Monday, November 30, 2015

ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ದಾಖಲು:

      ವ್ಯಕ್ತಿಯೊಬ್ಬರು ಮಹಿಳೆಯೊಬ್ಬರ ಕೈಹಿದು ಎಳೆದಾಡಿ ದೌರ್ಜನ್ಯವೆಸಗಿದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಕಿರಗೂರು ಗ್ರಾಮದಲ್ಲಿ ನಡೆದಿದೆ. ಪಿರ್ಯಾದಿ ಶ್ರೀಮತಿ ಪಂಜರಿ ಎರವರ ಮಾರೆ @ ಭಾಗ್ಯ ತಮ್ಮ ಗಂಡನೊಂದಿಗೆ ಕಿರುಗೂರು ಗ್ರಾಮದಲ್ಲಿ ಚೆಪ್ಪುಡೀರ ರೋಶನ್ @ ದಿಲೀಪ್ ಎಂಬವರ ಲೈನ್ ಮನೆಯಲ್ಲಿ ವಾಸಮಾಡಿಕೊಂಡಿದ್ದು, ಸದರಿ ಚೆಪ್ಪುಡೀರ ರೋಶನ್ @ ದಿಲೀಪ್ ರವರ ತೊಟದಲ್ಲಿ ಕೂಲಿಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 28/11/2015 ರಂದು ಶ್ರೀಮತಿ ಪಂಜರಿ ಎರವರ ಮಾರೆಯವರು ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವಾಗ ಆರೋಪಿ ಚೆಪ್ಪುಡೀರ ರೋಶನ್ @ ದಿಲೀಪ್ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಶ್ರೀಮತಿ ಪಂಜರಿ ಎರವರ ಮಾರೆಯವರ ಕೈಹಿಡಿದು ತೋಟದೊಳಗೆ ಎಳೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೋಟಾರ್ ಸೈಕಲ್ ಅವಘಡ ಸವಾರನಿಗೆ ಗಾಯ:

     ದಿನಾಂಕ: 29-11-15ರಂದು ಸಮಯ ಸಂಜೆ 6-45ಗಂಟೆಗೆ ವಿರಾಜಪೇಟೆ ತಾಲೂಕು ಪಾಲಿಬೆಟ್ಟದಲ್ಲಿರುವ ಕೂರ್ಗ್ ಕ್ಲಿಪ್ಸ್ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿರುವ ಡ್ಯಾನಿಯಲ್ ತಮ್ಮ ಮೋಟಾರ್ ಸೈಕಲ್ ಕೆಎ.05.ಹೆಚ್.ಎನ್.2780 ಪಲ್ಸರ್ ಬೈಕ್ನಲ್ಲಿ ಪಾಲಿಬೆಟ್ಟದಿಂದ ಅಮ್ಮತ್ತಿ ಕಡೆಗೆ ಬರುತ್ತಿದ್ದಾಗ ಮುಕ್ಕಾಟಿಕೊಪ್ಪಲು ಅಮ್ಮತ್ತಿ ಎಂಬಲ್ಲಿ ತಲುಪುವಾಗ್ಗೆ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಹೋಗಿ ಗಾಯಗೊಂಡಿದ್ದು, ಈ ಸಂಬಂಧ ಮುಕ್ಕಾಟಿಕೊಪ್ಪಲು ಅಮ್ಮತ್ತಿ ನಿವಾಸಿ ಪಿ.ಸಿ.ಸುರೇಶ್ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯ ಆತ್ಮಹತ್ಯೆ:

     ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ವಾಸಿ ಹಾಲಿ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಿಗ್ಗಾಲು ಗ್ರಾಮದಲ್ಲಿ ನೆಲಸಿ ಕೂಲಿ ಕೆಲಸ ಮಾಡಿಕೊಂಡಿರುವ ಮಾದೇಶ ಎಂಬ ವ್ಯಕ್ತಿ ಹೊಟ್ಟೆನೋವಿನಿಂದ ಬಳಲುತ್ತಿದ್ದು ಇದರಿಂದ ನೊಂದು ದಿನಾಂಕ 29-11-2015 ರಂದು ತಾನು ವಾಸವಾಗಿದ್ದ ಲೈನು ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೈಕ್ ಅವಘಡ ವ್ಯಕ್ತಿಯ ಸಾವು,

    ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅತ್ತಿಮಂಗಲ, ಅಭ್ಯತ್ ಮಂಗಲ ಎಂಬಲ್ಲಿ ದಿನಾಂಕ 10-11-2015 ರಂದು ಸಂಜೆ ನಲ್ಲತಂಬಿ ಎಂಬ ವ್ಯಕ್ತಿ ತಮ್ಮ ಬಾಪ್ಸು ಟಿ.ವಿ.ಎಸ್. ಬೈಕ್ ನಲ್ಲಿ ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಬೈಕ್ ಅಪಘಾತಕ್ಕೀಡಾಗಿ ಸದರಿ ನಲ್ಲತಂಬಿಯವರು ಸಾವನಪ್ಪಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.