Sunday, December 27, 2015

ಜೀಪು ಕಳವು ಪ್ರಕರಣ
                    ಮನೆಯ ಮುಂದೆ ನಿಲ್ಲಿಸಿದ್ದ ಜೀಪನ್ನು ಕಳವು ಮಾಡಿರುವ ಪ್ರಕರಣ ಮಡಿಕೇರಿ ಬಳಿಯ ಇಬ್ನಿವಳವಾಡಿ ಗ್ರಾಮದಲ್ಲಿ ನಡೆದಿದೆ.ಇಬ್ನಿವಳವಾಡಿ ಗ್ರಾಮದ ನಿವಾಸಿ ಅಬೂಬಕರ್‌ ಎಂಬವರ ತಮ್ಮ 2 ವರ್ಷಗಳ ಹಿಂದೆ ಮಂಗಳೂರಿನ ಜುಹಾರ ಎಂಬುವವರಿಂದ ಕೆಎ-12-ಎ-0313 ರ ಪಿಕ್ ಅಪ್ ಜೀಪನ್ನು ಖರೀದಿ ಮಾಡಿದ್ದು, ಜೀಪನ್ನು ಗ್ರಾಮದಲ್ಲೆ ಬಾಡಿಗೆಗೆ ಓಡಿಸುತ್ತಿದ್ದು ಪ್ರತಿ ದಿನ ಇಬ್ನಿವಳವಾಡಿ ಗ್ರಾಮದ ಸ್ಯಾಂಡಲ್ ಕಾಡ್ ತೋಟದ ಗೇಟ್ ನ ಬಳಿ ಇರುವ ಅಬೂಬಕ್ಕರ್ ಎಂಬುವವರ ಮನೆಯ ಮುಂಭಾಗದ ವೆರಾಂಡಾದಲ್ಲಿ ನಿಲ್ಲಿಸುತ್ತಿದ್ದು, ಅದರಂತೆ ದಿನಾಂಕ 23-12-2015 ರಂದು ರಾತ್ರಿ 09.15 ಗಂಟೆಗೆ ಫಿರ್ಯಾದಿ ಅಬೂಬಕರ್‌ರವರ ಸಹೋದರ ಇಬ್ರಾಹಿಂರವರು ಪಿಕ್ ಅಪ್ ಜೀಪನ್ನು ತಂದು ನಿಲ್ಲಿಸಿದ್ದು, ಮಾರನೇ ದಿನ ಬೆಳಿಗ್ಗೆ 08.00 ಗಂಟೆಗೆ ನೋಡುವಾಗ ವಾಹನವು ನಿಲ್ಲಿಸಿದಲ್ಲಿ ಇಲ್ಲದೆ ಇದ್ದು ಎಲ್ಲಾ ಕಡೆ ಹುಡುಕಾಡಿದಲ್ಲೂ ಎಲ್ಲೂ ಪತ್ತೆಯಾಗದೆ ಇದ್ದು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಪರಸ್ಪರ ಬೈಕ್‌ ಡಿಕ್ಕಿ; ಗಾಯ
                     ಪರಸ್ಪರ ಮೋಟಾರು ಬೈಕ್‌ಗಳೆರಡು ಡಿಕ್ಕಿಯಾದ ಘಟನೆ ವಿರಾಜಪೇಟೆ ಬಳಿಯ ಬಿಳುಗುಂದ ಗ್ರಾಮದಲ್ಲಿ ನಡೆದಿದೆ. ದಿನಾಂಕ: 25-12-15ರಂದು ನಲ್ತೊಕ್ಲು ಗ್ರಾಮದ ನಿವಾಸಿ ಹಂಸ ಎಂಬವರು ಬಿಳುಗುಂದ ಗ್ರಾಮದ ಸೊಸೈಟಿಗೆ ಪಡಿತರ ತರಲು ಬಿಳುಗುಂದ ಗ್ರಾಮದ ವಾಸಿ ಖಾತೀಂರವರ  ಮೋಟಾರ್ ಬೈಕ್ ನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಖಾತಿಂರವರೊಡನೆ  ಹೋಗಿ ವಾಪಾಸ್ಸು ಬರುತ್ತಿರುವಾಗ ಬಿಳುಗುಂದ ಗ್ರಾಮದ ಚೆಲುವಂಡ ಕಾವೇರಪ್ಪರವರ ತೋಟದ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ನಲ್ವತ್ತೊಕ್ಲು ಕಡೆಯಿಂದ ಬಿಳುಗುಂದ ಕಡೆಗೆ ಒಂದು ಕೆಎ-12-8151ರ ಮೋಟಾರ್ ಬೈಕ್ ಚಾಲಕ ಅಶ್ರಫ್‌ ಎಂಬಾತನು ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಹಂಸರವರು ಬರುತ್ತಿದ್ದ ಮೋಟಾರ್ ಬೈಕ್‌ಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿದ್ದು ಹಂಸರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸರ್ಕಾರಿ ಕೆಲಸಕ್ಕ ಅಡ್ಡಿ, ಬೆದರಿಕೆ
                   ಕೆಲವು ಜನರು ಗುಂಪು ಕೂಡಿಕೊಂಡು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 20-12-2015 ರಂದು ಕುಶಾಲನಗರ ವಲಯ ಕೊಪ್ಪ ಅರಣ್ಯ ತನಿಖಾ ಠಾಣೆಯಲ್ಲಿ ರಹದಾರಿಯಿಲ್ಲದೆ ಬೊಲೇರೋ ಜೀಪು ಸಂಖ್ಯೆ ಕೆಎ-45-3448 ರಲ್ಲಿ ಹಸಿ ಬಿದಿರು ಏಣಿಗಳನ್ನು ಸಾಗಿಸುತಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ದಿನಾಂಕ 23-12-2015 ರಂದು ಸಂಜೆ  ಮಾರುತಿ ಓಮಿನಿ ಕೆಎ-12-ಪಿ-8646ರಲ್ಲಿ ಮುಳ್ಳುಸೋಗೆ ನಿವಾಸಿ ಎಂ.ಕೃಷ್ಣ ಮತ್ತು ಇತರರು ಕುಶಾಲನಗರ ವಲಯ ಅರಣ್ಯಾದಿಕಾರಿಯವರ ಕಛೇರಿ ಆವರಣಕ್ಕೆ ಬಂದು ಪ್ರಕರಣದಲ್ಲಿ ಅಮಾನತ್ತುಪಡಿಸಿಕೊಂಡಿದ್ದ ಮ್ಯಾಕ್ಸ್ ಟ್ರಕ್ ವಾಹನವನ್ನು ಬಿಟ್ಟುಕೊಡುವಂತೆ ಏಕಾಏಕಿ ಧರಣಿ ನಡೆಸಿ ಕಚೇರಿಗೆ ಆಗಮಿಸಿದ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಲ್ಲದೆ ಕಛೇರಿಯಲ್ಲಿದ್ದ ಸಿಬ್ಬಂದಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಸಿಬ್ಬಂದಿಯವರಿಗೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಮನೆ ಪ್ರವೇಶಿಸಿ ಆಭರಣ ಕಳವು
                    ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಕುಶಾಲನಗರ ಬಳಿಯ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 25/12/15 ರಂದು ಮುಳ್ಳುಸೋಗೆ ನಿವಾಸಿ ನಾಗರಾಜ ಎಂಬವರು ಸಂಜೆ 4.00 ಗಂಟೆಗೆ ತಮ್ಮ ಮನೆ ಬಾಗಿಲಿಗೆ ಬೀಗ ಹಾಖಿಕೊಂಡು  ತಮ್ಮ ಪತ್ನಿ ಮತ್ತು ಮಕ್ಕಳನ್ನು ಕರೆದುಕೊಂಡು ಬರಲು ಬೆಟ್ಟದಪುರದ ಭುವನಳ್ಳಿ ಗ್ರಾಮಕ್ಕೆ ತೆರಳಿದ್ದು, ದಿ: 26/12/15 ರಂದು ಬೆಳಗಿನ ಜಾವ 2.30 ಗಂಟೆಗೆ ಪಕ್ಕದ ಮನೆಯ ರೂಪಾ ಎಂಬಾಕೆ ನಾಗರಾಜರವರ ಪತ್ನಿಯ ಮೊಬೈಲ್ ಗೆ ಕರೆ ಮಾಡಿ ನಾಗರಾಜರವರ ಮನೆ ಕಳ್ಳತನವಾಗಿರುವ ಬಗ್ಗೆ ತಿಳಿಸಿದ ಮೇರೆಗೆ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಅಕ್ಕಪಕ್ಕದ ಮನೆಗಳ ಬಾಗಿಲಿನ ಚಿಲಕಗಳನ್ನು ಹಾಕಿ ಯಾವುದೋ ಆಯುಧದಿಂದ  ಮನೆಯ ಮುಂಬಾಗಿಲ ಬೀಗವನ್ನು ಮುರಿದು ಒಳ ಪ್ರವೇಶಿಸಿ ಮಲಗುವ ಕೋಣೆಯಲ್ಲಿಟ್ಟಿದ್ದ ಗಾಡ್ರೇಜ್ ಬೀರುವಿನಲ್ಲಿದ್ದ ರೂ. 24,000 ಬೆಲೆ ಬಾಳುವ ಚಿನ್ನಾಬರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.