Friday, January 29, 2016

ಅಕ್ರಮ ಪ್ರವೇಶ, ಆಸ್ತಿ ಹಾನಿ:

     ಭಾಗಮಂಡಲ ಠಾಣಾ ಸರಹದ್ದಿನ ಚೆತ್ತುಕಾಯ ಕರಿಕೆ ಗ್ರಾಮದ ನಿವಾಸಿಗಳಾದ ಶ್ರೀಜೇಶ್, ಲೀನಾ ಮತ್ತು ಶ್ರೀಜಾರವರುಗಳು ಈ ದಿನ ಬೆಳಿಗ್ಗೆ 8-00 ಗಂಟೆಗೆ ಶಬರಿ ಎಸ್ಟೇಟ್ ಗೆ ಅಕ್ರಮ ಪ್ರವೇಶ ಮಾಡಿ ಎಸ್ಟೇಟಿನ ಕಬ್ಬಿಣದ ಗೇಟನ್ನು ಕಲ್ಲಿನಿಂದ ಜಖಂ ಪಡಿಸಿ ನಷ್ಟಪಡಿಸಿ ಎಸ್ಟೇಟಿಗೆ ಹೋಗಲು ಅಡ್ಡಿಪಡಿಸಿರುತ್ತಾರೆಂದು ಎಸ್ಟೇಟಿನ ರೈಟರ್ ಕೆ.ಕೆ. ವಿಜಯನ್ ರವರು ನೀಡಿದರುವ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೈಕುಗಳ ಮುಖಾಮುಖಿ ಡಿಕ್ಕಿ, ಸವಾರರಿಗೆ ಗಾಯ:

      ದಿನಾಂಕ 28-01-2016 ರಂದು ಬೆಳಿಗ್ಗೆ ಸಮಯ 07.15 ಗಂಟೆಗೆ ಸೋಮವಾರಪೇಟೆ ತಾಲೂಕು ಯಲಕನೂರು ಗ್ರಾಮದ ನಿವಾಸಿ ಸುಧೀರ ಎಂಬ ವ್ಯಕ್ತಿ ತನ್ನ ಬಾಪ್ತು ಕೆಎ-12, ಜೆ-6071 ರ ಮೋಟಾರು ಸೈಕಲ್ ನಲ್ಲಿ ಉದಯ ಎಂಬುವವರನ್ನು ಕೂರಿಸಿಕೊಂಡು ಕುಶಾಲನಗರಕ್ಕೆ ಪೆಯಿಟಿಂಗ್ ಕೆಲಸಕ್ಕೆಂದು ಹೋಗುತ್ತಿದ್ದಾಗ ಯಲಕನೂರು ಗ್ರಾಮದ ಎರೆಕೊಲ್ಲಿ ಎಂಬಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕೆಎ-45, ಆರ್-0558 ರ ಮೋಟಾರು ಸೈಕಲ್ ನ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಮೋಟಾರು ಸೈಕಲನ್ನು ಚಾಲನೆ ಮಾಡಿಕೊಂಡು ಬಂದು ಸುಧೀರ್ ರವರ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸುಧೀರ್, ಉದಯರವರಿಗೆ ಹಾಗೂ ಕೆಎ-45, ಆರ್-0558 ರ ಮೋಟಾರು ಸೈಕಲ್ ನಲ್ಲಿದ್ದ ಇಬ್ಬರಿಗೂ ರಕ್ತಗಾಯಗಳಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಮೇಲೆ ದೌರ್ಜನ್ಯ, ಪ್ರಕರಣ ದಾಖಲು:

     ಸೋಮವಾರಪೇಟೆ ತಾಲೂಕು ಇಗ್ಗೋಡ್ಲು ಗ್ರಾಮದ ನಿವಾಸಿ ಶ್ರೀಮತಿ ಪುಷ್ಪರವರು ದಿನಾಂಕ: 26-1-2016ರಂದು ಎಂದಿನಂತೆ ಮಾದಾಪುರಕ್ಕೆ ವ್ಯಾಪಾರಕ್ಕೆಂದು ಹೋಗಿ ವ್ಯಾಪಾರ ಮುಗಿಸಿಕೊಂಡು ಸಮಯ ಸಂಜೆ 7:30 ಗಂಟೆಗೆ ಉಳಿದ ತರಕಾರಿಗಳನ್ನು ತಮ್ಮ ಮಾವ ಕಾರ್ತೀಗೆಯನ್ ರವರ ಬಾಪ್ತು ಟಿ.ಎನ್ 25 ಸಿ. 5546ರ ಟಾಟಾ ಸುಮೋದಲ್ಲಿ ತುಂಬಿಸಿಕೊಂಡು ಮನೆಯ ಮುಂದೆ ನಿಲ್ಲಿಸಿಕೊಂಡು ಅದಲ್ಲಿದ್ದ ತರಕಾರಿಯನ್ನು ಮನೆಯೊಳಗೆ ಇಳಿಸಿಕೊಂಡಿರುವಾಗ್ಗೆ ಇಗ್ಗೋಡ್ಲು ಗ್ರಾಮದ ನಿವಾಸಿ ವಜ್ಜುರವರು ಮೋಟಾರ್ ಸೈಕಲಿನಲ್ಲಿ ಅಲ್ಲಿಗೆ ವಾಹನವನ್ನು ನಿಲ್ಲಿಸಿದ ಬಗ್ಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಹಿಡಿದು ಎಳೆದಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬುಲ್ಲೆಟ್ ಬೈಕ್ ಗೆ ಪಿಕ್ಅಪ್ ಡಿಕ್ಕಿ:

     ವಿರಾಜಪೇಟೆ ವಿ. ಬಾಡಗ ಗ್ರಾಮದ ನಿವಾಸಿ ಎಂ.ಪಿ. ಬೋಪಣ್ಣರವರು ದಿನಾಂಕ 28-1-2016 ರಂದು ತಮ್ಮ ಬಾಪ್ಸು ಬುಲೆಟ್ ಮೋಟಾರ್ ಸೈಕಲ್ ನಲ್ಲಿ ವಿರಾಜಪೇಟೆ ಕಡೆಯಿಂದ ವಿ. ಬಾಡಗ ಗ್ರಾಮದ ಕಡೆಗೆ ಪ್ರಯಾಣಿಸುತ್ತಿದ್ದಾಗ ಗಣೇಶ, ಪಿಕ್ ಅಪ್ ಚಾಲಕ ತನ್ನ ವಾಹನವನ್ನು ಎದುರುಗಡೆಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ರಸ್ತೆಯ ಮೇಲೆ ಬಿದ್ದು, ಸವಾರ ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.