Sunday, November 1, 2015

ಬೈಕ್ ಡಿಕ್ಕಿ, ಪಾದಚಾರಿಗೆ ಗಂಭೀರ ಗಾಯ:

      ಪಾದಚಾರಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಪರಿಣಾಮ ಗಂಭೀರ ಗಾಯಗೊಂಡು ಪ್ರಜ್ಞಾಹೀನತೆಯಲ್ಲಿರುವ ಘಟನೆ ವಿರಾಜಪೇಟೆಯ ಹತ್ತಿರದ ಒಂಟಿಯಂಗಡಿಯಲ್ಲಿ ನಡೆದಿದೆ. ದಿನಾಂಕ 31-10-2015 ರಂದು ಬೆಳಿಗ್ಗೆ 10-45 ಗಂಟೆಗೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದು, ಒಂಟಿಯಂಗಡಿ ಗ್ರಾಮದ ಪ್ರಾಥಮಿಕ ಶಾಲೆಯ ಹತ್ತಿರ ಇರುವ ಲಕ್ಷ್ಮೀ ಗ್ಯಾರೇಜ್ ಬಳಿ ಸಾರ್ವಜನಿಕ ರಸ್ತೆಯ ಅಂಚಿನಲ್ಲಿ ಒಂಟಿಯಂಗಡಿ ಗ್ರಾಮದ ನಿವಾಸಿ ವಿ.ಕೆ.ಪರಮೇಶ್ವರ ಎಂಬವರು ನಡೆದುಕೊಂಡು ಹೋಗುತ್ತಿರುವಾಗ್ಗೆ ಒಂಟಿಯಂಗಡಿ ಕಡೆಯಿಂದ ಅಮ್ಮತ್ತಿ ಕಡೆಗೆಕೆಎ-12-ಎಲ್-8497 ರ ದ್ವಿ ಚಕ್ರ ವಾಹನವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರು ಕತೆಯಿಂದ ಚಾಲನೆ ಮಾಡಿಕೊಂಡು ಬಂದು ವಿ.ಕೆ.ಪರಮೇಶ್ವರ ರವರ ಹಿಂಬಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ವಿ.ಕೆ.ಪರಮೇಶರವರ ತಲೆಯ ಹಿಂಭಾಗ, ಹಣೆಯ ಭಾಗಕ್ಕೆ ತೀವ್ರ ತರದ ಪೆಟ್ಟಾಗಿ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಅವರನ್ನು ಚಿಕಿತ್ಸೆಗೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಜೀಪಿನಿಂದ ಬಿದ್ದು ವ್ಯಕ್ತಿಗೆ ಗಾಯ:

         ದಿನಾಂಕ: 31-10-2015ರಂದು ಸೋಮವಾರಪೇಟೆ ತಾಲೂಕು ಕಾಗಡಿಕಟ್ಟೆ ಗ್ರಾಮದ ನಿವಾಸಿ ಕೆ.ಎ. ಕಾಸಿಂ ಎಂಬವರು ತಾಕೇರಿ ಕಡೆಯಿಂದ ಸೋಮವಾರಪೇಟೆ ಕಡೆಗೆ ಕೆಎ 31 ಎಂ. 0489ರ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಚಾಲಕ ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕೆ.ಎ. ಕಾಸಿಂರವರು ಕುಳಿತ್ತಿದ್ದ ಸೀಟಿನಿಂದ ರಸ್ತೆಗೆ ಬಿದ್ದು ಜೀಪಿನ ಹಿಂದಿನ ಚಕ್ರ ಪಿರ್ಯಾದಿಯವರ ಬಲ ಕಾಲಿನ ತೊಡೆಯ ಮೇಲೆ ಹರಿದು ಗಾಯಗೊಂಡಿದ್ದು,ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.