Monday, November 23, 2015

ಬರೆಕುಸಿದು ವ್ಯಕ್ತಿಯ ದುರ್ಮರಣ:
      ಇಟ್ಟಿಗೆ ನಿರ್ಮಿಸಲು ಮಣ್ಣು ಅಗೆದು ತೆಗೆಯುವ ವೇಳೆ ಆಕಸ್ಮಿಕವಾಗಿ ಬರೆಯ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಡಿಕೇರಿ ಹತ್ತಿರದ ಸಂಪಾಜೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 22-11-2015 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಸಂಪಾಜೆ ಗ್ರಾಮದ ಚಡಾವು ಎಂಬಲ್ಲಿ ವಾಸವಾಗಿರುವ ಫಿರ್ಯಾದಿ ಹೆಚ್.ಬಿ. ಸುರೇಶ್ ಹಾಗೂ ಅವರ ತಂದೆ ಬೈರಪ್ಪರವರು ಹೊಸದಾದ ಮನೆಗೆ ಇಟ್ಟಿಗೆ ಕಟ್ಟಲು ಮನೆಯ ಪಕ್ಕದ ಬರೆಯಿಂದ ಮಣ್ಣನ್ನು ಅಗೆದು ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಬರೆಯ ಮಣ್ಣು ಕುಸಿದು ಬಿದ್ದು ಬೈರಪ್ಪನವರು ಮಣ್ಣಿನ ಒಳಗೆ ಸಿಕ್ಕಿ ಹಾಕಿಕೊಂಡಿದ್ದು, ಸದರಿಯವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವ ವೇಳೆ ಸದರಿಯವರು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ದಾಖಲು:
     ಶ್ರೀಮಂಗಲ ಠಾಣಾ ಸಹಹದ್ದಿನ ಕುಮಟೂರು ಗ್ರಾಮದ ನಿವಾಸಿಗಳಾದ ಕಳ್ಳೆಂಗಡ ಪೂವಪ್ಪ ಹಾಗು ಅನಿತಾ ಎಂಬವರುಗಳು ದಿನಾಂಕ 20-11-2015 ರಂದು ಕುಮಟೂರು ಗ್ರಾಮದಲ್ಲಿರುವ ಕಳ್ಳೆಂಗಡ ಪೂವಪ್ಪನವರ ಮನೆಯಲ್ಲಿ ಮಹದೇವಿ ಮಸ್ತಿ ಮುಕ್ತಿ ಎಂಬ ಮಹಿಳೆ ಮೇಲೆ ಹಲ್ಲೆ ನೆಡೆಸಿದ್ದು ಅಲ್ಲದೆ ಆರೋಪಿ ಕಳ್ಳೆಂಗಡ ಪೂವಪ್ಪನವರು ಸದರಿ ಮಹದೇವಿಯವರ ಮೇಲೆ ಅತ್ಯಾಚಾರನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಮನೆ ಕಳವು, ಪ್ರಕರಣ ದಾಖಲು:
    ಮನೆಯಲ್ಲಿ ಯಾರೂ ಇಲ್ಲದೆ ಸಮಯದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಪೂಜಾ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಬಸವೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಎಸ್.ಎಸ್. ನಾಗರತ್ನ ಎಂಬವರ ಮನೆಯಲ್ಲಿ ದಿನಾಂಕ 20-11-2015 ರಂದು ಮನೆಯಲ್ಲಿ ಯಾರೂ ಇಲ್ಲದೆ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹೆಂಚುಗಳನ್ನು ತೆಗೆದು ಮನೆಯ ಒಳಗೆ ಪ್ರವೇಶ ಮಾಡಿ ದೇವರ ಕೋಣೆಯಲ್ಲಿದ್ದ ಪೂಜಾ ಸಾಮಾಗ್ರಿ ಹಾಗು ದೇವರ ವಿಗ್ರಹಕ್ಕೆ ಹಾಕಿದ್ದ ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.