Sunday, November 29, 2015

ಜೀವನದಲ್ಲಿ ಜಿಗುಪ್ಸೆ, ಉಪನ್ಯಾಸಕ ಆತ್ಮಹತ್ಯೆ:

      ಜೀವನದಲ್ಲಿ ಜಿಗುಪ್ಸೆಗೊಂಡು ಡೆಂಟಲ್ ಕಾಲೇಜಿನ ಉಪನ್ಯಾಸಕನೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ಫಿರ್ಯಾದಿ ಕೆ.ಎಸ್ ಭದ್ರಗಿರಿ ಎಂಬವರು ಹಾಲಿ ಬೆಂಗಳೂರಿನಲ್ಲಿ ಬಿ.ಎಸ್.ಎನ್.ಎಲ್. ನೌಕರರಾಗಿದ್ದು ಅವರ ಮಗ ಗಣೇಶಬಾಬು ಎಂಬವರು ವಿರಾಜಪೇಟೆ ಡೆಂಟಲ್ ಕಾಲೇಜಿನಲ್ಲಿ ಉಪನ್ಯಾಶಕನಾಗಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27-11-2015 ರಂದು ರಾತ್ರಿ ತಾವು ವಾಸವಾಗಿದ್ದ ವಿರಾಜಪೇಟೆ ನಗರದ ತಿಮ್ಮಯ್ಯ ಲೇಔಟ್ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ತಂದೆ ಕೆ.ಎಸ್. ಭದ್ರಗಿರಿ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕಾರಿಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಸವಾರನ ದುರ್ಮರಣ:

     ಬೈಕೊಂದು ಕಾರಿಗೆ ಡಿಕ್ಕಿಯಾಗಿ ಸವಾರ ಸಾವನಪ್ಪಿ ಹಿಂಬದಿ ಸವಾರ ಗಾಯಗೊಂಡ ಘಟನೆ ಕುಶಾಲನಗರದ ಕೂಡಿಗೆ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ. ದಿನಾಂಕ 28/11/15 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ಕುಶಾಲನಗರದ ಮುಳ್ಳುಸೋಗೆ ಗ್ರಾಮದ ನಿವಾಸಿ ಕೆ.ಟಿ. ಚಂದ್ರರಾಜು ಎಂಬವರ ಮಗ ಸುರೇಂದ್ರನು ತನ್ನ ಬಾಪ್ತು ಕೆಎ 12 ಜೆ 2310 ರ ಮೋಟಾರ್ ಸೈಕಲಿನ ಹಿಂಬದಿಯಲ್ಲಿ ತನ್ನ ಸ್ನೇಹಿತ ಗಿರೀಶ ಎಂಬಾತನನ್ನು ಕೂರಿಸಿಕೊಂಡು ಕುಶಾಲನಗರದಿಂದ ಕೂಡಿಗೆ ಕಡೆಗೆ ಹೋಗುವಾಗ್ಗೆ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಕೂಡುಮಂಗಳೂರು ಗ್ರಾಮದ ಕೃಷ್ಣಪ್ಪ ಎಂಬುವರ ಮನೆಯ ಮುಂದೆ ಮುಖ್ಯರಸ್ತೆಯಲ್ಲಿ ಕೆಎ 12- 8528 ರ ಇಂಡಿಕಾ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಸುರೇಂದ್ರನ ತಲೆ ಮತ್ತು ಶರೀರಕ್ಕೆ ತೀವ್ರ ತರಹದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಸವಾರನಿಗೂ ಗಾಯವಾಗಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೋಟದ ಶೆಡ್ಡಿನಿಂದ ಕಳುವಿಗೆ ಯತ್ನ, ಪ್ರಕರಣ ದಾಖಲು:

     ದಿನಾಂಕ: 28/11/2015 ರಂದು 3.15 ಗಂಟೆಗೆ ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಕೇರಿ ನಿವಾಸಿ ಮೇರಿ ಲ್ಯಾಂಡ್ ಸನ್ ಸೀನ್ ತೋಟದ ಮಾಲಿಕರಿಗೆ ಸೇರಿದ ತೋಟದ ಮನೆಯ ಹತ್ತಿರವಿರುವ ಶೆಡ್ಡಿನಲ್ಲಿರುವ ಕೆಲವು ಕಬ್ಬಣದ ಪೀಸುಗಳು ಮತ್ತು ಟ್ರಾಕ್ಟರ್ ನ ಬಿಡಿ ಭಾಗಗಳನ್ನು ಜೋಯಿಸನ್ ಕ್ರಿಸ್ತ ಮತ್ತು ಬಿಶನ್ ಜೋಶೆಫ್ ಎಂಬವರು ಕಳವು ಮಾಡಲು ಪ್ರಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರುತಿ ಓಮ್ನಿಗೆ ಕೆಎಸ್ಆರ್ ಟಿಸಿ ಬಸ್ಸು ಡಿಕ್ಕಿ ಇಬ್ಬರ ಸಾವು:

     ಕೆ.ಎಸ್.ಆರ್ .ಟಿ.ಸಿ ಬಸ್ಸು ಮಾರುತಿ ವ್ಯಾನಿಗೆ ಡಿಕ್ಕಿಯಾಗಿ ಇಬ್ಬರು ಸಾವನಪ್ಪಿ ವ್ಯಾನಿನಲ್ಲಿದ್ದ ಇತರರು ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಕಾಟಕೇರಿಯಲ್ಲಿ ನಡೆದಿದೆ. ಹಾಕತ್ತೂರು ಗ್ರಾಮದ ನಿವಾಸಿ ಹಂಸ ಎಂಬವರು ದಿನಾಂಕ 28-11-2015 ರಂದು ತಮ್ಮ ಅಣ್ಣ ಬಷೀರ್, ಹಾಗೂ ಅವರ ಹೆಂಡತಿ ಮಕ್ಕಳೊಂದಿಗೆ ಅವರ ಮಾರುತಿ ಓಮಿತಿ ವ್ಯಾನ್ ಸಂಖ್ಯೆ: ಕೆಎ-04 ಬಿ-5684 ರಲ್ಲಿ ಪುತ್ತೂರಿನಿಂದ ವಾಪಾಸ್ಸು ಹಾಕತ್ತೂರಿಗೆ ಬರುತ್ತಿದ್ದಾಗ ಮಡಿಕೇರಿ ಕಡೆಯಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸು (ನಂ: KA-11 F-0219) ಮಾರುತಿ ವ್ಯಾನ್‌ ಗೆ ಢಿಕ್ಕಿ ಪಡಿಯಾದ ಪರಿಣಾಮ ವ್ಯಾನ್ ನಲ್ಲಿದ್ದ ಎಲ್ಲರು ಗಾಯಗೊಂಡು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ನಂತರ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಹಂಸ ಹಾಗೂ ಮೊಹಮ್ಮದ್ ರಾಶಿಕ್ ರವರು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ:

     ಮಡಿಕೇರಿ ತಾಲೂಕು ಕುದುರೆಪಾಯ ಎಂಬಲ್ಲಿ ವಾಸವಾಗಿರುವ ಬೊಳ್ಳೂರು ತಿಮ್ಮಪ್ಪ ಎಂಬವರ ಪತ್ನಿ ಶ್ರೀಮತಿ ಲಲಿತ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27-11-2015 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಪತಿ ಬೊಳ್ಳೂರು ತಿಮ್ಮಪ್ಪನವವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರನ್ನು ಹಿಂದಕ್ಕೆ ಪಡೆಯುವಂತೆ ವ್ಯಕ್ತಿಗೆ ಬೆದರಿಕೆ:

     ದಿನಾಂಕ 20-11-2015 ರಂದು ಸಮಯ 3-30 ಪಿ.ಎಂಗೆ ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ಎಂ.ಇ.ಅಬ್ಬಾಸ್ ರವರು ತಮ್ಮ ಸಂಗಡಿಗರಾದ ಶಿವಕುಮಾರ್, ಮುಬರಾಕ್ ಮತ್ತು ರಜಕ್ ರವರೊಂದಿಗೆ ಕುಶಾಲನಗರದ ಬಸ್ಸು ನಿಲ್ದಾಣಕ್ಕೆ ನಡೆದುಕೊಂಡು ಹೋಗುವಾಗ ನೊಂದಣಿಯಾಗದ ಮಾರುತಿ ಓಮಿನಿಯಲ್ಲಿ 5 ಮಂದಿ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ವಿವೇಕ್ ಪೂವಯ್ಯನವರ ಮೇಲೆ ನೀಡಿರುವ ದೂರನ್ನು ವಾಸಾಸು ಪಡೆಯಬೇಕು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನೀನು ದೂರು ವಾಪಾಸು ಪಡೆಯದಿದ್ದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:
      ಶ್ರೀಮಂಗಲ ಠಾಣಾ ಸರಹದ್ದಿನ ತೆರಾಲು ಗ್ರಾಮದ ನಿವಾಸಿ ಪಣಿಎರವರ ಪಪ್ಪಣ್ಣ ಎಂಬವರ ತಂದೆ ಬೊಳ್ಳಿ ಎಂಬ ವ್ಯಕ್ತಿ ದಿನಾಂಕ 27-11-2015 ರಂದು ರಾತ್ರಿ ಯಾವುದೋ ವಿಚಾರದಲ್ಲಿ ನೊಂದು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಫಿರ್ಯಾದಿ ಪಪ್ಪಣ್ಣನವರ ದೂರಿನನ್ವಯ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.