Thursday, January 28, 2016

ಅನಾರೋಗ್ಯದ ಹಿನ್ನಲೆ ವ್ಯಕ್ತಿ ಆತ್ಮಹತ್ಯೆ:

     ವಿರಾಜಪೇಟೆ ತಾಲೂಕು ಪಾಲಿಬೆಟ್ಟದ ಕೋಟೆಬೆಟ್ಟ ಟಾಟಾ ಕಾಫಿ ತೋಟದ ಲೈನು ಮನೆಯಲ್ಲಿ ವಾಸವಾಗಿದ್ದ 55 ವರ್ಷ ಪ್ರಾಯದ ಹೊನ್ನಪ್ಪ ಎಂಬವರು ಫಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27-01-2016 ರಂದು ತೋಟದ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು ಸದರಿಯವರನ್ನು ಚಿಕಿತ್ಸೆ ಬಗ್ಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಸದರಿ ಹೊನ್ನಪ್ಪನವರು ಸಾವನಪ್ಪಿದ್ದು, ಈ ಸಂಬಂಧ ಮೃತರ ಪತ್ನಿ ಶ್ರೀಮತಿ ನಾಗುರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾಲೇಜು ಪ್ರಾಂಶುಪಾಲ ಆತ್ಮಹತ್ಯೆ ಆಡಳಿತ ಮಂಡಲಿ ಕಿರುಕುಳ ಆರೋಪ::
     ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿದ್ದ ವ್ಯಕ್ತಿಯೊಬ್ಬರು ಮಂಗಳೂರಿನ ಲಾಡ್ಜೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಗರಗಂದೂರು ಚನ್ನಮ್ಮ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ, ಪಿರ್ಯಾದಿ ಶ್ರೀಮತಿ ಸ್ನೇಹಲತಾ ಎಂಬವರ  ಪತಿ ಸುದೇಶ್‌ ಇವರಿಗೆ ಈಗ್ಗೆ ಮೂರು ವರ್ಷದಿಂದ ಕಾಲೇಜು ಪ್ರಾಂಶುಪಾಲರಾಗಿದ್ದವರಿಗೆ ಅರೋಪಿ ಗಳಾದ ಕಾಲೇಜು ಅಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯ ಮಂಡಳಿಯವರು ತನ್ನ ಗಂಡನಿಗೆ ಮುಗೇರಾ ಜಾತಿಗೆ ಸೇರಿದ್ದಾಗಿರುವುದರಿಂದ ಇವರಿಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿದ ಕಾರಣ ಅತ್ಮಹತ್ಯೆಗೆ ಪ್ರಚೋದನೆ ಮಾಡಿದ ಕಾರಣ ಸುದೇಶ್‌ರವರು ಮಂಗಳೂರಿನ ಕೆ.ಎಸ್‌.ಅರ್‌.ಟ.ಸಿ ಬಳಿ ಇರುವ ಕೀರ್ತಿ ಲಾಡ್ಜನಲ್ಲಿ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ನೀಡಿದ ದೂರಿನ ಬಗ್ಗೆ ಮಂಗಳೂರು ಊರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಸುಂಟಿಕೊಪ್ಪ ಠಾಣೆಗೆ ವರ್ಗಾಯಿಸಿದ್ದು, ಅದರಂತೆ ಸುಂಟಿಕೊಪ್ಪಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಮನೆ ಕಳವು ಪ್ರಕರಣ ದಾಖಲು:

        ಸೋಮವಾರಪೇಟೆ ತಾಲೂಕು ಹರಗ ಗ್ರಾಮದ ನಿವಾಸಿ ಹೆಚ್.ಟಿ ರಂಜು ರವರ ತಾಯಿ ಸ್ತ್ರೀ ಶಕ್ತಿ ಸಂಘದಿಂದ 65,000/- ಹಣವನ್ನು ಸಾಲ ತಂದು ಮನೆಯಲ್ಲಿಟ್ಟಿದ್ದು ಸದರಿ ಹಣದ ಪೈಕಿ ರೂ. 9,500/- ಗಳನ್ನು ದಿನಾಂಕ 23-1-2016 ಮತ್ತು 24-1-2016ರ ನಡುವೆ ಯಾರೋ ಕಳ್ಳರು ಕಳವು ಮಾಡಿದ್ದು, ಹರಗ ಗ್ರಾಮದ ನಿವಾಸಿ ಮಂಜುನಾಥನವರ ಮೇಲೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಸೂಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.