Tuesday, November 24, 2015

ಮನುಷ್ಯ ಕಾಣೆ, ಪ್ರಕರಣ ದಾಖಲು:
     ಸುಮಾರು ಎರಡುವರೆ ವರ್ಷದ ಹಿಂದೆ ವ್ಯಾಪಾರಕ್ಕೆಂದು ಮಂಗಳೂರಿಗೆ ಹೋದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಶ್ರೀಮತಿ ಜುಬೇದ ಎಂಬವರ ಪತಿ ಹನೀಫ ಪ್ರಾಯ 39 ವರ್ಷ ಇವರು ರಾಣಿಪೇಟೆ ವ್ಯಾಪಾರ ವೃತ್ತಿ ಮಾಡಿಕೊಂಡಿದ್ದು, 2013 ನೇ ಮಾರ್ಚ್‌ ತಿಂಗಳಲ್ಲಿ ವ್ಯಾಪಾರಕ್ಕೆಂದು ಮಂಗಳೂರಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆಗೂ ಮನೆಗೆ ಬಾರದೆ ಕಾಣೆಯಾಗಿಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ವೆಂದು ಸದರಿ ಜುಬೇದರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ:
     ಮಾಟ ಮಂತ್ರ ಮಾಡಿರುವುದಾಗಿ ಆರೋಪಿಸಿ ವ್ಯಕ್ತಿ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಗಾಯಪಡಿಸದ ಘಟನೆ ಸೋಮವಾರಪೇಟೆ ಠಾಣೆಯ ರೇಂಜರ್ ಬ್ಲಾಕ್ ನಲ್ಲಿ ನಡೆದಿದೆ. ರೇಂಜರ್ ಬ್ಲಾಕ್ ನಲ್ಲಿ ವಾಸವಾಗಿರುವ ಫಿರ್ಯಾದಿ ಡಿ.ಪಿ. ದಿನೇಶ ಎಂಬವರು ದಿನಾಂಕ 23-11-2015 ರಂದು ಬೆಳಿಗ್ಗೆ 9.00 ಗಂಟೆಗೆ ತಮ್ಮ ಮನೆಯ ಹತ್ತಿರ ಬಾಗಿಲಿಗೆ ನೀರು ಹಾಕಿ ಸ್ವಚ್ಚಗೊಳಿಸುತ್ತಿರುವಾಗ ಆರೋಪಿ ನವೀನ ಎಂಬ ವ್ಯಕ್ತಿ ಅಲ್ಲಿಗೆ ಬಂದು ನೀನು ಎಲ್ಲಿಂದಲೋ ಏನೆಲ್ಲ ಮಾಟಮಂತ್ರ ಮಾಡಿಸಿ ಇಲ್ಲಿ ನೀನು ಕುಂಕುಮ ಎಲ್ಲಾ ಹಾಕುತ್ತೀಯ ಎಂದು ಅವಾಚ್ಯಶಬ್ದಗಳಿಂದ ಬೈದು ಏಕಾಏಕಿ ರಾಡಿನಿಂದ ಹೊಡೆದು ಗಾಯಗೊಳಿಸಿದ್ದು ಚಿಕಿತ್ಸೆ ಬಗ್ಗೆ ಸೋಮವಾರಪೇಟೆ ಸರಕಾರಿ ಆಸ್ಪತ್ರಗೆ ದಾಖಲಾಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.