Saturday, November 28, 2015

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

ಶನಿವಾರಸಂತೆ ಠಾಣಾ ಪಿ.ಎಸ್.ಐ. ರವಿಕಿರಣ್ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 26.11.2015 ರಂದು ಸಿಬ್ಬಂದಿಯೊಂದಿಗೆ ಶನಿವಾರಸಂತೆಯ ಅರಣ್ಯ ಕಚೇರಿಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ದಾಳಿ ಮಾಡಿ ಅಭಿಷೇಕ್ ಎಂಬವರು ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳನ್ನು ಟ್ರಾಕ್ಟರ್ ನಂ ಕೆ.ಎ-11-ಟಿ.ಎ-99 ರಲ್ಲಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಮಾಲು ಸಮೇತ ಆರೋಪಿಯನ್ನು ವಶಕ್ಕೆ ತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಪತಿಯಿಂದಲೇ ಪತ್ನಿ ಕೊಲೆ:

     ವಿರಾಜಪೇಟೆ ತಾಲೂಕು ಬೈಗೋಡು ಗ್ರಾಮದ ನಿವಾಸಿ ಮುಕ್ಕಾಟ್ಟೀರ ನಾಚಪ್ಪ, ರವರ ಲೈನ್ ಮನೆಯಲ್ಲಿ ವಾಸವಿರುವ ಗಣೇಶ ಎಂಬ ವ್ಯಕ್ತಿ ದಿನಾಂಕ 26-11-2015 ರಂದು ರಾತ್ರಿ ತನ್ನ ಪತ್ನಿ ಡಿಂಕಿಯನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ದು, ಪಿ.ಜೆ. ಬಸವ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ಲ್ಯಾಪ್ ಟಾಪ್ ಮೊಬೈಲ್ ಕಳವು:

    ಮಡಿಕೇರಿ ನಗರದ ಐಟಿಐ ಬಳಿ ವಾಸವಾಗಿರುವ ಪಿರ್ಯಾದಿ ಕು.ಅಕ್ಷಿತಾ ಟೀನಾ ರವರು ಅಲ್ಟೀಮೇಟ್ ಡ್ಯಾನ್ಸ್ ಅಕಾಡೆಮಿಯಲ್ಲಿ ನೃತ್ಯ ಶಿಕ್ಷಕಿಯಾಗಿದ್ದು, ದಿನಾಂಕ 22-10-2015 ರಂದು ಆಯುಧಪೂಜೆಯ ದಿವಸ ಗಾಂಧಿ ಮೈದಾನದಲ್ಲಿ ರಾತ್ರಿ ನೃತ್ಯ ಕಾರ್ಯಕ್ರಮ ನೀಡಲು ತೆರಳಿದ್ದು, ಸಮಯ ರಾತ್ರಿ 11.10 ಗಂಟೆಗೆ ತನ್ನ ಬಳಿ ಇದ್ದ ಲ್ಯಾಪ್ ಟಾಪ್, ಮೊಬೈಲ್ ಮತ್ತು ಇತರ ವಸ್ತುಗಳಿದ್ದ ಬ್ಯಾಗನ್ನು ಸ್ಟೇಜಿನ ಹಿಂಭಾಗ ಇಟ್ಟು, ಮುಂಭಾಗದಲ್ಲಿ ಮಕ್ಕಳ ಡ್ಯಾನ್ಸ್ ತಯಾರಿಗೆಂದು ಹೋಗಿ ವಾಪಾಸು ಬಂದು ನೋಡಿದಾಗ ಬ್ಯಾಗು ಕಾಣದೆ ಇದ್ದು, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಸದರಿ ಬ್ಯಾಗನ್ನು ಅವರಿಗೆ ಪರಿಚಯವಿರುವ ಮದನ್ ಮತ್ತು ಮಹೇಶರವರು ಕಳವು ಮಾಡಿಕೊಂಡು ಹೋಗಿರ ಬಹುದೆಂದು ಅನುಮಾನವಿರುವುದಾಗಿ ದಿನಾಂಕ 26-11-2015 ರಂದು ಕು: ಅಕ್ಷಿತಾ ಟೀನಾನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕುಡಿತದ ಅಮಲಿನಲ್ಲಿ ಮಹಿಳೆಯ ಆತ್ಮಹತ್ಯೆ:
     ಸಿದ್ದಾಪುರ ಠಾಣಾ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ವಾಸವಾಗಿರುವ ಬಿಡುವಂಡ ಬಿದ್ದಪ್ಪರವರ ಲೈನುಮನೆಯಲ್ಲಿ ವಾಸವಿರುವ ಫಿರ್ಯಾದಿ ಪಣಿ ಎರವರ ಚೋಮ ಎಂಬವರ ಹೆಂಡತಿ ಪ್ರಾಯ 55 ವರ್ಷದ ಕಮಲರವರಿಗೆ ಮದ್ಯಪಾನ ಮಾಡುವ ಚಟವಿದ್ದು ಯಾವುದೋ ವಿಚಾರದಲ್ಲಿ ಬೇಸರಗೊಂಡು ದಿನಾಂಕ 26-11-2015 ರಂದು ರಾತ್ರಿ ತಮ್ಮ ವಾಸದ ಮನೆಯ ಹತ್ತಿರದ ಕಾಫಿತೋಟದ ಕಾಫಿಗಿಡದ ಕೊಂಬೆಗೆ ವೇಲಿನಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.