರ ತಂದೆ ಮುತ್ತಪ್ಪರವರಿಗೆ ಮೂರ್ಚೆ ರೋಗವಿದ್ದು ದಿನಾಂಕ 24/11/2015 ರಂದು ಮಧ್ಯಾಹ್ನ ಸಮಯ 2-30 ಪಿ.ಎಂ.ಗೆ ಮನೆಯಿಂದ ಯಾರಿಗೂ ಹೇಳದೆ ಹೊರಟು ಹೋಗಿದ್ದು ರಾತ್ರಿಯಾದರು ಮನೆಗೆ ಬಾರದ್ದರಿಂದ ಅಕ್ಕಪಕ್ಕದಲ್ಲಿ ಹುಡುಕಿದರು ಪತ್ತೆಯಾಗದೇ ಮರುದಿನ ದಿನಾಂಕ 25-11-2015 ರಂದು ಮುತ್ತಪ್ಪನವರು ಮನೆಯ ಹತ್ತಿರದ ವೆಂಕಟಪ್ಪ ಎಂಬವರ ಕಾಡು ಬೆಳೆದ ಅಡಿಕೆ ತೋಟದ ಒಳಗೆ ಸೀಬೆ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂದಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:

   ಮಗಳು ಪ್ರೀತಿಸಿದದನ ಜೊತೆ ಹೋದ ವಿಚಾರದಲ್ಲಿ ನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶ್ರೀಮಂಗಲ ಠಾಣಾ ವ್ಯಾಪ್ತಿಯ ಬಿರುನಾಣಿ ಗ್ರಾಮದ ನಿವಾಸಿ 67 ವರ್ಷ ಪ್ರಾಯದ ಕರ್ತಮಾಡ ಉಮೇಶ್ ಎಂಬವರು ತನ್ನ ಮಗಳು ಸೋನಿಕುಮಾರ್ ಎಂಬವನ ಜೊತೆ ಹೋದ ವಿಚಾರದಲ್ಲಿ ನೊಂದು ದಿನಾಂಕ 25-11-2015 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಕ್ಅಪ್ ಜೀಪು ಡಿಕ್ಕಿ ಮಹಿಳೆ ಸಾವು:

    ವಿರಾಜಪೇಟೆ ತಾಲೂಕು ಬೇಗೂರು ಗ್ರಾಮದ ನಿವಾಸಿ ಎಂ. ವಿಜಯ್ ಎಂಬವರು ದಿನಾಂಕ 25-11-2015 ರಂದು ಸಮಯ 1-50 ಪಿ.ಎಂ ಗೆ ತಮ್ಮ ಹೆಂಡತಿ ರತ್ನಮ್ಮ @ ಮೇರಿರವರೊಂದಿಗೆ ಕೂಲಿ ಕೆಲಸಕ್ಕೆ ಬೇಗೂರು ಗ್ರಾಮದ ಕಾಕಮಾಡ ಪೂವಯ್ಯ ಎಂಬವರ ಮನೆಯ ಮುಂದಿನ ಗೇಟ್ ನ ರಸ್ತೆಗಾಗಿ ಹೋಗುತ್ತಿರುವಾಗ್ಗೆ ಕಾಕಮಾಡ ಪೂವನವರು ಅವರ ಬಾಪ್ತು ಕೆ ಎ 12 ಬಿ 1784 ರ ಪಿಕ್ ಅಪ್ ಜೀಪನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ರತ್ನಮ್ಮ @ ಮೇರಿರವರ ಹಿಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಕೆ ರಸ್ತೆಯ ಎಡಬಾಗದ ಕಾಫಿ ತೋಟದೊಳಗೆ ಕಾಫಿ ಗಿಡದ ಬದಿಗೆ ಬಿದ್ದು ಹೋಗಿದ್ದು ಆಗ ಜೀಪಿನ ಎಡ ಭಾಗದ ಚಕ್ರ ರತ್ನಮ್ಮ@ ಮೇರಿ ರವರ ಮೈಮೇಲೆ ಹರಿದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಸಮಯ ಸದರಿ ಮಹಿಳೆ ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Wednesday, November 25, 2015

ಮನುಷ್ಯ ಕಾಣೆ, ಪ್ರಕರಣ ದಾಖಲು:

     ಮನೆಯಿಂದ ಸೋಮವಾರಪೇಟೆ ನಗರಕ್ಕೆ ಹೋಗಿಬರುವುದಾಗಿ ತಿಳಿಸಿ ಹೋದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಸೋಮವಾರಪೇಟೆ ತಾಲೂಕು ನಿಲುವಾಗಿಲು ಗ್ರಾಮದ ನಿವಾಸಿ 50 ವರ್ಷಪ್ರಾಯದ ಹೆಚ್.ಟಿ. ಅಪ್ಪಣ್ಣಗೌಡ ಎಂಬವರು ದಿನಾಂಕ 23-11-2015 ರಂದು ಬೆಳಗ್ಗೆ 8-00 ಗಂಟೆಗೆ ಸ್ವಂತ ಕೆಲಸ ಮೇಲೆ ಸೋಮವಾರಪೇಟೆಗೆ ಹೋಗಿಬರುವುದಾಗಿ ತಿಳಿಸಿ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಸದರಿ ಹೆಚ್.ಟಿ. ಅಪ್ಪಣ್ಣಗೌಡರವರ ಅಳಿಯ ಪಿ.ಡಿ. ರಮೇಶ್ ಎಂಬವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ, ಗಾಯ:

  ತಮ್ಮ ಮನೆಗೆ ವಾಪಾಸಾಗುತ್ತಿದ್ದ ವ್ಯಕ್ತಿಯ ಮೇಲೆ ವಿನಾಕಾರಣ ವ್ಯಕ್ತಿಯೋರ್ವ ಟಾರ್ಚ್ ಲೈಟ್ ನಿಂದ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಬೆಸಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 24-11-2015 ರಂದು ಸಮಯ 7-30 ಪಿ.ಎಂ ಗೆ ಬೆಸಗೂರು ಗ್ರಾಮದ ನಿವಾಸಿ ಪಿರ್ಯಾದಿ ಅರಮಣಮಾಡ ಹರೀಶ್ ಎಂಬವರು ಬೆಸಗೂರು ದೇವಸ್ಥಾನದಲ್ಲಿ ಶೆಟಲ್ ಆಡಿ ವಾಪಾಸು ಮನೆಯ ಕಡೆ ಹೋಗುತ್ತಿದ್ದಾಗ ಆರೋಪಿ ಬಿಲ್ಲವರ ನಾಗೇಶ್ ಎಂಬ ವ್ಯಕ್ತಿ ಇದ್ದಕ್ಕಿದ್ದಂತೆ ಕೈಯಲ್ಲಿದ್ದ ಟಾರ್ಚ್ ನಿಂದ ಪಿರ್ಯಾದಿಯವರ ಬಲ ಭಾಗದ ಹಣೆಗೆ ಗುದ್ದಿ ಗಾಯ ಮತ್ತು ನೋವು ಪಡಿಸಿರುತ್ತಾರೆಂದು ಫಿರ್ಯಾದಿ ಅರಮಣಮಾಡ ಹರೀಶ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆಯ ದ್ವೇಷದಿಂದ ಚಾಕುವಿನಿಂದ ಹಲ್ಲೆ:

   ವ್ಯಕ್ತಿಯೊಬ್ಬರು ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ತಡೆದು ಹಲ್ಲೆನಡೆಸಿದ ಘಟನೆ ವರದಿಯಾಗಿದೆ. ದಿನಾಂಕ 24-11-2015 ರಂದು ಸಮಯ 8-30 ಪಿ.ಎಂ ಗೆ ವಿರಾಜಪೇಟೆ ತಾಲೋಕು ಬೆಸಗೂರು ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಬಿ.ಪಿ.ನಾಗೇಶ ಎಂಬವರು ತಮ್ಮ ತಂದೆಯೊಂದಿಗೆ ಅತ್ತೆಯ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಅರಮಣಮಾಡ ಹರೀಶ್ ಎಂಬವರು ಹಳೆಯ ದ್ವೇಷದಿಂದ ನಾಗೇಶ್ ರವರ ದಾರಿ ತಡೆದು ಚಾಕುವಿನಿಂದ ಬಲ ಕಿವಿಯ ಭಾಗಕ್ಕೆ ಚುಚ್ಚಿ ಹಾಗೂ ಕೈಯಿಂದ ಮುಖದ ಭಾಗಕ್ಕೆ ಗುದ್ದಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಹಕಾರ ಸಂಘದ ಕಟ್ಟಡದಿಂದ ಪಡಿತರ ಕಳವು:

    ಸಹಕಾರ ಸಂಘದ ಕಟ್ಟಡಕ್ಕೆ ಕಳ್ಳರು ನುಗ್ಗಿ ಪಡಿತರ ಕಳ್ಳತನ ಮಾಡಿದ ಘಟನೆ ಕುಶಾಲನಗರದ ರಂಗಸಮುದ್ರ ಸಹಕಾರ ಸಂಘದಲ್ಲಿ ನಡೆದಿದೆ. ದಿನಾಂಕ 23-11-2015 ರ 2-00 ಗಂಟೆಯಿಂದ 24-11-2015ರ 6-00 ಗಂಟೆಯ ಅವಧಿಯಲ್ಲಿ ರಂಗಸಮುದ್ರ ಸಹಕಾರ ಸಂಘದ ಕಟ್ಟಡದ ಹೆಂಚುಗಳನ್ನು ತೆಗೆದು ಒಳಗೆ ಪ್ರವೇಶಿಸಿ 3ನೇ ಕೋಣೆಯಲ್ಲಿ ದಾಸ್ತಾನು ಮಾಡಿ ಇಟ್ಟಿದ್ದ ಉಚಿತ ಪಡಿತರ 12 ಚೀಲ ಅಕ್ಕಿ, 2ನೇ ಕೋಣೆಯಲ್ಲಿ ಇಟ್ಟಿದ್ದ ಉಚಿತ ಪಡಿತರ 5 ಚೀಲ ಗೋದಿ, 5 ಲೀಟರ್ ತಾಳೆ ಎಣ್ಣೆ, 15 ಕೆಜಿ ಸಕ್ಕರೆ, 15 ಕೆ.ಜಿ ಉಪ್ಪು ಕಳ್ಳತನಮಾಡಿ ಕೊಂಡು ಹೋಗಿರುತ್ತಾರೆಂದು ಕಾರ್ಯದರ್ಶಿ ಲ್ಯಾಂಪ್ಸ್ ಸಹಕಾರ ಸಂಘ ಬಸವನಹಳ್ಳಿ ಕುಶಾಲನಗರ ಇವರು ನೀಡಿದ ದೂರಿನನ್ವಯ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೆಂಗಸು ಕಾಣೆ:

   ವಿರಾಜಪೇಟೆ ನಗರಕ್ಕೆ ಹೋದ ಮಹಿಳೆಯೊಬ್ಬರು ಕಾಣೆಯಾದ ಘಟನೆ ನಡೆದಿದೆ. ವಿರಾಜಪೇಟೆ ತಾಲೂಕು ಕುಕ್ಲೂರು ಗ್ರಾಮದ ನಿವಾಸಿ ಎ.ಟಿ. ಜಾನ್ಸನ್ ಎಂಬವರು ಒಂದು ವರ್ಷದ ಹಿಂದೆ ಚಿಕ್ಕಮಂಗಳೂರು ಜಿಲ್ಲೆಯ ಅಂತೋಣಿರವರ ಮಗಳು ಜ್ಯೋತಿ ರವರನ್ನು ಮದುವೆಯಾಗಿದ್ದು, ದಿನಾಂಕ 21-11-2015 ರಂದು ಬೆಳಿಗ್ಗೆ 8-30 ಗಂಟೆಗೆ ಕುಕ್ಲೂರುವಿನ ತಮ್ಮ ಮನೆಯಿಂದ ವಿರಾಜಪೇಟೆ ನಗರದ ದೇವಸ್ಥಾನಕ್ಕೆ ಪೂಜೆಗೆಂದು ಬಂದು, ಪೂಜೆ ಮುಗಿಸಿಕೊಂಡು ನಗರದಲ್ಲಿ ಬಟ್ಟೆ ಖರೀದಿಸಿ ಸಮಯ 11-00 ಗಂಟೆಗೆ ಹೆಂಡತಿ ಜ್ಯೋತಿಯನ್ನು ಮನೆಗೆ ಹೋಗುವಂತೆ ತಿಳಿಸಿ ಮೊಬೈಲ್ ರಿಪೇರಿ ಮಾಡಿಸಿಕೊಂಡು ವಾಪಾಸ್ಸು ಮನೆಗೆ 12-00 ಗಂಟೆಗೆ ಹೋದಾಗ, ಹೆಂಡತಿ ಜ್ಯೋತಿ ಕಾಣೆಯಾಗಿರುವುದು ಕಂಡು ಬಂದಿದ್ದು, ಈ ಸಂಬಂಧ ಫಿರ್ಯಾದಿ ಎ.ಟಿ. ಜಾನ್ಸನ್ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಾರಿ ಕೆಲಸ ಕೊಡಿಸುವುದಾಗಿ ವ್ಯಕ್ತಿಗೆ ವಂಚನೆ:

    ಪೊನ್ನಂಪೇಟೆ ನಗರದ ನಿವಾಸಿ ಶ್ರೀಮತಿ ಸುಮತಿ ನಾಯಕ್ ಎಂಬ ಮಹಿಳೆಗೆ ತಾನು ವಿಜಿಲೆನ್ಸ್ ಡಿಪಾರ್ಟ್ ಮೆಂಟ್ ನಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿರುವುದಾಗಿ ಪರಿಚಯ ಮಾಡಿಕೊಂಡ ವ್ಯಕ್ತಿ ಜಯತೀರ್ಥ ಜಿ. ಕುಲಕರ್ಣಿ, ತಿಲಕ್ ಚೌಕ್ ಬೆಳಗಾಂ ಇವರು ದಿನಾಂಕ 29-12-2014ರ ನಂತರದ ದಿನಗಳಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 6,00000/- ಗಳನ್ನು ಪಡೆದುಕೊಂಡು ಯಾವುದೇ ಕೆಲಸವನ್ನು ಕೊಡಿಸದೇ ಹಾಲಿ ಯಾವುದೇ ಸಂಪರ್ಕಕ್ಕೆ ಸಿಗದೇ ವಂಚಿಸಿರುತ್ತಾತೆಂದು ಫಿರ್ಯಾದಿ ಶ್ರೀಮತಿ ಸುಮತಿನಾಯಕ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

Tuesday, November 24, 2015

ಮನುಷ್ಯ ಕಾಣೆ, ಪ್ರಕರಣ ದಾಖಲು:
     ಸುಮಾರು ಎರಡುವರೆ ವರ್ಷದ ಹಿಂದೆ ವ್ಯಾಪಾರಕ್ಕೆಂದು ಮಂಗಳೂರಿಗೆ ಹೋದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಶ್ರೀಮತಿ ಜುಬೇದ ಎಂಬವರ ಪತಿ ಹನೀಫ ಪ್ರಾಯ 39 ವರ್ಷ ಇವರು ರಾಣಿಪೇಟೆ ವ್ಯಾಪಾರ ವೃತ್ತಿ ಮಾಡಿಕೊಂಡಿದ್ದು, 2013 ನೇ ಮಾರ್ಚ್‌ ತಿಂಗಳಲ್ಲಿ ವ್ಯಾಪಾರಕ್ಕೆಂದು ಮಂಗಳೂರಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆಗೂ ಮನೆಗೆ ಬಾರದೆ ಕಾಣೆಯಾಗಿಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ವೆಂದು ಸದರಿ ಜುಬೇದರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ:
     ಮಾಟ ಮಂತ್ರ ಮಾಡಿರುವುದಾಗಿ ಆರೋಪಿಸಿ ವ್ಯಕ್ತಿ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಗಾಯಪಡಿಸದ ಘಟನೆ ಸೋಮವಾರಪೇಟೆ ಠಾಣೆಯ ರೇಂಜರ್ ಬ್ಲಾಕ್ ನಲ್ಲಿ ನಡೆದಿದೆ. ರೇಂಜರ್ ಬ್ಲಾಕ್ ನಲ್ಲಿ ವಾಸವಾಗಿರುವ ಫಿರ್ಯಾದಿ ಡಿ.ಪಿ. ದಿನೇಶ ಎಂಬವರು ದಿನಾಂಕ 23-11-2015 ರಂದು ಬೆಳಿಗ್ಗೆ 9.00 ಗಂಟೆಗೆ ತಮ್ಮ ಮನೆಯ ಹತ್ತಿರ ಬಾಗಿಲಿಗೆ ನೀರು ಹಾಕಿ ಸ್ವಚ್ಚಗೊಳಿಸುತ್ತಿರುವಾಗ ಆರೋಪಿ ನವೀನ ಎಂಬ ವ್ಯಕ್ತಿ ಅಲ್ಲಿಗೆ ಬಂದು ನೀನು ಎಲ್ಲಿಂದಲೋ ಏನೆಲ್ಲ ಮಾಟಮಂತ್ರ ಮಾಡಿಸಿ ಇಲ್ಲಿ ನೀನು ಕುಂಕುಮ ಎಲ್ಲಾ ಹಾಕುತ್ತೀಯ ಎಂದು ಅವಾಚ್ಯಶಬ್ದಗಳಿಂದ ಬೈದು ಏಕಾಏಕಿ ರಾಡಿನಿಂದ ಹೊಡೆದು ಗಾಯಗೊಳಿಸಿದ್ದು ಚಿಕಿತ್ಸೆ ಬಗ್ಗೆ ಸೋಮವಾರಪೇಟೆ ಸರಕಾರಿ ಆಸ್ಪತ್ರಗೆ ದಾಖಲಾಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, November 23, 2015

ಬರೆಕುಸಿದು ವ್ಯಕ್ತಿಯ ದುರ್ಮರಣ:
      ಇಟ್ಟಿಗೆ ನಿರ್ಮಿಸಲು ಮಣ್ಣು ಅಗೆದು ತೆಗೆಯುವ ವೇಳೆ ಆಕಸ್ಮಿಕವಾಗಿ ಬರೆಯ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಡಿಕೇರಿ ಹತ್ತಿರದ ಸಂಪಾಜೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 22-11-2015 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಸಂಪಾಜೆ ಗ್ರಾಮದ ಚಡಾವು ಎಂಬಲ್ಲಿ ವಾಸವಾಗಿರುವ ಫಿರ್ಯಾದಿ ಹೆಚ್.ಬಿ. ಸುರೇಶ್ ಹಾಗೂ ಅವರ ತಂದೆ ಬೈರಪ್ಪರವರು ಹೊಸದಾದ ಮನೆಗೆ ಇಟ್ಟಿಗೆ ಕಟ್ಟಲು ಮನೆಯ ಪಕ್ಕದ ಬರೆಯಿಂದ ಮಣ್ಣನ್ನು ಅಗೆದು ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಬರೆಯ ಮಣ್ಣು ಕುಸಿದು ಬಿದ್ದು ಬೈರಪ್ಪನವರು ಮಣ್ಣಿನ ಒಳಗೆ ಸಿಕ್ಕಿ ಹಾಕಿಕೊಂಡಿದ್ದು, ಸದರಿಯವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವ ವೇಳೆ ಸದರಿಯವರು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ದಾಖಲು:
     ಶ್ರೀಮಂಗಲ ಠಾಣಾ ಸಹಹದ್ದಿನ ಕುಮಟೂರು ಗ್ರಾಮದ ನಿವಾಸಿಗಳಾದ ಕಳ್ಳೆಂಗಡ ಪೂವಪ್ಪ ಹಾಗು ಅನಿತಾ ಎಂಬವರುಗಳು ದಿನಾಂಕ 20-11-2015 ರಂದು ಕುಮಟೂರು ಗ್ರಾಮದಲ್ಲಿರುವ ಕಳ್ಳೆಂಗಡ ಪೂವಪ್ಪನವರ ಮನೆಯಲ್ಲಿ ಮಹದೇವಿ ಮಸ್ತಿ ಮುಕ್ತಿ ಎಂಬ ಮಹಿಳೆ ಮೇಲೆ ಹಲ್ಲೆ ನೆಡೆಸಿದ್ದು ಅಲ್ಲದೆ ಆರೋಪಿ ಕಳ್ಳೆಂಗಡ ಪೂವಪ್ಪನವರು ಸದರಿ ಮಹದೇವಿಯವರ ಮೇಲೆ ಅತ್ಯಾಚಾರನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಮನೆ ಕಳವು, ಪ್ರಕರಣ ದಾಖಲು:
    ಮನೆಯಲ್ಲಿ ಯಾರೂ ಇಲ್ಲದೆ ಸಮಯದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಪೂಜಾ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಬಸವೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಎಸ್.ಎಸ್. ನಾಗರತ್ನ ಎಂಬವರ ಮನೆಯಲ್ಲಿ ದಿನಾಂಕ 20-11-2015 ರಂದು ಮನೆಯಲ್ಲಿ ಯಾರೂ ಇಲ್ಲದೆ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹೆಂಚುಗಳನ್ನು ತೆಗೆದು ಮನೆಯ ಒಳಗೆ ಪ್ರವೇಶ ಮಾಡಿ ದೇವರ ಕೋಣೆಯಲ್ಲಿದ್ದ ಪೂಜಾ ಸಾಮಾಗ್ರಿ ಹಾಗು ದೇವರ ವಿಗ್ರಹಕ್ಕೆ ಹಾಕಿದ್ದ ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, November 21, 2015

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:

     ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ವಿಷ ಸೇವಿಸ ಾತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಪನ್ಯಾ ಎಸ್ಟೇಟ್ ಲೈನ್ ಮನೆಯಲ್ಲಿ ನಡೆದಿದೆ. ಸುಂಟಿಕೊಪ್ಪದ ಪನ್ಯಾ ಎಸ್ಟೇಟ್ ನಲ್ಲಿ ವ
ವಾಸವಾಗಿರುವ ಪಿರ್ಯಾದಿ ಶ್ರೀಮತಿ ಚಂದ್ರಕಲಾ ಎಂಬವರ ಗಂಡ ರಾಜೇಗೌಡ ಎಂಬವರು ಪ್ರತಿನಿತ್ಯ ಮಧ್ಯಪಾನ ಮಾಡುವ ಅಭ್ಯಾಸವಿದ್ದು, ದಿನಾಂಕ: 19.11.2015ರಂದು ಬೆಳಿಗ್ಗೆ ಅತೀಯಾಗಿ ಮಧ್ಯಪಾನ ಮಾಡಿಕೊಂಡು ಯಾವುದೋ ವಿಷದ ಪದಾರ್ಥವನ್ನು ಸೇವಿಸಿದ್ದು, ಸದರಿಯವರನ್ನು ಸುಂಟಿಕೊಪ್ಪ ಆಸ್ಪತ್ರೆಗೆ ದಾಖಲಿಸಿ , ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 20-11-2015 ರಂದು ಮೃತಪಟ್ಟಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯ ಬೀಗ ಮುರಿದು ಭಾರೀ ಮೌಲ್ಯದ ಕರಿಮೆಣಸು ಕಳವು:

     ಮನೆಯ ಬೀಗ ಮುರಿದು ಶೇಖರಿಸಿಟ್ಟಿದ್ದ ಅಂದಾಜು 7,60,000 ರೂ ಮೌಲ್ಯದ ಕರಿಮೆಣಸನ್ನು ಕಳ್ಳರು ಕಳವು ಮಾಡಿದ ಘಟನೆ ಬಾವಲಿ ಗ್ರಾಮದಲ್ಲಿ ನಡೆದಿದೆ. ನಾಪೋಕ್ಲು ಠಾಣಾ ಸರಹದ್ದಿನ ಬಾವಲಿ ಗ್ರಾಮದ ಪಾಂಡಂಡ ರಚನ್ ಎಂಬವರು ವಿರಾಜಪೇಟೆ ನಗರದಲ್ಲಿ ವಾಸವಾಗಿದ್ದು, ಬಾವಲಿ ಗ್ರಾಮದ ತಮ್ಮ ಮನೆಯಲ್ಲಿ ಸುಮಾರು 1100 ಕೆ.ಜಿ. ಕರಿಮೆಣಸನ್ನು ಶೇಖರಣೆ ಮಾಡಿ ಇಟ್ಟಿದ್ದು, ಸದರಿ ಮನೆಯ ಬೀಗ ಮುರಿದು ಅಲ್ಲದೆ ಗೋಡೆಯನ್ನು ಕೊರೆದು ಶೇಖರಿಸಿಟ್ಟಿದ್ದ ಕರಿಮೆಣಸನ್ನು ಕಳ್ಳರು ಕಳವು ಮಾಡಿದ್ದು, ವಿಜಯ, ಉಮೇಶ ಮತ್ತು ಹನೀಫ ಎಂಬವರುಗಳು ಸದರಿ ಕಳ್ಳತನ ಮಾಡಿರುತ್ತಾರೆಂದು ಫಿರ್ಯಾದಿ ಪಿ.ರಚನ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಮದುವೆಗೆ ಬಂದಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ ಕಳವು:
   
     ವಿರಾಜಪೇಟೆ ತಾಲೂಕು ಗುಡ್ಲೂರು ಗ್ರಾಮದ ನಿವಾಸಿ ಬೊಳ್ಳಿಮಾಡ ಭವ್ಯ ಎಂಬವರು ದಿನಾಂಕ 19-11-2015 ರಂದು ಅವರ ಅಕ್ಕನ ಮಗಳ ಮದುವೆಗೆ ವಿರಾಜಪೇಟೆ ನಗರದ ಕಾವೇರಿ ಕಲ್ಯಾಣ ಮಂಟಪಕ್ಕೆ ಹೋಗಿದ್ದು, ಕಾರ್ಯಕ್ರಮ ಮುಗಿದ ಬಳಿಕ ಧರಿಸಿದ್ದ ಅಂದಾಜು 1,80,000 ರೂ ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಫೋನನ್ನು ಇಟ್ಟಿದ್ದ ತಮ್ಮ ವ್ಯಾನಿಟಿ ಬ್ಯಾಗನ್ನು ಮದುಮಗಳ ಕೋಣೆಯಲ್ಲಿಟ್ಟಿದ್ದು, ಸದರಿ ವ್ಯಾನಿಟಿ ಬ್ಯಾಗನ್ನು ಮದುವೆಗೆ ಬಂದ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸಂಘದ ಹಣ ದುರುಪಯೋಗ ಪ್ರಕರಣ ದಾಖಲು:

     ಬಿ ಎ ಚಿಣ್ಣಪ್ಪ ಎಂಬವರು ಕುಶಾಲನಗರ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳಿಯಲ್ಲಿ ಪ್ರಬಾರ ಶಾಖಾ ವ್ಯವಸ್ಥಾಪಕರಾಗಿ 2014 ಮತ್ತು 2015 ರಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕರ್ತವ್ಯನಿರ್ವಹಿಸುತ್ತಿರುವ ಸಮಯದಲ್ಲಿ ಸರಕು ದಾಸ್ತಾನುಗಳನ್ನು ಸಹಕಾರ ಸಂಘಕ್ಕೆ ಹಾಗು ಖಾಸಾಗಿ ವರ್ತಕರಿಗೆ ಮಾರಾಟ ಮಾಡಿದ್ದು, ಮಾರಾಟ ಮಾಡಿ ಬಂದ ಹಣವನ್ನು ಆಗಿಂದಾಗೆ ಬ್ಯಾಂಕಿಗೆ ಹಾಕದೆ ರೂ 27,15,005 ಗಳನ್ನು ದುರುಪಯೋಗ ಪಡಿಸಿರುತ್ತಾರೆಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ತಿಳಿದು ಬಂದ ಮೇರೆಗೆ ಹಾಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಕುಶಲನಗರ ಶಾಖಾ ವ್ಯವಸ್ಥಾಪಕರು ಆದ ವೆಂಕಟೇಶ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.  

Friday, November 20, 2015

ಸ್ಕೂಟಿಗೆ ಜೀಪ್ ಡಿಕ್ಕಿ, ಇಬ್ಬರಿಗೆ ಗಾಯ:

     ಕುಶಾಲನಗರದ ಕೂಡುಮಂಗಳೂರು ಗ್ರಾಮದ ನಿವಾಸಿ ಸಂಪತ್ ಕುಮಾರ್ ಎಂಬವರು ದಿನಾಂಕ 17-11-2015ರಂದು ತಮ್ಮ ಸ್ಕೂಟಿ ನಂ ಕೆ ಎ 12 ಕೆ 4387ರಲ್ಲಿ ರತನ್ ಎಂಬವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಸಮಯ 06:30ಗಂಟೆಗೆ ಕುಶಾಲನಗರ ಎಸ್ ಎಲ್ ಎನ್ ಪೆಟ್ರೋಲ್ ಬಂಕ್ ಹತ್ತಿರ ತಲುಪುವಾಗ್ಗೆ ಹಿಂಬಾಗದಿಂದ ಅಂದರೆ ಮಡಿಕೇರಿ ರಸ್ತೆಯ ಕಡೆಯಿಂದ ಬಂದಂತಹ ಬೋಲೋರೋ ಇನ್ ವೇಡರ್ ಜೀಪನ್ನು ಅದರ ಚಾಲಕನು ಅತಿವೇಗ ಹಾಗು ಅಜಾಗರುಕತೆಯಿಂದ ಚಾಲಿಸಿಕೊಂಡು ಬಂದು ಸ್ಕೂಟಿಯ ಹಿಂಬಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸಂಪತ್ ಕುಮಾರ್ ಮತ್ತು ರತನ್ ರವರು ಗಾಯಗೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

     ಗೋಣಿಕೊಪ್ಪ ನಗರದ ಈರಣ್ಣ ಕಾಲೋನಿ ನಿವಾಸಿ ಆಟೋ ಚಾಲಕ ಸಂಜು ಕುಮಾರ್ ಎಂಬವರು ದಿನಾಂಕ 01/11/2015 ರಂದು ಆಟೋ ಚಾಲಕರ ಸಂಘದ ವತಿಯಿಂದ ರಸಮಂಜರಿ ಕಾರ್ಯಕ್ರಮವನ್ನು ಗೋಣಿಕೊಪ್ಪದಲ್ಲಿ ಏರ್ಪಡಿಸಿದ್ದು ರಾತ್ರಿ 10-30 ಗಂಟೆಗೆ ಪಿರ್ಯಾದಿ ಹಾಗೂ ಅವರ ಅಣ್ಣ ಮಹದೇವನ ಜೊತೆ ಗೋಣಿಕೊಪ್ಪ ನಗರದ ಕೊಲಂಬಿಯ ಬಾರ್ & ರೆಸ್ಟೋರೆಂಟ್ ಗೆ ಮದ್ಯ ಸೇವನೆ ಮಾಡಲು ಹೋಗಿದ್ದು ರೆಸ್ಟೋರೆಂಟ್ ನ ಬಾಗಿಲ ಬಳಿ ನಿಂತು ಮದ್ಯ ಸೇವಿಸುತ್ತಿದ್ದ ಗೋಣಿಕೊಪ್ಪ ನಗರದ ಸತೀಶ, ರಾಮು, ಅಯ್ಯಪ್ಪ ರವರು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ವಿನಾಃ ಕಾರಣ ಜಗಳ ತೆಗೆದು ಮೂವರು ಸೇರಿ ಕೈಯಿಂದ ಹೊಡೆದು ಗಾಯಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂದಿರುತ್ತಾರೆ. 

ಆಕಸ್ಮಿಕ ಕಾಲು ಜಾರಿ ಹಳ್ಳಕ್ಕೆ ಬಿದ್ದು ವ್ಯಕ್ತಿಯ ಸಾವು:

     ವಿರಾಜಪೇಟೆ ತಾಲೋಕು, ಕಾರ್ಮಾಡು ಗ್ರಾಮದ ನಿವಾಸಿ ಶ್ರೀಮತಿ ಜಯಲಕ್ಷ್ಮಿ ರವರ ಪತಿ ವೆಂಕಟೇಶ (ನಾಗ) ರವರು ಅನಾರೋಗ್ಯದಿಂದ ಬಳಲುತ್ತಿದ್ದು ಮೂರ್ನಾಡಿನಲ್ಲಿ ಪಿರ್ಯಾದಿಯವರ ತಾಯಿಯ ಮನೆಯಿಂದ ದಿನಾಂಕ 19.11.2015 ರಂದು ರಾತ್ರಿ ಸುಮಾರು 10:30 ಗಂಟೆಗೆ ವೆಂಕಟೇಶ (ನಾಗ) ರವರು ಮಧ್ಯಪಾನ ಮಾಡುವ ಸಲುವಾಗಿ ಹೊರಗೆ ಹೋದವರು ಮೂರ್ನಾಡು ಗ್ರಾಮದ ಮಡಿಕೇರಿ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್ ಹತ್ತಿರದ ಪಾಪು ಎಂಬವರ ಮನೆಯ ಬಳಿಸುಮಾರು 15 ಅಡಿ ಎತ್ತರದ ಬರೆಯಿಂದ ಆಕಸ್ಮಿಕವಾಗಿ ಕಾಲು ಜಾರಿ ಚರಂಡಿಗೆ ಬಿದ್ದು ವೆಂಕಟೇಶ ರವರು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:

     ಕುಶಾಲನಗರ ಠಾಣಾ ವ್ಯಾಪ್ತಿಯ ನಂಜರಾಜಪಟ್ಟಣ ಗ್ರಾಮದ ನಿವಾಸಿ 35 ವರ್ಷ ಪ್ರಾಯದ ಬ್ರಜೇಶ ಎಂಬ ವ್ಯಕ್ತಿ ದಿನಾಂಕ 19-11-2015ರಂದು ಅವರ ಮನೆಯಲ್ಲಿ ನೈಲಾನ್ ವೈರ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗದೆ. 

ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಪ್ರಕರಣ ದಾಖಲು:

     ವಿರಾಜಪೇಟೆ ತಾಲೂಕು ಕಡಂಗಮರೂರು ಗ್ರಾಮದ ಕರವಟ್ಟೀರ ಕುಟುಂಬದ ಐನ್ ಮನೆಯ ಬೀಗವನ್ನು ಯಾರೋ ಕಳ್ಳರು ದಿನಾಂಕ 18-11-2015 ರ ರಾತ್ರಿ ಮುರಿದು ಒಳಗೆ ನುಗ್ಗಿ ಒಳಗಿನ ಕೋಣೆಗೆ ಹಾಕಿದಂತಹ ಬೀಗವನ್ನು ಮುರಿಯಲು ಪ್ರಯತ್ನಿಸಿರುವುದಲ್ಲದೆ, ಹಾಲ್ ನಿಂದ ಅಡುಗೆ ಮನೆಗೆ ನುಗ್ಗುವ ಬಾಗಿಲಿಗೆ ಹಾಕಿದಂತಹ ಬೀಗವನ್ನು ಸಹ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Thursday, November 19, 2015

ಪಾದಚಾರಿಗೆ ಬೈಕ್ ಡಿಕ್ಕಿ, 

    ಗೋಣಿಕೊಪ್ಪ ಠಾಣಾ ಸರಹದ್ದಿನ ಅರುವತ್ತೊಕ್ಲು ಗ್ರಾಮದ ನಿವಾಸಿ ಹೆಚ್.ಆರ್. ಸುಬ್ರಮಣಿ ಎಂಬವರು ದಿನಾಂಕ 18/11/2015 ರಂದು ಗೋಣಿಕೊಪ್ಪಲಿನ ಪರಿಮಳ ಮಂಗಳ ಮಂಟಪದ ಹತ್ತಿರ ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಗೋಣಿಕೊಪ್ಪ ನಗರದ ಕಡೆಯಿಂದ ಕೆ ಎ 12 ಇ 4434ರ ಮೋಟಾರ್ ಸೈಕಲ್ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಚಾಲಿಸಿಕೊಂಡು ಬಂದು ಹೆಚ್.ಆರ್. ಸುಬ್ರಮಣಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರು ಮತ್ತು ಬೈಕ್ ಸವಾರ ಗಾಯಗೊಂಡಿದ್ದು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲದ ವಿಚಾರದಲ್ಲಿ ಮಹಿಳೆ ಆತ್ಮಹತ್ಯೆ:

      ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸಿಕೊಂಡಿದ್ದ ಎನ್. ಎಂ. ಬೆಳ್ಳಿಯಪ್ಪ ಎಂಬವರ ಮಗಳು ಜ್ಯೋತಿ ಫ್ರಾನ್ಸಿಸ್ ಎಂಬ ವ್ಯಕ್ತಿಯಿಂದ ಸಾಲವನ್ನು ಪಡೆದುಕೊಂಡಿದ್ದು, ಸದರಿ ಸಾಲದ ವಿಚಾರದಲ್ಲಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿದ್ದು, ಈ ವಿಚಾರದಲ್ಲಿ ಮನನೊಂದ ಜ್ಯೋತಿ ದಿನಾಂಕ 16-11-2015 ರಂದು ಮಧ್ಯಾಹ್ನ ಸಮಯ ಸುಮಾರು 12-30 ಗಂಟೆಗೆ ಕೊಡ್ಲಿಪೇಟೆ ವಸತಿ ಗೃಹದಲ್ಲಿ ಸುಮಾರು 15 ಬಿ.ಪಿ ಮಾತ್ರೆಗಳನ್ನು ಕುಡಿದು, ಬಲ ಕೈಗೆ ಯಾವುದೋ 2-3 ಇಂಜಕ್ಷನ್ ಹಾಕಿಕೊಂಡು ಅಸ್ವಸ್ಥಗೊಂಡಿದ್ದು, ಆಕೆಯನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 17-11-2015 ರಂದು ಮೃತಪಟ್ಟಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನಿಲ್ಲಿಸಿದ ವಾಹನಕ್ಕೆ ಅಪರಿಚಿರ ವಾಹನ ಡಿಕ್ಕಿ:

      ನಾಪೋಕ್ಲು ಗ್ರಾಮದ ನಿವಾಸಿ ಕೆ.ಪಿ. ವಿನೋದ್ ಎಂಬವರು ದಿನಾಂಕ 18-11-2015 ರಂದು ಸಮಯ 20-00 ಗಂಟೆಗೆ ಮಡಿಕೇರಿ ನಗರದ ಜನತಾ ಬಜಾರ್ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ ಕೆಎ-12ಪಿ-841ರ ಕಾರಿಗೆ ಯಾವುದೋ ಒಂದು ಅಪರಿಚಿತ ವಾಹನವೊಂದು ಡಿಕ್ಕಿಪಡಿಸಿ ಜಖಂ ಪಡಿಸಿ ನಿಲ್ಲಸದೇ ಹೋಗಿರುವ ಬಗ್ಗೆ ಫಿರ್ಯಾದಿ ಕೆ.ಪಿ. ವಿನೋದ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, November 18, 2015

ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಕೊಲೆ ಬೆದರಿಕೆ:
    ಪಿರ್ಯಾದಿ ಶ್ರೀ ವೆಂಕಟೇಶ್ ರವರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 10-11-2015 ರಂದು ಟಿಪ್ಪು ಸುಲ್ತಾನ್ ಜಯಂತಿ ಸಂಬಂಧ ಬಂದೋ ಬಸ್ತ್ ಕರ್ತವ್ಯದಲ್ಲಿದ್ದು, ಸಮಯ 11.10 ಗಂಟೆಗೆ ಎಂ ಎಂ ವೃತ್ತದಲ್ಲಿ ವಾಹನ ಸಂಚಾರ ಮತ್ತು ಮೆರವಣಿಗೆಯನ್ನು ಮುಂದಕ್ಕೆ ಕಳುಹಿಸುತ್ತಿದ್ದ ಸಮಯದಲ್ಲಿ ಆರೋಪಿಗಳು ಅಕ್ರಮ ಕೂಟ ಸೇರಿಕೊಂಡು ಪಿರ್ಯಾದಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪಿರ್ಯಾದಿಯವರ ಸಮವಸ್ತ್ರವನ್ನು ಎಳೆದಾಡಿ, ಗುಂಡಿಯನ್ನು ಕಿತ್ತು, ಅವರನ್ನು ತಳ್ಳಾಡಿ, ಶರೀರಕ್ಕೆ ಹೊಡೆದು, ಗುಂಪಿನಲ್ಲಿದ್ದರು, ‘ಪೊಲೀಸರನ್ನು ಬಿಡಬೇಡಿ ಹೊಡೆದು ಕೊಲ್ಲಿ’ ಎಂದು ಹೇಳುತ್ತಾ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

Vartika Katiyar, IPS

Tuesday, November 17, 2015ಕಾರಿಗೆ ಕಲ್ಲು ತೂರಿ ಹಾನಿ: 

     ಪಿರ್ಯಾದಿ ಅಬ್ದುಲ್ ರಹಿಮಾನ್ ರವರು ದಿ: 10-11-2015 ರಂದು ಸಮಯ 10.30 ಗಂಟೆಗೆ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯುವ ಟಿಪ್ಪು ಜಯಂತಿ ಆಚರಣೆಯ ಬಗ್ಗೆ, ನಗರದ ಜಿ ಟಿ ವೃತ್ತದ ಬಳಿಗೆ ತನ್ನ ಬಾಪ್ತು ಕೆಎ-12-ಪಿ-7806 ರ ಕಾರಿನಲ್ಲಿ ಬಂದಾಗ ಆರೋಪಿಗಳಾದ ತಿರುಪತಿ, ಕೃಷ್ಣ, ಗೋಪಾಲ, ತಿರುಮಲ, ಪ್ರವೀಣ್ ಕುಮಾರ್, ಅಜಿತ್ ಕುಮಾರ್, ಕಿರಣ್ ರವರುಗಳು ಕಾರನ್ನು ಮುಂದಕ್ಕೆ ಹೋಗಲು ಬಿಡುವುದಿಲ್ಲಎಂದು ಹೇಳಿ ಕೊಲೆ ಬೆದರಿಕೆ ಹಾಕಿ, ಕಾರಿನ ಗಾಜಿಗೆ ಕಲ್ಲು ಹೊಡೆದು, ಕಾರಿನ ಹಿಂಭಾಗಕ್ಕು ಜಖಂಗೊಳಿಸಿ ಸುಮಾರು 75000/- ರೂ ನಷ್ಟ ಉಂಟು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಹಳೇ ದ್ವೇಷ, ವ್ಯಕ್ತಿ ಮೇಲೆ ಹಲ್ಲೆ:

    ಪಿರ್ಯಾದಿ ತಾಹಿರ್ ರವರು ದಿ: 15-11-2015 ರಂದು ಸಮಯ ರಾತ್ರಿ 09.00 ಗಂಟೆಗೆ ಮಡಿಕೇರಿ ನಗರದ ಮಾರ್ಕೇಟ್ ಬಳಿ ಇರುವಾಗ್ಗೆ ಆರೋಪಿಗಳಾದ ಆಸಿಫ್, ಉನ್ನೀಸ್, ಕಲಂದರ್ ಮತ್ತು ಇಬ್ಬರು ಮಾತನಾಡಬೇಕು ಎಂದು ಹೇಳಿ ದಾಸವಾಳದ ಬಳಿ ಕರೆದುಕೊಂಡು ಹೋಗಿ, ಈ ಹಿಂದೆ ಆಗಿದ್ದ ಜಗಳದ ವೈಮನಸ್ಸಿನಿಂದ ಪಿರ್ಯಾದಿಯವರೊಂದಿಗೆ ಜಗಳ ಮಾಡಿ, ಕೈಯಿಂದ ಹೊಡೆದು ಕತ್ತಿಯನ್ನು ಬೆನ್ನಿಗೆ ಬೀಸಿ ಗಾಯಪಡಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Monday, November 16, 2015

ದುಷ್ಕರ್ಮಿಗಳಿಂದ ವಾಹನಕ್ಕೆ ಬೆಂಕಿ, ನಷ್ಟ
               ನಿಲ್ಲಿಸಿದ್ದ ವಾಹನವೊಂದಕ್ಕೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪ್ರಕರಣ ಮಡಿಕೇರಿ ನಗರದಲ್ಲಿ ನಡೆದಿದೆ. ನಾಪೋಕ್ಲು ಬಳಿಯ ಕುಂಜಿಲ ಗ್ರಾಮದ ನಿವಾಸಿ ಇಸ್ಮಾಯಿಲ್‌ ಎಂಬವರು ಅವರ ಕೆಎ-12-ಎ-9146 ರ ಟಾಟಾ ಮ್ಯಾಜಿಕ್ ವಾಹನದಲ್ಲಿ ದಿನಾಂಕ 10-11-2015 ರಂದು ಸಮಯ 10.00 ಗಂಟೆಗೆ ಮಡಿಕೇರಿಗೆ ಬಂದು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿ ಸಂಬಂಧಿಕರನ್ನು ಮಾತನಾಡಿಸಲು ಒಳಗೆ ಹೋಗಿ ವಾಪಾಸು ಸಮಯ 11.00 ಗಂಟೆಗೆ ಹೊರಗೆ ಬಂದು ನೋಡಿದಾಗ ವಾಹನಕ್ಕೆ ಬೆಂಕಿ ಹತ್ತಿಕೊಂಡಿದ್ದು, ಆ ದಿನ  ಟಿಪ್ಪು ಜನ್ಮ ದಿನಾಚರಣೆಯ ಸಂಬಂಧ ಮೆರವಣಿಗೆ ಬಂದಿದ್ದು, ಇವರಲ್ಲಿ ಯಾರೋ ಕಿಡಿಗೇಡಿಗಳು ಅಕ್ರಮ ಕೂಟ ಸೇರಿ  ವಾಹನವನ್ನು ಮಗುಚಿ ಹಾಕಿ, ಬೆಂಕಿ ಕೊಟ್ಟಿದ್ದರಿಂದ ವಾಹನ ಸುಟ್ಟು ಸುಮಾರು 1 ಲಕ್ಷ ಅಂದಾಜು ನಷ್ಟು ಉಂಟಾಗಿರುವುದಾಗಿನ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ಗೆ ಬೆಂಕಿ, ನಷ್ಟ
                ನಿಲ್ಲಿಸಿದ್ದ ಸ್ಕೂಟರ್‌ ಒಂದಕ್ಕೆ ಯಾರೋ ಬೆಂಕಿ ಹಚ್ಚಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. 10-11-2015 ರಂದು ಸಮಯ 10.30 ಗಂಟೆಗೆ ಕಾರ್ಮಾಡು  ನಿವಾಸಿ ರಫೀಕ್‌ ಎಂಬವರು ಅವರ ಬಾಪ್ತು ಕೆಎ-12-ಕ್ಯೂ-2907 ರ ಹೊಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಮಡಿಕೇರಿಯಿಂದ ಸಿದ್ದಾಪುರ ಕಡೆ ಹೋಗುತ್ತಿದ್ದಾಗ, ನಗರದ ಜಿ.ಟಿ. ರಸ್ತೆಯಲ್ಲಿರುವ ಸುಜಾತ ಕ್ಯಾಂಟೀನ್ ಬಳಿ ತಲುಪುವಾಗ ಟಿಪ್ಪು ಜನ್ಮ ದಿನಾಚರಣೆಯ ಸಂಬಂಧ ಮೆರವಣಿಗೆ ಬಂದ ಜನರು ಕಲ್ಲು ಹೊಡೆಯುತ್ತಿದ್ದರು. ಇದನ್ನು ಕಂಡು ರಫೀಕ್‌ರವರು ಸುಜಾತ ಕ್ಯಾಂಟೀನ್ ಮುಂದೆ ಸ್ಕೂಟರನ್ನು ನಿಲ್ಲಿಸಿ ಹೊರಟು ಹೋಗಿದ್ದು, ದಿನಾಂಕ 13/11/2015ರಂದು ಬಂದು ವಾಹನವನ್ನು ನೋಡಿದಾಗ ವಾಹನವು ಸುಟ್ಟಿದ್ದು, ದಿನಾಂಕ 10-11-2015 ರಂದು ಮೆರವಣಿಗೆಯಲ್ಲಿ ಯಾರೋ ಕಿಡಿಗೇಡಿಗಳು ಅಕ್ರಮ ಕೂಟ ಸೇರಿ ಸ್ಕೂಟರ್‌ಗೆ ಬೆಂಕಿ ಕೊಟ್ಟಿದ್ದರಿಂದ ವಾಹನವು ಸುಟ್ಟು ಹೋಗಿದ್ದು, ಇದರಿಂದ ಸುಮಾರು 60000/- ರೂ ನಷ್ಟ ಉಂಟಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
                 ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಕೆದಮುಳ್ಳೂರು  ಗ್ರಾಮದ  ಬಾರಿಕಾಡು ಪೈಸಾರಿ ನಿವಾಸಿ ಕೃಷ್ಣಪ್ಪ ಎಂಬವರು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಕೆದಮುಳ್ಳೂರು ಗ್ರಾಮದ ಬಾರಿಕಾಡು ಪೈಸಾರಿಯಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು, ಕೃಷ್ಣಪ್ಪನು ಕೂಲಿ ಕೆಲಸದಲ್ಲಿ ಬಂದ ಹಣವನ್ನು ತನ್ನ ಹೆಂಡತಿ ಮಕ್ಕಳಿಗೆ ಖರ್ಚು ಮಾಡದೆ ಮದ್ಯಪಾನ ಮಾಡಿಕೊಂಡು ಆತನ ಹೆಂಡತಿ, ಮಕ್ಕಳಿಗೆ ಪ್ರತಿದಿನ ಕಿರುಕುಳ ಕೊಡುತ್ತಿದ್ದು, ಇದರಿಂದ ಆತನ ಹೆಂಡತಿಯು ತನ್ನ ಮಕ್ಕಳನ್ನು ದಿನಾಂಕ 24-10-2015ರಂದು ಹೆಗ್ಗಳ ಗ್ರಾಮ ದಲ್ಲಿರುವ ಆಕೆಯ ಅಕ್ಕನ ಮನೆಗೆ ಬಿಟ್ಟು ಕೇರಳಕ್ಕೆ ಕೆಲಸ ಹುಡುಕಿಕೊಂಡು ಬರುವುದಾಗಿ ಹೇಳಿ ಹೋಗಿದ್ದು, ಈ ಸಂಬಂಧ  ಕೃಷ್ಣಪ್ಪನು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯ ಮುಂಭಾಗದ ಕಾಫಿ ತೋಟದೊಳಗೆ ಇರುವ ಒಂದು ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೃಷ್ಣಪ್ಪನ ಅಣ್ಣ ಬಿಲ್ಲವರ ವಾಸು ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                ವ್ಯಕ್ತಿಯೊಬ್ಬರ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ ಘಟನೆ ನಾಪೋಕ್ಲು ನಗರದ ಹಳೆ ತಾಲೂಕಿನಲ್ಲಿ ನಡೆದಿದೆ. ದಿನಾಂಕ 11-11-2015 ರಂದು ಸಂಜೆ ಹಳೆ ತಾಲೂಕು ನಿವಾಸಿ ಎಂ.ಎಫ್‌.ಜೋಸೆಫ್‌ ಎಂಬವರು ಅವರ ಹೆಂಡತಿ ಪ್ರಿಯಾಳಿಗೆ ಅವರ ಪಕ್ಕದ ಮನೆಯಲ್ಲಿ ವಾಸವಿರುವ ಅಲೆಕ್ಸ್ ಎಂಬವರೊಂದಿಗೆ ಗಾರೆ ಕೆಲಸಕ್ಕೆ ಹೋಗಬಾರದೆಂದು ಹೇಳಿದ ಕಾರಣಕ್ಕೆ ಜೋಸೆಫ್‌ ಹಾಗೂ ಆತನ ಪತ್ನಿ ಪ್ರಿಯಾರಿಗೂ ಬಾಯಿ ಮಾತಿನ ಜಗಳವಾಗುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಅಲೆಕ್ಸ್ ಎಂಬಾತನು ಕಬ್ಬಿಣದ ರಾಡಿನಿಂದ ಜೋಸೆಫ್‌ರವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿವಾಹಿತ ಮಹಿಳೆಯೊಂದಿಗೆ ಅನುಚಿತ ವರ್ತನೆ
                 ವಿವಾಹಿತ ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ ಆಕೆಗೆ ಕೊಲೆ ಬೆದರಿಕೆ ಹಾಕಿದ ಘಟನೆ ಶನಿವಾರಸಂತೆ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 13-11-2015 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ದೊಡ್ಡ ಕೊಡ್ಲಿ ನಿವಾಸಿ ಸಂಶೀನಾ ಎಂಬ ವಿವಾಹಿತ ಮಹಿಳೆಯು ಆಕೆಯ ಮಗುವನ್ನು ಶಾಲೆಗೆ ಕರೆದುಕೊಂಡು ದೊಡ್ಡಕೊಡ್ಲಿ ಗ್ರಾಮದ ಕಾನ್ವೆಂಟ್ ರಸ್ತೆಯ ರಾಜು ಎಂಬವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೋಗುತ್ತಿರುವಾಗ ಆರೋಪಿ ರಫೀಕನು ದಾರಿ ತಡೆದು ಆತನು ಆಕೆಯನ್ನು ಪ್ರೀತಿಸುತ್ತಿದ್ದು ಆತನನ್ನು ಮದುವೆಯಾಗುವಂತೆ ಒತ್ತಾಯಿಸಿ ಕೈ ಹಿಡಿದು ಎಳೆದು ಮಾನಭಂಗ ಮಾಡುವ ಉದ್ದೇಶದಿಂದ ಆಕೆಯ ಕೆನ್ನೆಗೆ ಮುತ್ತನ್ನು ಕೊಟ್ಟಿದ್ದಲ್ಲದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಮೋಟಾರು ಬೈಕು ಡಿಕ್ಕಿ
                ಕಾರೊಂದಕ್ಕೆ ಮೋಟಾರು ಬೈಕು ಡಿಕ್ಕಿಯಾದ ಘಟನೆ ಮೂರ್ನಾಡು ಬಳಿಯ ಬೇತ್ರಿ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕುತ್ಪಾಡಿ ಎಂಬಲ್ಲಿನ ನಿವಾಸಿ ಅಂಬರೀಷ್‌ ಭಂಡಾರಿ ಎಂಬವರು ಕೆಎ-20-ಸಿ-9904ರ ಕಾರನ್ನು ಬಾಡಿಗೆಗೆ ಓಡಿಸುತ್ತಿದ್ದು, ದಿನಾಂಕ: 15-11-15ರಂದು ಕಾರಿನಲ್ಲಿ ಪ್ರಯಾಣಿಕ ರನ್ನು ಉಡುಪಿಯಿಂದ ಕೊಡಗಿನ ಗೋಣಿಕೊಪ್ಪಕ್ಕೆ ಕರೆದುಕೊಂಡು ಕಾರನ್ನು ಚಾಲನೆ ಮಾಡಿಕೊಂಡು ಬರುತ್ತಿರುವಾಗ ವಿರಾಜಪೇಟೆಯ ಬೇತ್ರಿ ಯಿಂದ 2 ಕಿ.ಮೀ. ಮುಂದೆ ವಿರಾಜಪೇಟೆ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ಸ್ ಬರುತ್ತಿದ್ದು, ಬಸ್ಸಿಗೆ ದಾರಿ ಕೊಡುವ ಬಗ್ಗೆ ಕಾರನ್ನು ರಸ್ತೆಯ ಎಡ ಬದಿಗೆ ತೆಗೆದುಕೊಳ್ಳುವ ಸಮಯದಲ್ಲಿ ಎದುರುಗಡೆಯಿಂದ ಕೆಎ-04-ಇಬಿ-7564ರ ಮೋಟಾರ್ ಬೈಕ್ ಸವಾರ ಮೋಹನ್ ಕುಮಾರ್ ಎಂಬಾತನು ಮೋಟಾರ್ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸನ್ನು ಹಿಂದಿಕ್ಕಿ ಅಂಬರೀಷ್‌ ಭಂಡಾರಿಯವರು ಚಾಲನೆ ಮಾಡುತ್ತಿದ್ದ ಕಾರಿನ ಬಲ ಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿರುವುದಲ್ಲದೆ ಮೋಟಾರು ಸೈಕಲ್‌ ಸವಾರನಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಕಾರಿಗೆ ರಿಕ್ಷಾ ಡಿಕ್ಕಿ,
                  ಕಾರೊಂದಕ್ಕೆ ಆಟೋ ರಿಕ್ಷಾವೊಂದು ಡಿಕ್ಕಿಯಾದ ಘಟನೆ ಸುಂಟಿಕೊಪ್ಪ ಮಾರುತಿ ನಗರದಲ್ಲಿ ನಡೆದಿದೆ. ದಿನಾಂಕ 15.11.2015 ರಂದು ಕುಶಾಲನಗರದ ಗಂಧದಕೋಟೆ ನಿವಾಸಿ ಗಣೇಶ ಎಂಬವರು ಅವರ ಕಾರು ಸಂಖ್ಯೆ ಕೆಎ-09-ಎನ್‌-1338 ರಲ್ಲಿ ಪುತ್ತೂರಿನಿಂದ ಕುಶಾಲನಗರಕ್ಕೆ ಬರುವಾಗ ಸುಂಟಿಕೊಪ್ಪದ ಕೊಡಗರಹಳ್ಳಿ ಬಳಿಯ ಮಾರುತಿ ನಗರ ಬಳಿ ಹೆದ್ದಾರಿಯ ಎಡಭಾಗದಲ್ಲಿ ಎದುರುಗಡೆಯಿಂದ ಆಟೋರಿಕ್ಷಾ ನಂಬರ್ ಕೆಎ 12 ಎ 2160 ರನ್ನು ಅದರ ಚಾಲಕ ಅತೀವೇಗ ಹಾಗು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿದ್ದು ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, November 14, 2015

ಕರ್ವವ್ಯನಿರತ ಗೃಹರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ:

     ಮಹಮ್ಮದ್‌ ಜಾಫರ್‌, ತಂದೆ ಚೋಟ ಸಾಬ್‌, ಪ್ರಾಯ 38 ವರ್ಷ, ಹೋಮ್‌ ಗಾರ್ಡ್ ಇವರು ದಿನಾಂಕ 10-11-2015 ರಂದು ಮಡಿಕೇರಿ ನಗರದಲ್ಲಿ ಟಿಪ್ಪು ಸುಲ್ತಾನ್‌ ಜನ್ಮ ದಿನಾಚರಣೆ ಅಂಗವಾಗಿ ಎಂ.ಎಂ.ವೃತ್ತದ ಬಳಿ ಬಂದೋಬಸ್ತ್‌ ಕರ್ತವ್ಯ ನಿರ್ವಹಿಸಿಕೊಂಡಿದ್ದಾಗ ಆರೋಪಿಗಳಾದ ಬಷೀರ್ ಅಲಿ, ಸುಹೈಲ್‌, ನ್ಯೂಮನ್‌ ಮತ್ತು ಇತರರು ಕೆ.ಎ.12 ಎ 6039 ರ ಬೊಲೇರೋ ಪಿಕ್‌ ಅಪ್‌ ಬಿಳಿ ಬಣ್ಣದ ಜೀಪಿನಲ್ಲಿ ಘೋಷಣೆಗಳನ್ನು ಕೂಗುತ್ತ ಬಂದು ಕರ್ತವ್ಯದಲ್ಲಿದ್ದ ಹೋಮ್‌ ಗಾರ್ಡ್ ರವರೊಂದಿಗೆ ಮಾತಿನ ಚಕ ಮಕಿ ನಡೆಸಿ ಸ್ವಲ್ಪ ಮುಂದೆ ಹೋಗಿ ಜೀಪಿನಲ್ಲಿದ್ದ ಕಲ್ಲುಗಳನ್ನು ಎಸೆದು ತಲೆಯ ಭಾಗಕ್ಕೆ ಗಾಯಪಡಿಸಿದ್ದು ಅಲ್ಲದೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಈ ಸಂಬಂಧ ಮಹಮ್ಮದ್‌ ಜಾಫರ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬದಿ ನಿಂತ ವ್ಯಕ್ತಿಯ ಮೇಲೆ ಗಲಭೆಕೋರರಿಂದ ಹಲ್ಲೆ:

     ದಿನಾಂಕ 10-11-2015 ರಂದು ಪಿರ್ಯಾದಿಯವರು ಸಮಯ 11.10 ಎ.ಎಂ ಗೆ ವಿಜಯ ಮತ್ತು ಶೇಖರ್‌ ರವರೊಂದಿಗೆ ಮಡಿಕೇರಿ ನಗರದ ತಿಮ್ಮಯ್ಯ ವೃತ್ತದ ಬಳಿ ಇರುವ ಪೆಟ್ರೋಲ್‌ ಬಂಕ್‌ ನ ಮುಂಭಾಗ ರಸ್ತೆಯಲ್ಲಿ ನಿಂತಿರುವಾಗ ಒಂದು ಬಿಳಿ ಬಣ್ಣದ ಮಾರುತಿ ಓಮಿನಿ ವ್ಯಾನ್‌ ನಲ್ಲಿ 4 ಜನ ಅಪರಿಚಿತ ವ್ಯಕ್ತಿಗಳು ಬಂದು ಕಾರಿನಿಂದ ಇಳಿದು ಅದೇ ಕಾರಿನಲ್ಲಿದ್ದ ಕಲ್ಲುಗಳನ್ನು ತೆಗೆದು ಪಿರ್ಯಾದಿಯವರ ಕಡೆಗೆ ಎಸೆದಿದ್ದು, ಸದರಿ ಕಲ್ಲು ಪಿರ್ಯಾದಿಯವರ ಎಡ ಕೆನ್ನೆಯ ಭಾಗಕ್ಕೆ ತಾಗಿ ರಕ್ತ ಗಾಯವಾಗಿರುತ್ತದೆ. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗಿ ಮಡಿಕೇರಿಯಲ್ಲಿ ಬಂದ್‌ ಇದ್ದ ಕಾರಣ ಹಾಗು ತುಂಬಾ ನೋವು ಇದ್ದುದರಿಂದ ದೂರನ್ನು ತಡವಾಗಿ ನೀಡಿರುವುದಾಗಿ ಕೊಟ್ಟ ಪುಕಾರಿಗೆ ತಯಾರಿಸಿದ ಪ್ರ.ವ.ವರಧಿ.

ಅಕ್ರಮಕೂಟ ಸೇರಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ:
     ದಿನಾಂಕ 10-11-2015ರಂದು ಸಮಯ 11 :00 ಎ ಎಂ ಗೆ ಕುಶಾಲನಗರ ಪಟ್ಟಣದಲ್ಲಿ ಟಿಪ್ಪು ದಿನಾಚರಣೆ ಯ ಪರಿಸ್ಥಿತಿ ಅತ್ಯಂತ್ಯ ಸೂಕ್ಷ್ಮವಾಗಿ ಕೋಮುಗಲಭೆ ಸಂಭವಿಸಬಹುದಾದ ಸಂದರ್ಭದಲ್ಲಿ ಶಾಂತಿ ಕಾಪಾಡುವಲ್ಲಿ ಯತ್ನಿಸಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಶಾಂತಿ ಭಂಗ ಉಂಟುಮಾಡುತ್ತಿದ್ದ ಆರೋಪಿಗಳಾದ ವಿ ಪಿ ಶಶಿಧರ್ , ಖಾದರ್ ,ಶಫಿ,ರಾಜು ,ಕೊಪ್ಪ ಹನೀಪ್ ,ಅಬ್ದುಲ್ ಲತೀಫ್ , ಮನ್ಸೂರ್, ಅಲ್ ಅಮೀನ್ ,ಆದಂ, ಕೊಡ್ಲಿಪೇಟೆ ರಫೀಕ್, ಜಕ್ರೀಯಾ, ರಿಜ್ವಾನ್, ಗಯಾಜ್, ಇಬ್ರಾಹಿಂ, ಹಾಗು ಇತರರ ವಿರುದ್ದ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ಧಾರೆ. 
ವ್ಯಾಪಾರಕ್ಕೆ ಅಡ್ಡಿಪಡಿಸಿ ವ್ಯಕ್ತಿಗೆ ಕೊಲೆ ಬೆದರಿಕೆ: 
        ದಿನಾಂಕ 13-11-2015 ರಂದು ಫಿರ್ಯಾಧಿ ಅಬೀದ್ ರವರು ಹಾಕತ್ತೂರಿನ ತಮ್ಮ ಹೊಟೇಲಿನಲ್ಲಿ ವ್ಯಾಪಾರ ಮಾಡುತ್ತಿರುವಾಗ್ಗೆ ಸಮಯ ಮಧ್ಯಾಹ್ನ 1.25 ಗಂಟೆ ಸಮಯದಲ್ಲಿ ಮಾರುತಿ ಓಮಿನಿ ವ್ಯಾನ್ ಸಂ: ಕೆಎ-12 ಎಂ.3167 ರಲ್ಲಿ ತೊಂಬತ್ತುಮನೆ ನಿವಾಸಿಗಳಾದ ಕೆ.ಸಿ.ಕಾವೇರಪ್ಪ, ಬಿ.ಬಿ.ಹರೀಶ್ ರೈ, ಮನು ಬೆಳ್ಯಪ್ಪ, ಹಾಗೂ ಶಿವಣ್ಣ ರವರುಗಳು ವ್ಯಾಪಾರಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ಫಿರ್ಯಾದಿ ಅಬೀದ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ವಿರಾಜಪೇಟೆ ತಾಲೂಕು ಕಿರುಗೂರು ಗ್ರಾಮದ ನಿವಾಸಿ ಕೆ.ಎನ್. ಚಂಗಪ್ಪ ಎಂಬವರು ದಿನಾಂಕ 13/11/2015 ರಂದು ತಮ್ಮ ಬಾಪ್ತು ಆಟೋರಿಕ್ಷಾದಲ್ಲಿ ತಿತಿಮತಿಯ ವಾಸಿ ರಫೀಕ್ ಎಂಬವರಿಗೆ ಗೋಣಿಕೊಪ್ಪದಿಂದ ತರಕಾರಿಯನ್ನು ತೆಗೆದುಕೊಂಡು ಹೋಗಿ ತಿತಿಮತಿಯಲ್ಲಿ ರಫೀಕ್ ರವರ ಅಂಗಡಿಗೆ ತರಕಾರಿಯನ್ನು ಇಳಿಸುತ್ತಿರುವಾಗ ಕಲ್ಲಾಳ ಭದ್ರಗೊಳದ ವಾಸಿ ವಿ.ಸಿ.ಗಣೇಶ ರವರ ಮಗನು ಕಾರನ್ನು ತಂದು ರಿಕ್ಷಾ ನಿಲ್ಲಿಸಿದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೋಗಿದ್ದು ನಂತರ 3-00 ಗಂಟೆಗೆ ಕೆ.ಎನ್. ಚಂಗಪ್ಪನವರು ಪೊನ್ನಂಪೇಟೆ ಕಡೆಗೆ ಹೋಗುತ್ತಿರುವಾಗ ಸದರಿ ವಿ.ಸಿ.ಗಣೇಶ ರವರ ಮಗ ಪುನಃ ಆತನ ಕಾರಿನಲ್ಲಿ ಬಂದು ದಾರಿ ತಡೆದು ಕಬ್ಬಿಣದ ರಾಡಿನಿಂದ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತಗಾಯಪಡಿಸಿರುವುದಲ್ಲದೆ ಆಟೋರಿಕ್ಷಾದ ಗ್ಲಾಸ್ ನ್ನು ಹೊಡೆದು ಕಾಹಿ ನಷ್ಟಪಡಿಸಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

ಗಲಭೆಕೋರರಿಂದ ಜಿಲ್ಲಾ ಆಸ್ಪತ್ರೆ ಕಟ್ಟಡಕ್ಕೆ ಕಲ್ಲು ಎಸದು ಹಾನಿ:

      ದಿನಾಂಕ 10-11-2015 ರಂದು ಸಮಯ 10.30 ರಿಂದ 11.00 ಗಂಟೆಯ ವೇಳೆಯಲ್ಲಿ ಮಡಿಕೇರಿಯ ಕಲಾಕ್ಷೇತ್ರದಲ್ಲಿ ಟಿಪ್ಪು ಸುಲ್ತಾನ್‌ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ನಡೆದ ಗಲಭೆಯ ಸಮಯದಲ್ಲಿ ನಗರದ ಸುದರ್ಶನ ವೃತ್ತದ ಕಡೆಯಿಂದ ಬಂದ ಸುಮಾರು 100 ರಿಂದ 150 ಜನರ ಗುಂಪು ಜಿಲ್ಲಾ ಆಸ್ಪತ್ರೆಯ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯ ವಿಭಾಗಕ್ಕೆ ನುಗ್ಗಿ ಕೆ.ಎ 12 ಜಿ 722 ಆಂಬುಲೆನ್ಸ್‌ ಹಿಂದಿನ ಗಾಜನ್ನು ಹಾಗು ಆಸ್ಪತ್ರೆಯ ಮೇಲಂತಸ್ಥಿನ ನಾಲ್ಕು ಗಾಜುಗಳು ಸ್ತ್ರೀಯರ ಹೊರ ರೋಗಿ ವಿಭಾಗದ ಎರೆಡು ಗಾಜುಗಳು SNCU ವಿಭಾಗದ ಎರೆಡು ಗಾಜುಗಳು, NRC ವಿಭಾಗದ ಎರೆಡು ಗಾಜುಗಳು ಗಳಿಗೆ ಕಲ್ಲು ಎಸೆದು ಹೊಡೆದು ಹಾಕಿ ಸುಮಾರು 25,000 ರೂಪಾಯಿಯಷ್ಟು ನಷ್ಟ ಉಂಟುಮಾಡಿರುವುದಾಗಿ ಡಾ: ಮುತ್ತಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ, ಮಡಿಕೇರಿ ಇವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Thursday, November 12, 2015

ಟಿಪ್ಪು ಜನ್ಮ ದಿನಾಚರಣೆ ವೇಳೆ ನಡೆದ ಗಲಭೆಯಲ್ಲಿ ಗಾಯಗೊಂಡ ವ್ಯಕ್ತಿಯ ಸಾವು:
     ದಿನಾಂಕ: 10-11-2015 ರಂದು ಮಡಿಕೇರಿ ಕಲಾಕ್ಷೇತ್ರದಲ್ಲಿ ನಡೆಯುವ ಟಿಪ್ಪು ಜನ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸೋಮವಾರಪೇಟೆ ತಾಲೂಕು, ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಜಂಫೀರ್ ಎಂಬವರು ಅವರ ಮಾನವ ಮಗ ಸಾಹುಲ್ ಹಮೀದ್ ಹಾಗೂ ಅಕ್ಕ-ಪಕ್ಕದವರಾದ ಮುಸ್ತಾಫ, ಅಸ್ಕರ್, ಬಷೀರ್ ಹುಸೇನ್ ಮತ್ತು ಇತರರು ಲಾರಿಯಲ್ಲಿ ಮಡಿಕೇರಿಗೆ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ವಾಪಾಸ್ಸು ಸಿದ್ದಾಪುರಕ್ಕೆ ಅದೇ ಲಾರಿಯಲ್ಲಿ ಹತ್ತಿಕೊಂಡು ಹೋಗುತ್ತಿರುವ ಸಮಯ ಅಂದಾಜು 12-30 ಪಿ.ಎಂ.ಗೆ ನೀರುಕೊಲ್ಲಿ ಎಂಬಲ್ಲಿ ತಲುಪುವಾಗ್ಗೆ ರಸ್ತೆಯ ಬಲಬದಿಯ ಬೆಟ್ಟದ ಜಾಗದಿಂದ ಸುಮಾರು 10-15 ಜನರು ಗುಂಪುಸೇರಿ ಗುಂಪಿನಲ್ಲಿನ ಒಬ್ಬನು ಕೈಯ್ಯಲ್ಲಿ ಕೋವಿ ಹಿಡಿದುಕೊಂಡು ಲಾರಿ ಮೇಲೆ ತೆರಳುತ್ತಿದ್ದ ಫಿರ್ಯಾದಿ ಜಂಫೀರ್ ಹಾಗು ಇತರರ ಕಡೆಗೆ ಗುಂಡು ಹಾರಿಸಿದ್ದು, ಸದರಿ ಗುಂಡು ಸಾಹುಲ್ ಹಮೀದ್‍ನ ಹಣೆಯ ಭಾಗಕ್ಕೆ ತಾಗಿ ಗಾಯವಾಗಿ ಆತನನ್ನು ಚಿಕಿತ್ಸೆಗೆ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 11-11-2015 ರಂದು 7-00 ಪಿಎಂಗೆ ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಠಕಾರ್ಯಪ್ಪ, ಅಪ್ಪುಟ್ಟ ಹಾಗೂ ಪೊನ್ನತ್‍ಮೊಟ್ಟೆ ರವಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಲಭೆಕೋರರಿಂದ ಅಂಗಡಿ ಮೇಲೆ ಕಲ್ಲು ತೂರಿ ಹಾನಿ:
     ದಿನಾಂಕ 10-11-2015 ರಂದು ಸಮಯ 12.00 ಗಂಟೆಗೆ ಟಿಪ್ಪು ಜಯಂತಿ ಆಚರಣೆಯ ಸಮಯದಲ್ಲಿ , ಟಿಪ್ಪು ಜಯಂತಿ ಆಚರಿಸಲು ಬಂದಿದ್ದ ಟಿಪ್ಪು ಅಭಿಮಾನಿ ವೇದಿಕೆಯ ಗಲಭೆಕೋರರು ಅಕ್ರಮ ಕೂಟ ಕಟ್ಟಿಕೊಂಡು ಜಿ ಟಿ ರಸ್ತೆಯಲ್ಲಿರುವ ಪಿರ್ಯಾದಿ ಶ್ರೀ ಪದ್ಮನಾಭರವರ ಬಾಪ್ತು ಪದ್ಮನಾಭ ಸ್ಟೋರ್ಸ್ ನ ಸುಮಾರು 75,000/- ಬೆಲೆಯ ಕಿಟಕಿಯ ಗಾಜುಗಳನ್ನು ಉದ್ದೇಶಪೂರ್ವಕವಾಗಿ ಕಲ್ಲು ಹೊಡೆದು ನಷ್ಟಪಡಿಸಿರುವುದಾಗಿ ಅಂಗಡಿ ಮಾಲಿಕರಾದ ಪದ್ಮನಾಭರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಟಿಪ್ಪು ಜಯಂತಿ ವೇಳೆ ಕಾರಿಗೆ ಹಾನಿಪಡಿಸಿ ನಷ್ಟ:

      ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆ ಬಳಿಯ ನಿವಾಸಿ ವಿ.ಬಿ. ರವಿಯವರು ತಮ್ಮ ಬಾಪ್ತು ಕೆ.ಎ 19 ಪಿ. 6051 ಸಂಖ್ಯೆಯ ಸಿಲ್ವರ್‌ ಬಣ್ಣದ ಇಂಡಿಕಾ ಕಾರನ್ನು ದಿನಾಂಕ 10-11-2015 ರಂದು ಅವರ ಮನೆಯ ಮುಂದೆ ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ಸುದರ್ಶನ ವೃತ್ತದ ಕಡೆಯಿಂದ ಲಾರಿಯಲ್ಲಿ ಟಿಪ್ಪು ಜನ್ಮ ದಿನಾಚರಣೆಯ ಸಂಬಂಧ ಜನರು ಬಂದಿದ್ದು, ಟಿಪ್ಪು ಸುಲ್ತಾನನಿಗೆ ಜೈ ಎಂದು ಘೋಷಣೆ ಕೂಗುತ್ತ ಬಂದು ಲಾರಿಯನ್ನು ಆರ್.ಟಿ.ಒ ಕಛೇರಿಯ ಗೇಟಿನ ಬಳಿ ನಿಲ್ಲಿಸಿ ಲಾರಿಯೊಳಗಿಂದ ಕಲ್ಲುಗಳನ್ನು ತೆಗೆದುಕೊಂಡು ಅಕ್ರಮ ಕೂಟ ಸೇರಿ ಪಿರ್ಯಾದಿಯವರ ಕಾರನ್ನು ಗುರುತಿಸಿ ಕಲ್ಲು ಹೊಡೆದು ಕಾರನ್ನು ಜಖಂ ಪಡಿಸಿ ಸುಮಾರು 20,000=00 ರೂ ನಷ್ಟು ಪಡಿಸಿರುತ್ತಾರೆಂದು ದಿನಾಂಕ 12-11-2015 ರಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ
.

Monday, November 9, 2015

ದ್ವೇಷದ ಹಿನ್ನೆಲೆ, ಮನೆಗೆ ನುಗ್ಗಿ ವ್ಯಕ್ತಿ ಮೇಲೆ ಹಲ್ಲೆ:

     ಹಳೆಯ ದ್ವೇಷದಿಂದ ವ್ಯಕ್ತಿಯೊಬ್ಬರ ಸಂಬಂಧಿಕರು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಊರುಗುಪ್ಪೆ ಎಂಬಲ್ಲಿ ವಾಸವಾಗಿರುವ ಎಂ.ಎ. ಹಮೀದ್ ಎಂಬವರು ದಿನಾಂಕ 8/11/15 ರಂದು ತಮ್ಮ ಮನೆಯಲ್ಲಿರುವಾಗ್ಗೆ ಅವರ ಅಣ್ಣನ ಮಗ ನೌಫಲ್ ಮತ್ತು ಅಣ್ಣನ ಮಗಳ ಗಂಡ ರಫೀಕ್ ರವರು ಹಮೀದ್ ರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಳೆ ದ್ವೇಶದಿಂದ ಜಗಳ ತೆಗೆದು ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು ಈ ಸಂಬಂಧ ಎಂ.ಎ. ಹಮೀದ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮನೆಗೆ ಆಹ್ವಾನಿಸಿ ವ್ಯಕ್ತಿಯ ಮೇಲೆ ಹಲ್ಲೆ: 

     ಯಾವುದೋ ವಿಚಾರವನ್ನು ಮಾತನಾಡಲು ಮನೆಗೆ ಆಹ್ವಾನಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಪಾಲಿಬೆಟ್ಟ ಗ್ರಾಮದಲ್ಲಿ ನಡೆದಿದೆ. ದಿನಾಂಕ 08-11-2015 ರಂದು ಸಂಜೆ ಸಮಯ 03:30 ಗಂಟೆಗೆ ಪಾಲಿಬೆಟ್ಟ ವಾಸಿ ನೌಫಲ್ ರವರು ಆತನ ಮನೆಗೆ ಹೋಗುತ್ತಿರುವಾಗ ಪಕ್ಕದ ವಾಸಿ ಹಮೀದ್ ರವರು ಹಳೆಯ ವಿಚಾರದಲ್ಲಿ ಮಾತನಾಡುವ ಸಲುವಾಗಿ ಮನೆಗೆ ಅವಾಚ್ಯ ಶಬ್ದಗಳಿಂದ ಬೈದು ರೀಪ್ ಪಟ್ಟಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಲುಲಕ ವಿಚಾರ, ವ್ಯಕ್ತಿ ಮೇಲೆ ಹಲ್ಲೆ:

     ನೀರಿನ ಪೈಪಿನ ವಿಚಾರದಲ್ಲಿ ವ್ಯಕ್ತಿಯ ದಾರಿ ತಡೆದು ಹಲ್ಲೆ ನಡೆಸಿದ ಘಟನೆ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೂಕು 2ನೇ ಮೊಣ್ಣಂಗೇರಿ ಗ್ರಾಮ ಪಂಚಾಯ್ತಿಯ ರಸ್ತೆಯ ಬದಿಯಲ್ಲಿ ಪೈಪೊಂದನ್ನು ಹಾಕಿ ವಿಚಾರದಲ್ಲಿ 2ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ಗಿಣಿ ಎಂಬವರು ಅದೇ ಗ್ರಾಮದ ಅಂಗರ ಅಂಜಿಲ ಎಂಬವರೊಂದಿಗೆ ಜಗಳ ಮಾಡಿ, ಬೈದು ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದಾರಿ ತಡೆದು ಕೊಲೆ ಬೆದರಿಕೆ:

      ದಾಖಲಿಸಿದ ದೂರನ್ನು ವಾಪಾಸು ಪಡೆಯುವ ಬಗ್ಗೆ ವ್ಯಕ್ತಿಗೆ ಒತ್ತಾಯ, ಕೊಲೆ ಬೆದರಿಕೆ ಹಾಕಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡಿಗೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 7-11-2015 ರಂದು ಸಮಯ 7-00 ಪಿ.ಎಂಗೆ ಹೆಗ್ಗಡಹಳ್ಳಿ ಗ್ರಾಮದ ಕೆ.ಬಿ. ಹರಿಪ್ರಸಾದ್ ಎಂಬವರು ಅವರ ಬಾಪ್ತು ಬೈಕ್ ನಂ ಕೆಎ 12 ಜೆ 4033 ರಲ್ಲಿ ಕುಶಾಲನಗರದಿಂದ ಮನೆಗೆ ಹೋಗುತ್ತಿರುವಾಗ ಕೂಡಿಗೆಯಲ್ಲಿ ಹೆಗ್ಗಡಳ್ಳಿ ನಿವಾಸಿ ಚಿಮ್ಮಿ ಎಂಬ ವ್ಯಕ್ತಿ ಸದಿರು ಕೆ.ಇ.ಹರಿಪ್ರಸಾದ್ ರವರನ್ನು ತಡೆದು ನಿಲ್ಲಿಸಿ ಅರಣ್ಯ ಇಲಾಖೆಯವರ ಮೇಲೆ ದಾಖಲಿಸಿರುವ ಕೇಸನ್ನು ವಾಪಾಸು ತೆಗೆಯದಿದ್ದರೆ ಕೊಂದು ಬಿಡುತ್ತೇವೆ, ಇಲ್ಲವೆ ಜಾತಿ ನಿಂದನೆ ಮತ್ತು ಹುಡುಗಿಯರನ್ನು ಚುಡಾಯಿಸಿದ್ದೀರಿ ಎಂದು ಕೇಸು ದಾಖಲಿಸುತ್ತೇವೆ ಎಂದುದಾರಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ವಿಚಾರದಲ್ಲಿ ವ್ಯಕ್ತಿಗೆ ಕೊಲೆ ಬೆದರಿಕೆ ಪ್ರಕರಣ ದಾಖಲು:

     ವ್ಯಕ್ತಿಯೊಬ್ಬರ ತೋಟಕ್ಕೆ ಹೋಗುವ ದಾರಿಯಲ್ಲಿ ನಡೆದುಕೊಂಡು ಹೋಗಲು ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಘಟನೆ ಹೊಸ್ಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 05-11-2015 ರಂದು ಸಂಜೆ 4-00 ಗಂಟೆಗೆ ಹೊಸ್ಕೇರಿ ಗ್ರಾಮದ ಶ್ರೀಮತಿ ಮಂಡೀರ ಕಮಲಮ್ಮನವರು ತಮ್ಮ ತೋಟಕ್ಕೆ ಹೋಗಿ ಬರುವಾಗ್ಗೆ ತಮ್ಮ ಕುಟುಂಬದವರೇ ಆದ ಮಂಡೀರ ಹರೀಶ್ ರವರು ದಾರಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಇನ್ನೊಮ್ಮೆ ಈ ಕಡೆ ಬಂದರೆ ಕೈ-ಕಾಲುಗಳನ್ನು ಕತ್ತರಿಸಿ ಇಲ್ಲಿಯೇ ಹೂತು ಹಾಕಲಾಗುವುದೆಂದು ಕೈಯ್ಯಲ್ಲಿ ಕತ್ತಿ ಹಿಡಿದುಕೊಂಡು ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

Saturday, November 7, 2015

ಅಪ್ರಾಪ್ತ ಬಾಲಕಿಗೆ ದೈಹಿಕ ಕಿರುಕುಳ
              ಅಪ್ರಾಪ್ತ ಬಾಲಕಿಯೊಬ್ಬಳಿಗೆ ಯುವಕನೋರ್ವ ದೈಹಿಕ ಕಿರುಕುಳ ನೀಡಿರುವ ಪ್ರಕರಣ ಸೋಮವಾರಪೇಟೆ ಪಟ್ಟಣದಲ್ಲಿ ನಡೆದಿದೆ. ದಿನಾಂಕ 05/11/201ರಂದ ಸೋಮವಾರಪೇಟೆ ನಗರದ ಕ್ಲಬ್‌ ರಸ್ತೆ ನಿವಾಸಿ  ಭಾಗೀರಥಿ ಎಂಬವರು ಮನೆಯಲ್ಲಿರುವಾಗ ಸೋಮವಾರಪೇಟೆ ನಗರದ ನಿವಾಸಿ ಭರತ್‌ಎಂಬ ಯುವಕನು ಬಂದು ಮನೆಯೊಳಗೆ ಪ್ರವೇಶಿಸಿ ಭಾಗೀರಥಿಯವರ ಮಗಳು  ಪಿಯುಸಿ  ವಿದ್ಯಾರ್ಥಿನಿ 16  ವರ್ಷ ಪ್ರಾಯದ ಲಿಖಿತ ಎಂಬಾಕೆಯನ್ನು ಬಲವಂತವಾಗಿ ಕೈ ಹಿಡಿದುಕೊಂಡು ಆತನನ್ನು ಪ್ರೀತಿಸುವಂತೆ  ಒತ್ತಾಯಿಸಿದ್ದು  ಆಕೆಯನ್ನು ಎಳೆದಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ
           ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿರುವ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 06/11/2015ರಂದು ಕುಸುಬೂರು ನಿವಾಸಿ ಸುಂದರ ಎಂಬವರ ಮಗ ಭರತ್‌ ಎಂಬಾತ ಸೋಮವಾರಪೇಟೆ ನಗರದಲ್ಲಿ ಮೊಬೈಲ್‌ ದುರಸ್ತಿಗೆ ನೀಡಿದ್ದನ್ನು ತರಲೆಂದು ಹೋಗಿದ್ದಾಗ ನಗರದ ಕ್ಲಬ್‌ ರಸ್ತೆಯ ನಿವಾಸಿ ಸಂಪತ್‌ ಹಾಗೂ ಇನ್ನೊಬ್ಬ ಬಂದು ಬರತ್‌ನನ್ನು ಬಲವಂತವಾಗಿ ಸ್ಕೂಟಿಯೊಂದರಲ್ಲಿ ಕರೆದುಕೊಂಡು ಕಾವೇರಿ ಸರ್ಕಲ್‌ ಬಳಿ ಇರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹುಡುಗಿಯೊಬ್ಬಳ ವಿಚಾರವಾಗಿ ಹಲ್ಲೆ ಮಾಡಿ ಪರಿಶಿಷ್ಟ ಜಾತಿಗೆ ಸೇರಿದ ಭರತ್‌ನ ಜಾತಿಯನ್ನು ಕುರಿತು ಹೀಯಾಳಿಸಿದ್ದು, ನಂತರ ಆತನನ್ನು ಭರತ್‌ ಗೆ ಪರಿಚಯವಿರುವ ಲಿಖಿತ ಎಂಬ ಹುಡುಗಿಯ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ತಂದೆಯೂ ಸಹಾ ಬೆತ್ತದಿಂದ ಆತನಿಗೆ ಹೊಡೆದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸರ್ಕಾರಿ ನೌಕರನ ಕರ್ತವ್ಯಕ್ಕೆ  ಅಡ್ಡಿ 
                   ಕರ್ತವ್ಯನಿರತ ಸರ್ಕಾರಿ ನೌಕರನ ಕರ್ತವ್ಯಕ್ಕೆ ಆಗಿಂದಾಗ್ಗೆ ಅಡ್ಡಿಪಡಿಸಿ ಬೆದರಿಕೆ ಹಾಕುತ್ತಿರುವ ಬಗ್ಗೆ ಶನಿವಾರಸಂತೆ ಠಾನೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯಾಗಿ ಭೈರಪ್ಪ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದು ದೊಡ್ಡಕೊಡ್ಲಿ ಗ್ರಾಮದ  ಕೆಂಚೇಶ್ವರ,  ನವಗ್ರಾಮದ ಕಾಳಯ್ಯ,  ಕೊಡ್ಲಿಪೇಟೆಯ ರಾಜೇಶ್‌ ಮತ್ತು ಕೆರಗನಹಳ್ಳಿಯ  ಮಂಜುನಾಥ್‌  ಎಂಬವರು ಆಗಿಂದಾಗ್ಗೆ ಪಂಚಾಯಿತಿ ಕಚೇರಿಗೆ ಬಂದು ಭೈರಪ್ಪನವರು ಕರ್ತವ್ಯ ನಿರ್ವಹಿಸುತ್ತಿರುವ ವೇಳೆಯಲ್ಲಿ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಕರ್ತವ್ಯಕ್ಕೆ ಟಡ್ಡಿಪಡಿಸುತ್ತಿದ್ದು,  ಭೈರಪ್ಪನವರ ವಿರುದ್ದ ದೂರು ನೀಡಿದ 10 ಲಕ್ಷದಷ್ಟು ಹಣವನ್ನು ದಂಡ ಕಟ್ಟುವಂತೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಐವರ ಬಂಧನ
               ಅಕ್ರಮವಾಗಿ ಜೂಜಾಟುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಶನಿವಾರಸಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ದಿನಾಂಕ 06/11/2015ರಂದು ಗೋಪಾಲಪುರ ಗ್ರಾಮದ ಕೆರೆಯ ಬಳಿ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‌ಐ ರವಿಕಿರಣ್‌ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾಳಿ ನಡೆಸಿ ಗೋಪಾಲಪುರ ಗ್ರಾಮದ ಕೆರೆಯ ಬಳಿ ಇಸ್ಪೇಟು ಎಲೆಗಳನ್ನು ಉಪಯೋಗಿಸಿ ಜೂಜಾಡುತ್ತಿದ್ದ ರವಿ, ಜಿ.ಸಿ.ರವಿ, ಶಾಂತರಾಜು, ದಿನೇಶ ಮತ್ತು ಡೀಲಾಕ್ಷ ಎಂಬವರನ್ನು ಬಂಧಿಸಿ ಜೂಜಾಟಕ್ಕೆ ಪಣವಾಗಿ ಉಪಯೋಗಿಸಿದ ರೂ.1250/- ಹಣವನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಾಲಕ ಕಾಣೆ ಪ್ರಕರಣ
             ದಿನಾಂಕ 01/11/2015ರಂದು ಕೊಣನೂರು ನಿವಾಸಿ ಪ್ರಸನ್ನ ಎಂಬವರ ಮಗ 16 ವರ್ಷ ಪ್ರಾಯದ ಪ್ರಸೀತ ಎಂಬಾತನು ಬಾಣಾವರದಲ್ಲಿರುವ ಅಜ್ಜಿಯ ಮನೆಗೆ ತಿಥಿ ಕಾರ್ಯಕ್ಕೆ ಹೋಗುವುದಾಗಿ ತಾಯಿಗೆ ಹೇಳಿ ಹೋಗಿದ್ದು, ಬಾಣಾವರಕ್ಕೆ ಹೋಗದೆ ಸಂಜೆ ತಾಯಿಗೆ ದೂರವಾಣಿ ಕರೆ ಮಾಡಿ ತನ್ನ ಪರ್ಸ್ ಕಳೆದುಹೋಗಿದ್ದು ತಾನು ಮಾದಾಪುರಕ್ಕೆ ಹೋಗುವುದಾಗಿ ತಿಳಿಸಿದ್ದು ನಂತರ ಮಾದಾಪುರಕ್ಕೂ ಹೋಗದೆ ಎಲ್ಲಿಗೋ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗುಂಪು ಗಲಭೆ, ಹಲ್ಲೆ
             ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಭೆ ನಡೆದ ಘಟನೆ ಕೊಡ್ಲಿಪೇಟೆಯಲ್ಲಿ ನಡೆದಿದೆ. ದಿನಾಂಕ 05/11/2015ರಂದು ಟಿಪ್ಪು ಜಯಂತಿ ಆಚರಣೆಯ ಬಗ್ಗೆ ಕೊಡ್ಲಿಪೇಟೆಯ ಜಾಮಿಯಾ ಮಸೀದಿಯಲ್ಲಿ ಏರ್ಪಡಿಸಿದ್ದ ಸಭೆಗೆ ಕೊಡ್ಲಿಪೇಟೆ ನಿವಾಸಿ ವಸೀಂ ಅಕ್ರಮ ಎಂಬವರು ಹೋಗಿದ್ದು ಸಭೆ ಆರಂಭವಾಗುತ್ತಿದ್ದ ಹಾಗೆ ಔರಂಗಜೇಬ್‌, ವಹಾಬ್‌, ಸಲೀಂ, ನದೀಂ ಮತ್ತು ಇತರರು ಸೇರಿಕೊಂಡು ಟಿಪ್ಪು ಆಚರಣೆಯ ಬಗ್ಗೆ ಜಗಳವಾಡಿ ವಸೀಂ ಅಕ್ರಮ ಮತ್ತು ಇತರರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, November 5, 2015

ದಾರಿ ತಡೆದು ಹಲ್ಲೆ, ಕೊಲೆ ಬೆದರಿಕೆ:

     ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ಆಸಿಫ್ ಎಂಬವರು ದಿನಾಂಕ 03-11-2015 ರಂದು ಸಮಯ 21.30 ಗಂಟೆಗೆ ಮಡಿಕೇರಿ ನಗರದ ಗೌಳಿಬೀದಿಯ ಹಳೆಯ ಗ್ಯಾಸ್ ಅಂಗಡಿಯ ಪಕ್ಕದ ದಿನಸಿ ಅಂಗಡಿಯ ಹತ್ತಿರ ತನ್ನ ಅಣ್ಣ ಮತ್ತು ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಆರೋಪಿಗಳಾದ    ಪವನ್, ದರ್ಶನ್, ಪ್ರಮೋದ್, ತಾಹಿರ್, ನೌಶಾದ್, ಜೀವನ್ ಮತ್ತು ವಿನೋದ್ ಎಂಬವರು ದಾರಿ ತಡೆದು ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ಬೈದು ಕತ್ತಿಯಿಂದ, ರಾಡಿನಿಂದ ಹಾಗೂ ಕೈಗಳಿಂದ ಆಸಿಫ್ ಹಾಗೂ ಅವರ ಜೊತೆಯಲ್ಲಿದ್ದವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಹಳೆ ದ್ವೇಷದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟಗೇರಿ ಗ್ರಾಮದ ನಿವಾಸಿ ಅಬ್ದುಲ್ ಖಾದರ್ ರವರು ದಿನಾಂಕ: 04-11-2015 ರಂದು ಸಮಯ 19.15 ಗಂಟೆಗೆ ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾಗ ಬೆಟ್ಟಗೇರಿ ಗ್ರಾಮ ಜಬೀರ್ ಎಂಬುವನು ಹಳೇ ವೈಷಮ್ಯ ಇಟ್ಟುಕೊಂಡು ಏಕಾಏಕಿ ಅಂಗಡಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ದೋಣ್ಣೆಯಿಂದ ಬಲಕೈ, ಮತ್ತು ಬೆನ್ನಿಗೆ ಹೊಡೆದು ನೋವು ಪಡಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಡಿತರ ಹಂಚಿಕೆ ವಿಷಯದಲ್ಲಿ ಜಗಳ, ಹಲ್ಲೆ:

     ವಿರಾಜಪೇಟೆ ತಾಲೂಕು ಕುಟ್ಟಂದಿ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎನ್.ಎ. ಮನುಕುಮಾರ್ ಎಂಬವರು ಸದರಿಯವರು ದಿನಾಂಕ 4-11-2015 ರಂದು ನ್ಯಾಯಾಬೆಲೆ ಅಂಗಡಿಯಲ್ಲಿ ಬೆಳಗ್ಗೆ 11-30 ರ ಸಮಯದಲ್ಲಿ ಗ್ರಾಹಕರಿಗೆ ಪಡಿತರವನ್ನು ವಿತರಿಸುತ್ತಿದ್ದಾಗ ಅಲ್ಲಿಗೆ ಗ್ರಾಮದ ಎ.ಜಿ.ಹರಿ ಎಂಬುವವರು ಬಂದು 3 ಲೀಟರ್‌ ಸೀಮೆಎಣ್ಣೆ ಯನ್ನು ನೀಡುವಂತೆ ಕೇಳಿದ್ದು ಅದಕ್ಕೆ ನೀವು ಪಡಿತರ ಚೀಟಿಯನ್ನು ಮಾಡಿಸಿಕೊಂಡು ಬಂದರೆ ಸೀಮೆಎಣ್ಣೆಯನ್ನು ಕೋಡುತ್ತೇನೆಂದು ತಿಳಿಸಿದ ಮೇರೆಗೆ ಅರೋಪಿ ಎ.ಜಿ. ಹರಿ ಮನುಕುಮಾರ್ ಎಂಬವರೊಂದಿಗೆ ಜಗಳ ಮಾಡಿ ಕೈಯಲ್ಲಿದ್ದ ಬೈಕ್ ಕೀ ಯಿಂದ ಎಡ ಕಿವಿಯ ಭಾಗಕ್ಕೆ ಗುದ್ದಿ ಗಾಯಪಡಿಸಿ ನಂತರ ನನ್ನ ತಲೆ ಮತ್ತು ಎದೆಯ ಭಾಗಕ್ಕೆ ಕೈ ಯಿಂದ ಗುದ್ದಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, November 4, 2015

ಮಹಿಳೆಗೆ ವರದಕ್ಷಿಣೆ ಕಿರುಕುಳ
                  ಮಹಿಳೆಯೊಬ್ಬರಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿರುವ ಪ್ರಕರಣ ನಾಪೋಕ್ಲು ಸಮೀಪದ ಪೇರೂರು ಗ್ರಾಮದಲ್ಲಿ ನಡೆದಿದೆ. ಕೆ.ಎಸ್ ಚೈತ್ರ ಎಂಬವರು 2006 ರಲ್ಲಿ ಪೇರೂರು ಗ್ರಾಮದ ವಾಸಿ ಕೆ.ಜೆ ಸನ್ನಿರವರನ್ನು ಮದುವೆಯಾಗಿದ್ದು ಒಂದು ಗಂಡು ಮಗು ಇದ್ದು, ಮದುವೆ ಆದಾಗಿನಿಂದಲೂ  ಅವರ ಪತಿ ಸನ್ನಿರವರು ಹೊಡೆಯುವುದು ಹಾಗೂ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದುದಲ್ಲದೇ, ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದು, ಇದಕ್ಕೆ ಅತ್ತೆ, ಮಾವನವರೂ ಕುಮ್ಮಕ್ಕು ನೀಡುತ್ತಿದ್ದು, ಪತಿ ಸನ್ನಿರವರು ಕೋವಿಯಿಂದ ಗುಂಡು ಹೊಡೆದು ಕೊಲ್ಲದೇ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಖಿರುವುದಾಗಿ ನೀಡಿದ  ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಬಡ್ಡಿ ವ್ಯಾಪಾರ
                ಅಕ್ರಮವಾಗಿ ಅಧಿಕ ಬಡ್ಡಿಗೆ ಹಣವನ್ನು ಸಾಲ ನೀಡಿರುವ ಪ್ರಕರಣ ಶನಿವಾರಸಂತೆ  ನಗರದಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಈಚಲಬೀಡು ನಿವಾಸಿ ಹರೀಶ್‌ ಎಂಬವರು ಶನಿವಾರಸಂತೆ ನಗರದ ಗಣೇಶ್‌ ಎಂಬವರಿಂದ 2013ರಲ್ಲಿ ರೂ 20,000/- ಹಣವನ್ನು ಶೇಕಡಾ 10 ರ ಬಡ್ಡಿಗೆ ಸಾಲವಾಗಿ ಪಡೆದಿದ್ದು ಭದ್ರತೆಗಾಗಿ ಬ್ಯಾಂಕ್‌ ಚೆಕ್‌ ಮತ್ತು ಕಾರಿನ ದಾಖಲಾತಿಗಳನ್ನು ಒತ್ತೆ ಇಟ್ಟಿದ್ದು ಸಾಲದ ಅಸಲು ಹಾಗೂ ಬಡ್ಡಿ ಸೇರಿ ರೂ.40,000/-ವನ್ನು ಕಂತಿನಲ್ಲಿ ಮರು ಪಾವತಿ ಮಾಡಿದ್ದು ಸಾಲ ಮುಗಿದ ನಂತರ ದಿನಾಂಕ 15/10/2015ರಂದು ಹರೀಶ್‌ರವು ಗಣೇಶ್‌ರವರ ಬಳಿ ಒತ್ತೆ ಇಟ್ಟಿದ್ದ ದಾಖಲಾತಿಗಳನ್ನು ಕೇಳಿದಾಗ ಗಣೇಶ್‌ರವರು ಪುನಃ ಸಾಲ ಮತ್ತು ಬಡ್ಡಿಯನ್ನು ನೀಡುವಂತೆ ಒತ್ತಾಯಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್ಸಿಗೆ ಲಾರಿ ಡಿಕ್ಕಿ
              ಕೆಎಸ್‌ಆರ್‌ಟಿಸಿ ಬಸ್ಸೊಂದಕ್ಕೆ ಲಾರಿ ಡಿಕ್ಕಿಯಾದ ಘಟನೆ ಮಡಿಕೇರಿ ಬಳಿಯ ದೇವರಕೊಲ್ಲಿ ಗ್ರಾಮದಲ್ಲಿ ನಡೆದಿದೆ. ದಿನಾಂಕ:-03-11-2015 ರಂದು ಕೆಎ-19-ಎಫ್-2934ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಶಿವಕುಮಾರ್‌ ಎಂಬವರು ಚಾಲಿಸಿಕೊಂಡು ಮಂಗಳೂರಿನಿಂದ ಹೊರಟು ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ಹೋಗುತ್ತಿರುವಾಗ ದೇವರಕೊಲ್ಲಿ ಸಮೀಪ ಮಡಿಕೇರಿ ಕಡೆಯಿಂದ ಬರುತ್ತಿದ್ದ ಕೆಎ-21-5988 ರ ಲಾರಿಯ ಚಾಲಕ ಚಿದಾನಂದ ಎಂಬಾತನು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಕೊಂಡು ಬಂದು ಶಿವಕುಮಾರ್‌ರವರು ಚಾಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸಿನ ಮುಂಭಾಗದ ಬಲಭಾಗ ಜಖಂ ಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Tuesday, November 3, 2015

ಮರ ಬಿದ್ದು ವ್ಯಕ್ತಿಯ ಸಾವು
                  ಕೆಲಸ ಮಾಡುತ್ತಿದ್ದಾಗ ಮರ ಬಿದ್ದು ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ದಿನಾಂಕ 03-11-2015 ರಂದು ನೆಲ್ಲಿ ಹುದಿಕೇರಿ ನಿವಾಸಿ ಸಿ.ಸಿ. ಜೋಸ್‌ ಎಂಬವರ ಅಣ್ಣ  ಬೇಬಿ ಚಾಕೋ ಎಂಬುವವರು ಬೆಳಿಗ್ಗೆ ಟಿಂಬರ್ ಕೆಲಸಕ್ಕೆಂದು ಪಾಲಿಬೆಟ್ಟ ಬಳಿಯ ಎಮ್ಮೆಗುಂಡಿ ಎಸ್ಟೇಟ್ ಗೆ ಇತರೆ ಕೆಲಸದವರೊಂದಿಗೆ ಹೋಗಿದ್ದು, ಬೇಬಿ ಚಾಕೋರವರು ಟಿಂಬರ್ ಕೆಲಸ ಮಾಡುವಾಗ ಅವರ ಮೇಲೆ ಆಕಸ್ಮಿಕವಾಗಿ ಮರವು ತುಂಡಾಗಿ ಉರುಳಿ ಬಿದ್ದಿದ್ದು, ಅವರನ್ನು ಅಮತ್ತಿ ಆರ್.ಹೆಚ್.ಪಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಮೃತ ಬೇಬಿ ಚಾಕೋರವರ ತಮ್ಮ ಸಿ.ಸಿ.ಜೋಸ್‌ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಮೇಲೆ ಹಲ್ಲೆ, ಕೊಲೆ ಬೆದರಿಕೆ
               ಒಂಟಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಸಿದ್ದಾಪುರ ಬಳಿಯ ಕೊಂಡಂಗೇರಿಯಲ್ಲಿ ನಡೆದಿದೆ. ದಿನಾಂಕ 02-11-2015 ರಂದು ನಡು ರಾತ್ರಿ ಕೊಂಡಂಗೇರಿ ಗ್ರಾಮದ ನಿವಾಸಿ ತಾಜುನ್ನೀಸಾ ಎಂಬವರು ಮನೆಯಲ್ಲಿ ಮಲಗಿದ್ದ ವೇಳೆ ಬಾಗಿಲು ತಟ್ಟಿದ ಶಬ್ಧ ಕೇಳಿ ಬಂದು ಬಾಗಿಲು ತೆರೆದು ನೋಡಿದಾಗ, ಅವರ ಗಂಡನ ಅಣ್ಣ ಅಬ್ಬಾಸ್‌ರವರು ಬಾಗಿಲ ಹೊರಗೆ ನಿಂತಿದ್ದುದನ್ನು ನೋಡಿ ಏಕೆ ಬಾಗಿಲು ತಟ್ಟಿದ್ದೆಂದು ಕೇಳಿದಾಗ, ಆತನು ತಾಜುನ್ನೀಸಾರವರನ್ನು ಅನೈತಿಕ ಕ್ರಿಯೆಗೆ ಒತ್ತಾಯಿಸಿದ್ದುಆಗ ಆಕೆ  ಕಿರುಚಿಕೊಂಡಾಗ ಅಬ್ಬಾಸ್ ರವರು ತನ್ನ ಕೈಯಲ್ಲಿದ್ದ ಕತ್ತಿಯ ಹಿಂಭಾಗದಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ನೀಡಿದ ದೂರಿನ ಮೇರೆಗೆ ಸಿದ್ದಾಪುರ  ಪೊಲೀಸರು ಪ್ರಕರಣ  ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

Monday, November 2, 2015

ಹೆಚ್ಚಿನ ಬಡ್ಡಿಗೆ ಸಾಲ, ವ್ಯಕ್ತಿ ವಿರುದ್ಧ ಪ್ರಕರಣ:

     ಪಡೆದ ಸಾಲವನ್ನು ಹಿಂತಿರುಗಿಸಿದ್ದರೂ ಸಹ ಹೆಚ್ಚಿನ ಬಡ್ಡಿ ನೀಡುವಂತೆ ಸಾಲಗಾರರಿಗೆ ತೊಂದರೆ ನೀಡುತ್ತಿರುವ ಘಟನೆ ಶನಿವಾರಸಂತೆ ನಗರದಲ್ಲಿ ನಡೆದಿದೆ. ಶನಿವಾರಸಂತೆ ಠಾಣಾ ವ್ಯಾಪ್ತಿಯ ಶನಿವಾರಸಂತೆ ನಗರದ ನಿವಾಸಿ ಗಣೇಶ ಎಂಬವರಿಂದ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಈಚಲಬೀಡು ಗ್ರಾಮದ ನಿವಾಸಿ ಹರೀಶ ಎಂಬವರು 2013 ರಲ್ಲಿ 20,000 ರೂಗಳನ್ನು ಪಡೆದುಕೊಂಡು ಭದ್ರತೆಗಾಗಿ ಹರೀಶರವರಿಂದ ವಾಹನದ ದಾಖಲಾತಿಗಳನ್ನು ಇಟ್ಟುಕೊಂಡಿದ್ದು, ಸಾಲವನ್ನು ಬಡ್ಡಿಸಮೇತ ಮರುಪಾವತಿ ಮಾಡಿದ್ದರೂ ಸಹ ಗಣೇಶರವರು ಭದ್ರತೆಗಾಗಿ ಇಟ್ಟಿದ್ದ ವಾಹನದ ದಾಖಲಾತಿಗಳನ್ನು ವಾಪಾಸು ನೀಡದೇ ಪುನಃ ಅಸಲು ಮತ್ತು ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿರುವುದಾಗಿ ಫಿರ್ಯಾದಿ ಹರೀಶರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿದ್ದಾರೆ. 


ಕಾಣೆಯಾದ ಹುಡುಗಿ ಪತ್ತೆ, ಅಪಹರಣ ಪ್ರಕರಣ ದಾಖಲು:

     ಕುಶಾಲನಗದ, ಗುಮ್ಮನಕೊಲ್ಲಿ ಗ್ರಾಮದ ನಿವಾಸಿ ಕೆ.ಪಿ. ನಂದಕುಮಾರ್ ಎಂಬವರ ಮಗಳು 15 ವರ್ಷ ಪ್ರಾಯದ ರಮ್ಯ ಎಂಬಾಕೆಯು ಮೈಸೂರಿನ ಗೋಪಾಲಸ್ವಾಮಿ ಪಿ ಯು ಕಾಲೇಜಿನಲ್ಲಿ ಪ್ರಥಮ ಪಿ ಯು ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈಕೆ ದಿನಾಂಕ 5-10-2015 ರಂದು ಕಾಣೆಯಾಗಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಕಾಣೆಯಾದ ರಮ್ಯಳನ್ನು ಆರೋಪಿ ವಿನಯ್ ಎಂಬಾತನು ಕಾಲೇಜಿನಿಂದ ದಿನಾಂಕ 5-10-2015 ರಂದು ಅಪಹರಿಸಿಕೊಂಡು ಹೋಗಿ ಚಿಕ್ಕಮಂಗಳುರಿನ ಮೂಡಿಗೆರೆಯಲ್ಲಿರುವ ತನ್ನ ಮನೆಯಲ್ಲಿ ಒಂದು ವಾರ ಇಟ್ಟುಕೊಂಡು ತದ ನಂತರ ಬೇಲೂರಿನಲ್ಲಿರುವ ತನ್ನ ಅಕ್ಕ ವಾಣಿಯವರ ಮನೆಯಲ್ಲಿ ಬಲತ್ಕಾರವಾಗಿ ಇಟ್ಟುಕೊಂಡಿರುವುದು ಪತ್ತೆಯಾಗಿದ್ದು, ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

Sunday, November 1, 2015

ಬೈಕ್ ಡಿಕ್ಕಿ, ಪಾದಚಾರಿಗೆ ಗಂಭೀರ ಗಾಯ:

      ಪಾದಚಾರಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಪರಿಣಾಮ ಗಂಭೀರ ಗಾಯಗೊಂಡು ಪ್ರಜ್ಞಾಹೀನತೆಯಲ್ಲಿರುವ ಘಟನೆ ವಿರಾಜಪೇಟೆಯ ಹತ್ತಿರದ ಒಂಟಿಯಂಗಡಿಯಲ್ಲಿ ನಡೆದಿದೆ. ದಿನಾಂಕ 31-10-2015 ರಂದು ಬೆಳಿಗ್ಗೆ 10-45 ಗಂಟೆಗೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದು, ಒಂಟಿಯಂಗಡಿ ಗ್ರಾಮದ ಪ್ರಾಥಮಿಕ ಶಾಲೆಯ ಹತ್ತಿರ ಇರುವ ಲಕ್ಷ್ಮೀ ಗ್ಯಾರೇಜ್ ಬಳಿ ಸಾರ್ವಜನಿಕ ರಸ್ತೆಯ ಅಂಚಿನಲ್ಲಿ ಒಂಟಿಯಂಗಡಿ ಗ್ರಾಮದ ನಿವಾಸಿ ವಿ.ಕೆ.ಪರಮೇಶ್ವರ ಎಂಬವರು ನಡೆದುಕೊಂಡು ಹೋಗುತ್ತಿರುವಾಗ್ಗೆ ಒಂಟಿಯಂಗಡಿ ಕಡೆಯಿಂದ ಅಮ್ಮತ್ತಿ ಕಡೆಗೆಕೆಎ-12-ಎಲ್-8497 ರ ದ್ವಿ ಚಕ್ರ ವಾಹನವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರು ಕತೆಯಿಂದ ಚಾಲನೆ ಮಾಡಿಕೊಂಡು ಬಂದು ವಿ.ಕೆ.ಪರಮೇಶ್ವರ ರವರ ಹಿಂಬಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ವಿ.ಕೆ.ಪರಮೇಶರವರ ತಲೆಯ ಹಿಂಭಾಗ, ಹಣೆಯ ಭಾಗಕ್ಕೆ ತೀವ್ರ ತರದ ಪೆಟ್ಟಾಗಿ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಅವರನ್ನು ಚಿಕಿತ್ಸೆಗೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಜೀಪಿನಿಂದ ಬಿದ್ದು ವ್ಯಕ್ತಿಗೆ ಗಾಯ:

         ದಿನಾಂಕ: 31-10-2015ರಂದು ಸೋಮವಾರಪೇಟೆ ತಾಲೂಕು ಕಾಗಡಿಕಟ್ಟೆ ಗ್ರಾಮದ ನಿವಾಸಿ ಕೆ.ಎ. ಕಾಸಿಂ ಎಂಬವರು ತಾಕೇರಿ ಕಡೆಯಿಂದ ಸೋಮವಾರಪೇಟೆ ಕಡೆಗೆ ಕೆಎ 31 ಎಂ. 0489ರ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಚಾಲಕ ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕೆ.ಎ. ಕಾಸಿಂರವರು ಕುಳಿತ್ತಿದ್ದ ಸೀಟಿನಿಂದ ರಸ್ತೆಗೆ ಬಿದ್ದು ಜೀಪಿನ ಹಿಂದಿನ ಚಕ್ರ ಪಿರ್ಯಾದಿಯವರ ಬಲ ಕಾಲಿನ ತೊಡೆಯ ಮೇಲೆ ಹರಿದು ಗಾಯಗೊಂಡಿದ್ದು,ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.