Thursday, December 17, 2015

ವಿಷ ಸೇವಿಸಿ ವೃದ್ದೆ ಆತ್ಮಹತ್ಯೆ
                ವಿಷ ಸೇವಿಸಿ ವೃದ್ದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಬಳಿಯ ಶಿರಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 15-12-2015 ರಂದು ಶಿರಂಗಾಲದ ಮೂಡ್ಲಿಕೊಪ್ಪಲು ಗ್ರಾಮದ ನಿವಾಸಿ ನಂಜಪ್ಪ ಹಾಗು ಅವರ ಪತ್ನಿ ತಿಮ್ಮಮ್ಮ ಎಂದಿನಂತೆ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು ರಾತ್ರಿ ಸಮಯ 09-30 ಪಿ.ಎಂಗೆ  ಹೆಂಡತಿ ತಿಮ್ಮಮ್ಮ ಕಿರುಚುವ ಶಬ್ದ ಕೇಳಿ ನಂಜಪ್ಪನವರು ಹೋಗಿ ನೋಡಿದಾಗ ಪತ್ನಿ ತಿಮ್ಮಮ್ಮನವರು ಹಾಸಿಗೆಯಲ್ಲಿ ಒದ್ದಾಡುತ್ತಿದ್ದು ಕೂಡಲೇ ಮಗನಿಗೆ ವಿಷಯ ತಿಳಿಸಿ ತಕ್ಷಣ ಯಾವುದೋ ಒಂದು ಆಟೋ ರಿಕ್ಷಾದಲ್ಲಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ತಿಮ್ಮಮ್ಮನವರು ಯಾವುದೋ ಒಂದು ವಿಷ ಪದಾರ್ಥ ಸೇವಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಮೃತೆ ತಿಮ್ಮಮ್ಮನವರು ವಿಪರೀತ ಹೊಟ್ಟೆ ನೋವಿನಿಂದ ಬಳಲುತಿದ್ದು ಹೊಟ್ಟೆ ನೋವು ತಾಳಲಾರದೆ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜೀಪು ಕಾರು ಡಿಕ್ಕಿ; ಹಾನಿ
               ಜೀಪಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಜೀಪು ಹಾನಿಗೀಡಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 16/12/2015ರಂದು ಸುಂಟಿಕೊಪ್ಪದ ನಿವಾಸಿ ಕೆ.ಎಂ.ಉಮ್ಮರ್ ಎಂಬವರು ಅವರ ಜೀಪು ಸಂಖ್ಯೆ ಕೆಎ-02-ಎನ್‌-8426ರ ಜೀಪಿನಲ್ಲಿ ಮಡಿಕೇರಿ ಕಡೆಗೆ ಬರುತ್ತಾ ನಗರದ ಚೈನ್‌ಗೇಟ್ ಬಳಿ ಜೀಪನ್ನು  ಡಿಪೋ ಎಸ್ಟೇಟ್‌ ಬಳಿ ತಿರುಗಿಸುತ್ತಿರುವಾಗ ಹಿಂದಿನಿಂದ ಕೆಎ-12-ಬಿ-0162ರ ಕಾರನ್ನು ಅದರ ಚಾಲಕ ಜಗದೀಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಉಮ್ಮರ್‌ರವರ ಜೀಪಿಗೆ ಡಿಕ್ಕಿಪಡಿಸಿದ  ಪರಿಣಾಮ ಜೀಪಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಸ್ತಿ ವಿಚಾರ ಕೊಲೆ ಬೆದರಿಕೆ
                  ಅಸ್ತಿ ವಿವಾದದ ಕಾರಣದಿಂದ ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 10/12/2015ರಂದು ಮೇಕೇರಿ ನಿವಾಸಿ ದಮಯಂತಿ ಎಂಬ ಮಹಿಳೆ ಮನೆಯಲ್ಲಿ ಒಬ್ಬರೇ ಇರುವಾಗ ಅವರ ಕುಟುಂಬದವರಾದ ಮೇಚನ ಚಿಣ್ಣಪ್ಪ ಎಂಬವರ ಮಗ ಸಂತೋಷ್‌ ಎಂಬಾತ ಮನೆಗೆ ಬಂದು ಆಸ್ತಿ ವಿಚಾರದಲ್ಲಿ ಜಗಳವಾಡಿ ಅಶ್ಲೀಲ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರು ಡಿಕ್ಕಿ, ವ್ಯಕ್ತಿಗೆ ಗಾಯ
                ಪರಸ್ಪರ ಕಾರು ಡಿಕ್ಕಿಯಾಗಿ ವ್ಯಕತಿಯೊಬ್ಬರು ಗಾಯಾಳುವಾದ ಘಟನೆ ವಿರಾಜಪೇಟೆ ಬಳಿಯ ಕಾವಾಡಿ ಗ್ರಾಮದಲ್ಲಿ ನಡೆದಿದೆ. ದಿನಾಂಕ: 16-12-15ರಂದು ಅಮ್ಮತ್ತಿ ನಿವಾಸಿ ಆಂಟನಿ ಎಂಬವರು ಅವರ ಮಗ ಜಾನ್ ಪ್ರೇಡ್ ನ ಹೆಂಡತಿ ಮತ್ತು ಮಕ್ಕಳನ್ನು ಬಿಳುಗುಂದ ಗ್ರಾಮದಿಂದ ಅಮ್ಮತ್ತಿಗೆ ಕರೆದುಕೊಂಡು ಹೋಗಲು ಅವರ ಕಾರು ನಂ. ಕೆಎ-51-ಪಿ-7041ರಲ್ಲಿ ಹೋಗುತ್ತಿರುವಾಗ ಕಾವಾಡಿ ಗ್ರಾಮದ ಆಲದ ಮರದ ತಿರುವಿನಲ್ಲಿ ಎದುರುಗಡೆಯಿಂದ ಕಾರು ಸಂಖ್ಯೆ ಕೆಎ-05-ಎಂಹೆಚ್-1464ರ ಆಲ್ಟೋ ಕಾರಿನ ಚಾಲಕಿ ಕಾರನ್ನು ಅತೀ ವೇಗದಿಂದ ಚಾಲನೆ ಮಾಡಿಕೊಂಡು ಬಂದು ಆಂಟನಿಯವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿರುವುದಲ್ಲದೆ ಆಂಟನಿಯವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ  ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕತ್ತಿಯಿಂದ ಕಡಿದು ಹಲ್ಲೆ
                ಮಹಿಳೆಯೊಬ್ಬರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆ ಕುಟ್ಟ ಬಳಿಯ ಗೋಣಿಗದ್ದೆ ಹಾಡಿಯಲ್ಲಿ ನಡೆದಿದೆ. ದಿನಾಂಕ 16/12/2015ರಂದು ಗೋಣಿಗದ್ದೆ ಹಾಡಿಯ ನಿವಾಸಿ ಯುಮುನ ಎಂಬಾಕೆ ಮನೆಯಲ್ಲಿರುವಾಗ ಆಕೆಯ ಪತಿ ಬಸಪ್ಪ ಎಂಬಾತನು ಮನೆಗೆ ಬಂದು ವಿನಾ ಕಾರಣ ಆಕೆಯೊಂದಿಗೆ ಜಗಳವಾಡಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಶವ ಪತ್ತೆ
                ಕುಶಾಲನಗರದ ಬಳಿ ಕಾವೇರಿ ಹೊಳೆಯಲ್ಲಿ ಅಪರಿಚಿತ ಶವವೊಮದು ಪತ್ತೆಯಾಗಿದೆ. ದಿನಾಂಕ 16/12/2015 ರಂದು ಸಂಜೆ ಕುಶಲನಗರದ ಗುಮ್ಮನಕೊಲ್ಲಿಯ ಆಟೋಚಾಲಕ ದೇವರಾಜು ಎಂಬವರು ಕುಶಾಲನಗರದ ಕುವೆಂಪು ಬಡಾವಣೆಯಲ್ಲಿರುವ ತಪೋವನಕ್ಕೆ ಆಟೋ ಬಾಡಿಗೆಗೆ ಹೋದ ಸಮಯದಲ್ಲಿ ಪಕ್ಕದಲ್ಲಿನ ಕಾವೇರಿ ನದಿ ಬಳಿ ದುರ್ವಾಸನೆ ಬರುತ್ತಿದ್ದು, ಅಲ್ಲಿದ್ದ ಹುಡುಗರು ನದಿಯಲ್ಲಿ ಮನುಷ್ಯನ ಶವವಿರುವುದಾಗಿ ತಿಳಿಸಿದ ಮೇರೆಗೆ ಹೋಗಿ  ನೋಡಿದಾಗ ನದಿಯಲ್ಲಿನ ಬಂಡೆಯ ಬದಿಯಲ್ಲಿ ಅಪರಿಚಿತ ಪುರುಷನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪತ್ನಿಗೆ ದೈಹಿಕ ಕಿರುಕುಳ
                ಪತ್ನಿಗೆ ದೈಹಿಕ ಕಿರುಕುಳ ನೀಡಿ ಹಲ್ಲೆ ಮಾಡಿದ ಘಟನೆ ಕುಶಾಲನಗರ ಬಳಿಯ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 16/12/2015ರಂದು ಮುಳ್ಳುಸೋಗೆ ನಿವಾಸಿ ಇಂದ್ರೇಶ್‌ ಎಂಬವರು ಸಂಘಕ್ಕೆ ಹಣ ಕಟ್ಟುವ ವಿಚಾರದಲ್ಲಿ ಆತನ ಪತ್ನಿ ಭಾರತಿ ಎಂಬವರೊಂದಿಗೆ ಜಗಳವಾಡಿ ಆಕೆಯ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಕಾಫಿ ಕಳವು ಪ್ರಕರಣ
                   ಪಲ್ಪ್‌ ಹೌಸ್‌ನಲ್ಲಿಟ್ಟಿದ್ದ ಕಾಫಿಯನ್ನು ಕಳವು ಮಾಡಿದ ಘಟನೆ ಸೋಮವಾರಪೇಟೆ ಬಳಿಯ ತಾಕೇರಿ ಗ್ರಾಮದಲ್ಲಿ ನಡೆದಿದೆ. ತಾಕೇರಿ ನಿವಾಸಿ ಎನ್‌.ಎಸ್‌.ಗಣಪತಿ ಎಂಬವರು ದಿನಾಂಕ 14-12-2015 ರಂದು ಕೆ.ಪಿ.ರಮೇಶರವರ ಪಲ್ಪರ್ ಹೌಸ್‍ನಲ್ಲಿ ಅವರ 6 ಚೀಲ ಅರೇಬಿಕಾ ಕಾಫಿಯನ್ನು ಬೇಳೆ ಮಾಡಿಸುವ ಸಲುವಾಗಿ ಇಟ್ಟಿದ್ದು ದಿನಾಂಕ 15-12-2015 ರಂದು  ಪಲ್ಪ್‌ ಹೌಸ್‍ಗೆ ಹೋಗಿ ನೋಡಲಾಗಿ ಇಟ್ಟಿದ್ದ ಸುಮಾರು ರೂ.6,000/- ಮೌಲ್ಯದ 180 ಕೆ.ಜಿಯಷ್ಟು 6 ಚೀಲ ಕಾಫಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಅದೇ ಗ್ರಾಮದ ಮಧು ಕೆ.ಆರ್‍. ಎಂಬವರು ಕಳ್ಳತನ ಮಾಡಿರಬಹುದಾಗಿ ಶಂಕಿಸಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.