Thursday, December 31, 2015

ವಿನಾಕಾರಣ ವ್ಯಕ್ತಿ ಯ ಮೇಲೆ ಮೂವರಿಂದ ಹಲ್ಲೆ:

     ದಿನಾಂಕ 30-12-2015 ರಂದು ಸಮಯ 18.30 ಗಂಟೆಗೆ ಫಿರ್ಯಾದಿ ಸೋಮವಾರಪೇಟೆ ತಾಲೂಕು, ಚೌಡ್ಲು ಗ್ರಾಮದ ನಿವಾಸಿ ಸಿ.ಜೆ. ಗಣೇಶ ಎಂಬವರು ತಮ್ಮ ಮನೆಯ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಸಂಪತ್ ಎಂಬುವವರು ವಿನಾಕಾರಣ ಬೋಡ್ರಾಸ್ ಕಲ್ಲಿನಿಂದ ಬಲ ಭುಜಕ್ಕೆ ಹೊಡೆದು ನೋವುಪಡಿಸಿದ್ದು, ಅಲ್ಲದೆ ಜಾನಕಿ ಎಂಬಾಕೆ ಅವರ ಮನೆಯಿಂದ ಒನಕೆಯನ್ನು ತಂದು ಹಲ್ಲೆ ನಡೆಸಿದ್ದು ಅಲ್ಲದೆ ಕೀರ್ತಿ ಎಂಬಾತ ಕೈಯಿಂದ ಬೆನ್ನಿಗೆ ಹೊಡೆದು ನೋವುಂಟು ಮಾಡಿರುತ್ತಾನೆಂದು ಫಿರ್ಯಾದಿ ಸಿ.ಜೆ. ಗಣೇಶ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ನೇಣುಬಿಗಿದುಕೊಂಡು ಮಾನಸಿಕ ಅಸ್ವಸ್ಥನ ಆತ್ಮಹತ್ಯೆ:
     ಜೀವನದಲ್ಲಿ ಜಿಗುಪ್ಸೆಗೊಂಡ ಮಾನಸಿಕ ಅಸ್ವಸ್ಥನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ನಗರದ ಮಹದೇವಪೇಟೆಯಲ್ಲಿ ನಡೆದಿದೆ. ಶ್ರೀಮತಿ ಅಪಸತ್ ರವರು ಮಹದೇವಪೇಟೆ ರಸ್ತೆಯ ಕೊನೆಯಲ್ಲಿರುವ ಯೋಗೇಂದ್ರನಾಥ್ ರವರ ಔಟ್ ಹೌಸ್ ನಲ್ಲಿ ಕಳೆದ 4 ವರ್ಷಗಳಿಂದ ಸಂಸಾರದೊಂದಿಗೆ ವಾಸವಾಗಿರುತ್ತಾರೆ. ಪತಿ ಮೊಹಮ್ಮದ್ ರವರಿಗೆ ಮಧ್ಯಪಾನ ಮಾಡುವ ಅಭ್ಯಾಸ ಇದ್ದು, ಇತ್ತೀಚೆಗೆ ಮಹಮ್ಮದ್ ರವರು ಮಧ್ಯಪಾನ ಹೆಚ್ಚಾಗಿ ಬುದ್ದಿಬ್ರಮಣೆ ಗೊಂಡಿದ್ದು, ದಿನಾಂಕ 30-12-2015 ರಂದು ಸದರಿ ಮಹಮ್ಮದ್ ರವರು ತಾನು ವಾಸವಾಗಿರುವ ಸ್ನಾನದ ಮನೆಯ ಕೌಕೋಲಿಗೆ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ನೀರಿನ ವಿಚಾರದಲ್ಲಿ ಜಗಳ, ವ್ಯಕ್ತಿ ಮೇಲೆ ಹಲ್ಲೆ:

          ನೀರು ಹರಿಯಲು ಬಿಟ್ಟ ವಿಚಾರದಲ್ಲಿ ಜಗಳ ಏರ್ಪಟ್ಟು, ಇಬ್ಬರು ವ್ಯಕ್ತಿಗಳು ವ್ಯಕ್ತಿಯೊಬ್ಬರ ಮೇಲೆ ರಾಡಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಬಳಗುಂದ ಗ್ರಾಮದಲ್ಲಿ ನಡೆದಿದೆ. ದಿನಾಂಕ 30-12-2015 ರಂದು ಮದ್ಯಾಹ್ನ ಸಮಯ 15.00 ಗಂಟೆಗೆ ಫಿರ್ಯಾದಿ ಬಳಗುಂದ ಗ್ರಾಮದ ನಿವಾಸಿ ಎಸ್.ಎನ್.ಶಿವಲಿಂಗಪ್ಪ ರವರು ತಮ್ಮ ಮನೆಯಲ್ಲಿ ಊಟ ಮಾಡಿಕೊಂಡಿರುವಾಗ್ಗೆ, ಆರೋಪಿಗಳಾದ ಬಸವಣ್ಣ ಹಾಗು ಈರಪ್ಪ ಎಂಬವರು ಅಲ್ಲಿಗೆ ಬಂದು ನೀನು ಏಕೆ ಕೆಳಗೆ ಹರಿಯಲು ನೀರು ಬಿಡುತ್ತೀಯಾ, ಎಂದು ಜಗಳ ತೆಗೆದು ಅವ್ಯಾಚ್ಯ ಶಬ್ದಗಳಿಂದ ಬೈಯ್ದು ಫಿರ್ಯಾದಿಯವರ ಮೇಲೆ ರಾಡಿನಿಂದ ಹಲ್ಲೆ ನಡೆಸಿ ನೋವು ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, December 29, 2015

ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಹತ್ಯೆ
                   ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ಕುಟ್ಟ ಬಳಿಯ ಕೋತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 27-12-2015 ರಂದು ಕೋತೂರು ಗ್ರಾಮದ ಬೊಮ್ಮಾಡು ಹಾಡಿಯ ನಿವಾಸಿ ಜೇನು ಕರುಬರ ಮಾದೇವಿ ಎಂಬವರ  ಮಗಳಾದ ಪೂಜಾಳನ್ನು ಅದೇ ಹಾಡಿಯ ನಿವಾಸಿ ನಾಗಪ್ಪನ ಮಗ ಮುತ್ತಣ್ಣನು ಅವರ ಮನೆಗೆ ಕರೆದುಕೊಂಡು ಹೋಗಿದ್ದು, ಮಾದೇವಿಯ ಗಂಡ ಕರಿಯಣ್ಣನು ನಾಗಪ್ಪನ ಮನೆಯಿಂದ ಪೂಜಾಳನ್ನು ಕರೆದುಕೊಂಡು ಬರುವುದಾಗಿ ಹೇಳಿ ಸಂಜೆ ವೇಳೆ ಮಗ ಮಾದೇಶನನ್ನು ಕರೆದುಕೊಂಡು ನಾಗಪ್ಪನ ಮನೆಗೆ ಹೋದರೆನ್ನಲಾಗಿದೆ. ನಂತರ ಕೆಲ ಸಮಯದ ನಂತರ ನಾಗಪ್ಪನ ಮನೆಯಲ್ಲಿ ಕರಿಯಣ್ಣ ಕಿರುಚಿದ ಶಬ್ದ ಕೇಳಿ ಮಾದೇವಿಯವರು ಕೂಡಲೆ ನಾಗಪ್ಪನ ಮನೆಗೆ ಹೋದಾಗ ಕರಿಯಣ್ಣನೊಂದಿಗೆ ನಾಗಪ್ಪ, ಬೊಳ್ಳ, ದಾದು ಜಗಳ ಮಾಡುತ್ತಿದ್ದು ಮೂವರೂ ಸೇರಿ ಕಬ್ಬಿಣದ ಪೈಪ್‌ ಮತ್ತು ದೊಣ್ಣೆಯಿಂದ ಕರಿಯಣ್ಣನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹೊರಟು ಹೋಗಿದ್ದು  ಕೂಡಲೇ ಮಾದೇವಿಯವರು ಅವರ ಸಾಹುಕಾರರಾದ ಜಾಜಿರವರಿಗೆ ವಿಷಯ ತಿಳಿಸಿದ ಮೇರೆ ಅವರು ಜೀಪನ್ನು ಕಳುಹಿಸಿಕೊಟ್ಟಾಗ ಮಾದೇವಿಯವರು ಕರಿಯಣ್ಣನನ್ನು ಜೀಪಿನಲ್ಲಿ  ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು  ದಿನಾಂಕ 28-12-2015 ರಂದು ಬೆಳಿಗ್ಗೆ ಕರಿಯಣ್ಣನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                    ಜಗಳ ಬಿಡಿಸಲು ಹೋದ ಇಬ್ಬರಿಗೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ನಗೆದಲ್ಲಿ ನಡೆದಿದೆ. ಸೋಮವಾರಪೇಟೆ ಬಳಿಯ ಕಾಗಡಿಕಟ್ಟೆ ನಿವಾಸಿ ಉಮೈರಾ ಎಂಬಾಕೆಯು ದಿನಾಂಕ 28/12/2015 ರಂದು ಆಕೆಯ ಭಾವನ ಪತ್ನಿ ಜುಬೈದಾ ಮತ್ತು ಮಕ್ಕಳೊಂದಿಗೆ ಉಬೈದ್ ಎಂಬವರ ಕೆಎ-05-ಎಂ-ಡಿ-3476 ರ ಕಾರಿನಲ್ಲಿ ಸೋಮವಾರಪೇಟೆ ಸಂತೆಗೆ ಬಂದಿದ್ದು  ದಿನಸಿ ಸಾಮಗ್ರಿಗಳನ್ನು ತೆಗೆದುಕೊಳ್ಳುವ ಸಲುವಾಗಿ ನಗರದ ಕಾವೇರಿ ಸ್ಟೋರ್ ಗೆ ಹೋಗಲು ಕಾರಿನಲ್ಲಿ ಹೋಗುತ್ತಿರುವಾಗ  ಕಾವೇರಿ ಸ್ಟೋರ್ ಹತ್ತಿರವಿರುವ ಪೆಟ್ರೋಲ್ ಬಂಕ್ ಬಳಿ ರಸ್ತೆಯಲ್ಲಿ ತುಂಬ ಜನರು ನಿಂತಿದ್ದು ಉಮೈರಾ ಮತ್ತು ಉಬೈದ್ ರವರು ಇಳಿದು ಹೋಗಿ ನೋಡಿದಾಗ ಅವರ ಮನೆಯ ಪಕ್ಕದ ವಾಸಿ ಸನಾಶ್ ಎಂಬ ಹುಡುಗನಿಗೆ ಕೆಲವರು ಹೊಡೆಯುತ್ತಿದ್ದು ಉಮೈರಾ ಮತ್ತು ಉಬೈದ್ ರವರು ಬಿಡಿಸಲು ಹೋದಾಗ ಅವರಲ್ಲಿ ಒಬ್ಬ ಉಮೈರಾರವರನ್ನು ಬೈದು ಆಕೆಯ ಕುತ್ತಿಗೆಗೆ ಕೈಹಾಕಿ ಬಟ್ಟೆಯನ್ನು ಹಿಡಿದು ಎಳೆದು ಆಕೆಯನ್ನು ತಳ್ಳಿದ್ದಲ್ಲದೆ ಉಬೈದ್ ರವರಿಗೆ ಸಹ ದೊಣ್ಣೆಯಿಂದ ಬೆನ್ನಿಗೆ ಹೊಡೆದಿದ್ದು ಆಗ  ರವಿ ಎಂಬುವವರು ಬಂದು ಅವರೆಲ್ಲರನ್ನು ಸಮಾಧಾನ ಮಾಡಿದರು. ನಂತರ ಉಮೈರಾ ಮತ್ತು ಉಬೈದ್ ರವರು ಕಾರಿನ ಹತ್ತಿರ ಬಂದು ಕಾರಿನಲ್ಲಿ ಕುಳಿತುಕೊಂಡಾಗ ಒಬ್ಬ ವ್ಯಕ್ತಿ ಬಂದು ಕಾರಿನ ಮುಂದಿನ ಬಾನೆಟ್ ಗೆ ದೊಣ್ಣೆಯಿಂದ ಹೊಡೆದು ಜಖಂಗೊಳಿಸಿ ಆತನ ಹೆಸರು ಸಂತೋಷ್ ಎಂಬುದಾಗಿಯೂ ಆತನು ಏನು ಮಾಡಿದರೂ ಸೋಮವಾರಪೇಟೆಯಲ್ಲಿ ಕೇಳುವರು ಯಾರು ಇಲ್ಲ ಎಂಬುದಾಗಿ ಹೇಳಿದ್ದು ನಂತರ ಉಮೈರಾರವರು ಅವರ ಬಟ್ಟೆಯನ್ನು ಸರಿ ಮಾಡಿಕೊಳ್ಳುವಾಗ ಆಕೆಯ ಕುತ್ತಿಗೆಯಲ್ಲಿದ್ದ ಸರ ಗಲಾಟೆಯಲ್ಲಿ ಬಿದ್ದು ಹೋಗಿರುವುದು ತಿಳಿದಿರುತ್ತದೆ. ನಂತರ ವಿಚಾರಿಸಿದಾಗ ಸಂತೋಷ್‌ ಮತ್ತು ಹರ್ಷಿತ್‌ ಎಂಬವರು ಉಮೈರಾ ಮತ್ತು ಉಬೈದ್‌ರವರ ಮೇಲೆ ಹಲ್ಲೆ ನಡೆಸಿದವರೆಂದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ತೊಟಕ್ಕೆ ಅಕ್ರಮ ಪ್ರವೇಶ, ಬೆಳೆ ಹಾನಿ
               ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾಫಿಯನ್ನು ಕುಯ್ದು ಹಾನಿಗೊಳಿಸಿದ ಘಟನೆ ಸುಂಟಿಕೊಪ್ಪ ಬಳಿಯ ಗರಗಂದೂರು ಗ್ರಾಮದಲ್ಲಿ ನಡೆದಿದೆ. ಸುಂಟಿಕೊಪ್ಪ ನಿವಾಸಿ ಕೆ.ಎಂ.ಇಬ್ರಾಹಿಂ ಎಂಬವರು ಗರಗಂದೂರು ಗ್ರಾಮದ ಕೆ.ಎಂ.ಲಕ್ಷ್ಮಣ ಎಂಬವರಿಂದ 24.03.1995 ರಲ್ಲಿ 20 ಎಕರೆ ಕಾಫಿ ತೋಟ ಖರೀದಿ ಮಾಡಿ ಅದರ ಬಾಪ್ತು ಕ್ರಯ ರೂ 8.50 ಲಕ್ಷದ ಪೈಕಿ ರೂ.8.35 ಲಕ್ಷ ಪಾವತಿಸಿದ್ದು ಇನ್ನು ಉಳಿದ 15,000 ರೂ.ಗಳನ್ನು ನೋಂದಣಿ ಕಾಲಕ್ಕೆ ನೀಡುವಂತೆ ಒಪ್ಪಂದವಾಗಿದ್ದು ಹಾಲಿ ಕಾಫಿ ತೋಟವು ಕೆ.ಎಂ.ಇಬ್ರಾಹಿಂರವರ ಸ್ವಾಧಿನದಲ್ಲಿದ್ದು  ದಿನಾಂಕ 28.12.2015 ರಂದು ಬೆಳಿಗ್ಗೆ ಲಕ್ಷ್ಮಣರವರು ಕೆ.ಎಂ.ಇಬ್ರಾಹಿಂದರವರ ಸ್ವಾಧೀನದಲ್ಲಿರುವ ಕಾಫಿ ತೋಟಕ್ಕೆ ತಮ್ಮ 10 ಜನ ಕಾರ್ಮಿಕರೊಂದಿಗೆ ಅಕ್ರಮ ಪ್ರವೇಶ ಮಾಡಿ ಕಾಫಿ ಫಸಲನ್ನು ಕುಯ್ಯುತ್ತಿರುವುದಾಗಿ ಕೆ.ಎಂ.ಇಬ್ರಾಹಿಂರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್ಸಿಗೆ ಬೈಕು ಡಿಕ್ಕಿ
                ಬಸ್ಸಿಗೆ ಬೈಕೊಂದು ಡಿಕ್ಕಿಯಾದ ಘಟನೆ ವಿರಾಜಪೇಟೆ ಬಳಿಯ ತೋರ ಗ್ರಾಮದಲ್ಲಿ ನಡೆದಿದೆ. ದಿನಾಂಕ: 28-12-15ರಂದು ಕೆಎ-09-ಎಫ್-4174ರ ಕೆ.ಎಸ್‌.ಆರ್‌.ಟಿ.ಸಿ ಬಸ್ಸನ್ನು ಅದರ ಚಾಲಕ ಎಂ.ಎನ್‌. ಜಗದೀಶ್‌ ಎಂಬವರು ಚಾಲಿಸಿಕೊಂಡು ಮೈಸೂರಿನಿಂದ ಹೊರಟು ವಿರಾಜಪೇಟೆಗೆ ತಲುಪಿ ಅಲ್ಲಿಂದ ಹೆಗ್ಗಳಕ್ಕಾಗಿ ತೋರಕ್ಕೆ ಹೋಗುತ್ತಿರುವಾಗ ತೋರ ಗ್ರಾಮದ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಕೆಎಲ್-59-ಎ-7380ರ ಮೋಟಾರ್ ಬೈಕ್ ನ ಚಾಲಕನು ಮೋಟಾರ್ ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಜಗದೀಶ್‌ರವರು ಚಾಲನೆ ಮಾಡಿಕೊಂಡು ಬರುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಚಾಲಕ ಹಾರಿ ಬಸ್ಸಿನ ಗ್ಲಾಸ್ ಗೆ ತಾಗಿ ಗ್ಲಾಸ್ ಒಡೆದು ಹೋಗಿದ್ದು ಮೋಟಾರ್ ಬೈಕ್ ನ ಚಾಲಕನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಯುವತಿಯ ಮೇಲೆ ಅತ್ಯಾಚಾರ.
                ಯುವತಿಯೊಬ್ಬಳನ್ನು ನಂಬಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ. ಶನಿವಾರಸಂತೆ ಬಳಿಯ ಗೋಪಾಲಪುರದ ನಿವಾಸಿ ಕೃಷ್ಣಪ್ಪ ಎಂಬವರ ಮಗಳು ನಳಿನಿ ಎಂಬಾಕೆ ಶನಿವಾರಸಂತೆಯ ಪಾದರಕ್ಷೆ  ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ 24/12/2015ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋಗಲು ಬಸ್‌ ಕಾಯುತ್ತಿರುವಾಗ ಆಕೆಗೆ ಪರಿಚಯವಿರುವ ಮಾದೇಗೋಡು ಗ್ರಾಮದ ರಿಕ್ಷಾ ಚಾಲಕ ಮಂಜು ಎಂಬಾತನು ಬಂದು ರಿಕ್ಷಾ ನಿಲ್ಲಿಸಿ ದೇವಸ್ಥಾನಕ್ಕೆ ಹೋಗಲು ಕರೆದು ಆಕೆ ನಿರಾಕರಿಸಿದಾಗ ಬಲವಂತವಾಗಿ ಆಕೆಯನ್ನು ರಿಕ್ಷಾಕ್ಕೆ ಹತ್ತಿಸಿಕೊಂಡು ನಂತರ ಆಕೆಯನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಅಲ್ಲಿ ಮಂಜುವಿನ ಭಾವನ ಮನೆಯಲ್ಲಿ ತಂಗಿದ್ದು ಅಲ್ಲಿದ್ದ ಮೂರು ದಿನಗಳ ಕಾಲ ಆಕೆಯ ಮೇಲೆ ಲೈಂಗಿಕ ಅತ್ಯಾಚಾರವೆಸಗಿದ್ದು ನಂತರ ದಿನಾಂಕ 27/122015ರಂದು ಬೆಂಗಳೂರಿನಿಂದ ಕರೆದುಕೊಂಡು ಬಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಆಕೆಯನ್ನು ಶನಿವಾರಸಂತೆಗೆ ಹೋಗುವಂತೆ ಹೇಳಿ ಆತನು ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Monday, December 28, 2015

ಹಣದ ವಿಚಾರ, ವ್ಯಕ್ತಿಯ ಮೇಲೆ ಹಲ್ಲೆ
                      ಹಣದ ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಬಳಿಯ ಕೂತಿ ಗ್ರಾಮದಲ್ಲಿ ನಡೆದಿದೆ. ಕೂತಿ ಗ್ರಾಮದ ನಿವಾಸಿ ಕೆ..ಜಿ.ಪ್ರವೀಣ ಮತ್ತು ಸುಧಾಕರ್ ಎಂಬವವರು ಕೂಲಿ ಕೆಲಸಕ್ಕೆ ಅದೇ ಗ್ರಾಮದ ಕುಟ್ಟಪ್ಪರವರ ಮನೆಗೆ ಹೋಗಿದ್ದು ದಿನಾಂಕ 27/12/2015 ರಂದು ಸಂಜೆ ಸಮಯ ಇವರಿಬ್ಬರಿಗೂ ಕೂಲಿ ಹಣದ ವಿಚಾರದಲ್ಲಿ ಕೂತಿ ಗ್ರಾಮದ ಬಸ್ಸು ತಂಗುದಾಣದಲ್ಲಿ ಮಾತಿಗೆ ಮಾತು ಬೆಳೆದಿದ್ದು ನಂತರ ಸುಧಾಕರ್‌ರವರು ಪ್ರವೀಣರವರ ಮನೆಯ ಹತ್ತಿರ ಹೋಗಿ ಅವರೊಂದಿಗೆ ಜಗಳ ತೆಗೆದು ಹಂಚಿನ ಚೂರಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ವಿದ್ಯುತ್‌ ಹರಿದು ಮಹಿಳೆಯ ಸಾವು
                        ವಿದ್ಯುತ್‌ ಹರಿದು ಕೂಲಿ ಕಾರ್ಮಿಕ ಮಹಿಳೆಯೊಬ್ಬರು  ಸಾವಿಗೀಡಾಗಿರುವ ಘಟನೆ ಶ್ರೀಮಂಗಲ ಬಳಿಯ ಈಸ್ಟ್‌ ನೆಮ್ಮಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 27/12/15 ರಂದು ಅಸ್ಸಾಮಿನಿಂದ ಬಂದು ಈಸ್ಟ್‌ ನೆಮ್ಮಲೆ ಗ್ರಾಮದ ಮಾಣಿರ ಕಾಳಯ್ಯನವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ನೌಷಾದ್‌ ಮತ್ತು  ಅವರ ಪತ್ನಿ ಮಾನಿಕ್ ಜಾನ್ ಹಾಗೂ ಆಂಶುದ್ದಿನ್ ಎಂಬವರುಗಳು ಸೇರಿ ಕಾಳಯ್ಯನವರ ಕಾಫಿ ತೋಟದಲ್ಲಿ ಅಡಿಕೆ ಮರದ ಕಾಯಿಗಳನ್ನು ಕಬ್ಬಿಣದ ಜಲ್ಲೆಯಿಂದ ಕುಯ್ಯುತ್ತಿರವಾಗ ನೌಷಾದ್‌ರವರು ಹಿಡಿದಿದ್ದ ಕಬ್ಬಿಣದ ಜಲ್ಲೆ ಆಯ ತಪ್ಪಿ ಪಕ್ಕದಲ್ಲೇ ಹರಿದು ಹೋಗಿದ್ದ 11 ಕೆ ವಿ ವಿದ್ಯುತ್ ಲೈನು ಮೇಲೆ ಬಿದ್ದಿದ್ದು ಕಬ್ಬಿಣದ ಜಲ್ಲೆಗೆ ವಿದ್ಯುತ್ ಹರಿದ ಪರಿಣಾಮ ನೌಷಾದ್‌ರವರ ಕೈ, ಸೊಂಟ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು ಅವರು ಕೂಗಿಕೊಂಡು ಬಿದ್ದಿದ್ದು ಅವರ ಕೂಗಾಟವನ್ನು ಕೇಳಿದ ಪತ್ನಿ ಮಾನಿಕ್ ಜಾನ್ ಓಡಿ ಬಂದು ವಿದ್ಯುತ್ ಸಂಪರ್ಕದಲ್ಲಿದ್ದ ಕಬ್ಬಿಣದ ಜಲ್ಲೆಯನ್ನು ಮುಟ್ಟಿದ್ದರಿಂದ ವಿದ್ಯುತ್ ಶಾಕ್ ಹೊಡೆದು ಕೈ, ಮುಖ ಮುಂತಾದ ಕಡೆ ಸುಟ್ಟ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುವುವದಾಗಿದೆ. ನಂತರ ನೌಷಾದ್‌ರವರನ್ನು ತೋಟದ ಮಾಲೀಕರ ಮಗ ರಾಣಾರವರು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆತಂದು ತುರ್ತು ನಿಗಾಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯು ಮೇಲೆ ಹಲ್ಲೆ.
                  ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಹಲ್ಲೆ ಮಾಡಿದ ಘಟನೆ ಶನಿವಾರಸಂತೆ ಹೋಬಳಿಯ ಕೊಡ್ಲಿಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 24/12/2015ರಂದು ನೀರುಗುಂದ ನಿವಾಸಿಯಾದ ಎನ್‌.ಬಿ.ಉಮೇಶ್‌ ಎಂಬವರು ಅವರ ತಮ್ಮ ನೀಲಕಂಠರವರೊಮದಿಗೆ ಕೊಡ್ಲಿಪೇಟೆ ನಗರದ ಬ್ರಾಂದಿ ಅಂಗಡಿ ಒಂದರಲ್ಲಿ ಮದ್ಯಪಾನ ಮಾಡಲೆಂದು ಹೋಗಿದ್ದು ಆ ಸಮಯದಲ್ಲಿ ಅಲ್ಲಿದ್ದ ಉಮೇಶ್‌ರವರ ತಂಗಿಯ ಗಮಡ ಆನಂದ ಮತ್ತು ಆತನ ತಮ್ಮ ದಿನೇಶ್‌ರವರು ಆನಂದನ ಪತ್ನಿ ಪುಷ್ಪಳು ಆನಂದನನ್ನು ತೊರೆದು ಹೋಗಲು ಉಮೇಶ್‌ರವರೇ ಕಾರಣವೆಂದು ಆರೋಪಿಸಿ ಜಗಳ ತೆಗೆದು ಅಂಗಡಿಯ ಮೇಜಿನ ಮೇಲಿದ್ದ ಬಿಯರ್‌ ಬಾಟಲಿಯೀಮದ ಇಬ್ಬರೂ ಉಮೇಶ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, December 27, 2015

ಜೀಪು ಕಳವು ಪ್ರಕರಣ
                    ಮನೆಯ ಮುಂದೆ ನಿಲ್ಲಿಸಿದ್ದ ಜೀಪನ್ನು ಕಳವು ಮಾಡಿರುವ ಪ್ರಕರಣ ಮಡಿಕೇರಿ ಬಳಿಯ ಇಬ್ನಿವಳವಾಡಿ ಗ್ರಾಮದಲ್ಲಿ ನಡೆದಿದೆ.ಇಬ್ನಿವಳವಾಡಿ ಗ್ರಾಮದ ನಿವಾಸಿ ಅಬೂಬಕರ್‌ ಎಂಬವರ ತಮ್ಮ 2 ವರ್ಷಗಳ ಹಿಂದೆ ಮಂಗಳೂರಿನ ಜುಹಾರ ಎಂಬುವವರಿಂದ ಕೆಎ-12-ಎ-0313 ರ ಪಿಕ್ ಅಪ್ ಜೀಪನ್ನು ಖರೀದಿ ಮಾಡಿದ್ದು, ಜೀಪನ್ನು ಗ್ರಾಮದಲ್ಲೆ ಬಾಡಿಗೆಗೆ ಓಡಿಸುತ್ತಿದ್ದು ಪ್ರತಿ ದಿನ ಇಬ್ನಿವಳವಾಡಿ ಗ್ರಾಮದ ಸ್ಯಾಂಡಲ್ ಕಾಡ್ ತೋಟದ ಗೇಟ್ ನ ಬಳಿ ಇರುವ ಅಬೂಬಕ್ಕರ್ ಎಂಬುವವರ ಮನೆಯ ಮುಂಭಾಗದ ವೆರಾಂಡಾದಲ್ಲಿ ನಿಲ್ಲಿಸುತ್ತಿದ್ದು, ಅದರಂತೆ ದಿನಾಂಕ 23-12-2015 ರಂದು ರಾತ್ರಿ 09.15 ಗಂಟೆಗೆ ಫಿರ್ಯಾದಿ ಅಬೂಬಕರ್‌ರವರ ಸಹೋದರ ಇಬ್ರಾಹಿಂರವರು ಪಿಕ್ ಅಪ್ ಜೀಪನ್ನು ತಂದು ನಿಲ್ಲಿಸಿದ್ದು, ಮಾರನೇ ದಿನ ಬೆಳಿಗ್ಗೆ 08.00 ಗಂಟೆಗೆ ನೋಡುವಾಗ ವಾಹನವು ನಿಲ್ಲಿಸಿದಲ್ಲಿ ಇಲ್ಲದೆ ಇದ್ದು ಎಲ್ಲಾ ಕಡೆ ಹುಡುಕಾಡಿದಲ್ಲೂ ಎಲ್ಲೂ ಪತ್ತೆಯಾಗದೆ ಇದ್ದು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಪರಸ್ಪರ ಬೈಕ್‌ ಡಿಕ್ಕಿ; ಗಾಯ
                     ಪರಸ್ಪರ ಮೋಟಾರು ಬೈಕ್‌ಗಳೆರಡು ಡಿಕ್ಕಿಯಾದ ಘಟನೆ ವಿರಾಜಪೇಟೆ ಬಳಿಯ ಬಿಳುಗುಂದ ಗ್ರಾಮದಲ್ಲಿ ನಡೆದಿದೆ. ದಿನಾಂಕ: 25-12-15ರಂದು ನಲ್ತೊಕ್ಲು ಗ್ರಾಮದ ನಿವಾಸಿ ಹಂಸ ಎಂಬವರು ಬಿಳುಗುಂದ ಗ್ರಾಮದ ಸೊಸೈಟಿಗೆ ಪಡಿತರ ತರಲು ಬಿಳುಗುಂದ ಗ್ರಾಮದ ವಾಸಿ ಖಾತೀಂರವರ  ಮೋಟಾರ್ ಬೈಕ್ ನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಖಾತಿಂರವರೊಡನೆ  ಹೋಗಿ ವಾಪಾಸ್ಸು ಬರುತ್ತಿರುವಾಗ ಬಿಳುಗುಂದ ಗ್ರಾಮದ ಚೆಲುವಂಡ ಕಾವೇರಪ್ಪರವರ ತೋಟದ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ನಲ್ವತ್ತೊಕ್ಲು ಕಡೆಯಿಂದ ಬಿಳುಗುಂದ ಕಡೆಗೆ ಒಂದು ಕೆಎ-12-8151ರ ಮೋಟಾರ್ ಬೈಕ್ ಚಾಲಕ ಅಶ್ರಫ್‌ ಎಂಬಾತನು ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಹಂಸರವರು ಬರುತ್ತಿದ್ದ ಮೋಟಾರ್ ಬೈಕ್‌ಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿದ್ದು ಹಂಸರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸರ್ಕಾರಿ ಕೆಲಸಕ್ಕ ಅಡ್ಡಿ, ಬೆದರಿಕೆ
                   ಕೆಲವು ಜನರು ಗುಂಪು ಕೂಡಿಕೊಂಡು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 20-12-2015 ರಂದು ಕುಶಾಲನಗರ ವಲಯ ಕೊಪ್ಪ ಅರಣ್ಯ ತನಿಖಾ ಠಾಣೆಯಲ್ಲಿ ರಹದಾರಿಯಿಲ್ಲದೆ ಬೊಲೇರೋ ಜೀಪು ಸಂಖ್ಯೆ ಕೆಎ-45-3448 ರಲ್ಲಿ ಹಸಿ ಬಿದಿರು ಏಣಿಗಳನ್ನು ಸಾಗಿಸುತಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ದಿನಾಂಕ 23-12-2015 ರಂದು ಸಂಜೆ  ಮಾರುತಿ ಓಮಿನಿ ಕೆಎ-12-ಪಿ-8646ರಲ್ಲಿ ಮುಳ್ಳುಸೋಗೆ ನಿವಾಸಿ ಎಂ.ಕೃಷ್ಣ ಮತ್ತು ಇತರರು ಕುಶಾಲನಗರ ವಲಯ ಅರಣ್ಯಾದಿಕಾರಿಯವರ ಕಛೇರಿ ಆವರಣಕ್ಕೆ ಬಂದು ಪ್ರಕರಣದಲ್ಲಿ ಅಮಾನತ್ತುಪಡಿಸಿಕೊಂಡಿದ್ದ ಮ್ಯಾಕ್ಸ್ ಟ್ರಕ್ ವಾಹನವನ್ನು ಬಿಟ್ಟುಕೊಡುವಂತೆ ಏಕಾಏಕಿ ಧರಣಿ ನಡೆಸಿ ಕಚೇರಿಗೆ ಆಗಮಿಸಿದ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಲ್ಲದೆ ಕಛೇರಿಯಲ್ಲಿದ್ದ ಸಿಬ್ಬಂದಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಸಿಬ್ಬಂದಿಯವರಿಗೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಮನೆ ಪ್ರವೇಶಿಸಿ ಆಭರಣ ಕಳವು
                    ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಕುಶಾಲನಗರ ಬಳಿಯ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 25/12/15 ರಂದು ಮುಳ್ಳುಸೋಗೆ ನಿವಾಸಿ ನಾಗರಾಜ ಎಂಬವರು ಸಂಜೆ 4.00 ಗಂಟೆಗೆ ತಮ್ಮ ಮನೆ ಬಾಗಿಲಿಗೆ ಬೀಗ ಹಾಖಿಕೊಂಡು  ತಮ್ಮ ಪತ್ನಿ ಮತ್ತು ಮಕ್ಕಳನ್ನು ಕರೆದುಕೊಂಡು ಬರಲು ಬೆಟ್ಟದಪುರದ ಭುವನಳ್ಳಿ ಗ್ರಾಮಕ್ಕೆ ತೆರಳಿದ್ದು, ದಿ: 26/12/15 ರಂದು ಬೆಳಗಿನ ಜಾವ 2.30 ಗಂಟೆಗೆ ಪಕ್ಕದ ಮನೆಯ ರೂಪಾ ಎಂಬಾಕೆ ನಾಗರಾಜರವರ ಪತ್ನಿಯ ಮೊಬೈಲ್ ಗೆ ಕರೆ ಮಾಡಿ ನಾಗರಾಜರವರ ಮನೆ ಕಳ್ಳತನವಾಗಿರುವ ಬಗ್ಗೆ ತಿಳಿಸಿದ ಮೇರೆಗೆ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಅಕ್ಕಪಕ್ಕದ ಮನೆಗಳ ಬಾಗಿಲಿನ ಚಿಲಕಗಳನ್ನು ಹಾಕಿ ಯಾವುದೋ ಆಯುಧದಿಂದ  ಮನೆಯ ಮುಂಬಾಗಿಲ ಬೀಗವನ್ನು ಮುರಿದು ಒಳ ಪ್ರವೇಶಿಸಿ ಮಲಗುವ ಕೋಣೆಯಲ್ಲಿಟ್ಟಿದ್ದ ಗಾಡ್ರೇಜ್ ಬೀರುವಿನಲ್ಲಿದ್ದ ರೂ. 24,000 ಬೆಲೆ ಬಾಳುವ ಚಿನ್ನಾಬರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, December 26, 2015

ಯುವತಿ ಕಾಣೆ ಪ್ರಕರಣ
               ಯುವತಿಯೊಬ್ಬಳು ಕೆಲಸಕ್ಕೆ ಹೋಗದೆ ಕಾಣೆಯಾಗಿರುವ ಪ್ರಕರಣ ಶನಿವಾರಸಂತೆಯಲ್ಲಿ ನಡೆದಿದೆ. ಶನಿವಾರಸಂತೆ ಬಳಿಯ ಗೋಪಾಲಪುರ ಗ್ರಾಮದ ನಿವಾಸಿ ಕೃಷ್ಣಪ್ಪ ಎಂಬವರ ಮಗಳು  ನಳಿನಿ ಎಂಬವಳು ಸುಮಾರು 6 ತಿಂಗಳಿನಿಂದ ಶನಿವಾರಸಂತೆಯ ಶ್ರೀ ಮಂಜುನಾಥ ಶೂ ವರ್ಲ್ಡ್ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ 24-12-2015 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೇಳಿ ಹೋದವಳು ಶೂ ಅಂಗಡಿಗೆ ಕೆಲಸಕ್ಕೂ ಹೋಗದೇ ಸಂಜೆ ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿದ್ದು ತಮ್ಮ ಮಗಳು ನಳಿನಿಯನ್ನು ಅಕ್ಕ-ಪಕ್ಕ ನೆಂಟರಿಷ್ಟರ ಮನೆ ಮತ್ತು ಎಲ್ಲಾ ಕಡೆ ಹುಡುಕಾಡಿದಲ್ಲೂ ಎಲ್ಲೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
                    ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಬಳಿಯ ಮತ್ತಿಕಾಡು ತೋಟದಲ್ಲಿ ನಡೆದಿದೆ. ದಿನಾಂಕ 24.12.2015 ರಂದು ಮತ್ತಿಕಾಡು ಗೇರುಬಾಣೆ ತೋಟದ ನಿವಾಸಿ ಶಫಿಕೋಲ್‌ ಎಂಬವರ ತಂಗಿ ಸಫಿಯಾ ಎಂಬಾಕೆಯು ಮನೆಯಲ್ಲಿದ್ದು ಮನೆಕೆಲಸದ ವಿಚಾರದಲ್ಲಿ ತಾಯಿಯೊಂದಿಗೆ ಸಣ್ಣಪುಟ್ಟ ಮಾತು ನಡೆದ ವಿಚಾರದಲ್ಲಿ ಮನಸ್ಸಿಗೆ ಬೇಸರ ಮಾಡಿಕೊಂಡು  ತೋಟಕ್ಕೆ ಸಿಂಪಡಿಸಲು ಇಟ್ಟಿದ್ದ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಳಾಗಿದ್ದು ಚಿಕಿತ್ಸೆ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕುಸಿದು ಬಿದ್ದು ವ್ಯಕ್ತಿಯ ಸಾವು; ಅಫಘಾತ ಪ್ರಕರಣ ದಾಖಲು
                 ರಸ್ತೆಯಲ್ಲಿ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 23-12-2015 ರಂದು ಸುಂಟಿಕೊಪ್ಪ ನಿವಾಸಿ ಜಿ.ಇ.ದೇವಯ್ಯ ಎಂಬವರು ಅವರ ಮಾರುತಿ ಓಮಿನಿ ಕಾರು ನಂಬರ್ ಕೆಎ-12-ಝಡ್-3479 ರಲ್ಲಿ ಊರಿನಿಂದ ಜನರನ್ನು ಕರೆದುಕೊಂಡು ಕೆದಮುಳ್ಳೂರು ಗ್ರಾಮದ ತೋರ ಎಂಬಲ್ಲಿಗೆ ಕರೆದುಕೊಂಡು ಹೋಗಿ ಕೆಲಸ ಮುಗಿಸಿ ವಾಪಾಸ್ಸು ಸುಂಟಿಕೊಪ್ಪಕ್ಕೆ ವಿರಾಜಪೇಟೆ ಮಾರ್ಗವಾಗಿ ಹೋಗುತ್ತಿರುವಾಗ ವಿರಾಜಪೇಟೆ ನಗರದ ಎಕ್ಸ್ಪೋ ಬೇಕರಿ ಮುಂಭಾಗ  ಫುಟ್ ಪಾತ್ ನಲ್ಲಿ ಅಂದಾಜು 60 ವರ್ಷ ವಯಸ್ಸಿನ ಒಬ್ಬ ಅಪರಿಚಿತ ಗಂಡಸು ಕುಡಿದ ಅಮಲಿನಲ್ಲಿ ತೂರಾಡುತ್ತಾ ದೇವಯ್ಯನವರು ನಿಲ್ಲಿಸಿದ್ದ ಕಾರಿನ ಮುಂಭಾಗದ ಎಡ ಭಾಗಕ್ಕೆ ಕುಸಿದು ಬಿದ್ದಾಗ ಆತನನ್ನು ದೇವಯ್ಯನವರು ಉಪಚರಿಸುತ್ತಿರುವಾಗ ಕೆಲವರು ಆತನನ್ನು ಚಿಕಿತ್ಸೆ ಬಗ್ಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ, ಆತನನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸುವ ವೇಳೆ ಆತನನ್ನು ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುತ್ತಾರೆಂದು ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ವಿರಾಜಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದು ತನಿಖೆಯ ವೇಳೆಯಲ್ಲಿ ಸಾಕ್ಷಿದಾರರು ಹಾಗೂ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಿಂದ ಮೃತ ವ್ಯಕ್ತಿಯ ಸಾವು ವಾಹನ ಅಫಘಾತದಿಂದಾಗಿರುವುದಾಗಿ ದೃಢಪಟ್ಟಿದ್ದು   ಜಿ.ಇ.ದೇವಯ್ಯನವರು ತಾವೇ ಅಫಘಾತ ಮಾಡಿ ವ್ಯಕ್ತಿಯ ಸಾವಿಗೆ ಕಾರಣರಾಗಿರುವುದಾಗಿ ವಿರಾಜಪೇಟೆ ಠಾಣೆಯ ಪಿಎಸ್‌ಐ ಸುಬ್ರಮಣ್ಯರವರು ಜಿ.ಇ.ದೇವಯ್ಯನವರ ವಿರುದ್ದ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಬರೆಯಿಂದ ಬಿದ್ದು ವ್ಯಕ್ತಿಯ ಸಾವು
                     ಆಕಸ್ಮಿಕವಾಗಿ ಕಾಲು ಜಾರಿ ಬರೆಯಿಂದ ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಮೂರ್ನಾಡು ಬಳಿಯ ಹೊದ್ದೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 24-12-2015 ರಂದು ಮೂರ್ನಾಡಿನ ಪಾಂಡಂಡ ಮೋಹಿತ್‌ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಸೀನಪ್ಪ ಎಂಬಾತನು  ಪಾಲೆಮಾಡು ಪೈಸಾರಿಗೆ ಬಂದು ಮದ್ಯಪಾನ ಮಾಡಿ ಬಂದು ಹೋಗಿದ್ದು, ಆತನ ಪತ್ನಿ ರತ್ನ ಎಂಬವರು ತನ್ನ ಮಕ್ಕಳೊಂದಿಗೆ  ರಾತ್ರಿ ವೇಳೆ 09.00 ಪಿ.ಎಂ.ಗೆ ತನ್ನ ಮನೆಗೆ ಬರುವ ವೇಳೆಗೆ  ಪತಿ ಸೀನಪ್ಪರವರು ಒಳ್ಳೆ ತೋಡಿನ ಪಕ್ಕ ಬರೆ ಮೇಲಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೋಟಾರು ಬೈಕಿಗೆ ಕಾರು ಡಿಕ್ಕಿ
                 ಕಾರೊಂದಕ್ಕೆ ಮೋಟಾರು ಬೈಕೊಂದು ಡಿಕ್ಕಿಯಾದ ಘಟನೆ ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 25-12-2015 ರಂದು 7ನೇ ಹೊಸಕೋಟೆ ನಿವಾಸಿ ರಂಜಿತ್‌ ಎಂಬವರು 7ನೇ ಹೊಸಕೋಟೆ ಗ್ರಾಮದ ಸರ್ಕಾರಿ ಶಾಲೆಯ ಎದುರು ಚೈತನ್ಯ ಹೊಟೇಲಿನ ಮುಂಭಾಗ ಕುಶಾಲನಗರಕ್ಕೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದಾಗ  ಕುಶಾಲನಗರ- ಮಡಿಕೇರಿ ರಾಜ್ಯ ಹದ್ದಾರಿಯಲ್ಲಿ ಕುಶಾಲನಗರ ಕಡೆಯಿಂದ ನಂ ಎಪಿ 31 ಸಿಜೆ 4444 ರ ಫೋರ್ಡ್‌ ಇಕೋ ಸ್ಪೋರ್ಟ್ ಕಾರೊಂದು ಮಡಿಕೇರಿ ಕಡೆಗೆ ಬರುತ್ತಿದ್ದು ಮಡಿಕೇರಿ ಕಡೆಯಿಂದ ಕೆಎಸ್‌ಆರ್ ಟಿಸಿ ಬಸ್ಸೊಂದು ಕುಶಾಲನಗರ ಕಡೆಗೆ ಹೋಗುತ್ತಿದ್ದು ಆ ಸಮಯದಲ್ಲಿ ಕೆಎ-13-ಆರ್‌-7178ರ ಮೋಟಾರ್‌ ಸೈಕಲನ್ನು ಅದರ ಸವಾರ ಸೋಮವಾರಪೇಟೆ ನಿವಾಸಿ ಸುಹಾಸ್‌ ಎಂಬಾತನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಸ್ಸನ್ನು ಓವರ್‌ ಟೇಕ್‌ ಮಾಡಿಕೊಂಡು ಬಂದು ಬಸ್ಸನ್ನು ಹಿಂದಿಕ್ಕುವಾಗ ಎದುರುಗಡೆಯಿಂದ ಬರುತ್ತಿದ್ದ  ಇಕೋ ಸ್ಪೋರ್ಟ್‌ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‌ ಸವಾರ ಮತ್ತು ಹಿಂಬದಿ ಸವಾರನೂ ಕೆಳಗೆ ಬಿದ್ದು ರಕ್ತ ಗಾಯಗಳಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

Friday, December 25, 2015

ರಸ್ತೆ ಅಫಘಾತ; ಇಬ್ಬರಿಗೆ ಗಾಯ
                      ರಸ್ತೆ ಅಫಘಾತವೊಂದರಲ್ಲಿ ಇಬ್ಬರಿಗೆ ಗಾಯಗಳಾದ ಘಟನೆ ಕುಶಾಲನಗರ ಬಳಿಯ ಕೂಡಿಗೆಯಲ್ಲಿ ನಡೆದಿದೆ. ದಿನಾಂಕ 23-12-2015 ರಂದು ಕೂಡಿಗೆ ಸೈನಿಕ ಶಾಲೆಯ ಉದ್ಯೋಗಿ ಅರ್ಜುನ ಎಂಬವರು ಅವರ  ಬಾಪ್ತು ಸ್ಟಾರ್ ಸಿಟಿ ಮೋಟಾರು ಬೈಕ್‌ ನಂ ಕೆಎ-45-ವಿ-0148 ರಲ್ಲಿ ಪೊನ್ನಪ್ಪ ಎಂಬವರೊಡನೆ ಮದಲಾಪುರ ಕಡೆಯಿಂದ ಕೂಡಿಗೆಗೆ ಬರುತ್ತಿರುವಾಗ ಕೂಡಿಗೆಯ ಜ್ಞಾನೋದಯ ಶಾಲೆಯ ಮುಂದುಗಡೆ ಎದುರುಗಡೆಯಿಂದ ಬರುತಿದ್ದ ಒಂದು ಆಟೋದಲ್ಲಿ ಕಬ್ಬಿಣದ ರಾಡುಗಳನ್ನು ಆಟೋದ ಹೊರಭಾಗಕ್ಕೆ ಬರುವಂತೆ ಅಡ್ಡಲಾಗಿ ಹಾಕಿಕೊಂಡು ಬರುತ್ತಿದ್ದು ಆ ರಾಡುಗಳು ಬೈಕಿನ ಮುಂಬಾಗದಲ್ಲಿ ಹೋಗುತಿದ್ದ ವ್ಯಕ್ತಿಗೆ ತಗುಲಿದ ಪರಿಣಾಮ ಆ ವ್ಯಕ್ತಿಯು ಹಿಂದೆ ಬರುತಿದ್ದ ಅರ್ಜುನರವರ ಬೈಕಿನ ಮೇಲೆ ಬಿದ್ದಿದ್ದು ಅದೇ ಸಮಯದಲ್ಲಿ ರಿಕ್ಷಾದಲ್ಲಿದ್ದ ರಾಡುಗಳು ಬೈಕಿಗೆ ತಗುಲಿದ್ದು ಮೋಟಾರು ಬೈಕಿನಲ್ಲಿದ್ದ ಸವಾರರು ಕೆಳಗೆ ಬಿದ್ದು ಗಾಯಗಳಾಗಿರುತ್ತದೆ. ಆದರೆ ಆಟೋ ಚಾಲಕನು ಆಟೋವನ್ನು ನಿಲ್ಲಿಸದೆ ಹೋಗಿದ್ದು ಆಟೋದ ಹಿಂಬದಿ ಗಜ ಎಂದು ಬರೆದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆಮಗನಿಂದ ತಂದೆಯ ಮೇಲೆ ಹಲ್ಲೆ.
                        ಕ್ಷುಲ್ಲಕ ಕಾರಣಕ್ಕೆ ಮಗನೇ ತಂದೆಯ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 23-12-2015 ರಂದು ಕೊತ್ತನಳ್ಳಿ ನಿವಾಸಿ ಗೋಪಾಲ ಎಂಬವರು ಸೋಮವಾರಪೇಟೆ ನಗರದಿಂದ ಮಡಿಕೇರಿ ರಸ್ತೆಯ ಕಡೆಗೆ ಹೋಗುತ್ತಿರುವಾಗ ಸಫಾಲಿಯಾ ಹೋಟೇಲಿನ ಮುಂಭಾಗದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಅವರ ಎರಡನೇ ಮಗ ಕೆ.ಜಿ. ವಿಜಯನು ಗೋಪಾಲರವರನ್ನು ಅಡ್ಡಗಟ್ಟಿ ಊಟ ಹಾಗೂ ಕುಡಿಯಲು ಮದ್ಯ ಕೊಡಿಸುವಂತೆ ಒತ್ತಾಯಿಸಿ ಗೋಪಾಲರವರ ತುಟಿಯನ್ನು ಕಚ್ಚಿ, ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆಯ ಮೇಲೆ ವರದಕ್ಷಿಣೆ ಕಿರುಕುಳ
                      ವಿವಾಹಿತ ಮಹಿಳೆಯ ಮೇಲೆ ಆಕೆಯ ಪತಿ ಹಾಗೂ ಪತಿಯ ಮನೆಯವರು ವರದಕ್ಷಿಣೆಗಾಗಿ ಪೀಡಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ. ಶ್ರೀಮಂಗಲದ ಕೆ.ಪಿ.ಕುಸುಮ ಎಂಬವರು ಕಳ್ಳಿಚಂಡ ಪರಶುರಾಮ ಎಂಬವರನ್ನು ಸುಮಾರು 15 ವರ್ಷಗಳ ಹಿಂದೆ ವಿವಾಹವಾಗಿದ್ದು ಪರಶುರಾಮರವರಿಗೆ ಪರಸ್ತ್ರೀ ಸಹವಾಸವಿದ್ದು ಮನೆಯಲ್ಲಿ ಇದೇ ವಿಷಯವಾಗಿ ಆಗಾಗ್ಗೆ ಜಗಳವಾಗುತ್ತಿತ್ತೆನ್ನಲಾಗಿದೆ. ದಿನಾಂಕ 20/12/2015ರಂದು ಪತಿ ಪರಶುರಾಮ ಮತ್ತು ಆತನ ತಂಗಿ ಭಾರತಿ ಸೇರಿಕೊಂಡು ಕುಸುಮರವರಿಗೆ ತವರುಮನೆಯಿಂದ ವರದಕ್ಷಿಣೆ ತರುವಂತೆ ಹಿಂಸಿಸಿ ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸುಮಾರವರು ಪತಿ ಪರಶುರಾಮ ಮತ್ತು ಆತನ ತಂಗಿ ಭಾರತಿ ಮತ್ತು ಭಾವ ಗಯರವರ ಮೇಲೆ ಹಲ್ಲೆ  ಮಾಡಿರುವುದಾಗಿ ನೀಡಿದ ದೂರು ನೀಡಿದ್ದು   ಶ್ರೀಮಂಗಲ ಪೊಲೀಸರು ಎರಡೂ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Wednesday, December 23, 2015

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                  ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ಬಳಿಯ ಯಡವಾರೆ ಗ್ರಾಮದಲ್ಲಿ ನಡೆದಿದೆ. ದಿನಾಂಕ : 21-12-2015 ರಂದು ರಾತ್ರಿ ಯಡವಾರೆ ನಿವಾಸಿ ವಿಠಲ ಎಂಬವರು ಅವರ  ಮನೆಯಲ್ಲಿರುವಾಗ, ಮನೆಯ ಪಕ್ಕದ ವಾಸಿಯಾದ ವಿಜಯ ಎಂಬುವವರು ಬ್ರಾಂಡಿ ಕುಡಿಯಲು ಹಣ ಕೇಳಿದ್ದು, ಹಣವಿಲ್ಲ ಎಂದು ಹೇಳಿದ ಕಾರಣಕ್ಕೆ ವಿಜಯರವರು ವಿಠಲರವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ವಿನಾ ಕಾರಣ ವ್ಯಕ್ತಿಯ ಮೇಲೆ ಹಲ್ಲೆ
                     ವಿನಾ ಕಾರಣ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ಬಳಿಯ ಯಡವಾರೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 22-12-2015 ರಂದು ಯಡವನಾಡು ಗ್ರಾಮದ ಅಕ್ಷಿತ ಎಂಬ ಯುವತಿಯು ಅವರ ಮನೆಯಲ್ಲಿ ಮೃತಪಟ್ಟಿದ್ದರಿಂದ ನೋಡಲೆಂದು ಅದೇ ಗ್ರಾಮದ ನಿವಾಸಿ ಹೇಮಂತ್‌ ಎಂಬವರು ಅಕ್ಷಿತಳ ಮನೆಗೆ ಹೋದಾಗ ಅಲ್ಲಿದ್ದ ಮೃತಳ ತಂದೆ ಮಂಜು ಹಾಗೂ ವಿಠಲ, ಮೃತೆಯ ಅಜ್ಜ ಹಾಗೂ ಇತರರು ಸೇರಿ ದೊಣ್ಣೆಯಿಂದ ಹೇಮಂತ್‌ರವರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ಯುವತಿಯ ಆತ್ಮಹತ್ಯೆ
                       ನೇಣು ಬಿಗಿದುಕೊಂಡು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ಬಳಿಯ ಯಡವಾರೆ ಗ್ರಾಮದಲ್ಲಿ ನಡೆದಿದೆ. ಯಡವಾರೆ ನಿವಾಸಿ ಮಂಜು ಎಂಬವರ ಮೊದಲನೇ ಮಗಳು ಅಕ್ಷಿತಳು ಕುಶಾಲನಗರದ ಪಾಲಿಟೆಕ್ನಿಕ್ ನಲ್ಲಿ ವ್ಯಾಸಂಗ ಮಾಡಿಕೊಂಡಿದ್ದು,  ದಿನಾಂಕ : 22-12-2015 ರಂದು ಕಾಲೇಜಿಗೆ ರಜೆ ಇದೆ ಎಂದು ಮನೆಯಲ್ಲಿಯೇ ಇದ್ದು, ಮಂಜುರವರು ಕೂಡಿಗೆಗೆ ಹೋಗಿದ್ದು ಪತ್ನಿ ಕೆಲಸಕ್ಕೆ ಹೋಗಿದ್ದು, ಸಮಯ 11.30 ಗಂಟೆಗೆ ಮಂಜುರವರು ಮನೆಗೆ ಬಂದಾಗ ಒಳಗಿನಿಂದ ಬಾಗಿಲು ಹಾಕಿತ್ತು. ಬಾಗಿಲು ಬಡಿದಾಗ ಯಾವುದೇ ಶಬ್ದ ಬಾರದೆ ಇದ್ದು, ಬಾಗಿಲನ್ನು ಅಲುಗಾಡಿಸಿ ಚಿಲಕ ತೆಗೆದು ಒಳಗೆ ಹೋಗಿ ನೋಡಲಾಗಿ ಮಗಳು ಅಕ್ಷಿತಳು ವೇಲ್ ನಿಂದ ಮನೆಯ ಕೌಕೋಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುವುದಾಗಿದೆ. ಮಂಚದ ಮೇಲೆ ಒಂದು ಪತ್ರವಿದ್ದು ಅದರಲ್ಲಿ ತನ್ನ ಮೊಬೈಲ್ ಗೆ ಯಾವುದೊ ಮೊಬೈಲ್ ನಂಬರಿನಿಂದ ಅಶ್ಲೀಲ ಸಂದೇಶಗಳು ಬರುತ್ತಿದ್ದು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಹಲ್ಲೆ; ಕೊಲೆ ಬೆದರಿಕೆ
                       ವ್ಯಕ್ತಿಯೊಬ್ಬರ ಮೇಲೆ ವಿನಾ ಕಾರಣ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕರುವ ಘಟನೆ ಶ್ರೀಮಂಗಲ ಬಳಿಯ ಚಿಕ್ಕ ಮಂಡೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 21/12/2015ರಂದು ಚಿಕ್ಕಮಂಡೂರು ನಿವಾಸಿ ಅಜ್ಜಿಕುಟ್ಟಿರ ಕಿಶೋರ್‌ ಎಂಬವರು ಅವರ ಗದ್ದೆ ಕೆಲಸ ಮುಗಿಸಿ ಮೋಟಾರ್‌ ಸೈಕಲ್‌ನಲ್ಲಿ ಮನೆ ಕಡೆ ಬರುತ್ತಿದ್ದಾಗ ಅದೇ ಗ್ರಾಮದ ನಿವಾಸಿ ಚಿಮ್ಮಣಮಾಡ ವಾಸು ಎಂಬವರು ಬೈಕ್‌ನ್ನು ತಡೆದು ನಿಲ್ಲಿಸಿ ಏಕಾಏಕಿ ದೊಣ್ಣೆಯಿಂದ ಕಿಶೋರ್‌ರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, December 22, 2015

ವ್ಯಕ್ತಿಯ ಮೇಲೆ ಗುಂಪು ಹಲ್ಲೆ
                 ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಗುಂಪುಗೂಡಿ ಹಲ್ಲೆ ನಡೆಸಿದ ಘಟನೆ ಮಾದಾಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 20-12-2015 ರಂದು ಮಾದಾಪುರ ಬಳಿಯ ಕುಂಬೂರು ನಿವಾಸಿ ಹೆಚ್‌.ಎನ್‌.ಸುರೇಶ ಎಂಬವರು ಭಾನುವಾರ ರಜೆಯಾದ್ದರಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದು ಸಮಯ ರಾತ್ರಿ 08.30 ಗಂಟೆಗೆ ಪಕ್ಕದ ಮನೆಯ ನಂದ ಎಂಬವರ ಮನೆಯ ಮುಂಭಾಗ ರಸ್ತೆಯಲ್ಲಿ ತೇಜಪ್ಪ, ರಮೇಶ,ಸುರೇಶ, ಶಿವಪ್ಪ ಎಂಬವರೊಂದಿಗೆ  ಕೆಲಸದ ವಿಷಯ ಮಾತನಾಡಿಕೊಂಡಿರುವಾಗ ಅನಿಲ್‌, ಪ್ರವೀಣ್‌, ರವಿಕುಮಾರ್‌, ರಾಜೇಶ್‌, ಅಭಿಲಾಷ್‌, ಎಂಬವರುಗಳು ಬಂದು ಸುರೇಶ್‌ ಹಾಗೂ ಇತರರು ಮಂಜುಳ ಎಂಬಾಕೆಯ ವಿರುದ್ದ ಪೊಲೀಸ್‌ ದೂರು ನೀಡಿದ ಬಗ್ಗೆ ಜಗಳವಾಡಿ ಸುರೇಶ್‌ರವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ಬೈದು ಕ್ರಿಕೆಟ್‌ ಆಟಕ್ಕೆ ಉಪಯೋಗಿಸುವ ವಿಕೆಟ್‌ನಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಯುವಕನ ಆತ್ಮಹತ್ಯೆ
                    ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಬಳಿಯ ಕರ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ಕರ್ಣಂಗೇರಿ ಗ್ರಾಮದ ನಿವಾಸಿ ಗಂಗಮ್ಮ ಎಂಬವರ ಮಗ ಭುವನೇಶ್‌ ಎಂಬವರು ವಿಪರೀತ ಮದ್ಯಪಾನ ವ್ಯಸನಿಯಾಗಿದ್ದು ಮನೆಯಲ್ಲಿ ಆಗಾಗ್ಗೆ ಪತ್ನಿ ಮತ್ತು ತಾಯಿಯೊಂದಿಗೆ ಆಗಾಗ್ಗೆ ಜಗಳ ಮಾಡುತ್ತಿದ್ದನೆನ್ನಲಾಗಿದೆ. ದಿನಾಂಕ 20/12/2015ರಂದು ರಾತ್ರಿ  ಭುವನೇಶ್‌ ಮನೆಯಲ್ಲಿ ಯಾವುದೋ ಕಾರಣಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತನ ತಾಯಿ ಗಂಗಮ್ಮ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ದೇಗುಲಕ್ಕೆ ಅಕ್ರಮ ಪ್ರವೇಶ
                      ದೇಗುಲಕ್ಕೆ ಅನ್ಯ ಕೋಮಿನ ಯುವಕನೋರ್ವ ಅಕ್ರಮವಾಗಿ ಪ್ರವೇಶಿಸಿ ಭಕ್ತ ಜನರ ಧಾರ್ಮಿಕ ಭಾವನೆಗೆ  ಧಕ್ಕೆ ಬರುವಂತೆ ವರ್ತಿಸಿರುವ ಘಟನೆ ಪೊನ್ನಂಪೇಟೆ ಬಳಿಯ ದೇವರಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 20/12/2015ರ ನಡುರಾತ್ರಿ ದೇವರಪುರ ಗ್ರಾಮದ ಸಿದ್ದಿ ವಿನಾಯಕ ದೇವಾಲಯಕ್ಕೆ ಸಿದ್ದಾಪುರ ನೆಲ್ಲಿ ಹುದಿಕೇರಿ ಗ್ರಾಮದ ನಿವಾಸಿ ಮುಸ್ಲಿಂ ಜನಾಂಗಕ್ಕೆ ಸೇರಿದ ಶಾಜಿ ಎಂಬಾತನು ದೇವಾಲಯದ ಬಾಗಿಲಿನ ಚಿಲಕ ಮುರಿದು ಒಳಗೆ ಗರ್ಭಗುಡಿಯನ್ನು ಪ್ರವೇಶಿಸಿ ಆತನ ಪ್ಯಾಂಟು ಬಿಚ್ಚಿ ಅಲ್ಲಿದ್ದ ಬೇರೆ ಪಂಚೆಯನ್ನು ಉಟ್ಟುಕೊಂಡು ಗರ್ಭಗುಡಿಯಲ್ಲಿ ಕುಳಿತುಕೊಂಡಿದ್ದು ದೇವಾಲಯದ ಹಿಂದೂ ಭಕ್ತರ ಭಾವನೆಗೆ ಧಕ್ಕೆ ಬರುವಂತೆ ವರ್ತಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, December 21, 2015

ತೀವ್ರ ಕಾಯಿಲೆಯಿಂದ ವ್ಯಕ್ತಿಯ ಸಾವು
                  ತೀವ್ರತರವಾದ ಕಾಯಿಲೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಿದ್ದಾಪುರ ಬಳಿಯ ಪಾಲಿಬೆಟ್ಟದಲ್ಲಿ ನಡೆದಿದೆ. ಪಾಲಿಬೆಟ್ಟ ನಿವಾಸಿ ಶ್ರೀಮತಿ ಮಂಜು ಎಂಬವರ ಪತಿ ವಿಜಯನ್‌ ಎಂಬವರು ತೀವ್ರತರವಾದ ಕಾಯಿಲೆಯಿಂದ ನರಳುತ್ತಿದ್ದು ದಿನಾಂಕ 20/12/2015ರಂದು ಕಾಯಿಲೆ ಉಲ್ಬಣಿಸಿ ಪಾಲಿಬೆಟ್ಟದಲ್ಲಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ವೈವಸ್‌ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯ ವೇಳೆಯಲ್ಲಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಒಂಟಿ ಮಹಿಳೆಯ ಮೇಲೆ ಹಲ್ಲೆ
                   ಒಂಟಿ ವೃದ್ದ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 20.12.2015 ರಂದು 7ನೇ ಹೊಸಕೋಟೆ ನಿವಾಸಿ ಚಿನ್ನಮ್ಮ ಎಂಬ ವೃದ್ದ ಮಹಿಳೆ ಮನೆಯಲ್ಲಿ ಒಬ್ಬರೇ ಇರುವಾಗ ರಾತ್ರಿ ವೇಳೆ ಅದೇ ಗ್ರಾಮದ ನಿವಾಸಿ ಕಬೀರ್ ಎಂಬುವವರು ಮನೆಗೆ ಅಕ್ರಮ ಪ್ರವೇಶ ಮಾಡಿ ವಿನಾ ಕಾರಣ ಆಕೆಗೆ ಅಶ್ಲೀಲ ಶಬ್ದಗಳಿಂದ ಬೈದು ಕೈ ಹಿಡಿದು ಎಳೆದು  ಸೀರೆಯನ್ನು ಹಿಡಿದು ಎಳೆದು ಬಲಭಾಗದ ಕಿವಿಗೆ ಕಚ್ಚಿ ಗಾಯಗೊಳಿಸಿ ಕೂಗಿ ಕೊಂಡರೇ ಕೊಲೆಮಾಡುವುದಾಗಿ  ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಬೈಕ್‌ ಡಿಕ್ಕಿ; ನಾಲ್ವರಿಗೆ ಗಾಯ
                       ಪರಸ್ಪರ ಬೈಕ್‌ಗಳೆರಡು ಡಿಕ್ಕಿಯಾದ ಪರಿಣಾಮ ನಾಲ್ವರಿಗೆ ಗಾಯಗಳಾದ ಘಟನೆ ವಿರಾಜಪೇಟೆ ಬಳಿಯ ಕಾಕೋಟು ಪರಂಬುವಿನಲ್ಲಿ ನಡೆದಿದೆ. ದಿನಾಂಕ: 20-12-15ರಂದು ವಿರಾಜಪೇಟೆ ನಿವಾಸಿ ಅವಿನಾಶ್‌ ಎಂಬವರು ಮಡಿಕೇರಿಯ ಸಂತ ಜೋಸೆಫ್ ಶಾಲೆಗೆ ನೃತ್ಯಕ್ಕೆ ಬಳಸುವ ಉಡುಪುಗಳನ್ನು ಕೊಡಲು ಹೊಸದಾದ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್ ನಲ್ಲಿ ಅವರ ಸ್ನೇಹಿತ ವಿನೀತ್  ಎಂಬವರೊಂದಿಗೆ ಹೋಗಿ ಸಂತ ಜೋಸೆಫ್ ಶಾಲೆಗೆ ನೃತ್ಯದ ಉಡುಪುಗಳನ್ನು ನೀಡಿ ವಾಪಾಸು  ವಿರಾಜಪೇಟೆಗೆ ತೆರಳುವಾಗ ಕಾಕೋಟುಪರಂಬು ಗ್ರಾಮದ ಹತ್ತಿರ ಎದುರುಗಡೆಯಿಂದ ಒಂದು ಇನೋವಾ ಕಾರು ಬರುತ್ತಿದ್ದು ಅದನ್ನು ಓವರ್ ಟೇಕ್ ಮಾಡಿ ಕೆಎ-12-ಎಲ್-3830ರ ಮೋಟಾರ್ ಬೈಕ್ ಚಾಲಕ ಸಲೀಂ ಎಂಬಾತನು  ಬೈಕ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅವಿನಾಶ್‌ರವರ ಮೋಟಾರ್ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅವಿನಾಶ್‌ ಹಾಗೂ ವಿನೀತ್‌ರವರು ಬೈಕಿನಿಂದ ಬಿದ್ದು ತೀವ್ರವಾದ ಗಾಯಗಳಾಗಿದ್ದು ಮತ್ತೊಂದು ಬೈಕಿನಲ್ಲಿದ್ದ ಸಲೀಂ ಹಾಗೂ ಇನ್ನೋರ್ವ ವ್ಯಕ್ತಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿನ ಟ್ಯಾಂಕಿಗೆ ವಿಷ ಮಿಶ್ರಣ
                        ಕುಡಿಯುವ ನೀರಿನ ಟ್ಯಾಂಕಿಗೆ ಯಾರೋ ದುಷ್ಕರ್ಮಿಗಳು ವಿಷ ಬೆರೆಸಿದ ಘಟನೆ ನಾಪೋಕ್ಲು ಬಳಿಯ ಯವಕಪಾಡಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 19-12-15 ರ ರಾತ್ರಿ 11 ಗಂಟೆಯ ಸಮಯದಲ್ಲಿ ಯವಕಪಾಡಿ ನಿವಾಸಿ ಕರ್ತಂಡ ಚಂದನ ಎಂಬ ಮಹಿಳೆಯ ಮನೆಯ ಬಳಿ ಯಾರೋ ದುಷ್ಕರ್ಮಿಗಳು ಮನೆಯ ಮೇಲಿನ ನೀರಿನ ಟ್ಯಾಂಕಿಗೆ ಏನನ್ನೊ ಬೆರೆಸಿ ಹೋಗಿದ್ದು ಬೆಳಿಗ್ಗೆ ಎದ್ದು ಟ್ಯಾಂಕಿನ ನೀರನ್ನು ಬಿಟ್ಟಾಗ ವಿಷದ ವಾಸನೆಯಿಂದ ಯಾರೋ ದುಷ್ಕರ್ಮಿಗಳು ನೀರಿನ ಟ್ಯಾಂಕಿಗೆ ವಿಷ ಬೆರೆಸಿರಬಹುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Sunday, December 20, 2015

ಮಹಿಳೆ ಮೇಲೆ ಹಲ್ಲೆ 
                       ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಬಳಿಯ ಅರೆಯೂರು ಬಳಿ ನಡೆದಿದೆ. ದಿನಾಂಕ 18/12/2015ರಂದು ಅರೆಯೂರು ನಿವಾಸಿ ರಶ್ಮಿ ಎಂಬವರು ಮನೆಯಲ್ಲಿರುವಾಗ  ಅದೇ ಊರಿನವರಾದ ಕುಶಾಲಪ್ಪ, ಕಿರಣ, ಹೊನ್ನಪ್ಪ ಮತ್ತು ದಿವಾಕರ ಎಂಬವರು ಮನೆಗೆ ಅಕ್ರಮ ಪ್ರವೇಶ ಮಾಡಿ ಗದ್ದೆಯ ದಾರಿಯ ವಿಚಾರದಲ್ಲಿ ಜಗಳವಾಡಿ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, December 19, 2015

ಮರ ಕಳವು ಯತ್ನ
                 ಪರವಾನಗಿಯೊಂದಿಗೆ ಕಡಿದಿಟ್ಟಿದ್ದ ಮರಗಳನ್ನು ಕಳವು ಮಾಡಲು ಯತ್ನಿಸಿದ ಘಟನೆ ಕುಶಾಲನಗರ ಬಳಿಯ ಮಾದಾಪಟ್ನ ಗ್ರಾಮದಲ್ಲಿ ನಡೆದಿದೆ. ಸುಂಟಿಕೊಪ್ಪ ನಿವಾಸಿ ಶರೀಫ್‌ ಎಂಬವರು ಮಾದಪಟ್ಟಣ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಅರಣ್ಯ ಇಲಾಖೆ ಪರವಾನಿಗೆ ಪಡೆದು ತೇಗದ ಮರಗಳನ್ನು ಕಡಿದು ನಾಟಾಗಳಾಗಿ ಪರಿವರ್ತಿಸಿ ಶೇಖರಿಸಿಟ್ಟಿದ್ದರು. ನಂತರ ಅವರು ಸ್ವಂತ ಕೆಲಸದ ನಿಮಿತ್ತ ಕಾಸರಗೋಡಿಗೆ ಹೋಗಿದ್ದಾಗ ದಿನಾಂಕ 16/12/2015 ರಂದು ಯಾರೋ 6 ಜನ ಕಳ್ಳರು ಸದ್ರಿ ತೇಗದ ನಾಟಾಗಳನ್ನು ಕೆಎ-13-ಎ-5879 ಟ್ರಾಕ್ಟರ್ ಗೆ ಕದ್ದು ತುಂಬಿಸುತ್ತಿದ್ದಾಗ ಶರೀಫ್‌ರವರ ಜಮೀನಿನ ಪಕ್ಕದ ನಿವಾಸಿ ಚಿಟ್ಟಿಯಪ್ಪನವರು ನಾಯಿ ಬೊಗಳುವ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದಾಗ  ಕಳ್ಳರು ಚಿಟ್ಟಿಯಪ್ಪನವರನ್ನು ನೋಡಿ ನಾಟಾ ತುಂಬಿಸಿದ ಟ್ರಾಕ್ಟರ್ ಅನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದು ಚಿಟ್ಟಿಯಪ್ಪನವರು ಈ ಬಗ್ಗೆ ಶರೀಫ್‌ರವರಿಗೆ ತಿಳಿಸಿದ್ದು, ಶರೀಫ್‌ರವರು ದಿನಾಂಕ 18/12/2015 ರಂದು ಕಾಸರಗೋಡಿನಿಂದ ಬಂದು ಸ್ಥಳ ಪರಿಶೀಲಿಸಿ ನಂತರ ಠಾಣೆಗೆ ಹಾಜರಾಗಿ ತೇಗದ ನಾಟಾ ಗಳನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ಕಳ್ಳರ ಹಾಗು ಟ್ರಾಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಕುಶಾಳನಗರ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿ ಬಾಲಕಿಗೆ ರಿಕ್ಷಾ ಡಿಕ್ಕಿ.
                   ಪಾದಚಾರಿ ಬಾಲಕಿಯೊಬ್ಬಳಿಗೆ ರಿಕ್ಷಾವೊಂದು ಡಿಕ್ಕಿಯಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 18-12-2015 ರಂದು ವಿರಾಜಪೇಟೆ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ ನಿವಾಸಿ ಸುರೇಶ ಎಂಬವರ ಮಗಳು ಅನನ್ಯ ಎಂಬ ಬಾಲಕಿಯು  ನಗರದ ಮೀನುಪೇಟೆ ರಸ್ತೆಯಲ್ಲಿರುವ ವಿನಾಯಕ ಶಾಲೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ತಂದೆ ಸುರೇಶ್‌ರವರೊಂದಿಗೆ ರಸ್ತೆಯಲ್ಲಿ ಬರುವಾಗ ಮೀನುಪೇಟೆ ಕಡೆಯಿಂದ ಆಟೋ ರಿಕ್ಷಾ ನಂ: KA-12-B-1714 ರ ಚಾಲಕ ಹರೀಶ್ ರವರು ಅತೀವೇಗ ಮತ್ತು ಅಜಾಗರೂಕತೆಯಿಂದ ಆಟೋವನ್ನು ಓಡಿಸಿಕೊಂಡು ಬಂದು ಅನನ್ಯಳಿಗೆ ಡಿಕ್ಕಿ ಪಡಿಸಿದ ಪರಿಣಾಮ ಅನನ್ಯಳ ತಲೆ ಹಾಗೂ ಕೈಕಾಲಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಾಲಕಿ ನಾಪತ್ತೆ; ಅಪಹರಣ ಶಂಕೆ
                  ಅಪ್ರಾಪ್ತ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಕುಶಾಲನಗರದ ಮಾದಾಪಟ್ನ ಗ್ರಾಮದಲ್ಲಿ ನಡೆದಿದೆ. ದಿನಾಂಕ 16-12-2015 ರಂದು ಬೆಳಿಗ್ಗೆ ಮಾದಾಪಟ್ನ ನಿವಾಸಿ ಗೋವಿಂದಯ್ಯ ಹಾಗೂ ಅವರ ಪತ್ನಿ ಮಕ್ಕಳು ಕೆಲಸಕ್ಕೆಂದು ಹೋಗಿದ್ದು ಆ ದಿನ ನಂಜರಾಯಪಟ್ಟಣದಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋಗುವುದಾಗಿ ಮಗಳು 17 ವರ್ಷ ಪ್ರಾಯದ ಗಿರಿಕನ್ಯೆ ಹೇಳುತಿದ್ದು ಸಂಜೆ ಗೋವಿಂದಯ್ಯನವರು ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಮಗಳು ಗಿರಿಕನ್ಯೆ ಮನೆಯಲ್ಲಿ ಇರಲಿಲ್ಲವೆನ್ನಲಾಗಿದೆ. ನಂತರ ಅಕ್ಕಪಕ್ಕದಲ್ಲಿ ನೆಂಟರಿಷ್ಟರಲ್ಲಿ ವಿಚಾರಿಸಿ ಹುಡುಕಾಡಿದ್ದು ಪತ್ತೆಯಾಗದ ಕಾರಣ ಮಗಳು ಗಿರಿಕನ್ಯೆಯನ್ನು ಯಾರೋ ಅಪಹರಿಸಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ
                  ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಘಟನೆ ಪೊನ್ನಂಪೇಟೆ ಬಳಿಯ ಸುಳುಗೋಡಿನಲ್ಲಿ ನಡೆದಿದೆ. ಸುಳುಗೋಡು ನಿವಾಸಿ ಕೊಕ್ಕೇಂಗಡ ಭೀಮಯ್ಯ ಎಂಬವರ ಲೈನು ಮನೆಯಲ್ಲಿ ವಾಸವಿರುವ ಪಣಿಎರವರ ಮಣಿ ಎಂಬವರ 13 ವರ್ಷ ಪ್ರಾಯದ ಮಗಳು ಸೌಮ್ಯ ಎಂಬಾಕೆಯನ್ನು ಅದೇ ಗ್ರಾಮದ ಮುತ್ತಣ್ಣ ಎಂಬವರ ಲೈನು ಮೆನೆಯಲ್ಲಿ ವಾಸವಿರುವ ಪಣಿ ಎರವರ ಮಣಿ ಎಂಬ ಯುವಕ ಆಗಾಗ್ಗೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಆತನ್ನು ಪ್ರೀತಿಸುವಂತೆ ಆಕೆಗೆ ಕಿರುಕುಳ ನೀಡುತ್ತಿದ್ದನೆನ್ನಲಾಗಿದ್ದು ದಿನಾಂಕ 16/12/2015ರಂದು ಬಾಲಕಿ ಸೌಮ್ಯ ಒಬ್ಬಳೇ ಮನೆಯಲ್ಲಿರುವಾಗ ಯುವಕ ಮಣಿಯು ಮನೆಗೆ ಬಂದು ಆತನು ಆಕೆಯನ್ನು ಮದುವೆಯಾಗುವುದಾಗಿಯೂ ಆತನೊಂದಿಗೆ ಬರುವಂತೆ ಬಲವಂತ ಮಾಡಿದ್ದು ಆಗ ಆಕೆ ಕಿರುಚಿಕೊಂಡಾಗ ಕಿರುಚಿದರೆ ಆಕೆಯನ್ನು ಕೊಂದು ಹಾಕುವುದಾಗಿ ಬೆದರಿಕೆ ಹಾಕಿದ್ದನೆನ್ನಲಾಗಿದೆ. ನಂತರ ಆತನು ಆಕೆಯನ್ನು ಬಲವಂತವಾಗಿ ಆತನ ಮನೆಗೆ ಕರೆದುಕೊಂಡು ಹೋಗಿದ್ದು ರಾತ್ರಿ ಊಟವಾದ ಮೇಲೆ ಸೌಮ್ಯಳು ಮಲಗಿದ್ದಲ್ಲಿಗೆ ಮಣಿಯು ಬಂದು ಆಕೆಯು ಬೇಡವೆಂದರೂ ಕೇಳದೆ ಬಲಾತ್ಕಾರವಾಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು, ದಿನಾಂಕ 18/12/2015ರಂದು ಸೌಮ್ಯಳು ಅಲ್ಲಿಂದ ಬಂದು ಆಕೆಯ ತಂದೆ ತಾಯಿಗಳಿಗೆ ವಿಚಾರ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಗನಿಂದ ತಾಯಿಯ ಮೇಲೆ ಹಲ್ಲೆ.
                    ಗಾಂಜಾ ಸೇವಿಸಿದ ಮತ್ತಿನಲ್ಲಿ ಮಗನೇ ತಾಯಿಯ ಮೇಲೆ ಹಲ್ಲೆ ಮಾಡಿದ ಘಟನೆ ಕುಶಾಲನಗರ ಬಳಿಯ ಬೈಚನಹಳ್ಳಿಯಲ್ಲಿ ನಡೆದಿದೆ. ಬೈಚನಹಳ್ಳಿಯ ಪಂಪ್‌ ಹೌಸ್‌ ನಿವಾಸಿ ಅಶ್ವಿನಿ ಎಂಬವರ ಮಗ ಕೀರ್ತನ್ ಮನೆಯಲ್ಲಿ ಗಾಂಜಾ ಸೇವನೆ ಮಾಡುತಿದ್ದಾಗ ಅಶ್ವಿನಿಯವರು ಆಕ್ಷೇಪಿಸಿದ್ದನ್ನೇ ನೆಪವಾಗಿಟ್ಟುಕೊಂಡು ಮಗ ಕೀರ್ತನ್‌ ತಾಯಿಯನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ  ಕಬ್ಬಿಣದ ರಾಡನ್ನು ತೆಗೆದುಕೊಂಡು ಬಂದು ಕೊಲೆ ಮಾಡುವುದಾಗಿ  ತಲೆಗೆ ಹೊಡೆಯಲು ಬಂದಾಗ ಅಶ್ವಿನಿಯವರು ತಪ್ಪಿಸಿಕೊಂಡು ಕೊಠಡಿಯ ಒಳಗೆ ಹೋಗಿ ಬಾಗಿಲನ್ನು ಹಾಕಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಆಕೆಯು ಕೊಠಡಿಯಿಂದ ಹೊರಗೆ ಬಂದಾಗ ಕೀರ್ತನ್‌ನು ಆಕೆಯ ಕೆಲವೊಂದು ಫೋಟೋಗಳನ್ನು ಕತ್ತರಿಯಿಂದ ಕತ್ತರಿಸಿ ಹಾಖಿರುವುದು ಕಂಡು ಬಂದಿದ್ದು. ಮಗ ಕೀರ್ತನ್ ಹಾಗೂ ಮಗನಿಗೆ ಕುಮ್ಮಕ್ಕು ನೀಡುತಿರುವ ಪತಿ ದಿನೇಶ್ ಕುಮಾರ್‌ರವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಕುಶಾಲನಗರ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಳೆ ದ್ವೇಷ, ವ್ಯಕ್ತಿಯ ಮೇಲೆ ಹಲ್ಲೆ
                  ಹಳೆ ದ್ವೇಷದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಗೋಣಿಕೊಪ್ಪ ಬಳಿಯ ಚೆನ್ನಂಗೊಲ್ಲಿಯಲ್ಲಿ ನಡೆದಿದೆ. ದಿನಾಂಕ 17/12/2015 ರಂದು ರಾತ್ರಿ ಚೆನ್ನಂಗೊಲ್ಲಿ ನಿವಾಸಿ ಟಿ.ವೈ.ಅಶೋಕ ಎಂಬವರು ಚೆನ್ನಂಗೊಲ್ಲಿ ನಗರಕ್ಕೆ ಬಂದು ವಾಪಾಸು ಮನೆಗೆ ಹೋಗುವಾಗ ದಾರಿಯಲ್ಲಿ ಅದೇ ಗ್ರಾಮದ ಅನಿಲ್‌ ಮತ್ತು ಸುನಿಲ್‌ ಎಂಬವರು  ಹಣದ ವಿಚಾರದಲ್ಲಿ ಹಳೆ ವೈಷಮ್ಯದಿಂದ ಜಗಳವಾಡಿ ಕೈ ಹಾಗೂ  ದೊಣ್ಣೆಯಿಂದ ಆಶೋಕರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಮನೆಯ ಮೇಲೆ ಲಾರಿ ಮಗುಚಿ ನಷ್ಟ
                  ರಾತ್ರಿ ವೇಳೆ ಮನೆಯ ಮೇಲೆ ಲಾರಿಯೊಂದು ಮಗುಚಿ ಬಿದ್ದು ಹಾನಿಯುಂಟಾದ ಘಟನೆ ಇಬ್ನಿವಳವಾಡಿ ಗ್ರಾಮದ ಬೋಯಿಕೇರಿಯಲ್ಲಿ ನಡೆದಿದೆ. ದಿನಾಂಕ 18-12- 2015 ರಂದು ರಾತ್ರಿ ಸಮಯ 02.30 ಗಂಟೆಗೆ ಇಬ್ನಿವಳಾವಾಡಿ ಗ್ರಾಮದ ಬೋಯಿಕೇರಿಯ ಬಳಿ ಕೆಎ-07-ಎ-479 ರ ಲಾರಿ ಚಾಲಕನು ಮರಳು ತುಂಬಿದ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಬೋಯಿಕೇರಿ ವಾಸಿ ಜೀನತ್ ರವರ ಮನೆಯ ಮುಂಭಾಗದ ಗೋಡೆಗೆ ಡಿಕ್ಕಿ ಪಡಿಸಿದ ಪರಿಣಾಮ ಲಾರಿ ಮಗುಚಿ ಬಿದ್ದು ಲಾರಿಯಲ್ಲಿದ್ದವರಿಗೆ ಗಾಯವಾಗಿದ್ದು ಜೀನತ್‌ರವರ ಮನೆಯ ಗೋಡೆ,  ಮೇಲ್ಚಾವಣಿ ಹಾಗೂ ವಿದ್ಯುತ್ ಕಂಬ ಜಖಂಗೊಂಡು ನಷ್ಟ ಉಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿದ್ದಾರೆ.

Friday, December 18, 2015

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
            ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಬಳಿಯ ನಾಕೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 16/12/2015ರಿಂದ ನಾಕೂರು ಗ್ರಾಮದ ನಿವಾಸಿ ಬಿ.ಆರ್‌.ಕೃಷ್ಣಪ್ಪ ಎಂಬವರು ಕಾಣೆಯಾಗಿದ್ದು, ಪತ್ನಿ ಜಯಾ ಹಾಗೂ ಇತರರು ಸೇರಿ ಹುಡುಕಿದರೂ ಪತ್ತೆಯಾಗದಿದ್ದು, ದಿನಾಂಕ 17/12/2015ರಂದು ನಾಕೂರು ಶಿರಂಗಾಲ ಗ್ರಾಮದ ಹೊಳೆ ಬದಿಯಲ್ಲಿ ಅವರ ಮೃತದೇಹವು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೆಲ ಸಮಯಗಳಿಂದ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು ಕಾಯಿಲೆಯ ತೀವ್ರತೆಯಿಂದ ಜುಗುಪ್ಸೆಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಸ್ಕೂಟರ್‌ ಪರಸ್ಪರ ಡಿಕ್ಕಿ
              ಸ್ಕೂಟರ್‌ವೊಂದಕ್ಕೆ ಬೈಕ್‌ ಡಿಕ್ಕಿಯಾದ ಘಟನೆ ವಿರಾಜಪೇಟೆ ಬಳಿಯ ಕದನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 17-12-15ರಂದು ಅಮ್ಮತ್ತಿ ಕಾವಾಡಿ ನಿವಾಸಿ ಎಂ.ಕೆ.ಅಪ್ಪಚ್ಚು ಎಂಬವರು ಅವರ ಸಂಬಂಧಿಕರಾದ ಕಾಕೋಟುಪರಂಬು ವಾಸಿ ರಾಯ್ ಪೊನ್ನಣ್ಣರವರೊಂದಿಗೆ ಕೆಎ-04-ಹೆಚ್ಎಫ್-3419ರ ಹೊಂಡಾ ಆ್ಯಕ್ಟಿವಾ ಸ್ಕೂಟರಿನಲ್ಲಿ ಕಾಕೋಟುಪರಂಬು ಕಾಲ ಭೈರವ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ ವಾಪಾಸ್ಸು ಮನೆಗೆ ಬರುತ್ತಿರುವಾಗ ಸಮಯ ರಾತ್ರಿ 10-20ಗಂಟೆಗೆ ಕದನೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ವಿರಾಜಪೇಟೆ ಕಡೆಯಿಂದ ಕೆಎ-12-ಕ್ಯೂ-4285ರ ಪಲ್ಸರ್ ಮೋಟಾರ್ ಸೈಕಲ್ ನ್ನು ಅದರ ಚಾಲಕ ಮೂರ್ನಾಡಿನ ಯೋಗೇಶ್‌ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಂ.ಕೆ.ಅಪ್ಪಚ್ಚುರವರು ಚಾಲನೆ ಮಾಡಿಕೊಂಡು ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಅಪ್ಪಚ್ಚು ಹಾಗೂ ರಾಯ್‌ ಪೊನ್ನಣ್ಣರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕುಸಿದು ಬಿದ್ದು ವ್ಯಕ್ತಿಯ ಸಾವು
         ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಶ್ರೀಮಂಗಲ ಬಳಿಯ ಕಾಕೂರು ಗ್ರಾಮದಲ್ಲಿ ನಡೆದಿದೆ. ಕಾಕೂರು ಗ್ರಾಮದ ಸಂದೀಪ್‌ ಎಂವರಲ್ಲಿ ಕೆಲಸ ಮಾಡಿಕೊಂಡಿದ್ದ ಹೆಚ್‌.ಡಿ.ಕೋಟೆಯ ಅಂತರಸಂತೆ ನಿವಾಸಿ ಪುಟ್ಟರಾಜು ಎಂಬವರು ದಿನಾಂಕ 17/12/2015ರಂದು ಬತ್ತದ ಒಕ್ಕಣೆ ಕೆಲಸ ಮಾಡುತ್ತಿದ್ದು ಸಂಜೆ ಮನೆಗೆ ಬಮದು ಜಗುಲಿಯಲ್ಲಿ ಕುಳಿತುಕೊಂಡಿದ್ದವರು ಒಮ್ಮೆಗೆ ಕುಸಿದು ಬಿದ್ದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಮಹಿಳೆಯ ಮೃತ ದೇಹ ಪತ್ತೆ
                ಕುಶಾಲನಗರದ ಕಾವೇರಿ ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ದಿನಾಂಕ 17-12-2015 ರಂದು ಸಂಜೆ ಸಮಯ ಕುಶಾಲನಗರದ ಇಂದಿರಾ ಬಡಾವಣೆಯ ನಿವಾಸಿ ಎಂ.ಎಂ.ಚರಣ್‌ ಎಂಬವರು ಬೈಚನಹಳ್ಳಿಯಲ್ಲಿ ಹೊಸದಾಗಿ ಲೇಔಟ್ ನಿರ್ಮಾಣದ ಕೆಲಸ ಮಾಡುತ್ತಿರುವಾಗ ಸೈಟ್ ಪಕ್ಕದಲ್ಲಿ ಕಾವೇರಿ ನದಿಯ ಬದಿಯಲ್ಲಿ ಯಾವುದೋ ಅಪರಿಚಿತ ಮಹಿಳೆ ಮೃತಪಟ್ಟಿರುವುದಾಗಿ ತಿಳಿದು ಬಂದು ಅಲ್ಲಿಗೆ ಹೋಗಿ ನೋಡಿದಾಗ  ಅಂದಾಜು ಪ್ರಾಯ 45-50 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ.
                ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಹಲ್ಲೆ ಮಾಡಿದ ಘಟನೆ ಕುಶಾಲನಗರ ಬಳಿಯ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 15-12-2015 ರಂದು ಚಿಕ್ಕ ಅಳುವಾರ ನಿವಾಸಿ ಗೋವಿಂದ ಎಂಬವರು ಹೆಬ್ಬಾಲೆ ಗ್ರಾಮದ ದಿನೇಶ್ ರವರ ಜಾಗದಲ್ಲಿ ಕೆಸ ಹಾಗೂ ಕ್ಯಾನೆ ಗಿಡಗಳನ್ನು ಬೆಳೆದಿದ್ದು ಆ ಜಾಗಕ್ಕೆ ಹೋಗುತ್ತಿರುವಾಗ ಅಳಿಲುಗುಪ್ಪೆಯ ನಿವಾಸಿಗಳಾದ ಮಂಜುನಾಥ ಮತ್ತು ಆತನ ತಮ್ಮ ಕಾಂತರಾಜುರವರು ನಾಲೆಯ ಹತ್ತಿರ ಬಂದು ಗೋವಿಂದರವರೊಡನೆ ಸಾಲದ ಹಣದ ವಿಚಾರವಾಗಿ ಜಗಳವಾಡಿ ಕೈ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, December 17, 2015

ವಿಷ ಸೇವಿಸಿ ವೃದ್ದೆ ಆತ್ಮಹತ್ಯೆ
                ವಿಷ ಸೇವಿಸಿ ವೃದ್ದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಬಳಿಯ ಶಿರಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 15-12-2015 ರಂದು ಶಿರಂಗಾಲದ ಮೂಡ್ಲಿಕೊಪ್ಪಲು ಗ್ರಾಮದ ನಿವಾಸಿ ನಂಜಪ್ಪ ಹಾಗು ಅವರ ಪತ್ನಿ ತಿಮ್ಮಮ್ಮ ಎಂದಿನಂತೆ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು ರಾತ್ರಿ ಸಮಯ 09-30 ಪಿ.ಎಂಗೆ  ಹೆಂಡತಿ ತಿಮ್ಮಮ್ಮ ಕಿರುಚುವ ಶಬ್ದ ಕೇಳಿ ನಂಜಪ್ಪನವರು ಹೋಗಿ ನೋಡಿದಾಗ ಪತ್ನಿ ತಿಮ್ಮಮ್ಮನವರು ಹಾಸಿಗೆಯಲ್ಲಿ ಒದ್ದಾಡುತ್ತಿದ್ದು ಕೂಡಲೇ ಮಗನಿಗೆ ವಿಷಯ ತಿಳಿಸಿ ತಕ್ಷಣ ಯಾವುದೋ ಒಂದು ಆಟೋ ರಿಕ್ಷಾದಲ್ಲಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ತಿಮ್ಮಮ್ಮನವರು ಯಾವುದೋ ಒಂದು ವಿಷ ಪದಾರ್ಥ ಸೇವಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಮೃತೆ ತಿಮ್ಮಮ್ಮನವರು ವಿಪರೀತ ಹೊಟ್ಟೆ ನೋವಿನಿಂದ ಬಳಲುತಿದ್ದು ಹೊಟ್ಟೆ ನೋವು ತಾಳಲಾರದೆ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜೀಪು ಕಾರು ಡಿಕ್ಕಿ; ಹಾನಿ
               ಜೀಪಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಜೀಪು ಹಾನಿಗೀಡಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 16/12/2015ರಂದು ಸುಂಟಿಕೊಪ್ಪದ ನಿವಾಸಿ ಕೆ.ಎಂ.ಉಮ್ಮರ್ ಎಂಬವರು ಅವರ ಜೀಪು ಸಂಖ್ಯೆ ಕೆಎ-02-ಎನ್‌-8426ರ ಜೀಪಿನಲ್ಲಿ ಮಡಿಕೇರಿ ಕಡೆಗೆ ಬರುತ್ತಾ ನಗರದ ಚೈನ್‌ಗೇಟ್ ಬಳಿ ಜೀಪನ್ನು  ಡಿಪೋ ಎಸ್ಟೇಟ್‌ ಬಳಿ ತಿರುಗಿಸುತ್ತಿರುವಾಗ ಹಿಂದಿನಿಂದ ಕೆಎ-12-ಬಿ-0162ರ ಕಾರನ್ನು ಅದರ ಚಾಲಕ ಜಗದೀಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಉಮ್ಮರ್‌ರವರ ಜೀಪಿಗೆ ಡಿಕ್ಕಿಪಡಿಸಿದ  ಪರಿಣಾಮ ಜೀಪಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಸ್ತಿ ವಿಚಾರ ಕೊಲೆ ಬೆದರಿಕೆ
                  ಅಸ್ತಿ ವಿವಾದದ ಕಾರಣದಿಂದ ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 10/12/2015ರಂದು ಮೇಕೇರಿ ನಿವಾಸಿ ದಮಯಂತಿ ಎಂಬ ಮಹಿಳೆ ಮನೆಯಲ್ಲಿ ಒಬ್ಬರೇ ಇರುವಾಗ ಅವರ ಕುಟುಂಬದವರಾದ ಮೇಚನ ಚಿಣ್ಣಪ್ಪ ಎಂಬವರ ಮಗ ಸಂತೋಷ್‌ ಎಂಬಾತ ಮನೆಗೆ ಬಂದು ಆಸ್ತಿ ವಿಚಾರದಲ್ಲಿ ಜಗಳವಾಡಿ ಅಶ್ಲೀಲ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರು ಡಿಕ್ಕಿ, ವ್ಯಕ್ತಿಗೆ ಗಾಯ
                ಪರಸ್ಪರ ಕಾರು ಡಿಕ್ಕಿಯಾಗಿ ವ್ಯಕತಿಯೊಬ್ಬರು ಗಾಯಾಳುವಾದ ಘಟನೆ ವಿರಾಜಪೇಟೆ ಬಳಿಯ ಕಾವಾಡಿ ಗ್ರಾಮದಲ್ಲಿ ನಡೆದಿದೆ. ದಿನಾಂಕ: 16-12-15ರಂದು ಅಮ್ಮತ್ತಿ ನಿವಾಸಿ ಆಂಟನಿ ಎಂಬವರು ಅವರ ಮಗ ಜಾನ್ ಪ್ರೇಡ್ ನ ಹೆಂಡತಿ ಮತ್ತು ಮಕ್ಕಳನ್ನು ಬಿಳುಗುಂದ ಗ್ರಾಮದಿಂದ ಅಮ್ಮತ್ತಿಗೆ ಕರೆದುಕೊಂಡು ಹೋಗಲು ಅವರ ಕಾರು ನಂ. ಕೆಎ-51-ಪಿ-7041ರಲ್ಲಿ ಹೋಗುತ್ತಿರುವಾಗ ಕಾವಾಡಿ ಗ್ರಾಮದ ಆಲದ ಮರದ ತಿರುವಿನಲ್ಲಿ ಎದುರುಗಡೆಯಿಂದ ಕಾರು ಸಂಖ್ಯೆ ಕೆಎ-05-ಎಂಹೆಚ್-1464ರ ಆಲ್ಟೋ ಕಾರಿನ ಚಾಲಕಿ ಕಾರನ್ನು ಅತೀ ವೇಗದಿಂದ ಚಾಲನೆ ಮಾಡಿಕೊಂಡು ಬಂದು ಆಂಟನಿಯವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿರುವುದಲ್ಲದೆ ಆಂಟನಿಯವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ  ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕತ್ತಿಯಿಂದ ಕಡಿದು ಹಲ್ಲೆ
                ಮಹಿಳೆಯೊಬ್ಬರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆ ಕುಟ್ಟ ಬಳಿಯ ಗೋಣಿಗದ್ದೆ ಹಾಡಿಯಲ್ಲಿ ನಡೆದಿದೆ. ದಿನಾಂಕ 16/12/2015ರಂದು ಗೋಣಿಗದ್ದೆ ಹಾಡಿಯ ನಿವಾಸಿ ಯುಮುನ ಎಂಬಾಕೆ ಮನೆಯಲ್ಲಿರುವಾಗ ಆಕೆಯ ಪತಿ ಬಸಪ್ಪ ಎಂಬಾತನು ಮನೆಗೆ ಬಂದು ವಿನಾ ಕಾರಣ ಆಕೆಯೊಂದಿಗೆ ಜಗಳವಾಡಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಶವ ಪತ್ತೆ
                ಕುಶಾಲನಗರದ ಬಳಿ ಕಾವೇರಿ ಹೊಳೆಯಲ್ಲಿ ಅಪರಿಚಿತ ಶವವೊಮದು ಪತ್ತೆಯಾಗಿದೆ. ದಿನಾಂಕ 16/12/2015 ರಂದು ಸಂಜೆ ಕುಶಲನಗರದ ಗುಮ್ಮನಕೊಲ್ಲಿಯ ಆಟೋಚಾಲಕ ದೇವರಾಜು ಎಂಬವರು ಕುಶಾಲನಗರದ ಕುವೆಂಪು ಬಡಾವಣೆಯಲ್ಲಿರುವ ತಪೋವನಕ್ಕೆ ಆಟೋ ಬಾಡಿಗೆಗೆ ಹೋದ ಸಮಯದಲ್ಲಿ ಪಕ್ಕದಲ್ಲಿನ ಕಾವೇರಿ ನದಿ ಬಳಿ ದುರ್ವಾಸನೆ ಬರುತ್ತಿದ್ದು, ಅಲ್ಲಿದ್ದ ಹುಡುಗರು ನದಿಯಲ್ಲಿ ಮನುಷ್ಯನ ಶವವಿರುವುದಾಗಿ ತಿಳಿಸಿದ ಮೇರೆಗೆ ಹೋಗಿ  ನೋಡಿದಾಗ ನದಿಯಲ್ಲಿನ ಬಂಡೆಯ ಬದಿಯಲ್ಲಿ ಅಪರಿಚಿತ ಪುರುಷನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪತ್ನಿಗೆ ದೈಹಿಕ ಕಿರುಕುಳ
                ಪತ್ನಿಗೆ ದೈಹಿಕ ಕಿರುಕುಳ ನೀಡಿ ಹಲ್ಲೆ ಮಾಡಿದ ಘಟನೆ ಕುಶಾಲನಗರ ಬಳಿಯ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 16/12/2015ರಂದು ಮುಳ್ಳುಸೋಗೆ ನಿವಾಸಿ ಇಂದ್ರೇಶ್‌ ಎಂಬವರು ಸಂಘಕ್ಕೆ ಹಣ ಕಟ್ಟುವ ವಿಚಾರದಲ್ಲಿ ಆತನ ಪತ್ನಿ ಭಾರತಿ ಎಂಬವರೊಂದಿಗೆ ಜಗಳವಾಡಿ ಆಕೆಯ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಕಾಫಿ ಕಳವು ಪ್ರಕರಣ
                   ಪಲ್ಪ್‌ ಹೌಸ್‌ನಲ್ಲಿಟ್ಟಿದ್ದ ಕಾಫಿಯನ್ನು ಕಳವು ಮಾಡಿದ ಘಟನೆ ಸೋಮವಾರಪೇಟೆ ಬಳಿಯ ತಾಕೇರಿ ಗ್ರಾಮದಲ್ಲಿ ನಡೆದಿದೆ. ತಾಕೇರಿ ನಿವಾಸಿ ಎನ್‌.ಎಸ್‌.ಗಣಪತಿ ಎಂಬವರು ದಿನಾಂಕ 14-12-2015 ರಂದು ಕೆ.ಪಿ.ರಮೇಶರವರ ಪಲ್ಪರ್ ಹೌಸ್‍ನಲ್ಲಿ ಅವರ 6 ಚೀಲ ಅರೇಬಿಕಾ ಕಾಫಿಯನ್ನು ಬೇಳೆ ಮಾಡಿಸುವ ಸಲುವಾಗಿ ಇಟ್ಟಿದ್ದು ದಿನಾಂಕ 15-12-2015 ರಂದು  ಪಲ್ಪ್‌ ಹೌಸ್‍ಗೆ ಹೋಗಿ ನೋಡಲಾಗಿ ಇಟ್ಟಿದ್ದ ಸುಮಾರು ರೂ.6,000/- ಮೌಲ್ಯದ 180 ಕೆ.ಜಿಯಷ್ಟು 6 ಚೀಲ ಕಾಫಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಅದೇ ಗ್ರಾಮದ ಮಧು ಕೆ.ಆರ್‍. ಎಂಬವರು ಕಳ್ಳತನ ಮಾಡಿರಬಹುದಾಗಿ ಶಂಕಿಸಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Wednesday, December 16, 2015

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ
                 ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ಬಳಿಯ ಬಾಳುಗೋಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 15-12-15ರಂದು ಪೊನ್ನಂಪೇಟೆಯ ಬಿ.ಶೆಟ್ಟಿಗೇರಿ ನಿವಾಸಿ ಪೂಣಚ್ಚಿರ ಕಿಶೋರ್‌ ರವರಿಗೆ ಅವರ ಸಂಬಂಧಿಕರಾದ ಪಿ.ಬೆಳ್ಳಿಯಪ್ಪರವರು  ದೂರವಾಣಿ ಕರೆ ಮಾಡಿ ಅವರ ದೊಡ್ಡಪ್ಪ ಕುಶಾಲಪ್ಪರವರು ಬಾಳುಗೋಡು ಗ್ರಾಮದಲ್ಲಿ ಪುಚ್ಚಿಮಂಡ ತಮ್ಮಯ್ಯರವರ ಮನೆಯ ಬಳಿ ಮಣ್ಣು ರಸ್ತೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ ಮೇರೆಗೆ ಕಿಶೋರ್‌ರವರು ಸ್ಥಳಕ್ಕೆ ಬಂದು ನೋಡಿದಾಗ ಅವರ ದೊಡ್ಡಪ್ಪ ಕುಶಾಲಪ್ಪರವರು ವಿಷ ಸೇವಿಸಿ ಮೃತಪಟ್ಟಿರುವುದು ಕಂಡು ಬಂದಿದ್ದು, ಕುಶಾಲಪ್ಪರವರು ಹೊಟ್ಟೆನೋವಿನಿಂದ ಬಳಲುತ್ತಿದ್ದು, ಮಕ್ಕಳಿಲ್ಲದ ಕಾರಣ ಬೇಸರದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಯುವಕನ ಆತ್ಮಹತ್ಯೆ
                   ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಬಳಿಯ ಚೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಚೆಟ್ಟಳ್ಳಿ ಗ್ರಾಮದ ನಿವಾಸಿ ಜಯಂತಿ ಮಜುಂದಾರ್‌ ಎಂವರ ಮಗ ಬಿಸ್ವಜಿತ್‌ ಮಜುಂದಾರ್‌ ಎಂಬಾತನು  3-4 ತಿಂಗಳಿನಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು ದಿನಾಂಕ 14/12/2015 ರಂದು ರಾತ್ರಿ ಸಮಯ ವಾಸವಿರುವ ಲೈನ್ ಮನೆಯಿಂದ ಹೋದವನು ವಾಪಾಸ್ಸು ಮನೆಗೆ ಬಾರದಿದ್ದು ಅಕ್ಕಪಕ್ಕದವರಲ್ಲಿ ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗದೆ ಇದ್ದು, ದಿನಾಂಕ 15.12.2015 ರಂದು ಜಯಂತಿ ಮಜುಂದಾರ್‌ರವರು ಕೆಲಸ ಮಾಡುವ ಎಸ್ಟೇಟ್ ನ ಒಳಗಡೆ ಇರುವ ಹಾಲುವಾಣ ಮರದ ಕೊಂಬೆಗೆ ಆತನು ಧರಿಸಿದ್ದ ಅಂಗಿಯ ಒಂದು ತುದಿಯನ್ನು ಕಟ್ಟಿ ಮತ್ತೊಂದು ತುದಿಯಿಂದ ಕತ್ತಿಗೆಗೆ ನೇಣು ಬಿಗಿದುಕೊಂಡು ಮೃತ ಪಟ್ಟಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ವ್ಯಾನ್‌ ಡಿಕ್ಕಿ
                ಪಾದಚಾರಿ ಮಹಿಳೆಯೊಬ್ಬರಿಗೆ ವ್ಯಾನ್‌ ಡಿಕ್ಕಿಯಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 14/12/2015ರಂದು ಬಿಳಿಗೇರಿ ಗ್ರಾಮದ ನಿವಾಸಿ ಬಿ.ಎ.ಕುಮಾರಿ ಎಂಬ ಮಹಿಳೆಯು ನಗರದ ಈಸ್ಟ್‌ ಎಂಡ್‌ ಹೋಟೆಲ್‌ ಬಳಿ  ನಡೆದುಕೊಂಡು ಬರುತ್ತಿರುವಾಗ ಕೆ-12-ಎಂಬಿ-2828ರ ಮಾರುತಿ ಓಮ್ನಿ ವ್ಯಾನನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕುಮಾರಿರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಆಕೆಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, December 15, 2015

ವ್ಯಕ್ತಿಯ ಮೂವರಿಂದ ಹಲ್ಲೆ, ಕೊಲೆ ಬೆದರಿಕೆ:

   ವಿನಾಕಾರಣ ಮೂವರು ವ್ಯಕ್ತಿ ವ್ಯಕ್ತಿಯೊಬ್ಬರ ಮನೆಯ ಬಳಿ ಹೋಗಿ ಹಲ್ಲೆ ನಡೆಸಿ ಕೊಲೆ ಬಿದರಿಕೆ ಹಾಕಿಕ ಘಟನೆ ಶನಿವಾರಸಂತೆ ಹತ್ತಿರದ ಸುಳುಗಳಲೆ ಎಂಬಲ್ಲಿ ನಡೆದಿದೆ. ದಿನಾಂಕ 12-12-2015 ರಂದು ಸಂಜೆ 06-00 ಗಂಟೆಗೆ ಶನಿವಾರಸಂತೆಯ ಸುಳುಗಳಲೆ ಕಾಲೋನಿಯಲ್ಲಿ ವಾಸವಾಗಿರುವ ಎಸ್.ಜೆ. ರಾಜಪ್ಪ ಎಂಬವರು ತಮ್ಮ ಮನೆಯ ಅಂಗಳದಲ್ಲಿ ಕುಳಿತುಕೊಂಡಿರುವಾಗ್ಗೆ ಆರೋಪಿಗಳಾದ ಮಂಜುನಾಥ, ಲಕ್ಷ್ಮಮ್ಮ ಮತ್ತು ವಿಶ್ವನಾಥ ಎಂಬವರು ಅಲ್ಲಿಗೆ ಬಂದು ಏಕಾ-ಏಕಿ ರಾಜಪ್ಪನವರ ಮೇಲೆ ಕೈಗಳಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದುರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಆಸ್ತಿ ವಿವಾದ, ವ್ಯಕ್ತಿಗಳಿಂದ ಅಕ್ರಮ ಪ್ರವೇಶ, ಗಿಡಗಳನ್ನು ಕಡಿದು ನಾಶ:

    ಆಸ್ತಿ ವಿವಾದದ ಹಿನ್ನಲೆಯಲ್ಲಿ ಇಬ್ಬರು ವ್ಯಕ್ತಿಗಳು ಎಸ್ಟೇಟ್ ಒಂದಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿ ಗಿಡಗಳನ್ನು ಕಡಿದು ನಾಶಪಡಿಸಿ ನಷ್ಟಪಡಿಸಿದ ಘಟನೆ ಮಡಿಕೇರಿ ಸಮೀಪಕ ಹಾಕತ್ತೂರು ಗ್ರಾಮದಲ್ಲಿ ನಡೆದಿದೆ. ಹಾಕತ್ತೂರು ಗ್ರಾಮದ ಗ್ರೀನ್ ಲ್ಯಾಂಡ್ ಎಸ್ಟೇಟ್ ಗೆ ಸಂಬಂಧಿಸಿದ ಜಾಗವು ತಮಗೆ ಸೇರಬೇಕೆಂದು ಐಕೊಳ ಗ್ರಾಮದ ಸುದೀರ್ ಹಾಗು ಮರಗೋಡು ಗ್ರಾಮದ ಕಡ್ಡಿ ಸುಂದರ ಎಂಬವರು ದಿನಾಂಕ 14-12-2015 ರಂದು 9-30 ಎ.ಎಂ.ಗೆ ಮೇಲ್ಕಾಣಿಸಿದ ಎಸ್ಟೇಟಿನ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ತೋಟದಲ್ಲಿ ನೆಟ್ಟಿರುವ ಕಾಫಿ ಗಿಡಗಳನ್ನು ಕಡಿದು ಸುಮಾರು 25,000 ರೂ. ನಷ್ಟಪಡಿಸಿರುವುದಾಗಿ ಮತ್ತು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಎಸ್ಟೇಟ್ ಮಾಲಿಕರಾದ ರಾಮಕೃಷ್ಣನ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗದ ವಿಚಾರದಲ್ಲಿ ಜಗಳ, ಕೊಲೆ ಬೆದರಿಕೆ:

    ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಗಾಳಿ ಬೀಡು ಗ್ರಾಮದ ನಿವಾಸಿಗಳಾದ ಪಾಂಡೀರ ಸುಬ್ರಮಣಿ ಮತ್ತು ಅಣ್ಣಯ್ಯ ಎಂಬವರ ನಡುವೆ ಜಾಗದ ವಿಚಾರದಲ್ಲಿ ಜಗಳವೇರ್ಪಟ್ಟು ಅಣ್ಣಯ್ಯನವರು ಸುಬ್ರಮಣಿರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಮಾಡುವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕೂಲಿ ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

   ಶನಿವಾಸಂತೆ ಠಾಣಾ ಸರಹದ್ದಿನ ತ್ಯಾಗರಾಜ ಕಾಲೋನಿಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರಾದ ಶಾಹಿದ್ ಮತ್ತು ವಿನೋದ್ @ ಪುಟ್ಟ ಎಂಬವರ ನಡುವೆ ದಿನಾಂಕ 14-12-2015 ರಂದು ಕೂಲಿ ಹಣದ ವಿಚಾರದಲ್ಲಿ ಜಗಳವಾಗಿ ವಿನೋದ್ @ ಪುಟ್ಟ ಶಾಹಿದರನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು, ಈ ಸಂಬಂಧ ಶಾಹಿದ್ ನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಾದಚಾರಿ ಕಾರು ಡಿಕ್ಕಿ:

  ಪಾದಚಾರಿ ಮತ್ತು ಲಾರಿಯೊಂದಕ್ಕೆ ಕಾರೊಂದು ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ಸಿದ್ದಾಪುರ ಹತ್ತಿರದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 14-12-2015 ರಂದು ನೆಲ್ಲಿಹುದಿಕೇರಿಯ ರಾಯನ್ ಕುಟ್ಟಿ ಎಂಬವರು ನೆಲ್ಲಿಹುದಿಕೇರಿ ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರಿಗೆ ಮಾರುತಿ ಕಾರೊಂದು ಡಿಕ್ಕಿಯಾಗಿದ್ದು ಪುನ: ಸದರಿ ಕಾರು ಎದುರಿನಲ್ಲಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ ಪಾದಚಾರಿ ರಾಯನ್ ಕುಟ್ಟಿ ಹಾಗು ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Monday, December 14, 2015

ಮೋಟಾರು ಸೈಕಲ್ ಮಗುಚಿ ಅಫಘಾತ
              ಮೋಟಾರು ಸೈಕಲ್‌ ಮಗುಚಿ ಇಬ್ಬರಿಗೆ ಗಾಯಗಳಾದ ಘಟನೆ ಶನಿವಾರಸಂತೆ ಬಳಿಯ ಗಂಗಾವರ ಗ್ರಾಮದಲ್ಲಿ ನಡೆದಿದೆ. ದಿನಾಂಕ 12-12-2015 ರಂದು ಕೈಸರವಳ್ಳಿ ನಿವಾಸಿ ಚಂದ್ರ ಶೇಖರ್‌ ಎಂಬವರುಗೆ  ತುಂಬಾ ಚಳಿ ಜ್ವರ ಇದ್ದ ಕಾರಣ ಶನಿವಾರಸಂತೆ ಆಸ್ಪತ್ರೆಗೆ ಬರಲು ಅವರ ಪತ್ನಿ ನಂದಿನಿ ಎಂಬವರು ಚಂದ್ರಶೇಕರ್‌ರವರನ್ನು ಮೋಟಾರ್ ಸೈಕಲ್ ನಂ ಕೆ.ಎ-12-ಕೆ-3950 ರಲ್ಲಿ ಹಿಂಬದಿಯಲ್ಲಿ ಕೂರಿಸಿಕೊಂಡು ಚಾಲನೆ ಮಾಡಿಕೊಂಡು ಗಂಗಾವರ ಗ್ರಾಮದ ವೇದಮೂರ್ತಿ ರವರ ತೋಟದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಬರುತ್ತಿರುವಾಗ ನಂದಿನಿಯವರು ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆಯಲ್ಲಿ ಮೋಟಾರ್ ಸೈಕಲನ್ನು ಕೆಳಗೆ ಬೀಳಿಸಿದ ಪರಿಣಾಮ ನಂದಿನಿ ಹಾಗೂ ಚಂದ್ರಶೇಖರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ  ಮೇರೆಗೆ ಶನಿವಾರಸಂತೆ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಪರಸ್ಪರ ವಾಹನ ಡಿಕ್ಕಿ, ಇಬ್ಬರಿಗೆ ಗಾಯ

                ವಾಹನಗಳೆರಡು ಪರಸ್ಪರ ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಗೋಣಿಕೊಪ್ಪ ಬಳಿಯ ಹಾತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ  13/12/2015ರಂದು ಕೇರಳದ ಉಳಿಕಲ್‌ ನಿವಾಸಿ ರಾಜೀವನ್‌ ಎಂಬವರು ವಾಹನ ಸಂಖ್ಯೆ ಕೆ.ಎಲ್ 14.ಹೆಚ್.5322 ರ ಮಾರುತಿ ಕಾರಿನಲ್ಲಿ ಜೋಳಿ ಎಂಬವರ ಚಾಲನೆಯಲ್ಲಿ ಗೋಣಿಕೊಪ್ಪ ನಗರದಿಂದ ವಿರಾಜಪೇಟೆ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಹಾತೂರಿನ ಬಳಿ ಹೋಗುತ್ತಿರುವಾಗ ವಿರಾಜಪೇಟೆ ಕಡೆಯಿಂದ ರಸ್ತೆಯ ಅಂದರೆ ಎದುರುಗಡೆಯಿಂದ ವಾಹನ ಸಂಖ್ಯೆ ಕೆ.ಎ.12 ಪಿ.5641 ರಲ್ಲಿ ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಾಜೀವನವರು ಪ್ರಯಾಣಿಸುತ್ತಿದ್ದ ಕಾರಿಗೆ  ಡಿಕ್ಕಿಪಡಿಸಿದ  ಪರಿಣಾಮ  ಕಾರಿನಲ್ಲಿದ್ದ ರಾಜೀವ್‌ ಮತ್ತು ಜೋಳಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅತಿ ಮದ್ಯಪಾನದಿಂದ ವ್ಯಕ್ತಿಯ ಸಾವು
                    ಅತಿಯಾದ ಮದ್ಯ ಸೇವಿಸಿದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 12-12-15 ರಂದು ವಿರಾಜಪೇಟೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ಸ್ ನಿಲ್ದಾಣದ ಪಕ್ಕ ಇರುವ ಕಿಂಗ್ಸ್ ವೇ ಹೊಟೇಲಿನ ಪಕ್ಕದ ವೆರಾಂಡದಲ್ಲಿ ಕೇರಳದ ಮಲಪುರಂ ಜಿಲ್ಲೆಯ ರಾಮದಾಸ್ ಹಾಗೂ ನಾರಾಯಣನ್ ಎಂಬುವವರು ರಾತ್ರಿ ಮದ್ಯ ಸೇವಿಸಿ ಮಲಗಿದ್ದು, ದಿನಾಂಕ 13-12-15 ರಂದು ಬೆಳಿಗ್ಗೆ 6-00 ಗಂಟೆಗೆ ರಾಮದಾಸ್‌ರವರು ಎದ್ದು ತನ್ನ ಪಕ್ಕದಲ್ಲಿದ್ದ ನಾರಾಯಣನನ್ನು ಕರೆದಾಗ ಆತನು ಮಾತನಾಡದೇ ಇದ್ದು, ಸದ್ರಿ ನಾರಾಯಣನು ಮೃತ ಪಟ್ಟಿರುವುದಾಗಿ ತಿಳಿದು ಬಂದಿದ್ದು, ಈತನು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 9-12-15 ರಂದು ಮೂರ್ನಾಡ್ ಸರಕಾರಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡಿದ್ದು, ಖಾಯಿಲೆ ಇದ್ದರೂ ವಿಪರೀತ ಮದ್ಯ ಸೇವಿಸಿ ರಾತ್ರಿ ವೇಳೆ ವೆರಾಂಡದಲ್ಲಿ ಮಲಗಿ ಚಳಿ ಗಾಳಿ ತಾಳಲಾರದೇ ಮೃತ ಪಟ್ಟಿರಬುದಾಗಿ ನೀಡಿದ  ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತೋಟದ ಮನೆಯ ಬೀಗ ಮುರಿದು ಸಾಮಗ್ರಿಗಳ ಕಳವು
              ತೋಟದ ಮನೆಯ ಬೀಗ ಮುರಿದು ಹಲವು ವಸ್ತುಗಳನ್ನು ಕಳವು ಮಾಡಿದ ಘಟನೆ ಶನಿವಾರಸಂತೆ ಬಳಿಯ ಬೆಂಬಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 11-12-2015 ರಂದು ಸಂಜೆ ವೇಳೆ ಶನಿವಾರಸಂತೆ ನಿವಾಸಿ ಬಿ.ಡಿ.ಶಶಿಧರ್‌ ಎಂಬವರು ಬೆಂಬಳೂರು ಗ್ರಾಮದಲ್ಲಿರುವ ತಮ್ಮ ಕಾಫಿ ತೋಟದ ಮನೆಗೆ ಬೀಗ ಹಾಕಿ ಶನಿವಾರಸಂತೆಯಲ್ಲಿರುವ ತಮ್ಮ ಮನೆಗೆ ಬಂದಿದ್ದು, ದಿನಾಂಕ 12-12-2015 ರಂದು ಸಂಜೆ 04-00 ಗಂಟೆಗೆ ತೋಟದ ಮನೆಗೆ ಹೋಗಿ ನೋಡಿದಾಗ ತೋಟದ ಮನೆಯ ಬೀಗವನ್ನು ಯಾರೋ ಕಳ್ಳರು ಮುರಿದು ಒಳನುಗ್ಗಿ ಸುಮಾರು 14,500 ರೂಗಳು ಬೆಲೆ ಬಾಳುವ ಸ್ಪ್ರೇ ಮಿಷನ್ ಮತ್ತು ಅಡುಗೆ ಮಾಡಲು ಉಪಯೋಗಿಸುತ್ತಿದ್ದ 1,500 ರೂ ಬೆಲೆ ಬಾಳುವ ಗ್ಯಾಸ್ ಸ್ಟೌ , ಹಾಗೂ 2,500 ರೂ ಬೆಲೆ ಬಾಳುವ ತುಂಬಿದ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, December 13, 2015

 ಕೆಲಸದ ವೇಳೆ ಮರದ ದಿಮ್ಮಿ ಬಿದ್ದು ವ್ಯಕ್ತಿಯ ಕಾಲು ಮುರಿತ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಬಜೆಗುಂಡಿ ಒಳಗುಂದ ಗ್ರಾಮದ ನಿವಾಸಿ ಮಣಿಕಂಠ ಎಂಬವರನ್ನು ಅದೇ ಗ್ರಾಮದ ಮುರುಗ ಹಾಗು ಮಣಿಕಂಠ ಎಂಬವರು ದಿನಾಂಕ 29-11-2015 ರಂದು ಕಾಂಡನಕೊಲ್ಲಿಯ ಸೋಮಯ್ಯ ಎಂಬವರ ತೋಟಕ್ಕೆ ಕೆಲಸಕ್ಕೆ ಕರೆದುಕೊಂಡು ಹೋಗಿದ್ದು, ಕೆಲಸ ಮಾಡುತ್ತಿದ್ದಾಗ ಮರದ ದಿಮ್ಮಿಯೊಂದ ಮಣಿಕಂಠನವರ ಕಾಲಿಗೆ ಬಿದ್ದು ಮುರಿತಕ್ಕೊಳಗಾಗಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾಗಿ ಸದರಿ ಮುರುಗ ಹಾಗು ಮಣಿಕಂಠನವರು ತಿಳಿಸಿ ನಂತರ ಯಾವುದೇ ವೆಚ್ಚವನ್ನು ಭರಿಸಿರುವುದಿಲ್ಲವೆಂಬುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಟ್ರಾಕ್ಟರ್ ಅವಘಡ, ವ್ಯಕ್ತಿಗೆ ಗಾಯ:

     ದಿನಾಂಕ 12-12-2015 ರಂದು ಸಮಯ 20-45 ಗಂಟೆಗೆ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ತ್ಯಾಗರಾಜ ಕಾಲೋನಿಯ ನಿವಾಸಿಯಾದ ಎಸ್.ಟಿ. ಲಿಂಗರಾಜುರವರು ಅಡಿಕೆ ತುಂಬಿಕೊಂಡು ಬರುವ ಸಲುವಾಗಿ ಸಣ್ಣಯ್ಯ ಎಂಬವರ ಬಾಪ್ತು ಟ್ರಾಕ್ಟರ್ ನಲ್ಲಿ ಅಪ್ಪಶೆಟ್ಟಳ್ಳಿ ಎಂಬಲ್ಲಿಗೆ ಹೋಗುತ್ತಿದ್ದಾಗ ಚಾಲಕ ಸಣ್ಣಯ್ಯನವರು ಟ್ರಾಕ್ಟರ್ ಅನ್ನು ಅತೀ ವೇಗ ಮತ್ತು ಅಜಾಗೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಟ್ರಾಕ್ಟರ್ ರಸ್ತೆಗೆ ಮಗುಚಿ ಬಿದ್ದು, ಟ್ರಾಕ್ಟರ್ ನಲ್ಲಿದ್ದ ಎಸ್.ಟಿ. ಲಿಂಗರಾಜುರವರು ಗಾಯಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ರಿಕ್ಷಾ ಡಿಕ್ಕಿ, ಗಾಯ:

     ದಿನಾಂಕ 12-12-2015 ರಂದು ಸುಂಟಿಕೊಪ್ಪ ಗದ್ದೆಹಳ್ಳ ನಿವಾಸಿ ಧನುಷ್, ಕೆಎ-12ಎ-8131 ಆಟೋರಿಕ್ಷಾ ಚಾಲಕ, ಇವರು ಮಡಿಕೇರಿಯಿಂದ ಗದ್ದೆಹಳ್ಳದ ಕಡೆಗೆ ತಮ್ಮ ಆಟೋರಿಕ್ಷಾದಲ್ಲಿ ಹೋಗುತ್ತಿದ್ದಾಗ ಸದರಿ ಆಟೋರಿಕ್ಷಾ ವೃದ್ದ ಪಾದಚಾರಿಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಸದರಿ ಪಾದಚಾರಿಯವರು ಗಾಯಗೊಂಡಿದ್ದು, ಸದರಿ ಆಟೋರಿಕ್ಚಾದಲ್ಲಿ ಪ್ರಯಾಣಿಸುತ್ತಿದ್ದ ಎ.ಎ. ಸಾಹಿದ್ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, December 11, 2015

ನೇಣು ಬಿಗಿದುಕೊಂಡು ಯುವಕನ ಆತ್ಮಹತ್ಯೆ
                  ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಮಡಿರುವ ಘಟನೆ ಸಿದ್ದಾಪುರ ಬಳಿಯ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 10-12-2015ರಂದು ಹಚ್ಚಿನಾಡು ನಿವಾಸಿ ಪಣಿ ಎರವರ ಅಪ್ಪು ಮತ್ತು ಅವರ ಹೆಂಡತಿ ಕೂಲಿ ಕೆಲಸಕ್ಕೆ ಹೋಗಿದ್ದು ಕೆಲಸ ಮುಗಿಸಿ ವಾಪಾಸು ಮನೆಗೆ ಬಂದು ನೋಡಿದಾಗ ಅವರ ಮಗ ಅಯ್ಯಪ್ಪ ಲೈನು ಮನೆಯ ಮರದ ಕೌಕೋಲಿಗೆ ನೈಲಾನು ಹಗ್ಗದಿಂದ ಕತ್ತಿಗೆಗೆ ಬಿಗಿದುಕೊಂಡು ನೇತಾಡುತ್ತಿದ್ದು ಕಂಡು ಬದುಕಿರಬಹುದೆಂದು ನೈಲಾನು ಹಗ್ಗವನ್ನು ಕತ್ತಿಯಿಂದ ಕತ್ತರಿಸಿ ಕೆಳಗೆ ಇಳಿಸಿ ನೋಡಲಾಗಿ  ಅಯ್ಯಪ್ಪ ಮೃತ ಪಟ್ಟಿರುವುದು ತಿಳಿದು ಬಂದಿದ್ದು, ಅಯ್ಯಪ್ಪ ಪ್ರತಿದಿನ ವಿಪರೀತ ಸಾರಾಯಿ ಕುಡಿಯುತ್ತಿದ್ದು ಇತ್ತಿಚೆಗೆ ಟೈಫಾಯಿಡ್‌ ಕಾಯಿಲೆಯಿಂದ ಬಳಲುತ್ತಿದ್ದು ಎಲ್ಲ ಆಸ್ಪತ್ರೆಯಲ್ಲಿ ತೋರಿಸಿ ಗುಣಮುಖವಾಗದ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಸಿದ್ದಾಪುರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆಕಸ್ಮಿಕ ಗುಂಡು ಹಾರಿ ವ್ಯಕ್ತಿಗೆ ಗಾಯ
                   ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೊಬ್ಬ ಗಾಯಗೊಂಡಿರುವ ಘಟನೆ ವಿರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 09-12-15ರಂದು ಕೆದಮುಳ್ಳೂರು ಗ್ರಾಮದಲ್ಲಿ  ಮಾಳೇಟ್ಟಿರ ಅಶೋಕ ಎಂಬುವವರು ಅವರ ತೋಟದಲ್ಲಿ ಕಾಫಿ ಕುಯ್ಯಿಲಿಗೆ ಬಂದಿದ್ದು, ಕಾಫಿ ಕಳ್ಳತನವಾಗುವ ಸಾಧ್ಯತೆ ಇರುವುದರಿಂದ ತಮ್ಮ ಕೋವಿಯನ್ನು ತೆಗೆದುಕೊಂಡು ಅವರ ಕಾರ್ಮಿಕ ಪಿ.ಕೆ. ವಿಶ್ವನಾಥರವರನ್ನು ಸಾಯಂಕಾಲ ಅಂದಾಜು 7-30ಗಂಟೆಗೆ ಜೊತೆಯಲ್ಲಿ ಕರೆದುಕೊಂಡು ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಅಶೋಕರವರು ಬೀಡಿ ಸೇದಲೆಂದು ಲೈಟರ್‌ ಹಚ್ಚಲು ಯತ್ನಿಸಿದ್ದು ಗಾಳಿ ಇದ್ದುದರಿಂದ ತಿರುಗಿ ನಿಂತು ಲೈಟರ್‌ ಹಚ್ಚಿದ್ದು ಆಗ ಅವರ   ಭುಜದ ಮೇಲೆ ಇದ್ದ ಮೊದಲೇ ತೋಟಾ ತುಂಬಿಸಿದ್ದ ಕೋವಿಯ ಕೊತ್ತಿಗೆ ಕಾಫಿ ಗಿಡದ ಕೊಂಬೆ ತಾಗಿ ಕೋವಿಯಿಂದ ಗುಂಡು ಹಾರಿ ಹಿಂದೆ ಬರುತ್ತಿದ್ದ ವಿಶ್ವನಾಥರವರ ಬೆನ್ನಿಗೆ, ಸೊಂಟಕ್ಕೆ, ಎಡ ಕೈ ಮತ್ತು ಎಡ ತೊಡೆಗೆ ಗುಂಡು ತಗುಲಿ ಗಾಯಗಳಾಗಿದ್ದು, ಅಶೋಕರವರು ಗಾಯಾಳು ವಿಶ್ವನಾಥರವರನ್ನು ಕೂಡಲೇ ಅವರ ಓಮಿನಿ ವ್ಯಾನ್ ನಲ್ಲಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು,  ಅಶೋಕರವರು ಕೋವಿಗೆ ತೋಟ ಲೋಡ್ ಮಾಡಿ ಎಚ್ಚರ ವಹಿಸದೇ ನಿರ್ಲಕ್ಷತನ ತೋರಿದ್ದರಿಂದ ಘಟನೆ ಸಂಭವಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬೈಕಿಗೆ ಜೀಪು ಡಿಕ್ಕಿ, ಸವಾರ ಗಾಯಾಳು
                    ಮೋಟಾರು ಬೈಕೊಂದಕ್ಕೆ ಜೀಪು ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಗಾಯಗೊಂಡಿರುವ ಘಟನೆ ಗೋಣಿಕೊಪ್ಪ ಬಳಿಯ ಚೆನ್ನಂಗೊಲ್ಲಿ ಬಳಿ ನಡೆದಿದೆ. ದಿನಾಂಕ 09/12/2015ರಂದು ಮಂಜುನಾಥ್ ಎಂಬವರು ಅವರು ಕೆಲಸ ಮಾಡುತ್ತಿರುವ ಕಂಪನಿ ಕೆಲಸ ಮುಗಿಸಿಕೊಂಡು ಕೆಎ-13-ವೈ- 6942 ರ ಬೈಕಿನಲ್ಲಿ ಗೋಣಿಕೊಪ್ಪದ ಚೆನ್ನಂಗೊಲ್ಲಿ ಜಂಕ್ಷನ್ ಹತ್ತಿರ ತಲುಪುವಾಗ ಎದುರುಗಡೆಯಿಂದ ಕೆಎ-12-ಎಂ-1167 ರ ಜೀಪನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮಂಜುನಾಥ್ ರವರ ಬೈಕ್ ಗೆ ಡಿಕ್ಕಿ ಪಡಿಸಿ ನಿಲ್ಲಿಸದೇ ಹೋಗಿದ್ದು, ಮಂಜುನಾಥ್ ಬೈಕ್ ನಿಂದ ಕೆಳಗೆ ಬಿದ್ದು ಗಾಯವಾಗಿದ್ದು ಗಪೂರ್ ಎಂಬುವವರು ಚಿಕಿತ್ಸೆಯ ಬಗ್ಗೆ ಗೋಣಿಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲುಮಾಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಿರುವುದಾಗಿ ನೀಡಿದ  ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Thursday, December 10, 2015

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
              ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 24-11-2015 ರಂದು ಸಂಜೆ ಕುಶಾಲನಗರದ ಬೈಚನಹಳ್ಳಿ ನಿವಾಸಿ ಮನು ಪ್ರಸಾದ್‌ ಎಂಬವರು ನಿಸರ್ಗಧಾಮದ ಬಳಿ ಇರುವ ಚಿನ್ನಮಾಸ್ ಹೊಟೇಲ್ ಎದುರು ರಸ್ತೆಯಲ್ಲಿ ನಡೆದುಕೊಂಡು ಬರುತಿರುವಾಗ ಅವರಿಗೆ ಪರಿಚಯವಿಲ್ಲದ ಒಂದು ವಾಹನ ಬಂದಿದ್ದು ಅದರಲ್ಲಿದ್ದವರು ಮನುಪ್ರಸಾದ್‌ರವರನ್ನು ಕುರಿತು ವೆಜ್ ಹೋಟೆಲ್ ಎಲ್ಲಿ ಸಿಗುತ್ತೆ ಎಂದು ಕೇಳಿದಾಗ ಮನುಪ್ರಸಾದ್‌ರವರು ಕುಶಾಲನಗರದ ಕೆಲವು ಹೋಟೆಲ್ ಹೆಸರು ಹೇಳಿದ್ದು ಅವರುಗಳು ಅಲ್ಲಿಂದ ಹೋದ ತಕ್ಷಣ ಚಿನ್ನಮಾಸ್ ಹೋಟೆಲ್ ನಲ್ಲಿ ಕೆಲಸ ಮಾಡುತಿದ್ದ ಗಣಪತಿ ಮತ್ತು ಬೀಡ ಅಂಗಡಿಯ ರಾಜು ಎಂಬುವರು ಮನುಪ್ರಸಾದ್‌ರರನ್ನು ತಡೆದು ನಿಲ್ಲಿಸಿ ಕೈಯಿಂದ ಮುಖದ ಬಾಗಕ್ಕೆ ಗುದ್ದಿ ನೋವುಪಡಿಸಿದ್ದಲ್ಲದೆ ಅಶ್ಲೀಲಶಬ್ದಗಳಿಂದ ನಿಂದಿಸಿರುವುದಾಗಿ ನೀಡಿದ  ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ ಸಂಗ್ರಹದ ಹಣ ದುರುಪಯೋಗ
                 ಮಡಿಕೇರಿ ನಗರ ಸಭೆಯ ಖಾಯಂ ಕರ ಸಂಗ್ರಹಗಾರನೊಬ್ಬ ಸಾರ್ವಜನಿಕರಿಂದ ಸಂಗ್ರಹಿಸಿದ ಕರದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಘಟನೆ ನಡೆದಿದೆ. ಮಡಿಕೇರಿ ನಗರ ಸಭೆಯ ಖಾಯಂ ಕರ ವಸೂಲಿಗಾರರಾದ ಸಜಿತ್ ಕುಮಾರ್ ರವರು ನೀರಿನ ತೆರಿಗೆ, ಮಳಿಗೆಗಳ ಬಾಡಿಗೆ ವಸೂಲಿ ಮಾಡುತ್ತಿದ್ದು, ಕರ ಹಾಗೂ ಬಾಡಿಗೆಗಳ ಹಣವನ್ನು ಕಛೇರಿಗೆ ಸಂದಾಯ ಮಾಡಿದ ಹಣದಲ್ಲಿ 2,20,134=00 ರೂ. ಕಛೇರಿ ಕಡತದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಈತನು ಸರ್ಕಾರಿ ಸೇವೆಯಲ್ಲಿದ್ದುಕೊಂಡು, ಸರ್ಕಾರದ ಹಣ ದುರುಪಯೋಗ ಮತ್ತು ದಾಖಲೆಗಳನ್ನು ಟ್ಯಾಂಪರ್ ಮಾಡಿರುವುದು ಹಾಗೂ ಬೇರೆ ಬೇರೆ ಎರಡು ವಹಿಗಳಲ್ಲಿ ದಾಖಲಿಸಿ ಸರ್ಕಾರಕ್ಕೆ ವಂಚಿಸಿರುವುದಾಗಿ ನಗರಸಭಾ ಪೌರಾಯುಕ್ತರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, December 9, 2015

ಜೀವನದಲ್ಲಿ ಜಿಗುಪ್ಸೆ ಯುವತಿ ಆತ್ಮಹತ್ಯೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಐಕೊಳ ಗ್ರಾಮದ ನಿವಾಸಿ ಗುರುವ ಎಂಬವರ ಮಗಳಾದ ಸುಮಿತ್ರಳು ಮಂಡ್ಯದಲ್ಲಿ ನರ್ಸಿಂಗ್ ಓದುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07-12-2015 ರಂದು ಸಂಜೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ತಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:
    ಸೋಮವಾರಪೇಟೆ ತಾಲೂಕು ಚೌಡ್ಲು ಗ್ರಾಮದ ನಿವಾಸಿ ಸುಗುಣ ಎಂಬವರು ದಿನಾಂಕ 07-12-2015 ರಂದು ರಾತ್ರಿ ಸಮಯ 20.30 ಗಂಟೆಗೆ ತಮ್ಮ ಮನೆಯಲ್ಲಿರುವಾಗ್ಗೆ ಆರೋಪಿಗಳಾದ ಲಕ್ಷ್ಮಿ ಹಾಗು ಸುಮನ್ ರವರು ನಾಯಿ ಮರಿಯ ವಿಚಾರದಲ್ಲಿ ಜಗಳ ಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈಯ್ದು ದೊಣ್ಣೆಯಿಂದ ಮುಖಕ್ಕೆ ಹಾಗೂ ಕುತ್ತಿಗೆಗೆ ಹೊಡೆದು ಗಾಯಪಡಿಸಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದು ವ್ಯಕ್ತಿಯ ಆತ್ಮಹತ್ಯೆ:

     ಶ್ರೀಮಂಗಲ ಠಾಣಾ ಸರಹದ್ದಿನ ಬೀರುಗ ಗ್ರಾಮದಲ್ಲಿ ವಾಸವಾಗಿದ್ದ ಪಣಿ ಎರವರ ಮಣಿ (65) ಎಂಬವರು ದಿನಾಂಕ 8-12-2015 ರಂದು ತಾನು ವಾಸವಾಗಿದ್ದ ಮನೆಯ ಹತ್ತಿರದ ತೋಟದಲ್ಲಿ ಮರವೊಂದಕ್ಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tuesday, December 8, 2015

ಖರೀದಿಸಿದ ಜಾಗವನ್ನು ವಶಕ್ಕೆ ನೀಡದೆ ವಂಚನೆ:

      ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಗೋಣಿಕೊಪ್ಪ ನಗರದ ನಿವಾಸಿ ಬಿ.ಕೆ. ಅಬ್ದುಲ್ ನಜಾರ್, ರವರು ಮೈಸೂರು ನಿವಾಸಿಗಳಾದ ಬಿ.ಜಿ. ಉತ್ತಪ್ಪ ಮತ್ತು ಶ್ರೀಮತಿ ಸುಶೀಲಾ ರವರ ಬಾಪ್ತು ಕಟ್ಟಡ ಮತ್ತು ಜಾಗವನ್ನು ರೂ 25 ಲಕ್ಷದ 5 ಸಾವಿರಗಳಿಗೆ ಖರೀದಿಸಿದ್ದು ತದ ನಂತರ ಬಿ.ಜಿ. ಉತ್ತಪ್ಪ ಮತ್ತು ಶ್ರೀಮತಿ ಸುಶೀಲಾ ರವರುಗಳು ಬಿ.ಕೆ. ಅಬ್ದುಲ್ ನಜಾರ್ ನವರಿಗೆ ಕಟ್ಟಡ ಮತ್ತು ಜಾಗವನ್ನು ನೀಡದೆ ಹಾಗೂ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ಪೊನ್ನಂಪೇಟೆ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಪ್.ಸಿ ನ್ಯಾಯಲಯದಲ್ಲಿ ದಾಖಲಿಸಿದ ಖಾಸಗಿ ಮೊಖದಮ್ಮೆಯ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸ್ಕೂಟರ್ ಅಪಘಾತ, ಸವಾರನಿಗೆ ಗಾಯ:

    ದಿನಾಂಕ: 06-12-15ರಂದು ಮಡಿಕೇರಿ ತಾಲೂಕು, ಮೂರ್ನಾಡು  ವೆಂಕಟೇಶ್ವರ ಕಾಲೋನಿಯ ನಿವಾಸಿ ದಿನು ಎಂಬವರು   ತನ್ನ ಅತ್ತಿಗೆ ಆಶಾರವರ ಸ್ಕೂಟರಿನಲ್ಲಿ ವಿರಾಜಪೇಟೆ ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಸ್ಕೂಟರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿದ ಪರಿಣಾಮ ಕಾಕೋಟು ಪರಂಬು ಬಸ್ಸು ತಂಗುದಾಣದ ಹತ್ತಿರ ರಸ್ತೆಗೆ ಬಿದ್ದು   ದಿನು ಗಾಯಗೊಂಡು ಹೋಂಡಾ ಡಿಯೋ ಸ್ಕೂಟರ್ ಜಖಂ ಗೊಂಡಿರುವುದಾಗಿ ಹೆಚ್. ಪಿ. ಲೋಕೇಶ್ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿನಾಕಾರಣ ವ್ಯಕ್ತಿಯ ಮೇಲೆ ಕಲ್ಲು ತೂರಾಟ, ಗಾಯ:

    ಕುಶಾಲನಗರದ ಗೋಂದಿಬಸವನಳ್ಳಿ ಗ್ರಾಮದ ನಿವಾಸಿ ಎಸ್. ಚಂದ್ರು ಎಂಬವರು ದಿನಾಂಕ 06-12-2015ರಂದು ಹಾಲು ವಿರತಿಸಲು ಗೊಂದಿಬಸವನಹಳ್ಳಿ ಗ್ರಾಮದ ಕೆಲವು ಮನೆಗಳಿಗೆ ಹೋಗಿ ಹಾಲು ಕೊಟ್ಟು ವಾಪಾಸ್ಸು ಬರುತ್ತಿರುವಾಗ್ಗೆ ಗೊಂದಿಬಸವನಹಳ್ಳಿ ಗ್ರಾಮದ ಸುಭ್ರಮಣಿ ಎಂಬವರು ಮುಖ್ಯ ರಸ್ತೆಯಲ್ಲಿ ನಿಂತಿದ್ದು ಎಸ್. ಚಂದ್ರುರವರು ಸುಭ್ರಮಣಿಯವರನ್ನು ನೋಡಿ ಮುಂದಕ್ಕೆ ಹೋದಾಗ ಹಿಂದಿನಿಂದ ಎಸ್. ಚಂದ್ರುರವರ ತಲೆಗೆ ಕಲ್ಲಿನಿಂದ ಹೊಡೆದು ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿನಾಕಾರಣ ಹಲ್ಲೆ, ಪ್ರಕರಣ ದಾಖಲು:

    ದಿನಾಂಕ 06-12-2015 ರಂದು ಸಮಯ ಬೆಳಿಗ್ಗೆ 08:00 ಎ.ಎಂ ಗೆ ಫಿರ್ಯಾದಿ ಬಿ.ಎನ್. ರವಿ. ವಾಸ ಭುವನಗಿರಿ ಗ್ರಾಮ, ಕುಶಾಲನಗರ ಇವರ ಪಕ್ಕದ ಮನೆಯರವರಾದ ಮಹದೇವ, ಇಂದಿರಮ್ಮ, ಚಿತ್ರ, ಕಿರಣ್ ಎಂಬವರು ಕ್ಷುಲಕ ಕಾರಣಕ್ಕೆ ಪಿರ್ಯಾದಿಯ ಅಕ್ಕ ಜಯಮ್ಮ, ಅವರ ಮಗನಾದ ಹರೀಶ ಎಂಬವರೊಂದಿಗೆ ವಿನಾಕಾರಣ ಜಗಳ ತೆಗೆದು ಅವ್ಯಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದು, ನಂತರ ಸಂಜೆ 04:00 ಗಂಟೆಗೆ ಕಿರಣ್ ನು ಪಿರ್ಯಾದಿ ಅಕ್ಕನ ಮಗನಾದ ಹರೀಶನಿಗೆ ಹಲ್ಲೆ ಮಾಡಿದ್ದು, ಪಿರ್ಯಾದಿಯ ಮಗ ಅಭಿಲಾಷ್ ರವರು ಅಯ್ಯಪ್ಪ ವೃತದಾರಿಯಾಗಿದ್ದು ಸಮಯ 08:00 ಪಿ.ಎಂ ಗೆ ವೃತ ಮುಗಿಸಿಕೊಂಡು ಬೈಕ್ ನಂ ಕೆ ಎ 12 ಎಲ್ 4040 ರಲ್ಲಿ ಬರುತ್ತಿರುವಾಗ ಕಿರಣ್ ಮತ್ತು ಅವನ ಸ್ನೇಹಿತರಾದ ಮಹೇಶ ,ನಿಂಗಯ್ಯ, ಕುಮಾರ,ಶಿವನಂಜ ಎಂಬವರು ಪಿರ್ಯಾದಿಯ ಮಗನ ಮೇಲೆ ರಾಡಿನಿಂದ ಹಲ್ಲೆ ಮಾಡಿ ಬೈಕ್ ನ್ನು ಜಖಂ ಗೊಳಿಸಿದ್ದು, ಬೈಕ್ ಮತ್ತು ಕೀ ಯನ್ನು ಸಹ ಕೊಡದೇ, ಈ ಬಗ್ಗೆ ವಿಚಾರಿಸಲು ಹೋದ ಪಿರ್ಯಾದಿಯ ಅಕ್ಕ ಜಯಮ್ಮನವರಿಗೂ, ಹರೀಶ ಮತ್ತು ಪ್ರಸನ್ನರವರಿಗೂ ಸಹ ಆರೋಪಿಗಳು ಹಲ್ಲೆ ಮಾಡಿರುತ್ತಾರೆಂದು ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Posted byVartika Katiyar, IPS

Monday, December 7, 2015


ನಿಷೇದಾಜ್ಞೆ ಉಲ್ಲಂಘನೆ, ಪ್ರಕರಣ ದಾಖಲು:

   ದಿನಾಂಕ 6-12-2015 ರಂದು ಸೋಮವಾರಪೇಟೆ ನಗರದಲ್ಲಿ ಮಾನ್ಯ ಜಿಲ್ಲಾದಿಕಾರಿಯವರು ಮತ್ತು ಜಿಲ್ಲಾ ದಂಡಾಧಿಕಾರಿಯವರು ವಿಧಿಸಿದಂತಹ ನಿಷೇದಾಜ್ಞೆ ಆದೇಶವನ್ನು 3-4 ಮಂದಿ ಇರುವ ಗುಂಪು ಸೋಮವಾರಪೇಟೆಯಲ್ಲಿ ಉಲ್ಲಂಘನೆ ಮಾಡಿ ಪಾಟಕಿಗಳನ್ನು ಸಿಡಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿರುತ್ತಾರೆಂದು ಸೋಮವಾರಪೇಟೆ ಠಾಣಾಧಿಕಾರಿ ಶ್ರೀ ನಂದೀಶ್ ಕುಮಾರ್ ರವರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನಿಷೇದಾಜ್ಞೆ ಉಲ್ಲಂಘನೆ, ಪ್ರಕರಣ ದಾಖಲು:

     ದಿನಾಂಕ 6-12-2015 ರಂದು ಸೋಮವಾರಪೇಟೆ ನಗರದಲ್ಲಿ ಮಾನ್ಯ ಜಿಲ್ಲಾದಿಕಾರಿಯವರು ಮತ್ತು ಜಿಲ್ಲಾ ದಂಡಾಧಿಕಾರಿಯವರು ನಿಷೇದಾಜ್ಞೆ ಜಾರಿಗೊಳಿಸಿದ್ದು, ಅದರಂತೆ ಸೋಮವಾರಪೇಟೆ ಠಾಣಾ ಮಹಿಳಾ ಸಿಬ್ಬಂದಿಯಾದ ಶ್ರೀಮತಿ ಧನಲಕ್ಷ್ಮಿ ಎಂಬವರು ಕರ್ತವ್ಯದಲ್ಲಿದ್ದಾಗ ಸೋಮವಾರಪೇಟೆ ನಗರ ಜನತಾ ಕಾಲೋನಿ ನಿವಾಸಿಗಳಾದ ವೀಕ್ಷಿತ್ ಹಾಗು ಚೇತನ್ ಎಂಬವರು ಸಂಜೆ 7-45 ಗಂಟೆ ಸಮಯದಲ್ಲಿ ಸೋಮವಾರಪೇಟೆ ರೇಂಜರ್ ಬ್ಲಾಕ್ ಕಡೆಯಿಂದ ಒಂದು ಬೈಕಿನಲ್ಲಿ ಬಂದು ಮಹಿಳಾ ಸಮಾಜದ ಮುಂದಿನ ರಸ್ತೆಯಲ್ಲಿ ಪಟಾಕಿಗೆ ಬೆಂಕಿ ಕತ್ತಿಸಿ ಪಟಾಕಿಯನ್ನು ರಸ್ತೆಯ ಪಕ್ಕದಲ್ಲಿ ಎಸೆದು ಸಿಡಿಸಿ ವಾಪಾಸ್ಸು ಬೈಕನ್ನು ತಿರುಗಿಸಿಕೊಂಢು ಜನತಾ ಕಾಲೋನಿ ಕಡೆಗೆ ಹೊರಟು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿದ ಅಮಲಿನಲ್ಲಿ ಹಲ್ಲೆ ನಡೆಸಿ ಪತಿಯಿಂದ ಪತ್ನಿಯ ಕೊಲೆ:

   ದಿನಾಂಕ 06-12-15 ರಂದು ಸುಂಟಿಕೊಪ್ಪದ ನಾಣಿ ಎಸ್ಟೇಟ್ ಲೈನ್ ಮನೆಯಲ್ಲಿ ವಾಸವಾಗಿರುವ ಮಂಜು ಮತ್ತು ಶೋಬಾ ರವರು ಕೂಲಿ ಕೆಲಸಕ್ಕೆ ರಜೆ ಇದ್ದ ಕಾರಣ ಸುಂಠಿಕೊಪ್ಪ ನಗರಕ್ಕೆ ಬಂದು, ವಾಪಾಸು ಸಂಜೆ 7.00 ಗಂಟೆಗೆ ಹೊರೂರು ಗ್ರಾಮದ ಲೈನ್ ಮನೆಗೆ ಬಂದು ಇಬ್ಬರೂ ಮದ್ಯಪಾನ ಮಾಡಿ ಜಗಳ ವಾಡಿದ್ದು, ಆರೋಪಿ ಮಂಜು ಕುಡಿದ ಅಮಲಿನಲ್ಲಿ ತನ್ನ ಹೆಂಡತಿ ಶೋಬಾಳ ಮೇಲೆ ಕೈ ಗಳಿಂದ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಬಿ.ಟಿ. ಗಿರೀಶ್ ಪೊನ್ನಪ್ಪ, ತಂದೆ ತಿಮ್ಮಯ್ಯ, ನಾಣಿ ಎಸ್ಟೇಟ್ ಲೈನ್ ಮನೆ ಸುಂಟಿಕೊಪ್ಪ ಇವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Saturday, December 5, 2015

ಕ್ಷುಲ್ಲಕ ಕಾರಣ ಪತ್ನಿಯಿಂದಲೇ ಪತಿಯ ಕೊಲೆ:

ಗಂಡ ಹೆಂಡತಿ  ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ಪತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಾಕೋಟುಪರಂಬು-ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ  3-11-2015 ರಂದು ರಾತ್ರಿ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದಲ್ಲಿ ನೆಲೆಸಿರುವ  ಅಪ್ಪು ಹಾಗು ಅವರ ಹೆಂಡತಿ ಕಾಮುಣಿ ಎಂಬವರ ನಡುವ ಕ್ಷುಲ್ಲಕ ಕಾರಣಕ್ಕೆ ಜಗಳ ಏರ್ಪಟ್ಟು ಹೆಂಡತಿ ಕಾಮುಣಿ  ಗುದ್ದಲಿ ಕಾವು ಮತ್ತು ಕತ್ತಿಯಿಂದ ಗಂಡ ಅಪ್ಪು ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾದಲಾಗಿದೆ.

ದಾರಿ ತಡೆದು ವ್ಯಕ್ತಿಯ ಕೊಲೆಗೆ ಯತ್ನ:

       ದಿನಾಂಕ 03-12-2015 ರಂದು ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ಚೇಂದಂಡ ಎ. ಸುಬ್ರಮಣಿ ರವರು ತನ್ನ ಬಾಪ್ತು ಕೆ.ಎ.05 ಎನ್.ಬಿ.852 ರ ಮಾರುತಿ ಕಾರಿನಲ್ಲಿ ತನ್ನ ಪತ್ನಿ ದಮಯಂತಿ ಮತ್ತು ಮಗಳು ಅಂತರ ಹಾಗೂ ನೆರೆಮನೆಯವರಾದ ಯಶಂತ ರವರ ಜೊತೆ ವಿರಾಜಪೇಟೆ ನಗರದ ಬದ್ರಿಯಾ ಜಂಕ್ಷನ್ ಗಾಗಿ ಮಾಜ್ರೀನ್ ಪ್ರೀ ಬಳಿ ಹೋಗುತ್ತಿರುವಾಗ್ಗೆ ಸಮಯ 18-30 ಗಂಟೆಗೆ ಎದುರುಗರೆಯಿಂದ ಬಂದ ಆರೋಪಿತರಾದ ಮಂಜು ಆಟೋ ರಿಕ್ಷಾ ನಂ ಕೆ.ಎ.12 ಬಿ 8219 ರ ಚಾಲಕ ಮತ್ತು ಕೂತಂಡ ಜಗತ್ ಎಂಬವರನ್ನು ಏಕುಮುಖ ಸಂಚಾರದಲ್ಲಿ ಏಕೆ ಬರುತ್ತಿದ್ದೀರಾ ಎಂದು ಕೇಳಿದ ಕಾರಣಕ್ಕೆ ಸದರಿ ಆಟೋ ಚಾಲಕ ಅವಾಚ್ಯ ಶಬ್ದಗಳಿಂದ ಬೈದು ನಂತರ ಕೆಲ ಸಮಯದನಂತರ ಫಿರ್ಯಾದಿ ಚೇಂದಂಡ ಎ. ಸುಬ್ರಮಣಿ ತನ್ನ ಮನೆ ಕಡೆಗೆ ಹೋಗುತ್ತಿರುವಾಗ್ಗೆ ದೊಡ್ಡಟ್ಟಿಚೌಕಿಯ ಕಂಭದ ಬಳಿ ಮೇಲಿನ ಆರೋಪಿತರು ಆಟೋ ರಿಕ್ಷಾದಲ್ಲಿ ಹಿಂಬಾಲಿಸಿಕೊಂಡು ಬಂದು ಕಾರನ್ನು ಅಡ್ಡಗಟ್ಟಿ ಆಟೋದಲ್ಲಿದ್ದ ಜಗತ್ ಎಂಬವನು ಕೈಯಲ್ಲಿ ಚಾಕನ್ನು ಹಿಡಿದುಕೊಂಡು ಕೊಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 


Posted byVartika Katiyar, IPS

Friday, December 4, 2015


ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ:

     ಗೋಣಿಕೊಪ್ಪ ಠಾಣಾ ಸರಹದ್ದಿನ ಮಾಯಮುಡಿ ಗ್ರಾಮದಲ್ಲಿ ವಾಸವಾಗಿರುವ ಸಣ್ಣುವಂಡ ಕೆ. ಉತ್ತಯ್ಯ ಎಂಬವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಶುಭ @ ಪ್ರೇಮ ಎಂಬಾಕೆ 2-3 ತಿಂಗಳ ಹಿಂದಿನಿಂದ ಮೈ ಉರಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಇದೇ ವಿಚಾರವಾಗಿ ಜೀವನದಲ್ಲಿ ಬೇಸರಿಸಿಕೊಂಡು ದಿನಾಂಕ 2/12/2015 ರಂದು ರಾತ್ರಿ ಮನೆಯ ಪಕ್ಕದ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದ್ವೇಷ ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:

     ಸೋಮವಾರಪೇಟೆ ತಾಲೂಕು ಗೆಜ್ಜೆಹಣಕೋಡು ಗ್ರಾಮದ ಚಂದ್ರಕುಮಾರ್‌ ರವರ ಮನೆಯಲ್ಲಿ ಕೂಲಿಕೆಲಸ ಮಾಡಿಕೊಂಡು ಅವರ ಮನೆಯಲ್ಲಿ ವಾಸವಾಗಿರುವ ಫಿರ್ಯಾದಿ ವಿರೇಶ ಎಂಬವರು ದಿನಾಂಕ 02-12-2015 ರಂದು ರಾತ್ರಿ ಊಟ ಮುಗಿಸಿ ಮಲಗಿದ್ದ ಸಮಯದಲ್ಲಿ ಆರೋಪಿಗಳಾದ ಪ್ರತಾಪ ಮತ್ತು ಮಂಜುನಾಥ ರವರು ಮನೆಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, December 3, 2015

ಮರಳು ಲಾರಿ ತಡೆದು ವ್ಯಕ್ತಿಗಳಿಂದ ಹಲ್ಲೆ: 
     ದಿನಾಂಕ 02-12-2015 ರಂದು ಸಮಯ 18-30 ಗಂಟೆಗೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ದೊಡ್ಡಕುಂದ ಗ್ರಾಮದ ನಿವಾಸಿ ಜಿ.ಕೆ. ವೇದಕುಮಾರ್ ಎಂಬವರು ದಿನಾಂಕ 02-12-2015 ರಂದು ಮಧ್ಯಾಹ್ನ 02-45 ಗಂಟೆಗೆ ತಮ್ಮ ಬಾಫ್ತು ಟಿಪ್ಪರ್ ನಂ ಕೆ.ಎ-12-ಬಿ-1408 ರಲ್ಲಿ ಚಾಲಕ ಈಶ್ವರ್ ರವರೊಂದಿಗೆ ಕೆಲಕೊಡ್ಲಿ ಗ್ರಾಮದ ಸ್ಟಾಕ್ ಯಾರ್ಡಿನಲ್ಲಿ ಪರ್ಮಿಟ್ ನೊಂದಿಗೆ ಮರಳು ತುಂಬಲು ಹೋದಾಗ ಕೆಲಕೊಡ್ಲಿ ಗ್ರಾಮದ ನಿವಾಸಿಗಳಾದ ಕಾಳಿಂಗಪ್ಪ, ಭರತ್ ಮತ್ತು ಶರತ್ ರವರುಗಳು ಗಾಡಿಯನ್ನು ತಡೆದು ಜಿ.ಕೆ.ವೇದಕುಮಾರ್ ರವರ ಮೇಲೆ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Wednesday, November 02, 2015ಆಕಸ್ಮಿಕ ಬೆಂಕಿ ಅವಘಡದಲ್ಲಿ ಮಹಿಳೆ ಸಾವು:

      ವಿರಾಜಪೇಟೆ ತಾಲೂಕು ಕೊಳತ್ತೋಡು ಗ್ರಾಮದ ನಿವಾಸಿ ಕೇಳಪಂಡ ತಮ್ಮಯ್ಯ ಎಂಬವರ ಪತ್ನಿ ಶ್ರೀಮತಿ ದೇವಕಿ ಎಂಬವರು ದಿನಾಂಕ 26-11-15ರಂದು ಸಂಜೆ ಸಮಯ 7-15 ಗಂಟೆಗೆ ಪಂಪ್ ಸ್ಟವ್ ಗೆ ಸೀಮೆಣ್ಣೆ ತುಂಬಿ ಸುತ್ತಿದ್ದ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಬುಡ್ಡಿ ದೀಪದಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟಗಾಯಗೊಂಡು ಚಿಕಿತ್ಸೆ ಬಗ್ಗೆ ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ದಿನಾಂಕ: 01-12-15 ರಂದು ಬೆಳಗಿನ ಜಾವ 3-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವಾಚ್ಯ ನಿಂದನೆ ಹಲ್ಲೆ:
 
    ಪಿರಿಯಾಪಟ್ಟಣ ತಾಲೂಕು ವಡ್ಡರಕೇರಿ ಗ್ರಾಮದ ನಿವಾಸಿ ಶ್ರೀಮತಿ ಕೆ.ಎ. ಸುಜಾತ ಎಂಬವರು ದಿನಾಂಕ 1-12-2015 ರಂದು ಸಮಯ 11-00 ಎ.ಎಂಗೆ ಅವರ ಅಕ್ಕಂದಿರಾದ ಸುಮಿತ್ರ ಕಲ್ಪನರವರೊಂದಿಗೆ ಜಾಗದಲ್ಲಿ ಕಳೆ ಕೀಳುತಿದ್ದಾಗ ಅವರ ಅಣ್ಣನ ಮಗನಾದ ರಮೇಶ ಎಂಬವರು ಬಂದು ನಮ್ಮ ಜಾಗದಲ್ಲಿ ಏಕೆ ಕಳೆ ಕೀಳುತಿದ್ದೀರಾ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ಏಕಾಏಕಿ ಕೈಯಲಿದ್ದ ಕತ್ತಿಯಿಂದ ತಲೆಯ ಬಾಗಕ್ಕೆ ಕಡಿದು ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಹೋದರರಿಬ್ಬರ ನಡುವೆ ಜಗಳ ಹಲ್ಲೆ:

     ದಿನಾಂಕ 01-12-2015 ರಂದು ಸೋಮವಾರಪೇಟೆ ತಾಲೂಕು ತಾಕೇರಿ ಗ್ರಾಮದ ನಿವಾಸಿ ಫಿರ್ಯಾದಿ ಎಂ.ಪಿ. ಕುಟ್ಟಪ್ಪನವರ ಕಿರಿಯ ಮಗ ಸುರೇಶ ಪಾನಮತ್ತನಾಗಿ ಫಿರ್ಯಾದಿ ಮನೆಯ ಹತ್ತಿರ ಬಂದು ಪಿರ್ಯಾದಿ ಎಂ.ಪಿ. ಕುಟ್ಟಪ್ಪನವರ ಹಿರಿಯ ಮಗ ಪೊನ್ನಪ್ಪ ನವರು ಮನೆಯ ಹತ್ತಿರ ನಿಲ್ಲಿಸಿದ್ದ ಕಾರು ಸಂ. ಕೆಎ-55-ಎಂ-1911 ನ್ನು ಕಲ್ಲಿನಿಂದ ಜಜ್ಜಿ ಜಖಂಗೊಳಿಸಿದಲ್ಲದೆ, ಎಂ.ಪಿ. ಕುಟ್ಟಪ್ಪನವರ ಮೇಲೆ ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದು ನೋವುಂಟು ಪಡಿಸಿ ಪಿರ್ಯಾದಿಯ ಹಿರಿಯ ಮಗ ಪೊನ್ನಪ್ಪನಿಗೆ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡುಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ಪುಕಾರಿಗೆ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.