Friday, January 1, 2016

ಬೈಕ್ ಗೆ ಟಾಟಾ ಏಸ್ ಡಿಕ್ಕಿ ಸವಾರರಿಬ್ಬರಿಗೆ ಗಾಯ:

      ಬೈಕ್ ಮತ್ತು ಟಾಟಾ ಏಸ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 31.12.15 ರಂದು ಸಮಯ ಬೆಳಿಗ್ಗೆ 8.30 ಗಂಟೆಗೆ 7ನೇ ಹೊಸಕೋಟೆ ಗ್ರಾಮದಲ್ಲಿ ಪಿರ್ಯಾದಿ ಎಸ್.ಪುನೀತ್‌ ಎಂಬವರು ಅವರ ಸ್ನೇಹಿತ ಸುನಿಲ್ ಎಂಬಾತನೊಂದಿಗೆ ಮಡಿಕೇರಿ ಅಬ್ಬಿಪಾಲಾಸ್ಸ್‌ ನೋಡಲೆಂದು ಸುನಿಲ್‌ ಓಡಿಸುತ್ತಿದ್ದ ನಂ ಕೆಎ-42-ಅರ್-5582 ರ ಮೋಟಾರ್ ಸೈಕಲ್‌ನಲ್ಲಿ ಹಿಂಬದಿಯಲ್ಲಿ ಕುಳಿತು ಮೈಸೂರು ಕಡೆಯಿಂದ ಕುಶಾಲನಗ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಕಡೆಗೆ ಹೋಗುತ್ತಿರುವಾಗ ಮಡಿಕೇರಿ ಕಡೆಯಿಂದ ಕುಶಾಲನಗರದ ಕಡೆಗೆ ನಂ: ಕೆಎ0-25-ಡಿ-9582 ರ ಟಾಟಾ ಯೇಸ್‌ ವಾಹನವನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೋಟಾರ್ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಸುನಿಲ್‌ಗೆ ಹಾಗೂ ಹಿಂಬದಿ ಸವಾರರಾದ ಪುನಿತ್ ರವರ ಬಲಕಾಲಿನ ಮೂಳೆ ಮುರಿದು ಶರೀರಕ್ಕೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಆಸ್ತಿ ವಿಚಾರದಲ್ಲಿ ಜಗಳ, ಕೊಲೆ ಬೆದರಿಕೆ:
     ಆಸ್ತಿ ವಿಚಾರದಲ್ಲಿ ಮಹಿಳೆಯೊಬ್ಬರಿಗೆ ಅವರ ಪತಿಯ ಅಣ್ಣನ ಮಗ ಜಗಳ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ವಿರಾಜಪೇಟೆ ತಾಲೂಕು ನಾಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ: 15-12-15ರಂದು ರಾತ್ರಿ ಸಮಯದಲ್ಲಿ ಪಿರ್ಯಾದಿ ನಾಂಗಾಲ ಗ್ರಾಮದ ನಿವಾಸಿ ಶ್ರೀಮತಿ ಚೇಮಿರ ಸೀತಮ್ಮ ನವರು ಗದ್ದೆಯ ವಿಚಾರದಲ್ಲಿ ದಾಖಲಾತಿಗಳ ಬಗ್ಗೆ ಅವರ ಪತಿಯ ಅಣ್ಣನ ಮಗ ಮಂಜು ರವರನ್ನು ವಿಚಾರಿಸಿದ್ದು ಇದೇ ವಿಚಾರದಲ್ಲಿ ಸದರಿ ಮಂಜು ಫಿರ್ಯಾದಿಯವರನ್ನು ಅವಾಚ್ಯ ಶಬ್ದಗಳಿಂದ ಬೈದಿರುವು ದಲ್ಲದೆ, ಕೊಲೆ ಮಾಡಿ ಎಸೆಯುತ್ತೇನೆಂದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.