Friday, December 11, 2015

ನೇಣು ಬಿಗಿದುಕೊಂಡು ಯುವಕನ ಆತ್ಮಹತ್ಯೆ
                  ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಮಡಿರುವ ಘಟನೆ ಸಿದ್ದಾಪುರ ಬಳಿಯ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 10-12-2015ರಂದು ಹಚ್ಚಿನಾಡು ನಿವಾಸಿ ಪಣಿ ಎರವರ ಅಪ್ಪು ಮತ್ತು ಅವರ ಹೆಂಡತಿ ಕೂಲಿ ಕೆಲಸಕ್ಕೆ ಹೋಗಿದ್ದು ಕೆಲಸ ಮುಗಿಸಿ ವಾಪಾಸು ಮನೆಗೆ ಬಂದು ನೋಡಿದಾಗ ಅವರ ಮಗ ಅಯ್ಯಪ್ಪ ಲೈನು ಮನೆಯ ಮರದ ಕೌಕೋಲಿಗೆ ನೈಲಾನು ಹಗ್ಗದಿಂದ ಕತ್ತಿಗೆಗೆ ಬಿಗಿದುಕೊಂಡು ನೇತಾಡುತ್ತಿದ್ದು ಕಂಡು ಬದುಕಿರಬಹುದೆಂದು ನೈಲಾನು ಹಗ್ಗವನ್ನು ಕತ್ತಿಯಿಂದ ಕತ್ತರಿಸಿ ಕೆಳಗೆ ಇಳಿಸಿ ನೋಡಲಾಗಿ  ಅಯ್ಯಪ್ಪ ಮೃತ ಪಟ್ಟಿರುವುದು ತಿಳಿದು ಬಂದಿದ್ದು, ಅಯ್ಯಪ್ಪ ಪ್ರತಿದಿನ ವಿಪರೀತ ಸಾರಾಯಿ ಕುಡಿಯುತ್ತಿದ್ದು ಇತ್ತಿಚೆಗೆ ಟೈಫಾಯಿಡ್‌ ಕಾಯಿಲೆಯಿಂದ ಬಳಲುತ್ತಿದ್ದು ಎಲ್ಲ ಆಸ್ಪತ್ರೆಯಲ್ಲಿ ತೋರಿಸಿ ಗುಣಮುಖವಾಗದ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಸಿದ್ದಾಪುರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆಕಸ್ಮಿಕ ಗುಂಡು ಹಾರಿ ವ್ಯಕ್ತಿಗೆ ಗಾಯ
                   ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೊಬ್ಬ ಗಾಯಗೊಂಡಿರುವ ಘಟನೆ ವಿರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 09-12-15ರಂದು ಕೆದಮುಳ್ಳೂರು ಗ್ರಾಮದಲ್ಲಿ  ಮಾಳೇಟ್ಟಿರ ಅಶೋಕ ಎಂಬುವವರು ಅವರ ತೋಟದಲ್ಲಿ ಕಾಫಿ ಕುಯ್ಯಿಲಿಗೆ ಬಂದಿದ್ದು, ಕಾಫಿ ಕಳ್ಳತನವಾಗುವ ಸಾಧ್ಯತೆ ಇರುವುದರಿಂದ ತಮ್ಮ ಕೋವಿಯನ್ನು ತೆಗೆದುಕೊಂಡು ಅವರ ಕಾರ್ಮಿಕ ಪಿ.ಕೆ. ವಿಶ್ವನಾಥರವರನ್ನು ಸಾಯಂಕಾಲ ಅಂದಾಜು 7-30ಗಂಟೆಗೆ ಜೊತೆಯಲ್ಲಿ ಕರೆದುಕೊಂಡು ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಅಶೋಕರವರು ಬೀಡಿ ಸೇದಲೆಂದು ಲೈಟರ್‌ ಹಚ್ಚಲು ಯತ್ನಿಸಿದ್ದು ಗಾಳಿ ಇದ್ದುದರಿಂದ ತಿರುಗಿ ನಿಂತು ಲೈಟರ್‌ ಹಚ್ಚಿದ್ದು ಆಗ ಅವರ   ಭುಜದ ಮೇಲೆ ಇದ್ದ ಮೊದಲೇ ತೋಟಾ ತುಂಬಿಸಿದ್ದ ಕೋವಿಯ ಕೊತ್ತಿಗೆ ಕಾಫಿ ಗಿಡದ ಕೊಂಬೆ ತಾಗಿ ಕೋವಿಯಿಂದ ಗುಂಡು ಹಾರಿ ಹಿಂದೆ ಬರುತ್ತಿದ್ದ ವಿಶ್ವನಾಥರವರ ಬೆನ್ನಿಗೆ, ಸೊಂಟಕ್ಕೆ, ಎಡ ಕೈ ಮತ್ತು ಎಡ ತೊಡೆಗೆ ಗುಂಡು ತಗುಲಿ ಗಾಯಗಳಾಗಿದ್ದು, ಅಶೋಕರವರು ಗಾಯಾಳು ವಿಶ್ವನಾಥರವರನ್ನು ಕೂಡಲೇ ಅವರ ಓಮಿನಿ ವ್ಯಾನ್ ನಲ್ಲಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು,  ಅಶೋಕರವರು ಕೋವಿಗೆ ತೋಟ ಲೋಡ್ ಮಾಡಿ ಎಚ್ಚರ ವಹಿಸದೇ ನಿರ್ಲಕ್ಷತನ ತೋರಿದ್ದರಿಂದ ಘಟನೆ ಸಂಭವಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬೈಕಿಗೆ ಜೀಪು ಡಿಕ್ಕಿ, ಸವಾರ ಗಾಯಾಳು
                    ಮೋಟಾರು ಬೈಕೊಂದಕ್ಕೆ ಜೀಪು ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಗಾಯಗೊಂಡಿರುವ ಘಟನೆ ಗೋಣಿಕೊಪ್ಪ ಬಳಿಯ ಚೆನ್ನಂಗೊಲ್ಲಿ ಬಳಿ ನಡೆದಿದೆ. ದಿನಾಂಕ 09/12/2015ರಂದು ಮಂಜುನಾಥ್ ಎಂಬವರು ಅವರು ಕೆಲಸ ಮಾಡುತ್ತಿರುವ ಕಂಪನಿ ಕೆಲಸ ಮುಗಿಸಿಕೊಂಡು ಕೆಎ-13-ವೈ- 6942 ರ ಬೈಕಿನಲ್ಲಿ ಗೋಣಿಕೊಪ್ಪದ ಚೆನ್ನಂಗೊಲ್ಲಿ ಜಂಕ್ಷನ್ ಹತ್ತಿರ ತಲುಪುವಾಗ ಎದುರುಗಡೆಯಿಂದ ಕೆಎ-12-ಎಂ-1167 ರ ಜೀಪನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮಂಜುನಾಥ್ ರವರ ಬೈಕ್ ಗೆ ಡಿಕ್ಕಿ ಪಡಿಸಿ ನಿಲ್ಲಿಸದೇ ಹೋಗಿದ್ದು, ಮಂಜುನಾಥ್ ಬೈಕ್ ನಿಂದ ಕೆಳಗೆ ಬಿದ್ದು ಗಾಯವಾಗಿದ್ದು ಗಪೂರ್ ಎಂಬುವವರು ಚಿಕಿತ್ಸೆಯ ಬಗ್ಗೆ ಗೋಣಿಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲುಮಾಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಿರುವುದಾಗಿ ನೀಡಿದ  ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Thursday, December 10, 2015

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
              ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 24-11-2015 ರಂದು ಸಂಜೆ ಕುಶಾಲನಗರದ ಬೈಚನಹಳ್ಳಿ ನಿವಾಸಿ ಮನು ಪ್ರಸಾದ್‌ ಎಂಬವರು ನಿಸರ್ಗಧಾಮದ ಬಳಿ ಇರುವ ಚಿನ್ನಮಾಸ್ ಹೊಟೇಲ್ ಎದುರು ರಸ್ತೆಯಲ್ಲಿ ನಡೆದುಕೊಂಡು ಬರುತಿರುವಾಗ ಅವರಿಗೆ ಪರಿಚಯವಿಲ್ಲದ ಒಂದು ವಾಹನ ಬಂದಿದ್ದು ಅದರಲ್ಲಿದ್ದವರು ಮನುಪ್ರಸಾದ್‌ರವರನ್ನು ಕುರಿತು ವೆಜ್ ಹೋಟೆಲ್ ಎಲ್ಲಿ ಸಿಗುತ್ತೆ ಎಂದು ಕೇಳಿದಾಗ ಮನುಪ್ರಸಾದ್‌ರವರು ಕುಶಾಲನಗರದ ಕೆಲವು ಹೋಟೆಲ್ ಹೆಸರು ಹೇಳಿದ್ದು ಅವರುಗಳು ಅಲ್ಲಿಂದ ಹೋದ ತಕ್ಷಣ ಚಿನ್ನಮಾಸ್ ಹೋಟೆಲ್ ನಲ್ಲಿ ಕೆಲಸ ಮಾಡುತಿದ್ದ ಗಣಪತಿ ಮತ್ತು ಬೀಡ ಅಂಗಡಿಯ ರಾಜು ಎಂಬುವರು ಮನುಪ್ರಸಾದ್‌ರರನ್ನು ತಡೆದು ನಿಲ್ಲಿಸಿ ಕೈಯಿಂದ ಮುಖದ ಬಾಗಕ್ಕೆ ಗುದ್ದಿ ನೋವುಪಡಿಸಿದ್ದಲ್ಲದೆ ಅಶ್ಲೀಲಶಬ್ದಗಳಿಂದ ನಿಂದಿಸಿರುವುದಾಗಿ ನೀಡಿದ  ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ ಸಂಗ್ರಹದ ಹಣ ದುರುಪಯೋಗ
                 ಮಡಿಕೇರಿ ನಗರ ಸಭೆಯ ಖಾಯಂ ಕರ ಸಂಗ್ರಹಗಾರನೊಬ್ಬ ಸಾರ್ವಜನಿಕರಿಂದ ಸಂಗ್ರಹಿಸಿದ ಕರದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಘಟನೆ ನಡೆದಿದೆ. ಮಡಿಕೇರಿ ನಗರ ಸಭೆಯ ಖಾಯಂ ಕರ ವಸೂಲಿಗಾರರಾದ ಸಜಿತ್ ಕುಮಾರ್ ರವರು ನೀರಿನ ತೆರಿಗೆ, ಮಳಿಗೆಗಳ ಬಾಡಿಗೆ ವಸೂಲಿ ಮಾಡುತ್ತಿದ್ದು, ಕರ ಹಾಗೂ ಬಾಡಿಗೆಗಳ ಹಣವನ್ನು ಕಛೇರಿಗೆ ಸಂದಾಯ ಮಾಡಿದ ಹಣದಲ್ಲಿ 2,20,134=00 ರೂ. ಕಛೇರಿ ಕಡತದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಈತನು ಸರ್ಕಾರಿ ಸೇವೆಯಲ್ಲಿದ್ದುಕೊಂಡು, ಸರ್ಕಾರದ ಹಣ ದುರುಪಯೋಗ ಮತ್ತು ದಾಖಲೆಗಳನ್ನು ಟ್ಯಾಂಪರ್ ಮಾಡಿರುವುದು ಹಾಗೂ ಬೇರೆ ಬೇರೆ ಎರಡು ವಹಿಗಳಲ್ಲಿ ದಾಖಲಿಸಿ ಸರ್ಕಾರಕ್ಕೆ ವಂಚಿಸಿರುವುದಾಗಿ ನಗರಸಭಾ ಪೌರಾಯುಕ್ತರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.